Tag: ganesha festival

  • ಗಣೇಶ ಹಬ್ಬಕ್ಕೆ ಮುನ್ನೆಚ್ಚರಿಕಾ ಕ್ರಮ – ಸರ್ಕಾರದ ಸುತ್ತೋಲೆಯಲ್ಲಿ ಏನಿದೆ?

    ಗಣೇಶ ಹಬ್ಬಕ್ಕೆ ಮುನ್ನೆಚ್ಚರಿಕಾ ಕ್ರಮ – ಸರ್ಕಾರದ ಸುತ್ತೋಲೆಯಲ್ಲಿ ಏನಿದೆ?

    ಬೆಂಗಳೂರು: ಗೌರಿ ಗಣೇಶ ಹಬ್ಬಕ್ಕಾಗಿ ವಿವಿಧ ಇಲಾಖೆಯ ಮಧ್ಯೆ ಸಮನ್ವಯಕ್ಕಾಗಿ ರಾಜ್ಯ ಸರ್ಕಾರ ಸುತ್ತೋಲೆ ಹೊರಡಿಸಿದ್ದು, ಉತ್ಸವಕ್ಕೆ ಮುಂಚಿತವಾಗಿಯೇ ಕೋಮು ಸೌಹಾರ್ದ ಸಭೆ ನಡೆಸುವಂತೆ ತಿಳಿಸಿದೆ.

    ರಾಜ್ಯದ ಎಲ್ಲ ಜಿಲ್ಲಾಧಿಕಾರಿಗಳು, ಪೊಲೀಸ್‌ ಆಯುಕ್ತರು ಹಾಗೂ ಜಿಲ್ಲಾ ಪೊಲೀಸ್‌ ಅಧೀಕ್ಷಕರಿಗೂ ಸೇರಿದಂತೆ ಸುತ್ತೋಲೆ ಬಿಡುಗಡೆ ಮಾಡಿದೆ. ಉತ್ಸವಕ್ಕೂ ಮುಂಚೆ ನಾಗರಿಕ ಸಮಿತಿ, ಮೊಹಲ್ಲಾ ಸಮಿತಿ, ಕಾವಲು ಸಮಿತಿ ಸೇರಿದಂತೆ ಎಲ್ಲಾ ಸಂಘ ಸಂಸ್ಥೆಗಳ ಮುಖ್ಯಸ್ಥರನ್ನು ಒಳಗೊಂಡಂತೆ ಸಭೆ ನಡೆಸಲು ಸೂಚನೆ ನೀಡಿದೆ. ಇದನ್ನೂ ಓದಿ: ಮುಸ್ಲಿಂ ಕಾನೂನಿನಲ್ಲಿ ಪೋಷಕರ ಅನುಮತಿಯಿಲ್ಲದೇ ಅಪ್ರಾಪ್ತೆ ವಿವಾಹವಾಗಬಹುದು: ಕೋರ್ಟ್‌

    ಆಗಸ್ಟ್‌ 30ರಿಂದ ಗೌರಿ ಗಣೇಶ ಹಬ್ಬವನ್ನು ರಾಜ್ಯದಲ್ಲಿ ಸಂಭ್ರಮದಿಂದ ಆಚರಿಸಲಾಗುತ್ತದೆ. ಈ ಹಬ್ಬದ ಹಿನ್ನೆಲೆಯಲ್ಲಿ ಗಣೇಶ ಮೂರ್ತಿಯನ್ನು ಪ್ರತಿಷ್ಠಾಪಿಸುವ ಪ್ರಕ್ರಿಯ ಸಾಮಾನ್ಯವಾಗಿದ್ದು, ಈ ಸಂದರ್ಭದಲ್ಲಿ ಉತ್ಸವವನ್ನು ಆಯೋಜಿಸುವ ಆಯೋಜಕರಿಗೆ ಪರವಾನಗಿ ನೀಡುವುದು ವಿವಿಧ ಇಲಾಖೆಗಳ ಜವಾಬ್ದಾರಿಯಾಗಿರುತ್ತದೆ. ಈ ಕಾರ್ಯವನ್ನು ಸುಗಮಗೊಳಿಸುವ ನಿಟ್ಟಿನಲ್ಲಿ ಮಹಾನಗರಪಾಲಿಕೆ ಹಾಗೂ ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ಕ್ರಮ ವಹಿಬೇಕು ಎಂದು ಹೇಳಿದೆ. ಇದನ್ನೂ ಓದಿ:  ಎಲ್ಲರೂ ನೂಪುರ್‌ಗೆ ಕ್ಷಮೆ ಕೇಳುವಂತೆ ಹೇಳಿದರು, ಆದರೆ ನಾನು ಮಾತ್ರ ಬೆಂಬಲ ನೀಡಿದ್ದೇನೆ: ರಾಜ್ ಠಾಕ್ರೆ

    ಸರ್ಕಾರದ ಸುತ್ತೋಲೆಯಲ್ಲಿ ಏನಿದೆ?

