ಬೆಂಗಳೂರು: ಸೋಮವಾರ ಗಣೇಶ ಚತುರ್ಥಿ ಹಬ್ಬದ ಹಿನ್ನೆಲೆಯಲ್ಲಿ ಜನ ತಮ್ಮೂರುಗಳತ್ತ ಪ್ರಯಾಣ ಬೆಳೆಸಿದ್ದಾರೆ. ಪ್ರಯಾಣಿಕರಿಂದ ಮೆಜೆಸ್ಟಿಕ್ ನ KSRTC ಬಸ್ ನಿಲ್ದಾಣ ತುಂಬಿ ತುಳುಕ್ತಿದ್ದು, ಹೆಚ್ಚುವರಿಯಾಗಿ 12,00 ಬಸ್ ಗಳನ್ನ ಬಿಡಲಾಗಿದೆ. ಬಿಎಂಟಿಸಿ ಬಸ್ ಗಳು ಕೂಡ ಜಿಲ್ಲೆಗಳಿಗೆ ಸಂಚಾರ ಮಾಡ್ತಿವೆ.
ಹಬ್ಬದ ಸಲುವಾಗಿ ಊರಿಗೆ ಹೋಗಲಿರುವ ಹಲವಾರು ಮಂದಿ ಇಂದೇ ಹೊರಟಿರುವುದರಿಂದ ಬೆಂಗಳೂರಿನ ಮೆಜೆಸ್ಟಿಕ್ ನಿಲ್ದಾಣದ ಸುತ್ತಮುತ್ತ ಜನರಿಂದ ತುಂಬಿ ತುಳುಕಿದೆ. ಮಾತ್ರವಲ್ಲದೆ ಸಂಚಾರ ದಟ್ಟಣೆಯಿಂದಾಗಿ ಸಾರ್ವಜನಿಕರೂ ಪರದಾಡುವಂತಾಗಿದೆ. ಕಾರ್ಪೋರೇಷನ್, ಮೆಜೆಸ್ಟಿಕ್,ಮೈಸೂರು ಬ್ಯಾಂಕ್ ಸರ್ಕಲ್ , ನವರಂಗ್ ಸೇರಿದಂತೆ ವಿವಿಧ ರಸ್ತೆಗಳು ಸಂಪೂರ್ಣ ಜಾಮ್ ಆಗಿವೆ.
ವಾರಾಂತ್ಯದ ರಜೆ ಜೊತೆಗೆ ಹಬ್ಬದ ರಜೆಯೂ ಸೇರಿ ಮೂರ್ನಾಲ್ಕು ದಿನಗಳ ಸರಣಿ ರಜೆ ಸಿಗುವುದರಿಂದ ಹಲವರು ಇಂದೇ ಊರಿಗೆ ಹೊರಟಿದ್ದಾರೆ. ಹೀಗಾಗಿ ಮೆಜೆಸ್ಟಿಕ್ ಹಾಗೂ ಸುತ್ತಮುತ್ತಲ ಸುತ್ತಮುತ್ತಲಿನ ರಸ್ತೆಗಳು ಬಹುತೇಕ ಜಾಮ್ ಆಗಿವೆ. ಜನಸಂಚಾರ ಜಾಸ್ತಿ ಇರುವುದರಿಂದ ಊರಿಗೆ ಹೊರಟ ಬಸ್ ಹಾಗೂ ಇತರ ವಾಹನಗಳ ಸಂಖ್ಯೆಯೂ ಹೆಚ್ಚಿರುವುದರಿಂದ ಟೌನ್ಹಾಲ್ನಿಂದ ಮೆಜೆಸ್ಟಿಕ್ವರೆಗೂ ವಾಹನಗಳು ಸಾಲುಗಟ್ಟಿ ನಿಂತ ದೃಶ್ಯಗಳು ಕಂಡುಬಂದಿತ್ತು.
ಟ್ರಾಫಿಕ್ ಜಾಮ್ ಕೂಡ ಜಾಸ್ತಿ ಇದ್ದಿದ್ದರಿಂದ 2-3 ಕಿ.ಮೀ. ದೂರ ವಾಹನದಟ್ಟಣೆ ಉಂಟಾಗಿ, ನಿಧಾನಗತಿಯ ಚಲನೆ ಕಂಡುಬಂದಿದೆ. ಪರಿಣಾಮವಾಗಿ ಕೆಲವರು ನಡೆದೇ ಬಸ್ ನಿಲ್ದಾಣ ತಲುಪುವಂತಾಗಿದೆ.
ಬೆಂಗಳೂರು: ನೀರಿನಲ್ಲಿ ಸರಿಯಾಗಿ ಕರಗದ ಮತ್ತು ಬಾವಿ, ಕೆರೆ, ಕುಂಟೆ, ಸರೋವರ, ನದಿ ನೀರನ್ನು ಕಲುಷಿತಗೊಳಿಸುವ ರಾಸಾಯನಿಕ ಬಣ್ಣ ಲೇಪಿತ, ಪಿಓಪಿ ಗಣಪತಿ ಮೂರ್ತಿಗಳ ತಯಾರಿಕೆ, ದಾಸ್ತಾನು ಮತ್ತು ಮಾರಾಟ ಮಾಡದಂತೆ ಜನಜಾಗೃತಿ ಮೂಡಿಸಲು ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ್ ಖಂಡ್ರೆ (Eshwar Khandre) ಸೂಚನೆ ನೀಡಿದ್ದಾರೆ.
ಕಲುಷಿತ ನೀರು ಸೇವನೆಯಿಂದ ರಾಜ್ಯದ ವಿವಿಧೆಡೆಗಳಲ್ಲಿ ಜೀವಹಾನಿಯೂ ಆಗಿದ್ದು, ಅಮೂಲ್ಯವಾದ ಜನ, ಜಾನುವಾರುಗಳ ಜೀವ ಉಳಿಸಲು ಮತ್ತು ಆರೋಗ್ಯ ರಕ್ಷಿಸಲು ಪಾಸ್ಟರ್ ಆಫ್ ಪ್ಯಾರೀಸ್ (ಪಿ.ಓ.ಪಿ.)ನಿಂದ ತಯಾರಿಸಿದ ಹಾಗೂ ಲೋಹಯುಕ್ತ ಅಪಾಯಕಾರಿ ರಾಸಾಯನಿಕ ಬಣ್ಣ ಬಳಸಿದ ಮೂರ್ತಿಗಳ ತಯಾರಿಕೆ, ದಾಸ್ತಾನು, ಮಾರಾಟ ಮಾಡದಂತೆ ಜಾಗೃತಿ ಮೂಡಿಸಲು ಮಾಲಿನ್ಯ ನಿಯಂತ್ರಣ ಮಂಡಳಿಗೆ ಸೂಚನೆ ನೀಡಿದ್ದಾರೆ.
