Tag: gang rape

  • 22 ವರ್ಷದ ಯುವತಿ ಮೇಲೆ ಐವರಿಂದ ಸಾಮೂಹಿಕ ಅತ್ಯಾಚಾರ

    22 ವರ್ಷದ ಯುವತಿ ಮೇಲೆ ಐವರಿಂದ ಸಾಮೂಹಿಕ ಅತ್ಯಾಚಾರ

    ಭುವನೇಶ್ವರ: 22 ವರ್ಷದ ಯುವತಿಯನ್ನು ಐವರು ಕಾಮುಕರು ಗ್ಯಾಂಗ್ ರೇಪ್  ಮಾಡಿರುವ ಘಟನೆ ಒಡಿಶಾದ (Odisha) ಮಯೂರ್ಭಂಜ್ ಜಿಲ್ಲೆಯಲ್ಲಿ ನಡೆದಿದೆ.

    ಆ.29 ರಂದು ಸಂಜೆ ಇಬ್ಬರು ಪರಿಚಯಸ್ಥ ವ್ಯಕ್ತಿಗಳು ಕೆಲಸದ ವಿಚಾರವಾಗಿ ಮಾತನಾಡಲು ನನ್ನನ್ನು ಬಂಗಿರಿಪೋಸಿ ಪ್ರದೇಶಕ್ಕೆ ಕರೆಸಿಕೊಂಡಿದ್ದರು. ಬಳಿಕ ಅಲ್ಲಿಂದ ಕಾರಿನಲ್ಲಿ ಕರೆದುಕೊಂಡು ಹೋಗಿದ್ದರು. ಇದನ್ನೂ ಓದಿ: ಚಿನ್ನಯ್ಯ ಈಗ ಡಬಲ್‌ ಗೇಮ್‌ ಆಡುತ್ತಿದ್ದಾನೆ: ಜಯಂತ್‌

    ಬಳಿಕ ಮಾರ್ಗ ಮಧ್ಯೆ ಕಾರಿಗೆ ಇನ್ನುಳಿದ ಮೂವರು ಹತ್ತಿಕೊಂಡಿದ್ದರು. ಉಡಾಲ ಮತ್ತು ಬಾಲಸೋರ್ ಪಟ್ಟಣವನ್ನು ಸಂಪರ್ಕಿಸುವ ನಿರ್ಜನ ಪ್ರದೇಶಕ್ಕೆ ಕರೆದೊಯ್ದು ಅತ್ಯಾಚಾರವೆಸಗಿ, ಅಲ್ಲೇ ಬಿಟ್ಟು ಹೋಗಿದ್ದರು ಎಂದು ಸಂತ್ರಸ್ಥೆಯು ದೂರಿನಲ್ಲಿ ಉಲ್ಲೇಖಿಸಿದ್ದಾರೆ. ಇದನ್ನೂ ಓದಿ: ಮಹಾರಾಷ್ಟ್ರ | ಮತ್ತೊಬ್ಬಳನ್ನು ಮದುವೆಯಾಗುವ ಆಸೆಗೆ ಪ್ರೇಯಸಿಯನ್ನೇ ಕೊಂದ ಪ್ರಿಯಕರ

    ಸಂತ್ರಸ್ಥೆಯ ಹೇಳಿಕೆಯ ಆಧಾರದ ಮೇಲೆ ನಾವು ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ನಡೆಯುತ್ತಿದೆ. ಈವರೆಗೆ ಇಬ್ಬರು ಆರೋಪಿಗಳು ಬಂಧಿಸಲಾಗಿದೆ. ಇನ್ನುಳಿದ ಮೂವರಿಗಾಗಿ ಹುಡುಕಾಟ ನಡೆಯುತ್ತಿದೆ ಎಂದು ಉಡಾಲ ಠಾಣೆಯ (Udala police) ಪೊಲೀಸ್ ಅಧಿಕಾರಿ ಹೃಷಿಕೇಶ್ ನಾಯಕ್ ತಿಳಿಸಿದ್ದಾರೆ.

  • ಯುಪಿ| ಅಂಗವಿಕಲ ಮಹಿಳೆ ಮೇಲೆ ಗ್ಯಾಂಗ್‌ ರೇಪ್‌; 24 ಗಂಟೆಯೊಳಗೆ ಆರೋಪಿಗಳ ಕಾಲಿಗೆ ಗುಂಡೇಟು

    ಯುಪಿ| ಅಂಗವಿಕಲ ಮಹಿಳೆ ಮೇಲೆ ಗ್ಯಾಂಗ್‌ ರೇಪ್‌; 24 ಗಂಟೆಯೊಳಗೆ ಆರೋಪಿಗಳ ಕಾಲಿಗೆ ಗುಂಡೇಟು

    ಲಕ್ನೋ: ಕಿವುಡ ಮತ್ತು ಮೂಕ ಮಹಿಳೆಯನ್ನು ಅಪಹರಿಸಿ ಸಾಮೂಹಿಕ ಅತ್ಯಾಚಾರ ನಡೆಸಿದ ದುರುಳರಿಗೆ 24 ಗಂಟೆಯೊಳಗೆ ಪೊಲೀಸರು ಗುಂಡೇಟು ನೀಡಿದ್ದಾರೆ.

    ಉತ್ತರ ಪ್ರದೇಶದಲ್ಲಿ ಸೋಮವಾರ ಮನೆಗೆ ಹಿಂದಿರುಗುತ್ತಿದ್ದಾಗ ವಿಶೇಷಚೇತನ ಮಹಿಳೆಯನ್ನು ಅಪಹರಿಸಿ ಸಾಮೂಹಿಕ ಅತ್ಯಾಚಾರ ನಡೆಸಲಾಗಿತ್ತು. ಜಿಲ್ಲೆಯ ಉನ್ನತ ಅಧಿಕಾರಿಗಳ ಮನೆಗಳಿಂದ ಕೆಲವು ಮೀಟರ್ ದೂರದಲ್ಲಿ ಈ ಘಟನೆ ನಡೆದಿದ್ದು, ಅಲ್ಲಿ ಸಿಸಿಟಿವಿ ಕ್ಯಾಮೆರಾಗಳು ಆಫ್ ಆಗಿರುವುದು ಕಂಡುಬಂದಿದೆ. ಘಟನೆ ನಡೆದ 24 ಗಂಟೆಗಳ ಒಳಗೆ ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ.

