Tag: gang rape

  • ನನ್ನ ಮೇಲೆ ಅತ್ಯಾಚಾರ ನಡೆಸಿದ್ದಾರೆ, ನ್ಯಾಯ ಕೊಡಿಸಿ – ಪ್ರಧಾನಿ ಮೋದಿಗೆ ಬಾಗಲಕೋಟೆ ಬಾಲಕಿಯಿಂದ ಪತ್ರ

    ನನ್ನ ಮೇಲೆ ಅತ್ಯಾಚಾರ ನಡೆಸಿದ್ದಾರೆ, ನ್ಯಾಯ ಕೊಡಿಸಿ – ಪ್ರಧಾನಿ ಮೋದಿಗೆ ಬಾಗಲಕೋಟೆ ಬಾಲಕಿಯಿಂದ ಪತ್ರ

    ಬಾಗಲಕೋಟೆ: ಬಾಲಕಿಯೋರ್ವಳು ನನ್ನ ಮೇಲೆ ಅತ್ಯಾಚಾರ ನಡೆದಿದೆ. ನನಗೆ ನ್ಯಾಯ ಕೊಡಿಸಿ ಎಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ, ಕೇಂದ್ರ ಮಹಿಳಾ ಹಾಗೂ ಮಕ್ಕಳ ಕಲ್ಯಾಣ ಸಚಿವೆ ಮನೇಕಾ ಗಾಂಧಿ, ಪಬ್ಲಿಕ್ ಟಿವಿಗೂ ಸೇರಿದಂತೆ ಜಿಲ್ಲೆಯ ಹತ್ತಾರು ಇಲಾಖೆಗಳ ಅಧಿಕಾರಿಗಳಿಗೆ ಮನನೊಂದು ಪತ್ರ ಬರೆದಿದ್ದಾಳೆ.

    ಬಾಗಲಕೋಟೆ ತಾಲೂಕಿನ ಶಿರೂರು ಗ್ರಾಮದ ಸರ್ಕಾರಿ ಪ್ರೌಢ ಶಾಲೆಯ ಜವಾನ ವಿಜಯಕುಮಾರ್ ಗಾಳಪ್ಪಗೋಳ್ ಹಾಗೂ ಆತನ ಮೂವರು ಸ್ನೇಹಿತರು ಸೇರಿ ನನ್ನ ಮೇಲೆ ಸಾಮೂಹಿಕ ಅತ್ಯಾಚಾರ ವೆಸಗಿದ್ದಾರೆಂದು ಪತ್ರದಲ್ಲಿ ಬಾಲಕಿ ಉಲ್ಲೇಖಿಸಿದ್ದಾಳೆ. ನಾನು ದಲಿತಳಾಗಿ ಹುಟ್ಟಿದ್ದು ತಪ್ಪಾ, ನಮಗೆ ನ್ಯಾಯ ಕೊಡಿಸಿ ಎಂದು ಬಾಲಕಿ ಅಳಲು ತೋಡಿಕೊಂಡಿದ್ದಾಳೆ. ಆದರೆ ಬಾಲಕಿ ಪತ್ರದಲ್ಲಿ ತನ್ನ ಹೆಸರನ್ನ ಎಲ್ಲಿಯೋ ಬರೆದಿಲ್ಲ.

    ಬಾಲಕಿ ಮೇ 27ರಂದು ಮೋದಿಯವರಿಗೆ ಪತ್ರ ಬೆರೆದಿದ್ದಾಳೆ. ಆದರೆ ಪ್ರಧಾನ ಮಂತ್ರಿ ಕಾರ್ಯಲಯದಿಂದ ಇದೂವರೆಗೂ ಯಾವುದೇ ಪ್ರತಿಕ್ರಿಯೆ ಬಂದಿಲ್ಲ. ಈ ವಿಷಯ ಮಾಧ್ಯಮಗಳಲ್ಲಿ ಪ್ರಸಾರವಾಗ್ತಿದ್ದಂತೆ ಎಚ್ಚೆತ್ತ ಅಧಿಕಾರಿಗಳು ಪತ್ರ ನಮ್ಮ ಕೈ ಸೇರಿದೆ. ಈಗಾಗಲೇ ಈ ಬಗ್ಗೆ ಸ್ಥಳ ಪರೀಕ್ಷೆ ಮಾಡಲು ಶಿಕ್ಷಣ ಇಲಾಖೆಯ ಅಧಿಕಾರಿಗಳಿಗೆ ಸೂಚಿದ್ದೇವೆ. ಅಲ್ಲದೇ ಈ ಬಗ್ಗೆ ತನಿಖೆಗೆ ಪೊಲೀಸ್ ಇಲಾಖೆಗೆ ಮನವಿ ಮಾಡಿದ್ದೇವೆ ಎಂದು ಜಿಲ್ಲಾ ಪಂಚಾಯತ್ ಸಿಇಓ ವಿಕಾಸ್ ಸುರಳ್ಕರ್ ಹೇಳಿದ್ದಾರೆ.

    https://www.youtube.com/watch?v=TQ32k2cV-tw

     

  • ಪ್ರಿಯಕರ, ಸ್ನೇಹಿತರಿಂದ ಗ್ಯಾಂಗ್ ರೇಪ್ ಪ್ರಕರಣ- ಪರಾರಿಯಾಗಿದ್ದ ಇಬ್ಬರು ಕಾಮುಕರ ಬಂಧನ

    ಪ್ರಿಯಕರ, ಸ್ನೇಹಿತರಿಂದ ಗ್ಯಾಂಗ್ ರೇಪ್ ಪ್ರಕರಣ- ಪರಾರಿಯಾಗಿದ್ದ ಇಬ್ಬರು ಕಾಮುಕರ ಬಂಧನ

    ದಾವಣಗೆರೆ: ಪ್ರಿಯಕರನೊಬ್ಬ ತನ್ನ ಇಬ್ಬರು ಸ್ನೇಹಿತರ ಜೊತೆಗೂಡಿ ಅಪ್ರಾಪ್ತೆ ಮೇಲೆ ಸಾಮೂಹಿಕ ಅತ್ಯಾಚಾರವೆಸಗಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಪತ್ತೆಯಾಗಿದ್ದ ಇಬ್ಬರು ಕಾಮುಕರನ್ನು ಬಂಧಿಸುವಲ್ಲಿ ಚನ್ನಗಿರಿ ಠಾಣಾ ಪೊಲೀಸರು ಯಶ್ವಸಿಯಾಗಿದ್ದಾರೆ.

