Tag: gang rape

  • ಮಣಿಪುರದಲ್ಲಿ ಅಮಾನವೀಯ ಘಟನೆ – ಇಬ್ಬರು ಮಹಿಳೆಯರನ್ನು ಬೆತ್ತಲಾಗಿಸಿ ಮೆರವಣಿಗೆ; ಅತ್ಯಾಚಾರ ಆರೋಪ

    ಮಣಿಪುರದಲ್ಲಿ ಅಮಾನವೀಯ ಘಟನೆ – ಇಬ್ಬರು ಮಹಿಳೆಯರನ್ನು ಬೆತ್ತಲಾಗಿಸಿ ಮೆರವಣಿಗೆ; ಅತ್ಯಾಚಾರ ಆರೋಪ

    ಇಂಫಾಲ: ಮಣಿಪುರದಲ್ಲಿ (Manipur) ಪುರುಷರ ಗುಂಪೊಂದು ಇಬ್ಬರು ಮಹಿಳೆಯರನ್ನು ಬೆತ್ತಲಾಗಿಸಿ ರಸ್ತೆಯಲ್ಲಿ ಮೆರವಣಿಗೆ ಮಾಡಿರುವ ದೃಶ್ಯದ ಭಯಾನಕ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ವೈರಲ್ ಆಗಿದೆ. ಈ ಘಟನೆಗೆ ಭಾರೀ ಖಂಡನೆ ವ್ಯಕ್ತವಾಗಿದ್ದು, ಸೂಕ್ತ ಕ್ರಮಕ್ಕಾಗಿ ಎಲ್ಲೆಡೆ ಆಗ್ರಹಿಸಲಾಗುತ್ತಿದೆ.

    ವರದಿಗಳ ಪ್ರಕಾರ, ಈ ಘಟನೆ ರಾಜ್ಯ ರಾಜಧಾನಿ ಇಂಫಾಲದಿಂದ ಸುಮಾರು 35 ಕಿ.ಮೀ ದೂರದಲ್ಲಿರುವ ಕಾಂಗ್‌ಪೋಕ್ಪಿ (Kangpokpi) ಜಿಲ್ಲೆಯಲ್ಲಿ ಮೇ 4 ರಂದು ನಡೆದಿದೆ. ಇಬ್ಬರು ಮಹಿಳೆಯರನ್ನು ಸಮೀಪದ ಹೊಲಕ್ಕೆ ಎಳೆದೊಯ್ದು ಸಾಮೂಹಿಕ ಅತ್ಯಾಚಾರ (Gang Rape) ಎಸಗಲಾಗಿದೆ ಎಂದು ಸ್ಥಳೀಯ ಬುಡಕಟ್ಟು ಸಂಘಟನೆ ಆರೋಪಿಸಿದೆ.

     

    ಈ ಘಟನೆ ನಡೆದ ಹಿಂದಿನ ದಿನವಷ್ಟೇ ಪರಿಶಿಷ್ಟ ಪಂಗಡದ ಮೀಸಲಾಗಿಗಾಗಿ ಮೈತೇಯ್ ಸಮುದಾಯದವರ ಬೇಡಿಕೆಯ ಕುರಿತು ಮೈತೇಯ್ ಹಾಗೂ ಕುಕಿ ಬುಡಕಟ್ಟು ಸಮುದಾಯದವರ ನಡುವೆ ಭಾರೀ ಘರ್ಷಣೆ ಏರ್ಪಟ್ಟಿತ್ತು. ಇದೀಗ ವೀಡಿಯೋಗೆ ಸಂಬಂಧಿಸಿದಂತೆ ಸಂತ್ರಸ್ತ ಮಹಿಳೆಯರು ಕುಕಿ ಸಮುದಾಯಕ್ಕೆ ಸೇರಿದವರು ಎಂದು ಸ್ಥಳೀಯ ಬುಡಕಟ್ಟು ನಾಯಕರ ವೇದಿಕೆ (ITLF) ತಿಳಿಸಿದೆ. ಇದನ್ನೂ ಓದಿ: ಸೀಮಾ ಹೈದರ್‌ ಪ್ರಕರಣಕ್ಕೆ ಮತ್ತೊಂದು ಟ್ವಿಸ್ಟ್‌ – ಪಾಕ್‌ ಮಹಿಳೆಯಿಂದ ಭಾರತೀಯ ಯೋಧರಿಗೆ ಫ್ರೆಂಡ್‌ ರಿಕ್ವೆಸ್ಟ್‌

    ವೈರಲ್ ಆಗಿರುವ ವೀಡಿಯೋದಲ್ಲಿ ಮೈತೇಯ್ ಸಮುದಾಯದ ಪುರುಷರ ಗುಂಪೊಂದು ಕುಕಿ ಜನಾಂಗಕ್ಕೆ ಸೇರಿದ ಇಬ್ಬರು ಮಹಿಳೆಯರನ್ನು ಸಾಮೂಹಿಕ ಅತ್ಯಾಚಾರ ಮಾಡಲು ಭತ್ತದ ಗದ್ದೆಗೆ ಎಳೆದುಕೊಂಡು ಹೋಗುವುದನ್ನು ತೋರಿಸುತ್ತದೆ. ಪುರುಷರ ಗುಂಪು ಮಹಿಳೆಯರನ್ನು ಬೆತ್ತಲಾಗಿಸಿ, ರಸ್ತೆಯಲ್ಲಿ ಮೆರವಣಿಗೆ ಮಾಡಿದ್ದಲ್ಲದೇ ಅವರಿಗೆ ಕಿರುಕುಳ ನೀಡಿದ್ದಾರೆ. ಮಹಿಳೆಯರು ಅಸಹಾಯಕತೆಯಿಂದ ಅಳುತ್ತ ತಮ್ಮನ್ನು ಬಿಡುವಂತೆ ಮನವಿ ಮಾಡಿರುವುದೂ ವೀಡಿಯೋದಲ್ಲಿ ಕಂಡುಬಂದಿದೆ.

    ಹೇಯ ಕೃತ್ಯಕ್ಕೆ ಸಂಬಂಧಿಸಿದಂತೆ ಇಲ್ಲಿಯವರೆಗೆ ಪ್ರಕರಣ ದಾಖಲಾಗಿದೆಯೇ ಅಥವಾ ಯಾರನ್ನಾದರೂ ಬಂಧಿಸಿದ್ದಾರೆಯೇ ಎಂಬ ಬಗ್ಗೆ ಮಣಿಪುರ ಪೊಲೀಸರು ಇನ್ನೂ ಯಾವುದೇ ಹೇಳಿಕೆಗಳನ್ನು ನೀಡಿಲ್ಲ. ಆದರೆ ಭಯಾನಕ ಘಟನೆ ಬೆಳಕಿಗೆ ಬರುತ್ತಲೇ ರಾಜಕೀಯ ನಾಯಕರು ಸೇರಿದಂತೆ ಅನೇಕರು ತೀವ್ರ ಆಘಾತ ವ್ಯಕ್ತಪಡಿಸಿದ್ದಾರೆ. ಕೃತ್ಯದಲ್ಲಿ ಭಾಗಿಯಾಗಿರುವ ವ್ಯಕ್ತಿಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳಲ್ಲಿ ಮನವಿ ಮಾಡಿದ್ದಾರೆ. ಇದನ್ನೂ ಓದಿ: 2002 ರ ಗುಜರಾತ್‌ ಗಲಭೆ ಪ್ರಕರಣ – ತೀಸ್ತಾ ಸೆಟಲ್ವಾಡ್‌ಗೆ ಸುಪ್ರೀಂ ಜಾಮೀನು

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ವಿದ್ಯಾರ್ಥಿನಿಯ ಮೇಲೆ ಸಾಮೂಹಿಕ ಅತ್ಯಾಚಾರ- ಆರೋಪಿಗಳಲ್ಲಿ ಓರ್ವ ಬಿಜೆಪಿ ನಾಯಕನ ಮಗ!

    ಭೋಪಾಲ್: ಮಧ್ಯ ಪ್ರದೇಶದ (Madhya Pradesh) ದತಿಯಾ (Datia) ಜಿಲ್ಲೆಯಲ್ಲಿ ವಿದ್ಯಾರ್ಥಿನಿಯ (Student) ಮೇಲೆ ಸಾಮೂಹಿಕ ಅತ್ಯಾಚಾರ (Gang Rape) ನಡೆಸಿ, ಆಕೆಯ ತಂಗಿಯ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ವರು ಆರೋಪಿಗಳ ಪೈಕಿ ಮಧ್ಯಪ್ರದೇಶ ಬಿಜೆಪಿ ನಾಯಕನ (BJP Leader) ಮಗನೂ ಸೇರಿದ್ದಾನೆ ಎಂದು ವರದಿಗಳು ತಿಳಿಸಿವೆ.

    ಘಟನೆಯ ಬಳಿಕ ಸಂತ್ರಸ್ತೆ ವಿದ್ಯಾರ್ಥಿನಿ ನೇಣು ಬಿಗಿದು ಆತ್ಮಹತ್ಯೆ (Suicide) ಮಾಡಿಕೊಳ್ಳಲು ಯತ್ನಿಸಿದ್ದು, ಆಕೆಯನ್ನು ಆ ಕೂಡಲೇ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಆರೋಪಿಗಳೆಲ್ಲರೂ ಉನ್ನಾವೋ ಪೊಲೀಸ್ ಠಾಣಾ ವ್ಯಾಪ್ತಿಯ ನಿವಾಸಿಗಳಾಗಿದ್ದು, ಸಂತ್ರಸ್ತರ ಕುಟುಂಬದವರು ಹಾಗೂ ಸ್ಥಳೀಯರು ಆರೋಪಿಗಳ ಮೇಲೆ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದರು. ಈ ಹಿನ್ನೆಲೆ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದೆ. ಇದನ್ನೂ ಓದಿ: ಸಿಟ್ಟಿನಿಂದ ಮಾವನನ್ನು ಗೋಡೆಗೆ ತಳ್ಳಿ ಕೊಂದ ಅಳಿಯ!

    ಸಂತ್ರಸ್ತ ವಿದ್ಯಾರ್ಥಿನಿಯರು ಅಲ್ಲದೇ ನಾಲ್ವರು ಆರೋಪಿಗಳು ಸಹ ವಿದ್ಯಾರ್ಥಿಗಳಾಗಿದ್ದು, ಪೊಲೀಸರು ಈ ಬಗ್ಗೆ ತನಿಖೆ ನಡೆಸುತ್ತಿದ್ದಾರೆ ಎಂದು ದತಿಯಾ ಪೊಲೀಸ್ ವರಿಷ್ಠಾಧಿಕಾರಿ ಪ್ರದೀಪ್ ಶರ್ಮಾ ತಿಳಿಸಿದ್ದಾರೆ. ಅಲ್ಲದೇ ಆರೋಪಿಗಳ ವಿರುದ್ಧ ಭಾರತೀಯ ದಂಡ ಸಂಹಿತೆ ಸಂಬಂಧಿತ ಸೆಕ್ಷನ್‌ಗಳು ಮತ್ತು ಲೈಂಗಿಕ ಅಪರಾಧಗಳ ವಿರುದ್ಧ ಮಕ್ಕಳ ರಕ್ಷಣೆ (POCSO) ಕಾಯ್ದೆಯಡಿಯಲ್ಲಿ ಪ್ರಕರಣವನ್ನು ದಾಖಲಿಸಲಾಗಿದೆ. ಇದನ್ನೂ ಓದಿ: ವಿಚ್ಛೇದನಕ್ಕೆ ಒಪ್ಪದ ಪತ್ನಿಯ ಕೊಲೆಗೆ ಸ್ಕೆಚ್- ಅಪಘಾತಕ್ಕೆ ಯತ್ನಿಸಿ ಸಿಕ್ಕಿಬಿದ್ದ ಪತಿ

    ಅತ್ಯಚಾರಕ್ಕೊಳಗಾದ ವಿದ್ಯಾರ್ಥಿನಿಯ ತಂಗಿ ಘಟನೆಯ ಕುರಿತು ಪೊಲೀಸರಿಗೆ ದೂರು ನೀಡಿದ್ದಾಳೆ. ಆಕೆ ನೀಡಿದ ದೂರಿನಲ್ಲಿ, ನಾನು ಮತ್ತು ನನ್ನ ಅಕ್ಕನನ್ನು ನಾಲ್ವರು ಆರೋಪಿಗಳು ಅಪಹರಿಸಿ ಅವರ ಮನೆಗೆ ಕರೆದೊಯ್ದು ಅಕ್ಕನ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿದ್ದು, ತನ್ನ ಮೇಲೆ ಲೈಂಗಿಕ ದೌರ್ಜನ್ಯ ಮಾಡಿದ್ದಾರೆ ಎಂದು ಆರೋಪಿಸಿದ್ದಾಳೆ. ಇದನ್ನೂ ಓದಿ: ಪ್ರೀತಿ ವಿಚಾರಕ್ಕೆ ಕಿರಿಕ್ – ಯುವಕನ ಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ ಕಿಡಿಗೇಡಿಗಳು

    ಘಟನೆಯ ಬಳಿಕ ವಿದ್ಯಾರ್ಥಿನಿ ಮತ್ತು ಆಕೆಯ ತಂಗಿ ಮನೆಗೆ ಮರಳಿದ್ದು, ಅಲ್ಲಿ ವಿದ್ಯಾರ್ಥಿನಿ ಆತ್ಮಹತ್ಯೆಗೆ ಯತ್ನಿಸಿದ್ದಾಳೆ. ಬಳಿಕ ಆಕೆಯನ್ನು ನೆರೆಯ ಉತ್ತರ ಪ್ರದೇಶದ (Uttar Pradesh) ಝಾನ್ಸಿಯ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ಕೊಡಿಸಲಾಗುತ್ತಿದೆ ಎಂದು ವರದಿಗಳು ತಿಳಿಸಿವೆ. ಇದನ್ನೂ ಓದಿ: ತವರು ಮನೆ ಸೇರಿದ್ದ ಪತ್ನಿಯನ್ನು ಚುಚ್ಚಿ ಕೊಂದ ಪತಿ

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • 7ನೇ ಕ್ಲಾಸ್ ವಿದ್ಯಾರ್ಥಿನಿಯ ಮೇಲೆ ಗ್ಯಾಂಗ್ ರೇಪ್ – ನಾಲ್ವರು ಅಪ್ರಾಪ್ತರು ಅರೆಸ್ಟ್

    ಚಂಡೀಗಢ: 11 ವರ್ಷದ ಬಾಲಕಿಯ ಮೇಲೆ ನಾಲ್ವರು ಅಪ್ರಾಪ್ತ ಬಾಲಕರು ಸಾಮೂಹಿಕ ಅತ್ಯಾಚಾರವೆಸಗಿದ (Gang Rape) ಘಟನೆ ಚಂಡೀಗಢದಲ್ಲಿ (Chandigarh) ನಡೆದಿದೆ.

    ಅತ್ಯಾಚಾರಕ್ಕೊಳಗಾದ ಸಂತ್ರಸ್ತೆ 7ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದಳು. ಅತ್ಯಾಚಾರಗೈದ ನಾಲ್ವರು ಅಪ್ರಾಪ್ತ ಆರೋಪಿಗಳಲ್ಲಿ ಓರ್ವ ಆಕೆಯ ಸಹಪಾಠಿಯಾಗಿದ್ದು, ಉಳಿದ ಮೂವರು ಸರ್ಕಾರಿ ಶಾಲೆಯ 9ನೇ ತರಗತಿ ವಿದ್ಯಾರ್ಥಿಗಳಾಗಿದ್ದಾರೆ. ಅತ್ಯಾಚಾರಗೈದ ಅಪ್ರಾಪ್ತ ಆರೋಪಿಗಳು ಕಳೆದ 6 ತಿಂಗಳಿನಿಂದ ಸಂತ್ರಸ್ತೆಗೆ ಬೆದರಿಕೆ (Black Mail) ಹಾಕುತ್ತಿದ್ದರು ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಇದನ್ನೂ ಓದಿ: ಕಮರಿಗೆ ಉರುಳಿದ ಕ್ರೂಸರ್- 7 ಮಂದಿ ದುರ್ಮರಣ, ಓರ್ವನಿಗೆ ಗಾಯ

    ಈ ಘಟನೆ 15 ದಿನಗಳ ಹಿಂದೆ ನಡೆದಿದ್ದು, ಆಕೆಯ ಮೇಲೆ ಪದೇ ಪದೇ ಅತ್ಯಾಚಾರ ನಡೆಸಲಾಗಿದೆಯೇ ಎಂದು ತಿಳಿದು ಬಂದಿಲ್ಲ. ನಾಲ್ವರು ಅಪ್ರಾಪ್ತರು ತನ್ನ ಮಗಳ ಮೇಲೆ ಶಾಲೆಯ ಆವರಣದ ಪೊದೆಯ ಹಿಂದೆ ಸಾಮೂಹಿಕ ಅತ್ಯಾಚಾರ ನಡೆಸಿದ್ದಾರೆ ಎಂದು ಸಂತ್ರಸ್ತೆಯ ತಾಯಿ ಹೇಳಿದ್ದಾರೆ. ಅಲ್ಲದೇ ಅಪ್ರಾಪ್ತರು ಬಾಲಕಿಗೆ ಬೆದರಿಕೆ ಹಾಕುತ್ತಿದ್ದಾರೆ ಎಂದು ಶಾಲಾ ಆಡಳಿತ ಮಂಡಳಿಗೆ ನೀಡಿರುವ ದೂರಿನಲ್ಲಿ ತಿಳಿಸಲಾಗಿದೆ. ಇದನ್ನೂ ಓದಿ: ಪರಾರಿಯಾಗಲು ಯತ್ನಿಸಿದ ವರನನ್ನು 20 ಕಿ.ಮೀ ಚೇಸ್ ಮಾಡಿ ಮಂಟಪಕ್ಕೆ ಕರೆತಂದ ಗಟ್ಟಿಗಿತ್ತಿ ವಧು!

    ಅತ್ಯಾಚಾರ ನಡೆದ ಬಳಿಕ ಸಂತ್ರಸ್ತೆ ತೀವ್ರ ಆಘಾತಕ್ಕೊಳಗಾಗಿದ್ದಳು. 15 ದಿನಗಳ ಬಳಿಕ ಆಕೆ ತನ್ನ ತಾಯಿಯ ಬಳಿ ಈ ಘಟನೆಯ ಬಗ್ಗೆ ಹೇಳಿಕೊಂಡಳು. ವಿಷಯ ತಿಳಿದ ತಕ್ಷಣ ಆಕೆಯ ತಾಯಿ ತರಗತಿ ಶಿಕ್ಷಕರು ಹಾಗೂ ಪ್ರಾಂಶುಪಾಲರನ್ನು ಭೇಟಿಯಾಗಿ ಘಟನೆಯ ಬಗ್ಗೆ ವಿವರಿಸಿದರು. ಈ ವೇಳೆ ಸಂತ್ರಸ್ತೆಯ ತರಗತಿ ಶಿಕ್ಷಕಿ ಮಗುವಿನ ಸಹಾಯವಾಣಿಗೆ (Child Helpline) ಕರೆ ಮಾಡಿ ವಿಷಯವನ್ನು ತಿಳಿಸಿದ್ದಾರೆ. ಇದನ್ನೂ ಓದಿ: ನಟೋರಿಯಸ್ ರೌಡಿಶೀಟರ್ ಅಲ್ಯೂಮಿನಿಯಂ ಬಾಬು ಹತ್ಯೆ

    ಈ ಕುರಿತು ಲೈಂಗಿಕ ಅಪರಾಧಗಳಿಂದ ಮಕ್ಕಳ ಸಂರಕ್ಷಣಾ ಕಾಯ್ದೆ (POCSO) ಮತ್ತು ಇತರ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಅತ್ಯಚಾರವೆಸಗಿದ ನಾಲ್ವರು ಅಪ್ರಾಪ್ತ ಆರೋಪಿಗಳನ್ನು ಬಂಧಿಸಿದ್ದು, ಬಾಲಾಪರಾಧಿಗೃಹಕ್ಕೆ ಕಳುಹಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಇದನ್ನೂ ಓದಿ: ಪಾಕಿಸ್ತಾನದಿಂದ ಭಾರತಕ್ಕೆ ಡ್ರಗ್ಸ್ ಸಾಗಾಟ – ಎರಡು ಡ್ರೋನ್ ಹೊಡೆದುರುಳಿಸಿದ ಬಿಎಸ್‌ಎಫ್

  • ಬೆಂಗಳೂರಿನ ಪಾರ್ಕ್‌ನಲ್ಲಿ ಕೂತಿದ್ದ ಯುವತಿಯನ್ನು ಹೊತ್ತೊಯ್ದು ಕಾರಲ್ಲಿ 8 ಗಂಟೆ ಗ್ಯಾಂಗ್‌ರೇಪ್!

