Tag: ganesha festival

  • ಮನೆಯಲ್ಲಿ ಗಣೇಶ ಮೂರ್ತಿ ಪ್ರತಿಷ್ಠಾಪಿಸಿದ ಮುಸ್ಲಿಂ ಮಹಿಳೆಗೆ ಕೊಲೆ ಬೆದರಿಕೆ

    ಮನೆಯಲ್ಲಿ ಗಣೇಶ ಮೂರ್ತಿ ಪ್ರತಿಷ್ಠಾಪಿಸಿದ ಮುಸ್ಲಿಂ ಮಹಿಳೆಗೆ ಕೊಲೆ ಬೆದರಿಕೆ

    ಲಕ್ನೋ: ಉತ್ತರ ಪ್ರದೇಶದ ಅಲಿಘರ್‌ನಲ್ಲಿರುವ ತಮ್ಮ ನಿವಾಸದಲ್ಲಿ ಗಣೇಶ ಮೂರ್ತಿಯನ್ನು ಪ್ರತಿಷ್ಠಾಪಿಸಿದ್ದಕ್ಕಾಗಿ ಬಿಜೆಪಿ ನಾಯಕಿ ರೂಬಿ ಆಸಿಫ್ ಖಾನ್ ವಿರುದ್ಧ ಕೊಲೆ ಬೆದರಿಕೆ ಮತ್ತು ಫತ್ವಾ ಹೊರಡಿಸಲಾಗಿದೆ.

    ರೂಬಿ ಅವರು ಇಬ್ಬರು ಸಹೋದರಿಯರು ಹಾಗೂ ಪತಿಯೊಂದಿಗೆ ವಾಸವಾಗಿದ್ದಾರೆ. ತಮ್ಮ ನಿವಾಸದಲ್ಲಿ ಗಣೇಶನ ಮೂರ್ತಿಯನ್ನು ಪ್ರತಿಷ್ಠಾಪಿಸಿದಾಗಿನಿಂದ ಕೊಲೆ ಬೆದರಿಕೆಗಳನ್ನು ಎದುರಿಸುತ್ತಿರುವ ರೂಬಿ ಆಸಿಫ್ ಖಾನ್, ಇದಕ್ಕೆಲ್ಲ ನಾನು ಹೆದರುವುದಿಲ್ಲ ಎಂದು ಹೇಳಿದ್ದಾರೆ. ವಿಗ್ರಹವನ್ನು ಪೂಜಿಸಿದ್ದಕ್ಕಾಗಿ ಆಕೆಯ ವಿರುದ್ಧ ಫತ್ವಾ ಕೂಡ ಹೊರಡಿಸಲಾಗಿದೆ. ಇದನ್ನೂ ಓದಿ: ಸುದ್ದಿಗೋಷ್ಠಿ ವೇಳೆ ಮಾನನಷ್ಟ ನೋಟಿಸ್‍ನ್ನು ಹರಿದ ಆಪ್ ಸಂಸದ

    ಈ ಕುರಿತು ಪ್ರತಿಕ್ರಿಯಿಸಿರುವ ಅವರು, ನಾನು ನರೋರಾ ಘಾಟ್‌ನಲ್ಲಿ ಗಣೇಶನ ವಿಗ್ರಹವನ್ನು ವಿಸರ್ಜನೆಗೆ ತೆಗೆದುಕೊಂಡು ಹೋಗುತ್ತಿದ್ದೇನೆ. ಆಗಸ್ಟ್ 31 ರಂದು ನನ್ನ ನಿವಾಸದಲ್ಲಿ ಗಣೇಶನ ಮೂರ್ತಿಯನ್ನು ಪ್ರತಿಷ್ಠಾಪಿಸಿದ್ದೆ. ಅಂದಿನಿಂದ ಈ ಫತ್ವಾ ಹೊರಡಿಸಲಾಗಿದೆ. ಗಣೇಶನ ಮೂರ್ತಿಯನ್ನು ಪ್ರತಿಷ್ಠಾಪಿಸಿದ ಕಾರಣ ನಾನು ಹಿಂದೂ ಆಗಿದ್ದೇನೆ. ನನ್ನನ್ನು ಇಸ್ಲಾಂ ಧರ್ಮದಿಂದ ಬಹಿಷ್ಕರಿಸುವ ಮತ್ತು ನನ್ನ ಕುಟುಂಬವನ್ನು ಜೀವಂತವಾಗಿ ಸುಡುವ ಬೆದರಿಕೆಗಳು ಬರುತ್ತಿವೆ. ನಾನು ಹೊರಗೆ ಹೋದಾಗ, ಜನರು ನನ್ನನ್ನು ಹಿಂದೂ ಎಂದು ಕರೆಯುತ್ತಿದ್ದಾರೆ. ಗಣೇಶ ವಿಗ್ರಹವನ್ನು ಪ್ರತಿಷ್ಠಾಪಿಸಿದ್ದು, ಹಾಗೆಯೇ ವಿಸರ್ಜಿಸುತ್ತೇನೆ ಎಂದು ಸ್ಪಷ್ಟಪಡಿಸಿದ್ದಾರೆ.

    ಧರ್ಮಗುರುಗಳು ಆಕೆಯ ವಿರುದ್ಧ ಫತ್ವಾ ಹೊರಡಿಸಿ, ಇಸ್ಲಾಂ ಧರ್ಮದಿಂದ ಬಹಿಷ್ಕರಿಸುವಂತೆ ಕರೆ ನೀಡಿದ್ದಾರೆ. ಇದನ್ನೂ ಓದಿ: ಮಾನ್ಯತೆ ಪಡೆಯದ ಮದರಸಾಗಳ ಸಮೀಕ್ಷೆ – ಯುಪಿ ಸರ್ಕಾರದ ನಿರ್ಧಾರ ಸ್ವಾಗತಿಸಿದ ಮುಸ್ಲಿಂ ಮಂಡಳಿ

    ನನಗೆ ಭದ್ರತೆ ಒದಗಿಸುವಂತೆ ಜಿಲ್ಲಾಡಳಿತವನ್ನು ಕೇಳಿಕೊಂಡರೂ ಪ್ರಯೋಜನವಾಗಿಲ್ಲ. ಆದರೆ ನನ್ನ ಮನೆಗೆ ದಿನಕ್ಕೆ ಎರಡು ಅಥವಾ ಮೂರು ಗಂಟೆಗಳ ಕಾಲ ಪೊಲೀಸ್ ಪೇದೆ ಬರುತ್ತಾನೆ. ಇವತ್ತಿಗೆ ನನ್ನ ಭದ್ರತೆಗೆ ಪೊಲೀಸ್ ಠಾಣೆಯಿಂದ ಇಬ್ಬರು ಅಧಿಕಾರಿಗಳನ್ನು ಕಳುಹಿಸಲಾಗಿದೆ ಎಂದು ರೂಬಿ ತಿಳಿಸಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ರಾಣಿಬೆನ್ನೂರಿನಲ್ಲಿ ಗಣೇಶನ ದಶಾವತಾರ ರೂಪ – ತಿಂಗಳುಪೂರ್ತಿ ಭಕ್ತರಿಗೆ ದರ್ಶನ ಭಾಗ್ಯ

    ರಾಣಿಬೆನ್ನೂರಿನಲ್ಲಿ ಗಣೇಶನ ದಶಾವತಾರ ರೂಪ – ತಿಂಗಳುಪೂರ್ತಿ ಭಕ್ತರಿಗೆ ದರ್ಶನ ಭಾಗ್ಯ

    ಹಾವೇರಿ: ರಾಣೆಬೆನ್ನೂರಿನ ವಂದೇ ಮಾತರಂ ಸೇವಾ ಸಂಸ್ಥೆಯು ಈ ಬಾರಿ ಗಣೇಶ ಹಬ್ಬದ ಪ್ರಯುಕ್ತ ಇಲ್ಲಿನ ನಗರಸಭೆ ಮೈದಾನದಲ್ಲಿ ವಿಘ್ನೇಶ್ವರನ ದಶಾವತಾರ ಮೂರ್ತಿಯನ್ನು ಪ್ರತಿಷ್ಠಾಪಿಸುವ ಮೂಲಕ ಅದ್ಧೂರಿ ಗಣೇಶೋತ್ಸವ ಆಚರಣೆ ಮಾಡುತ್ತಿದೆ.