    ಜಿಲ್ಲೆಯ ಚನ್ನಗಿರಿ ತಾಲೂಕಿನ ಜೋಳದಾಳು ಗುಡ್ಡದಲ್ಲಿ ಕಳೆದ ಶುಕ್ರವಾರದಂದು ಈ ಘಟನೆ ನಡೆದಿತ್ತು. ಭದ್ರಾವತಿ ತಾಲೂಕಿನ ರಂಗಾಪುರ ಗ್ರಾಮದ ಪ್ರಿಯಕರ ರಮೇಶ್ ತನ್ನ ಸ್ನೇಹಿತರಾದ ಅರುಣ್ ಹಾಗೂ ವಿಜಯ್ ಜೊತೆಗೂಡಿ ಅಪ್ರಾಪ್ತ ಬಾಲಕಿಯ ಮೇಲೆ ಅತ್ಯಾಚಾರ ಎಸೆಗಿದ್ದರು. ಪೊಲೀಸರು ಪ್ರಕರಣ ದಾಖಲಿಸಿಕೊಂಡು ಪ್ರಿಯಕರನ್ನು ಬಂಧಿಸಿದ್ದರು. ಆದರೆ ಅರುಣ್ ಮತ್ತು ವಿಜಯ್ ಪರಾರಿಯಾಗಿದ್ದರು.

    ಏನಿದು ಪ್ರಕರಣ?: ರಂಗಾಪುರ ಗ್ರಾಮದ ರಮೇಶ್ ಮತ್ತು ಅಪ್ರಾಪ್ತೆಯ ಪ್ರೀತಿ ಎರಡು ವರ್ಷದ ಹಿಂದೆ ಬ್ರೇಕ್ ಅಪ್ ಆಗಿತ್ತು. ರಮೇಶ್ ಪುನಃ ಪ್ರೀತಿಸುತ್ತೇನೆಂದು ಹೇಳಿ ಬಾಲಕಿಯನ್ನ ಜೂ.2 ರಂದು ಜೋಳದಾಳು ಅಮ್ಮನ ಗುಡ್ಡಕ್ಕೆ ಕರೆತಂದಿದ್ದ. ರಮೇಶ್ ಜೊತೆ ವಿಜಯ್, ಅರುಣ್ ಕೂಡ ಬಂದಿದ್ದು, ಮೂವರು ಸೇರಿ ಬಾಲಕಿಯನ್ನ ಹೆದರಿಸಿ ಅತ್ಯಾಚಾರ ಮಾಡಿದ್ದರು.

    ಮೂವರು ಕಾಮುಕರಿಂದ ತಪ್ಪಿಸಿಕೊಂಡು ಹೋದ ಬಾಲಕಿ ಶಿವಮೊಗ್ಗದ ಆಸ್ಪತ್ರೆಗೆ ದಾಖಲಾಗಿದ್ದಳು. ಶಿವಮೊಗ್ಗ ಆಸ್ಪತ್ರೆಯವರು ಈ ಬಗ್ಗೆ ಅಲ್ಲಿನ ಎಸ್‍ಪಿಗೆ ಮಾಹಿತಿ ನೀಡಿದ್ದರು. ನಂತರ ಚನ್ನಗಿರಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಇದೀಗ ಮೂವರು ಕಾಮುಕರನ್ನು ಬಂಧಿಸುವಲ್ಲಿ ಯಶ್ವಸಿಯಾಗಿದ್ದಾರೆ.

     

  • ಬಿಟ್ಟು ಹೋದವನಿಂದ ಮತ್ತೆ ಪ್ರೀತಿ ನಾಟಕ- ಪ್ರಿಯಕರ ಸೇರಿ ಮೂವರಿಂದ ಅಪ್ರಾಪ್ತೆ ಮೇಲೆ ಗ್ಯಾಂಗ್‍ರೇಪ್

    ಬಿಟ್ಟು ಹೋದವನಿಂದ ಮತ್ತೆ ಪ್ರೀತಿ ನಾಟಕ- ಪ್ರಿಯಕರ ಸೇರಿ ಮೂವರಿಂದ ಅಪ್ರಾಪ್ತೆ ಮೇಲೆ ಗ್ಯಾಂಗ್‍ರೇಪ್

    ದಾವಣಗೆರೆ: ಪ್ರಿಯಕರನೊಬ್ಬ ತನ್ನ ಮೂವರು ಸ್ನೇಹಿತರ ಜೊತೆಗೂಡಿ ಅಪ್ರಾಪ್ತೆ ಮೇಲೆ ಸಾಮೂಹಿಕ ಅತ್ಯಾಚಾರವೆಸಗಿರೋ ಘಟನೆ ದಾವಣಗೆರೆಯಲ್ಲಿ ನಡೆದಿದೆ.

    ಜಿಲ್ಲೆಯ ಚನ್ನಗಿರಿ ತಾಲೂಕಿನ ಜೋಳದಾಳು ಗುಡ್ಡದಲ್ಲಿ ಶುಕ್ರವಾರದಂದು ಈ ಘಟನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಭದ್ರಾವತಿ ತಾಲೂಕಿನ ರಂಗಾಪುರ ಗ್ರಾಮದ ಪ್ರಿಯಕರ ರಮೇಶ್ ತನ್ನ ಸ್ನೇಹಿತರಾದ ಅರುಣ್ ಹಾಗೂ ವಿಜಯ್ ಜೊತೆಗೂಡಿ ಈ ಕೃತ್ಯವೆಸಗಿದ್ದಾನೆ.

    ಪ್ರೀತಿ ನಾಟಕ: ರಂಗಾಪುರ ಗ್ರಾಮದ ರಮೇಶ್ ಮತ್ತು ಅಪ್ರಾಪ್ತೆಯ ಪ್ರೀತಿ ಎರಡು ವರ್ಷದ ಹಿಂದೆ ಬ್ರೇಕ್ ಅಪ್ ಆಗಿತ್ತು. ರಮೇಶ್ ಪುನಃ ಪ್ರೀತಿಸುತ್ತೇನೆಂದು ಹೇಳಿ ಬಾಲಕಿಯನ್ನ ಜೂ.2 ರಂದು ಜೋಳದಾಳು ಅಮ್ಮನ ಗುಡ್ಡಕ್ಕೆ ಕರೆತಂದಿದ್ದ. ರಮೇಶ್ ಜೊತೆ ವಿಜಯ್, ಅರುಣ್ ಕೂಡ ಬಂದಿದ್ದು, ಮೂವರು ಸೇರಿ ಬಾಲಕಿಯನ್ನ ಹೆದರಿಸಿ ಅತ್ಯಾಚಾರ ಮಾಡಿದ್ದಾರೆ.

    ಮೂವರು ಕಾಮುಕರಿಂದ ತಪ್ಪಿಸಿಕೊಂಡು ಹೋದ ಬಾಲಕಿ ಶಿವಮೊಗ್ಗದ ಆಸ್ಪತ್ರೆಗೆ ದಾಖಲಾಗಿದ್ದಾಳೆ. ಶಿವಮೊಗ್ಗ ಆಸ್ಪತ್ರೆಯವರು ಈ ಬಗ್ಗೆ ಅಲ್ಲಿನ ಎಸ್‍ಪಿಗೆ ಮಾಹಿತಿ ನೀಡಿದ್ದಾರೆ. ನಂತರ ಚನ್ನಗಿರಿ ಪೊಲೀಸರು ಪ್ರಿಯಕರ ರಮೇಶನನ್ನು ಬಂಧಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ರಮೇಶ್ ಸ್ನೇಹಿತರಾದ ಮತ್ತಿಬ್ಬರು ಆರೋಪಿಗಳು ತಲೆ ಮರಿಸಿಕೊಂಡಿದ್ದಾರೆ.

  • ಫಿಲಂಗೆ ಕರೆದುಕೊಂಡು ಹೋಗೋ ನೆಪದಲ್ಲಿ 7ನೇ ತರಗತಿ ಬಾಲಕಿಯ ಮೇಲೆ ಗ್ಯಾಂಗ್‍ರೇಪ್

    ಫಿಲಂಗೆ ಕರೆದುಕೊಂಡು ಹೋಗೋ ನೆಪದಲ್ಲಿ 7ನೇ ತರಗತಿ ಬಾಲಕಿಯ ಮೇಲೆ ಗ್ಯಾಂಗ್‍ರೇಪ್

    – ಇಬ್ಬರು ಅಪ್ರಾಪ್ತರು ಸೇರಿ ಮೂವರ ಬಂಧನ

    ಬೆಂಗಳೂರು: ರಾಜ್ಯ ರಾಜಧಾನಿಯಲ್ಲಿ ಮತ್ತೆ ಕಾಮಮೃಗಗಳ ಅಟ್ಟಹಾಸ ಮುಂದುವರೆದಿದೆ. ಫಿಲಂಗೆ ಕರೆದುಕೊಂಡು ಹೋಗುವ ನೆಪದಲ್ಲಿ ಬಾಲಕಿಯ ಮೇಲೆ ಮೂವರು ಯುವಕರು ಸಾಮೂಹಿಕ ಅತ್ಯಾಚಾರವೆಸಗಿರೋ ಘಟನೆ ತಡವಾಗಿ ಬೆಳಕಿಗೆ ಬಂದಿದೆ.

    ಬಾಲಕಿ 7ನೇ ತರಗತಿ ವಿದ್ಯಾರ್ಥಿಯೆಂದು ತಿಳಿದುಬಂದಿದೆ. ಮೂವರಲ್ಲಿ ಒಬ್ಬಾತ ಬಾಲಕಿ ಕುಟುಂಬಕ್ಕೆ ಪರಿಚಯಸ್ಥನಾಗಿದ್ದ. ಅಲ್ಲದೆ ಮೂವರಲ್ಲಿ ಇಬ್ಬರು ಯುವಕರು ಅಪ್ರಾಪ್ತರೆಂದು ತಿಳಿದುಬಂದಿದೆ.

    ನಡೆದಿದ್ದೇನು?: ಮೇ 8ರಂದು ಬಾಲಕಿಯನ್ನ ಯಶವಂತಪುರಕ್ಕೆ ಫಿಲಂ ನೋಡಲು ಕರೆದುಕೊಂಡು ಬಂದಿದ್ದ ಆರೋಪಿ ರಾತ್ರಿ 8-30ರ ನಂತರ ಬಾಲಕಿಗೆ ಮತ್ತು ಬರುವ ಜ್ಯೂಸ್ ಕುಡಿಸಿ ಪೀಣ್ಯದ ಪಾಳು ಬಿದ್ದ ಮನೆಯಲ್ಲಿ ಬಾಲಕಿಯ ಮೇಲೆ ಅತ್ಯಾಚಾರವೆಸಗಿದ್ದ. ನಂತರ ಸ್ನೇಹಿತರಿಗೆ ಕರೆ ಮಾಡಿದ್ದು, ಅವರು ಸಹ ಬಾಲಕಿಯ ಮೇಲೆ ಅತ್ಯಾಚಾರವೆಸಗಿದ್ರು. ಘಟನೆ ನಂತರ ಆರೋಪಿಗಳು ಸ್ಥಳದಿಂದ ಕಾಲ್ಕಿತ್ತಿದ್ರು. ರಾತ್ರಿ 10-30ರ ನಂತರ ಎಚ್ಚರಗೊಂಡ ಬಾಲಕಿ ಮನೆ ಕಡೆ ಹೊರಟಾಗ ದಾರಿಯಲ್ಲಿ ಸಿಕ್ಕ ಸ್ನೇಹಿತೆ ಬಳಿ ನಡೆದ ವಿಚಾರವನ್ನೆಲ್ಲಾ ಹೇಳಿದ್ದಾಳೆ. ನಂತರ ಬಾಲಕಿ 5 ದಿನಗಳ ಕಾಲ ಸ್ನೇಹಿತೆಯ ಮನೆಯಲ್ಲೇ ಆಶ್ರಯ ಪಡೆದಿದ್ದಳು. ಅತ್ತ ಬಾಲಕಿಯ ತಾಯಿ ಮಗಳು ನಾಪತ್ತೆಯಾಗಿರೋ ಬಗ್ಗೆ ಮಿಸ್ಸಿಂಗ್ ಕಂಪ್ಲೆಂಟ್ ನೀಡಿದ್ರು.

