Tag: ganesha festival

  • ಗಣೇಶೋತ್ಸವಕ್ಕೆ ನಾಳೆ ಸಿಗುತ್ತಾ ಅನುಮತಿ..? – ಸಂಪುಟ ಸಭೆ ಬಳಿಕ ಸಿಎಂ ಘೋಷಣೆ ಸಾಧ್ಯತೆ

    ಗಣೇಶೋತ್ಸವಕ್ಕೆ ನಾಳೆ ಸಿಗುತ್ತಾ ಅನುಮತಿ..? – ಸಂಪುಟ ಸಭೆ ಬಳಿಕ ಸಿಎಂ ಘೋಷಣೆ ಸಾಧ್ಯತೆ

    ಬೆಂಗಳೂರು: ಗಣೇಶ ಹಬ್ಬಕ್ಕೆ ಇನ್ನು ಐದೇ ದಿನ ಬಾಕಿ. ಈ ಬಾರಿ ಸಾರ್ವಜನಿಕ ಗಣೇಶೋತ್ಸವಕ್ಕೆ ರಾಜ್ಯಾದ್ಯಂತ ವ್ಯಾಪಕ ಒತ್ತಾಯ ಕೇಳಿ ಬಂದಿದೆ. ಹೀಗಾಗಿ ನಾಳೆ ಮಧ್ಯಾಹ್ನ 12.30ಕ್ಕೆ ನಡೆಯಲಿರುವ ಸಭೆಯಲ್ಲಿ ಗಂಭೀರ ಚರ್ಚೆ ನಡೆಯಲಿದ್ದು, ಬಳಿಕ ಸಿಎಂ ಬೊಮ್ಮಾಯಿ ಘೋಷಣೆ ಮಾಡುವ ಸಾಧ್ಯತೆ ಇದೆ.

    ಕಳೆದ ಬಾರಿಯ ಸಭೆಯಲ್ಲೇ ಆದೇಶ ಹೊರಡುತ್ತೆ ಎನ್ನಲಾಗಿತ್ತು. ಆದರೆ ಸಿಎಂ ಮಾತ್ರ ಡಿಸಿಗಳಿಂದ ಮಾಹಿತಿ ಪಡೆದು ಸರಿಯಾದ ಸಮಯಕ್ಕೆ ಸರಿಯಾದ ನಿರ್ಣ ತೆಗೆದುಕೊಳ್ತೇವೆ ಅಂತ ಹೇಳಿದ್ದರು. ಸಚಿವರು, ಹಿಂದೂಪರ ಸಂಘಟನೆಗಳು ಸರ್ಕಾರದ ಮೇಲೆ ಒತ್ತಡ ಹೇರಿವೆ. ಸಚಿವರ ಪ್ರಸ್ತಾಪಕ್ಕೆ ಸಕಾರಾತ್ಮಕವಾಗಿ ಸಿಎಂ ಸ್ಪಂದಿಸಿದ್ದಾರೆ ಅಂತ ತಿಳಿದು ಬಂದಿದೆ.

    ಕಂದಾಯ ಸಚಿವ ಅಶೋಕ್ ಮಾತಾಡಿ, ಗಣೇಶೋತ್ಸವಕ್ಕೆ ವಿನಾಯ್ತಿ ಕೊಡುವಂತೆ ಮನವಿ ಮಾಡಿದ್ದೇವೆ. ಕಳೆದ ಸಲಕ್ಕಿಂತಲೂ ಹೆಚ್ಚು ವಿನಾಯಿತಿ ಕೊಡುವ ಭರವಸೆ ಇದೆ ಅಂತ ಹೇಳಿದ್ದಾರೆ. ಆದರೆ ಹಬ್ಬ ಹರಿದಿನಗಳಿಗೆ ಹೆಚ್ಚಿನ ಅನುಮತಿ ಬೇಡ ಅಂತ ಕೇಂದ್ರ ಗೃಹ ಇಲಾಖೆ, ರಾಜ್ಯದ ಕೊವಿಡ್ ತಾಂತ್ರಿಕ ಸಮಿತಿ ಮತ್ತು ಬಿಬಿಎಂಪಿ ಶಿಫಾರಸ್ಸು ಮಾಡಿರೋ ಕಾರಣ ಷರತ್ತು ಬದ್ಧ ಅನುಮತಿ ನೀಡುವ ಸಾಧ್ಯತೆ ಇದೆ. ಇದನ್ನೂ ಓದಿ: ಕೃಷಿಕರ ಮಗಳಾಗಿದ್ದರಿಂದ ನನಗೆ ಕೃಷಿ ಖಾತೆ ಸಿಕ್ಕಿದೆ: ಶೋಭಾ ಕರಂದ್ಲಾಜೆ

    ಗಣೇಶೋತ್ಸವಕ್ಕೆ ಷರತ್ತಿನ ಅನುಮತಿ..?
    ರಸ್ತೆಯಲ್ಲಿ ಗಣೇಶ ಮೂರ್ತಿ ಕೂರಿಸಲು ಅವಕಾಶ ಇಲ್ಲ. ಪೆಂಡಾಲ್ ಹಾಕಿ ಗಣೇಶ ಉತ್ಸವ ಮಾಡುವಂತಿಲ್ಲ. ಡ್ಯಾನ್ಸ್, ಆರ್ಕೆಸ್ಟ್ರಾ, ಮೆರವಣಿಗೆಗೆ ಅವಕಾಶ ಇಲ್ಲ. ನಿಗದಿತ ಸ್ಥಳಗಳಲ್ಲಿ ಮಾತ್ರ ಮೂರ್ತಿ ವಿಸರ್ಜಿಸಬೇಕು. ಮನೆ ಬಾಗಿಲಿಗೂ ಬರಲಿದೆ ಗಣೇಶ ವಿಸರ್ಜನೆ ಟ್ಯಾಂಕರ್. ಪ್ರಸಾದ ಎಂದು ಮನೆ ಮನೆ ಎದುರು ಜನರ ಕ್ಯೂ ನಿಲ್ಲಿಸುವಂತಿಲ್ಲ. ವಿಸರ್ಜನೆ ವೇಳೆಯೂ 10 ಜನರು ಮಾತ್ರ ಸೇರಲು ಅವಕಾಶ ನೀಡುವ ಸಾಧ್ಯತೆಗಳಿವೆ.

    ಒಂದೆಡೆ ಅಕ್ಟೋಬರ್‍ನಲ್ಲಿ 3ನೇ ಅಲೆ ಆತಂಕದ ಮಧ್ಯೆ, ಸಾರ್ವತ್ರಿಕ ಗಣೇಶೋತ್ಸವಕ್ಕೆ ಅನುಮತಿ ಸಿಗುತ್ತಾ.. ಇಲ್ವಾ..? ಅನುಮತಿ ಕೊಟ್ಟಲ್ಲಿ ಏನೆಲ್ಲಾ ಷರತ್ತು ಇರಲಿದೆ ಅನ್ನೋದರ ನಾಳಿನ ಕ್ಯಾಬಿನೆಟ್ ಸಭೆ ಕುತೂಹಲ ಮೂಡಿಸಿದೆ. ಇದನ್ನೂ ಓದಿ: ಮನೆ ಬಾಗಿಲಲ್ಲೇ ಪಾಲಿಟೆಕ್ನಿಕ್ ಕೋರ್ಸ್‍ಗೆ ದಾಖಲಾದ ವಿದ್ಯಾರ್ಥಿಗೆ ಪೂರ್ಣ ಉಚಿತ ಶಿಕ್ಷಣ: ಅಶ್ವಥ್ ನಾರಾಯಣ

  • ಗಣೇಶೋತ್ಸವದ ಬಗ್ಗೆ ಹೆಚ್ಚು ಪ್ರಶ್ನೆ ಕೇಳಿದ್ದಕ್ಕೆ ಸಿಡಿಮಿಡಿಗೊಂಡ ಕಟೀಲ್

    ಗಣೇಶೋತ್ಸವದ ಬಗ್ಗೆ ಹೆಚ್ಚು ಪ್ರಶ್ನೆ ಕೇಳಿದ್ದಕ್ಕೆ ಸಿಡಿಮಿಡಿಗೊಂಡ ಕಟೀಲ್

    ಧಾರವಾಡ: ಗಣೇಶೋತ್ಸವಕ್ಕೆ ಈಗಾಗಲೇ ಕೌಂಟ್‍ಡೌನ್ ಶುರುವಾಗಿದೆ. ಈ ನಡುವೆ ಸರ್ಕಾರ ಗಣೇಶೋತ್ಸವ ಎಲ್ಲಿ ರದ್ದು ಮಾಡಿದೆ ಎಂದು ಎಂದು ಪ್ರಶ್ನಿಸಿ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಕಿಡಿಕಾರಿದ್ದಾರೆ.

    ಧಾರವಾಡದಲ್ಲಿ ಮಾತನಾಡಿದ ಅವರು, ಕೆಲ ನಿಯಮ ಇವೆ. ಆಚರಣೆಗಿಂತ ಜನರ ಪ್ರಾಣ ಮುಖ್ಯ ಎಂದರು. ಮಹಾರಾಷ್ಟ್ರ, ಕೇರಳ ಹಾಗೂ ನಮ್ಮ ರಾಜ್ಯಕ್ಕೂ ವ್ಯತ್ಯಾಸ ಇದೆ. ಕೇರಳದಲ್ಲಿ ದಿನದಿಂದ ದಿನಕ್ಕೆ ಕೊರೊನಾ ಕೇಸ್ ಏರುತ್ತಿವೆ. ಬೇರೆ ರಾಜ್ಯದ ಗೈಡ್‍ಲೈನ್ಸ್ ನಮಗೆ ಇರಲ್ಲ. ಆಯಾ ರಾಜ್ಯದ ಕೊರೊನಾ ಕೇಸ್ ಮೇಲೆ ನಿರ್ಣಯ ಕೈಗೊಳ್ಳಬೇಕು, ಡಬ್ಲೂಎಚ್‍ಒ ನಿಯಮ ಪಾಲನೆ ಮಾಡಬೇಕು. ರಾಜ್ಯ ಸರ್ಕಾರ ಗಣೇಶೋತ್ಸವ ಮಾಡೇ ಮಾಡುತ್ತದೆ. ಆದರೆ ಹೇಗೆ ಮಾಡಬೇಕು ಎಂದು ನಿರ್ಣಯ ಆಗಲಿದೆ ಎಂದಿದ್ದಾರೆ. ಇನ್ನು ಗಣೇಶೋತ್ಸವದ ಬಗ್ಗೆ ಹೆಚ್ಚು ಪ್ರಶ್ನೆ ಕೇಳುತಿದ್ದಂತೆಯೇ ಕಟೀಲ್ ಸಿಟ್ಟಿನಿಂದ ಎದ್ದು ಹೋಗಿದ್ದಾರೆ. ಇದನ್ನೂ ಓದಿ:ನಂದಿಬೆಟ್ಟದಿಂದ ಮರಳುತ್ತಿದ್ದಾಗ ಯುವಕ, ಯುವತಿಯನ್ನು ಅಡ್ಡಗಟ್ಟಿ ಸುಲಿಗೆ

    nalin kumar kateel

    ಕಳೆದ ವರ್ಷ ಕೊರೊನಾ ಸೋಂಕಿನಿಂದ ಗಣೇಶ ಹಬ್ಬದ ಸಂಭ್ರಮಕ್ಕೆ ಸರ್ಕಾರ ಎಲ್ಲೆಡೆ ಬ್ರೇಕ್ ಹಾಕಿತ್ತು. ಈ ಬಾರಿ ಹಿಂದೂ ಸಂಘಟನೆಗಳ ಜೊತೆ ಬಿಜೆಪಿ ನಾಯಕರೇ ಗಣೇಶೋತ್ಸವ ಆಚರಣೆ ಅನುಮತಿ ನೀಡಬೇಕೆಂದು ಸರ್ಕಾರಕ್ಕೆ ಒತ್ತಡ ಹೇರಿದ್ದಾರೆ. ಹೀಗಾಗಿ ಯಾವ ರೀತಿಯಲ್ಲಿ ಗಣೇಶೋತ್ಸವ ಅಚರಣೆಗೆ ಸರ್ಕಾರ ಅನುಮತಿ ನೀಡಲಿದೆ ಎಂಬ ಕುತೂಹಲ ಈಗ ಮೂಡಿದೆ. ಇದನ್ನೂ ಓದಿ:ಸಿದ್ದರಾಮಯ್ಯ, ಡಿಕೆಶಿ ಕಾಂಗ್ರೆಸ್ಸಿಗರನ್ನು ಕಾಯುವ ಕಾವಲುಗಾರರು: ನಳಿನ್ ಕುಮಾರ್ ಕಟೀಲ್

  • ಆರೋಗ್ಯಕ್ಕೆ ಮೊದಲ ಆದ್ಯತೆ ಆಮೇಲೆ ಆಚರಣೆ: ಸುನೀಲ್ ಕುಮಾರ್

    ಆರೋಗ್ಯಕ್ಕೆ ಮೊದಲ ಆದ್ಯತೆ ಆಮೇಲೆ ಆಚರಣೆ: ಸುನೀಲ್ ಕುಮಾರ್

    -ಸೆಪ್ಟೆಂಬರ್ 1 ರಿಂದ ಉಡುಪಿಯಲ್ಲಿ ಶಾಲಾರಂಭ

    ಉಡುಪಿ: ಗಣೇಶೋತ್ಸವ ಆಚರಣೆ ಬಗ್ಗೆ ಜನರ ಬೇಡಿಕೆ ಇದೆ. ಸಾರ್ವಜನಿಕರ, ಭಕ್ತ ಜನರ ಬೇಡಿಕೆ ಸರಿಯಾಗಿದೆ. ಆದರೆ ಜನರ ಆರೋಗ್ಯ ಕಾಪಾಡುವುದು ಸರ್ಕಾರದ ಮೊದಲ ಆದ್ಯ ಕರ್ತವ್ಯ ಎಂದು ಇಂಧನ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಸುನಿಲ್ ಕುಮಾರ್ ಹೇಳಿದ್ದಾರೆ.

    ಉಡುಪಿಯಲ್ಲಿ ಮಾತನಾಡಿದ ಅವರು, ಕೇಂದ್ರ ಸರ್ಕಾರದ ಸೂಚನೆ ನೋಡಬೇಕು. ತಜ್ಞರು ಹೇಳಿರುವ ವಿಚಾರಗಳನ್ನು ಗಮನಿಸಬೇಕು. ತಜ್ಞರ ಅಭಿಪ್ರಾಯ ನೋಡಿ ಆಚರಣೆಗೆ ಅವಕಾಶ ನೀಡುತ್ತೇವೆ. ಇದನ್ನು ಅರ್ಥ ಮಾಡಿಕೊಂಡು ಜನರು ಸಹಕರಿಸಬೇಕು ಎಂದು ನುಡಿದಿದ್ದಾರೆ. ಇದನ್ನೂ ಓದಿ:ಜೀನ್ಸ್ ಪ್ಯಾಂಟ್‍ಗೆ ಪೇಂಟ್ ನಂತೆ ಚಿನ್ನದ ಲೇಪನ- ಕಳ್ಳನ ಮಾಸ್ಟರ್ ಪ್ಲ್ಯಾನ್

    ಉಡುಪಿ ಜಿಲ್ಲೆಯಲ್ಲಿ ಕೊರೊನಾ ಪಾಸಿಟಿವಿಟಿ ರೇಟ್ ಹೆಚ್ಚಿದ ಕಾರಣಕ್ಕೆ ತರಗತಿಗಳು ಆರಂಭವಾಗಿರಲಿಲ್ಲ. ಈಗ ಕೊರೊನಾ ಸೋಂಕಿತರ ಸಂಖ್ಯೆ ಕಡಿಮೆಯಾಗುತ್ತಿದೆ. ಸೋಂಕು ಹತೋಟಿಗೆ ಬರುತ್ತಿದೆ. ಇದೊಂದು ಆಶಾದಾಯಕ ಬೆಳವಣಿಗೆ. ಕಳೆದ ಮೂರು ದಿನಗಳಲ್ಲಿ ಪಾಸಿಟಿವಿಟಿ ರೇಟ್ ಶೇ.1.4 ಇದೆ. ಈ ಹಿನ್ನೆಲೆಯಲ್ಲಿ ಶಾಲಾರಂಭ ಮಾಡುತ್ತೇವೆ ಎಂದಿದ್ದಾರೆ.

    9ನೇ ತರಗತಿಯಿಂದ ದ್ವಿತೀಯ ಪಿಯುವರೆಗೆ ಶಾಲಾರಂಭ ಮಾಡುತ್ತೇವೆ. ಈ ಬಗ್ಗೆ ಜಿಲ್ಲಾಡಳಿತ ನಿರ್ಣಯ ಕೈಗೊಂಡಿದೆ. ಸೆಪ್ಟಂಬರ್ 1ರಿಂದ ತರಗತಿಗಳು ಆರಂಭವಾಗಲಿದೆ. ಖಾಸಗಿ ಶಿಕ್ಷಣ ಸಂಸ್ಥೆಗಳು ಎಚ್ಚರಿಕೆಯಿಂದ ಗಮನಿಸಬೇಕು. ಶಿಕ್ಷಕರಿಗೆ ಲಸಿಕೆ ಕಡ್ಡಾಯ ಮಾಡಬೇಕು. ಕೋವಿಡ್ ನಿಯಮಾವಳಿ ಅರ್ಥೈಸಿಕೊಂಡು ತರಗತಿ ಆರಂಭಿಸಿ ಎಂದು ಹೇಳಿದ್ದಾರೆ. ಇದನ್ನೂ ಓದಿ:ಬಿಕಿನಿಯಲ್ಲಿ ಪ್ರಿಯಾಂಕಾ ಚೋಪ್ರಾ – ಚಾಕು ಹಿಡಿದ ನಿಕ್

  • ಶುಕ್ರವಾರ ನಮಾಜ್, ಸಂಡೇ ಪ್ರಾರ್ಥನೆ ನಡೆಯುತ್ತಲ್ವಾ? ಗಣೇಶೋತ್ಸವಕ್ಕೂ ಅವಕಾಶ ಕೊಡಿ: ಪ್ರತಾಪ್ ಸಿಂಹ

    ಶುಕ್ರವಾರ ನಮಾಜ್, ಸಂಡೇ ಪ್ರಾರ್ಥನೆ ನಡೆಯುತ್ತಲ್ವಾ? ಗಣೇಶೋತ್ಸವಕ್ಕೂ ಅವಕಾಶ ಕೊಡಿ: ಪ್ರತಾಪ್ ಸಿಂಹ

    ಮೈಸೂರು: ಶುಕ್ರವಾರ ಮಸೀದಿಗಳಲ್ಲಿ ಸಾಮೂಹಿಕ ನಮಾಜ್ ಮಾಡುತ್ತಿಲ್ಲವೇ? ಚರ್ಚ್ ಗಳಲ್ಲಿ ಸಂಡೆ ಮಾಸ್ ನಡೆಯುತ್ತಿಲ್ಲವೇ? ಹಾಗೇ ಸಾಮೂಹಿಕ ಗಣೇಶೋತ್ಸವ ಆಚರಣೆಗೂ ಅವಕಾಶ ನೀಡಿ ಎಂದು ಸಂಸದ ಪ್ರತಾಪ್ ಸಿಂಹ ಒತ್ತಾಯಿಸಿದ್ದಾರೆ.

    ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಶುಕ್ರವಾರ ಮಸೀದಿಗಳಲ್ಲಿ ಸಾಮೂಹಿಕ ನಮಾಜ್, ಚರ್ಚ್ ಗಳಲ್ಲಿ ಸಂಡೆ ಮಾಸ್ ಗೆ ಅವಕಾಶ ನೀಡಲಾಗಿದೆ. ಹಾಗೆಯೇ ಗಣೇಶೋತ್ಸವಕ್ಕೂ ಅವಕಾಶ ನೀಡಿ. ಕೋವಿಡ್ ನಿಯಮಾವಳಿ ಕಟ್ಟುನಿಟ್ಟಿನ ಅನುಷ್ಠಾನ ಮಾಡಿ, ಅವಕಾಶ ಮಾಡಿಕೊಡಿ. ಅದ್ಧೂರಿಯಾಗಿಯೇ ಮಾಡಬೇಕೆಂದು ಹೇಳುತ್ತಿಲ್ಲ. ಆದರೆ ಉತ್ಸವ ನಡೆಯಬೇಕು ಎಂದು ಹೇಳಿದ್ದಾರೆ. ಇದನ್ನೂ ಓದಿ: ಸುಳ್ಳು ಆಪಾದನೆ ಮಾಡಿರುವವರ ವಿರುದ್ಧ ಮಾನನಷ್ಟ ಮೊಕದ್ದಮೆ ದಾಖಲಿಸುತ್ತೇನೆ: ಜಗ್ಗೇಶ್

    ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಎಲ್ಲ ಅಂಶಗಳನ್ನು ಗಣನೆಗೆ ತಡಗೆದುಕೊಂಡಿದ್ದಾರೆ ಎಂಬ ವಿಶ್ವಾಸ ಇದೆ. ಈ ನಿಟ್ಟಿನಲ್ಲಿ ಸೂಕ್ತ ಕ್ರಮ ಕೈಗೊಳ್ಳುತ್ತಾರೆ ಎಂದು ಸಂಸದರು ತಿಳಿಸಿದರು.

    ಸಾಮೂಹಿಕ ಗಣೇಶೋತ್ಸವಕ್ಕೆ ಸರ್ಕಾರ ನಿರ್ಬಂಧ ಹೇರಿದ ಕುರಿತು ಸಾಕಷ್ಟು ಚರ್ಚೆ ನಡೆಯುತ್ತಿದ್ದು, ಸಚಿವ ಸುನಿಲ್ ಕುಮಾರ್ ಹಾಗೂ ಬಸನಗೌಡ ಪಾಟೀಲ್ ಯತ್ನಾಳ್ ಸಹ ಸಾಮೂಹಿಕ ಗಣೇಶೋತ್ಸವಕ್ಕೆ ಅವಕಾಶ ನೀಡಬೇಕೆಂದು ಆಗ್ರಹಿಸಿದ್ದಾರೆ. ಅಲ್ಲದೆ ಹಿಂದೂ ಪರ ಸಂಘಟನೆಗಳು ಸಹ ಸಾಮೂಹಿಕ ಗಣೇಶೋತ್ಸವಕ್ಕೆ ನಿರ್ಬಂಧ ಹೇರಿರುವುದನ್ನು ಖಂಡಿಸಿವೆ.

  • ಗಣೇಶ ಹಬ್ಬ ವಿಜೃಂಭಣೆಯಿಂದ ಆಚರಿಸುವ ಆಶಯ ಇದೆ: ಸಚಿವ ಸುನಿಲ್ ಕುಮಾರ್

    ಗಣೇಶ ಹಬ್ಬ ವಿಜೃಂಭಣೆಯಿಂದ ಆಚರಿಸುವ ಆಶಯ ಇದೆ: ಸಚಿವ ಸುನಿಲ್ ಕುಮಾರ್

    ಬೆಂಗಳೂರು: ಸರ್ಕಾರ ನಿಷೇಧ ಹೇರಿದ್ದರೂ ಗಣೇಶೋತ್ಸವವನ್ನು ವಿಜೃಂಭಣೆಯಿಂದ ಆಚರಿಸುವ ಆಶಯ ಇದೆ ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಚಿವ ಸುನಿಲ್ ಕುಮಾರ್ ಅಭಿಪ್ರಾಯಪಟ್ಟಿದ್ದಾರೆ. ಹೀಗಾಗಿ ಗಣೇಶೋತ್ಸವವನ್ನು ವಿಜೃಂಭಣೆಯಿಂದ ಆಚರಿಸಲು ಸರ್ಕಾರ ಅನುಮತಿ ನೀಡುತ್ತಾ? ರಿಲ್ಯಾಕ್ಷೇಶನ್ ಕೊಡುತ್ತಾ ಎಂಬ ಪ್ರಶ್ನೆ ಇದೀಗ ಎದ್ದಿದೆ.

    ಸಾರ್ವಜನಿಕ ಗಣೇಶೋತ್ಸವಕ್ಕೆ ಸರ್ಕಾರ ಈಗಾಗಲೇ ನಿಷೇಧ ಹೇರಿದೆ. ಗಣೇಶೋತ್ಸವ ಹಬ್ಬ ಆಚರಣೆಗೆ ಸರ್ಕಾರ ಮಾರ್ಗಸೂಚಿಯನ್ನೂ ಬಿಡುಗಡೆ ಮಾಡಿದೆ. ಆದರೆ ಇದೀಗ ಮಾರ್ಗಸೂಚಿ ಪರಾಮರ್ಶೆ ಮಾಡಿ ಹಬ್ಬಕ್ಕೆ ರಿಲ್ಯಾಕ್ಸೇಶನ್ ಕೊಡುವ ಕುರಿತು ಚಿಂತನೆ ನಡೆಸುತ್ತಿದೆ ಎಂಬ ಮಾಹಿತಿ ಲಭ್ಯವಾಗಿದೆ. ಅಲ್ಲದೆ ಸರ್ಕಾರ ನಿಷೇಧ ಹೇರಿದ್ದರೂ ಗಣೇಶೋತ್ಸವವನ್ನು ವಿಜೃಂಭಣೆಯಿಂದ ಆಚರಿಸುವ ಆಶಯ ಇದೆ ಎಂದು ಸಚಿವ ಸುನೀಲ್ ಕುಮಾರ್ ಸೇರಿ ಹಲವು ಸಚಿವರು ಹೇಳಿದ್ದಾರೆ. ಅಲ್ಲದೆ ಶಾಸಕ ಬಸನಗೌಡ ಪಾಟೀಲ್ ಸಹ ವಿಜೃಂಭಣೆಯಿಂದ ಗಣೇಶೋತ್ಸವ ಆಚರಣೆ ಕುರಿತು ಹೇಳಿಕೆ ನೀಡಿದ್ದು, ನಮ್ಮನ್ನು ನಮಗೆ ಗುಂಡು ಹೊಡೆದರೂ ನಾವು ವಿಜೃಂಭಣೆಯಿಂದ ಗಣೇಶೋತ್ಸವ ಆಚರಿಸುತ್ತೇವೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ಗುಂಡು ಹೊಡೆಯೋದಾದ್ರೆ ಹೊಡಿರಿ, ವಿಜೃಂಭಣೆಯಿಂದ ಗಣೇಶೋತ್ಸವ ಆಚರಣೆ: ಸರ್ಕಾರಕ್ಕೆ ಸೆಡ್ಡು ಹೊಡೆದ ಯತ್ನಾಳ್

    ಮತ್ತೊಂದೆಡೆ ಧಾರ್ಮಿಕ ಆಚರಣೆ, ಆರೋಗ್ಯ ಎರಡು ಮುಖ್ಯ. ಧಾರ್ಮಿಕ ಆಚರಣೆ, ವೈಭವೀಕರಣಕ್ಕೆ ಕುಂದು ಬರದಂತೆ ನಿಯಮ ಜಾರಿ ಮಾಡುತ್ತೇವೆ ಎಂದು ಸಚಿವ ಸುನೀಲ್ ಕುಮಾರ್ ಹೇಳಿದ್ದಾರೆ. ಹೀಗಾಗಿ ಗಣೇಶೋತ್ಸವ ಆಚರಣೆಗೆ ಹೊರಡಿಸಿರುವ ಮಾರ್ಗಸೂಚಿ ಬದಲಾವಣೆ ಮಾಡಿ ಸರ್ಕಾರ ಗಣೇಶೋತ್ಸವಕ್ಕೆ ಅವಕಾಶ ಕೊಡುತ್ತಾ ಎಂಬ ಪ್ರಶ್ನೆ ಎದ್ದಿದೆ.

    ಮೂರನೇ ಅಲೆ ಸೆಪ್ಟೆಂಬರ್ ಮೊದಲ ವಾರದಲ್ಲೇ ಕಾಣಿಸಿಕೊಳ್ಳಬಹುದು ಎಂದು ತಜ್ಞರು ಹೇಳಿದ್ದಾರೆ. ಆಗಸ್ಟ್ ಕೊನೆಯವಾರದಲ್ಲಿ ಕೇಸ್ ಏರಿಕೆಯಾಗಿ, ಸೆಪ್ಟೆಂಬರ್ ಮೊದಲ ವಾರದಲ್ಲಿ ಮೂರನೇ ಅಲೆ ಆರಂಭವಾಗಬಹುದು ಎಂದಿದ್ದಾರೆ.

    ಗಣೇಶೋತ್ಸವಕ್ಕೆ ಸರ್ಕಾರದ ಮಾರ್ಗಸೂಚಿ
    – ಸಾರ್ವಜನಿಕ ಗಣೇಶೋತ್ಸವಕ್ಕೆ ನಿಷೇಧ.
    – ಗಣೇಶ ಹಬ್ಬವನ್ನು ಸರಳವಾಗಿ ತಮ್ಮ ಮನೆಗಳಲ್ಲಿ ಆಚರಿಸತಕ್ಕದ್ದು, ಸಾರ್ವಜನಿಕ ಸ್ಥಳಗಳಲ್ಲಿ ಚಪ್ಪರ, ಪೆಂಡಾಲ್, ಶಾಮಿಯಾನ ಹಾಕಿ, ವೇದಿಕೆಗಳನ್ನು ನಿರ್ಮಿಸಿ ಗಣೇಶ ಪ್ರತಿಷ್ಢಾಪನೆ ಮಾಡುವಂತಿಲ್ಲ.
    – ಗಣೇಶ ಮೂರ್ತಿಗಳನ್ನು ತರುವಾಗ ಮತ್ತು ವಿಸರ್ಜಿಸುವಾಗ ಮೆರವಣಿಗೆ ಮತ್ತು ಮನೋರಂಜನಾ ಕಾರ್ಯಕ್ರಮ ಮಾಡುವಂತಿಲ್ಲ.
    – ಪಾರಂಪರಿಕ ಗೌರಿ ಗಣೇಶ ಮೂರ್ತಿಯನ್ನು ಪೂಜಿಸುವವರು ಅವರ ಮನೆಗಳಲ್ಲೇ ವಿಸರ್ಜಿಸುವುದು.
    – ಗಣೇಶ ಮೂರ್ತಿಯನ್ನು ಮಹಾನಗರ ಪಾಲಿಕೆ, ಜಿಲ್ಲಾಡಳಿತಣ ಸ್ಥಳೀಯ ಆಡಳಿತ ನಿರ್ಮಿಸಿರುವ ಹೊಂಡ, ಕಲ್ಯಾಣಿ, ಮೊಬೈಲ್ ಟ್ಯಾಂಕ್ ಗಳಲ್ಲಿ, ಕೃತಕ ವಿಸರ್ಜನಾ ಟ್ಯಾಂಕ್ ಗಳಲ್ಲಿ ವಿಸರ್ಜಿಸುವುದು.
    – ಗಣೇಶ ಹಬ್ಬ ಆಚರಿಸುವ ದೇವಸ್ಥಾನಗಳಲ್ಲಿ ದಿನನಿತ್ಯ ಸ್ಯಾನಿಟೈಸ್ ಮಾಡಬೇಕು. ಭಕ್ತಾದಿಗಳಿಗೆ ಸ್ಯಾನಿಟೈಸರ್ ಮತ್ತು ಥರ್ಮಲ್ ಸ್ಕ್ಯಾನಿಂಗ್ ಮಾಡಬೇಕು.
    – ದರ್ಶನಕ್ಕಾಗಿ ಬರುವ ಭಕ್ತರಿಗೆ ಮಾಸ್ಕ್ ಕಡ್ಡಾಯ, 6 ಅಡಿ ಅಂತರ ಕಾಯ್ದುಕೊಳ್ಳಬೇಕು, ಸರ್ಕಲ್ ನಿರ್ಮಾಣ ಮಾಡಬೇಕು.
    – ಗಣೇಶೋತ್ಸವ ಆಚರಣೆ ಕಾಲಕ್ಕೆ ಪೊಲೀಸ್, ಜಿಲ್ಲಾಡಳಿತ, ಸ್ಥಳೀಯ ಆಡಳಿತ ಹೊರಡಿಸುವ ನಿಯಮಗಳನ್ನ ಪಾಲಿಸುವುದು.

  • ಸರ್ಕಾರ ಸಾರ್ವಜನಿಕ ಗಣೇಶೋತ್ಸವದ ನಿಷೇಧವನ್ನು ಹಿಂಪಡೆಯಬೇಕು: ಶ್ರೀರಾಮಸೇನೆ

    ಸರ್ಕಾರ ಸಾರ್ವಜನಿಕ ಗಣೇಶೋತ್ಸವದ ನಿಷೇಧವನ್ನು ಹಿಂಪಡೆಯಬೇಕು: ಶ್ರೀರಾಮಸೇನೆ

    ಬೆಂಗಳೂರು: ಕೊರೊನಾ ಮೂರನೇ ಅಲೆ ಭೀತಿಯಿಂದ ರಾಜ್ಯ ಸರ್ಕಾರ ಹಿಂದೂ ಧಾರ್ಮಿಕ ಆಚರಣೆಗಳಲ್ಲಿ ಒಂದಾಗಿರುವ ಗಣೇಶೋತ್ಸವವನ್ನು ಈ ಬಾರಿಯೂ ಸಾರ್ವಜನಿಕವಾಗಿ ಆಚರಣೆ ಮಾಡದಂತೆ ಆದೇಶ ಹೊರಡಿಸಿದನ್ನು ಶ್ರೀರಾಮಸೇನೆ ಖಂಡಿಸಿದೆ.

    ಮಾನ್ಯ ಮುಖ್ಯಮಂತ್ರಿಗಳೇ ಸ್ವಾತಂತ್ರ್ಯಪೂರ್ವದಲ್ಲಿ ಸ್ವಾತಂತ್ರ್ಯ ಸೇನಾನಿ ಬಾಲ ಗಂಗಾಧರನಾಥ್ ತಿಲಕರು ಸಾರ್ವಜನಿಕರನ್ನು ಒಟ್ಟುಗೂಡಿಸುವ ದೂರದೃಷ್ಟಿಯಿಂದ ಸಾರ್ವಜನಿಕ ಗಣೇಶೋತ್ಸವ ಪ್ರಾರಂಭಿಸಿದರು. ಈ ಮುಖಾಂತರ ಜನರಲ್ಲಿ ಸ್ವಾತಂತ್ರ್ಯದ ಕಿಚ್ಚನ್ನು ಹೆಚ್ಚಿಸಿದ್ದರು. ಇಂತಹ ಐತಿಹಾಸಿಕ ಮಹತ್ವವುಳ್ಳ ಸಾರ್ವಜನಿಕ ಗಣೇಶೋತ್ಸವವನ್ನು ನಿಷೇಧಿಸಿರುವುದು ಖಂಡನೀಯ. ಈ ವಿಷಯವನ್ನು ಹಿಂದೂಗಳು ಮತ್ತು ಹಿಂದೂ ಸಂಘಟನೆಗಳು ಯಾವುದೇ ಕಾರಣಕ್ಕೂ ಒಪ್ಪಿಕೊಳ್ಳಲು ಸಾಧ್ಯವಿಲ್ಲ. ಈ ಕೂಡಲೇ ಸಾರ್ವಜನಿಕ ಗಣೇಶೋತ್ಸವದ ನಿರ್ಬಂಧವನ್ನು ದಯವಿಟ್ಟು ತೆರವು ಮಾಡಬೇಕು ಎಂದು ಶ್ರೀರಾಮಸೇನೆಯ ರಾಜ್ಯ ಕಾರ್ಯದರ್ಶಿ ಹರೀಶ್ ಒತ್ತಾಯ ಮಾಡಿದ್ದಾರೆ.ಇದನ್ನೂ ಓದಿ: ಗಣೇಶ ಚತುರ್ಥಿ, ಮೊಹರಂ ಹಬ್ಬ ಆಚರಣೆಗೆ ಮಾರ್ಗಸೂಚಿ ಪ್ರಕಟ

    ಒಂದು ಕಡೆ ಖಾಸಗಿ ಶಾಲೆಗಳ ಒತ್ತಾಯಕ್ಕೆ ಮಣಿದು ಶಾಲೆಗಳನ್ನು ಪ್ರಾರಂಭಮಾಡಿ ಮಕ್ಕಳನ್ನು ಗೊಂದಲಕ್ಕೀಡು ಮಾಡಿದ್ದೀರಿ. ಇನ್ನೊಂದು ಕಡೆ ಹಲವು ಮಾರ್ಗಸೂಚಿಗಳನ್ನು ಹೊರಡಿಸುತ್ತಿದ್ದಿರಿ, ಈ ನಿಮ್ಮ ಗೊಂದಲದ ನಿರ್ಧಾರದಿಂದ ದಯವಿಟ್ಟು ಹಿಂದೆ ಸರಿಯಿರಿ. ಇಲ್ಲದೆ ಇದ್ದಲ್ಲಿ ರಾಜ್ಯಾದ್ಯಂತ ಹಿಂದೂ ಸಂಘಟನೆಗಳಿಂದ ಭಾರೀ ಪ್ರತಿಭಟನೆಯನ್ನು ಎದುರಿಸಬೇಕಾಗುತ್ತದೆ ಎಂದು ಎಚ್ಚರಿಕೆಯನ್ನು ನೀಡಿದರು.

  • ಗಣೇಶ ಚತುರ್ಥಿ, ಮೊಹರಂ ಹಬ್ಬ ಆಚರಣೆಗೆ ಮಾರ್ಗಸೂಚಿ ಪ್ರಕಟ

    ಗಣೇಶ ಚತುರ್ಥಿ, ಮೊಹರಂ ಹಬ್ಬ ಆಚರಣೆಗೆ ಮಾರ್ಗಸೂಚಿ ಪ್ರಕಟ

    ಬೆಂಗಳೂರು: ಗೌರಿ ಗಣೇಶ, ಮೊಹರಂ ಸೇರಿದಂತೆ ಧಾರ್ಮಿಕ ಹಬ್ಬ ಆಚರಣೆಗೆ ಮಾರ್ಗಸೂಚಿ ಪ್ರಕಟ ಮಾಡಿ ಸರ್ಕಾರ ಆದೇಶ ಹೊರಡಿಸಿದೆ.

    ಮೊಹರಂ, ಶ್ರೀಕೃಷ್ಣ ಜನ್ಮಾಷ್ಟಮಿ, ಗಣೇಶ ಚತುರ್ಥಿ, ದುರ್ಗಾ ಪೂಜೆ, ಮೊದಲಾದ ಹಬ್ಬಗಳನ್ನು ಆಚರಿಸುವಾಗ ಜನದಟ್ಟಣೆ ತಡೆಗಟ್ಟಲು ಕೆಲ ನಿರ್ಬಂಧಗಳನ್ನು ಜಾರಿ ಮಾಡಲಾಗಿದೆ. ಈ ಆದೇಶದ ಜೊತೆ ರಾಜ್ಯದಲ್ಲಿ ಸಾಮಾಜಿಕ, ಕ್ರೀಡಾ, ರಾಜಕೀಯ, ಶೈಕ್ಷಣಿಕ, ಸಾಂಸ್ಕೃತಿಕ ಜನ ಗುಂಪುಗೂಡುವ ಕಾರ್ಯಕ್ರಮ ನಿಷೇಧಿಸಲಾಗಿದೆ. ಇದನ್ನೂ ಓದಿ: ಚಿಕ್ಕಬಳ್ಳಾಪುರದ ರೇಷ್ಮೆ ಸೀರೆ- ಕುಗ್ರಾಮದ ನೇಕಾರನಿಗೆ ಒಲಿಯಿತು ರಾಜ್ಯ ಮಟ್ಟದ ಪ್ರಶಸ್ತಿ

    ಗಣೇಶೋತ್ಸವ
    – ಗಣೇಶ ಚತುರ್ಥಿಯನ್ನು ಸರಳವಾಗಿ ದೇವಾಲಯದ ಒಳಗಡೆ ಮತ್ತು ಮನೆಯಲ್ಲಿ ಆಚರಿಸಬೇಕು.
    – ಗಣೇಶ ಮೂರ್ತಿಯನ್ನು ತರುವಾಗ ಮತ್ತು ವಿಸರ್ಜಿಸುವಾಗ ಯಾವುದೇ ಮೆರವಣಿಗೆ/ಮನೋರಂಜನಾ ಕಾರ್ಯಕ್ರಮಗಳನ್ನು ಮಾಡುವಂತಿಲ್ಲ.
    – ಗಣೇಶ ಮೂರ್ತಿಯನ್ನು ಮನೆಯಲ್ಲೇ ವಿಸರ್ಜಿಸುವುದು ಅಥವಾ ಸ್ಥಳೀಯ ಆಡಳಿತ ಸಂಸ್ಥೆ ಸೂಚಿಸುವ ಜಾಗದಲ್ಲಿ ವಿಸರ್ಜಿವುದು.

    ಮೊಹರಂ:
    – ಸಾರ್ವಜನಿಕ ಸ್ಥಳಗಳಲ್ಲಿ ಆಲಂಗಳನ್ನು/ ಪಂಜಾವನ್ನು ಸ್ಥಾಪಿಸುವುದನ್ನು ನಿರ್ಬಂಧಿಸಲಾಗಿದೆ.
    – 60 ವರ್ಷಕ್ಕಿಂತ ಮೇಲ್ಪಟ್ಟವರು 10 ವರ್ಷಕ್ಕಿಂತ ಕಡಿಮೆ ವಯಸ್ಸಿನವರು ಮನೆಯಲ್ಲೇ ಪ್ರಾರ್ಥನೆ ಮಾಡಬೇಕು.
    – ಕೋವಿಡ್ 19 ನಿಯಮಗಳನ್ನು ಪಾಲಿಸಿಕೊಂಡು ಮಸೀದಿಯಲ್ಲಿ ಪಾರ್ಥನೆ ಮಾಡಬಹುದು. ಹೆಚ್ಚಿನ ಜನರು ಆಗಮಿಸಿದ್ದಲ್ಲಿ ಪಾಳಿಯಲ್ಲಿ ಸಾಮೂಹಿಕ ಪ್ರಾರ್ಥನೆ ಮಾಡಬಹುದು.

  • ದೀಪಾಳಿಯಲ್ಲಿ ಸಿಡಿದ ಗಣಪತಿ ವಿಸರ್ಜನೆ ವೇಳೆಯ ಗೆಳೆಯನ ಕೋಪ

    ದೀಪಾಳಿಯಲ್ಲಿ ಸಿಡಿದ ಗಣಪತಿ ವಿಸರ್ಜನೆ ವೇಳೆಯ ಗೆಳೆಯನ ಕೋಪ

    – ಆ್ಯಸಿಡ್ ಎರಚಿ ಪರಾರಿಯಾದ ಕುಚುಕು ಗೆಳೆಯ

    ಕಾರವಾರ: ಕುಚುಕು ಗೆಳೆಯರಿಬ್ಬರಲ್ಲಿ ಗಣಪತಿ ವಿಸರ್ಜನೆ ವೇಳೆ ಉಂಟಾದ ಬಿನ್ನಾಭಿಪ್ರಾಯ ದೀಪಾವಳಿಯಲ್ಲಿ ಸಿಡಿದಿದೆ. ಗೆಳೆಯರಿಬ್ಬರ ಹಳೇ ವೈಷಮ್ಯ ಮುಖಕ್ಕೆ ಆ್ಯಸಿಡ್ ಅಂಶವಿರುವ ಕೆಮಿಕಲ್ ಎರಚುವ ಮಟ್ಟಕ್ಕೆ ತಲುಪಿ ಗಲಾಟೆಯಾಗಿದೆ. ಇಂದು ರಾತ್ರಿ ಕಾರವಾರದ ಗ್ರೀನ್ ಸ್ಟ್ರೀಟ್ ಬಳಿ ಈ ಘಟನೆ ನಡೆದಿದೆ.

    ಕಾರವಾರದ ಮಾಜಾಳಿಯ ಹರೀಶ್ ಮತ್ತು ನಿತೇಶ್ ನಾಯ್ಕ ಇಬ್ಬರೂ ಮೊದಲು ಸ್ನೇಹಿತರಾಗಿದ್ದರು. ಹಳೇ ದ್ವೇಷದ ಹಿನ್ನೆಲೆಯಲ್ಲಿ ನಿತೇಶ್ ನಾಯ್ಕಗೆ ಹರೀಶ್ ಗ್ರೀನ್ ಸ್ಟ್ರೀಟ್ ಬಳಿ ಆಸಿಡ್ ಅಂಶವಿರುವ ಕೆಮಿಕಲ್ ಅನ್ನು ಎರಚಿ ಪರಾರಿಯಾಗಿದ್ದಾನೆ.

    ನಿತೇಶ್ ನಾಯ್ಕಗೆ ಆ್ಯಸಿಡ್ ಅಂಶದ ಕೆಮಿಕಲ್ ನಿಂದ ಸಣ್ಣ ಪ್ರಮಾಣದಲ್ಲಿ ಹಾನಿಯಾಗಿದ್ದು, ಅಪಾಯದಿಂದ ಪಾರಾಗಿದ್ದಾನೆ. ಗಾಯಾಳು ನಿತೇಶ್ ನನ್ನು ಕಾರವಾರದ ಸರ್ಕರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಘಟನೆ ಸಂಬಂಧ ಕಾರವಾರ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

     

  • ಗಣೇಶ ವಿರ್ಸಜನೆ ವೇಳೆ ಹುಬ್ಬಳ್ಳಿಯಲ್ಲಿ ಡಬಲ್ ಮರ್ಡರ್

    ಗಣೇಶ ವಿರ್ಸಜನೆ ವೇಳೆ ಹುಬ್ಬಳ್ಳಿಯಲ್ಲಿ ಡಬಲ್ ಮರ್ಡರ್

    ಹುಬ್ಬಳ್ಳಿ: ಹಳೇ ವೈಷಮ್ಯದ ವಿಚಾರವಾಗಿ ಸ್ನೇಹಿತರ ಮಧ್ಯೆ ಮಾರಾಮಾರಿ ನಡೆದು, ಇಬ್ಬರು ಕೊಲೆಯಾಗಿರುವ ಘಟನೆ ಹುಬ್ಬಳ್ಳಿಯಲ್ಲಿ ನಡೆದಿದೆ. ಗಣೇಶ ವಿರ್ಸಜನೆ ವೇಳೆಯೇ ಡಬಲ್ ಮರ್ಡರ್ ನಡೆದಿರುವ ಪರಿಣಾಮ ಹುಬ್ಬಳ್ಳಿ ಜನರು ಬೆಚ್ಚಿ ಬಿದ್ದಿದ್ದಾರೆ.

    ಹುಬ್ಬಳ್ಳಿಯ ಗೋಪನಕೊಪ್ಪ ಬಳಿ ಘಟನೆ ನಡೆದಿದ್ದು, ಹಳೇ ಸ್ನೇಹಿತರಾಗಿದ್ದ ವಡ್ಡರ ಓಣಿಯ ಮಂಜುನಾಥ ಕಬ್ಬಿನ್ ಹಾಗೂ ನಿಯಾಜ್ ಜೋರಮ್ಮನವರ ಕೊಲೆಯಾದ ವ್ಯಕ್ತಿಗಳು ಎಂದು ಗುರುತಿಸಲಾಗಿದೆ. ಘಟನೆಯಲ್ಲಿ ಇನ್ನಿಬ್ಬರಿಗೆ ಗಂಭೀರವಾದ ಗಾಯಗಳಾಗಿವೆ. ಕೊಲೆಗೆ ಹಳೇ ವೈಷಮ್ಯವೇ ಕಾರಣ ಎನ್ನಲಾಗಿದ್ದು, ಮಂಜುನಾಥ ಕಬ್ಬಿನ್ ಜೊತೆ ನಿಯಾಜ್ ಜೋರಮ್ಮನವರ ಪದೇ ಪದೇ ಜಗಳ ಮಾಡುತ್ತಿದ್ದ ಎನ್ನಲಾಗಿದೆ.

    ಈ ಕಾರಣದಿಂದ ನಿಯಾಜ್‍ನ್ನು ಹೊಡೆಯಬೇಕೆಂದು ಕಾದುಕುಳಿತಿದ್ದ ಮಂಜುನಾಥ, ನಿನ್ನೆ ತಡರಾತ್ರಿ ತನ್ನ ಸಹಚರರ ಜೊತೆ ನಿಯಾಜ್‍ನನ್ನು ಹುಡುಕಿಕೊಂಡು ಹೋಗಿ ಹಲ್ಲೆ ಮಾಡಿದ್ದಾನೆ. ಈ ವೇಳೆ ಹಳೆಯ ಸ್ನೇಹಿತರಿಬ್ಬರು ರಾಡ್‍ನಿಂದ ಹೊಡೆದಾಡಿಕೊಂಡು ಇಬ್ಬರು ಕೊಲೆಯಾಗಿದ್ದಾರೆ. ಮತ್ತಿಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ. ಘಟನೆಯ ಬಗ್ಗೆ ಕೇಶ್ವಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ತನಿಖೆ ಮುಂದುವರೆದಿದೆ.

    ಕಳೆದ ವರ್ಷವೂ ಸಹ ಗಣೇಶ ವಿರ್ಸಜನೆ ವೇಳೆಯೇ ಯುವಕನೋರ್ವನಿಗೆ ಚಾಕು ಇರಿದ ಪ್ರಕರಣ ಸಾಕಷ್ಟು ಸುದ್ದಿ ಮಾಡಿತ್ತು. ಹೀಗಾಗಿ ಪೊಲೀಸರು ಬುಧವಾರ ನಗರದಲ್ಲಿ ಸಾಕಷ್ಟು ಬಂದೋಬಸ್ತ್ ಮಾಡಿದ್ದರು. ಆದರೂ ಮಧ್ಯರಾತ್ರಿ ನಡೆದ ಘಟನೆಯಲ್ಲಿ ಇಬ್ಬರು ಕೊಲೆಯಾಗಿದ್ದಾರೆ.

  • ಗಣೇಶ ಹಬ್ಬದ ಜೊತೆ ಮೊಹರಂ – ಒಂದೇ ಮನೆಯಲ್ಲಿ 2 ದೇವರಿಗೆ ಪೂಜೆ

    ಗಣೇಶ ಹಬ್ಬದ ಜೊತೆ ಮೊಹರಂ – ಒಂದೇ ಮನೆಯಲ್ಲಿ 2 ದೇವರಿಗೆ ಪೂಜೆ

    ಧಾರವಾಡ: ಜಾತಿ, ಧರ್ಮದ ಹೆಸರಿನಲ್ಲಿ ಅದೆಷ್ಟು ಯುದ್ಧಗಳು ನಡೆದಿವೆಯೋ ಗೊತ್ತಿಲ್ಲ. ಅದೆಷ್ಟು ಗಲಭೆಗಳು ನಡೆದಿವೆಯೋ ಗೊತ್ತಿಲ್ಲ. ಆದರೆ ಇಲ್ಲೊಬ್ಬರು ವ್ಯಕ್ತಿ ಹಿಂದೂ ಧರ್ಮದ ಹಬ್ಬದ ಜೊತೆಗೆ ಮುಸ್ಲಿಂ ಧರ್ಮದ ಹಬ್ಬವನ್ನು ಆಚರಣೆ ಮಾಡುತ್ತಾ ಬಂದಿದ್ದಾರೆ.

    ಧಾರವಾಡ ನಗರದ ಮೇದಾರ ಓಣಿಯ ಸುಧೀರ ಮುಧೋಳ ಅವರು ಗಣಪತಿ ಹಬ್ಬವನ್ನು ಬಹಳ ವಿಭಿನ್ನವಾಗಿ ಆಚರಣೆ ಮಾಡುತ್ತಾರೆ. ಹಿಂದೂ ಧರ್ಮದವರಾದರೂ ಮೊಹರಂ ಹಬ್ಬವನ್ನೂ ಅಷ್ಟೇ ವಿಭಿನ್ನವಾಗಿ ಆಚರಣೆ ಮಾಡುತ್ತಾರೆ. ಇದೇನಪ್ಪ ಹಿಂದೂ ಆಗಿ ಮೊಹರಂ ಹಬ್ಬ ಆಚರಣೆ ಮಾಡುತ್ತಾರಾ ಎಂದು ನೀವು ಪ್ರಶ್ನೆ ಮಾಡಿದರೆ ತಪ್ಪೇನಿಲ್ಲ. ಕಳೆದ 40 ವರ್ಷಗಳಿಂದ ಮುಧೋಳ ಅವರ ಕುಟುಂಬ ಈ ಗಣಪತಿ ಹಾಗೂ ಮೊಹರಂ ಹಬ್ಬವನ್ನು ವಿಶಿಷ್ಟವಾಗಿ ಆಚರಣೆ ಮಾಡುತ್ತಾ ಬಂದಿದ್ದಾರೆ.

    ಸುಧೀರ್ ಅವರ ತಂದೆ ಮೊದಲು ಮುಸ್ಲಿಂ ಸಮುದಾಯದ ಪಾಂಜಾಗಳು ಪ್ರತಿಷ್ಠಾಪನೆಗೊಳ್ಳುವ ಜಾಗವನ್ನು ಖರೀದಿ ಮಾಡಿದ್ದರು. ಖರೀದಿ ಮಾಡಿದ ಜಾಗದಲ್ಲಿ ಮನೆ ಕಟ್ಟಿಸಿದ ಬಳಿಕವೂ ಮುಸ್ಲಿಂ ಸಂಪ್ರದಾಯದಂತೆ ತಮ್ಮ ಮನೆಯಲ್ಲಿಯೇ ಪಾಂಜಾಗಳನ್ನು ಪ್ರತಿಷ್ಠಾಪನೆ ಮಾಡಿದ್ದರು. ಅದಕ್ಕೆ ಮುಸ್ಲಿಂ ಸಂಪ್ರದಾಯದಂತೆ ಪೂಜೆ ಸಲ್ಲಿಸುತ್ತ ಬಂದಿದ್ದಾರೆ. ಮೊಹರಂ ವೇಳೆಯೇ ಮೂರು ವರ್ಷಕ್ಕೊಮ್ಮೆ ಗಣೇಶ ಚತುರ್ಥಿ ಬರುವುದರಿಂದ ಪಾಂಜಾಗಳನ್ನು ಪ್ರತಿಷ್ಠಾಪನೆ ಮಾಡುವ ಜಾಗದ ಪಕ್ಕವೇ ಗಣೇಶನ ಮೂರ್ತಿಯನ್ನೂ ಪ್ರತಿಷ್ಠಾಪನೆ ಮಾಡಿ ಈ ಕುಟುಂಬ ಪೂಜೆ ಸಲ್ಲಿಸುತ್ತಿದೆ.

    ಇದರಿಂದ ಒಂದೇ ಮನೆಯಲ್ಲಿ ರಾಮನೂ, ರಹೀಮನೂ ನೆಲೆಸುವಂತಾಗಿದೆ. ಕಳೆದ 40 ವರ್ಷಗಳಿಂದ ತಮ್ಮ ಮನೆಯಲ್ಲಿ ಪಾಂಜಾಗಳನ್ನು ಪ್ರತಿಷ್ಠಾಪನೆ ಮಾಡಿ, ಗಣೇಶನನ್ನೂ ಪ್ರತಿಷ್ಠಾಪನೆ ಮಾಡಿ ಪೂಜೆ ಸಲ್ಲಿಸುತ್ತಿದ್ದಾರೆ. ಈ ಮೂಲಕ ಸಮಾಜಕ್ಕೆ ಒಂದು ಭಾವೈಕ್ಯತೆಯ ಸಂದೇಶ ಸಾರುತ್ತಿದ್ದಾರೆ. ತಮ್ಮ ತಂದೆಯ ತರುವಾಯ ತಾವೇ ಪಾಂಜಾಗಳನ್ನು ಪ್ರತಿಷ್ಠಾಪನೆ ಮಾಡುವ ಕಾರ್ಯ ಮಾಡುತ್ತಿದ್ದಾರೆ.