Tag: gang rape

  • ಮನೆ ಮುಂದೆ ಮಲಗಿದ್ದ ಮಹಿಳೆಯ ಮೇಲೆ ಗ್ಯಾಂಗ್ ರೇಪ್-ಸಿಸಿಟಿವಿಯಲ್ಲಿ ಸೆರೆಯಾಯ್ತು ಭಯಂಕರ ದೃಶ್ಯ

    ಮನೆ ಮುಂದೆ ಮಲಗಿದ್ದ ಮಹಿಳೆಯ ಮೇಲೆ ಗ್ಯಾಂಗ್ ರೇಪ್-ಸಿಸಿಟಿವಿಯಲ್ಲಿ ಸೆರೆಯಾಯ್ತು ಭಯಂಕರ ದೃಶ್ಯ

    ಜೋಧಪುರ: ಇತ್ತೀಚೆಗೆ ದೇಶದಲ್ಲಿ ಮಹಿಳೆ ಮೇಲೆ ಲೈಂಗಿಕ ದೌರ್ಜನ್ಯದ ಪ್ರಕರಣಗಳು ಹೆಚ್ಚಾಗುತ್ತಿವೆ. ರಾತ್ರಿ ತಮ್ಮ ಮನೆಯ ಮುಂದುಗಡೆ ಮಲಗಿದ್ದ ಮಹಿಳೆಯೊಬ್ಬರ ಮೇಲೆ ಗ್ಯಾಂಗ್ ರೇಪ್ ನಡೆದಿರುವ ಘಟನೆ ರಾಜಸ್ಥಾನದ ವಾರದತ್ ಪಟ್ಟಣದ ಪ್ರತಾಪನಗರದಲ್ಲಿ ನಡೆದಿದೆ.

    ಮಹಿಳೆಯೊಬ್ಬರು ರಾತ್ರಿ ಮನೆಯ ಮುಂದೆ ಮಲಗಿದ್ದರು. ತಡರಾತ್ರಿ ಬಂದ ಕಾಮುಕರು ಮಹಿಳೆಯ ಮೇಲೆ ಅತ್ಯಾಚಾರ ನಡೆಸಿದ್ದಾರೆ. ಈ ಸಂಬಂಧ ಮಹಿಳೆ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ತಡರಾತ್ರಿ ಮನೆಯ ಹತ್ತಿರ ಬಂದ ದುಷ್ಕರ್ಮಿಗಳು ನನ್ನ ಮೇಲೆ ಬಲತ್ಕಾರ ಮಾಡಿದ್ದಾರೆ ಎಂದು ಮಹಿಳೆ ದೂರಿನಲ್ಲಿ ಉಲ್ಲೇಖಿಸಿದ್ದಾರೆ. ಈ ಎಲ್ಲ ದೃಶ್ಯಗಳು ನೆರೆ ಮನೆಯ ಸಿಸಿಟಿವಿಯಲ್ಲಿ ಸೆರೆಯಾಗಿವೆ.

    ಇದನ್ನೂ ಓದಿ: ಹಾಡಹಗಲೇ ಫುಟ್ ಪಾತ್‍ನಲ್ಲೇ ರೇಪ್- ಸಹಾಯಕ್ಕೆ ಯಾರು ಬರಲಿಲ್ಲ ಆದ್ರೆ ವಿಡಿಯೋ ಮಾಡಿದ್ರು

    ರಾತ್ರಿ ಸುಮಾರು 1.30ಕ್ಕೆ ಬೈಕಿನಲ್ಲಿ ಬಂದ ಮೂವರು ಮಹಿಳೆ ಮೇಲೆ ಅತ್ಯಾಚಾರ ನಡೆಸಿದ್ದಾರೆ. ಈಗಾಗಲೇ ಸಂತ್ರಸ್ತ ಮಹಿಳೆ ಮೂವರು ಆರೋಪಿಗಳ ಹೆಸರನ್ನು ತಿಳಿಸಿದ್ದು, ನೆರೆಮನೆಯ ಸಿಸಿಟಿವಿಯಲ್ಲಿ ವಿಡಿಯೋ ಆಧರಿಸಿ ಆರೋಪಿಗಳ ಬಂಧನಕ್ಕಾಗಿ ಪೊಲೀಸರು ಜಾಲ ಬೀಸಿದ್ದಾರೆ.

    ಇದನ್ನೂ ಓದಿ: ಸೇತುವೆ ಕೆಳಗೆ ಎಳೆದುಕೊಂಡು ಹೋಗಿ, ಯುವತಿಯ ಕೈಕಾಲು ಕಟ್ಟಿ ನಾಲ್ವರಿಂದ ಗ್ಯಾಂಗ್‍ ರೇಪ್

  • ಬರ್ತ್ ಡೇ ಪಾರ್ಟಿಗೆ ಕರೆಸಿ ಗೆಳೆಯ ಸೇರಿ ನಾಲ್ವರಿಂದ ವಿವಾಹಿತ ಮಹಿಳೆಯ ಮೇಲೆ ಗ್ಯಾಂಗ್ ರೇಪ್!

    ಬರ್ತ್ ಡೇ ಪಾರ್ಟಿಗೆ ಕರೆಸಿ ಗೆಳೆಯ ಸೇರಿ ನಾಲ್ವರಿಂದ ವಿವಾಹಿತ ಮಹಿಳೆಯ ಮೇಲೆ ಗ್ಯಾಂಗ್ ರೇಪ್!

    ಮುಂಬೈ: ವಿವಾಹಿತ ಮಹಿಳೆಯ ಮೇಲೆ ಆಕೆಯ ಗೆಳೆಯ ಹಾಗೂ ಮೂವರು ಸಾಮೂಹಿಕ ಅತ್ಯಾಚಾರವೆಸಗಿದ ಘಟನೆ ಮಹಾರಾಷ್ಟ್ರದಲ್ಲಿ ನಡೆದಿದೆ.

    ಈ ಘಟನೆ ಔರಂಗಾಬಾದ್ ಹೊರವಲಯದಲ್ಲಿ ಕಳೆದ ಗುರುವಾರ ನಡೆದಿರುವುದಾಗಿ ಅಲ್ಲಿನ ಪೊಲೀಸರು ಶನಿವಾರ ತಿಳಿಸಿದ್ದಾರೆ. ಸದ್ಯ ಆರೋಪಿ ಗೆಳೆಯ ಅನಿಲ್ ವಸಂತ್ ತೊಂಬ್ರೆ(22)ಯನ್ನು ಪೊಲಿಸರು ಬಂಧಿಸಿ, ವಿಚಾರಣೆ ನಡೆಸುತ್ತಿದ್ದಾರೆ.

    ಏನಿದು ಘಟನೆ?: ನವೆಂಬರ್ 2ರಂದು ಸಂಜೆ ತೊಂಬ್ರೆ ವಿವಾಹಿತ ಮಹಿಳೆಯ ಸಂತೋಷಿ ಮಠ ನಗರದಲ್ಲಿರೋ ಮನೆಗೆ ತೆರಳಿ ತನ್ನ ಹುಟ್ಟುಹಬ್ಬದ ಪಾರ್ಟಿಯಲ್ಲಿ ಭಾಗವಹಿಸುವಂತೆ ಹೇಳಿದ್ದಾನೆ. ತೋಂಬ್ರೆ ಗೆಳೆಯರು ಆಹಾರ ಮತ್ತು ಮದ್ಯದ ಬಾಟಲಿಗಳನ್ನು ತಂದು ಪಾರ್ಟಿಯಲ್ಲಿ ಸೇರಿಕೊಂಡಿದ್ದಾರೆ.

    ಬಳಿಕ ಗೆಳೆಯ ತೋಂಬ್ರೆ ಮತ್ತು ಆತನ ಮೂವರು ಗೆಳೆಯರು ಸೇರಿ ಮಹಿಳೆಯನ್ನು ಎಂಐಡಿಸಿ ಪ್ರದೇಶದ ಟಕ್ಲಿ ಗ್ರಾಮಕ್ಕೆ ಕರೆದುಕೊಂಡು ಹೋಗಿ ಮತ್ತು ಬರುವ ಪಾನೀಯವನ್ನು ಒತ್ತಾಯ ಪೂರ್ವಕವಾಗಿ ಕುಡಿಸಿದ್ದಾರೆ. ತಂಪುಪಾನೀಯ ಕುಡಿದ ಮಹಳೆ ಪ್ರಜ್ಞೆ ತಪ್ಪಿ ಬಿದ್ದಿದ್ದಾರೆ. ಈ ವೇಳೆ ನಾಲ್ವರು ಆಕೆಯ ಮೇಲೆ ಅತ್ಯಾಚಾರವೆಸಗಿದ್ದಾರೆ. ಘಟನೆಯ ಬಳಿಕ ಮಹಿಳೆಯನ್ನು ಪಕ್ಕದಲ್ಲಿರೋ ಪೆಟ್ರೋಲ್ ಪಂಪ್ ಬಳಿ ಎಸೆದು ಕಾಲ್ಕಿತ್ತಿದ್ದಾರೆ.

    ಮಹಿಳೆ ಪ್ರಜ್ಞಾಹೀನಳಾಗಿ ಬಿದ್ದಿರುವುದನ್ನು ಗಮನಿಸಿದ ಸ್ಥಳೀಯರು ಪೊಲೀಸರಿಗೆ ಮಾಹಿತಿ ರವಾನಿಸಿದ್ದಾರೆ. ಕೂಡಲೇ ಎಚ್ಚೆತ್ತ ಪೊಲೀಸರು ಸ್ಥಳಕ್ಕೆ ದೌಡಾಯಿಸಿ ಮಹಿಳೆಯನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ಆಸ್ಪತ್ರೆಯಲ್ಲಿ ಮಹಿಳೆ ನಡೆದ ಘಟನೆಯನ್ನು ವಿವರಿಸಿರುವುದಾಗಿ ಸಹಾಯಕ ಪೊಲೀಸ್ ಅಧಿಕಾರಿ ಅತ್ಯಜಿತ್ ತೈಟ್ ವಾಲೆ ತಿಳಿಸಿದ್ದಾರೆ.

    ಘಟನೆಗೆ ಸಂಬಂಧಿಸಿದಂತೆ ಮಹಿಳೆಯ ಗೆಳೆಯನನ್ನು ಬಂಧಿಸಿಲಾಗಿದ್ದು, ತಲೆಮರೆಸಿಕೊಂಡಿರೋ ಮೂವರಿಗಾಗಿ ಪೊಲೀಸರು ಹುಡುಕಾಟ ಆರಂಭಿಸಿದ್ದಾರೆ.

  • ಗಂಡನ ಎದುರೇ ಮಹಿಳೆಯ ಮೇಲೆ ಗ್ಯಾಂಗ್‍ರೇಪ್

    ಗಂಡನ ಎದುರೇ ಮಹಿಳೆಯ ಮೇಲೆ ಗ್ಯಾಂಗ್‍ರೇಪ್

    ಲಕ್ನೋ: ಗಂಡನ ಎದುರೆ ಮಹಿಳೆಗೆ ಗನ್ ತೋರಿಸಿ ಬೆದರಿಸಿ ನಾಲ್ವರು ಸಾಮೂಹಿಕ ಅತ್ಯಾಚಾರವೆಸಗಿರುವ ಆರೋಪ ಕೇಳಿಬಂದಿದೆ. ಉತ್ತರ ಪ್ರದೇಶದ ಮುಜಾಫರ್ ನಗರದಲ್ಲಿ ಈ ಘಟನೆ ನಡೆದಿದೆ.

    ಗನ್ ತೋರಿಸಿ ಬೆದರಿಸಿ ನಾಲ್ವರು ದುಷ್ಕರ್ಮಿಗಳು ಅತ್ಯಾಚಾರವನ್ನು ಮಾಡಿದ್ದಾರೆ ಎಂದು ಮಹಿಳೆ ಆರೋಪಿಸಿದ್ದಾರೆ. ಅಲ್ಲದೇ ಆಕೆಯ ಮಗನನ್ನು ಕೊಲೆ ಮಾಡುವುದಾಗಿ ಬೆದರಿಸಿದ್ದು, ಗಂಡನ ಮೇಲೂ ಹಲ್ಲೆ ಮಾಡಿದ್ದಾಗಿ ಮಹಿಳೆ ಹೇಳಿದ್ದಾರೆ.

    ಈ ಕುರಿತು ಸಂತ್ರಸ್ತೆ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದು, ನಾಲ್ವರು ದುಷ್ಕರ್ಮಿಗಳು ತನ್ನನ್ನು ಕಬ್ಬಿನ ಗದ್ದೆಗೆ ಎಳೆದೊಯ್ದು ಅತ್ಯಾಚಾರ ಎಸಗಿರುವುದಾಗಿ ದೂರಿನಲ್ಲಿ ತಿಳಿಸಿದ್ದಾರೆ.

    ಘಟನೆಯ ಕುರಿತು ಪೊಲೀಸರು ಎಫ್‍ಐಆರ್ ದಾಖಲಿಸಿಕೊಂಡಿದ್ದು, ಸಂತ್ರಸ್ತೆ ಮತ್ತು ಆಕೆಯ ಪತಿಯನ್ನು ವೈದ್ಯಕೀಯ ಪರೀಕ್ಷೆ ಒಳಪಡಿಸಲಾಗಿದೆ ಎಂದು ತಿಳಿಸಿದ್ದರೆ. ಮುಂದಿನ ತನಿಖೆಯನ್ನು ನಡೆಸುವುದಾಗಿ ಪೊಲೀಸ್ ಅಧೀಕ್ಷಕರು ಮಾಹಿತಿ ನೀಡಿದ್ದಾರೆ.

  • ಗ್ಯಾಂಗ್‍ರೇಪ್ ಎಸಗಿ ಗುಪ್ತಾಂಗಕ್ಕೆ ಆಸಿಡ್ ಹಾಕಿದ್ರು!

    ಗ್ಯಾಂಗ್‍ರೇಪ್ ಎಸಗಿ ಗುಪ್ತಾಂಗಕ್ಕೆ ಆಸಿಡ್ ಹಾಕಿದ್ರು!

    ಅಲಹಾಬಾದ್: ಮಹಿಳೆಯ ಮೇಲೆ ಇಬ್ಬರೂ ಸೇರಿ ಅತ್ಯಾಚಾರ ಎಸಗಿ ಬಳಿಕ ಆಕೆಯ ಗುಪ್ತಾಂಗಕ್ಕೆ ಆಸಿಡ್ ಎರಚಿರುವ ಅಮಾನೀಯ ಘಟನೆ ಉತ್ತರ ಪ್ರದೇಶದ ಅಲಹಾಬಾದ್ ಜಿಲ್ಲೆಯ ಘೋರ್‍ಪುರ್ ಪ್ರದೇಶದಲ್ಲಿ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.  ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ.

    ಸಂತ್ರಸ್ತೆ ಘೋರ್‍ಪುರ್‍ನ ಶಾಲೆಯೊಂದರಲ್ಲಿ ಕ್ಲೀನರ್ ಕೆಲಸವನ್ನು ಮಾಡುತ್ತಿದ್ದರು. ಆರೋಪಿಯಲ್ಲಿ ಒಬ್ಬನಾದ ಪಂಚರಾಜ್ ಎಂಬುವನೂ ಕೂಡ ಅದೇ ಶಾಲೆಯಲ್ಲಿ ಡ್ರೈವರ್ ಆಗಿ ಕೆಲಸ ಮಾಡುತ್ತಿದ್ದನು ಎಂದು ಪೊಲೀಸರು ತಿಳಿಸಿದ್ದಾರೆ.

    ನಾನು ಅವಳು ಕೆಲ ವರ್ಷಗಳಿಂದ ಸಂಬಂಧ ಇಟ್ಟುಕೊಂಡಿದ್ದೆವು. ನನಗೆ ಬೇರೆಯವರ ಜೊತೆ ಮದುವೆ ನಿಶ್ಚಯವಾಗಿತ್ತು. ಆದ್ದರಿಂದ ನಾನು ಆಕೆಯಿಂದ ದೂರವಿದ್ದೆ. ಆದರೆ ಆಕೆ ಯಾವಗಲೂ ನನ್ನ ಜೊತೆಯಲ್ಲಿಯೇ ಇರುವಂತೆ ಒತ್ತಾಯಿಸಿ ಪೀಡಿಸುತ್ತಿದ್ದಳು. ಇದರಿಂದ ಬೇಸತ್ತು ಕೋಪದಿಂದ ಈ ಕೃತ್ಯ ಎಸಗಿದೆ ಎಂದು ಆರೋಪಿ ಪಂಚ್‍ರಾಜ್ ವಿಚಾರಣೆಯ ವೇಳೆ ತಿಳಿಸಿದ್ದಾನೆ.

    ಶಾಲೆಗೆ ದಸರಾ ರಜೆ ಇರುವುದರಿಂದ ಯಾರು ಬರುತ್ತಿರಲಿಲ್ಲ. ಈ ಸಂದರ್ಭವನ್ನು ಉಪಯೋಗಿಸಿಕೊಂಡು ಪಂಚರಾಜ್ ಸಂತ್ರಸ್ತೆಯನ್ನು ನಿನ್ನ ಬಳಿ ಮಾತಾಡಬೇಕು ಎಂದು ಹೇಳಿ ಶಾಲೆಗೆ ಕರೆಸಿಕೊಂಡಿದ್ದಾನೆ. ನಂತರ ಏಕಾಂತವಾಗಿ ಇರಬೇಕೆಂದು ಯಾರು ಇಲ್ಲದ ಕಡೆ ಕರೆದುಕೊಂಡು ಹೋಗಿ ಸಹಚರನ ಜೊತೆ ಸೇರಿ ಅತ್ಯಾಚಾರ ಎಸಗಿದ್ದಾನೆ. ಬಳಿಕ ಆಕೆಯ ಖಾಸಗಿ ಭಾಗಗಳಿಗೆ ಆಸಿಡ್ ಎರಚಿ ಪರಾರಿಯಾಗಿದ್ದಾರೆ ಎಂದು ಪೊಲೀಸರು ತಿಳಿಸಿದರು.