    5 ದಿನಗಳ ನಂತರ ಮನೆಗೆ ಹೋದ ಬಾಲಕಿ ನಡೆದ ವಿಚಾರವನ್ನೆಲ್ಲಾ ತಾಯಿಗೆ ತಿಳಿಸಿದ್ದಾಳೆ. ಬಾಲಕಿಯ ತಾಯಿ ಮಗಳನ್ನು ಠಾಣೆಗೆ ಕರೆತಂದು ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡ ಪೆÇಲೀಸರು ಇಬ್ಬರು ಬಾಲಾಪರಾಧಿಗಳು ಸೇರಿದಂತೆ ಮೂವರನ್ನ ಬಂಧಿಸಿದ್ದಾರೆ.

  • ಇಬ್ಬರು ಅಪ್ರಾಪ್ತ ಬಾಲಕಿಯರ ಮೇಲೆ 8 ಜನರಿಂದ ಗ್ಯಾಂಗ್ ರೇಪ್

    ಇಬ್ಬರು ಅಪ್ರಾಪ್ತ ಬಾಲಕಿಯರ ಮೇಲೆ 8 ಜನರಿಂದ ಗ್ಯಾಂಗ್ ರೇಪ್

    – ಪ್ರಕರಣ ಮುಚ್ಚಿ ಹಾಕಲು ಸಂತ್ರಸ್ತರಿಗೆ 50 ಸಾವಿರ ರೂ. ಆಫರ್

    ಹೈದರಾಬಾದ್: ಆಧ್ರಪ್ರದೇಶದ ವಿಶಾಖಪಟ್ಟಣಂ ಜಿಲ್ಲೆಯ ತಾಂಜಗಿ ಗ್ರಾಮದಲ್ಲಿ ಸ್ಥಳೀಯ ಜಾತ್ರೆಗೆ ಹೋಗಲು ನಿರ್ಧರಿಸಿದ್ದ ಬುಡಕಟ್ಟು ಜನಾಂಗದ ಇಬ್ಬರು ಅಪ್ರಾಪ್ತ ಬಾಲಕಿಯರ ಮೇಲೆ ಗ್ರಾಮದ 8 ಜನರ ತಂಡ ಸಾಮೂಹಿಕ ಅತ್ಯಾಚಾರವೆಸಗಿದೆ.

    ಇಬ್ಬರು ಬಾಲಕಿಯರು ಖುಷಿಯಿಂದಲೇ ಜಾತ್ರೆಗೆ ಹೊರಟಿದ್ದರು. ಈ ಸಂದರ್ಭದಲ್ಲಿ ಅವರನ್ನು ಅತ್ಯಾಚಾರವೆಸಗಿ 50,000 ರೂ. ಪರಿಹಾರ ನೀಡಿ ಪ್ರಕರಣವನ್ನು ಮುಚ್ಚಿ ಹಾಕಲು ಪ್ರಯತ್ನಿಸಿದ್ದಾರೆ.

    ಆರೋಪಿ ವಸಂತ್, ಚುನಾಯಿತ ಪ್ರತಿನಿಧಿಯೊಬ್ಬರ ಮಗನಾಗಿದ್ದರೆ, ಮತ್ತೊಬ್ಬ ಆರೋಪಿ ನಾಗೇಂದ್ರ ಹೆಡ್ ಕಾನ್ಸೇಟಬಲ್ ಒಬ್ಬರ ಪುತ್ರನಾಗಿದ್ದಾನೆ. ಈಗ ಇವರಿಬ್ಬರೂ ಸೇರಿದಂತೆ ಆರು ಜನ ಸ್ನೇಹಿತರು ತಲೆಮರೆಸಿಕೊಮಡಿದ್ದಾರೆ.

    ಜಾತ್ರೆಗೆ ಬಾಲಕಿಯರು ತೆರಳುತ್ತಿರುವಾಗ ಭಾರೀ ಮಳೆ ಬಂದ ಹಿನ್ನೆಲೆಯಲ್ಲಿ ಒಂದು ಅಂಗಡಿಯಲ್ಲಿ ಆಶ್ರಮ ಪಡೆದಿದ್ದರು. ಈ ವೇಳೆ ಅಲ್ಲಿಗೆ ಆಗಮಿಸಿದ ಆರೋಪಿಗಳು ಅತ್ಯಾಚಾರವೆಸಗಿ ಪರಾರಿಯಾಗಿದ್ದಾರೆ.

    ಈ ಸಂದರ್ಭದಲ್ಲಿ ಪೊಲೀಸರಿಗೆ ದೂರು ನೀಡುವ ಬದಲಾಗಿ ಬುಡಕಟ್ಟು ಸಮುದಾಯದ ಸಂಪ್ರದಾಯದ ಪ್ರಕಾರ ಗ್ರಾಮದ ಹಿರಿಯರನ್ನು ಭೇಟಿಯಾಗಿ ಪ್ರಕರಣದ ಮುಚ್ಚಿ ಹಾಕಲು ಮುಂದಾಗಿದ್ದಾರೆ.

    ಸ್ಥಳೀಯ ವರದಿಗಳು ಹೇಳುವ ಪ್ರಕಾರ ಇಬ್ಬರು ಅಪ್ರಾಪ್ತರಿಗೆ 50 ಸಾವಿರ ರೂ. ನೀಡಲು ಬಂದಾಗ ಅದನ್ನು ಅವರು ಒಪ್ಪಿಕೊಳ್ಳಲು ನಿರಾಕರಿಸಿ ಪೊಲೀಸರಿಗೆ ದೂರು ನೀಡಿದ್ದಾರೆ. ಚಿಂತಾಪಲ್ಲಿ ಪೊಲೀಸರು ಅತ್ಯಾಚಾರ ಮತ್ತು ಪೋಸ್ಕೋ ಕಾಯ್ದೆ ಅಡಿ ಪ್ರಕರಣ ದಾಖಲಿಸಿದ್ದಾರೆ.

  • ಮಹಿಳೆ ಮೇಲೆ ಗ್ಯಾಂಗ್ ರೇಪ್- ಮುಖವನ್ನ ಇಟ್ಟಿಗೆಯಿಂದ ಹೊಡೆದ್ರು, ಛಿದ್ರವಾದ ಸ್ಥಿತಿಯಲ್ಲಿ ಶವ ಪತ್ತೆ

    ಮಹಿಳೆ ಮೇಲೆ ಗ್ಯಾಂಗ್ ರೇಪ್- ಮುಖವನ್ನ ಇಟ್ಟಿಗೆಯಿಂದ ಹೊಡೆದ್ರು, ಛಿದ್ರವಾದ ಸ್ಥಿತಿಯಲ್ಲಿ ಶವ ಪತ್ತೆ

    ರೋಹ್ಟಕ್: 23 ವರ್ಷದ ಮಹಿಳೆಯೊಬ್ಬರ ಮೇಲೆ ಸಾಮೂಹಿಕ ಅತ್ಯಾಚಾರವೆಸಗಿ ನಂತರ ಬರ್ಬರವಾಗಿ ಕೊಲೆ ಮಾಡಿರೋ ಬೆಚ್ಚಿಬೀಳಿಸೋ ಘಟನೆ ಹರಿಯಾಣದಲ್ಲಿ ಬೆಳಕಿಗೆ ಬಂದಿದೆ.

    ಮೇ 11ರಂದು ಇಲ್ಲಿನ ರೋಹ್ಟಕ್‍ನ ಅರ್ಬನ್ ಎಸ್ಟೇಟ್ ಪ್ರದೇಶದಲ್ಲಿ ತುಂಡರಿಸಿದ ಮಹಿಳೆಯ ದೇಹವನ್ನ ವ್ಯಕ್ತಿಯೊಬ್ಬರು ನೋಡಿದಾಗ ಘಟನೆ ಬೆಳಕಿಗೆ ಬಂದಿದೆ. ಮಹಿಳೆಯ ಮುಖ ಹಾಗೂ ದೇಹದ ಕೆಳಭಾಗವನ್ನ ನಾಯಿಗಳು ತಿಂದುಹಾಕಿದ್ದವು. ಪ್ರಕರಣಕ್ಕೆ ಸಂಬಂಧಿಸಿದಂತೆ ಸುಮಿತ್ ಹಾಗೂ ವಿಕಾಸ್ ಎಂಬ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದೆ. ಬಂಧಿತ ಆರೋಪಿಗಳಲ್ಲಿ ಒಬ್ಬನಾದ ಸುಮಿತ್ ಮೃತ ಮಹಿಳೆಯ ನೆರೆಮನೆಯವನು ಎಂದು ಸೋನಿಪತ್‍ನ ಸಬ್ ಇನ್ಸ್‍ಪೆಕ್ಟರ್ ಅಜಯ್ ಮಲಿಕ್ ಸುದ್ದಿ ಸಂಸ್ಥೆಗೆ ತಿಳಿಸಿದ್ದಾರೆ.

    ಕೊಲೆಗೀಡಾದ ಮಹಿಳೆ ವಿಚ್ಛೇದಿತರಾಗಿದ್ದು, ಮೇ 9ರಂದು ಆಕೆಯನ್ನ ಕಿಡ್ನ್ಯಾಪ್ ಮಾಡಿ ಕಾರಿನಲ್ಲಿ ರೋಹ್ಟಕ್‍ಗೆ ಕರೆದುಕೊಂಡು ಹೋಗಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ. ಮಹಿಳೆಯ ಪೋಷಕರು ಸೋನಿಪತ್ ಪೊಲೀಸ್ ಠಾಣೆಯಲ್ಲಿ ಮಗಳು ಕಾಣೆಯಾಗಿರುವ ಬಗ್ಗೆ ದೂರು ದಾಖಲಿಸಿದ್ದರು.

    ಮಹಿಳೆಯ ಮೇಲೆ ಅತ್ಯಾಚಾರವೆಸಗಿ ನಂತರ ಆರೋಪಿಗಳು ಇಟ್ಟಿಗೆಯಿಂದ ಆಕೆಗೆ ಹೊಡೆದಿದ್ದಾರೆ. ಅಲ್ಲದೆ ಮುಖವನ್ನ ಕಲ್ಲಿಗೆ ಗುದ್ದಿದ್ದಾರೆ. ಮೃತ ಮಹಿಳೆಯ ತಲೆಗೆ ತೀವ್ರವಾಗಿ ಗಾಯವಾಗಿರುವುದು ಪತ್ತೆಯಾಗಿದೆ ಎಂದು ಮಲಿಕ್ ತಿಳಿಸಿದ್ದಾರೆ.

    7 ಜನರಿಂದ ಅತ್ಯಾಚಾರ: ಟೈಮ್ಸ್ ನೌ ವರದಿಯ ಪ್ರಕಾರ ಮಹಿಳೆಯ ಮೇಲೆ ಕನಿಷ್ಠ 7 ಮಂದಿನ ಅತ್ಯಾಚಾರವೆಸಗಿದ್ದು ನಂತರ ಆಕೆಗೆ ಕಿರುಕುಳ ನೀಡಿ ಕೊಲೆ ಮಾಡಿ ದೇಹವನ್ನ ಛಿದ್ರ ಛಿದ್ರ ಮಾಡಿದ್ದಾರೆ ಎನ್ನಲಾಗಿದೆ. ಮಹಿಳೆ ಕನಿಷ್ಠ 7 ಮಂದಿಯಿಂದ ಅತ್ಯಾಚಾರಕ್ಕೊಳಗಾಗಿದ್ದಾರೆ. ಕೊಲೆಗೈದ ನಂತರ ಆಕೆಯ ಗುರುತು ಸಿಗಬಾರದು ಎಂಬ ಕಾರಣಕ್ಕೆ ವಾಹನ ಮೇಲೆ ಹರಿದಿದೆ ಎನ್ನುವಂತೆ ತಲೆಬುರುಡೆಗೆ ಹೊಡೆದಿದ್ದಾರೆ ಎಂದು ಮರಣೋತ್ತರ ಪರೀಕ್ಷೆ ನಡೆಸಿದ ವಿಧಿವಿಜ್ಞಾನ ತಂಡ ಹೇಳಿರುವುದಾಗಿ ವರದಿಯಾಗಿದೆ.

    ನೆರೆಮನೆಯವನೇ ಕೊಲೆ ಮಾಡಿದ್ನಾ?: ಸುದ್ದಿ ಸಂಸ್ಥೆ ಎಎನ್‍ಐ ವರದಿಯ ಪ್ರಕಾರ ಮಹಿಳೆ ತನ್ನ ತಾಯಿ ಹಾಗೂ ಸಹೋದರನೊಂದಿಗೆ ವಾಸವಿದ್ದರು. ಖಾಸಗಿ ಕಂಪೆನಿಯೊಂದರಲ್ಲಿ ಕೆಲಸ ಮಾಡ್ತಿದ್ರು. ಆಕೆ ಮದುವೆ ಪ್ರಸ್ತಾಪವನ್ನು ನಿರಾಕರಿಸಿದ್ರು. ನಂತರ ಆರೋಪಿಯು ತನ್ನ ಸ್ನೇಹಿತರೊಂದಿಗೆ ಆಕೆಯ ಮನೆಗೆ ಬಂದಿದ್ದು ಈ ವೇಳೆ ಇಬ್ಬರ ಮಧ್ಯೆ ಮಾತಿನ ಚಕಮಕಿ ನಡೆದು ಮಹಿಳೆ ಆಕೆಯ ಕೆನ್ನೆಗೆ ಬಾರಿಸಿದ್ದಾರೆ. ಇದರ ಸೇಡಿಗಾಗಿ ಆರೋಪಿ ತನ್ನ ಗೆಳೆಯರ ಜೊತೆಗೂಡಿ ಮಹಿಳೆಯನ್ನ ಅಪಹರಿಸಿ, ಅತ್ಯಾಚಾರವೆಸಗಿ ಕೊಲೆ ಮಾಡಿದ್ದಾನೆ ಎಂದು ಹೇಳಲಾಗಿದೆ. ವಿಧಿ ವಿಜ್ಞಾನ ವರದಿಯ ಪ್ರಕಾರ ಮಹಿಳೆಯ ದೇಹವನ್ನ ಚೂಪಾದ ಆಯುಧದಿಂದ ತುಂಡರಿಸಲಾಗಿದೆ ಎಂದು ಎಎನ್‍ಐ ವರದಿ ಮಾಡಿದೆ.

    ಮಾಚ್ 9 ರಂದು ಸುಮಾರು 5 ರಿಂದ 6 ಯುವಕರು ಖಾಸಗಿ ಕಂಪೆನಿಯ ಬಳಿ ಮಹಿಳೆಯನ್ನ ಅಪಹರಣ ಮಾಡಿದ್ರು ಎಂದು ಮಹಿಳೆಯ ಕುಟುಂಬಸ್ಥರು ಆರೋಪಿಸಿದ್ದಾರೆ. ಆರೋಪಿ ಕಳೆದ 1 ವರ್ಷದಿಂದ ನನ್ನ ಮಗಳನ್ನ ಮದುವೆಯಾಗುವಂತೆ ಒತ್ತಾಯಿಸುತ್ತಿದ್ದ ಎಂದು ಮೃತ ಮಹಿಳೆಯ ತಾಯಿ ಹೇಳಿದ್ದಾರೆ. ಈ ನೀಚ ಕೃತ್ಯವೆಸಗಿದ ಆರೋಪಿಗಳಿಗೆ ಗಲ್ಲು ಶಿಕ್ಷೆ ಆಗಬೇಕೆಂದು ಆಗ್ರಹಿಸಿದ್ದಾರೆ. ಪೊಲೀಸರು ಈ ಬಗ್ಗೆ ತನಿಖೆ ಮುಂದುವರೆಸಿದ್ದಾರೆ.

    ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ಈ ಕೃತ್ಯವನ್ನ ಖಂಡಿಸಿದ್ದಾರೆ.

  • ನಿರ್ಭಯಾ ಪ್ರಕರಣದ ಬಾಲಾಪರಾಧಿ ಈಗ ಎಲ್ಲಿದ್ದಾನೆ, ಏನು ಮಾಡ್ತಿದ್ದಾನೆ? ಈ ಸುದ್ದಿ ಓದಿ

    ನಿರ್ಭಯಾ ಪ್ರಕರಣದ ಬಾಲಾಪರಾಧಿ ಈಗ ಎಲ್ಲಿದ್ದಾನೆ, ಏನು ಮಾಡ್ತಿದ್ದಾನೆ? ಈ ಸುದ್ದಿ ಓದಿ

    ನವದೆಹಲಿ: ಇಡೀ ದೇಶವನ್ನೇ ಬೆಚ್ಚಿ ಬೀಳಿಸಿದ್ದ 2012ರ ನಿರ್ಭಯಾ ಗ್ಯಾಂಗ್ ರೇಪ್ ಪ್ರಕರಣದಲ್ಲಿ ನಾಲ್ವರು ಅಪರಾಧಿಗಳಿಗೆ ಗಲ್ಲು ಶಿಕ್ಷೆ ವಿಧಿಸಿ ಸುಪ್ರೀಂ ಕೋರ್ಟ್ ಶುಕ್ರವಾರದಂದು ತೀರ್ಪು ಪ್ರಕಟಿಸಿದೆ. ಆದ್ರೆ ದೇಶದಾದ್ಯಂತ ಆಕ್ರೋಶ ಭುಗಿಲೇಳಲು ಕಾರಣವಾಗಿದ್ದ ಈ ಪ್ರಕರಣದಲ್ಲಿ ಮತ್ತೊಬ್ಬ ಬಾಲಾಪರಾಧಿ ಭಾಗಿಯಾಗಿದ್ದ. ಯುವತಿಯ ಕರುಳನ್ನೇ ಕಿತ್ತುಹಾಕಿದ್ದ ಎಂದು ಈತನ ಮೇಲೆ ಆರೋಪವಿತ್ತು. ಮೂರು ವರ್ಷಗಳ ಕಾಲ ಬಾಲಮಂದಿರದಲ್ಲಿ ಕಳೆದ ಈಗ ನಂತರ ಡಿಸೆಂಬರ್ 2015ರಲ್ಲಿ ಬಿಡುಗಡೆಯಾಗಿದ್ದು ಈಗ ಈತನನ್ನು ಸರ್ಕಾರೇತರ ಸಂಸ್ಥೆಯೊಂದು ನೋಡಿಕೊಳ್ಳುತ್ತಿದೆ.

    ಆಗ ಬಾಲಾಪರಾಧಿಯಾಗಿದ್ದವನಿಗೆ ಈಗ 23 ವರ್ಷ ವಯಸ್ಸು. ಸಣ್ಣ ಹೋಟೆಲ್‍ವೊಂದರಲ್ಲಿ ಆತ ಈಗ ಅಡುಗೆ ಮಾಡುವ ಕೆಲಸಕ್ಕೆ ಸೇರಿದ್ದಾನೆಂದು ಎನ್‍ಜಿಓದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ದೆಹಲಿಯಲ್ಲಿ ಬಾಲಾಪರಾಧಿಗಳ ವೀಕ್ಷಣಾಲಯದಲ್ಲಿದ್ದಾಗ ಈತ ಅಡುಗೆ ಮಾಡುವುದನ್ನು ಕಲಿತಿದ್ದ ಎನ್ನಲಾಗಿದೆ.

    ಇದನ್ನೂ ಓದಿ: ನಿರ್ಭಯಾ ಗ್ಯಾಂಗ್‍ರೇಪ್: ಅಪರಾಧಿಗಳಿಗೆ ಗಲ್ಲು ಕಾಯಂ

    ಆತ ಈಗ ಹೊಸ ಜೀವನ ನಡೆಸುತ್ತಿದ್ದಾನೆ. ಆತನ ಹೆಸರೂ ಕೂಡ ಈಗ ಬದಲಾಗಿದೆ ಎಂದು ಎನ್‍ಜಿಓ ಅಧಿಕಾರಿ ಹೇಳಿದ್ದಾರೆ.

    ಇಡೀ ದೇಶವನ್ನೇ ಸ್ತಬ್ಧವಾಗಿಸಿ, ಯುವಕ ಯುವತಿಯರು ರಸ್ತೆಗಿಳಿದು ಪ್ರತಿಭಟನೆ ಮಾಡುವಂತೆ ಮಾಡಿದ್ದ ಈ ಪ್ರಕರಣದಲ್ಲಿ ಅತ್ಯಂತ ಕ್ರೂರವಾಗಿ ವರ್ತಸಿದವನು ಎಂದೇ ಆರೋಪಿಸಲಾಗಿದ್ದ ಬಾಲಾಪರಾಧಿಗೆ ಇತ್ತೀಚಿನ ಬೆಳವಣಿಗೆಗಳ ಬಗ್ಗೆ ಅಂದ್ರೆ ಸುಪ್ರೀಂ ಕೋರ್ಟ್ ನೀಡಿರುವ ತೀರ್ಪಿನ ಬಗ್ಗೆ ಯಾವುದೇ ಮಾಹಿತಿ ಇಲ್ಲವಂತೆ.

    ಆತ ಹೊಸ ಜೀವನ ಪ್ರಾರಂಭಿಸಬೇಕು ಎನ್ನುವ ಸಲುವಾಗಿ, ಜನರು ಆತನನ್ನು ಪತ್ತೆ ಹಚ್ಚಬಾರದೆಂದು ನಾವು ರಾಷ್ಟ್ರರಾಜಧಾನಿಯಿಂದ ಆತನನ್ನು ದೂರ ಕಳಿಸಬೇಕಾಯ್ತು. ಆತನೀಗ ದಕ್ಷಿಣ ಕರಾವಳಿಯಲ್ಲಿ ಎಲ್ಲೋ ಅಡುಗೆ ಕೆಲಸ ಮಾಡಿಕೊಂಡಿದ್ದಾನೆ. ಆತನಿಗೆ ಕೆಲಸ ಕೊಟ್ಟಿರುವ ಮಾಲೀಕನಿಗೂ ಅವನ ನಿಜವಾದ ಹೆಸರು ಹಾಗೂ ಪೂರ್ವಾಪರಗಳ ಬಗ್ಗೆ ಗೊತ್ತಿಲ್ಲ. ಆತನನ್ನು ಯಾರೂ ಪತ್ತೆ ಹಚ್ಚಬಾರದು ಎಂಬ ಕಾರಣಕ್ಕೆ ನಾವು ಆತನನ್ನ ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ಕಳಿಸುತ್ತಿದ್ದೇವೆ ಎಂದು ಅವರು ಹೇಳಿದ್ದಾರೆ.

