Tag: Ganesha Immersion

  • ಬೈಪಾಸ್ ಗಣೇಶ ವಿಸರ್ಜನೆ ವೀಕ್ಷಿಸಲು ಹೊರಟವರ ಕಾರು ಅಪಘಾತ – ಇಬ್ಬರು ಸಾವು

    ಬೈಪಾಸ್ ಗಣೇಶ ವಿಸರ್ಜನೆ ವೀಕ್ಷಿಸಲು ಹೊರಟವರ ಕಾರು ಅಪಘಾತ – ಇಬ್ಬರು ಸಾವು

    ಚಿಕ್ಕಬಳ್ಳಾಪುರ: ಗೌರಿಬಿದನೂರಿನ (Gauribidanur) ಬೈಪಾಸ್ ಗಣೇಶ ವಿಸರ್ಜನೆ (Ganesha Immersion) ವೀಕ್ಷಿಸಲು ಹೊರಟ ಇಬ್ಬರು ಕಾರು ಅಪಘಾತದಲ್ಲಿ ಸಾವನ್ನಪ್ಪಿರುವ ದಾರುಣ ಘಟನೆ ಚಿಕ್ಕಬಳ್ಳಾಪುರ (Chikkaballapura) ಜಿಲ್ಲೆಯ ಗೌರಿಬಿದನೂರು ತಾಲೂಕಿನ ವಡ್ಡರಬಂಡೆ ಗ್ರಾಮದ ಸಮೀಪ ನಡೆದಿದೆ.

    ಚಿಕ್ಕಬಳ್ಳಾಪುರ ಗೌರಿಬಿದನೂರು ಮಾರ್ಗದ ವಡ್ಡರಬಂಡೆ ಬಳಿ ಚಾಲಕನ ನಿಯಂತ್ರಣ ತಪ್ಪಿ ಕಾರೊಂದು ರಸ್ತೆ ಬದಿ ನೀಲಗಿರಿ ಮರದೊಳಗೆ ತೂರಿಕೊಂಡಿದೆ. ಕಾರಿನಲ್ಲಿದ್ದ ಮಂಚೇನಹಳ್ಳಿ ವಾಸಿ ಗೆದರೆ ಪ್ರಾಥಮಿಕ ಆರೋಗ್ಯ ಕೇಂದ್ರದ ಎಫ್‌ಡಿಎ ಶಶಿ (42) ಹಾಗೂ ಮಂಚೇನಹಳ್ಳಿ ತಾಲೂಕಿನ ದಂಡಿಗಾನಹಳ್ಳಿಯ ಮೆಕ್ಯಾನಿಕ್ ಮುನಿರಾಜು (28) ಮೃತಪಟ್ಟಿದ್ದಾರೆ. ಇನ್ನೂ ಕಾರಿನಲ್ಲಿದ್ದ ಮಂಚೇನಹಳ್ಳಿಯ ಮುಕ್ಕಡಿಪೇಟೆಯ ರಮೇಶ್ (40) ತೀವ್ರವಾಗಿ ಗಾಯಗೊಂಡಿದ್ದು ಬೆಂಗಳೂರಿನ ಆಸ್ಪತ್ರೆಯೊಂದರಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇದನ್ನೂ ಓದಿ: ಎರಡು ದಿನಗಳ ವರ್ಣರಂಜಿತ ಗಗನಚುಕ್ಕಿ ಜಲಪಾತೋತ್ಸವಕ್ಕೆ ತೆರೆ

    ಮಂಚೇನಹಳ್ಳಿಯಿಂದ ಗೌರಿಬಿದನೂರಿನತ್ತ ಸಾಗುವಾಗ ವಡ್ಡರ ಬಂಡೆ ಬಳಿ ಕಾರು ನೀಲಗಿರಿ ಮರಕ್ಕೆ ಡಿಕ್ಕಿಯಾಗಿದೆ. ಮೃತ ಶಶಿ ಅವರ ಪತ್ನಿ ನಾಜಿಯಾ ಈ ಬಗ್ಗೆ ಮಂಚೇನಹಳ್ಳಿ ಪೊಲೀಸರಿಗೆ ದೂರು ನೀಡಿದ್ದಾರೆ. ಅಂದಹಾಗೆ ಇಂದು ಗೌರಿಬಿದನೂರು ಬೈಪಾಸ್ ಗಣೇಶನ ಗಂಗಾವೀಲೀನ ಕಾರ್ಯ ವಿಜೃಂಭಣೆಯಿಂದ ನೇರವೇರಿತ್ತು. ಇದನ್ನೂ ಓದಿ: ಟೀಂ ಇಂಡಿಯಾ ಬೌಲಿಂಗ್‌ ದಾಳಿಗೆ ಪತರುಗುಟ್ಟಿದ ಪಾಕ್‌ – ಸೂರ್ಯ ಪಡೆ ಗೆಲುವಿಗೆ ಬೇಕು 128 ರನ್‌

  • ಚಿತ್ರದುರ್ಗದಲ್ಲಿ ಹಿಂದೂ ಮಹಾಗಣಪತಿ ಶೋಭಾಯಾತ್ರೆ – ಜನಸಾಗರ, ಡಿಜೆ ಸದ್ದಿಗೆ ಯುವ ಸಮೂಹ ಭರ್ಜರಿ ಡ್ಯಾನ್ಸ್

    ಚಿತ್ರದುರ್ಗದಲ್ಲಿ ಹಿಂದೂ ಮಹಾಗಣಪತಿ ಶೋಭಾಯಾತ್ರೆ – ಜನಸಾಗರ, ಡಿಜೆ ಸದ್ದಿಗೆ ಯುವ ಸಮೂಹ ಭರ್ಜರಿ ಡ್ಯಾನ್ಸ್

    ಚಿತ್ರದುರ್ಗ: ಏಷ್ಯಾದಲ್ಲಿಯೇ ಎರಡನೇ ಅತಿದೊಡ್ಡ ಗಣೇಶನ ಶೋಭಾಯಾತ್ರೆ (Ganesha Procession) ಇಂದು ಚಿತ್ರದುರ್ಗದಲ್ಲಿ (Chitradurga) ನಡೆದಿದ್ದು, ಶೋಭಾಯಾತ್ರೆಗೆ ಜನಸಾಗರವೇ ಹರಿದುಬಂದಿದೆ. ರಾಜ್ಯದ ಮೂಲೆ ಮೂಲೆಗಳಿಂದ ಆಗಮಿಸಿದ್ದ ಲಕ್ಷಾಂತರ ಜನರು ಬೃಹತ್ ಶೋಭಾಯಾತ್ರೆಯಲ್ಲಿ ಪಾಲ್ಗೊಂಡು, ಡಿಜೆ ಸದ್ದಿಗೆ ಭರ್ಜರಿ ಸ್ಟೆಪ್ ಹಾಕಿ ಎಂಜಾಯ್ ಮಾಡಿದರು.

    ಇಂದು ಏಷ್ಯಾದಲ್ಲಿಯೇ ಅತಿ ಪ್ರಸಿದ್ಧಿಯಾದ ಹಿಂದೂ ಮಹಾಗಣಪತಿ (Hindu Mahaganapathi) ಬೃಹತ್ ಶೋಭಾಯಾತ್ರೆ ಅದ್ಧೂರಿಯಾಗಿ ಲಕ್ಷಾಂತರ ಜನರ ಸಮ್ಮುಖದಲ್ಲಿ ಜರುಗಿತು. ಬೆಳಗ್ಗೆ ವಿವಿಧ ಮಠಾಧೀಶರ ಸಮ್ಮುಖದಲ್ಲಿ ಶೋಭಾಯಾತ್ರೆಗೆ ವಿದ್ಯುಕ್ತ ಚಾಲನೆ ದೊರಕಿತು. ಬಳಿಕ ಶುರುವಾದ ಬೃಹತ್ ಶೋಭಾಯಾತ್ರೆಗೆ ರಾಜ್ಯದ ಮೂಲೆ ಮೂಲೆಗಳಿಂದ ಜನಸಾಗರವೇ ಹರಿದು ಬಂದಿತು. ಅದರಲ್ಲಂತೂ ಡಿಜೆ ಸದ್ದಿಗೆ ಹೆಜ್ಜೆ ಹಾಕಿದ ಯುವಕರು ರಸ್ತೆಯುದ್ದಕ್ಕೂ ಜೈ ಶ್ರೀರಾಮ್, ಜೈ ಭಜರಂಗಿ ಎಂದು ಘೋಷ ವಾಕ್ಯ ಕೂಗುವ ಮೂಲಕ ಭರ್ಜರಿ ಸ್ಟೆಪ್ ಹಾಕಿದರು. ಪ್ರತೀ ವರ್ಷದಂತೆಯೇ ಈ ವರ್ಷವೂ ಅದ್ಧೂರಿ ಶೋಭಾಯಾತ್ರೆ ನಡೆಯುತ್ತಿದ್ದು, ನೆಂಟರಿಷ್ಟರು ವಿವಿದೆಡೆಗಳಿಂದ ಆಗಮಿಸಿ ನಮ್ಮ ಜಿಲ್ಲೆಯಲ್ಲಿ ಐತಿಹಾಸಿಕ ಉತ್ಸವದಲ್ಲಿ ಭಾಗಿಯಾಗೋದು ನಮಗೆ ಹೆಮ್ಮೆ ಅಂತಾರೆ ಸ್ಥಳೀಯರು. ಇದನ್ನೂ ಓದಿ: ಭಕ್ತರಿಗೆ ಸಿಹಿಸುದ್ದಿ; ಮಾದಪ್ಪನ ದರ್ಶನಕ್ಕೆ ತಿರುಪತಿ ಮಾದರಿ ವ್ಯವಸ್ಥೆ

    ಇನ್ನು ಜೈನ ಧಾಮದ ಸಿಂಧೂರ ಮಟಂಪದ ಬಳಿಯಿಂದ ಹೊರಟ ಬೃಹತ್ ಮೆರವಣಿಗೆ ಮದಕರಿ ವೃತ್ತ, ಗಾಂಧಿ ಸರ್ಕಲ್, ಕನಕ ಸರ್ಕಲ್ ಸೇರಿದಂತೆ ನಗರದ ಪ್ರಮುಖ ರಸ್ತೆಗಳಲ್ಲಿ ಸಾಗಿತು. ಇನ್ನೂ ಸರಿ ಸುಮಾರು ನಾಲ್ಕು ಲಕ್ಷಕ್ಕೂ ಅಧಿಕ ಜನರು ಶೋಭಾಯಾತ್ರೆಯಲ್ಲಿ ಸೇರಿರುವ ದೃಶ್ಯ ಡ್ರೋನ್ ಕ್ಯಾಮೆರಾದಲ್ಲಿ ಸೆರೆಯಾಗಿದ್ದು ನೋಡಲು ಎರಡು ಕಣ್ಣು ಸಾಲದು. ಇದನ್ನೂ ಓದಿ: ಸ್ಥಳೀಯರೊಂದಿಗೆ ಚರ್ಚಿಸಿ ಆನೆ ವಿಹಾರಧಾಮ ಸ್ಥಾಪನೆ: ಈಶ್ವರ ಖಂಡ್ರೆ

    ಇನ್ನೂ ಶೋಭಾಯಾತ್ರೆ ಉದ್ಘಾಟನೆ ವೇಳೆ ಮಾತನಾಡಿದ ಮಾದಾರ ಚನ್ನಯ್ಯ ಶ್ರೀಗಳು, 3 ದಿನದಿಂದ ಉತ್ಸವಕ್ಕೆ ಏನೆಲ್ಲ ಅಡಚಣೆ ಆಯಿತು ನಿಮಗೂ ಗೊತ್ತಿದೆ. ಈ ಹಿಂದೂ ಮಹಾಗಣಪತಿಗೆ ಒಂದು ಶಕ್ತಿ ಇದೆ. ಏನೇ ಅಡಚಣೆ ಆದರೂ ಅದೆಲ್ಲವೂ ನಿವಾರಣೆ ಆಗಲಿದೆ ಈ ಮಾತಿಗೆ ಶೋಭಾಯಾತ್ರೆಗೆ ಸೇರಿದ ಲಕ್ಷಾಂತರ ಜನರೇ ಸಾಕ್ಷಿ. ಈ ಉತ್ಸವ ಮಧ್ಯ ಕರ್ನಾಟಕದ ಪ್ರಸಿದ್ದ ಉತ್ಸವ, ಈ ಉತ್ಸವಕ್ಕೆ ಅಧಿಕಾರಿಗಳು ಸಹಕರಿಸಲಿ ಎಂದರು. ಇದನ್ನೂ ಓದಿ: ಕುಟುಂಬ ರಾಜಕಾರಣದಲ್ಲಿ ದೇಶದಲ್ಲೇ ಕರ್ನಾಟಕಕ್ಕೆ ನಾಲ್ಕನೇ ಸ್ಥಾನ

    ಬಳಿಕ ಮಾತನಾಡಿದ ಶರಣ್ ಪಂಪ್‌ವೆಲ್, ಕಳೆದ 18 ವರ್ಷಗಳಿಂದ ಹಿಂದೂ ಗಣಪತಿ ಕಾರ್ಯಕ್ರಮ ನಡೆಯುತ್ತಿದೆ. ಈ ಕಾರ್ಯಕ್ರಮ ಅಚ್ಚುಕಟ್ಟಾಗಿ ಮಾಡುವ ಮೂಲಕ ದೇಶಕ್ಕೆ ಸಂದೇಶ ಸಾರಿದೆ. ನಾವೆಲ್ಲರೂ ಒಂದೂ ನಾವೆಲ್ಲರೂ ಹಿಂದೂ ಎನ್ನುವ ಸಂದೇಶ ನಮ್ಮದು ಎಂದರು. ಒಟ್ಟಾರೆ ಪ್ರತಿ ವರ್ಷಕ್ಕಿಂತ ಈ ವರ್ಷ ಶೋಭಾಯಾತ್ರೆಗೆ ವಿಶೇಷವಾಗಿ ತರಿಸಿದ್ದ ಆಕರ್ಷಕವಾದ ಡಿಜೆಗಳ ಸದ್ದಿಗೆ ಯುವಕ ಯುವತಿಯರು ಹೆಜ್ಜೆ ಹಾಕಿ ಕುಣಿದು ಕುಪ್ಪಳಿಸಿದರು. ಇದನ್ನೂ ಓದಿ: ಟ್ರಾಫಿಕ್‌ ಫೈನ್‌ 50% ಡಿಸ್ಕೌಂಟ್‌ಗೆ ವಾಹನ ಸವಾರರಿಂದ ಭರ್ಜರಿ ರೆಸ್ಪಾನ್ಸ್‌; ಬರೋಬ್ಬರಿ 106 ಕೋಟಿ ದಂಡ ಸಂಗ್ರಹ

  • ಗಣೇಶ ವಿಸರ್ಜನೆಯಂದು ರುಚಿಕರವಾದ ರವೆ ಒಬ್ಬಟ್ಟು ಮಾಡಿ

    ಗಣೇಶ ವಿಸರ್ಜನೆಯಂದು ರುಚಿಕರವಾದ ರವೆ ಒಬ್ಬಟ್ಟು ಮಾಡಿ

    ಇಂದು ಹಲವೆಡೆ ಗಣೇಶನ ವಿಸರ್ಜನೆ ಮಾಡುತ್ತಾರೆ. ಹೀಗಾಗಿ ಗಣೇಶನಿಗೆ ವಿಭಿನ್ನವಾದ ರವೆ ಒಬ್ಬಟ್ಟನ್ನು ಪ್ರಸಾದವಾಗಿ ಅರ್ಪಿಸಿ.

    ಸಾಮಾನ್ಯವಾಗಿ ಎಲ್ಲೆಡೆ ಗಣೇಶನಿಗೆ ನೈವೇದ್ಯವಾಗಿ ಒಬ್ಬಟ್ಟು, ಕಾಯಿ ಒಬ್ಬಟ್ಟನ್ನು ಮಾಡುತ್ತಾರೆ. ಆದರೆ ಇಂದು ವಿಭಿನ್ನವಾಗಿ ರವೆ ಒಬ್ಬಟ್ಟನ್ನು ಮಾಡಿ. ಹೂರಣದ ಒಬ್ಬಟ್ಟು ಮಾಡುವಂತೆಯೇ ರವೆ ಒಬ್ಬಟ್ಟು ಮಾಡುತ್ತಾರೆ. ಆದರೆ ಬಳಸುವ ಸಾಮಗ್ರಿಗಳು ಬೇರೆಯಷ್ಟೇ.

    ಬೇಕಾಗುವ ಸಾಮಗ್ರಿಗಳು:
    ರವೆ
    ಗೋಧಿ ಹಿಟ್ಟು
    ಎಣ್ಣೆ
    ಉಪ್ಪು
    ನೀರು
    ಸಕ್ಕರೆ
    ರವೆ
    ತುಪ್ಪ
    ಹಾಲು
    ಏಲಕ್ಕಿ ಪುಡಿ

    ಮಾಡುವ ವಿಧಾನ:
    ಮೊದಲಿಗೆ ಒಂದು ಪಾತ್ರೆಯಲ್ಲಿ ರವೆ, ಗೋಧಿ ಹಿಟ್ಟು ಮತ್ತು ಸ್ವಲ್ಪ ಉಪ್ಪು ಹಾಕಿ ಕಲಸಿಕೊಳ್ಳಿ. ಅದಕ್ಕೆ ನೀರು ಹಾಕಿ ಚಪಾತಿ ಹಿಟ್ಟಿನಂತೆ ಮೃದುವಾಗಿ ನಾದಿಕೊಳ್ಳಿ. ಕೊನೆಗೆ ಹಿಟ್ಟಿಗೆ ಎಣ್ಣೆ ಹಚ್ಚಿ, ಮೇಲೆ ಪಾತ್ರೆಯೊಂದನ್ನು ಮುಚ್ಚಿ ಕನಿಷ್ಠ 30 ನಿಮಿಷ ಬಿಡಿ.

