ಬೆಂಗಳೂರು: ಗೌರಿ-ಗಣೇಶ ಹಬ್ಬ ಹಾಗೂ ಈದ್-ಮಿಲಾದ್ ಹಬ್ಬಕ್ಕೆ ಡಿಜೆ ನಿಷೇಧ ವಿಚಾರದಲ್ಲಿ ಪೊಲೀಸರ ನಿರ್ಧಾರಕ್ಕೆ ಹೈಕೋರ್ಟ್ ಅಸ್ತು ಅಂದಿದೆ.
ಮುಖ್ಯ ನ್ಯಾಯಮೂರ್ತಿ ವಿಭು ಬಖ್ರು ಮತ್ತು ನ್ಯಾಯಮೂರ್ತಿ ಸಿ.ಎಂ ಜೋಶಿ ಅವರ ವಿಭಾಗೀಯ ಪೀಠವು ಅರ್ಜಿ ವಿಚಾರಣೆ ನಡೆಸಿತು. ಅರ್ಜಿದಾರ ಶಂಕರ್ ಸಲ್ಲಿಸಿದ್ದ ಅರ್ಜಿಯನ್ನು ವಜಾಗೊಳಿಸಿ ಹೈಕೋರ್ಟ್ ಆದೇಶ ಹೊರಡಿಸಿದೆ.
ಡಿಜೆ ನಿಷೇಧ ಪ್ರಶ್ನಿಸಿ ಕರ್ನಾಟಕ ಲಘು ಸಂಗೀತ ಮತ್ತು ಸಾಂಸ್ಕೃತಿಕ ಕಲಾವಿದರ ಸಂಘದವರು ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್, ಮೆರವಣಿಗೆ ಮತ್ತು ಸಾರ್ವಜನಿಕ ಮಂಟಪಗಳಲ್ಲಿ ಡಿಜೆ ನಿಷೇಧದ ಪೊಲೀಸರ ನಿರ್ಧಾರಕ್ಕೆ ಸಮ್ಮತಿ ಸೂಚಿಸಿದೆ.
ಪೊಲೀಸರ ನಿರ್ಧಾರವನ್ನು ಪ್ರಶ್ನಿಸಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಕೆ ಮಾಡಲಾಗಿತ್ತು. ಕರ್ನಾಟಕ ಲಘು ಸಂಗೀತ ಮತ್ತು ಸಾಂಸ್ಕೃತಿಕ ಕಲಾವಿದರ ಸಂಘದ ಅಧಿಕಾರಿಯೊಬ್ಬರು ಅರ್ಜಿ ಸಲ್ಲಿಸಿದ್ದರು.
ಚಿಕ್ಕಬಳ್ಳಾಪುರ: ಗಣೇಶ ಪ್ರತಿಷ್ಠಾಪನೆ ಜಾಗದಲ್ಲಿ ಹಾಡುಗಳಿಗೆ ಡ್ಯಾನ್ಸ್ ಮಾಡಿಕೊಂಡು ಸಂಭ್ರಮದಲ್ಲಿ ತೇಲಾಡುತ್ತಿದ್ದ ಯುವಕನಿಗೆ ಸಹೋದರ ಹಾಗೂ ತಾಯಿ ಬುದ್ಧಿವಾದ ಹೇಳಿದ್ದಕ್ಕೆ ನೊಂದು ಯುವಕ (Youth) ಆತ್ಮಹತ್ಯೆಗೆ ಶರಣಾದ ಘಟನೆ ಚಿಕ್ಕಬಳ್ಳಾಪುರ (Chikkaballapura) ತಾಲೂಕಿನ ಚಿಕ್ಕಪ್ಯಾಯಲಗುರ್ಕಿ ಗ್ರಾಮದಲ್ಲಿ ನಡೆದಿದೆ.
ಗಿರೀಶ್ (21) ಆತ್ಮಹತ್ಯೆ ಮಾಡಿಕೊಂಡ ಯುವಕ. ಈತ ಗಣೇಶೋತ್ಸವದಲ್ಲಿ ಹಾಡು ಹಾಕಿ ಡ್ಯಾನ್ಸ್ ಮಾಡುತ್ತಿದ್ದು, ರಾತ್ರಿ 11 ಗಂಟೆಯಾದರೂ ಮನೆಗೆ ಬಂದಿರಲಿಲ್ಲ. ಇದರಿಂದ ಆತನ ಸಹೋದರ ಹಾಗೂ ತಾಯಿ ಬಂದು ಮನೆಗೆ ಬಾ ಎಂದು ಬೈದು ಬುದ್ಧಿವಾದ ಹೇಳಿದ್ದಾರೆ. ಈ ಮಾತುಗಳಿಂದ ನೊಂದ ಗಿರೀಶ್ ಗ್ರಾಮದ ಹೊರವಲಯದ ಮುತ್ತುರಾಯಸ್ವಾಮಿ ದೇವಾಲಯದ ಬಳಿ ಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾನೆ. ಇದನ್ನೂ ಓದಿ: ಇನ್‌ಸ್ಟಾದಲ್ಲಿ ತಲಾಕ್ ಕೊಟ್ಟಿದ್ದ ದುಬೈ ರಾಜಕುಮಾರಿಯಿಂದ `ಡಿವೋರ್ಸ್’ ಪರ್ಫ್ಯೂಮ್ ಬಿಡುಗಡೆ
ಹುಬ್ಬಳ್ಳಿ: ವಾಣಿಜ್ಯನಗರಿ ಹುಬ್ಬಳ್ಳಿಯ (Hubballi) ಕಲಾವಿದ ಮಹೇಶ ಮುರಗೋಡ ಹಾಗೂ ತಂಡದವರು ನಿರ್ಮಿಸಿದ 12 ಲಕ್ಷ ರೂ. ಮೌಲ್ಯದ ಅಮೆರಿಕನ್ ಡೈಮಂಡ್ ಹರಳುಗಳಿಂದ ನಿರ್ಮಿಸಿದ ಗಣಪತಿ ಮೂರ್ತಿ (Ganesha Idol) ಹುಬ್ಬಳ್ಳಿಯಿಂದ ಬೆಂಗಳೂರಿಗೆ (Bengaluru) ಪ್ರಯಾಣ ಬೆಳೆಸಿದೆ.
ಬೆಂಗಳೂರಿನ ರಾಜಾಜಿನಗರ 2ನೇ ಹಂತ ಮಿಲ್ಕ ಕಾಲೋನಿ 5ನೇ ಮುಖ್ಯ ರಸ್ತೆಯಲ್ಲಿ ಸ್ವಸ್ತಿಕ ಯುವಕರ ಸಂಘದಿಂದ ಸೆಪ್ಟೆಂಬರ್ 18 ರಂದು ಪ್ರತಿಷ್ಠಾಪನೆಗೊಳ್ಳಲಿರುವ ಗಣೇಶ ಮೂರ್ತಿ 5.7 ಅಡಿ ಎತ್ತರವಿದ್ದು, ಸುಮಾರು 150 ಕೆಜಿ ತೂಕ ಹೊಂದಿದೆ. ಮುಖವೊಂದನ್ನು ಬಿಟ್ಟು ಇನ್ನುಳಿದ ಎಲ್ಲ ಭಾಗವೂ ಸಹ ಅಮೆರಿಕನ್ ಡೈಮಂಡ್ ಹರಳು, ನವರತ್ನ ಹರಳುಗಳಿಂದ ಗಣೇಶ ಮೂರ್ತಿಯನ್ನು ನಿರ್ಮಿಸಲಾಗಿದೆ. ಇದನ್ನೂ ಓದಿ: ಗಣೇಶನ ಹಬ್ಬ ಸೆ.18ಕ್ಕಾ ಅಥವಾ 19ಕ್ಕಾ? ಇಲ್ಲಿದೆ ಕಂಪ್ಲೀಟ್ ಡೀಟೇಲ್ಸ್
ಕಳೆದ ಹಲವಾರು ವರ್ಷಗಳಿಂದ ಈ ಯುವಕರ ಸಂಘ ಅಮೆರಿಕನ್ ಡೈಮಂಡ್ ಹರಳುಗಳಿಂದ ಅಲಂಕೃತ ಗಣೇಶ ಮೂರ್ತಿಯನ್ನು ಹುಬ್ಬಳ್ಳಿಯಲ್ಲಿ ನಿರ್ಮಿಸಿಕೊಂಡು ರೈಲಿನ ಮೂಲಕ ಬೆಂಗಳೂರಿಗೆ ತೆಗೆದುಕೊಂಡು ಹೋಗಿ ಅಲ್ಲಿ ಪ್ರತಿಷ್ಠಾಪನೆ ಮಾಡಿ 7 ದಿನಗಳವರೆಗೆ ಅದ್ದೂರಿಯಾಗಿ ಗಣೇಶೋತ್ಸವ ಆಚರಣೆ ಮಾಡುತ್ತಾ ಬಂದಿದ್ದಾರೆ.
ನವದೆಹಲಿ: “ಚಾಮರಾಜಪೇಟೆ ಈದ್ಗಾ ಮೈದಾನದಲ್ಲಿ ಯಥಾ ಸ್ಥಿತಿ ಕಾಯ್ದುಕೊಳ್ಳಿ. ವಿವಾದ ಇತ್ಯರ್ಥಕ್ಕೆ ಮತ್ತೆ ಹೈಕೋರ್ಟ್‍ಗೆ ಹೋಗಿ” – ಇದು ಸುಪ್ರೀಂ ನೀಡಿದ ಆದೇಶದ ಸಾರ.
ಬೆಂಗಳೂರಿನ ಚಾಮರಾಜಪೇಟೆಯ ಈದ್ಗಾ ಮೈದಾನದಲ್ಲಿ ಗಣೇಶೋತ್ಸವಕ್ಕೆ ಅನುಮತಿಸಬೇಕಾ ಬೇಡ್ವಾ ಅನ್ನೋ ವಿಚಾರಕ್ಕೆ ಸುಪ್ರೀಂಕೋರ್ಟ್‍ನಲ್ಲಿ ನಡೆದ ವಿಚಾರಣೆ ಭಾರೀ ಕುತೂಹಲಕ್ಕೆ ಎಡೆಮಾಡಿಕೊಟ್ಟಿತ್ತು. ಕೊನೆಗೆ ಸುಪ್ರೀಂ ಕೋರ್ಟ್ ಈದ್ಗಾ ಮೈದಾನದಲ್ಲಿ ಯಥಾ ಸ್ಥಿತಿ ಕಾಯ್ದುಕೊಳ್ಳಿ ಎಂದು ಆದೇಶ ಪ್ರಕಟಿಸಿತು.
ಚಾಮರಾಜಪೇಟೆ ಮೈದಾನದ ಗಣೇಶೋತ್ಸವ ಆಚರಣೆ ಅನುಮತಿ ನೀಡುವುದು ಸರ್ಕಾರದ ವಿವೇಚನೆಗೆ ಬಿಟ್ಟ ವಿಚಾರ ಎಂದು ಹೈಕೋರ್ಟ್ ದ್ವಿಸದಸ್ಯ ಪೀಠ ನೀಡಿದ ಆದೇಶವನ್ನು ಪ್ರಶ್ನಿಸಿ ವಕ್ಫ್ ಬೋರ್ಡ್ ಸುಪ್ರೀಂ ಮೆಟ್ಟಿಲೇರಿತ್ತು.
ಮೊದಲು ಈ ಅರ್ಜಿಯ ವಿಚಾರಣೆ ನ್ಯಾ. ಹೇಮಂತ್ ಗುಪ್ತಾ ಮತ್ತು ನ್ಯಾ. ಸುಧಾಂಶು ಧುಲಿಯಾ ಅವರಿದ್ದ ದ್ವಿಸದಸ್ಯ ಪೀಠದಲ್ಲಿ ಮಧ್ಯಾಹ್ನ ಸುಮಾರು ಒಂದೂವರೆ ಗಂಟೆ ಕಾಲ ವಿಚಾರಣೆ ನಡೆಯಿತು. ಆದರೆ ಗಣೇಶೋತ್ಸವಕ್ಕೆ ಅನುಮತಿಸಬೇಕಾ ಬೇಡ್ವಾ ಎಂಬ ವಿಚಾರವಾಗಿ ನ್ಯಾಯಮೂರ್ತಿಗಳಲ್ಲೇ ಭಿನ್ನ ಅಭಿಪ್ರಾಯಗಳು ವ್ಯಕ್ತವಾದ ಕಾರಣ, ಪ್ರಕರಣ ವಿಚಾರಣೆಯನ್ನು ಮುಖ್ಯ ನ್ಯಾಯಾಧೀಶರ ಪೀಠಕ್ಕೆ ವರ್ಗಾವಣೆ ಮಾಡಿದರು. ಇದನ್ನೂ ಓದಿ: ಕುಡಿದ ಅಮಲಿನಲ್ಲಿ ಪತ್ನಿಯ ಮೇಲೆ ಹಲ್ಲೆ- ತಂದೆಯ ವಿರುದ್ಧ ಪೊಲೀಸ್ ಮೆಟ್ಟಿಲೇರಿದ 7ರ ಬಾಲಕ
ಮುಖ್ಯ ನ್ಯಾಯಮೂರ್ತಿ ಯುಯು ಲಲಿತ್, ಈ ಪ್ರಕರಣದ ವಿಚಾರಣೆಗೆ ನ್ಯಾಯಮೂರ್ತಿ ಇಂದಿರಾ ಬ್ಯಾನರ್ಜಿ, ಎಎಸ್ ಓಖಾ ಮತ್ತು ಎಂಎಂ ಸುಂದರೇಶ್ ಅವರನ್ನೊಳಗೊಂಡ ತ್ರಿಸದಸ್ಯ ಪೀಠವನ್ನು ರಚಿಸಿ, ತುರ್ತು ವಿಚಾರಣೆಗೆ ಸೂಚಿಸಿದ್ರು.
ಕೋರ್ಟ್ ಕಲಾಪ ಮುಗಿಯುವ ಹೊತ್ತಲ್ಲಿ ಸಂಜೆ 4.30ಕ್ಕೆ ಈ ಪೀಠ ವಿಚಾರಣೆ ನಡೆಸಿತು. ವಕ್ಫ್ ಬೋರ್ಡ್ ಪರವಾಗಿ ಹಿರಿಯ ವಕೀಲ ಕಪಿಲ್‍ಸಿಬಲ್, ದುಷ್ಯಂತ್ ದವೆ ಪ್ರಬಲ ವಾದ ಮಂಡಿಸಿದರು. ಸರ್ಕಾರದ ಪರವಾಗಿ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಮತ್ತು ಮುಕುಲ್ ರೊಹ್ಟಗಿ ವಾದ ಮಂಡಿಸಿದರು. ಸಂಜೆ 6:20ಕ್ಕೆ ಸುಪ್ರೀಂಕೋರ್ಟ್ ಯಥಾ ಸ್ಥಿತಿ ಕಾಯ್ದುಕೊಳ್ಳಲು ಸೂಚಿಸಿ ಆದೇಶ ನೀಡಿತು.
ವಕ್ಫ್ ಬೋರ್ಡ್ ವಾದ ಏನು?
ಚಾಮರಾಜಪೇಟೆಯ ಈದ್ಗಾ ಮೈದಾನ 200 ವರ್ಷಗಳಿಂದ ವಕ್ಪ್ ಆಸ್ತಿಯಾಗಿದೆ, ಇಲ್ಲಿ ವರ್ಷಕ್ಕೆ ಎರಡು ಬಾರಿ ಸಾಮೂಹಿಕವಾಗಿ ನಮಾಜು ಮಾಡಲಾಗುತ್ತದೆ. ಸರ್ಕಾರದ ಹಲವು ದಾಖಲೆಗಳ ಪ್ರಕಾರ ಇಲ್ಲೂ ಸ್ಮಶಾನವೂ ಇತ್ತು. ಇಲ್ಲಿ ಬೇರೆ ಧಾರ್ಮಿಕ ಆಚರಣೆಗಳನ್ನು ಮಾಡಲು ಸಾಧ್ಯವಿಲ್ಲ. ಹಿಂದೂ ಧಾರ್ಮಿಕ ಸ್ಥಳಗಳಲ್ಲಿ ಇತರೆ ಅಲ್ಪಸಂಖ್ಯಾತರ ಆಚರಣೆ ಮಾಡಲು ಸಾಧ್ಯವೇ? ಅದೇ ರೀತಿ ಈದ್ಗಾದಲ್ಲಿ ಗಣೇಶ ಚತುರ್ಥಿ ಸಾಧ್ಯವಿಲ್ಲ.
ರಾಜ್ಯ ಸರ್ಕಾರದ ವಾದ ಏನು?
ಈದ್ಗಾ ಮೈದಾನ ವಕ್ಪ್ ಬೋರ್ಡ್ ಆಸ್ತಿಯಲ್ಲ, ಇದು ರಾಜ್ಯ ಸರ್ಕಾರದ ಆಸ್ತಿ. ಕಂದಾಯ ಇಲಾಖೆ ದಾಖಲೆಗಳಲ್ಲಿ ಮಕ್ಕಳ ಆಟದ ಮೈದಾನ, ಸರ್ಕಾರಿ ಜಾಗ ಎಂದು ಉಲ್ಲೇಖವಾಗಿದೆ. ಸರ್ಕಾರದ ಆಸ್ತಿಯನ್ನು ಯಾರು ಮುಟ್ಟಲು ಸಾಧ್ಯವಿಲ್ಲ. ರಾಷ್ಟ್ರೀಯ ಹಬ್ಬಗಳನ್ನು ಆಚರಿಸಲು ಕೋರ್ಟ್ ಅವಕಾಶ ನೀಡಿದೆ ಎಂದರೇ ಅದು ಸರ್ಕಾರದ ಆಸ್ತಿ ಎಂದೇ ಅರ್ಥ. ಈ ಕಾರಣಕ್ಕೆ ಹೈಕೋರ್ಟ್ ಆದೇಶದಂತೆ ಎರಡು ದಿನದ ಮಟ್ಟಿಗೆ ಗಣೇಶ ಚತುರ್ಥಿಗೆ ಅವಕಾಶ ನೀಡಬೇಕು. ತಾತ್ಕಾಲಿಕ ವ್ಯವಸ್ಥೆಯಲ್ಲಿ ಹಬ್ಬ ಆಚರಿಸಲು ಅನುಮತಿ ನೀಡಬೇಕು.
ಸುಪ್ರೀಂ ಕೇಳಿದ ಪ್ರಶ್ನೆ ಏನು?
ವಿಚಾರಣೆ ಸಂದರ್ಭದಲ್ಲಿ ಮಧ್ಯಪ್ರವೇಶ ಮಾಡಿದ ಸುಪ್ರೀಂಕೋರ್ಟ್ ಹಿಂದೆ 200 ವರ್ಷ ಹಿಂದೆ ಗಣೇಶ ಚತುರ್ಥಿ ಅಲ್ಲದೇ ಬೇರೆ ಧಾರ್ಮಿಕ ಆಚರಣೆಗಳನ್ನು ಆಚರಿಸಲಾಗಿದ್ಯಾ ಎಂದು ಪ್ರಶ್ನೆ ಮಾಡಿತು. ಇದಕ್ಕೆ ʼಇಲ್ಲʼ ಎಂದು ಉತ್ತರ ಬಂದಾಗ, ಹಬ್ಬಕ್ಕೆ ತಯಾರಿ ಮಾಡಿಕೊಂಡಿದ್ಯಾ ಎಂದು ಮರು ಪ್ರಶ್ನೆ ಹಾಕಿತು. ಇದಕ್ಕೂ ʼಇಲ್ಲʼ ಎಂದು ಉತ್ತರ ಬಂತು. ಆಸ್ತಿಯ ಬಗ್ಗೆ ಗೊಂದಲಗಳಿದೆ. ಅಲ್ಲದೇ ಧಾರ್ಮಿಕ ಸೂಕ್ಷ್ಮ ವರ್ಷದ ವಿಚಾರವೂ ಆಗಿರುವ ಹಿನ್ನಲೆ ಯಥಾಸ್ಥಿತಿ ಕಾಯ್ದುಕೊಳ್ಳಬೇಕು ಎಂದು ಕೋರ್ಟ್ ಆದೇಶ ನೀಡಿತು. ಅಲ್ಲದೇ ಆಸ್ತಿ ಮಾಲಿಕತ್ವದ ಬಗ್ಗೆ ಹೈಕೋರ್ಟ್ ನಲ್ಲಿ ನಿರ್ಣಯ ಮಾಡಿಕೊಳ್ಳಲು ಸೂಚನೆ ನೀಡಿತು.
Live Tv
[brid partner=56869869 player=32851 video=960834 autoplay=true]
ಬೆಂಗಳೂರು: ಹುಬ್ಬಳ್ಳಿಯ ಈದ್ಗಾ ಮೈದಾನದಲ್ಲಿ ಗಣೇಶೋತ್ಸವ ಆಚರಿಸಲು ಹೈಕೋರ್ಟ್ ಗ್ರೀನ್ ಸಿಗ್ನಲ್ ನೀಡಿದೆ. ಗಣೇಶೋತ್ಸವಕ್ಕೆ ಅನುಮತಿ ನೀಡುವ ನಿರ್ಧಾರವನ್ನು ಆಯುಕ್ತರಿಗೆ ಹೈಕೋರ್ಟ್ ನೀಡಿದೆ.
ಹುಬ್ಬಳ್ಳಿ ಪಾಲಿಕೆ ಹಿಂದೂ ಸಂಘಟನೆಗಳ ಮನವಿಯನ್ನು ಪುರಸ್ಕರಿಸಿ 3 ದಿನಗಳ ಕಾಲ ಗಣೇಶೋತ್ಸವ ಆಚರಿಸಲು ಅನುಮತಿ ನೀಡಿತ್ತು.
ಗಣೇಶೋತ್ಸವ ಆಚರಣೆಗೆ ಅನುಮತಿ ನೀಡಿದ್ದನ್ನು ಪ್ರಶ್ನಿಸಿ ಹೈಕೋರ್ಟ್‍ಗೆ ಅಂಜುಮಾನ್ ಸಂಸ್ಥೆ ಅರ್ಜಿ ಸಲ್ಲಿಸಿತ್ತು. ನ್ಯಾ.ಅಶೋಕ್ ಕಿಣಗಿ ಪೀಠದಲ್ಲಿ ಇಂದು ಅರ್ಜಿ ವಿಚಾರಣೆ ನಡೆದು ಅಂತಿಮವಾಗಿ ಪೀಠ ಗಣೇಶೋತ್ಸವ ಆಚರಣೆಗೆ ಅನುಮತಿ ನೀಡುವ ನಿರ್ಧಾರವನ್ನು ಆಯುಕ್ತರಿಗೆ ನೀಡಿ ಆದೇಶ ಪ್ರಕಟಿಸಿತು.
ಈ ಸಂದರ್ಭದಲ್ಲಿ ಹೈಕೋರ್ಟ್, ಬೆಂಗಳೂರಿನ ಚಾಮರಾಜಪೇಟೆ ಮೈದಾನದಲ್ಲಿ ಗಣೇಶೋತ್ಸವ ಆಚರಣೆಗೆ ಅನುಮತಿ ನೀಡಿದ ಸಂಬಂಧ ಸಲ್ಲಿಕೆಯಾಗಿರುವ ಅರ್ಜಿ ವಿಚಾರಣೆ ಸುಪ್ರೀಂ ಕೋರ್ಟ್‌ನಲ್ಲಿ ನಡೆಯುತ್ತಿದೆ. ಈ ಪ್ರಕರಣಕ್ಕೆ ಸಂಬಂಧಿಸಿದ ಆದೇಶ ಪ್ರಕಟವಾದ ಬಳಿಕ ಅರ್ಜಿದಾರರು ಕೋರ್ಟ್‌ಗೆ ಬರಬಹುದು ಎಂದು ತಿಳಿಸಿತು.
