Tag: Ganeshotsava

  • ಮಹಾರಾಷ್ಟ್ರದ ರಾಜ್ಯ ಹಬ್ಬವಾದ ʻಗಣೇಶೋತ್ಸವʼ – ಏನಿದರ ಹಿನ್ನೆಲೆ?

    ಮಹಾರಾಷ್ಟ್ರದ ರಾಜ್ಯ ಹಬ್ಬವಾದ ʻಗಣೇಶೋತ್ಸವʼ – ಏನಿದರ ಹಿನ್ನೆಲೆ?

    ಭಾರತೀಯ ಪರಂಪರೆಯ ಪ್ರಕಾರ ಆಷಾಢ ಕಳೆದರೆ ಸಾಕು ಸಾಲು ಸಾಲು ಹಬ್ಬಗಳು ಶುರುವಾಗುತ್ತವೆ. ಒಂದಾದ ಮೇಲೊಂದರಂತೆ ಹಬ್ಬಗಳು ಪ್ರತಿ ಮನೆಮನೆಯಲ್ಲೂ ವಿಜೃಂಭಿಸಲು ಪ್ರಾರಂಭಿಸುತ್ತವೆ. ಇದೇ ರೀತಿ ನಮ್ಮೆಲ್ಲರಲ್ಲೂ ಸಂತೋಷ, ಸಡಗರವನ್ನು ತನ್ನ ಜೊತೆಗೆ ಕರೆತರುವ ಗಣೇಶೋತ್ಸವ ಇನ್ನೇನು ಬರಲಿದೆ. ಇಡೀ ಭಾರತದಲ್ಲಿಯೇ ಗಣೇಶೋತ್ಸವವನ್ನು ಅತಿ ವಿಜೃಂಭಣೆಯಿಂದ ಆಚರಿಸುವ ಏಕೈಕ ರಾಜ್ಯವೆಂದರೆ ಅದು ಮಹಾರಾಷ್ಟ್ರ. ಅಂತೆಯೇ ಗಣೇಶೋತ್ಸವ ಪ್ರಾರಂಭವಾಗಿದ್ದು ಮಹಾರಾಷ್ಟ್ರದಲ್ಲಿ.

    ಹೌದು, ಮಹಾರಾಷ್ಟ್ರದಲ್ಲಿ ಹುಟ್ಟಿಕೊಂಡ ಈ ಗಣೇಶೋತ್ಸವ ಇದೀಗ ಮಹಾರಾಷ್ಟ್ರದ ರಾಜ್ಯ ಹಬ್ಬವಾಗಿ ಘೋಷಣೆಯಾಗಿದೆ. ಶತಮಾನಗಳಷ್ಟು ಹಳೆಯದಾದ ಈ ಗಣೇಶೋತ್ಸವ ಇದೀಗ ಒಂದು ರಾಜ್ಯದ ಹಬ್ಬವಾಗಿ ಮಾರ್ಪಾಡಾಗಿದೆ. ಜು.10ರಂದು ಮಹಾರಾಷ್ಟ್ರ ಸರ್ಕಾರ ತಮ್ಮ ಸಾಂಸ್ಕೃತಿಕ ಪರಂಪರೆಯನ್ನು ರಕ್ಷಿಸುವುದರ ಜೊತೆಗೆ ಪ್ರೋತ್ಸಾಹಿಸುವ ಉದ್ದೇಶದೊಂದಿಗೆ ಈ ನಿರ್ಧಾರವನ್ನ ಕೈಗೊಂಡಿದೆ. ವಿಧಾನಸಭೆಯಲ್ಲಿ ರಾಜ್ಯದ ಸಂಸ್ಕೃತಿ ಸಚಿವ ಆಶಿಷ್ ಶೆಲಾರ್ ಅವರು ಈ ಕುರಿತು ಘೋಷಣೆ ಮಾಡಿ, ಗಣೇಶೋತ್ಸವ ಕೇವಲ ಆಚರಣೆಯಲ್ಲ, ಇದು ಮಹಾರಾಷ್ಟ್ರದ ಸಂಸ್ಕೃತಿ ಮತ್ತು ಗುರುತಿನ ಸಂಕೇತ ಎಂದು ತಿಳಿಸಿದರು. ನಮ್ಮ ಸಂಸ್ಕೃತಿಯ ರಕ್ಷಣೆ ಹಾಗೂ ಆಚರಣೆಗೆ ಸರ್ಕಾರ ಸದಾಕಾಲ ಬದ್ಧವಾಗಿರುತ್ತದೆ ಮತ್ತು ಗಣೇಶೋತ್ಸವದ ಸಂದರ್ಭದಲ್ಲಿ ಅಗತ್ಯ ಮೂಲ ಸೌಕರ್ಯ ಮತ್ತು ಪೊಲೀಸ್ ಭದ್ರತೆಯನ್ನು ಒದಗಿಸಲಾಗುವುದು ಎಂದು ತಿಳಿಸಿದ್ದಾರೆ. ಮಹಾರಾಷ್ಟ್ರದ ದೊಡ್ಡ ನಗರಗಳಾದ ಪುಣೆ, ಮುಂಬೈ ಸೇರಿದಂತೆ ಇತರ ನಗರಗಳಲ್ಲಿ ಅದ್ದೂರಿ ಆಚರಣೆಗಳಿಗೆ ಆರ್ಥಿಕ ನೆರವನ್ನು ಸರ್ಕಾರ ನೀಡುತ್ತದೆ ಎಂದು ತಿಳಿಸಿದ್ದಾರೆ.

    ಗಣೇಶೋತ್ಸವದ ಇತಿಹಾಸ:
    1893ರಲ್ಲಿ ಲೋಕಮಾನ್ಯ ಬಾಲಗಂಗಾಧರ ತಿಲಕರು ಮಹಾರಾಷ್ಟ್ರದಲ್ಲಿ ಗಣೇಶೋತ್ಸವವನ್ನು ಒಂದು ಅದ್ದೂರಿ ಉತ್ಸವವಾಗಿ ಪರಿವರ್ತನೆ ಮಾಡಿದರು. ಅದಕ್ಕೂ ಮುನ್ನ ಈ ಗಣೇಶೋತ್ಸವ ದೇವಸ್ಥಾನಗಳಲ್ಲಿ, ಮನೆಗಳಲ್ಲಿ ಮಾತ್ರ ಸೀಮಿತವಾಗಿತ್ತು. ಹೆಚ್ಚಾಗಿ ಮೇಲ್ಜಾತಿಯವರು, ಬ್ರಾಹ್ಮಣರು ಆಚರಿಸುತ್ತಿದ್ದರು. 1857ರ ಭಾರತೀಯ ಪ್ರಥಮ ಸ್ವತಂತ್ರ ಸಂಗ್ರಾಮದ ನಂತರ ಭಾರತೀಯ ಸೈನಿಕರು ಬ್ರಿಟಿಷರನ್ನು ಭಾರತದಿಂದ ಹೊರಗೋಡಿಸುವಲ್ಲಿ ವಿಫಲರಾದರು. ಹೀಗಾಗಿ ರಾಷ್ಟ್ರೀಯವಾದಿಗಳು ಈ ವಸಾಹತುಶಾಹಿಯನ್ನ ಸಂಪೂರ್ಣವಾಗಿ ಹೊರಗೆ ಕಳಿಸುವ ಬದಲು ಬ್ರಿಟಿಷರಿಂದ ರಿಯಾಯಿತಿಯನ್ನು ಪಡೆಯುವ ಬಗ್ಗೆ ಯೋಚಿಸಿದರು. ಈ ರಾಷ್ಟ್ರೀಯವಾದಿಗಳ ಪೈಕಿ ಒಬ್ಬರಾದ ಪತ್ರಕರ್ತ, ಶಿಕ್ಷಕ ಮತ್ತು ರಾಜಕೀಯ ಸಾಮಾಜಿಕ ಕಾರ್ಯಕರ್ತರಾಗಿದ್ದ ಬಾಲಗಂಗಾಧರ ತಿಲಕ್ ಅವರು 1881 ರಲ್ಲಿ ಅಗರ್ಕರ್ ಅವರೊಂದಿಗೆ ಸೇರಿ ಮರಾಠಿಯಲ್ಲಿ ಕೇಸರಿ ಹಾಗೂ ಇಂಗ್ಲಿಷ್ನಲ್ಲಿ ಮಹರಟ್ಟಾ ಎಂಬ ಪತ್ರಿಕೆಗಳನ್ನು ಪ್ರಾರಂಭಿಸಿದರು. ಈ ಪತ್ರಿಕೆಯ ಮೂಲಕ ಬ್ರಿಟಿಷರ ಆಳ್ವಿಕೆಯ ವಿರುದ್ಧ ರಾಷ್ಟ್ರೀಯತಾ ವಾದವನ್ನು ಬಿತ್ತಲು ಪ್ರಾರಂಭಿಸಿದರು. ಈ ಮೂಲಕ ತಿಲಕರು ವಸಾಹತುಶಾಹಿ ವಿರೋಧಿ ಚಳುವಳಿಯಲ್ಲಿ ಬ್ರಿಟಿಷರ ವಿರುದ್ಧ ಸಿಡಿದೆದ್ದು ನಿಂತರು. ಹೀಗೆ ಮುಂದುವರೆದು 1893 ರಲ್ಲಿ ವಿಘ್ನ ನಿವಾರಣೆ ಮಾಡುವ ಗಣಪತಿಯನ್ನು ಪೂಜಿಸುವ ಹೊಸ ಸಂಪ್ರದಾಯವನ್ನು ತಿಲಕರು ಪ್ರಾರಂಭಿಸಿದರು. ಈ ಗಣೇಶೋತ್ಸವದ ಮೂಲಕ ದೇಶಭಕ್ತಿ ಗೀತೆಗಳು ಹಾಡುವುದು, ರಾಷ್ಟ್ರೀಯತಾವಾದದ ವಿಚಾರಗಳನ್ನ ಪ್ರಚಾರ ಮಾಡಿದರು. ಹೀಗೆ ಮುಂದೆ ಗಣೇಶ ಹಬ್ಬವನ್ನು ಸಾರ್ವಜನಿಕ ವಲಯಕ್ಕೆ ತರುವಲ್ಲಿ ಪ್ರಮುಖ ಪಾತ್ರ ವಹಿಸಿದರು.

