Tag: Ganesha Charturthi

  • ಮೋದಕ ಮಾಡುವ ವಿಧಾನ

    ಮೋದಕ ಮಾಡುವ ವಿಧಾನ

    ಣೇಶ ಮೋದಕ ಪ್ರಿಯ ಎಂದು ಎಲ್ಲರಿಗೂ ತಿಳಿದಿದೆ. ಆದ್ದರಿಂದ ನಿಮಗಾಗಿ ಗಣಪನಿಗೆ ಪ್ರಿಯಾವಾದ ಮೋದಕ ಸಿಹಿ ಮಾಡುವ ವಿಧಾನ ಇಲ್ಲಿದೆ.

    ಬೇಕಾಗುವ ಸಾಮಾಗ್ರಿಗಳು
    * ಮೈದಾ ಹಿಟ್ಟು – 1 ಕಪ್
    * ಚಿರೋಟಿ ರವೆ – 1/4 ಕಪ್
    * ಉಪ್ಪು – ಚಿಟಿಕೆ
    * ಬೆಲ್ಲ – 1 ಅಚ್ಚು
    * ಕೊಬ್ಬರಿ ತುರಿ- 1 ಕಪ್
    * ಏಲಕ್ಕಿ ಪುಡಿ
    * ಗಸಗಸೆ – 1 ಚಮಚ
    * ಎಳ್ಳು -ಸ್ವಲ್ಪ
    * ಗೋಡಂಬಿ, ಬಾದಾಮಿ – 3-4 ಚಮಚ
    * ಎಣ್ಣೆ – ಕರಿಯಲು

    ಮಾಡುವ ವಿಧಾನ
    * ಮೊದಲಿಗೆ ಒಂದು ಬಟ್ಟಲಿಗೆ ಚಿರೋಟಿ ರವೆ, ಮೈದಾ ಹಿಟ್ಟು, ಉಪ್ಪು ಸೇರಿಸಿ ಚಪಾತಿ ಹಿಟ್ಟಿನ ಹದಕ್ಕೆ ಕಲಸಿಕೊಂಡು ತಟ್ಟೆ ಮುಚ್ಚಿಡಿ.
    * ನಂತರ ಒಂದು ಪ್ಯಾನ್ ಅನ್ನು ಒಲೆಯ ಮೇಲಿಟ್ಟು ಅದಕ್ಕೆ ಸೋಸಿಕೊಂಡ ಬೆಲ್ಲದ ನೀರು, ಕೊಬ್ಬರಿ ತುರಿಯನ್ನು ಹಾಕಿ ಫ್ರೈ ಮಾಡಿರಿ.
    * ಹೂರಣ ಸ್ವಲ್ಪ ಗಟ್ಟಿಯಾದಂತೆ ಅದಕ್ಕೆ ಏಲಕ್ಕಿ ಪುಡಿ, ಹುರಿದ ಗಸಗಸೆ, ಪುಡಿ ಮಾಡಿದ ಎಳ್ಳು, ಹುರಿದು ಸಣ್ಣಗೆ ಹೆಚ್ಚಿದ ಗೋಡಂಬಿ, ಬಾದಾಮಿಯನ್ನು ಸೇರಿಸಿ ಮಿಕ್ಸ್ ಮಾಡಿರಿ, ತಣ್ಣಗಾಗಲು ಬಿಡಿ.
    * ಈಗ ಹಿಟ್ಟನ್ನು ತೆಗೆದುಕೊಂಡು ಪೂರಿ ಆಕಾರಕ್ಕಿಂತ ಸ್ವಲ್ಪ ಕಡಿಮೆ ಲಟ್ಟಿಸಿ ಅದರೊಳಗೆ 1/2 ಚಮಚ ಹೂರಣ ಸೇರಿಸಿ ಮಧ್ಯಕ್ಕೆ ಮಡಚಿ
    * ಮೋದಕ ರೀತಿಯಲ್ಲಿ ಅಂದರೆ ಬೆಳ್ಳುಳ್ಳಿ ಆಕಾರದಲ್ಲಿ ಮಡಚಿ. ಹೂರಣ ಆಚೆ ಬಾರದಂತೆ ನೋಡಿಕೊಳ್ಳಿ.
    * ಈಗ ಮಾಡಿಟ್ಟುಕೊಂಡ ಹಲವು ಮೋದಕಗಳನ್ನು ಕಾದ ಎಣ್ಣೆಯಲ್ಲಿ ಹಾಕಿ ಕರಿಯಿರಿ.
    ( ಡ್ರೈಫ್ರೂಟ್ಸ್, ಎಳ್ಳು ಬೇಕಿದ್ದಲ್ಲಿ ಮಾತ್ರ ಬಳಸಬಹುದು ಅದಕ್ಕೆ ಬದಲಾಗಿ ಹುರಿಗಡಲೆ ಪುಡಿ ಬಳಸಬಹುದು)

    Live Tv
    [brid partner=56869869 player=32851 video=960834 autoplay=true]

  • ಒಂದೇ ವೇದಿಕೆಯಲ್ಲಿ ಗಣೇಶ, ಪಾಂಚಾ ಮೂರ್ತಿ ಪ್ರತಿಷ್ಠಾಪಿಸಿ ಏಕತೆ ಸಾರಿದ್ರು!

    ಒಂದೇ ವೇದಿಕೆಯಲ್ಲಿ ಗಣೇಶ, ಪಾಂಚಾ ಮೂರ್ತಿ ಪ್ರತಿಷ್ಠಾಪಿಸಿ ಏಕತೆ ಸಾರಿದ್ರು!

    ಹುಬ್ಬಳ್ಳಿ: ಒಂದೇ ವೇದಿಕೆಯಲ್ಲಿ ಗಣೇಶ ಮೂರ್ತಿ ಹಾಗೂ ಪಾಂಚಾ (ಮೊಹರಂ ಹಬ್ಬದಲ್ಲಿ ಪ್ರತಿಷ್ಠಾಪನೆ ಮಾಡುವ ಮುಸ್ಲಿಂ ದೇವರು) ಮೂರ್ತಿಯನ್ನು ಪ್ರತಿಷ್ಠಾಪನೆ ಮಾಡುವ ಮೂಲಕ ವಾಣಿಜ್ಯ ನಗರಿ ಹುಬ್ಬಳ್ಳಿಯಲ್ಲಿ ಹಿಂದೂ-ಮುಸ್ಲಿಂರು ಏಕತೆಯನ್ನು ಸಾರಿದ್ದಾರೆ.

    ಬಮ್ಮಾಪುರ ಏಣಿಯಲ್ಲಿ ಒಂದೇ ವೇದಿಕೆಯಲ್ಲಿ ಗಣೇಶ ಮೂರ್ತಿ ಹಾಗೂ ಪಾಂಚಾ ಮೂರ್ತಿಯನ್ನು ಪ್ರತಿಷ್ಠಾಪನೆ ಮಾಡಲಾಗಿದೆ. ವಿಘ್ನೇಶ್ವರ ಉತ್ಸವ ಸಮಿತಿ ಹಾಗೂ ಸೈಯದ್ ಸಾದಾತ್ ಜಮಾತ ವತಿಯಿಂದ ಆಚರಣೆ ಮಾಡುತ್ತಿದ್ದಾರೆ.

    ಈ ಹಿಂದೆ 36 ವರ್ಷಗಳ ಹಿಂದೆ ಗಣೇಶೋತ್ಸವ ಹಾಗೂ ಮೊಹರಂ ಹಬ್ಬ ಏಕಕಾಲದಲ್ಲಿ ಬಂದಾಗ, ಇದೇ ರೀತಿಯಲ್ಲಿ ಹಬ್ಬ ಆಚರಣೆ ಮಾಡಲಾಗಿತ್ತು. ಆದಾದ ನಂತರ ಈ ಬಾರಿ ಗಣೇಶೋತ್ಸವ ಹಾಗೂ ಮೊಹರಂ ಏಕ ಕಾಲದಲ್ಲಿ ಬಂದಿರೋದರಿಂದ ಅದ್ಧೂರಿಯಾಗಿ ಆಚರಣೆ ಮಾಡಲಾಗುತ್ತಿದೆ ಎಂದು ವಿಘ್ನೇಶ್ವರ ಉತ್ಸವ ಸಮಿತಿಯವರು ಹೇಳುತ್ತಾರೆ.

    ಅಂದ ಹಾಗೆ ಮುಂಜಾನೆ ಹಾಗೂ ಸಂಜೆ ಹಿಂದೂ ಹಾಗೂ ಮುಸ್ಲಿಂ ಸಂಪ್ರದಾಯಗಳ ಪ್ರಕಾರ ಪೂಜೆ ಪುರಸ್ಕಾರಗಳು ನಡೆಯುತ್ತಿವೆ. ಗಣೇಶನನ್ನು ನೋಡಲು ಬಂದವರು ಪಾಂಚಾ ದೇವರ ದರ್ಶನ ಪಡೆಯುತ್ತಾರೆ ಹಾಗೇ ಪಾಂಚಾ ದೇವರ ದರ್ಶನಕ್ಕೆ ಬಂದವರು ಗಣೇಶ ದರ್ಶನ ಪಡೆಯುತ್ತಾರೆ. ಇನ್ನು ಎರಡು ಹಬ್ಬಗಳು ಏಕಕಾಲದಲ್ಲಿ ಬಂದಿರುವುದು ಎರಡು ಸಮುದಾಯದ ಜನರ ಸಂಭ್ರಮ ಇಮ್ಮಡಿಗೊಳಿಸಿದೆ.

    ಇತ್ತೀಚೆಗೆ ಸಾಂಸ್ಕೃತಿಕ ನಗರದಲ್ಲೂ ಕೂಡ ಎರಡು ಕಡೆಗಳಲ್ಲಿ ಮಾದರಿಯುತವಾಗಿ ಗೌರಿ ಹಾಗೂ ಗಣೇಶ ಹಬ್ಬ ಆಚರಿಸಲಾಯಿತು. ಪೌರಕಾರ್ಮಿಕ ಮಹಿಳೆಯರಿಗೆ ಬಾಗಿನ ನೀಡಿ ಗೌರಿ ಹಬ್ಬ ಆಚರಿಸಿದರೆ, ಮತ್ತೊಂದು ಕಡೆ ಮುಸ್ಲಿಂ ಮತ್ತು ಹಿಂದೂ ಯುವಕರು ಜೊತೆಯಾಗಿ ಗಣೇಶ ಹಬ್ಬವನ್ನು ಆಚರಿಸಿದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv