Tag: Ganesha Chathurthi

  • ಕಾಫಿನಾಡಲ್ಲೊಬ್ಬ ಹಿಂದೂ-ಮುಸ್ಲಿಂ-ಕ್ರಿಶ್ಚಿಯನ್ನರ ಭಾವೈಕ್ಯತಾ ಗಣಪ!

    ಕಾಫಿನಾಡಲ್ಲೊಬ್ಬ ಹಿಂದೂ-ಮುಸ್ಲಿಂ-ಕ್ರಿಶ್ಚಿಯನ್ನರ ಭಾವೈಕ್ಯತಾ ಗಣಪ!

    ಚಿಕ್ಕಮಗಳೂರು: ಜಿಲ್ಲೆಯ ಎನ್.ಆರ್ ಪುರ ಪಟ್ಟಣದಲ್ಲೊಬ್ಬ ಭಾವೈಕ್ಯತಾ ಗಣಪ, ಧರ್ಮಗಳ ಮೀರಿ ಧಾರ್ಮಿಕ ನಂಬಿಕೆಯನ್ನ ಹಂಚುತ್ತಿದ್ದಾನೆ. ಹಿಂದೂ-ಮುಸ್ಲಿಂ-ಕ್ರಿಶ್ಚಿಯನ್ ಎಲ್ಲರೂ ಸೇರಿ ಗಣಪತಿ ಕೂರಿಸಿ ಸಂಭ್ರಮಿಸಿದ್ದಾರೆ.

    ಹಿಂದೂಗಳ ಪವಿತ್ರ ಹಬ್ಬಗಳಲ್ಲಿ ಗಣೇಶ ಹಬ್ಬವೂ ಒಂದು. ಆ ದಿನಗಳಲ್ಲಿ ಬೀದಿ-ಬೀದಿಗಳಲ್ಲಿ, ಹಳ್ಳಿಹಳ್ಳಿಗಳಲ್ಲಿ ಗಣೇಶನನ್ನ ಕೂರಿಸಿ ಸಂಭ್ರಮಿಸುತ್ತಾರೆ. ಅಲ್ಲದೇ ಧರ್ಮ ಮೀರಿದ ದೇವರ ನಂಬಿಕೆಯಿಂದ ಕೆಲ ಮುಸ್ಲಿಮರು ಕೂಡ ಗಣಪತಿ ಆಚರಣೆಯಲ್ಲಿ ಕೈ ಜೋಡಿಸುತ್ತಾರೆ. ಅದೇ ರೀತಿ ಚಿಕ್ಕಮಗಳೂರಿನಲ್ಲಿ (Chikkamagaluru) ಹಿಂದೂ-ಮುಸ್ಲಿಂ-ಕ್ರಿಶ್ಚಿಯನ್ ಎಂಬ ಭೇದವಿಲ್ಲದೇ ಎಲ್ಲರೂ ಒಟ್ಟುಗೂಡಿ ಹಬ್ಬ ಆಚರಣೆ ಮಾಡುತ್ತಿದ್ದಾರೆ. ಇದನ್ನೂ ಓದಿ: ಲಕ್ನೋದಲ್ಲಿ ಮೂರು ಅಂತಸ್ತಿನ ಕಟ್ಟಡ ಕುಸಿತ – 5 ಮಂದಿ ಸಾವು, 24 ಜನರಿಗೆ ಗಾಯ

    ಇಲ್ಲಿನ ಗಣಪತಿ ಸಮಿತಿಯ ಅಧ್ಯಕ್ಷೆ ಮುಸ್ಲಿಂ ಮಹಿಳೆ ಜುಬೇದಾ ತಮ್ಮ ಮಾತುಗಳ ಮೂಲಕ ಹಿಂದೂ-ಮುಸ್ಲಿಮರ ನಡುವೆ ಭಾವೈಕ್ತತೆ ಸಾರಿದ್ದಾರೆ. ಆಗಾಗ್ಗೆ ಹಿಂದೂ-ಮುಸ್ಲಿಮರ ನಡುವೆ ಅನೇಕ ವಿಚಾರಕ್ಕೆ ವಾದ-ವಿವಾದಗಳು ನಡೆಯುತ್ತಲೇ ಇರುತ್ತವೆ. ಆದರೆ, ಎನ್.ಆರ್ ಪುರ ತಾಲೂಕಿನ ರಾಜೀವ್ ನಗರದಲ್ಲಿ ಪ್ರತಿಷ್ಠಾಪನೆಯಾಗಿರೋ ಗಣೇಶ ಧರ್ಮ ಮೀರಿದ ಭಾವೈಕ್ಯತೆಗೆ ಸಾಕ್ಷಿಯಾಗಿದ್ದಾನೆ ಎಂದು ಅವರು ಶ್ಲಾಘಿಸಿದ್ದಾರೆ. ಇದನ್ನೂ ಓದಿ: ಉಜ್ಜಯಿನಿ ಅತ್ಯಾಚಾರ ಕೇಸ್ – ವಿಡಿಯೋ ಮಾಡಿ ಹರಿಬಿಟ್ಟಿದ್ದ ಆಟೋ ಚಾಲಕ ಅರೆಸ್ಟ್

    ಕಳೆದ 14 ವರ್ಷಗಳಿಂದ ಇದೇ ಗ್ರಾಮದ ಮುಸ್ಲಿಂ ಮಹಿಳೆ ಜುಬೇದಾ ಗಣಪತಿ ಸೇವಾ ಸಮಿತಿ ಅಧ್ಯಕ್ಷರಾಗಿ ಹಿಂದೂ ಬಾಂಧವರೊಂದಿರಿಸಿ ಭೇದಗೆ ಸೇರಿ ಗಣೇಶೋತ್ಸವ ನಡೆಸಿಕೊಂಡು ಬರುತ್ತಿದ್ದಾರೆ. ಅದರಂತೆ ಈ ಬಾರಿಯೂ ಗಣೇಶನ ಮೂರ್ತಿಯನ್ನ ಪ್ರತಿಷ್ಠಾಪಿಸಿ ಹಿಂದೂ-ಕ್ರೈಸ್ತ-ಮುಸ್ಲಿಂ ಮಕ್ಕಳನ್ನು ಒಂದೆಡೆ ಸೇವಾಭಾವ ತಾರತಮ್ಯವಿಲ್ಲದೇ ಮಕ್ಕಳಿಗೂ ಭಾವೈಕ್ಯತೆ ಸಂದೇಶವನ್ನು ಸಾರುತ್ತಿದ್ದಾರೆ. ಸಿದ್ಧಾಂತ ಇರೋದು ಧರ್ಮಕಷ್ಟೆ. ದೇವರಿಗಲ್ಲ. ಎಲ್ಲಾ ದೇವರು ಒಂದೇ ಎಂದು ಮಕ್ಕಳಿಗೂ ತಿಳಿ ಹೇಳುತ್ತಿದ್ದಾರೆ. ಇದನ್ನೂ ಓದಿ: ಗಣೇಶ ಮೂರ್ತಿ ಮೆರವಣಿಗೆ ವೇಳೆ ಡೊಳ್ಳು ಬಾರಿಸುವ ವಿಚಾರಕ್ಕೆ ಗಲಾಟೆ; 2 ಗುಂಪಿನ ನಡುವೆ ಮಾರಾಮಾರಿ

  • ಗಣಪನಿಗಾಗಿ ವಿಭಿನ್ನ ಬಗೆಯ ಮೋದಕ ಹೀಗೆ ಮಾಡಿ!

    ಗಣಪನಿಗಾಗಿ ವಿಭಿನ್ನ ಬಗೆಯ ಮೋದಕ ಹೀಗೆ ಮಾಡಿ!

    ಣೇಶ ಹಬ್ಬ ಬಂದೇ ಬಿಡ್ತು. ಹಬ್ಬದ ತಯಾರಿಯಂತೂ ಜೋರಾಗಿ ನಡೆಯುತ್ತಿದೆ. ಗಣೇಶ ಚತುರ್ಥಿಗೆ ಗಣಪನಿಗೆ ಅಚ್ಚುಮೆಚ್ಚಿನ ತಿಂಡಿಗಳಲ್ಲಿ ಒಂದಾದ ಮೋದಕವನ್ನು ತಯಾರಿಸಿ ನೈವೇದ್ಯಕ್ಕೆ ಇಡುವುದು ವಾಡಿಕೆ. ಮೋದಕದಲ್ಲಿ ಹಲವು ವಿಧದ ಮೋದಕಗಳಿವೆ. ಈ ಬಾರಿಯ ಗಣೆಶ ಚತುರ್ಥಿಗೆ ಬಗೆಬಗೆಯ ಮೋದಕಗಳನ್ನು ಮಾಡುವ ಮೂಲಕ ಗಣೇಶೋತ್ಸವಕ್ಕೆ ಇನ್ನಷ್ಟು ಮೆರುಗು ನೀಡಿ. ಇವತ್ತಿನ ನಮ್ಮ ರೆಸಿಪಿಯಲ್ಲಿ ಗಣೇಶನಿಗೆ ಪ್ರಿಯವಾದ ವಿಭಿನ್ನ ಬಗೆಯ ಮೋದಕಗಳನ್ನು ಯಾವ ರೀತಿ ತಯಾರಿಸಬಹುದು ಎಂಬುದನ್ನು ತಿಳಿಸಿಕೊಡುತ್ತಿದ್ದೇವೆ.

    ಡ್ರೈ ಫ್ರೂಟ್ಸ್ ಮೋದಕ:
    ಬೇಕಾಗುವ ಸಾಮಗ್ರಿಗಳು:
    ಗೋಡಂಬಿ – 1/4 ಕಪ್
    ಬಾದಾಮಿ – 1/4 ಕಪ್
    ಪಿಸ್ತಾ – 1/4 ಕಪ್
    ಒಣ ದ್ರಾಕ್ಷಿ – 1/4 ಕಪ್
    ಕೊಬ್ಬರಿ ತುರಿ – 2-3 ಚಮಚ
    ಖರ್ಜೂರ – 1/2 ಕಪ್
    ತುಪ್ಪ – 3ರಿಂದ 4 ಚಮಚ

    ಮಾಡುವ ವಿಧಾನ:
    * ಮೊದಲು ಬಾದಾಮಿ, ಪಿಸ್ತಾ, ಗೋಡಂಬಿಯನ್ನು ಮಿಕ್ಸಿ ಜಾರ್‌ನಲ್ಲಿ ಹಾಕಿ ಪುಡಿ ಮಾಡಿ.
    *ನಂತರ ಒಣ ದ್ರಾಕ್ಷಿ ಮತ್ತು ಖರ್ಜೂರವನ್ನ ಚೆನ್ನಾಗಿ ಪೇಸ್ಟ್ ಮಾಡಿ.
    * ನಂತರ ಸ್ವಲ್ಪ ತುಪ್ಪ ಹಾಕಿ, ಪುಡಿ ಮಾಡಿದ ಡ್ರೈ ಫ್ರೂಟ್ಸ್ ಹಾಕಿ ಕಲಸಿ.
    * ನಂತರ ಖರ್ಜೂರ, ಒಣದ್ರಾಕ್ಷಿ ಪೇಸ್ಟ್ ಮತ್ತು ಕೊಬ್ಬರಿ ಹಾಕಿ ಮಿಕ್ಸ್ ಮಾಡಿ.
    * ನಂತರ ಮೋದಕ ಅಚ್ಚಿನಲ್ಲಿ ಡ್ರೈಫ್ರೂಟ್ಸ್ ಮಿಶ್ರಣ ತುಂಬಿ ಪ್ರೆಸ್ ಮಾಡಿದರೆ ಆರೋಗ್ಯಕರ ಡ್ರೈಫ್ರೂಟ್ಸ್ ಮೋದಕ ಸಿದ್ಧ.

    ರೋಸ್ ರಸ್‌ಮಲೈ ಮೋದಕ:
    ಬೇಕಾಗುವ ಸಾಮಗ್ರಿಗಳು:
    ಪನ್ನಿರ್ – 200 ಗ್ರಾಂ
    ಹಾಲಿನ ಪುಡಿ – 3/4 ಕಪ್
    ತುಪ್ಪ – 1 ಚಮಚ
    ಸಕ್ಕರೆ – 1/2 ಕಪ್
    ಏಲಕ್ಕಿ ಪುಡಿ – ಸ್ವಲ್ಪ
    ಪಿಸ್ತಾ – ಸ್ವಲ್ಪ
    ಪಿಂಕ್ ಫುಡ್ ಕಲರ್ – ಅಗತ್ಯಕ್ಕೆ ತಕ್ಕಷ್ಟು
    ರೋಸ್ (ಗುಲಾಬಿ) ದಳಗಳು

    ಮಾಡುವ ವಿಧಾನ:
    * ಪನ್ನೀರನ್ನು ಮಿಕ್ಸಿ ಜಾರ್‌ಗೆ ಹಾಕಿ ಪುಡಿ ಮಾಡಿ.
    * ನಂತರ ತವಾದಲ್ಲಿ ತುಪ್ಪ ಹಾಕಿ ಬಿಸಿಯಾದ ನಂತರ ಪುಡಿ ಮಾಡಿದ ಪನ್ನೀರ್ ಹಾಕಿ.
    * ನಂತರ ಹಾಲಿನ ಪುಡಿ ಸೇರಿಸಿ, ತೆಗೆದಿಟ್ಟ ಸಕ್ಕರೆ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ.
    * ಏಲಕ್ಕಿ ಪುಡಿ, ಪುಡಿ ಮಾಡಿದ ಪಿಸ್ತಾ, ಪಿಂಕ್ ಫುಡ್ ಕಲರ್ ಹಾಕಿ ಮಿಕ್ಸ್ ಮಾಡಿ ಉರಿ ಆರಿಸಿ.
    * ಈಗ ಮೋದಕ ಅಚ್ಚುವಿನಲ್ಲಿ ಗುಲಾಬಿ ದಳ ಇಟ್ಟು, ಪಿಸ್ತಾ ಇಟ್ಟು ನಂತರ ಪನ್ನಿರ್ ಮಿಶ್ರಣ ತುಂಬಿ ಒತ್ತಿ.
    * ರುಚಿಕರವಾದ ರೋಸ್ ರಸ್‌ಮಲೈ ಮೋದಕ ಸವಿಯಲು ಸಿದ್ಧ.

    ಅಂಜೂರದ ಮೋದಕ:
    ಬೇಕಾಗುವ ಸಾಮಗ್ರಿಗಳು:
    ಬಾದಾಮಿ – 1/4 ಕಪ್
    ಗೋಡಂಬಿ – 1/4 ಕಪ್
    ಪಿಸ್ತಾ – 2 ಚಮಚ
    ಒಣ ದ್ರಾಕ್ಷಿ – 2 ಚಮಚ
    ಅಂಜೂರ – 1/2 ಕಪ್
    ಖರ್ಜೂರ – 1/2 ಕಪ್
    ಪುಡಿ ಮಾಡಿದ ತೆಂಗಿನ ತುರಿ – 1/4 ಕಪ್
    ಗಸೆಗಸೆ – 1/4 ಕಪ್
    ಏಲಕ್ಕಿ ಪುಡಿ – 1/2 ಚಮಚ

    ಮಾಡುವ ವಿಧಾನ:
    * ಒಂದು ಮಿಕ್ಸಿ ಜಾರ್‌ಗೆ ಬಾದಾಮಿ, ಗೋಡಂಬಿ, ಪಿಸ್ತಾ ಹಾಕಿ ಚೆನ್ನಾಗಿ ಪುಡಿ ಮಾಡಿ.
    * ನಂತರ ಒಣದ್ರಾಕ್ಷಿ, ಅಂಜೂರ, ಖರ್ಜೂರ ಹಾಕಿ ಪೇಸ್ಟ್ ಮಾಡಿ.
    * ನಂತರ ಇದನ್ನು ಒಂದು ಬೌಲ್‌ಗೆ ಹಾಕಿ ಪುಡಿ ಮಾಡಿದ ತೆಂಗಿನ ತುರಿ, ಗಸೆಗಸೆ, ಏಲಕ್ಕಿ ಪುಡಿ ಹಾಕಿ ಚೆನ್ನಾಗಿ ಮಿಶ್ರಣ ಮಾಡಿ.
    * ತಯಾರಾದ ಮಿಶ್ರಣವನ್ನು ಮೋದಕ ಅಚ್ಚಿಗೆ ಹಾಕಿ ಒತ್ತಿ. ಅಂಜೂರ ಮೋದಕ ರೆಡಿ.

     

  • ಬೊಮ್ಮಾಯಿಯವರು ಮಾಜಿ ಮುಖ್ಯಮಂತ್ರಿಗಳಂತೆ ನಮ್ಮ ಸಮಾಜಕ್ಕೆ ಮೋಸ ಮಾಡುವುದಿಲ್ಲ: ಯತ್ನಾಳ್

    ಬೊಮ್ಮಾಯಿಯವರು ಮಾಜಿ ಮುಖ್ಯಮಂತ್ರಿಗಳಂತೆ ನಮ್ಮ ಸಮಾಜಕ್ಕೆ ಮೋಸ ಮಾಡುವುದಿಲ್ಲ: ಯತ್ನಾಳ್

    -ಇಬ್ಬರು ಮಾಜಿ ಸಿಎಂಗಳು ಮೋಸ ಮಾಡಿದ್ದಾರೆ

    ಹಾವೇರಿ: ನಮ್ಮ ಸಮಾಜಕ್ಕೆ ಮೋಸ ಮಾಡಿದವರು ಇಬ್ಬರು ಮಾಜಿ ಸಿಎಂ ಆಗಿದ್ದಾರೆ. ಅವರು ಖಾಯಂ ಮಾಜಿ ಆಗಿರುತ್ತಾರೆ. ಬೊಮ್ಮಾಯಿಯವರು ಮಾಜಿ ಮುಖ್ಯಮಂತ್ರಿಗಳಂತೆ ನಮ್ಮ ಸಮಾಜಕ್ಕೆ ಮೋಸ ಮಾಡುವುದಿಲ್ಲ. ನಮ್ಮ ಸಮಾಜಕ್ಕೆ 2ಎ ಮೀಸಲಾತಿ ಕೊಡುತ್ತಾರೆ ಎಂಬ ಭರವಸೆ ಇದೆ ಎಂದು ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿದ್ದಾರೆ.

    ಹಾವೇರಿ ಜಿಲ್ಲೆ ಹಾನಗಲ್ ಪಟ್ಟಣದಲ್ಲಿ ಮಾತನಾಡಿದ ಅವರು, ಮೀಸಲಾತಿ ಪರಿಷ್ಕರಣೆ ಬೇಡಿಕೆಯನ್ನು ವಿಧಾನಸೌಧದಲ್ಲಿ ಕೇಳಿದ್ದೆ. ಬಸವರಾಜ ಬೊಮ್ಮಾಯಿ ಅವರು ಗೃಹ ಮಂತ್ರಿ ಆಗಿದ್ದಾಗ ನಮ್ಮ ಬೇಡಿಕೆಗೆ ದೀರ್ಘ ಉತ್ತರ ನೀಡಿದ್ದರು. ಆರು ತಿಂಗಳೊಳಗೆ ಬೇಡಿಕೆ ಈಡೇರಿಸೋದಾಗಿ ಅಂದಿನ ಸಿಎಂ ಯಡಿಯೂರಪ್ಪ ಭರವಸೆ ನೀಡಿದ್ದರು. ಅದು ಯಾವುದು ಈವರೆಗೆ ಆಗಿಲ್ಲ. ಸೆಪ್ಟೆಂಬರ್ 15ಕ್ಕೆ ಆರು ತಿಂಗಳ ಗಡುವು ಮುಗಿಯುತ್ತಿದೆ. ಕೂಡಲಸಂಗಮ ಸ್ವಾಮೀಜಿಗಳ ನೇತೃತ್ವದಲ್ಲಿ ರಾಜ್ಯದಲ್ಲಿ ಸಮುದಾಯದ ಶಕ್ತಿ ಒಗ್ಗೂಡಿಸಲು ಪ್ರಯತ್ನ ನಡೆಯುತ್ತಿದೆ. ನಾವೆಲ್ಲರೂ ಸ್ವಾಮೀಜಿಗಳ ಬೆಂಬಲಕ್ಕೆ ನಿಂತುಕೊಂಡಿದ್ದೇವೆ ಎಂದರು. ಇದನ್ನೂ ಓದಿ: 2ಎ ಮೀಸಲಾತಿ ಹೋರಾಟ ಮುಂದುವರಿಯುತ್ತದೆ: ಯತ್ನಾಳ್

    ನಾವು ರಾಜಕೀಯ ಮೀಸಲಾತಿ ಕೇಳುತ್ತಿಲ್ಲ, ಶೈಕ್ಷಣಿಕ ಮೀಸಲಾತಿ ಕೇಳುತ್ತಿದ್ದೇವೆ. ನಮ್ಮ ಸಮಾಜಕ್ಕೆ ಯಾರ್ಯಾರು ಮೋಸ ಮಾಡಿದ್ದಾರೆ ಅನ್ನೋದು ಜನರಿಗೆ ಗೊತ್ತಿದೆ. ಸಮಾಜ ಒಡೆಯಬೇಕು ಅಂತಾ ಕೆಲವರು ರಾಜ್ಯದಲ್ಲಿ ಪಿತೂರಿ ನಡೆಸುತ್ತಿದ್ದಾರೆ. ಎರಡು, ಮೂರು ಪೀಠ ಮಾಡ್ಕೊಂಡು ಕೆಲವರು ಪಂಚಮಸಾಲಿ ಸಮಾಜವನ್ನು ದುರುಪಯೋಗ ಮಾಡಿಕೊಂಡಿದ್ದಾರೆ. ನಮ್ಮಲ್ಲೆ ಕೆಲವರು ಮಂತ್ರಿ, ಮುಖ್ಯಮಂತ್ರಿ ಆಗಬೇಕು ಎಂದು ಸಮಾಜ ಒಡೆಯೋ ಕೆಲಸ ಮಾಡುತ್ತಿದ್ದಾರೆ. ನಾನು ಮಂತ್ರಿ, ಮುಖ್ಯಮಂತ್ರಿ ಆಗಬೇಕು ಎಂದು ಹೋರಾಟ ಮಾಡುತ್ತಿಲ್ಲ. ಪಂಚಮಸಾಲಿ ಪ್ರತಿಜ್ಞಾ ಪಂಚಾಯತ್ ಅಭಿಯಾನ ಬಹಳ ದೊಡ್ಡ ಪರಿಣಾಮ ಆಗುತ್ತದೆ. ಹಿಂದಿನ ಇಬ್ಬರು ಮುಖ್ಯಮಂತ್ರಿಗಳು ನಮ್ಮ ಸಮಾಜವನ್ನು 2 ಎಗೆ ಸೇರಿಸಬಹುದಿತ್ತು, ಆದರೆ ಸೇರಿಸಲಿಲ್ಲ. ಸಿ.ಎಂ.ಉದಾಸಿ ನೇತೃತ್ವದ ಸಮಿತಿ ಪಂಚಮಸಾಲಿ ಸಮಾಜವನ್ನು 2ಎಗೆ ಸೇರಿಸಬಹುದು ಎಂದು ವರದಿ ಕೊಟ್ಟಿದೆ. ಒಂದೆರಡು ನಮ್ಮ ಸಮಾಜದ ನಾಯಕರು ದೆಹಲಿಯಲ್ಲಿ ನಾನು ಲಿಂಗಾಯತ ಲೀಡರ್ ಎಂದು ಹೇಳಿಕೊಂಡು ಹೋಗಿದ್ದಾರೆ. ಯಾರೇ ತಂತ್ರ, ಕುತಂತ್ರ ಮಾಡಿ ಸಮಾಜ ಒಡೆಯೋ ಕೆಲಸಕ್ಕೆ ಮುಂದಾದ್ರೆ ಅದು ನಡಿಯುವುದಿಲ್ಲ ಎಂದು ಎಚ್ಚರಿಕೆ ನೀಡಿದ್ದಾರೆ.

    ಯಾರೇ ಮುಖ್ಯಮಂತ್ರಿ ಇದ್ದರೂ ಅವರ ನೇತೃತ್ವದಲ್ಲಿ ಚುನಾವಣೆ ನಡೆಯುತ್ತದೆ. ಬೊಮ್ಮಾಯಿ ನೇತೃತ್ವದಲ್ಲಿ ಮುಂದಿನ ಚುನಾವಣೆ ಎಂಬ ಕೇಂದ್ರ ಗೃಹ ಸಚಿವ ಅಮೀತ್ ಶಾರ ಹೇಳಿಕೆ ಸ್ವಾಗತಾರ್ಹ. ನಾನು ಹಿಂದೆ ಹೇಳಿದ್ದ ಭವಿಷ್ಯ ತಡವಾಗಿ ನಿಜ ಆಗಿದೆ ಎಂದರು.

    ನಮ್ಮ ಮಿಸಲಾತಿ ಹೋರಾಟ ಯಾವುದೇ ಸ್ವಾಮೀಜಿ, ನಾಯಕರನ್ನು ಕರೆಯುವ ಅಗತ್ಯವಿಲ್ಲ. ಕುಂಕುಮ ಹಚ್ಚಿ, ತಾಂಬೂಲ ಕೊಟ್ಟು ಕರೆಕೊಡುವ ಅಗತ್ಯವಿಲ್ಲ. ನಿರಾಣಿ 2ಎ ಕೊಡಿಸುತ್ತೇನೆ ಎಂದು ಭರವಸೆ ನೀಡಿದ್ದರು. ವೀರಶೈವ ಲಿಂಗಾಯತರು ಎಲ್ಲ ಒಂದೇ. ವೀರಶೈವ ಮತ್ತು ಲಿಂಗಾಯತ ಎರಡು ಒಂದೇ. ಎಂ.ಬಿ.ಪಾಟೀಲ್‍ರಿಗೆ ಪ್ರಾಯಶ್ಚಿತ ಆಗಿದೆ. ಗಣೇಶ ಚತುರ್ಥಿ ಆಚರಣೆ ಮಾಡಬೇಡಿ ಎನ್ನುತ್ತಾರೆ. ದೊಡ್ಡ, ದೊಡ್ಡ ಕಾರ್ಯಕ್ರಮ ಮಾಡುತ್ತಾರೆ. ಮೊಹರಂನಲ್ಲಿ ಕುಣಿದು ಕುಪ್ಪಳಿಸಿದ್ದಾರೆ, ಗಣೇಶ ಚತುರ್ಥಿ ಬಂದಾಗ ಕೊರೊನಾ ಅಂತಾರೆ. ಹಿಂದೂಗಳಿಗೆ ಇರುವುದು ಒಂದೆ ಭಾರತ. ಈಗಾಗಲೇ ಅವರು ಕಾಶ್ಮೀರಕ್ಕೆ ಬಂದಿದ್ದಾರೆ. ಜಾತ್ಯಾತೀತರು ಅಂತಾ ಹೊರಟರೆ ನಾಳೆ ನಾವು ಉಳಿಯುವುದಿಲ್ಲ, ನೀವು ಉಳಿಯೋದಿಲ್ಲ. ಡಾ.ಅಂಬೇಡ್ಕರರು ದೇಶ ಒಡೆಯೋ ಕೆಲಸ ಮಾಡಬೇಡಿ ಅಂತಾ ಹೇಳಿದ್ರು. ಅಂಬೇಡ್ಕರ್ ನಿಜವಾದ ಸತ್ಯಗಳನ್ನೆ ಹೇಳಿದ್ರು. ಎಲ್ಲ ಕಳ್ಳರು ಸೇರಿಕೊಂಡು ಅಂಬೇಡ್ಕರ್‍ನ್ನೆ ದೂರವಿಟ್ಟರು. ಲಿಂಗಾಯತ, ವೀರಶೈವ ಎಂದು ಹೇಳಿಕೊಂಡು ಹೊರಟರೆ ನಮ್ಮ ದೇಶ ಉಳಿಯುವುದಿಲ್ಲ ಎಂದು ಯತ್ನಾಳ್ ಕಿಡಿಕಾರಿದರು. ಇದನ್ನೂ ಓದಿ: ಪಂಚಮಸಾಲಿ 2ಎ ಮೀಸಲಾತಿ- ದುಂಡು ಮೇಜಿನ ಸಭೆಯಲ್ಲಿ ಪಂಚ ನಿರ್ಣಯ ಪಾಸ್