    ಬಳಿಕ ಮಹಾರಾಷ್ಟ್ರದಾದ್ಯಂತ ಗಣೇಶೋತ್ಸವದ ಸಂಘಟನೆಗಳು ಸ್ಥಾಪನೆಯಾದವು. ಯುವಕರು ಗುಂಪುಗಳನ್ನು ಕಟ್ಟಿಕೊಳ್ಳಲು ಆರಂಭಿಸಿದರು. ಬಳಿಕ ರಾಷ್ಟ್ರೀಯತಾವಾದ ಪ್ರತಿರೋಧವನ್ನು ಹೆಚ್ಚಿಸಲು ತಿಲಕರು 1896ರಲ್ಲಿ ಶಿವಾಜಿ ಉತ್ಸವವನ್ನು ಪ್ರಾರಂಭಿಸಿದರು.

    ಮುಂದುವರೆದು ಗಣೇಶ್ೋತ್ಸವ ಸಾರ್ವಜನಿಕ ಸಂಕೇತವಾಗಿ ಮಾರ್ಪಾಡಾಯಿತು. ಗಣೇಶನ ದೊಡ್ಡ ದೊಡ್ಡ ವಿಗ್ರಹಗಳನ್ನ ತಂದು ಸಾರ್ವಜನಿಕ ಮೆರವಣಿಗೆ, ಭಜನೆ, ಭಾಷಣ, ಸಾಮಾಜಿಕ ಚಟುವಟಿಕೆಗಳೊಂದಿಗೆ ಈ ಗಣೇಶೋತ್ಸವವನ್ನು ಆಯೋಜಿಸಲು ಪ್ರಾರಂಭಿಸಿದರು. ಇದೊಂದು ಸಾಮಾಜಿಕ ಏಕತೆಯ ವೇದಿಕೆಯಾಗಿ ಪರಿವರ್ತನೆಗೊಂಡಿತು. ಹೀಗೆ ಈ ಗಣೇಶೋತ್ಸವ ಮುಂಬೈ, ನಾಗಪುರ, ಕೊಲ್ಲಾಪುರ ದಂತಹ ಬೇರೆ ಬೇರೆ ನಗರಗಳಲ್ಲಿ ಹರಡಿಕೊಂಡಿತು. ಇದೇ ರೀತಿ ಪ್ರಾರಂಭವಾದ ಗಣೇಶ ಹಬ್ಬ ಇಡೀ ದೇಶಾದ್ಯಂತ ಆಚರಣೆಗೆ ಬಂದಿತು.

    ಗಣೇಶೋತ್ಸವದ ಆಚರಣೆ ಹೇಗೆ?
    ಗಣೇಶ ಚತುರ್ಥಿಯಿಂದ ಅನಂತ ಚತುರ್ದಶಿಯವರೆಗೆ ಆಚರಿಸುವ ಹಬ್ಬವನ್ನು ಗಣೇಶ ಹಬ್ಬ ಎಂದು ಹೇಳಲಾಗುತ್ತದೆ. ಸಾಮಾನ್ಯವಾಗಿ ಈ ಗಣೇಶ ಹಬ್ಬವನ್ನು ಒಂದು ದಿನದಿಂದ ಐದು, ಏಳು, ಹನ್ನೊಂದು, 21 ಹೀಗೆ ಒಂದೊಂದು ಕಡೆಗಳಲ್ಲಿ ಒಂದೊಂದು ರೀತಿಯಲ್ಲಿ ಆಚರಿಸುತ್ತಾರೆ. ಕೆಲವೆಡೆ ಎರಡು ದಿನ, ಮೂರು ದಿನ, ಹತ್ತು ದಿನ ಎಂದು ಆಚರಿಸುವ ಸಂಪ್ರದಾಯವು ಇದೆ. ಈ ಹಬ್ಬವನ್ನ ವಿನಾಯಕ ಚತುರ್ಥಿ ಎಂತಲೂ ಕರೆಯುತ್ತಾರೆ. ಈ ಹಬ್ಬದ ಸಂದರ್ಭದಲ್ಲಿ ಗಣೇಶ ವಿಗ್ರಹವನ್ನ ತಂದು ಪೂಜೆ ಮಾಡಿ ವಿಘ್ನಗಳನ್ನು ನಿವಾರಣೆ ಮಾಡುವಂತೆ ಪ್ರಾರ್ಥಿಸುತ್ತಾರೆ. ಇನ್ನು ಸಾರ್ವಜನಿಕ ವಲಯದಲ್ಲಿ ದೊಡ್ಡ ವಿಗ್ರಹಗಳನ್ನು ತಂದು ಮೆರವಣಿಗೆ ಮಾಡಿ ಇನ್ನಿತರ ಚಟುವಟಿಕೆಗಳು, ನೈವೇದ್ಯ, ಪ್ರಸಾದವನ್ನು ವಿತರಿಸುವ ಮೂಲಕ ಆಚರಿಸುತ್ತಾರೆ.

    ಏನಿದು ಗಣಪತಿ ಬಪ್ಪಾ ಮೋರ್ಯ?
    ಗಣೇಶನಿಗಾಗಿ ಹೇಳುವ ಮಂತ್ರವೆಂದರೆ ಇದು. ಗಣೇಶನ ಇನ್ನೊಂದು ಹೆಸರೇ ಗಣಪತಿ. ಗಣಪತಿ ಎಂದರೆ ಗಣಗಳ ಪ್ರಭು ಎಂದರ್ಥ. ಬಪ್ಪಾ ಎಂದರೆ ತಂದೆ. ಮೋರ್ಯ ಎಂದರೆ 14 ರಿಂದ 15ನೇ ಶತಮಾನದ ಸಂತ ಮತ್ತು ಪುಣೆ ಬಳಿಯ ಚಿಂಚ್ ವಾಡ್ ನ ಗಣೇಶನ ಭಕ್ತ ಮೋರ್ಯ ಗೋಸವಿಯನ್ನು ಉಲ್ಲೇಖಿಸುತ್ತದೆ.

    ಇದೇ ರೀತಿ ಕೆಲವು ರಾಜ್ಯಗಳು ತಮ್ಮ ರಾಜ್ಯ ಉತ್ಸವಗಳನ್ನು ಹೊಂದಿವೆ:
    ಅರುಣಾಚಲ ಪ್ರದೇಶ: ಹಾರ್ನ್‌ಬಿಲ್ ಸಂರಕ್ಷಣೆ ಹಾಗೂ ಅದರ ಬುದ್ಧಿವಂತಿಕೆಯನ್ನು ತೋರಿಸುವ ದೃಷ್ಟಿಯಿಂದ ಪಕ್ಕೆ ಪಾಗಾ (ಹಾರ್ನ್‌ಬಿಲ್) ಉತ್ಸವವನ್ನು 2019ರ ಜನವರಿಯಲ್ಲಿ ರಾಜ್ಯ ಉತ್ಸವವೆಂದು ಘೋಷಿಸಿತು.

    ಮಣಿಪುರ: ತಮ್ಮ ರಾಜ್ಯದ ಹೂವನ್ನು ಗೌರವಿಸುವ ದೃಷ್ಟಿಯಿಂದ ನಾಲ್ಕು ದಿನಗಳ ಹಬ್ಬವಾದ ಶಿರುಯಿ ಲಿಲಿ ಉತ್ಸವವನ್ನು 2017ರಲ್ಲಿ ರಾಜ್ಯ ಉತ್ಸವವೆಂದು ಘೋಷಿಸಿದೆ.

    ತ್ರಿಪುರ: 2015ರ ಜನವರಿಯಲ್ಲಿ ತ್ರಿಪುರ ರಾಜ್ಯವು ಮೈತೆಯಿ ಉಮಂಗ್ ಲೈ ಹರೋಬಾ ಉತ್ಸವವನ್ನು ಅಧಿಕೃತ ರಾಜ್ಯ ಉತ್ಸವವೆಂದು ಘೋಷಿಸಿತು. ಈ ಮೂಲಕ ಸಾಂಪ್ರದಾಯಿಕ ಆಚರಣೆಗಳು, ನೃತ್ಯಗಳು ಮತ್ತು ಸಂಗೀತದೊಂದಿಗೆ ಜೀವಂತ ಆತ್ಮಗಳನ್ನು ಆಚರಿಸುತ್ತಾರೆ.

    ಜಾರ್ಖಂಡ್: 2025ರ ಆರಂಭದಲ್ಲಿ ಸಿರಸಿತಾದಲ್ಲಿರುವ ಓರಾನ್ ತೀರ್ಥಯಾತ್ರೆಯನ್ನು ರಾಜ್ಯ ಉತ್ಸವ ಎಂದು ಘೋಷಿಸಿದೆ.

    ಕರ್ನಾಟಕ: ಮೈಸೂರು ದಸರಾವನ್ನು ಅಧಿಕೃತವಾಗಿ ರಾಜ್ಯೋತ್ಸವವೆಂದು ಘೋಷಿಸಲಾಗಿದೆ. ನವರಾತ್ರಿಯ ಸಮಯದಲ್ಲಿ 10 ದಿನಗಳ ಭವ್ಯ ಸಾಂಸ್ಕೃತಿಕ ಉತ್ಸವ, ವಿಜಯದಶಮಿಯಂದು ಅಂತ್ಯಗೊಳ್ಳುತ್ತದೆ, ಇದರಲ್ಲಿ ಆನೆಗಳೊಂದಿಗೆ ಅಂಬಾರಿಯು ಸಾಂಸ್ಕೃತಿಕ ಮೆರವಣಿಗೆಯ ಮೂಲಕ ಸಾಗುತ್ತದೆ.

    ಆಂಧ್ರಪ್ರದೇಶ: ಅಹೋಬಿಲಂ ಪರುವೇತ ಉತ್ಸವವನ್ನು 2024ರ ಮಾರ್ಚ್ ನಲ್ಲಿ ರಾಜ್ಯ ಉತ್ಸವವೆಂದು ಘೋಷಿಸಲಾಯಿತು. ಶತಮಾನಗಳಷ್ಟು ಹಳೆಯದಾದ ಈ ಅಣಕು ಬೇಟೆ ಉತ್ಸವವು ನರಸಿಂಹ ಸ್ವಾಮಿಯನ್ನು ಕೇಂದ್ರೀಕರಿಸಿದ್ದು, ಅರಸವಳ್ಳಿ ದೇವಸ್ಥಾನದಲ್ಲಿ ರಥ ಸಪ್ತಮಿ ಕೂಡ ರಾಜ್ಯ ಉತ್ಸವವಾಗಿದೆ.

    ತೆಲಂಗಾಣ: 2024ರ ನವೆಂಬರ್ ನಲ್ಲಿ ಸದರ್ ಸಮ್ಮೇಳನ (ಎಮ್ಮೆ ಮೆರವಣಿಗೆ) ವನ್ನು ರಾಜ್ಯ ಉತ್ಸವವೆಂದು ಘೋಷಿಸಲಾಯಿತು.

    ಉತ್ತರಾಖಂಡ್: 2022ರ ಜುಲೈನಲ್ಲಿ ಮಾ ವಾರಾಹಿ ಬಗ್ವಾಲ್ ಮೇಳವನ್ನು ರಾಜ್ಯ ಸರ್ಕಾರದ ಉತ್ಸವವೆಂದು ಘೋಷಿಸಲಾಯಿತು. ರಕ್ಷಾ ಬಂಧನದ ಸಮಯದಲ್ಲಿ ಚಂಪಾವತ್‌ನಲ್ಲಿ ನಡೆಯುವ ಇದು ಮಾ ವಾರಾಹಿ ದೇವಸ್ಥಾನದಲ್ಲಿ ವಿಶಿಷ್ಟ ಆಚರಣೆಗಳನ್ನು ಒಳಗೊಂಡಿರುತ್ತದೆ.

  • ಸ್ಯಾಂಡಲ್ ವುಡ್ ನಲ್ಲಿ ಗಣಪನ ಸಂಭ್ರಮ: ಸ್ಟಾರ್ ಗಳ ಸಮಾಗಮ

    ಸ್ಯಾಂಡಲ್ ವುಡ್ ನಲ್ಲಿ ಗಣಪನ ಸಂಭ್ರಮ: ಸ್ಟಾರ್ ಗಳ ಸಮಾಗಮ

    ರಾಷ್ಟ್ರದಾದ್ಯಂತ ಗಣೇಶ ಹಬ್ಬದ ಸಂಭ್ರಮ, ಸಡಗರ ಮನೆ ಮಾಡಿದೆ. ವಿಘ್ನವಿನಾಶಕ, ಪಾರ್ವತಿ ಪುತ್ರ ಗಣಪನ ಆರಾಧನೆ ಮಾಡಲಾಗ್ತಿದೆ. ಪ್ರತಿ ಮನೆ ಮನಗಳಲ್ಲಿ ಗೌರಿ ಹಾಗೂ ಗಣೇಶನ ಆಗಮನವಾಗಿದೆ. ವಿಶೇಷವಾಗಿ ಅಲಂಕರಿಸಿ ವಿವಿಧ ರೀತಿಯಲ್ಲಿ ಅದ್ಧೂರಿಯಾಗಿ ಪೂಜೆ ಪುನಸ್ಕಾರಗಳನ್ನ ಮಾಡಲಾಗ್ತಿದೆ. ಇನ್ನು ಸ್ಯಾಂಡಲ್‌ವುಡ್ ಇದಕ್ಕೆ ಹೊರತಾಗಿಲ್ಲ. ಸೆಲೆಬ್ರಿಟಿಗಳು ತುಂಬಾನೇ ವಿಶೇಷವಾಗಿ ಗಣೇಶ ಹಬ್ಬವನ್ನ (Ganeshotsava) ಆಚರಿಸಿದ್ದಾರೆ.

    ರಿಯಲ್‌ಸ್ಟಾರ್ ಉಪೇಂದ್ರ (Upendra) ತಮ್ಮ ಮನೆಯಲ್ಲಿ ಗೌರಿ ಗಣೇಶನನ್ನ ಕೂರಿಸಿ ಪೂಜೆ ಮಾಡಿ ಸಂಭ್ರಮಿಸಿದ್ದಾರೆ. ಕುಟುಂಬಸ್ಥರು ಗೌರಿ ಗಣೇಶ ಹಬ್ಬದಲ್ಲಿ ಭಾಗಿಯಾಗಿದ್ದಾರೆ. ಹಬ್ಬದ ಸಂಭ್ರಮದಲ್ಲಿ ಕುಟುಂಬಸ್ಥರೆಲ್ಲ ಒಟ್ಟಾಗಿ ಗಣೇಶ ಚತುರ್ಥಿ ಆಚರಿಸಿದ ಕ್ಷಣವನ್ನ ಫೋಟೋದಲ್ಲಿ ಸೆರೆಹಿಡಿಯಲಾಗಿದೆ. ಸದ್ಯ ರಿಯಲ್‌ಸ್ಟಾರ್ ನಟಿಸಿ, ನಿರ್ದೇಶನ ಮಾಡಿರೋ `ಯುಐ’ ಸಿನಿಮಾಗಾಗಿ ಫ್ಯಾನ್ಸ್ ವೇಟ್ ಮಾಡ್ತಿದ್ದಾರೆ.

    `ಕೆಡಿ’ ಸಿನಿಮಾ ತಂಡದಿಂದ ಗೌರಿ ಗಣೇಶ ಹಬ್ಬದ ಆಚರಣೆ ಮಾಡಲಾಗಿದೆ. ನಾಯಕ ಧ್ರುವ ಸರ್ಜಾ (Dhruva Sarja), ನಾಯಕಿ ರೀಷ್ಮಾ ನಾಣಯ್ಯ, ನಿರ್ದೇಶಕ ಪ್ರೇಮ್ ಹಾಗೂ ಇಡೀ ಚಿತ್ರತಂಡ ಗಣೇಶ ಚತುರ್ಥಿಯಲ್ಲಿ ಭಾಗಿಯಾಗಿದೆ. `ಕೆಡಿ’ ಸಿನಿಮಾತಂಡ ಶ್ವೇತ ವಸ್ತçಧಾರಿಗಳಾಗಿ ಪೂಜೆಯಲ್ಲಿ ಭಾಗಿಯಾಗಿದ್ದು, ವಿಶೇಷವಾಗಿ ಗಮನಸೆಳೆದಿದೆ. ಆ್ಯಕ್ಷನ್‌ಪ್ರಿನ್ಸ್ ಧ್ರುವ ಸರ್ಜಾ ನಟನೆಯ `ಮಾರ್ಟಿನ್’ ಸಿನಿಮಾ ಅಕ್ಟೋಬರ್‌ನಲ್ಲಿ ತೆರೆಗೆ ಬರೋಕೆ ಸಿದ್ಧವಾಗಿದೆ.

    ನಟಿ ಶ್ವೇತಾ ಚಂಗಪ್ಪ ಕೂಡಾ ತಮ್ಮ ಮನೆಯಲ್ಲಿ ವಿಘ್ನೇಶ್ವರನನ್ನ ಕೂರಿಸಿ ವಿಶೇಷವಾಗಿ ಪೂಜೆ ಮಾಡಿದ್ದಾರೆ. ಗಣೇಶನ ಮುಂದೆ ಕುಳಿತು ನಾಡಿನ ಸಮಸ್ತ ಜನತೆಗೆ ಶುಭಾಶಯ ಕೋರಿದ್ದಾರೆ. ನಟಿ ಕವಿತಾ ಗೌಡ ಕೂಡಾ ಮನೆಯಲ್ಲಿ ಗಣೇಶನ ಕೂರಿಸಿ ವಿಶೇಷವಾಗಿ ಪೂಜೆ ಮಾಡಿದ್ದಾರೆ. ಕವಿತಾ ಹಾಗೂ ಚಂದನ್ ಜೋಡಿ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ.

  • ಗಣೇಶೋತ್ಸವ: ಆಹಾರ ಪದಾರ್ಥ, ಪ್ರಸಾದ ಸೇವೆಗೆ ಕಟ್ಟೆಚ್ಚರ – FSSAI ಅನುಮತಿ ಇಲ್ಲದಿದ್ರೆ ಕ್ರಮ

    ಗಣೇಶೋತ್ಸವ: ಆಹಾರ ಪದಾರ್ಥ, ಪ್ರಸಾದ ಸೇವೆಗೆ ಕಟ್ಟೆಚ್ಚರ – FSSAI ಅನುಮತಿ ಇಲ್ಲದಿದ್ರೆ ಕ್ರಮ

    ಬೆಂಗಳೂರು: ಗಣೇಶೋತ್ಸವದ ವೇಳೆ ಆಹಾರ ಪದಾರ್ಥ ಹಾಗೂ ಪ್ರಸಾದ ಸೇವೆಯ ಮೇಲೆ ಕಟ್ಟೆಚ್ಚರವಹಿಸಲಾಗಿದ್ದು, ಎಫ್‌ಎಸ್‌ಎಸ್‌ಎಐ (Food Safety And Standards Authority Of India)ನಿಂದ ಅನುಮತಿ ಪಡೆಯದೇ ಆಹಾರ ನೀಡಿದರೆ ಕೂಡಲೇ ಕ್ರಮ ಕೈಗೊಳ್ಳಲಾಗುವುದು ಎಂದು ಆಹಾರ ಸುರಕ್ಷತಾ ಮತ್ತು ಗುಣಮಟ್ಟ ಇಲಾಖೆ ಎಚ್ಚರಿಸಿದೆ.

    ಗಣಪತಿ ಉತ್ಸವಕ್ಕೆ ಮೂರೇ ದಿನ ಬಾಕಿ ಇರುವಾಗ, ಗಣಪತಿ ಉತ್ಸವದ ಆಯೋಜಕರಿಗೆ ಆಹಾರ ಸುರಕ್ಷತಾ ಮತ್ತು ಗುಣಮಟ್ಟ ಇಲಾಖೆಯಿಂದ (FSSAI) ಕಡ್ಡಾಯವಾಗಿ ಅನುಮತಿ ಪಡೆಯಬೇಕೆಂದು ಸೂಚಿಸಿದೆ.ಇದನ್ನೂ ಓದಿ: ನಿಮ್ಮನ್ನು ತಾಯಿಯಾಗಿ ಪಡೆದಿರುವುದು ನನ್ನ ಪುಣ್ಯ- ಜೈಲಿನಲ್ಲಿರುವ ಪವಿತ್ರಾರನ್ನು ನೆನೆದು ಮಗಳು ಭಾವುಕ ಪೋಸ್ಟ್

    ಈ ಬಗ್ಗೆ ಆಹಾರ ಸುರಕ್ಷತಾ ಮತ್ತು ಗುಣಮಟ್ಟ ಇಲಾಖೆಯು ಬಿಬಿಎಂಪಿಗೆ (BBMP) ಪತ್ರ ಬರೆದು, ಎಫ್‌ಎಸ್‌ಎಸ್‌ಎಐ ಇಲಾಖೆಯಿಂದ ಅನುಮತಿ ಪತ್ರ ಪಡೆದವರು ಮಾತ್ರ ಆಹಾರ ವಿತರಿಸಲು ಸೂಚನೆ ನೀಡಿದೆ.

    ನಗರದ ಯಾವುದೇ ಜಾಗದಲ್ಲಿ ಗಣಪತಿ ಉತ್ಸವ ಮಾಡಿದರೂ ಎಫ್‌ಎಸ್‌ಎಸ್‌ಎಐನಿಂದ ಕಡ್ಡಾಯವಾಗಿ ಪರವಾನಿಗೆ ಪಡೆಯಲೇಬೇಕು. ಗಣೇಶೋತ್ಸವ ವೇಳೆ ಪ್ರಸಾದ ವಿನಿಯೋಗ ಇದ್ದರೆ ಅಲ್ಲಿ ಶುಚಿತ್ವ ಮತ್ತು ಗುಣಮಟ್ಟ ಸುರಕ್ಷತೆ ಪತ್ರ ಕಡ್ಡಾಯವಾಗಿದೆ. ಬಿಬಿಎಂಪಿ ಅನುಮತಿ ಜೊತೆಗೆ ಆಹಾರ ವಿತರಣೆಗೂ ಅನುಮತಿ ಪತ್ರ ಇರಲೇಬೇಕಿದೆ.ಇದನ್ನೂ ಓದಿ: ʻಕೈʼ ಹಿಡಿಯುತ್ತಾರಾ ಕುಸ್ತಿಪಟು ವಿನೇಶ್, ಬಜರಂಗ್ ಪುನಿಯಾ – ತೀವ್ರ ಕುತೂಹಲ ಮೂಡಿಸಿದ ರಾಹುಲ್ ಗಾಂಧಿ ಭೇಟಿ

    ಜನರ ಆರೋಗ್ಯ ದೃಷ್ಟಿಯಿಂದ ಪಾಲಿಕೆಗೆ ಪತ್ರದ ಮೂಲಕ ಸಂದೇಶ ರವಾನಿಸಲಾಗಿದೆ. ಗಣಪತಿ ಉತ್ಸವದ ವೇಳೆ ಪ್ರಸಾದ, ಆಹಾರ ಪದಾರ್ಥಗಳು ವಿತರಣೆ ಮಾಡುವವರು ಎಫ್‌ಎಸ್‌ಎಸ್‌ಎಐ ಪರವಾನಗಿ ಪಡೆದಿದ್ದಾರೆಯೇ ಎಂಬುದನ್ನ ಪರಿಶೀಲಿನೆ ಮಾಡಲು ಆದೇಶಿಸಿದೆ.

  • ಈದ್ಗಾ ಮೈದಾನದಲ್ಲಿ ಗಣೇಶ ಪ್ರತಿಷ್ಠಾಪನೆಗೆ ಗ್ರೀನ್ ಸಿಗ್ನಲ್ – ಷರತ್ತುಗಳು ಅನ್ವಯ

    ಈದ್ಗಾ ಮೈದಾನದಲ್ಲಿ ಗಣೇಶ ಪ್ರತಿಷ್ಠಾಪನೆಗೆ ಗ್ರೀನ್ ಸಿಗ್ನಲ್ – ಷರತ್ತುಗಳು ಅನ್ವಯ

    ಹುಬ್ಬಳ್ಳಿ: ಹುಬ್ಬಳ್ಳಿಯ (Hubballi) ವಿವಾದಿತ ಈದ್ಗಾ ಮೈದಾನದಲ್ಲಿ (Idga Maidan) ಗಣೇಶ ಪ್ರತಿಷ್ಠಾಪನೆಗೆ ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಅನುಮತಿ ನೀಡಿದೆ. ಗಜಾನನೋತ್ಸವ ಮಹಾ ಮಂಡಳಿಗೆ ಆಯುಕ್ತ ಡಾ.ಈಶ್ವರ ಉಳ್ಳಾಗಡ್ಡಿ ಅನುಮತಿ ಪತ್ರ ನೀಡಿದ್ದಾರೆ.

    ಸೆ.7 ರಂದು ಪ್ರತಿಷ್ಠಾಪನೆ, ಸೆ.9 ರಂದು ವಿಸರ್ಜನೆ ಸೇರಿದಂತೆ ಮೂರು ದಿನಗಳ ಕಾಲ ಗಣೇಶ ಪ್ರತಿಷ್ಠಾಪನೆಗೆ ಅವಕಾಶ ನೀಡಲಾಗಿದೆ. ಮೈದಾನದಲ್ಲಿ ಗಣೇಶ ಪ್ರತಿಷ್ಠಾಪನೆ ವಿಚಾರ ಕಳೆದ ಬಾರಿ ರಾಜ್ಯಮಟ್ಟದಲ್ಲಿ ದೊಡ್ಡ ಪ್ರಮಾಣದಲ್ಲಿ ಸುದ್ದಿ ಆಗಿತ್ತು. ಈ ವರ್ಷ ಪ್ರತಿಷ್ಠಾಪನೆಗೆ ನಾಲ್ಕೈದು ಸಂಘಟನೆಗಳು ಅರ್ಜಿ ಸಲ್ಲಿಸಿದ್ದವು. ಕೆಲ ಷರತ್ತುಗಳೊಂದಿಗೆ ಮೂರು ದಿನಗಳ ಕಾಲ ಗಣೇಶೋತ್ಸವಕ್ಕೆ ಮಹಾನಗರ ಪಾಲಿಕೆ ಅನುಮತಿ ನೀಡಿದೆ.

     

    ಷರತ್ತುಗಳು ಏನು?
    * ಸಂಘಟನೆ ಪಾಲಿಕೆ ವಿಧಿಸುವ ಕರಾರುಗಳಿಗೆ ಬದ್ಧರಾಗಿರಬೇಕು.
    * ಗಣೇಶ ಮೂರ್ತಿ ಪ್ರತಿಷ್ಠಾಪಿಸುವ ಮುನ್ನ ಕಡ್ಡಾಯವಾಗಿ ಪಾಲಿಕೆ ಮತ್ತು ಪೊಲೀಸ್ ಆಯುಕ್ತರ ಅನುಮತಿ ಪಡೆದುಕೊಳ್ಳಬೇಕು.
    * ಸೆ.7ರಂದು ಬೆಳಗ್ಗೆ 06:00 ಗಂಟೆಯಿಂದ 08:00 ಗಂಟೆಯೊಳಗೆ ಮೂರ್ತಿ ಪ್ರತಿಷ್ಠಾಪನೆ ಮಾಡಬೇಕು. ಸೆ.9ರಂದು
    ಮಧ್ಯಾಹ್ನ 12:00 ಗಂಟೆಯ ಒಳಗಾಗಿ ಗಣೇಶ ವಿಸರ್ಜನೆ ಮಾಡಬೇಕು.
    * 30 ಅಡಿ ಉದ್ದ, 30 ಅಡಿ ಅಗಲಕ್ಕೆ ಮೀರದಂತೆ ಹಾಗೂ ಪಾಲಿಕೆ/ಪೊಲೀಸ್/ಕಂದಾಯ ಅಧಿಕಾರಿಗಳು ಸೂಚಿಸುವ ಜಾಗದಲ್ಲಿ ಮಾತ್ರ ಪೆಂಡಾಲನ್ನು ಹಾಕುವುದು.
    * ಸದರಿ ಜಾಗದಲ್ಲಿ ಯಾವುದೇ ಖಾಯಂ ಕಟ್ಟಡ ನಿರ್ಮಿಸಬಾರದು.
    * ಉತ್ಸವ ಮೂರ್ತಿಯ ಹೊರತಾಗಿ ಯಾವುದೇ ರೀತಿಯ ಬಾವುಟಗಳು ಹಾಗೂ ಇತರೆ ಮೈದಾನದ ಭಾಗದಲ್ಲಿ ಯಾವುದೇ ರೀತಿಯ ವಿವಾದಿತ ಹಾಗೂ ಪ್ರಚೋದನಕಾರಿ ಫೋಟೊಗಳನ್ನು, ಭಿತ್ತಿಪತ್ರ, ಬ್ಯಾನರ್&ಬಂಟಿಂಗ್ಸ್‌ಗಳನ್ನು ಅಳವಡಿಸಕೂಡದು ಹಾಗೂ ಪ್ರದರ್ಶಿಸಕೂಡದು. ಯಾವುದೇ ಪ್ರಚೋದನಕಾರಿ ಹಾಡುಗಳನ್ನು ಹಾಕಬಾರದು ಹಾಗೂ ಡಿಜೆ ಅಥವಾ ಇತರೇ ಕರ್ಕಶಯುಕ್ತ ಧ್ವನಿವರ್ಧಕಗಳನ್ನು ಉಪಯೋಗಿಸುವಂತಿಲ್ಲ.
    * ಯಾವುದೇ ಮನರಂಜನಾ ಹಾಗೂ ಇನ್ನಿತರ ಕಾರ್ಯಕ್ರಮ ಕೈಗೊಳ್ಳಲು/ಆಯೋಜಿಸಲು ಅವಕಾಶ ಇರುವುದಿಲ್ಲ.
    * ಗಣೇಶ ಚತುರ್ಥಿಯ ಉತ್ಸವ ಆಚರಿಸುವ ಸಂದರ್ಭದಲ್ಲಿ ಯಾವುದೇ ರೀತಿಯ ಗೊಂದಲಗಳಿಗೆ ಗಲಭೆಗಳಿಗೆ ಅವಕಾಶಗಳನ್ನು ನೀಡಕೂಡದು. ಸಾರ್ವಜನಿಕರ ವಿರೋಧಗಳಿಗೆ ಮತ್ತು ಪ್ರತಿಭಟನೆಗಳಿಗೆ ಪ್ರಚೋದನೆಯನ್ನು ನೀಡುವಂತೆ ಆಯೋಜಿಸಬಾರದು.
    * ಸಾರ್ವಜನಿಕ ಗಣೇಶ ಉತ್ಸವ ಆಚರಣೆಗಾಗಿ ಪೆಂಡಾಲ್‌ಗಳಲ್ಲಿ ಯಾವುದೇ ವಾಣಿಜ್ಯ ಹಾಗೂ ಇನ್ನಿತರ ಜಾಹಿರಾತುಗಳನ್ನು ಹಾಕುವಂತಿಲ್ಲ.
    * ಈ ಸಂಧರ್ಭದಲ್ಲಿ ಸಾರ್ವಜನಿಕ ಶಾಂತಿಯನ್ನು ಹಾಗೂ ಕೋಮು ಸೌಹಾರ್ದತೆಯನ್ನು ಕಾಪಾಡಿಕೊಂಡು ಹೋಗುವ ಭರವಸೆಯನ್ನು ಸಮಾರಂಭದ ಆಯೋಜಕರು ನೀಡಬೇಕು ಹಾಗೂ ಯಾವುದೇ ಪರಿಸ್ಥಿತಿಯಲ್ಲಿ ಅನಾವಶ್ಯಕವಾಗಿ ಗಲಭೆಗಳು, ಗಲಾಟೆಗಳು ಉಂಟಾಗಿ ಸಾರ್ವಜನಿಕರ ಸ್ವಸ್ಥತೆಗೆ ಮತ್ತು ಆಸ್ತಿ ಪಾಸ್ತಿಗಳಿಗೆ ಹಾನಿಯಾದ ಸಂಧರ್ಭದಲ್ಲಿ ಸಂಪೂರ್ಣ ಜವಾಬ್ದಾರಿಯನ್ನು ಸಮಾರಂಭದ ಆಯೋಜಕರು ವಹಿಸಿಕೊಂಡು ಮುಂದಿನ ಯಾವುದೇ ಕಾನೂನು ರೀತಿಯ ಕ್ರಮಗಳನ್ನು ಒಪ್ಪಿಕೊಂಡು ತನ್ಮೂಲಕ ಉಂಟಾಗುವ ಹಾನಿಯ ಮೊತ್ತವನ್ನು ಭರಿಸುವುದಾಗಿ ಘೋಷಿಸಿ ಲಿಖಿತವಾಗಿ ಪ್ರಮಾಣವನ್ನು ಸಲ್ಲಿಸಬೇಕು.


    * ಮಹಾನಗರ ಪಾಲಿಕೆ ಹಾಗೂ ಪೊಲೀಸ್ ಅಧಿಕಾರಿಗಳು ಸೂಚಿಸಿದಂತೆ ಗಣೇಶ ಮೆರವಣಿಗೆ ಮಾರ್ಗಕ್ಕೆ ಬದ್ಧರಾಗಿರತಕ್ಕದ್ದು ಹಾಗೂ ಸದರಿ ಮೆರವಣಿಗೆಯನ್ನು ಒಂದು ಗಂಟೆಯ ಒಳಗೆ ಮುಕ್ತಾಯಗೊಳಿಸಿ ಪಾಲಿಕೆ ಹಾಗೂ ಪೊಲೀಸ್ ಅಧಿಕಾರಿಗಳು ಸೂಚಿಸಿದ ಸ್ಥಳದಲ್ಲಿ ಗಣೇಶ ವಿಸರ್ಜನೆ ಮಾಡತಕ್ಕದ್ದು.
    * ಸಮಾರಂಭವನ್ನು ಆಚರಿಸಿದ ನಂತರದಲ್ಲಿ ಪಾಲಿಕೆಯ ಸ್ಥಳವನ್ನು ತೆರವುಗೊಳಿಸಿ ಮತ್ತು ಸಂಪೂರ್ಣವಾಗಿ ಸ್ವಚ್ಛಗೊಳಿಸಿ ಮಹಾನಗರ ಪಾಲಿಕೆಗೆ ವರದಿಯನ್ನು ನೀಡಬೇಕು.
    * ಕಾಲಕಾಲಕ್ಕೆ ಮಾನ್ಯ ಸರ್ವೋಚ್ಚ ನ್ಯಾಯಾಲಯ ಹಾಗೂ ಉಚ್ಚ ನ್ಯಾಯಾಲಯ ನೀಡುವ ಆದೇಶ ಹಾಗೂ ಸೂಚನೆಗಳಿಗೆ ಬದ್ಧರಾಗಿರಬೇಕು.
    * ಪೊಲೀಸ್ ಇಲಾಖೆಯಿಂದ ಭದ್ರತೆ, ಶಾಂತಿ ಮತ್ತು ಸುವ್ಯವಸ್ಥೆ ಕಾಪಾಡತಕ್ಕದ್ದು.
    * ಗಣೇಶ ಮೂರ್ತಿ ಪ್ರತಿಷ್ಠಾಪನೆ ಪಾಲಿಕೆ, ಪೊಲೀಸ್ ಹಾಗೂ ಕಂದಾಯ ಅಧಿಕಾರಿಗಳು ಸೂಚಿಸುವ ಜಾಗದಲ್ಲಿ ಹಾಗೂ ವಿಧಿಸುವ ಮಾನದಂಡಗಳಿಗೆ ಅನುಗುಣವಾಗಿ ಮಾತ್ರ ಆಚರಿಸಬೇಕು.
    * ಸರ್ಕಾರದ ಮತ್ತು ಇತರೆ ಇಲಾಖೆಗಳ ಇನ್ನಿತರ ಕರಾರುಗಳು ಅನ್ವಯಿಸುತ್ತವೆ.
    * ಈದ್ಗಾ ಮೈದಾನದ ಆವರಣದ ಸುತ್ತಮುತ್ತಲಿನ ಪ್ರದೇಶದಲ್ಲಿ ಯಾವುದೇ ಪಟಾಕಿ ಹಾಗೂ ಇತರೆ ಸಿಡಿಮದ್ದುಗಳನ್ನು ಬಳಸಬಾರದು.
    * ಯಾವುದೇ ರೀತಿಯ ಪ್ರಚೋದನಾಕಾರಿ ಹೇಳಿಕೆ ಹಾಗೂ ಭಾಷಣ ಮಾಡಕೂಡದು.
    * ಅನ್ಯ ಧರ್ಮೀಯರ ಧಾರ್ಮಿಕ ಭಾವನೆಗಳಿಗೆ ಧಕ್ಕೆಯಾಗುವಂತಹ ಯಾವುದೇ ಕಾರ್ಯಕ್ರಮಗಳನ್ನು ಅಥವಾ ಧಾರ್ಮಿಕ ಚಟುವಟಿಕೆಗಳನ್ನು ಮಾಡಬಾರದು.

  • ಹಲಾಲ್ ಮುಕ್ತ ಗಣೇಶ ಹಬ್ಬ ಆಚರಿಸಿ: ಪ್ರಮೋದ್ ಮುತಾಲಿಕ್ ಮನವಿ

    ಹಲಾಲ್ ಮುಕ್ತ ಗಣೇಶ ಹಬ್ಬ ಆಚರಿಸಿ: ಪ್ರಮೋದ್ ಮುತಾಲಿಕ್ ಮನವಿ

    ಚಿಕ್ಕೋಡಿ: ದೇಶಾದ್ಯಂತ ಗಣೇಶೋತ್ಸವ (Ganeshotsava) ಸಂಭ್ರಮಕ್ಕೆ ದಿನಗಣನೆ ಆರಂಭವಾಗಿದ್ದು, ಪ್ರತಿ ವರ್ಷದಂತೆ ಈ ವರ್ಷವೂ ಹಲಾಲ್ ಮುಕ್ತ ಗಣೇಶ ಹಬ್ಬ ಆಚರಣೆ ಮಾಡುವಂತೆ ಶ್ರೀ ರಾಮ ಸೇನೆ (Sri Rama Sene) ಅಧ್ಯಕ್ಷ ಪ್ರಮೋದ್ ಮುತಾಲಿಕ್ (Pramod Muthalik) ಮನವಿ ಮಾಡಿದ್ದಾರೆ.

    ಬೆಳಗಾವಿ (Belagavi) ಜಿಲ್ಲೆಯ ಹುಕ್ಕೇರಿ ಪಟ್ಟಣದಲ್ಲಿ ಮಾತನಾಡಿದ ಅವರು, ಗೋಭಕ್ಷಕರು, ಗೋಹಂತಕರಿಂದ ಯಾವುದೇ ವಸ್ತು ಖರೀದಿ ಮಾಡಬೇಡಿ. ಯಾರೂ ಕೂಡ ಈ ಅಪರಾಧ, ತಪ್ಪನ್ನು, ಅಪವಿತ್ರತೆ ಮಾಡಬಾರದು. ಶಾಸ್ತ್ರಬದ್ಧವಾಗಿ ಮಣ್ಣಿನ ಗಣಪತಿಯನ್ನೇ ಪೂಜೆ ಮಾಡಬೇಕು. ಪಿಒಪಿ ಗಣಪತಿ ಉಪಯೋಗ ಬೇಡ. ಇದು ಅಪವಿತ್ರವಾದದ್ದು. ಸಾರ್ವಜನಿಕ ಗಣೇಶೋತ್ಸವ ಮಂಡಳಿಗಳಲ್ಲಿ ಸಿನಿಮಾ, ಅಶ್ಲೀಲ ಗೀತೆ ಹಾಕಬೇಡಿ ಎಂದರು. ಇದನ್ನೂ ಓದಿ: 5 ವರ್ಷದ ಬಾಲಕಿ ಮೇಲೆ ನೆರೆಮನೆಯವನಿಂದ ಅತ್ಯಾಚಾರ – 14ರ ಹುಡುಗ ಅರೆಸ್ಟ್

    ಭಕ್ತಿ ಗೀತೆ ಹಾಕಿ ಗಣೇಶೋತ್ಸವ ಆಚರಿಸಿ ಪಟಾಕಿ, ಹೂವು ಹಣ್ಣು, ತರಕಾರಿ, ಎಲೆಕ್ಟ್ರಾನಿಕ, ಎಲೆಕ್ಟ್ರಿಕ್ ಸಾಮಗ್ರಿ ಪವಿತ್ರವಾದದ್ದನ್ನು ಪಡೆಯಬೇಕು. ಅಪವಿತ್ರವಾದ ವಸ್ತು ಖರೀದಿ ಮಾಡಿದರೆ ಶಾಸ್ತ್ರಕ್ಕೆ ವಿರೋಧ ಆಗುತ್ತದೆ. ಗಣೇಶೋತ್ಸವ ಮೆರವಣಿಗೆಯಲ್ಲಿ ಮದ್ಯಪಾನ, ಗುಟ್ಕಾ ತಿನ್ನದಂತೆ ಕರೆ ನೀಡಿದ್ದಾರೆ. ಇದನ್ನೂ ಓದಿ: Haryana Polls Dates | ಹರಿಯಾಣ ಚುನಾವಣೆ ದಿನಾಂಕ ಬದಲು – ಅಕ್ಟೋಬರ್‌ 5ಕ್ಕೆ ಮತದಾನ

  • ಸಲ್ಲು, ಶಾರುಖ್ ಖಾನ್ ಮನೆಯಲ್ಲಿ ಗಣೇಶ ಹಬ್ಬ: ಮೆಚ್ಚಿಕೊಂಡ ಫ್ಯಾನ್ಸ್

    ಸಲ್ಲು, ಶಾರುಖ್ ಖಾನ್ ಮನೆಯಲ್ಲಿ ಗಣೇಶ ಹಬ್ಬ: ಮೆಚ್ಚಿಕೊಂಡ ಫ್ಯಾನ್ಸ್

    ಬಾಲಿವುಡ್ (Bollywood) ನಲ್ಲಿ ಪ್ರತಿ ವರ್ಷವೂ ಗಣೇಶೋತ್ಸವವನ್ನು (Ganeshotsava) ಅದ್ಧೂರಿಯಾಗಿ ಆಚರಿಸಲಾಗುತ್ತದೆ. ಈ ವರ್ಷವೂ ಅದಕ್ಕೆ ಹೊರತಿಲ್ಲ. ಖ್ಯಾತ ಸ್ಟಾರ್ ನಟರಾದ ಸಲ್ಮಾನ್ ಖಾನ್ (Salman Khan), ಶಾರುಖ್ ಖಾನ್ (Shah Rukh Khan), ಶಿಲ್ಪಾ ಶೆಟ್ಟಿ ಸೇರಿದಂತೆ ಅನೇಕ ತಾರೆಯರು ಗಣಪತಿಯನ್ನು ಸಡಗರದಿಂದ ತಮ್ಮ ಮನೆಗೆ ಬರಮಾಡಿಕೊಂಡಿದ್ದಾರೆ. ಅದರಲ್ಲೂ ಸಲ್ಲು ಮತ್ತು ಶಾರುಖ್ ಖಾನ್ ಮನೆಯಲ್ಲಿ ಗಣೇಶನನ್ನು ಕಂಡು ಅಭಿಮಾನಿಗಳು ಥ್ರಿಲ್ ಆಗಿದ್ದಾರೆ.

    ಸಾಮಾನ್ಯವಾಗಿ ಮುಸ್ಲಿಂ ಸಮುದಾಯ ಮೂರ್ತಿ ಪೂಜೆ ಮಾಡುವುದಿಲ್ಲ. ಆದರೆ, ಶಾರುಖ್ ಮತ್ತು ಸಲ್ಮಾನ್ ಸಂಪ್ರದಾಯಕವಾಗಿ ಗಣೇಶ ಹಬ್ಬವನ್ನು ಪ್ರತಿ ವರ್ಷವೂ ಆಚರಿಸುತ್ತಾ ಬಂದಿದ್ದಾರೆ. ಈ ಮೂಲಕ ಅವರು ಭಾವೈಕ್ಯತೆಯ ಸಂದೇಶ ಸಾರುತ್ತಾರೆ.  ಸಲ್ಮಾನ್ ಸಹೋದರಿಯ ಮನೆಯಲ್ಲಿ ನಡೆಯುವ ಉತ್ಸವದಲ್ಲಿ ಸಾಕಷ್ಟು ಬಾಲಿವುಡ್ ತಾರೆಯರೂ ಭಾಗಿಯಾಗುತ್ತಾರೆ. ಇದನ್ನೂ ಓದಿ: The Vaccine War ಸಿನಿಮಾ ನೋಡಿ ಹೊಗಳಿದ ಸುಧಾ ಮೂರ್ತಿ

    ಕಲಾವಿದರಿಗೆ ಯಾವುದೇ ಜಾತಿ, ಧರ್ಮ, ಗಡಿ ಮತ್ತು ಭಾಷೆ ಇಲ್ಲ. ಅವರಿಗೆ ಎಲ್ಲ ಧರ್ಮ ಮತ್ತು ಜಾತಿಯಲ್ಲೂ ಅಭಿಮಾನಿಗಳು ಇದ್ದಾರೆ. ಹಾಗಾಗಿ ಕೇವಲ ಕಲೆಯನ್ನೇ ಆರಾಧಿಸುವ ಕಲಾವಿದರು ಮತ್ತು ತಂತ್ರಜ್ಞರು ಸಾರ್ವಜನಿಕವಾಗಿ ಹೀಗೆ ಸಂದೇಶಗಳನ್ನು ಸಾರುತ್ತಲೇ ಇರುತ್ತಾರೆ. ಈ ಬಾರಿಯೂ ಅದನ್ನು ಮಾಡಿದ್ದಾರೆ.

     

    ಜಗತ್ತಿನ ಶ್ರೀಮಂತರ ಪಟ್ಟಿಯಲ್ಲಿರುವ ಅಂಬಾನಿ ಮನೆಯಲ್ಲೂ ಅದ್ಧೂರಿಯಾಗಿ ಗಣೇಶ ಹಬ್ಬವನ್ನು ಆಚರಿಸಲಾಗುತ್ತದೆ. ಸಾಕಷ್ಟು ತಾರೆಯರನ್ನು ಹಬ್ಬಕ್ಕಾಗಿ ಅಂಬಾನಿ ಕುಟುಂಬ ಆಹ್ವಾನ ನೀಡುತ್ತದೆ. ಇಲ್ಲಿಯೂ ಅನೇಕ ತಾರೆಯರು ಪಾಲ್ಗೊಳ್ಳುತ್ತಾರೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಗಣೇಶ ವಿಸರ್ಜನೆಯಲ್ಲಿ ಗಲಾಟೆ- ಯುವಕನ ಕೊಲೆಯಲ್ಲಿ ಅಂತ್ಯ

    ಗಣೇಶ ವಿಸರ್ಜನೆಯಲ್ಲಿ ಗಲಾಟೆ- ಯುವಕನ ಕೊಲೆಯಲ್ಲಿ ಅಂತ್ಯ

    ಬೆಳಗಾವಿ: ಗಣೇಶ ವಿಸರ್ಜನೆ ವೇಳೆ ಆರಂಭವಾದ ಗಲಾಟೆಯು ಯುವಕನ(Young Man) ಕೊಲೆಯಲ್ಲಿ ಅಂತ್ಯವಾಗಿರುವ ಘಟನೆ ಯರಗಟ್ಟಿ ತಾಲೂಕಿನ ಮುಗಳಿಹಾಳ ಗ್ರಾಮದಲ್ಲಿ ನಡೆದಿದೆ.

    ಬೆಳಗಾವಿ(Belagavi) ಜಿಲ್ಲೆಯ ಯರಗಟ್ಟಿ ತಾಲೂಕಿನ ಮುಗಳಿಹಾಳ ಗ್ರಾಮದ ನಿವಾಸಿ ಅರ್ಜುನಗೌಡ ಪಾಟೀಲ್ (20) ಕೊಲೆಯಾದ ಯುವಕನಾಗಿದ್ದಾನೆ. ನಿನ್ನೆ ಸಂಜೆ ನಡೆದ ಗಣೇಶ ವಿಸರ್ಜನೆ ವೇಳೆ ಎರಡು ಗುಂಪುಗಳ ನಡುವೆ ಆರಂಭವಾದ ಗಲಾಟೆ ವಿಕೋಪಕ್ಕೆ ತಿರುಗಿದೆ. ಇದನ್ನೂ ಓದಿ: ಅಪಘಾತದಲ್ಲಿ ಗಾಯಗೊಂಡ ಯುವಕನನ್ನು ಆಸ್ಪತ್ರೆಗೆ ದಾಖಲಿಸಿದ ಮಾಜಿ ಮೇಯರ್

    ಮತ್ತೊಂದು ಗುಂಪಿನ ಯುವಕನೊಬ್ಬ ಅರ್ಜುನಗೌಡನಿಗೆ ಚಾಕು ಇರಿದಿದ್ದಾರೆ. ಈ ವೇಳೆ ಅರ್ಜುನಗೌಡ ಕುಸಿದು ನೆಲಕ್ಕೆ ಬೀಳುತ್ತಿದ್ದಂತೆ ಹಂತಕರು ಪರಾರಿಯಾಗಿದ್ದಾರೆ. ಸ್ಥಳಕ್ಕೆ ಮುರಗೋಡ ಠಾಣೆ ಪೊಲೀಸರು ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ. ಸದ್ಯ ಕೊಲೆಯಾದ ಯುವಕನ ಶವವನ್ನು ಮರಣೋತ್ತರ ಪರೀಕ್ಷೆಗಾಗಿ ಬೆಳಗಾವಿ ಜಿಲ್ಲಾಸ್ಪತ್ರೆಗೆ ರವಾನಿಸಲಾಗಿದೆ. ಇದನ್ನೂ ಓದಿ: ಗಣೇಶೋತ್ಸವದಲ್ಲಿ ಡಿಜೆ ಹಾಡಿಗೆ ಸಖತ್ ಸ್ಟೆಪ್ ಹಾಕಿದ ACP

    Live Tv
    [brid partner=56869869 player=32851 video=960834 autoplay=true]

  • ಶಾಸಕ ಜಮೀರ್ ಕಚೇರಿಯಲ್ಲಿ ಅದ್ಧೂರಿ ಗಣೇಶೋತ್ಸವ..!

    ಶಾಸಕ ಜಮೀರ್ ಕಚೇರಿಯಲ್ಲಿ ಅದ್ಧೂರಿ ಗಣೇಶೋತ್ಸವ..!

    ಬೆಂಗಳೂರು: ಶಾಸಕ ಜಮೀರ್ ಅಹ್ಮದ್ ಕಚೇರಿಯಲ್ಲಿಯೇ ಅದ್ದೂರಿಯಾಗಿ ಗಣೇಶೋತ್ಸವವನ್ನು ಆಚರಿಸಲಾಗಿದೆ.

    ಚಾಮರಾಜಪೇಟೆ ವರ್ತಕರ ಬೀದಿಯಲ್ಲಿರುವ ಶಾಸಕರ ಕಚೇರಿಯಲ್ಲಿ ಗಣೇಶ ಮೂರ್ತಿಯನ್ನು ಪ್ರತಿಷ್ಠಾಪನೆ ಮಾಡಲಾಗಿದೆ. ತಿರುಮಲ ತಿರುಪತಿ ಸೆಟಪ್ ನಲ್ಲಿ ಗಣಪನನ್ನು ಪ್ರತಿಷ್ಠಾಪಿಸಲಾಗಿದ್ದು, ಅಂದಾಜು 3.5 ಲಕ್ಷ ರೂ. ವೆಚ್ಚ ವ್ಯಯಿಸಲಾಗಿದೆ.

    ಈ ಗಣೇಶ ಮೂರ್ತಿ 3 ಅಡಿ ಎತ್ತರವಿದೆ. ಬೆಳಗ್ಗೆ 10:30ರ ಸುಮಾರಿಗೆ ಪೂಜಾ ಕೈಂಕರ್ಯ ನೆರವೇರಿದೆ. ಬಳಿಕ ಸುಮಾರು 3 ಸಾವಿರಕ್ಕೂ ಅಧಿಕ ಭಕ್ತಾದಿಗಳಿಗೆ ಸ್ವತಃ ಜಮೀರ್ ಅವರೇ ಪ್ರಸಾದ ವಿತರಣೆ ಮಾಡಿದ್ದಾರೆ. ಇದನ್ನೂ ಓದಿ: ತೇಲುವ ಫ್ರೀಜರ್ ಸಹಾಯದಿಂದ 11 ದಿನ ಸಮುದ್ರದಲ್ಲೇ ಜೀವ ಉಳಿಸಿಕೊಂಡ

    ಇಂದು ಸಂಜೆ ಅದ್ದೂರಿ ಮೆರವಣಿಗೆ ನಡೆದಿದ್ದು, ಮಾಜಿ ಪಾಲಿಕೆ ಸದಸ್ಯರಾದ ಅಲ್ತಾಫ್ ಖಾನ್, ಚಂದ್ರಶೇಖರ್ ಸೇರಿದಂತೆ ಕಾಂಗ್ರೆಸ್ ಕಾರ್ಯಕರ್ತರು ಭಾಗಿಯಾಗಿದ್ದಾರೆ. ಯಡಿಯೂರು ಲೇಕ್ ನಲ್ಲಿ ಮೂರ್ತಿ ವಿಸರ್ಜನೆ ಮಾಡಲಾಗಿದೆ. ಭಕ್ತಾದಿಗಳಿಗೆ ಲಡ್ಡು ಮತ್ತು ಖರ್ಜಿಕಾಯಿ ಪ್ರಸಾದವಾಗಿ ನೀಡಲಾಗಿದೆ.

    Live Tv
    [brid partner=56869869 player=32851 video=960834 autoplay=true]

  • ಜಮೀರ್ `ಗಣೇಶ’ ಅಸ್ತ್ರ – ಇಷ್ಟು ದಿನ ಇಲ್ಲದ್ದು ಈಗ್ಯಾಕೆ? ಶಾಸಕರ ನಡೆಗೆ ಸ್ಥಳೀಯರಿಂದ ಆಕ್ರೋಶ

    ಜಮೀರ್ `ಗಣೇಶ’ ಅಸ್ತ್ರ – ಇಷ್ಟು ದಿನ ಇಲ್ಲದ್ದು ಈಗ್ಯಾಕೆ? ಶಾಸಕರ ನಡೆಗೆ ಸ್ಥಳೀಯರಿಂದ ಆಕ್ರೋಶ

    ಬೆಂಗಳೂರು: ಚಾಮರಾಜಪೇಟೆಯಲ್ಲಿ ಗಣೇಶನ ಗಲಾಟೆ ನಿಲ್ಲುವಂತೆ ಕಾಣುತ್ತಿಲ್ಲ. ಶಾಸಕ ಜಮೀರ್ ಅಹ್ಮದ್ ಖಾನ್ ಕಚೇರಿಯಲ್ಲಿ ಇಂದು ಗಣೇಶೋತ್ಸವ ನಡೆಸಲು ಮುಂದಾಗಿದ್ದು, ಇದಕ್ಕೆ ಜನರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

