Tag: Ganeshotsava

  • ಇನ್ನೂ ಮುಗಿದಿಲ್ಲ ಗೊಂದಲ: ‘ಲಾಟರಿ’ ಮೂಲಕ ಗಣೇಶೋತ್ಸವಕ್ಕೆ ಅನುಮತಿ

    ಇನ್ನೂ ಮುಗಿದಿಲ್ಲ ಗೊಂದಲ: ‘ಲಾಟರಿ’ ಮೂಲಕ ಗಣೇಶೋತ್ಸವಕ್ಕೆ ಅನುಮತಿ

    ಬೆಂಗಳೂರು: ಗಣೇಶ ಚತುರ್ಥಿಗೆ 2 ದಿನ ಬಾಕಿದ್ದರೂ ಸಾರ್ವಜನಿಕ ಗಣೇಶೋತ್ಸವದ ಆಚರಣೆ ವಿಚಾರದಲ್ಲಿ ಹಲವು ಗೊಂದಲಗಳು ಬಗೆ ಹರಿದಿಲ್ಲ.

    ಒಂದು ವಾರ್ಡ್‍ಗೆ ಒಂದೇ ಗಣೇಶನನ್ನು ಕೂರಿಸಬಹುದು ಎಂದು ಸರ್ಕಾರ ಹೇಳಿದೆ. ಆದರೆ ಒಂದೊಂದು ವಾರ್ಡ್‍ನಲ್ಲಿ ಹತ್ತಾರು ಸಂಘಟನೆಗಳು ಗಣೇಶ ಪ್ರತಿಷ್ಠಾಪನೆಗೆ ಅನುಮತಿ ಕೋರಿವೆ. ಹೀಗಾಗಿ ಯಾರಿಗೆ ಅನುಮತಿ ಕೊಡಬೇಕು? ಯಾರನ್ನು ಬಿಡಬೇಕು ಎಂಬ ಪ್ರಶ್ನೆಗೆ ಉತ್ತರ ಕಂಡುಕೊಳ್ಳಲು ಅಧಿಕಾರಿಗಳು, ಚೀಟಿ ಮೊರೆ ಹೋಗಿದ್ದಾರೆ.

    ಚೀಟಿಯಲ್ಲಿ ಯಾರ ಹೆಸರು ಬರುತ್ತದೋ ಅವರು ಗಣೇಶನನ್ನು ಕೂರಿಸಬಹುದಾಗಿದೆ. ಆದರೆ ಇದು ಎಲ್ಲಾ ಸಂಘಟನೆಗಳಿಗೆ ಒಪ್ಪಿಗೆಯಾಗಿಲ್ಲ. ಬೆಂಗಳೂರಿನ ಯಲಹಂಕ ವಲಯದ ಅಟ್ಟೂರು ವಾರ್ಡ್‍ನಲ್ಲಿ ಗಣೇಶ ಕೂರಿಸಲು ಅನುಮತಿ ನೀಡಿ ಎಂದು ಎರಡು ಅರ್ಜಿಗಳು ಬಂದಿದ್ದವು. ಲಾಟರಿ ಮೂಲಕ ಒಬ್ಬರಿಗೆ ಅವಕಾಶ ನೀಡಲಾಗಿದೆ. ಬೆಂಗಳೂರಿನಲ್ಲಿ ಸ್ಥಳ ನಿಗದಿ ವಿಚಾರದಲ್ಲಿಯೂ ಗೊಂದಲ ಉಂಟಾಗಿದೆ. ಅನುಮತಿಯನ್ನು ಪೊಲೀಸರು ಕೊಡಬೇಕಾ? ಬಿಬಿಎಂಪಿ ಎಂಜಿನಿಯರ್‍ಗಳಾ ಎಂಬುದು ಗೊತ್ತಾಗಿಲ್ಲ.  ಇದನ್ನೂ ಓದಿ: ಚಾರ್ಜ್ ಶೀಟ್‍ನಲ್ಲಿ ಅನುಶ್ರೀ ಆರೋಪಿಯೆಂದು ಉಲ್ಲೇಖವಾಗಿಲ್ಲ: ಮಂಗಳೂರು ಪೊಲೀಸ್ ಆಯುಕ್ತರ ಸ್ಪಷ್ಟನೆ 

    ಈ ಮಧ್ಯೆ, ನಾಲ್ಕು ಅಡಿ ಮೀರಿದ ಗಣೇಶನನ್ನು ಮಾರಿದ್ರೂ ದಂಡ, ಕೂರಿಸಿದ್ರೂ ದಂಡ ವಿಧಿಸಲು ಮಾರ್ಷಲ್‍ಗಳು ಮುಂದಾಗಿದ್ದಾರೆ. ಅಲ್ಲದೇ, ಗಣೇಶ ಮೂರ್ತಿಗಳನ್ನು ಸೀಜ್ ಮಾಡಲಾಗುತ್ತೆ ಎನ್ನಲಾಗಿದ್ದು, ಮಾರಾಟಗಾರರಿಗೆ ಹೊಸ ಪೀಕಲಾಟ ಶುರುವಾಗಿದೆ. ಗಣೇಶೋತ್ಸವದ ಗೊಂದಲಗಳು ಹಿಂದೂ ಸಂಘಟನೆಗಳ ಆಕ್ರೋಶಕ್ಕೆ ಕಾರಣವಾಗಿವೆ. ನಾಳೆ ಬಿಬಿಎಂಪಿಗೆ ಮುತ್ತಿಗೆ ಹಾಕಲು ಗಣೇಶೋತ್ಸವ ಸಮಿತಿ ನಿರ್ಧರಿಸಿದೆ. ಇದನ್ನೂ ಓದಿ: ಪಾಸಿಟಿವಿಟಿ ರೇಟ್ ಶೇ.0.64ಕ್ಕೆ ಇಳಿಕೆ- ರಾಜ್ಯದಲ್ಲಿಂದು 1,102 ಹೊಸ ಕೊರೊನಾ ಕೇಸ್, 17 ಸಾವು

  • ಗಣೇಶೋತ್ಸವಕ್ಕೆ ಅವಕಾಶ ಕೊಡಿ, ನಮ್ಮ ಬದುಕು ಬೀದಿಗೆ ಬಂದಿದೆ: ವ್ಯಾಪಾರಿಗಳ ಅಳಲು

    ಗಣೇಶೋತ್ಸವಕ್ಕೆ ಅವಕಾಶ ಕೊಡಿ, ನಮ್ಮ ಬದುಕು ಬೀದಿಗೆ ಬಂದಿದೆ: ವ್ಯಾಪಾರಿಗಳ ಅಳಲು

    ಬೆಂಗಳೂರು: ಕೊರೊನಾ ವೈರಸ್‍ನಿಂದಾಗಿ ಈ ಬಾರಿ ಗಣೇಶೋತ್ಸವವನ್ನು ಆಚರಿಸಬೇಕೋ, ಇಲ್ಲವೋ ಎಂಬುವುದರ ಬಗ್ಗೆ ಸರ್ಕಾರ ಚಿಂತನೆ ನಡೆಸುತ್ತಿದೆ. ಆದರೆ ಈ ನಡುವೆ ಗಣೇಶ ಮೂರ್ತಿ ತಯಾರಕರು ಗಣೇಶೋತ್ಸವಕ್ಕೆ ಅವಕಾಶ ಮಾಡಿ ಕೊಡಿ, ನಮ್ಮ ಬದುಕು ಬೀದಿಗೆ ಬರುತ್ತಿದೆ ಎಂದು ಅಳಲುತೊಡಿಕೊಂಡಿದ್ದಾರೆ.

    ಕೊರೊನಾ ಎಂಬ ವೈರಾಣುವಿನ ಕಾಟಕ್ಕೆ ಎಷ್ಟೋ ಜನ ಪ್ರಾಣವನ್ನು ಕಳೆದುಕೊಂಡಿದ್ದಾರೆ. ಜೊತೆಗೆ ಕೊರೊನಾದಿಂದ ಆರ್ಥಿಕ ಚಟುವಟಿಕೆಗಳು ಸಹ ನೆಲ ಕಚ್ಚಿದೆ. ಅದೇ ರೀತಿಯಲ್ಲಿ ಗಣೇಶ ಮೂರ್ತಿ ತಯಾರಕರ ಬದುಕು ಸಹ ಅತಂತ್ರವಾಗಿದೆ. ಈ ಬಾರಿ ಗಣೇಶೋತ್ಸವಕ್ಕೆ ಅವಕಾಶ ಮಾಡಿಕೊಟ್ಟರೆ ನಮ್ಮ ಬದುಕು ಸಾಗಿಸಲು ಸಾಧ್ಯವಾಗುತ್ತದೆ ಎಂದು ವ್ಯಾಪಾರಸ್ಥರು ಒತ್ತಾಯಿಸಿದ್ದಾರೆ. ಇದನ್ನೂ ಓದಿ: ಗಣೇಶೋತ್ಸವ ಆಚರಣೆ ನಡೆಸಿಯೇ ನಡೆಸುತ್ತೇವೆ: ಈಶ್ವರಪ್ಪ

    75 ವರ್ಷದಿಂದ ಗಣೇಶ ಮೂರ್ತಿಗಳ ವ್ಯಾಪರದಲ್ಲಿದ್ದೇವೆ. ಈ ಕೊರೊನಾದಿಂದ ಎರಡು ವರ್ಷ ನಮಗೆ ತುಂಬಾ ನಷ್ಟವಾಗಿದೆ. ಶೇ 98 ರಷ್ಟು ವ್ಯಾಪಾರ ಕುಸಿದಿದೆ. ಸರ್ಕಾರ ಇನ್ನೂ ಅನುಮತಿ ಬೇರೆ ನೀಡಿಲ್ಲ. ಹಬ್ಬದ ತಯಾರಿ ಸಹ ನಡೆಯುತ್ತಿಲ್ಲ. ಹಬ್ಬಕ್ಕೆ ಇನ್ನೂ ಕೇವಲ 5 ದಿನ ಮಾತ್ರ ಬಾಕಿ ಇದೆ. ಇಲ್ಲಿವರೆಗೂ ಕೇವಲ 10 ಜನ ಬಂದು ಗಣಪತಿ ಬುಕ್ ಮಾಡಿದ್ದಾರೆ. ಅದು ಸರ್ಕಾರ ಅನುಮತಿ ನೀಡಿದರೆ, ಗಣೇಶನ ಮೂರ್ತಿ ಖರೀಸಿಸುತ್ತೇವೆ ಅಂತ ಹೇಳಿದ್ದಾರೆ ಎಂದು ವ್ಯಾಪಾರಿಗಳು ಕೊರೋನಾದಿಂದ ತಮಗಾಗಿರುವ ನಷ್ಟವನ್ನು ಹೇಳಿಕೊಂಡಿದ್ದಾರೆ. ಇದನ್ನೂ ಓದಿ: ಸಾರ್ವಜನಿಕ ಗಣೇಶೋತ್ಸವ ಕುರಿತು ಸಿಎಂ ನಿರ್ಧಾರ: ಬೈರತಿ ಬಸವರಾಜು

  • ಸಾರ್ವಜನಿಕ ಗಣೇಶೋತ್ಸವ ಸೆಪ್ಟೆಂಬರ್ 5 ರಂದು ತೀರ್ಮಾನ : ಬೊಮ್ಮಾಯಿ

    ಸಾರ್ವಜನಿಕ ಗಣೇಶೋತ್ಸವ ಸೆಪ್ಟೆಂಬರ್ 5 ರಂದು ತೀರ್ಮಾನ : ಬೊಮ್ಮಾಯಿ

    – ನೈಟ್ ಕಫ್ರ್ಯೂ ಸಡಿಲಿಕೆ ಬಗ್ಗೆ ಸೂಕ್ತ ನಿರ್ಧಾರ ತೆಗೆದುಕೊಳ್ಳುತ್ತೇವೆ

    ಹುಬ್ಬಳ್ಳಿ: ಸಾರ್ವಜನಿಕ ಗಣೇಶೋತ್ಸವಕ್ಕೆ ಅವಕಾಶ ನೀಡುವ ಬಗ್ಗೆ ಚರ್ಚೆ ನಡೆಯುತ್ತಿದೆ. ಕೋವಿಡ್ ಪರಿಸ್ಥಿತಿ ನೋಡಿಕೊಂಡು ಸೆಪ್ಟಂಬರ್ 5ರಂದು ತೀರ್ಮಾನ ತೆಗೆದುಕೊಳ್ಳಲಾಗುವುದೆಂದು ಸಿಎಂ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.

    ಶಿಗ್ಗಾಂವದಲ್ಲಿ ಕ್ಷೇತ್ರದಲ್ಲಿ ವಿವಿಧ ಕಾಮಗಾರಿಗಳ ಉದ್ಘಾಟನೆಗೆ ತೆರಳುವ ಮುನ್ನ ಹುಬ್ಬಳ್ಳಿಯ ವಿಮಾನ ನಿಲ್ದಾಣದಲ್ಲಿ ಸಿಎಂ ಮಾಧ್ಯಮಗಳೊಂದಿಗೆ ಮಾತನಾಡಿದ್ದು, ಜಿಲ್ಲಾವಾರು ಕೋವಿಡ್ ಪರಿಸ್ಥಿತಿ ನೋಡಿಕೊಂಡು ತಜ್ಞರಿಗೆ ವರದಿ ನೀಡಲು ಕೇಳಿದ್ದೇವೆ. ಹೀಗಾಗಿ ಅದನ್ನು ನೋಡಿಕೊಂಡು ತೀರ್ಮಾನವನ್ನು ತೆಗೆದುಕೊಳ್ಳಲಾಗುವುದೆಂದು ಹೇಳಿದರು.ಇದನ್ನೂ ಓದಿ:ಕಾರು ಅಪಘಾತಕ್ಕೂ ಮುನ್ನ ಮದ್ಯ ಖರೀದಿಸಿದ್ದ ಇಷಿತಾ, ಬಿಂದು

    ದೇಶದ ವಿರುದ್ಧ ಚಟುವಟಿಕೆ ನಡೆಸುವವರ ಮೇಲೆ ಪೊಲೀಸ್ ಇಲಾಖೆ ನಿಗಾಯಿಟ್ಟಿದೆ. ಉಗ್ರರ ಜೊತೆ ಕೈ ಜೋಡಿಸಿ, ಸ್ಲೀಪರ್ ಸೆಲ್ ಗಳಂತೆ ಕೆಲಸ ಮಾಡುವವರ ಮೇಲೆ ಕಣ್ಣಿಟ್ಟಿದ್ದಾರೆ. ಈಗಾಗಲೇ ಎನ್‍ಐಎ ಕೆಲವರನ್ನು ತೆಗೆದುಕೊಂಡಿದೆ. ಎನ್‍ಐಎ ಜೊತೆ ನಮ್ಮ ಪೊಲೀಸರು ಕೂಡಿಕೊಂಡು ಕೆಲಸ ಮಾಡುತ್ತಿದ್ದಾರೆ. ನಾಳೆ ಕೇಂದ್ರ ಗೃಹ ಸಚಿವ ಅಮಿತ್ ಶಾ, ಸೇರಿದಂತೆ ಹಲವಾರು ಕೇಂದ್ರ ಸಚಿವರು ಹುಬ್ಬಳ್ಳಿಗೆ ಆಗಮಿಸುತ್ತಿದ್ದಾರೆ ಎಂದು ತಿಳಿಸಿದರು.ಇದನ್ನೂ ಓದಿ:ಬೈ ಎಲೆಕ್ಷನ್‍ನಲ್ಲಿ ಸೋತ್ರೂ ನಮ್ಮ ಪಕ್ಷದ ಅಭ್ಯರ್ಥಿಗೆ ಹೆಚ್ಚಿನ ಬಲ ಕೊಟ್ಟಿದ್ದಾರೆ: ಡಿ.ಕೆ.ಶಿವಕುಮಾರ್

    ಹುಬ್ಬಳ್ಳಿಗೆ ಬಂದ ಬಳಿಕ ದಾವಣಗೆರೆಗೆ ಅಮಿತ್ ಶಾ ಅವರು ಭೇಟಿ ನೀಡಲಿದ್ದಾರೆ. ಅಮಿತ್ ಶಾ ಜೊತೆ ರಾಜ್ಯದ ಹಲವಾರು ಅಭಿವೃದ್ಧಿ ವಿಚಾರಗಳ ಬಗ್ಗೆ ಚರ್ಚೆಯಾಗಲಿದೆ ಎಂದರು.

    ಈಗಾಗಲೇ ನಾವು ವೀಕೆಂಡ್ ಕಫ್ರ್ಯೂ ತೆಗೆದಿದ್ದೇವೆ. ಕೋವಿಡ್ ಪರಿಸ್ಥಿತಿ ನೋಡಿಕೊಂಡು ನೈಟ್ ಕಫ್ರ್ಯೂ ತೆಗೆಯುವ ಬಗ್ಗೆ ನಿರ್ಧಾರ ತೆಗೆದುಕೊಳ್ಳಲಾಗುವುದು. ಆರ್ಥಿಕ ಚಟುವಟಿಕೆ ಮೇಲೆ ನಿಬಂಧ ಹಾಕುವ ಉದ್ದೇಶ ಸರ್ಕಾರಕ್ಕಿಲ್ಲ. ಕೋವಿಡ್ ನಿರ್ವಹಣೆಯೂ, ನಮಗೆ ಅಷ್ಟೇ ಮುಖ್ಯ. ಕೋವಿಡ್ ನಿಯಂತ್ರಣದಲ್ಲಿರುವ ಜಿಲ್ಲೆಗಳಲ್ಲಿ ನೈಟ್ ಕಫ್ರ್ಯೂ ಸಡಿಲಿಕೆ ಬಗ್ಗೆ ಮುಂದಿನ ದಿನಗಳಲ್ಲಿ ಸೂಕ್ತ ನಿರ್ಧಾರ ತೆಗೆದುಕೊಳ್ಳುತ್ತೇವೆ ಎಂದು ತಿಳಿಸಿದರು.ಇದನ್ನೂ ಓದಿ:ಚಾಮರಾಜನಗರ ಡಿಸಿ ವಿರುದ್ಧ ಡಿಕೆಶಿ ಕಿಡಿ

  • ಗಣೇಶೋತ್ಸವಕ್ಕೆ ಅವಕಾಶ ನೀಡದೇ ಇದ್ದರೆ ಚುನಾವಣೆ ಬಹಿಷ್ಕಾರ: ಶ್ರೀರಾಮ ಸೇನೆ

    ಗಣೇಶೋತ್ಸವಕ್ಕೆ ಅವಕಾಶ ನೀಡದೇ ಇದ್ದರೆ ಚುನಾವಣೆ ಬಹಿಷ್ಕಾರ: ಶ್ರೀರಾಮ ಸೇನೆ

    ಧಾರವಾಡ: ರಾಜ್ಯ ಸರ್ಕಾರ ಸಾರ್ವಜನಿಕ ಗಣೇಶೋತ್ಸವ ಆಚರಣೆಗೆ ಅನುಮತಿ ನೀಡದಿದ್ದರೆ ಹುಬ್ಬಳ್ಳಿ, ಧಾರವಾಡ ಮಹಾನಗರ ಪಾಲಿಕೆ ಚುನಾವಣೆಗೆ ಬಹಿಷ್ಕಾರ ಮಾಡುತ್ತೇವೆ ಎಂದು ಶ್ರೀ ರಾಮಸೇನೆ ರಾಜ್ಯ ಸಂಘಟನಾ ಕಾರ್ಯದರ್ಶಿ ಗಂಗಾಧರ ಕುಲಕರ್ಣಿ ಹೇಳಿದರು.

    ಶ್ರೀ ರಾಮಸೇನೆ ನೇತೃತ್ವದಲ್ಲಿ ಧಾರವಾಡ ಪಶ್ಚಿಮ ಕ್ಷೇತ್ರದ ಶಾಸಕ ಅರವಿಂದ ಬೆಲ್ಲದ ಹಾಗೂ ಗ್ರಾಮೀಣ ಶಾಸಕ ಅಮೃತ ದೇಸಾಯಿ ಮನೆಗೆ ಹೋಗಿ ಈ ಬಗ್ಗೆ ಮನವಿ ಸಲ್ಲಿಸಿದ ನಂತರ ಧಾರವಾಡ ನಗರದಲ್ಲಿ ಪ್ರತಿಭಟನಾ ಮೆರವಣಿಗೆ ನಡೆಸಿದ ಕಾರ್ಯಕರ್ತರು, ಬಿಜೆಪಿ ನೇತೃತ್ವದ ಸರ್ಕಾರ ಹಿಂದೂಗಳ ಆರಾಧ್ಯ ವಿಘ್ನ ವಿನಾಶಕ ಗಣಪತಿ ತಂಟೆಗೆ ಬಂದರೆ ಅಧಿಕಾರ ಕಳೆದುಕೊಳ್ಳಬೇಕಾಗುತ್ತೆ ಎಂದು ಎಚ್ಚರಿಸಿದರು.ಇದನ್ನೂ ಓದಿ:ಕೊಡಲಿಯಿಂದ ತಲೆಗೆ ಹೊಡೆದು ಯುವಕನ ಕೊಲೆ

    ಇದೇ ವೇಳೆ ಗಣೇಶೋತ್ಸವ ಆಚರಣೆ ನಿಷೇಧ ಮಾಡಿದ ಸರ್ಕಾರದ ವಿರುದ್ಧ ಘೋಷಣೆ ಕೂಗಿ ಶ್ರೀ ರಾಮಸೇನೆ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದರು.ಇದನ್ನೂ ಓದಿ:ಒಂದು ವರ್ಷದಿಂದ ಇವರು ಬಾಯಿ ಮುಚ್ಚಿದ್ರು: ಡಿಕೆಶಿ ವಿರುದ್ಧ ಅನಿಲ್ ಬೆನಕೆ ವಾಗ್ದಾಳಿ

  • ನಾಳೆ ಗಡಿ ಭಾಗದ 8 ಜಿಲ್ಲೆಗಳಿಗೆ ಸಿಗುತ್ತಾ ರಿಲೀಫ್?-ಗಣೇಶೋತ್ಸವ ಮಾರ್ಗಸೂಚಿ ಸಡಿಲಕ್ಕೆ ಸರ್ಕಾರ ಪ್ಲಾನ್

    ನಾಳೆ ಗಡಿ ಭಾಗದ 8 ಜಿಲ್ಲೆಗಳಿಗೆ ಸಿಗುತ್ತಾ ರಿಲೀಫ್?-ಗಣೇಶೋತ್ಸವ ಮಾರ್ಗಸೂಚಿ ಸಡಿಲಕ್ಕೆ ಸರ್ಕಾರ ಪ್ಲಾನ್

    ಬೆಂಗಳೂರು: ರಾಜ್ಯದಲ್ಲಿ ಕೋವಿಡ್ ಹೆಮ್ಮಾರಿ ಸದ್ಯದ ಮಟ್ಟಿಗೆ ನಿಯಂತ್ರಣದಲ್ಲಿದೆ. ಆದ್ರೆ ನೆರೆಯ ಕೇರಳದಲ್ಲಿ ಸೋಂಕು ಆಸ್ಫೋಟ ಮುಂದುವರಿದಿರೋದು ರಾಜ್ಯದ ಆತಂಕಕ್ಕೂ ಕಾರಣವಾಗಿದೆ. ಜೊತೆಗೆ ಶ್ರಾವಣ ಮಾಸದ ಸಾಲು ಸಾಲು ಹಬ್ಬಗಳಿಂದಲೂ ಕೊರೊನಾ ಮತ್ತೆ ಹೆಚ್ಚಾಗಬಹುದು ಎಂಬ ಭೀತಿ ಆವರಿಸಿದೆ. ಇದರ ಜೊತೆ ಜೊತೆಗೆ ಕೋವಿಡ್ ಮೂರನೇ ಅಲೆಯ ಭಯವೂ ಕಾಡುತ್ತಿದೆ.

    ಈ ಎಲ್ಲಾ ಆತಂಕ, ಭೀತಿ ಮಧ್ಯೆ, ರಾಜ್ಯದಲ್ಲಿ ಈಗಿರುವ ಕೊರೊನಾ ನಿಯಮಗಳನ್ನು ಹಿಂಪಡೆಯಬೇಕೇ? ಅಥವಾ ಮುಂದುವರಿಸಬೇಕೆ? ಅಥವಾ ಇನ್ನಷ್ಟು ಬಿಗಿ ಕ್ರಮಗಳನ್ನು ಕೈಗೊಳ್ಳಬೇಕೆ ಬೇಡವೇ ಎಂಬ ಗೊಂದಲದಲ್ಲಿ ರಾಜ್ಯ ಸರ್ಕಾರ ಇದೆ. ಇದು ಸೇರಿದಂತೆ ಒಟ್ಟು ಮೂರು ವಿಚಾರಗಳ ಬಗ್ಗೆ ಒಂದು ನಿರ್ಣಯಕ್ಕೆ ಬರಲು ನಾಳೆ ಸಂಜೆ ನಾಲ್ಕು ಗಂಟೆಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದಲ್ಲಿ ಉನ್ನತಮಟ್ಟದ ಸಭೆ ಕರೆಯಲಾಗಿದೆ. ಈ ಸಭೆಯಲ್ಲಿ ಸದ್ಯದ ಪರಿಸ್ಥಿತಿ, ಸಂಭಾವ್ಯ ಪರಿಸ್ಥಿತಿ, ಕೋವಿಡ್ ಸಾಧಕ ಬಾಧಕಗಳ ಬಗ್ಗೆ ಚರ್ಚಿಸಲಾಗುತ್ತದೆ. ಮುಖ್ಯಮಂತ್ರಿಗಳು ಬಹುತೇಕ ಕೋವಿಡ್ ತಾಂತ್ರಿಕ ಸಲಹಾ ಸಮಿತಿಯ ಶಿಫಾರಸುಗಳಿಗೆ ಮಣೆ ಹಾಕುವ ಸಂಭವ ಇದೆ.

    ನಾಳೆಯ ಸಭೆಯಲ್ಲಿ ಮುಖ್ಯಮಂತ್ರಿಗಳು ಪ್ರಮುಖವಾಗಿ ಮೂರು ವಿಚಾರಗಳ ಬಗ್ಗೆ ನಿರ್ಧಾರ ಕೈಗೊಳ್ಳುವ ಸಂಭವ ಇದೆ.
    ನಿರ್ಧಾರ 1 – ಕೋವಿಡ್ ನಿಯಮಗಳನ್ನು ಮುಂದುವರಿಸುವುದೋ? ಬಿಡುವುದೋ?
    ನಿರ್ಧಾರ 2 – ಸಾರ್ವಜನಿಕ ಗಣೇಶೋತ್ಸವ ನಿಯಮ ಸಡಿಲಿಸಬೇಕೋ? ಬೇಡವೋ?
    ನಿರ್ಧಾರ 3 – ಪ್ರಾಥಮಿಕ, ಪ್ರೌಢ ಶಾಲೆ ಓಪನ್ ಮಾಡುವುದೋ? ಬಿಡುವುದೋ?

    ಕೋವಿಡ್ ತಾಂತ್ರಿಕ ಸಲಹಾ ಸಮಿತಿ ಶಿಫಾರಸುಗಳೇನು?: ರಾಜ್ಯದ ಮಟ್ಟಿಗೆ ಮುಂದಿನ ನಾಲ್ಕು ವಾರ ನಿರ್ಣಾಯಕವಾಗಿದ್ದು, ಸೋಂಕು ತಡೆಗೆ ರಾಜ್ಯದ್ಯಂತ ನೈಟ್ ಕರ್ಫ್ಯೂ ಬಿಗಿ ಮಾಡಬೇಕು. ಇಡೀ ರಾಜ್ಯದಲ್ಲಿ ವೀಕೆಂಡ್ ಕರ್ಫ್ಯೂ ಜಾರಿ ಮಾಡಬೇಕು. ಹಬ್ಬಗಳಿರುವುದರಿಂದ ದೇಗುಲ, ಮಾರ್ಕೆಟ್‍ಗಳಲ್ಲಿ ಕಠಿಣ ರೂಲ್ಸ್ ತರಬೇಕು. ಗಡಿ ಜಿಲ್ಲೆಗಳಲ್ಲಿ ಟೆಸ್ಟಿಂಗ್, ವ್ಯಾಕ್ಸಿನ್ ಹೆಚ್ಚಿಸಬೇಕು ಮತ್ತು ಕೇರಳ ಪ್ರಯಾಣಿಕರಿಗೆ ಸಾಂಸ್ಥಿಕ ಕ್ವಾರಂಟೇನ್ ಕಡ್ಡಾಯ ಮಾಡಬೇಕು. ಇದನ್ನೂ ಓದಿ: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸೆ.1 ರಿಂದ ದ್ವಿತೀಯ ಪಿಯುಸಿ ಆರಂಭಕ್ಕೆ ಜಿಲ್ಲಾಡಳಿತ ಗ್ರೀನ್ ಸಿಗ್ನಲ್

    ಕೇರಳದಲ್ಲಿ ಸೋಂಕು ಆಸ್ಫೋಟಿಸಲು ಕಾರಣ ಹಬ್ಬ ಹರಿದಿನಗಳನ್ನು ಆಚರಿಸಲು ಅಲ್ಲಿನ ಸರ್ಕಾರ ಕೊರೊನಾ ನಿಯಮಗಳನ್ನು ಸಡಿಲ ಮಾಡಿದ್ದು ಎನ್ನುವ ಮಾತಿದೆ. ರಾಜ್ಯದಲ್ಲಿ ಕೇರಳ ಮಾದರಿಯ ಪರಿಸ್ಥಿತಿ ಬರಬಾರ್ದು ಅಂದ್ರೆ ಸಾರ್ವಜನಿಕವಾಗಿ ಗಣೇಶೋತ್ಸವ ಆಚರಣೆಗಳಿಗೆ, ಮೆರವಣಿಗೆಗೆ ಅವಕಾಶ ನೀಡಬಾರದು ಎಂದು ಕೋವಿಡ್ ತಾಂತ್ರಿಕ ಸಲಹಾ ಸಮಿತಿ ಶಿಫಾರಸು ಮಾಡಿದೆ. ಸರ್ಕಾರ ಕೂಡ ಇದಕ್ಕೆ ಪೂರಕವಾಗಿ ಈಗಾಗಲೇ ಸಾರ್ವಜನಿಕವಾಗಿ ಗಣೇಶ ಉತ್ಸವಗಳಿಗೆ ನಿಷೇಧ ಹೇರಿ ಮಾರ್ಗಸೂಚಿ ಪ್ರಕಟಿಸಿದೆ. ಆದ್ರೆ, ಇದಕ್ಕೆ ಸ್ವತಃ ಬಿಜೆಪಿಯಲ್ಲಿಯೇ ಅಪಸ್ವರ ಕೇಳಿಬಂದಿದೆ. ಇದನ್ನೂ ಓದಿ: ಕಾಬೂಲ್ ವಿಮಾನ ನಿಲ್ದಾಣದ ಎಂಟ್ರಿ ಗೇಟ್ ಬಳಿ ಮತ್ತೆ ಫೈರಿಂಗ್

    ಹಿಂದೂಪರ ಸಂಘಟನೆಗಳಂತೂ ರೂಲ್ಸ್ ಬದಲಿಸಲೇಬೇಕು. ಇಲ್ಲ ಅಂದ್ರೆ ರೂಲ್ಸ್ ಬ್ರೇಕ್ ಮಾಡ್ತೀವಿ. ಬೇಕಿದ್ರೆ ಗುಂಡಿಕ್ಕಿ ಎಂದು ಗುಡುಗ್ತಿವೆ. ಹೀಗಾಗಿ ರಾಜ್ಯ ಸರ್ಕಾರ ಸ್ವಲ್ಪ ಒತ್ತಡದಲ್ಲಿ ಸಿಲುಕಿದೆ. ಏನು ಮಾಡಬೇಕು? ಮಾರ್ಗಸೂಚಿಯನ್ನು ಪರಿಷ್ಕಕರಿಸಬೇಕೋ ಬೇಡವೋ ಎಂಬ ಗೊಂದಲದಲ್ಲಿದೆ. ಈ ಬಗ್ಗೆ ನಾಳೆ ಸಿಎಂ ಬಸವರಾಜ ಬೊಮ್ಮಾಯಿ ನೇತೃತ್ವದಲ್ಲಿ ನಡೆಯಲಿರುವ ಸಭೆಯಲ್ಲಿ ಚರ್ಚೆ ನಡೆಸಲಾಗುತ್ತದೆ. ಪಬ್ಲಿಕ್ ಟಿವಿಗೆ ಲಭ್ಯವಾದ ಮಾಹಿತಿ ಪ್ರಕಾರ, ಸಾರ್ವಜನಿಕವಾಗಿ ಗಣೇಶೋತ್ಸವ ಆಚರಣೆಗೆ ಷರತ್ತುಬದ್ಧ ಅನುಮತಿ ನೀಡುವ ನಿರೀಕ್ಷೆ ಇದೆ. ಹಾಗಿದ್ರೆ ಕೋವಿಡ್ ನಿಯಂತ್ರಣ ನಿಟ್ಟಿನಲ್ಲಿ ಸರ್ಕಾರ ಯಾವೆಲ್ಲಾ ಷರತ್ತುಗಳನ್ನು ಹಾಕಬಹುದು? ಇದನ್ನೂ ಓದಿ: ಕಾಬೂಲ್ ಏರ್ ಪೋರ್ಟ್ ಬಳಿ ಐಸಿಸ್-ಕೆ ರಾಕೆಟ್ ದಾಳಿ – ಇಬ್ಬರ ಸಾವು

    ಗಣೇಶೋತ್ಸವಕ್ಕೆ ಪರಿಷ್ಕೃತ ಮಾರ್ಗಸೂಚಿ?
    * ಹಬ್ಬವನ್ನು ಸರಳವಾಗಿ ಕನಿಷ್ಟ ಸಂಖ್ಯೆಯ ಜನರೊಂದಿಗೆ ಆಚರಣೆಗೆ ಅವಕಾಶ ಸಾಧ್ಯತೆ
    * ಸಾರ್ವಜನಿಕ ಸ್ಥಳಗಳಲ್ಲಿ 4 ಅಡಿ ಎತ್ತರದ ಗಣೇಶ ಮೂರ್ತಿ ಪ್ರತಿಷ್ಠಾಪನೆಗೆ ಅನುಮತಿ?
    * ಒಂದು ವಾರ್ಡ್/ಗ್ರಾಮದಲ್ಲಿ 1 ಅಥವಾ 2 ಗಣೇಶಗಳನ್ನು ಸಾರ್ವಜನಿಕವಾಗಿ ಕೂರಿಸಬಹುದು?
    * ಕೋವಿಡ್ ನಿಯಮಗಳ ಪಾಲನೆಯೊಂದಿಗೆ ಒಮ್ಮೆ 20 ಭಕ್ತರ ಭೇಟಿಗೆ ಅವಕಾಶ?
    * ಸ್ಥಳದಲ್ಲಿ ಮಾಸ್ಕ್, ಸ್ಯಾನಿಟೈಸರ್, ಸಾಮಾಜಿಕ ಅಂತರ ಕಡ್ಡಾಯ
    * ಗಣೇಶೋತ್ಸವಗಳಲ್ಲಿ ಮನರಂಜನಾ ಕಾರ್ಯಕ್ರಮಗಳಿಗೆ ನೋ ಪರ್ಮಿಷನ್?
    * ಗಣೇಶ ಮೂರ್ತಿ ತರುವಾಗ ಮತ್ತು ವಿಸರ್ಜಿಸುವಾಗ ಮೆರವಣಿಗೆಗಳಿಗೆ ಅವಕಾಶ ಇಲ್ಲ?
    * ಸ್ಥಳೀಯ ಆಡಳಿತಗಳು ನಿರ್ಮಿಸಿದ ಹೊಂಡ, ಮೊಬೈಲ್ ಟ್ಯಾಂಕ್‍ಗಳಲ್ಲಿ ಮೂರ್ತಿ ವಿಸರ್ಜನೆ!

  • ಸಾರ್ವಜನಿಕ ಗಣೇಶೋತ್ಸವ ಆಚರಿಸಲು ಮುಕ್ತ ಅವಕಾಶ ನೀಡಿ: ವಿಶ್ವ ಹಿಂದು ಪರಿಷದ್ ಆಗ್ರಹ

    ಸಾರ್ವಜನಿಕ ಗಣೇಶೋತ್ಸವ ಆಚರಿಸಲು ಮುಕ್ತ ಅವಕಾಶ ನೀಡಿ: ವಿಶ್ವ ಹಿಂದು ಪರಿಷದ್ ಆಗ್ರಹ

    ಬೆಂಗಳೂರು: ಕೋವಿಡ್ ನಿಯಮಗಳನ್ನು ಪಾಲಿಸಿಕೊಂಡು ಸಾರ್ವಜನಿಕ ಗಣೇಶೋತ್ಸವ ಆಚರಣೆಗೆ ಮುಕ್ತ ಅವಕಾಶ ನೀಡಬೇಕೆಂದು ವಿಶ್ವ ಹಿಂದು ಪರಿಷದ್ ಆಗ್ರಹಿಸಿದೆ.

    ಹಿಂದುಗಳ ಪ್ರಮುಖ ಹಬ್ಬಗಳಲ್ಲಿ ಒಂದಾದ ಶ್ರೀ ಗಣೇಶೋತ್ಸವವನ್ನು ಕೋವಿಡ್ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಿಕೊಂಡು ಸಾರ್ವಜನಿಕ ಪೆಂಡಾಲುಗಳಲ್ಲಿ ಗಣೇಶೋತ್ಸವ ನಡೆಸಲು ಕಳೆದ ವರ್ಷ ಅವಕಾಶ ನೀಡಲಾಗಿತ್ತು.

    ಈ ವರ್ಷವೂ ಸಹ ಭಕ್ತರ ಭಾವನೆಗಳಿಗೆ ಧಕ್ಕೆ ಯಾಗದಂತೆ ವಿಘ್ನ ವಿನಾಶಕನಾದ ಶ್ರೀ ಗಣೇಶನ ಪರಂಪರಾಗತ ಉತ್ಸವವನ್ನು (ಕರೋನಾ ನಿಯಮಗಳನ್ನು ಪಾಲಿಸಿ ಕೊಂಡು) ಸಾರ್ವಜನಿಕವಾಗಿ ಪೆಂಡಾಲುಗಳಲ್ಲಿ ಆಚರಿಸಲು ಮುಕ್ತ ಅವಕಾಶ ನೀಡಬೇಕೆಂದು ವಿ.ಹಿಂ.ಪ ಆಗ್ರಹ ಪೂರ್ವಕವಾಗಿ ರಾಜ್ಯ ಸರ್ಕಾರಕ್ಕೆ ವಿನಂತಿ ಮಾಡುತ್ತದೆ ಕ್ಷೇತ್ರೀಯ ಸಂಘಟನಾ ಕಾರ್ಯದರ್ಶಿ ಕೇಶವ ಹೆಗಡೆ ಹೇಳಿದ್ದಾರೆ. ಇದನ್ನೂ ಓದಿ: ತಾಲಿಬಾನಿಗಳನ್ನ RSS, ಬಜರಂಗದಳಕ್ಕೆ ಹೋಲಿಸಿದ ಕವಿ ಮುನ್ವರ್ ರಾಣಾ

  • ಪಡುಬಿದ್ರೆಯ ಬಾಲ ಗಣೇಶೋತ್ಸವ ಮೆರವಣಿಗೆಯಲ್ಲಿ ಹೊಡೆದಾಟ – ಓರ್ವನಿಗೆ ಗಂಭೀರ ಗಾಯ

    ಪಡುಬಿದ್ರೆಯ ಬಾಲ ಗಣೇಶೋತ್ಸವ ಮೆರವಣಿಗೆಯಲ್ಲಿ ಹೊಡೆದಾಟ – ಓರ್ವನಿಗೆ ಗಂಭೀರ ಗಾಯ

    ಉಡುಪಿ: ಜಿಲ್ಲೆಯ ಪಡುಬಿದ್ರಿ ಪ್ರಸಿದ್ಧ ಬಾಲ ಗಣಪತಿ ಗಣೇಶೋತ್ಸವ ಶೋಭಾಯಾತ್ರೆಯ ಸಂದರ್ಭದಲ್ಲಿ ಹಿಂದೂ ಸಂಘಟನೆಯ ಎರಡು ತಂಡಗಳ ಮಧ್ಯೆ ಹೊಡೆದಾಟ ನಡೆದಿದೆ.

    ಜಗಳದಲ್ಲಿ ಕೃಷ್ಣ ಅವರ ತಲೆಗೆ ಕಲ್ಲೇಟು ತಗುಲಿದ್ದು, ಗಾಯಾಳುವನ್ನು ಪಡುಬಿದ್ರಿಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಇಂದು ಶೋಭಾಯಾತ್ರೆ ಮೂಲಕ ಗಣೇಶನನ್ನು ವಿಸರ್ಜಿಸಲಾಗುತಿತ್ತು. ಈ ವೇಳೆ ನಾಸಿಕ್ ಬ್ಯಾಂಡ್ ಮತ್ತು ಚೆಂಡೆಯ ತಂಡಗಳ ನಡುವೆ ತಿಕ್ಕಾಟ ನಡೆದಿದೆ. ಜಗಳದಲ್ಲಿ ಕಲ್ಲು ತೂರಾಟವೂ ನಡೆದಿದ್ದು, ಈ ಹಿನ್ನೆಲೆ ಕೃಷ್ಣ ಅವರ ತಲೆಗೆ ಗಾಯವಾಗಿದೆ.

    ನಾಸಿಕ್ ಬ್ಯಾಂಡ್ ತಂಡದ ಸದ್ದು ಜೋರಿತ್ತು. ಜೊತೆಗೆ ಯುವಕರ ಕುಣಿತ ಮೆರವಣಿಗೆಯಲ್ಲಿ ಗದ್ದಲ ಎಬ್ಬಿಸಿತ್ತು. ಈ ವಿಚಾರಕ್ಕೆ ಮಾತಿಗೆ ಮಾತು ಬೆಳೆದು ದೊಡ್ಡ ಜಗಳವಾಗಿದೆ. ಸಾವಿರಾರು ಜನ ಜಮಾಯಿಸಿದ್ದ ಮೆರವಣಿಗೆಯಲ್ಲಿ ಗಲಾಟೆ ನಡೆದಿದ್ದು, ಪೊಲೀಸರು ಮಧ್ಯಪ್ರವೇಶ ಮಾಡಿದರೂ ಗಲಾಟೆ ತಣ್ಣಗಾಗಿಲ್ಲ. ಈ ಸಂದರ್ಭ ನಡೆದ ಘರ್ಷಣೆಯಲ್ಲಿ ಕೃಷ್ಣ ಅವರ ತಲೆಗೆ ಕಲ್ಲೇಟು ಬಿದ್ದಿದೆ. ಅಲ್ಲದೆ ಪೊಲೀಸ್ ಅಧಿಕಾರಿಗಳನ್ನೇ ಹಿಂದೂಪರ ಸಂಘಟನೆ ಯುವಕರು ಎಳೆದಾಡಿದ್ದಾರೆ. ಈ ಸಂಬಂಧ ಪಡುಬಿದ್ರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    ಬಾಲಗಣಪತಿ ಶೋಭಾಯಾತ್ರೆಯಲ್ಲಿ ಸಹಸ್ರಾರು ಮಂದಿ ಭಕ್ತರು ಭಾಗವಹಿಸಿದ್ದರು. ಹೀಗಾಗಿ ಮೆರವಣಿಗೆ ಸಂದರ್ಭ ಹೆದ್ದಾರಿಯನ್ನು ಸಂಪೂರ್ಣವಾಗಿ ಬಂದ್ ಮಾಡಲಾಗಿತ್ತು. ಇಷ್ಟಾದರೂ ಸಹ ಓರ್ವ ಎಸ್‍ಐ, ನಾಲ್ವರು ಪೇದೆಗಳು ಶೋಭಾಯಾತ್ರೆಯನ್ನು ನಿಯಂತ್ರಿಸುವಲ್ಲಿ ಹೈರಾಣಾಗಿ ಹೋಗಿದ್ದಾರೆ ಎಂದು ಸ್ಥಳೀಯರು ದೂರಿದ್ದಾರೆ.

    ಗಣೇಶ ಚತುರ್ಥಿ ಅಂಗವಾಗಿ ಪಡುಬಿದ್ರೆಯಲ್ಲಿ ಗಣಪತಿ ಕೂರಿಸಲಾಗಿತ್ತು. ಒಂದೂವರೆ ತಿಂಗಳು ಈ ಗಣಪತಿಯನ್ನು ಕೂರಿಸಲಾಗುತ್ತದೆ. ಒಂದೂವರೆ ತಿಂಗಳುಗಳ ಕಾಲ ವಿಘ್ನ ನಿವಾರಕನಿಗೆ ಪೂಜೆ ಸಲ್ಲಿಸಲಾಗುತ್ತದೆ. ನಂತರ ವೈಭವದ ಶೋಭಾಯಾತ್ರೆ ಮೂಲಕ ಗಣೇಶ ವಿಸರ್ಜನೆಯನ್ನು ಮಾಡಲಾಗುತ್ತದೆ.

  • ಗಣೇಶ ಮೆರವಣಿಗೆ ವೇಳೆ ಅಂಬುಲೆನ್ಸ್‌ಗೆ ದಾರಿ – ಒಂದೇ ಕ್ಷಣದಲ್ಲಿ ಚದುರಿದ ಸಾವಿರಾರು ಜನ

    ಗಣೇಶ ಮೆರವಣಿಗೆ ವೇಳೆ ಅಂಬುಲೆನ್ಸ್‌ಗೆ ದಾರಿ – ಒಂದೇ ಕ್ಷಣದಲ್ಲಿ ಚದುರಿದ ಸಾವಿರಾರು ಜನ

    ಮುಂಬೈ: ಮಹಾರಾಷ್ಟ್ರದ ಪುಣೆಯಲ್ಲಿ ಗಣೇಶ ವಿಸರ್ಜನೆಯ ಬೃಹತ್ ಮೆರವಣಿಗೆ ಸಂದರ್ಭದಲ್ಲಿ ಅಂಬುಲೆನ್ಸ್ ಗೆ ದಾರಿ ಮಾಡಿಕೊಡುವ ಮೂಲಕ ಭಕ್ತಾದಿಗಳು ಮಾದರಿಯಾಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಈ ವಿಡಿಯೋ ಭಾರೀ ವೈರಲ್ ಆಗುತ್ತಿದೆ. ಟ್ವಿಟ್ಟರ್ ನಲ್ಲಿಯೂ ಸಹ ಹಲವು ಗಣ್ಯರು ಈ ವಿಡಿಯೋ ಟ್ವೀಟ್ ಮಾಡಿ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.

    ಪುಣೆಯ ಲಕ್ಷ್ಮಿ ರಸ್ತೆಯಲ್ಲಿ ಈ ಘಟನೆ ನಡೆದಿದ್ದು, ಕಿಲೋಮೀಟರ್ ಗಟ್ಟಲೇ ಜನಸಾಗರ ತುಂಬಿದ್ದ ಮೆರವಣಿಗೆ ಮಧ್ಯೆ ಅಂಬುಲೆನ್ಸ್ ಗೆ ದಾರಿ ಮಾಡಿ ಕೊಡುವ ಮೂಲಕ ಭಕ್ತರು ಸಾಮಾಜಿಕ ಕಾಳಜಿ ಮೆರೆದಿದ್ದಾರೆ.

    ಕಿಲೋಮೀಟರ್ ಗಟ್ಟಲೇ ಸೇರಿದ್ದ ಜನಸಾಗರವನ್ನು ಕೆಲ ಭಕ್ತರು ಚದುರಿಸುವ ಮೂಲಕ ಅಂಬುಲೆನ್ಸ್ ಗೆ ದಾರಿ ಮಾಡಿಕೊಟ್ಟಿದ್ದಾರೆ. ಇದರಿಂದ ಅಂಬುಲೆನ್ಸ್ ಸರಾಗವಾಗಿ ಸಂಚರಿಸಿದ್ದು, ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

    ಮಾಹಾಷ್ಟ್ರದಲ್ಲಿ ಗಣೇಶ ಹಬ್ಬವನ್ನು ವಿಜೃಂಭಣೆಯಿಂದ ಆಚರಿಸಲಾಗುತ್ತದೆ. ಮೆರವಣಿಗೆ ಮೂಲಕ ಸಾಗಿ ಸಾವಿರಾರು ಗಣೇಶ ಮೂರ್ತಿಗಳನ್ನು ನದಿ, ಕೆರೆ, ಸಮುದ್ರದಲ್ಲಿ ವಿಸರ್ಜಿಸಲಾಗುತ್ತದೆ.

    ಮಹಾರಾಷ್ಟ್ರದಲ್ಲಿ ಗಣೇಶ ವಿಸರ್ಜನೆ ಸಂದರ್ಭದಲ್ಲಿ 18 ಜನ ಜನ ಮುಳುಗಿ ಸಾವನ್ನಪ್ಪಿದ್ದಾರೆ ಎಂದು ಪೊಲೀಸರು ಇಂದು ತಿಳಿಸಿದ್ದಾರೆ. ಪೊಲೀಸ್ ಸರ್ಪಗಾವಲಿನ ಮಧ್ಯೆಯೇ ಮಹಾರಾಷ್ಟ್ರದಲ್ಲಿ ಸಾವಿರಾರು ಗಣೇಶ ವಿಗ್ರಹಗಳನ್ನು ವಿಸರ್ಜನೆ ಮಾಡಲಾಗುತ್ತಿದೆ.

  • ಗಣೇಶನ ಕೂರಿಸಲು ಸಂಗ್ರಹಿಸಿದ್ದ ಹಣದಲ್ಲಿ ರಸ್ತೆ ಗುಂಡಿ ಮುಚ್ಚಿದ ಯುವಕರು

    ಗಣೇಶನ ಕೂರಿಸಲು ಸಂಗ್ರಹಿಸಿದ್ದ ಹಣದಲ್ಲಿ ರಸ್ತೆ ಗುಂಡಿ ಮುಚ್ಚಿದ ಯುವಕರು

    ಚಿಕ್ಕಬಳ್ಳಾಪುರ: ಗಣೇಶೋತ್ಸವನ್ನು ವಿಭಿನ್ನವಾಗಿ ಆಚರಿಸಬೇಕೆಂದು ಎಲ್ಲ ಯುವಕರು ಭಾರೀ ಸಿದ್ಧತೆ ಮಾಡಿಕೊಂಡಿರುತ್ತಾರೆ. ಇದಕ್ಕಾಗಿ ಹಣ ಸಂಗ್ರಹಿಸಿ ಗಣೇಶೋತ್ಸವ ಆಚರಿಸುತ್ತಾರೆ. ಚಿಕ್ಕಬಳ್ಳಾಪುರ ತಾಲೂಕಿನ ಸೊಪ್ಪಹಳ್ಳಿ ಗ್ರಾಮದ ಯುವಕರು ಇತರರಿಗಿಂತ ವಿಭಿನ್ನವಾಗಿ ಹಬ್ಬ ಆಚರಿಸಿದ್ದು, ಗಣೇಶನನ್ನು ಕೂರಿಸಲು ಸಂಗ್ರಹಿಸಿದ್ದ ಹಣದಲ್ಲಿ ರಸ್ತೆಗಳ ಗುಂಡಿ ಮುಚ್ಚುವ ಮೂಲಕ ಮಾದರಿಯಾಗಿದ್ದಾರೆ.

    ಗುಂಡಿ ಬಿದ್ದಿರುವ ರಸ್ತೆಗೆ ಯುವಕರೇ ಮಣ್ಣು ಹಾಕಿ ಗುಂಡಿಗಳನ್ನು ಮುಚ್ಚುತ್ತಿದ್ದಾರೆ. ಗೌರಿ ಗಣೇಶ ಹಬ್ಬದ ಪ್ರಯುಕ್ತ ತಮ್ಮೂರಲ್ಲಿ ಗಣೇಶನನ್ನು ಕೂರಿಸಬೇಕಂತ ಒಟ್ಟುಗೂಡಿದ ಯುವಕರು ಸಾರ್ವಜನಿಕರಿಂದ ಚಂದಾ ವಸೂಲಿ ಮಾಡಿದ್ದರ. ಗಣೇಶನ ಹೆಸರಲ್ಲಿ ವಸೂಲಿ ಮಾಡಿದ್ದ ಹಣವನ್ನು ತಮ್ಮೂರಿಗೆ ಸಂಪರ್ಕ ಕೊಂಡಿಯಾಗಿರುವ ರಸ್ತೆಯ ಗುಂಡಿಗಳನ್ನು ಮುಚ್ಚಲು ಬಳಸಿಕೊಳ್ಳುವ ಮೂಲಕ ದೇವರ ಸೇವೆಯನ್ನು ಈ ರೀತಿಯಾಗಿಯೂ ಮಾಡಬಹುದು, ಸಮಾಜ ಸೇವೆಯೇ ದೇವರ ಸೇವೆ ಎಂಬುದನ್ನು ತೋರಿಸಿಕೊಟ್ಟಿದ್ದಾರೆ.

    ಗ್ರಾಮದಿಂದ ಮುಖ್ಯರಸ್ತೆಗೆ ಸಂಪರ್ಕ ಕಲ್ಪಿಸುವ ಈ ಪ್ರಮುಖ ರಸ್ತೆಯಲ್ಲಿನ ಗುಂಡಿಗಳಿಂದ ವಾಹನ ಸವಾರರು ಬಿದ್ದು ಕೈಕಾಲು ಮುರಿದುಕೊಂಡಿದ್ದರು. ಹೀಗಾಗಿ ಇದಕ್ಕೆ ಏನಾದರೂ ಮಾಡಬೇಕು ಎಂದು ವಿಭಿನ್ನ ಆಲೋಚನೆ ಮಾಡಿದ ಯುವಕರು ಈ ಕೆಲಸ ಮಾಡಿದ್ದಾರೆ. ಈ ಮೂಲಕ ಸರ್ಕಾರ ಮಾಡಬೇಕಾದ ಕೆಲಸವನ್ನು ಗ್ರಾಮದ ಯುವಕರೇ ಮಾಡಿದ್ದರಿಂದ ಗ್ರಾಮಸ್ಥರು ಸಹ ಯುವಕರ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

    ಯುವಕರು ಪ್ರತಿವರ್ಷ ಗ್ರಾಮದ ಮೂರು ಕಡೆ ಗಣೇಶನನ್ನು ಕೂರಿಸಿ ಪಂಗಡಗಳಾಗಿ ಹಂಚಿ ಹೋಗಿದ್ದ ಈ ಯುವಕರು ಈ ಬಾರಿ ಒಗ್ಗಾಟ್ಟಾಗಿದ್ದಾರೆ. ಬೀದಿಗೊಂದು ಗಣೇಶ ಬೇಡ, ಊರಿಗೊಂದೇ ಗಣೇಶ ಸಾಕು ಎಂದು ಒಂದೇ ಗಣೇಶ ಕೂರಿಸಿದ್ದಾರೆ. ಇನ್ನೆರಡು ಗಣೇಶನನ್ನು ಕೂರಿಸಲು ಸಂಗ್ರಹಿಸಿದ್ದ ಕಲೆಕ್ಷನ್ ಮಾಡಿದ ಹಣದಲ್ಲಿ ತಮ್ಮೂರಿನ ಮುಖ್ಯರಸ್ತೆಯಲ್ಲಿದ್ದ ಗುಂಡಿಗಳನ್ನ ಮುಚ್ಚೋಕೆ ಬಳಕೆ ಮಾಡಿ ಮಾದರಿಯಾಗಿದ್ದಾರೆ.

  • ಗಣೇಶೋತ್ಸವ ಪರವಾನಗಿಗೆ ಹಿಂದೂಗಳನ್ನು ನಾಯಿಯಂತೆ ಅಲೆಸಬೇಡಿ- ಅಧಿಕಾರಿಗಳಿಗೆ ಶಾಸಕ ಎಚ್ಚರಿಕೆ

    ಗಣೇಶೋತ್ಸವ ಪರವಾನಗಿಗೆ ಹಿಂದೂಗಳನ್ನು ನಾಯಿಯಂತೆ ಅಲೆಸಬೇಡಿ- ಅಧಿಕಾರಿಗಳಿಗೆ ಶಾಸಕ ಎಚ್ಚರಿಕೆ

    ತುಮಕೂರು: ‘ಹಿಂದೂಗಳಿಗೆ ನಾಯಿಯಂತೆ ಅಲೆಯಿಸುತ್ತಾರೆ’ ಗಣೇಶೋತ್ಸವ ಪರವಾನಗಿ ಪಡೆಯಲು ಹಿಂದೂಗಳು ನಾಯಿಯಂತೆ ಅಲೆಯುವ ಪರಿಸ್ಥಿತಿ ಇದೆ. ಇದನ್ನು ಸರಿಪಡಿಸದಿದ್ದಲ್ಲಿ ಮುಖ್ಯಮಂತ್ರಿಗಳಿಗೆ ಹೇಳಿ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ತುಮಕೂರು ನಗರ ಶಾಸಕ ಜ್ಯೋತಿಗಣೇಶ್ ಅಧಿಕಾರಿಗಳಿಗೆ ಖಡಕ್ ವಾರ್ನಿಂಗ್ ನೀಡಿದ್ದಾರೆ.

    ಗಣೇಶೋತ್ಸವ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅವರು, ಗಣೇಶನನ್ನು ಕೂರಿಸಲು ಪರವಾನಗಿ ಪಡೆಯಲು ತೆರಳಿದರೆ ಅಧಿಕಾರಿಗಳು ಇಲ್ಲಸಲ್ಲದ ಸಬೂಬು ಹೇಳಿ ಸುತ್ತಾಡಿಸುತ್ತಾರೆ. ಈ ಬಾರಿ ಯಾವುದೇ ಕಾರಣಕ್ಕೂ ಹಾಗಾಗಬಾರದು. ಎಲ್ಲ ಪರವಾನಗಿಗಳು ಒಂದೇ ಕಡೆ ಸಿಗುವಂತೆ ಮಾಡಬೇಕು. ಇಲ್ಲದಿದ್ದರೆ ಸಿಎಂ ಯಡಿಯೂರಪ್ಪ ಅವರ ಗಮನಕ್ಕೆ ತಂದು ಕಠಿಣ ಕ್ರಮ ತೆಗೆದುಕೊಳ್ಳುತ್ತೇನೆ ಎಂದು ಜಿಲ್ಲೆಯ ಎಲ್ಲ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು.

    ಈಗ ಇರುವುದು ಬೇರೆ ಯಾವುದೋ ಸರ್ಕಾರ ಅಲ್ಲ, ಬಿಜೆಪಿ ಸರ್ಕಾರ. ಅಧಿಕಾರಿಗಳು ಇದನ್ನು ಅರಿತು ಕೆಲಸ ಮಾಡಬೇಕು ಎಂದು ಸಭೆಯಲ್ಲಿ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ಅಲ್ಲದೆ, ಯಾರೇ ಯಾವುದೇ ಯುವಕ ಸಂಘದಿಂದ ಗಣೇಶೋತ್ಸವಕ್ಕೆ ಪರವಾನಗಿ ಕೇಳಿದರೂ ಶೀಘ್ರವೇ ನೀಡಬೇಕು. ಸತಾಯಿಸಕೂಡದು ಎಂದು ತಿಳಿಸಿದ್ದಾರೆ.

    ವಿಜಯಪುರದಲ್ಲಿ ಬನಾಯೆಂಗೆ ಮಂದಿರ್ ಸೇರಿ 2 ಹಾಡುಗಳನ್ನು ನಿಷೇಧಿಸಿ ಜಿಲ್ಲಾಧಿಕಾರಿ ವೈ.ಎಸ್.ಪಾಟೀಲ ಆದೇಶ ಹೊರಡಿಸಿದ್ದಾರೆ. ಗಣೇಶ ಚತುರ್ಥಿ ಹಿನ್ನೆಲೆ ಸೆಪ್ಟೆಂಬರ್ 2 ರಿಂದ 12ರ ವರೆಗೆ ಬನಾಯೆಂಗೆ ಮಂದಿರ ಹಾಡಿಗೆ ನಿಷೇಧ ಹೇರಲಾಗಿದೆ. ಈ ಹಿಂದೆ ಗಣೇಶ ಚತುರ್ಥಿ ಸಂದರ್ಭದಲ್ಲಿ ಈ ಹಾಡು ಬಳಕೆ ಹಿನ್ನೆಲೆ ಮತೀಯ ಗಲಭೆ ಉಂಟಾದ ಕಾರಣ ಹಾಡಿನ ಬಳಕೆ ನಿಷೇಧ ಮಾಡಲಾಗಿದೆ. ವಿಜಯಪುರ ಎಸ್ಪಿ ಪ್ರಕಾಶ ನಿಕ್ಕಮ್ ಪತ್ರದಲ್ಲಿ ಉಲ್ಲೇಖ ಹಿನ್ನೆಲೆ ಜಿಲ್ಲಾಧಿಕಾರಿ ಈ ಆದೇಶ ಹೊರಡಿಸಿದ್ದಾರೆ.