Live Tv
[brid partner=56869869 player=32851 video=960834 autoplay=true]
ಬೆಂಗಳೂರು: ನಗರದಲ್ಲಿ ಆಚರಿಸುವ ಗಣೇಶೋತ್ಸವಗಳಿಗೆ ಬಿಬಿಎಂಪಿ ಗ್ರೀನ್ ಸಿಗ್ನಲ್ ನೀಡಿದೆ. ಆದರೆ 15 ದಿನಕ್ಕಿಂತ ಹೆಚ್ಚು ದಿನ ಗಣೇಶ ಕೂರಿಸುವಂತಿಲ್ಲ ಎಂಬ ಷರತ್ತನ್ನು ವಿಧಿಸಿದೆ.
15 ದಿನಕ್ಕಿಂತ ಹೆಚ್ಚು ದಿನ ಗಣೇಶ ಕೂರಿಸುವಂತಿಲ್ಲ. ಆಗಸ್ಟ್ 31 ರಿಂದ ಸೆಪ್ಟೆಂಬರ್ 15 ರವರೆಗೆ ಮಾತ್ರ ಗಣೇಶ ಇಡಲು ಅನುಮತಿಯನ್ನು ಬಿಬಿಎಂಪಿ ನೀಡಿದೆ. ಸಾರ್ವಜನಿಕ ಸ್ಥಳಗಳಲ್ಲಿ ಗಣೇಶ ಪ್ರತಿಷ್ಠಾಪನೆ ಮಾಡೋರಿಗೆ, ಅನುಮತಿಗಾಗಿ ಅಲೆಯುವ ವ್ಯವಸ್ಥೆ ತಪ್ಪಿಸಿದೆ. ಬೆಸ್ಕಾಂ, ಪೊಲೀಸ್, ಬಿಬಿಎಂಪಿ ಅಂತಾ ಪ್ರತ್ಯೇಕವಾಗಿ ಓಡಾಡೋದನ್ನು ತಪ್ಪಿಸಲು ಏಕಗವಾಕ್ಷಿ ವ್ಯವಸ್ಥೆ ಜಾರಿ ಮಾಡಿದೆ. ಆದರೆ ಚಾಮರಾಜಪೇಟೆಯ ಈದ್ಗಾ ಮೈದಾನದಲ್ಲಿ ಗಣೇಶೋತ್ಸವ ಆಚರಣೆಗೆ ಬಿಬಿಎಂಪಿ ಇನ್ನೂ ಅನುಮತಿ ನೀಡಿಲ್ಲ. ಆದರೇನಂತೆ, ಅನುಮತಿ ಸಿಕ್ಕೇ ಸಿಗುವ ವಿಶ್ವಾಸದಲ್ಲಿರುವ ಹಿಂದೂ ಸಂಘಟನೆಗಳು, ಈದ್ಗಾ ಮೈದಾನದಲ್ಲಿ 11 ದಿನ ಗಣೇಶೋತ್ಸವ ಆಚರಿಸ್ತೀವಿ ಎಂದು ಬ್ಯಾನರ್ ಕೂಡ ರೆಡಿ ಮಾಡಿಸಿವೆ. ಇದನ್ನೂ ಓದಿ: ಇಂದು 1,713 ಕೇಸ್ – ಈವರೆಗೆ ರಾಜ್ಯದಲ್ಲಿ ಒಟ್ಟು 40,40,111 ಪ್ರಕರಣ
ಧಾರವಾಡ: ಗಣೇಶೋತ್ಸವಕ್ಕೆ ರಾಜ್ಯ ಸರ್ಕಾರ ಅನುಮತಿ ಕೊಟ್ಟಿದ್ದಕ್ಕೆ ಸಮಾಧಾನ ಇದೆ. ಆದರೆ ಆನಂದ ಇಲ್ಲ ಎಂದು ಹಿಂದೂಪರ ಮುಖಂಡ ಪ್ರಮೋದ್ ಮುತಾಲಿಕ್ ಹೇಳಿದ್ದಾರೆ.
ಧಾರವಾಡದಲ್ಲಿ ಮಾತನಾಡಿದ ಅವರು, ಗಣೇಶ ಹಬ್ಬಕ್ಕೆ ನಾಲ್ಕು ದಿನ ಇರುವಾಗ ಅನುಮತಿ ನೀಡಿದ್ದನ್ನು ನೋಡಿ ನಗಬೇಕೊ ಅಳಬೇಕೊ ಗೊತ್ತಾಗ್ತಿಲ್ಲ. ವಾರ್ಡ್, ಗ್ರಾಮಕ್ಕೆ ಒಂದು ಗಣೇಶ ಅನ್ನೋ ನಿಯಮ ಸರಿಯಲ್ಲ. ನೀವು ಜನಾಶೀರ್ವಾದ ಯಾತ್ರೆಯಲ್ಲಿ ಏನು ಮಾಡಿದ್ರಿ ಅನ್ನೋದು ಜನಕ್ಕೆ ಗೊತ್ತಿದೆ. ಅವರು ಉಗೀತಾ ಇದ್ದಾರೆ ಎಂದು ವಾಗ್ದಾಳಿ ನಡೆಸಿದರು. ಇದನ್ನೂ ಓದಿ: ಷರತ್ತುಬದ್ಧ ನಿಯಮಗಳೊಂದಿಗೆ ಗಣೇಶೋತ್ಸವಕ್ಕೆ ಅನುಮತಿ
ನಮಗೆ ನೀವು ನಿಯಮ ಹೇಳ್ತೀರಾ? ನಮಗೇನು ನೀವು ಷರತ್ತು ಹಾಕುವ ಅಗತ್ಯವಿಲ್ಲ. ಕೊರೊನಾ ನಿಯಮಾನುಸಾರ ರಾತ್ರಿ 9ರ ನಂತರವೂ ಗಣೇಶೋತ್ಸವ ಆಚರಿಸ್ತೇವೆ ಎಂದು ಸರ್ಕಾರದ ಮಾರ್ಗಸೂಚಿಯ ವಿರುದ್ಧ ಕಿಡಿಕಾರಿದ್ದಾರೆ. ಇದನ್ನೂ ಓದಿ: ಗಣೇಶೋತ್ಸವಕ್ಕೆ 5 ದಿನ ಅವಕಾಶ ಕೊಟ್ಟ ಸರ್ಕಾರ
ಸರ್ಕಾರದ ಮಾರ್ಗಸೂಚಿ ಏನು?
ಸಾರ್ವಜನಿಕ ಗಣೇಶೋತ್ಸವಕ್ಕೆ ಸರ್ಕಾರ 5 ದಿನಗಳ ಷರತ್ತುಬದ್ಧ ಅನುಮತಿ ನೀಡಿದೆ. ರಾಜ್ಯದಲ್ಲಿ 5 ದಿನಗಳ ಕಾಲ ಗಣೇಶ ಪ್ರತಿಷ್ಠಾಪನೆಗೆ ಅವಕಾಶ ನೀಡುವ ಬಗ್ಗೆ ಸಿಎಂ ಬಸವರಾಜ ಬೊಮ್ಮಾಯಿ ನೇತೃತ್ವದ ಸಭೆಯಲ್ಲಿ ತೀರ್ಮಾನಿಸಲಾಗಿದೆ. ಗಣೇಶೋತ್ಸವ ಮೆರವಣಿಗೆ ಅವಕಾಶವಿಲ್ಲ. 30 ಜನರ ಮಿತಿ ನಿಗಧಿಪಡಿಸಿದ್ದು, ಅನುಮತಿ ಪಡೆದ ಸ್ಥಳಗಳಲ್ಲಿ ಮಾತ್ರ ಗಣೇಶ ಪ್ರತಿಷ್ಠಾಪನೆಗೆ ಅವಕಾಶ. ವಾರ್ಡ್‍ಗೆ ಒಂದು ಅಥವಾ ಗ್ರಾಮಕ್ಕೊಂದು ಗಣಪತಿ ಕೂರಿಸಲು ಅವಕಾಶ ನೀಡಿದೆ.
ಸರ್ಕಾರ ನಿಗದಿತ ಸ್ಥಳದಲ್ಲಿ ಭಕ್ತರು ಸೇರಲು ಅವಕಾಶ ನೀಡಿದೆ. ಗಣೇಶೋತ್ಸವದಲ್ಲಿ ಮನರಂಜನಾ ಕಾರ್ಯಕ್ರಮಗಳಾದ ಆರ್ಕೆಸ್ಟ್ರಾ, ಡಿಜೆ ಅದ್ಧೂರಿ ಮೆರವಣಿಗೆ ಅವಕಾಶ ನಿರಾಕರಿಸಲಾಗಿದ್ದು, ನಿಗದಿತ ಸಂಖ್ಯೆಯಲ್ಲಿ ಭಕ್ತರು ಸೇರಲು ಅವಕಾಶ ಕಲ್ಪಿಸಿದೆ. ಕೆರೆಗಳಲ್ಲಿ ಗಣೇಶ ವಿರ್ಸಜನೆಗೆ ನಿರ್ಬಂಧ ಹೇರಲಾಗಿದ್ದು, ಬಿಬಿಎಂಪಿ ಸೂಚಿಸಿದ ಸ್ಥಳದಲ್ಲೇ ವಿರ್ಸಜನೆ ಅವಕಾಶ ನೀಡಲಾಗಿದೆ. ಇದನ್ನೂ ಓದಿ: ಮತ್ತೆ ಒಂದಾದ ‘ಮುಂಗಾರು ಮಳೆ’ ಚಿತ್ರತಂಡ
ಗಣೇಶ ಪ್ರತಿಷ್ಠಾಪಿಸಿದ ಸ್ಥಳದಲ್ಲೆ ವಿಸರ್ಜನೆಗೆ ಅವಕಾಶ ಮಾಡಲಾಗಿದ್ದು, ಮೊಬೈಲ್ ಟ್ಯಾಂಕರ್ ನಲ್ಲಿ ವಿಸರ್ಜನೆಗೆ ಪ್ಲ್ಯಾನ್ ಮಾಡಲಾಗಿದೆ. ಇದರೊಂದಿಗೆ ಗಣೇಶೋತ್ಸವ ಮುಗಿಯುವವರೆಗೆ ರಾಜ್ಯದಲ್ಲಿ ನೈಟ್ ಕರ್ಫ್ಯೂ ಮುಂದುವರಿಸಲು ತೀರ್ಮಾನಿಸಲಾಗಿದೆ.
ಚೆಕ್ಕಬಳ್ಳಾಪುರ: ಸಾರ್ವಜನಿಕ ಗಣೇಶೋತ್ಸವ ಸಂಬಂಧ ಆದೇಶ ಮಾಡದೆ ಇರೋದು ಒಳ್ಳೆಯದು. ಕೋವಿಡ್-19 ನಿಯಂತ್ರಣ ಮಾಡೋದು ಸರ್ಕಾರದ ಜವಾಬ್ದಾರಿಯಾಗಿರುವುದರಿಂದಾಗಿ ಗಣೇಶೋತ್ಸವ ಸರಳವಾಗಿ ಆಚರಿಸಿ ಎಂದು ಆರೋಗ್ಯ ಹಾಗೂ ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಅಭಿಪ್ರಾಯಪಟ್ಟಿದ್ದಾರೆ.
ಚಿಕ್ಕಬಳ್ಳಾಪುರ ಜಿಲ್ಲಾಧಿಕಾರಿ ಕಚೇರಿಯಿಂದ ಸಿಎಂ ನೇತೃತ್ವದ ಸಭೆಗೆ ವೀಡಿಯೋ ಕಾನ್ಫರೆನ್ಸ್ ಮೂಲಕ ಭಾಗಿಯಾಗಿ ಮಾತನಾಡಿದ ಅವರು, ಗಣೇಶ ಚತುರ್ಥಿ ಹಾಗೂ ನಾಳೆಯಿಂದ 6ನೇ ತರಗತಿ ಶಾಲೆಯನ್ನು ಆರಂಭ ಹಿನ್ನೆಲೆ ಸಭೆ ಕರೆಯಲಾಗಿತ್ತು. ಸಾರ್ವಜನಿಕ ಗಣೇಶೋತ್ಸವ ಆಚರಣೆಯ ಜವಾಬ್ದಾರಿಯನ್ನು ಆಯಾ ಜಿಲ್ಲೆಯ ಹಾಗೂ ಬೆಂಗಳೂರಿನಲ್ಲಿ ಬಿಬಿಎಂಪಿ ಹಾಗೂ ಪೊಲೀಸರ ಹೊಣೆಗೆ ಹೊರಿಸಲಾಗಿದೆ. ಕೋವಿಡ್ ನಿಯಂತ್ರಣ ಮಾಡೋದು ಸರ್ಕಾರದ ಜವಾಬ್ದಾರಿಯಾಗಿದೆ. ಗಣೇಶೋತ್ಸವ ಸರಳವಾಗಿ ಆಚರಿಸಲು ತೀರ್ಮಾನಿಸಲಾಗಿದೆ ಎಂದರು. ಇದನ್ನೂ ಓದಿ: ಗಣೇಶೋತ್ಸವಕ್ಕೆ 5 ದಿನ ಅವಕಾಶ ಕೊಟ್ಟ ಸರ್ಕಾರ
ಗರಿಷ್ಠ 5 ದಿನಗಳು ಮಾತ್ರ ಗಣೇಶ ಉತ್ಸವ ಮಾಡಲು ಅನುಮತಿ ನೀಡಲಾಗಿದೆ. 4 ಅಡಿಗಿಂತಲೂ ಹೆಚ್ಚು ಎತ್ತರದ ಗಣೇಶ ಮೂರ್ತಿ ಸ್ಥಾಪಿಸಲು ಅನುಮತಿ ಇಲ್ಲ. ನಗರ ಪ್ರದೇಶದಲ್ಲಿ ವಾರ್ಡ್‍ಗೆ ಒಂದು ಗಣೇಶ ಮೂರ್ತಿ ಸ್ಥಾಪನೆಗೆ ಅವಕಾಶ ಕಲ್ಪಿಸಲಾಗಿದೆ. ಗ್ರಾಮಾಂತರ ಪ್ರದೇಶಗಳಲ್ಲಿ ಗಣೇಶ ಮೂರ್ತಿ ಸ್ಥಾಪನೆಗೆ ಇನ್ನೂ ಯಾವ ತೀರ್ಮಾನ ತೆಗೆದುಕೊಂಡಿಲ್ಲ. ಉತ್ಸವದಲ್ಲಿ ಸಾರ್ವಜನಿಕ ಮನರಂಜನೆಗೆ ಹಾಗೂ ಮೆರವಣಿಗೆಗೆ ಅವಕಾಶ ಇಲ್ಲ. ವಿಸರ್ಜನೆ ವೇಳೆ ಕನಿಷ್ಠ ಜನ ಸೇರಲು ಅವಕಾಶ ನೀಡಲಾಗಿದ್ದು, ಹೆಚ್ಚು ಜನ ಸೇರುವ ಹಾಗಿಲ್ಲ ಎಂದರು.
ಸರಳ ದಸರಾ ರೀತಿಯೇ ಸರಳ ಗಣೇಶೋತ್ಸವ ಆಚರಣೆಗೆ ತೀರ್ಮಾನ. ಮನರಂಜನೆ ಸಾಂಸ್ಕೃತಿಕ ಕಾರ್ಯಕ್ರಮಗಗಳಿಗೆ ಅನುಮತಿ ಇಲ್ಲ. ಅದಲ್ಲದೆ ಸಂಘಟಕರು ಹಾಗೂ ಸಮಿತಿಯವರಿಗೆ ಕೊರೊನಾ ವ್ಯಾಕ್ಸಿನ್ ಹಾಗೂ ಟೆಸ್ಟಿಂಗ್ ಕಡ್ಡಾಯ ಮಾಡಲಾಗಿದೆ. ಸಭೆಯಲ್ಲಿ ನರ್ಸಿಂಗ್ ಕಾಲೇಜುಗಳಲ್ಲಿ ಕೊರೊನಾ ಉಲ್ಬಣ ಬಗ್ಗೆ ಚರ್ಚೆ ಮಾಡಲಾಗಿದೆ ಎಂದರು. ಇದನ್ನೂ ಓದಿ: ಷರತ್ತುಬದ್ಧ ನಿಯಮಗಳೊಂದಿಗೆ ಗಣೇಶೋತ್ಸವಕ್ಕೆ ಅನುಮತಿ
ಉಡುಪಿ: ದೈವದ ಪಾತ್ರಿಯ ವೇಷ ಧರಿಸಿ ವ್ಯಕ್ತಿಯೊಬ್ಬ ಗಣೇಶೋತ್ಸವ ಮೆರವಣಿಗೆಯಲ್ಲಿ ಪಾಲ್ಗೊಂಡ ಘಟನೆ ವಿವಾದಕ್ಕೆ ಕಾರಣವಾಗಿದೆ. ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕು ಮುಂಡ್ಕೂರು ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಸಾರ್ವಜನಿಕ ಗಣೇಶೋತ್ಸವದಲ್ಲಿ ಈ ಘಟನೆ ನಡೆದಿದೆ.
ಗಣಪತಿ ಮೂರ್ತಿ ವಿಸರ್ಜನೆ ವೇಳೆ ವೈಭವದ ಶೋಭಾಯಾತ್ರೆ ನಡೆಯುತ್ತದೆ. ಮೆರವಣಿಗೆಯಲ್ಲಿ ಟ್ಯಾಬ್ಲೋ, ವಿವಿಧ ವೇಷಗಳಿರುತ್ತದೆ. ಈ ಮಧ್ಯೆ ಸ್ಥಳೀಯ ಸುಧಾಕರ್ ಎಂಬವರು ದೈವದ ಪಾತ್ರಿಯ ವೇಷ ಹಾಕಿದ್ದಾರೆ. ಆವೇಷ ಬಂದವರಂತೆ ನಟಿಸಿ, ದೈವದ ನುಡಿಕೊಡುವವರಂತೆ ಮಾತನಾಡಿ ಸ್ಥಳದಲ್ಲಿದ್ದವರನ್ನು ರಂಜಿಸಿದ್ದಾರೆ.
ಆ ವೀಡಿಯೋ ಎಲ್ಲಾ ಕಡೆ ಈಗ ಹರಿದಾಡುತ್ತಿದೆ. ಭೂತಾರಾಧನೆಯಲ್ಲಿ ದೈವಪಾತ್ರಿಗೆ ಮಹತ್ವದ ಸ್ಥಾನವಿದೆ. ಈ ರೀತಿ ಅಣಕ ಮಾಡಿರುವುದರಿಂದ ಹಿಂದೂ ಧಾರ್ಮಿಕತೆಗೆ ಧಕ್ಕೆ ಬರುತ್ತದೆ ಎಂದು ಭಕ್ತರಿಂದ ಆಕ್ರೋಶ ವ್ಯಕ್ತವಾಗಿದೆ. ಶ್ರೀರಾಮಸೇನೆ ಮತ್ತು ಹಿಂದೂ ಜಾಗರಣ ವೇದಿಕೆ ಪ್ರಮುಖರು ವೇಷಧಾರಿ ಸುಧಾಕರ್ ಗೆ ಕರೆಮಾಡಿ ತರಾಟೆಗೆ ತೆಗೆದುಕೊಂಡಿದ್ದಾರೆ. ದೈವಪಾತ್ರಿಯ ಪಾತ್ರಧಾರಿ ಸುಧಾಕರ್ ಕೊನೆಗೆ ಕ್ಷಮೆ ಕೇಳಿದ್ದಾರೆ.
ಮೆರವಣಿಗೆ, ಶೋಭಾಯಾತ್ರೆ, ಸಾಂಸ್ಕೃತಿಕ ಕಾರ್ಯಕ್ರಮಗಳ ಸಂದರ್ಭ ದೈವ, ದೇವರನ್ನು ವೇದಿಕೆಗೆ, ರಸ್ತೆಗೆ ತರಬಾರದೆಂದು ನಾಲ್ಕೈದು ವರ್ಷಗಳ ಹಿಂದೆ ಕರಾವಳಿಯಲ್ಲಿ ನಿರ್ಧಾರ ತೆಗೆದುಕೊಳ್ಳಲಾಗಿತ್ತು. ಇದೀಗ ಮತ್ತೆ ಹಳೇ ಚಾಳಿಯನ್ನು ಶುರುಮಾಡಿರುವುದು ಆಸ್ತಿಕರ ಆಕ್ರೋಶಕ್ಕೆ ಕಾರಣವಾಗಿದೆ. ಕೋಟ್ಯಂತರ ಜನರ ನಂಬಿಕೆಯನ್ನು ಅಣಕ ಮಾಡಬಾರದು ಎಂಬ ಕೂಗು ಕೇಳಿಬಂದಿದೆ.
ಮಂಗಳೂರಿನ ಬಜ್ಜೋಡಿ ನಿವಾಸಿ ಜೆರಾಲ್ಡ್ ಓಸ್ವಾಲ್ ಡಿಸೋಜ (45) ದುರಂತ ಸಾವು ಕಂಡ ಹಾಡುಗಾರ. ನಗರದ ಬಿಜೈನಲ್ಲಿ ಗಣೇಶೋತ್ಸವ ಕಾರ್ಯಕ್ರಮದ ನಿಮಿತ್ತ ಆಯೋಜಿಸಿದ್ದ ಆರ್ಕೆಸ್ಟ್ರಾ ವೇಳೆ ಘಟನೆ ನಡೆದಿದೆ.
ಜೆರ್ರಿ ಬಜ್ಜೋಡಿ ಎಂದೇ ಹೆಸರು ಪಡೆದಿದ್ದ ಜೆರಾಲ್ಡ್ ನಾಚ್ ಭಾಂಗಾರಾ ಎನ್ನುವ ಕೊಂಕಣಿ ಆಲ್ಬಂ ಸಾಂಗ್ ರಚಿಸಿದ್ದರು. ಹಾಡುತ್ತಿದ್ದಾಗಲೇ ಕುಸಿದು ದುರಂತ ಸಾವು ಕಂಡಿದ್ದು ಜೆರಾಲ್ಡ್ ಅಭಿಮಾನಿಗಳಲ್ಲಿ ಸೂತಕದ ಛಾಯೆ ಆವರಿಸಿದೆ.
ಜೆರಾಲ್ಡ್ ಓಸ್ವಾಲ್ ಡಿಸೋಜ ಅವರು ಅನಂತನಾಗ್ ಹಾಗೂ ಲಕ್ಷ್ಮಿ ಅಭಿನಯಿಸಿರುವ ಚಂದನದ ಗೊಂಬೆ ಸಿನಿಮಾದ ‘ಆಕಾಶದಿಂದ ಧರೆಗಿಳಿದ ರಂಬೆ’ ಹಾಡು ಹಾಡುತ್ತಿದ್ದರು. ಅಷ್ಟೇ ಅಲ್ಲದೆ ವೇದಿಕೆ ಮೇಲೆ ಹಾವಭಾವದೊಂದಿಗೆ ಪ್ರೇಕ್ಷಕರನ್ನು ರಂಜಿಸುತ್ತಿದ್ದರು. ಆದರೆ ಏಕಾಏಕಿ ವೇದಿಕೆ ಮೇಲೆ ಜೆರಾಲ್ಡ್ ಓಸ್ವಾಲ್ ಕುಸಿದು ಬಿದ್ದರು. ಇದನ್ನು ನೋಡಿದ ಕೆಲವರು ವೇದಿಕೆಯ ಕಡೆಗೆ ಹೋಗಿ, ತಕ್ಷಣವೇ ಆಸ್ಪತ್ರೆಗೆ ಸಾಗಿಸಿದ್ದಾರೆ. ಪರೀಕ್ಷೆ ನಡೆಸಿದ ವೈದ್ಯರು ಜೆರಾಲ್ಡ್ ಓಸ್ವಾಲ್ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆಂದು ತಿಳಿಸಿದ್ದಾರೆ.