    ಮಹಿಳೆ ತನ್ನ ಮಾವನ ಮನೆಯಿಂದ ಬಲರಾಂಪುರ ಜಿಲ್ಲೆಯ ಮನೆಗೆ ಹೋಗುತ್ತಿದ್ದಾಗ, ಆಕೆಯನ್ನು ಅಪಹರಿಸಿ ನಿರ್ಜನ ಪ್ರದೇಶಕ್ಕೆ ಎಳೆದೊಯ್ದು ಇಬ್ಬರು ಪುರುಷರು ಅತ್ಯಾಚಾರ ಎಸಗಿದ್ದಾರೆ. ಮೂಕಿಯಾಗಿದ್ದರಿಂದ ಮಹಿಳೆ ಸಹಾಯಕ್ಕೆ ಕೂಗಿಕೊಳ್ಳಲು ಸಾಧ್ಯವಾಗಲಿಲ್ಲ.

    ಒಂದು ಗಂಟೆಯ ನಂತರವೂ ಮಹಿಳೆ ಮನೆಗೆ ಹಿಂತಿರುಗದಿದ್ದಾಗ, ಕುಟುಂಬದವರು ಆಕೆಯನ್ನು ಹುಡುಕಲು ಪ್ರಾರಂಭಿಸಿದಾಗ ಪೊಲೀಸ್ ಠಾಣೆಯ ಬಳಿಯ ಹೊಲದಲ್ಲಿ ಅನುಮಾನಾಸ್ಪದ ಸ್ಥಿತಿಯಲ್ಲಿ ಆಕೆ ಪತ್ತೆಯಾಗಿದ್ದಾಳೆ. ಮಹಿಳೆಯನ್ನು ಜಿಲ್ಲಾ ಮಹಿಳಾ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ.

    ಮಹಿಳೆಯ ಸಹೋದರ ತನ್ನ ಸಹೋದರಿಯ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿ ದೂರು ದಾಖಲಿಸಿದ ನಂತರ, ಪೊಲೀಸರು ತನಿಖೆ ಆರಂಭಿಸಿ 24 ಗಂಟೆಗಳ ಒಳಗೆ ಇಬ್ಬರು ಆರೋಪಿಗಳಾದ ಅಂಕುರ್ ವರ್ಮಾ ಮತ್ತು ಹರ್ಷಿತ್ ಪಾಂಡೆ ಅವರನ್ನು ಬಂಧಿಸಿದ್ದಾರೆ.

    ಉತ್ತರ ಪ್ರದೇಶದಲ್ಲಿ ಆಪರೇಷನ್ ತ್ರಿನೇತ್ರ ಅಡಿಯಲ್ಲಿ, ಕಣ್ಗಾವಲು ಹೆಚ್ಚಿಸಲು, ಕಾನೂನು ಮತ್ತು ಸುವ್ಯವಸ್ಥೆಯನ್ನು ಸುಧಾರಿಸಲು ಜಿಲ್ಲೆಗಳಾದ್ಯಂತ ನೂರಾರು ಸಿಸಿಟಿವಿ ಕ್ಯಾಮೆರಾಗಳನ್ನು ಸ್ಥಾಪಿಸಲಾಗಿದೆ. ಈ ಸಿಸಿಟಿವಿ ಕ್ಯಾಮೆರಾಗಳು ಸಾರ್ವಜನಿಕ ಸ್ಥಳಗಳನ್ನು ಮೇಲ್ವಿಚಾರಣೆ ಮಾಡುತ್ತಿವೆ.

  • Delhi | ಈಜು ತರಬೇತಿಗೆ ಹೋಗಿದ್ದ ವೇಳೆ ಇಬ್ಬರು ಬಾಲಕಿಯರ ಮೇಲೆ ಗ್ಯಾಂಗ್ ರೇಪ್

    Delhi | ಈಜು ತರಬೇತಿಗೆ ಹೋಗಿದ್ದ ವೇಳೆ ಇಬ್ಬರು ಬಾಲಕಿಯರ ಮೇಲೆ ಗ್ಯಾಂಗ್ ರೇಪ್

    ನವದೆಹಲಿ: ಈಜು ತರಬೇತಿಗೆ ಹೋಗಿದ್ದ ವೇಳೆ ಇಬ್ಬರು ಬಾಲಕಿಯರ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಿದ ಘಟನೆ ದೆಹಲಿಯ (Delhi) ನರೇಲಾದಲ್ಲಿ (Narela) ನಡೆದಿದೆ.

    ಆಗಸ್ಟ್ 7ರಂದು ಲಾಂಪೂರ್ (Lampur) ಬಸ್ ನಿಲ್ದಾಣದ ಬಳಿಯ ಈಜುಕೊಳದಲ್ಲಿ (Swimming Pool) ಈ ಘಟನೆ ನಡೆದಿದೆ. ಆಗಸ್ಟ್ 8ರಂದು ಬಾಲಕಿಯ ತಾಯಿ ನರೇಲಾ ಪೊಲೀಸ್ ಠಾಣೆಗೆ ಬಂದು ಈಜು ತರಬೇತಿಗೆ ತೆರಳಿದ್ದ ವೇಳೆ ತನ್ನ ಮಗಳು ಮತ್ತು ಇನ್ನೊಬ್ಬ ಹುಡುಗಿಯ ಮೇಲೆ ಸಾಮೂಹಿಕ ಅತ್ಯಾಚಾರ ನಡೆದಿದೆ ಎಂದು ಆರೋಪಿಸಿದ್ದಾರೆ. ಇದನ್ನೂ ಓದಿ: Karwar | ಕಾಂಗ್ರೆಸ್ ಶಾಸಕ ಸತೀಶ್ ಸೈಲ್ ಮನೆ ಮೇಲೆ ಇ.ಡಿ ದಾಳಿ

