ಸೋಮವಾರ (ಸೆ.8) ಕಲ್ಲು ತೂರಾಟ ಖಂಡಿಸಿ ಹಿಂದೂ ಸಂಘಟನೆಗಳು ಪ್ರತಿಭಟನೆ ನಡೆಸಿದ್ದವು. ಈ ವೇಳೆ ಪೊಲೀಸರು ಲಾಠಿಚಾರ್ಜ್ ನಡೆಸಿದ್ದರು. ಅದಾದ ಬಳಿಕ ಈ ಘಟನೆಯನ್ನು ಖಂಡಿಸಿ ಮಂಗಳವಾರ (ಸೆ.9) ಮದ್ದೂರು ಬಂದ್‌ಗೆ ಕರೆ ನೀಡಲಾಗಿತ್ತು. ವರ್ತಕರು ಬೆಂಬಲ ಸೂಚಿಸಿದ ಪರಿಣಾಮ ಬಂದ್ ಯಶಸ್ವಿಯಾಗಿತ್ತು. ಬುಧವಾರ (ಸೆ.11) ಮದ್ದೂರು ಪಟ್ಟಣದಲ್ಲಿ ಬಿಗಿಭದ್ರತೆಯೊಂದಿಗೆ ಸಾಮೂಹಿಕ ಬೃಹತ್ ಗಣಪತಿ ವಿಸರ್ಜನೆ ಮೆರವಣಿಗೆ ನಡೆಯಿತು. ಹೀಗಾಗಿ ಮೂರು ದಿನಗಳ ಕಾಲ ಮದ್ದೂರು ಪಟ್ಟಣದಲ್ಲಿ ಅಂಗಡಿ ಮುಗ್ಗಟ್ಟುಗಳು ತೆರದಿರಲಿಲ್ಲ.
ಗುರುವಾರ (ಸೆ.11) ಮೂರು ದಿನಗಳ ಬಳಿಕ ಮದ್ದೂರು ಪಟ್ಟಣದಲ್ಲಿ ಎಂದಿನಂತೆ ಅಂಗಡಿ ಮುಗ್ಗಟ್ಟುಗಳು ತೆರೆದಿವೆ. ಇನ್ನೂ ಎಂದಿನಂತೆ ವಾಹನ ಸಂಚಾರ ಕೂಡ ಆರಂಭವಾಗಿದೆ. ಭದ್ರತಾ ದೃಷ್ಟಿಯಿಂದ ಮದ್ದೂರು ಪಟ್ಟಣದಲ್ಲಿ ಪೊಲೀಸ್ ಭದ್ರತೆಯನ್ನು ಮುಂದುವರಿಸಲಾಗಿದ್ದು, ಆಯಕಟ್ಟಿನ ಸ್ಥಳಗಳಲ್ಲಿ ಪೊಲೀಸರನ್ನು ನಿಯೋಜನೆ ಮಾಡಲಾಗಿದೆ.ಇದನ್ನೂ ಓದಿ: ಮದ್ದೂರು ಬಂದ್‌ಗೆ ಉತ್ತಮ ರೆಸ್ಪಾನ್ಸ್ – ಪಟ್ಟಣದಾದ್ಯಂತ ಪೊಲೀಸ್ ಸರ್ಪಗಾವಲು, ಎಸ್ಪಿ ರೌಂಡ್ಸ್
– ಮಸೀದಿ ಮುಂದೆ ಕರ್ಪೂರ, ಡಿಜೆ ಸದ್ದು, ಜೈಶ್ರೀರಾಮ್ ಜೈಕಾರ
– 20 ಸಾವಿರಕ್ಕೂ ಹೆಚ್ಚು ಮಂದಿ ಭಾಗಿ
ಮಂಡ್ಯ: ಮದ್ದೂರಿನಲ್ಲಿ ಹಿಂಸಾಚಾರದ ಬಳಿಕ ಬುಧವಾರ ಬಿಜೆಪಿ-ಜೆಡಿಎಸ್ ನಾಯಕರ ಸಮ್ಮುಖದಲ್ಲಿ 27 ಗಣೇಶ ಮೂರ್ತಿಗಳ 3 ಕಿ.ಮೀ. ಮೆರವಣಿಗೆ ನಡೀತು. ಈ ವೇಳೆ, ಕೇಸರಿ ವಿರಾಟರೂಪ ಪ್ರದರ್ಶನವಾಯಿತು. 20 ಸಾವಿರಕ್ಕೂ ಹೆಚ್ಚು ಜನ ಭಾಗಿಯಾಗಿದ್ದರು. ಮೆರವಣಿಗೆ ಮೂಲಕ ಸಾಗಿ ಶಿಂಷಾ ನದಿಯಲ್ಲಿ ಗಣೇಶ ಮೂರ್ತಿಗಳ ಸಾಮೂಹಿಕ ವಿಸರ್ಜನೆ ಮಾಡಲಾಯಿತು.
ಕೇಸರಿ ಶಾಲುಗಳು-ಧ್ವಜಗಳ ಹಾರಾಟ, ಜೈ ಶ್ರೀರಾಮ್… ಜೈ ಗಣೇಶ ಜೈಕಾರಗಳು, ತಮಟೆ-ಡಿಜೆ, ಪಟಾಟಿಕಯ ಸದ್ದು ಮುಗಿಲುಮುಟ್ಟಿತ್ತು. ಅಹಿತಕರ ಘಟನೆ ನಡೆಯದಂತೆ ಬಿಗಿ ಪೊಲೀಸ್ ಭದ್ರತೆ ಕೈಗೊಳ್ಳಲಾಗಿತ್ತು. ಕಾಶಿ ವಿಶ್ವನಾಥ ದೇಗುಲದಲ್ಲಿ ಬಿಜೆಪಿಗರು ಪೂಜೆ ಸಲ್ಲಿಸಿದರು. ಐಬಿ ಸರ್ಕಲ್‌ನಿಂದ ಮೆರವಣಿಗೆ ಪ್ರಾರಂಭವಾಗಿ ಪೇಟೆಬೀದಿ ಮಾರ್ಗವಾಗಿ ಕೊಲ್ಲಿ ಸರ್ಕಲ್‌ನಲ್ಲಿ ಅಂತ್ಯವಾಯಿತು.
ಐಬಿ ಸರ್ಕಲ್‌ನಲ್ಲಿ ಅಶೋಕ್, ಸಿ.ಟಿ.ರವಿ, ಅಶ್ವಥ್ ನಾರಾಯಣ್‌ರನ್ನು ಹೊತ್ತು ಕಾರ್ಯಕರ್ತರು ಕುಣಿದರು. ಕೇಸರಿ ಬಾವುಟ ಹಿಡಿದು ಅಶೋಕ್ ಸಾಗಿದರು. ಅಭಿಮಾನಿಯೋರ್ವ ಅಂಬರೀಶ್ ಫ್ಲೆಕ್ಸ್ ಹಿಡಿದು ಬಂದಾಗ ಅಭಿಮಾನಿಗಳ ಹರ್ಷೋದ್ಘಾರ ಜೋರಾಗಿತ್ತು. ಕಲ್ಲು ತೂರಿದ್ದ ಮಸೀದಿ ಮುಂಭಾಗ ಮೆರವಣಿಗೆ ಬಂದಾಗ ಭಾರಿ ಪ್ರಮಾಣದಲ್ಲಿ ಕರ್ಪೂರ ಹಚ್ಚಲಾಯಿತು. ಬಳಿಕ ಹೊಳೆ ಆಂಜನೇಯ ದೇವಾಲಯ ಬಳಿಯ ಶಿಂಷಾ ನದಿಯಲ್ಲಿ ಗಣೇಶ ಮೂರ್ತಿಗಳ ವಿಸರ್ಜನೆ ನಡೀತು.
ಮಂಡ್ಯ ಮಾತ್ರವಲ್ಲದೇ ಮೈಸೂರು, ರಾಮನಗರ, ಹಾಸನ, ಚಾಮರಾಜನಗರ, ಬೆಂಗಳೂರಿನಿAದಲೂ ಹೆಚ್ಚುವರಿ ಪೊಲೀಸರನ್ನು ಕರೆಸಿಕೊಳ್ಳಲಾಗಿತ್ತು. ಮದ್ಯ ಮಾರಾಟಕ್ಕೆ ಸಂಪೂರ್ಣ ಬ್ರೇಕ್ ಹಾಕಲಾಗಿತ್ತು. ಮೆರವಣಿಗೆ ನಡುವೆ ರಾಮಮಂದಿರ ಪಾರ್ಕ್ ಬಳಿ ವೇದಿಕೆ ಮೇಲೆ ಬಿಜೆಪಿ ನಾಯಕರು ಭಾಷಣ ಮಾಡಿದರು. ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು. ಇದಕ್ಕೂ ಮುನ್ನ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ, ಅಶೋಕ್ ನೇತೃತ್ವದಲ್ಲಿ ಬಿಜೆಪಿ ನಾಯಕರ ತಂಡ ಕಲ್ಲೆಸೆತದಲ್ಲಿ ಗಾಯಗೊಂಡವರ ಮನೆಗೆ ಭೇಟಿ ನೀಡಿದ್ದರು.
ಬೆಂಗಳೂರು: ಮುಖ್ಯಮಂತ್ರಿಗಳು ಸರ್ವರನ್ನೂ ಜೊತೆಯಾಗಿ ಒಯ್ಯುವ ಕಾರ್ಯ ಮಾಡುತ್ತಿಲ್ಲ. ಗಣೇಶ ವಿಸರ್ಜನೆ ವೇಳೆ ಆಗುತ್ತಿರುವ ಅಹಿತಕರ ಘಟನೆಗಳಿಗೆ ಸರ್ಕಾರವೇ ಹೊಣೆ ಎಂದು ವಿಧಾನ ಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ (Chalavadi Narayanaswamy) ಟೀಕಿಸಿದ್ದಾರೆ.
ಬೆಂಗಳೂರಿನಲ್ಲಿ (Bengaluru) ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಈ ಸರ್ಕಾರ ಒಂದು ಕಡೆ ವಾಲಿದ್ದರಿಂದ ಇಂದು ಈ ಪರಿಸ್ಥಿತಿ ಎದುರಾಗುತ್ತಿದೆ. ಸರ್ವರಿಗೂ ಸಮಪಾಲು, ಸಮಬಾಳು ಎನ್ನುವ ಸರ್ಕಾರ ಹೀಗೆ ನಡೆದುಕೊಂಡರೆ ಸರಿಯೇ ಎಂದು ಪ್ರಶ್ನಿಸಿದ್ದಾರೆ. ಇದನ್ನೂ ಓದಿ: ಸಿಎಂ ಕುರ್ಚಿಯಲ್ಲಿ ಕುಳಿತು ನ್ಯಾಯ ಕೊಡುವುದು ಮುಖ್ಯ: ಬಿ.ವೈ.ವಿಜಯೇಂದ್ರ ಅಭಿಪ್ರಾಯ
ಮದ್ದೂರಿನಲ್ಲಿ (Maddur) ಭಾನುವಾರ ಗಣೇಶ ವಿಸರ್ಜನೆ ಸಮಯದಲ್ಲಿ ಅಚಾತುರ್ಯದ ಘಟನೆಗಳು ನಡೆದಿವೆ. ಇದು ಕಾಂಗ್ರೆಸ್ ತನ್ನ ಮತ ಬ್ಯಾಂಕನ್ನು ಭದ್ರಪಡಿಸಿಕೊಳ್ಳಲು ಕೆಲವು ರೀತಿಯ ಓಲೈಕೆಗಳನ್ನು ಮಾಡಿದ್ದರಿಂದ ಇಡೀ ರಾಜ್ಯದಲ್ಲಿ ಜನರು ತೊಂದರೆ ಅನುಭವಿಸುವಂತಾಗಿದೆ ಎಂದು ಆಕ್ರೋಶ ಹೊರಹಾಕಿದ್ದಾರೆ. ಇದನ್ನೂ ಓದಿ: ಪ್ರತಾಪ್ ತಂದೆ-ತಾಯಿ ದೈವ ಭಕ್ತರಿರಬೇಕು, ಇಲ್ಲಂದ್ರೆ ಕೋತಿ ಅಂತ ಹೆಸರಿಡ್ತಿದ್ರು: ಪ್ರದೀಪ್ ಈಶ್ವರ್
ಗಣೇಶ ವಿಸರ್ಜನೆಗೆ ನೀವು ಅವಕಾಶವನ್ನೂ ಕೊಡುತ್ತಿಲ್ಲ. ಚಿತ್ರದುರ್ಗದಲ್ಲಿ ಮೆರವಣಿಗೆಗೆ ಅವಕಾಶ ಕೊಡುವುದಿಲ್ಲ ಎಂದು ಎಸ್ಪಿ ಆದೇಶ ಹೊರಡಿಸಿದ್ದಾರೆ. ನಮ್ಮೂರಿನಲ್ಲಿ ಆಚರಿಸುವುದಕ್ಕೆ ನಮಗೆ ನೀವು ಅನುಮತಿ ಕೊಡಬೇಕೇ ಎಂದು ಗುಡುಗಿದ್ದಾರೆ.
– ಬೆಳಗ್ಗೆ 10:30 ರಿಂದ ಮೆರವಣಿಗೆ ಆರಂಭ – ಭದ್ರತೆಗೆ 2 ಸಾವಿರಕ್ಕೂ ಹೆಚ್ಚು ಪೊಲೀಸರ ನಿಯೋಜನೆ
ಮಂಡ್ಯ: ಮದ್ದೂರಿನಲ್ಲಿಂದು (Madduru) ಸಾಮೂಹಿಕ ಗಣೇಶ ವಿಸರ್ಜನಾ (Ganesh Procession) ಮೆರವಣಿಗೆ ನಡೆಯಲಿದೆ. 28ಕ್ಕೂ ಹೆಚ್ಚು ಗಣೇಶ ಮೂರ್ತಿಗಳ ಮೆರವಣಿಗೆ ನಡೆಯಲಿದ್ದು 20 ಸಾವಿರಕ್ಕೂ ಹೆಚ್ಚು ಜನ ಭಾಗಿಯಾಗುವ ಸಾಧ್ಯತೆಯಿದೆ.
ಬೆಳಗ್ಗೆ 10:30ಕ್ಕೆ ಮದ್ದೂರು ಪಟ್ಟಣದಿಂದ ಮೆರವಣಿಗೆ ಆರಂಭವಾಗಿ ಮೂರು ಕಿ.ಮೀ ಸಾಗಿ ಶಿಂಷಾ ನದಿಯಲ್ಲಿ ಗಣೇಶ ವಿಸರ್ಜನೆ ನಡೆಯಲಿದೆ. ಈ ಕಾರಣಕ್ಕೆ ಮದ್ದೂರು, ಮಳವಳ್ಳಿ, ಮಂಡ್ಯ ತಾಲೂಕಿನಲ್ಲಿ ಇಂದು ಮದ್ಯ ಮಾರಾಟ, ಸಾಗಾಣಿಕೆಗೆ ಬ್ರೇಕ್ ಹಾಕಲಾಗಿದೆ.
ಮದ್ದೂರು ತಾಲೂಕಿನ ಕೆಲವು ಗ್ರಾಮಗಳಲ್ಲಿ ಪ್ರತಿಷ್ಠಾಪಿಸಿರುವ ಎಲ್ಲಾ ಗಣೇಶ ಮೂರ್ತಿಗಳನ್ನು ಗ್ರಾಮಕ್ಕೆ ತರುವಂತೆ ಕರೆ ನೀಡಲಾಗಿದೆ. ನಂತರ ಕಾಶಿ ವಿಶ್ವಾನಾಥ ದೇವಸ್ಥಾನದಿಂದ ಮೆರವಣಿಗೆ ಪ್ರಾರಂಭವಾಗಲಿದೆ.
ಮದ್ದೂರಿನ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸಲು ಸಂಘಟನೆಗಳು ನಿರ್ಧಾರ ಮಾಡಿದ ಹಿನ್ನೆಲೆಯಲ್ಲಿ ದಕ್ಷಿಣ ವಲಯದ ಐಜಿಪಿ ಬೋರಲಿಂಗಯ್ಯ ನೇತೃತ್ವದಲ್ಲಿ 5 ಮಂದಿ ಎಸ್ಪಿ, 4 ಮಂದಿ ಎಎಸ್ಪಿ ಸೇರಿದಂತೆ ಭದ್ರತೆಗೆ 2 ಸಾವಿರಕ್ಕೂ ಹೆಚ್ಚು ಪೊಲೀಸರನ್ನು ನಿಯೋಜಿಸಲಾಗಿದೆ. ಯಾವುದೇ ಅಹಿತಕರ ಘಟನ ನಡೆಯದೇ ಇರಲು ಮಂಡ್ಯ, ಮೈಸೂರು, ಬೆಂಗಳೂರು, ರಾಮನಗರ, ಚಾಮರಾಜನಗರ, ಹಾಸನ ಸೇರಿ ಹಲವು ಜಿಲ್ಲೆ ಪೊಲೀಸರು ಮದ್ದೂರಿಗೆ ಆಗಮಿಸಿದ್ದಾರೆ. ಕೆಎಸ್ಆರ್‌ಪಿ, ಡಿಎಆರ್ ತುಕಡಿ, ರ್ಯಾಪಿಡ್ ಆ್ಯಕ್ಷನ್ ಪೋರ್ಸ್ ಸಹ ನಗರಕ್ಕೆ ಬಂದಿದೆ. ಇದನ್ನೂಓದಿ: ಮುಂದಿನಜನ್ಮಅಂತಿದ್ರೆಮುಸ್ಲಿಂ ಆಗಿಯೇ ಹುಟ್ಟಬೇಕು: `ಕೈ’ ಶಾಸಕ ಸಂಗಮೇಶ್
ಮದ್ದೂರಿಗೆ ಬಿಜೆಪಿ ನಾಯಕರು
ಇಂದು ಮದ್ದೂರಿಗೆ ಬಿಜೆಪಿ ನಾಯಕರ ತಂಡ ಭೇಟಿ ನೀಡಲಿದೆ. ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ, ವಿಪಕ್ಷ ನಾಯಕ ಆರ್.ಅಶೋಕ್, ಸಿ.ಟಿ.ರವಿ, ಪ್ರತಾಪ್ ಸಿಂಹ, ಛಲವಾದಿ ನಾರಾಯಸ್ವಾಮಿ, ಸುಮಲತಾ ಅಂಬರೀಶ್ ಸೇರಿದಂತೆ ಹಲವು ನಾಯಕರು ಆಗಮಿಸಲಿದ್ದಾರೆ.
ಸಾಮೂಹಿಕ ಗಣೇಶ ವಿಸರ್ಜನಾ ಮೆರವಣಿಗೆಯಲ್ಲಿ ಭಾಗಿಯಾಗುವುದಕ್ಕೂ ಮೊದಲು ಕಲ್ಲೆಸೆತದಲ್ಲಿ ಗಾಯಗೊಂಡವರ ಮನೆಗೆ ಭೇಟಿ ನೀಡಿ ಸ್ಥಳೀಯರಿಗೆ ಧೈರ್ಯ ತುಂಬಲಿದ್ದಾರೆ. ನಂತರ ಲಾಠಿ ಚಾರ್ಜ್ ವೇಳೆ ಗಾಯಗೊಂಡವರ ಮನೆಗಳಿಗೂ ಬಿಜೆಪಿ ನಾಯಕರು ಭೇಟಿ ನೀಡಲಿದ್ದಾರೆ.
ಮಂಡ್ಯ: ಮದ್ದೂರಿನಲ್ಲಿ (Madduru) ನಡೆದ ಗಣೇಶ ವಿಸರ್ಜನೆ ಮೆರವಣಿಗೆ (Ganesh Procession) ವೇಳೆ ಕಲ್ಲು ತೂರಲು (Stone Pelting) ಮತಾಂಧ ಮನಸ್ಥಿತಿಯೇ ಕಾರಣ ಎನ್ನುವ ವಿಚಾರ ಬೆಳಕಿಗೆ ಬಂದಿದೆ.
ಗಲಭೆ ಕಿಂಗ್‌ಪಿನ್ ಚನ್ನಪಟ್ಟಣ ಮೂಲದ ಇರ್ಫಾನ್ ಆಗಿದ್ದು ಹಲವು ವರ್ಷಗಳಿಂದ ಮದ್ದೂರಿನಲ್ಲಿ ವಾಸವಾಗಿದ್ದಾನೆ. ಮಸೀದಿ ಮುಂದೆ ಗಣೇಶಮೂರ್ತಿ ಮೆರವಣಿಗೆ ಸಹಿಸಲಾಗದೇ ಇರ್ಫಾನ್‌ನನ್ನ ಸ್ನೇಹಿತ ಜಾಫರ್ ಕಲ್ಲು ತೂರುವಂತೆ ಪ್ರಚೋದಿಸಿದ್ದ ವಿಚಾರ ಮೂಲಗಳಿಂದ ತಿಳಿದುಬಂದಿದೆ.
ಈ ಕೃತ್ಯ ಎಸಗಲು ಮುಸ್ಲಿಂ ಯುವಕರ ಗುಂಪನ್ನು ಕಟ್ಟಿಕೊಂಡ ಇವರು ಗಣೇಶ ವಿಸರ್ಜನೆಯ ಮೆರವಣಿಗೆ ಮಸೀದಿ ದಾಟಿ 50 ಮೀಟರ್ ಮುಂದೆ ಹೋದ ಮೇಲೆ ಕಲ್ಲು ತೂರಿದ್ದಾರೆ. ಕಲ್ಲುಗಳು ಎಲ್ಲಿಂದ ಬಂದಿದೆ ಎನ್ನುವುದು ತಿಳಿಯಬಾರದು ಎಂಬ ಕಾರಣಕ್ಕೆ ಆರೋಪಿ ಸಲ್ಮಾನ್ ಬೀದಿ ದೀಪವನ್ನು ಆಫ್ ಮಾಡಿದ್ದ. ಎಸೆದ ಕಲ್ಲುಗಳು ಗಣೇಶ ಕೂರಿಸಿದ್ದ ಟ್ರಾಕ್ಟರ್‌ಗೆ ಮತ್ತು ಗಣೇಶನ ಮೂರ್ತಿಗೆ ಬಡಿಯುತ್ತಿದ್ದಂತೆ ಹಿಂದೂ ಯುವಕರು ಸಿಟ್ಟಾಗಿದ್ದಾರೆ. ಇದನ್ನೂಓದಿ: ಮದ್ದೂರು ಗಲಾಟೆ | ನನ್ನ ಪ್ರಕಾರ ಪೊಲೀಸರು ತಪ್ಪು ಮಾಡಿಲ್ಲ, ಬಿಜೆಪಿ-ಜೆಡಿಎಸ್ ಪ್ರಚೋದನೆ: ಸಿದ್ದರಾಮಯ್ಯ
ಪ್ರತಿಯಾಗಿ ಮಸೀದಿ ಬಳಿಯಿಂದ ಮುಸ್ಲಿಮರು ನಮ್ಮ ಮೇಲೆ ಕಲ್ಲು ತೂರಿದ್ದಾರೆಂದು ಭಾವಿಸಿ ಪ್ರತಿದಾಳಿ ನಡೆಸಿದ್ದಾರೆ. ಕೆಲಕಾಲ ಎರಡು ಕೋಮುಗಳ ಯುವಕರ ನಡುವೆ ಸಂಘರ್ಷ ಉಂಟಾಗಿದೆ.
ಕಲ್ಲು ತೂರಾಟ ಹಿಂದೆ ಸಂಘಟನೆಗಳ ಕೈವಾಡ ಇದ್ಯಾ? ಆರೋಪಿಗಳು ಸಂಘಟನೆಗಳಲ್ಲಿ ಗುರುತಿಸಿಕೊಂಡಿದ್ದಾರಾ? ಬಂಧಿತರಿಗೆ ಕ್ರಿಮಿನಲ್ ಹಿನ್ನೆಲೆ ಇದೆಯಾ ಎಂಬುದರ ಬಗ್ಗೆ ಪೊಲೀಸರು ಈಗ ತನಿಖೆ ನಡೆಸುತ್ತಿದ್ದಾರೆ. ಈ ಸಂಬಂಧ ರಾಮ್ ರಹೀಮ್ ನಗರದ ಮಸೀದಿ ಅಕ್ಕಪಕ್ಕ ಸಿಸಿಟಿವಿ ದೃಶ್ಯಗಳ ಪರಿಶೀಲನೆಗೆ ಮುಂದಾಗಿದ್ದಾರೆ. ಸಾಕ್ಷ್ಯಗಳು ಸಿಕ್ಕಿದರೆ ನ್ಯಾಯಾಂಗ ಬಂಧನದಲ್ಲಿರುವ ಆರೋಪಿಗಳನ್ನು ತಮ್ಮ ಕಸ್ಟಡಿಗೆ ಪಡೆದು ಪೊಲೀಸರು ವಿಚಾರಣೆ ನಡೆಸಲಿದ್ದಾರೆ.
– ಮ್ಯಾಜಿಸ್ಟ್ರೇಟ್ ತನಿಖೆ ಮಾಡಿ, ತಪ್ಪಿತಸ್ಥರಿಗೆ ಶಿಕ್ಷೆ ನೀಡಲಿ
ನವದೆಹಲಿ: ಕಾಂಗ್ರೆಸ್ ಸರ್ಕಾರದ ಓಲೈಕೆ ರಾಜಕಾರಣದಿಂದ ಮಂಡ್ಯದ ಮದ್ದೂರಿನಲ್ಲಿ ಗಣೇಶ ಮೆರವಣಿಗೆ ವೇಳೆ ಕಲ್ಲು ತೂರಾಟ ನಡೆದಿದೆ ಎಂದು ಮಾಜಿ ಸಿಎಂ, ಸಂಸದ ಬಸವರಾಜ ಬೊಮ್ಮಾಯಿ (Basavaraj Bommai) ಕಿಡಿಕಾರಿದ್ದಾರೆ.
ನವದೆಹಲಿಯಲ್ಲಿ (New Delhi) ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಮದ್ದೂರಿನಲ್ಲಿ (Maddur) ನಡೆದ ಘಟನೆ ಪೂರ್ವನಿಯೋಜಿತ ಕೃತ್ಯವಾಗಿದೆ. ಮೊದಲೇ ಕಲ್ಲುಗಳನ್ನು ಶೇಖರಣೆ ಮಾಡಿ ಮೆರವಣಿಗೆ ವೇಳೆ ಕಲ್ಲೆಸಿದ್ದಾರೆ. ಅಲ್ಲಿ ಪೊಲೀಸ್ ಇಲಾಖೆ ಹಾಗೂ ಸರ್ಕಾರದ ವೈಫಲ್ಯ ಎದ್ದು ಕಾಣುತ್ತಿದೆ. ಮ್ಯಾಜಿಸ್ಟ್ರೇಟ್ ತನಿಖೆ ಮಾಡಿ, ತಪ್ಪಿತಸ್ಥರಿಗೆ ಶಿಕ್ಷೆ ನೀಡಲಿ ಎಂದು ಆಗ್ರಹಿಸಿದ್ದಾರೆ. ಇದನ್ನೂ ಓದಿ: ಡಿಜೆ ಹಳ್ಳಿ, ಕೆಜೆಹಳ್ಳಿ ಗಲಭೆಕೋರರ ಮೇಲಿನ ಕೇಸ್ ಹಿಂಪಡೆದಿದ್ದಕ್ಕೆ ಬಾಲ ಬಿಚ್ಚಿದ್ದಾರೆ: ಪ್ರತಾಪ್ ಸಿಂಹ
ಪೊಲೀಸ್ ಇಲಾಖೆಯವರು ಸೂಕ್ತ ಬಂದೋಬಸ್ತ್ ಮಾಡಿಕೊಳ್ಳುವಲ್ಲಿ ಸಂಪೂರ್ಣ ವಿಫಲವಾಗಿದೆ. ಘಟನೆಯ ನಂತರ ಪೊಲೀಸರು ಸ್ಥಳಕ್ಕೆ ತೆರಳಿದ್ದಾರೆ. ಘಟನೆಯಲ್ಲಿ ಅಮಾಯಕರನ್ನು ಬಂಧಿಸಿದ್ದಾರೆ. ಇಂದು ಹಿಂದೂ ಸಂಘಟನೆಗಳು ಪ್ರತಿಭಟನೆ ಮಾಡಿದಾಗ ಅವರ ಮೇಲೆ ಪೊಲೀಸರು ವಿನಾಕಾರಣ ಲಾಠಿಚಾರ್ಜ್ ಮಾಡಿದ್ದಾರೆ. ಪೊಲೀಸರು ದಮನಕಾರಿ ನೀತಿ ಅನುಸರಿಸಿದ್ದಾರೆ ಎಂದು ಆರೋಪಿಸಿದ್ದಾರೆ. ಇದನ್ನೂ ಓದಿ: ಮದ್ದೂರು ಘಟನೆ ನೋಡಿದ್ರೆ ರಾಜ್ಯದಲ್ಲಿ `ಮೊಘಲ್ ಪ್ರೇರಣೆಯ’ ಆಡಳಿತದಂತೆ ಭಾಸವಾಗುತ್ತಿದೆ – ಬಿವೈವಿ ಕಿಡಿ
ಸಂವಿಧಾನದ ಬಗ್ಗೆ ಬಹಳ ಮಾತನಾಡುವ ಸಿಎಂ ಸಿದ್ದರಾಮಯ್ಯ (Siddaramaiah) ಅವರೇ, ಸಂವಿಧಾನದಲ್ಲಿ ಎಲ್ಲ ಧರ್ಮೀಯರಿಗೆ ಅವರವರ ಧರ್ಮದ ಆಚರಣೆಗೆ ಅವಕಾಶ ಇದೆ. ಈದ್‌ಮಿಲಾದ್ ಹಬ್ಬವು ರಾಜ್ಯಾದ್ಯಂತ ಶಾಂತ ರೀತಿಯಿಂದ ನಡೆಯುತ್ತದೆ. ಆದರೆ, ಗಣೇಶನ ಹಬ್ಬದಲ್ಲಿ ಶಾಂತಿ ಕದಡಿ ಹಿಂಸಾತ್ಮಕವಾಗಿ ಮಾಡಬೇಕು ಎನ್ನುವ ಹುನ್ನಾರದಿಂದ ಈ ರೀತಿ ಮಾಡಿದ್ದಾರೆ ಆಕ್ರೋಶ ಹೊರಹಾಕಿದ್ದಾರೆ.
ಗಣೇಶನ ಹಬ್ಬದಲ್ಲಿ ಪೊಲೀಸರು ಪೂಜೆಗೆ, ಮೆರವಣಿಗೆಗೆ, ಸೌಂಡ್ ಸಿಸ್ಟಮ್‌ಗೆ ಎಲ್ಲದಕ್ಕೂ ನಿರ್ಬಂಧ ಹೇರುತ್ತಾರೆ. ಇದು ಸಂವಿಧಾನ ವಿರೋಧಿ ಅಲ್ಲವೇ? ಪೊಲೀಸರು ಎಲ್ಲ ಸಮುದಾಯಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡು ಆಚರಣೆಗೆ ಅವಕಾಶ ನೀಡಬಹುದು. ಶಿವಮೊಗ್ಗ, ಚಿತ್ರದುರ್ಗ, ಉತ್ತರ ಕರ್ನಾಟಕ ಎಲ್ಲ ಕಡೆ ಶಾಂತ ರೀತಿಯಾಗಿ ಗಣೇಶೋತ್ಸವ ಮೆರವಣಿಗೆ ನಡೆದಿದೆ. ಮಂಡ್ಯದಲ್ಲಿ ಯಾಕೆ ಮಾಡಲು ಆಗಲಿಲ್ಲ. ಮಂಡ್ಯದಲ್ಲಿ ಪೊಲೀಸರು ಮತ್ತು ಸರ್ಕಾರದ ವೈಫಲ್ಯವಾಗಿದೆ ಎಂದು ವಾಗ್ದಾಳಿ ನಡೆಸಿದ್ದಾರೆ. ಇದನ್ನೂ ಓದಿ: 21 ಜನರನ್ನು ಬಂಧಿಸಲಾಗಿದೆ, ಮಸೀದಿ ಕಡೆಯಿಂದ ಕಲ್ಲು ಎಸೆದ ಬಗ್ಗೆ ಮಾಹಿತಿ ಇದೆ: ಚಲುವರಾಯಸ್ವಾಮಿ
ಘಟನೆ ಬಗ್ಗೆ ಗೃಹ ಸಚಿವರ ಬೇಜವಾಬ್ದಾರಿ ಹೇಳಿಕೆ
ಗೃಹ ಸಚಿವ ಡಾ. ಜಿ. ಪರಮೇಶ್ವರ್ ಅವರು ಘಟನೆಯನ್ನು ಬಹಳ ಹಗುರವಾಗಿ ತೆಗೆದುಕೊಂಡು, ಬೇಜವಾಬ್ದಾರಿಯಿಂದ ಮಾತನಾಡಿದ್ದಾರೆ. ಕಾನೂನು ಸುವ್ಯವಸ್ಥೆ ಕಲ್ಪಿಸುವುದು ಸರ್ಕಾರದ ಜವಾಬ್ದಾರಿ, ಅನವಶ್ಯಕವಾಗಿ ಬಿಜೆಪಿ ಮೇಲೆ ಆರೋಪ ಮಾಡುವುದನ್ನು ಬಿಟ್ಟು ನಿಷ್ಪಕ್ಷಪಾತವಾಗಿ ತಮ್ಮ ಕರ್ತವ್ಯ ಮಾಡುವುದನ್ನು ಕಲಿಯಲಿ, ಓಲೈಕೆ ರಾಜಕಾರಣ ಮಾಡುವುದರ ಪರಿಣಾಮದಿಂದಾಗಿ ಈ ಘಟನೆ ನಡೆದಿದೆ ಎಂದಿದ್ದಾರೆ.
ಸಮಾಜ ಘಾತುಕ ಶಕ್ತಿಗಳು ಏನು ಮಾಡಿದರೂ ನಡೆಯುತ್ತದೆ ಎನ್ನುವ ಭರವಸೆಯನ್ನು ಈ ಸರ್ಕಾರ ನೀಡಿದೆ. ಹೀಗಾಗಿ, ಕಾನೂನು ಮತ್ತು ಪೊಲೀಸರ ಭಯ ಇಲ್ಲದೆ ಅವರು ನಿರ್ಭೀತಿಯಿಂದ ಹಿಂಸಾತ್ಮಕ ಕೃತ್ಯಗಳನ್ನು ಮಾಡುತ್ತಿದ್ದಾರೆ. ಇದು ಅತ್ಯಂತ ಖಂಡನೀಯ. ಮಂಡ್ಯದಲ್ಲಿ ಶಾಂತಿ ನೆಲೆಸಬೇಕು. ಎಲ್ಲ ಧರ್ಮೀಯರು ತಮ್ಮ ಹಬ್ಬಗಳ ಆಚರಣೆಗೆ ಅವಕಾಶ ದೊರೆಯಬೇಕು ಎಂದು ಹೇಳಿದ್ದಾರೆ. ಇದನ್ನೂ ಓದಿ: ನಾಳೆ ಮದ್ದೂರು ಸ್ವಯಂ ಪ್ರೇರಿತ ಬಂದ್‌ಗೆ ಕರೆ – ಹಿಂದೂ ಮುಖಂಡರ ತೀರ್ಮಾನ
ಜಿಲ್ಲಾ ಉಸ್ತುವಾರಿ ಸಚಿವ ಚಲುವರಾಯಸ್ವಾಮಿ ಅವರಿಗೆ ಪ್ರತಿಪಕ್ಷಗಳ ಮೇಲೆ ಆರೋಪ ಮಾಡುವುದು ಸುಲಭ. ಅನ್ಯಾಯ ಆದವರಿಗೆ ನ್ಯಾಯ ಕೊಡಿಸಲು ಹೋರಾಡುವುದು ಪ್ರತಿಪಕ್ಷಗಳ ಕರ್ತವ್ಯ, ನಾವು ನಮ್ಮ ಕರ್ತವ್ಯ ಮಾಡುತ್ತೇವೆ. ಕಾನೂನು ಸುವ್ಯವಸ್ಥೆ ಕಾಪಾಡುವುದು ಸರ್ಕಾರದ ಕೆಲಸ. ಅವರು ತಮ್ಮ ವೈಫಲ್ಯ ಮುಚ್ಚಿಕೊಳ್ಳಲು ರಾಜಕೀಯ ಪ್ರೇರಿತ ಹೇಳಿಕೆ ನೀಡುತ್ತಿದ್ದಾರೆ ಕಿಡಿಕಾರಿದ್ದಾರೆ.
ಈಗ ಚುನಾವಣೆ ನಡೆದ್ರೆ ಕಾಂಗ್ರೆಸ್ ಮನೆಗೆ ಹೋಗುತ್ತೆ
ಸಿಎಂ ಅವರು ಪಿಎಫ್‌ಐ ಹಾಗೂ ಎಸ್‌ಡಿಪಿ ಮೇಲಿನ ಪ್ರಕರಣಗಳನ್ನು ವಾಪಸ್ ಪಡೆದರ ಪರಿಣಾಮವಾಗಿ ಮೈಸೂರಿನಲ್ಲಿ ಪೊಲೀಸ್ ಠಾಣೆ ಮೇಲೆ ದಾಳಿಯಾಯಿತು. ಡಿಜೆ ಹಳ್ಳಿ, ಕೆಜಿ ಹಳ್ಳಿ ಗಲಭೆಕೋರರ ಕೇಸ್ ವಾಪಸ್ ಪಡೆಯಲು ಪ್ರಯತ್ನಿಸಿದರು. ಹುಬ್ಬಳ್ಳಿಯಲ್ಲಿ ಪೊಲೀಸ್ ಠಾಣೆ ಮೇಲೆ ದಾಳಿ ಮಾಡಿದವರ ಕೇಸ್ ವಾಪಸ್ ಪಡೆದರು. ಇಂತಹ ಸಮಾಜ ಘಾತುಕ ಹಾಗೂ ಶಾಂತಿ ಕದಡುವ ಶಕ್ತಿಗಳ ವಿರುದ್ಧದ ಪ್ರಕರಣ ವಾಪಸ್ ಪಡೆಯುವುದು ಕೂಡ ಒಂದು ರೀತಿ ಪ್ರಚೋದನೆ ಆಗಿದೆ. ಈ ಘಟನೆಗೆ ರಾಜ್ಯ ಕಾಂಗ್ರೆಸ್ ಸರ್ಕಾರವೇ ಕಾರಣ. ರಾಜ್ಯದಲ್ಲಿ ಈಗಲೇ ಚುನಾವಣೆ ನಡೆದರೆ ಕಾಂಗ್ರೆಸ್ ಮನೆಗೆ ಹೋಗುತ್ತದೆ. ಕಾಂಗ್ರೆಸ್‌ನವರಿಗೆ ಜನರನ್ನು ಎದುರಿಸುವ ಶಕ್ತಿಯಿಲ್ಲ ಎಂದಿದ್ದಾರೆ.
ಬೆಳಗಾವಿ: ಬರೋಬ್ಬರಿ 38 ಗಂಟೆಗಳ ಕಾಲ ಗಣೇಶ ವಿಸರ್ಜನೆ (Ganesh Procession) ನಡೆಯವ ಮೂಲಕ ಬೆಳಗಾವಿ (Belagavi) ಹೊಸ ದಾಖಲೆ ಬರೆದಿದೆ. ಮಹಾರಾಷ್ಟ್ರದ (Maharashtra) ಮುಂಬೈ ಮಹಾನಗರಕ್ಕೂ ಮೀರಿ ಬೆಳಗಾವಿಯಲ್ಲಿ ಈ ಬಾರಿ ಗಣೇಶ ವಿಸರ್ಜನ ಮಹೋತ್ಸವ ಜರುಗಿದ್ದು ಹೊಸ ಇತಿಹಾಸ ಸೃಷ್ಟಿಯಾಗಿದೆ.
ಗಣೇಶ ಮೆರವಣಿಗೆ ಶಾಂತ ರೀತಿಯಲ್ಲಿ ನಡೆಸಿಕೊಟ್ಟ ಮಹಾನಗರ ಪಾಲಿಕೆ ಸದಸ್ಯರು ಹಾಗೂ ಪೊಲೀಸರಿಗೆ ಜನ ಮೆಚ್ಚುಗೆ ವ್ಯಕ್ತಪಡಿಸಿದರು. ಬೆಳಗಾವಿಯ ಕಪಿಲೇಶ್ವರ ಹೊಂಡದಲ್ಲಿ ವಿಸರ್ಜನೆಯಾಗಿರುವ ಗಣೇಶ ಮೂರ್ತಿಗಳ ವಿಲೇವಾರಿ ಕಾರ್ಯವೂ ಸಹ ಪ್ರಾರಂಭವಾಗಲಿದೆ.
ಮಂಡ್ಯ: ಮದ್ದೂರು (Maddur) ಘಟನೆ ನೋಡಿದ್ರೆ ರಾಜ್ಯದಲ್ಲಿ `ಮೊಘಲ್ ಪ್ರೇರಣೆಯ’ ಆಡಳಿತ ನಡೆಯುತ್ತಿರುವಂತೆ ಭಾಸವಾಗುತ್ತಿದೆ ಎಂದು ಬಿಜೆಪಿ ರಾಜಾಧ್ಯಕ್ಷ ಬಿವೈ ಬಿಜಯೇಂದ್ರ (BY Vijayendra) ಸರ್ಕಾರ ವಿರುದ್ಧ ಕಿಡಿಕಾಡಿದ್ದಾರೆ.
ಮದ್ದೂರು ಗಣೇಶ ಮೆರವೆಣಿಗೆ ವೇಳೆ ಕಲ್ಲು ತೂರಾಟ ಪ್ರಕರಣಕ್ಕೆ ಸಂಬಂಧಿಸಿದಂತೆ ಎಕ್ಸ್ ಖಾತೆಯಲ್ಲಿ ಪೋಸ್ಟ್ ಹಂಚಿಕೊಂಡಿದ್ದಾರೆ. ಕಾಂಗ್ರೆಸ್ ಸರ್ಕಾರದಲ್ಲಿ ಹಿಂದೂ ಹಬ್ಬಗಳು, ಗಣಪತಿ ಉತ್ಸವ ಹಾಗೂ ಮೆರವಣಿಗೆಗಳನ್ನು ನೆಮ್ಮದಿಯಾಗಿ ಆಚರಿಸಲಾಗದ ಪರಿಸ್ಥಿತಿ ಉಂಟಾಗಿದೆ. ಗಣೇಶ ವಿಸರ್ಜನೆಯ ಮೆರವಣಿಗೆಯ ಸಂದರ್ಭದಲ್ಲಂತೂ ಮತಾಂಧ ಪುಂಡರು ಗುಂಪು ಕಟ್ಟಿಕೊಂಡು ಕಲ್ಲು ತೂರುತ್ತಿದ್ದಾರೆ. ಈ ಪರಿಸ್ಥಿತಿಯನ್ನು ನೋಡುತ್ತಿದ್ದರೆ ರಾಜ್ಯದಲ್ಲಿ `ಮೊಘಲ್ ಪ್ರೇರಣೆಯ’ ಆಡಳಿತ ನಡೆಯುತ್ತಿರುವಂತೆ ಭಾಸವಾಗುತ್ತಿದೆ. ಸರ್ಕಾರದ ಈ ಪಕ್ಷಪಾತ ಹಾಗೂ ಮೃದು ಧೋರಣೆ ರಾಜ್ಯದಲ್ಲಿ ಅರಾಜಕತೆ ಉಂಟಾಗಲು ಕಾರಣವಾಗುತ್ತಿದೆ ಎಂದು ಆಕ್ರೋಶ ಹೊರಹಾಕಿದ್ದಾರೆ.ಇದನ್ನೂ ಓದಿ: 21 ಜನರನ್ನು ಬಂಧಿಸಲಾಗಿದೆ, ಮಸೀದಿ ಕಡೆಯಿಂದ ಕಲ್ಲು ಎಸೆದ ಬಗ್ಗೆ ಮಾಹಿತಿ ಇದೆ: ಚಲುವರಾಯಸ್ವಾಮಿ
ಭಾನುವಾರ (ಸೆ.7) ರಾತ್ರಿ ಮಂಡ್ಯ ಜಿಲ್ಲೆಯ ಮದ್ದೂರಿನಲ್ಲಿ ಗಣೇಶ ವಿಸರ್ಜನೆ ವೇಳೆ ಕಿಡಿಗೇಡಿಗಳು ಮೆರವಣಿಗೆ ವೇಳೆ ನಿರಂತರ ಕಲ್ಲು ತೂರಿ ಪ್ರಕ್ಷುಬ್ಧ ವಾತಾವರಣ ನಿರ್ಮಿಸಿದ್ದಾರೆ. ಕಲ್ಲು ತೂರಾಟದಲ್ಲಿ ಮಹಿಳೆಯರು ಹಾಗೂ ಪೊಲೀಸರು ತೀವ್ರವಾಗಿ ಗಾಯಗೊಂಡಿದ್ದು, ಅತ್ಯಂತ ಆತಂಕಕಾರಿ. ಇದಕ್ಕೂ ಮುನ್ನ ಶಿವಮೊಗ್ಗ ಜಿಲ್ಲೆಯ ಸಾಗರದಲ್ಲಿಯೂ ಗಣಪತಿ ಮೂರ್ತಿಯನ್ನು ಮಲಿನಗೊಳಿಸಿರುವ ಸುದ್ದಿಯೂ ವರದಿಯಾಗಿದೆ. ಅದಲ್ಲದೇ ಮಂಡ್ಯ, ಧಾರವಾಡ, ಬಾಗಲಕೋಟೆ, ಹುಬ್ಬಳ್ಳಿ ಸೇರಿದಂತೆ ರಾಜ್ಯದ ಅನೇಕ ಭಾಗಗಳಿಂದ ವರದಿಯಾಗುತ್ತಿದೆ. ನಾವು ಇದನ್ನು ಅತ್ಯುಗ್ರವಾಗಿ ಖಂಡಿಸುತ್ತೇವೆ ಎಂದು ಕಿಡಿಕಾರಿದ್ದಾರೆ.
ಅಲ್ಪಸಂಖ್ಯಾತರ ಹೆಸರಿನ ಪುಂಡರ ಈ ಪರಿಯ ಅಟ್ಟಹಾಸ ಹಿಂದೂ ಧರ್ಮಿಯರಲ್ಲಿ ಅದರಲ್ಲೂ ಮಹಿಳೆಯರಲ್ಲಿ ಭಯಗ್ರಸ್ತ ವಾತಾವರಣವನ್ನುಂಟು ಮಾಡಿದೆ. ತಪ್ಪಿತಸ್ಥ ಕಿಡಿಗೇಡಿಗಳ ವಿರುದ್ಧ ಕ್ರಮ ತೆಗೆದುಕೊಳ್ಳಲು ಕಾಂಗ್ರೆಸ್ ಸರ್ಕಾರ ಪೊಲೀಸರ ಕೈ ಕಟ್ಟಿ ಹಾಕಿದೆ. ಪೊಲೀಸ್ ಠಾಣೆಗಳು ಹಾಗೂ ಪೊಲೀಸರ ಮೇಲೆ ದಾಳಿ ನಡೆದರೂ ಕಠಿಣ ಕ್ರಮಕ್ಕೆ ಪೊಲೀಸರು ಮುಂದಾಗುತ್ತಿಲ್ಲ. ಮದ್ದೂರಿನ ಹಾಗೂ ಸಾಗರದ ಘಟನೆಯ ಕುರಿತು ಸರ್ಕಾರ ಕಠಿಣ ನಿಲುವು ತೆಗೆದುಕೊಳ್ಳದಿದ್ದರೆ, ಮತಾಂಧ ದುಷ್ಕರ್ಮಿಗಳ ಮೇಲೆ ಕಠಿಣ ಕ್ರಮ ಜರುಗಿಸದಿದ್ದರೆ ರಾಜ್ಯದ ಜನರೇ ಕಾಂಗ್ರೆಸ್ ಸರ್ಕಾರಕ್ಕೆ ತಕ್ಕ ಪಾಠ ಕಲಿಸಲಿದ್ದಾರೆ ಎಂದು ಎಚ್ಚರಿಕೆ ನೀಡಿದ್ದಾರೆ.ಇದನ್ನೂ ಓದಿ: ನಾಳೆ ಮದ್ದೂರು ಸ್ವಯಂ ಪ್ರೇರಿತ ಬಂದ್‌ಗೆ ಕರೆ – ಹಿಂದೂ ಮುಖಂಡರ ತೀರ್ಮಾನ
ಮಡಿಕೇರಿ: ವಿರಾಜಪೇಟೆ (Virajpete) ಗಣೇಶ ವಿಸರ್ಜನೋತ್ಸವ (Ganesh Immersion) ಸಂದರ್ಭದಲ್ಲಿ ಧ್ವನಿವರ್ಧಕಗಳಿಗೆ ಸಂಬಂಧಿಸಿದಂತೆ ನಿಯಮ ಉಲ್ಲಂಘಿಸಿದ ಆರೋಪದಡಿ ಒಟ್ಟು 64 ಮಂದಿ ವಿರುದ್ಧ ಪೊಲೀಸರು ಸ್ವಯಂ ಪ್ರೇರಿತ ಪ್ರಕರಣ ದಾಖಲಿಸಿಕೊಂಡು ಕ್ರಮಕೈಗೊಂಡಿದ್ದಾರೆ.
ಶ್ರೀಮಂಗಲ ಪೊಲೀಸ್ ಉಪನಿರೀಕ್ಷಕ ರವೀಂದ್ರ ಒಂದು ಮಂಟಪ ಸಮಿತಿ ವಿರುದ್ಧ ನೀಡಿದ ದೂರಿನ ಅನ್ವಯ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಬಳಿಕ ಇದನ್ನು ಒಟ್ಟು 16 ಸಮಿತಿಗಳ ಮಂಟಪಗಳಲ್ಲಿದ್ದ ಧ್ವನಿವರ್ಧಕಕ್ಕೆ ಸಂಬಂಧಿಸಿದ 64 ಮಂದಿಯ ವಿರುದ್ಧವೂ ಅನ್ವಯಿಸಿ ಕಲಂ 125, 285, 292, 36, 109 ಸೇರಿದಂತೆ ಕೆಪಿ ಕಾಯಿದೆ, 188 ಐಎಂವಿ ಕಾಯಿದೆಯಡಿಯೂ ಪ್ರಕರಣವನ್ನು ದಾಖಲಿಸಿಕೊಂಡಿದ್ದಾರೆ.ಇದನ್ನೂ ಓದಿ: ಗಣೇಶ ವಿಸರ್ಜನೆ ವೇಳೆ ಕಲ್ಲು – ನಾಳೆ ಬೆಳಗ್ಗೆಯವರೆಗೆ ಮದ್ದೂರಿನಲ್ಲಿ ನಿಷೇಧಾಜ್ಞೆ ಜಾರಿ
ಶಿವಕೇರಿಯ ಮಂಟಪದ ಮೆರವಣಿಗೆ ವೇಳೆ ದೊಡ್ಡ ಪ್ರಮಾಣದ ಧ್ವನಿವರ್ಧಕಗಳನ್ನು ವಾಹನದಲ್ಲಿಟ್ಟುಕೊಂಡು ತೆರಳುತ್ತಿದ್ದರು. ರಾತ್ರಿ 10ಗಂಟೆ ನಂತರ ಧ್ವನಿರ್ವಕ ಬಳಸದಂತೆ ಆಪರೇಟರ್‌ಗಳಿಗೆ ಸೂಚಿಸಿದರೂ ಇದನ್ನು ಪಾಲಿಸದೆ ಧ್ವನಿವರ್ದಕ ಬಳಕೆ ಮಾಡಲಾಗಿದೆ. ಕಾನೂನು ಉಲ್ಲಂಘನೆ ಮಾಡಿದ ಹಿನ್ನೆಲೆ ಡಿಜೆ ಆಪರೇಟರ್, ಮಾಲೀಕ ಮದನ್ ಕೃಷ್ಣ, ಟೆಕ್ನೀಷಿಯನ್‌ಗಳಾದ ಪುನೀತ್, ಮೋಕ್ಷಿತ್ ವಿರುದ್ಧ ಕ್ರಮಕೈಗೊಳ್ಳುವಂತೆ ವಿರಾಜಪೇಟೆ ನಗರ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಇದರನ್ವಯ ಪ್ರಕರಣ ದಾಖಲಾಗಿ, ಒಟ್ಟು 16 ಸಮಿತಿಗಳ ಮಂಟಪದಲ್ಲಿದ್ದ ಧ್ವನಿವರ್ಧಕ ಸಂಬಂಧಿತ ವ್ಯಕ್ತಿಗಳನ್ನು ಆರೋಪಿಗಳನ್ನಾಗಿಸಿ ಪ್ರಕರಣ ದಾಖಲಿಸಲಾಗಿದೆ.
ಶಿವಕೇರಿಯ ವಿನಾಯಕ ಯುವ ಸಮಿತಿ, ಪಂಜರಪೇಟೆಯ ವಿನಾಯಕ ಸೇವಾ ಸಮಿತಿ, ಅರಸುನಗರದ ವಿಘ್ನೇಶ್ವರ ಸೇವಾ ಸಮಿತಿ, ಮೀನುಪೇಟೆಯ ವಿಶ್ವ ವಿನಾಯಕ ಉತ್ಸವ ಸಮಿತಿ, ದಖನ್ನಿ ಮೊಹಲ್ಲದ ವಿಜಯ ವಿನಾಯಕ ಉತ್ಸವ ಸಮಿತಿ, ಪಟ್ಟಣ ಪಂಚಾಯಿತಿ ವಿಘ್ನೇಶ್ವರ ಉತ್ಸವ ಸಮಿತಿ, ಕೆ. ಬೋಯಿಕೇರಿಯ ಕೆಂಕೇರಮ್ಮ ವಿಘ್ನೇಶ್ವರ ಸಮಿತಿ, ಪಂಜರಪೇಟೆಯ ಮಹಾಗಣಪತಿ ಸೇವಾ ಸಮಿತಿ, ಸುಂಕದಕಟ್ಟೆಯ ವರಸಿದ್ಧಿ ವಿನಾಯಕ ಉತ್ಸವ ಸಮಿತಿ, ನೆಹರುನಗರದ ನೇತಾಜಿ ಉತ್ಸವ ಸಮಿತಿ, ಮಲೆತಿರಿಕೆ ಬೆಟ್ಟದ ಕಣ್ಮಣಿ ವಿನಾಯಕ ಉತ್ಸವ ಸಮಿತಿ, ತೆಲುಗರ ಬೀದಿಯ ವಿನಾಯಕ ಭಕ್ತ ಮಂಡಳಿ, ಅಯ್ಯಪ್ಪ ಬೆಟ್ಟದ ವರದ ವಿನಾಯಕ ಸೇವಾ ಸಮಿತಿ, ಸುಣ್ಣದ ಬೀದಿಯ ದೊಡ್ಡಮ್ಮ, ಚಿಕ್ಕಮ್ಮ ತಾಯಿ ವಿನಾಯಕ ಸೇವಾ ಸಮಿತಿ, ಗೌರಿಕೆರೆ ಗಣೇಶೋತ್ಸವ ಸಮಿತಿಯ ಮಂಟಪಗಳಲ್ಲಿದ್ದ ಡಿಜೆ ಮಾಲೀಕ, ಆಪರೇಟರ್, ಟೆಕ್ನೀಷಿಯನ್ ಹಾಗೂ ವಾಹನ ಚಾಲಕರ ವಿರುದ್ಧ ಇದೀಗ ಪ್ರಕರಣ ದಾಖಲಾಗಿದೆ.
– ಪ್ರೀಪ್ಲಾನ್ ಮಾಡಿ ಮಸೀದಿಯಿಂದ ಕಲ್ಲೆಸೆದಿದ್ದಾರೆ – ಪೊಲೀಸರಿಗೆ ಹೆದರದವರು ನಮ್ಮನ್ನು ಬಿಡ್ತಾರಾ?
ಮಂಡ್ಯ: ಈ ಪ್ರದೇಶವನ್ನು ಮುಸ್ಲಿಮರು ಮಿನಿ ಪಾಕಿಸ್ತಾನ (Mini Pakistan) ಮಾಡ್ಬೇಕು ಅಂದ್ಕೊಂಡಿದ್ದಾರೆ ಎಂದು ಸ್ಥಳೀಯ ಹಿಂದೂ ಮಹಿಳೆಯರು ಆಕ್ರೋಶ ಹೊರಹಾಕಿದ್ದಾರೆ.
ಮಂಡ್ಯದ (Mandya) ಮದ್ದೂರಿನಲ್ಲಿ (Maddur) ಗಣೇಶ ವಿಸರ್ಜನೆ ವೇಳೆ ಅನ್ಯಕೋಮಿನ ಯುವಕರು ಕಲ್ಲೆಸೆದ ಬಗ್ಗೆ ಮಹಿಳೆಯೊಬ್ಬರು ಮಾಧ್ಯಮಗಳೊಂದಿಗೆ ಮಾತನಾಡಿದರು. ಮುಸ್ಲಿಂ ಯುವಕರೇ ಕಲ್ಲೆಸೆಯಬೇಕು ಅಂತ ಫ್ರೀ ಪ್ಲಾನ್ ಮಾಡ್ಕೊಂಡಿದ್ರು. ಮಸೀದಿಗೆ ಯಾರೋ ಕಲ್ಲು ಎಸೆದಿದ್ದಾರೆ. ಅದಕ್ಕೆ ನಾವು ಕಲ್ಲೆಸೆದಿದ್ದೇವೆ ಅಂತ ಅವ್ರು ಹೇಳ್ತಾರೆ. ಆದ್ರೆ ಎಲ್ಲಾ ರೀತಿಯ ಸಾಕ್ಷಿಗಳು ಸಹ ಇದೆ ಎಲ್ಲಿಂದ ಕಲ್ಲು ಎಸೆದಿದ್ದಾರೆ ಅಂತಾ ಪೊಲೀಸರು ಹೇಳಲಿ ಎಂದಿದ್ದಾರೆ. ಇದನ್ನೂ ಓದಿ: ಗಣೇಶ ವಿಸರ್ಜನೆ ವೇಳೆ ಕಲ್ಲು – ನಾಳೆ ಬೆಳಗ್ಗೆಯವರೆಗೆ ಮದ್ದೂರಿನಲ್ಲಿ ನಿಷೇಧಾಜ್ಞೆ ಜಾರಿ
ನಾವು ಹಿಂದೂಗಳು ಒಗ್ಗಟ್ಟಾಗಿ ಇದಿದ್ದರೆ ನಮಗೆ ಈ ಪರಿಸ್ಥಿತಿ ಎದುರಾಗುತ್ತಿರಲಿಲ್ಲ. ಇಲ್ಲಿ ಮಕ್ಕಳನ್ನು ಓದ್ಸೋಕು ಆಗ್ತಿಲ್ಲ. ಎಲ್ಲ ಮಕ್ಕಳನ್ನು ಬೇರೆ ಕಡೆ ಸ್ಕೂಲ್, ಕಾಲೇಜಿಗೆ ಸೇರಿಸಿದ್ದೇವೆ. ಅಂತಹ ಭಯದ ವಾತಾವರಣ ಸೃಷ್ಟಿಸಿದ್ದಾರೆ ಎಂದು ಕಿಡಿಕಾರಿದ್ದಾರೆ.
ರಾತ್ರಿ ಆಯಿತು ಅಂದ್ರೆ ಮುಸ್ಲಿಂ ಹುಡುಗರು ಲಾಂಗ್, ಮಚ್ಚು ಹಿಡ್ಕೊಂಡು ಬರ್ತಾರೆ. ಒಂದು ಹೆಣ್ಮಕ್ಕಳು ಓಡಾಡೋಕೆ ಆಗಲ್ಲ. ಚಾಕು ಹಿಡ್ಕೊಂಡು ಓಡಿ ಬರೋದು, ಬಾಟಲ್ ಎಸೆಯೋದು ಈ ರೀತಿಯಾಗಿ ವರ್ತಿಸ್ತಾರೆ. ಪೊಲೀಸರಿಗೆ ಹೆದರದೇ ಇರೋರು ಇನ್ನು ನಮ್ಮನ್ನು ಬಿಡ್ತಾರಾ ಎಂದು ಪ್ರಶ್ನಿಸಿದ್ದಾರೆ.
ಗಂಡಸರು ಓಡಾಡಿದ್ರೇನೆ ಬಾರೋ ಹೊಡಿ ಬಾ ಅಂತಾರೆ. ಇನ್ನು ನಮ್ಮಂತ ಹೆಣ್ಮಕ್ಕಳ ಜೊತೆ ಅಸಭ್ಯವಾಗಿ ನಡೆದುಕೊಳ್ತಾರೆ. ನೀವು ಅಲ್ಲಿ ಕಿಡಿ ಹಚ್ಚಿ ಬಂದಿದ್ದೀರಾ ಅಲ್ವಾ. ಅದು ಇಲ್ಲಿ ಉರಿತಿದೆ ಅಂತಾ ನಿನ್ನೆ ಪೊಲೀಸರು ಹೇಳಿದ್ರು. ರೌಂಡ್ಸ್ ಬರೋ ಪೊಲೀಸರಿಗೇನೆ ಇವರೆಲ್ಲ ಹೆದರಲ್ಲ. ಇನ್ನು ನಾವೆಲ್ಲ ಏನು ಮಾಡ್ಬೇಕು ಎಂದಿದ್ದಾರೆ. ಇದನ್ನೂ ಓದಿ: ಗಣೇಶ ವಿಸರ್ಜನೆ ವೇಳೆ ಅನ್ಯಕೋಮಿನ ಯುವಕರಿಂದ ಕಲ್ಲು ತೂರಾಟ – ಮದ್ದೂರು ಉದ್ವಿಗ್ನ
ನಾವು ಹಿಂದುಗಳಲ್ಲ, ನಾವು ಮುಸ್ಲಿಂ ಆಗಿ ಮತಾಂತರ ಆಗ್ತೀವಿ. ಇಲ್ಲಿ ಇದೊಂದೇ ಆಗೋಕೆ ಬಾಕಿ ಇರೋದು. ಈ ಏರಿಯಾದಲ್ಲಿ ಅರ್ಧಕರ್ಧ ಜನ ಮುಸ್ಲಿಮರೇ ಇರೋದು. ನಾವು ಗಣೇಶನನ್ನ ಮೆರವಣೆಗೆ ವರ್ಷಕ್ಕೆ ಒಂದೇ ಸಲ ಮಾಡೋದು. ಆದ್ರೆ ಇವರೆಲ್ಲ ಹೇಗೆ ಊರೆಲ್ಲ ಹೋಗಿ ರ‍್ಯಾಲಿ ಮಾಡಿದ್ರು. ಈ ಸ್ಥಳವನ್ನು ಮಿನಿ ಪಾಕಿಸ್ತಾನ ಮಾಡ್ಬೇಕು ಅನ್ನೋದೇ ಇವ್ರ ಅಜೆಂಡಾ ಎಂದು ವಾಗ್ದಾಳಿ ನಡೆಸಿದ್ದಾರೆ.
ಮುಸ್ಲಿಂ ಹುಡುಗರು ರಾತ್ರಿ ಆದ್ರೆ ಬಟ್ಟೆ ಬಿಚ್ಚಿಕೊಂಡು, ಕಾಂಪೌಂಡ್ ಹಾರಿಕೊಂಡು ಬರ್ತಾರೆ. ಪೊಲೀಸರು ಬಂದು ನಮ್ಮನ್ನ ಕೇಳ್ತಾರೆ. ಆದ್ರೆ ಅವರೆಲ್ಲ ಎಲ್ಲಿ ಇರ್ತಾರೆ ಅಂತ ನಮಗೆ ಗೊತ್ತಿರಲ್ಲ ಎಂದು ಹೇಳಿದ್ದಾರೆ.
ಪ್ರತಿಯೊಬ್ಬ ಹೆಣ್ಮಗಳು ಕೂಡ ಹೆದರಿಕೊಂಡು ಆ ಮಸೀದಿ ಇರೋ ಕಡೆ ಹೋಗಲ್ಲ ಅಂತಾರೆ. ಏರಿಯಾದಲ್ಲಿ ಯಾರಾದ್ರು ಸತ್ರೆ ಅವರ ಮೆರವಣಿಗೆಯ ತಮಟೆ ಶಬ್ದ ಕೂಡ ಮಸೀದಿ ಕೇಳ್ಬಾರ್ದು ಅಂತಾರೆ. ಇದೆಂತ ನ್ಯಾಯ. ಇಲ್ಲಿರುವ ಹಿಂದುಗಳಿಗೆ ಸರ್ಕಾರ ನ್ಯಾಯ ಕೊಡಿಸಬೇಕು ಎಂದು ಮನವಿ ಮಾಡಿದ್ದಾರೆ.