– 5000ಕ್ಕೂ ಹೆಚ್ಚು ಭಕ್ತರು ಮೆರವಣಿಗೆಯಲ್ಲಿ ಭಾಗಿ – ಡಿಜೆ ಬದಲು ಸಾಂಸ್ಕೃತಿಕ ಕಲಾತಂಡಗಳ ಮೊರೆ ಹೋದ ಯುವಕರು
ದಾವಣಗೆರೆ: ನಗರದಲ್ಲಿ (Davanagere) ಪ್ರತಿಷ್ಠಾಪಿಸಿದ್ದ ಹಿಂದೂ ಮಹಾಗಣಪತಿ (Hindu Maha Ganapati) ವಿಸರ್ಜನೆಯ ಶೋಭಾಯಾತ್ರೆಗೆ (Ganesha Procession) ಟ್ರ್ಯಾಕ್ಟರ್ ಚಾಲನೆ ಮಾಡಿ ಎಸ್‍ಪಿ ಉಮಾ ಪ್ರಶಾಂತ್ ಚಾಲನೆ ನೀಡಿದರು.
ದಾವಣಗೆರೆಯ ಹೈಸ್ಕೂಲ್ ಮೈದಾನದಲ್ಲಿ ಹಿಂದೂ ಮಹಾ ಗಣಪತಿಯನ್ನು ಪ್ರತಿಷ್ಠಾಪನೆ ಮಾಡಲಾಗಿತ್ತು. ಇನ್ನೂ ಪೂಜೆ ಮಾಡಿ ಶೋಭಾಯಾತ್ರೆಗೆ ಚಾಲನೆ ನೀಡುತ್ತಿದ್ದಂತೆ ಭಕ್ತರು ಜೈಕಾರ ಕೂಗಿದ್ದಾರೆ. ಶೋಭಾಯಾತ್ರೆಯಲ್ಲಿ 5000ಕ್ಕೂ ಅಧಿಕ ಭಕ್ತರು ಭಾಗಿಯಾಗಿದ್ದಾರೆ. ಇನ್ನೂ ಡಿಜೆಗೆ ಅನುಮತಿ ನೀಡದ ಹಿನ್ನಲೆ ಜನ ಸಾಂಸ್ಕೃತಿಕ ಕಲಾತಂಡಗಳ ಮೊರೆ ಹೋಗಿದ್ದಾರೆ. ಇದನ್ನೂ ಓದಿ: ಜಾತಿ ಕಾಲಂನಲ್ಲಿ ಕುರುಬ ಕ್ರಿಶ್ಚಿಯನ್, ಲಿಂಗಾಯತ ಕ್ರಿಶ್ಚಿಯನ್ ಬಗ್ಗೆ ಸಿಎಂ ಬಳಿ ಕೇಳಿದ್ದೇವೆ – ಎಂ.ಬಿ ಪಾಟೀಲ್
ನಾಸಿಕ್ ಡೋಲ್, ಡೊಳ್ಳು ಕುಣಿತ, ವೀರಗಾಸೆ, ದೇವರ ಕುಣಿತ ಸೇರಿದಂತೆ ಹಲವು ಕಲಾ ತಂಡಗಳು ಮೆರವಣಿಗೆಯಲ್ಲಿ ಭಾಗಿಯಾಗಿವೆ. ಈ ಕಲಾತಂಡಗಳ ಮುಂದೆ ಯುವಕರು ಹಾಗೂ ಯುವತಿಯರು ಸ್ಟೇಪ್ ಹಾಕಿ ಸಂಭ್ರಮಿಸುತ್ತಿದ್ದಾರೆ. ಇನ್ನೂ ಜನರ ನಡುವೆ ಪಂಚಮುಖಿ ಗಣಪ ರಾಜ ಗಾಂಭಿರ್ಯದಲ್ಲಿ ಸಾಗುತ್ತಿದ್ದಾನೆ.
ಹಾಸನ: ಮೊಸಳೆಹೊಸಳ್ಳಿಯಲ್ಲಿ (Mosalehosalli) ನಡೆದ ಭೀಕರ ದುರಂತದಲ್ಲಿ ಹತ್ತು ಜನ ಸಾವನ್ನಪಿದ್ದಾರೆ. ಈ ಘಟನೆಗೆ ಸಂಬಂಧಿಸಿದಂತೆ ಟ್ರಕ್ ಚಾಲಕ ಭುವನೇಶ್ ಬಗ್ಗೆ ಆತನ ಗ್ರಾಮಸ್ಥರು ಮಾಹಿತಿ ಹಂಚಿಕೊಂಡಿದ್ದಾರೆ. ಇದೇ ವೇಳೆ ಆತನಿಂದ ಆದ ಈ ದುರಂತಕ್ಕೆ ಕಂಬನಿ ಮಿಡಿದಿದ್ದಾರೆ.
ಗ್ರಾಮದಲ್ಲಿ ಸ್ವಂತ ಮನೆ ಹಾಗೂ ಸ್ವಲ್ಪ ಜಮೀನು ಹೊಂದಿರುವ ಭುವನೇಶ್ ಕುಟುಂಬ, ಸೆ.12 ರಂದು ಕೆಲಸ ಮುಗಿಸಿ ಹೊಳೆನರಸೀಪುರದ ಮನೆಗೆ ಹೊರಡುವ ವೇಳೆ ಈ ದುರಂತ ಸಂಭವಿಸಿತ್ತು. ದುರಂತದಲ್ಲಿ ಹತ್ತು ಮಂದಿ ಸಾವನ್ನಪ್ಪಿದ್ದರು. ಅಪಘಾತದಲ್ಲಿ 22 ಮಂದಿ ಗಾಯಗೊಂಡಿದ್ದು, ಅವರಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಅದರಲ್ಲಿ ಓರ್ವನ ಸ್ಥಿತಿ ಗಂಭಿರವಾಗಿದೆ.
ಮೃತರನ್ನು ಮಳಖೇಡ ಪೊಲೀಸ್ ಠಾಣೆಯ ಮುಖ್ಯಪೇದೆ ಮನೋಹರ್ ಪವಾರ್ (46) ಎಂದು ಗುರುತಿಸಲಾಗಿದೆ. ಅವರಿಗೆ ಕರ್ತವ್ಯದ ವೇಳೆಯೆ ಹೃದಯಾಘಾತವಾಗಿದೆ. ಕೂಡಲೇ ಅವರನ್ನು ಅಂಬುಲೇನ್ಸ್‍ನಲ್ಲಿ ಕಲಬುರಗಿ ಆಸ್ಪತ್ರೆಗೆ ಕರೆದೊಯ್ಯುವ ಯತ್ನ ಮಾಡಲಾಯಿತು. ಆದರೆ ಮಾರ್ಗ ಮಧ್ಯೆಯೆ ಅವರು ಸಾವನ್ನಪ್ಪಿದ್ದಾರೆ. ಇದನ್ನೂ ಓದಿ: ಮಂಡ್ಯ | ಗಣೇಶ ಮೆರವಣಿಗೆ ವೇಳೆ ಡಿಜೆ ಸೌಂಡ್‌ಗೆ ಕುಣಿಯುತ್ತಿದ್ದ ವ್ಯಕಿ ಹೃದಯಾಘಾತಕ್ಕೆ ಬಲಿ
ಮಳಖೇಡ ಠಾಣೆಯಲ್ಲಿ ಮುಖ್ಯಪೇದೆಯಾಗಿ ಕರ್ತವ್ಯ ನಿರ್ವಸುತ್ತಿದ್ದ ಮನೋಹರ್ ಸಾವಿಗೆ ಸಹೋದ್ಯೋಗಿಗಳು ಹಾಗೂ ಆತ್ಮೀಯರು ಕಂಬನಿ ಮಿಡಿದಿದ್ದಾರೆ. ಹಿರಿಯ ಅಧಿಕಾರಿಗಳು ಹಾಗೂ ಠಾಣೆಯ ಸಿಬ್ಬಂದಿ ಅವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಪ್ರಾರ್ಥಿಸಿದ್ದಾರೆ. ಇದನ್ನೂ ಓದಿ: ಯಾದಗಿರಿ | ತಮ್ಮನ ಸಾವಿನ ಸುದ್ದಿ ಕೇಳಿ ಅಣ್ಣನೂ ಹೃದಯಾಘಾತಕ್ಕೆ ಬಲಿ
ಹಾವೇರಿ: ತಾಲೂಕಿನ ನೆಗಳೂರು ಗ್ರಾಮದಲ್ಲಿ ಈದ್ ಮಿಲಾದ್ ಹಬ್ಬವನ್ನ ಭಾವೈಕ್ಯತೆಯಿಂದ ಆಚರಿಸಲಾಯಿತು. ಈದ್ ಮಿಲಾದ್ ಹಬ್ಬದ ಮೆರವಣಿಗೆ ವೇಳೆ ಮುಸ್ಲಿಂ ಬಾಂಧವರು ಗಣೇಶನಿಗೆ ಪೂಜೆ ಸಲ್ಲಿಸಿದರು.
ಸರ್ವಧರ್ಮ ಮಹಾ ಗಣಪತಿ ದೇವರಿಗೆ ಪೂಜೆ ಸಲ್ಲಿಸಿದ ಮುಸ್ಲಿಂ ಭಾಂದವರು, ನಾವೆಲ್ಲರೂ ಒಂದೇ ಎನ್ನುವ ಸಂದೇಶ ಸಾರಿದ್ದಾರೆ. ಹಿಂದೂ-ಮುಸ್ಲಿಂ ಬಾಂಧವರೆಲ್ಲ ಸೇರಿ ಗಣಪನಿಗೆ ಪೂಜೆ ಸಲ್ಲಿಸಿ ಮಾರ್ಲಾಪಣೆ ಮಾಡಿದರು. ನಂತರ ಗ್ರಾಮದ ಪ್ರಮುಖ ಬೀದಿಯಲ್ಲಿ ಈದ್ ಮಿಲಾದ್ ಹಬ್ಬ ಮೆರವಣಿಗೆ ಮಾಡಿ ಅರ್ಥಪೂರ್ಣವಾಗಿ ಆಚರಿಸಿದರು.
ಪ್ರತಿ ವರ್ಷ ಗ್ರಾಮದಲ್ಲಿ ಸರ್ವಧರ್ಮ ಆಶಯದೊಂದಿಗೆ ಗಣೇಶ ಮೂರ್ತಿಯನ್ನು ಪ್ರತಿಷ್ಟಾಪನೆ ಮಾಡಲಾಗುತ್ತದೆ. ವಿವಿಧ ಧರ್ಮದ ಜನರೂ ಭಾಗವಹಿಸಿ ಪೂಜೆ ಸಲ್ಲಿಸುತ್ತಾರೆ. ಮುಸ್ಲಿಮರು ಸಹ ಪ್ರಾರ್ಥನೆ ಸಲ್ಲಿಸಿ ಪೂಜೆಯನ್ನ ಮಾಡುತ್ತಾರೆ.
ಚಿಕ್ಕಬಳ್ಳಾಪುರ/ ಬೆಂಗಳೂರು: ದೊಡ್ಡಬಳ್ಳಾಪುರದ (Doddaballapur) ತೂಬಗೆರೆ ಗ್ರಾಮದಲ್ಲಿ ಗ್ರಾಮಸ್ಥರು ಗಣೇಶನನ್ನು ಆನೆಯ ಮೇಲೆ ಅಂಬಾರಿಯ (Ambari Ganesha) ಅಲಂಕಾರ ಮಾಡಿ ಮೆರವಣಿಗೆ ಮಾಡಿ ವಿಸರ್ಜನೆ ಮಾಡಿದ್ದಾರೆ. ನಾಡಹಬ್ಬ ದಸರಾ ಮಾದರಿಯಲ್ಲಿಯೇ ಗಣೇಶನ ಮೆರವಣಿಗೆ ಮಾಡಲಾಗಿದೆ.
ಗ್ರಾಮದ ಚಾವಡಿ ಗಣೇಶೋತ್ಸವ ಸಮಿತಿಯವರು ಇದೇ ಮೊದಲ ಬಾರಿಗೆ ಅಂಬಾರಿ ಗಣೇಶನ ಮೆರವಣಿಗೆ ಆಯೋಜನೆ ಮಾಡಿದ್ದು, ಜನರ ಗಮನ ಸೆಳೆಯಿತು. ದಸರಾ ಆನೆಯಂತೆ ಅಲಂಕೃತಗೊಂಡು ಸಿಂಗಾರಗೊಂಡಿದ್ದ ಲಕ್ಷ್ಮೀ ಹೆಸರಿನ ಆನೆಯ ಮೇಲೆ ಅಂಬಾರಿಯಲ್ಲಿ ಗಣೇಶನನ್ನು ಕೂರಿಸಿ ಗ್ರಾಮದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮಾಡಲಾಯಿತು. ಆನೆಯ ಮೆರವಣಿಗೆಯೊಂದಿಗೆ, ನಾದಸ್ವರದ ಮೇಳ, ಡೊಳ್ಳು-ಕುಣಿತ, ಜಾನಪದ ತಂಡಗಳ ಸೊಗಸು ಎಲ್ಲವೂ ಸೇರಿ ದಸರಾ ವೈಭವವದ ಕಳೆಯನ್ನು ತಂದಿತ್ತು. ಇದನ್ನೂ ಓದಿ: ಸೊರಬದ ಅತಿ ಎತ್ತರದ ಗಣೇಶ ʻಕುಬಟೂರು ಮಹಾರಾಜʼನಿಗೆ ವಿಶೇಷ ಪೂಜೆ ಸಲ್ಲಿಸಿದ ಮಧು ಬಂಗಾರಪ್ಪ
ಶಿವಮೊಗ್ಗ: ಶಿಕ್ಷಣ ಸಚಿವರ ಸ್ವಗ್ರಾಮ ಕುಬಟೂರಿನಲ್ಲಿ ಪ್ರತಿಷ್ಠಾಪಿಸಿರುವ 16 ಅಡಿ ಎತ್ತರದ ಗಣೇಶ ಮೂರ್ತಿಗೆ ಮಧು ಬಂಗಾರಪ್ಪ (Madhu Bangarappa)ವಿಶೇಷ ಪೂಜೆ ಸಲ್ಲಿಸಿದರು. ಬಳಿಕ ಗ್ರಾಮಸ್ಥರು ಜೊತೆ ಗಣೇಶನ ಎದುರು ನಿಂತು ಫೋಟೋ ಕ್ಲಿಕ್ಕಿಸಿಕೊಂಡರು.
ಸಾವಿರಾರು ರೂಪಾಯಿ ವೆಚ್ಚದಲ್ಲಿ ಆಕರ್ಷಕವಾಗಿ ನಿರ್ಮಿಸಿರುವ ಮಂಟಪದಲ್ಲಿ, ರಾಜಗಾಂಭೀರ್ಯದಿಂದ ಸಿಂಹಾಸನದ ಮೇಲೆ ಕೂತು, ವಿವಿಧ ಕಲಾಕೃತಿಗಳಿಂದ ಕಂಗೊಳಿಸುತ್ತಿರುವ ಈ ಗಣೇಶನನ್ನು ನೋಡಲು ಅಕ್ಕ- ಪಕ್ಕದ ತಾಲೂಕು ಹಾಗೂ ಗ್ರಾಮಗಳಿಂದ ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುತ್ತಿದ್ದಾರೆ.
ಇಡೀ ಗ್ರಾಮದ ಜನರು ಎಲ್ಲ ಜಾತಿ, ಜನಾಂಗದವರು ಪಾಲ್ಗೊಂಡು ಒಟ್ಟಿಗೆ ಸೇರಿ ಸಂತೋಷದಿಂದ ಹಬ್ಬದ ಆಚರಣೆಯಲ್ಲಿ ತೊಡಗಿದ್ದಾರೆ. ಭಕ್ತಾದಿಗಳ ಅಪೇಕ್ಷೆಯಂತೆ ಇನ್ನೂ ಸ್ವಲ್ಪ ದಿನಗಳ ಕಾಲ ಗಣೇಶನನ್ನು ಪೂಜಿಸಿ, ಸೆಪ್ಟೆಂಬರ್ 12 ರಂದು ಅನ್ನ ಸಂತರ್ಪಣಾ ಕಾರ್ಯಕ್ರಮವನ್ನು ಆಯೋಜಿಸಿದ್ದು, ಸೆಪ್ಟೆಂಬರ್ 13 ವಿವಿಧ ಸಾಂಸ್ಕೃತಿಕ ಮೆರವಣಿಗೆಗಳೊಂದಿಗೆ “ಕುಬಟೂರು ಮಹಾರಾಜ” ಗಣೇಶನನ್ನು ವಿಸರ್ಜಿಸಲಿದ್ದಾರೆ ಎಂದು ಗಣೇಶ ಮಂಡಳಿಯವರು ತಿಳಿಸಿದ್ದಾರೆ. ಇದನ್ನೂ ಓದಿ: ವಿಜಯೇಂದ್ರನಿಗೆ ಬೇರೆ ಬಂಡವಾಳವಿಲ್ಲ, ಧರ್ಮಸ್ಥಳ ವಿಚಾರದಲ್ಲಿ ರಾಜಕೀಯ ಬೇಳೆ ಬೇಯಿಸಿಕೊಳ್ಳಲು ಯತ್ನಿಸ್ತಿದ್ದಾನೆ – ಎಂ.ಬಿ ಪಾಟೀಲ್
ಮಂಡ್ಯ: ಗಣೇಶ ವಿಸರ್ಜನಾ ಮೆರವಣಿಗೆ (Ganesha Procession) ವೇಳೆ ಡ್ಯಾನ್ಸ್ ಮಾಡುತ್ತಿದ್ದ ವ್ಯಕ್ತಿಯೊಬ್ಬರು ಡಿಜೆ ಸೌಂಡ್‌ನಿಂದ ಹೃದಯಾಘಾತಕ್ಕೆ (Heart Attack) ಬಲಿಯಾದ ಘಟನೆ ಕೆಆರ್‌ಪೇಟೆಯ (KR Pete) ಜೊತ್ತನಪುರ ಗ್ರಾಮದಲ್ಲಿ ನಡೆದಿದೆ.
ಮೃತ ವ್ಯಕ್ತಿಯನ್ನು ಮಂಜುನಾಥ್ (55) ಎಂದು ಗುರುತಿಸಲಾಗಿದೆ. ಗಣೇಶ ಹಬ್ಬದಂದು ಜೊತ್ತನಪುರ ಗ್ರಾಮದಲ್ಲಿ ಗಣೇಶ ಮೂರ್ತಿಯನ್ನು ಪ್ರತಿಷ್ಠಾಪನೆ ಮಾಡಲಾಗಿತ್ತು. ಭಾನುವಾರ ಗಣೇಶ ಮೂರ್ತಿಯ ವಿಸರ್ಜನೆಗೂ ಮುನ್ನ ಗ್ರಾಮದಲ್ಲಿ ಮೆರವಣಿಗೆ ಮಾಡಲಾಗಿತ್ತು. ಈ ವೇಳೆ ಗ್ರಾಮಸ್ಥರು ಬಣ್ಣ ಹಾಕಿಕೊಂಡು ಡಿಜೆ ಸೌಂಡ್‌ಗೆ ಡ್ಯಾನ್ಸ್ ಮಾಡುತ್ತಿದ್ದರು. ಇದನ್ನೂ ಓದಿ: ಮೈಸೂರು | ಗಣೇಶ ವಿಸರ್ಜನೆ ಮೆರವಣಿಗೆ ವೇಳೆ ಕುಸಿದುಬಿದ್ದು ವ್ಯಕ್ತಿ ಸಾವು
ಯಾವುದೇ ಕಾರ್ಯಕ್ರಮ ಅಥವಾ ಸಮಾರಂಭ ಪ್ರಾರಂಭಿಸುವ ಮೊದಲು ಯಾವುದೇ ಅಡಚಣೆ ಅಥವಾ ತೊಂದರೆ ಆಗದಂತೆ ವಿಘ್ನನಿವಾರಕ ಗಣಪತಿಗೆ ಪೂಜೆ ಸಲ್ಲಿಸುವುದು ವಾಡಿಕೆ. ಗಣೇಶನಿಗೆ ಹಲವು ನಾಮ. ಗಜಾನನ, ಗಣಪತಿ, ವಕ್ರತುಂಡ, ವಿನಾಯಕ, ಏಕದಂತ, ಗಣೇಶ ಹೀಗೆ ಹತ್ತು ಹಲವು ಹೆಸರುಗಳಿಂದ ಗಣಪತಿಯನ್ನು ಆರಾಧಿಸಲಾಗುತ್ತದೆ. ಅವುಗಳಲ್ಲಿ ಏಕದಂತ ಎನ್ನುವ ಹೆಸರೂ ಒಂದು. ಗಣೇಶನ ಒಂದು ದಂತ ಮುರಿದಿರುವ ಕಾರಣ ಆತನನ್ನು ಏಕದಂತ ಎಂದು ಕರೆಯಲಾಗುತ್ತದೆ. ಗಣೇಶ ಏಕದಂತನಾಗಲು ಕಾರಣವೇನು? ಪುರಾಣದ ಕಥೆ ಏನು ಎಂಬುದನ್ನು ಇಲ್ಲಿ ತಿಳಿಸಲಾಗಿದೆ.
ಪರಶುರಾಮ ಮತ್ತು ಗಣೇಶನ ನಡುವೆ ಯುದ್ಧ:
ಒಮ್ಮೆ ಕಾರ್ತವೀರ್ಯನನ್ನು ವಧೆ ಮಾಡಿ ಕೃತಾರ್ಥರಾದ ಪರಶುರಾಮರು ಕೈಲಾಸಕ್ಕೆ ಹೋದರು. ಅಲ್ಲಿ ಅವರಿಗೆ ಗಣಗಳ ಮತ್ತು ಗಣಾಧೀಶನಾದ ಗಣಪತಿಯ ಭೇಟಿ ಆಯಿತು. ಪರಶುರಾಮರಿಗೆ ಭಗವಾನ್ ಶಂಕರನ ಭೇಟಿ ಮಾಡುವ ಇಚ್ಛೆ ಇತ್ತು. ಆದರೆ ಆ ಸಮಯದಲ್ಲಿ ಶಿವ-ಪಾರ್ವತಿ ವಿಶ್ರಾಂತಿ ತೆಗೆದುಕೊಳ್ಳುತ್ತಿದ್ದರು.
ಪರಮೇಶ್ವರನಿಗೆ ನಮಸ್ಕಾರ ಮಾಡಲು ಅಂತಃಪುರಕ್ಕೆ ಹೊರಟಿದ್ದೇನೆ. ಅವರಿಗೆ ವಂದಿಸಿ ಶೀಘ್ರವಾಗಿ ಹಿಂತಿರುಗುವೆನು. ಯಾರ ಕೃಪೆಯಿಂದ ನಾನು ಕಾರ್ತವೀರ್ಯನನ್ನು ವಧಿಸಿ, ಇಪ್ಪತ್ತೊಂದು ಬಾರಿ ಭೂಮಿಯನ್ನು ಕ್ಷತ್ರೀಯ ರಹಿತ ಮಾಡಿದೆನೋ ಅಂಥಾ ಜಗದ್ಗುರುವನ್ನು ನಾನು ಶೀಘ್ರವಾಗಿ ಭೇಟಿ ಆಗಲೇಬೇಕು ಎಂದು ಪರಶುರಾಮರು ಗಣೇಶನಿಗೆ ತಿಳಿಸಿದರು. ಆದರೆ ಗಣೇಶ ಅವರನ್ನು ಒಳಗೆ ಬಿಡುವುದಿಲ್ಲ.
ಇದರಿಂದ ಕೋಪಗೊಂಡ ಪರಶುರಾಮರು ನನ್ನನ್ನು ಒಳಗೆ ಬಿಡದಿದ್ದರೆ ನನ್ನೊಂದಿಗೆ ಯುದ್ಧ ಮಾಡಬೇಕಾಗುತ್ತದೆ ಎಂಬ ಎಚ್ಚರಿಕೆಯನ್ನು ನೀಡುತ್ತಾರೆ. ನಾನು ಗೆದ್ದರೆ ಶಿವನನ್ನು ಭೇಟಿಯಾಗಲು ನನ್ನನ್ನು ಒಳಗೆ ಬಿಡಬೇಕು ಎಂದು ಪರಶುರಾಮರು ಗಣೇಶನಿಗೆ ಸವಾಲೆಸೆದರು. ಗಣೇಶನು ಯುದ್ಧದ ಸವಾಲನ್ನು ಸ್ವೀಕರಿಸಿದನು. ಇಬ್ಬರ ನಡುವೆ ಘೋರ ಯುದ್ಧ ನಡೆಯಿತು. ಯುದ್ಧದ ಸಮಯದಲ್ಲಿ, ಪರಶುರಾಮರು ತಮ್ಮ ಕೊಡಲಿಯಿಂದ ಗಣೇಶನ ಮೇಲೆ ದಾಳಿ ಮಾಡಿದರು. ಇದನ್ನು ಎದುರಿಸಲು ಗಣೇಶ ತನ್ನ ಎಡಗಡೆಯ ದಂತವನ್ನು ಬಳಸಿದರು. ಇದರ ಪರಿಣಾಮವಾಗಿ ಗಣೇಶನ ದಂತ ಮುರಿಯುತ್ತದೆ. ಗಣೇಶನ ಒಂದು ಹಲ್ಲು ಮುರಿದ ಕಾರಣ ಆತನನ್ನು ಏಕದಂತ ಎಂದು ಕರೆಯುತ್ತಾರೆ.
ಗಣೇಶನಷ್ಟೇ ಪರಶುರಾಮರು ಯುದ್ಧದಲ್ಲಿ ನಿಪುಣರಾಗಿರದ್ದರು. ಇವರಿಬ್ಬರ ನಡುವಿನ ಯುದ್ಧ ಎನ್ನುವಂತಹದ್ದು ಭಯಾನಕವಾಗಿದ್ದು, ಈ ಯುದ್ಧದಲ್ಲಿ ಗಣೇಶನು ತನ್ನ ಒಂದು ದಂತವನ್ನು ಕಳೆದುಕೊಳ್ಳುತ್ತಾನೆ. ಇದರ ನಂತರ ಗಣೇಶನು ಒಂದೇ ದಂತವನ್ನು ಹೊಂದಿದ್ದು, ಏಕದಂತ ಎನ್ನುವ ಹೆಸರನ್ನು ಪಡೆದುಕೊಳ್ಳುತ್ತಾನೆ.
ಮಹಾಭಾರತದ ಕಥೆ:
ಮತ್ತೊಂದು ಕಥೆಯ ಪ್ರಕಾರ, ಮಹಾಭಾರತವನ್ನು ಗಣೇಶ ಮಹಾಭಾರತವನ್ನ ಬರೆಯುವ ಸಮಯದಲ್ಲಿ, ಮಹರ್ಷಿ ವೇದವ್ಯಾಸರು ಗಣೇಶ ನಾನು ಹೇಳುತ್ತಾ ಹೋಗುತ್ತೇನೆ, ನೀನು ಬರೆಯುತ್ತಾ ಹೋಗಬೇಕು ಅರ್ಧಕ್ಕೆ ನಿಲ್ಲಿಸುವಂತಿಲ್ಲ ಎಂದು ತಾಕೀತು ಮಾಡಿರುತ್ತಾರೆ. ಇದಕ್ಕೆ ಒಪ್ಪಿ ಗಣೇಶ ಬರೆಯುತ್ತಿರುತ್ತಾನೆ. ಆದರೆ ಬರೆಯುವಾಗ ಯಾವುದೋ ಸಮಸ್ಯೆ ಎದುರಾಗುತ್ತದೆ. ತಕ್ಷಣ ಗಣೇಶ ತನ್ನ ದಂತವನ್ನು ಮುರಿದು ಅದರಲ್ಲಿ ಬರೆಯಲು ಆರಂಭಿಸಿದ ಎನ್ನುವ ನಂಬಿಕೆ ಇದೆ.
ಭಾರತದ ಮತ್ತೊಂದು ಪ್ರಮುಖ ಹಬ್ಬವಾದ ಗಣೇಶ ಚತುರ್ಥಿಯ (Ganesh Chaturthi) ಸಂಭ್ರಮದಲ್ಲಿ ನಾವಿದ್ದೇವೆ. ಪ್ರತಿ ವರ್ಷ ಆಗಸ್ಟ್ ಸೆಪ್ಟೆಂಬರ್‌ನಲ್ಲಿ ಬರುವ ಈ ಹಬ್ಬ ಜಾತಿ ಮತವನ್ನು ಮೀರಿ ನಿಂತಿದೆ. ಈ ಹಬ್ಬವು ಭಗವಾನ್ ಶಿವ ಮತ್ತು ಪಾರ್ವತಿ ದೇವಿಯ ಮಗನಾದ ಭಾದ್ರಪದ ಮಾಸದ ಶುಕ್ಲ ಪಕ್ಷದಲ್ಲಿ ಜನಿಸಿದ ಗಣೇಶನ ಜನ್ಮವನ್ನು ಸೂಚಿಸುತ್ತದೆ. ಈ ಬಾರಿ ಆಗಸ್ಟ್ 27 ರಂದು ಗಣೇಶ ಚತುರ್ಥಿ ಬಂದಿದೆ. ಈ ಹಬ್ಬದ ಇತಿಹಾಸ, ಮಹತ್ವ ಮತ್ತು ಆಚರಣೆಯ ಬಗ್ಗೆ ತಿಳಿದುಕೊಳ್ಳೋಣ..
ಇತಿಹಾಸದ ಸುತ್ತ
ಇತಿಹಾಸಕಾರರ ಪ್ರಕಾರ, ಗಣೇಶನು ಪಾರ್ವತಿ ದೇವಿಯ ಸೃಷ್ಟಿ ಎಂದು ನಂಬಲಾಗಿದೆ. ಭಗವಾನ್ ಶಿವನ ಅನುಪಸ್ಥಿತಿಯಲ್ಲಿ, ಪಾರ್ವತಿ ದೇವಿಯು ತನ್ನ ಮೈಯಲ್ಲಿದ್ದ ಶ್ರೀಗಂಧದಿಂದ ಗಣೇಶನನ್ನು ಸೃಷ್ಟಿಸಿದಳು. ಮತ್ತು ತಾನು ಸ್ನಾನಕ್ಕೆಂದು ಹೋಗುವಾಗ ಗಣೇಶನನ್ನು ಕಾವಲಿಗಾಗಿ ನಿಲ್ಲಿಸಿ ಹೋದಳು. ಆದರ್ಶ ಮಗುವಾಗಿ, ಗಣೇಶನು ತನ್ನ ತಾಯಿಯ ಸೂಚನೆಗಳನ್ನು ಅನುಸರಿಸಿದನು ಮತ್ತು ಯಾರನ್ನೂ ಮನೆಗೆ ಬಿಡಲಿಲ್ಲ. ಶಿವನ ಅರಿವಿಲ್ಲದಿದ್ದರೂ, ಅವನು ಬರುವಾಗ ಅವನನ್ನು ಮನೆಯೊಳಗೆ ಪ್ರವೇಶಿಸದಂತೆ ತಡೆದನು. ಇದು ಇಬ್ಬರ ನಡುವೆ ಯುದ್ಧಕ್ಕೆ ಕಾರಣವಾಯಿತು ಮತ್ತು ಕೋಪಗೊಂಡ ಶಿವನು ಅವನ ತಲೆಯನ್ನು ಕತ್ತರಿಸಿದನು. ಇದನ್ನು ನೋಡಿದ ಪಾರ್ವತಿಯು ಕ್ರೋಧಳಾದಳು ಮತ್ತು ಕಾಳಿ ದೇವತೆಯಾಗಿ ರೂಪಾಂತರಗೊಂಡಳು. ಅವಳು ಜಗತ್ತನ್ನು ಕೊನೆಗೊಳಿಸುವುದಾಗಿ ಬೆದರಿಕೆ ಹಾಕಿದಳು. ದೇವರು ಮತ್ತು ದೇವತೆಗಳು ಇದಕ್ಕೆ ಪರಿಹಾರವನ್ನು ಕಂಡುಕೊಳ್ಳಲು ಮತ್ತು ಕಾಳಿ ದೇವಿಯ ಕೋಪವನ್ನು ಶಾಂತಗೊಳಿಸಲು ಶಿವನನ್ನು ಪ್ರಾರ್ಥಿಸಿದರು.
ಭಗವಾನ್ ಶಿವನು ಅಂತಿಮವಾಗಿ ಒಂದು ಪರಿಹಾರವನ್ನು ಕಂಡುಹಿಡಿದನು. ಯಾರು ಉತ್ತರ ದಿಕ್ಕಿಗೆ ತಲೆಯನ್ನಿಟ್ಟು ಮಲಗಿರುತ್ತಾರೋ ಅವರ ತಲೆಯನ್ನು ಕಡಿದು ತರುವಂತೆ ತನ್ನ ಎಲ್ಲಾ ಅನುಯಾಯಿಗಳಿಗೆ ಆದೇಶಿಸಿದನು. ಅನುಯಾಯಿಗಳು ಕೆಲ ಸಮಯಗಳವರೆಗೆ ಹುಡುಕಿದ ನಂತರ ಅವರಿಗೆ ಆನೆ ಮರಿಯು ಉತ್ತರ ದಿಕ್ಕಿಗೆ ತಲೆಯಿಟ್ಟು ಮಲಗಿರುವುದು ಕಾಣಿಸಿತು. ಶಿವನ ಅನುಯಾಯಿಗಳು ಅದನ್ನು ಕತ್ತರಿಸಿ ತಂದು ಶಿವನಿಗೆ ನೀಡುತ್ತಾರೆ. ಶಿವನು ಅದನ್ನು ಗಣೇಶನ ದೇಹಕ್ಕೆ ಜೋಡಿಸಿ ಅವನನ್ನು ಜೀವಂತಗೊಳಿಸಿದನು.
ಗಣೇಶ ಚತುರ್ಥಿ ಆಚರಣೆ ಹೇಗೆ?
ಮನೆಗಳಲ್ಲಿ, ದೇವಾಲಯಗಳಲ್ಲಿ ಅಥವಾ ಸಾರ್ವಜನಿಕ ಸ್ಥಳಗಳಲ್ಲಿ ಗಣೇಶನ ವಿಗ್ರಹಗಳನ್ನು ಪೆಂಡಲ್‌ಗಳಲ್ಲಿ ಇರಿಸಲಾಗುತ್ತದೆ. ಹೆಚ್ಚುವರಿಯಾಗಿ, ಪ್ರತಿಮೆಯನ್ನು ಅಲಂಕರಿಸಲು ಹೂವುಗಳು, ಹೂಮಾಲೆಗಳು ಮತ್ತು ದೀಪಗಳನ್ನು ಬಳಸಲಾಗುತ್ತದೆ. ಒಬ್ಬ ಪುರೋಹಿತನು ದೇವತೆಗೆ ಜೀವ ತುಂಬಲು ಪ್ರಾಣಪ್ರತಿಷ್ಠೆ ಎಂದು ಕರೆಯಲ್ಪಡುವ ಮಂತ್ರಗಳನ್ನು ಪಠಿಸುತ್ತಾನೆ.
ಈ ಆಚರಣೆಗಾಗಿ ಗಣೇಶನ ವಿಗ್ರಹವನ್ನು 16 ವಿಭಿನ್ನ ರೀತಿಯಲ್ಲಿ ಪವಿತ್ರಗೊಳಿಸಲಾಗುತ್ತದೆ. ‘ಷೋಡಶೋಪಚಾರ’ ಎಂಬುದು ಈ ಆಚರಣೆಯ ಹೆಸರು. ನಂತರ ಧಾರ್ಮಿಕ ಸಂಗೀತವನ್ನು ಹಾಡಲಾಗುತ್ತದೆ ಅಥವಾ ನುಡಿಸಲಾಗುತ್ತದೆ, ಜನರು ಡ್ರಮ್ ಬೀಟ್‌ಗಳಿಗೆ ನೃತ್ಯ ಮಾಡುತ್ತಾರೆ ಮತ್ತು ಆಚರಣೆಗಳ ಭಾಗವಾಗಿ ಪಟಾಕಿಗಳನ್ನು ಹಾರಿಸಲಾಗುತ್ತದೆ. ಕೆಲವು ಭಕ್ತರು ಮನೆಯಲ್ಲಿ ಈ ಹಬ್ಬವನ್ನು ಆಚರಿಸಿದರೆ, ಇನ್ನು ಕೆಲವರು ಗಣೇಶನನ್ನು ಪೂಜಿಸಲು ಪೆಂಡಲ್‌ಗಳಿಗೆ ಹೋಗುತ್ತಾರೆ. ಪ್ರಸಾದಕ್ಕಾಗಿ, ನಾವು ಭಗವಾನ್ ಗಣೇಶನಿಗೆ, ಅವನ ನೆಚ್ಚಿನ ಮೋದಕ, ಕಡಲೆ ಪ್ರಸಾದ, ಲಡ್ಡುಗಳನ್ನು ನೀಡುತ್ತೇವೆ.
ಮೋದಕಪ್ರಿಯ ಏಕೆ?
ಭಗವಾನ್ ಗಣೇಶನನ್ನು ಎಲ್ಲಾ ದೇವರುಗಳಲ್ಲಿ ಮೊದಲು ಪೂಜಿಸಲಾಗುತ್ತದೆ ಮತ್ತು ಯಾವುದೇ ಆಚರಣೆ, ಸಮಾರಂಭ ಅಥವಾ ಪೂಜೆಯ ಪ್ರಾರಂಭದ ಮೊದಲು ಪೂಜಿಸಲಾಗುತ್ತದೆ ಎಂದು ವರವನ್ನು ನೀಡಿದನು. ಪೂಜೆಯ ಸಮಯದಲ್ಲಿ, ಭಕ್ತರು ಗಣೇಶನಿಗೆ ಪ್ರಿಯವಾದ ಸಿಹಿತಿಂಡಿಗಳಲ್ಲಿ ಒಂದಾದ ಮೋದಕವನ್ನು ಅರ್ಪಿಸುತ್ತಾರೆ ಮತ್ತು ಇತರರಿಗೆ ಪ್ರಸಾದವಾಗಿ ಅದನ್ನು ಹಂಚುತ್ತಾರೆ.
ಕಳೆದ ಕೆಲವು ವರ್ಷಗಳಿಂದ ಗಣೇಶೋತ್ಸವಕ್ಕೆ ಮಣ್ಣಿನ ಗಣಪತಿಯನ್ನೇ ಪೂಜಿಸುತ್ತಾರೆ. ಅದರಲ್ಲೂ ಕೆಲವರು ಪಿಒಪಿ ಬಳಸಿ ಬಳಸಿ ತಯಾರಿಸಿರುವ ಗಣೇಶನನ್ನು ಪೂಜಿಸುತ್ತಾರೆ. ಆದರೆ ಇತ್ತೀಚಿನ ಕೆಲವು ದಿನಗಳಲ್ಲಿ ಮಣ್ಣಿನ ಗಣಪತಿಯನ್ನೇ ಪೂಜಿಸಬೇಕೆಂದು ಕಡ್ಡಾಯ ಸೂಚನೆಯೂ ಇದೆ.
ಅದರಂತೆ ಬಾಲ್ಯದಲ್ಲಿ ಗಣೇಶನ ಮೂರ್ತಿಯನ್ನು ಮಣ್ಣಿನಲ್ಲಿ ತಯಾರಿಸುವುದೆಂದರೆ ಒಂದು ಖುಷಿ. ಆದರೆ ಈಗ ಮಣ್ಣಿನ ಗಣೇಶನ್ ವಿಗ್ರಹವನ್ನು ದುಡ್ಡು ಕೊಟ್ಟು ತಂದು ನಾವೆಲ್ಲ ಪೂಜಿಸುತ್ತಿದ್ದೇವೆ. ತಪ್ಪೇನಿಲ್ಲ ಆದರೆ ಎಲ್ಲರಲ್ಲಿಯೂ ಒಂದು ಕಲೆ ಇರುತ್ತದೆ. ಅದಕ್ಕೆ ಈ ಬಾರಿ ಗಣೇಶೋತ್ಸವಕ್ಕೆ ನಿಮ್ಮ ಕೈಯಿಂದಲೇ ಗಣೇಶ ವಿಗ್ರಹವನ್ನು ಮಾಡಿ, ಪೂಜಿಸಿ ಮಾಡೋದು ಸುಲಭವೇನಲ್ಲ, ಆದರೆ ಪ್ರಯತ್ನ ಪಡಬಹುದು. ಅದಕ್ಕೆ ಇಲ್ಲಿ ಸರಳವಾಗಿ, ಸುಲಭವಾಗಿ ಗಣಪತಿ ವಿಗ್ರಹವನ್ನು ತಯಾರಿಸುವ ವಿಧಾನವನ್ನು ತಿಳಿಸಿಕೊಡಲಾಗುತ್ತಿದೆ.
ನಿಮ್ಮ ಅಗತ್ಯಕ್ಕೆ ಅನುಸಾರವಾಗಿ ಗಣೇಶನ ಮೂರ್ತಿಯ ಅಳತೆಯನ್ನು ನಿರ್ಧರಿಸಿಕೊಳ್ಳಿ. ಇಲ್ಲಿ ಚಿಕ್ಕ ಗಣೇಶನ ಮೂರ್ತಿಯನ್ನು ಮಾಡುವ ವಿಧಾನವನ್ನು ವಿವರಿಸಲಾಗಿದೆ.
ಮೊದಲಿಗೆ ಗಣೇಶನ ವಿಗ್ರಹವನ್ನು ತಯಾರಿಸಲು ಮಣ್ಣನ್ನು ತೆಗೆದುಕೊಳ್ಳಿ, ನೀರು ಹಾಗೂ ಒಂದು ರಟ್ಟಿನ ಬೋರ್ಡ್ ಅನ್ನು ತೆಗೆದುಕೊಳ್ಳಿ. ಮೂರ್ತಿ ಮಾಡುವ ಹದಕ್ಕೆ ತಕ್ಕಂತೆ ಮಣ್ಣನ್ನು ಚೆನ್ನಾಗಿ ಕಲಸಿಕೊಳ್ಳಿ.
– ಪ್ರಾರಂಭದಲ್ಲಿ ಗಣೇಶನ ಕೆಳಗಡೆ ಆಧಾರಕ್ಕಾಗಿ ವೃತ್ತಾಕಾರದ ಒಂದು ಅಗಲವಾದ ತಟ್ಟೆಯ ರೀತಿಯಲ್ಲಿ ತಯಾರಿಸಿಕೊಳ್ಳಿ.
– ಅದರ ಮೇಲೆ ಚಿತ್ರದಲ್ಲಿ ತೋರಿಸಿರುವಂತೆ ಮಾಡಿಕೊಂಡು ತಯಾರಿಸಿದ ತಟ್ಟೆಯ ಮೇಲೆ ನಿಲ್ಲಿಸಿ. (ಚೂಪಾಕಾರದ ಕಂಬ ಎನ್ನಬಹುದು)
– ಉದ್ದದ ಕೊಳವೆಯ ರೀತಿಯಲ್ಲಿ ಸೊಂಡಿಲಿನ ಆಕಾರಕ್ಕೆ ಬರುವಂತೆ ತಯಾರಿಸಿ. ಅದನ್ನು ಸೂಪರದ ಕಂಬಕ್ಕೆ ಮಧ್ಯಭಾಗದಲ್ಲಿ ಅಂಟಿಸಿಕೊಳ್ಳಿ. ನಂತರ ಸ್ವಲ್ಪ ಮಣ್ಣನ್ನು ತೆಗೆದುಕೊಂಡು ಕಿವಿಯ ರೀತಿಯಲ್ಲಿ ತಯಾರಿಸಿ ಎರಡು ಬದಿಗೆ ಅಂಟಿಸಿಕೊಳ್ಳಿ. ಚಿತ್ರದಲ್ಲಿ ತೋರಿಸಿರುವಂತೆ ಮೂರ್ತಿಯನ್ನು ಸರಿಪಡಿಸಿಕೊಳ್ಳಿ.
– ನಂತರ ಚಿಕ್ಕ ಚಿಕ್ಕ 4 ಕಡಲೆಕಾಳಿನಂತೆ ಅಥವಾ ಅದೇ ಆಕಾರದಲ್ಲಿ ದೊಡ್ಡ ಗಾತ್ರದಲ್ಲಿ ನಾಲ್ಕು ಬೇರೆಬೇರೆ ಭಾಗಗಳನ್ನು ತಯಾರಿಸಿ. ಅದನ್ನು ಚಿತ್ರದಲ್ಲಿ ತೋರಿಸುವಂತೆ ಅಂಟಿಸಿಕೊಳ್ಳಿ.
– ಕೊನೆಗೆ ಟೂತ್ ಪಿಕ್ ನಿಂದ ಕಣ್ಣು, ಹುಬ್ಬು ಹಾಗೂ ಗಂಧವನ್ನು ಬರೆದುಕೊಳ್ಳಿ.
ಇದೇ ರೀತಿ ಹಂತಗಳನ್ನು ಪಾಲಿಸಿ ನೀವು ವಿಭಿನ್ನ ರೀತಿಯಲ್ಲಿ ದೊಡ್ಡ ಗಣೇಶನ ವಿಗ್ರಹವನ್ನು ತಯಾರಿಸಬಹುದು. ಇದು ನಿಮಗ ಸ್ವಂತ ಕೈಯಿಂದಲೂ ತಯಾರಾಗಿರುತ್ತದೆ ಹಾಗೂ ಅಂಗಡಿ ಇಂದ ಖರೀದಿಸಿ ತಂದ ಗಣೇಶನ ವಿಗ್ರಹಕ್ಕೂ ವಿಭಿನ್ನವಾಗಿರುತ್ತದೆ. ಎಲ್ಲದಕ್ಕೂ ಮಿಗಿಲಾಗಿ ನಿಮ್ಮ ಪ್ರೀತಿ, ಭಕ್ತಿ ಭಾವದಿಂದ ಈ ಬಾರಿಯ ಗಣೇಶೋತ್ಸವ ಸಂಭ್ರಮದಲ್ಲಿರುತ್ತದೆ.