Tag: gang rape

  • ಧಾರವಾಡದಲ್ಲಿ ಅಪ್ರಾಪ್ತ ಬಾಲಕಿ ಮೇಲೆ ಸಾಮೂಹಿಕ ಅತ್ಯಾಚಾರ – 6 ಅಪ್ರಾಪ್ತರು ಪೊಲೀಸರ ವಶಕ್ಕೆ

    ಧಾರವಾಡದಲ್ಲಿ ಅಪ್ರಾಪ್ತ ಬಾಲಕಿ ಮೇಲೆ ಸಾಮೂಹಿಕ ಅತ್ಯಾಚಾರ – 6 ಅಪ್ರಾಪ್ತರು ಪೊಲೀಸರ ವಶಕ್ಕೆ

    ಧಾರವಾಡ: ಅಪ್ರಾಪ್ತ ಬಾಲಕಿಯನ್ನು ಅಪಹರಿಸಿ ಸಾಮೂಹಿಕ ಅತ್ಯಾಚಾರ ನಡೆಸಿರುವ ಪ್ರಕರಣವೊಂದು ಧಾರವಾಡ ಶಹರ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ.

    17 ವರ್ಷದ ಅಪ್ರಾಪ್ತೆ ಮೇಲೆ ಅಪ್ರಾಪ್ತ ಬಾಲಕರು ಅತ್ಯಾಚಾರ ವೆಸಗಿದ್ದು, ಈ ಘಟನೆಯನ್ನು ಮೊಬೈಲ್‍ನಲ್ಲಿ ಸೆರೆಹಿಡಿದಿದ್ದಾರೆ. ನಂತರ ಈ ವೀಡಿಯೋವನ್ನು ಸೋಶಿಯಲ್ ಮೀಡಿಯಾ ಫ್ಲಾಟ್‍ಫರ್ಮ್‍ನಲ್ಲಿ ಹರಿಬಿಟ್ಟಿದ್ದಾರೆ. ಇದೀಗ ಈ ವಿಚಾರ ತಿಳಿದ ಪೊಲೀಸರು 17 ವರ್ಷದ 6 ಅಪ್ರಾಪ್ತ ಬಾಲಕರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಇದನ್ನೂ ಓದಿ: ಸಿಎಂ ಕಾರ್ಯಕ್ರಮಕ್ಕೆ ಇಲ್ಲ ಕೊರೊನಾ ರೂಲ್ಸ್ – ಬಸ್‍ಗಳಲ್ಲಿ ಜನರನ್ನು ತುಂಬಿಸಿಕೊಂಡು ಬಂದ ಸರ್ಕಾರ

    ತನಿಖೆ ವೇಳೆ ಬಾಲಕಿ ಮೇಲೆ ಆಕೆಯ ಪ್ರಿಯಕರನೇ ಅತ್ಯಾಚಾರವೆಸಗಿರುವ ಸತ್ಯ ಬಹಿರಂಗವಾಗಿದೆ. ಪ್ರೀತಿಸುವ ವಿಚಾರವನ್ನು ತಂದೆಗೆ ಹೇಳುವುದಾಗಿ ಬೆದರಿಸಿ ಬಾಲಕಿಯನ್ನು ನಿರ್ಜನ ಪ್ರದೇಶಕ್ಕೆ ಕರೆದೊಯ್ದು ಅತ್ಯಾಚಾರ ಮಾಡಿದ್ದಾರೆ. ಅಲ್ಲದೇ ಈ ಅಪ್ರಾಪ್ತ ಬಾಲಕರು ಒಂದೇ ಕಾಲೇಜಿನಲ್ಲಿ ಓದುತ್ತಿದ್ದಾರೆ. ಇದೀಗ 6 ಅಪ್ರಾಪ್ತರ ವಿರುದ್ಧ ಪ್ರಕರಣ ದಾಖಲಿಸಿರುವ ಪೊಲೀಸರು ತನಿಖೆಯನ್ನು ಮತ್ತಷ್ಟು ಚುರುಕುಗೊಳಿಸಿದ್ದಾರೆ. ಇದನ್ನೂ ಓದಿ: ಓಮಿಕ್ರಾನ್ ವೈರಸ್‍ಗೆ ಬೆಚ್ಚಿಬಿದ್ದ ಜನ – ಡಿಸೆಂಬರ್‌ನಲ್ಲಿ ಹೆಚ್ಚು ವ್ಯಾಕ್ಸಿನೇಷನ್

  • ಅಪ್ರಾಪ್ತೆ ಮೇಲೆ ಗ್ಯಾಂಗ್ ರೇಪ್ – ವೀಡಿಯೋ ನೋಡಿ ಬೆಚ್ಚಿ ಬಿದ್ದ ಸಂಬಂಧಿಕರು

    ಅಪ್ರಾಪ್ತೆ ಮೇಲೆ ಗ್ಯಾಂಗ್ ರೇಪ್ – ವೀಡಿಯೋ ನೋಡಿ ಬೆಚ್ಚಿ ಬಿದ್ದ ಸಂಬಂಧಿಕರು

    ಗಾಂಧಿನಗರ: 14 ವರ್ಷದ ಬಾಲಕಿ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿ ಸೋಶಿಯಲ್ ಮೀಡಿಯಾದಲ್ಲಿ ಹರಿಬಿಟ್ಟಿದ್ದ 6 ಮಂದಿಯನ್ನು ಗುಜರಾತ್ ಪೊಲೀಸರು ಬಂಧಿಸಿದ್ದಾರೆ.

    ಎರಡು ತಿಂಗಳ ಹಿಂದೆ ಈ ಘಟನೆ ನಡೆದಿದ್ದು, ಇತ್ತೀಚೆಗಷ್ಟೇ ಬಾಲಕಿಯ ಸಂಬಂಧಿಕರು ಈ ವೀಡಿಯೋವನ್ನು ಕಂಡು ಗಾಬರಿಯಾಗಿದ್ದಾರೆ. ಈ ವೀಡಿಯೋವನ್ನು ಆರೋಪಿಯೊಬ್ಬ ತನ್ನ ಮೊಬೈಲ್‍ನಲ್ಲಿ ಸೆರೆಹಿಡಿದು ಸೋಶಿಯಲ್ ಮೀಡಿಯಾ ಫ್ಲಾಟ್‍ಫಾರ್ಮ್‍ನಲ್ಲಿ ಶೇರ್ ಮಾಡಿಕೊಂಡಿದ್ದಾನೆ.

