Tag: Ganesha idol

  • ತುಮಕೂರಿನಲ್ಲಿ ಗಣೇಶ ಮೂರ್ತಿ ಪ್ರತಿಷ್ಠಾಪನೆಗೆ 33 ಷರತ್ತುಗಳು

    ತುಮಕೂರಿನಲ್ಲಿ ಗಣೇಶ ಮೂರ್ತಿ ಪ್ರತಿಷ್ಠಾಪನೆಗೆ 33 ಷರತ್ತುಗಳು

    ತುಮಕೂರು: ಗೌರಿ-ಗಣೇಶ ಮೂರ್ತಿ (Ganesha Idol) ಪ್ರತಿಷ್ಠಾಪನೆ ಹಾಗೂ ವಿಸರ್ಜನಾ ಸಮಯದಲ್ಲಿ ಆಯೋಜಕರು ಜಿಲ್ಲಾಧಿಕಾರಿಗಳ (Tumkur DC) ಆದೇಶದಂತೆ ಪ್ರಸಾದ ವಿತರಿಸಲು ಕಡ್ಡಾಯವಾಗಿ ಸಮಿತಿಯಿಂದ ಅನುಮತಿ ಪಡೆದುಕೊಳ್ಳಬೇಕು ಎಂದು ತಿಪಟೂರು ತಾಲೂಕು ದಂಡಾಧಿಕಾರಿ ಪವನ್‌ಕುಮಾ‌ರ್ ತಿಳಿಸಿದ್ದಾರೆ.

    ತಾಲ್ಲೂಕು ಆಡಳಿತ ಸೌಧದಲ್ಲಿ ಗೌರಿ-ಗಣೇಶ ಮೂರ್ತಿ (Gowri Ganesha Idol) ಪ್ರತಿಷ್ಠಾಪನೆಗೆ ಸಂಬಧಿಸಿದಂತೆ ತಹಶೀಲ್ದಾರ್ ಅಧ್ಯಕ್ಷತೆಯಲ್ಲಿ ಸಭೆ ನೆಡಸಿ ವಿವಿಧ ಇಲಾಖೆಗಳ ವತಿಯಿಂದ ಅನುಮತಿ ಪಡೆಯುವುದು ಕಡ್ಡಾಯವಾಗಿದೆ. ನಗರ ವ್ಯಾಪ್ತಿಯಲ್ಲಿ ನಗರಸಭೆ ಹಾಗೂ ಗ್ರಾಮಾಂತರ ಪ್ರದೇಶಗಳಲ್ಲಿ ಆಯಾ-ಆಯಾ ಗ್ರಾಮ ಪಂಚಾಯಿತಿಗಳಲ್ಲಿ ಏಕ ಗವಾಕ್ಷಿ ತಂತ್ರಾಶಗಳ ಮೂಲಕ ಅನುಮತಿ ಪಡೆಯಬೇಕು ಎಂದು ದಂಡಾಧಿಕಾರಿಗಳು ತಿಳಿಸಿದ್ದಾರೆ. ಇದನ್ನೂ ಓದಿ: ಪುಂಡರಿಂದ ವ್ಹೀಲಿಂಗ್‌ ಹುಚ್ಚಾಟ; ಬೈಕ್‌ಗಳನ್ನು ಕಿತ್ತುಕೊಂಡು ಫ್ಲೈಓವರ್‌ನಿಂದ ಎಸೆದ ಸಾರ್ವಜನಿಕರು

    ಏನು ಆ 33 ಷರತ್ತುಗಳು?
    ಸಾರ್ವಜನಿಕರು ಹಾಗೂ ಸಂಘ ಸಂಸ್ಥೆಗಳು ಗಣೇಶ ಮೂರ್ತಿ ಪ್ರತಿಷ್ಟಾಪನೆ ಸಂದರ್ಭದಲ್ಲಿ ವಾಹನ ಮತ್ತು ಸಾರ್ವಜನಿಕರ ಓಡಾಟಕ್ಕೆ ತೊಂದರೆ ಆಗದಂತೆ ಗಣೇಶ ಮಂಟಪದಲ್ಲಿ ನಿರ್ಮಿಸಬೇಕು. ಮಂಟಪದ ಹತ್ತಿರ ನೀರು, ಮರಳು ಸಂಗ್ರಹಿಸಬೇಕು. ಗಣೇಶ ಮಂಟಪದ ಹತ್ತಿರ ಬೆಳಕಿನ ವ್ಯವಸ್ಥೆ ಆಯೋಜನೆ, ಫ್ಲೆಕ್ಸ್‌ ಮತ್ತು ಬ್ಯಾನರ್‌ಗಳನ್ನು ವಿದ್ಯುತ್ ಕಂಬ, ದೂರವಾಣಿ ಕಂಬಗಳಿಗೆ ಆಳವಡಿಸದಂತೆ ಎಚ್ಚರಿಕೆ ವಹಿಸಬೇಕು. ಜನಸಂದಣಿ ನಿಯಂತ್ರಿಸಲು ಮಹಿಳೆಯರಿಗೆ ಮತ್ತು ಪುರುಷರಿಗೆ ಪ್ರತ್ಯೇಕ ಸಾಲುಗಳಿರಬೇಕು. ಕಡ್ಡಾಯವಾಗಿ ಸಿಸಿಟಿವಿ ಅಳವಡಿಸಬೇಕು. ಧ್ವನಿವರ್ಧಕಗಳನ್ನು ಬೆಳಗ್ಗೆ 6 ಗಂಟೆಯಿಂದ ರಾತ್ರಿ 10 ಗಂಟೆವರೆಗೆ ಮಾತ್ರ ಉಪಯೋಗಿಸಬೇಕು.

    ಡಿಜೆ ಹಾಗೂ ಪ್ರಚೋದನಕಾರಿ ಭಾಷಣಗಳಿಗೆ ಅವಕಾಶ ಇರುವುದಿಲ್ಲ, ಮಂಟಪಗಳ ಹತ್ತಿರ ಆಕ್ರಮ ಮಧ್ಯ ಸೇವನೆ ಮಾಡುವುದನ್ನು ಕಡ್ಡಾಯವಾಗಿ ನಿಯಂತ್ರಿಸಲಾಗಿದೆ. ಗಣಪತಿ ಮಂಟಪದ ಹತ್ತಿರ ಪ್ರಥಮ ಚಿಕಿತ್ಸಾ ಪಟ್ಟಿಗೆ ಇಡುವುದು, ಪಿಒಪಿ ಮತ್ತು ಬಣ್ಣಲೇಪಿತ ಗಣೇಶಗಳನ್ನು ಹೊರತುಪಡಿಸಿ ಮಣ್ಣಿನಿಂದ ಮಾಡಿರುವ ಗಣಪತಿಯನ್ನು ಸ್ಥಾಪನೆಗೆ ಅವಕಾಶ ಮಾಡಿಕೊಡುವುದು. ಇದನ್ನೂ ಓದಿ: ಕಂಠಪೂರ್ತಿ ಕುಡಿದು ಕಿರಿಕ್ – ಊಟ ನೀಡದ್ದಕ್ಕೆ ಡಾಬಾ ಮಾಲೀಕನಿಗೆ ಚಾಕು ಇರಿತ

    ನಗರ ಸಭೆಯಿಂದ ಸೂಚಿಸಿರುವ ಕೆರೆಯ ಆವರಣದ ಕಲ್ಯಾಣಿಯಲ್ಲಿ ಗಣಪತಿ ವಿಸರ್ಜನೆ ಮಾಡಬೇಕು ಹಾಗೂ ಪಂಚಾಯಿತಿಯ ಪಿಡಿಒ ತಿಳಿಸಿರುವಂತೆ ಗಣಪತಿಗಳನ್ನು ಗ್ರಾಮಾಂತರ ಪ್ರದೇಶಗಳಲ್ಲಿ ವಿಸರ್ಜನೆ ಮಾಡಲು ಅವಕಾಶ ಮಾಡಬೇಕು. ಪ್ರಸಾದ ವಿನಿಯೋಗ ಸಮಯದಲ್ಲಿ ಎಚ್ಚರಿಕೆ ವಹಿಸಬೇಕು ಮತ್ತು ಇಲಾಖೆ ವತಿಯಿಂದ ಅನುಮತಿ ಪಡೆದುಕೊಳ್ಳಬೇಕು. ಕಳೆದ ಸಾಲಿನಲ್ಲಿ 133 ಗಣೇಶ ಮೂರ್ತಿಗಳ ಪ್ರತಿಷ್ಠಾಪನೆಗೆ ಅನುಮತಿ ನೀಡಲಾಗಿದೆ.

    ಸಭೆಯಲ್ಲಿ ನಗರಸಭೆ ಪೌರಯುಕ್ತ ವಿಶ್ವೇಶ್ವರಯ್ಯ ಬದರಗಡೆ, ತಾಪಂ ಇಒ ಸುದರ್ಶನ್, ನಗರ ಆರಕ್ಷಕ ಅಧಿಕಾರಿ ವೆಂಕಟೇಶ್, ಬೆಸ್ಕಾಂ ಎಇಇ ಮನೋಹರ್, ತೋಟಗಾರಿಕೆ ಅಧಿಕಾರಿ ಚಂದ್ರಶೇಖರ್, ಆರ್‌ಟಿಒ ಅಧಿಕಾರಿ ಭಗವಂತ್ ದಾಸ್, ತಾಲೂಕು ಆರೋಗ್ಯ ಅಧಿಕಾರಿ ಕೃಷ್ಣಮೂರ್ತಿ, ಅಗ್ನಿಶಾಮಕ ದಳದ ಭರತ್ ಹಾಜರಿದ್ದರು. ಇದನ್ನೂ ಓದಿ: ಜಲ ಜೀವನ್ ಮಿಷನ್‌ ಯೋಜನೆಯಲ್ಲೂ ಅಕ್ರಮ ಆರೋಪ – 116 ಟೆಂಡ‌ರ್ ಹಣ ಮುಟ್ಟುಗೋಲು

  • ಕೋಟಿ ಖರ್ಚು ಮಾಡಿ ಅಯೋಧ್ಯೆ ಶೈಲಿಯ ರಾಮಮಂದಿರ ನಿರ್ಮಾಣ – ವಿಘ್ನೇಶ್ವರನಿಗೂ ವಿಶೇಷ ಮಂಟಪ

    ಕೋಟಿ ಖರ್ಚು ಮಾಡಿ ಅಯೋಧ್ಯೆ ಶೈಲಿಯ ರಾಮಮಂದಿರ ನಿರ್ಮಾಣ – ವಿಘ್ನೇಶ್ವರನಿಗೂ ವಿಶೇಷ ಮಂಟಪ

    ಹಾವೇರಿ: ಗಣೇಶ ಚತುರ್ಥಿ ಮುಗಿದು ಇದೀಗ ತಾಳವಾದ್ಯಗಳೊಂದಿಗೆ ಗಣೇಶ ಮೂರ್ತಿ (Ganesha Idol) ವಿಸರ್ಜನೆ ಮಾಡುವ ಕಾರ್ಯಕ್ರಮಗಳು ಅದ್ಧೂರಿಯಾಗಿ ಅಲ್ಲಲ್ಲಿ ನಡೆಯುತ್ತಿವೆ. ಆದ್ರೆ ರಾಣೇಬೆನ್ನೂರಿನಲ್ಲಿ ಗಣೇಶ ಹಬ್ಬದ (Ganesha Festival) ಪ್ರಯುಕ್ತ ಒಂದೂವರೆ ಕೋಟಿ ಖರ್ಚು ಮಾಡಿ ಅಯೋಧ್ಯೆ ಶೈಲಿಯ ರಾಮಮಂದಿರ (Ram Mandir) ನಿರ್ಮಾಣ ಮಾಡಲಾಗಿದೆ.

    ಸುಮಾರು ಒಂದೂವರೆ ಕೋಟಿ ರೂ.ಗಳಷ್ಟು ಹಣ ಖರ್ಚು ಮಾಡಿ ಗಣೇಶ ಮೂರ್ತಿ ಪ್ರತಿಷ್ಠಾಪನೆ ಮಾಡಿರುವ ವೇದಿಕೆ ಪಕ್ಕದಲ್ಲೇ ರಾಮಮಂದಿರ ನಿರ್ಮಿಸಲಾಗಿದೆ. ಶತಮಾನಗಳ ಇತಿಹಾಸ ಸಾರುವ ಜೊತೆಗೆ ರಾಮಮಂದಿರದ ಇತಿಹಾಸ ತಿಳಿಸುವ ಮಾಹಿತಿಗಳನ್ನೂ ಇಲ್ಲಿ ಚಿತ್ರಿಸಲಾಗಿದೆ. ಈ ಸೌಂದರ್ಯವನ್ನ ಕಣ್ತುಂಬಿಕೊಳ್ಳಲು ಭಕ್ತರು ಮುಗಿಬೀಳುತ್ತಿದ್ದಾರೆ.

    ಹಾವೇರಿ (Haveri) ಜಿಲ್ಲೆಯ ರಾಣೇಬೆನ್ನೂರು ತಾಲೂಕು ಕ್ರೀಡಾಂಗಣದಲ್ಲಿ ರಾಮಮಂದಿರ ನಿರ್ಮಿಸಲಾಗಿದೆ. ವಂದೇ ಮಾತರಂ ಸೇವಾ ಸಂಸ್ಥೆಯು ಕಳೆದ 15 ವರ್ಷಗಳಿಂದ ರಾಣೇಬೆನ್ನೂರಿನಲ್ಲಿ ಗಣೇಶ ಮೂರ್ತಿಯನ್ನು ಪ್ರತಿಷ್ಠಾಪಿಸುತ್ತಾ ಬಂದಿದೆ. ಆದ್ರೆ ಈ ಬಾರಿ ಹಬ್ಬವನ್ನು ಇನ್ನಷ್ಟು ವಿಶೇಷವಾಗಿಸಲು ಸಂಸ್ಥೆಯ ಅಧ್ಯಕ್ಷ ಪ್ರಕಾಶ ಬುರಡಿಕಟ್ಟಿ ನೇತೃತ್ವದಲ್ಲಿ ರಾಮಮಂದಿರ ನಿರ್ಮಿಸಲಾಗಿದೆ. ಈ ಬಾರಿ ಗಣೇಶ ಪ್ರತಿಷ್ಠಾಪನೆ ಜೊತೆಗೆ ಭವ್ಯ ರಾಮಮಂದಿರವನ್ನೂ ನಿರ್ಮಾಣ ಮಾಡಲಾಗಿದೆ. ಇದನ್ನೂ ಓದಿ: ಮಹಿಳೆಯರಿಗೆ ವಂಚನೆ ಮಾಡಿ ಅಂತಲೇ ದೇವರು ಮೋದಿಯನ್ನ ಕಳುಹಿಸಿದ್ದಾ; ಸಿಎಂ ಪ್ರಶ್ನೆ

    ರಾಮಮಂದಿರದ ವಿಶೇಷತೆ ಏನು?
    ಸಾವಿರಾರು ಕೋಟಿ ವೆಚ್ಚದಲ್ಲಿ ಅಯೋಧ್ಯೆಯಲ್ಲಿ ನಿರ್ಮಿಸಲಾಗುತ್ತಿರುವ ಮಾದರಿಯಲ್ಲೇ ಇಲ್ಲಿನ ರಾಮಮಂದಿರ ನಿರ್ಮಾಣ ಮಾಡಲಾಗಿದೆ. ಜೊತೆಗೆ ರಾಮ ಜನ್ಮಭೂಮಿಗಾಗಿ ನಡೆದ ಹೋರಾಟಗಳು ಹಾಗೂ ಅದರ ಹಿನ್ನೆಲೆಯನ್ನು ಬರಹಗಳಲ್ಲಿ ಅಳವಡಿಸಲಾಗಿದೆ. ಇದರೊಂದಿಗೆ ಮಂದಿರಕ್ಕೆ ವಿಶೇಷ ದೀಪಾಲಂಕಾರ ಮಾಡಲಾಗಿದೆ. ಇದನ್ನೂ ಓದಿ: Ind vs Aus ಪಂದ್ಯಕ್ಕೆ ಮಳೆ ಅಡ್ಡಿ; ಓವರ್‌ ಕಡಿತಗೊಳಿಸಲು ನಿರ್ಧಾರ – ಆಸೀಸ್‌ಗೆ ಒಲಿಯುತ್ತಾ ಲಕ್‌?

    ಅಷ್ಟೇ ಅಲ್ಲದೇ ಇತಿಹಾಸ ಸಾರುವ ಅನೇಕ ಕಬ್ಬಿಣ ಹಾಗೂ ಫೈಬರ್‌ನಿಂದ ಸಿದ್ಧಪಡಿಸಲಾದ ಕಲಾಕೃತಿಗಳನ್ನೂ ಈ ಮಂದಿರದಲ್ಲಿ ನಿರ್ಮಿಸಲಾಗಿದೆ. ಶ್ರೀರಾಮನ ಮೂರ್ತಿಯನ್ನೂ ಇಲ್ಲಿ ಇಡಲಾಗಿದ್ದು, ಭಕ್ತರನ್ನು ಆಕರ್ಷಿಸುವಂತೆ ಮಾಡಲಾಗಿದೆ. ಭಕ್ತರು ಸಂತಸದಿಂದಲೇ ಮಂದಿರಕ್ಕೆ ಬಂದು ಕಣ್ತುಂಬಿಕೊಳ್ಳುತ್ತಿದ್ದಾರೆ.

    ಹಾವೇರಿ ಅಷ್ಟೇ ಅಲ್ಲದೆ ಶಿವಮೊಗ್ಗ, ದಾವಣಗೆರೆ, ಧಾರವಾಡ ಜಿಲ್ಲೆಗಳಿಂದಲೂ ಅನೇಕರು ರಾಮಮಂದಿರ ನೋಡಲು ಸಾಗರೋಪಾದಿಯಲ್ಲಿ ಹರಿದುಬರುತ್ತಿದ್ದಾರೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಗಣೇಶ ಮೂರ್ತಿಗೆ ಪೂಜೆ ಮಾಡಿದ್ದಕ್ಕೆ ವಿದ್ಯಾರ್ಥಿನಿ ಕೈ ಮುರಿದ ಹೆಡ್‍ಮಾಸ್ಟರ್!

    ಗಣೇಶ ಮೂರ್ತಿಗೆ ಪೂಜೆ ಮಾಡಿದ್ದಕ್ಕೆ ವಿದ್ಯಾರ್ಥಿನಿ ಕೈ ಮುರಿದ ಹೆಡ್‍ಮಾಸ್ಟರ್!

    – ಅಮಾನತು, ಚಿಕಿತ್ಸೆ ವೆಚ್ಚ ಭರಿಸುವಂತೆಯೂ ಸೂಚನೆ

    ಕೋಲಾರ: ಕೆಜಿಎಫ್‍ನ (KGF) ಶಾಲೆಯಲ್ಲಿ ಗಣೇಶ ಮೂರ್ತಿಗೆ ಪೂಜೆ ಮಾಡಿದ್ದಕ್ಕೆ ವಿದ್ಯಾರ್ಥಿನಿಯ ಕೈಯನ್ನು ಹೆಡ್‍ಮಾಸ್ಟರ್ ಮುರಿದ ಪ್ರಸಂಗವೊಂದು ಕೋಲಾರದಲ್ಲಿ ನಡೆದಿದೆ.

    ಸದ್ಯ ಪ್ರಕರಣ ಸಂಬಂಧ ಕೋಲಾರ ಡಿಡಿಪಿಐ ಕೃಷ್ಣಮೂರ್ತಿಯವರು ಮುಖ್ಯ ಶಿಕ್ಷಕಿಯನ್ನು ಅಮಾನತು ಮಾಡಿ ಆದೇಶ ಹೊರಡಿಸಿದ್ದಾರೆ. ಜೊತೆಗೆ ಬಾಲಕಿಯ ಚಿಕಿತ್ಸೆಗೆ ತಗುಲುವ ಖರ್ಚು ವೆಚ್ಚವನ್ನು ಕೂಡ ಮುಖ್ಯ ಶಿಕ್ಷಕಿಯೇ ಭರಿಸಬೇಕೆಂದು ಸೂಚನೆ ನೀಡಲಾಗಿದೆ.

    ಕೋಲಾರ ಜಿಲ್ಲೆಯ ಕೆಜಿಎಫ್ ತಾಲೂಕಿನ ಅಲ್ಲಿಕಲ್ಲಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಕಳೆದ ವಾರ ಈ ಘಟನೆ ನಡೆದಿತ್ತು. ಮುಖ್ಯ ಶಿಕ್ಷಕಿಯು ವಿದ್ಯಾರ್ಥಿನಿ ಭವ್ಯಶ್ರೀ ಥಳಿಸಿ ಎಡ ಕೈ ಮುರಿದಿದ್ದರು. ಈ ಸಂಬಂಧ ಪೋಷಕರು ಶಾಲಾ ಮುಖ್ಯ ಶಿಕ್ಷಕಿ ವಿರುದ್ಧ ದೂರು ಸಲ್ಲಿಸಿದ್ದರು. ಕೆಜಿಎಫ್ ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೂ ಪೋಷಕರು ದೂರು ನೀಡಿದ್ದರು. ಹೀಗಾಗಿ ಶಿಕ್ಷಣಾಧಿಕಾರಿಗಳು ಗ್ರಾಮಕ್ಕೆ ಭೇಟಿ ನೀಡಿ ವಿದ್ಯಾರ್ಥಿನಿಯ ಯೋಗ ಕ್ಷೇಮ ವಿಚಾರಿಸಿದ್ದರು. ಇದನ್ನೂ ಓದಿ: ಕುದಿಯೋ ನೀರಿಗೆ ಖಾರದ ಪುಡಿ ಬೆರೆಸಿ ಪತಿ ಮೇಲೆ ಎರಚಿ ಬೆದರಿಕೆ ಹಾಕಿದ್ಳು!

    ಮುಖ್ಯ ಶಿಕ್ಷಕಿ ಹೇಮಲತಾರನ್ನ ವರ್ಗಾವಣೆ ಮಾಡುವಂತೆ ಪೋಷಕರ ಪಟ್ಟು ಹಿಡಿದಿದ್ದರು. ಈ ವೇಳೆ ಶಿಕ್ಷಣಾಧಿಕಾರಿ ಮುನಿವೆಂಕಟ ರಾಮಾಚಾರಿ ಅವರು ಶಾಲಾ ಮಕ್ಕಳ ಪೋಷಕರಿಗೆ ಭರವಸೆ ನೀಡಿದ್ದರು. ಅಂತೆಯೇ ಇದೀಗ ಮುಖ್ಯ ಶಿಕ್ಷಕಿಯ ಅಮಾನತು ಮಾಡಿ ಡಿಡಿಪಿಐ ಆದೇಶ ಹೊರಡಿಸಿದ್ದಾರೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • 12 ಲಕ್ಷ ರೂ. ಮೌಲ್ಯದ ಅಮೆರಿಕನ್ ಡೈಮಂಡ್ ಹರಳುಗಳಿಂದ ಸಿದ್ಧಗೊಂಡ ವಿಶೇಷ ವಿನಾಯಕ ಮೂರ್ತಿ

    12 ಲಕ್ಷ ರೂ. ಮೌಲ್ಯದ ಅಮೆರಿಕನ್ ಡೈಮಂಡ್ ಹರಳುಗಳಿಂದ ಸಿದ್ಧಗೊಂಡ ವಿಶೇಷ ವಿನಾಯಕ ಮೂರ್ತಿ

    ಹುಬ್ಬಳ್ಳಿ: ವಾಣಿಜ್ಯನಗರಿ ಹುಬ್ಬಳ್ಳಿಯ (Hubballi) ಕಲಾವಿದ ಮಹೇಶ ಮುರಗೋಡ ಹಾಗೂ ತಂಡದವರು ನಿರ್ಮಿಸಿದ 12 ಲಕ್ಷ ರೂ. ಮೌಲ್ಯದ ಅಮೆರಿಕನ್ ಡೈಮಂಡ್ ಹರಳುಗಳಿಂದ ನಿರ್ಮಿಸಿದ ಗಣಪತಿ ಮೂರ್ತಿ (Ganesha Idol) ಹುಬ್ಬಳ್ಳಿಯಿಂದ ಬೆಂಗಳೂರಿಗೆ (Bengaluru) ಪ್ರಯಾಣ ಬೆಳೆಸಿದೆ.

    ಬೆಂಗಳೂರಿನ ರಾಜಾಜಿನಗರ 2ನೇ ಹಂತ ಮಿಲ್ಕ ಕಾಲೋನಿ 5ನೇ ಮುಖ್ಯ ರಸ್ತೆಯಲ್ಲಿ ಸ್ವಸ್ತಿಕ ಯುವಕರ ಸಂಘದಿಂದ ಸೆಪ್ಟೆಂಬರ್ 18 ರಂದು ಪ್ರತಿಷ್ಠಾಪನೆಗೊಳ್ಳಲಿರುವ ಗಣೇಶ ಮೂರ್ತಿ 5.7 ಅಡಿ ಎತ್ತರವಿದ್ದು, ಸುಮಾರು 150 ಕೆಜಿ ತೂಕ ಹೊಂದಿದೆ. ಮುಖವೊಂದನ್ನು ಬಿಟ್ಟು ಇನ್ನುಳಿದ ಎಲ್ಲ ಭಾಗವೂ ಸಹ ಅಮೆರಿಕನ್ ಡೈಮಂಡ್ ಹರಳು, ನವರತ್ನ ಹರಳುಗಳಿಂದ ಗಣೇಶ ಮೂರ್ತಿಯನ್ನು ನಿರ್ಮಿಸಲಾಗಿದೆ. ಇದನ್ನೂ ಓದಿ: ಗಣೇಶನ ಹಬ್ಬ ಸೆ.18ಕ್ಕಾ ಅಥವಾ 19ಕ್ಕಾ? ಇಲ್ಲಿದೆ ಕಂಪ್ಲೀಟ್ ಡೀಟೇಲ್ಸ್

    ಕಳೆದ ಹಲವಾರು ವರ್ಷಗಳಿಂದ ಈ ಯುವಕರ ಸಂಘ ಅಮೆರಿಕನ್ ಡೈಮಂಡ್ ಹರಳುಗಳಿಂದ ಅಲಂಕೃತ ಗಣೇಶ ಮೂರ್ತಿಯನ್ನು ಹುಬ್ಬಳ್ಳಿಯಲ್ಲಿ ನಿರ್ಮಿಸಿಕೊಂಡು ರೈಲಿನ ಮೂಲಕ ಬೆಂಗಳೂರಿಗೆ ತೆಗೆದುಕೊಂಡು ಹೋಗಿ ಅಲ್ಲಿ ಪ್ರತಿಷ್ಠಾಪನೆ ಮಾಡಿ 7 ದಿನಗಳವರೆಗೆ ಅದ್ದೂರಿಯಾಗಿ ಗಣೇಶೋತ್ಸವ ಆಚರಣೆ ಮಾಡುತ್ತಾ ಬಂದಿದ್ದಾರೆ.

    ಅದೇ ರೀತಿ ಈ ವರ್ಷವೂ ಸಹ ಸುಮಾರು 60 ಸಾವಿರ ಅಮೆರಿಕನ್ ಡೈಮಂಡ್ ಹಾಗೂ ನವರತ್ನ ಹರಳುಗಳಿಂದ ಐಶ್ವರ್ಯ ಗಣೇಶ ಮಾದರಿಯಲ್ಲಿ ಗಣೇಶ ಮೂರ್ತಿ ನಿರ್ಮಿಸಿ ಪ್ರತಿಷ್ಠಾಪನೆಗೆ ಮುಂದಾಗಿದ್ದಾರೆ. ಇದನ್ನೂ ಓದಿ: ಊಸರವಳ್ಳಿ ಸರ್ಕಾರ, ನೀರು ಬಿಡಲ್ಲ ಎಂದು ನೀರು ಬಿಡ್ತೀವಿ ಅಂತಿದ್ದಾರೆ: ಬೊಮ್ಮಾಯಿ ಕಿಡಿ

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಗಣೇಶಮೂರ್ತಿ ಸ್ಥಾಪಿಸಿದ ಬಿಜೆಪಿ ನಾಯಕಿ ರೂಬಿಖಾನ್‌ಗೆ ಮುಸ್ಲಿಂ ಧರ್ಮಗುರುಗಳಿಂದ ಕೊಲೆ ಬೆದರಿಕೆ

    ಗಣೇಶಮೂರ್ತಿ ಸ್ಥಾಪಿಸಿದ ಬಿಜೆಪಿ ನಾಯಕಿ ರೂಬಿಖಾನ್‌ಗೆ ಮುಸ್ಲಿಂ ಧರ್ಮಗುರುಗಳಿಂದ ಕೊಲೆ ಬೆದರಿಕೆ

    ಲಕ್ನೋ: ಉತ್ತರಪ್ರದೇಶದ ಮೀರತ್‌ನಲ್ಲಿರುವ ತನ್ನ ಮನೆಯಲ್ಲಿ ಗಣೇಶ ಮೂರ್ತಿ ಪ್ರತಿಷ್ಠಾಪಿಸಿರುವುದಕ್ಕೆ ಮುಸ್ಲಿಂ ಧರ್ಮಗುರುಗಳಿಂದ ಬೆದರಿಕೆ ಬರುತ್ತಿದೆ ಎಂಬುದಾಗಿ ಬಿಜೆಪಿ ನಾಯಕಿ ರೂಬಿಖಾನ್ ಆರೋಪಿಸಿದ್ದಾರೆ.

    ಉತ್ತರ ಪ್ರದೇಶದಲ್ಲಿರುವ ತನ್ನ ಮನೆಯಲ್ಲಿ ಗಣೇಶ ಮೂರ್ತಿ ಪ್ರತಿಷ್ಠಾಪಿಸಿದ್ದು, ಮುಸ್ಲಿಂ ಧರ್ಮಗುರುಗಳು ಬೆದರಿಕೆ ಹಾಕಿದ್ದಾರೆ. ಈ ಹಿಂದೆಯೂ ರಾಮಮಂದಿರ ನಿರ್ಮಾಣಕ್ಕೆ ಶಂಕುಸ್ಥಾಪನೆ ನೆರವೇರಿಸಿ ಮನೆಯುಲ್ಲಿ ಪೂಜೆ ಸಲ್ಲಿಸಿದಾಗಲೂ ತನ್ನ ವಿರುದ್ಧ ಫತ್ವಾ ಹೊರಡಿಸಲಾಗಿತ್ತು ಎಂದು ಹೇಳಿದರು. ಇದನ್ನೂ ಓದಿ: ಮನೆಗೆ ಹೋಗುತ್ತಿದ್ದ ಬಿಜೆಪಿ ಮುಖಂಡನನ್ನು ಗುಂಡಿಕ್ಕಿ ಹತ್ಯೆಗೈದ ದುಷ್ಕರ್ಮಿಗಳು

    ಸಾಂದರ್ಭಿಕ ಚಿತ್ರ

    ಇದೀಗ ನಾನು 7 ದಿನಗಳ ಕಾಲ ಮನೆಯಲ್ಲಿ ಗಣೇಶನ ವಿಗ್ರಹ ಸ್ಥಾಪಿಸಿದ್ದೇನೆ, ಶ್ರದ್ಧೆಯಿಂದ ಪೂಜಿಸಿ, ವಿಸರ್ಜನೆ ಮಾಡುತ್ತೇನೆ. ಅದಕ್ಕಾಗಿ ನನ್ನ ವಿರುದ್ಧ ಫತ್ವಾ ಹೊರಡಿಸಲಾಗಿದೆ. ಅಲ್ಲದೇ, ಮುಸ್ಲಿಂ ಧರ್ಮಗುರುಗಳು ನನ್ನ ವಿರುದ್ಧ ತಿರುಗಿಬಿದ್ದಿದ್ದಾರೆ, ನನ್ನನ್ನು ಕೊಲ್ಲಲು ಬಯಸುತ್ತಿದ್ದಾರೆ. ಈ ಹಿಂದೆಯೂ ನನ್ನನ್ನು ಟಾರ್ಗೆಟ್ ಮಾಡಲಾಗಿತ್ತು. ಈಗ ಬೆದರಿಕೆ ಕರೆಗಳು ಬರುತ್ತಿವೆ. ಆದರೆ ಇದಕ್ಕೆಲ್ಲಾ ನಾನು ಹೆದರುವುದಿಲ್ಲ. ಗಣೇಶನನ್ನು ಪೂಜಿಸಿ, ವಿಸರ್ಜನೆ ಮಾಡುತ್ತೇನೆ. ನನ್ನ ಪತಿ ನನ್ನೊಂದಿಗೆ ಇದ್ದಾರೆ ಎಂದು ಹೇಳಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಈಚಲು ಮರದಲ್ಲಿ ಮೂಡಿದ ಗಣಪ – ದಿನನಿತ್ಯ ಹರಿದು ಬರುತ್ತಿದೆ ಭಕ್ತರ ದಂಡು

    ಈಚಲು ಮರದಲ್ಲಿ ಮೂಡಿದ ಗಣಪ – ದಿನನಿತ್ಯ ಹರಿದು ಬರುತ್ತಿದೆ ಭಕ್ತರ ದಂಡು

    ಚಿಕ್ಕಮಗಳೂರು: ಹಲವು ವರ್ಷಗಳಿಂದ ಬೆಳೆದು ಹೆಮ್ಮರವಾಗಿರುವ ಈಚಲು ಮರದಲ್ಲಿ ವಿಘ್ನೇಶ್ವರನ ಮೂರ್ತಿ ಪ್ರತ್ಯಕ್ಷಗೊಂಡು ಭಕ್ತರನ್ನು ಪುಳಕಿತರನ್ನಾಗಿಸಿದ ಘಟನೆ ನಗರದ ಬೈಪಾಸ್ ರಸ್ತೆಯ ಪಟಾಕಿ ಗ್ರೌಂಡ್ ಪಕ್ಕದ ಹೊಲದಲ್ಲಿ ನಡೆದಿದೆ.

    ಹಲವು ವರ್ಷಗಳಿಂದಲೂ ಎರಡು ಈಚಲು ಮರಗಳಿದ್ದವು. ಅವುಗಳು ಮಾಮೂಲಿ ಎಲ್ಲಾ ಮರಗಳಂತೆ ಬೆಳೆಯುತ್ತಿದ್ದವು. ಆದರೆ, ಈಚಲು ಮರದಲ್ಲಿ ಗಣಪತಿ ಮುಖವನ್ನೇ ಹೋಲುವ ಮೂರ್ತಿ ಆಕಾರ ಮೂಡಿದೆ. ಅದು ನೋಡಲು ಗಣಪತಿಯಂತೆಯೇ ಭಾಸವಾಗುತ್ತಿದೆ. ಕಣ್ಣು, ಕಿವಿ, ಸೊಂಡಿಲು, ಮುಖದ ಆಕಾರ ಸಂಪೂರ್ಣ ಗಣಪತಿಯನ್ನೇ ಹೋಲುತ್ತಿದೆ. ಹಾಗಾಗಿ, ಭಕ್ತರು ನಾ ಮುಂದು ತಾ ಮುಂದು ಎಂದು ಬಂದು ಗಣಪತಿಯನ್ನು ನೋಡಿಕೊಂಡು ಆಶ್ಚರ್ಯ ಚಕಿತರಾಗಿ ಗಣಪನಿಗೆ ಪೂಜೆ ಮಾಡಿಕೊಂಡು ಹೋಗುತ್ತಿದ್ದಾರೆ. ಇದನ್ನೂ ಓದಿ: ಕೊಡಗಿನ ಕರಿಕೆ, ಸಂಪಾಜೆ, ಚೆಂಬು ಗ್ರಾಮದಲ್ಲಿ ಕಂಪಿಸಿದ ಭೂಮಿ

    ಈಚಲು ಮರದಲ್ಲಿ ಮೂಡಿರುವ ಪಾರ್ವತಿ ಸುತನನ್ನು ಕಂಡು ಜನ ಮೂಕವಿಸ್ಮಿತರಾಗುತ್ತಿದ್ದಾರೆ. ಒಬ್ಬರ ಬಾಯಿಂದ ಒಬ್ಬರಿಗೆ ಹರಡಿ ಇದೀಗ ದಿನಕ್ಕೆ ನೂರಾರು ಜನ ಬಂದು ನೋಡಿಕೊಂಡು ಹೋಗುತ್ತಿದ್ದಾರೆ. ಈಗಾಗಲೇ ನಗರದಲ್ಲಿ ನಾಲ್ಕೈದು ಗಣಪತಿ ದೇವಸ್ಥಾನಗಳಿವೆ. ಅವೆಲ್ಲವೂ ಕೂಡ ಪಶ್ಚಿಮ ದಿಕ್ಕಿಗೆ ಮುಖ ಮಾಡಿವೆ. ಆದರೆ, ಈ ಈಚಲು ಮರದ ಉದ್ಭವ ಗಣಪತಿ ಪೂರ್ವ ದಿಕ್ಕಿಗೆ ಮುಖ ಮಾಡಿ ಹುಟ್ಟಿರೋದು ಸ್ಥಳೀಯರು ಹಾಗೂ ಆಸ್ತಿಕರ ತೀವ್ರ ತರವಾದ ಭಕ್ತಿಗೆ ಕಾರಣವಾಗಿದೆ. ಹೊಲದಲ್ಲಿರುವ ಈಚಲು ಮರದಲ್ಲಿ ಗಣೇಶ ದರ್ಶನ ಕೊಟ್ಟಿರುವುದು ಸ್ಥಳೀಯರಿಗೆ ಅಚ್ಚರಿ ತಂದಿದೆ. ಈ ಈಚಲು ಮರದ ಗಣಪನಿಗೆ ಕೈಮುಗಿದು ಬೇಡಿಕೊಂಡು ಹೋದರೆ ಹೋಗುವ ಕೆಲಸ ಆಗುತ್ತೆ ಅನ್ನೋದು ಭಕ್ತರ ನಂಬಿಕೆಯಾಗಿದೆ. ಇದನ್ನೂ ಓದಿ: ವೃದ್ಧೆಯ ಹೊಟ್ಟೆ ಕೊಯ್ದು ಹಾಗೆ ಬಿಟ್ಟ – ವೈದ್ಯನ ಯಡವಟ್ಟಿಗೆ ವೃದ್ಧೆ ನರಳಾಟ

    ಈಗಾಗಲೇ ಹಲವು ಭಕ್ತರು ನಿತ್ಯ ಯಾವುದಾದರೂ ಒಳ್ಳೆ ಕೆಲಸಕ್ಕೆ ಹೋಗುವ ಮುನ್ನ ಇಲ್ಲಿಗೆ ಬಂದು ಕೈಮುಗಿದು ಬೇಡಿಕೊಂಡು ಹೋಗುತ್ತಿದ್ದಾರೆ. ಬೆಳಗ್ಗೆ, ಸಂಜೆ ಬಂದು ಭಕ್ತರು ಈ ಗಣಪತಿಗೆ ಪೂಜೆ ಸಲ್ಲಿಸಿ ಕಷ್ಟಗಳ ನಿವಾರಿಸೋ ಈಚಲ ವಿಘ್ನೇಶ ಎಂದು ಬೇಡಿಕೊಳ್ಳುತ್ತಿದ್ದಾರೆ.

    Live Tv

  • ಕಿಡಿಗೇಡಿಗಳಿಂದ ಗಣಪತಿ ಮೂರ್ತಿ ಧ್ವಂಸ – ಗ್ರಾಮಸ್ಥರಲ್ಲಿ ಆತಂಕ

    ಕಿಡಿಗೇಡಿಗಳಿಂದ ಗಣಪತಿ ಮೂರ್ತಿ ಧ್ವಂಸ – ಗ್ರಾಮಸ್ಥರಲ್ಲಿ ಆತಂಕ

    ಚಿತ್ರದುರ್ಗ: ಪ್ರತಿಷ್ಠಾಪನೆ ಮಾಡಿದ್ದ ಗಣಪತಿ ಮೂರ್ತಿಯನ್ನು ಕಿಡಿಗೇಡಿಗಳು ಧ್ವಂಸಗೊಳಿಸಿರುವ ಘಟನೆ ಚಿತ್ರದುರ್ಗ ಜಿಲ್ಲೆ ಚಳ್ಳಕೆರೆ ತಾಲೂಕಿನ ಹಿರೇಹಳ್ಳಿ ಗ್ರಾಮದಲ್ಲಿ ನಡೆದಿದೆ.

    ನಿನ್ನೆ ಗ್ರಾಮದ ಯುವಕರು ಗಣೇಶ ಮೂರ್ತಿಯನ್ನ ಪ್ರತಿಷ್ಠಾಪನೆ ಮಾಡಿದ್ದರು. ಆದರೆ ತಡರಾತ್ರಿ ಗಣಪತಿ ಮೂರ್ತಿಯನ್ನ ಯಾರೋ ಕಿಡಿಗೇಡಿಗಳು ಧ್ವಂಸ ಮಾಡಿದ್ದಾರೆ. ಈ ಕೃತ್ಯದಿಂದಾಗಿ ಹಿರೇಹಳ್ಳಿ ಗ್ರಾಮಸ್ಥರಲ್ಲಿ ಭಾರೀ ಆತಂಕ ಮನೆ ಮಾಡಿದೆ. ಇದನ್ನೂ ಓದಿ: ನಿನ್ನ ವಾಹನದಿಂದ ಬೆಳೆ ಉಳಿಸು- ಗಣಪತಿಗೆ ಜೀವಂತ ಇಲಿ ನೀಡಿ ಬೇಡಿಕೊಂಡ ರೈತ

    ಅಲ್ಲದೇ ಸತತ 14 ವರ್ಷಗಳಿಂದ ಗ್ರಾಮದ ಯುವಕರು ಗಣಪತಿಯನ್ನು ಪ್ರತಿಷ್ಠಾಪನೆ ಮಾಡಿಕೊಂಡು ಶಾಂತಿಯುತವಾಗಿ ಹಬ್ಬವನ್ನು ಆಚರಿಸಿಕೊಂಡು ಬಂದಿದ್ದರು. ಈ ಬಾರಿ ಸಹ ಕೊರೋನ ಆತಂಕದ ನಡುವೇ ತರಾತುರಿಯಲ್ಲಿ ಪ್ರತಿಷ್ಠಾಪಿಸಲಾಗಿದ್ದ ಮೂರ್ತಿಯನ್ನು ಕೀಡಿಗಳು ರಾತ್ರಿ ವೇಳೆ ಧ್ವಂಸಗೊಳಿಸಿರೋದ್ರಿಂದ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

    ಪೊಲೀಸರು ಈ ಪ್ರಕರಣ ಕುರಿತು ತನಿಖೆ ನಡೆಸಿ ಕಿಡಿಗೇಡಿಗಳನ್ನು ಬಂಧಿಸಬೇಕು. ಅವರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕೆಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ. ಈ ಪ್ರಕರಣ ತಳಕು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಇದನ್ನೂ ಓದಿ: ಕಲಬುರಗಿ ಮೇಯರ್ ಚುನಾವಣೆ- ಮುಂದಿನ ವಾರ ಅಧಿಸೂಚನೆ

  • 5,000 ಬೆಂಕಿ ಕಡ್ಡಿ ಬಳಸಿ ಗಣಪತಿ ಮೂರ್ತಿ ರಚಿಸಿದ ಕಲಾವಿದ

    5,000 ಬೆಂಕಿ ಕಡ್ಡಿ ಬಳಸಿ ಗಣಪತಿ ಮೂರ್ತಿ ರಚಿಸಿದ ಕಲಾವಿದ

    ಭುವನೇಶ್ವರ: ಗಣೇಶ ಹಬ್ಬದ ಪ್ರಯುಕ್ತ ಒಡಿಶಾದ ಕಲಾವಿದರೊಬ್ಬರು ಬೆಂಕಿ ಕಡ್ಡಿಗಳನ್ನು ಬಳಸಿ ಗಣೇಶನ ಮೂರ್ತಿಯನ್ನು ರಚಿಸಿದ್ದಾರೆ. ಈ ಮೂರ್ತಿ 5,621 ಬೆಂಕಿ ಕಡ್ಡಿಗಳನ್ನು ಒಳಗೊಂಡಿರುವ ಕಲಾಕೃತಿಯಾಗಿದ್ದು, 23 ಇಂಚು ಉದ್ದ ಮತ್ತು 22 ಇಂಚು ಅಗಲವಿದೆ. ಇದನ್ನೂ ಓದಿ: ಗಣೇಶ ಹಬ್ಬಕ್ಕೆ ಸ್ವಯಂ ಅನುಶಾಸನ ಅಗತ್ಯ: ಸುನಿಲ್ ಕುಮಾರ್

    Ganesha idol-

    ಕಲಾವಿದ ಸಾಸ್ವತ್ ಸಾಹೂ ಈ ಮೂರ್ತಿಯನ್ನು ಸಿದ್ಧ ಪಡಿಸಲು ಎಂಟು ದಿನಗಳನ್ನು ತೆಗೆದುಕೊಂಡಿರುವುದಾಗಿ ತಿಳಿಸಿದ್ದಾರೆ. ಕೋವಿಡ್-19 ಮಧ್ಯೆ ಗಣೇಶ ಹಬ್ಬವನ್ನು ಆಚರಿಸಲಾಗುತ್ತಿದೆ. ಹೀಗಾಗಿ ಈ ಬಾರಿ ನಾನು ಹೊಸದಾಗಿ ಏನಾದರೂ ಮಾಡಬೇಕೆಂದು ಯೋಚಿಸಿ, ಈ ಮೂರ್ತಿಯನ್ನು ಸಿದ್ಧ ಪಡಿಸಿದ್ದೇನೆ ಮತ್ತು ಹಬ್ಬದ ದಿನ ಈ ಮೂರ್ತಿಯನ್ನು ಮನೆಯಲ್ಲಿಟ್ಟು ಪ್ರಾರ್ಥಿಸುತ್ತೇನೆ ಎಂದಿದ್ದಾರೆ.

    Ganesha idol-

    ಗಣೇಶ ಹಬ್ಬ ಹತ್ತು ದಿನಗಳ ಕಾಲ ಆಚರಿಸುವ ಹಬ್ಬವಾಗಿದ್ದು, ದೇಶಾದ್ಯಾಂತ ಜನರು ಬಹಳ ಅದ್ದೂರಿಯಾಗಿ ಹಬ್ಬವನ್ನು ಆಚರಿಸುತ್ತಾರೆ. ಆದರೆ ಈ ಬಾರಿ ಕೋವಿಡ್-19 ನಿಂದಾಗಿ ಗಣೇಶೋತ್ಸವವನ್ನು ಸರಳವಾಗಿ ಆಚರಿಸುತ್ತಿರುವುದನ್ನು ಕಾಣಬಹುದಾಗಿದೆ. ಇದನ್ನೂ ಓದಿ: ಬೆಳಗಾವಿ ಕದನ, ಮರಾಠಿ ಜನರಿಗೆ ಪಾಠ – ಮತ್ತೆ ಕೆಣಕಿದ ಶಿವಸೇನೆ

  • ಮಲ್ಲೇಶ್ವರಂನಲ್ಲಿ ಪರಿಸರ ಸ್ನೇಹಿ 3,000 ಗಣೇಶ ಮೂರ್ತಿಗಳ ಹಂಚಿಕೆ

    ಮಲ್ಲೇಶ್ವರಂನಲ್ಲಿ ಪರಿಸರ ಸ್ನೇಹಿ 3,000 ಗಣೇಶ ಮೂರ್ತಿಗಳ ಹಂಚಿಕೆ

    ಬೆಂಗಳೂರು: ಬೆಂಗಳೂರಿನ ಮಲ್ಲೇಶ್ವರಂ ವಿಧಾನಸಭಾ ಕ್ಷೇತ್ರದ ಸುಬ್ರಮಣ್ಯನಗರದ ಈಸ್ಟ್ ವೆಸ್ಟ್ ಸ್ಕೂಲ್ ಬಳಿ ಕೆಂಗಲ್ ಹನುಮಂತಯ್ಯ ಟ್ರಸ್ಟ್ ಮತ್ತು ಮಲ್ಲೇಶ್ವರಂ ವಿಧಾನಸಭಾ ಕಾಂಗ್ರೆಸ್ ಸಮಿತಿ ಸಹಯೋಗದಲ್ಲಿ ಪರಿಸರ ಸ್ನೇಹಿ 3,000 ಗಣೇಶ ಮೂರ್ತಿಗಳನ್ನು ಟ್ರಸ್ಟ್ ನ ಅಧ್ಯಕ್ಷರು ಮತ್ತು ಕಾಂಗ್ರೆಸ್ ಪಕ್ಷದ ಮುಖಂಡರಾದ ಪಾದರೇಣುರವರು ಮಕ್ಕಳಿಗೆ ವಿತರಣೆ ಮಾಡಿದರು.

    ganesh idol

    ಈ ಸಂದರ್ಭದಲ್ಲಿ ಕೆಂಗಲ್ ಹನುಮಂತಯ್ಯ ಟ್ರಸ್ಟ್ ಅಧ್ಯಕ್ಷರಾದ ಪಾದರೇಣುರವರು ಮಾತನಾಡಿ, ಇಂದಿನ ಮಕ್ಕಳೇ ದೇಶದ ಮುಂದಿನ ಮುಂದಿನ ಉತ್ತಮ ಪ್ರಜೆಗಳಾಗಬೇಕು. ತಂದೆ, ತಾಯಿ ಮತ್ತು ಗುರುಗಳಿಗೆ ಗೌರವ ತರುವ ಹಾಗೇ ಉತ್ತಮ ನಡತೆ ಬೆಳೆಸಿಕೊಳ್ಳಬೇಕು. ಎಲ್ಲರೂ ಒಂದೇ ಎಂಬ ಭಾವನೆ ಬರಬೇಕು ಎಂದರು. ಇದನ್ನೂ ಓದಿ: ಸಿಲಿಂಡರ್ ಸ್ಫೋಟ- ಮೊಮ್ಮಗಳ ಸಮಯ ಪ್ರಜ್ಞೆಯಿಂದ ಉಳೀತು ಅಜ್ಜಿ ಜೀವ

    ಗಣೇಶ ಹಬ್ಬದ ಪ್ರಯುಕ್ತ ಮಲ್ಲೇಶ್ವರಂ ವಿಧಾನಸಭಾ ಕ್ಷೇತ್ರದ ಗಾಯಿತ್ರಿನಗರ, ಸುಬ್ರಮಣ್ಯನಗರ ಮತ್ತು ಪ್ಯಾಲೇಸ್ ಗುಟ್ಟಹಳ್ಳಿ, ಅರಮನೆ ನಗರ, ಅಶ್ವಥ್ ನಗರ ಎಸ್.ಸಿ/ಎಸ್.ಟಿ ಕಾಲೋನಿ ಮಕ್ಕಳಿಗೆ 3 ಸಾವಿರ ಪರಿಸರ ಸ್ನೇಹಿ ಮತ್ತು ನೈಸರ್ಗಿಕ ಬಣ್ಣ ಬಳಸಿದ ಗಣೇಶ ಮೂರ್ತಿಗಳನ್ನು ವಿತರಿಸಲಾಯಿತು. ಈ ಸಂದರ್ಭದಲ್ಲಿ ಸ್ಥಳೀಯ ಕಾಂಗ್ರೆಸ್ ಮುಖಂಡರು ಉಪಸ್ಥಿತರಿದ್ದರು. ಇದನ್ನೂ ಓದಿ: ದೋಚಲು ಹಣವಿಲ್ಲದಾಗ ಹಲ್ಲೆಗೈದು ರೇಪ್ ಮಾಡಿದೆವು – ಸತ್ಯ ಬಿಚ್ಚಿಟ್ಟ 7ನೇ ಆರೋಪಿ

  • ಗಣೇಶ ಮೂರ್ತಿ ಪ್ರತಿಷ್ಠಾಪನೆಗೆ ಇಂದೇ ತಗೋಬೇಕು ಪರ್ಮಿಷನ್!

    ಗಣೇಶ ಮೂರ್ತಿ ಪ್ರತಿಷ್ಠಾಪನೆಗೆ ಇಂದೇ ತಗೋಬೇಕು ಪರ್ಮಿಷನ್!

    ಬೆಂಗಳೂರು: ಕೊರೊನಾ ಆತಂಕದ ನಡುವೆಯೂ ರಾಜ್ಯ ಸರ್ಕಾರ ಗಣೇಶ ಹಬ್ಬಕ್ಕೆ ಅನುಮತಿ ನೀಡಿ ಮಾರ್ಗಸೂಚಿ ಬಿಡುಗಡೆ ಮಾಡಿದೆ. ವಾರ್ಡ್‍ಗೆ ಒಂದೇ ಗಣೇಶ ಮೂರ್ತಿ, ಐದು ದಿನದ ಒಳಗೆ ಗಣೇಶ ಮೂರ್ತಿ ವಿಸರ್ಜನೆ ಸೇರಿದಂತೆ ಸರ್ಕಾರ ನಿಯಮ ಜಾರಿಗೆ ತಂದಿದೆ.

    ನಾಳೆ ಗೌರಿ ಹಬ್ಬ, ನಾಡಿದ್ದು ಗಣೇಶ ಹಬ್ಬದ ಹಿನ್ನೆಲೆಯಲ್ಲಿ ಇಂದೇ ಸಂಬಂಧ ಪಟ್ಟ ಅಧಿಕಾರಿಗಳಿಂದ ಅನುಮತಿ ಪಡೆಯಬೇಕಿದೆ. ವಾರ್ಡ್ ಗೆ ಒಂದೇ ಗಣೇಶ ಮೂರ್ತಿ ಪ್ರತಿಷ್ಠಾಪನೆ ಮಾಡೋಬೇಕಿರೋ ಹಿನ್ನೆಲೆಯಲ್ಲಿ, ಇಂದೇ ಅಯಾ ವಲಯದ ಡಿಸಿಪಿ ಮತ್ತು ಸ್ಥಳೀಯ ಪೊಲೀಸ್ ಇನ್ಸ್ ಪೆಕ್ಟರ್, ಬಿಬಿಎಂಪಿ ಎಇಇ ಬಳಿ ಅನುಮತಿ ಪಡೆಯಬೇಕು. ಅದಕ್ಕೂ ಮುನ್ನ, ಸರ್ಕಾರದ ಮಾರ್ಗಸೂಚಿಯನ್ನು ಕಡ್ಡಾಯವಾಗಿ ಫಾಲೋ ಮಾಡುವುದಾಗಿ ಪತ್ರ ಬರೆದುಕೊಡಬೇಕು. ಇದನ್ನೂ ಓದಿ: ಧವನ್ ದಾಂಪತ್ಯ ಜೀವನದಲ್ಲಿ ಬಿರುಕು- ವಿಚ್ಛೇದನಕ್ಕೆ ಮುಂದಾದ ಪತ್ನಿ

    ಒಂದು ವೇಳೆ ಮಾರ್ಗಸೂಚಿ ಉಲ್ಲಂಘನೆ ಮಾಡಿದ್ರೆ ಅಂಥವರ ವಿರುದ್ಧ ಕ್ರಮ ಕೈಗೊಳ್ಳುವ ಸೂಚನೆ ಕೂಡ ನೀಡಲಾಗಿದೆ. ಈ ನಡುವೆ ಪ್ರತಿ ಏರಿಯಾದಲ್ಲಿ ಬೇರೆ ಬೇರೆ ಸಂಘಟನೆಗಳುಣ ಸಮಿತಿಗಳು ಇದ್ದು, ಅವುಗಳ ಮಧ್ಯೆ ಅನುಮತಿಗಾಗಿ ಪೈಪೋಟಿ ಬಿಳುವ ಸಾಧ್ಯತೆ ಇದೆ. ಕೆಲವರು ಈಗಾಗಲೇ ಅನುಮತಿ ಪಡೆದಿದ್ದು, ಇನ್ನೂ ಕೆಲವರು ಇಂದು ಅನುಮತಿ ಪಡೆಯಲು ಕಾದಿದ್ದಾರೆ. ಒಬ್ಬರಿಗೆ ಅನುಮತಿ ಕೊಟ್ರೆ, ಅದೇ ಏರಿಯಾದ ಮತ್ತೊಬ್ಬರು ನಮಗೂ ಅನುಮತಿ ಕೊಡಿ ಅಂತಾ ಕೇಳುವ ಸಾಧ್ಯತೆ ಇದೆ. ಹಾಗಾಗಿ ಖುದ್ದು ಡಿಸಿಪಿ ನೇತೃತ್ವದಲ್ಲಿ ಈ ಗಣೇಶ ಮೂರ್ತಿ ಪ್ರತಿಷ್ಠಾಪನೆ, ವಿಸರ್ಜನೆ ಯನ್ನು ನೋಡಿಕೊಂಡು ಯಾವುದೇ ಅಹಿತಕರ ಘಟನೆ ನಡೆಯದಂತೆ ಮುನ್ನೆಚ್ಚರಿಕೆ ವಹಿಸಲು ಹಿರಿಯ ಅಧಿಕಾರಿಗಳು ಸೂಚನೆ ನೀಡಿದ್ದಾರೆ.  ಇದನ್ನೂ ಓದಿ: ಇಂದಿನಿಂದ ಪ್ರಖ್ಯಾತ ತಿರುಪತಿ ತಿಮ್ಮಪ್ಪನ ದೇಗುಲದಲ್ಲಿ ಸರ್ವದರ್ಶನಕ್ಕೆ ಅವಕಾಶ