    ಕಳೆದ 14 ವರ್ಷಗಳಿಂದ ವಂದೇ ಮಾತರಂ ಸೇವಾ ಸಂಸ್ಥೆ ಅಧ್ಯಕ್ಷ ಪ್ರಕಾಶ್ ಬುರಡಿಕಟ್ಟಿ ನೇತೃತ್ವದಲ್ಲಿ ಪ್ರತಿ ವರ್ಷವು ಒಂದಲ್ಲ ಒಂದು ವಿಶೇಷ ಸಂದೇಶದೊಂದಿಗೆ ಗಣೇಶ ಮೂರ್ತಿಯನ್ನ ಪ್ರತಿಷ್ಠಾಪನೆ ಮಾಡಲಾಗುತ್ತಿದೆ. ಅಂತೆಯೇ ಈ ಬಾರಿ ಇಂದಿನ ಪೀಳಿಗೆಗೆ ಹಾಗೂ ಸಮಾಜಕ್ಕೆ ಹಿಂದೂ ಧರ್ಮ, ಸಂಸ್ಕೃತಿಯ ಬಗ್ಗೆ ಅರಿವು ಮೂಡಿಸುವ ನಿಟ್ಟಿನಲ್ಲಿ ಕಾರ್ಯಕ್ರಮ ಆಯೋಜನೆ ಮಾಡಿದೆ. ಇದನ್ನೂ ಓದಿ: ಮಡಿವಾಳೇಶ್ವರ ಬಸವಸಿದ್ಧಲಿಂಗ ಸ್ವಾಮೀಜಿ ನೇಣಿಗೆ ಶರಣು

    ಗಣೇಶನ ದಶಾವತಾರ ದರ್ಶನಕ್ಕೆ ಪ್ರತಿ ದಿನ ಸಂಜೆ 6 ಗಂಟೆಯಿಂದ ರಾತ್ರಿ 10:30ರ ವರೆಗೆ ಭಕ್ತರ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ ಎಂದು ಸಂಸ್ಥೆ ತಿಳಿಸಿದೆ. ಇದನ್ನೂ ಓದಿ: ಮುಸ್ಲಿಂ ಮಹಿಳೆಯನ್ನು ಮದುವೆ ಆಗಲು ನಿರ್ದೇಶಕ ಮಹೇಶ್ ಭಟ್ ಮತಾಂತರಗೊಂಡಿದ್ದಾರೆ ಎಂದು ಕಂಗನಾ ಆರೋಪ

    ಈ ಕುರಿತು ಮಾತನಾಡಿರುವ ವಂದೇ ಮಾತರಂ ಸಂಸ್ಥೆಯ ಅಧ್ಯಕ್ಷ ಪ್ರಕಾಶ್‌ ಎಸ್.ಬುರಡಿಕಟ್ಟಿ, ರಾಣಿಬೆನ್ನೂರಿನ ಇಂದ್ರಕುಮಾರ್ ಮತ್ತು ಹರ್ಷ ಅವರ ಸಂಗಡಿಗರಿಂದ ನಗರಸಭೆ ಕ್ರೀಡಾಂಗಣದಲ್ಲಿ ದಶಾವತಾರ ರೂಪದ ಗಣಪತಿ ಮೂರ್ತಿಯನ್ನು ಪ್ರತಿಷ್ಠಾಪಿಸಲಾಗಿದೆ. 29 ದಿನಗಳ ಕಾಲ ಗಣಪತಿಯ ಸಾರ್ವಜನಿಕ ದರ್ಶನಕ್ಕಾಗಿ ಅವಕಾಶ ಕಲ್ಪಿಸಿದ್ದು, ಸೆಪ್ಟಂಬರ್‌ 28ರಂದು ನಗರದಲ್ಲಿ ಶೋಭಾಯಾತ್ರೆಯ ಮೂಲಕ ವಿಸರ್ಜನೆ ಮಾಡಲಾಗುವುದು ಎಂದು ಹೇಳಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಹಬ್ಬಕ್ಕೆಂದು ಊರಿಗೆ ಬಂದವ ಸ್ನೇಹಿತನಿಂದಲೇ ಮರ್ಡರ್!

    ಹಬ್ಬಕ್ಕೆಂದು ಊರಿಗೆ ಬಂದವ ಸ್ನೇಹಿತನಿಂದಲೇ ಮರ್ಡರ್!

    ಬಾಗಲಕೋಟೆ: ಹಬ್ಬದ ರಜೆ ಹಿನ್ನೆಲೆಯಲ್ಲಿ ಊರಿಗೆ ಬಂದ ಯುವಕನನ್ನು ಆತನ ಸ್ನೇಹಿತರೇ ಹತ್ಯೆಗೈದಿರುವ ಘಟನೆ ಜಿಲ್ಲೆಯ ಮುಧೋಳ ನಗರದ ಮಲ್ಲಮ್ಮ ನಗರದಲ್ಲಿ ನಡೆದಿದೆ.

    ಮೃತ ಯುವಕನನ್ನು ಮೆಹಬೂಬ್(22) ಎಂದು ಗುರುತಿಸಲಾಗಿದೆ. ಶನಿವಾರ ರಾತ್ರಿ ಮೆಹಬೂಬ್ ಅನ್ನು ಆತನ ಸ್ನೇಹಿತ ಭದ್ರೇಶ್ ಹತ್ಯೆಗೈದಿದ್ದಾನೆ. ಬೀಳಗಿ ತಾಲೂಕಿನ ತೆಗ್ಗಿ ಗ್ರಾಮದಲ್ಲಿ ಗಾರೆ ಕೆಲಸ ಮಾಡಿಕೊಂಡಿದ್ದ ಮೆಹಬೂಬ್, ಪ್ರತಿ ಹಬ್ಬದ ದಿನಗಳಲ್ಲಿ ರಜೆ ಸಿಗುತ್ತಿದ್ದ ಹಿನ್ನೆಲೆಯಲ್ಲಿ ತನ್ನ ಊರಿಗೆ ಬರುತ್ತಿದ್ದನು. ಹೀಗೆ ಬಂದ ಮೆಹಬೂಬ್‍ನನ್ನು ಸ್ನೇಹಿತ ಭದ್ರೇಶ್ ಕೊಲೆ ಮಾಡಿ ಪೊಲೀಸರಿಗೆ ಶರಣಾಗಿದ್ದಾನೆ. ಇತ್ತ ಮನೆಗೆ ಆಧಾರಸ್ತಂಭವಾಗಿದ್ದ ಮಗನನ್ನು ಕಳೆದುಕೊಂಡ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳುವಂತೆ ಕುಟುಂಬ ಆಗ್ರಹಿಸಿದೆ.

    ಕಳೆದ 5 ವರ್ಷದ ಹಿಂದೆ ಭದ್ರೇಶ್ ಮತ್ತು ಮೆಹಬೂಬ್ ನಡುವೆ ಸಣ್ಣ ಜಗಳವಾಗಿತ್ತು. ಇದೇ ಸೇಡು ಇಟ್ಟಕೊಂಡಿದ್ದ ಭದ್ರೇಶ್, ಮೊನ್ನೆ ರಾತ್ರಿ ಅಂಗನವಾಡಿ ಬಳಿ ಸ್ನೇಹಿತರೊಟ್ಟಿಗೆ ಕೂತಿದ್ದ ಮಹಬೂಬ್‍ಗೆ ಎದೆ, ಕುತ್ತಿಗೆ, ಹೊಟ್ಟೆ ಸೇರಿ ಹಲವೆಡೆ ಇರಿದು ಬರ್ಬರವಾಗಿ ಕೊಲೆ ಮಾಡಿದ್ದಾನೆ. ಬಳಿಕ ಕಲ್ಲು ಎತ್ತಿ ಹಾಕಿದ್ದಾನೆ. ಸದ್ಯ ಭದ್ರೇಶ್‍ನನ್ನು ಬಂಧಿಸಿ ಪೊಲೀಸರು ವಿಚಾರಣೆ ನಡೆಸಿದ್ದಾರೆ. ಇತ್ತ ಮೆಹಬೂಬ್ ಕುಟುಂಬಸ್ಥರು ಶವವನ್ನು ಮುಧೋಳ ನಗರದ ಬಸ್ ನಿಲ್ದಾಣದ ಬಳಿ ಇರಿಸಿ ಪ್ರತಿಭಟನೆ ನಡೆಸಿದ್ದರು. ಇದನ್ನೂ ಓದಿ: ಬಳ್ಳಾರಿಯಲ್ಲಿ ಮೂಢನಂಬಿಕೆ ಇನ್ನೂ ಜೀವಂತ – ಸತ್ತ ಬಾಲಕನನ್ನು ಬದುಕಿಸಲು 8 ಗಂಟೆ ಉಪ್ಪಿನಲ್ಲಿಟ್ಟ ಗ್ರಾಮಸ್ಥರು

    ಒಟ್ಟಾರೆ ಹಬ್ಬಕ್ಕೆಂದು ಊರಿಗೆ ಬಂದಿದ್ದವನನ್ನ ಸ್ನೇಹಿತನೇ ಕೊಲೆ ಮಾಡಿದ್ದು ನಿಜಕ್ಕೂ ಹೇಯ ಕೃತ್ಯ. ಹಳೇ ದ್ವೇಷಕ್ಕೆ ಜೀವವನ್ನೇ ಬಲಿ ಪಡೆದಿದ್ದು ನಿಜಕ್ಕೂ ದುರಂತವಾಗಿದೆ. ಇದನ್ನೂ ಓದಿ: ಜಮೀರ್ `ಗಣೇಶ’ ಅಸ್ತ್ರ – ಇಷ್ಟು ದಿನ ಇಲ್ಲದ್ದು ಈಗ್ಯಾಕೆ? ಶಾಸಕರ ನಡೆಗೆ ಸ್ಥಳೀಯರಿಂದ ಆಕ್ರೋಶ

    Live Tv
    [brid partner=56869869 player=32851 video=960834 autoplay=true]

  • ಚಾಮರಾಜಪೇಟೆಯಲ್ಲಿ ನಾಳೆ ಜಮೀರ್ ನೇತೃತ್ವದಲ್ಲೇ ಗಣೇಶೋತ್ಸವ!

    ಚಾಮರಾಜಪೇಟೆಯಲ್ಲಿ ನಾಳೆ ಜಮೀರ್ ನೇತೃತ್ವದಲ್ಲೇ ಗಣೇಶೋತ್ಸವ!

    ಬೆಂಗಳೂರು: ನಗರದ ಚಾಮರಾಜಪೇಟೆ ಶಾಸಕರ ಕಚೇರಿಯಲ್ಲಿ ಸೋಮವಾರ ಗಣೇಶ ಮೂರ್ತಿ ಪ್ರತಿಷ್ಠಾಪನೆ ಮಾಡುವ ಮೂಲಕ ಹಿಂದೂ ಸಂಘಟನೆಗಳಿಗೆ ಜಮೀರ್ ಖಾನ್ ಟಕ್ಕರ್ ಕೊಡಲು ಪ್ಲ್ಯಾನ್ ಮಾಡಿದ್ದಾರೆ.

    ಈದ್ಗಾ ಮೈದಾನದ ವಿವಾದಲ್ಲಿ ಸ್ಥಳೀಯರು ಮತ್ತು ಹಿಂದೂ ಸಂಘಟನೆಗಳ ಕೆಂಗಣ್ಣಿಗೆ ಗುರಿಯಾಗಿದ್ದ ಜಮೀರ್ ವಿರುದ್ಧ ಹಲವಾರು ಹಿಂದೂ ಸಂಘಟನೆಗಳು ಟೀಕಾ ಪ್ರಹಾರ ನಡೆಸಿತ್ತು. ಇದರ ಬೆನ್ನಲ್ಲೇ ಇದೀಗ ಗಣೇಶೋತ್ಸವಕ್ಕೆ ಅಖಿಲ ಕರ್ನಾಟಕ ಜಿ.ಜೆಡ್ ಜಮೀರ್ ಅಹ್ಮದ್ ಖಾನ್ ಒಕ್ಕೂಟ ಮುಂದಾಗಿದ್ದು ಆಹ್ವಾನ ಪತ್ರಿಕೆಯನ್ನು ಸಿದ್ಧಪಡಿಸಿದೆ. ಇದನ್ನೂ ಓದಿ: ಊಟಕ್ಕಿಂತ ಹೆಚ್ಚಾಗಿದ್ಯಂತೆ ಕಾಂಡೋಮ್ ಸೆಲ್ – ಸ್ವಿಗ್ಗಿ ಸಮೀಕ್ಷೆಯಲ್ಲಿನಿದೆ?

    ಚಾಮರಾಜಪೇಟೆಯ ವರ್ತಕರ ಬೀದಿ, 4ನೇ ಮುಖ್ಯ ರಸ್ತೆ, 3ನೇ ಅಡ್ಡ ರಸ್ತೆಯಲ್ಲಿರುವ ಶಾಸಕರ ಕಛೇರಿಯಲ್ಲಿ ಒಂದು ದಿನ ಗಣೇಶ ಮೂರ್ತಿಯನ್ನು ಪ್ರತಿಷ್ಠಾಪಿಸಲು ನಿರ್ಧಾರಿಸಲಾಗಿದೆ. ಸೋಮವಾರ ಬೆಳಗ್ಗೆ 9:15 ರಿಂದ 10 ಗಂಟೆಯೊಳಗೆ ವಿದ್ಯಾಗಣಪತಿ ಪ್ರತಿಷ್ಠಾಪನೆ ಮಾಡಲಾಗುತ್ತಿದ್ದು, ಸಂಜೆ 4 ಗಂಟೆಗೆ ಬಾಣಬಿರುಸುಗಳೊಂದಿಗೆ ಅದ್ದೂರಿ ಮೆರವಣಿಗೆ ನಡೆಸಿ ನಂತರ ವಿದ್ಯಾಗಣಪತಿ ಮೂರ್ತಿ ವಿಸರ್ಜನೆ ಮಾಡಲಾಗುತ್ತದೆ ಎಂದು ಆಹ್ವಾನ ಪತ್ರಿಕೆಯಲ್ಲಿ ತಿಳಿಸಲಾಗಿದೆ. ಇದನ್ನೂ ಓದಿ: ತಮ್ಮ ಮಗುವಿಗೆ ಭಾರತೀಯ ಖಾದ್ಯದ ಹೆಸರಿಟ್ಟ ವಿದೇಶಿ ದಂಪತಿ

    Live Tv
    [brid partner=56869869 player=32851 video=960834 autoplay=true]

  • ಗಣೇಶನ ಜೊತೆಗೆ ಈ ಊರಿನಲ್ಲಿ ನಡೆಯುತ್ತೆ ಮೂಷಿಕನಿಗೂ ವಿಶೇಷ ಪೂಜೆ

    ಗಣೇಶನ ಜೊತೆಗೆ ಈ ಊರಿನಲ್ಲಿ ನಡೆಯುತ್ತೆ ಮೂಷಿಕನಿಗೂ ವಿಶೇಷ ಪೂಜೆ

    ಕೊಪ್ಪಳ: ನಮ್ಮ ಜೀವನದಲ್ಲಿ ಯಾವುದೇ ವಿಘ್ನಗಳು ಬಾರದಿರಲಿ ಎಂದು ಜನರು ಗಣಪನನ್ನು ಪೂಜಿಸುತ್ತಾರೆ. ಆದರೆ ಕೊಪ್ಪಳದ ಊರೊಂದರಲ್ಲಿ ವಿಘ್ನೇಶನ ವಾಹನವಾಗಿರುವ ಇಲಿಗೂ ಒಂದು ದಿನ ವಿಶೇಷ ಪೂಜೆ ಸಲ್ಲಿಸಲಾಗುತ್ತದೆ.

    ಹೌದು, ನೇಕಾರಿಕೆಯನ್ನೇ ಜೀವಾಳವಾಗಿಸಿಕೊಂಡಿರುವ ಕೊಪ್ಪಳ ತಾಲೂಕಿನ ಭಾಗ್ಯನಗರದಲ್ಲಿ ಇಲಿರಾಯನ ಪೂಜೆ ಬಲು ಸಂಭ್ರಮದಿಂದ ನಡೆಸಲಾಗಿದೆ. ಗಣೇಶ ಪ್ರತಿಷ್ಠಾಪನೆಯ ಮರುದಿನ ಪ್ರತಿ ವರ್ಷ ಇಲಿಗೆ ಪೂಜೆ ಸಲ್ಲಿಸಲಾಗುತ್ತದೆ. ನೇಕಾರರು ಸೇರಿದಂತೆ ಬೇರೆ, ಬೇರೆ ಸಮುದಾಯದ ಜನರ ಮನೆಗಳಲ್ಲಿ ಮಗ್ಗಗಳು ಇರುವುದರಿಂದ ಎಲ್ಲರೂ ಇಲಿಗೆ ಪೂಜೆ ಸಲ್ಲಿಸುತ್ತಾರೆ. ಗಣೇಶ ಹಬ್ಬಕ್ಕಿಂತ ಹೆಚ್ಚು ಶ್ರದ್ಧಾಭಕ್ತಿಯಿಂದ ಇಲಿರಾಯನನ್ನು ಆರಾಧಿಸುತ್ತಾರೆ. ಇದನ್ನೂ ಓದಿ: ಕುಡಿದ ಮತ್ತಿನಲ್ಲಿ ಅಪಘಾತ – ಇನ್ಸ್‌ಪೆಕ್ಟರ್ ದಂಪತಿಯಿಂದ ಕಿರಿಕ್

    ಚಿತ್ರಗಾರರ ಮನೆಯಲ್ಲಿ ತಯಾರಿಸಿದ ಮಣ್ಣಿನ ಇಲಿ ಮೂರ್ತಿಗಳನ್ನು ತಂದು ಪೂಜೆ ಮಾಡಲಾಗುತ್ತದೆ. ಮನೆಯಲ್ಲಿ ಓಡಾಡುವ ಇಲಿಗಳು ಮಗ್ಗಗಳ ನೂಲನ್ನು ಹಾಗೂ ಸೀರೆಗಳಿಗೆ ಹಾನಿ ಮಾಡದಿರಲಿ ಎಂಬ ಉದ್ದೇಶದೊಂದಿಗೆ ಈ ಪೂಜೆ ಮಾಡಲಾಗುತ್ತದೆ. ಅಲ್ಲದೇ ಹೀಗೆ ಪೂಜೆ ಮಾಡಿದರೆ ಇಲಿಗಳು ಕಾಟ ಕೊಡುವುದಿಲ್ಲ ಎಂಬ ನಂಬಿಕೆ ಇದೆ. ಹೀಗಾಗಿ ಕಡುಬು, ಚಕ್ಕುಲಿ, ಉಂಡೆ, ಕರ್ಜಿಕಾಯಿ, ಸಂಡಿಗೆ, ಹಪ್ಪಳ ಸೇರಿ ವಿವಿಧ ಅಡುಗೆ ಮಾಡಿ ನೈವೇದ್ಯ ಅರ್ಪಿಸಲಾಗುತ್ತದೆ. ಇದನ್ನೂ ಓದಿ: ಪೋಕ್ಸೋ ಕೇಸ್‌ – ಸಾಕ್ಷ್ಯ ನಾಶ ಮಾಡಿದ್ರಾ ಮುರುಘಾ ಶ್ರೀ?

    ಗಣೇಶ ಹಬ್ಬ ಬಂತು ಅಂದರೆ ಭಾಗ್ಯನಗರದಲ್ಲಿ ಆಚರಣೆಗಳು ಹಲವು ರೂಪಗಳಲ್ಲಿ ಕಂಡು ಬರುತ್ತವೆ. ಒಂದೊಂದು ಆಚರಣೆಯ ಹಿಂದೆಯೂ ಒಂದೊಂದು ಅರ್ಥವಿರುತ್ತದೆ ಎಂಬುದಕ್ಕೆ ಇಲಿಗೂ ಪೂಜೆ ಸಲ್ಲಿಸುವ ಪದ್ಧತಿ ಉದಾಹರಣೆಯಾಗಿದೆ.

    Live Tv
    [brid partner=56869869 player=32851 video=960834 autoplay=true]

  • ಕೋಮು ಸಂಘರ್ಷದ ಮಧ್ಯೆ ಸಾಮರಸ್ಯ ಮೆರೆದ ಮುಸ್ಲಿಂ ಕುಟುಂಬ – ಗಣೇಶ ಪ್ರತಿಷ್ಠಾಪಿಸಿ ಹಬ್ಬ ಆಚರಣೆ

    ಕೋಮು ಸಂಘರ್ಷದ ಮಧ್ಯೆ ಸಾಮರಸ್ಯ ಮೆರೆದ ಮುಸ್ಲಿಂ ಕುಟುಂಬ – ಗಣೇಶ ಪ್ರತಿಷ್ಠಾಪಿಸಿ ಹಬ್ಬ ಆಚರಣೆ

    ಲಕ್ನೋ: ಕೋಮು ಸಂಘರ್ಷದ ನಡುವೆ ಮುಸ್ಲಿಂ ಕುಟುಂಬವೊಂದು ಸಾಮರಸ್ಯವನ್ನು ಮೆರೆದಿದೆ. ಗಣೇಶ ಹಬ್ಬದ ಹಿನ್ನೆಲೆ ಅಲಿಘರ್‌ನಲ್ಲಿ ಮುಸ್ಲಿಂ ಮಹಿಳೆಯೊಬ್ಬರು 7 ದಿನಗಳ ಕಾಲ ಮನೆಯಲ್ಲಿ ಗಣಪತಿಯನ್ನು ಕೂರಿಸಿ ಹಬ್ಬ ಆಚರಿಸಿದ್ದಾರೆ.

    ರೋರವಾರ ಪೊಲೀಸ್ ವೃತ್ತದ ಎಡಿಎ ಕಾಲೋನಿ ನಿವಾಸಿ ರೂಬಿ ಆಸಿಫ್ ಖಾನ್ ಎಂಬವರು ತಮ್ಮ ಮನೆಗೆ ಗಣೇಶ ಮೂರ್ತಿಯನ್ನು ತಂದು ಸಕಲ ವಿಧಿ ವಿಧಾನಗಳೊಂದಿಗೆ ಗಣೇಶನನ್ನು ಪ್ರತಿಷ್ಠಾಪಿಸಿದ್ದಾರೆ. ಇದನ್ನೂ ಓದಿ: ಕೆಪಿಟಿಸಿಎಲ್ ಪರೀಕ್ಷೆ ಅಕ್ರಮ – ಹುಬ್ಬಳ್ಳಿಯಲ್ಲಿ ಕಿಂಗ್‌ಪಿನ್‌ ಅರೆಸ್ಟ್!

    ಈ ಬಗ್ಗೆ ಮಾಧ್ಯಮದವರೊಂದಿಗೆ ಮಾತನಾಡಿದ ಮಹಿಳೆ, ನೀರಿನಲ್ಲಿ ಮುಳುಗಿಸುವ ಮುನ್ನ 7 ದಿನಗಳ ಕಾಲ ಗಣೇಶನ ಮೂರ್ತಿಯನ್ನು ಇಟ್ಟಿರುತ್ತೇವೆ. ನಾನು ಮತ್ತು ನನ್ನ ಕುಟುಂಬಸ್ಥರು ಪ್ರತಿದಿನ ಪೂಜೆ ಮಾಡಿ, ದೇವರಿಗೆ ಮೋದಕವನ್ನು ನೈವೇದ್ಯೆ ಮಾಡಿ ಇಡುತ್ತೇವೆ. ನನಗೆ ಗಣೇಶನ ಮೇಲೆ ಅಪಾರವಾದ ನಂಬಿಕೆ ಇದೆ. ಅಲ್ಲದೇ ಗಣೇಶ ಕೂರಿಸಲು ನನ್ನ ಮನೆಯವರು ವಿರೋಧ ವ್ಯಕ್ತಪಡಿಸಲಿಲ್ಲ. ನಾನು ಮತ್ತು ನನ್ನ ಕುಟುಂಬ ಎಲ್ಲಾ ಹಬ್ಬಗಳನ್ನು ಧರ್ಮದ ಭೇದವಿಲ್ಲದೆ ಆಚರಿಸುತ್ತೇವೆ. ನನ್ನ ಪತಿ ಆಸಿಫ್ ಖಾನ್ ಅವರು ಕೂಡ ನನ್ನ ನಂಬಿಕೆಯನ್ನು ಬೆಂಬಲಿಸುತ್ತಾರೆ ಮತ್ತು ಇಡೀ ಕುಟುಂಬ ಹಬ್ಬವನ್ನು ಆಚರಿಸುತ್ತೇವೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ಮನವಿ ಸಲ್ಲಿಸಲು ಬಂದ ಮಹಿಳೆಗೆ ಗದರಿದ ಅರವಿಂದ ಲಿಂಬಾವಳಿ

    ಗಣೇಶ ಚತುರ್ಥಿ ಹಿಂದೂ ಪಂಚಾಂಗದ ಪ್ರಕಾರ ತಿಂಗಳ ಭಾದ್ರಪದದ ನಾಲ್ಕನೇ ದಿನದಂದು ಪ್ರಾರಂಭವಾಗುತ್ತದೆ. ಮಹಾರಾಷ್ಟ್ರ, ಪಶ್ಚಿಮ ಮತ್ತು ದಕ್ಷಿಣ ಭಾರತದ ಹಲವೆಡೆ ಗಣೇಶನ ಆಶೀರ್ವಾದವನ್ನು ಪಡೆಯಲು ಲಕ್ಷಾಂತರ ಭಕ್ತರು ಒಟ್ಟಿಗೆ ಸೇರಿ ಹಬ್ಬವನ್ನು ಸಂಭ್ರಮದಿಂದ ಆಚರಿಸುತ್ತಾರೆ.

    Live Tv
    [brid partner=56869869 player=32851 video=960834 autoplay=true]

  • ಗಣೇಶೋತ್ಸವದಲ್ಲಿ ಡಿಜೆಗೆ ಅವಕಾಶ ನೀಡದಿದ್ರೆ, ಪೊಲೀಸ್ ಠಾಣೆ ಎದುರು ಗಣೇಶ ಮೂರ್ತಿ ಇಟ್ಟು ಧರಣಿ ಮಾಡಿ – ಮುತಾಲಿಕ್

    ಗಣೇಶೋತ್ಸವದಲ್ಲಿ ಡಿಜೆಗೆ ಅವಕಾಶ ನೀಡದಿದ್ರೆ, ಪೊಲೀಸ್ ಠಾಣೆ ಎದುರು ಗಣೇಶ ಮೂರ್ತಿ ಇಟ್ಟು ಧರಣಿ ಮಾಡಿ – ಮುತಾಲಿಕ್

    ಬೆಳಗಾವಿ: ಗಣೇಶೋತ್ಸವದಲ್ಲಿ ಡಿಜೆಗೆ ಅವಕಾಶ ನೀಡದಿದ್ದರೆ, ಪೊಲೀಸ್‌ ಠಾಣೆ ಎದುರು ಗಣೇಶ ಮೂರ್ತಿ ಇಟ್ಟು ಧರಣಿ ಮಾಡಿ ಎಂದು ಶ್ರೀರಾಮ ಸೇನೆ ಸಂಸ್ಥಾಪಕ ಅಧ್ಯಕ್ಷ ಪ್ರಮೋದ್‌ ಮುತಾಲಿಕ್‌ ಕರೆ ನೀಡಿದರು.

    ತಾಲೂಕಿನ ಹಿರೇಬಾಗೆವಾಡಿ ಗ್ರಾಮದಲ್ಲಿ ಮಾತನಾಡಿದ ಅವರು, ಪ್ರಸಕ್ತ ವರ್ಷದಿಂದ ಮುಕ್ತವಾಗಿ ಗಣೇಶೋತ್ಸವ ಕಾರ್ಯಕ್ರಮ ನಡೆಯುತ್ತಿದೆ. ಹೀಗಾಗಿ ಗಣೇಶೋತ್ಸವದಲ್ಲಿ ಡಿಜೆಗೆ ಅವಕಾಶ ನೀಡಬೇಕು. ಡಿಜೆ ಹಾಕಬೇಡಿ, ಸೌಂಡ್ ಹಾಕಬೇಡಿ, ಅನುಮತಿ ಪಡೆಯಬೇಕು ಅಂತಾ ಕಿರಿಕಿರಿ ಮಾಡಬೇಡಿ ಎಂದು ಪೊಲೀಸರಿಗೆ ಮನವಿ ಮಾಡಿಕೊಂಡಿದರು. ಇದನ್ನೂ ಓದಿ: ಬ್ಲೇಡ್‍ನಿಂದ ಸಾವರ್ಕರ್ ಫ್ಲೆಕ್ಸ್ ಹರಿದ ಕಿಡಿಗೇಡಿಗಳು!

    ಕೋವಿಡ್ ಕಾರಣದಿಂದಾಗಿ ಎರಡು ವರ್ಷ ಸಾರ್ವಜನಿಕ ಗಣೇಶೋತ್ಸವ ಆಗಿರಲಿಲ್ಲ. ಈ ವರ್ಷದಿಂದ ಮುಕ್ತವಾದ ಗಣೇಶೋತ್ಸವ ಕಾರ್ಯಕ್ರಮ ನಡೀತಿದೆ. ಸೌಂಡ್ ಸಿಸ್ಟಮ್, ಲೈಟಿಂಗ್‌ನವರಿಗೆ ಯಾವುದೇ ರೀತಿಯ ನಿರ್ಬಂಧ ಹಾಕಬಾರದು ಎಂದು ಹೇಳಿದರು.

    ಸೌಂಡ್ ಸಿಸ್ಟಮ್, ಲೈಟಿಂಗ್‌ನವರು ಸಾಲಸೋಲ ಮಾಡಿ ಕಷ್ಟ ಅನುಭವಿಸಿದ್ದಾರೆ. ಸರ್ಕಾರ, ಪೊಲೀಸ್ ಇಲಾಖೆಗೆ ನಾನು ಹೇಳುತ್ತಿದ್ದೇನೆ. ಈ ಬಾರಿ ಗಣೇಶೋತ್ಸವದಿಂದ ಅವರ ಬದುಕಿಗೆ ಒಂದು ಆಧಾರ ಆಗುತ್ತದೆ. ಸ್ವತಂತ್ರವಾಗಿ ಆಚರಣೆಗೆ ಅವಕಾಶ ಕೊಡಿ. ಅವರ ಹೊಟ್ಟೆ ಮೇಲೆ ಕಲ್ಲು ಹಾಕಬೇಡಿ. ಡಿಜೆ ಸೀಜ್ ಮಾಡ್ತೀವಿ ಅಂತಾ ಹೆದರಿಸುವ ಪ್ರಕ್ರಿಯೆ ಮಾಡಬಾರದು. ವರ್ಷಕ್ಕೊಮ್ಮೆ ಡಿಜೆ ಹಾಕಿ ಆನಂದದಿಂದ ಹಬ್ಬದ ಆಚರಣೆ ಮಾಡಲಾಗುತ್ತಿದೆ ಎಂದರು. ಇದನ್ನೂ ಓದಿ: ಇಂದು ತನಿಖಾಧಿಕಾರಿ ಕೈಗೆ ವಿದ್ಯಾರ್ಥಿನಿಯರ ಹೇಳಿಕೆ – ಮುರುಘಾ ಶ್ರೀಗೆ ಸಿಗುತ್ತಾ ಜಾಮೀನು..?

    ಸುಪ್ರೀಂ ಕೋರ್ಟ್ ಆಜ್ಞೆ ಬಗ್ಗೆ ನೀವು ಹೇಳುವುದಾದರೆ, ಪ್ರತಿ ದಿವಸ ಮಸೀದಿಗಳಲ್ಲಿ ಐದು ಬಾರಿ ನಮಾಜ್ ಮಾಡೋದು ಎಷ್ಟು ಕಿರಿಕಿರಿ ಆಗ್ತಿದೆ. ಒಂದೇ ಒಂದು ಮಸೀದಿಯ ಮೈಕ್ ಕೆಳಗಿಳಿಸಿ ಸೀಜ್ ಮಾಡಿದ್ದು ತೋರಿಸಿ. ನಿಮ್ಮ ಕಾನೂನು ಹಿಂದೂಗಳಿಗೆ ಮಾತ್ರ ಆಗುತ್ತಾ, ಮುಸ್ಲಿಮರಿಗೆ ಇಲ್ವಾ ಎಂದು ಪ್ರಶ್ನೆ ಮಾಡಿದ ಅವರು, ಗಣೇಶೋತ್ಸವದಲ್ಲಿ ಡಿಜೆಗೆ ಅವಕಾಶ ಕೊಡಬೇಕು. ಇಲ್ಲದಿದ್ದರೆ ನಾನು ಸಾರ್ವಜನಿಕ ಗಣೇಶೋತ್ಸವ ಮಂಡಳಿಗಳಿಗೆ ಹೇಳುತ್ತಿದ್ದೇ‌ನೆ. ಡಿಜೆಯನ್ನು ಹಚ್ಚಿ ಮೆರವಣಿಗೆ ಮಾಡಿ. ಯಾರು ತಡೀತಾರೆ ನೋಡೋಣ. ಅಕಸ್ಮಾತ್ ತಡೆದರೆ, ಪೊಲೀಸ್ ಠಾಣೆ ಎದುರು ಗಣೇಶನ ಇಟ್ಟುಕೊಂಡು ಧರಣಿ ಮಾಡಿ ಎಂದು ತಿಳಿಸಿದರು.

    Live Tv
    [brid partner=56869869 player=32851 video=960834 autoplay=true]

  • ʼಪುಷ್ಪʼ ಸ್ಟೈಲ್‌ನಲ್ಲಿ ಮಿಂಚಿದ ಗಣಪ

    ʼಪುಷ್ಪʼ ಸ್ಟೈಲ್‌ನಲ್ಲಿ ಮಿಂಚಿದ ಗಣಪ

    ಮುಂಬೈ: ದೇಶಾದ್ಯಂತ ಗಣೇಶ ಚತುರ್ಥಿ ಸಂಭ್ರಮ ಜೋರಾಗಿದೆ. ಹಬ್ಬ ಆಚರಿಸಲು ವಿವಿಧ ಬಗೆಯ ಗಣೇಶ ಮೂರ್ತಿಗಳನ್ನು ಭಕ್ತರು ಮನೆಗಳಿಗೆ ತಂದಿದ್ದಾರೆ. ಕುತೂಹಲಕಾರಿ ಅಂಶವೆಂದರೆ ಕೆಲವರು ಜನಪ್ರಿಯ ಸಿನಿಮಾಗಳ ಸ್ಟೈಲ್‌ ಮಾದರಿಯ ಗಣೇಶ ಮೂರ್ತಿಗಳನ್ನು ಕೂರಿಸಿ ಗಮನ ಸೆಳೆದಿದ್ದಾರೆ.

    ‘ಪುಷ್ಪ’ ಸಿನಿಮಾದಲ್ಲಿ ಅಲ್ಲು ಅರ್ಜುನ್ ಅವರು ಗಡ್ಡ ಸವರುವ ಸ್ಟೈಲ್‌ ದೇಶವಷ್ಟೇ ಅಲ್ಲ ವಿದೇಶದಲ್ಲೂ ಜನಪ್ರಿಯತೆ ಗಳಿಸಿತ್ತು. ವಿವಿಧ ಕ್ಷೇತ್ರಗಳಲ್ಲಿ ಖ್ಯಾತಿ ಗಳಿಸಿರುವವರೂ ಈ ಸ್ಟೈಲ್‌ ಅನುಕರಿಸಿ ಖುಷಿಪಟ್ಟಿದ್ದರು. ಅದೇ ಮಾದರಿಯ ಗಣೇಶ ಮೂರ್ತಿಯನ್ನು ಪ್ರತಿಷ್ಠಾಪಿಸಿ ಮುಂಬೈನಲ್ಲಿ ಭಕ್ತರು ಸುದ್ದಿಯಾಗಿದ್ದಾರೆ. ಸಿನಿಮಾದಲ್ಲಿ ಅಲ್ಲು ಅರ್ಜುನ್‌ ಕುರ್ತಾ-ಪೈಜಾಮ್‌ ಧರಿಸಿ ಗಡ್ಡ ಸವರುವ ಮಾದರಿಯಲ್ಲೇ ಗಣೇಶ ಮೂರ್ತಿ ರೂಪಿಸಲಾಗಿದೆ. ಮೂರ್ತಿಯ ಚಿತ್ರ ಸೋಷಿಯಲ್‌ ಮೀಡಿಯಾದಲ್ಲಿ ಸಖತ್‌ ವೈರಲ್‌ ಆಗುತ್ತಿದೆ. ಇದನ್ನೂ ಓದಿ: ಫ್ರೀ ಗಣೇಶನಿಗಾಗಿ ಮುಗಿಬಿದ್ದ ಯುವಕರು

    ಕಲಾವಿದರ ಪ್ರತಿಭೆ ಹಾಗೂ ಅಭಿಮಾನಿಗಳ ಫ್ಯಾನ್ಸ್‌ ಕ್ರೇಜ್‌ನ್ನು ಕೆಲವರು ಹೊಗಳಿದ್ದಾರೆ. ವಿಗ್ರಹ ತಯಾರಕರ ಸೃಜನಶೀಲತೆಯನ್ನು ಹಲವರು ಇಷ್ಟಪಡದೇ ನೆಗೆಟಿವ್‌ ಕಾಮೆಂಟ್‌ ಮಾಡಿದ್ದಾರೆ.

    ದೇವ ಗಣಪನನ್ನು ನಾವು ದೇವರಂತೆಯೇ ಭಾವಿಸಬೇಕು. ದೇವರು ಎಂದು ಭಾವಿಸುವವರು ಈ ರೀತಿ ಮಾಡುವುದಿಲ್ಲ. ನೀವು ಅಲ್ಲು ಅರ್ಜುನ್‌ ಅಭಿಮಾನಿಗಳಾಗಿದ್ದರೆ, ದಯವಿಟ್ಟು ಅಭಿಮಾನವನ್ನು ಹಾಗೆಯೇ ಇಟ್ಟುಕೊಳ್ಳಿ. ಈ ರೀತಿಯ ಕೆಲಸಗಳನ್ನು ಮಾಡಬೇಡಿ ಎಂದು ಸಿನಿಮಾ ಮಾದರಿ ಗಣಪ ಮೂರ್ತಿ ಪ್ರತಿಷ್ಠಾಪಿಸಿರುವವರ ಕುರಿತು ಕೆಲವರು ಕಾಮೆಂಟ್‌ ಮಾಡಿದ್ದಾರೆ. ಇದನ್ನೂ ಓದಿ: ಹುಬ್ಬಳ್ಳಿ ಈದ್ಗಾದಲ್ಲಿ ಬೆಳ್ಳಂಬೆಳಗ್ಗೆ ಗಣೇಶ ಮೂರ್ತಿ ಪ್ರತಿಷ್ಠಾಪನೆ

    ದೇವರು ಗಣಪತಿಯನ್ನು ನೀವು ಅಪಹಾಸ್ಯ ಮಾಡುತ್ತಿದ್ದೀರಿ ಎಂದು ಕೆಲವರು ಕಾಮೆಂಟ್‌ ಮಾಡಿದ್ದಾರೆ. ನಿರ್ದೇಶಕ ಸುಕುಮಾರ್‌ ನಿರ್ದೇಶನದಲ್ಲಿ ಮೂಡಿ ಬಂದ ‘ಪುಷ್ಪʼ ಡಿಸೆಂಬರ್ 2021ರಲ್ಲಿ ತೆರೆ ಕಂಡಿತು. ಅಲ್ಲು ಅರ್ಜುನ್‌, ರಶ್ಮಿಕಾ ಮಂದಣ್ಣ ನಟನೆಯ ಚಿತ್ರವು ಬ್ಲಾಕ್‌ಬಸ್ಟರ್‌ ಆಗಿ ಹೊರಹೊಮ್ಮಿತು.

    Live Tv
    [brid partner=56869869 player=32851 video=960834 autoplay=true]

  • ಫ್ರೀ ಗಣೇಶನಿಗಾಗಿ ಮುಗಿಬಿದ್ದ ಯುವಕರು

    ಫ್ರೀ ಗಣೇಶನಿಗಾಗಿ ಮುಗಿಬಿದ್ದ ಯುವಕರು

    ಮಂಡ್ಯ: ದೇಶದೆಲ್ಲೆಡೆ ಗಣೇಶ ಹಬ್ಬದ ಸಂಭ್ರಮ ಮನೆ ಮಾಡಿದೆ. ಎಲ್ಲೆಡೆ ವಿಧ ವಿಧದ ಗಣೇಶ ಮೂರ್ತಿಗಳನ್ನು ಖರೀದಿಸಿ ಮನೆಗಳಲ್ಲಿ, ಏರಿಯಾಗಳಲ್ಲಿ ಕೂರಿಸಲಾಗುತ್ತಿದೆ. ಜಿಲ್ಲೆಯ ಪಾಂಡವಪುರದಲ್ಲಿ ಉಚಿತ ಗಣೇಶ ಮೂರ್ತಿ ಪಡೆದುಕೊಳ್ಳಲು ಯುವಕರು ಮುಗಿಬಿದ್ದಿದ್ದಾರೆ.

    ಬಿಜೆಪಿ ಟಿಕೆಟ್‌ ಆಕಾಂಕ್ಷಿ ಡಾ. ಇಂದ್ರೇಶ್‌ ಅವರು ಗಣೇಶ ಮೂರ್ತಿಗಳನ್ನು ಉಚಿತವಾಗಿ ವಿತರಿಸಿದರು. ಗಣೇಶೋತ್ಸವ ನೆಪದಲ್ಲಿ ಚುನಾವಣೆ ಪ್ರಚಾರಕ್ಕೆ ಮುಂದಾಗಿದ್ದಾರೆ. ಉಚಿತ ಗಣೇಶ ಮೂರ್ತಿ ವಿತರಿಸುವುದಾಗಿ ಹತ್ತು ದಿನಗಳ ಮುಂಚೆಯೇ ಘೋಷಣೆ ಮಾಡಿದ್ದರು. ನೋಂದಣಿ ಮಾಡಿಕೊಳ್ಳುವಂತೆ ಮೇಲುಕೋಟೆ ಕ್ಷೇತ್ರದ ಜನರಿಗೆ ಇಂದ್ರೇಶ್‌ ಕರೆ ನೀಡಿದ್ದರು. ಇದನ್ನೂ ಓದಿ: ನಮ್ಮ ಭಾವನೆಗಳನ್ನು ವಿರೋಧಿಸಿದವರಿಗೆ ಕಪಾಳಮೋಕ್ಷವಾಗಿದೆ: ಮುತಾಲಿಕ್

    ಉಚಿತವಾಗಿ ಗಣೇಶ ಮೂರ್ತಿ ಸಿಗುತ್ತದೆ ಎಂಬ ಆಸೆಯಿಂದ ನೂರಾರು ಸಂಖ್ಯೆಯಲ್ಲಿ ಯುವಕರು ಆಗಮಿಸಿದ್ದರು. ಗಣೇಶ ಮೂರ್ತಿಗಾಗಿ ನಾ ಮುಂದು ತಾ ಮುಂದೆ ಎಂದು ಮುಗಿಬಿದ್ದಿದ್ದರು. ಮೊದಲಿಗೆ ಇಂದ್ರೇಶ್‌ ಅವರು ತಿರಿಸಿದ್ದ 600 ಗೌರಿ-ಗಣೇಶ ಮೂರ್ತಿ ಕ್ಷಣಾರ್ಧದಲ್ಲಿ ಖಾಲಿ ಆಯಿತು.

    ಯುವಕರ ಸಂಖ್ಯೆ ಹೆಚ್ಚಿದ್ದರಿಂದ ಸ್ಥಳೀಯವಾಗಿ ಮತ್ತಷ್ಟು ಗಣೇಶ ಮೂರ್ತಿ ತರಿಸಿ ಹಂಚಲಾಯಿತು. ಫ್ರೀ ಗಣೇಶನಿಗಾಗಿ ನೂಕು ನುಗ್ಗಲು ಕೂಡ ಹೆಚ್ಚಿತ್ತು. ಪರಿಸ್ಥಿತಿ ನಿಭಾಯಿಸಲು ಇಂದ್ರೇಶ್‌ ಬೆಂಬಲಿಗರು ಹರಸಾಹಸ ಪಟ್ಟರು. ಆದರೂ ಕೆಲ ಯುವಕರ ತಂಡಕ್ಕೆ ಗಣೇಶ ಸಿಗದೇ ನಿರಾಸೆಯಾಯಿತು. ಇದನ್ನೂ ಓದಿ: ಹುಬ್ಬಳ್ಳಿ ಈದ್ಗಾದಲ್ಲಿ ಬೆಳ್ಳಂಬೆಳಗ್ಗೆ ಗಣೇಶ ಮೂರ್ತಿ ಪ್ರತಿಷ್ಠಾಪನೆ

    Live Tv
    [brid partner=56869869 player=32851 video=960834 autoplay=true]

  • ಹುಬ್ಬಳ್ಳಿ ಈದ್ಗಾದಲ್ಲಿ ಬೆಳ್ಳಂಬೆಳಗ್ಗೆ ಗಣೇಶ ಮೂರ್ತಿ ಪ್ರತಿಷ್ಠಾಪನೆ

    ಹುಬ್ಬಳ್ಳಿ ಈದ್ಗಾದಲ್ಲಿ ಬೆಳ್ಳಂಬೆಳಗ್ಗೆ ಗಣೇಶ ಮೂರ್ತಿ ಪ್ರತಿಷ್ಠಾಪನೆ

    ಹುಬ್ಬಳ್ಳಿ: ಇಲ್ಲಿನ ಈದ್ಗಾ ಮೈದಾನದಲ್ಲಿ ಗಣೇಶೋತ್ಸವ ಆಚರಣೆಗೆ ಹೈಕೋರ್ಟ್‌ ಮಧ್ಯರಾತ್ರಿ ಗ್ರೀನ್‌ ಸಿಗ್ನಲ್‌ ಕೊಟ್ಟ ಬೆನ್ನಲ್ಲೇ, ಹಿಂದೂಪರ ಸಂಘಟನೆಗಳು ಬುಧವಾರ ಬೆಳ್ಳಂಬೆಳಗ್ಗೆ ಈದ್ಗಾದಲ್ಲಿ ಗಣೇಶ ಮೂರ್ತಿ ಪ್ರತಿಷ್ಠಾಪನೆ ಮಾಡಿದ್ದಾರೆ.

    ಹೈಕೋರ್ಟ್‌ ತೀರ್ಪು ಪ್ರಶ್ನಿಸಿ ಅಂಜುಮಾನ್‌ ಇಸ್ಲಾಂ ಸಂಸ್ಥೆ ಸುಪ್ರೀಂ ಕೋರ್ಟ್‌ ಮೆಟ್ಟಿಲೇರಿದೆ. ಸುಪ್ರೀಂ ವಿಚಾರಣೆಗೂ ಮುನ್ನವೇ ಹಿಂದೂ ಸಂಘಟನೆಗಳು ಗಣೇಶ ಮೂರ್ತಿ ಪ್ರತಿಷ್ಠಾಪನೆಯಲ್ಲಿ ಸಮಯ ಬದಲಾವಣೆ ಮಾಡಿಕೊಂಡಿವೆ. ಇಂದು ಮಧ್ಯಾಹ್ನ 12 ಗಂಟೆ ಬದಲಿಗೆ ಬೆಳಗ್ಗೆ 7:30ಕ್ಕೆ 4 ಅಡಿ ಇರುವ ಸಿಂಹಾಸನಾರೂಢ ಗಣೇಶ ಮೂರ್ತಿಯನ್ನು ಪ್ರತಿಷ್ಠಾಪಿಸಿವೆ. ಉತ್ಸವ ಮೂರ್ತಿ ಬಿಟ್ಟು, ಸಣ್ಣ ಗಣಪತಿ ಮೂರ್ತಿ ಪ್ರತಿಷ್ಟಾಪಿಸಲಾಗಿದೆ. ಇದನ್ನೂ ಓದಿ: ಮಧ್ಯರಾತ್ರಿ ತುರ್ತು ವಿಚಾರಣೆ – ಹುಬ್ಬಳ್ಳಿ ಈದ್ಗಾ ಮೈದಾನದಲ್ಲಿ ಗಣೇಶೋತ್ಸವಕ್ಕೆ ಅನುಮತಿ

    ಧಾರವಾಡ ಮೂಲದ ವ್ಯಕ್ತಿ ದೇಣಿಗೆ ನೀಡಿರುವ ಮೂರ್ತಿಯನ್ನು ಉತ್ಸವ ಸಮಿತಿ ಅಧ್ಯಕ್ಷ ಸಂಜೀವ್ ಬಡೆಸ್ಕರ್ ನೇತೃತ್ವದಲ್ಲಿ ಪ್ರತಿಷ್ಠಾಪಿಸಲಾಯಿತು. ಮೈದಾನದಲ್ಲಿ ಗಣೇಶ ಮೂರ್ತಿ ಪ್ರತಿಷ್ಠಾಪನೆ ಬೆನ್ನಲ್ಲೇ ಪೊಲೀಸ್‌ ಕಮಿಷನರ್‌ ಲಾಭೂರಾಮ್‌ ಸ್ಥಳಕ್ಕೆ ಧಾವಿಸಿದ್ದಾರೆ. ಯಾವುದೇ ಅಹಿತಕರ ಘಟನೆಗಳು ಜರುಗದಂತೆ ನೋಡಿಕೊಳ್ಳಲು ಬಿಗಿ ಪೊಲೀಸ್‌ ಬಂದೋಬಸ್ತ್‌ ಕಲ್ಪಿಸಿದ್ದಾರೆ.

    ಪೂಜೆಯಲ್ಲಿ ಉತ್ಸವ ಸಮಿತಿ ಅಧ್ಯಕ್ಷ ಸಂಜೀವ್ ಬಡೆಸ್ಕರ್, ಪಾಲಿಕೆ ಸದಸನ ಸಮಿತಿ ಅಧ್ಯಕ್ಷ ಸಂತೋಷ ಚೌಹ್ವಾಣ್ ಸೇರಿ ಹಿಂದೂ ಸಂಘಟನೆಗಳ ಹಲವರು ಮುಖಂಡರು ಭಾಗಿಯಾಗಿದ್ದಾರೆ. ಇದನ್ನೂ ಓದಿ: ಶೀತಲ ಸಮರವನ್ನು ಕೊನೆಗೊಳಿಸಿದ್ದ ಸೋವಿಯತ್ ನಾಯಕ ಮಿಖಾಯಿಲ್ ಗೋರ್ಬಚೇವ್ ನಿಧನ

    Live Tv
    [brid partner=56869869 player=32851 video=960834 autoplay=true]