    ಮದುವೆ ಸಮಾರಂಭವೊಂದರಲ್ಲಿ ಭಾಗವಹಿಸಿ ಹಿಂದಿರುಗುವ ವೇಳೆ ಅಹ್ವಾ ತಾಲೂಕಿನಲ್ಲಿ ಬಾಲಕಿಯ ಮೇಲೆ ಮೊದಲು ಆಕೆಯ ಸ್ನೇಹಿತ ಅತ್ಯಾಚಾರವೆಸಗಿದ್ದಾನೆ. ಬಳಿಕ ದಾರಿಯಲ್ಲಿ ಕಾಯುತ್ತಿದ್ದ ಆತನ ಎಂಟು ಮಂದಿ ಸ್ನೇಹಿತರು ಬಾಲಕಿಯನ್ನು ಬಲವಂತವಾಗಿ ಎಳೆದೊಯ್ದು ಆಕೆಯ ಮೇಲೆ ಅತ್ಯಾಚಾರ ಎಸಗಿದ್ದಾರೆ ಎಂದು ಪೊಲೀಸ್ ಇನ್ಸ್‍ಪೆಕ್ಟರ್ ಎನ್. ಎಚ್ ಸವ್ಸೆತಾ ತಿಳಿಸಿದ್ದಾರೆ. ಇದನ್ನೂ ಓದಿ: 7ರ ಬಾಲಕಿ ಮೇಲೆ ಅತ್ಯಾಚಾರ- ಹತ್ಯೆಗೈದವರಿಗಾಗಿ ಶೋಧ ಕಾರ್ಯ

    ಅತ್ಯಾಚಾರ ವೆಸಗಿದ ಬಳಿಕ ಬಾಲಕಿಗೆ ಈ ಬಗ್ಗೆ ಯಾರಿಗೂ ತಿಳಿಸದಂತೆ ಬೆದರಿಕೆಯೊಡ್ಡಿದ್ದಾರೆ. ಇದರಿಂದ ಭಯಗೊಂಡ ಬಾಲಕಿ ಸುಮಾರು ಎರಡು ತಿಂಗಳು ಮೌನವಾಗಿದ್ದಳು. ಆದರೆ ಇತ್ತೀಚೆಗಷ್ಟೇ ಆಕೆಯ ಸಂಬಂಧಿಕರೊಬ್ಬರು ಈ ವೀಡಿಯೋ ನೋಡಿ ಬಾಲಕಿಯ ಪೋಷಕರಿಗೆ ಮಾಹಿತಿ ನೀಡಿದ್ದಾರೆ. ನಂತರ ಪೋಷಕರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದು, ಆರೋಪಿಗಳ ವಿರುದ್ಧ ಪೊಲೀಸರು ಎಫ್‍ಐಆರ್ ದಾಖಲಿಸಿದ್ದಾರೆ.

    ಪ್ರಕರಣದ ಎಲ್ಲಾ ಆರೋಪಿಗಳನ್ನು ಡಿಸೆಂಬರ್ 24ರಂದು ಬಂಧಿಸಲಾಗಿದ್ದು, ಅವರಲ್ಲಿ ಮೂವರು ಅಪ್ರಾಪ್ತ ಬಾಲಕರಾಗಿರುವ ಕಾರಣ ಅವರಿಗೆ ಜಾಮೀನು ದೊರೆತಿದೆ. ಇನ್ನೂ ಉಳಿದ ಆರು ಮಂದಿ ನ್ಯಾಯಾಲಯ ಪೊಲೀಸ್ ರಿಮಾಂಡ್ ರೂಮ್‍ಗೆ ಕಳುಹಿಸಿದೆ. ಇದನ್ನೂ ಓದಿ: ಪತ್ನಿಯ ಅನೈತಿಕ ಸಂಬಂಧ – ಮನನೊಂದು ರೈಲ್ವೆ ಹಳಿಗೆ ತಲೆಕೊಟ್ಟು ಪತಿ ಆತ್ಮಹತ್ಯೆ! 

    ಇದೀಗ ಆರೋಪಿಗಳ ವಿರುದ್ಧ ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ ಪೋಕ್ಸೋ ಕಾಯ್ದೆ, 376 (ಡಿ) (ಎ) ಸಾಮೂಹಿಕ ಅತ್ಯಾಚಾರ, 506 (2) ಕ್ರಿಮಿನಲ್ ಬೆದರಿಕೆ, 120 (ಬಿ) ಕ್ರಿಮಿನಲ್ ಪಿತೂರಿ ಮತ್ತು 114 ಪ್ರಚೋದಕ ಸೇರಿದಂತೆ ವಿವಿಧ ಭಾರತೀಯ ದಂಡ ಸಂಹಿತೆಯ ಸೆಕ್ಷನ್‍ಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.

  • ಅಪ್ರಾಪ್ತೆಗೆ ಮಾದಕ ವಸ್ತು ನೀಡಿ ಗ್ಯಾಂಗ್ ರೇಪ್ ಮಾಡಿದ ಕಾಮುಕರು

    ಅಪ್ರಾಪ್ತೆಗೆ ಮಾದಕ ವಸ್ತು ನೀಡಿ ಗ್ಯಾಂಗ್ ರೇಪ್ ಮಾಡಿದ ಕಾಮುಕರು

    ಲಕ್ನೋ: ಬಾಲಕಿಗೆ ಮಾದಕ ವಸ್ತು ನೀಡಿ ಸಾಮೂಹಿಕ ಅತ್ಯಾಚಾರ ಎಸಗಿದ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ.

    10ನೇ ತರಗತಿಯ ವಿದ್ಯಾರ್ಥಿನಿ ಅತ್ಯಾಚಾರಕ್ಕೊಳಗಾದ ಸಂತ್ರಸ್ತೆ. ಅಪ್ರಾಪ್ತ ಬಾಲಕಿ ಟ್ಯೂಷನ್ ತರಗತಿಗೆ ಹೋಗಿದ್ದಳು. ಆ ಸಂದರ್ಭದಲ್ಲಿ ಇಬ್ಬರು ವ್ಯಕ್ತಿಗಳು ಬಂದು ಆಕೆಗೆ ಮಾದಕ ದ್ರವ್ಯ ನೀಡಿದ್ದಾರೆ. ನಂತರ ಅವಳನ್ನು ಇಬ್ಬರು ವ್ಯಕ್ತಿಗಳು ಸದ್ಪುರ ಗ್ರಾಮದ ಬಳಿ ಇರುವ ಅರಣ್ಯ ಪ್ರದೇಶಕ್ಕೆ ಕರೆದೊಯ್ದಿದ್ದಾರೆ. ಅರಣ್ಯದಲ್ಲಿದ್ದ ಮತ್ತಿಬ್ಬರು ಸೇರಿ ಆಕೆಯ ಮೇಲೆ ಅತ್ಯಾಚಾರವೆಸಗಿದ್ದಾರೆ.

    RAPE

    ಬಾಲಕಿಯು ಸಂಜೆ ಕಳೆದರೂ ಮನೆಗೆ ಬಾರದಿರುವುದರಿಂದ ಪೋಷಕರು ಪೊಲೀಸರಿಗೆ ದೂರು ನೀಡಿದ್ದು, ಬಾಲಕಿಯ ಪತ್ತೆಗಾಗಿ ಹುಡುಕಾಟ ಪ್ರಾರಂಭಿಸಿದ್ದಾರೆ. ಈ ವೇಳೆ ಬಾಲಕಿಯು ಪ್ರಜ್ಞಾಹೀನ ಸ್ಥಿತಿಯಲ್ಲಿ ಪತ್ತೆಯಾಗಿದ್ದಾಳೆ. ನಂತರ ಬಾಲಕಿಗೆ ಚಿಕಿತ್ಸೆ ನೀಡಿದ್ದಾರೆ. ಪ್ರಜ್ಞೆ ಬಂದ ನಂತರ ಬಾಲಕಿಯು ಕುಟುಂಬಸ್ಥರಿಗೆ ಈ ವಿಷಯ ತಿಳಿಸಿದ್ದಾಳೆ. ಇದನ್ನೂ ಓದಿ: ಶಾಲೆಯಲ್ಲಿ ವಿದ್ಯಾರ್ಥಿಗಳ ಪ್ರತಿಭಟನೆ – ಪೋಕ್ಸೊ ಕಾಯ್ದೆಯಡಿ ಶಿಕ್ಷಕನ ಬಂಧನ

    JAIL

    ಪ್ರಕರಣ ಸಂಬಂಧಿಸಿದಂತೆ ಆರೋಪಿಗಳ ವಿರುದ್ಧ ಸ್ಥಳೀಯ ಜನಸತ್ ಪೊಲೀಸ್ ಠಾಣೆಯಲ್ಲಿ ಸಂತ್ರಸ್ತೆಯ ಕುಟುಂಬಸ್ಥರು ದೂರು ದಾಖಲಿಸಿದ್ದಾರೆ. ನಾಲ್ವರ ವಿರುದ್ಧ ದೂರು ದಾಖಲಿಸಿಕೊಂಡ ಪೊಲೀಸರು ಇಬ್ಬರನ್ನು ಬಂಧಿಸಿದ್ದಾರೆ. ಘಟನೆ ಸಂಬಂಧಿಸಿ ಅಪ್ರಾಪ್ತೆಯನ್ನು ವೈದ್ಯಕೀಯ ಪರೀಕ್ಷೆಗೆ ಕಳುಹಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಇದನ್ನೂ ಓದಿ: ಬಳ್ಳಾರಿಯಲ್ಲಿ ಸರಣಿ ಸರಕಳ್ಳತನ – ತಾಯಿ, ಮಗಳು ಬಂಧನ

  • ಗ್ಯಾಂಗ್‌ರೇಪ್ ಬಳಿಕ ಆತ್ಮಹತ್ಯೆಗೆ ಯತ್ನಿಸಿದ ಪ್ರೇಮಿಗಳು!

    ಗ್ಯಾಂಗ್‌ರೇಪ್ ಬಳಿಕ ಆತ್ಮಹತ್ಯೆಗೆ ಯತ್ನಿಸಿದ ಪ್ರೇಮಿಗಳು!

    ಹೈದರಾಬಾದ್: ವಿವಾಹೇತರ ಸಂಬಂಧವನ್ನು ಬಹಿರಂಗಪಡಿಸುವುದಾಗಿ ಹೆದರಿಸಿ ಮಹಿಳೆಯ ಮೇಲೆ ಆರೋಪಿಗಳಿಬ್ಬರು ಅತ್ಯಾಚಾರ ಎಸಗಿದ್ದಾರೆ. ಬಳಿಕ ಮಹಿಳೆ ಹಾಗೂ ಆಕೆಯ ಪ್ರೇಮಿ ಆತ್ಮಹತ್ಯೆಗೆ ಯತ್ನಿಸಿದ ಘಟನೆ ಹೈದರಾಬಾದ್‌ನ ಎಸ್‌ಆರ್ ನಗರದಲ್ಲಿ ನಡೆದಿದೆ.

    ಸಾಮೂಹಿಕ ಅತ್ಯಾಚಾರ ಎಸಗಿದ ಆರೋಪಿಗಳಿಬ್ಬರು ಮಹಿಳೆ ಹಾಗೂ ಆಕೆಯ ಪ್ರೇಮಿಗೆ ಅವರಿಬ್ಬರ ಸಂಬಂಧವನ್ನು ಬಹಿರಂಗಪಡಿಸುವುದಾಗಿ ಬ್ಲ್ಯಾಕ್‌ಮೇಲ್ ಮಾಡುತ್ತಿದ್ದರು. ಇದರಿಂದ ನೊಂದಿದ್ದ ಪ್ರೇಮಿಗಳು ಕೀಟನಾಶಕ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಘಟನೆ ಡಿಸೆಂಬರ್ 13 ರಂದು ನಡೆದಿದ್ದು, 17 ರಂದು ಮಹಿಳೆ ಪೊಲೀಸರಿಗೆ ದೂರು ನೀಡಿದ್ದಾರೆ. ಇದನ್ನೂ ಓದಿ: ಹಿರಿಯರ ಕಿರುಕುಳ – ಚರ್ಚಿನಲ್ಲಿಯೇ ಪಾದ್ರಿ ಆತ್ಮಹತ್ಯೆಗೆ ಯತ್ನ

    ಕಟ್ಟಡ ಕಾರ್ಮಿಕರಾಗಿದ್ದ ಮಹಿಳೆ ತನ್ನ ಸಹೋದ್ಯೋಗಿಯೊಂದಿಗೆ ಅಕ್ರಮ ಸಂಬಂಧ ಹೊಂದಿದ್ದರು. ಡಿಸೆಂಬರ್ 13 ರಂದು ಮಹಿಳೆ ಮನೆಯಿಂದ ಹೊರಗಡೆ ಹೊರಟಿದ್ದ ಸಮಯದಲ್ಲಿ ಆರೋಪಿಗಳು ಅಡ್ಡಗಟ್ಟಿ ಅವರಿಬ್ಬರ ಸಂಬಂಧವನ್ನು ಕುಟುಂಬದವರಿಗೆ ತಿಳಿಸುವುದಾಗಿ ಬೆದರಿಕೆ ಹಾಕಿದ್ದಾರೆ.

    ನಂತರ ಆರೋಪಿಗಳು ಆಕೆಯನ್ನು ಖಾಲಿ ಕೋಣೆಗೆ ಒಯ್ದು ಅಲ್ಲಿ ಸಾಮೂಹಿಕ ಅತ್ಯಾಚಾರ ಎಸಗಿದ್ದಾರೆ. ಮರುದಿನ ಸಂತ್ರಸ್ತೆ ಹಾಗೂ ಸಂಗಾತಿ ಪ್ರತ್ಯೇಕ ಸ್ಥಳಕ್ಕೆ ಹೋಗಿ ಆತ್ಮಹತ್ಯೆ ಮಾಡಿಕೊಳ್ಳಲು ನಿರ್ಧರಿಸಿದ್ದಾಗಿ ಪೊಲೀಸರಿಗೆ ತಿಳಿಸಿದ್ದಾರೆ. ಇದನ್ನೂ ಓದಿ: ಮಹಾರಾಷ್ಟ್ರದಲ್ಲಿ ಗಲಾಟೆ ಮಾಡಿದವರೆಲ್ಲಾ ಕಾಂಗ್ರೆಸಿಗರು: ಶ್ರೀರಾಮುಲು

    POLICE JEEP

    ಕೀಟನಾಶಕವನ್ನು ಸೇವಿಸಿ, ಪ್ರಜ್ಞಾಹೀನರಾಗುವ ಮೊದಲೇ ಮಹಿಳೆ ತನ್ನ ಕುಟುಂಬದ ಸದಸ್ಯರಿಗೆ ವಿಷಯ ತಿಳಿಸಿದ್ದು, ತಕ್ಷಣ ಅವರಿಬ್ಬರನ್ನು ಹುಡುಕಿ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಶುಕ್ರವಾರ ಮಹಿಳೆ ಪ್ರಜ್ಞೆ ಬಂದಾಗ ಲೈಂಗಿಕ ದೌರ್ಜನ್ಯದ ಬಗ್ಗೆ ಪೊಲೀಸರಿಗೆ ತಿಳಿಸಿದ್ದಾರೆ. ಸಾಮೂಹಿಕ ಅತ್ಯಾಚಾರ ಪ್ರಕರಣವನ್ನು ದಾಖಲಿಸಿಕೊಂಡು ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ.

  • ಮಾರುಕಟ್ಟೆಗೆ ಹೋಗಿದ್ದ ಬಾಲಕಿಯ ಮೇಲೆ ಗ್ಯಾಂಗ್‌ರೇಪ್

    ಮಾರುಕಟ್ಟೆಗೆ ಹೋಗಿದ್ದ ಬಾಲಕಿಯ ಮೇಲೆ ಗ್ಯಾಂಗ್‌ರೇಪ್

    ಕೋಲ್ಕತ್ತಾ: 15 ವರ್ಷದ ಬಾಲಕಿಯ ಮೇಲೆ ಸಾಮೂಹಿಕ ಅತ್ಯಾಚಾರ ನಡೆದ ಘಟನೆ ಪಶ್ಚಿಮ ಬಂಗಾಳದಲ್ಲಿ ನಡೆದಿದೆ.

    ಪಶ್ಚಿಮ ಬಂಗಾಳದ ಪುರ್ಬಾ ಬರ್ಧಮಾನ್ ಜಿಲ್ಲೆಯಲ್ಲಿ 9ನೇ ತರಗತಿ ವಿದ್ಯಾರ್ಥಿನಿ ಮಾರುಕಟ್ಟೆಗೆ ಹೋಗುವಾಗ ಈ ಘಟನೆ ನಡೆದಿದೆ. ಈ ಸಂಬಂಧ ಪರಿಚಯಸ್ತ ಆಟೋ ಚಾಲಕನನ್ನು ಬಂಧಿಸಲಾಗಿದ್ದು, ಮತ್ತೊಬ್ಬ ಆರೋಪಿ ಪರಾರಿಯಾಗಿದ್ದಾನೆ.

    RAPE

    ಘಟನೆಯ ದಿನ, ವಿದ್ಯಾರ್ಥಿನಿ ಮಾರುಕಟ್ಟೆಗೆ ನಡೆದುಕೊಂಡು ಹೋಗುತ್ತಿರುವುದನ್ನು ನೋಡಿದ ಆಟೋ ಚಾಲಕ ಅವಳನ್ನು ಮಾರುಕಟ್ಟೆಗೆ ಬಿಡುತ್ತೇನೆ ಎಂದು ನಂಬಿಸಿದ್ದಾನೆ. ನಂತರ ದಾರಿಯಲ್ಲಿ ಆಟೋದ ಮೇಲೆ ಇನ್ನೊಬ್ಬ ವ್ಯಕ್ತಿ ಹತ್ತಿದ್ದಾನೆ. ಇಬ್ಬರು ವ್ಯಕ್ತಿಗಳು ಬಾಲಕಿಯನ್ನು ಮಾರುಕಟ್ಟೆಗೆ ಕರೆತರುವ ಬದಲು ನಿರ್ಜನ ಪ್ರದೇಶಕ್ಕೆ ಕರೆದೊಯ್ದಿದ್ದಾರೆ. ಅಲ್ಲಿ ಈ ಇಬ್ಬರು ವ್ಯಕ್ತಿಗಳು ಬಾಲಕಿಯ ಮೇಲೆ ಸಾಮೂಹಿಕ ಅತ್ಯಾಚಾರವೆಸಗಿದ್ದಾರೆ. ಇದನ್ನೂ ಓದಿ: ಬೆಳಗಾವಿಯಲ್ಲಿ MES ಪುಂಡರ ಅಟ್ಟಹಾಸ – ಸಂಗೊಳ್ಳಿ ರಾಯಣ್ಣ ಪ್ರತಿಮೆಗೆ ಹಾನಿ, ಬಸ್ ಮೇಲೆ ಕಲ್ಲು ತೂರಾಟ

    ನಂತರ ಇಬ್ಬರು ಆರೋಪಿಗಳು ಬಾಲಕಿಯನ್ನು ಸ್ಥಳದಲ್ಲೇ ಬಿಟ್ಟು ಓಡಿಹೋಗಿದ್ದಾರೆ. ಘಟನೆ ಕುರಿತು ಬಾಲಕಿಯು ಪೋಷಕರಿಗೆ ಮಾಹಿತಿ ನೀಡಿದ್ದಾರೆ. ಪ್ರಕರಣ ಕುರಿತು ಬಾಲಕಿಯ ಪೋಷಕರು ಪೊಲೀಸರಿಗೆ ದೂರು ನೀಡಿದ್ದಾರೆ. ಈ ಕುರಿತು ತನಿಖೆ ನಡೆಸಿದ ಪೊಲೀಸರು ಆರೋಪಿಗಳಲ್ಲಿ ಆಟೋ ಚಾಲಕನನ್ನು ಬಂಧಿಸಿದ್ದಾರೆ. ಬಾಲಕಿಯೂ ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಳೆ. ಇದನ್ನೂ ಓದಿ: ಸ್ಪುಟ್ನಿಕ್ ಲಸಿಕೆ ಓಮಿಕ್ರಾನ್‌ಗೆ ಪರಿಣಾಮಕಾರಿ – ರಷ್ಯಾ

  • ಪ್ರಾಂಶುಪಾಲ, ಶಿಕ್ಷಕರು ಸೇರಿ 9 ಮಂದಿಯಿಂದ ನಾಲ್ವರು ವಿದ್ಯಾರ್ಥಿನಿಯರ ಮೇಲೆ ರೇಪ್

    ಪ್ರಾಂಶುಪಾಲ, ಶಿಕ್ಷಕರು ಸೇರಿ 9 ಮಂದಿಯಿಂದ ನಾಲ್ವರು ವಿದ್ಯಾರ್ಥಿನಿಯರ ಮೇಲೆ ರೇಪ್

    ಜೈಪುರ: ನಾಲ್ವರು ವಿದ್ಯಾರ್ಥಿನಿಯರ ಮೇಲೆ ಸರ್ಕಾರಿ ಶಾಲೆಯ ಪ್ರಾಂಶುಪಾಲರು ಹಾಗೂ ಒಂಬತ್ತು ಶಿಕ್ಷಕರು ಕಿರುಕುಳ ನೀಡಿ ಅತ್ಯಾಚಾರವೆಸಗಿದ ಘಟನೆ ತಡವಾಗಿ ಬೆಳಕಿಗೆ ಬಂದಿದೆ.

    ರಾಜಸ್ಥಾನದ ಅಲ್ವಾರ್ ಜಿಲ್ಲೆಯಲ್ಲಿ ಈ ಘಟನೆ ನಡೆದಿದೆ. ಸಂತ್ರಸ್ತೆಯ ತಂದೆ ಶಾಲೆಗೆ ಹೊಗದ ಕಾರಣವನ್ನು ವಿಚಾರಿಸಿದಾಗ ಈ ಘಟನೆ ಬೆಳಕಿಗೆ ಬಂದಿದೆ. ಸಂತ್ರಸ್ತೆ 10ನೇ ತರಗತಿಯಲ್ಲಿ ಓದುತ್ತಿದ್ದು, ಕಳೆದ ಒಂದು ವರ್ಷದಿಂದ ಆಕೆಯ ಮೇಲೆ ಪ್ರಾಂಶುಪಾಲರು ಹಾಗೂ ಶಿಕ್ಷಕರು ಸಾಮೂಹಿಕ ಅತ್ಯಾಚಾರವೆಸಗುತ್ತಿದ್ದಾರೆ. ಜೊತೆಗೆ ಇಬ್ಬರು ಮಹಿಳಾ ಶಿಕ್ಷಕರು ಘಟನೆಯ ವೀಡಿಯೋಗಳನ್ನು ಚಿತ್ರೀಕರಿಸಿದ್ದಾರೆ ಎಂದು ಬಾಲಕಿ ಆರೋಪಿಸಿದ್ದಾಳೆ.

    ಈ ಬಗ್ಗೆ ಪೊಲೀಸರಿಗೆ ಸಂತ್ರಸ್ತೆಯ ತಂದೆ ದೂರು ನೀಡಿದ್ದಾರೆ. ಘಟನೆ ಕುರಿತು ಹೆಚ್ಚಿನ ತನಿಖೆ ನಡೆಸಿದ ಸಂದರ್ಭದಲ್ಲಿ ಇನ್ನೂ ಮೂವರು ವಿದ್ಯಾರ್ಥಿನಿಗಳು ಅತ್ಯಾಚಾರಕ್ಕೆ ಒಳಗಾಗಿರುವುದು ತಿಳಿದುಬಂದಿದೆ. ಇವರು 6ನೇ ತರಗತಿ, 4ನೇ ತರಗತಿ ಮತ್ತು 3ನೇ ತರಗತಿಯಲ್ಲಿ ಓದುತ್ತಿರುವ ವಿದ್ಯಾರ್ಥಿನಿಗಳಾಗಿದ್ದಾರೆ. ಘಟನೆ ಬಗ್ಗೆ ಯಾರಿಗಾದರೂ ಹೇಳಿದರೆ ಕೊಲೆ ಮಾಡುವುದಾಗಿ ಆರೋಪಿಗಳು ಬೆದರಿಕೆ ಒಡ್ಡಿದ್ದಾರೆ ಎಂದು ಸಂತ್ರಸ್ತರು ತಿಳಿಸಿದ್ದಾರೆ. ಇದನ್ನೂ ಓದಿ: ಖ್ಯಾತ ಫೋಟೋಗ್ರಾಫರ್ ತೆಗೆದಿರುವ ಸೂರ್ಯನ ಒಂದು ಫೋಟೋಗೆ 3766ರೂ.!

    ಮಹಿಳಾ ಶಿಕ್ಷಕರಿಗೆ ಈ ವಿಷಯವನ್ನು ತಿಳಿಸಿದಾಗ ಅವರು ಶಾಲಾ ಶುಲ್ಕ ಹಾಗೂ ಪುಸ್ತಕಗಳ ಹಣವನ್ನು ಪಾವತಿಸುವುದಾಗಿ ಆಮಿಷ ನೀಡಿದ್ದರು. ಜೊತೆಗೆ ದೂರು ನೀಡದಂತೆಯೂ ತಿಳಿಸಿದ್ದರು ಎಂದು ಸಂತ್ರಸ್ತೆ ಪೊಲೀಸರಿಗೆ ತಿಳಿಸಿದ್ದಾರೆ.

    RAPE CASE

    ಮೂವರು ಶಿಕ್ಷಕರು ಹಾಗೂ ಪ್ರಿನ್ಸಿಪಾಲ್‌ರು ಹಲವಾರು ಬಾರಿ ಸಂತ್ರಸ್ತರನ್ನು ಮನೆಗೆ ಕರೆದುಕೊಂಡು ಹೋಗಿದ್ದಾರೆ. ಅಲ್ಲಿ ಅವರು ಮದ್ಯ ಸೇವಿಸಿ ಅತ್ಯಾಚಾರವನ್ನು ಎಸಗಿದ್ದಾರೆ ಎಂದು ವಿಚಾರಣೆ ವೇಳೆ ಸಂತ್ರಸ್ತೆ ತಿಳಿಸಿದ್ದಾರೆ. ಈ ಬಗ್ಗೆ ದೂರು ನೀಡಲು ಹೋದಾಗ ಪ್ರಾಂಶುಪಾಲರು ಕೊಲೆ ಬೆದರಿಕೆ ಹಾಕಿದ್ದಾರೆ ಎಂದು ಸಂತ್ರಸ್ತೆಯ ತಂದೆ ತಿಳಿಸಿದ್ದಾರೆ. ಈ ಎಲ್ಲಾ ಆರೋಪಗಳನ್ನು ತಳ್ಳಿಹಾಕಿದ ಪ್ರಾಂಶುಪಾಲರು, ಅಂತಹ ಯಾವುದೇ ಪ್ರಕರಣದ ಬಗ್ಗೆ ತನಗೆ ಮಾಹಿತಿ ಇಲ್ಲ ಎಂದು ಹೇಳಿದರು. ಇದನ್ನೂ ಓದಿ: ಒಂದೇ ಕುಟುಂಬದ ನಾಲ್ವರು ಆತ್ಮಹತ್ಯೆ

    ಅಲ್ವಾರ್‌ನ ಸರ್ಕಾರಿ ಶಾಲೆಯ ನಾಲ್ವರು ವಿದ್ಯಾರ್ಥಿನಿಗಳು ನೀಡಿದ ದೂರಿನ ಹಿನ್ನೆಲೆಯಲ್ಲಿ ಶಾಲೆಯ ಪ್ರಾಂಶುಪಾಲರು ಮತ್ತು ಒಂಬತ್ತು ಶಿಕ್ಷಕರ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ತಮ್ಮ ದೂರಿನಲ್ಲಿ, ಸಂತ್ರಸ್ತರು ಶಿಕ್ಷಕರ ಮೇಲೆ ಸಾಮೂಹಿಕ ಅತ್ಯಾಚಾರ ಮತ್ತು ಕಿರುಕುಳದ ಆರೋಪ ಮಾಡಿದ್ದಾರೆ. ಮಂಧಾನ ಪೊಲೀಸ್ ಠಾಣಾಧಿಕಾರಿ ಮುಖೇಶ್ ಯಾದವ್ ಮಾತನಾಡಿ, ಈ ವಿಷಯಕ್ಕೆ ಸಂಬಂಧಿಸಿದಂತೆ ಮೂರು ವಿಭಿನ್ನ ಪ್ರಕರಣಗಳನ್ನು ದಾಖಲಿಸಲಾಗಿದೆ ಮತ್ತು ಪೊಲೀಸರು ಪ್ರಕರಣದ ತನಿಖೆ ನಡೆಸಲಾಗುತ್ತದೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ವೀಡಿಯೋ: ಆರತಿ ಬೆಳಗಿ ಮುದ್ದಿನ ಶ್ವಾನದ ಹುಟ್ಟುಹಬ್ಬ ಆಚರಿಸಿದ ಸುಧಾಮೂರ್ತಿ!

  • ಫೋಟೋಶೂಟ್‌ಗಾಗಿ ಬಂದಿದ್ದ ಮಹಿಳೆ ಮೇಲೆ ಲಾಡ್ಜ್‌ನಲ್ಲಿ ಗ್ಯಾಂಗ್‌ರೇಪ್

    ಫೋಟೋಶೂಟ್‌ಗಾಗಿ ಬಂದಿದ್ದ ಮಹಿಳೆ ಮೇಲೆ ಲಾಡ್ಜ್‌ನಲ್ಲಿ ಗ್ಯಾಂಗ್‌ರೇಪ್

    ತಿರುವನಂತಪುರಂ: ಮಹಿಳೆಯೊಬ್ಬಳ ಮೇಲೆ ಕಾಮುಕರು ಮೂರು ದಿನಗಳ ಕಾಲ ಸಾಮೂಹಿಕ ಅತ್ಯಾಚಾರ ನಡೆಸಿದ ಘಟನೆ ಕೇರಳದಲ್ಲಿ ಬೆಳಕಿಗೆ ಬಂದಿದೆ.

    ಸಲೀಂ ಕುಮಾರ್(23) ಬಂಧಿತ ಆರೋಪಿ. ಇನ್ನಿಬ್ಬರು ಆರೋಪಿಗಳಾದ ಅಜ್ಮಲ್ ಮತ್ತು ಶಮೀರ್ ಅವರನ್ನು ಪೊಲೀಸರು ಹುಡುಕುತ್ತಿದ್ದಾರೆ. ಮಹಿಳೆ ಫೋಟೋಶೂಟ್‌ಗೆಂದು ಕೊಚ್ಚಿಗೆ ಬಂದಿದ್ದರು. ಆಗ ಅಲ್ಲಿದ್ದ ಮೂವರು ವ್ಯಕ್ತಿಗಳು ಮಹಿಳೆಯನ್ನು ಲಾಡ್ಜ್‌ಗೆ ಕರೆತಂದು, ಆಕೆಗೆ ಮಾದಕ ದ್ರವ್ಯ ನೀಡಿ ಗ್ಯಾಂಗ್ ರೇಪ್ ಮಾಡಿದ್ದಾರೆ.

    ಮೂಲಗಳ ಪ್ರಕಾರ ಸಂತ್ರಸ್ತೆಯ ಮೇಲೆ ಡಿ.೧ರಿಂದ ಡಿ.೩ರವರೆಗೆ ಅತ್ಯಾಚಾರ ನಡೆಸಲಾಗಿದೆ ಎಂದು ಆರೋಪಿಸಲಾಗಿದೆ. ಗ್ಯಾಂಗ್ ರೇಪ್ ಮಾಡಿದ್ದನ್ನು ವೀಡಿಯೋ ಮಾಡಿಕೊಂಡು ಸಂತ್ರಸ್ತೆಗೆ ಬ್ಲ್ಯಾಕ್ ಮೇಲ್ ಮಾಡುತ್ತಿದ್ದರು. ಮತ್ತೆ ಆ ವೀಡಿಯೋ ತೋರಿಸಿ ಅತ್ಯಾಚಾರವೆಸಗಿದ್ದಾರೆ. ಈ ಬಗ್ಗೆ ಮಹಿಳೆ ಪೊಲೀಸರಿಗೆ ದೂರು ನೀಡಿದ್ದಾರೆ.

    RAPE CASE

    ದೂರಿನಲ್ಲಿ ಏನಿದೆ?: ಫೋಟೋಶೂಟ್‌ಗಾಗಿ ಕೊಚ್ಚಿಗೆ ಬಂದಿದ್ದೆ. ಈ ವೇಳೆ ಅಲಪ್ಪುಳದ ಸಲೀಂ ಕುಮಾರ್ ಅವರು ಮೊದಲೇ ಪರಿಚಯವಿದ್ದರಿಂದ ಲಾಡ್ಜ್ ವ್ಯವಸ್ಥೆ ಮಾಡಿದ್ದ. ಅಂತೆಯೇ ಲಾಡ್ಜ್ ನಲ್ಲಿದ್ದ ಸಂದರ್ಭದಲ್ಲಿ ಮಾಲೀಕ ಮತ್ತು ಬರುವ ಪಾನೀಯ ನೀಡಿದ್ದಾನೆ. ಇದಾದ ಬಳಿಕ ತನ್ನ ಮೇಲೆ ಅತ್ಯಾಚಾರ ಎಸಗಲಾಗಿದೆ ಎಂದು ಸಂತ್ರಸ್ತೆ ದೂರಿನಲ್ಲಿ ವಿವರಿಸಿದ್ದಾರೆ. ಇದನ್ನೂ ಓದಿ: ತುಮಕೂರಿನಲ್ಲಿ ಮತ್ತೆ ಕೊರೊನಾ ಭೀತಿ – 42 ಪುಟ್ಟ ಮಕ್ಕಳಿಗೆ ವಕ್ಕರಿಸಿದ ಕೋವಿಡ್

    ಮಲಪ್ಪುರಂ ಮೂಲದ ಸಂತ್ರಸ್ತೆ ಈ ಬಗ್ಗೆ ಇನ್ಫೋ ಪಾರ್ಕ್ ಪೊಲೀಸರಿಗೆ ದೂರು ನೀಡಿದ್ದಾರೆ. ದೂರು ದಾಖಲಿಸಿಕೊಂಡ ಪೊಲೀಸರು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ. ಹಾಗೂ ಆರೋಪಿಗಳ ಶೋಧ ನಡೆಸುತ್ತಿದ್ದಾರೆ. ಇದನ್ನೂ ಓದಿ: ವಸತಿ ಶಾಲೆಯಲ್ಲಿ ಕೊರೊನಾ ಸ್ಫೋಟ- 93 ವಿದ್ಯಾರ್ಥಿಗಳು ಸೇರಿ 107 ಮಂದಿಗೆ ಪಾಸಿಟಿವ್

  • ದಕ್ಷಿಣ ಕನ್ನಡದ ಬಂಟ್ವಾಳದಲ್ಲಿ ಅಪ್ರಾಪ್ತೆ ಮೇಲೆ ಗ್ಯಾಂಗ್‍ರೇಪ್!

    ದಕ್ಷಿಣ ಕನ್ನಡದ ಬಂಟ್ವಾಳದಲ್ಲಿ ಅಪ್ರಾಪ್ತೆ ಮೇಲೆ ಗ್ಯಾಂಗ್‍ರೇಪ್!

    – ಪೊಲೀಸರಿಗೆ ಕಾಮುಕರ ಹೆಸರು ತಿಳಿಸಿದ ಬಾಲಕಿ

    ಮಂಗಳೂರು: ರಾಜ್ಯದಲ್ಲಿ ಅತ್ಯಾಚಾರ ಪ್ರಕರಣಗಳಿಗೆ ಕಡಿವಾಣ ಇಲ್ಲದಂತಾಗಿದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಗ್ಯಾಂಗ್ ರೇಪ್ ಪ್ರಕರಣ ನಡೆದಿರುವುದು ಇಂದು ಬೆಳಕಿಗೆ ಬಂದಿದೆ.

    ಬಂಟ್ವಾಳ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಶುಕ್ರವಾರ ಅಪ್ರಾಪ್ತೆಯ ಮೇಲೆ ಐವರು ಕಾಮುಕರು ಸಾಮೂಹಿಕ ಅತ್ಯಾಚಾರ ಎಸಗಿರುವ ಆರೋಪವೊಂದು ಕೇಳಿಬಂದಿದೆ. ಈ ಬಗ್ಗೆ ಸ್ವತಃ ಬಾಲಕಿಯೇ ಪೊಲೀಸ್ ಠಾಣೆಗೆ ತೆರಳಿ ದೂರು ದಾಖಲಿಸಿದ್ದಾಳೆ. ಅಲ್ಲದೆ ಐವರು ಕಾಮುಕರ ಹೆಸರನ್ನು ಕೂಡ ತಿಳಿಸಿದ್ದಾಳೆ.

    ಕಾಮುಕರು ಬಂಟ್ವಾಳದಿಂದ ಬಾಲಕಿಯನ್ನು ಅಪಹರಿಸಿ ರೂಂ ಒಂದಕ್ಕೆ ಕರೆದೊಯ್ದಿದ್ದಾರೆ. ನಂತರ ಅಲ್ಲಿ ಬಾಲಕಿಗೆ ಮತ್ತು ಬರಿಸುವ ಜ್ಯೂಸ್ ನೀಡಿ ಅತ್ಯಾಚಾರ ಮಾಡಿದ್ದಾರೆ. ಸದ್ಯ ಬಾಲಕಿಯನ್ನು ಮಂಗಳೂರಿನ ಸರ್ಕಾರಿ ಆಸ್ಪತ್ರೆಗೆ ದಾಖಲಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ. ಇದನ್ನೂ ಓದಿ:  ರಸ್ತೆ ಗುಂಡಿ ಆಯ್ತು, ಈಗ ಪಾರ್ಕ್ ಹೊಂಡಕ್ಕೆ ಬಾಲಕ ಬಲಿ..!

    ಬಾಲಕಿಯ ವೈದ್ಯಕೀಯ ಪರೀಕ್ಷೆಯ ವರದಿ ಬಂದ ಬಳಿಕ ಕೃತ್ಯದ ಬಗ್ಗೆ ವಿವಿಧ ಆಯಾಮಗಳಲ್ಲಿ ಪೊಲೀಸರು ತನಿಖೆ ನಡೆಸಲಿದ್ದಾರೆ. ಪ್ರಕರಣದ ಬಳಿಕ ಆರೋಪಿಗಳು ತಲೆಮರೆಸಿಕೊಂಡಿದ್ದು, ಕಾಮುಕರ ಪತ್ತೆಗೆ 2 ತಂಡಗಳನ್ನು ರಚಿಸಲಾಗಿದೆ.

  • ಬಹಳ ಕಡಿಮೆ ಸಮಯದಲ್ಲಿ ಆರೋಪಿಗಳನ್ನು ಹೆಡೆಮುರಿ ಕಟ್ಟಿದ್ದಾರೆ: ಹಾಲಪ್ಪ ಆಚಾರ್

    ಬಹಳ ಕಡಿಮೆ ಸಮಯದಲ್ಲಿ ಆರೋಪಿಗಳನ್ನು ಹೆಡೆಮುರಿ ಕಟ್ಟಿದ್ದಾರೆ: ಹಾಲಪ್ಪ ಆಚಾರ್

    ಕೊಪ್ಪಳ: ಬಹಳ ಕಡಿಮೆ ಸಮಯದಲ್ಲಿ ಆರೋಪಿಗಳನ್ನು ಹೆಡೆಮುರಿ ಕಟ್ಟಿದ್ದಾರೆ ಎಂದು ಪೊಲೀಸರನ್ನು ಗಣಿ ಭೂ ವಿಜ್ಞಾನ ಸಚಿವ ಹಾಲಪ್ಪ ಆಚಾರ್ ಪ್ರಶಂಸಿದ್ದಾರೆ.

    ಮೈಸೂರು ಗ್ಯಾಂಗ್ ರೇಪ್ ಪ್ರಕರಣ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಪೊಲೀಸ್ ಅಧಿಕಾರಿಗಳು ಉತ್ತಮ ಕೆಲಸ ಮಾಡಿದ್ದಾರೆ. ಬಹಳ ಕಡಿಮೆ ಸಮಯದಲ್ಲಿ ಆರೋಪಿಗಳನ್ನು ಹೆಡೆಮುರಿ ಕಟ್ಟಿದ್ದಾರೆ. ಈಗ ಸಂತ್ರಸ್ತೆಗೆ ನ್ಯಾಯ ಸಿಗಬೇಕು, ಕಾನೂನು ಪ್ರಕಾರ ಅಪರಾಧಿಗಳಿಗೆ ಶಿಕ್ಷೆ ಆಗಬೇಕೆಂದು ಆಗ್ರಹಿಸಿದ್ದಾರೆ.ಇದನ್ನೂ ಓದಿ:ಜಾತಿ, ಭಾಷೆಯ ವಿಷಬೀಜ ಬಿತ್ತಿ ಅಧಿಕಾರ ಹಿಡಿಯುವ ತಂತ್ರ ಪ್ರಾರಂಭವಾಗಿದೆ: ಈರಣ್ಣ ಕಡಾಡಿ

    ಹಾಲಪ್ಪ ಆಚಾರ್‍ಗೆ ಮಕ್ಕಳೇ ಇಲ್ಲ ಎಂದು ಟೀಕಿಸಿದ ಮಾಜಿ ಸಚಿವ ಬಸವರಾಜ್ ರಾಯರೆಡ್ಡಿ ಹೇಳಿಕೆ ವಿಚಾರವಾಗಿ ಮಾತನಾಡಿದ ಅವರು, ಆ ವಿಷಯಕ್ಕೆ ಯಾವುದೇ ರೀತಿಯ ಪ್ರತಿಕ್ರಿಯೆಯನ್ನು ನಾನು ನೀಡುವುದಿಲ್ಲ. ಆ ವಿಷಯಕ್ಕೆ ನಾನು ಕಾಮೆಂಟ್ ಮಾಡಲ್ಲ, ಕಾಮೆಂಟ್ ಮಾಡೋ ಅವಶ್ಯಕತೆ ಇಲ್ಲ. ನಾನು ಅಸಹಾಯಕ ಅಲ್ಲ, ಸಾರ್ವಜನಿಕ ಬದುಕಿನಲ್ಲಿ ಹೇಗೆ ಇರಬೇಕು ಅದೇ ರೀತಿ ಇರುತ್ತೇನೆ ಎಂದು ತಿಳಿಸಿದ್ದಾರೆ.ಇದನ್ನೂ ಓದಿ:ಸರ್ಕಾರದಿಂದ ಆದೇಶ ಹೊರಡಿಸಿ ಪುಣ್ಯ ಕಟ್ಟಿಕೊಳ್ಳಿ- ಮಾಜಿ ಸ್ಪೀಕರ್ ವಿರುದ್ಧ ಪೊಲೀಸರ ಆಕ್ರೋಶ

    ನಾನು ಆ ವಿಷಯ ಚರ್ಚೆ ಮಾಡೋದಾಗಲಿ, ಕಾಮೆಂಟ್ ಮಾಡೋದಾಗಲಿ ಮಾಡಲ್ಲ. ನಾನು ಸಾರ್ವಜನಿಕ ಜೀವನದಲ್ಲಿ ಇದೀನಿ. ಎಲ್ಲದಕ್ಕೂ ಕಾಮೆಂಟ್ ಮಾಡೋಕೆ ನನಗೆ ರಾಜ್ಯದ ನಾಯಕರು ಜವಾಬ್ದಾರಿ ಕೊಟ್ಟಿಲ್ಲ. ರಾಜ್ಯದ ನಾಯಕರು, ಕ್ಷೇತ್ರದ ಜನ ಬೇರೆ ಜವಾಬ್ದಾರಿ ಕೊಟ್ಟಿದ್ದಾರೆ. ಆ ಕೆಲಸ ಮಾಡ್ತೀನಿ ಎಂದಿದ್ದಾರೆ.ಇದನ್ನೂ ಓದಿ:ಆಚಾರ್ ಕುಟುಂಬದವರಿಗೆ ನೋವುಂಟುಮಾಡುವ ಉದ್ದೇಶವಿರಲಿಲ್ಲ: ಬಸವರಾಜ್ ರಾಯರೆಡ್ಡಿ ವಿಷಾದ

  • ಜನರ ಮರ್ಯಾದೆಯನ್ನೆ ಬಂಡವಾಳ ಮಾಡಿಕೊಂಡಿದ್ದ ಗ್ಯಾಂಗ್ ರೇಪ್ ಕಿರಾತಕರು

    ಜನರ ಮರ್ಯಾದೆಯನ್ನೆ ಬಂಡವಾಳ ಮಾಡಿಕೊಂಡಿದ್ದ ಗ್ಯಾಂಗ್ ರೇಪ್ ಕಿರಾತಕರು

    – ಆರೋಪಿಗಳ ಹೇಳಿಕೆ ಕೇಳಿ ಪೊಲೀಸರೇ ಶಾಕ್

    ಮೈಸೂರು: ಇಡೀ ರಾಜ್ಯವನ್ನೇ ಬೆಚ್ಚಿ ಬೀಳಿಸಿದ್ದ ಮೈಸೂರಿನ ವಿದ್ಯಾರ್ಥಿನಿ ಮೇಲೆ ಗ್ಯಾಂಗ್ ರೇಪ್ ಪ್ರಕರಣದಲ್ಲಿ ಭಾಗಿಯಾಗಿರುವ ಆರೋಪಿಗಳ ಹಿನ್ನೆಲೆ ನಟೋರಿಯಸ್ ಆಗಿದ್ದು, ಅವರು ಜನರ ಮರ್ಯಾದೆಯನ್ನು ಬಂಡವಾಳ ಮಾಡಿಕೊಂಡಿದ್ದರು ಎಂಬ ಸತ್ಯ ವಿಚಾರಣೆ ವೇಳೆ ತಿಳಿದುಬಂದಿದೆ.

    ಈ ನಟೋರಿಯಸ್‍ಗಳು ಮೈಸೂರಿನ ಜನನಿಬಿಡ ಸ್ಥಳಗಳಲ್ಲಿ ಹಿಂದೆಯೂ ರಾಬರಿ, ಸರಗಳ್ಳತನ ಸೇರಿದಂತೆ ಇನ್ನಿತರ ಪ್ರಕರಣಗಳನ್ನು ನಡೆಸಿದ್ದು, ಹಣ, ಚಿನ್ನಾಭರಣಗಳನ್ನು ಕಳೆದುಕೊಂಡವರು ಮರ್ಯಾದೆಗೆ ಅಂಜಿ ದೂರು ನೀಡುತ್ತಿರಲಿಲ್ಲ. ಆರೋಪಿಗಳು ಅದನ್ನೆ ಪ್ಲಸ್ ಪಾಯಿಂಟ್ ಮಾಡಿಕೊಂಡು ಇಂತಹ ಪ್ರಕರಣಗಳಲ್ಲಿ ಭಾಗಿಯಾಗುತ್ತಿದ್ದರು ಎಂಬ ಸಂಗತಿ ವಿಚಾರಣೆಯ ವೇಳೆ ತಿಳಿದುಬಂದಿದೆ.ಇದನ್ನೂ ಓದಿ:ಸರ್ಕಾರದಿಂದ ಆದೇಶ ಹೊರಡಿಸಿ ಪುಣ್ಯ ಕಟ್ಟಿಕೊಳ್ಳಿ- ಮಾಜಿ ಸ್ಪೀಕರ್ ವಿರುದ್ಧ ಪೊಲೀಸರ ಆಕ್ರೋಶ

    ಪೊಲೀಸರೇ ಶಾಕ್!
    ಮೈಸೂರು ವಿದ್ಯಾರ್ಥಿನಿಯ ರೇಪ್ ಕೇಸ್‍ನಲ್ಲಿ ನಿನ್ನೆ ಐವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದರು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಆರೋಪಿಗಳನ್ನು ವಿಚಾರಣೆಗೆ ಒಳಪಡಿಸಿದ್ದು, ಈ ವೇಳೆ ಆರೋಪಿಗಳು ಹೇಳಿರುವ ಹೇಳಿಕೆಗಳನ್ನು ಕೇಳಿ ಪೊಲೀಸರೇ ಶಾಕ್ ಆಗುತ್ತಿದ್ದಾರೆ.

    ತಮಿಳುನಾಡಿನಿಂದ ಮೈಸೂರಿಗೆ ತರಕಾರಿ, ಬಾಳೆಕಾಯಿ ಗಾಡಿಗಳ ಜೊತೆ ಬರುತ್ತಿದ್ದ ಇವರು ಕೂಲಿ ಕೆಲಸಗಳನ್ನು ಮಾಡುತ್ತಿದ್ದರು. ಕೆಲಸ ಮುಗಿದ ನಂತರ ಮೈಸೂರಿನ ನಿರ್ಜನ ಪ್ರದೇಶಗಳು ಹಾಗೂ ಚಾಮುಂಡಿಬೆಟ್ಟದ ತಪ್ಪಲಿಗೆ ಸಂಜೆಯ ವೇಳೆ ಹೋಗುತ್ತಾರೆ. ಈ ಸಂದರ್ಭದಲ್ಲಿ ಒಂಟಿಯಾಗಿ ಬರುತ್ತಿದ್ದವರನ್ನು ಹೆದರಿಸಿ ಅವರ ಬಳಿ ಇರುತ್ತಿದ್ದ ಚಿನ್ನ, ಹಣ, ಮೊಬೈಲ್‍ಗಳನ್ನು ಕಸಿದುಕೊಂಡು ಕಳುಹಿಸುತ್ತಿದ್ದರು.ಇದನ್ನೂ ಓದಿ:ಮೈಸೂರು ಗ್ಯಾಂಗ್‍ರೇಪ್ – ಆರೋಪಿ ಮೇಲಿದೆ 10 ಕೇಸ್‍ಗಳು

    ಇಂತಹ ಪ್ರಕರಣದಲ್ಲಿ ಹಣ, ಚಿನ್ನಾಭರಣ, ಮೊಬೈಲ್‍ಗಳನ್ನು ಕಳೆದುಕೊಂಡವರು ಮರ್ಯಾದೆಗೆ ಅಂಜಿ ಮತ್ತು ದೂರು ಕೊಟ್ಟರೆ ನಾವೇ ಅಲೆದಾಡಬೇಕಾಗುತ್ತೆ ಎಂದು ಆ ಕೆಲಸಕ್ಕೆ ಮುಂದಾಗಿಲ್ಲ. ಇದನ್ನೇ ಆರೋಪಿಗಳು ಬಂಡವಾಳ ಮಾಡಿಕೊಂಡಿದ್ದರು.

    ಈ ಆರೋಪಿಗಳು ಪದೇ ಪದೇ ಇಂತಹ ಪ್ರಕರಣಗಳನ್ನು ಮಾಡುತ್ತಿದ್ದು, ಗ್ಯಾಂಗ್ ರೇಪ್ ನಡೆದಿರುವ ಸ್ಥಳದಲ್ಲೇ ಈ ಹಿಂದೆ ದರೋಡೆ, ಮಹಿಳೆಯರಿಗೆ ಲೈಂಗಿಕ ಕಿರುಕುಳವನ್ನು ನೀಡಿದ್ದಾರೆ ಎಂದು ವಿಚಾರಣೆಯ ವೇಳೆ ಬೆಳಕಿಗೆ ಬಂದಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.ಇದನ್ನೂ ಓದಿ:ಮೈಸೂರು ಕೇಸ್‍ಲ್ಲಿ ಪೊಲೀಸರ ಪಾಲಿಗೆ ಬೆಳಕಾಗಿದ್ದೇ ಬಸ್ ಟಿಕೆಟ್ ಕೊಟ್ಟ ಸುಳಿವು, ಆ ಮೊಬೈಲ್ ನಂಬರ್!