    1. ಣೇಶ ಪ್ರತಿಷ್ಠಾಪನೆಗೆ ಅಗತ್ಯವಿರುವ ಸ್ಥಳ, ಪೆಂಡಾಲ್ ವಿದ್ಯುತ್ ಸಂಪರ್ಕ, ಪರವಾನಗಿಗಳನ್ನು ನೀಡಲು ಕಂದಾಯ, ಲೋಕೋಪಯೋಗಿ, ಇಂಧನ ಅಗ್ನಿಶಾಮಕ, ಪೋಲಿಸ್ ಇಲಾಖೆಗಳು ಹಾಗೂ ನಗರ ಸ್ಥಳೀಯ ಸಂಸ್ಥೆಗಳು ಸಂಯೋಜಿತವಾಗಿ ಪರವಾನಗಿ ನೀಡಲು ಸೂಕ್ತ ಕ್ರಮ ವಹಿಸುವುದು.
    2. ಲ್ಲಾ ನಗರ ಸ್ಥಳೀಯ ಸಂಸ್ಥೆಗಳು ಪ್ರತಿ ವಾರ್ಡ್‌ಗಳ ಮಟ್ಟದಲ್ಲಿ ಸಂಬಂಧಿಸಿದ ವಿವಿಧ ಇಲಾಖೆಗಳ ಪ್ರತಿನಿಧಿಗಳನ್ನು ಒಳಗೊಂಡಂತೆ ಏಕಗವಾಕ್ಷಿ ವ್ಯವಸ್ಥೆಯನ್ನು ಸ್ಥಾಪಿಸಿ ಪ್ರಚಾರ ಮಾಡುವುದು.
    3. ಕಾರ್ಯಕ್ರಮದ ಆಯೋಜಕರು ನಿಗಧಿತ ನಮೂನೆಯಲ್ಲಿ ಮುಂಚಿತವಾಗಿಯೇ ಅರ್ಜಿ ಸಲ್ಲಿಸುವುದು ಹಾಗೂ ಆಯೋಜಕರು ಸಲ್ಲಿಸುವ ಅರ್ಜಿಗಳನ್ನು ಸಂಬಂಧಿಸಿದ ಇಲಾಖೆಗಳು ಜಂಟಿ ತಪಾಸಣೆ ಮಾಡಿ 3 ದಿನಗಳ ಒಳಗೆ ಪರವಾನಗಿ ನೀಡಲು ಕ್ರಮ ವಹಿಸುವುದು.
    4. ರವಾನಿಗೆ ನೀಡುವ ಮುನ್ನ ಆಯೋಜಕರಿಂದ ಸರ್ಕಾರ ಹಾಗೂ ನ್ಯಾಯಾಲಯದ ಆದೇಶಗಳನ್ನು ಪಾಲಿಸುವ ಬಗ್ಗೆ ಮುಚ್ಚಳಿಕೆ ಪಡೆಯುವುದು
    5. ಸಾರ್ವಜನಿಕ ಸುರಕ್ಷತೆ ಹಾಗೂ ಪರಿಸರ ಮಾಲಿನ್ಯ ಉಂಟಾಗದ ರೀತಿ ಕಾರ್ಯಕ್ರಮ ವಹಿಸುವಂತೆ ಆಯೋಜಕರಿಗೆ ಸೂಚಿಸುವುದು.
    6. ಸಿಸಿಟಿವಿ ಕ್ಯಾಮರಾಗಳನ್ನು ಅಳವಡಿಸುವಂತೆ ಆಯೋಜಕರಿಗೆ ಸೂಚಿಸುವುದು.
    7. ವಿಶೇಷವಾಗಿ ಹೈ-ಟೆನ್ನನ್ ತಂತಿ ಹಾದು ಹೋಗಿರುವ ಪ್ರದೇಶಗಳಲ್ಲಿ ಯಾವುದೇ ಕಾರಣಕ್ಕೂ ಗಣೇಶ ಮೂರ್ತಿಯನ್ನು ಸ್ಥಾಪಿಸಲು ಅನುಮತಿ ಕೊಡುವಂತಿಲ್ಲ.
    8. ತ್ಸವಕ್ಕೆ ಮುಂಚಿತವಾಗಿ ನಾಗರೀಕ ಸಮಿತಿ, ಮೊಹಲ್ಲಾ ಸಮಿತಿ, ಕಾವಲು ಸಮಿತಿ ಮತ್ತಿತರ ಎಲ್ಲಾ ಸಂಘಸಂಸ್ಥೆಗಳ ಮುಖ್ಯಸ್ಥರನ್ನು ಒಳಗೊಂಡಂತೆ ಕೋಮು ಸೌಹಾರ್ದ ಸಭೆಗಳನ್ನು ಆಯೋಜಿಸಲು ಕ್ರಮ ವಹಿಸುವುದು.

    Live Tv
    [brid partner=56869869 player=32851 video=960834 autoplay=true]

  • ಶಾಲೆಯಲ್ಲಿ ಗಣೇಶನ ಕೂರಿಸ್ಬೇಡಿ ಅಂದಿಲ್ಲ- ನಮಾಜ್‌ಗೆ ಅವಕಾಶ ಕೊಡೋಕೆ ಸಾಧ್ಯವೇ ಇಲ್ಲ: BC ನಾಗೇಶ್

    ಶಾಲೆಯಲ್ಲಿ ಗಣೇಶನ ಕೂರಿಸ್ಬೇಡಿ ಅಂದಿಲ್ಲ- ನಮಾಜ್‌ಗೆ ಅವಕಾಶ ಕೊಡೋಕೆ ಸಾಧ್ಯವೇ ಇಲ್ಲ: BC ನಾಗೇಶ್

    ಬೆಂಗಳೂರು: ಶಿಕ್ಷಣ ಇಲಾಖೆ ಯಾವುದೇ ಶಾಲೆಯಲ್ಲಿ ಗಣೇಶಮೂರ್ತಿಯನ್ನ ಕೂರಿಸಿ ಅಂತ ಅನುಮತಿಯೂ ಕೊಟ್ಟಿಲ್ಲ, ಕೂರಿಸಬೇಡಿ ಅಂತಾನೂ ಹೇಳಿಲ್ಲ. ಆದ್ರೆ ನಮಾಜ್‌ಗೆ ಅವಕಾಶ ಕೊಡೋಕೆ ಸಾಧ್ಯವೇ ಇಲ್ಲ ಎಂದು ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಹೇಳಿದ್ದಾರೆ.

    ಶಾಲೆಯಲ್ಲಿ ಗಣೇಶೋತ್ಸವ ಆಚರಿಸುವ ಬಗ್ಗೆ ಪಬ್ಲಿಕ್ ಟಿವಿಯೊಂದಿಗೆ ಮಾತನಾಡಿದ ಅವರು, ಶಿಕ್ಷಣ ಇಲಾಖೆ ಯಾವುದೇ ಶಾಲೆಯಲ್ಲಿ ಗಣೇಶ ಕೂರಿಸಿ ಅಂತ ಅನುಮತಿಯೂ ಕೊಟ್ಟಿಲ್ಲ, ಕೂರಿಸಬೇಡಿ ಅಂತಾನೂ ಹೇಳಿಲ್ಲ. ಯಾವುದೇ ಮಾರ್ಗಸೂಚಿ, ಅನುಮತಿಯನ್ನು ಕೊಟ್ಟಿಲ್ಲ ಎಂದು ಉತ್ತರಿಸಿದ್ದಾರೆ. ಇದನ್ನೂ ಓದಿ: ಗಣೇಶೋತ್ಸವ ಆಚರಿಸಿದ್ರೆ ಶಾಲೆಯಲ್ಲಿ ನಮಾಜ್‌ಗೆ ಅವಕಾಶ ನೀಡಿ

    ಹಿಂದೆ ಯಾವ ನಿಯಮಗಳು ಇದ್ದವೋ ಅದೇ ನಿಯಮ ಈಗಲೂ ಇವೆ. ಗಣೇಶ ಹಬ್ಬ ಬಿಜೆಪಿ ಸರ್ಕಾರ ಬಂದಾಗಿನಿಂದ ಮಾಡಿದ್ದು ಅಲ್ಲ. ಬ್ರಿಟಿಷರ ಕಾಲದಿಂದಲೂ ಗಣೇಶೋತ್ಸವ ಮಾಡಿಕೊಂಡು ಬರಲಾಗ್ತಿದೆ. ಹಿಂದೆ ಯಾವ ರೀತಿ ನಡೆಯುತ್ತಿತ್ತೋ ಅದೇ ರೀತಿ ನಡೆದುಕೊಂಡು ಬರಲಿದೆ. ಶಿಕ್ಷಣ ಇಲಾಖೆಯಿಂದ ಅನುಮತಿ ಕೊಟ್ಟಿದ್ದಾರೆ ಅನ್ನೋದು ಸುಳ್ಳು ಸುದ್ದಿ ಎಂದು ಸ್ಪಷ್ಟಪಡಿಸಿದ್ದಾರೆ.

    ಈಗ ಇರೋ ನಿಯಮಗಳೇ ಮುಂದೆಯೂ ಇರಲಿದೆ. ನಮಾಜ್‌ಗೆ ಅವಕಾಶ ಕೊಡೋಕೆ ಸಾಧ್ಯವೇ ಇಲ್ಲ. ಶಾಲೆಗಳಲ್ಲಿ ಹೊಸ ಹೊಸ ಸಂಪ್ರದಾಯ ಹುಟ್ಟುಹಾಕೋಕೆ ಅವಕಾಶ ಇಲ್ಲ ಎಂದು ಸಚಿವರು ಹೇಳಿದ್ದಾರೆ. ಇದನ್ನೂ ಓದಿ: ‘ದಿ ಕಾಶ್ಮೀರ್ ಫೈಲ್ಸ್’ ಸಿನಿಮಾವನ್ನು ದ್ವೇಷದ ಕಸಕ್ಕೆ ಹೋಲಿಸಿದ ನಿರ್ದೇಶಕ ಡಿಲನ್ ಮೋಹನ್ ಗ್ರೇ

    ಮುಸ್ಲಿಂ ಮುಖಂಡ ಉಮರ್ ಷರೀಫ್ ಸಹ ಈ ಬಗ್ಗೆ ಮಾತನಾಡಿದ್ದು, ಗಣಪ ಓಕೆ ಹಿಜಬ್‌ಗೂ ಹೀಗೆ ಅವಕಾಶ ಕೊಡಿ. ಒಂದು ಧರ್ಮಕ್ಕೆ ನ್ಯಾಯ ಇನ್ನೊಂದು ಧರ್ಮಕ್ಕೆ ಅನ್ಯಾಯ ಯಾಕೆ ಅಂತಾ ಪ್ರಶ್ನಿಸಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಗಣೇಶೋತ್ಸವ ಆಚರಿಸಿದ್ರೆ ಶಾಲೆಯಲ್ಲಿ ನಮಾಜ್‌ಗೆ ಅವಕಾಶ ನೀಡಿ

    ಗಣೇಶೋತ್ಸವ ಆಚರಿಸಿದ್ರೆ ಶಾಲೆಯಲ್ಲಿ ನಮಾಜ್‌ಗೆ ಅವಕಾಶ ನೀಡಿ

    ಬೆಂಗಳೂರು: ಗೌರಿ-ಗಣೇಶ ಹಬ್ಬದಂದು ಶಾಲಾ, ಕಾಲೇಜಿನಲ್ಲಿ ಗಣೇಶನ ಮೂರ್ತಿ ಕೂರಿಸಿ ವಿಜೃಂಭಣೆಯಿಂದ ಆಚರಿಸೋದು ಸಾಮಾನ್ಯ. ಆದರೀಗ ಕರ್ನಾಟಕದ ಹಿಜಬ್ ವಿವಾದ ಈಗ ಗಣಪನಿಗೆ ವಿಘ್ನ ತರುವಂತೆ ಕಂಡಿದೆ.

    ಶಾಲಾ, ಕಾಲೇಜುಗಳಲ್ಲಿ ಅವಕಾಶ ಇಲ್ಲವೆಂದ ಮೇಲೆ ಗಣಪನಿಗೆ ಯಾಕೆ ಅಂತಾ ಪ್ರಶ್ನಿಸಿದೆ. ಇದರ ವಿರುದ್ಧ ಕೆರಳಿರುವ ಮುಸ್ಲಿಂ ಸಂಘಟನೆಗಳು ಕ್ಯಾಂಪಸ್ ನಲ್ಲಿ ಗಣೇಶೋತ್ಸವ ಆಚರಣೆ ಮಾಡಿದರೆ ನಮಾಜ್‌ಗೂ ಅವಕಾಶ ಕೊಡಿ ಎಂದು ವಾದ ಮುಂದಿಟ್ಟಿವೆ. ಇದನ್ನೂ ಓದಿ: ಕ್ಲಬ್‌ಹೌಸ್‌ನಲ್ಲಿ ಪಾಕಿಸ್ತಾನ ಪರ ಘೋಷಣೆ- ವಿಕೃತಿ ಮೆರೆದ ಕಿಡಿಗೇಡಿಗಳ ವಿರುದ್ಧ FIR

    ವಕ್ಫ್ ಬೋರ್ಡ್ ಬೇಡಿಕೆಗಳೇನು?

    • ನಮ್ಮ ಧಾರ್ಮಿಕ ಹಬ್ಬಗಳ ಆಚರಣೆಗೂ ಅವಕಾಶ ಮಾಡಿಕೊಡಬೇಕು.
    • ಎಲ್ಲಾ ಧರ್ಮದ ಮಕ್ಕಳಿಗೂ ಸಮಾನ ಅವಕಾಶ ಸಿಗಬೇಕು.
    • ಗಣೇಶ ಹಬ್ಬದಂತೆ ಈದ್ ಮಿಲಾದ್ ಹಬ್ಬದ ಆಚರಣೆಗೂ ಅವಕಾಶ ಕೊಡಬೇಕು.
    • ನಮಾಜ್‌ಗೆ ಪ್ರತ್ಯೇಕ ಕೊಠಡಿ ಮೀಸಲಿಡುವಂತೆ ಮನವಿ.
    • ಪ್ರತಿ ಮಕ್ಕಳಿಗೂ ಧರ್ಮದ ಕುರಿತು ಅರಿವು ಮೂಡಿಸಬೇಕು.
    • ನೈತಿಕ ಶಿಕ್ಷಣ ಅಡಿ ಧಾರ್ಮಿಕ ಪಾಠ ಮಕ್ಕಳಿಗೆ ನೀಡಬೇಕು.
    • ಇಸ್ಲಾಮಿಕ್ ಆಚರಣೆಗೂ ಕೂಡಾ ಅವಕಾಶ ಕೊಡಬೇಕು.
    • ಹಿಜಾಬ್ ಗೂ ಅವಕಾಶ ಮಾಡಿಕೊಡಿ. ಇಷ್ಟವಿದ್ದ ಮಕ್ಕಳು ಹಿಜಬ್ ಧರಿಸಲಿ.

    Live Tv
    [brid partner=56869869 player=32851 video=960834 autoplay=true]

  • ಈದ್ಗಾ ಮೈದಾನದಲ್ಲಿ ಶಿವಲಿಂಗ ಪ್ರತಿಷ್ಠಾಪನೆಗೆ ಪ್ಲ್ಯಾನ್‌ – ವಿವಾದ ತಿಳಿಗೊಳಿಸಲು ಶಾಂತಿ ಸಭೆ

    ಈದ್ಗಾ ಮೈದಾನದಲ್ಲಿ ಶಿವಲಿಂಗ ಪ್ರತಿಷ್ಠಾಪನೆಗೆ ಪ್ಲ್ಯಾನ್‌ – ವಿವಾದ ತಿಳಿಗೊಳಿಸಲು ಶಾಂತಿ ಸಭೆ

    ಬೆಂಗಳೂರು: ಚಾಮರಾಜಪೇಟೆ ಆಟದ ಮೈದಾನ ವಿವಾದ ದಿನಕ್ಕೊಂದು ತಿರುವು ಪಡೆಯುತ್ತಿದೆ. ಮೈದಾನ ಕಂದಾಯ ಇಲಾಖೆಗೆ ಸೇರಿದ್ದು ಎಂದು ಬಿಬಿಎಂಪಿ ಸ್ಪಷ್ಟಪಡಿಸುತ್ತಿದ್ದಂತೆ ವಿವಾದ ಮತ್ತಷ್ಟು ತಾರಕಕ್ಕೇರುತ್ತಿದೆ.

    ಸ್ವಾತಂತ್ರ್ಯ ದಿನಾಚರಣೆಗಾಗಲಿ, ಗಣೇಶೋತ್ಸವಕ್ಕಾಗಲಿ ಯಾರಾದ್ರೂ ಅರ್ಜಿ ಸಲ್ಲಿಸಿದರೆ ಮುಂದಿನ ನಿರ್ಧಾರ ಮಾಡೋದಾಗಿ ಸಚಿವ ಅಶೋಕ್ ಹೇಳಿದ್ದರು. ಈ ಬೆನ್ನಲ್ಲೇ ಗಣೇಶೋತ್ಸವಕ್ಕೆ ಪ್ರತ್ಯೇಕವಾಗಿ ಅನುಮತಿ ಕೋರಿ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಲು ಶ್ರೀರಾಮಸೇನೆ, ಹಿಂದೂ ಸಂಘಟನೆಗಳು ಮುಂದಾಗಿವೆ. ಇದನ್ನೂ ಓದಿ: ಬಳ್ಳಾರಿಯಲ್ಲಿ ಶುರುವಾಗುತ್ತಾ ಮೈನಿಂಗ್ ಚಾಪ್ಟರ್ 2? – ಅನುಮತಿ ಕೇಳಿದ ರೆಡ್ಡಿ

    ಒಂದು ವೇಳೆ ಗಣೇಶೋತ್ಸವಕ್ಕೆ ಅನುಮತಿ ಕೊಡದಿದ್ರೆ, ಇದೇ ಮೈದಾನದಲ್ಲಿ ಶಿವಲಿಂಗ ಸ್ಥಾಪನೆ ಮಾಡುತ್ತೇವೆ ಎಂದು ಎಚ್ಚರಿಕೆ ನೀಡಿವೆ. ಅಲ್ಲದೇ ಚಾಮರಾಜಪೇಟೆ ಮೈದಾನದಲ್ಲಿ ಗಣೇಶೋತ್ಸವ ಮಾಡೇ ಮಾಡ್ತೀವಿ ಎಂದು ಶ್ರೀ ರಾಮಸೇನೆ ಬೆಂಗಳೂರು ಘಟಕ ಸಾಮಾಜಿಕ ಜಾಲತಾಣದಲ್ಲಿ ಸವಾಲು ಹಾಕಿದೆ. ಇದನ್ನೂ ಓದಿ: ನಾನು ಉತ್ಸವ ಮಾಡೋಕೆ ಹೋಗಿಲ್ಲ- ಸಚಿವರು ಕಾಣೆಯಾಗಿದ್ದಾರೆ ಎಂದ ಕಾಂಗ್ರೆಸ್‌ಗೆ ಬಿ.ಸಿ ಪಾಟೀಲ್ ಟಾಂಗ್

    ಇನ್ನೂ ಈದ್ಗಾ ಮೈದಾನವನ್ನು ಇಂಥದ್ದಕ್ಕೇ ಕೊಡ್ಬೇಕು ಎಂಬ ಜಮೀರ್ ವಾದ ಸರಿಯಲ್ಲ ಎಂದು ಸಚಿವ ಅಶ್ವಥ್‌ನಾರಾಯಣ್ ಹೇಳಿದ್ದಾರೆ. ಇಷ್ಟೆಲ್ಲಾ ಬೆಳವಣಿಗೆ ನಡುವೆ ಕೇಂದ್ರ ವಲಯ ಡಿಸಿಪಿ, ಧಾರ್ಮಿಕ ಮುಖಂಡರ ಜೊತೆ ಶಾಂತಿ ಸಭೆ ನಡೆಸಿದ್ದಾರೆ. ಆದರೆ ಯಾವುದೇ ಕಾರಣಕ್ಕೂ ಧ್ವಜಾರೋಹಣ ನಿರ್ಧಾರದಿಂದ ಹಿಂದೆ ಸರಿಯಲ್ಲ ಅಂತ ಚಾಮರಾಜಪೇಟೆ ನಾಗರಿಕರ ವೇದಿಕೆ ಎಚ್ಚರಿಕೆ ಕೊಟ್ಟಿದೆ. ಮುಂಜಾಗ್ರತಾ ಕ್ರಮವಾಗಿ ಆಟದ ಮೈದಾನಕ್ಕೆ ಬಿಗಿ ಭದ್ರತೆ ಕಲ್ಪಿಸಲಾಗಿದೆ.

    Live Tv
    [brid partner=56869869 player=32851 video=960834 autoplay=true]

  • ಗಣೇಶ ವಿಸರ್ಜನೆ ಮಾಡಲು ಹೋಗಿ ಯುವಕ ನೀರು ಪಾಲು

    ಗಣೇಶ ವಿಸರ್ಜನೆ ಮಾಡಲು ಹೋಗಿ ಯುವಕ ನೀರು ಪಾಲು

    ಕಲಬುರಗಿ: ಗಣೇಶ ವಿಸರ್ಜನೆ ವೇಳೆ ನದಿಯಲ್ಲಿ ಮುಳಗಿ ಯುವಕ ಸಾವನಪ್ಪಿರುವ ಘಟನೆ, ಕಲಬುರಗಿ ಜಿಲ್ಲೆಯ ಜೇವರ್ಗಿ ತಾಲ್ಲೂಕಿನ ಅಂಕಲಗಾ ಗ್ರಾಮದಲ್ಲಿ ಇಂದು ಸಾಯಂಕಾಲ ನಡೆದಿದೆ.

    ಗಿರೀಶ್ ಚಹ್ವಾಣ್(25) ಮೃತನಾಗಿದ್ದಾನೆ. ಗಣೇಶ ವಿಸರ್ಜನೆ ಮಾಡುವ ವೇಳೆ ನೀರಲ್ಲಿ ಮೃತನಾಗಿದ್ದಾನೆ. ಗಣೇಶ ಮುಳಗಿಸೋದಕ್ಕೆ ನದಿಯ ಒಳಗೆ ಗಿರೀಶ್ ತೆರಳಿದ್ದಾನೆ. ಆದರೆ ನದಿಯಲ್ಲಿ ನೀರಿನ ಸೆಳೆತ ಹೆಚ್ಚಾದ ಹಿನ್ನಲೆ ನದಿಯಲ್ಲಿ ಯುವಕ ಕೊಚ್ಚಿಕೊಂಡು ಹೋಗಿದ್ದಾನೆ. ಇದನ್ನೂ ಓದಿ:  ಅಗಲಿದ ಕಾಂಗ್ರೆಸ್ ನಾಯಕ ಆಸ್ಕರ್‌ಗೆ ಉಡುಪಿ ಬಿಜೆಪಿ ಕಚೇರಿಯಲ್ಲಿ ಶ್ರದ್ಧಾಂಜಲಿ

    ಸ್ಥಳಕ್ಕೆ ನೆಲೋಗಿ ಪೊಲೀಸರ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ. ನಾಳೆ ಬೆಳಗ್ಗೆ ಅಗ್ನಿಶಾಮಕದಳದ ಅಧಿಕಾರಿಗಳು ಸಹ ನೀರಿನಲ್ಲಿ ಕೊಚ್ಚಿ ಹೋದ ಯುವಕನಿಗಾಗಿ ಶೋಧ ನಡೆಸಲ್ಲಿದ್ದಾರೆ.

  • ಗಣೇಶ ಹಬ್ಬದಲ್ಲಿ ನಿರಾಶ್ರಿತರೊಂದಿಗೆ ಕುಣಿದು ಕುಪ್ಪಳಿಸಿದ ತಹಶೀಲ್ದಾರ್

    ಗಣೇಶ ಹಬ್ಬದಲ್ಲಿ ನಿರಾಶ್ರಿತರೊಂದಿಗೆ ಕುಣಿದು ಕುಪ್ಪಳಿಸಿದ ತಹಶೀಲ್ದಾರ್

    ದಾವಣಗೆರೆ: ಗಣೇಶ ಹಬ್ಬದ ಸಮಯದಲ್ಲಿ ದಾವಣಗೆರೆ ತಹಶೀಲ್ದಾರ್ ಮಸ್ತ್ ಮಸ್ತ್ ಸ್ಟೆಪ್ ಹಾಕಿರುವ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.

    Tahsildar Dance

    ದಾವಣಗೆರೆಯ ತುರ್ಚಘಟ್ಟ ಬಳಿ ಇರುವ ನಿರಾಶ್ರಿತರ ಪರಿಹಾರ ಕೇಂದ್ರದಲ್ಲಿ ತಹಶೀಲ್ದಾರ್ ಗಿರೀಶ್‍ರವರು ಗಣಪತಿ ಪ್ರತಿಷ್ಟಾಪನೆ ಮಾಡಿದ್ದರು. ಈ ಕೇಂದ್ರದಲ್ಲಿ ಭಿಕ್ಷೇ ಬೇಡುವವರನ್ನು, ಯಾರು ಇಲ್ಲದ ಅನಾಥರು ವಾಸವಾಗಿದ್ದು, ನಿರಾಶ್ರಿತರಿಗೆ ಆತ್ಮಸ್ಥೈರ್ಯ ತುಂಬುವ ನಿಟ್ಟಿನಲ್ಲಿ ಮನೋರಂಜನಾ ಕಾರ್ಯಕ್ರಮವನ್ನು ಏರ್ಪಡಿಸಲಾಗಿತ್ತು. ಇದನ್ನೂ ಓದಿ: ಇಂದಿನಿಂದ ಮಳೆಗಾಲದ ಅಧಿವೇಶನ ಆರಂಭ- ಕಾಂಗ್ರೆಸ್, ಬಿಜೆಪಿ ಮಧ್ಯೆ ಗದ್ದುಗೆ ಗುದ್ದಾಟ

    Tahsildar Dance

    ಈ ವೇಳೆ ನಿರಾಶ್ರಿತರೊಂದಿಗೆ ತಹಶೀಲ್ದಾರ್ ಗಿರೀಶ್‍ರವರು ಕುಲದಲ್ಲಿ ಕೀಳ್ಯಾವುದೋ ಹುಚ್ಚಪ್ಪ ಹಾಡಿಗೆ ನೃತ್ಯ ಮಾಡಿದ್ದಾರೆ. ತಹಶೀಲ್ದಾರ್ ಜೊತೆ ನಿರಾಶ್ರಿತರು, ಸಿಬ್ಬಂದಿಗಳು ಕೂಡ ಕುಣಿದು ಕುಪ್ಪಳಿಸಿದ್ದಾರೆ. ಒಟ್ಟಾರೆ ಗಣಪತಿ ಹಬ್ಬವನ್ನು ಸಂಭ್ರಮದಿಂದ ಆಚರಿಸಿದ ನಿರಾಶ್ರಿತರು, ಕೊನೆಗೆ ಮೂರು ದಿನಗಳಿಂದ ಪ್ರತಿಷ್ಟಾಪನೆ ಮಾಡಿದ್ದ ಗಣಪತಿಯನ್ನು ವಿಸರ್ಜನೆ ಮಾಡಿದ್ದಾರೆ. ಇದನ್ನೂ ಓದಿ: ನಾನು ಕೂಡು ಒಕ್ಕಲಿಗ ಪಂಗಡದವನು, ಆದರೆ ನಾವು ಲಿಂಗಾಯತರು: ಎಂ.ಬಿ.ಪಾಟೀಲ್

  • ಗಣೇಶ ವಿಸರ್ಜನೆ ವೇಳೆ ಯುವಕ ನೀರು ಪಾಲು

    ಗಣೇಶ ವಿಸರ್ಜನೆ ವೇಳೆ ಯುವಕ ನೀರು ಪಾಲು

    ಚಿತ್ರದುರ್ಗ: ಸಡಗರ ಸಂಭ್ರಮದಿಂದ ಗಣಪತಿ ಮಹೋತ್ಸವ ಆಚರಿಸಿದ್ದ ಯುವಕ, ಗಣೇಶ ವಿಸರ್ಜನೆ ವೇಳೆ ನೀರುಪಾಲಾಗಿರುವ ಘಟನೆ ಜಿಲ್ಲೆಯ ಹೊಸದುರ್ಗ ತಾಲೂಕಿನ ಕೊಂಡಾಪುರ ಗ್ರಾಮದಲ್ಲಿ ನಡೆದಿದೆ.

    ಕೊಂಡಾಪುರ ಗ್ರಾಮದ ರಾಜು(22) ಮೃತ ಯುವಕ ಎಂದು ಗುರುತಿಸಲಾಗಿದ್ದು, ಗಣಪತಿ ಮಹೋತ್ಸವ ಆಚರಿಸಿ ಭದ್ರಾ ಕಾಲುವೆಗೆ ಗಣಪ ವಿಸರ್ಜನೆ ಮಾಡಲೆಂದು ಗ್ರಾಮದ ಯುವಕರೆಲ್ಲರು ತೆರಳಿದ್ದರು. ಆಗ ಕಾಲುವೆ ಬಳಿ ಗಣಪತಿ ವಿಸರ್ಜನೆ ಮಾಡಲು ತೆರಳಿದ್ದ ರಾಜು, ಕಾಲುಜಾರಿ ಕಾಲುವೆಗೆ ಬಿದ್ದ ಪರಿಣಾಮ ಗಾಬರಿಯಾಗಿ ನೀರಿನಲ್ಲಿ ಮುಳುಗಿ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ. ಇದನ್ನೂ ಓದಿ: ಸೋಮವಾರ ತೆರೆಬಿಳಲಿದೆ ಕಲಬುರಗಿ ಮಹಾನಗರ ಪಾಲಿಕೆ ಮೈತ್ರಿ ಸರ್ಕಸ್?

    ಮೃತನ ಕುಟುಂಬದ ಆಕ್ರಂದನ ಮುಗಿಲುಮಟ್ಟಿದೆ. ಗ್ರಾಮದಲ್ಲಿ ನೀರವ ಮೌನ ಆವರಿಸಿದೆ. ಈ ಪ್ರಕರಣ ಹೊಸದುರ್ಗ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

  • ಗಣೇಶ ಹಬ್ಬದ ಸಂಭ್ರಮದಲ್ಲಿ ಕುಚುಕು ಗೆಳೆಯರು

    ಗಣೇಶ ಹಬ್ಬದ ಸಂಭ್ರಮದಲ್ಲಿ ಕುಚುಕು ಗೆಳೆಯರು

    ಬಳ್ಳಾರಿ: ಕುಚುಕು ಗೆಳೆಯರು ಎಂದೇ ಹೆಸರಾಗಿರೋ ಮಾಜಿ ಸಚಿವ ಜನಾರ್ದನ ರೆಡ್ಡಿ   ಹಾಗೂ ಸಚಿವ  ಶ್ರೀರಾಮುಲು ಅವರು ಗಣೇಶ ಹಬ್ಬದ ಸಂಭ್ರಮದ ಸಂಭ್ರಮದಲ್ಲಿ ಒಟ್ಟಾಗಿ ಕಾಣಿಸಿಕೊಂಡಿದ್ದಾರೆ. ಈ ಫೋಟೋ ಈಗ ಫುಲ್ ವೈರಲ್ ಆಗಿದೆ.

    ಜನಾರ್ದನ ರೆಡ್ಡಿ ಅವರ ಮನೆಯ ಗಣೇಶ ವಿಸರ್ಜನಾ ಕಾರ್ಯಕ್ರಮದಲ್ಲಿ ಕುಚುಕು ದೋಸ್ತಿಗಳು ಹಬ್ಬವನ್ನು ಸಂಭ್ರಮದಿಂದ ಆಚರಣೆ ಮಾಡಿದ್ದಾರೆ. ರೆಡ್ಡಿ ಮನೆಯಲ್ಲಿ ಪರಿಸರ ಸ್ನೇಹಿ ಗಣಪನ ಇಟ್ಟು ಪೂಜೆ ಮಾಡಿ ಸಂಭ್ರಮಿಸಿದ್ದಾರೆ. ಅಷ್ಟೇ ಅಲ್ಲದೆ, ನಿನ್ನೆ ರಾತ್ರಿ ರೆಡ್ಡಿ ನಿವಾಸದಲ್ಲಿನ ಬಾವಿಯಲ್ಲಿ ಪರಿಸರ ಸ್ನೇಹಿ ಗಣೇಶನ ಶಾಸ್ತ್ರೋಕ್ತವಾಗಿ ವಿಸರ್ಜನೆ ಮಾಡಿದ್ದಾರೆ. ಇದನ್ನೂ ಓದಿ: ಸುಮ್ಮನಿರು ಎಂದಿದ್ದಕ್ಕೆ ಲಾಕಪ್‍ನಲ್ಲೇ ಬಟ್ಟೆ ಬಿಚ್ಚಿದ ಆರೋಪಿ

    ಈ ವೇಳೆ ಇಬ್ಬರೂ ಗೆಳೆಯರು ವೈಟ್ ಅಂಡ್ ವೈಟ್ ಪಂಚೆ, ಅಂಗಿ ತೊಟ್ಟಿದ್ದಾರೆ. ಅಲ್ಲದೇ ಕೈ ಕೈ ಹಿಡಿದು ಫೋಟೋ ತೆಗೆಸಿಕೊಂಡು ಸಂತಸ ಪಟ್ಟಿದ್ದಾರೆ. ಇತ್ತೀಚೆಗಷ್ಟೇ ಜನಾರ್ದನ ರೆಡ್ಡಿ ಸುಪ್ರೀಂ ಕೋರ್ಟ್ ನಿಂದ ಅನುಮತಿ ಪಡೆದು ಬಳ್ಳಾರಿಗೆ ಬಂದಿದ್ದು, ಈಗ ಗಣೇಶನ ಹಬ್ಬವನ್ನು ಗೆಳೆಯನೊಂದಿಗೆ ಸಂಭ್ರಮಿಸಿದ್ದಾರೆ. ಈ ವೇಳೆ ಜನಾರ್ದನ ರೆಡ್ಡಿ ಪತ್ನಿ ಲಕ್ಷ್ಮಿ ಅರುಣಾ ಸಹ ಜೊತೆಗಿದ್ದರು. ಈ ಕುಚುಕು ಗೆಳೆಯರ ಫೋಟೋಗಳನ್ನು ಅವರ ಅಭಿಮಾನಿಗಳು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾರೆ.

  • ನನ್ನ ಮದ್ವೆಯಾಗುವ ಹುಡುಗ 40 ಸಾವಿರ ಆದ್ರೂ ದುಡಿಯಬೇಕು: ಅದಿತಿ

    ನನ್ನ ಮದ್ವೆಯಾಗುವ ಹುಡುಗ 40 ಸಾವಿರ ಆದ್ರೂ ದುಡಿಯಬೇಕು: ಅದಿತಿ

    – ಎಂಜಿನಿಯರ್ ಓಕೆ, ಹೊಲದಲ್ಲಿ ಕೆಲಸ ಮಾಡೋನಾದ್ರೂ ಓಕೆ

    ಬೆಂಗಳೂರು: ನನ್ನ ಮದುವೆಯಾಗುವ ಹುಡುಗ 40,000 ರೂ. ಆದ್ರೂ ದುಡಿಯಬೇಕು ಎಂದು ಚಂದನವನದ ಬೆಡಗಿ ಅದಿತಿ ಪ್ರಭುದೇವ್ ಹೇಳಿದ್ದಾರೆ.

    ಪಬ್ಲಿಕ್ ಟಿವಿ ನಡೆಸಿದ ಸಂದರ್ಶನದ ವೇಳೆ ಮಾತನಾಡುತ್ತಾ ನಟಿ, ತಾವು ಮದುವೆಯಾಗುವ ಹುಡುಗನ ಬಗ್ಗೆ ಮನಬಿಚ್ಚಿ ಮಾತನಾಡಿದ್ದಾರೆ. ಮನಸ್ಸನ್ನು ಅರ್ಥ ಮಾಡಿಕೊಂಡು ಹೋಗುವಂತೆ ಇರಬೇಕು. 30,000 ಅಥವಾ 40,000 ದುಡಿಯುತ್ತಾ ಇರಬೇಕು. ಮನೆ ನಡೆಸಲು ಎಷ್ಟು ಬೇಕೋ ಅದನ್ನು ದುಡಿಯಬೇಕು ಎಂದಿದ್ದಾರೆ.

    ಅಲ್ಲದೆ ತಾನು ಮದುವೆಯಾಗುವ ಹುಡುಗ ಆತ ಅಪ್ಪ-ಅಮ್ಮ ಜೊತೆ ಇರಲೇ ಬೇಕು. ಆಗ ನಮ್ಮ ಅಪ್ಪ-ಅಮ್ಮನನ್ನು ಜೊತೆಗೆ ಆಗಾಗ ಅವರ ಮನೆಗೆ ಕರೆದುಕೊಂಡು ಹೋಗಬಹುದು ಎಂದು ಹೇಳಿ ನಕ್ಕರು.

    ನನಗೆ ಯಾವುದೇ ರೀತಿಯ ಹುಡುಗನನ್ನು ಹುಡುಕಿದರು ನಾನು ಅವರಿಗೆ ಸೆಟ್ ಆಗುತ್ತೇನೆ. ಎಂಜಿನಿಯರ್ ಹುಡುಗನೂ ಓಕೆ, ಹೊಲದಲ್ಲಿ ಕೆಲಸ ಮಾಡುವ ಹುಡುಗನೂ ಓಕೆ ಎಂದಿದ್ದಾರೆ. ಅದಕ್ಕೆ ನಮ್ಮ ಅಪ್ಪ-ಅಮ್ಮಗೆ ಫುಲ್ ಆಯ್ಕೆ ಇದೆ. ಅವರು ಯಾರನ್ನು ಹುಡುಕಿದರು ನಾನು ಅವರಿಗೆ ಸೆಟ್ ಆಗುತ್ತೇನೆ. ನಮ್ಮ ಮನೆಯಲ್ಲಿ ಯಾವಾಗ ಮದುವೆಯಾಗು ಅನ್ನುತ್ತಾರೆಯೋ ಅಂದೇ ಆಗುತ್ತೇನೆ. ಹೆತ್ತವರ ವಿರುದ್ಧ ನಾನು ಎಂದೂ ಮಾತನಾಡುವುದಿಲ್ಲ ಎಂದಿದ್ದಾರೆ.

    ತನ್ನ ಜರ್ನಿ ಬಗ್ಗೆ ನೆನೆದ ಅದಿತಿ!

    ನನ್ನ ಜರ್ನಿ ಬಗ್ಗೆ ನೆನೆಪಿಸಿಕೊಂಡರೆ ನನಗೆ ಇಷ್ಟು ದೂರ ಬಂದ್ನಾ ಅನ್ಸುತ್ತೆ. ನಮ್ಮ ಮನೆಯಲ್ಲಿ ಇಂಜಿನಿಯರ್ ಮಾಡಿಸಿದ್ದೆ ಮದುವೆ ಮಾಡಬೇಕು ಎಂಬ ಉದ್ದೇಶದಿಂದ. ಅವಳು ಚೆನ್ನಾಗಿ ಓದಿ, ಅವಳ ಕಾಲ ಮೇಲೆ ಅವಳು ನಿಲ್ಲಬೇಕು ಎಂಬ ಉದ್ದೇಶದಿಂದ ನಮ್ಮ ಅಪ್ಪ-ಅಮ್ಮ ಓದಿಸಿ ಒಳ್ಳೆಯ ಕಡೆ ಮದುವೆ ಮಾಡಿಕೊಡಬೇಕು ಎಂದು ಯೋಚಿಸಿದ್ದರು. ನನಗೂ ಅಷ್ಟೇ ಇತ್ತು. ಆದರೆ ನನಗೆ ಇದ್ದ ಸಾಮರ್ಥ್ಯಕ್ಕೆ ನಮ್ಮ ಮನೆಯವರು ಬೆಂಬಲ ನೀಡಿದರು. ಅದಕ್ಕೆ ದೇವರು ಬೆಂಬಲ ಮತ್ತೆ ಆಶೀರ್ವಾದದಿಂದ ಇಲ್ಲಿವರೆಗೂ ಬಂದೆ ಎಂದಿದ್ದಾರೆ. ನಾನು ಯಾವುದನ್ನು ಬಯಸಿ ಪಡೆದುಕೊಂಡಿಲ್ಲ. ಆದರೆ ಬಂದ ಅವಕಾಶಕ್ಕೆ ಪರಿಶ್ರಮ ಹಾಕಿ ಅದಕ್ಕೆ ತಕ್ಕಂತೆ ಕೆಲಸ ಮಾಡಿದ್ದೇನೆ ಎಮದು ತಿಳಿಸಿದರು.

    ಇದೇ ವೇಳೆ ತಮ್ಮ ಮುಂದಿನ ಪ್ರಾಜೆಕ್ಟ್ ಬಗ್ಗೆ ಮಾತನಾಡಿದ ನಟಿ, ತುಂಬಾ ಪ್ರಾಜೆಕ್ಟ್ ಇದೆ. ಆದರೆ ಪ್ರಸ್ತುತ 5ಡಿ, ಓಲ್ಡ್‍ಮಂಕ್ ಮತ್ತು ತೊತಪುರಿ ಇದೆ ಬಿಡುಗಡೆಗೆ ಸಿದ್ಧವಾಗಿದೆ ಎಂದು ತಿಳಿಸಿದ್ದಾರೆ. ನಮಗೆ ಒಳ್ಳೆದು ಕೆಟ್ಟದ್ದು ಎಂಬುದು ಗೊತ್ತಿಲ್ಲ. ಆದರೆ ಗಣೇಶನಿಗೆ ಎಲ್ಲ ತಿಳಿದಿರುತ್ತೆ. ನಮಗೆ ಏನು ಕೊಡಬೇಕು, ಏನು ಕೊಡಬಾರದು ಅಂತ ಅದಕ್ಕೆ ಅವನಿಗೆ ಬಿಟ್ಟಿದ್ದೇನೆ ಎಂದರು.

    ಈ ಕೊರೊನಾ ಪರಿಸ್ಥಿತಿಯಲ್ಲಿ ಹಬ್ಬದ ಆಚರಣೆ ತುಂಬಾ ಕಷ್ಟ ಆಯ್ತು. ನನಗೆ ಮಾತ್ರವಲ್ಲ ಎಲ್ಲ ಜನರಿಗೂ ಹಬ್ಬ ಮಾಡುವಾಗ ಈ ಪರಿಸ್ಥಿತಿಯಲ್ಲಿ ಭಯ ಇದ್ದೇ ಇರುತ್ತೆ. ಎಲ್ಲರ ಮನೆಯಲ್ಲಿ ಖುಷಿಯಿಂದ ಯಾರು ಹಬ್ಬವನ್ನು ಆಚರಣೆಯನ್ನು ಮಾಡಿಲ್ಲ. ಎಷ್ಟೊ ಜನರ ಮನೆಯಲ್ಲಿ ಸಾವುಗಳು ಸಂಭವಿಸಿತು. ಈ ಪರಿಸ್ಥಿತಿಯಲ್ಲಿ ಯಾರು ಖುಷಿಯಿಂದ ಹಬ್ಬವನ್ನು ಆಚರಣೆ ಮಾಡುಲಾಗುವುದಿಲ್ಲ. ಆದರೆ ಭೂಮಿ ಮೇಲೆ ಎಲ್ಲದಕ್ಕೂ ಕೊನೆ ಎಂಬುದು ಇರುತ್ತೆ. ಇದಕ್ಕೂ ಕೊನೆ ಇದೆ ಎಂದು ಆಶಿಸಿದರು. ಏನೇ ಅದರೂ ಜೀವನ ಹೋಗುತ್ತ್ತಾ ಎಂದಿದ್ದಾರೆ.

    ಚಂದನವನದಲ್ಲಿ ದೊಡ್ಡಮಟ್ಟದ ಪೆಟ್ಟು!

    ಕೊರೊನಾ ಕಾರಣದಿಂದ ನಮ್ಮ ಚಂದನವನದಲ್ಲಿ ದೊಡ್ಡಮಟ್ಟದ ಪೆಟ್ಟು ಬಿದಿದ್ದೆ. ಅದರಲ್ಲಿ ನಟ, ನಟಿ, ಕಲಾವಿದರನ್ನು ಬಿಡಿ ತಂತ್ರಜ್ಞಾನರು, ಸಹಕಲಾವಿದರು ಇನ್ನೂ ಹಲವು ವಿಭಾಗದ ಜನರಿಗೆ ತುಂಬಾ ಕಷ್ಟವಾಗುತ್ತಿದೆ. ಒಂದು ಸಿನಿಮಾದಲ್ಲಿ 5- 10 ಜನರು ಪ್ರಮುಖ ಕಲಾವಿದರಿದ್ದರೆ ನೂರಾರು ಜನರು ತೆರೆ ಹಿಂದೆ ಮತ್ತು ಸಹಕಲಾವಿದರಾಗಿ ನಟಿಸುವವರು ಇರುತ್ತಾರೆ. ಅವರಿಗೆ ತುಂಬಾ ಪೆಟ್ಟು ಬಿದ್ದಿದೆ. ಅವರಿಗೆ ಕೆಲಸ ಮಾಡಿದರೆ ತಿನ್ನಲು ಊಟ ಸಿಗುತ್ತೆ ಅಂತಹವರಿಗೆ ತುಂಬಾ ಕಷ್ಟವಾಗಿದೆ ಎಮದು ಇದೇ ವೇಳೆ ಅದಿತಿ ಬೆಸರ ವ್ಯಕ್ತಪಡಿಸಿದರು.

  • ಮಂಗಳೂರಿನ ಶರವು ಮಹಾಗಣಪತಿ ದೇವಸ್ಥಾನದಲ್ಲಿ ಸಂಭ್ರಮದ ಗಣೇಶೋತ್ಸವ

    ಮಂಗಳೂರಿನ ಶರವು ಮಹಾಗಣಪತಿ ದೇವಸ್ಥಾನದಲ್ಲಿ ಸಂಭ್ರಮದ ಗಣೇಶೋತ್ಸವ

    ಮಂಗಳೂರು: ಗಣೇಶ ಚತುರ್ಥಿಗೆ ಕೊರೊನಾ ಮಹಾಮಾರಿ ಅಡ್ಡಿಯಾಗಿದ್ದರೂ ಜನ ಗಣೇಶನ ದರ್ಶನ ಪಡೆಯಲು ದೇವಸ್ಥಾನಗಳಿಗೆ ತಂಡೋಪತಂಡವಾಗಿ ಆಗಿಮಿಸಿದ್ದರು. ನಗರದ ಪ್ರಸಿದ್ಧ ಕ್ಷೇತ್ರ ಶರವು ಮಹಾಗಣಪತಿ ದೇವಸ್ಥಾನಕ್ಕೆ ಭಕ್ತರು ಮುಂಜಾನೆಯಿಂದಲೇ ಬರಲಾರಂಭಿಸಿ, ಗಣೇಶನ ದರ್ಶನ ಪಡೆದರು.

    ಜಿಲ್ಲೆಯಲ್ಲಿ ಪಾಸಿಟಿವಿಟಿ ರೇಟ್ ಹೆಚ್ಚಾಗಿರುವುದರಿಂದ ಕೋವಿಡ್ ನಿಯಮಗಳನ್ನು ಪಾಲಿಸಿ ಹಬ್ಬವನ್ನು ಆಚರಿಸಲು ಜಿಲ್ಲಾಡಳಿತ ಸೂಚಿಸಿದೆ. ಈ ಹಿನ್ನಲೆಯಲ್ಲಿ ದೇವಸ್ಥಾನಕ್ಕೆ ಬರುವ ಭಕ್ತರಿಗೆ ಸ್ಯಾನಿಟೈಸರ್, ಮಾಸ್ಕ್ ಕಡ್ಡಾಯ, ಸಾಮಾಜಿಕ ಅಂತರ ಪಾಲನೆ ಸೇರಿದಂತೆ ಎಲ್ಲ ಕೊರೊನಾ ನಿಯಮವನ್ನು ಪಾಲಿಸಲಾಗಿದೆ. ಇದನ್ನೂ ಓದಿ: ನಿನ್ನ ವಾಹನದಿಂದ ಬೆಳೆ ಉಳಿಸು- ಗಣಪತಿಗೆ ಜೀವಂತ ಇಲಿ ನೀಡಿ ಬೇಡಿಕೊಂಡ ರೈತ

    ಭಕ್ತರು ಸಹ ಮಾಸ್ಕ್, ಸಾಮಾಜಿಕ ಅಂತರ ಪಾಲಿಸಿ, ಗಣೇಶನ ದರ್ಶನ ಪಡೆದರು. ಕೇರಳದಲ್ಲಿ ಕೊರೊನಾ ಪ್ರಕರಣಗಳು ಹೆಚ್ಚಾಗಿರುವುದರಿಂದ ಗಡಿ ಚಿಲ್ಲೆ ದಕ್ಷಿಣ ಕನ್ನಡದಲ್ಲಿ ಸಹ ಕಟ್ಟೆಚ್ಚರ ವಹಿಸಲಾಗಿದೆ. ಇದರ ಮಧ್ಯೆಯೇ ಹಬ್ಬವನ್ನು ಆಚರಿಸಲಾಗುತ್ತಿದೆ.