Tag: ganesha festival

  • ಗಣೇಶ ವಿಸರ್ಜನೆ ವೇಳೆ ಭಜರಂಗದಳದ ತಾಲೂಕು ಸಂಚಾಲಕ ದುರ್ಮರಣ

    ಗಣೇಶ ವಿಸರ್ಜನೆ ವೇಳೆ ಭಜರಂಗದಳದ ತಾಲೂಕು ಸಂಚಾಲಕ ದುರ್ಮರಣ

    ದಾವಣಗೆರೆ: ಗಣಪತಿ ವಿಸರ್ಜನೆ ವೇಳೆ ಟ್ರ್ಯಾಕ್ಟರ್ ಗೆ ವಿದ್ಯುತ್ ತಗುಲಿದ ಪರಿಣಾಮ ಭಜರಂಗ ದಳದ ತಾಲೂಕು ಸಂಚಾಲಕ ಸಾವನ್ನಪ್ಪಿರುವ ಘಟನೆ ಜಿಲ್ಲೆಯ ಹರಪನಹಳ್ಳಿ ಪಟ್ಟಣದಲ್ಲಿ ನಡೆದಿದೆ.

    ಹರಪನಹಳ್ಳಿ ನಿವಾಸಿ ಭಜರಂಗಿ ಹನುಮಂತು (27) ಮೃತಪಟ್ಟ ದುರ್ದೈವಿ. ಭಾನುವಾರ ರಾತ್ರಿ ಪಟ್ಟಣದ ಹಿಂದೂ ಮಹಾ ಗಣಪತಿ ವಿಸರ್ಜನೆಯನ್ನು ಅದ್ಧೂರಿಯಾಗಿ ಹಮ್ಮಿಕೊಳ್ಳಲಾಗಿತ್ತು. ಈ ವೇಳೆ ಮೆರವಣಿಗೆ ಮುಗಿಸಿ ತಡರಾತ್ರಿ 11 ಸುಮಾರಿಗೆ ಗಣೇಶ ಮೂರ್ತಿಯನ್ನು ವಿಸರ್ಜನೆ ಮಾಡಲು ಹೋಗುತ್ತಿರುವಾಗ ಮಿನಿ ವಿಧಾನಸೌಧದ ಬಳಿ ಟ್ರ್ಯಾಕ್ಟರ್ ಗೆ ವಿದ್ಯುತ್ ತಂತಿ ತಗುಲಿದೆ. ಕೂಡಲೇ ಟ್ರಾಕ್ಟರ್ ನಲ್ಲಿದ್ದ ಹಲವರು ಕೆಳಗಿಳಿದು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಆದರೆ ಹನುಮಂತು ಇಳಿಯುವ ಹೊತ್ತಿಗೆ ಟ್ರಾಕ್ಟರ್ ಗೆ ವಿದ್ಯುತ್ ಸ್ಪರ್ಶಿಸಿದ್ದರಿಂದ ತೀವ್ರವಾಗಿ ಅಸ್ವಸ್ಥಗೊಂಡಿದ್ದರು.

    ಕೂಡಲೇ ಸಂಘಟನೆಯ ಯುವಕರು ಹನುಮಂತುರವರನ್ನು ಆಸ್ಪತ್ರೆಗೆ ಸಾಗಿಯಲು ಯತ್ನಿಸಿದಾದರೂ ಮಾರ್ಗಮಧ್ಯೆಯೇ ಅಸುನೀಗಿದ್ದಾರೆ. ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಘಟನೆ ಸಂಬಂಧ ಹರಪನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಆಜಾನ್ ವೇಳೆ ಗಣೇಶ ಮೆರವಣಿಗೆ ನಿಲ್ಲಿಸಿದ ಯುವಕರಿಗೆ ಪ್ರಶಂಸೆ: ವಿಡಿಯೋ ನೋಡಿ

    ಆಜಾನ್ ವೇಳೆ ಗಣೇಶ ಮೆರವಣಿಗೆ ನಿಲ್ಲಿಸಿದ ಯುವಕರಿಗೆ ಪ್ರಶಂಸೆ: ವಿಡಿಯೋ ನೋಡಿ

    ಕೊಪ್ಪಳ: ಜಿಲ್ಲೆಯ ಗಂಗಾವತಿ ತಾಲೂಕಿನ ಸಂಗಾಪುರದಲ್ಲಿ ಗಣೇಶ ಮೂರ್ತಿ ವಿಸರ್ಜನಾ ಮೆರವಣಿಗೆ ವೇಳೆ ಆಜಾನ್ ಕೇಳಿದ್ದರಿಂದ ಯುವಕರು ಮೆರವಣಿಗೆಯನ್ನು ನಿಲ್ಲಿಸಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಪ್ರಂಶಸೆಗೆ ಕಾರಣವಾಗಿದೆ.

    ಹೌದು, ಸಂಗಾಪೂರದ ವಿನಾಯಕ ಗೆಳೆಯರ ಬಳಗದ ಯುವಕರು ಅದ್ಧೂರಿಯಾಗಿ ಬುಧವಾರ ಗಣೇಶ ವಿಸರ್ಜನೆ ಮೆರವಣಿಗೆಯನ್ನು ಹಮ್ಮಿಕೊಂಡಿದ್ದರು. ಈ ವೇಳೆ ಮೆರವಣಿಗೆ ಸಾಗುತ್ತಿರುವಾಗ ಹತ್ತಿರದ ಮಸೀದಿಯಿಂದ ಆಜಾನ್ ಕೇಳಿಬಂದಿದೆ. ಆಜಾನ್ ಕೇಳಿದ ಕೂಡಲೇ ಯುವಕರು ಮೆರವಣಿಗೆಯನ್ನು ಸ್ವಲ್ಪ ಸಮಯದ ಕಾಲ ನಿಲ್ಲಿಸಿ ಬಳಿಕ ಮುಂದುವರಿಸಿದ್ದರು.

    ಯುವಕರು ಆಜಾನ್ ವೇಳೆ ಮೆರವಣಿಗೆಯನ್ನು ನಿಲ್ಲಿಸಿ ಗೌರವ ಸೂಚಿಸಿದ್ದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ವೈರಲ್ ಆಗಿದ್ದು, ವಿನಾಯಕ ಗೆಳೆಯರ ಬಳಗದ ಯುವಕರ ತಂಡಕ್ಕೆ ಜಾಲತಾಣಿಗರು ಸಾಕಷ್ಟು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

    ಗಣೇಶ ಹಬ್ಬವು ಹಿಂದೂ-ಮುಸ್ಲಿಂ ಭಾವೈಕ್ಯತೆಯ ಪ್ರತೀಕವಾಗಿದೆ ಎಂಬುದನ್ನು ಯುವಕರು ಮತ್ತೊಮ್ಮೆ ಸಾಬೀತುಪಡಿಸಿದ್ದಾರೆ. ಹೀಗೆ ಹಲವರು ತಮ್ಮ-ತಮ್ಮ ಅಭಿಪ್ರಾಯಗಳನ್ನು ಫೇಸ್ಬುಕ್‍ಗಳಲ್ಲಿ ಹಂಚಿಕೊಂಡಿದ್ದಾರೆ.

    https://www.youtube.com/watch?v=KSo13tmCOgU

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಗಣೇಶ ವಿಸರ್ಜನೆ ವೇಳೆ ಡಿಜೆ ಬಳಕೆ ನಿಷೇಧ- ಡಿಸಿ ವಿರುದ್ಧ ಸಂಸದ ಗರಂ

    ಗಣೇಶ ವಿಸರ್ಜನೆ ವೇಳೆ ಡಿಜೆ ಬಳಕೆ ನಿಷೇಧ- ಡಿಸಿ ವಿರುದ್ಧ ಸಂಸದ ಗರಂ

    ಕೊಪ್ಪಳ: ಜಿಲ್ಲೆಯಾದ್ಯಂತ ಗಣೇಶ ಉತ್ಸವ ಸೇರಿ ಇತರ ಕಾರ್ಯಕ್ರಮಗಳಲ್ಲೂ ಡಿಜೆ ಬಳಕೆ ನಿಷೇಧಿಸಿ ಜಿಲ್ಲಾಧಿಕಾರಿ ಆದೇಶ ಹೊರಡಿಸಿರುವುದು ಸಂಸದ ಸಂಗಣ್ಣ ಕರಡಿ ಆಕ್ರೋಶಕ್ಕೆ ಕಾರಣವಾಗಿದೆ.

    ಗಣೇಶ ವಿಸರ್ಜನೆ ಅಂದರೆ ಹಬ್ಬ, ಆಡಂಬರ ಮತ್ತು ಡಿಜೆ ಸೌಂಡ್‍ನೊಂದಿಗೆ ಕುಣಿತ ಸಾಮಾನ್ಯ. ಆದರೆ ಕೊಪ್ಪಳ ಜಿಲ್ಲೆಯಲ್ಲಿ ಕಳೆದ 2 ವರ್ಷದಿಂದ ಡಿಜೆ ನಿಷೇಧಿಸಿದ್ದರಿಂದ ಇಂಥ ಆಡಂಬರಕ್ಕೆ ಬ್ರೇಕ್ ಬಿದ್ದಿದೆ. ಜಿಲ್ಲಾಧಿಕಾರಿಗಳ ಈ ನಡೆಗೆ ಬಿಜೆಪಿಯಿಂದ ಆಯ್ಕೆಯಾಗಿರೋ ಜನಪ್ರತಿನಿಧಿಗಳು ಕೋಪಗೊಂಡಿದ್ದಾರೆ. ಈ ಕಾರಣಕ್ಕೆ ಸಂಸದ ಸಂಗಣ್ಣ ಕರಡಿ ಜಿಲ್ಲಾ ಉಸ್ತುವಾರಿ ಸಚಿವರ ಅಧ್ಯಕ್ಷತೆಯ ಪ್ರಗತಿ ಪರಿಶೀಲನೆ ಸಭೆಯಲ್ಲೇ ಡಿಸಿ ವಿರುದ್ಧ ಸಿಡಿಮಿಡಿಗೊಂಡರು.

    ಕಳೆದ ಮೂರು ವರ್ಷದ ಹಿಂದೆ ಕೊಪ್ಪಳ ಜಿಲ್ಲೆಯಲ್ಲಿ ಬನಾಯೆಂಗೇ ಮಂದಿರ ಎಂಬ ಹಾಡು ನಿಷೇಧಿಸಲಾಗಿತ್ತು. ಎರಡು ವರ್ಷದಿಂದ ಭಾರೀ ಧ್ವನಿಯ ಡಿಜೆ ಬಳಕೆಯನ್ನೇ ನಿಷೇಧಿಸಲಾಗಿದೆ. ಈ ಹಿಂದೆ ಗಂಗಾವತಿ ಶಾಸಕರಾಗಿದ್ದ ಇಕ್ಬಾಲ್ ಅನ್ಸಾರಿ ಅಧಿಕಾರಿಗಳ ಮೇಲೆ ಒತ್ತಡ ಹಾಕಿ ಡಿಜೆ ನಿಷೇಧ ಮಾಡಿದ್ದರು. ಶಾಸಕರ ಈ ಕ್ರಮದ ಕುರಿತು ಚುನಾವಣೆಯಲ್ಲೂ ಚರ್ಚೆಯಾಗಿ ಬಿಜೆಪಿಯ ಕೆಲ ಮುಖಂಡರು, ಗಂಗಾವತಿಯಲ್ಲಿ ಗಣೇಶ ಚತುರ್ಥಿ ವೇಳೆ ಡಿಜೆ ಬಳಕೆ ಮಾಡಬೇಕು ಅಂದ್ರೆ ಬಿಜೆಪಿಗೆ ವೋಟ್ ಮಾಡಿ ಅಂತಾ ಪ್ರಚಾರ ಮಾಡಿದ್ದರು. ಆದರೆ ಗಂಗಾವತಿಯಲ್ಲಿ ಇಕ್ಬಾಲ್ ಅನ್ಸಾರಿ ಸೋಲುಂಡಿದ್ದರೂ ಕಾಂಗ್ರೆಸ್ ಮೈತ್ರಿ ಸರ್ಕಾರ ರಚನೆಯಾಗಿದೆ. ಅನ್ಸಾರಿ ಈ ಬಾರಿಯೂ ಒತ್ತಡ ಹಾಕಿ ಡಿಜೆ ಬ್ಯಾನ್ ಮಾಡಿರೋದು ಬಿಜೆಪಿಗರ ಸಿಟ್ಟಿಗೆ ಕಾರಣವಾಗಿದೆ.

    ಗಣೇಶ ಚತುರ್ಥಿ ಹಿನ್ನೆಲೆಯಲ್ಲಿಯೇ ಕೊಪ್ಪಳದಲ್ಲಿ ಡಿಜೆಗೆ ನಿಷೇಧ ಹೇರಿರುವುದು ವ್ಯಾಪಕ ಚರ್ಚೆಗೆ ಗ್ರಾಸವಾಗಿದೆ. ಹಂಪಿ ಉತ್ಸವ, ಇಟಗಿ ಉತ್ಸವದಲ್ಲಿ ಡಿಜೆಯನ್ನು ಬಳಸುತ್ತಾರೆ. ಆಗ ಆಗದ ತೊಂದರೆ ಗಣೇಶ ಹಬ್ಬದಲ್ಲಿ ತೊಂದರೆಯಾಗುತ್ತಾ ಎಂಬುದು ಗಣೇಶ ಸ್ಥಾಪನಾ ಮಂಡಳಿ ಯುವಕರ ಪ್ರಶ್ನೆಯಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಗಣಪನನ್ನು ಕಾಯುತ್ತಿದ್ದ ಯುವಕ ವಿದ್ಯುತ್ ಶಾಕ್‍ಗೆ ಬಲಿ!

    ಗಣಪನನ್ನು ಕಾಯುತ್ತಿದ್ದ ಯುವಕ ವಿದ್ಯುತ್ ಶಾಕ್‍ಗೆ ಬಲಿ!

    ರಾಮನಗರ: ಬೀದಿಯಲ್ಲಿ ಕೂರಿಸಿದ್ದ ಗಣಪನನ್ನು ಕಾಯುತಿದ್ದ ಯುವಕನೊಬ್ಬ ವಿದ್ಯುತ್ ತಗುಲಿ ಮೃತಪಟ್ಟ ಧಾರೂಣ ಘಟನೆ ರಾಮನಗರ ತಾಲೂಕಿನ ಜಾಲಮಂಗಲದಲ್ಲಿ ನಡೆದಿದೆ.

    ಚೇತನ್ ಕುಮಾರ್ (16) ಮೃತ ದುರ್ದೈವಿ. ಜಾಲಮಂಗಲದಲ್ಲಿ ಬೀದಿಯಲ್ಲಿ ಪ್ರತಿಷ್ಠಾಪಿಸಿದ್ದ ಗಣಪತಿ ಮೂರ್ತಿಯನ್ನು ಚೇತನ್ ಸೇರಿದಂತೆ ನಾಲ್ಕು ಮಂದಿ ಕಾವಲು ಕಾಯುತ್ತಿದ್ದರು. ಶನಿವಾರವೂ ಸಹ ಕಾವಲು ಕಾಯುತ್ತಿದ್ದಾಗ, ಮೂತ್ರ ವಿಸರ್ಜನೆಗೆಂದು ಚೇತನ್ ತೆರಳಿದ್ದನು. ಈ ವೇಳೆ ಬೀದಿ ಲೈಟ್‍ಗೆ ಅಳವಡಿಸಿದ್ದ ವಿದ್ಯುತ್ ತಂತಿ ತಗಲು ಸ್ಥಳದಲ್ಲೇ ಮೃತಪಟ್ಟಿದ್ದಾನೆ.

    ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಆಗಮಿಸಿದ ಪೊಲೀಸರು ಪರಿಶೀಲನೆ ನಡೆಸಿ, ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿಕೊಟ್ಟಿದ್ದಾರೆ. ಘಟನೆ ಸಂಬಂಧ ರಾಮನಗರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಹಬ್ಬ ಮುಗಿಸಿ ವಾಪಸ್ಸಾಗ್ತಿದ್ದಾಗ ಅಪಘಾತ- ತಾಯಿ, ಮಗಳು ದುರ್ಮರಣ

    ಹಬ್ಬ ಮುಗಿಸಿ ವಾಪಸ್ಸಾಗ್ತಿದ್ದಾಗ ಅಪಘಾತ- ತಾಯಿ, ಮಗಳು ದುರ್ಮರಣ

    ಬೆಂಗಳೂರು: ಅಪರಿಚಿತ ವಾಹನ ಡಿಕ್ಕಿ ಹೊಡೆದು ಆಕ್ಟಿವಾ ಹೊಂಡಾದಲ್ಲಿದ್ದ ತಾಯಿ ಹಾಗೂ ಮಗಳು ಸ್ಥಳದಲ್ಲೇ ಸಾವನ್ನಪ್ಪಿ, ತಂದೆ ಗಂಭೀರವಾಗಿ ಗಾಯಗೊಂಡಿರುವ ಘಟನೆ ನಗರದ ಹೆಬ್ಬಾಳದ ಬಳಿಯಿರುವ ಲುಂಬಿನಿ ಗಾರ್ಡನ್ ಬಳಿ ನಡೆದಿದೆ.

    ಸುರೇಖಾ ಹಾಗೂ ಆರಾಧ್ಯ ಅಪಘಾತದಲ್ಲಿ ಮೃತಪಟ್ಟ ದುರ್ದೈವಿಗಳು. ಸಂಬಂಧಿಕರ ಮನೆಯಲ್ಲಿ ಗಣೇಶನ ಹಬ್ಬ ಮುಗಿಸಿ ದಂಪತಿ ಹಾಗೂ ಅವರ ಮಗಳು ತಮ್ಮ ಆಕ್ಟಿವಾ ಹೊಂಡಾದಲ್ಲಿ ಹಿಂದಿರುಗುತ್ತಿದ್ದರು. ಈ ವೇಳೆ ಲುಂಬಿನಿ ಗಾರ್ಡನ್ ಬಳಿ ಅಪರಿಚಿತ ವಾಹನವೊಂದು ಸ್ಕೂಟರಿಗೆ ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ತಾಯಿ ಸುರೇಖಾ ಹಾಗೂ ಮಗಳು ಆರಾಧ್ಯ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಘಟನೆಯಿಂದಾಗಿ ರಘು ಗಂಭೀರವಾಗಿ ಗಾಯಗೊಂಡಿದ್ದಾರೆ.

    ದಾರಿಹೋಕರು ಅಪಘಾತವಾಗಿರುವುದನ್ನು ಗಮನಿಸಿ, ಕೂಡಲೇ ಆಂಬುಲೆನ್ಸ್ ಮೂಲಕ ಗಂಭೀರವಾಗಿ ಗಾಯಗೊಂಡಿದ್ದ ರಘು ಹಾಗೂ ಮೃತದೇಹಗಳನ್ನು ಆಸ್ಪತ್ರೆಗೆ ರವಾನಿಸಿದ್ದಾರೆ.

    ಘಟನೆ ಸಂಬಂಧ ಹೆಬ್ಬಾಳ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಅದ್ಧೂರಿಯಾಗಿ ಪ್ರತಿಷ್ಠಾಪನೆಗೊಂಡ ಬೃಹತ್ ಹಿಂದೂ ಮಹಾಗಣಪತಿ

    ಅದ್ಧೂರಿಯಾಗಿ ಪ್ರತಿಷ್ಠಾಪನೆಗೊಂಡ ಬೃಹತ್ ಹಿಂದೂ ಮಹಾಗಣಪತಿ

    ಚಿತ್ರದುರ್ಗ: ಕೋಟೆನಾಡಿನಲ್ಲೂ ಗಣಪನ ಸಂಭ್ರಮ ಮನೆಮಾಡಿದ್ದು, ನಗರದ ಪ್ರಸಿದ್ಧ ಹಿಂದೂ ಮಹಾಗಣಪತಿಯ ಬೃಹತ್ ಮೂರ್ತಿಯನ್ನು ಅದ್ಧೂರಿಯಾಗಿ ಕ್ರೀಡಾಂಗಣ ರಸ್ತೆಯ ಖಾಸಗಿ ಶಾಲಾ ಆವರಣದಲ್ಲಿ ಪ್ರತಿಷ್ಠಾಪನೆ ಮಾಡಲಾಗಿದೆ.

    ರಾಜ್ಯದ ಪ್ರಮುಖ ಗಣಪತಿಗಳ ಪೈಕಿ ಅತ್ಯಂತ ಹೆಸರುವಾಸಿಯಾಗಿರುವ ನಗರದ ಹಿಂದೂ ಮಹಾಗಣಪತಿಯು ಮೂರ್ತಿಯನ್ನು ಸಕಲ ಸಂಪ್ರದಾಯಗಳೊಂದಿಗೆ ನೆರವೇರಿಸಲಾಯಿತು. ಪ್ರತಿಷ್ಠಾಪನೆಗೆ ಮಾದಾರ ಗುರುಪೀಠದ ಪೀಠಾಧ್ಯಕ್ಷರಾದ ಮಾದಾರ ಚನ್ನಯ್ಯ ಸ್ವಾಮೀಜಿಗಳು ಸಾನಿಧ್ಯವಹಿಸಿದ್ದರು. ಪ್ರತಿಷ್ಠಾಪನೆಯ ಬಳಿಕ ಸಾವಿರಾರು ಭಕ್ತರು ಬೆಳಗ್ಗಿನಿಂದಲೇ ಸರದಿ ಸಾಲಿನಿಲ್ಲಿ ನಿಂತು ಬೃಹತ್ ಗಣಪನ ದರ್ಶನ ಪಡೆದುಕೊಂಡರು.

    ಒಟ್ಟು 15 ದಿನಗಳ ಕಾಲ ಭಕ್ತರು ಪೂಜೆ ಸಲ್ಲಿಸಿದ್ದು, ಬಳಿಕ ಗಣಪನನ್ನು ಬೃಹತ್ ಶೋಭಾಯಾತ್ರೆಯ ಮೂಲಕ ಚಂದ್ರವಳ್ಳಿಯ ಕೆರೆಯಲ್ಲಿ ವಿಸರ್ಜನೆ ಮಾಡಲಾಗುತ್ತದೆ. ಈ ಶೋಭಾಯಾತ್ರೆಯಲ್ಲಿ ದೇಶದ ವಿವಿಧೆಡೆಗಳಿಂದ ಸಾವಿರಾರು ಭಕ್ತರು ಪಾಲ್ಗೊಳ್ಳುತ್ತಾರೆ. ಪೊಲೀಸ್ ಇಲಾಖೆಯು ಸಹ ಈ ಹಿಂದೂ ಮಹಾಗಣಪತಿ ಶೋಭಾಯಾತ್ರೆಗೆ ಹೆಚ್ಚಿನ ಭದ್ರತೆಯನ್ನು ನೀಡಿ, ಯಾವುದೇ ಅವಘಡಗಳು ನಡೆಯಂತೆ ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಮಾಜಿ ಪ್ರಧಾನಿ ನಿವಾಸಕ್ಕೆ ಡಿಸಿಎಂ ಭೇಟಿ: ರಾಜಕೀಯ ಚರ್ಚೆ ನಡೆಸಿದ್ರಾ ಪರಂ?

    ಮಾಜಿ ಪ್ರಧಾನಿ ನಿವಾಸಕ್ಕೆ ಡಿಸಿಎಂ ಭೇಟಿ: ರಾಜಕೀಯ ಚರ್ಚೆ ನಡೆಸಿದ್ರಾ ಪರಂ?

    ಬೆಂಗಳೂರು: ಪದ್ಮನಾಭನಗರದ ಮಾಜಿ ಪ್ರಧಾನಿ ದೇವೇಗೌಡರ ನಿವಾಸಕ್ಕೆ ಡಿಸಿಎಂ ಜಿ.ಪರಮೇಶ್ವರ್ ಭೇಟಿ ನೀಡಿ, ಗೌರಿ-ಗಣೇಶ ಹಬ್ಬದ ಶುಭಾಶಯಗಳನ್ನು ಕೋರಿದ್ದಾರೆ.

    ಭೇಟಿ ಬಳಿಕ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಅವರು, ಮಾಜಿ ಪ್ರಧಾನಿ ದೇವೇಗೌಡರಿಗೆ ಗಣೇಶ ಹಬ್ಬದ ಶುಭಾಶಯ ಕೋರಲು ಬಂದಿದ್ದೆ. ನೀವು ಅಂದುಕೊಂಡ ಹಾಗೇ ಯಾವುದೇ ವಿಚಾರದ ಬಗ್ಗೆ ಚರ್ಚೆ ಮಾಡಿಲ್ಲ. ಇಂದು ಯಾವುದೇ ರಾಜಕೀಯ ಚರ್ಚೆ ಮಾಡಿಲ್ಲ. ಕಾಂಗ್ರೆಸ್ ಜೆಡಿಎಸ್ ನೇತೃತ್ವದ ಮೈತ್ರಿ ಸರ್ಕಾರ ಸುಭದ್ರವಾಗಿದೆ. ಇತರೆ ಯಾವುದೇ ಬೆಳವಣಿಗೆ ಆಗಿಲ್ಲ. ಬಿಬಿಎಂಪಿ ಹಾಗೂ ರಾಜಕೀಯ ವಿದ್ಯಮಾನಗಳ ಬಗ್ಗೆಯೂ ಸಹ ಮಾತನಾಡಿಲ್ಲ. ಅಲ್ಲದೇ ಅವರು ಒಂದು ಗಂಟೆಗಳ ಕಾಲ ತಮ್ಮ ರಾಜಕೀಯ ಅನುಭವವನ್ನು ನನ್ನೊಂದಿಗೆ ಹಂಚಿಕೊಂಡರು ಎಂದು ಹೇಳಿದರು.

    ಈ ವೇಳೆ ಸುದ್ದಿಗಾರರು ಡಿಕೆ ಶಿವಕುಮಾರ್‍ರವರ ಹಸ್ತಕ್ಷೇಪದ ವಿಚಾರ ಪ್ರಸ್ತಾಪಿಸಿದಾಗ, ಬೆಳಗಾವಿಯಲ್ಲಿ ಪಕ್ಷದ ಕಚೇರಿ ಕಟ್ಟಲು ಡಿಕೆಶಿಯವರಿಗೆ ಜವಾಬ್ದಾರಿ ನೀಡಿದ್ದೆವು. ಹೀಗಾಗಿ ಅವರು ಅಲ್ಲಿಗೆ ಹೋಗಿ ಬಂದು ಮಾಡುತ್ತಿದ್ದರು. ಅಲ್ಲದೇ ಪಕ್ಷದ ಬೆಳವಣಿಗೆ ಹಾಗೂ ಇಲಾಖೆಯಲ್ಲಿನ ಕೆಲಸಗಳ ಕಡೆ ಗಮನಹರಿಸಿದ್ದರು ಅಷ್ಟೇ. ಬೆಳಗಾವಿ ವಿಚಾರದಲ್ಲಿ ಯಾವುದೇ ಸಮಸ್ಯೆ ಇಲ್ಲ. ಅಂತಹ ಸಮಸ್ಯೆ ಇದ್ದರೆ ನಾವೇ ಅದನ್ನು ಸರಿಪಡಿಸುತ್ತೇವೆ. ಇದೆಲ್ಲ ಪಕ್ಷದ ಆಂತರಿಕ ವಿಚಾರ. ಹೀಗಾಗಿ ಎಲ್ಲವನ್ನು ಪರಿಹಾರ ಮಾಡುತ್ತೇವೆ. ಒಂದು ವೇಳೆ ಸಮಸ್ಯೆಯಿದ್ದರೆ ಅದನ್ನು ಪಕ್ಷದ ವೇದಿಕೆಯಲ್ಲೇ ಸರಿಪಡಿಸುತ್ತೇವೆ. ಅಲ್ಲದೇ ಕೆಲವು ಶಾಸಕರ ಕ್ಷೇತ್ರಕ್ಕೆ ಅನುದಾನ ತಡ ಆಗಿರಬಹುದು. ಅದನ್ನು ಶೀಘ್ರವೇ ಸರಿಪಡಿಸುತ್ತೇವೆ ಎಂದು ತಿಳಿಸಿದರು.

    ಈಗಾಗಲೇ ಸಚಿವ ರಮೇಶ್ ಜಾರಕಿಹೊಳಿಯವರನ್ನು ಕರೆದು ಮಾತನಾಡಿದ್ದೇನೆ. ಕ್ಷೇತ್ರದ ಕೆಲವು ಬೆಳವಣಿಗೆಗಳ ಬಗ್ಗೆ ಅವರು ಬೇಸರವಾಗಿದ್ದಾರೆ. ನೀವು ಅಂದುಕೊಂಡ ಹಾಗೆ ಯಾವುದೇ ಬೆಳವಣಿಗೆಗಳು ಇಲ್ಲ. ಯಾವೆಲ್ಲ ಶಾಸಕರು ಪಕ್ಷ ಬಿಟ್ಟು ಹೋಗುತ್ತಾರೆ ಎಂದು ಸುದ್ದಿಯಾಗಿತ್ತು. ಅವರೆಲ್ಲರ ಬಳಿಯೂ ಮಾತನಾಡಿದ್ದೇನೆ. ಯಾರೂ ಸಹ ಪಕ್ಷ ಬಿಡವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ರಮೇಶ್ ಜಾರಕಿಹೊಳಿ ಆಪ್ತ ಶಾಸಕರ ಸಭೆಗಳಿಗೆ ಕಡಿವಾಣ ಹಾಕುತ್ತೇವೆ. ಇಂತಹ ಸಮಸ್ಯೆಗಳನ್ನು ಪಕ್ಷ ಬಹಳ ವರ್ಷಗಳಿಂದ ನೋಡಿಕೊಂಡು ಬಂದಿದೆ. ಜಾರಕಿಹೊಳಿ ಸಹೋದರರಿಗೆ ಅಸಮಾಧಾನ ಇದ್ದರೆ ನೇರವಾಗಿ ನಮ್ಮ ಮುಂದೆಯೇ ಹೇಳಿಕೊಳ್ಳಬಹುದಿತ್ತು. ಅಲ್ಲದೇ ನಾವು ಸರ್ಕಾರ ಅಸ್ಥಿರಗೊಳಿಸುವುದಿಲ್ಲವೆಂದು ನನ್ನ ಬಳಿ ಹೇಳಿದ್ದಾರೆ. ಹೀಗಾಗಿ ಯಾವುದೇ ಸಮಸ್ಯೆ ಇಲ್ಲ ಎಂದು ಹೇಳಿ ಹೊರಟರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಹಬ್ಬಕ್ಕೆ 3 ಸಾವಿರ ಪರಿಸರ ಸ್ನೇಹಿ ಗಣೇಶ ಮೂರ್ತಿ ಹಂಚಿಕೆ: ಸೌಮ್ಯಾ ರೆಡ್ಡಿ

    ಹಬ್ಬಕ್ಕೆ 3 ಸಾವಿರ ಪರಿಸರ ಸ್ನೇಹಿ ಗಣೇಶ ಮೂರ್ತಿ ಹಂಚಿಕೆ: ಸೌಮ್ಯಾ ರೆಡ್ಡಿ

    ಬೆಂಗಳೂರು: ಮಣ್ಣಿನ ಗಣೇಶನನ್ನು ಹಬ್ಬಕ್ಕೆ ಕೂರಿಸುವಂತೆ ಜಯನಗರ ಶಾಸಕಿ ಸೌಮ್ಯರೆಡ್ಡಿ ಮತ್ತು ಬೆಂಬಲಿಗರು ಜೆಪಿ ನಗರದಲ್ಲಿ ರ‍್ಯಾಲಿ ನಡೆಸಿದರು.

    ಈ ಕುರಿತು ಮಾಧ್ಯಮಗಳಿಗೆ ಪ್ರತಿಕ್ರಿಸಿದ ಅವರು, ಬಣ್ಣ ಬಳಿದ ಹಾಗೂ ಪಿಒಪಿ ಗಣೇಶನ ಮೂರ್ತಿಗಳಿಂದ ಪರಿಸರಕ್ಕೆ ಹಾನಿಯಾಗುತ್ತವೆ. ಹೀಗಾಗಿ ಕಳೆದ ವರ್ಷವೇ ಪಿಒಪಿ ಗಣೇಶನ ಮೂರ್ತಿಗಳನ್ನು ರದ್ದುಮಾಡಲಾಗಿದೆ. ನಗರದ ಬಹುತೇಕ ಕೆರೆಗಳು ಮಾಲಿನ್ಯದಿಂದಲೇ ಪ್ರಖ್ಯಾತಿ ಪಡೆದುಕೊಂಡಿವೆ. ಅಲ್ಲದೇ ಗಣೇಶ ಹಬ್ಬದ ಬಳಿಕ ಕೆರೆಗಳ ಮಾಲಿನ್ಯ ಹೆಚ್ಚಾಗುತ್ತವೆ. ಹೀಗಾಗಿ ಜನರಲ್ಲಿ ಜಾಗೃತಿ ಮೂಡಿಸುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದು ಹೇಳಿದರು.

    ಜನರಲ್ಲಿ ಪರಿಸರ ಸ್ನೇಹಿ ಹಾಗೂ ಬಣ್ಣ ರಹಿತ ಗಣೇಶನ ಮೂರ್ತಿಗಳನ್ನು ಬಳಸುವ ಕುರಿತು ಜಾಗೃತಿ ಮೂಡಿಸಲಾಗುತ್ತಿದೆ. ಅಲ್ಲದೇ ಹಬ್ಬದ 10 ಹಾಗೂ 11ನೇ ತಾರೀಖಿನಂದು ಮೂರು ಸಾವಿರ ಮಣ್ಣಿನ ಗಣೇಶನ ಮೂರ್ತಿಗಳನ್ನು ಭಕ್ತಾದಿಗಳಿಗೆ ಹಂಚಲಾಗುತ್ತದೆ. ಈಗಾಗಲೇ ಬಿಟಿಎಂ ಹಾಗೂ ಜಯನಗರದಲ್ಲಿ ಇದಕ್ಕೆ ವ್ಯವಸ್ಥೆ ಮಾಡಿಕೊಳ್ಳಲಾಗಿದೆ ಎಂದು ತಿಳಿಸಿದರು.

    ರ‍್ಯಾಲಿಯಲ್ಲಿ ಶಾಸಕಿ ಸೌಮ್ಯಾರೆಡ್ಡಿಯವರಿಗೆ ಬೈರಸಂದ್ರದ ಕಾರ್ಪೋರೇಟರರ್ ನಾಗರಾಜ್ ಹಾಗೂ ಶಾಲಾ ವಿದ್ಯಾರ್ಥಿಗಳು ಸಹ ಸಾಥ್ ನೀಡಿದ್ದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಬೆಂಗ್ಳೂರಿನಲ್ಲಿ ಗಣೇಶ ಮೂರ್ತಿ ಪ್ರತಿಷ್ಠಾಪನೆ ಮಾಡೋರಿಗೆ ಗುಡ್‍ನ್ಯೂಸ್

    ಬೆಂಗ್ಳೂರಿನಲ್ಲಿ ಗಣೇಶ ಮೂರ್ತಿ ಪ್ರತಿಷ್ಠಾಪನೆ ಮಾಡೋರಿಗೆ ಗುಡ್‍ನ್ಯೂಸ್

    ಬೆಂಗಳೂರು: ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಅವರು ಗಣೇಶ ಮೂರ್ತಿ ಪ್ರತಿಷ್ಠಾಪನೆ ಮಾಡುವವರಿಗೆ ಒಂದು ಗುಡ್ ನ್ಯೂಸ್ ಕೊಟ್ಟಿದ್ದಾರೆ.

    ಗಣೇಶ ಹಬ್ಬದ ಪ್ರಯುಕ್ತ ಗಣಪನ ಮೂರ್ತಿ ಪ್ರತಿಷ್ಠಾಪನೆ ಮಾಡುವವರಿಗೆ ಏಕಗಾವಾಕ್ಷಿ ಅಡಿ ನಿರಾಕ್ಷೇಪಣಾ ಪತ್ರ ನೀಡುವಂತೆ ಡಿಸಿಎಂ ಪರಮೇಶ್ವರ್ ಅವರು ಬಿಬಿಎಂಪಿ, ಬೆಸ್ಕಾಂ, ಮಾಲಿನ್ಯ ನಿಯಂತ್ರಣ ಮಂಡಳಿ, ಪೊಲೀಸ್ ಕಮಿಷನರ್, ಬಿಬಿಎಂಪಿ ಆಯುಕ್ತರು ಮತ್ತು ಪೊಲೀಸ್ ಇಲಾಖೆಗೆ ಸೂಚನೆ ನೀಡಿ ಪತ್ರ ಬರೆದಿದ್ದಾರೆ.

    ಈ ಹಿಂದೆ ಗಣೇಶ ಮೂರ್ತಿ ಪ್ರತಿಷ್ಠಾಪನೆ ಮಾಡುವವರು ಎಲ್ಲಾ ಇಲಾಖೆಗಳಿಗೂ ಪ್ರತ್ಯೇಕವಾಗಿ ಅರ್ಜಿ ಹಾಕಿ ನಿರಾಕ್ಷೇಪಣಾ ಪತ್ರ ಪಡೆಯಬೇಕಿತ್ತು. ಬಿಬಿಎಂಪಿಯ ಎಲ್ಲಾ ವಲಯ ಕಚೇರಿಗಳಲ್ಲಿ ಏಕಗಾವಾಕ್ಷಿ ವ್ಯವಸ್ಥೆ ಅಳವಡಿಸಲು ಡಿಸಿಎಂ ಪರಮೇಶ್ವರ್ ಸೂಚನೆ ನೀಡಿದ್ದಾರೆ. ಈ ಏಕಗಾವಾಕ್ಷಿ ವ್ಯವಸ್ಥೆ ಮಾಡಿದರೆ ಸುಲಭವಾಗಿ ನಾಲ್ಕು ಇಲಾಖೆಗಳ ನಿರಾಕ್ಷೇಪಣಾ ಪತ್ರ ಪಡೆಯಬಹುದಾಗಿದೆ.

    ಪತ್ರದಲ್ಲಿ ಏನಿದೆ?
    ಗಣೇಶೋತ್ಸವ ಸಂದರ್ಭದಲ್ಲಿ ಆಚರಣೆ ಮಾಡಲು ಬೆಂಗಳೂರಿನ ಸಂಘ ಸಂಸ್ಥೆಗಳು ಪೊಲೀಸ್ ಇಲಾಖೆ, ಮಹಾನಗರ ಪಾಲಿಕೆ, ಮಾಲಿನ್ಯ ನಿಯಂತ್ರಣ ಮಂಡಳಿ, ಬೆಸ್ಕಾಂಗಳಿಂದ ನಿರಾಕ್ಷೇಪಣಾ ಪತ್ರವನ್ನು ಪಡೆಯಬೇಕಾಗಿರುತ್ತದೆ. ಈ ಸೌಲಭ್ಯವು ಸಂಘ ಸಂಸ್ಥೆಗಳಿಗೆ ಒಂದೇ ಕಡೆ ದೊರೆಯಲು ಅನುಕೂಲವಾಗುವಂತೆ ಆಯಾ ಇಲಾಖೆಯ ಒಬ್ಬ ನೊಡಲ್ ಅಧಿಕಾರಿಯನ್ನು ಬಿಬಿಎಂಪಿಯ ಎಲ್ಲಾ ವಲಯಗಳ ಜಂಟಿ ಆಯುಕ್ತರ ಕಚೇರಿಗೆ ನಿಯೋಜಿಸಿ, ಏಕ ಗಾವಾಕ್ಷಿಯಡಿಯಲ್ಲಿ ಸೇವೆಯನ್ನು ಒದಗಿಸುವ ವ್ಯವಸ್ಥೆಯನ್ನು ಏರ್ಪಾಡು ಮಾಡಲು ಕೂಡಲೇ ಅಗತ್ಯಕ್ರಮ ತೆಗೆದುಕೊಳ್ಳುವಂತೆ ಸೂಚಿಸಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಗಣೇಶೋತ್ಸವದ ಬಂದೋಬಸ್ತ್ ಜೊತೆಗೆ ಸ್ಟೇಜ್ ಮೇಲೆ ಹಾಡಿ ರಂಜಿಸಿದ ಪೊಲೀಸ್- ವಿಡಿಯೋ ವೈರಲ್

    ಗಣೇಶೋತ್ಸವದ ಬಂದೋಬಸ್ತ್ ಜೊತೆಗೆ ಸ್ಟೇಜ್ ಮೇಲೆ ಹಾಡಿ ರಂಜಿಸಿದ ಪೊಲೀಸ್- ವಿಡಿಯೋ ವೈರಲ್

    ಮೈಸೂರು: ಗಣೇಶೋತ್ಸವದ ಬಂದೋಬಸ್ತ್ ಕೆಲಸದಲ್ಲಿದ್ದ ಪೊಲೀಸ್ ಪೇದೆಯೊಬ್ಬರು ಪೊಲೀಸ್ ಸಮವಸ್ತ್ರದಲ್ಲೇ ಚಲನಚಿತ್ರ ಗೀತೆ ಹಾಡುವುದರ ಜೊತೆಗೆ ವೇದಿಕೆಯ ಮೇಲೆ ನರ್ತಿಸುವ ಮೂಲಕ ಸಾರ್ವಜನಿಕರಿಗೆ ಸಖತ್ ಮನರಂಜನೆ ನೀಡಿದ್ದಾರೆ.

    ಮೈಸೂರು ತಾಲೂಕಿನ ಹಂಚ್ಯಾ ಗ್ರಾಮದಲ್ಲಿ ಕಳೆದ ರಾತ್ರಿ ಸಾರ್ವಜನಿಕ ಗಣೇಶೋತ್ಸವದ ನಿಮಿತ್ತ ಆಯೋಜಿಸಲಾಗಿದ್ದ ಅರ್ಕೇಸ್ಟ್ರಾದಲ್ಲಿ ಕರ್ತವ್ಯದಲ್ಲಿದ್ದ ಪೇದೆಯೊಬ್ಬರು ಹಾಡಿ, ಕುಣಿದಿದ್ದಾರೆ.

    ಹಂಚ್ಯಾ ಗ್ರಾಮದ ಯುವಕರ ಜೊತೆ ಬೆರೆತು “ಯಾರೇ ನೀನು ರೋಜಾ ಹೂವೇ, ಯಾರೇ ನೀನು ಮಲ್ಲಿಗೆ ಹೂವೇ, ಹೇಳೆ ಓ ಚೆಲುವೆ” ಹಾಡು ಹೇಳುವುದರ ಜೊತೆಗೆ ಯುವಕರ ಜೊತೆಗೆ ಹೆಜ್ಜೆ ಹಾಕಿ ಸಾರ್ವಜನಿಕರನ್ನು ರಂಜಿಸಿದ್ದಾರೆ.

    ಪೇದೆಯ ಹಾಡು, ಕುಣಿತ ಸಾರ್ವಜನಿಕರ ಮೊಬೈಲ್ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಇದೀಗ ಸಾಮಾಜಿಕ ಜಾಲತಾಣದಲ್ಲಿ ಈ ವೀಡಿಯೋ ಫುಲ್ ವೈರಲ್ ಆಗಿದೆ.

    https://www.youtube.com/watch?v=Vo_M83sNCiA&feature=youtu.be