    ಹೌದು ಜಮೀರ್ ಅಹ್ಮದ್ ಖಾನ್ ಅವರು ಇಂದು ಗಣೇಶ ಪ್ರತಿಷ್ಠಾಪನೆಗೆ ಮುಂದಾಗಿದ್ದಾರೆ. ಚಾಮರಾಜಪೇಟೆಯ ವರ್ತಕರ ಬೀದಿ 4ನೇ ಮುಖ್ಯರಸ್ತೆಯಲ್ಲಿರುವ ತಮ್ಮ ಕಛೇರಿಯಲ್ಲಿ ಬೆಳಗ್ಗೆ 9.15 ರಿಂದ 10 ಗಂಟೆಯೊಳಗಿನ ಶುಭಲಗ್ನದಲ್ಲಿ ವಿದ್ಯಾಗಣಪತಿ ಪ್ರತಿಷ್ಠಾಪನೆಗೆ ಸಿದ್ಧತೆ ನಡೆಸಿದ್ದಾರೆ. ತಮ್ಮ ಕಛೇರಿಯಲ್ಲೇ ಲೈಟಿಂಗ್ಸ್, ಫ್ಲೆಕ್ಸ್ ಎಲ್ಲವನ್ನು ಸಿದ್ದಪಡಿಸಿರುವ ಜಮೀರ್, ಸಂಜೆ 4 ಗಂಟೆಗೆ ಅದ್ಧೂರಿ ಮೆರವಣಿಗೆ ಮೂಲಕ ಗಣಪತಿ ಮೂರ್ತಿ ವಿಸರ್ಜನೆ ಮಾಡಲಿದ್ದಾರೆ. ಇದನ್ನೂ ಓದಿ: ನೆಲಮಂಗಲದಲ್ಲಿ ಹೆದ್ದಾರಿಗೆ ನುಗ್ಗಿದ ನೀರು – ಕಿಲೋಮೀಟರ್‌ಗಟ್ಟಲೇ ಟ್ರಾಫಿಕ್ ಜಾಮ್

    ಸದ್ಯ ಈ ವಿಚಾರವಾಗಿ ಸ್ಥಳೀಯರು ಜಮೀರ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. 4 ಬಾರಿ ಗೆದ್ದರು ಗಣೇಶನ ಮೇಲೆ ಇಲ್ಲದ ಪ್ರೀತಿ ಈಗ್ಯಾಕೆ ಹೆಚ್ಚಾಗಿದೆ. ಈ ಸೌಹಾರ್ದತೆ ನಿಜಕ್ಕೂ ಇವರ ಮನಸ್ಸಲ್ಲಿದ್ದಿದ್ದರೆ ಮೈದಾನದಲ್ಲೇ ಗಣೇಶ ಕೂರಿಸಲು ಮುಂದಾಗುತ್ತಿದ್ದರು. ಮೈದಾನದಲ್ಲಿ ಗಣೇಶನ ಕೂರಿಸೋಕೆ ಬಿಡದ ಇವರು, ಕಛೇರಿಯಲ್ಲಿ ಗಣೇಶನನ್ನು ಕೂರಿಸಿ ಮುಂಬರುವ ಚುನಾವಣೆಗೆ ಹಿಂದೂಗಳನ್ನು ಓಲೈಕೆ ಮಾಡಲು ಬಣ್ಣ ಹಾಕದೇ ನಾಟಕ ಮಾಡುತ್ತಿದ್ದಾರೆಂದು ಕಿಡಿಕಾರಿದ್ದಾರೆ. ಇದನ್ನೂ ಓದಿ: ಚಾಮರಾಜಪೇಟೆಯಲ್ಲಿ ನಾಳೆ ಜಮೀರ್ ನೇತೃತ್ವದಲ್ಲೇ ಗಣೇಶೋತ್ಸವ!

    Live Tv
    [brid partner=56869869 player=32851 video=960834 autoplay=true]

  • ಗಣೇಶನ ಜೊತೆಗೆ ಗಾಲ್ಫ್ ಮೈದಾನದ ಚಿರತೆಗೂ ನಿತ್ಯ ಪೂಜೆ

    ಗಣೇಶನ ಜೊತೆಗೆ ಗಾಲ್ಫ್ ಮೈದಾನದ ಚಿರತೆಗೂ ನಿತ್ಯ ಪೂಜೆ

    ಬೆಳಗಾವಿ: ಕಳೆದ 1 ತಿಂಗಳಿನಿಂದ ಬೆಳಗಾವಿಯ ಗಾಲ್ಫ್ ಮೈದಾನದಲ್ಲಿ ಅಡಗಿ ಕುಳಿತುಕೊಂಡಿರುವ ಚಾಣಾಕ್ಷ ಚಿರತೆ ಇನ್ನೂ ಸೆರೆಯಾಗಿಲ್ಲ. ಆದರೆ ಕುಂದಾ ನಗರಿ ಜನರು ಮಾತ್ರ ಗಣೇಶನ ಜೊತೆಗೆ ಚಿರತೆಗೂ ದಿನನಿತ್ಯ ಪೂಜೆ ಸಲ್ಲಿಸುತ್ತಿದ್ದಾರೆ.

    ಹೌದು, ಇಲ್ಲಿನ ವಿಶ್ವೇಶ್ವರಯ್ಯ ನಗರದ ಮನೆಯೊಂದರಲ್ಲಿ ಗಣೇಶನ ಮೂರ್ತಿ ಜೊತೆಗೆ ಚಿರತೆಯ ಗೊಂಬೆಯನ್ನು ಇಟ್ಟು ಪೂಜೆ ಸಲ್ಲಿಸಲಾಗುತ್ತಿದೆ.

    ಕಳೆದೊಂದು ತಿಂಗಳ ಹಿಂದೆ ಜಾಧವ್ ನಗರದಲ್ಲಿ ಕಟ್ಟಡ ಕಾರ್ಮಿಕನ ಮೇಲೆ ದಾಳಿ ನಡೆಸಿ ಗಾಲ್ಫ್ ಮೈದಾನ ಸೇರಿದ ಚಿರತೆ ಹಿಡಿಯುವಲ್ಲಿ ಅರಣ್ಯ ಇಲಾಖೆ ಸಂಪೂರ್ಣ ವಿಫಲವಾಗಿದೆ. 4-5 ಬಾರಿ ಚಿರತೆ ಜನರ ಕಣ್ಮುಂದೆ ಬಂದರೂ ಮಿಂಚಿನಂತೆ ಮರೆಯಾಗುತ್ತಿದೆ. ಹೀಗಾಗಿ ಕಳೆದ ಹಲವು ದಿನಗಳಿಂದ ಜನರು ಚಿರತೆ ಕುರಿತಾಗಿ ಬಗೆಬಗೆಯ ಟ್ರೋಲ್‌ಗಳನ್ನು ಮಾಡಿ ವೈರಲ್ ಮಾಡುತ್ತಿದ್ದಾರೆ. ಇದನ್ನೂ ಓದಿ: ಚಿನ್ನ ಗೆದ್ದ ಸೈಕಿಯಾ ಈಗ ಅಸ್ಸಾಂನಲ್ಲಿ ಡಿಎಸ್‌ಪಿ ಆಫೀಸರ್‌

    ಇದೀಗ ವಿಶ್ವೇಶ್ವರಯ್ಯ ನಗರದ ನಿವಾಸಿಯೊಬ್ಬರು ಚಿರತೆ ಪೋಟೋ ಇಟ್ಟು ಪೂಜೆ ಮಾಡುತ್ತಿದ್ದಾರೆ. ಅದಲ್ಲದೇ ಗಣೇಶನ ದರ್ಶನಕ್ಕೆ ಕಾಡಿನಿಂದ ನಾಡಿಗೆ ಬಂದಿರುವ ಚಿರತೆಗೆ ಆಟವಾದರೆ, ಅರಣ್ಯ ಇಲಾಖೆ ಸಿಬ್ಬಂದಿಯ ಪರದಾಟ ಅಂತ ಪೋಸ್ಟರ್ ಬರೆದು ಅಂಟಿಸಲಾಗಿದೆ. ಇದರ ಜೊತೆಗೆ ಆಜಾದಿ ಕಾ ಅಮೃತ ಮಹೋತ್ಸವ, ಹರ್ ಘರ್ ತಿರಂಗಾ ಅಂತಲೂ ಬರೆಯಲಾಗಿದೆ.

    ಒಟ್ಟಾರೆ ಕಳೆದ 1 ತಿಂಗಳಿನಿಂದ ಅರಣ್ಯ ಇಲಾಖೆ ಅಧಿಕಾರಿಗಳು ಹಾಗೂ ಸಿಬ್ಬಂದಿ ಹಗಲು, ರಾತ್ರಿ ಎನ್ನದೇ ಹುಡುಕಾಡಿದರೂ ಮಿಂಚಿನಂತೆ ಮರೆಯಾಗುತ್ತಿರುವ ಚಿರತೆಗೆ ಗಣೇಶನ ದರ್ಶನವಾಗಿದೆ. ಇನ್ನಾದರೂ ಚಿರತೆ ನಾಡಿಗೆ ಹೋಗುತ್ತಾ ಅನೋದನ್ನು ನೋಡಬೇಕಿದೆ. ಇದನ್ನೂ ಓದಿ: ಸರ್ಕಾರದಿಂದ ಬಿಡುಗಡೆ ಆಗದ ಹಣ – ಇಂದಿರಾ ಕ್ಯಾಂಟೀನ್‍ಗೆ ಬೀಗ

    Live Tv
    [brid partner=56869869 player=32851 video=960834 autoplay=true]