    ತಾಯಿಯ ಹೇಳಿಕೆಯನ್ನು ಆಧರಿಸಿ ಆಗಸ್ಟ್ 9ರಂದು ಭಾರತೀಯ ನ್ಯಾಯ ಸಂಹಿತಾ (ಬಿಎನ್‌ಎಸ್) ಸೆಕ್ಷನ್ 70 (2) (ಸಾಮೂಹಿಕ ಅತ್ಯಾಚಾರ), 127 (2) ಮತ್ತು 351 (ಕ್ರಿಮಿನಲ್ ಬೆದರಿಕೆ) ಮತ್ತು ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ (ಪೋಕ್ಸೊ) ಕಾಯ್ದೆಯ ಸೆಕ್ಷನ್‌ಗಳ ಅಡಿಯಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಇನ್ನು ಸಂತ್ರಸ್ತ ಬಾಲಕಿಯರು ಬಿಎನ್‌ಎಸ್‌ಎಸ್ ಸೆಕ್ಷನ್ 183ರ ಅಡಿಯಲ್ಲಿ ಮ್ಯಾಜಿಸ್ಟ್ರೇಟ್ ಮುಂದೆ ತಮ್ಮ ಹೇಳಿಕೆಗಳನ್ನು ದಾಖಲಿಸಿದ್ದಾರೆ. ಇದನ್ನೂ ಓದಿ: ಮಾಜಿ ಐಜಿಪಿ ಓಂ ಪ್ರಕಾಶ್ ಹತ್ಯೆಯಲ್ಲಿ ಮಗಳ ಪಾತ್ರವಿಲ್ಲ – ಕೋರ್ಟ್‌ಗೆ ಚಾರ್ಜ್‌ಶೀಟ್‌ ಸಲ್ಲಿಕೆ

    ಘಟನೆ ಸಂಬಂಧ ಬಿಹಾರದ ಸಮಷ್ಟಿಪುರ ಜಿಲ್ಲೆಯ ನಿವಾಸಿ ಅನಿಲ್ ಕುಮಾರ್ (37) ಮತ್ತು ಉತ್ತರ ಪ್ರದೇಶದ ಅಜಂಗಢ ಜಿಲ್ಲೆಯ ಮುನಿಲ್ ಕುಮಾರ್ (24) ಎಂಬ ಆರೋಪಿಗಳನ್ನು ಬಂಧಿಸಲಾಗಿದೆ. ತನಿಖೆಯ ಸಮಯದಲ್ಲಿ, ಪೊಲೀಸರು ಆರೋಪಿಯ ಸೂಚನೆಯ ಮೇರೆಗೆ ದಿಂಬಿನ ಕವರ್, ಬೆಡ್‌ಶೀಟ್ ಮತ್ತು ಡಿಜಿಟಲ್ ವಿಡಿಯೋ ರೆಕಾರ್ಡರ್ (ಡಿವಿಆರ್) ಸೇರಿದಂತೆ ಇತರ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ. ಅಲ್ಲದೇ ಇಬ್ಬರೂ ಆರೋಪಿಗಳ ಮೇಲೆ ಯಾವುದೇ ಕ್ರಿಮಿನಲ್ ದಾಖಲೆಗಳಿಲ್ಲ. ಈ ಕುರಿತು ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದು ಪೊಲೀಸ್ ಅಧಿಕಾರಿ ಮಾಹಿತಿ ನೀಡಿದ್ದಾರೆ. ಇದನ್ನೂ ಓದಿ: ರಾಜ್ಯಾದ್ಯಂತ ಮುಂದಿನ ಒಂದು ವಾರ ಭಾರೀ ಮಳೆ – ಎಲ್ಲಾ ಜಿಲ್ಲೆಗೂ ಯೆಲ್ಲೋ ಅಲರ್ಟ್

  • ಬುದ್ಧಿಮಾಂದ್ಯ ಯುವತಿ ಮೇಲೆ ಗ್ಯಾಂಗ್ ರೇಪ್ – ವೀಡಿಯೋ ಮಾಡಿ ಯುವತಿಯ ಸಹೋದರನಿಗೆ ಕಳುಹಿಸಿದ ಕೀಚಕರು

    ಬುದ್ಧಿಮಾಂದ್ಯ ಯುವತಿ ಮೇಲೆ ಗ್ಯಾಂಗ್ ರೇಪ್ – ವೀಡಿಯೋ ಮಾಡಿ ಯುವತಿಯ ಸಹೋದರನಿಗೆ ಕಳುಹಿಸಿದ ಕೀಚಕರು

    ಹಾಸನ: ಬುದ್ಧಿಮಾಂದ್ಯ ಯುವತಿಯ (Demented Young Woman) ಮೇಲೆ ದುರುಳರು ಸಾಮೂಹಿಕ ಅತ್ಯಾಚಾರವೆಸಗಿರುವ (Gang Rape) ಘಟನೆ ಹಾಸನದಲ್ಲಿ (Hassan) ನಡೆದಿದೆ.

    ಯುವತಿಯ ಮೇಲೆ ದುಷ್ಕರ್ಮಿಗಳು ಸಾಮೂಹಿಕ ಅತ್ಯಾಚಾರವೆಸಗಿದ್ದಲ್ಲದೇ ಅತ್ಯಾಚಾರದ ವೀಡಿಯೋ ಮಾಡಿ ಯುವತಿ ಸಹೋದರನಿಗೆ ಕಳುಹಿಸಿದ್ದಾರೆ. ವೀಡಿಯೋ ನೋಡಿದಾಗ ತನ್ನ ಅಕ್ಕನ ಮೇಲೆ ಸಾಮೂಹಿಕ ಅತ್ಯಾಚಾರ ನಡೆದಿರುವುದು ಬೆಳಕಿಗೆ ಬಂದಿದೆ. ಕೂಡಲೇ ಸಂತ್ರಸ್ತೆ ಸಹೋದರ ಅತ್ಯಾಚಾರದ ಕುರಿತು ಪೊಲೀಸರಿಗೆ ದೂರು ನೀಡಿದ್ದಾನೆ. ಇದನ್ನೂ ಓದಿ: ಭಾನುವಾರ ಯೆಲ್ಲೋ ಮೆಟ್ರೋ ಮಾರ್ಗ ಉದ್ಘಾಟನೆ – ಬೆಂಗಳೂರಿನ ಕೆಲವು ರಸ್ತೆಗಳಲ್ಲಿ ಸಂಚಾರ ಬದಲಾವಣೆ

    ವೀಡಿಯೋ ಕಳುಹಿಸಿ ನಂತರ ದುರುಳರು ಡಿಲೀಟ್ ಮಾಡಿದ್ದರು. ಆದರೆ ಅಷ್ಟುಹೊತ್ತಿಗಾಗಲೇ ಸಂತ್ರಸ್ತೆ ಸಹೋದರ ವೀಡಿಯೋವನ್ನು ತನ್ನ ಸ್ನೇಹಿತನ ಮೊಬೈಲ್‌ಗೆ ಫಾರ್ವರ್ಡ್ ಮಾಡಿದ್ದ. ಘಟನೆ ಸಂಬಂಧ ಅಬ್ದುಲ್ ಅಫ್ತಾಬ್, ರಾಜಿಕ್ ಪಾಷ, ಉಮ್ರಾನ್ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಇದನ್ನೂ ಓದಿ: ಬೆಳಗಾವಿ ಜಿಲ್ಲೆಯಾದ್ಯಂತ ಧಾರಾಕಾರ ಮಳೆ – ಸವದತ್ತಿ ಯಲ್ಲಮ್ಮ ದೇವಸ್ಥಾನಕ್ಕೆ ಜಲದಿಗ್ಬಂಧನ

    ದ್ಯ ಅತ್ಯಾಚಾರ ಎಲ್ಲಿ, ಯಾವಾಗ ನಡೆದಿದೆ ಎಂಬ ಬಗ್ಗೆ ಪೊಲೀಸರು ತನಿಖೆ ಕೈಗೊಂಡಿದ್ದು, ಆರೋಪಿಗಳಿಗಾಗಿ ಶೋಧಕಾರ್ಯ ನಡೆಸುತ್ತಿದ್ದಾರೆ. ಪೆನ್‌ಷನ್‌ಮೊಹಲ್ಲಾ ಪೊಲೀಸ್ ಠಾಣೆ (Pension Mohalla Police Station) ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಇದನ್ನೂ ಓದಿ: ಮೋದಿ-ಟ್ರಂಪ್‌ ಫ್ರೆಂಡ್ಸ್‌, ಆದ್ರೂ ಭಾರತ-ಅಮೆರಿಕ ಮುಸುಕಿನ ಗುದ್ದಾಟ; ಯುಎಸ್‌ ಜೊತೆಗಿನ ರಾಜತಾಂತ್ರಿಕ ಸವಾಲು ಹೊಸದೇನಲ್ಲ!

  • ಹರಿಯಾಣದ ರೈಲಿನಲ್ಲಿ ಗ್ಯಾಂಗ್‌ ರೇಪ್ -‌ ಅತ್ಯಾಚಾರ ಬಳಿಕ ರೈಲ್ವೆ ಹಳಿಗಳ ಮೇಲೆ ಮಹಿಳೆ ಎಸೆದ ಪಾಪಿಗಳು

    ಹರಿಯಾಣದ ರೈಲಿನಲ್ಲಿ ಗ್ಯಾಂಗ್‌ ರೇಪ್ -‌ ಅತ್ಯಾಚಾರ ಬಳಿಕ ರೈಲ್ವೆ ಹಳಿಗಳ ಮೇಲೆ ಮಹಿಳೆ ಎಸೆದ ಪಾಪಿಗಳು

    ಚಂಡೀಗಢ: ಹರಿಯಾಣ (Haryana) ರೈಲಿನಲ್ಲಿ ಮಹಿಳೆ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಿ, ಆಕೆಯನ್ನು ರೈಲ್ವೆ ಹಳಿಗಳ ಮೇಲೆ ಎಸೆದ ಘಟನೆ ನಡೆದಿದೆ. ರೈಲು ಹರಿದು ಮಹಿಳೆ ಕಾಲು ಕಟ್‌ ಆಗಿದೆ.

    ಪತಿಯೊಂದಿಗೆ ಜಗಳವಾಡಿ ಜೂ.24 ರಂದು ಮಹಿಳೆ ನಾಪತ್ತೆಯಾಗಿದ್ದರು. ಹರಿಯಾಣದ ಪಾಣಿಪತ್ ರೈಲ್ವೆ ‌ನಿಲ್ದಾಣದಲ್ಲಿ ಖಾಲಿ ಬೋಗಿಗೆ ಕರೆದೊಯ್ದು ಆಕೆಯ ಮೇಲೆ ಮೂವರು ವ್ಯಕ್ತಿಗಳು ಸಾಮೂಹಿಕ ಅತ್ಯಾಚಾರ ಎಸಗಿದ್ದಾರೆ. ಇದನ್ನೂ ಓದಿ: ಹಿಮಾಚಲದಲ್ಲಿ ಮೇಘಸ್ಫೋಟ| ಮಧ್ಯರಾತ್ರಿ ಬೊಗಳಿ 67 ಜನರ ಪ್ರಾಣ ಉಳಿಸಿದ ಶ್ವಾನ

    ಅತ್ಯಾಚಾರ ಬಳಿಕ ಸೋನಿಪತ್‌ನಲ್ಲಿ ಹಳಿಗಳ ಮೇಲೆ ಎಸೆದಿದ್ದು, ಮಹಿಳೆ ಕಾಲು ಕಳೆದುಕೊಂಡಿದ್ದಾಳೆ. ರೈಲ್ವೆ ಹಳಿಗಳ ಮೇಲೆ ಮಹಿಳೆ ಅಳುವುದನ್ನ ನೋಡಿ ಸ್ಥಳಕ್ಕೆ ಧಾವಿಸಿದ ಸ್ಥಳೀಯರು, ರೈಲ್ವೆ ಪೊಲೀಸರಿಗೆ ಮಾಹಿತಿ ನೀಡಿದರು. ಬಳಿಕ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿದ್ದಾರೆ.

    ರೈಲ್ವೆ ನಿಲ್ದಾಣದಲ್ಲಿ ಸಿಸಿಟಿವಿಗಳ ಪರಿಶೀಲನೆ ನಡೆಸಲಾಗಿದೆ. ಆರೋಪಿಗಳಿಗಾಗಿ ರೈಲ್ವೆ ಪೊಲೀಸರ ಶೋಧಕಾರ್ಯ ಕೈಗೊಂಡಿದ್ದಾರೆ. ಅತ್ಯಾಚಾರ ಬಗ್ಗೆ ಪೊಲೀಸರ ಬಳಿ ಸಂತ್ರಸ್ತೆ ಅಳಲು ತೋಡಿಕೊಂಡಿದ್ದಾರೆ. ಈ ಹಿಂದೆಯೂ ಮನೆಯಿಂದ ನಾಪತ್ತೆಯಾಗಿ ಮಹಿಳೆ ಬಳಿಕ ಮನೆಗೆ ವಾಪಸ್ ಬಂದಿದ್ದರು. ಇದನ್ನೂ ಓದಿ: ಬಿಜೆಪಿ ನಾಯಕ ಗೋಪಾಲ್ ಖೇಮ್ಕಾ ಹತ್ಯೆ – ಪ್ರಮುಖ ಆರೋಪಿ ಎನ್‌ಕೌಂಟರ್‌ಗೆ ಬಲಿ

  • ಕೋಲ್ಕತ್ತಾ ಗ್ಯಾಂಗ್‌ ರೇಪ್ ಕೇಸ್ – ವಿದ್ಯಾರ್ಥಿನಿಯನ್ನು ಎಳೆದೊಯ್ಯುತ್ತಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆ

    ಕೋಲ್ಕತ್ತಾ ಗ್ಯಾಂಗ್‌ ರೇಪ್ ಕೇಸ್ – ವಿದ್ಯಾರ್ಥಿನಿಯನ್ನು ಎಳೆದೊಯ್ಯುತ್ತಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆ

    ಕೋಲ್ಕತ್ತಾ: ಕಾನೂನು ವಿದ್ಯಾರ್ಥಿನಿಯ (Law Student) ಮೇಲೆ ಸಾಮೂಹಿಕ ಅತ್ಯಾಚಾರ (Gang Rape) ಪ್ರಕರಣಕ್ಕೆ ಸಂಬಂಧಿಸಿದಂತೆ ಘಟನೆಯ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.

    ವಿದ್ಯಾರ್ಥಿನಿಯನ್ನು ಎಳೆದೊಯ್ಯುತ್ತಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಆರೋಪಿಗಳು ಸಂತ್ರಸ್ತೆಯನ್ನು ಕಾಲೇಜಿನೊಳಗೆ ಎಳೆದೊಯ್ಯುತ್ತಿರುವುದು ದೃಶ್ಯದಲ್ಲಿ ಕಂಡುಬಂದಿದೆ. ವಿದ್ಯಾರ್ಥಿನಿಯನ್ನು ಇಬ್ಬರು ಆರೋಪಿಗಳು ಕಾಲೇಜು ಗೇಟ್‌ನಿಂದ ಕಾಲೇಜು ಕ್ಯಾಂಪಸ್‌ನೊಳಗೆ ಎಳೆದುಕೊಂಡು ಹೋಗುತ್ತಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಇದನ್ನೂ ಓದಿ: ಜುಲೈ 3ರಿಂದ ಅಮರನಾಥ ಯಾತ್ರೆ ಆರಂಭ – ಹೆಜ್ಜೆ ಹೆಜ್ಜೆಗೂ ಪೊಲೀಸರ ನಿಗಾ

    ಪ್ರಮುಖ ಆರೋಪಿ ಮನೋಜಿತ್ ಮಿಶ್ರಾ ವಿದ್ಯಾರ್ಥಿನಿಯನ್ನು ಬಲವಂತವಾಗಿ ಕಾವಲುಗಾರರ ಕೋಣೆಗೆ ಕರೆದೊಯ್ಯಲು ಇತರ ಇಬ್ಬರು ಆರೋಪಿಗಳಿಗೆ ಹೇಳಿದ್ದಾನೆ. ಅದರಂತೆ ಇಬ್ಬರು ಸಂತ್ರಸ್ತೆಯನ್ನು ಎಳೆದೊಯ್ದಿದ್ದಾರೆ. ಸಿಸಿಟಿವಿ ದೃಶ್ಯಾವಳಿಗಳು ಸಂತ್ರಸ್ತೆಯ ಆರೋಪಗಳನ್ನು ದೃಢಪಡಿಸುತ್ತವೆ. ಮೂವರು ಆರೋಪಿಗಳು, ಭದ್ರತಾ ಸಿಬ್ಬಂದಿ ಮತ್ತು ಸಂತ್ರಸ್ತೆಯನ್ನು ಸಿಸಿಟಿವಿ ದೃಶ್ಯದಲ್ಲಿ ಕಾಣಬಹುದಾಗಿದೆ. ಸದ್ಯ ಪಶ್ಚಿಮ ಬಂಗಾಳ ಪೊಲೀಸರು ದೃಶ್ಯಗಳನ್ನು ಪರಿಶೀಲಿಸುತ್ತಿದ್ದಾರೆ. ಇದನ್ನೂ ಓದಿ: ಚಾರ್‌ಧಾಮ್ ಯಾತ್ರೆಗಿದ್ದ ನಿರ್ಬಂಧ ತೆರವು

    ಕಸ್ಬಾ ಪ್ರದೇಶದಲ್ಲಿ ಕಾನೂನು ವಿದ್ಯಾರ್ಥಿನಿಯ ಮೇಲೆ ಸಾಮೂಹಿಕ ಅತ್ಯಾಚಾರ ನಡೆದಿತ್ತು. ಈ ಪ್ರಕರಣದಲ್ಲಿ ಸೆಕ್ಯೂರಿಟಿ ಗಾರ್ಡ್ ಸೇರಿದಂತೆ ನಾಲ್ವರನ್ನು ಬಂಧಿಸಲಾಗಿದೆ. ಪ್ರಮುಖ ಆರೋಪಿಯ ವಿವಾಹ ಪ್ರಸ್ತಾಪವನ್ನು ತಿರಸ್ಕರಿಸಿದ ನಂತರ ಕೋಲ್ಕತ್ತಾ ಕಾನೂನು ಕಾಲೇಜಿನೊಳಗೆ ತನ್ನ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಲಾಗಿದೆ ಎಂದು ಪೊಲೀಸರ ಮುಂದೆ ಸಂತ್ರಸ್ತೆ ಹೇಳಿಕೆ ದಾಖಲಿಸಿದ್ದಾಳೆ. ಇದನ್ನೂ ಓದಿ: ಕಸದ ಲಾರಿಯಲ್ಲಿ ಶವ ಪತ್ತೆ | ದಿನಾ ಕುಡಿದು ಬಂದು ರಂಪಾಟ ಮಾಡಿದ್ದಕ್ಕೆ ಮಹಿಳೆಯ ಕೊಲೆ!

  • ಬೆಳಗಾವಿಯಲ್ಲಿ ಅಪ್ರಾಪ್ತೆಯ ಮೇಲೆ ಗ್ಯಾಂಗ್ ರೇಪ್| ಐವರನ್ನು ಬಂಧಿಸಿದ್ದೇವೆ: ಪರಮೇಶ್ವರ್‌

    ಬೆಳಗಾವಿಯಲ್ಲಿ ಅಪ್ರಾಪ್ತೆಯ ಮೇಲೆ ಗ್ಯಾಂಗ್ ರೇಪ್| ಐವರನ್ನು ಬಂಧಿಸಿದ್ದೇವೆ: ಪರಮೇಶ್ವರ್‌

    ಬೆಂಗಳೂರು: ಬೆಳಗಾವಿಯಲ್ಲಿ ನಡೆದ ಗ್ಯಾಂಗ್ ರೇಪ್ (Belagavi Minor Gang Rape Case) ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ 5 ಜನರನ್ನು ಬಂಧನ ಮಾಡಲಾಗಿದೆ ಎಂದು ಗೃಹ ಸಚಿವ ಪರಮೇಶ್ವರ್ (Parameshwar) ತಿಳಿಸಿದ್ದಾರೆ.

    ಘಟನೆ ಬಗ್ಗೆ ಬೆಂಗಳೂರಿನಲ್ಲಿ ಪ್ರತಿಕ್ರಿಯೆ ನೀಡಿದ ಅವರು, ಬೆಳಗಾವಿಯಲ್ಲಿ ಗ್ಯಾಂಗ್ ರೇಪ್ ಪ್ರಕರಣ ಬಹಳ ಹಿಂದೆ ನಡೆದಿದೆ. ಡಿಸೆಂಬರ್, ಜನವರಿಯಲ್ಲಿ ನಡೆದಿರುವ ಘಟನೆಯ ಬಗ್ಗೆ ಯಾರು ದೂರು ಕೊಟ್ಟಿರಲಿಲ್ಲ ಎಂದು ತಿಳಿಸಿದರು. ಇದನ್ನೂ ಓದಿ: ಪ್ರಚೋದನಕಾರಿ ಭಾಷಣ – ಕಲ್ಲಡ್ಕ ಪ್ರಭಾಕರ ಭಟ್‌ ವಿರುದ್ಧ ಕೇಸ್‌ ದಾಖಲು

     

    ಈಗ ದೂರು ನೀಡಿದ್ದು ದೂರು ಆಧರಿಸಿ ಈಗಾಗಲೇ ಐದು ಜನರನ್ನ ಬಂಧನ ಮಾಡಲಾಗಿದೆ. ಬೆಳಗಾವಿ ಕಮಿಷನರ್‌ಗೆ ಕ್ರಮಕ್ಕೆ ಸೂಚನೆ ನೀಡಿದ್ದೇನೆ ಎಂದು ತಿಳಿಸಿದರು. ಇದನ್ನೂ ಓದಿ: ಕೊಹ್ಲಿ ಮಾಲೀಕತ್ವದ ಬೆಂಗ್ಳೂರು ಪಬ್ ವಿರುದ್ಧ ಮತ್ತೊಂದು ಎಫ್‌ಐಆರ್

    ಬಾಲಕಿ ಮೇಲೆ ಅತ್ಯಾಚಾರ ಎಸಗಿದ ಆರೋಪದಡಿ ಎಪಿಎಂಸಿ ಠಾಣೆಯಲ್ಲಿ 6 ಮಂದಿ ವಿರುದ್ಧ ಶನಿವಾರ ಎಫ್‌ಐಆರ್‌ ದಾಖಲಾಗಿತ್ತು. ಆರಂಭದಲ್ಲಿ ಒಬ್ಬನು ಬಾಲಕಿಯನ್ನು ಪರಿಚಯಿಸಿಕೊಂಡು, ಸ್ನೇಹ ಬೆಳೆಸಿದ್ದ. ಬಳಿಕ ಆತ ಮತ್ತು ಸ್ನೇಹಿತರು 2024ರ ಡಿಸೆಂಬರ್‌ನಲ್ಲಿ ಪುಸಲಾಯಿಸಿಕೊಂಡು ಹೋಗಿ ಅತ್ಯಾಚಾರ ಎಸಗಿದ್ದರು. ಅತ್ಯಾಚಾರದ ದೃಶ್ಯವನ್ನು ಆರೋಪಿಗಳು ವಿಡಿಯೊ ರೆಕಾರ್ಡ್ ಮಾಡಿದ್ದಾರೆ. ಅದನ್ನೇ ತೋರಿಸಿ ಬ್ಲ್ಯಾಕ್‌ಮೇಲ್‌ ಮಾಡಿ, 2025ರ ಜನವರಿಯಲ್ಲಿ ಮತ್ತೆ ಮೂವರು ಅತ್ಯಾಚಾರ ಮಾಡಿದ್ದಾರೆ. ಬೇರೆ ಬೇರೆ ಸ್ಥಳಗಳಲ್ಲಿ ಅತ್ಯಾಚಾರ ಮಾಡಲಾಗಿದ್ದು, ಆರೋಪಿಗಳಿಗೆ ಕಠಿಣ ಶಿಕ್ಷೆ ವಿಧಿಸಲು ಪ್ರಯತ್ನಿಸಲಾಗುವುದು ಎಂದು ಬೆಳಗಾವಿ ನಗರ ಪೊಲೀಸ್‌ ಕಮಿಷನರ್‌ ಭೂಷಣ್‌ ಗುಲಾಬರಾವ್‌ ಬೊರಸೆ ಹೇಳಿದರು.

  • ಕರ್ನಾಟಕದ ವಿದ್ಯಾರ್ಥಿನಿ ಮೇಲೆ ಮಹಾರಾಷ್ಟ್ರದಲ್ಲಿ ಗ್ಯಾಂಗ್ ರೇಪ್

    ಕರ್ನಾಟಕದ ವಿದ್ಯಾರ್ಥಿನಿ ಮೇಲೆ ಮಹಾರಾಷ್ಟ್ರದಲ್ಲಿ ಗ್ಯಾಂಗ್ ರೇಪ್

    – ಮಹಾರಾಷ್ಟ್ರದ ಸಾಂಗ್ಲಿಯಲ್ಲಿ ಘಟನೆ
    – ಮತ್ತು ಬರುವ ಔಷಧಿ ಬೆರೆಸಿ ಪಾನೀಯ ನೀಡಿದ್ದ ಕಿರಾತಕರು

    ಬೆಳಗಾವಿ: ಮಹಾರಾಷ್ಟ್ರದ ಸಾಂಗ್ಲಿಯಲ್ಲಿ ಬೆಳಗಾವಿ ಮೂಲದ ವೈದ್ಯಕೀಯ ವಿದ್ಯಾರ್ಥಿನಿ ಮೇಲೆ ಸ್ನೇಹಿತರೇ ಸಾಮೂಹಿಕ ಅತ್ಯಾಚಾರ ನಡೆಸಿರುವ ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ.

    ಮೇ 20 ರಂದು ಸ್ನೇಹಿತರ ಜೊತೆಗೆ ರಾತ್ರಿ ಸಿನಿಮಾ ನೋಡಲು ಯುವತಿ ಹೋಗಿದ್ದಳು. ಸಿನಿಮಾ ಮುಗಿಸಿ ವಾಪಸ್ ಸ್ನೇಹಿತರ ಪ್ಲ್ಯಾಟ್‌ಗೆ ಹೋಗಿದ್ದಳು. ಈ ವೇಳೆ ಯುವತಿಗೆ ಪಾನೀಯದಲ್ಲಿ ನಿದ್ರೆ ಮಾತ್ರೆ ಹಾಕಿ ಬಳಿಕ ಅತ್ಯಾಚಾರ ನಡೆದಿದೆ.

    ಬೆಳಗ್ಗೆ ಎದ್ದ ಬಳಿಕ ಅತ್ಯಾಚಾರ ಆಗಿದ್ದರ ಬಗ್ಗೆ ಬೆಳಕಿಗೆ ಬಂದಿದೆ. ಕೂಡಲೇ ಯುವತಿ ಕುಟುಂಬಸ್ಥರ ಗಮನಕ್ಕೆ ತಂದಿದ್ದಾಳೆ. ಸಾಂಗ್ಲಿಯ ವಿಶ್ರಾಂಬಾಗ್ ಪೊಲೀಸ್ ಠಾಣೆಯಲ್ಲಿ ಸಂತ್ರಸ್ತೆ ದೂರು ನೀಡಿದ್ದಳು. ಪ್ರಕರಣ ದಾಖಲಿಸಿಕೊಂಡು ಪೊಲೀಸರು ಮೂವರನ್ನ ಬಂಧಿಸಿದ್ದಾರೆ.

    ಸೊಲ್ಲಾಪುರದ ವಿನಯ್ ಪಾಟೀಲ್ (22), ಪುಣೆಯ ಸರ್ವಜ್ಞ ಗಾಯಕವಾಡ (22), ಸಾಂಗ್ಲಿಯ ತನ್ಮಯ್ ಪೇಡ್ನೆಕರ್ (21) ಬಂಧನ‌ ಆಗಿದೆ. ನ್ಯಾಯಾಲಯವು ಆರೋಪಿಗಳನ್ನ ಆರು ದಿನ ಪೊಲೀಸ್ ಕಸ್ಟಡಿಗೆ ನೀಡಿದೆ.

  • ರೆಸಾರ್ಟ್‌ನಲ್ಲಿ ಅಪ್ರಾಪ್ತೆಯ ಮೇಲೆ ಗ್ಯಾಂಗ್‌ ರೇಪ್‌ – ಸಿಪಿಐ ಪುತ್ರ ಸೇರಿ ಮೂವರು ಅರೆಸ್ಟ್‌

    ರೆಸಾರ್ಟ್‌ನಲ್ಲಿ ಅಪ್ರಾಪ್ತೆಯ ಮೇಲೆ ಗ್ಯಾಂಗ್‌ ರೇಪ್‌ – ಸಿಪಿಐ ಪುತ್ರ ಸೇರಿ ಮೂವರು ಅರೆಸ್ಟ್‌

    ಬೆಳಗಾವಿ: 15 ವರ್ಷದ ಬಾಲಕಿ ಮೇಲೆ ಗ್ಯಾಂಗ್ ರೇಪ್ (Gang Rape) ನಡೆದ ಪ್ರಕರಣಕ್ಕೆ ಸಂಬಂಧಿಸಿದಂತೆ ಮತ್ತೋರ್ವ ಅಪ್ರಾಪ್ತ ಸೇರಿ ಮೂವರನ್ನು ಪೊಲೀಸರು (Police) ಬಂಧಿಸಿದ್ದಾರೆ.

    ರಾಜ್ಯದ ಬೇರೆ ಜಿಲ್ಲೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಸಿಪಿಐ ಪುತ್ರ ಸೇರಿ ಅಪ್ರಾಪ್ತ ಆರೋಪಿಯನ್ನು ಬಂಧಿಸಲಾಗಿದೆ. ರೆಸಾರ್ಟ್ ನಡೆಸುತ್ತಿದ್ದ ಇಬ್ಬರು ಆರೋಪಿಗಳನ್ನು ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಬೆಳಗಾವಿಯ ಮಾರ್ಕೆಟ್‌ ಪೊಲೀಸರು ಬಂಧಿಸಿದ್ದಾರೆ.

    ಸಾಕೀಬ್ ಮತ್ತು ಇಬ್ಬರು ಅಪ್ರಾಪ್ತರು ಬಾಲಕಿಯ ಮೇಲೆ ಅತ್ಯಾಚಾರ ಮಾಡಿರುವ ಆರೋಪ ಕೇಳಿ ಬಂದಿದೆ. ಅಪ್ರಾಪ್ತರಿಗೆ ರೆಸಾರ್ಟ್ ಕೊಟ್ಟ ಆರೋಪದಡಿ ರೋಹನ್ ಪಾಟೀಲ್ ಹಾಗೂ ಅಶುತೋಷ್‌ ಪಾಟೀಲ್ ಇಬ್ಬರನ್ನು ಬಂಧಿಸಿ ಈಗಾಗಲೇ ಪೊಲೀಸರು ಹಿಂಡಲಗಾ ಜೈಲಿಗೆ ಕಳಿಸಿದ್ದಾರೆ.

    ಆರೋಪಿಗಳು ಮನೆಯೊಂದನ್ನು ಬಾಡಿಗೆಗೆ ಪಡೆದು ತಿಂಗಳಿಗೆ 20 ಸಾವಿರ ಬಾಡಿಗೆಗೆ ಪಡೆದು ರೆಸಾರ್ಟ್ ಆಗಿ ಪರಿವರ್ತನೆ‌ ಮಾಡಿದ್ದರು. ಇದನ್ನೂ ಓದಿ: ರೇಪ್‌ ಮಾಡಿ ಗರ್ಭಪಾತ, ಖಾಸಗಿ ವಿಡಿಯೋ ಇಟ್ಕೊಂಡು ಬ್ಲ್ಯಾಕ್‌ಮೇಲ್‌ – ಸಹ ಕಲಾವಿದೆಯ ದೂರಿನಲ್ಲಿ ಏನಿದೆ?

     
    ಏನಿದು ಪ್ರಕರಣ?
    ಒಂದು ವಾರದ ಹಿಂದೆ ಘಟನೆ ನಡೆದಿದ್ದು, ಸಾಕೀಬ್ ಹಾಗೂ ಇಬ್ಬರು ಅಪ್ರಾಪ್ತರು ಬಾಲಕಿ ಮೇಲೆ ಅತ್ಯಾಚಾರ ಎಸಗಿದ್ದರು. ಸಾಕೀಬ್ ತನ್ನ ಹೆಸರಲ್ಲಿ ರೂಮ್ ಬುಕ್ ಮಾಡಿದ್ದ. ಬಾಲಕಿಯ ಸ್ನೇಹಿತನಾಗಿರುವ ಅಪ್ರಾಪ್ತ ಆಕೆಯನ್ನು ಕರೆದುಕೊಂಡು ರೂಮಿಗೆ ಹೋಗಿದ್ದು, ಮೂವರು ಸೇರಿಕೊಂಡು ಆಕೆಯ ಮೇಲೆ ಅತ್ಯಾಚಾರ ನಡೆಸಿದ್ದರು. ಇದನ್ನೂ ಓದಿ: ರನ್ಯಾ ಮದುವೆಗೆ ಪರಮೇಶ್ವರ್‌ 20 ಲಕ್ಷ ಗಿಫ್ಟ್‌ ಕೊಟ್ಟಿರಬಹುದು: ಡಿಕೆಶಿ

    ಮನೆಗೆ ವಾಪಸ್ ಬಂದ ಬಳಿಕ ಬಾಲಕಿ ಹೊಟ್ಟೆ ನೋವು ಎಂದಿದ್ದಳು. ತಾಯಿ ಆಸ್ಪತ್ರೆಗೆ ಕರೆದುಕೊಂಡು ಹೋದಾಗ ಪ್ರಕರಣ ಬೆಳಕಿಗೆ ಬಂದಿದೆ. ಘಟನೆ ಸಂಬಂಧ ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ.

  • Mangaluru| ಅರೆಪ್ರಜ್ಞಾವಸ್ಥೆ ಸ್ಥಿತಿಯಲ್ಲಿ ಹೊರರಾಜ್ಯದ ಯುವತಿ ಪತ್ತೆ – ಗ್ಯಾಂಗ್ ರೇಪ್ ಯತ್ನ ಶಂಕೆ, ಮೂವರು ಅರೆಸ್ಟ್

    Mangaluru| ಅರೆಪ್ರಜ್ಞಾವಸ್ಥೆ ಸ್ಥಿತಿಯಲ್ಲಿ ಹೊರರಾಜ್ಯದ ಯುವತಿ ಪತ್ತೆ – ಗ್ಯಾಂಗ್ ರೇಪ್ ಯತ್ನ ಶಂಕೆ, ಮೂವರು ಅರೆಸ್ಟ್

    ಮಂಗಳೂರು: ನಿರ್ಜನ ಪ್ರದೇಶದಲ್ಲಿ ಅರೆಪ್ರಜ್ಞಾವಸ್ಥೆ ಸ್ಥಿತಿಯಲ್ಲಿ ಹೊರರಾಜ್ಯದ ಯುವತಿ (Young Woman) ಪತ್ತೆಯಾಗಿರುವ ಘಟನೆ ಮಂಗಳೂರು (Mangaluru) ಹೊರವಲಯದ ಕಲ್ಲಾಪು (Kallapu) ಬಳಿ ನಡೆದಿದೆ.

    ಯುವತಿ ಮೈಮೇಲೆ ಗಾಯದ ಗುರುತು ಇದ್ದು, ಸಾಮೂಹಿಕ ಅತ್ಯಾಚಾರ ಯತ್ನ ಶಂಕೆ ವ್ಯಕ್ತವಾಗಿದೆ. ಉಳ್ಳಾಲ ಠಾಣಾ ಪೊಲೀಸರು ಮೂವರನ್ನು ಅರೆಸ್ಟ್ ಮಾಡಿದ್ದಾರೆ. ಡ್ರಾಪ್ ನೀಡುವ ನೆಪದಲ್ಲಿ ರಿಕ್ಷಾ ಚಾಲಕ ಹಾಗೂ ಆತನ ಸ್ನೇಹಿತರು ಸಾಮೂಹಿಕ ಅತ್ಯಾಚಾರ ನಡೆಸಿರುವ ಶಂಕೆಯನ್ನು ಪೊಲೀಸರು ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಬಿಎಂಟಿಸಿಯನ್ನು ಅಡ್ಡಗಟ್ಟಿದ ಗಜಪಡೆ – ಪ್ರಯಾಣಿಕರು ಶಾಕ್

    ಪಶ್ಚಿಮ ಬಂಗಾಳದಿಂದ ಉದ್ಯೋಗ ಅರಸಿ ಕೇರಳದ ಉಪ್ಪಳಕ್ಕೆ ಬಂದಿದ್ದ ಯುವತಿ, ಸ್ನೇಹಿತನ ಜೊತೆ ನಿನ್ನೆ ಮಂಗಳೂರಿಗೆ ಆಗಮಿಸಿದ್ದಳು. ಗಲಾಟೆ ನಡೆದು ಮಧ್ಯರಾತ್ರಿ ಮನೆಯಿಂದ ಒಬ್ಬಳೇ ಹೊರ ಬಂದಿದ್ದಾಳೆ. ಈ ವೇಳೆ ಸಿಕ್ಕ ರಿಕ್ಷಾ ಚಾಲಕನ ಬಳಿ ಸಹಾಯ ಕೇಳಿದ್ದಾಳೆ. ಈ ವೇಳೆ ಆಟೋ ಚಾಲಕ ಹಾಗೂ ಇಬ್ಬರು ಸ್ನೇಹಿತರು ಅಮಲು ಪದಾರ್ಥ ನೀಡಿ ನಿರ್ಜನ ಪ್ರದೇಶದಲ್ಲಿ ಅತ್ಯಾಚಾರವೆಸಗಿರುವ ಅನುಮಾನ ವ್ಯಕ್ತವಾಗಿದೆ. ಘಟನೆ ಸಂಬಂಧ ಪೊಲೀಸರು ತನಿಖೆ ಮುಂದುವರಿಸಿದ್ದಾರೆ. ಇದನ್ನೂ ಓದಿ: Explainer| ಏನಿದು ಪಬ್ಲಿಕ್‌ ಟಿವಿ ವಿದ್ಯಾಪೀಠ? ವಿದ್ಯಾರ್ಥಿಗಳಿಗೆ ಏನು ಲಾಭ? ನಿಮ್ಮ ಎಲ್ಲಾ ಪ್ರಶ್ನೆಗಳಿಗೆ ಇಲ್ಲಿದೆ ಉತ್ತರ