    ಬಾಲಾಪರಾಧಿಗಳ ನ್ಯಾಯ ಮಂಡಳಿಯು ಈತನ ವಿಚಾರಣೆ ನಡೆಸುವ ಸಂದರ್ಭದಲ್ಲಿ ಹಾಜರಿದ್ದ ಎನ್‍ಜಿಓದ ಅಧಿಕಾರಿ ಮಾಧ್ಯಮಗಳನ್ನ ದೂರಿದ್ದಾರೆ. ಯಾವುದೇ ಆಧಾರವಿಲ್ಲದೆ ಈ ಅಪ್ರಾಪ್ತನನ್ನು ಮೃಗದಂತೆ ಚಿತ್ರಿಸಿದ್ರು ಎಂದು ಆರೋಪ ಮಾಡಿದ್ದಾರೆ.

    ಈ ಬಾಲಾಪರಾಧಿಯು ಪ್ರಕರಣದಲ್ಲಿ ಭಾಗಿಯಾಗಿದ್ದು ನಿಜ. ಆದ್ರೆ ಇಡೀ ಪ್ರಕರಣದಲ್ಲಿ ಈತನಿಂದಲೇ ಹೆಚ್ಚಿನ ಹಾನಿಯಾಗಿದ್ದು, ಈತನೇ ಕ್ರೂರವಾಗಿ ವರ್ತಿಸಿದ್ದು ಎಂಬುದಕ್ಕೆ ಯಾವುದೇ ಸಾಕ್ಷಿ ಆಧಾರಗಳಿಲ್ಲ ಎಂದು 2013ರಲ್ಲಿ ಬಾಲಾಪರಾಧಿಗಳ ನ್ಯಾಯ ಮಂಡಳಿ ಹೇಳಿತ್ತು ಎಂದು ವರದಿಯಾಗಿದೆ.

    ಬಾಲಾಪರಾಧಿಗಳ ನ್ಯಾಯ ಮಂಡಳಿ ಅಥವಾ ಕೋರ್ಟ್‍ಗಳ ಆಹ್ವಾನದ ಮೇಲೆ ಬಾಲಾಪರಾಧಿಗಳ ಕೌನ್ಸೆಲಿಂಗ್ ಮಡುವ ಹೆಚ್‍ಎಕ್ಯೂ ಸೆಂಟರ್ ಆಫ್ ಚೈಲ್ಡ್ ರೈಟ್ಸ್ ನ ಇನಾಕ್ಷಿ ಗಂಗೂಲಿ ಈ ಬಗ್ಗೆ ಹೇಳಿಕೆ ನೀಡಿದ್ದು, ಈ ಪ್ರಕರಣದ ತನಿಖಾಧಿಕಾರಿಗಳೂ ಕೂಡ ಅಪರಾಧಿಯು ಅತ್ಯಂತ ಕ್ರೂರಿ ಎಂದು ತೋರಿಸಲು ಯಾವುದೇ ಸಾಕ್ಷಿಯಿಲ್ಲ ಎಂದು ದಾಖಲಿಸಿರುವುದಾಗಿ ತಿಳಿಸಿದ್ದಾರೆ.

    2013ರಲ್ಲಿ ಜೈಲಿನ ಸೆಲ್‍ನಲ್ಲೇ ಆತ್ಮಹತ್ಯೆ ಮಾಡಿಕೊಂಡಿದ್ದ ಅಪರಾಧಿ ರಾಮ್ ಸಿಂಗ್ ಬಳಿ ಈ ಬಾಲಾಪರಾಧಿ ಸ್ವಲ್ಪ ಕಾಲ ಕೆಲಸ ಮಾಡಿದ್ದ. ರಾಮ್ ಸಿಂಗ್ ಆತನಿಗೆ 8 ಸಾವಿರ ರೂ. ಹಣ ಕೊಡಬೇಕಿತ್ತು. ಹಣ ಕೊಡುವಂತೆ ಬಾಲಾಪರಾಧಿ ಪದೇ ಪದೇ ಕೇಳುತ್ತಲೇ ಇದ್ದ. ಯುವತಿ ಮೇಲೆ ಗ್ಯಾಂಗ್ ರೇಪ್ ನಡೆದ ರಾತ್ರಿ ಆತ ಹಣವನ್ನು ಪಡೆಯಲು ಹೋಗಿದ್ದರಿಂದ ಈ ಕೃತ್ಯದ ಭಾಗವಾದ ಎಂದು ಎನ್‍ಜಿಓ ಅಧಿಕಾರಿ ಹೇಳಿದ್ದಾರೆ.

    ಅತ್ಯಂತ ಬಡ ಕುಟುಂಬದವನಾದ ಈತ ಸಣ್ಣವನಿರುವಾಗಲೇ ಉತ್ತರಪ್ರದೇಶದ ತನ್ನ ಗ್ರಾಮವನ್ನು ಬಿಟ್ಟು ದೆಹಲಿಗೆ ಓಡಿಬಂದಿದ್ದ ಎಂದು ವರದಿಯಾಗಿದೆ.

    ಕಾಯ್ದೆಗೆ ತಿದ್ದುಪಡಿ: ಈ ಪ್ರಕರಣದ ಬಳಿಕ ದೇಶದೆಲ್ಲೆಡೆ ಪ್ರತಿಭಟನೆಗಳು ನಡೆದು ಬಾಲಾಪರಾಧಿಯನ್ನು ಅಪರಾಧಿಯನ್ನಾಗಿಸಬೇಕೆಂಬ ಕೂಗು ಎದ್ದಿತ್ತು. ಇದಾದ ಬಳಿಕ ಕೇಂದ್ರ ಸರ್ಕಾರ ಬಾಲಾಪರಾಧ ಕಾಯ್ದೆಗೆ ತಿದ್ದುಪಡಿ ತಂದಿದ್ದು ಹದಿನಾರರಿಂದ ಹದಿನೆಂಟು ವರ್ಷದ ಮಧ್ಯೆ ಇರುವವರು ಕ್ರೂರ ಅಪರಾಧ ಕೃತ್ಯಗಳಲ್ಲಿ ಪಾಲ್ಗೊಂಡರೆ ಅವರನ್ನು ವಯಸ್ಕರು ಎಂದೇ ಈಗ ಪರಿಗಣಿಸಲಾಗುತ್ತದೆ.