Tag: Ganeshotsava

  • ಪಾದಪೂಜೆ ಪಾಲಿಟಿಕ್ಸ್- ಅತ್ತ ಬಿಜೆಪಿ ಶಾಸಕ, ಇತ್ತ ಕೈ ಮುಖಂಡನಿಂದ ಪೌರಕಾರ್ಮಿಕರಿಗೆ ಪಾದಪೂಜೆ

    ಪಾದಪೂಜೆ ಪಾಲಿಟಿಕ್ಸ್- ಅತ್ತ ಬಿಜೆಪಿ ಶಾಸಕ, ಇತ್ತ ಕೈ ಮುಖಂಡನಿಂದ ಪೌರಕಾರ್ಮಿಕರಿಗೆ ಪಾದಪೂಜೆ

    ಹಾಸನ: ಪೌರಕಾರ್ಮಿಕರ ಹೆಸರಿನಲ್ಲಿ ಪಾದ ಪೂಜೆ ಪಾಲಿಟಿಕ್ಸ್ ನಡೆದಿದ್ದು, ಒಂದೆಡೆ ಪಾದ ಮಾಡಿದ ಬಿಜೆಪಿ ಶಾಸಕ ಪ್ರೀತಂಗೌಡ ಮತ್ತೊಂದೆಡೆ ಕಾಂಗ್ರೆಸ್ ಮುಖಂಡನಿಂದ ಪಾದಪೂಜೆ ಮಾಡಿದ್ದಾರೆ.

    ಮೂರು ವರ್ಷಗಳ ಬಳಿಕ ಎಲ್ಲೆಡೆ ಗೌರಿ-ಗಣೇಶ ಹಬ್ಬವನ್ನು ಸಡಗರ ಸಂಭ್ರಮದಿಂದ ಆಚರಿಸಲಾಗುತ್ತಿದೆ. ಹಲವು ಬಗೆಯ ವಿಶಿಷ್ಟವಾದ ಗೌರಿ-ಗಣಪನ ಮೂರ್ತಿ ಪ್ರತಿಷ್ಠಾಪಿಸಿ ಅಲಂಕಾರ ಮಾಡಿ ಪೂಜೆ ಸಲ್ಲಿಸಲಾಗುತ್ತಿದೆ. ಹಾಸನದಲ್ಲಿಯೂ ಇದಕ್ಕೆ ಹೊರತಾಗಿಲ್ಲ. ಆದರೆ ಈ ಭಾರಿ ಗೌರಿ-ಗಣೇಶ ಹಬ್ಬದ ಪ್ರಯುಕ್ತ ಪಾದ ಪೂಜೆ ಪಾಲಿಟಿಕ್ಸ್ ಜೋರಾಗಿದೆ.

    ಹಾಸನ ನಗರದ ಕಲಾಭವನದ ಆವರಣದಲ್ಲಿ ಪಾಂಚಜನ್ಯ ಹಿಂದೂ ಗಣಪತಿ ಸಮಿತಿಯಿಂದ ಪರಿಸರ ಪ್ರೇಮಿ ಗಣಪತಿ ಮೂರ್ತಿಯನ್ನು ಪ್ರತಿಷ್ಠಾಪಿಸಲಾಗಿದೆ. ಸ್ಥಳೀಯ ಶಾಸಕ ಪ್ರೀತಂಗೌಡ ಹಾಸನ ನಗರಸಭೆಯ ಇಪ್ಪತ್ತೈದು ಪೌರಕಾರ್ಮಿಕರ ಪಾದ ಪೂಜೆ ಮಾಡಿದರು. ಇವರ ಜೊತೆ ನಗರಸಭೆ ಅಧ್ಯಕ್ಷ ಮೋಹನ್‌ಕುಮಾರ್, ಬಿಜೆಪಿ ಮುಖಂಡರು ಪಾದ ಪೂಜೆ ನೆರವೇರಿಸಿದರು. ಅಲ್ಲದೇ ಪ್ರತಿಯೊಬ್ಬರಿಗೂ ಬಾಗಿನ ಹೆಸರಿನಲ್ಲಿ ಸೀರೆ, ಬಳೆ, ಕುಂಕುಮ, ಶರ್ಟ್ ಪೀಸ್ ವಿತರಿಸಲಾಯಿತು. ಇದನ್ನೂ ಓದಿ: ಮೋದಿ ಕಾರ್ಯಕ್ರಮ, ಕಟೀಲ್‌ ವಿರುದ್ಧ ಆಕ್ಷೇಪಾರ್ಹ ಪೋಸ್ಟ್‌ – 2 ಕೇಸ್‌ ದಾಖಲು

    ಇನ್ನೊಂದೆಡೆ ಕಾಂಗ್ರೆಸ್ ಮುಖಂಡ ಹಾಗೂ ಹಾಸನ ವಿಧಾನಸಭಾ ಕ್ಷೇತ್ರದ ಅಕಾಂಕ್ಷಿ ಬನವಾಸೆ ರಂಗಸ್ವಾಮಿ ಅವರು ಹಾಸನ ನಗರದ ಹೇಮಾವತಿ ಪ್ರತಿಮೆ ಬಳಿ ಪೌರಕಾರ್ಮಿಕರ ಪಾದಪೂಜೆ ಮಾಡಿದರು. ತಟ್ಟೆಯಲ್ಲಿ ಪೌರಕಾರ್ಮಿಕರ ಪಾದಗಳನ್ನು ತೊಳೆದು ನಂತರ ಬಾಗಿನ ನೀಡಿದರು. ಬಾಗಿನ ಪಡೆಯಲು ನೂಕುನುಗ್ಗಲು ಉಂಟಾಗಿತ್ತು. ಸೆ.5 ರಂದು ಪಾಂಚಜನ್ಯ ಗಣಪತಿ ವಿಸರ್ಜನೆ ಕಾರ್ಯಕ್ರಮವಿದ್ದು, ಇದರ ಅಂಗವಾಗಿ ಶೋಭಯಾತ್ರೆಯನ್ನು ಕೂಡ ಹಮ್ಮಿಕೊಳ್ಳಲಾಗಿದೆ. ಈ ಸಂದರ್ಭದಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ನಗರದಾದ್ಯಂತ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ. ಇದನ್ನೂ ಓದಿ: ಅಗ್ನಿಪಥ್ ದೈಹಿಕ ಪರೀಕ್ಷೆಗೆ ಪದವಿ ಪರೀಕ್ಷೆ ಅಡ್ಡಿ – 20 ದಿನ ಪದವಿ ಪರೀಕ್ಷೆ ಮುಂದೂಡಲು ಆಗ್ರಹ

    Live Tv
    [brid partner=56869869 player=32851 video=960834 autoplay=true]

  • ಐತಿಹಾಸಿಕ ಬೆಳಗಾವಿ ಗಣೇಶೋತ್ಸವದಲ್ಲಿ ವೀರ್ ಸಾವರ್ಕರ್ ಹವಾ

    ಐತಿಹಾಸಿಕ ಬೆಳಗಾವಿ ಗಣೇಶೋತ್ಸವದಲ್ಲಿ ವೀರ್ ಸಾವರ್ಕರ್ ಹವಾ

    ಬೆಳಗಾವಿ: ಜಿಲ್ಲೆಯ ಉತ್ತರ ಕ್ಷೇತ್ರದಲ್ಲಿ ವಿವಿಧ ಗಣೇಶ ಮಂಟಪಗಳಿಗೆ ವೀರ್ ಸಾವರ್ಕರ್ ಭಾವಚಿತ್ರ ವಿತರಣೆ ಮಾಡಲಾಗುತ್ತಿದೆ.

    ಸ್ಥಳೀಯ ಬಿಜೆಪಿ ನಾಯಕ, ಬೆಳಗಾವಿ ಮಹಾನಗರ ಬಿಜೆಪಿ ಪ್ರಧಾನ ಕಾರ್ಯದರ್ಶಿ ಮುರುಘೇಂದ್ರಗೌಡ ಪಾಟೀಲ್ ನೇತೃತ್ವದಲ್ಲಿ ವೀರ್ ಸಾವರ್ಕರ್ ಭಾವಚಿತ್ರ ವಿತರಣೆ ಮಾಡಲಾಗುತ್ತಿದೆ. ಈ ಬಾರಿ ಗಣೇಶೋತ್ಸವ ವೀರ್ ಸಾವರ್ಕರ್ ಗಣೇಶೋತ್ಸವವನ್ನಾಗಿ ಆಚರಿಸಲು ಕರೆ ನೀಡಲಾಗಿದೆ. ಬೆಳಗಾವಿ ನಗರದ ವಿವಿಧ ಬಡಾವಣೆಗಳಲ್ಲಿ ಒಟ್ಟು 378 ಸಾರ್ವಜನಿಕ ಗಣೇಶ ವಿಗ್ರಹ ಪ್ರತಿಷ್ಠಾಪನೆ ಮಾಡಲಾಗುತ್ತಿದೆ.