    ಇನ್ನೊಂದು ಬಾಣಲೆಗೆ ಹಾಲು ಹಾಕಿ ಕುದಿಯಲು ಬಿಡಿ, ಸ್ವಲ್ಪ ಹೊತ್ತಿನ ನಂತರ, ಅದಕ್ಕೆ ರವೆ ಹಾಕಿ ಕಲಸಿ. ರವೆ ಚೆನ್ನಾಗಿ ಬೇಯ್ದ ಮೇಲೆ ಸಕ್ಕರೆ ಹಾಕಿ ಚೆನ್ನಾಗಿ ಮಿಶ್ರಣಮಾಡಿ. ಸಕ್ಕರೆ ಕರಗಿದ ನಂತರ ತುಪ್ಪ ಹಾಕಿ ಹುರಿದುಕೊಳ್ಳಿ. ಕೊನೆಯಲ್ಲಿ ಏಲಕ್ಕಿ ಪುಡಿ ಸೇರಿಸಿ ಚೆನ್ನಾಗಿ ಕಲಸಿ. ಮಿಶ್ರಣ ತಣ್ಣಗಾದ ನಂತರ ಚಿಕ್ಕ ಚಿಕ್ಕ ಉಂಡೆ ಮಾಡಿ ಇಟ್ಟುಕೊಳ್ಳಿ.

    ಒಬ್ಬಟ್ಟು ಮಾಡೋದು ಹೇಗೆ?
    ಚಪಾತಿ ಹಿಟ್ಟನ್ನು ಚಿಕ್ಕದ್ದಾಗಿ ಲಟ್ಟಿಸಿಕೊಂಡು ಅದರ ಮಧ್ಯಕ್ಕೆ ರವೆ ಹೂರಣವನ್ನು ಇಟ್ಟುಕೊಂಡು ಸುತ್ತಲೂ ಹಿಟ್ಟಿನಿಂದ ಕವರ್‌ ಮಾಡಿಕೊಳ್ಳಿ. ಅದನ್ನು ಎಣ್ಣೆ ಹಚ್ಚಿದ ಪ್ಲಾಸ್ಟಿಕ್ ಅಥವಾ ಹಾಳೆಯ ಮೇಲೆ ಚಪಾತಿ ರೀತಿಯಲ್ಲಿ ಚಿಕ್ಕದಾಗಿ ಮಾಡಿಕೊಳ್ಳಿ.

    ಕೊನೆಗೆ ಕಾದ ತವೆಯ ಮೇಲೆ ತುಪ್ಪ ಹಚ್ಚಿ, ಒಬ್ಬಟ್ಟನ್ನು ಬೇಯಿಸಿಕೊಳ್ಳಿ.

  • ಗಣೇಶ ಚತುರ್ಥಿಗೆ ಎರಡೇ ದಿನ ಬಾಕಿ – ಬಿಬಿಎಂಪಿಯಿಂದ 75 ಏಕಗವಾಕ್ಷಿ ಕೇಂದ್ರಗಳ ಸ್ಥಾಪನೆ

    ಗಣೇಶ ಚತುರ್ಥಿಗೆ ಎರಡೇ ದಿನ ಬಾಕಿ – ಬಿಬಿಎಂಪಿಯಿಂದ 75 ಏಕಗವಾಕ್ಷಿ ಕೇಂದ್ರಗಳ ಸ್ಥಾಪನೆ

    -489 ತಾತ್ಕಾಲಿಕ ಸಂಚಾರಿ ಕಲ್ಯಾಣಿ ವಾಹನಗಳ ವ್ಯವಸ್ಥೆ

    ಬೆಂಗಳೂರು: ಗಣೇಶ ಚತುರ್ಥಿ (Ganesh Chaturthi) ಹಿನ್ನೆಲೆ ಬಿಬಿಎಂಪಿ (BBMP) ಸಕಲ ಸಿದ್ಧತೆ ಮಾಡಿಕೊಂಡಿದ್ದು, ಗಣೇಶ ಮೂರ್ತಿ ಪ್ರತಿಷ್ಠಾಪನೆಗಾಗಿ ಅನುಮತಿ ಪಡೆಯಲು ಏಕಗವಾಕ್ಷಿ ಕೇಂದ್ರಗಳನ್ನು ಸ್ಥಾಪಿಸಿದೆ.

    ಗಣೇಶ ಚತುರ್ಥಿಗೆ ಇನ್ನೇನು ಎರಡೇ ದಿನ ಬಾಕಿಯಿದ್ದು, ಬಿಬಿಎಂಪಿ ವ್ಯಾಪ್ತಿಯಲ್ಲಿ 75 ಏಕಗವಾಕ್ಷಿ ಕೇಂದ್ರಗಳನ್ನು ಸ್ಥಾಪಿಸಿದೆ. ಗಣೇಶ ಮೂರ್ತಿಗಳ ವಿಸರ್ಜನೆಗಾಗಿ 41 ಕೆರೆ ಅಂಗಳದ ಶಾಶ್ವತ/ತಾತ್ಕಾಲಿಕ ಕಲ್ಯಾಣಿಗಳ ಸ್ಥಾಪನೆ ಮಾಡಲಾಗಿದ್ದು, ಜೊತೆಗೆ ಬೆಂಗಳೂರಿನಾದ್ಯಂತ 489 ತಾತ್ಕಾಲಿಕ ಸಂಚಾರಿ ಕಲ್ಯಾಣ ವಾಹನಗಳ ವ್ಯವಸ್ಥೆ ಮಾಡಲಾಗಿದೆ.ಇದನ್ನೂ ಓದಿ: ತವರೂರು ಲಕ್ನೋದಲ್ಲಿ ಶುಭಾಂಶು ಶುಕ್ಲಾಗೆ ಭರ್ಜರಿ ಸ್ವಾಗತ

    ಗಣೇಶ ವಿಸರ್ಜನೆಗೆ ಸಂಬಂಧಿಸಿದಂತೆ ಮೇಲ್ವಿಚಾರಣೆ ಹಾಗೂ ಹೆಚ್ಚಿನ ಮಾಹಿತಿಗಾಗಿ ಈಗಾಗಲೇ ನೋಡಲ್ ಅಧಿಕಾರಿಗಳ ನೇಮಕ ಮಾಡಿಕೊಳ್ಳಲಾಗಿದ್ದು, ಮತ್ತಷ್ಟು ವಿವರಗಳಿಗಾಗಿ ಕ್ಯೂಆರ್ ಕೋಡ್ ಸ್ಕ್ಯಾನ್ ಒದಗಿಸಲಿದೆ. ಅದಲ್ಲದೇ ಬಿಬಿಎಂಪಿ ವೆಬ್‌ಸೈಟ್‌ಗೆ ಭೇಟಿ ನೀಡುವ ಮೂಲಕವೂ ಮಾಹಿತಿ ಪಡೆದುಕೊಳ್ಳಬಹುದಾಗಿದೆ ಎಂದು ತಿಳಿಸಿದೆ.

    ಇನ್ನೂ ರಾಜರಾಜೇಶ್ವರಿ ನಗರ (Raja Rajeshwari Nagar) ವಲಯ ವ್ಯಾಪ್ತಿಯಲ್ಲಿ ಬರುವ ಹೇರೋಹಳ್ಳಿ ಕೆರೆಯ ಕಲ್ಯಾಣಿಯಲ್ಲಿ ಪ್ರತಿ ವರ್ಷವೂ ಗಣೇಶ ಮೂರ್ತಿಗಳ ವಿಸರ್ಜನೆಗೆ ವ್ಯವಸ್ಥೆ ಕಲ್ಪಿಸಲಾಗುತ್ತಿತ್ತು. ಆದರೆ ಈ ಬಾರಿ ತಾಂತ್ರಿಕ ಕಾರಣಗಳಿಂದ ಹೇರೋಹಳ್ಳಿ ಕೆರೆ ಕಲ್ಯಾಣಿಯಲ್ಲಿ ಗಣೇಶ ವಿಸರ್ಜನೆಯನ್ನು ಸ್ಥಗಿತಗೊಳಿಸಲಾಗಿದೆ.

    ಪ್ರತಿ ವರ್ಷದಂತೆ ಈ ವರ್ಷವೂ ಯಡಿಯೂರು ಕೆರೆಯಲ್ಲಿ (Yadiyuru Lake) ಗಣೇಶ ವಿಸರ್ಜನೆಗಾಗಿ ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದ್ದು, ಆ.27ರಿಂದ ಸೆ.17ರವರೆಗೆ ಸಾರ್ವಜನಿಕರು ಪರಿಸರ ಸ್ನೇಹಿ ಅಥವಾ ಮಣ್ಣಿನಿಂದ ಮಾಡಿರುವ ಗಣೇಶ ಮೂರ್ತಿಗಳನ್ನು ವಿಸರ್ಜನೆ ಮಾಡಲು ಅವಕಾಶ ನೀಡಿದೆ.ಇದನ್ನೂ ಓದಿ: ಒಡಿಶಾ | ಜಲಪಾತದಲ್ಲಿ ರೀಲ್ಸ್ ಮಾಡಲು ಹೋಗಿ ಕೊಚ್ಚಿಹೋದ ಯೂಟ್ಯೂಬರ್

  • ಗಣೇಶ ಮೆರವಣಿಗೆ ವೇಳೆ ಅಂಬುಲೆನ್ಸ್‌ಗೆ ದಾರಿ – ಒಂದೇ ಕ್ಷಣದಲ್ಲಿ ಚದುರಿದ ಸಾವಿರಾರು ಜನ

    ಗಣೇಶ ಮೆರವಣಿಗೆ ವೇಳೆ ಅಂಬುಲೆನ್ಸ್‌ಗೆ ದಾರಿ – ಒಂದೇ ಕ್ಷಣದಲ್ಲಿ ಚದುರಿದ ಸಾವಿರಾರು ಜನ

    ಮುಂಬೈ: ಮಹಾರಾಷ್ಟ್ರದ ಪುಣೆಯಲ್ಲಿ ಗಣೇಶ ವಿಸರ್ಜನೆಯ ಬೃಹತ್ ಮೆರವಣಿಗೆ ಸಂದರ್ಭದಲ್ಲಿ ಅಂಬುಲೆನ್ಸ್ ಗೆ ದಾರಿ ಮಾಡಿಕೊಡುವ ಮೂಲಕ ಭಕ್ತಾದಿಗಳು ಮಾದರಿಯಾಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಈ ವಿಡಿಯೋ ಭಾರೀ ವೈರಲ್ ಆಗುತ್ತಿದೆ. ಟ್ವಿಟ್ಟರ್ ನಲ್ಲಿಯೂ ಸಹ ಹಲವು ಗಣ್ಯರು ಈ ವಿಡಿಯೋ ಟ್ವೀಟ್ ಮಾಡಿ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.

    ಪುಣೆಯ ಲಕ್ಷ್ಮಿ ರಸ್ತೆಯಲ್ಲಿ ಈ ಘಟನೆ ನಡೆದಿದ್ದು, ಕಿಲೋಮೀಟರ್ ಗಟ್ಟಲೇ ಜನಸಾಗರ ತುಂಬಿದ್ದ ಮೆರವಣಿಗೆ ಮಧ್ಯೆ ಅಂಬುಲೆನ್ಸ್ ಗೆ ದಾರಿ ಮಾಡಿ ಕೊಡುವ ಮೂಲಕ ಭಕ್ತರು ಸಾಮಾಜಿಕ ಕಾಳಜಿ ಮೆರೆದಿದ್ದಾರೆ.

    ಕಿಲೋಮೀಟರ್ ಗಟ್ಟಲೇ ಸೇರಿದ್ದ ಜನಸಾಗರವನ್ನು ಕೆಲ ಭಕ್ತರು ಚದುರಿಸುವ ಮೂಲಕ ಅಂಬುಲೆನ್ಸ್ ಗೆ ದಾರಿ ಮಾಡಿಕೊಟ್ಟಿದ್ದಾರೆ. ಇದರಿಂದ ಅಂಬುಲೆನ್ಸ್ ಸರಾಗವಾಗಿ ಸಂಚರಿಸಿದ್ದು, ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

    ಮಾಹಾಷ್ಟ್ರದಲ್ಲಿ ಗಣೇಶ ಹಬ್ಬವನ್ನು ವಿಜೃಂಭಣೆಯಿಂದ ಆಚರಿಸಲಾಗುತ್ತದೆ. ಮೆರವಣಿಗೆ ಮೂಲಕ ಸಾಗಿ ಸಾವಿರಾರು ಗಣೇಶ ಮೂರ್ತಿಗಳನ್ನು ನದಿ, ಕೆರೆ, ಸಮುದ್ರದಲ್ಲಿ ವಿಸರ್ಜಿಸಲಾಗುತ್ತದೆ.

    ಮಹಾರಾಷ್ಟ್ರದಲ್ಲಿ ಗಣೇಶ ವಿಸರ್ಜನೆ ಸಂದರ್ಭದಲ್ಲಿ 18 ಜನ ಜನ ಮುಳುಗಿ ಸಾವನ್ನಪ್ಪಿದ್ದಾರೆ ಎಂದು ಪೊಲೀಸರು ಇಂದು ತಿಳಿಸಿದ್ದಾರೆ. ಪೊಲೀಸ್ ಸರ್ಪಗಾವಲಿನ ಮಧ್ಯೆಯೇ ಮಹಾರಾಷ್ಟ್ರದಲ್ಲಿ ಸಾವಿರಾರು ಗಣೇಶ ವಿಗ್ರಹಗಳನ್ನು ವಿಸರ್ಜನೆ ಮಾಡಲಾಗುತ್ತಿದೆ.

  • ನಗರದ ಹಲವು ಕೆರೆಗಳಲ್ಲಿ ಕಲ್ಯಾಣಿ ವ್ಯವಸ್ಥೆ -ಪಿಓಪಿ ಗಣೇಶ ಬಂದ್ರೆ ವಿಸರ್ಜನೆಗೆ ಅವಕಾಶ ಇಲ್ಲ

    ನಗರದ ಹಲವು ಕೆರೆಗಳಲ್ಲಿ ಕಲ್ಯಾಣಿ ವ್ಯವಸ್ಥೆ -ಪಿಓಪಿ ಗಣೇಶ ಬಂದ್ರೆ ವಿಸರ್ಜನೆಗೆ ಅವಕಾಶ ಇಲ್ಲ

    ಬೆಂಗಳೂರು: ರಾಜ್ಯಾದ್ಯಂತ ಗೌರಿ- ಗಣೇಶ ಹಬ್ಬದ ಸಂಭ್ರಮ ಮನೆ ಮಾಡಿದೆ. ಮಾರುಕಟ್ಟೆಗಳಲ್ಲಿ ಭಾನುವಾರ ಗಣಪತಿ ಮೂರ್ತಿ, ಹೂ-ಹಣ್ಣಿನ ಖರೀದಿ ಜೋರಾಗಿದ್ದು, ಇಂದು ಮುಂಜಾನೆಯಿಂದಲೇ ದೇವಾಲಯಗಳಲ್ಲಿ ವಿಶೇಷ ಪೂಜೆ ನಡೆಯುತ್ತಿದೆ.

    ಗಣೇಶ ಮೂರ್ತಿ ವಿಸರ್ಜನೆಗಾಗಿ ಬಿಬಿಎಂಪಿ ವತಿಯಿಂದ ನಗರದ ಹಲವು ಕೆರೆಗಳಲ್ಲಿ ಕಲ್ಯಾಣಿ ವ್ಯವಸ್ಥೆ ಮಾಡಲಾಗಿದೆ. ಸ್ಯಾಂಕಿ ಕೆರೆ, ಹಲಸೂರು ಕೆರೆ ಮತ್ತು ಯಡಿಯೂರು ಕೆರೆ ಸೇರಿದಂತೆ ಹಲವೆಡೆ ವ್ಯವಸ್ಥೆ ಮಾಡಲಾಗಿದೆ. 1 ಲಕ್ಷ ಗಣೇಶ ಮೂರ್ತಿ ವಿಸರ್ಜನೆಗೆ ಅವಕಾಶವಿದ್ದು, ದೊಡ್ಡ ಗಣಪತಿ ವಿಸರ್ಜನೆಗೆ ಕ್ರೇನ್ ಬಳಸಲು ಸೂಚಿಸಲಾಗಿದೆ. ಪಿಓಪಿ(ಪ್ಲಾಸ್ಟರ್ ಆಫ್ ಪ್ಯಾರೀಸ್) ಗಣೇಶ ಬಂದ್ರೂ ವಿಸರ್ಜನೆಗೆ ಅವಕಾಶ ಮಾತ್ರ ಇಲ್ಲ. ಎಲ್ಲಾ ಕಡೆ ಸಿಸಿಟಿವಿ ಅಳವಡಿಸಿದ್ದು, ಯಾವುದೇ ಅಹಿತಕರ ಘಟನೆ ನಡೆಯದಂತೆ ನಿಗಾ ವಹಿಸಲಾಗಿದೆ.

    ಇತ್ತ ವಿಘ್ನ ವಿನಾಶಕನ ಪೂಜೆಗಾಗಿ ಬೆಂಗಳೂರಿನ ಜನರು ಸಜ್ಜಾಗಿದ್ದಾರೆ. ಬೆಂಗಳೂರಿನ ಯಶವಂತಪುರ, ಮಲ್ಲೇಶ್ವರಂ ಮಾರುಕಟ್ಟೆಗಳಲ್ಲಿ ಜನ ಸೇರಿದ್ದು, ಹೂ ಹಾಗೂ ಹಣ್ಣುಗಳ ಖರೀದಿಯಲ್ಲಿ ಗ್ರಾಹಕರು ಬ್ಯುಸಿಯಾಗಿದ್ದರು. ಹಬ್ಬದ ಕಾರಣಕ್ಕೆ ಅಗತ್ಯವಸ್ತುಗಳ ದರವೂ ದುಪ್ಪಟ್ಟಾಗಿತ್ತು.

    ಮಲ್ಲಿಗೆ ಮಾರು ಹಿಂದಿನ ದರ 130ರೂ. ಇದ್ದು, ಈಗ 230 ರೂ. ಆಗಿದೆ. ಚೆಂಡೂ ಹೂ ಮಾರು 80ರೂ. ಇದ್ದು, ಈಗ 200 ರೂ. ಹೆಚ್ಚಾಗಿದೆ. ಗುಲಾಬಿ ಕೆಜಿಗೆ 120ರೂ. ಇತ್ತು. ಆದರೆ ಈಗ 200 ರೂ. ಆಗಿದೆ. ಎಕ್ಕದ ಹೂವಿನ ಹಾರ 20 ರೂ. ಹಾಗೂ ಗರಿಕೆ ಕಟ್ಟು 20 ರೂ. ಆಗಿದೆ. ಇತ್ತ ಹಣ್ಣುಗಳಲ್ಲಿ ಸೇಬು 180ರೂ. ಇತ್ತು. ಆದರೆ ಈಗ 200 ರೂ. ಆಗಿದೆ. ದಾಳಿಂಬೆ 120ರೂ. ಇದ್ದು, 180 ಆಗಿದೆ.

    ವರಮಹಾಲಕ್ಷ್ಮೀ ಹಬ್ಬದ ದರಕ್ಕಿಂತ ಗಣೇಶ ಹಬ್ಬದಲ್ಲಿ ಬೆಲೆ ಕಡಿಮೆ ಇದೆ ಎಂದು ವ್ಯಪಾರಿಗಳು ಹೇಳುತ್ತಿದ್ದಾರೆ.

  • ಗಣೇಶ ವಿಸರ್ಜನೆ ವೇಳೆ ಡಿಜೆ ಬಳಕೆ ನಿಷೇಧ- ಡಿಸಿ ವಿರುದ್ಧ ಸಂಸದ ಗರಂ

    ಗಣೇಶ ವಿಸರ್ಜನೆ ವೇಳೆ ಡಿಜೆ ಬಳಕೆ ನಿಷೇಧ- ಡಿಸಿ ವಿರುದ್ಧ ಸಂಸದ ಗರಂ

    ಕೊಪ್ಪಳ: ಜಿಲ್ಲೆಯಾದ್ಯಂತ ಗಣೇಶ ಉತ್ಸವ ಸೇರಿ ಇತರ ಕಾರ್ಯಕ್ರಮಗಳಲ್ಲೂ ಡಿಜೆ ಬಳಕೆ ನಿಷೇಧಿಸಿ ಜಿಲ್ಲಾಧಿಕಾರಿ ಆದೇಶ ಹೊರಡಿಸಿರುವುದು ಸಂಸದ ಸಂಗಣ್ಣ ಕರಡಿ ಆಕ್ರೋಶಕ್ಕೆ ಕಾರಣವಾಗಿದೆ.

    ಗಣೇಶ ವಿಸರ್ಜನೆ ಅಂದರೆ ಹಬ್ಬ, ಆಡಂಬರ ಮತ್ತು ಡಿಜೆ ಸೌಂಡ್‍ನೊಂದಿಗೆ ಕುಣಿತ ಸಾಮಾನ್ಯ. ಆದರೆ ಕೊಪ್ಪಳ ಜಿಲ್ಲೆಯಲ್ಲಿ ಕಳೆದ 2 ವರ್ಷದಿಂದ ಡಿಜೆ ನಿಷೇಧಿಸಿದ್ದರಿಂದ ಇಂಥ ಆಡಂಬರಕ್ಕೆ ಬ್ರೇಕ್ ಬಿದ್ದಿದೆ. ಜಿಲ್ಲಾಧಿಕಾರಿಗಳ ಈ ನಡೆಗೆ ಬಿಜೆಪಿಯಿಂದ ಆಯ್ಕೆಯಾಗಿರೋ ಜನಪ್ರತಿನಿಧಿಗಳು ಕೋಪಗೊಂಡಿದ್ದಾರೆ. ಈ ಕಾರಣಕ್ಕೆ ಸಂಸದ ಸಂಗಣ್ಣ ಕರಡಿ ಜಿಲ್ಲಾ ಉಸ್ತುವಾರಿ ಸಚಿವರ ಅಧ್ಯಕ್ಷತೆಯ ಪ್ರಗತಿ ಪರಿಶೀಲನೆ ಸಭೆಯಲ್ಲೇ ಡಿಸಿ ವಿರುದ್ಧ ಸಿಡಿಮಿಡಿಗೊಂಡರು.

    ಕಳೆದ ಮೂರು ವರ್ಷದ ಹಿಂದೆ ಕೊಪ್ಪಳ ಜಿಲ್ಲೆಯಲ್ಲಿ ಬನಾಯೆಂಗೇ ಮಂದಿರ ಎಂಬ ಹಾಡು ನಿಷೇಧಿಸಲಾಗಿತ್ತು. ಎರಡು ವರ್ಷದಿಂದ ಭಾರೀ ಧ್ವನಿಯ ಡಿಜೆ ಬಳಕೆಯನ್ನೇ ನಿಷೇಧಿಸಲಾಗಿದೆ. ಈ ಹಿಂದೆ ಗಂಗಾವತಿ ಶಾಸಕರಾಗಿದ್ದ ಇಕ್ಬಾಲ್ ಅನ್ಸಾರಿ ಅಧಿಕಾರಿಗಳ ಮೇಲೆ ಒತ್ತಡ ಹಾಕಿ ಡಿಜೆ ನಿಷೇಧ ಮಾಡಿದ್ದರು. ಶಾಸಕರ ಈ ಕ್ರಮದ ಕುರಿತು ಚುನಾವಣೆಯಲ್ಲೂ ಚರ್ಚೆಯಾಗಿ ಬಿಜೆಪಿಯ ಕೆಲ ಮುಖಂಡರು, ಗಂಗಾವತಿಯಲ್ಲಿ ಗಣೇಶ ಚತುರ್ಥಿ ವೇಳೆ ಡಿಜೆ ಬಳಕೆ ಮಾಡಬೇಕು ಅಂದ್ರೆ ಬಿಜೆಪಿಗೆ ವೋಟ್ ಮಾಡಿ ಅಂತಾ ಪ್ರಚಾರ ಮಾಡಿದ್ದರು. ಆದರೆ ಗಂಗಾವತಿಯಲ್ಲಿ ಇಕ್ಬಾಲ್ ಅನ್ಸಾರಿ ಸೋಲುಂಡಿದ್ದರೂ ಕಾಂಗ್ರೆಸ್ ಮೈತ್ರಿ ಸರ್ಕಾರ ರಚನೆಯಾಗಿದೆ. ಅನ್ಸಾರಿ ಈ ಬಾರಿಯೂ ಒತ್ತಡ ಹಾಕಿ ಡಿಜೆ ಬ್ಯಾನ್ ಮಾಡಿರೋದು ಬಿಜೆಪಿಗರ ಸಿಟ್ಟಿಗೆ ಕಾರಣವಾಗಿದೆ.

    ಗಣೇಶ ಚತುರ್ಥಿ ಹಿನ್ನೆಲೆಯಲ್ಲಿಯೇ ಕೊಪ್ಪಳದಲ್ಲಿ ಡಿಜೆಗೆ ನಿಷೇಧ ಹೇರಿರುವುದು ವ್ಯಾಪಕ ಚರ್ಚೆಗೆ ಗ್ರಾಸವಾಗಿದೆ. ಹಂಪಿ ಉತ್ಸವ, ಇಟಗಿ ಉತ್ಸವದಲ್ಲಿ ಡಿಜೆಯನ್ನು ಬಳಸುತ್ತಾರೆ. ಆಗ ಆಗದ ತೊಂದರೆ ಗಣೇಶ ಹಬ್ಬದಲ್ಲಿ ತೊಂದರೆಯಾಗುತ್ತಾ ಎಂಬುದು ಗಣೇಶ ಸ್ಥಾಪನಾ ಮಂಡಳಿ ಯುವಕರ ಪ್ರಶ್ನೆಯಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಗಣೇಶ ವಿಸರ್ಜನೆ ವೇಳೆ ಯುವತಿಯರಿಂದ ನಾಗಿಣಿ ಸ್ಟೆಪ್ಸ್: ವಿಡಿಯೋ ನೋಡಿ

    ಗಣೇಶ ವಿಸರ್ಜನೆ ವೇಳೆ ಯುವತಿಯರಿಂದ ನಾಗಿಣಿ ಸ್ಟೆಪ್ಸ್: ವಿಡಿಯೋ ನೋಡಿ

    ಕೋಲಾರ: ಜಿಲ್ಲೆಯಲ್ಲಿ ಗಣೇಶ ವಿಸರ್ಜನೆ ವೇಳೆ ಯುವತಿಯರು ನಾಗಿಣಿ ಸ್ಟೆಪ್ಸ್ ಹಾಕಿ ಕುಣಿದು ಕುಪ್ಪಳಿಸಿ ನೋಡುಗರನ್ನು ಆಶ್ಚರ್ಯ ಉಂಟು ಮಾಡಿದ್ದಾರೆ.

    ಯುವಕರಿಗೆ ಉತ್ಸಾಹದ ಹಬ್ಬ ಗಣೇಶ ಹಬ್ಬ, ಸಾಮಾನ್ಯವಾಗಿ ಪೂಜೆ ಮಾಡಿ ಒಳ್ಳೆದು ಮಾಡಪ್ಪ ಅಂತ ಹೆಣ್ಣು ಮಕ್ಕಳು ಬೇಡಿಕೊಳ್ಳುತ್ತಾರೆ. ಆದರೆ ಇಂತಹ ಹೆಣ್ಣು ಮಕ್ಕಳ ಮಧ್ಯೆ ನಾವು ವಿಭಿನ್ನ ಎಂದು ಕೋಲಾರದ ಕಠಾರಿ ಪಾಳ್ಯ ಯುವತಿಯರು ನಗರದ ಪ್ರಮುಖ ಬೀದಿಗಳಲ್ಲಿ ನಾಗಿಣಿ ಡಾನ್ಸ್ ಮಾಡಿ ಗಮನ ಸೆಳೆದಿದ್ದಾರೆ.

    ಗಣೇಶ ವಿಸರ್ಜನೆ ವೇಳೆ ಡಿಜೆ ಸೌಂಡ್‍ಗೆ ಸಖತ್ ನಾಗಿಣಿ ಸ್ಟೆಪ್ಸ್ ಹಾಕಿ, ಕಿಕ್ ಕೋಡೊ ಸ್ಟಂಟ್‍ಗಳ ಮೂಲಕ ಗಣೇಶ ವಿಸರ್ಜನೆ ಮಾಡಿ ನಗರದ ಜನರನ್ನು ಅಚ್ಚರಿಗೊಳಿಸಿದ್ದರು. ಕೋಲಾರ ನಗರದ ಕಠಾರಿ ಪಾಳ್ಯ ಯುವತಿಯರು ನಾಗಿಣಿ ಹಾಡಿಗೆ ಹುಚ್ಚೆದ್ದು ಕುಣಯುವ ಮೂಲಕ ಯುವಕರಿಗೆ ಸವಾಲ್ ಎಸೆದ್ದರು. ಹೆಣ್ಣು ಮಕ್ಕಳು ನಗರದ ಪ್ರಮುಖ ರಸ್ತೆಗಳಲ್ಲಿ ನಾಗಿಣಿ ಸಾಂಗ್ ಸೇರಿದಂತೆ ಹಲವು ಸಾಂಗ್‍ಗಳಿಗೆ ಸ್ಟೆಪ್ಸ್ ಹಾಕಿ ಎಲ್ಲರೂ ಬೆರಗಾಗಿ ನೋಡುವಂತೆ ಕುಣಿದ್ದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv