Tag: Ganesh Immersion

  • ಸಾಲು ಸಾಲು ದುರಂತದ ಬೆನ್ನಲ್ಲೇ ಚಿಕ್ಕಬಳ್ಳಾಪುರ ಪೊಲೀಸರು ಅಲರ್ಟ್‌ – ಗಣೇಶ ವಿಸರ್ಜನೆಗೆ ಬಿಗಿ ಬಂದೋಬಸ್ತ್

    ಸಾಲು ಸಾಲು ದುರಂತದ ಬೆನ್ನಲ್ಲೇ ಚಿಕ್ಕಬಳ್ಳಾಪುರ ಪೊಲೀಸರು ಅಲರ್ಟ್‌ – ಗಣೇಶ ವಿಸರ್ಜನೆಗೆ ಬಿಗಿ ಬಂದೋಬಸ್ತ್

    – ಗೌರಿಬಿದನೂರು ಬೈಪಾಸ್ ಗಣೇಶ ವಿಸರ್ಜನೆ; 500ಕ್ಕೂ ಹೆಚ್ಚು ಪೊಲೀಸರ ನಿಯೋಜನೆ
    – ಮಸೀದಿ-ಮಂದಿರ-ಚರ್ಚ್‌ಗಳ ಬಳಿ ವಿಶೇಷ ಭದ್ರತೆ

    ಚಿಕ್ಕಬಳ್ಳಾಪುರ: ರಾಜ್ಯದೆಲ್ಲೆಡೆ ಗಣೇಶ ವಿಸರ್ಜನಾ ಮೆರವಣಿಗೆಗಳು (Ganesha Visarjan Procession) ಜೋರಾಗಿ ಸಾಗುತ್ತಿದ್ದರೆ, ಕೆಲ ಕಡೆಗಳಲ್ಲಿ ನಡೆದ ಅಹಿತಕರ ಘಟನೆಗಳಿಂದ ಪೊಲೀಸರು ಹೈಅಲರ್ಟ್ ಆಗಿದ್ದಾರೆ. ದೊಡ್ಡಬಳ್ಳಾಪುರದಲ್ಲಿ ಪಟಾಕಿ ಸ್ಫೋಟದಿಂದ ಇಬ್ಬರು ಬಾಲಕರ ಸಾವು, ಮದ್ದೂರಿನಲ್ಲಿ ಕಲ್ಲುತೂರಾಟ ಗಲಾಟೆ, ಹಾಸನದಲ್ಲಿ ಮೆರವಣಿಗೆಯ ವೇಳೆ ಆದ ಅಪಘಾತದ ಹಿನ್ನೆಲೆ ಚಿಕ್ಕಬಳ್ಳಾಪುರ ಜಿಲ್ಲೆ ಪೊಲೀಸರೂ (Chikkaballapura Police) ಫುಲ್‌ ಅಲರ್ಟ್‌ ಆಗಿದ್ದಾರೆ.

    ಗೌರಿಬಿದನೂರು ಬೈಪಾಸ್ ಗಣೇಶನ ವಿಶೇಷ
    ಪ್ರತಿಷ್ಠಿತ ಬೈಪಾಸ್ ಗಣೇಶೋತ್ಸವ 22ನೇ ವರ್ಷಕ್ಕೆ ಕಾಲಿಟ್ಟಿದ್ದು, ಈ ಬಾರಿ 22 ಅಡಿ ಎತ್ತರದ ಪ್ರಣವ ಮಹಾರುದ್ರ ಗಣೇಶ ಪ್ರತಿಷ್ಠಾಪನೆ ಮಾಡಲಾಗಿದೆ. ಪೆಂಡಾಲ್‍ನಲ್ಲಿ ದೇಶದ ಪ್ರಸಿದ್ಧ ದೇವಾಲಯಗಳ ಮಾದರಿಗಳನ್ನು ಅಲಂಕರಿಸಿರುವುದು ಭಕ್ತರ ಗಮನ ಸೆಳೆದಿದೆ. ಭಾನುವಾರ ನಡೆಯಲಿರುವ ಗಂಗಾವಿಲೀನ ಮೆರವಣಿಗೆಯಲ್ಲಿ ಸಾವಿರಾರು ಮಂದಿ ಭಕ್ತರು ಪಾಲ್ಗೊಳ್ಳುವ ನಿರೀಕ್ಷೆಯಿದೆ. ಇದನ್ನೂ ಓದಿ: ಹಾಸನ ದುರಂತ – ಮೊಸಳೆಹೊಸಳ್ಳಿ ಗ್ರಾಮದಲ್ಲಿ ಸ್ವಯಂಪ್ರೇರಿತ ಬಂದ್

    ಪೊಲೀಸರ ತಯಾರಿ ಹೇಗಿದೆ?
    ಸಂಭಾವ್ಯ ಅಹಿತಕರ ಘಟನೆಗಳನ್ನ ತಪ್ಪಿಸಲು ಜಿಲ್ಲೆಯ ಎಸ್ಪಿ ಕುಶಲ್ ಚೌಕ್ಸಿ ನೇತೃತ್ವದಲ್ಲಿ ಹಲವು ಶಾಂತಿ ಸಭೆಗಳನ್ನು ನಡೆಸಲಾಗಿದೆ. ಮುನ್ನೆಚ್ಚರಿಕೆಯಾಗಿ ಗೌರಿಬಿದನೂರು ಪಟ್ಟಣದಲ್ಲಿ ಭಾರೀ ಪೊಲೀಸರ ಪಥಸಂಚಲನ ನಡೆಸಲಾಗುತ್ತಿದೆ. ಬೆಳಗ್ಗೆ 11 ಗಂಟೆಗೆ ಆರಂಭವಾಗುವ ಮೆರವಣಿಗೆ ಸರಿಸುಮಾರು ಸಂಜೆ 8ರ ವರೆಗೆ ಸಾಗಲಿದ್ದು, 500ಕ್ಕೂ ಹೆಚ್ಚು ಪೊಲೀಸರನ್ನ ನಿಯೋಜನೆ ಮಾಡಲಾಗುತ್ತಿದೆ. ಮಸೀದಿ, ಮಂದಿರ, ಚರ್ಚ್ ಮುಂತಾದ ಧಾರ್ಮಿಕ ಕೇಂದ್ರಗಳ ಬಳಿ ವಿಶೇಷ ಭದ್ರತೆ ಏರ್ಪಡಿಸಲಾಗಿದೆ. ಸಿಸಿ ಟಿವಿಗಳನ್ನ ಆಳವಡಿಸಲಾಗುತ್ತಿದೆ. ಡ್ರೋನ್ ಕ್ಯಾಮೆರಾ ಬಳಸಿ ವಿಡಿಯೋ ಚಿತ್ರೀಕರಣ ಸಹ ಮಾಡಿಸಲು ತೀರ್ಮಾನ ಮಾಡಲಾಗಿದೆ. ಇದನ್ನೂ ಓದಿ: ಹಾಸನ | ವಿಮಾನ ದುರಂತದಲ್ಲಾದ್ರೆ 1 ಕೋಟಿ ಕೊಡ್ತೀರಿ, ಬಡವರ ಜೀವಕ್ಕೆ ಬೆಲೆ ಇಲ್ವಾ? – ಸಚಿವರಿಗೆ ಜನರ ತರಾಟೆ

    ಪೊಲೀಸರಿಂದ ಸಾರ್ವಜನಿಕರಿಗೆ ಸಂದೇಶ
    ಗಣೇಶ ವಿಸರ್ಜನಾ ಮೆರವಣಿಗೆ ಶಾಂತಿಯುತವಾಗಿ ನಡೆಯಬೇಕು. ಯಾವುದೇ ಅಹಿತಕರ ಘಟನೆ ನಡೆಯದಂತೆ ಪೊಲೀಸರಿಂದ ಭಾರೀ ಬಂದೋಬಸ್ತ್ ಕೈಗೊಳ್ಳಲಾಗಿದೆ. ಸಾರ್ವಜನಿಕರು ಸಹ ಸಹಕಾರ ನಿಡಬೇಕು ಎಂದು ಎಸ್‍ಪಿ ಕುಶಲ್ ಚೌಕ್ಸಿ ಮನವಿ ಮಾಡಿಕೊಂಡಿದ್ದಾರೆ. ಗೌರಿಬಿದನೂರಿನ ಬೈಪಾಸ್ ಗಣೇಶ ವಿಸರ್ಜನೆಗೆ ಕಟ್ಟಿನಿಟ್ಟಿನ ಭದ್ರತೆ ಒದಗಿಸಲು ಮುಂದಾಗಿರುವ ಪೊಲೀಸರು ಭಕ್ತರು ಶಾಂತಿಯುತವಾಗಿ ಉತ್ಸವದಲ್ಲಿ ಪಾಲ್ಗೊಳ್ಳುವಂತೆ ಮನವಿ ಮಾಡಿದ್ದಾರೆ. ಇದನ್ನೂ ಓದಿ: ಹಾಸನ ಗಣೇಶ ಮೆರವಣಿಗೆ ವೇಳೆ ಘನಘೋರ ದುರಂತ – ಪ್ರಧಾನಿ ಮೋದಿ ಸಂತಾಪ

  • ರಾಜ್ಯ ಸರ್ಕಾರ ಹಿಂದೂಗಳನ್ನ ಯಾವ ಸ್ಥಿತಿಗೆ ತಳ್ಳಿರಬಹುದು? – ವಿಜಯೇಂದ್ರ ಆತಂಕ

    ರಾಜ್ಯ ಸರ್ಕಾರ ಹಿಂದೂಗಳನ್ನ ಯಾವ ಸ್ಥಿತಿಗೆ ತಳ್ಳಿರಬಹುದು? – ವಿಜಯೇಂದ್ರ ಆತಂಕ

    – ಬಿಜೆಪಿ ಯಾವತ್ತೂ ಹಿಂದುತ್ವದ ಪರ ಇರುವ ರಾಜಕೀಯ ಪಕ್ಷ ಎಂದ ಶಾಸಕ

    ಬೆಂಗಳೂರು: ಬಿಜೆಪಿ (BJP) ಯಾವತ್ತೂ ಹಿಂದುತ್ವದ ಪರ ಇರುವ ರಾಜಕೀಯ ಪಕ್ಷ. ಹಿಂದೂಗಳ ಮೇಲೆ ದಬ್ಬಾಳಿಕೆ ಎಲ್ಲಿ ಆಗುತ್ತೋ ಅದರ ವಿರುದ್ಧ ನಾವು ಅಲ್ಲಿರ್ತೇವೆ. ಆದ್ರೆ ರಾಜ್ಯ ಸರ್ಕಾರ ಹಿಂದೂಗಳನ್ನ ಯಾವ ಸ್ಥಿತಿಗೆ ತಳ್ಳಿರಬಹುದು? ಯೋಚಿಸಬೇಕಾಗಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ (BY Vijayendra) ಆತಂಕ ವ್ಯಕ್ತಪಡಿಸಿದರು.

    ಮದ್ದೂರಿನಲ್ಲಿ (Maddur) ಗಣೇಶಮೂರ್ತಿ ವಿಸರ್ಜನೆ ವೇಳೆ ಅನ್ಯ ಕೋಮಿನ ಯುವಕರು ಕಲ್ಲು ತೂರಾಟ ನಡೆಸಿದ್ದ ಬಳಿಕ ಉಂಟಾದ ಉದ್ವಿಗ್ನತೆ ಕುರಿತು ಅವರು ಮಾತನಾಡಿದ್ದಾರೆ. ಬೆಂಗಳೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ನಮ್ಮ ನಾಯಕರ ಜೊತೆ ಮದ್ದೂರು ಭೇಟಿ ಕೊಡ್ತಿದ್ದೇವೆ. ಅಲ್ಲಿಯ ಪರಿಸ್ಥಿತಿ ಸತ್ಯಾಸತ್ಯತೆ ತಿಳಿದುಕೊಳ್ಳುವ ಕೆಲಸ ಮಾಡ್ತೇವೆ ಎಂದು ತಿಳಿಸಿದರು. ಇದನ್ನೂ ಓದಿ: ಪಕ್ಷ ಸಂಘಟನೆ, ಚುನಾವಣಾ ತಯಾರಿ – ಸೆ.18, 19 ರಂದು ಬಿಜೆಪಿಯಿಂದ ಚಿಂತನ, ಮಂಥನ ಸಭೆ

    ರಾಜ್ಯದಲ್ಲಿ ಅಶಾಂತಿ ಸೃಷ್ಟಿ ಮಾಡಲಾಗ್ತಿದೆ, ಇದರ ಹೊಣೆ ಸರ್ಕಾರ ಹೊರಬೇಕು. ಹಿಂದೂಗಳು ನೆಮ್ಮದಿಯಿಂದ ಗಣೇಶ ಹಬ್ಬ ಮಾಡೋಕ್ಕಾಗ್ತಿಲ್ಲ. ಯಾವ ಸ್ಥಿತಿಗೆ ಹಿಂದೂಗಳನ್ನ ಈ ಸರ್ಕಾರ ತಳ್ಳಿರಬಹುದು? ಭದ್ರಾವತಿ ಶಾಸಕರು ಮುಸ್ಲಿಂ ಆಗಿ ಹುಟ್ಟುವ ಮಾತಾಡಿದ್ದಾರೆ. ಮುಂದಿನ ಜನ್ಮದ ಮಾತೇಕೆ? ಸಂಗಮೇಶ್ ಅವರು ಈಗಲೇ ಮತಾಂತರ ಆಗಲಿ, ಇವರ ಹೇಳಿಕೆಗಳು ಹಿಂದೂಗಳಿಗೆ ವಿರೋಧ ಉಂಟು ಮಾಡಲು ಪೂರಕ ವಾತಾವರಣ ನಿರ್ಮಿಸಿದೆ. ಅನೇಕ ವಿಚಾರಗಳಲ್ಲಿ ಸರ್ಕಾರ ಹಿಂದೂ ವಿರೋಧಿ ನಡೆ ಇಡ್ತಿದೆ. ಚಿತ್ರದುರ್ಗದಲ್ಲೂ ಹಲವು ನಿರ್ಬಂಧ ಹಾಕಿದ್ದಾರೆ. ನಾವು ಭಾರತದಲ್ಲಿದೀವಾ? ಪಾಕ್ ನಲ್ಲಿದೀವಾ? ಎಂದು ಪ್ರಶ್ನಿಸಿದರು. ಇದನ್ನೂ ಓದಿ: ಇಂದು ಮದ್ದೂರಿನಲ್ಲಿ ಸಾಮೂಹಿಕ ಗಣೇಶ ವಿಸರ್ಜನೆ – 20 ಸಾವಿರಕ್ಕೂ ಹೆಚ್ಚು ಜನ ಭಾಗಿ ಸಾಧ್ಯತೆ

    ಹರಿಪ್ರಸಾದ್ ಸೇರಿ ಕಾಂಗ್ರೆಸ್‌ನ ಹಲವರು ಅನಾವಶ್ಯಕ ಮಾತಾಡ್ತಿದ್ದಾರೆ. ಸಂಘದ ಹೆಸರು, ಸಂತೋಷ್ ಅವರ ಹೆಸರು ಬಳಸಿಕೊಂಡು ಮಾತಾಡೋದನ್ನು ನಿಲ್ಲಿಸಲಿ. ಮದ್ದೂರಿನ ಘಟನೆಯಲ್ಲಿ ಸಂಪೂರ್ಣವಾಗಿ ಪೊಲೀಸ್ ಇಲಾಖೆ ವೈಫಲ್ಯ ಇದೆ. ಮೆರವಣಿಗೆ ವೇಳೆ ಮಹಿಳಾ ಪೊಲೀಸರು ಇರಲಿಲ್ಲ, ಎಸ್‌ಪಿ ಇರಲಿಲ್ಲ. ಮಸೀದಿಯಲ್ಲಿ ಕಲ್ಲು ಸಂಗ್ರಹ ಮಾಡಿಟ್ಕೋತಾರೆ ಅಂದ್ರೆ ಇದು ಪೊಲೀಸ್ ವೈಫಲ್ಯ ಎಂದು ಕಿಡಿ ಕಾರಿದರಲ್ಲದೇ ಬಿಜೆಪಿ ಯಾವತ್ತೂ ಹಿಂದುತ್ವದ ಪರ ಇರುವ ರಾಜಕೀಯ ಪಕ್ಷ. ಹಿಂದೂಗಳ ಮೇಲೆ ದಬ್ಬಾಳಿಕೆ ಎಲ್ಲಿ ಆಗುತ್ತೋ ಅದರ ವಿರುದ್ಧ ನಾವು ಅಲ್ಲಿರ್ತೇವೆ ಎಂದರು.

    ಇನ್ನೂ ಅಮಿತ್ ಶಾ ಭೇಟಿ ವಿಚಾರಕ್ಕೆ ಪ್ರತಿಕ್ರಿಯಿಸಿ, ಅಮಿತ್ ಶಾ ಅವರ ಜೊತೆ ಧರ್ಮಸ್ಥಳದ ವಿಚಾರ ಚರ್ಚೆ ಮಾಡಿದ್ದೇವೆ. ಎನ್‌ಐಎ ಬಗ್ಗೆ ಚರ್ಚೆ ಮಾಡಿಲ್ಲ, ಅದೆಲ್ಲ ಊಹಾಪೋಹ. ಅಮಿತ್ ಶಾ ಜತೆ ನಮ್ಮ ಭೇಟಿ ಯಶಸ್ವಿಯಾಗಿದೆ ಎಂದು ತಿಳಿಸಿದರು. ಇದನ್ನೂ ಓದಿ: ಅಕ್ರಮ ಸಂಬಂಧಕ್ಕೆ ಅಡ್ಡಿ – ಪ್ರಿಯಕರನೊಂದಿಗೆ ಸೇರಿ ಹೆತ್ತ ಮಗುವನ್ನೇ ಉಸಿರುಗಟ್ಟಿಸಿ ಕೊಂದ ತಾಯಿ

  • ಹಿಂದೂಗಳ ಮೇಲೆ ಲಾಠಿಚಾರ್ಜ್ ಯಾಕೆ? ಕಲ್ಲೆಸೆದವರ ಮೇಲೆ ಪೊಲೀಸರು ಪೌರುಷ ತೋರಿಸಲಿ – ಅಶ್ವಥ್ ನಾರಾಯಣ

    ಹಿಂದೂಗಳ ಮೇಲೆ ಲಾಠಿಚಾರ್ಜ್ ಯಾಕೆ? ಕಲ್ಲೆಸೆದವರ ಮೇಲೆ ಪೊಲೀಸರು ಪೌರುಷ ತೋರಿಸಲಿ – ಅಶ್ವಥ್ ನಾರಾಯಣ

    ಮಂಡ್ಯ: ಪೊಲೀಸರು ಹಿಂದೂಗಳ ಮೇಲೆ ಲಾಠಿಚಾರ್ಜ್ ಮಾಡುತ್ತಿದ್ದಾರೆ. ಅದರ ಬದಲು ಕಲ್ಲೆಸೆದವರ ಮೇಲೆ ಪೊಲೀಸರು ತಮ್ಮ ಪೌರುಷ ತೋರಿಸಲಿ ಎಂದು ಶಾಸಕ ಡಾ.ಸಿ.ಎನ್ ಅಶ್ವಥ್ ನಾರಾಯಣ (Ashwath Narayana) ಆಗ್ರಹಿಸಿದರು.

    ಮದ್ದೂರು (Maddur) ಕಲ್ಲು ತೂರಾಟ ವಿಚಾರವಾಗಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ನ್ಯಾಯಕ್ಕಾಗಿ ಪ್ರತಿಭಟಿಸಿದ ಹಿಂದೂಗಳ ಮೇಲೆ ಪೊಲೀಸರು ಲಾಠಿಚಾರ್ಜ್ ಮಾಡುತ್ತಿದ್ದಾರೆ. ಅದರ ಬದಲು ಕಲ್ಲೆಸೆದವರ ಮೇಲೆ ಪೊಲೀಸರು ತಮ್ಮ ಪೌರುಷ ತೋರಿಸಲಿ. ಪೊಲೀಸ್ ಇಲಾಖೆ ಸರ್ಕಾರದ ಓಲೈಕೆಗಷ್ಟೇ ಸೀಮಿತವಾಗಿದೆ. ಪೋಸ್ಟಿಂಗ್ ಸಲುವಾಗಿ ಪೊಲೀಸ್ ಇಲಾಖೆ ಓಲೈಕೆಗಿಳಿದಿದೆ. ಹೀಗಾಗಿ ಕಠಿಣ ಕ್ರಮ ಕೈಗೊಳ್ಳುತ್ತಿಲ್ಲ. ಈ ವ್ಯವಸ್ಥೆ ಮೇಲೆ ಜನರು ವಿಶ್ವಾಸ ಕಳ್ಕೊಂಡಿದ್ದಾರೆ. ರಾಜ್ಯದಲ್ಲಿ ಪೊಲೀಸ್ ವ್ಯವಸ್ಥೆ ಸತ್ತು ಹೋಗಿದೆ, ಅಮಾಯಕರು ಬಲಿಯಾಗ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದರು.ಇದನ್ನೂ ಓದಿ: ಸರ್ಕಾರದ ಓಲೈಕೆ ರಾಜಕಾರಣವೇ ಮದ್ದೂರು ಗಲಭೆಗೆ ಕಾರಣ: ಬಸವರಾಜ ಬೊಮ್ಮಾಯಿ ಕಿಡಿ

    ಇನ್ನೂ ಅನ್ಯಧರ್ಮದ ವ್ಯಕ್ತಿಗಳು ಮತ್ತು ಸಮುದಾಯದವರು ಗಣೇಶೋತ್ಸವದ ಮೆರವಣಿಗೆ, ಹಿಂದೂ ಸಂಸ್ಕೃತಿ ಅರ್ಥ ಮಾಡಿಕೊಳ್ಳಬೇಕು. ಇತರ ಧರ್ಮದ ಆಚರಣೆಗೆ ಗೌರವ ಕೊಡಬೇಕು, ಒಪ್ಕೋಬೇಕು. ನಾವು ಇರಾನ್, ಪಾಕಿಸ್ತಾನ, ಸೌದಿಯಲ್ಲಿಲ್ಲ. ಭಾರತದಲ್ಲಿದ್ದೇವೆ. ಭಾರತದ ಸಂಸ್ಕೃತಿ, ಆಚರಣೆಗೆ ಅವಕಾಶವೇ ಇಲ್ಲದಂತಾಗಿದೆ. ಇದು ಪದೇ ಪದೇ ಅತಿರೇಕಕ್ಕೆ ಹೋಗ್ತಿದೆ. ಮೊನ್ನೆ ಇದೇ ಸ್ಥಳದಲ್ಲಿ ಈದ್ ಮಿಲಾದ್ ಮೆರವಣಿಗೆ ನಡೆದಿತ್ತು. ಆಗ ಹಿಂದೂಗಳು ಕಲ್ಲೆಸೆದಿದ್ರಾ ಎಂದು ಆಕ್ರೋಶ ಹೊರಹಾಕಿದರು.

    ಇದೇ ವೇಳೆ ಚಲುವರಾಯಸ್ವಾಮಿ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ನಾವು ಏನು ಕುಮ್ಮಕ್ಕು ಕೊಟ್ಟಿದ್ದೀವಿ? ನಿಮಗೆ ಬುದ್ಧಿ ಕೆಟ್ಟಿದೆಯಾ? ನೀವು ಹೇಗೆ ಈ ಥರ ಮಾತಾಡ್ತೀರಿ? ಗಣೇಶ ಹಬ್ಬಕ್ಕೆ ನಮ್ಮ ಕುಮ್ಮಕ್ಕೇನಿರುತ್ತೆ? ಚಲುವರಾಯಸ್ವಾಮಿ ದುರಹಂಕಾರದ ಮಾತುಗಳನ್ನು ಬಿಡಲಿ. ಮೂಲೆಗೆ ಸೇರಿದ್ರು ಈಗ ಮತ್ತೆ ಮೂಲೆಗೆ ಸೇರುತ್ತೀರಾ? ಈ ರೀತಿ ಅಹಂಕಾರದ ಮಾತು ಬಿಟ್ಟು ಜವಾಬ್ದಾರಿ ನಿಭಾಯಿಸಿ ಎಂದರು.ಇದನ್ನೂ ಓದಿ: ನಾಳೆ ಮದ್ದೂರು ಸ್ವಯಂ ಪ್ರೇರಿತ ಬಂದ್‌ಗೆ ಕರೆ – ಹಿಂದೂ ಮುಖಂಡರ ತೀರ್ಮಾನ