    ಗಣೇಶ ಪ್ರತಿಷ್ಠಾಪನೆಗೂ ಮುನ್ನವೇ ಮಂಟಪಗಳಿಗೆ ತೆರಳಿ ಸಾವರ್ಕರ್ ಭಾವಚಿತ್ರ ವಿತರಿಸಲಾಗಿದೆ. ಇಂದು ರಾತ್ರಿ ವೇಳೆ ಬೆಳಗಾವಿಯ ವಿವಿಧ ಬಡಾವಣೆಗಳಲ್ಲಿ 378 ಗಣೇಶ ವಿಗ್ರಹಗಳು ಪ್ರತಿಷ್ಠಾಪನೆಗೊಳ್ಳಲಿವೆ. ಕೋವಿಡ್ ಹಿನ್ನೆಲೆ ಎರಡು ವರ್ಷ ಅದ್ಧೂರಿ ಗಣೇಶೋತ್ಸವಕ್ಕೆ ಬ್ರೇಕ್ ಬಿದ್ದಿತ್ತು. ಈ ಬಾರಿ ಗಣೇಶೋತ್ಸವ ಸಾವರ್ಕರ್ ಗಣೇಶ ಉತ್ಸವವನ್ನಾಗಿ ಆಚರಿಸಲು ಹಿಂದೂಪರ ಸಂಘಟನೆಗಳು ನಿರ್ಧರಿಸಿವೆ. ಇದನ್ನೂ ಓದಿ: ನಮ್ಮ ಭಾವನೆಗಳನ್ನು ವಿರೋಧಿಸಿದವರಿಗೆ ಕಪಾಳಮೋಕ್ಷವಾಗಿದೆ: ಮುತಾಲಿಕ್

    ಹಿಂದೂಪರ ಸಂಘಟನೆಗಳಿಗೆ ಸ್ಥಳೀಯ ಬಿಜೆಪಿ ಶಾಸಕರು, ನಾಯಕರು ಬೆಂಬಲ ವ್ಯಕ್ತಪಡಿಸಿದ್ದಾರೆ. ಬೆಳಗಾವಿ ಗಣೇಶೋತ್ಸವಕ್ಕಿದೆ ತನ್ನದೇ ಆದ ಇತಿಹಾಸ ಇದ್ದು, 1905ರಲ್ಲಿ ಖುದ್ದು ಬಾಲಗಂಗಾಧರ ತಿಲಕ್‍ರಿಂದ ಬೆಳಗಾವಿಯಲ್ಲಿ ಗಣೇಶೋತ್ಸವಕ್ಕೆ ಚಾಲನೆ ನೀಡಲಾಗಿತ್ತು. ಪ್ರತಿ ವರ್ಷ 11 ದಿನಗಳ ಕಾಲ ನಡೆಯುವ ಅದ್ಧೂರಿ ಗಣೇಶೋತ್ಸವ ನಡೆಯುತ್ತಾ ಬಂದಿದೆ.

    Live Tv
    [brid partner=56869869 player=32851 video=960834 autoplay=true]

  • ಗಣೇಶೋತ್ಸವಕ್ಕೂ ಮೊದಲೇ ಶುರುವಾಯ್ತು ಕಲ್ಲುತೂರಾಟ – ವಡೋದರಾದಲ್ಲಿ 13 ಮಂದಿ ಬಂಧನ

    ಗಣೇಶೋತ್ಸವಕ್ಕೂ ಮೊದಲೇ ಶುರುವಾಯ್ತು ಕಲ್ಲುತೂರಾಟ – ವಡೋದರಾದಲ್ಲಿ 13 ಮಂದಿ ಬಂಧನ

    ಗಾಂಧಿನಗರ: ಗುಜರಾತ್‌ನ ವಡೋದರಾದಲ್ಲಿ ಸೋಮವಾರ ರಾತ್ರಿ ಗಣೇಶನ ಮೂರ್ತಿಯನ್ನು ಹೊತ್ತ ಮೆರವಣಿಗೆ ಸೂಕ್ಷ್ಮ ಪ್ರದೇಶದಲ್ಲಿ ಸಾಗುತ್ತಿದ್ದಾಗ ಎರಡು ಸಮುದಾಯದವರು ಪರಸ್ಪರ ಕಲ್ಲುತೂರಾಟ ನಡೆಸಿರುವುದಾಗಿ ವರದಿಯಾಗಿದೆ. ಘಟನೆಗೆ ಸಂಬಂಧಿಸಿದಂತೆ 13 ಜನರನ್ನು ಬಂಧಿಸಲಾಗಿದೆ.

    ಎರಡು ಸಮುದಾಯದವರ ನಡುವೆ ಘರ್ಷಣೆ ನಡೆಯುತ್ತಿದ್ದಂತೆ ಎರಡೂ ಕಡೆಯವರ ವಿರುದ್ಧ ವಡೋದರಾ ನಗರ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ. ಘಟನೆಗೆ ಸಂಬಂಧಿಸಿದಂತೆ ಪೊಲೀಸರು ಇದುವರೆಗೆ 13 ಜನರನ್ನು ಬಂಧಿಸಿದ್ದಾರೆ. ಸದ್ಯ ಘಟನೆಯಲ್ಲಿ ಯಾರಿಗೂ ಗಾಯಗಳಾಗಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ. ಇದನ್ನೂ ಓದಿ: ಪೊಲೀಸ್ ಠಾಣೆಯಲ್ಲೇ ಮಹಿಳೆಯೊಂದಿಗೆ ಚಕ್ಕಂದ – ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದ ASI

    ವರದಿಗಳ ಪ್ರಕಾರ ಕೋಮು ಸೂಕ್ಷ್ಮ ಪ್ರದೇಶ ಮಾಂಡವಿಯ ಪಾಣಿಗೇಟ್ ದರ್ವಾಜಾ ಮೂಲಕ ರಾತ್ರಿ 11:15ರ ವೇಳೆಗೆ ಗಣೇಶನ ಮೂರ್ತಿ ಹೊತ್ತು ಮೆರವಣಿಗೆ ಸಾಗುತ್ತಿತ್ತು. ಈ ವೇಳೆ ಯಾವುದೋ ವಿಷಯಕ್ಕೆ ಸಂಬಂಧಿಸಿದಂತೆ ಇಬ್ಬರ ನಡುವೆ ವಾಗ್ವಾದ ನಡೆದಿದೆ. ಬಳಿಕ 2 ಸಮುದಾಯದ ಸದಸ್ಯರು ಪರಸ್ಪರ ಕಲ್ಲು ತೂರಾಟ ನಡೆಸಿದ್ದಾರೆ. ಈ ವೇಳೆ ಹತ್ತಿರದ ಮಸೀದಿಯೊಂದರ ಮುಖ್ಯ ದ್ವಾರದ ಗಾಜಿಗೆ ಹಾನಿಯಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇದನ್ನೂ ಓದಿ: ವರದಕ್ಷಿಣೆಗಾಗಿ ಸೊಸೆಯನ್ನು ಹೊರಹಾಕಿದವರ ಮನೆ ಮುಂದೆ ಘರ್ಜಿಸಿತು ಬುಲ್ಡೋಜರ್‌ – ಮುಂದೇನಾಯ್ತು?

    ಬಳಿಕ ಕಾನೂನು ಸುವ್ಯವಸ್ಥೆ ಹತೋಟಿಗೆ ತರಲು ಸ್ಥಳದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ. ಗಣೇಶನ ಮೂರ್ತಿಯನ್ನು ಶಾಂತಯುತವಾಗಿ ಗಮ್ಯ ಸ್ಥಳಕ್ಕೆ ಕೊಂಡೊಯ್ಯಲಾಯಿತು ಎನ್ನಲಾಗಿದೆ.

    Live Tv
    [brid partner=56869869 player=32851 video=960834 autoplay=true]

  • ಕೋಲಾರ ಗಣೇಶೋತ್ಸವ – ರಾತ್ರಿ 10 ಗಂಟೆ ಬಳಿಕ ಮನರಂಜನಾ ಕಾರ್ಯಕ್ರಮಕ್ಕೆ ಅವಕಾಶವಿಲ್ಲ

    ಕೋಲಾರ ಗಣೇಶೋತ್ಸವ – ರಾತ್ರಿ 10 ಗಂಟೆ ಬಳಿಕ ಮನರಂಜನಾ ಕಾರ್ಯಕ್ರಮಕ್ಕೆ ಅವಕಾಶವಿಲ್ಲ

    ಕೋಲಾರ: ರಾತ್ರಿ 10 ಗಂಟೆ ಬಳಿಕ ಯಾವುದೇ ಮನರಂಜನೆ ಕಾರ್ಯಕ್ರಮಗಳಿಗೆ ಅವಕಾಶವಿಲ್ಲ, ಮೂರ್ತಿ ವಿಸರ್ಜನೆ ವೇಳೆ ಡಿಜೆಗೆ ನ್ಯಾಯಾಲಯದ ಆದೇಶ ಪಾಲನೆ ಮಾಡುವುದು ಕಡ್ಡಾಯ ಎಂದು ಕೋಲಾರ ಎಸ್ಪಿ ಡಿ.ದೇವರಾಜ್ ಹೇಳಿದರು.

    ಗಣೇಶ ಹಬ್ಬದ ಹಿನ್ನೆಲೆಯಲ್ಲಿ ಕೋಲಾರ ಜಿಲ್ಲಾಡಳಿತದಿಂದ ಜಿಲ್ಲಾಧಿಕಾರಿಗಳ ಕಚೇರಿ ಆವರಣದಲ್ಲಿ ಮುಖಂಡರ ಶಾಂತಿ ಸಭೆಯನ್ನು ಹಮ್ಮಿಕೊಳ್ಳಲಾಗಿತ್ತು. ಜಿಲ್ಲಾಧಿಕಾರಿ ಡಾ. ವೆಂಕಟ್‍ರಾಜ್ ಅಧ್ಯಕ್ಷತೆಯಲ್ಲಿ ಹಮ್ಮಿಕೊಳ್ಳಲಾಗಿದ್ದ ಸಭೆಯಲ್ಲಿ, ಗಣೇಶ ಪ್ರತಿಷ್ಠಾಪನೆ ಸೇರಿದಂತೆ ಗಣೇಶೋತ್ಸವದ ಎಲ್ಲಾ ಕಾರ್ಯಕ್ರಮದಲ್ಲೂ, ಅದಕ್ಕೆ ಬೇಕಾದ ಅನುಮತಿ ಹಾಗೂ ಗಣೇಶ ಮೂರ್ತಿ ವಿಸರ್ಜನೆ ಕುರಿತು ಕೆಲ ಮಾನದಂಡಗಳನ್ನು ವಿಧಿಸಲಾಯಿತು.

    ಇನ್ನು ಈ ಬಾರಿಯೂ ಎಂದಿನಂತೆ ಶಾಂತಿ ಹಾಗೂ ಭಕ್ತಿಯಿಂದ ಆಚರಣೆ ಮಾಡಲು ಬೇಕಾದ ಅಗತ್ಯ ನಿರೀಕ್ಷಣಾ ಪತ್ರ ಪಡೆಯುವುದು ಕಡ್ಡಾಯವಾಗಿದೆ. ಇನ್ನೂ ಪೊಲೀಸ್, ಬೆಸ್ಕಾಂ, ಪಿಡಬ್ಲ್ಯೂಡಿ ಇಲಾಖೆಗಳ ಅನುಮತಿ ಕಡ್ಡಾಯವಾಗಿದೆ ಎಂದು ತಿಳಿಸಿದರು. ನಾನು ರಾಗಿ ಕದ್ದಿಲ್ಲ- ಧರ್ಮಸ್ಥಳದಲ್ಲಿ ಆಣೆ ಮಾಡಿದ ಶಿವಲಿಂಗೇಗೌಡ

    3 ಹಾಗೂ 5 ದಿನಗಳು ಪ್ರತಿಷ್ಠಾಪನೆ ಮಾಡುವವರಿಗೆ ಯಾವುದೆ ನಿರ್ಬಂಧವಿಲ್ಲ. ಆದರೆ ರಾತ್ರಿ 10 ಗಂಟೆ ಬಳಿಕ ಯಾವುದೇ ಮನರಂಜನೆ ಕಾರ್ಯಕ್ರಮಗಳಿಗೆ ಅವಕಾಶವಿರುವುದಿಲ್ಲ. ಡಿಜೆಗೆ ನಿಗದಿತ ಮಾನದಂಡಗಳನ್ನು ವಿಧಿಸಲಾಗುವುದು ಎಂದು ಎಸ್ಪಿ ಡಿ.ದೇವರಾಜ್ ಮಾಹಿತಿ ನೀಡಿದರು. ಮುರುಘಾ ಕೇಸ್‌ – ಮಠಕ್ಕೆ ಕರೆದೊಯ್ದು ಸ್ಥಳ ಮಹಜರು

    Live Tv
    [brid partner=56869869 player=32851 video=960834 autoplay=true]

  • ಸೂರ್ಯ ಚಂದ್ರರಿರುವ ತನಕ ಈದ್ಗಾ ಮೈದಾನದಲ್ಲಿ ಗಣೇಶೋತ್ಸವ ಆಚರಣೆ ಆಗಲಿದೆ: ಲಹರಿ ವೇಲು

    ಸೂರ್ಯ ಚಂದ್ರರಿರುವ ತನಕ ಈದ್ಗಾ ಮೈದಾನದಲ್ಲಿ ಗಣೇಶೋತ್ಸವ ಆಚರಣೆ ಆಗಲಿದೆ: ಲಹರಿ ವೇಲು

    ಬೆಂಗಳೂರು: 75 ವರ್ಷಗಳಿಂದ ಚಾಮರಾಜಪೇಟೆಯ ಮೈದಾನದಲ್ಲಿ ತಿರಂಗ ಹಾರಿಸಲು ಹಾಗೂ ಗಣೇಶೋತ್ಸವ ನಡೆಸಲು ಸಾಧ್ಯವಾಗಿರಲಿಲ್ಲ. ಆದರೆ ಈ ಬಾರಿ ನಮ್ಮ ಹೋರಾಟಕ್ಕೆ ಫಲ ಸಿಕ್ಕಿದೆ. ಸೂರ್ಯ ಚಂದ್ರರಿರುವ ತನಕ ಪ್ರತಿ ವರ್ಷವೂ ಇಲ್ಲಿ ಗಣೇಶೋತ್ಸವ ಆಚರಣೆ ಆಗಲಿದೆ ಎಂದು ಲಹರಿ ಆಡಿಯೋ ಸಂಸ್ಥೆಯ ಮಾಲೀಕರಾದ ಲಹರಿ ವೇಲು ಹೇಳಿಕೆ ನೀಡಿದ್ದಾರೆ.

    ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಲಹರಿ ವೇಲು, ಈದ್ಗಾ ಮೈದಾನದಲ್ಲಿ ತಿರಂಗ ಹಾರಿಸೋಕೆ ನಾವು ಸತತ ಪ್ರಯತ್ನ ಮಾಡಿದ್ದೇವೆ. ಕೊನೆಗೂ ಶಾಂತಿಯುತವಾಗಿ ಧ್ವಜಾರೋಹಣ ಮಾಡಿದ್ದೇವೆ. ಗಣೇಶೋತ್ಸವ ನಡೆಸಲು ಅರ್ಜಿ ಸಲ್ಲಿಸಿದ್ದೇವೆ. ಈಗಾಗಲೇ ನ್ಯಾಯಾಂಗದಲ್ಲಿ ಗ್ರೀನ್ ಸಿಗ್ನಲ್ ಸಿಕ್ಕಿದೆ. ಈಗ ಹೋರಾಟಕ್ಕೆ ಫಲ ಸಿಕ್ಕಿದ್ದು, ಲಹರಿ ಸಂಸ್ಥೆಯಿಂದ ಗಣೇಶ ಮೂರ್ತಿಯನ್ನು ಪ್ರತಿ ವರ್ಷವೂ ಪ್ರತಿಷ್ಠಾಪನೆ ಮಾಡಲಿದ್ದೇವೆ. 16 ನದಿಗಳ ಪವಿತ್ರ ನೀರನ್ನು ಪ್ರೋಕ್ಷಣೆ ಮಾಡಿ, ಶುದ್ಧೀಕರಿಸಿ ಗಣೇಶ ಪ್ರತಿಷ್ಠಾಪನೆ ಮಾಡಲಿದ್ದೇವೆ ಎಂದು ತಿಳಿಸಿದರು.

    ಜಮೀರ್ ಸೇರಿದಂತೆ ಎಲ್ಲರೂ ಹಬ್ಬಕ್ಕೆ ಬಂದು ಆರತಿ ತೆಗೆದುಕೊಂಡು ಹೋಗಬಹುದು. ಎಲ್ಲರಿಗೂ ಮುಕ್ತ ಅವಕಾಶ ಇದೆ. ನಮ್ಮ ಮಧ್ಯೆ ಯಾವುದೇ ಒಡಕು ಇಲ್ಲ. ಎಲ್ಲರೂ ಒಗ್ಗಟ್ಟಾಗಿದ್ದೇವೆ. ಯಾರಿಗೆ ಅನುಮತಿ ಕೊಟ್ಟರೂ ಹಬ್ಬವನ್ನು ವಿಜೃಂಭಣೆಯಿಂದ ಆಚರಿಸುತ್ತೇವೆ ಎಂದರು. ಇದನ್ನೂ ಓದಿ: ಮೈಸೂರು-ಬೆಂಗ್ಳೂರು ಸಂಚಾರಕ್ಕೆ ಪರ್ಯಾಯ ಮಾರ್ಗ ಬಳಸಿ

    ಚಾಮರಾಜಪೇಟೆಯ ಗಣೇಶೋತ್ಸವದಲ್ಲಿ ಸಾರ್ವಕರ್ ಫೋಟೋ ಕೂಡಾ ಇಡುತ್ತೇವೆ. ಸಾವರ್ಕರ್ ಸ್ವಾತಂತ್ರ್ಯ ಹೋರಾಟಗಾರರು. ಅವರ ಫೋಟೋ ಇಡುವುದರಲ್ಲಿ ತಪ್ಪೇನಿದೆ ಎಂದು ಪ್ರಶ್ನಿಸಿದರು.

    ಈ ಸ್ಥಳವನ್ನು ಸೂಕ್ಷ್ಮ ಪ್ರದೇಶ ಎಂದು ಹೇಳುತ್ತಾರೆ. ಆದರೆ ರಂಜಾನ್, ಬಕ್ರೀದ್ ಮಾಡುವಾಗ ಸೂಕ್ಷ್ಮ ಪ್ರದೇಶ ಎನ್ನುವುದಿಲ್ಲ. ಹೀಗಾಗಿ ಗಣೇಶೋತ್ಸವ ಮಾಡುವಾಗ ಯಾಕೆ ಈ ಸೂಕ್ಷ್ಮ ಪ್ರದೇಶದ ವಿಚಾರ? ಪಾದರಾಯನಪುರ ಸೇರಿದಂತೆ ಚಾಮರಾಜಪೇಟೆಯ ಗಲ್ಲಿಯಲ್ಲಿ ಗಣೇಶೋತ್ಸವ ಮೆರವಣಿಗೆಯನ್ನು ನಾವು ಮಾಡುತ್ತೇವೆ. ಈ ಹಿಂದೆ ರಸ್ತೆಯಲ್ಲಿ ಇಟ್ಟಾಗಲೂ ನಾವು ಅಲ್ಲೇ ಮೆರವಣಿಗೆ ಮಾಡಿದ್ದೇವೆ. ಹೀಗಾಗಿ ಇಲ್ಲೂ ಮೆರವಣಿಗೆಯ ಬಗ್ಗೆ ಈ ವರ್ಷ ಯೋಜನೆ ಇದೆ ಎಂದರು. ಇದನ್ನೂ ಓದಿ: ಚಾಮರಾಜಪೇಟೆ ಮೈದಾನದಲ್ಲಿ ಗಣೇಶ ಪ್ರತಿಷ್ಠಾಪನೆ ವಿಚಾರ ಸಂಜೆ ನಿರ್ಧಾರ: ಸಿಎಂ ಬೊಮ್ಮಾಯಿ

    ಮುಸ್ಲಿಂ ಸಂಘಟನೆ ಸುಪ್ರೀಂ ಕೋರ್ಟ್ ಹೋಗುವುದಾದರೆ ಹೋಗಲಿ. ನಮಗೆ ಯಾವ ಅಭ್ಯಂತರ, ಭಯವೂ ಇಲ್ಲ. ಅವರು ಸುಪ್ರೀಂ ಕೋರ್ಟ್ಗೆ ಹೋದರೆ ನಾವು ಕೂಡಾ ಸುಪ್ರೀಂ ಕೋರ್ಟ್‌ಗೆ ಹೋಗುತ್ತೇವೆ. ನಮ್ಮ ಒಕ್ಕೂಟ ಒಡೆಯಲು ಕೆಲ ಕುತಂತ್ರಿಗಳು ಭಾರೀ ಪ್ರಯತ್ನ ಮಾಡಿದ್ದಾರೆ. ಆದರೆ ನಾವು ಒಗ್ಗಟ್ಟಿನಲ್ಲಿದ್ದೇವೆ. ಇಂದು ಸಂಜೆಯಷ್ಟರಲ್ಲಿ ಸರ್ಕಾರ ಅನುಮತಿ ಕೊಡುವ ನಿರೀಕ್ಷೆ ಇದೆ. ಈ ಪ್ರದೇಶದಲ್ಲಿ ಬಕ್ರೀದ್ ರಂಜಾನ್ ಕೂಡ ಮಾಡಲಿ, ಗಣೇಶೋತ್ಸವವನ್ನೂ ಮಾಡಲಿ ಎಂದರು.

    Live Tv
    [brid partner=56869869 player=32851 video=960834 autoplay=true]

  • ಬೆಂಗಳೂರಿನಲ್ಲಿ ಗಣೇಶ ಹಬ್ಬ – ಪೊಲೀಸ್‌ ಇಲಾಖೆಯ ನಿಯಮಗಳೇನು?

    ಬೆಂಗಳೂರಿನಲ್ಲಿ ಗಣೇಶ ಹಬ್ಬ – ಪೊಲೀಸ್‌ ಇಲಾಖೆಯ ನಿಯಮಗಳೇನು?

    ಬೆಂಗಳೂರು: ಮೂರು ವರ್ಷಗಳಿಂದ ಕೊರೊನಾ ಹಿನ್ನೆಲೆಯಲ್ಲಿ ಗಣೇಶೋತ್ಸವ ಕಳೆಗಟ್ಟಿತ್ತು. ಆದರೆ ಈ ಬಾರಿ ಗಣೇಶೋತ್ಸವವನ್ನು ಅದ್ಧೂರಿಯಾಗಿ ಆಚರಿಸಬೇಕು ಎಂದು ಅನೇಕರು ನಿರ್ಧರಿಸಿದ್ದಾರೆ. ಆದರೆ ಗಣೇಶನನ್ನು ಕೂರಿಸಲು ಪೊಲೀಸ್‌ ಇಲಾಖೆಯಿಂದ ಹತ್ತಾರು ನಿಬಂಧನೆಗಳು ಸಿದ್ಧವಾಗಿದ್ದು, ಆಯೋಜಕರು ಕಟ್ಟುನಿಟ್ಟಿನ ನಿಬಂಧನೆಗಳನ್ನ ಫಾಲೋ ಮಾಡಬೇಕು. ಗಣೇಶನನ್ನು ಕೂರಿಸಲು ಇರುವ ನಿಬಂಧನೆಗಳು ಈ ರೀತಿಯಾಗಿವೆ.

    ಸಾರ್ವಜನಿಕ ಸ್ಥಳದಲ್ಲಿ ಗಣೇಶ ಪ್ರತಿಷ್ಠಾಪನೆಗೆ ಬಿಬಿಎಂಪಿಯ ಏಕಗವಾಕ್ಷಿಯಲ್ಲಿ ಅನುಮತಿ ಪಡೆಯಬೇಕು. ಸದೃಢವಾಗಿ ಶಾಮಿಯಾನ ನಿರ್ಮಿಸಬೇಕು. ಶಾಮಿಯಾನಗೆ ಫ್ಲೇಕ್ಸ್, ಬ್ಯಾನರ್, ಬಂಟಿಂಗ್ಸ್ ಅಳವಡಿಸಬಹುದು‌. ಆದರೆ ಶಾಮಿಯಾನ ಹೊರತುಪಡಿಸಿ ಬೇರೆಡೆ ಫ್ಲೇಕ್ಸ್, ಬ್ಯಾನರ್, ಬಂಟಿಂಗ್ಸ್ ಅಳವಡಿಕೆಗೆ ಪ್ರತ್ಯೇಕ ಅನುಮತಿ ಪಡೆಯಬೇಕು. ಯಾವುದೇ ಕಾರಣಕ್ಕೂ ವಿವಾದಿತ ಸ್ಥಳದಲ್ಲಿ ಗಣೇಶ ಪ್ರತಿಷ್ಠಾಪನೆ ಮಾಡುವಂತಿಲ್ಲ. ಹಾಗೂ ಸ್ಥಳ ಮಾಲೀಕರು ಮತ್ತು ಬಿಬಿಎಂಪಿ ಏಕಗವಾಕ್ಷಿ ಅನುಮತಿ ಪಡೆಯಬೇಕು.

    ಗಣೇಶ ಪ್ರತಿಷ್ಠಾಪನೆ ಸ್ಥಳದಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ನೋಡಿಕೊಳ್ಳಲು 24 ಗಂಟೆ ಆಯೋಜಕ ಕಾರ್ಯಕರ್ತರು ಇರಬೇಕು. ಅವರ ವಿವರಗಳನ್ನು ಪೊಲೀಸರಿಗೆ ಕೊಡಬೇಕು. ಗಣೇಶ ಪ್ರತಿಷ್ಠಾಪನೆ ಸ್ಥಳದಲ್ಲಿ ಪೊಲೀಸ್ ಹಾಗೂ ಬಿಬಿಎಂಪಿ ನಿಯಮದಂತೆ ಸಿಸಿಟಿವಿಗಳ ಅಳವಡಿಕೆ ಮಾಡಬೇಕು. ಗಣೇಶ ಪ್ರತಿಷ್ಠಾಪನೆ ಸ್ಥಳದಲ್ಲಿ ಬೆಂಕಿ ನಂದಿಸುವ ಉಪಕರಣಗಳು ಇರಬೇಕು. ಮರಳು ತುಂಬಿದ ಬಕೆಟ್, ನೀರಿನ ವ್ಯವಸ್ಥೆ ಇರಬೇಕು.

    ಗಣೇಶ ಪ್ರತಿಷ್ಠಾಪನೆ ಸ್ಥಳದಲ್ಲಿ ಅಡುಗೆ ಮಾಡುವ ಕಟ್ಟಿಗೆ, ಉರುವಲು, ಸೀಮೆಎಣ್ಣೆ ಇಡಬಾರದು. ಗಣೇಶ ಪ್ರತಿಷ್ಠಾಪನೆ ಸ್ಥಳದಲ್ಲಿ ಓರ್ವ ಎಲೆಕ್ಟ್ರಿಷಿನ್ ಇರಬೇಕು, ಸಮರ್ಪಕ ಬೆಳಕು, ವಿದ್ಯುತ್ ವ್ಯವಸ್ಥೆ ಇರುವಂತೆ ನೋಡಿಕೊಳ್ಳಬೇಕು. ಶಾರ್ಟ್ ಸರ್ಕ್ಯೂಟ್, ಇತರ ಅವಘಡ ತಡೆಯಲು ಸನ್ನದ್ಧರಾಗಿರಬೇಕು. ಸಾರ್ವಜನಿಕರು ಬರಲು ಹೋಗಲು ಸಮರ್ಪಕ ಆಗಮನ ನಿರ್ಗಮನ ವ್ಯವಸ್ಥೆ ಇರಬೇಕು. ಬ್ಯಾರಿಕೇಡ್ ನಿರ್ಮಿಸಿ, ಸ್ವಯಂ ಸೇವಕರು ಇರಬೇಕು. ಜನ ಹೆಚ್ಚಾದರೆ ಖಾಸಗಿ ಭದ್ರತಾ ವ್ಯವಸ್ಥೆ ಮಾಡಿಕೊಳ್ಳುವುದು.

    ಗಣೇಶ ವಿಸರ್ಜನೆ ವೇಳೆ ಯಾವುದೇ ರೀತಿಯ ಅಹಿತಕರ ಘಟನೆಗೆ ಅವಕಾಶ ನೀಡದಂತೆ ಆಯೋಜಕರು ಕ್ರಮ ವಹಿಸುವುದು. ಮನರಂಜನಾ ಕಾರ್ಯಕ್ರಮ, ಮೆರವಣಿಗೆ, ವಿಸರ್ಜನೆ ವೇಳೆ ಹೆಣ್ಣು ಮಕ್ಕಳಿಗೆ ಚುಡಾಯಿಸುವುದು ಕೀಟಲೆ ಮಾಡಿದಾಗ ಕೂಡಲೇ ಪೊಲೀಸರ ಸಂಪರ್ಕಿಸುವುದು. ಸರ್ಕಾರ ಮತ್ತು ಹೈಕೋರ್ಟ್ ಆದೇಶದಂತೆ ಹಿರಿಯ ನಾಗರಿಕರು, ರೋಗಿಗಳಿಗೆ ತೊಂದರೆಯಾಗದಂತೆ ಧ್ವನಿವರ್ಧಕಗಳನ್ನು ಬೆಳಗ್ಗೆ 6 ಗಂಟೆಯಿಂದ ರಾತ್ರಿ 10 ಗಂಟೆಯವರೆಗೆ ನಿಯಮಿತವಾಗಿ ಬಳಸುವುದು. ಇದನ್ನೂ ಓದಿ: ರಾಷ್ಟ್ರೀಯ ಭದ್ರತಾ ಸಮೂಹಕ್ಕೆ `ಡ್ರೋನ್ ಸಮೂಹ’ ಸೇರ್ಪಡೆ – ಏನಿದರ ವಿಶೇಷತೆ?

    ಗಣೇಶ ಪ್ರತಿಷ್ಠಾಪನೆ ಮಂಡಳಿಯ ಅಧ್ಯಕ್ಷರು, ಕಾರ್ಯದರ್ಶಿ ಮತ್ತು ಪದಾಧಿಕಾರಿಗಳು ತಮ್ಮ ವಿಳಾಸ ಮತ್ತು ಫೋನ್ ನಂಬರ್ ಸಂಬಂಧಪಟ್ಟ ಠಾಣಾಧಿಕಾರಿಗಳಿಗೆ ನೀಡುವುದು ಹಾಗೂ ಸ್ಥಳದಲ್ಲಿ ಎಲ್ಲರಿಗೂ ಕಾಣುವಂತೆ ಪ್ರದರ್ಶಿಸುವುದು. ಯಾವುದೇ ರೀತಿಯ ಲೇಸರ್‌ ಪ್ರೊಜೆಕ್ಷನ್ ಮಾಡಬಾರದು. ಮೆರವಣಿಗೆ ಸೂಕ್ಷ್ಮ ಸ್ಥಳ, ಅತಿ ಸೂಕ್ಷ್ಮ ಸ್ಥಳದಲ್ಲಿ ಸಾಗುವಾಗ ಸಿಡಿಮದ್ದು ಪಟಾಕಿ ಸಿಡಿಸದಂತೆ ನೋಡಿಕೊಳ್ಳಬೇಕು.

    ಗಣೇಶ ಪ್ರತಿಷ್ಠಾಪನೆ ಮತ್ತು ಕಾರ್ಯಕ್ರಮಕ್ಕೆ ಬಲವಂತವಾಗಿ ವಂತಿಗೆ ವಸೂಲಿ ಮಾಡಿದರೆ ಕಠಿಣ ಕ್ರಮ. ಆಯೋಜಕರು ಸ್ವಯಂ ಸೇವಕರಿಗೆ ಟೀ ಶರ್ಟ್ ಮತ್ತು ಗುರುತಿನ ಚೀಟಿ, ಕ್ಯಾಪ್ ಕೊಟ್ಟು ಅವರನ್ನ ಗುರುತಿಸಲು ಸಾಧ್ಯವಾಗಬೇಕು. ಇದನ್ನೂ ಓದಿ: ಮಾಜಿ ಸಿಎಂ ಸಿದ್ದರಾಮಯ್ಯ ಕಿರಿಯ ಸಹೋದರ ರಾಮೇಗೌಡ ನಿಧನ

    Live Tv
    [brid partner=56869869 player=32851 video=960834 autoplay=true]

  • ಚಾಮರಾಜಪೇಟೆ ಮೈದಾನದಲ್ಲಿ ಗಣೇಶೋತ್ಸವಕ್ಕೆ ಅನುಮತಿ – ಸರ್ಕಾರದ ವಿವೇಚನೆಗೆ ಬಿಟ್ಟ ಹೈಕೋರ್ಟ್‌

    ಚಾಮರಾಜಪೇಟೆ ಮೈದಾನದಲ್ಲಿ ಗಣೇಶೋತ್ಸವಕ್ಕೆ ಅನುಮತಿ – ಸರ್ಕಾರದ ವಿವೇಚನೆಗೆ ಬಿಟ್ಟ ಹೈಕೋರ್ಟ್‌

    ಬೆಂಗಳೂರು: ಚಾಮರಾಜಪೇಟೆಯ ಈದ್ಗಾ ಮೈದಾನದಲ್ಲಿ ಗಣೇಶೋತ್ಸವ ನಡೆಯೋದು ಬಹುತೇಕ ಖಚಿತವಾಗಿದೆ. ಹೈಕೋರ್ಟ್ ಏಕಸದಸ್ಯ ಪೀಠದ ಮಧ್ಯಂತರ ತೀರ್ಪನ್ನು ಮಾರ್ಪಾಡು ಮಾಡಿರುವ ವಿಭಾಗೀಯ ಪೀಠ, ಧಾರ್ಮಿಕ ಕಾರ್ಯಕ್ರಮಗಳನ್ನು ನಡೆಸುವ ನಿರ್ಧಾರವನ್ನು ಸರ್ಕಾರಕ್ಕೆ ಬಿಟ್ಟಿದೆ.

    ಆಗಸ್ಟ್ 31ರಿಂದ ನಿರ್ದಿಷ್ಟ ಅವಧಿಗೆ ಧಾರ್ಮಿಕ ಕಾರ್ಯಕ್ರಮಕ್ಕೆ ಅವಕಾಶ ನೀಡಬಹುದು. ಗಣೇಶೋತ್ಸವ ಮಾಡಬಹುದು. ಆದರೆ ಈ ಬಗ್ಗೆ ಅನುಮತಿ ನೀಡೋದು ಬಿಡೋದು ಸರ್ಕಾರದ ವಿವೇಚನೆಗೆ ಬಿಟ್ಟಿದ್ದೇವೆ ಎಂದು ಹೈಕೋರ್ಟ್ ಆದೇಶ ನೀಡಿದೆ. ಗಣೇಶೋತ್ಸವಕ್ಕೆ ಒಂದು ದಿನ ಮಾತ್ರ ಅವಕಾಶ ನೀಡಬಹುದು ಎಂದು ಪೊಲೀಸ್ ಇಲಾಖೆ ಶಿಫಾರಸ್ಸು ಮಾಡಿದೆ. ಕೋರ್ಟ್ ಕೂಡ ಇದೇ ವಿಚಾರವನ್ನು ಪ್ರಸ್ತಾಪ ಮಾಡಿದೆ. ಇದನ್ನೂ ಓದಿ: ಈದ್ಗಾದಲ್ಲಿ ಗಣೇಶೋತ್ಸವಕ್ಕೆ ಬ್ರೇಕ್- ಹೈಕೋರ್ಟ್ ಆದೇಶದ ಬೆನ್ನಲ್ಲೇ ಕಣ್ಣೀರಿಟ್ಟ ಯಶವಂತ್

    ಪಾರ್ಟಿದಾರರು ಸುಪ್ರೀಂಕೋರ್ಟ್ ಮೊರೆ ಹೋಗಬಹುದು ಎಂದು ಕೂಡ ಹೈಕೋರ್ಟ್ ತಿಳಿಸಿದೆ. ಆದರೆ ನಾಳೆಯಿಂದ ಗುರುವಾರದವರೆಗೆ ಕೋರ್ಟ್ ರಜೆ ಇರುವ ಕಾರಣ, ವಕ್ಫ್ ಬೋರ್ಡ್ ಮೇಲ್ಮನವಿ ಸಲ್ಲಿಸುವ ಸಾಧ್ಯತೆಗಳು ಕಡಿಮೆ ಇವೆ. ಚಾಮರಾಜಪೇಟೆ ಮೈದಾನ ಮಾಲೀಕತ್ವ ವಿಚಾರವಾಗಿ ಹೈಕೋರ್ಟ್ ಏಕಸದಸ್ಯ ಪೀಠದ ಆದೇಶ ಪ್ರಶ್ನಿಸಿ ರಾಜ್ಯ ಸರ್ಕಾರ ವಿಭಾಗೀಯ ಪೀಠದ ಮೊರೆ ಹೋಗಿತ್ತು.ಇದನ್ನೂ ಓದಿ: ಹೆಚ್‌ಡಿಕೆ ರಾಜಕೀಯ ಸ್ಟಂಟ್ ಮಾಡಿದರೆ ಉಪಯೋಗವೇನು – ಸಚಿವ ಸುಧಾಕರ್ ಪ್ರಶ್ನೆ

    karnataka highcourt

    ಒಂದು ದಿನದ ಮಟ್ಟಿಗಾದ್ರೂ ಗಣೇಶೋತ್ಸವಕ್ಕೆ ಅನುಮತಿಸಿ. ಈ ಬಗ್ಗೆ ಅರ್ಜಿಗಳು ಬರುತ್ತಿವೆ. ಅವುಗಳನ್ನು ನಿರ್ಲಕ್ಷಿಸಲು ಸಾಧ್ಯವಿಲ್ಲ. ಎಲ್ಲಾ ಸಮುದಾಯಗಳನ್ನು ಸಮಾನವಾಗಿ ಕಾಣಬೇಕಿದೆ. ಎರಡು ಸಮುದಾಯಗಳ ಹಿತಾಸಕ್ತಿ ಪರಿಗಣಿಸಿ ತೀರ್ಪು ನೀಡಬೇಕು ಎಂದು ಎಜಿ ಪ್ರಭುಲಿಂಗ ನಾವಡಗಿ ವಾದ ಮಂಡಿಸಿದ್ರು. ಇದಕ್ಕೆ ಹೈಕೋರ್ಟ್ ಕೂಡ ಸ್ಪಂದಿಸಿತು. ಹೈಕೋರ್ಟ್ ತೀರ್ಪಿಗೆ ಸಚಿವ ಅಶೋಕ್ ಸಂತಸ ವ್ಯಕ್ತಪಡಿಸಿದ್ದಾರೆ. ಕೋರ್ಟ್ ತೀರ್ಪು ಪರಿಶೀಲಿಸಿ ಸೂಕ್ತ ನಿರ್ಧಾರ ತೆಗೆದುಕೊಳ್ಳುತ್ತೇವೆ ಎಂದಿದ್ದಾರೆ.

    ನಾಳೆ ಸಿಎಂ ಬೊಮ್ಮಾಯಿ ಸಭೆ ನಡೆಸಿ, ಕಾನೂನು ಸುವ್ಯವಸ್ಥೆಗೆ ಅನುಗುಣವಾಗಿ ತೀರ್ಮಾನ ತೆಗೆದುಕೊಳ್ಳಲಿದ್ದಾರೆ. ಸರ್ಕಾರ ಒಂದು ದಿನದ ಮಟ್ಟಿಗೆ ಗಣೇಶೋತ್ಸವಕ್ಕೆ ಅನುಮತಿ ನೀಡುವ ಸಾಧ್ಯತೆಗಳು ಹೆಚ್ಚಿವೆ. ಚಾಮರಾಜಪೇಟೆ ನಾಗರೀಕರ ಒಕ್ಕೂಟ ಮತ್ತು ಹಿಂದೂ ಸಂಘಟನೆಗಳು ಈ ಬೆಳವಣಿಗೆಯಿಂದ ಖುಷಿ ಆಗಿವೆ. ಕೋರ್ಟ್ ಆದೇಶ ಪೊಲೀಸ್ ಆಯುಕ್ತರು ಈದ್ಗಾ ಮೈದಾನಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • 5 ಬಾರಿ ಮೈಕ್ ಕೂಗೋದನ್ನು ನಿಲ್ಲಿಸಿ, ನಾನೇ ಡಿಜೆಯನ್ನು ನಿಲ್ಲಿಸುತ್ತೇನೆ: ಮುತಾಲಿಕ್

    5 ಬಾರಿ ಮೈಕ್ ಕೂಗೋದನ್ನು ನಿಲ್ಲಿಸಿ, ನಾನೇ ಡಿಜೆಯನ್ನು ನಿಲ್ಲಿಸುತ್ತೇನೆ: ಮುತಾಲಿಕ್

    ಧಾರವಾಡ: 5 ಬಾರಿ ಮೈಕ್ ಕೂಗೋದನ್ನು ನಿಲ್ಲಿಸಿ, ನಾನೇ ಡಿಜೆಯನ್ನು ನಿಲ್ಲಿಸುತ್ತೇನೆ, ಒಂದೇ ಒಂದು ಡಿಜೆ ಹೊರಗೆ ಬಾರದಂತೆ ನಾನೇ ನೋಡಿಕೊಳ್ಳುತ್ತೇನೆ ಎಂದು ಶ್ರೀರಾಮ ಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಹೇಳಿಕೆ ನೀಡಿದರು.

    ಪ್ರಾರ್ಥನಾ ಮಂದಿರಗಳ ಮೇಲೆ ಹಾಕಿರುವ ಮೈಕ್ ವಿಚಾರವಾಗಿ ಧಾರವಾಡ ಎಸ್‌ಪಿ ಕಚೇರಿ ಎದುರು ಶ್ರೀರಾಮ ಸೇನೆ ಕಾರ್ಯಕರ್ತರು ಪ್ರಮೋದ್ ಮುತಾಲಿಕ್ ನೇತೃತ್ವದಲ್ಲಿ ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸಿದರು. ಈ ವೇಳೆ ಮಾತನಾಡಿದ ಮುತಾಲಿಕ್, ಹಲವಾರು ವರ್ಷಗಳಿಂದ ಹೋರಾಟ ಮಾಡುತ್ತಾ ಬಂದಿದ್ದೇವೆ. ಸುಪ್ರೀಂ ಕೋರ್ಟ್ 15 ವರ್ಷದ ಹಿಂದೆಯೇ ಆದೇಶ ನೀಡಿದೆ. ಶಬ್ದ ಮಾಲಿನ್ಯ ಆಗಬಾರದು ಅಂತ ಹೇಳಿದ್ರೂ ಇಲ್ಲಿಯವರೆಗೆ ರಾಜ್ಯ ಸರ್ಕಾರ ಆದೇಶ ಜಾರಿ ಮಾಡಿಲ್ಲ ಎಂದರು.

    ಶಬ್ದದ ಪರಿಣಾಮದಿಂದ ಎಲ್ಲರಿಗೂ ತೊಂದರೆಯಾಗುತ್ತಿದೆ. ಪ್ರಾರ್ಥನಾ ಮಂದಿರಗಳು ಯಾವುದೇ ಧರ್ಮಕ್ಕೆ ಸೇರಿರಲಿ. ಈ ಬಗ್ಗೆ ಸರ್ಕಾರ ಕ್ರಮ ಕೈಗೊಳ್ಳಬೇಕು. ಆದರೆ ಸರ್ಕಾರ ನಾಟಕವಾಡುತ್ತಿದೆ. ಇದಕ್ಕಾಗಿಯೇ ನಾವು ನಿರಂತರವಾಗಿ ಹೋರಾಡುತ್ತಿದ್ದೇವೆ. ಸರ್ಕಾರದ ಕಾನೂನು ಜಾರಿ ಮಾಡದಿದ್ದರೆ, ಅವರಿಗೆ ಕುಮ್ಮಕ್ಕು ಕೊಟ್ಟಂತಾಗುತ್ತದೆ ಎಂದರು. ಇದನ್ನೂ ಓದಿ: ಗಣೇಶ ಹಬ್ಬಕ್ಕೆ ಮುನ್ನೆಚ್ಚರಿಕಾ ಕ್ರಮ – ಸರ್ಕಾರದ ಸುತ್ತೋಲೆಯಲ್ಲಿ ಏನಿದೆ?

    ಈ ಕಾರಣಕ್ಕೆ ನಾವು ಕಾನೂನು ಕೈಗೆತ್ತಿಕೊಳ್ಳಬೇಕಾಗುತ್ತದೆ. ಬೆಳಗ್ಗೆ 5 ಗಂಟೆಯಿಂದ ಮೈಕ್ ಕೂಗುತ್ತಿವೆ. ಇದು ಇನ್ನೂ ನಿಂತಿಲ್ಲ. ನಮ್ಮನ್ಯಾರೂ ಕೇಳೋದಿಲ್ಲ ಎನ್ನುವ ಮನಸ್ಥಿತಿ ದೊಡ್ಡ ಮುಳ್ಳಾಗಿ ಪರಿಣಮಿಸಲಿದೆ. ಸರ್ಕಾರಕ್ಕೆ ಇದು ಗೊತ್ತಾಗುತ್ತಿಲ್ಲ. ಮುಂದಿನ ದಿನಗಳಲ್ಲಿ ನಾವು ಮುಂದಿನ ಹೆಜ್ಜೆ ಇಡಬೇಕಾಗುತ್ತದೆ. ಮುಂದಿನ ದಿನಗಳಲ್ಲಿ ಮನವಿ ಇಲ್ಲ, ನೇರವಾಗಿ ನುಗ್ಗುವುದೇ. ಅದು ಹೇಗೆ, ಏನು ಎನ್ನುವುದನ್ನು ಮುಂದಿನ ಹೋರಾಟದಲ್ಲಿಯೇ ನಿರ್ಧಾರ ಮಾಡುತ್ತೇವೆ ಎಂದು ಎಚ್ಚರಿಕೆ ನೀಡಿದರು.

    ಪೊಲೀಸ್ ಇಲಾಖೆ ಗಣೇಶ ಮಂಡಳಿಯವರಿಗೆ ಡಿಜೆ ನಿಷೇಧಿಸಿದ್ದಾರೆ. ಅವರು ಸುಪ್ರೀಂ ಕೋರ್ಟ್ ಆದೇಶ ತೋರಿಸುತ್ತಾರೆ. ಅದೇ ಆದೇಶ ಪ್ರಾರ್ಥನಾ ಮಂದಿರಗಳ ಮೈಕ್ ಬಗ್ಗೆಯೂ ಹೇಳಿದೆಯಲ್ಲವೇ? ಹಾಗಾದರೆ ಅದನ್ನೇಕೆ ಪಾಲಿಸುತ್ತಿಲ್ಲ? ವರ್ಷಕ್ಕೆ ಒಂದೇ ಬಾರಿ ಡಿಜೆ ಹಚ್ಚಿದರೆ ಅದು ನಿಮ್ಮ ಕಣ್ಣಿಗೆ ಬೀಳುತ್ತದೆ. ಪ್ರತಿ ದಿನ 5 ಬಾರಿ ಮೈಕ್ ಹಚ್ಚೋದು ಕಾಣೋದಿಲ್ವಾ? ಎಂದು ಕಿಡಿ ಕಾರಿದರು. ಇದನ್ನೂ ಓದಿ: ಎಸಿಬಿ ರದ್ದು; ಹೈಕೋರ್ಟ್‌ ಆದೇಶ ಪಾಲಿಸ್ತೀವಿ, ಸುಪ್ರೀಂಗೆ ಹೋಗಲ್ಲ – ಸಿಎಂ

    ನೀವು ಡಿಜೆ ಸೀಜ್ ಮಾಡಿ, ನಾವು ಇದನ್ನು ಸವಾಲಾಗಿ ಸ್ವೀಕರಿಸಿದ್ದೇವೆ. 3 ವರ್ಷದಿಂದ ಕೊರೊನಾದಿಂದಾಗಿ ಜನ ಸಂಕಷ್ಟಕ್ಕೆ ಸಿಲುಕಿದ್ದಾರೆ. ಇಂತಹ ವೇಳೆಯಲ್ಲಿ ಎಲ್ಲದಕ್ಕೂ ನಿರ್ಬಂಧ ಏಕೆ? 5 ಬಾರಿ ಮೈಕ್ ಕೂಗೋದನ್ನು ನಿಲ್ಲಿಸಿ, ನಾನೇ ಡಿಜೆಯನ್ನು ನಿಲ್ಲಿಸುತ್ತೇನೆ. ಒಂದು ಡಿಜೆಯೂ ಹೊರಗೆ ಬಾರದಂತೆ ನಾನೇ ನಿಲ್ಲಿಸುತ್ತೇನೆ. ಆದರೆ ವಿನಾಕಾರಣ ಗಣೇಶೋತ್ಸವಕ್ಕೆ ಕಿರಿಕಿರಿ ಮಾಡಬೇಡಿ ಎಂದು ಮನವಿ ಮಾಡಿದರು.

    Live Tv
    [brid partner=56869869 player=32851 video=960834 autoplay=true]

  • ಗಣೇಶೋತ್ಸವಕ್ಕೆ ಡಬಲ್ ಸೌಂಡ್ ಹಚ್ಚಿ ಮೆರವಣಿಗೆ ಮಾಡಿ, ಏನ್ ಮಾಡ್ತಾರೆ ನೋಡೋಣ: ಪ್ರಮೋದ್ ಮುತಾಲಿಕ್

    ಗಣೇಶೋತ್ಸವಕ್ಕೆ ಡಬಲ್ ಸೌಂಡ್ ಹಚ್ಚಿ ಮೆರವಣಿಗೆ ಮಾಡಿ, ಏನ್ ಮಾಡ್ತಾರೆ ನೋಡೋಣ: ಪ್ರಮೋದ್ ಮುತಾಲಿಕ್

    ದಾವಣಗೆರೆ: ಡಿಜೆ ಸೌಂಡ್ ಸಿಸ್ಟಮ್‌ಗೆ ಅನುಮತಿ ಪಡೆಯಬೇಡಿ, ಡಬಲ್ ಸೌಂಡ್ ಹಚ್ಚಿ, ಏನ್ ಮಾಡ್ತಾರೆ ನೋಡೋಣ. ಸುಪ್ರೀಂ ಕೋರ್ಟ್ ಹೆಸರು ಹೇಳುತ್ತಾ ನಮ್ಮನ್ನು ಹತ್ತಿಕ್ಕುವ ಕೆಲಸ ಸರ್ಕಾರ ಮಾಡುತ್ತಿದೆ ಎಂದು ಶ್ರೀರಾಮ ಸೇನೆ ಸಂಸ್ಥಾಪಕ ಪ್ರಮೋದ್ ಮುತಾಲಿಕ್ ಗಣೇಶ ಮಂಡಳಿಗಳಿಗೆ ಕರೆ ನೀಡಿದರು.

    ದಾವಣಗೆರೆಯಲ್ಲಿ ಮಾತನಾಡಿದ ಅವರು, ನಾವು ಸೌಂಡ್ ಸಿಸ್ಟಮ್‌ಗೆ ಪರ್ಮಿಷನ್ ತೆಗೆದುಕೊಳ್ಳುವುದಿಲ್ಲ. ಸರ್ಕಾರ ಮೊದಲು ಮಸೀದಿ ಮೇಲಿರುವ ಲೌಡ್ ಸ್ಪೀಕರ್ ಅನುಮತಿ ಪಡೆದಿರುವುದನ್ನು ತೋರಿಸಲಿ. ಬಳಿಕ ನಾವು ಡಿಜೆಗೆ ಅನುಮತಿಯನ್ನು ಪಡೆಯುತ್ತೇವೆ. ಮೊದಲು ಮಸೀದಿ ಮೇಲಿರುವ ಲೌಡ್ ಸ್ಪೀಕರ್‌ಗಳ ಅನುಮತಿ ಬಗ್ಗೆ ದಾಖಲೆ ನೀಡಿ. ಇಂದಿಗೂ ಲೌಡ್ ಸ್ಪೀಕರ್ ಶಬ್ದ ನಿಂತಿಲ್ಲ, ಇಂದಿಗೂ ಕಿರಿಕಿರಿ ಆಗುತ್ತಿದೆ ಎಂದು ಕಿಡಿಕಾರಿದರು.

    loud speaker

    ನಮ್ಮ ಸೌಂಡ್ ಸಿಸ್ಟಮ್ ಅನ್ನು ನಿಲ್ಲಿಸಲು ನಿಮಗೆ ಹಕ್ಕಿಲ್ಲ. ಗಣೇಶೋತ್ಸವಕ್ಕೆ ಯಾವುದೇ ನಿರ್ಬಂಧ ಹೇರಬೇಡಿ. ಗಲಭೆ ಆಗದಂತೆ ಮುಂಜಾಗೃತಾ ಕ್ರಮ ವಹಿಸುತ್ತೇವೆ. ಗಣೇಶನ ಕೂರಿಸಲು ಅನುಮತಿ ಪಡೆಯುವ ಪ್ರಕ್ರಿಯೆ ಸರಿ ಅಲ್ಲ. ನೀವು ಸ್ವಾತಂತ್ರ‍್ಯ ಹರಣ ಮಾಡ್ಬೇಡಿ. ನಿಮ್ಮ ಅನುಮತಿ ಪಡೆಯುವ ಅವಶ್ಯಕತೆ ನಮಗಿಲ್ಲ. ನಮಗೆ ಮುಕ್ತವಾದ ಹಕ್ಕಿದೆ. ನಿಮಗೆ ಕೇಳಿಕೊಂಡು ಗಣೇಶೋತ್ಸವ ಮಾಡುವುದಿಲ್ಲ ಎಂದು ಸರ್ಕಾರದ ವಿರುದ್ಧ ಗುಡುಗಿದರು.

    ಬೆಂಗಳೂರಿನ ಈದ್ಗಾ ಮೈದಾನದ ಜಾಗ ಸರ್ಕಾರದ್ದು ಎಂದು ನಿರ್ಧರಿಸಲಾಗಿದೆ. ಜಮೀರ್ ಅಹ್ಮದ್ ಸೇರಿ ಕೆಲ ಮುಸ್ಲಿಂ ನಾಯಕರು ಇದು ನಮ್ಮದು ಎಂದು ಹೇಳುತ್ತಿದ್ದವರ ಬಾಯಿ ಬಂದ್ ಆಗಿದೆ. ಸರ್ಕಾರದಿಂದ ಚಾಮರಾಜಪೇಟೆ ಮೈದಾನದಲ್ಲಿ ರಾಷ್ಟ್ರಧ್ವಜ ಹಾರಿಸುವುದನ್ನು ನಾನು ಸ್ವಾಗತಿಸುತ್ತೇನೆ. ಅಲ್ಲಿ ಜಮೀರ್ ಅಹ್ಮದ್‌ಗೆ ಮಾತ್ರ ಅವಕಾಶ ಎಂದಲ್ಲ, ಅಲ್ಲಿ ಸಾರ್ವಜನಿಕರೂ ಆಗಮಿಸಬೇಕು. 75ನೇ ಸ್ವಾತಂತ್ರ‍್ಯೋತ್ಸವ ಮಾಡಬೇಕು. ಆ ಈದ್ಗಾ ಮೈದಾನದಲ್ಲಿ ಗಣೇಶೋತ್ಸವಕ್ಕೂ ಅವಕಾಶ ಮಾಡಿಕೊಡಬೇಕು ಎಂದರು. ಇದನ್ನೂ ಓದಿ: ಹರ್ ಘರ್ ತಿರಂಗಾ ಅಭಿಯಾನಕ್ಕೆ ಸಿಎಂ ಚಾಲನೆ – ಭವ್ಯ ಭಾರತ ಕಟ್ಟಲು ಯುವಜನತೆ ಸನ್ನದ್ಧರಾಗುವಂತೆ ಕರೆ

    ಅಲ್ಲಿ ಮುಸ್ಲಿಮರ ಧಾರ್ಮಿಕ ಚಟುವಟಿಕೆಗೆ ಅವಕಾಶ ಕಲ್ಪಿಸಲಾಗಿದೆ. ಆದರೆ ನಾವು ಹಿಂದೂಗಳು ಏನ್ ಪಾಪ ಮಾಡಿದ್ದೇವೆ? ನಮಗೂ ಗಣೇಶೋತ್ಸವ ಆಚರಣೆ ಮಾಡಲು ಅವಕಾಶ ನೀಡಿ. ಸರ್ಕಾರ ಪ್ರತಿನಿಧಿಗಳೇ ನಿಮ್ಮ ಗಡ್ಸ್ ತೋರ್ಸಿ. ಅಲ್ಲಿ ಕೋಮು ಗಲಭೆ ಮಾಡಿದರೆ ಗುಂಡು ಹೊಡೀರಿ. ಗಣೇಶ ಮಂಡಳಿಯವರು ಯಾವಾಗಲೂ ಗಲಾಟೆ, ಗೊಂದಲ ಮಾಡುವುದಿಲ್ಲ. ಗಣೇಶೋತ್ಸವ ಆಚರಣೆ ಮೈದಾನದಲ್ಲಿ ಮಾಡಲಾಗುವುದಿಲ್ಲ ಎಂದು ಜಮೀರ್ ಸೊಕ್ಕಿನಿಂದ ಹೇಳಿದ್ದಾರೆ. ಜಮೀರ್ ನೀನು ಮುಸ್ಲಿಂ ಮತದಿಂದ ಗೆದ್ದಿಲ್ಲ, ಎಲ್ಲರಿಂದಲೂ ಗೆದ್ದಿದ್ದೀಯ. ನೀನು ಮುಸ್ಲಿಂ ಶಾಸಕ ಅಲ್ಲಪ್ಪ, ನೀನೇ ಮುಂದೆ ನಿಂತು ಗಣೇಶೋತ್ಸವ ಮಾಡ್ಬೇಕು ಎಂದರು.

    ಪರೇಶ್ ಮೇಸ್ತಾ ಕೊಲೆ ಮಾಡಿದ ಎ1 ಆರೋಪಿ ಅಣ್ಣಿಗೇರಿಯನ್ನು ವಕ್ಫ್ ಬೋರ್ಡ್‌ನ ಉಪಾಧ್ಯಕ್ಷನಾಗಿ ಬಿಜೆಪಿ ಸರ್ಕಾರ ನೇಮಕ ಮಾಡಿರುವುದು ನಾಚಿಕೆಗೇಡಿನ ಸಂಗತಿ. ಅವನೊಬ್ಬ ಕೊಲೆಗಡುಕ, ಕ್ರಿಮಿನಲ್. ಕೊಲೆಗಡುಕನನ್ನು ವಕ್ಫ್ ಬೋರ್ಡ್ ಉಪಾಧ್ಯಕ್ಷನಾಗಿ ನೇಮಕ ಮಾಡಿದ ಅಧಿಕಾರಿಗಳನ್ನು ವಜಾ ಮಾಡಿ. ವಕ್ಫ್ ಬೋರ್ಡ್ ಅಧ್ಯಕ್ಷ ಶಫೀನೇ ಕೊಲೆಗಡುಕ, ಹಿಂದೂದ್ರೋಹಿ. ಅವನೇ ಕಾಂಗ್ರೆಸ್‌ನವರನ್ನು, ಕೊಲೆಗಡುಕರನ್ನು, ಹಿಂದೂ ವಿರೋಧಿಗಳನ್ನು ವಕ್ಫ್ ಬೋರ್ಡ್‌ನಲ್ಲಿ ಸೇರಿಸುತ್ತಿದ್ದಾನೆ. ಬಿಜೆಪಿಯವರೇ ಜಾಗೃತರಾಗಿ, ಅನಾಹುತ ಆಗಬಹುದು ಎಂದು ಎಚ್ಚರಿಕೆ ನೀಡಿದರು. ಇದನ್ನೂ ಓದಿ: ತಿರಂಗಮಯವಾದ ಸುಪ್ರಸಿದ್ಧ ಮುಗಳಖೋಡ ಶ್ರೀಮಠ

    ಬೆಂಗಳೂರಿನ ಜೈಲಿನಲ್ಲಿ ಆರೋಪಿಗಳಿಗೆ ರಾಜಾತಿಥ್ಯ ನೀಡಲಾಗುತ್ತಿದೆ. ಜೈಲಿನಲ್ಲಿ ವೀಡಿಯೋ ಮಾಡುವ ಮೂಲಕ ಮುಸ್ಲಿಂ ಗೂಂಡಾಗಳು ಅವ್ಯವಹಾರ ಮಾಡುತ್ತಿದ್ದಾರೆ. ಇದಕ್ಕೆ ಒಂದು ವಿಶೇಷ ಸಮಿತಿ ನಿಯೋಜನೆ ಮಾಡಿ ಎಂದು ಮುತಾಲಿಕ್ ಒತ್ತಾಯಿಸಿದರು.

    Live Tv
    [brid partner=56869869 player=32851 video=960834 autoplay=true]

  • ದೇವರ ಜೊತೆ ದೇವರಾದ ಅಪ್ಪು: ಗಣಪತಿ ಜೊತೆ ಪುನೀತ್ ಇರುವ ಮೂರ್ತಿಗೆ ಡಿಮ್ಯಾಂಡ್

    ದೇವರ ಜೊತೆ ದೇವರಾದ ಅಪ್ಪು: ಗಣಪತಿ ಜೊತೆ ಪುನೀತ್ ಇರುವ ಮೂರ್ತಿಗೆ ಡಿಮ್ಯಾಂಡ್

    ಣೇಶೋತ್ಸವವನ್ನು ಆಚರಿಸಲು ಈಗಿನಿಂದಲೇ ಕರ್ನಾಟಕ ಸಿದ್ಧತೆ ನಡೆಸಿದೆ. ಮುಂದಿನ ತಿಂಗಳು ಕೊನೆಯ ವಾರದಲ್ಲಿ ಗಣೇಶ ಹಬ್ಬ ಬರುತ್ತಿದ್ದು, ಗಣಪತಿ ಮೂರ್ತಿ ತಯಾರಕರು ಎರಡು ತಿಂಗಳಿನಿಂದ ಸತತವಾಗಿ ಈ ಕೆಲಸದಲ್ಲಿ ತೊಡಗಿದ್ದಾರೆ. ಅದರಲ್ಲೂ ಗಣಪತಿ ಜೊತೆ ಇರುವ ಪುನೀತ್ ರಾಜ್ ಕುಮಾರ್ ಅವರ ಮೂರ್ತಿಗಳನ್ನು ತಯಾರಿಸಲು ಹಲವು ದಿನಗಳಿಂದ ಬ್ಯುಸಿಯಾಗಿದ್ದಾರಂತೆ. ಅಷ್ಟರ ಮಟ್ಟಿಗೆ ಡಿಮ್ಯಾಂಡ್ ಕ್ರಿಯೇಟ್ ಆಗಿದೆಯಂತೆ.

    ಪ್ರತಿ ಗಣೇಶೋತ್ಸವದಲ್ಲೂ ಒಂದೊಂದು ಟ್ರೆಂಡ್ ಸೃಷ್ಟಿಯಾಗುತ್ತದೆ. ಅದಕ್ಕೆ ತಕ್ಕಂತೆ ಗಣಪತಿ ಮೂರ್ತಿಗಳನ್ನು ತಯಾರು ಮಾಡಲಾಗುತ್ತದೆ. ಈ ಹಿಂದೆ ಡಾ.ರಾಜ್ ಕುಮಾರ್, ಅಬ್ದುಲ್ ಕಲಾಂ ಸೇರಿದಂತೆ ಹಲವು ಸಾಧಕರನ್ನು ಗಣಪತಿ ಜೊತೆ ಮೂರ್ತಿ ಮಾಡಿ ಪೂಜಿಸಲಾಗಿದೆ. ಅಲ್ಲದೇ, ಸಿನಿಮಾಗೆ ಸಂಬಂಧಿಸಿದಂತೆ ಹಲವಾರು ಮೂರ್ತಿಗಳನ್ನೂ ಪ್ರತಿಷ್ಠಾಪಿಸಲಾಗಿದೆ. ಈ ಬಾರಿ ಅಪ್ಪು ಅವರನ್ನು ಕಳೆದುಕೊಂಡಿದ್ದರಿಂದ ಗಣಪತಿಯ ಜೊತೆ ಅಪ್ಪು ಮೂರ್ತಿಗಳನ್ನು ತಯಾರಿಸಿ ಮಾರಲಾಗುತ್ತಿದೆ. ಇದನ್ನೂ ಓದಿ:ವಿದೇಶದಲ್ಲಿ ಜಾಲಿ ಮೂಡ್‌ನಲ್ಲಿದ್ದಾರೆ ಯಶ್- ರಾಧಿಕಾ ಪಂಡಿತ್

    ಅಪ್ಪು ನಿಧನದ ನಂತರ ಅಭಿಮಾನಿಗಳು ಅವರನ್ನು ದೇವರ ರೂಪದಲ್ಲಿಯೇ ನೋಡುತ್ತಿದ್ದಾರೆ. ನಿತ್ಯವೂ ಅವರ ಸಮಾಧಿಗೆ ಸಾವಿರಾರು ಅಭಿಮಾನಿಗಳು ಬಂದು ನಮಿಸುತ್ತಿದ್ದಾರೆ. ಒಂದು ರೀತಿಯಲ್ಲಿ ಅಪ್ಪು ಸಮಾಧಿ ದೇವಸ್ಥಾನವೇ ಆಗಿದೆ. ಅಷ್ಟೊಂದು ಆರಾಧಿಸುವ ಅಭಿಮಾನಿಗಳು ಈ ಬಾರಿ ಗಣಪನ ರೂಪದಲ್ಲಿ ನೆಚ್ಚಿನ ನಟನನ್ನು ನೋಡುತ್ತಿದ್ದಾರೆ.

    Live Tv
    [brid partner=56869869 player=32851 video=960834 autoplay=true]