    ಬೆಂಗಳೂರಿನ ಪಾರ್ಕ್‌ನಲ್ಲಿ ಕೂತಿದ್ದ ಯುವತಿಯನ್ನು ಹೊತ್ತೊಯ್ದು ಕಾರಲ್ಲಿ 8 ಗಂಟೆ ಗ್ಯಾಂಗ್‌ರೇಪ್!

    ಬೆಂಗಳೂರು: ರಾಜ್ಯ ರಾಜಧಾನಿ ಬೆಂಗಳೂರು (Bengaluru) ಹುಡುಗಿಯರಿಗೆ ಸೇಫ್ ಅಲ್ಲ ಎನ್ನುವುದು ಪದೇ ಪದೇ ಸಾಬೀತಾಗುತ್ತಿದೆ. ಸಿಲಿಕಾನ್ ಸಿಟಿಯ ಹೃದಯ ಭಾಗದಲ್ಲಿ ಜನರ ಓಡಾಟದ ನಡುವೆಯೇ ಯುವತಿಯನ್ನು (Young Woman) ಹೊತ್ತೊಯ್ದು ದುರಳರ ಗ್ಯಾಂಗ್ ರಾತ್ರಿ ಕಾರಿನಲ್ಲಿ ಅತ್ಯಾಚಾರ (Gang Rape) ಎಸಗಿ ಮುಂಜಾನೆ ರಸ್ತೆ ನಡುವೆ ಬಿಟ್ಟು ಹೋಗಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ.

    ವರದಿಗಳ ಪ್ರಕಾರ ಮಾರ್ಚ್ 25 ರಂದು ಯುವತಿ ತನ್ನ ಸ್ನೇಹಿತನ ಜೊತೆ ನ್ಯಾಷಲ್ ಗೇಮ್ಸ್ ವಿಲೇಜ್ (NGV) ಕಾಂಪ್ಲೆಕ್ಸ್ ಪಾರ್ಕ್‌ನಲ್ಲಿ ಕೂತು ಮಾತನಾಡುತ್ತಿದ್ದಳು. ಆಗ ಕಾಮುಕರ ಗ್ಯಾಂಗ್ ಪಾರ್ಕ್ ಬಳಿ ಪ್ರತ್ಯಕ್ಷವಾಗಿ ಕಿರಿಕ್ ಮಾಡಿದ್ದಾರೆ. ಬಳಿಕ ಆರೋಪಿಗಳು ಯುವತಿಯನ್ನು ಹೊತ್ತೊಯ್ದು ಮಾರುತಿ 800 ಕಾರಿನಲ್ಲಿ ಸುಮಾರು 8 ಗಂಟೆಗಳ ಕಾಲ ಸುತ್ತಾಡಿಸಿ, ನಿರಂತರವಾಗಿ ಅತ್ಯಾಚಾರ ಮಾಡಿದ್ದಾರೆ. ಕಾಮಾಂದರ ಕ್ರೌರ್ಯಕ್ಕೆ ಕಾರಿನ ಸೀಟ್ ಕೂಡ ಚಿಂದಿ ಚಿಂದಿಯಾಗಿದೆ.

    ಕೋರಮಂಗಲದ ಎನ್‌ಜಿವಿ ಕಾಂಪ್ಲೆಕ್ಸ್ ಪಾರ್ಕ್‌ನಿಂದ ಹೊರಟ ಕಾಮುಕರು ದೋಮ್ಮಲೂರು, ಇಂದಿರಾನಗರ, ಅನೇಕಲ್, ನೈಸ್ ರೋಡ್ ಹೀಗೆ 60 ಕಿ.ಮೀ ಸುತ್ತಾಡಿ, ದಾರಿ ಉದ್ದಕ್ಕೂ ಸಂತ್ರಸ್ತೆಯ ಮೇಲೆ ಒಬ್ಬರಾದ ಮೇಲೆ ಒಬ್ಬರು ಅತ್ಯಾಚಾರ ಮಾಡಿದ್ದಾರೆ. ಸತತ 8 ಗಂಟೆಗಳ ಕಾಲ ಕಾಮುಕರ ಅಟ್ಟಹಾಸಕ್ಕೆ ತುತ್ತಾಗಿರುವ ಸಂತ್ರಸ್ತೆ ಇದೀಗ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಬೆಡ್ ರೆಸ್ಟ್‌ನಲ್ಲಿದ್ದಾಳೆ ಎನ್ನಲಾಗಿದೆ. ಇದನ್ನೂ ಓದಿ: ಮಂಗಳೂರಿನಲ್ಲಿ ಒಂದೇ ಕುಟುಂಬದ ನಾಲ್ವರ ಆತ್ಮಹತ್ಯೆ

    ಘಟನೆಯಾಗಿ 2 ದಿನದ ಬಳಿಕ ಯುವತಿ ಸುಧಾರಿಸಿಕೊಂಡು ಕೋರಮಂಗಲ ಠಾಣೆಯಲ್ಲಿ ದೂರು ದಾಖಲಿಸಿದ್ದಾಳೆ. ಸಂತ್ರಸ್ತ ಯುವತಿ ಕೊಟ್ಟ ದೂರಿನ ಆಧಾರದ ಮೇಲೆ ಅತ್ಯಾಚಾರ ಪ್ರಕರಣ ದಾಖಲಿಸಿಕೊಂಡಿರುವ ಕೋರಮಂಗಲ ಪೊಲೀಸರು ಆರೋಪಿಗಳಿಗೆ ಬಲೆ ಬೀಸಿದ್ದಾರೆ.

    2ನೇ ದಿನದಲ್ಲಿ ಪೊಲೀಸರು ನಾಲ್ವರನ್ನು ಬಂಧಿಸಿದ್ದಾರೆ. ಆರೋಪಿಗಳಾದ ಸತೀಶ್, ವಿಜಯ್, ಶ್ರೀಧರ್, ಕಿರಣ್ ಎಂಬವರನ್ನು ಬಂಧಿಸಲಾಗಿದ್ದು ತನಿಖೆ ಮುಂದುವರಿಸಿದ್ದಾರೆ. ಪ್ರಾಥಮಿಕ ತನಿಖೆಯ ವೇಳೆ ಎಲ್ಲಾ ಆರೋಪಿಗಳು ಒಂದೇ ಏರಿಯಾದವರಾಗಿದ್ದು ಪರಿಚಯಸ್ಥರಾಗಿದ್ದಾರೆ ಏನ್ನಲಾಗಿದೆ. ಸದ್ಯ ಬಂಧಿತ ಆರೋಪಿಗಳು ಕೋಮರಮಂಗಲ ಪೊಲೀಸರ ಕಸ್ಟಡಿಯಲ್ಲಿದ್ದು ಹೆಚ್ಚಿನ ವಿಚಾರಣೆಗೆ ಒಳಪಡಿಸಲಾಗಿದೆ. ಇದನ್ನೂ ಓದಿ: ಪತ್ನಿ ನೇಣುಬಿಗಿದುಕೊಂಡ ಬೆನ್ನಲ್ಲೇ ಪತಿಯೂ ಸೂಸೈಡ್

  • ಐದನೇ ತರಗತಿ ಬಾಲಕಿ ಮೇಲೆ ಸಾಮೂಹಿಕ ಅತ್ಯಾಚಾರ – ಓರ್ವ ಬಂಧನ

    ಐದನೇ ತರಗತಿ ಬಾಲಕಿ ಮೇಲೆ ಸಾಮೂಹಿಕ ಅತ್ಯಾಚಾರ – ಓರ್ವ ಬಂಧನ

    ನವದೆಹಲಿ: ಮುನ್ಸಿಪಲ್ ಕಾರ್ಪೊರೇಷನ್ (Municipal Corporation of Delhi) ನಡೆಸುತ್ತಿದ್ದ ಶಾಲೆಯ (School) ಐದನೇ ತರಗತಿ ವಿದ್ಯಾರ್ಥಿನಿಯ ಮೇಲೆ ಶಾಲಾ ಸಿಬ್ಬಂದಿಯಿಂದ ಸಾಮೂಹಿಕ ಅತ್ಯಾಚಾರ (Gang-rape) ನಡೆದ ಘಟನೆ ದೆಹಲಿಯಲ್ಲಿ ನಡೆದಿದೆ.

    ಆರೋಪಿ ಶಾಲಾ ಸಹಾಯಕ ಅಜಯ್‍ನನ್ನು ಪೊಲೀಸರು ಬಂಧಿಸಿದ್ದಾರೆ. ಹಾಗೂ ಆತನ ಮೂವರು ಸಹಚರರ ಬಂಧನಕ್ಕೆ ಬಲೆ ಬೀಸಿದ್ದಾರೆ. ಘಟನೆ ಮಾ.14 ರಂದು ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಘಟನೆಯ ನಂತರ ಬಾಲಕಿ ಶಾಲೆಗೆ ಹೋಗುವುದನ್ನು ನಿಲ್ಲಿಸಿದ್ದಳು. ಪರೀಕ್ಷೆಗೆ (exams) ಸಹ ಹಾಜರಾಗಿರಲಿಲ್ಲ. ಇದನ್ನೂ ಓದಿ: ಇಂದಿನಿಂದ ರಂಜಾನ್ ಉಪವಾಸ ಆಚರಣೆ – ಪ್ರಧಾನಿ ಮೋದಿ ವಿಶ್

    ಶಿಕ್ಷಕರು ಆಕೆಯ ಸಹೋದರನನ್ನು ಸಂಪರ್ಕಿಸಿ ಅಂತಿಮ ಪರೀಕ್ಷೆಗೆ ಹಾಜರಾಗದ ಬಗ್ಗೆ ವಿಚಾರಿಸಿದಾಗ ಘಟನೆ ಬೆಳಕಿಗೆ ಬಂದಿದೆ. ಘಟನೆಯ ಬಗ್ಗೆ ಆಕೆಯ ಸಹೋದರ ಶಿಕ್ಷಕರಿಗೆ ಮಾಹಿತಿ ನೀಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

     

    ತಕ್ಷಣದ ಕ್ರಮ ಕೈಗೊಳ್ಳದಿರುವ ಕಾರಣ ಶಾಲೆಯ ಮುಖ್ಯೋಪಾಧ್ಯಾಯರು ಮತ್ತು ತರಗತಿ ಶಿಕ್ಷಕರಿಗೆ ಶೋಕಾಸ್ ನೋಟಿಸ್ (Notice) ಜಾರಿ ಮಾಡಲಾಗಿದೆ.

    ಉತ್ತರ ಪ್ರದೇಶದ (Uttar Pradesh) ಜೌನ್‍ಪುರ  (Jaunpur) ಮೂಲದ ಆರೋಪಿ ಕಳೆದ ಹತ್ತು ವರ್ಷಗಳಿಂದ ಮುನ್ಸಿಪಲ್ ಕಾರ್ಪೊರೇಷನ್ ಶಾಲೆಯಲ್ಲಿ ಸಹಾಯಕನಾಗಿ ಕಾರ್ಯ ನಿರ್ವಹಿಸುತ್ತಿದ್ದ ಎಂದು ಪೊಲೀಸರು (Police) ತಿಳಿಸಿದ್ದಾರೆ.

    ಆರೋಪಿಗಳು ಬಾಲಕಿಯನ್ನು ಶಾಲೆಯಿಂದ ಅಜ್ಞಾತ ಸ್ಥಳಕ್ಕೆ ಕರೆದೊಯ್ದಿದ್ದಾರೆ. ಮಾದಕ ವಸ್ತು ನೀಡಿ ಅತ್ಯಾಚಾರ ಎಸಗಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ. ಇದನ್ನೂ ಓದಿ: ಭದ್ರತಾ ಕಾರಣಕ್ಕೆ TikTok ಬ್ಯಾನ್ ಮಾಡಿದ ಬ್ರಿಟಿಷ್ ಸಂಸತ್ತು

  • ಹತ್ರಾಸ್ ರೇಪ್ ಕೇಸ್ – ಓರ್ವ ದೋಷಿ, ಮೂವರು ಖುಲಾಸೆ

    ಹತ್ರಾಸ್ ರೇಪ್ ಕೇಸ್ – ಓರ್ವ ದೋಷಿ, ಮೂವರು ಖುಲಾಸೆ

    ಲಕ್ನೋ: ಹತ್ರಾಸ್ (Hathras) ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಉತ್ತರ ಪ್ರದೇಶದ (Uttar Pradesh) ವಿಶೇಷ ನ್ಯಾಯಾಲಯವು ಮೂವರನ್ನು ಖುಲಾಸೆಗೊಳಿಸಿದ್ದು, ಓರ್ವನನ್ನು ಅಪರಾಧಿ ಎಂದು ತೀರ್ಪು ನೀಡಿದೆ.

    ಆರೋಪಿಗಳಾದ ರಾಮು, ಲವಕುಶ ಮತ್ತು ರವಿ ಅವರನ್ನು ಖುಲಾಸೆಗೊಳಿಸಲಾಗಿದ್ದು, ಆರೋಪಿ ಸಂದೀಪ್ ಅವರನ್ನು ಕೊಲೆಗೆ ಸಮಾನವಲ್ಲದ ಅಪರಾಧಿ ನರಹತ್ಯೆ ಮತ್ತು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ (ದೌರ್ಜನ್ಯ ತಡೆ) ಕಾಯ್ದೆಯಡಿ ಅಪರಾಧಕ್ಕಾಗಿ ಶಿಕ್ಷೆಗೆ ಗುರಿಪಡಿಸಲಾಗಿದೆ. ಇದನ್ನೂ ಓದಿ: ಅತ್ತಿಗೆಯೊಂದಿಗೆ ಸಂಬಂಧ ಹೊಂದಿಲ್ಲ – ಸಾಬೀತುಪಡಿಸಲು ಅಗ್ನಿಪರೀಕ್ಷೆ ಮಾಡಿಕೊಂಡ ಭೂಪ

    ಸಂತ್ರಸ್ತೆಯ ಮೇಲೆ ಸೆಪ್ಟೆಂಬರ್ 14, 2020 ರಂದು ಹತ್ರಾಸ್‍ನಲ್ಲಿ 19 ವರ್ಷದ ದಲಿತ ಬಾಲಕಿಯ ಅತ್ಯಾಚಾರ ಮತ್ತು ಕೊಲೆ ಮಾಡಲಾಗಿದೆ ಎಂಬ ಆರೋಪ ಕೇಳಿ ಬಂದಿತ್ತು. ಆರೋಪಿಗಳು ಅವಳನ್ನು ಕೊಲ್ಲಲು ಪ್ರಯತ್ನಿಸಿದ್ದರು. ಸೆಪ್ಟೆಂಬರ್ 29 ರಂದು ದೆಹಲಿಯ ಸಫ್ದರ್‍ಜಂಗ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಸಂತ್ರಸ್ತೆ ಸಾವನ್ನಪ್ಪಿದ್ದಳು. ಆಕೆಯ ಶವವನ್ನು ಯುಪಿ ಪೊಲೀಸರು ಮತ್ತು ಜಿಲ್ಲಾಡಳಿತವು ಕುಟುಂಬದ ಒಪ್ಪಿಗೆ ಪಡೆಯದೇ ಅವರ ಅನುಪಸ್ಥಿತಿಯಲ್ಲಿ ಸುಟ್ಟು ಹಾಕಿತ್ತು.

    CRIME 2

    ಬಲವಂತದ ಶವಸಂಸ್ಕಾರ ಮತ್ತು ಸಾಮೂಹಿಕ ಅತ್ಯಾಚಾರಕ್ಕೆ (Gang rape) ಸಂಬಂಧಿಸಿದಂತೆ, ಅಲಹಾಬಾದ್ ಹೈಕೋರ್ಟ್ 2020ರ ಅಕ್ಟೋಬರ್ 1 ರಂದು ಸ್ವಯಂಪ್ರೇರಿತವಾಗಿ ವಿಚಾರಣೆ ನಡೆಸಿತ್ತು. 2020ರ ಸೆಪ್ಟೆಂಬರ್ 29 ರಂದು ಸಂತ್ರಸ್ತೆಯ ಮರಣದ ನಂತರ ಆಕೆಯ ಅಂತ್ಯಕ್ರಿಯೆಗೆ ಕಾರಣವಾದ ಘಟನೆಗಳು ನಮ್ಮ ಆತ್ಮಸಾಕ್ಷಿಯನ್ನು ಆಘಾತಗೊಳಿಸಿವೆ, ಆದ್ದರಿಂದ ಸ್ವಯಂಪ್ರೇರಿತವಾಗಿ ವಿಚಾರಣೆಗೆ ತೆಗೆದುಕೊಳ್ಳುತ್ತಿದ್ದೇವೆ ಎಂದು ಹೈಕೋರ್ಟ್ ಹೇಳಿತ್ತು.

    ಅಕ್ಟೋಬರ್ 10 ರಂದು ಅಲಹಾಬಾದ್ ಹೈಕೋರ್ಟ್ (Allahabad High Court) ಈ ಪ್ರಕರಣವನ್ನು ಸಿಬಿಐಗೆ (Central Bureau of Investigation) ವಹಿಸಿತ್ತು. ತನಿಖೆ ನಡೆಸಿದ್ದ ಸಿಬಿಐ ಎಲ್ಲಾ ನಾಲ್ವರು ಆರೋಪಿಗಳ ವಿರುದ್ಧ ಡಿಸೆಂಬರ್ 2020ರಲ್ಲಿ ಚಾರ್ಜ್‍ಶೀಟ್ ಸಲ್ಲಿಸಿತ್ತು. ಇದನ್ನೂ ಓದಿ: ಸುಟ್ಟ ಸ್ಥಿತಿಯಲ್ಲಿ ಮಹಿಳೆಯ ಮೃತದೇಹ ಪತ್ತೆ

  • ಕೈ ಕಾಲುಗಳನ್ನು ಕಟ್ಟಿಹಾಕಿ 14ರ ಬಾಲಕಿಯ ಮೇಲೆ ಗ್ಯಾಂಗ್ ರೇಪ್

    ಕೈ ಕಾಲುಗಳನ್ನು ಕಟ್ಟಿಹಾಕಿ 14ರ ಬಾಲಕಿಯ ಮೇಲೆ ಗ್ಯಾಂಗ್ ರೇಪ್

    ದಿಸ್ಪೂರ್: ಅಪ್ರಾಪ್ತ ಬಾಲಕಿಯ (Minor Girl) ಮೇಲೆ ಸಾಮೂಹಿಕ ಅತ್ಯಾಚಾರವೆಸಗಿದ ಘಟನೆ ಅಸ್ಸಾಂನಲ್ಲಿ (Assam) ನಡೆದಿದೆ.

    ಭಾಯಿಜಾನ್ ಅಲಿ ಮತ್ತು ಸಫರ್ ಅಲಿ ಬಂಧಿತ ಆರೋಪಿಗಳು. ಅಸ್ಸಾಂನ ದಿಬ್ರುಗಢದಲ್ಲಿ 14 ವರ್ಷದ ಬಾಲಕಿಯ ಮೇಲೆ ಸಾಮೂಹಿಕ ಅತ್ಯಾಚಾರ (Gang Rape) ಎಸಗಿದ್ದಾರೆ. ಅಷ್ಟೇ ಅಲ್ಲದೇ ಆಕೆಯ ಕೈ ಹಾಗೂ ಕಾಲುಗಳನ್ನು ಹಗ್ಗದಿಂದ ಕಟ್ಟಲಾಗಿತ್ತು ಎಂದು ಶಂಕಿಸಲಾಗಿದೆ.

    ಅಸ್ಸಾಂನ ದಿಬ್ರುಗಢದ ಅಥಾಬರಿ ಚಹಾ ತೋಟದ ಬಳಿ ಬಾಲಕಿಯು ಪ್ರಜ್ಞಾಹೀನ ಸ್ಥಿತಿಯಲ್ಲಿ ಪತ್ತೆಯಾಗಿದ್ದಾಳೆ. ಫೆ. 3ರಿಂದ ಆಕೆ ನಾಪತ್ತೆ ಆಗಿದ್ದಳು. ಇದನ್ನೂ ಓದಿ: ಬಾಂಗ್ಲಾದಲ್ಲಿ ಹಿಂದೂ ದೇವಾಲಯದ 12 ವಿಗ್ರಹಗಳನ್ನು ಧ್ವಂಸಗೊಳಿಸಿದ ದುಷ್ಕರ್ಮಿಗಳು

    ಘಟನೆಗೆ ಸಂಬಂಧಿಸಿ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ. ಆರೋಪಿಗಳ ವಿರುದ್ಧ 2012ರ ಪೋಕ್ಸೋ ಕಾಯ್ದೆಯ ಸೆಕ್ಷನ್ 376ರ ಅಡಿಯಲ್ಲಿ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಎಸ್ಪಿ ತಿಳಿಸಿದ್ದಾರೆ. ಇದನ್ನೂ ಓದಿ: ಭವಾನಿ ರೇವಣ್ಣ ಸ್ಪರ್ಧೆ ಮಾಡೋದನ್ನು ಪಕ್ಷದ ವರಿಷ್ಠರು ತೀರ್ಮಾನ ಮಾಡ್ತಾರೆ: ನಿಖಿಲ್

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • 3 ವರ್ಷದ ಮಗುವಿನ ಮೇಲೆ ಗ್ಯಾಂಗ್ ರೇಪ್ – ಇಬ್ಬರ ಬಂಧನ

    3 ವರ್ಷದ ಮಗುವಿನ ಮೇಲೆ ಗ್ಯಾಂಗ್ ರೇಪ್ – ಇಬ್ಬರ ಬಂಧನ

    ನವದೆಹಲಿ: 3 ವರ್ಷದ ಮಗುವಿನ (3-Year-Old Girl) ಮೇಲೆ ಕೀಚಕರು ಗ್ಯಾಂಗ್ ರೇಪ್ (Gang-Rape) ಮಾಡಿರುವ ಘಟನೆ ರಾಷ್ಟ್ರ ರಾಜಧಾನಿ ನವದೆಹಲಿಯ (Delhi) ಫತೇಪುರ್ ಬೆರಿಯಲ್ಲಿ (Fatehpur Beri) ನಡೆದಿದೆ.

    ಮನೆಯಲ್ಲಿ ಮಗು ಕಾಣದಿದ್ದಾಗ ಪೋಷಕರು ಅಕ್ಕಪಕ್ಕದ ಮನೆಯವರಲ್ಲಿ ವಿಚಾರಿಸಿದ್ದಾರೆ. ಈ ವೇಳೆ ಮಗು ಇಬ್ಬರು ಯುವಕರೊಂದಿಗೆ ಪಕ್ಕದ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿರುವುದನ್ನು ನೋಡಿರುವ ಬಗ್ಗೆ ಮಾಹಿತಿ ನೀಡಿದ್ದಾರೆ. ಇದನ್ನೂ ಓದಿ: ಹದಿಹರಿಯದ ಪ್ರೇಮಕ್ಕೆ ಅಪ್ರಾಪ್ತ ಬಾಲಕಿ ಬಲಿ- ವಿಷ ಕುಡಿದು ಆತ್ಮಹತ್ಯೆ

    ಕೂಡಲೇ ಪೋಷಕರು ಸ್ಥಳಕ್ಕೆ ತೆರಳಿ ನೋಡಿದಾಗ ಮಗು ಅಳುತ್ತಾ ರಕ್ತದ ಮಡುವಿನಲ್ಲಿ ಬಿದ್ದಿತ್ತು. ಕೂಡಲೇ ಮಗುವನ್ನು ಏಮ್ಸ್ ಆಸ್ಪತ್ರೆಗೆ ದಾಖಲಿಸಿ ಠಾಣೆಗೆ ದೂರು ನೀಡಿದ್ದಾರೆ. ಪೊಲೀಸರು ವಿಚಾರಣೆ ನಡೆಸಿ ಶಕ್ತಿಮಾನ್ ಸಿಂಗ್ (22) ಮತ್ತು ರಾಮ್ನಿವಾಸ್ ಪಣಿಕಾ (27) ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ. ಆರೋಪಿಗಳಿಬ್ಬರಿಗೂ ಮದುವೆಯಾಗಿದ್ದು ಸ್ಥಳೀಯ ಕಾರ್ಖಾನೆಯಲ್ಲಿ ಕೆಲಸ ನಿರ್ವಹಿಸುತ್ತಿದ್ದರು. ಇದನ್ನೂ ಓದಿ: ಕೆಲಸ ಕೊಡಿಸುವ ಆಸೆ ತೋರಿಸಿ ಸೆಕ್ಸ್- ಟೆಕ್ಕಿ ಅರೆಸ್ಟ್

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • 16ರ ಬಾಲಕಿ ಮೇಲೆ 8 ಕಾಮುಕರಿಂದ ಸತತ 12 ಗಂಟೆ ಗ್ಯಾಂಗ್ ರೇಪ್

    16ರ ಬಾಲಕಿ ಮೇಲೆ 8 ಕಾಮುಕರಿಂದ ಸತತ 12 ಗಂಟೆ ಗ್ಯಾಂಗ್ ರೇಪ್

    ಮುಂಬೈ: ಬಾಲಕಿಯ ಮೇಲೆ 8 ಕಾಮುಕರು ಸೇರಿ ಸತತ 12 ಗಂಟೆಗಳ ಕಾಲ ಸಾಮೂಹಿಕ ಅತ್ಯಾಚಾರ (Gang Rape) ನಡೆಸಿದ ಘಟನೆ ಮಹಾರಾಷ್ಟ್ರದ (Maharashtra) ಪಾಲ್ಘರ್‌ನಲ್ಲಿ ನಡೆದಿದೆ.

    16 ವರ್ಷದ ಬಾಲಕಿಗೆ (Girl) ವ್ಯಕ್ತಿಯೊಬ್ಬ ಆಮಿಷವೊಡ್ಡಿ ಖಾಲಿ ಬಂಗಲೆಗೆ ಕರೆದೊಯ್ದಿದ್ದಾನೆ. ಅಲ್ಲಿ ಆಕೆಯ ಮೇಲೆ ಮಾರನೇ ದಿನದ ಬೆಳಗ್ಗಿನವರೆಗೂ ಅತ್ಯಾಚಾರ ಎಸಗಿದ್ದಾರೆ. ಆಕೆಯನ್ನು ಸಮುದ್ರ ತೀರಕ್ಕೆ ಕರೆದೊಯ್ದು ಅಲ್ಲೂ ಅತ್ಯಾಚಾರವೆಸಗಿದ್ದಾರೆ. ಅದಾದ ಬಳಿಕ ಪೊದೆಗಳಲ್ಲಿ ಆಕೆಯ ಮೇಲೆ ದೌರ್ಜನ್ಯವೆಸಗಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.

    ಘಟನೆಗೆ ಸಂಬಂಧಿಸಿ ಬಾಲಕಿಯು ಪೊಲೀಸರಿಗೆ ದೂರು ನೀಡಿದ್ದು, ದೂರಿನಲ್ಲಿ ಡಿ. 16 ರಂದು ರಾತ್ರಿ 8 ಗಂಟೆಯಿಂದ ಮರುದಿನ ಬೆಳಗ್ಗೆ 11 ಗಂಟೆಯವರೆಗೂ ಅತ್ಯಾಚಾರವೆಸಗಿರುವ ಬಗ್ಗೆ ಬಾಲಕಿ ತಿಳಿಸಿದ್ದಾಳೆ. ಇದನ್ನೂ ಓದಿ: 3 ಮದುವೆಯಾದ್ರೂ ಅಪ್ರಾಪ್ತೆ ಜೊತೆ ಎಸ್ಕೇಪ್ ಆದ ಆಟೋ ಚಾಲಕ

    ಘಟನೆಗೆ ಸಂಬಂಧಿಸಿ ಬಾಲಕಿಯ ದೂರಿನ ಮೇರೆಗೆ ಎಂಟು ಮಂದಿಯನ್ನು ಬಂಧಿಸಲಾಗಿದೆ (Arrest) ಎಂದು ಸ್ಥಳೀಯ ಪೊಲೀಸರು ತಿಳಿಸಿದ್ದಾರೆ. ಇದನ್ನೂ ಓದಿ: ದಟ್ಟ ಮಂಜಿನಿಂದ ಕಾಣದಂತಾದ ರಸ್ತೆ – ಸರಣಿ ಅಪಘಾತದಿಂದಾಗಿ 22 ವಾಹನಗಳು ಜಖಂ

    Live Tv
    [brid partner=56869869 player=32851 video=960834 autoplay=true]

  • ಸಾಮೂಹಿಕ ಅತ್ಯಾಚಾರದ ಆರೋಪ – ಅಂಡಮಾನ್ ಮಾಜಿ ಮುಖ್ಯ ಕಾರ್ಯದರ್ಶಿ ಅರೆಸ್ಟ್

    ಸಾಮೂಹಿಕ ಅತ್ಯಾಚಾರದ ಆರೋಪ – ಅಂಡಮಾನ್ ಮಾಜಿ ಮುಖ್ಯ ಕಾರ್ಯದರ್ಶಿ ಅರೆಸ್ಟ್

    ಪೋರ್ಟ್ ಬ್ಲೇರ್: ಸಾಮೂಹಿಕ ಅತ್ಯಾಚಾರದ (Gang Rape) ಆರೋಪ ಎದುರಿಸುತ್ತಿರುವ ಅಂಡಮಾನ್ ಮತ್ತು ನಿಕೋಬಾರ್ (Andaman and Nicobar) ಮಾಜಿ ಮುಖ್ಯ ಕಾರ್ಯದರ್ಶಿ ಜಿತೇಂದ್ರ ನರೇನ್ (Jitendra Narain) ಅವರನ್ನು ಬಂಧಿಸಲಾಗಿದೆ. ಅವರಿಗೆ ಪೋರ್ಟ್ ಬ್ಲೇರ್‌ನಲ್ಲಿ (Port Blair) ಸಮನ್ಸ್ ನೀಡಿದ ಬಳಿಕ ವಿಚಾರಣೆಗೆ ಹಾಜರಾಗಿದ್ದರು ಹಾಗೂ ತನಿಖೆಗೆ ಒಳಗಾಗಿದ್ದರು.

    ಜಿತೇಂದ್ರ ನರೇನ್ ಅವರು ಕಾರ್ಯದರ್ಶಿಯಾಗಿದ್ದಾಗ ಮಹಿಳೆಯೊಬ್ಬರ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ್ದಾಗಿ ಆರೋಪಿಸಲಾಗಿದೆ. ಈ ಬಗ್ಗೆ ಅಂಡಮಾನ್ ಮತ್ತು ನಿಕೋಬಾರ್ ಪೊಲೀಸರಿಂದ ವರದಿಯನ್ನು ಸ್ವೀಕರಿಸಲಾಗಿದೆ ಎಂದು ಸಚಿವಾಲಯ ತಿಳಿಸಿದೆ. ಇದನ್ನೂ ಓದಿ: ಯಡಿಯೂರಪ್ಪ ಹಿಂದೂ ಅಲ್ಲ, ವೀರಶೈವ ಲಿಂಗಾಯತರು: ಸಾಗರನಹಳ್ಳಿ ನಟರಾಜ್

    ನರೇನ್ ಹಾಗೂ ಇನ್ನೊಬ್ಬ ಅಧಿಕಾರಿ ಆರ್.ಎಲ್ ರಿಷಿ ತಮ್ಮ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಿರುವುದಾಗಿ 21 ವರ್ಷದ ಮಹಿಳೆಯೊಬ್ಬರು ಆರೋಪಿಸಿದ್ದಾರೆ. ಈ ಆರೋಪದ ಹಿನ್ನೆಲೆ ಕಳೆದ ತಿಂಗಳು ಜಿತೇಂದ್ರ ನರೇನ್ ಅವರನ್ನು ಕೇಂದ್ರ ಸರ್ಕಾರ ಅಮಾನತುಗೊಳಿಸಿತ್ತು. ಇದನ್ನೂ ಓದಿ: ನಾಳೆ ಮೋದಿಯಿಂದ ಕೆಂಪೇಗೌಡ ಪ್ರತಿಮೆ ಲೋಕಾರ್ಪಣೆ – ಇಂದು ಸ್ಥಳ ಪರಿಶೀಲಿಸಿದ ಸಿಎಂ

    Live Tv
    [brid partner=56869869 player=32851 video=960834 autoplay=true]