    ಸದ್ಯಕ್ಕೆ ಸಂತ್ರೆಸ್ತೆಯು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆತಯುತ್ತಿದ್ದಾರೆ. ಆದರೆ ಆಕೆಯ ಆರೋಗ್ಯದ ಬಗ್ಗೆ ಯಾವುದೇ ಮಾಹಿತಿ ದೊರಕಿಲ್ಲ. ಕಳೆದ ಮೂರು ವರ್ಷಗಳ ಹಿಂದೆ ಆಕೆಯ ಪತಿ ಸಾವನ್ನಪ್ಪಿದ್ದಾರೆ ಹಾಗೂ ಆಕೆಯ ಮಕ್ಕಳ ಬಗ್ಗೆನೂ ಮಾಹಿತಿ ಸಿಕ್ಕಿಲ್ಲ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

  • ಕಾರಿನಲ್ಲಿ ಕರೆದೊಯ್ದು ಮಹಿಳೆ ಮೇಲೆ 23 ಮಂದಿಯಿಂದ ಗ್ಯಾಂಗ್‍ರೇಪ್

    ಕಾರಿನಲ್ಲಿ ಕರೆದೊಯ್ದು ಮಹಿಳೆ ಮೇಲೆ 23 ಮಂದಿಯಿಂದ ಗ್ಯಾಂಗ್‍ರೇಪ್

    ಜೈಪುರ: ದೆಹಲಿ ಮೂಲದ ಮಹಿಳೆ ಮೇಲೆ 23 ಜನರು ಗ್ಯಾಂಗ್‍ರೇಪ್ ಎಸಗಿರುವ ಘಟನೆ ರಾಜಸ್ಥಾನದ ಬಿಕನರ್ ಜಿಲ್ಲೆಯಲ್ಲಿ ನಡೆದಿದೆ.

    ದೆಹಲಿ ಮೂಲದ ಮಹಿಳೆ ರಾಜಸ್ಥಾನದ ಬಿಕನರ್ ನಗರದಲ್ಲಿ ತಾನು ಖರೀದಿಸಿದ್ದ ಸೈಟ್‍ಅನ್ನು ನೋಡಲು ಸೆಪ್ಟೆಂಬರ್ 25 ರಂದು ಬಂದಿದ್ದ ಸಂದರ್ಭದಲ್ಲಿ ಈ ಘಟನೆ ನಡೆದಿದೆ. ಸೈಟ್ ನೋಡಿ ವಾಪಸ್ ದೆಹಲಿಗೆ ಹೋಗಲು ಸಾರಿಗೆ ಬಸ್‍ಗೆ ಕಾಯುತ್ತಿದ್ದ ಸಂದರ್ಭದಲ್ಲಿ ಕಾರಿನಲ್ಲಿ ಬಂದ ಇಬ್ಬರು ಮಹಿಳೆಗೆ ಲಿಫ್ಟ್ ಕೊಡುವುದಾಗಿ ಹೇಳಿದ್ದಾರೆ. ಲಿಫ್ಟ್ ಗೆ ಒಪ್ಪದಕ್ಕೆ ಬಲವಂತವಾಗಿ ಕಾರಿನೊಳಗೆ ಎಳೆದುಕೊಂಡು ಇಬ್ಬರು ಅತ್ಯಾಚಾರ ಎಸಗಿದ್ದಾರೆ. ನಂತರ ಮತ್ತೆ 6 ಮಂದಿಗೆ ಕರೆ ಮಾಡಿ ಕರೆಸಿ ಅವರಿಂದಲೂ ಅತ್ಯಾಚಾರ ಮಾಡಿಸಿದರು ಎಂದು ಸಂತ್ರಸ್ತೆ ಮಹಿಳೆ ದೂರಿನಲ್ಲಿ ತಿಳಿಸಿದ್ದಾರೆ.

    ಇದಾದ ಬಳಿಕ ಪಲಾನಾ ಗ್ರಾಮಕ್ಕೆ ಕರೆದೊಯ್ದು ಅಲ್ಲಿ ಹಲವು ವ್ಯಕ್ತಿಗಳು ಸೇರಿ ನನ್ನ ಮೇಲೆ ಪದೇ ಪದೇ ಅತ್ಯಾಚಾರ ನಡೆಸಿದ್ದಾರೆ ಎಂದು ಸಂತ್ರಸ್ತೆ ಪೊಲೀಸರ ಬಳಿ ಹೇಳಿದ್ದಾರೆ.

    ಸಂತ್ರಸ್ತೆ ಮಹಿಳೆಯ ದೂರಿನ ಪ್ರಕಾರ, ಅತ್ಯಾಚಾರ ನಡೆಸಿದ ಮರು ದಿನ ಸೆ.26 ರಂದು ಕರೆದೊಯ್ದ ಜಾಗದಲ್ಲೇ ಬಿಟ್ಟು ಪರಾರಿಯಾಗಿದ್ದಾರೆ. ಅತ್ಯಾಚಾರ ಮಾಡಿದ ಆರೋಪಿಗಳ ವಿರುದ್ದ ಎಫ್‍ಐಆರ್ ದಾಖಲಾಗಿದೆ.

    ಅಪರಿಸಿದ ಇಬ್ಬರು ಆರೋಪಿಗಳನ್ನು ರಾಜು ಮತ್ತು ಶುಭಾಂಶ್ ಎಂದು ಗುರುತಿಸಿದ್ದು, ಆರೋಪಿಗಳನ್ನು ಬಂಧಿಸಲಾಗಿದೆ. ಉಳಿದ 21 ಅಪರಿಚಿತರ ಮೇಲೆ ದೂರು ದಾಖಲಾಗಿದೆ ಎಂದು ಬಿಕನರ್ ಪೊಲೀಸರು ತಿಳಿಸಿದ್ದಾರೆ.

  • ಚಲಿಸುವ ಕಾರಿನಲ್ಲಿ ಗ್ಯಾಂಗ್ ರೇಪ್‍ಗೈದು, ಯುವತಿಯನ್ನು ದೇವಸ್ಥಾನದ ಬಳಿ ಎಸೆದು ಪರಾರಿಯಾದ್ರು!

    ಚಲಿಸುವ ಕಾರಿನಲ್ಲಿ ಗ್ಯಾಂಗ್ ರೇಪ್‍ಗೈದು, ಯುವತಿಯನ್ನು ದೇವಸ್ಥಾನದ ಬಳಿ ಎಸೆದು ಪರಾರಿಯಾದ್ರು!

    ದೆಹಲಿ: ಚಲಿಸುತ್ತಿದ್ದ ಕಾರಿನಲ್ಲಿ 25 ವರ್ಷದ ಮಹಿಳೆಯ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಿದ ಘಟನೆ ಉತ್ತರಪ್ರದೇಶದ ನೋಯ್ಡಾದಲ್ಲಿ ಶುಕ್ರವಾರ ನಡೆದಿದೆ.

    ನೋಯ್ಡಾದ ಗಾಲ್ಫ ಕೋರ್ಸ್ ಮೆಟ್ರೋ ನಿಲ್ದಾಣದ ಗೇಟ್ ಬಳಿ ಕ್ಯಾಬ್ ಗಾಗಿ ಕಾಯುತ್ತಾ ನಿಂತಿದ್ದರು. ಇದೇ ಯುವತಿ ಬಳಿ ಬಂದ ಮಹಿಂದ್ರ ಸ್ಕಾರ್ಪಿಯೋ ಕಾರ್ ಅಡ್ರೆಸ್ ಕೇಳಿದ್ದಾರೆ. ಈ ವೇಳೆ ಅಡ್ರೆಸ್ ಹೇಳಲು ಯುವತಿ ಮುಂದಾದಗ ಹಿಂದಿನಿಂದ ಮತ್ತೊಬ್ಬ ಬಂದು ಕಾರಿನಲ್ಲಿ ಯುವತಿಯನ್ನು ನೂಕಿದ್ದಾನೆ. ಯುವತಿಯನ್ನು ಅಪಹರಿಸಿದ ಕಾಮುಕರು ಚಲಿಸುತ್ತಿದ್ದ ಕಾರಿನಲ್ಲಿಯೇ ಸಾಮೂಹಿಕ ಅತ್ಯಾಚಾರ ಎಸೆಗಿದ್ದಾರೆ.

    ಸುಮಾರು 12 ಕಿ.ಮೀ. ವರೆಗೂ ಕರೆದುಕೊಂಡು ಬಂದು ದೆಹಲಿಯ ಅಕ್ಷರಧಾಮ ದೇವಸ್ಥಾನದ ಬಳಿ ಕಾರಿನಿಂದ ಯುವತಿಯನ್ನು ಹೊರಗೆ ಎಸೆದು ಪರಾರಿಯಾಗಿದ್ದಾರೆ. ಸದ್ಯ ಯುವತಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು ಚಿಕಿತ್ಸೆ ನೀಡಲಾಗುತ್ತಿದೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆರೋಪಿಗಳ ಪತ್ತೆಗಾಗಿ ನೋಯ್ಡಾ ವ್ಯಾಪ್ತಿಯ 39 ಪೊಲೀಸ್ ಠಾಣೆಗೆ ಸೂಚನೆ ನೀಡಿದ್ದು, ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದಾರೆ.

  • ಶಾಲೆಯಲ್ಲೇ ಗ್ಯಾಂಗ್‍ರೇಪ್ ಆಗಿದ್ದ ವಿದ್ಯಾರ್ಥಿನಿಯ ಬ್ರೈನ್ ಡ್ಯಾಮೇಜ್!

    ಶಾಲೆಯಲ್ಲೇ ಗ್ಯಾಂಗ್‍ರೇಪ್ ಆಗಿದ್ದ ವಿದ್ಯಾರ್ಥಿನಿಯ ಬ್ರೈನ್ ಡ್ಯಾಮೇಜ್!

    ಜೈಪುರ: ಬಲವಂತವಾಗಿ ಗರ್ಭಪಾತ ಮಾಡಿಸಿ ಈಗ ತುರ್ತು ಚಿಕಿತ್ಸಾ ಘಟಕದಲ್ಲಿ ದಾಖಲಾಗಿರುವ 12 ನೇ ತರಗತಿಯ ಶಾಲಾ ಬಾಲಕಿಯ ಬ್ರೈನ್ ಡ್ಯಾಮೇಜ್ ಆಗಿರುವ ವಿಚಾರ ಈಗ ಬೆಳಕಿಗೆ ಬಂದಿದೆ.

    ಶಾಲೆಯ ಶಿಕ್ಷಕ ಜಗದೀಶ್ ಹಾಗೂ ನಿರ್ದೇಶಕ ಜಗತ್ ಸೇರಿ 18 ವರ್ಷದ ಬಾಲಕಿಯ ಮೇಲೆ ನಿರಂತರವಾಗಿ ಅತ್ಯಾಚಾರವನ್ನು ಎಸಗಿ ಬಳಿಕ ಬಲವಂತವಾಗಿ ಗರ್ಭಪಾತ ಮಾಡಿಸಿದ್ದರು.

    ಬಾಲಕಿಯ ಮೇಲೆ ಅತ್ಯಾಚಾರ ನಡೆಸಲು ಪೂರ್ವ ತಯಾರಿ ನಡೆಸಿದ್ದ ಆರೋಪಿಗಳು ಬಾಲಕಿ ಶಾಲೆಯಲ್ಲಿ ಉಳಿಯುವಂತೆ ಮಾಡಲು ಹೆಚ್ಚಿನ ತರಗತಿಯನ್ನು ತೆಗೆದುಕೊಳ್ಳುತ್ತಿದ್ದರು ಎಂದು ಸುದ್ದಿ ಮೂಲಗಳು ತಿಳಿಸಿವೆ.

    ಅತ್ಯಾಚಾರ ಮಾಡಿ ಯಾವುದೇ ಎಚ್ಚರಿಕೆ ವಹಿಸದೆ ಗರ್ಭಪಾತಕ್ಕೆ ಮಾಡಿಸಿದ್ದಾರೆ. ಇದರಿಂದ ಆಮ್ಲಜನಕದ ಕೊರತೆ ಉಂಟಾಗಿ ಶಾಶ್ವತ ಬ್ರೈನ್ ಡ್ಯಾಮೇಜ್ ಸಮಸ್ಯೆಯಾಗಿದೆ ಎಂದು ಜೈಪುರದ ಮೆಡಿಕಲ್ ಕಾಲೇಜಿನ ಮುಖ್ಯ ವೈದ್ಯಾಧಿಕಾರಿ ಡಾ. ಮೀನಾ ತಿಳಿಸಿದ್ದಾರೆ.

    ಪ್ರಕರಣದ ನಂತರ ಜಿಲ್ಲಾ ಆಡಳಿತ ಮಂಡಳಿ ಶಾಲೆಯನ್ನು ಮುಚ್ಚುವಂತೆ ಸೂಚಿಸಿದೆ. ಆರೋಪಿಗಳನ್ನು ಬಂಧಿಸಲಾಗಿದ್ದು, ಹೆಚ್ಚಿನ ವಿಚಾರಣೆಯನ್ನು ನಡೆಸುತ್ತಿರುವುದಾಗಿ ಸಿಕಾರ್ ಜಿಲ್ಲಾ ಪೊಲೀಸ್ ಅಧಿಕಾರಿ ವಿನಿತ್ ಕುಮಾರ್ ಮಾಹಿತಿ ನೀಡಿದ್ದಾರೆ.

    ಸಂತ್ರಸ್ತೆಯ ಆರೋಗ್ಯದ ಪರಿಸ್ಥತಿಯಿಂದ ಆಕೆಯ ಹೇಳಿಕೆಯನ್ನು ಪಡೆಯಲು ಸಾಧ್ಯವಾಗಿಲ್ಲ. ಗರ್ಭಪಾತ ಮಾಡಿದ ಕ್ಲಿನಿಕ್ ಮೇಲೆ ದಾಳಿ ನಡೆಸಿ ಆರೋಪಿಗಳಿಗೆ ಸಹಕಾರ ನೀಡಿದ್ದಕ್ಕೆ ಸಿಬ್ಬಂದಿಯನ್ನು ಬಂಧಿಸಲಾಗಿದೆ. ಅಷ್ಟೇ ಅಲ್ಲದೇ ಕ್ಲಿನಿಕ್ ಇದುವರೆಗೂ ಮಾಡಿರುವ ಎಲ್ಲಾ ಪ್ರಕರಣಗಳ ಕುರಿತು ತನಿಖೆಯನ್ನು ನಡೆಸಲಾಗುತ್ತಿದೆ ಎಂದು ವಿನಿತ್ ಕುಮಾರ್ ತಿಳಿದರು.

  • 12ನೇ ಕ್ಲಾಸ್ ವಿದ್ಯಾರ್ಥಿನಿಯ ಮೇಲೆ ಶಾಲೆಯ ನಿರ್ದೇಶಕ, ಶಿಕ್ಷಕನಿಂದ ಗ್ಯಾಂಗ್ ರೇಪ್

    12ನೇ ಕ್ಲಾಸ್ ವಿದ್ಯಾರ್ಥಿನಿಯ ಮೇಲೆ ಶಾಲೆಯ ನಿರ್ದೇಶಕ, ಶಿಕ್ಷಕನಿಂದ ಗ್ಯಾಂಗ್ ರೇಪ್

    ಜೈಪುರ: ಶಾಲಾ ನಿರ್ದೇಶಕ ಮತ್ತು ಶಿಕ್ಷಕ ಇಬ್ಬರು ಸೇರಿ 12 ನೇ ತರಗತಿ ವಿದ್ಯಾರ್ಥಿನಿಯ ಮೇಲೆ ನಿರಂತರವಾಗಿ ಅತ್ಯಾಚಾರ ಮಾಡಿರುವುದಲ್ಲದೇ ಗರ್ಭಪಾತ ಮಾಡಿಸಿರುವಂತಹ ಹೃದಯ ಕಲಕುವಂತಹ ಘಟನೆ ರಾಜಸ್ಥಾನದ ಸಿಕಾರ್ ಜಿಲ್ಲೆಯಲ್ಲಿ ನಡೆದಿದೆ.

    ಸಿಕರ್ ಜಿಲ್ಲೆಯ ಜನತಾ ಬಾಲ್ ನಿಕೇತನ್ ಶಾಲೆಯ ನಿರ್ದೇಶಕ ಜಗದೀಶ್ ಮತ್ತು ಶಿಕ್ಷಕ ಜಗತ್ ಸಿಂಗ್ ಸೇರಿ ಈ ಕೃತ್ಯವನ್ನು ಮಾಡಿದ್ದಾರೆ. ಸದ್ಯಕ್ಕೆ ಜಿಲ್ಲೆಯ ಅಜೀತ್‍ಗಢ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಗಳಿಗಾಗಿ ಶೋಧಕಾರ್ಯ ನಡೆಯುತ್ತಿದೆ.

    ಏನಿದು ಪ್ರಕರಣ?: ಜನತಾ ಬಾಲ್ ನಿಕೇತನ್ ಶಾಲೆಯ 12 ನೇ ತರಗತಿ ಓದುತ್ತಿದ್ದ ವಿದ್ಯಾರ್ಥಿನಿಯ ಮೇಲೆ ಈ ಇಬ್ಬರು ಆರೋಪಿಗಳು ಅತ್ಯಾಚಾರ ಮಾಡಿದ್ದಾರೆ. ಯಾವಾಗ ಆರೋಪಿಗಳಿಗೆ ಆಕೆ ಗರ್ಭಿಣಿ ಎಂದು ತಿಳಿಯಿತೋ ತಕ್ಷಣ ಆಕೆಯನ್ನು ಶಾಹಪುರ ಪ್ರದೇಶದ ಖಾಸಗಿ ಆಸ್ಪತ್ರೆಗೆ ಕರೆದಕೊಂಡು ಹೋಗಿ ಗರ್ಭಪಾತ ಮಾಡಿಸಿ ಮನೆಗೆ ಕಳುಹಿಸಿದ್ದಾರೆ.

    ಮನೆಗೆ ಹೋದ ಬಳಿಕ ಅತಿಯಾದ ರಕ್ತಸ್ರಾವದಿಂದ ಹುಡುಗಿ ಬಳಲಾರಂಭಿಸಿದ್ದಾಳೆ, ಅದನ್ನು ಗಮನಿಸಿದ ಪೋಷಕರು ತಕ್ಷಣ ಅಜೀತ್‍ಗಢನ ಸ್ಥಳೀಯ ಆಸ್ಪತ್ರೆಗೆ ದಾಖಲಿಸಿದ್ದಾರೆ. ನಂತರ ವೈದ್ಯರು ಪರೀಕ್ಷಿಸಿ ಗರ್ಭಪಾತ ಚಿಕಿತ್ಸೆಯನ್ನು ಮಾಡಿಸಿದ್ದಾರೆ ಎಂದು ಕುಟುಂಬಕ್ಕೆ ತಿಳಿಸಿದ್ದಾರೆ. ಪೋಷಕರು ಆರೋಪಿಗಳ ಬಗ್ಗೆ ಮಾಹಿತಿ ತಿಳಿದು ಪೋಲಿಸರಿಗೆ ದೂರು ನೀಡಿದ್ದಾರೆ. ಈ ವಿಚಾರ ತಿಳಿದು ಆರೋಪಿಗಳು ನಾಪತ್ತೆಯಾಗಿದ್ದಾರೆ.

    ಹುಡುಗಿಯ ಆರೋಗ್ಯದಲ್ಲಿ ಯಾವ ಚೇತರಿಕೆ ಕಂಡುಬಾರದ ಕಾರಣ ಆಕೆಯನ್ನು ಜೈಪುರ ಆಸ್ಪತ್ರೆಗೆ ದಾಖಲಿಸಿದ್ದು, ಸದ್ಯಕ್ಕೆ ಚಿಕಿತ್ಸೆ ಮುಂದುವರಿಯುತ್ತಿದೆ.

  • ಕಾಲೇಜಿಗೆ ಹೋಗ್ತಿದ್ದಾಗ ಕಿಡ್ನಾಪ್ ಮಾಡಿ ವಿದ್ಯಾರ್ಥಿನಿ ಮೇಲೆ ಗ್ಯಾಂಗ್‍ರೇಪ್

    ಕಾಲೇಜಿಗೆ ಹೋಗ್ತಿದ್ದಾಗ ಕಿಡ್ನಾಪ್ ಮಾಡಿ ವಿದ್ಯಾರ್ಥಿನಿ ಮೇಲೆ ಗ್ಯಾಂಗ್‍ರೇಪ್

    ಮುಂಬೈ: ಮೂವರು ಯುವಕರು ವಿದ್ಯಾರ್ಥಿನಿಯನ್ನು ಅಪಹರಿಸಿ ಆಕೆಯ ಮೇಲೆ ಗ್ಯಾಂಗ್ ರೇಪ್ ಎಸಗಿದ ಪ್ರಕರಣವೊಂದು ದೇಶದ ವಾಣಿಜ್ಯ ನಗರಿ ಮುಂಬೈಯಲ್ಲಿ ದಾಖಲಾಗಿದೆ.

    ಗುರುವಾರ ಬೆಳಗ್ಗೆ 7 ಗಂಟೆಗೆ ಸಂತ್ರಸ್ತೆ ಕಾಲೇಜಿಗೆ ತೆರಳುತ್ತಿದ್ದಾಗ ಯುವಕರು ಆಕೆಯನ್ನು ಕಿಡ್ನಾಪ್ ಮಾಡಿ ಕಾರಿನಲ್ಲಿ ಕುಳ್ಳಿರಿಸಿ ಗ್ಯಾಂಗ್ ರೇಪ್ ಎಸಗಿದ್ದಾರೆ.

    ಗ್ಯಾಂಗ್ ರೇಪ್ ಎಸಗಿದ ಬಳಿಕ ಆಕೆಯನ್ನು ಕಾರಿನಿಂದ ಎಸೆದಿದ್ದಾರೆ. ಕಾಲೇಜಿಗೆ ಹೋಗುತ್ತಿದ್ದ ವೇಳೆ ಹತ್ತಿರವೇ ಕಾರು ನಿಲ್ಲಿಸಿ ನನ್ನನ್ನು ಎಳೆದುಕೊಂಡು ಮೂವರು ಅತ್ಯಾಚಾರ ಎಸಗಿದ್ದಾರೆ ಎಂದು ಯುವತಿ ಶುಕ್ರವಾರ ಪೊಲೀಸರ್ ಠಾಣೆಯಲ್ಲಿ ದೂರು ನೀಡಿದ್ದಾರೆ.

    ಅತ್ಯಾಚಾರ ಮತ್ತು ಅಪಹರಣದ ಅಡಿ ಪ್ರಕರಣ ದಾಖಲಾಗಿದೆ. ಯುವತಿಯನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿದ್ದು, ಫಲಿತಾಂಶಕ್ಕಾಗಿ ಪೊಲೀಸರು ಕಾಯುತ್ತಿದ್ದಾರೆ. ಪೊಲೀಸರು ಇದೂವರೆಗೆ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಯಾರನ್ನು ಬಂಧಿಸಿಲ್ಲ.

  • ಚಲಿಸುತ್ತಿದ್ದ ಕಾರಿನಲ್ಲೇ ಮಹಿಳೆ ಮೇಲೆ ಗ್ಯಾಂಗ್ ರೇಪ್ ಮಾಡಿ ಹೊರಕ್ಕೆ ಎಸೆದ್ರು!

    ಚಲಿಸುತ್ತಿದ್ದ ಕಾರಿನಲ್ಲೇ ಮಹಿಳೆ ಮೇಲೆ ಗ್ಯಾಂಗ್ ರೇಪ್ ಮಾಡಿ ಹೊರಕ್ಕೆ ಎಸೆದ್ರು!

    ಚಂಡೀಗಢ: ಚಲಿಸುತ್ತಿರುವ ಕಾರಿನಲ್ಲಿ ಮಹಿಳೆ ಮೇಲೆ ಮೂವರು ಕಾಮುಕರು ಗ್ಯಾಂಗ್ ರೇಪ್ ಎಸಗಿ ಕಾರಿನಿಂದ ರಸ್ತೆಗೆಸೆದ ಆರೋಪವೊಂದು ಕೇಳಿಬಂದಿದೆ.

    ಈ ಘಟನೆ ಉತ್ತರಪ್ರದೇಶದ ನೊಯ್ಡಾದಲ್ಲಿ ಸೋಮವಾರ ರಾತ್ರಿ ನಡೆದಿದೆ. ಮಹಿಳೆ ಮೂಲತಃ ರಾಜಸ್ತಾನದ ಭರತ್‍ಪುರದವರಾಗಿದ್ದು, ಸಂಬಂಧಿಕರ ಮನೆಗೆ ಬರುತ್ತಿದ್ದ ವೇಳೆ ಈ ಘಟನೆ ಸಂಭವಿಸಿದೆ.

    ಏನಿದು ಪ್ರಕರಣ?: ರಾಜಸ್ಥಾನ ಮೂಲದ ಮಹಿಳೆ ಉತ್ತರಪ್ರದೇಶದ ಸೋಹ್ನಾ ಪ್ರದೇಶದಲ್ಲಿರುವ ತನ್ನ ಸಂಬಂಧಿಕ ಮನೆಗೆ ಕಳೆದ ವಾರ ಬಂದಿದ್ದರು. ಅಂತೆಯೇ ಮಹಿಳೆ ಕಳೆದ ರಾತ್ರಿ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಸಂದರ್ಭದಲ್ಲಿ ಸುಮಾರು 8.30ರ ವೇಳೆಗೆ ಮಾರುತಿ ಸ್ವಿಫ್ಟ್ ಕಾರಿನಲ್ಲಿ ಬಂದ ಕಾಮುಕರು ಚಲಿಸುತ್ತಿದ್ದ ಕಾರಿನಲ್ಲೇ ಗ್ಯಾಂಗ್ ರೇಪ್ ಎಸಗಿದ್ದಾರೆ. ಬಳಿಕ ನೊಯ್ಡಾ ಬಳಿ ಕಾರಿನಿಂದ ರಸ್ತೆಗೆಸೆದು ಪರಾರಿಯಾಗಿದ್ದಾರೆ ಎಂದು ಹೇಳಲಾಗಿದೆ.

    ಮಹಿಳೆ ರಸ್ತೆ ಬದಿಯಲ್ಲಿ ಬಿದ್ದಿರುವುದನ್ನು ಕಂಡ ಸ್ಥಳೀಯರು ಪೊಲೀಸರಿಗೆ ವಿಷಯ ತಿಳಿಸಿದ್ದಾರೆ. ಕೂಡಲೇ ಸ್ಥಳಕ್ಕಾಗಮಿಸಿದ ಪೊಲೀಸರು ಮಹಿಳೆಯನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿದ್ದಾರೆ. ಅಲ್ಲದೇ ಸ್ಥಳೀಯ ಸಿಸಿಟಿವಿ ಕ್ಯಾಮೆರಾಗಳನ್ನು ಪೊಲೀಸರು ಪರಿಶೀಲಿಸುತ್ತಿದ್ದಾರೆ. ಆದ್ರೆ ಈ ಬಗ್ಗೆ ಯಾವುದೇ ಪ್ರಕರಣ ದಾಖಲಾಗಿಲ್ಲ.

    ಪ್ರಕರಣ ಸಂಬಂಧ ಯುವತಿಯ ವೈದ್ಯಕೀಯ ಪರೀಕ್ಷೆ ಈಗಾಗಲೇ ನಡೆದಿದ್ದು, ವರದಿಗಾಗಿ ಪೊಲೀಸರು ಕಾಯುತ್ತಿದ್ದಾರೆ. ವರದಿ ಪೊಲಿಸರ ಕೈ ಸೇರಿದ ಬಳಿಕ ಆರೋಪಿಗಳ ಪತ್ತೆಗೆ ಬಲೆ ಬೀಸಲಿದ್ದಾರೆ ಎಂದು ವರದಿಯಾಗಿದೆ.

    ಚಲಿಸುತ್ತಿರುವ ಕಾರಿನಲ್ಲಿ ಗ್ಯಾಂಗ್ ರೇಪ್ ಮಾಡಿರುವುದು ಇದು ಮೊದಲ ಬಾರಿಯೇನಲ್ಲ. ಕಳೆದ ತಿಂಗಳು ತಾಯಿ ಮತ್ತು ಮಗಳು ಮನೆಗೆ ಆಟೋ ರಿಕ್ಷಾದಲ್ಲಿ ಮನೆಗೆ ತೆರಳುತ್ತಿದ್ದರು. ಮೂರು ಜನ ಕಾಮುಕರು ರಿಕ್ಷಾವನ್ನು ತಡೆದು ಮಗುವನ್ನು ಹೊರಗೆ ಎಸೆದು ಮಹಿಳೆಯ ಮೇಲೆ ಗ್ಯಾಂಗ್ ರೇಪ್ ನಡೆಸಲಾಗಿತ್ತು. ಹಾಗೂ ಕೆಲ ದಿನಗಳ ಹಿಂದೆ ಗುರ್‍ಗಾಂವ್‍ನಲ್ಲಿ 22 ವರ್ಷದ ಯುವತಿಯನ್ನು ಚಲಿಸುತ್ತಿರುವ ಕಾರಿನಲ್ಲಿ ಅತ್ಯಾಚಾರ ಮಾಡಿ ಮನೆಯ ಎದುರು ಎಸೆದು ಹೋಗಿರುವ ಘಟನೆ ನಡೆದಿತ್ತು.