ಹಬ್ಬಕ್ಕೆ ಇನ್ನೂ ಒಂದೂವರೆ ತಿಂಗಳು ಬಾಕಿ ಇದ್ದು, ಈಗಿನಿಂದಲೇ ಪಿಓಪಿ ಗೌರಿ, ಗಣಪತಿ ಮೂರ್ತಿಗಳನ್ನು ತಯಾರಿಸದಂತೆ, ಬೇರೆ ರಾಜ್ಯದಿಂದ ಮಾರುಕಟ್ಟೆ ಪ್ರವೇಶಿಸದಂತೆ ಕಟ್ಟೆಚ್ಚರ ವಹಿಸಲು ನಿರ್ದೇಶನ ನೀಡಿದ್ದಾರೆ. ಈ ಬಾರಿ ಸೆಪ್ಟೆಂಬರ್ 18ರಂದು ಸಂಭ್ರಮ ಸಡಗರದಿಂದ ಗಣೇಶ ಚತುರ್ಥಿ ಆಚರಿಸಲಾಗುತ್ತದೆ. ನಮ್ಮ ಭಕ್ತಿ, ಭಾವ, ಸಂಪ್ರದಾಯಕ್ಕೆ ಚ್ಯುತಿ ಆಗದಂತೆ ಪರಿಸರ ಸ್ನೇಹಿ ಮಣ್ಣಿನ ಗೌರಿ, ಗಣಪತಿ ತಂದು ಪೂಜಿಸಿ ಹಬ್ಬ ಆಚರಿಸೋಣ. ಆದರೆ ನಮ್ಮ ಆಚರಣೆಯಿಂದ ಜಲ, ನೆಲ, ಗಾಳಿ ಮತ್ತು ಪರಿಸರಕ್ಕೆ ಹಾನಿ ಆಗದಂತೆ ಎಚ್ಚರಿಕೆ ವಹಿಸೋಣ ಎಂದು ಈಶ್ವರ್ ಖಂಡ್ರೆ ರಾಜ್ಯದ ಜನತೆಯಲ್ಲಿ ಮುಂಚಿತವಾಗಿಯೇ ಮನವಿ ಮಾಡಿದ್ದಾರೆ.
ಸಂಪ್ರದಾಯ: ಗೌರಿ ಮತ್ತು ಗಣೇಶನ ಹಬ್ಬದ ವೇಳೆ ಮಾವಿನ ತೋರಣ ಕಟ್ಟಿ, ತೆಂಗಿನ ಗರಿಯಿಂದ ಮಂಟಪ ಮಾಡಿ, ಬಾಳೆ ಕಂದು ಕಟ್ಟಿ ಮಣ್ಣಿನ ಗೌರಿ, ಗಣಪತಿ ಮೂರ್ತಿಗಳನ್ನು ತಂದು, ಹೂ, ಪತ್ರೆಗಳಿಂದ ಪೂಜಿಸಿ, ನೀರಿನಲ್ಲಿ ವಿಸರ್ಜಿಸುವುದು ಹಿಂದಿನಿಂದಲೂ ನಡೆದು ಬಂದ ಸಂಪ್ರದಾಯ.
ನಮ್ಮ ಪೂರ್ವಿಕರು ಕೆರೆಯಲ್ಲೇ ಸಿಗುವ ಜೇಡಿಮಣ್ಣಿನಲ್ಲಿ ಗೌರಿ, ಗಣಪತಿ ವಿಗ್ರಹ ಮಾಡಿ ಅದಕ್ಕೆ ನೈಸರ್ಗಿಕ ಬಣ್ಣ ಲೇಪಿಸಿ, ಪೂಜಿಸಿ, ನೀರಲ್ಲಿ ವಿಸರ್ಜಿಸುತ್ತಿದ್ದರು. ಆ ವಿಗ್ರಹಗಳು 2-3 ದಿನದಲ್ಲಿ ಕರಗುತ್ತಿದ್ದವು. ಆದರೆ ಕಳೆದ ಕೆಲವು ದಶಕದಿಂದ ಪಿ.ಓ.ಪಿ. ಗಣಪತಿ ವಿಗ್ರಹ ಮಾಡುತ್ತಿದ್ದು, ಇದಕ್ಕೆ ರಾಸಾಯನಿಕ ಬಣ್ಣ ಲೇಪಿಸುತ್ತಾರೆ. ಈ ಬಣ್ಣಗಳಿಂದಾಗಿ ಜಲಚರಗಳು ಸಾವಿಗೀಡಾಗುತ್ತಿದ್ದು, ಈ ವಿಗ್ರಹಗಳು ನೀರಲ್ಲಿ ಕರಗುವುದೂ ಇಲ್ಲ. ಜಲ ಮೂಲಗಳನ್ನು ಕಲುಷಿತಗೊಳಿಸುತ್ತಿದೆ ಎಂದು ತಿಳಿಸಿದ್ದಾರೆ.
ಗಣಪತಿಯ ಮಂಟಪದ ಅಲಂಕಾರಕ್ಕೆ ಪ್ಲಾಸ್ಟಿಕ್ ತೋರಣ, ಪ್ಲಾಸ್ಟಿಕ್ ಅಲಂಕಾರಿಕ ವಸ್ತು ಬಳಸದೆ ಹತ್ತಿಯಿಂದ ಮಾಡಿದ ಸಾಂಪ್ರದಾಯಿಕ ಗೆಜ್ಜೆ, ವಸ್ತ್ರ ಬಳಸುವಂತೆ ಮತ್ತು ಪರಿಸರ ಉಳಿಸುವಂತೆ ಅವರು ಮನವಿ ಮಾಡಿದ್ದಾರೆ.
ಕರಗದ ವಿಗ್ರಹ: ನಾವು ಭಕ್ತಿಯಿಂದ ಪೂಜಿಸುವ ಗೌರಿ, ಗಣಪತಿಯ ಪಿ.ಓ.ಪಿ ವಿಗ್ರಹಗಳು ನೀರಲ್ಲಿ ಹತ್ತಾರು ದಿನ ಕಳೆದರೂ ಕರಗುವುದಿಲ್ಲ. ಅವುಗಳು ಕೆರೆ, ಕಟ್ಟೆಗಳ ಬಳಿ ಅರ್ಧ ಕರಗಿ, ಮುರಿದು ಬಿದ್ದಿರುವ ಸ್ಥಿತಿ ನೋಡಿದಾಗ ಮನಸ್ಸಿಗೆ ತುಂಬಾ ನೋವಾಗುತ್ತದೆ ಎಂದು ತಿಳಿಸಿರುವ ಅವರು ವಿಸರ್ಜನೆಯಾದ ಪಿಓಪಿ ಗಣಪತಿ ಮೂರ್ತಿಗಳ ಚಿತ್ರವನ್ನೂ ಹಂಚಿಕೊಂಡಿದ್ದಾರೆ.
ಹುಬ್ಬಳ್ಳಿ: ವಿರೋಧಿಸಿದವರಿಗೆ ಛೀಮಾರಿ ಹಾಕಿದೆ. ನಮ್ಮ ಭಾವನೆಯನ್ನು ವಿರೋಧಿಸಿದವರಿಗೆ ಕಪಾಳಮೋಕ್ಷವಾಗಿದೆ ಎಂದು ಶ್ರೀರಾಮ ಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಹೇಳಿದ್ದಾರೆ.
ಹುಬ್ಬಳ್ಳಿಯ ಈದ್ಗಾ ಮೈದಾನದಲ್ಲಿ ಬೆಳ್ಳಂಬೆಳಗ್ಗೆ ವಿನಾಯಕನ ಪ್ರತಿಷ್ಠಾಪನೆ ಮಾಡಲಾಗಿದ್ದು, ಮುತಾಲಿಕ್ ತೆರಳಿ ವಿಘ್ನ ನಿವಾರಕನ ದರ್ಶನ ಪಡೆದಿದ್ದಾರೆ. ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಮ್ಮ ಹೋರಾಟಕ್ಕೆ ನ್ಯಾಯ ಸಿಕ್ಕಿದೆ. ನಿನ್ನೆ ರಾತ್ರಿ ಆನಂದದ ಸಂಗತಿ ಸಿಕ್ಕಿತು. ನ್ಯಾಯಾಲಯ ಮೂಲಕ ಸಿಹಿ ಸಂಗತಿ ಸಿಕ್ಕಿದೆ. ಈ ಜಾಗ ಸರ್ಕಾರಕ್ಕೆ ಸೇರಿದೆ, ಇದೊಂದು ಐತಿಹಾಸಿಕ ದಿನ ಎಂದರು.
ಉತ್ಸವ ಆರಂಭಿಸಿ 129 ವರ್ಷವಾಗಿದೆ. ಬ್ರಿಟೀಷರು ವಿರೋಧ ಮಾಡಲಿಲ್ಲ. ಆದರೆ ಕಾಂಗ್ರೆಸ್ ನವರು ಕುಮ್ಮಕ್ಕು ಕೊಟ್ಟು ಮುಸ್ಲಿಮರನ್ನು ಕೋರ್ಟ್ ಗೆ ಕಳಿಸುತ್ತಿದ್ದಾರೆ. ಇವತ್ತು ಕೋರ್ಟ್ ಗೆ ಹೋಗಿ ತಡೆಯಲು ಯತ್ನಿಸುತ್ತಿದ್ದಾರೆ. ನಿಮಗೆ ಗಣೇಶನ ಶಾಪ ತಟ್ಟುತ್ತೆ ನೀವು ಸರ್ವನಾಶವಾಗುತ್ತಿರಿ. ನೀವು ಯಾವುದೇ ಕೋರ್ಟ್ ಗೆ ಹೋಗಿ ಏನು ಮಾಡೋದಕ್ಕೆ ಆಗಲ್ಲ ಎಂದು ಮುತಾಲಿಕ್ ವಾಗ್ದಾಳಿ ನಡೆಸಿದರು.
ಈಗಾಗಲೇ ಗಣಪನ ಪ್ರತಿಷ್ಠಾಪನೆ ಆಗಿದ್ದು, ಪೂಜೆಯೂ ಆಗಿದೆ. ಕಾಂಗ್ರೆಸ್ ಶಾಸಕ ಪ್ರಸಾದ್ ಅಬ್ಬಯ್ಯ ಆಚರಣೆ ವಿರೋಧಿಸಿದ್ದಾರೆ. ನೀವು ಹಿಂದೂ ಆಗಿ ವಿರೋಧಿಸುತ್ತೀರಾ?. ನೀವು ಬೆಂಬಲ ಕೊಡಬೇಕಿತ್ತು. ಇದಕ್ಕೆ ಚುನಾವಣೆಯಲ್ಲಿ ನಿಮ್ಮನ್ನೂ ವಿಸರ್ಜನೆ ಮಾಡುತ್ತೇವೆ. ಅವರಿಗೆ ಮತ ಹಾಕದಂತೆ ಪ್ರಚಾರ ಮಾಡುತ್ತೇವೆ ಎಂದರು. ಇದನ್ನೂ ಓದಿ: ಹುಬ್ಬಳ್ಳಿ ಈದ್ಗಾದಲ್ಲಿ ಬೆಳ್ಳಂಬೆಳಗ್ಗೆ ಗಣೇಶ ಮೂರ್ತಿ ಪ್ರತಿಷ್ಠಾಪನೆ
ಇದೇ ಬೇಳೆ ಮೆರವಣಿಗೆ ಮಾಡದೇ ಗಣೇಶ ಪ್ರತಿಷ್ಠಾಪನೆ ವಿಚಾರಕ್ಕೆ ಪ್ರತಿಕ್ರಿಯಿಸಿ, ಇದಕ್ಕೆ ಕಾಂಗ್ರೆಸ್ ಕಾರಣ. ಅವರೇ ಇಂಥದ್ದೊಂದು ಸಮಸ್ಯೆಗೆ ಕಾರಣವಾಗಿದೆ. ಮುಸ್ಲಿಂ ಕಿಡಿಗೇಡಿಗಳಿಗೆ ಕಾಂಗ್ರೆಸ್ ಕುಮ್ಮಕ್ಕು ನೀಡುತ್ತಿದೆ. ವಕ್ಫ್ ಬೋರ್ಡ್ ಶಫಿ ಆಸಾದ್ ನನ್ನು ಸಸ್ಪೆಂಡ್ ಮಾಡಬೇಕು. ವಕ್ಫ್ ಬೋರ್ಡ್ ಅಧ್ಯಕ್ಷ ಸ್ಥಾನದಿಂದ ಒದ್ದು ಕಿತ್ತೊಗೆಯಬೇಕು ಎಂದು ಆಗ್ರಹಿಸಿದದರು.
Live Tv
[brid partner=56869869 player=32851 video=960834 autoplay=true]
ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಮತ್ತೆ ರಾತ್ರಿ ಮಳೆ ತನ್ನ ಆರ್ಭಟ ನಡೆಸಿದೆ. ರಾತ್ರಿಯಿಡೀ ಸುರಿದ ಮಳೆಗೆ ಸಿಲಿಕಾನ್ ಸಿಟಿ ಮಂದಿ ಹೈರಾಣಾಗಿದ್ದಾರೆ.
ಗೌರಿ-ಗಣೇಶ ಹಬ್ಬಕ್ಕೆ ಮಳೆರಾಯ ಅಡ್ಡಿ ಪಡಿಸಲಿದ್ದಾನೆ. ಭಾರೀ ಮಳೆಗೆ ಶಾಪಿಂಗ್ ಹಾಟ್‍ಸ್ಪಾಟ್ ಮಲ್ಲೇಶ್ವರಂನಲ್ಲಿ ಚಲಿಸುತ್ತಿದ್ದ ಕಾರಿನ ಮೇಲೆ ಮರ ಬಿದ್ದಿದೆ. ಮಳೆಗೆ ಶಿವಾನಂದ ಸರ್ಕಲ್ ಕೆರೆಯಂತಾಗಿದೆ. ಮಾರ್ಕೆಟ್ ಸಂಪೂರ್ಣ ಮಳೆ ನೀರಿನಿಂದ ಮುಳುಗಡೆಯಾಗಿದೆ. ಚಂದ್ರಲೇಔಟ್, ಸುಲ್ತಾನ್‍ಪೇಟೆ, ಕೆಂಗೇರಿ, ಕಗ್ಗಲೀಪುರ, ಟೌನ್‍ಹಾಲ್‍ನಲ್ಲಿ ಮಳೆ ಅವಾಂತರವಾಗಿದೆ. ಅನುಗ್ರಹ ಲೇಔಟ್‍ನಲ್ಲಿ ರಾತ್ರಿ ಸುರಿದ ಮಳೆಯಿಂದಾಗಿ ಜಲಾವೃತವಾಗಿದೆ.
ಸ್ಮಾರ್ಟ್ ಸಿಟಿ ಯೋಜನೆ ಅಡಿ ನಿರ್ಮಿಸಿರುವ ರಿಚ್ಮಂಡ್ ರಸ್ತೆಯಲ್ಲಿಯ ತುಂಬೆಲ್ಲಾ ಮಳೆ ನೀರು ತುಂಬಿ ಹರಿಯುತ್ತಿತ್ತು. ಅವೈಜ್ಞಾನಿಕವಾಗಿ ಕಾಲುವೆಗೆ ನೀರು ಹೋಗದ ರೀತಿ ರಸ್ತೆ ನಿರ್ಮಿಸಿದ್ದೇ ಇದಕ್ಕೆ ಕಾರಣವಾಗಿದೆ. ಯಶವಂತಪುರದಲ್ಲಿ ರಸ್ತೆಗೆ ಅಡ್ಡಲಾಗಿ ಮರ ಬಿದ್ದಿದೆ. ವಾಹನ ಸಂಚಾರ ಇಲ್ಲದ ಕಾರಣ ಭಾರೀ ಅನಾಹುತವೊಂದು ತಪ್ಪಿದೆ. ಇದನ್ನೂ ಓದಿ: ಕೋಲಾರ ಗಣೇಶೋತ್ಸವ – ರಾತ್ರಿ 10 ಗಂಟೆ ಬಳಿಕ ಮನರಂಜನಾ ಕಾರ್ಯಕ್ರಮಕ್ಕೆ ಅವಕಾಶವಿಲ್ಲ
ಇನ್ನೂ ಕೊಡಗಿನಲ್ಲಿ ನಿರಂತರವಾಗಿ ಸುರಿದ ಮಳೆಯಿಂದ ವಿವಿಧೆಡೆ ರಸ್ತೆ ಹಾಗೂ ಸೇತುವೆ ಸಂಪರ್ಕ ಕಡಿತಗೊಂಡಿದೆ ಮತ್ತು ಚಾಮರಾಜನಗರದಲ್ಲಿ ವರುಣಾರ್ಭಟ ಹಲವು ಅವಾಂತರಗಳನ್ನು ಸೃಷ್ಟಿಸಿದೆ. ಕಲ್ಯಾಣ ಮಂಟಪ, ಬಂಕ್, ಮನೆಗಳಿಗೆ ನೀರು ನುಗ್ಗಿ ಅಪಾರ ನಷ್ಟವುಂಟಾಗಿದೆ. ಉಳಿದಂತೆ ರಾಯಚೂರಿನಲ್ಲಿ ಭಾರಿ ಮಳೆ ಜಿಲ್ಲೆಯ ರೈತರನ್ನ ಕಂಗೆಡಿಸಿದೆ. ಲಕ್ಷಾಂತರ ರೂಪಾಯಿ ಮೌಲ್ಯದ ಬೆಳೆಗಳು ನೀರುಪಾಲಾಗಿವೆ. ಶಾಲಾ ಆವರಣ ಕೆರೆಯಂತಾಗಿ ವಿದ್ಯಾರ್ಥಿಗಳು ಪರದಾಡುವಂತಾಗಿದೆ.
Live Tv
[brid partner=56869869 player=32851 video=960834 autoplay=true]
ಬೆಂಗಳೂರು: ರಾಜ್ಯದಲ್ಲಿ ಸಾವರ್ಕರ್ ವರ್ಸಸ್ ಟಿಪ್ಪು ವಿವಾದ ಹಿನ್ನೆಲೆ ಹಿಂದೂಪರ ಸಂಘಟನೆಗಳು ವಿಭಿನ್ನವಾಗಿ ಸಾರ್ವಕರ್ ವಿರೋಧಿಗಳಿಗೆ ಟಕ್ಕರ್ ನೀಡಲು ಮುಂದಾಗಿದ್ದು, ಈ ಬಗ್ಗೆ ಮೆಗಾ ಪ್ಲ್ಯಾನ್ ಸಿದ್ಧಪಡಿಸಿವೆ.
ಹೌದು. ರಾಜ್ಯದಲ್ಲಿ ವೀರ ಸಾವರ್ಕರ್ ವಿವಾದ ದಿನೇ ದಿನೇ ಕಾಡ್ಗಿಚ್ಚಿನಂತೆ ಹಬ್ಬುತ್ತಿದ್ದೆ. ಶಿವಮೊಗ್ಗದಲ್ಲಿ ಸಾವರ್ಕರ್ ಭಾವಚಿತ್ರ ತೆರವು ವಿಚಾರವಾಗಿ ಶುರುವಾದ ವಿವಾದ ಸದ್ಯ ಎಲ್ಲೆಡೆ ಹರಡ್ತಿದೆ. ಈ ಎಲ್ಲಾ ಬೆಳವಣಿಗೆ ನಡುವೆ ಸಾವರ್ಕರ್ ವಿರೋಧಿಗಳಿಗೆ ಟಕ್ಕರ್ ನೀಡಲು ಹಿಂದೂ ಸಂಘಟನೆಗಳು ಮುಂದಾಗಿದ್ದು, ಈ ಬಾರಿಯ ಗಣೇಶೋತ್ಸವದ ಮೂಲಕವೇ ಸಾವರ್ಕರ್‍ಗೆ ಇಡೀ ರಾಜ್ಯಾದ್ಯಂತ ಗೌರವ ಸಲ್ಲಿಸಲು ಸಿದ್ಧತೆ ನಡೆಸಿವೆ.
ಹಿಂದೂ ಕಾರ್ಯಕರ್ತರಲ್ಲಿ ಆಕ್ರೋಶದ ಕಟ್ಟೆಯೊಡೆಯೋಕೆ ಶಿವಮೊಗ್ಗದ ಘಟನೆ ಹಾಗೂ ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿಕೆ ಹಿಂದೂ ಕಾರ್ಯಕರ್ತರನ್ನ ಬೆಂಕಿಯಾಗಿಸಿದೆ. ಇತ್ತೀಚಿಗೆ ರಾಜ್ಯದಲ್ಲಿ ಹಿಂದೂ ಕಾರ್ಯಕರ್ತರ ಮೇಲಿನ ಹಲ್ಲೆ, ಕೊಲೆಗಳು ಸೇರಿದಂತೆ ಹಲವು ವಿಚಾರಗಳು ಹಿಂದೂ ಸಂಘಟನೆಗಳನ್ನ ಕೆರಳಿಸಿದ್ದು, ಎಲ್ಲಾ ಕಾರಣಕ್ಕಾಗಿಯೇ ಹಿಂದೂಗಳನ್ನ ಈ ಮೂಲಕ ಒಗ್ಗೂಡಿಸಬೇಕು ಜೊತೆಗೆ ಸಾವರ್ಕರ್ ವಿರೋಧಿಗಳಿಗೂ ತಕ್ಕ ಉತ್ತರ ಕಲಿಸಲೇಬೇಕು ಅನ್ನೋ ನಿಟ್ಟಿನಲ್ಲಿ ಸಿಡಿದಿದ್ದಾರೆ.
ಹಿಂದೂ ಸಂಘಟನೆಗಳ ಈ ಮೆಗಾ ಪ್ಲ್ಯಾನ್ ಬಗ್ಗೆ ಮಾತನಾಡಿರುವ ಚಿಂತಕ ಚಕ್ರವರ್ತಿ ಸೂಲಿಬೆಲೆ, ಈ ಬಾರಿ ಇಡೀ ರಾಜ್ಯದ ಎಲ್ಲಾ ಗಣೇಶ ಮೂರ್ತಿಗಳ ಜೊತೆಗೆ ಸಾವರ್ಕರ್ ಫೋಟೋ ಇಡಲಿದ್ದೇವೆ. ಇದಕ್ಕೆ ಪ್ರತಿಯೊಬ್ಬ ಹಿಂದೂ ಕಾರ್ಯಕರ್ತನೂ ಇದಕ್ಕೆ ಬದ್ಧನಾಗಿರಲಿದ್ದು. ಯಾರು ಬಂದು ಫೋಟೋ ತೆಗೆಸುತ್ತಾರೋ ನೋಡೇ ಬಿಡೋಣ ಎಂಬ ಸವಾಲಾಕಿದ್ದಾರೆ. ಇದನ್ನೂ ಓದಿ: ಚುನಾವಣೆ ಹೊಸ್ತಿಲಲ್ಲಿ ಬಿಜೆಪಿಯಲ್ಲಿ ಬದಲಾವಣೆ – ಆಗಸ್ಟ್ ಅಂತ್ಯಕ್ಕೆ ಮತ್ತಷ್ಟು ಶಾಕ್ ಸಾಧ್ಯತೆ
ಈ ಬಾರಿಯ ಗಣೇಶೋತ್ಸವದಲ್ಲಿ ಸಾವರ್ಕರ್ ಬಗೆಗಿನ ಜೀವನ ಚರಿತ್ರೆ, ವೀಡಿಯೋಗಳು, ಅವರ ಬಗೆಗಿನ ಪುಸ್ತಕವನ್ನ ಜನರಿಗೆ ತಲುಪಿಸುವ ನಿಟ್ಟಿನಲ್ಲೂ ಸಂಘಟನೆಗಳು ಚಿಂತನೆ ನಡೆಸಿವೆ. ಜೊತೆಗೆ ಭಾರತದಲ್ಲಿ ಮತ್ತೆ ಸಾವರ್ಕರ್ ಯುಗವನ್ನ ಆರಂಭಿಸುತ್ತೇವೆ. ಹಾಗಾಗಿ ಈ ಬಾರಿಯ ಗಣೇಶೋತ್ಸವ ಸಾವರ್ಕರ್ ಗಣೇಶೋತ್ಸವ ಆಗಲಿದೆ ಅಂತಿದ್ದಾರೆ.
ಸಾವರ್ಕರ್ ವಿಚಾರ ಮುನ್ನೆಲೆಗೆ ಬರುತ್ತಿದ್ದಂತೆ ಹಲವು ವಿವಾದಗಳ ಜೊತೆ ತಿಕ್ಕಾಟಗಳು ಕೂಡ ಒಂದರ ಹಿಂದೊಂದು ಆರಂಭವಾಗ್ತಿವೆ. ಈ ವಿವಾದ ಮತ್ತೆಲ್ಲಿಗೆ ಹೋಗಿ ತಲುಪಲಿದೆ ಅನ್ನೋದನ್ನ ಕಾದು ನೋಡಬೇಕಿದೆ.
Live Tv
[brid partner=56869869 player=32851 video=960834 autoplay=true]
ಹುಬ್ಬಳ್ಳಿ: ಬೆಂಗಳೂರಿಗೆ ಸೀಮಿತವಾಗಿದ್ದ ಈದ್ಗಾ ಮೈದಾನ ವಿವಾದ ಈಗ ನಿಧಾನವಾಗಿ ರಾಜ್ಯವ್ಯಾಪಿ ಹಬ್ಬುತ್ತಿದ್ಯಾ ಎಂಬ ಪ್ರಶ್ನೆ ಎದುರಾಗಿದೆ. ಹುಬ್ಬಳ್ಳಿಯ ಚೆನ್ನಮ್ಮ ವೃತ್ತದ ಬಳಿ ಇರುವ ಈದ್ಗಾ ಮೈದಾನ ಮತ್ತೆ ಮುನ್ನೆಲೆಗೆ ಬಂದಿದೆ. ಇದರಿಂದ ಇಷ್ಟು ದಿನ ತಣ್ಣಗಾಗಿದ್ದ ಹುಬ್ಬಳ್ಳಿ ಈದ್ಗಾ ಮೈದಾನದ ವಿವಾದ ಮತ್ತೆ ಪುಟಿದೇಳುವ ಲಕ್ಷಣಗಳು ಗೋಚರವಾಗುತ್ತಿವೆ.
ವಿವಾದದ ಕೇಂದ್ರ ಬಿಂದುವಾಗಿರುವ ಈ ಸ್ಥಳದಲ್ಲಿ ಇದೇ ಮೊದಲ ಬಾರಿಗೆ ಗಣೇಶ ಪ್ರತಿಷ್ಠಾಪನೆ ಮಾಡಲು ಚಿಂತನೆ ನಡೆದಿದೆ. ರಾಣಿ ಚೆನ್ನಮ್ಮ ಈದ್ಗಾ ಮೈದಾನ ಗಜಾನನ ಉತ್ಸವ ಸಮಿತಿ ಈ ಮೈದಾನದಲ್ಲಿ ಗಣೇಶ ಉತ್ಸವಕ್ಕೆ ಅನುಮತಿ ನೀಡುವಂತೆ ಪಾಲಿಕೆ ಆಯುಕ್ತರಿಗೆ ಮನವಿ ನೀಡಿದೆ.
ಈದ್ಗಾ ಮೈದಾನದಲ್ಲಿ ವರ್ಷದಲ್ಲಿ ಎರಡು ಬಾರಿ ನಮಾಜ್ ಮತ್ತು ಎರಡು ಬಾರಿ ರಾಷ್ಟ್ರ ಧ್ವಜ ಹಾರಿಸಲು ಅವಕಾಶವಿದೆ. ಉಳಿದ ದಿನಗಳಲ್ಲಿ ಕಾರ್ ಪಾರ್ಕಿಂಗ್‌ಗೆ ಸ್ಥಳವಾಗಿ ಮಾರ್ಪಡಿಸಲಾಗಿದೆ. ಆದರೆ ಈಗ ಏಕಾಏಕಿ ಇದೇ ಸ್ಥಳದಲ್ಲಿ ಗಣೇಶ ಪ್ರತಿಷ್ಠಾಪನೆಗೆ ಒತ್ತಾಯ ಕೇಳಿಬಂದಿದೆ. ಗಣೇಶೋತ್ಸವ ಆಚರಣೆಗೆ ಸಂಬಂಧಿಸಿ ಚರ್ಚಿಸಲು ಆ.15ರಂದು ಸಭೆಯನ್ನು ಕರೆಯಲಾಗಿದೆ.
ಸ್ವಾತಂತ್ರ್ಯ ಪೂರ್ವದಲ್ಲಿ ಮನೆ ಮನೆಯಲ್ಲಿ ಗಣೇಶೋತ್ಸವ ಆಚರಿಸಿಕೊಂಡು ಬರಲಾಗುತ್ತಿತ್ತು. ಸ್ವಾತಂತ್ರ್ಯ ಹೋರಾಟದ ಸಮಯದಲ್ಲಿ ಗಣೇಶ ವಿಗ್ರಹವನ್ನು ಸಾರ್ವಜನಿಕವಾಗಿ ಬಾಲಗಂಗಾಧರ ತಿಲಕರು ಆಚರಿಸಲು ಶುರುಮಾಡಿದ್ದರು. ಈಗ ಸ್ವಾತಂತ್ರ್ಯ ಉತ್ಸವದ ಅಮೃತ ಮಹೋತ್ಸವದಲ್ಲಿರುವ ಕಾರಣ ಈ ವರ್ಷದಿಂದ ಹುಬ್ಬಳ್ಳಿಯ ರಾಣಿ ಚೆನ್ನಮ್ಮ ಸರ್ಕಲ್‌ನಲ್ಲಿರುವ ಈದ್ಗಾ ಮೈದಾನದಲ್ಲಿ ಗಣೇಶನ ವಿಗ್ರಹ ಪ್ರತಿಷ್ಠಾಪಿಸಿ ಸಾಂಸ್ಕೃತಿಕ ಕಾರ್ಯಕ್ರಮ ಮಾಡಲು ಮುಂದಾಗಿದ್ದೇವೆ. ಹೀಗಾಗಿ ಗಣೇಶೋತ್ಸವ ಆಚರಣೆಗೆ ಅವಕಾಶ ಮಾಡಿಕೊಡಬೇಕೆಂದು ವಿನಂತಿಸಿಕೊಳ್ಳುತ್ತೇವೆ ಎಂದು ಹಿಂದೂ ಸಂಘಟನೆಗಳು ಪಾಲಿಕೆಯಲ್ಲಿ ಮನವಿ ಮಾಡಿವೆ.
Live Tv
[brid partner=56869869 player=32851 video=960834 autoplay=true]
ಮುಂಬೈ: ಗಣಪತಿ ಮೋದಕ ಪ್ರಿಯ ಎಂಬುದು ಪುರಾಣದಲ್ಲೇ ಉಲ್ಲೇಖವಾಗಿದೆ. ಹೀಗಾಗಿ ಗಣೇಶ ಚತುರ್ಥಿಯಂದು (Ganesh festival) ವಿವಿಧ ರೀತಿಯ ಮೋದಕಗಳನ್ನು ತಯಾರಿಸುವುದು ಸಾಮಾನ್ಯ. ಆದರೆ ಈ ಮೋದಕದ ಬೆಲೆಯನ್ನು ಕೇಳಿದವರು ಆಶ್ಚರ್ಯವಾಗುವುದರ ಜೊತೆಗೆ ವಿಶೇಷತೆ ಏನು ಎಂದು ಪ್ರಶ್ನೆ ಮಾಡುತ್ತಿದ್ದಾರೆ.
ಮಹಾರಾಷ್ಟ್ರದಲ್ಲಿ ಗಣೇಶ ಹಬ್ಬದ ಸಂಭ್ರಮ ಇನ್ನೂ ಮುಗಿದಿಲ್ಲ. ಸುಮಾರು 10 ದಿನಗಳ ಕಾಲ ಗಣೇಶ ಚತುರ್ಥಿ ಸಂಭ್ರಮ, ಹಾಡು, ಪೂಜೆ ಇದ್ದೇ ಇರುತ್ತದೆ. ಇದೀಗ ಈ ವರ್ಷ ನಾಸಿಕ್‌ನಲ್ಲಿರುವ ಒಂದು ಸಿಹಿತಿಂಡಿಯ ಅಂಗಡಿಯಲ್ಲಿ ಈ ಮೋದಕ ವಿಶೇಷವಾಗಿ ಗ್ರಾಹಕರನ್ನು ಸೆಳೆಯುತ್ತಿದೆ. ಮೋದಕ ಎಷ್ಟು ದುಬಾರಿಯೆಂದರೆ, ಒಂದು ಕೆಜಿ ಮೋದಕದ ಬೆಲೆ ಬರೋಬ್ಬರಿ 12,000 ರೂಪಾಯಿ ಆಗಿದೆ. ಇದನ್ನೂ ಓದಿ: ಪಂಜಾಬ್ ಸಿಎಂ ಚರಣ್‍ಜಿತ್ ಸಿಂಗ್ ಛನ್ನಿ ಮೇಲೆ 2018ರಲ್ಲಿ ಮೀಟೂ ಆರೋಪ!
Mumbai | Ganesh idol of Mumbaicha Raja Mandal in Ganesh Galli being taken for immersion pic.twitter.com/fn2FQiM5ax
ಮೋದಕದ ಬಗ್ಗೆ ಪ್ರತಿಕ್ರಿಯೆ ನೀಡಿದ ಅಂಗಡಿ ಮಾಲೀಕ ದೀಪಕ್ ಚೌಧರಿ, ಈ ಬಂಗಾರದ ಮೋದಕಕ್ಕೆ ಒಳ್ಳೆಯ ಪ್ರತಿಕ್ರಿಯೆ ಬಂದಿದೆ. ಭರ್ಜರಿ ಮಾರಾಟವಾಗುತ್ತಿದೆ. ಉಳಿದ 25 ವಿಧದ ಮೋದಕಕ್ಕಿಂತಲೂ ಇದೇ ಸಿಕ್ಕಾಪಟೆ ಸೇಲ್ ಆಗುತ್ತಿದೆ ಎಂದಿದ್ದಾರೆ. ಇದನ್ನೂ ಓದಿ: ರಸ್ತೆ ಬದಿಯ ಹೋಟೆಲ್‍ನಲ್ಲಿ ಟೀ ಸವಿದ ಸಿಎಂ-ವೀಡಿಯೋ ವೈರಲ್
ಗಣಪ ಮೋದಕ ಪ್ರಿಯ ಎಂಬುದು ಪುರಾಣದಲ್ಲೇ ಉಲ್ಲೇಖವಾಗಿದೆ. ಗಣೇಶ ಚತುರ್ಥಿಯಂದು ವಿವಿಧ ರೀತಿಯ ಮೋದಕಗಳನ್ನು ತಯಾರಿಸುವುದು ಸಾಮಾನ್ಯ. ಗಣೇಶನಿಗಾಗಿ ಕೇಸರಿ, ಕಾಜು, ಮೋತಿಚೂರ್ ಮತ್ತು ಖೋಯಾ ಮೋದಕಗಳು ತಯಾರಾಗುತ್ತವೆ. ಆದರೆ ಸಾಗರ್ ಸ್ವೀಟ್ಸ್ ಎಂಬ ಅಂಗಡಿ ಮಾರುತ್ತಿರುವ ಮೋದಕದ ಹೆಸರು ಗೋಲ್ಡನ್ ಮೋದಕ (Golden Modaks). ಈ ಅಂಗಡಿಯಲ್ಲಿ ಸುಮಾರು 26 ವಿಧದ ಮೋದಕಗಳನ್ನು ತಯಾರಿಸಿ ಮಾರಾಟ ಮಾಡುತ್ತಿದ್ದು, ಅದರಲ್ಲಿ ಬಂಗಾರದ ಮೋದಕ ಹೆಚ್ಚಿನ ಹಣ ಗಳಿಸುತ್ತಿದೆ. ಈ ಬಂಗಾರದ ಮೋದಕವನ್ನು ಜನರು ತುಂಬ ಖುಷಿಯಿಂದ ಖರೀದಿಸುತ್ತಿದ್ದಾರೆ. ಬೆಳ್ಳಿ ಮೋದಕವೂ ಸಹ ಈ ಅಂಗಡಿಯಲ್ಲಿ ಮಾರಾಟಕ್ಕಿದ್ದು, ಅದರ ಬೆಲೆ ಕೆಜಿಗೆ 1460 ರೂಪಾಯಿ ಆಗಿದೆ.
ಚಿಕ್ಕಬಳ್ಳಾಪುರ: ನಾಡಹಬ್ಬ ದಸರಾ ಆಚರಣೆ ಮಾದರಿಯಲ್ಲೇ ಸರಳವಾಗಿ ಗಣೇಶೋತ್ಸವ ಆಚರಣೆ ಮಾಡಬೇಕು ಅಂತ ಚಿಕ್ಕಬಳ್ಳಾಪುರದಲ್ಲಿ ಆರೋಗ್ಯ ಸಚಿವ ಡಾ ಕೆ. ಸುಧಾಕರ್ ಹೇಳಿದರು.
ಸಿಎಂ ಹಾಗೂ ಅಧಿಕಾರಿಗಳ ಜೊತೆ ಚಿಕ್ಕಬಳ್ಳಾಪುರ ಜಿಲ್ಲಾಡಳಿತ ಭವನದಿಂದಲೇ ವೀಡಿಯೋ ಸಂವಾದದಲ್ಲಿ ಭಾಗಿಯಾಗಿದ್ದ ಸಚಿವ ಸುಧಾಕರ್ ಅವರು ವಿಡಿಯೋ ಸಂವಾದದ ನಂತರ ಮಾಧ್ಯಮಗಳೊಂದಿಗೆ ಮಾತನಾಡಿದರು. ದಸರಾ ವನ್ನ ಸರಳ ಅಚರಿಸಬೇಕು ಅಂತ ಸಿಎಂ ತೀರ್ಮಾನ ತೆಗೆದುಕೊಂಡಿದ್ದಾರೆ. ಅದೇ ರೀತಿ ಗಣೇಶನ ಹಬ್ಬ ಸಹ ಸರಳ ಗಣೇಶ ಉತ್ಸವ ಆಚರಣೆ ಮಾಡಲು ತೀರ್ಮಾನಿಸಿಲಾಗಿದೆ ಎಂದಿದ್ದಾರೆ. ಇದನ್ನೂ ಓದಿ: ಷರತ್ತುಬದ್ಧ ನಿಯಮಗಳೊಂದಿಗೆ ಗಣೇಶೋತ್ಸವಕ್ಕೆ ಅನುಮತಿ
ಈ ಸಂಬಂಧ ಸಾಕಷ್ಟು ಚರ್ಚೆಯಾಗಿದ್ದು, 4 ಅಡಿಗಿಂತ ಕಡಿಮೆ ಎತ್ತರ ಗಣೇಶ ಮೂರ್ತಿ ಪ್ರತಿಷ್ಟಾಪನೆಗೆ ಅವಕಾಶ ನೀಡಲಾಗಿದೆ. ಗರಿಷ್ಟ 5 ದಿನ ಪ್ರತಿಷ್ಟಾಪನೆಗೆ ಅವಕಾಶವಿದೆ.ವಿಸರ್ಜನೆ ವೇಳೆ ನಿಗದಿತ ಮಂದಿಯಷ್ಟೇ ಭಾಗವಹಿಸಬೇಕು. ಯಾವುದೇ ಮೆರವಣಿಗೆಗೆ ಅವಕಾಶ ಇಲ್ಲ. ಆರ್ಕೆಸ್ಟ್ರಾ, ಡಿಜೆಗೆ ಅನುಮತಿ ಇಲ್ಲ. ಪೂಜೆ ವೇಳೆ ಒಮ್ಮೆ 20 ಮಂದಿಯಷ್ಟೇ ಭಾಗವಹಿಸಬೇಕು. ದೈಹಿಕ ಅಂತರ ಕಾಪಾಡಿಕೊಳ್ಳಬೇಕು, ಸ್ಯಾನಿಟೈಸೇಷನ್ ಮಾಡಬೇಕು ಎಂದು ಸೂಚಿಸಲಾಗಿದೆ. ಇದನ್ನೂ ಓದಿ: ಬೆಂಗಳೂರಿಗೆ ಆಗಮಿಸಿದ ರಕ್ಷಣಾ ಸಚಿವ ರಾಜ್‍ನಾಥ್ ಸಿಂಗ್
ಗಣೇಶ ಪ್ರತಿಷ್ಠಾಪನಾ ಸಂಘಟಕರು ಸಮಿತಿಯವರಿಗೆ ಕಡ್ಡಾಯವಾಗಿ ವ್ಯಾಕ್ಸಿನ್ ಹಾಗೂ ಟೆಸ್ಟಿಂಗ್ ಆಗಿರಬೇಕು. ಈ ಎಲ್ಲಾ ಪ್ರಮುಖ ಮಾರ್ಗಸೂಚಿಗಳ ಮೂಲಕ ಕೋವಿಡ್ ಮಾರ್ಗಸೂಚಿಗಳನ್ನ ಕಡ್ಡಾಯವಾಗಿ ಪಾಲಿಸಬೇಕು. ಈ ಎಲ್ಲಾ ಮಾರ್ಗಸೂಚಿಗಳ ಅನ್ವಯ ಗಣೇಶೋತ್ಸವ ವನ್ನ ಸರಳವಾಗಿ ಆಚರಿಸಿಬೇಕು. ಕೋವಿಡ್ ಮುನ್ನೆಚ್ಚರಿಕೆಗಳನ್ನ ಪಾಲನೆ ಮಾಡಬೇಕು ಅಂತ ಸಚಿವ ಸುಧಾಕರ್ ತಿಳಿಸಿದರು.
ಬೆಂಗಳೂರು: ಷರತ್ತುಬದ್ಧ ನಿಯಮಗಳೊಂದಿಗೆ ಗಣೇಶೋತ್ಸವ ಆಚರಣೆಗೆ 5 ದಿನಗಳ ಅನುಮತಿ ನೀಡಿಲಾಗಿದೆ. ಷರತ್ತಿನ ಅನುಮತಿಯೊಂದಿಗೆ ರಾಜ್ಯದಲ್ಲಿ ಗಣೇಶ ಪ್ರತಿಷ್ಠಾಪನೆಗೆ ಸಿಎಂ ಬಸವರಾಜ್ ಬೊಮ್ಮಾಯಿ ನೇತೃತ್ವದ ಸಭೆಯಲ್ಲಿ ತೀರ್ಮಾನಿಸಲಾಗಿದೆ.
ಈ ಸಂಬಂಧ ಮಾಧ್ಯಮದವರೊಂದಿಗೆ ಮಾತನಾಡಿದ ಕಂದಾಯ ಸಚಿವ ಆರ್ ಅಶೋಕ್, ಮೂರು ದಿನದ ಗಣೇಶ ಹಬ್ಬಕ್ಕೆ ಅನುಮತಿ ನೀಡಲಾಗಿದೆ. ಮೆರವಣಿಗೆ, ಮನರಂಜನಾ ಕಾರ್ಯಕ್ರಮಕ್ಕೆ ಅವಕಾಶ ಇಲ್ಲ. ಬೀದಿ ಬೀದಿಗಳಲ್ಲಿ ಗಣೇಶ ಕೂರಿಸಲು ಅನುಮತಿ ಇಲ್ಲ. ಕೆರೆಗಳಲ್ಲಿ ಗಣೇಶ ಮೂರ್ತಿ ವಿಸರ್ಜನೆ ಮಾಡುವಂತಿಲ್ಲ. ನಿಗದಿ ಮಾಡಿದ ಸ್ಥಳ, ಟ್ಯಾಂಕ್‍ಗಳಲ್ಲಿ ಮೂರ್ತಿ ವಿಸರ್ಜನೆ ಗುಂಪು ಸೇರದಂತೆ ನಿರ್ಬಂಧ ಹೇರಲಾಗಿದೆ. ಬೆಂಗಳೂರಿನಲ್ಲಿ ಬಿಬಿಎಂಪಿಗೆ ಹಬ್ಬದಲ್ಲಿ ನಿಯಮ ಪಾಲನೆಯ ಉಸ್ತುವಾರಿ ಜಿಲ್ಲಾಡಳಿತಗಳಿಂದ ಖಡಕ್ ಕಣ್ಗಾವಲಿಗೆ ಸೂಚನೆ ನೀಡಲಾಗಿದೆ.
ಅನುಮತಿ ಕೊಟ್ಟ ಸ್ಥಳಗಳು, ಸರ್ಕಾರಿ, ಖಾಸಗಿ ಖಾಲಿ ಜಾಗ, ಮೈದಾನಗಳಲ್ಲಿ ಮಾತ್ರ ಗಣೇಶ ಪ್ರತಿಷ್ಠಾಪನೆಗೆ ಅವಕಾಶ ನೀಡಲಾಗಿದೆ. ದೇವಸ್ಥಾನಗಳಲ್ಲಿ ಗಣೇಶ ಮೂರ್ತಿಗಳ ಪ್ರತಿಷ್ಠಾಪನೆಗೆ ಆದ್ಯತೆ ನೀಡಲಾಗಿದೆ. ದೇವಸ್ಥಾನ ಮತ್ತು ಮನೆಗಳಲ್ಲಿ ಹೊರತುಪಡಿಸಿ ಸಾರ್ವಜನಿಕವಾಗಿ ಆಚರಣೆಗೆ ಹಲವು ಷರತ್ತುಗಳನ್ನು ಸರ್ಕಾರ ಹಾಕಿದೆ.
ಸಭೆಯ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಕಂದಾಯ ಸಚಿವ ಅಶೋಕ್, ಗಣೇಶ ಮೂರ್ತಿಯನ್ನು ಐದು ದಿನದೊಳಗೆ ವಿಸರ್ಜನೆ ಮಾಡಬೇಕು. ನಗರಗಳಲ್ಲಿ ವಾರ್ಡ್ ಗೆ ಒಂದು ಮಾತ್ರ ಗಣೇಶ ಮೂರ್ತಿ ಇಡಬಹುದು. ಹಳ್ಳಿಗಳಲ್ಲಿ ಸ್ಥಳೀಯಾಡಳಿತದ ಅನುಮತಿಯ ಮೇರೆಗೆ ಮೂರ್ತಿ ಪ್ರತಿಷ್ಠೆ ಮಾಡಬೇಕು ಎಂದರು. ಕೋವಿಡ್ ಪಾಸಿಟಿವಿಟಿ ರೇಟ್ ಶೇ.2ಕ್ಕಿಂತ ಕಡಿಮೆ ಇದ್ದಲ್ಲಿ ಮಾತ್ರ ಅವಕಾಶ ನೀಡಲಾಗುವುದು. ಪಾಸಿಟಿವಿಟಿ ದರ ಶೇ.2ಕ್ಕಿಂತ ಹೆಚ್ಚಿರುವ ಕಡೆಗಳಲ್ಲಿ ಗಣೇಶೋತ್ಸವ ನಡೆಸಲು ಅವಕಾಶ ನೀಡುವುದಲ್ಲ. ಗಣೇಶ ಮೂರ್ತಿ ಪ್ರತಿಷ್ಠಾಪಿಸುವ ಸ್ಥಳಗಳಲ್ಲಿ ಕೋವಿಡ್ ಲಸಿಕಾ ಕ್ಯಾಂಪ್ ನಡೆಸಲಾಗುವುದು. 50 ಅಡಿಗಿಂತ ಹೆಚ್ಚು ಪೆಂಡಾಲ್ ಹಾಕುವಂತಿಲ್ಲ ಎಂದು ಸಚಿವ ಅಶೋಕ್ ಹೇಳಿದರು. ಇದನ್ನೂ ಓದಿ: ಗಣೇಶೋತ್ಸವಕ್ಕೆ 5 ದಿನ ಅವಕಾಶ ಕೊಟ್ಟ ಸರ್ಕಾರ
ಗಣೇಶೋತ್ಸವಕ್ಕೆ ಸರ್ಕಾರದ ಷರತ್ತುಗಳು ಹೀಗಿವೆ
– ದೇವಸ್ಥಾನ, ಮನೆಗಳಲ್ಲಿ ಅಥವಾ ಸರ್ಕಾರಿ, ಖಾಸಗಿ ಸಾರ್ವಜನಿಕ ಬಯಲು ಪ್ರದೇಶಗಳಲ್ಲಿ ವಿಗ್ರಹ ಪ್ರತಿಷ್ಠಾಪನೆ
– ಸಾರ್ವಜನಿಕ ಸ್ಥಳಗಳಲ್ಲಿ ನಾಲ್ಕು ಅಡಿ ಎತ್ತರ ಹಾಗೂ ಮನೆಯೊಳಗೆ ಎರಡು ಅಡಿ ಎತ್ತರದ ಗಣೇಶ ಮೂರ್ತಿಗಳಿಗೆ ಅನುಮತಿ ನೀಡಲಾಗಿದೆ.
– ಗಣೇಶೋತ್ಸವ ಸಮಿತಿಗಳು, ಮಂಡಳಿಗಳು ಮುನಿಸಿಪಲ್ ಕಾರ್ಪೋರೇಷನ್, ಸ್ಥಳೀಯ ಆಡಳಿತದಿಂದ ಪೂರ್ವಾನುಮತಿ ಪಡೆಯಬೇಕು.
– ಒಂದು ನಗರ ಪುದೇಶಗಳಲ್ಲಿ ವಾರ್ಡಿಗೆ ಒಂದರಂತೆ ಸಾರ್ವಜನಿಕ ಗಣೇಶೋತ್ಸವಕ್ಕೆ ಅನುಮತಿ
– ಗಣೇಶ ಆಚರಣೆಯನ್ನು ಗರಿಷ್ಠ 5 ದಿನಗಳಿಗಿಂತ ಹೆಚ್ಚಿನ ದಿನ ಆಚರಿಸುವಂತಿಲ್ಲ
– ಸ್ಥಳಗಳಲ್ಲಿ 20 ಜನಕ್ಕೆ ಸೀಮಿತವಾದ ಆವರಣ ನಿರ್ಮಿಸುವುದು, ಒಮ್ಮೆಲೆ 20 ಕ್ಕಿಂತ ಹೆಚ್ಚಿನ ಜನ ಸೇರದಂತೆ ಭಕ್ತಾಧಿಗಳಿಗೆ ಅನುವು ಮಾಡುವುದು.
– ಆಯೋಜಕರು ಕೋವಿಡ್ ನೆಗೆಟಿವ್ ರಿಪೋರ್ಟ್ ಮತ್ತು ಲಸಿಕೆ ಪಡೆದಿರುವ ಬಗ್ಗೆ ಪ್ರಮಾಣ ಪತ್ರ ಹೊಂದಿರುವುದು ಕಡ್ಡಾಯ
– ಗಣೇಶ ಆಚರಣೆಯ ಆಯೋಜಿತ: ಸ್ಥಳಗಳಲ್ಲಿ ಸ್ಥಳೀಯ ಮಟ್ಟದಲ್ಲಿ ಆಯೋಜಕರು ಲಸಿಕಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಬೇಕು
– ಸಾರ್ವಜನಿಕರಿಗೆ ಹಾಗೂ ವಾಹನ ಸಂಚಾರಕ್ಕೆ ಯಾವುದೇ ಅಡ್ಡಿಯಾಗಬಾರದು
– ಯಾವುದೇ ರೀತಿ ಸಾಂಸ್ಕøತಿಕ, ಸಂಗೀತ, ನೃತ್ಯ, ಡಿ.ಜೆಗಳಂಥ ಮನರಂಜನಾ ಕಾರ್ಯಕ್ರಮಗಳಿಗೆ ಅವಕಾಶವಿಲ್ಲ
– ಗಣೇಶ ಮೂರ್ತಿಗಳನ್ನು ತರುವಾಗ ಹಾಗೂ ವಿಸರ್ಜಿಸುವಾಗ ಮೆರವಣಿಗೆಗಳಿಗೆ ಸಂಪೂರ್ಣ ನಿಬರ್ಂಧ
– ಮಹಾನಗರ ಪಾಲಿಕೆ, ಜಿಲ್ಲಾಡಳಿತ, ಹತ್ತಿರದ ಸ್ಥಳೀಯ ಸಂಸ್ಥೆಗಳ, ಕರ್ನಾಟಕ ರಾಜ ಮಾಲಿನ್ಯ ನಿಯಂತ್ರಣ ಮಂಡಳಿ ವತಿಯಿಂದ ಈಗಾಗಲೇ ನಿರ್ಮಿಸಲಾದ ಹೊಂಡ ಅಥವಾ ಮೂಬೈಲ್ ಟ್ಯಾಂಕ್ ಗಳಲ್ಲಿ ಅಥವಾ ಕೃತಕ ವಿಸರ್ಜನಾ ಟ್ಯಾಂಕರ್‍ಗಳಲ್ಲಿ ಮೂರ್ತಿಗಳನ್ನು ವಿಸರ್ಜಿಸಬೇಕು.
– ದೇವಸ್ಥಾನ, ಸಾರ್ವಜನಿಕ ಸ್ಥಳಗಳಲ್ಲಿ ದಿನನಿತ್ಯ ಸ್ಯಾನಿಟೈಸೇಷನ್ ಮಾಡಬೇಕು
– ಸಾರ್ವಜನಿಕ ದರ್ಶನಕ್ಕಾಗಿ ಆಗಮಿಸುವ ಭಕ್ತಾಧಿಗಳಿಗೆ ಸ್ಯಾನಿಟೈಸರ್ ಹಾಗೂ ಥರ್ಮಲ್ ಟ್ರೈನಿಂಗ್ ವ್ಯವಸ್ಥೆ ಕಲ್ಪಿಸಬೇಕು
– ಭಕ್ತಾಧಿಗಳಿಗೆ 6 ಅಡಿ ಸಾಮಾಜಿಕ ಅಂತರ, ಮಾಸ್ಕ್ ಕಡ್ಡಾಯವಾಗಿದೆ.
– ಬೀದಿ ಬೀದಿಗಳಲ್ಲಿ ಗಣೇಶ ಕೂರಿಸಲು ಅನುಮತಿ ಇಲ್ಲ
– ವಾರ್ಡ್‍ಗೊಂದು, ಗ್ರಾಮಕ್ಕೊಂದು ಗಣೇಶ ಪ್ರತಿಷ್ಠಾಪನೆಗೆ ಅನುಮತಿ ನೀಡಲಾಗಿದೆ
– ಕೇರಳ, ಮಹಾರಾಷ್ಟ್ರ ಗಡಿ ಜಿಲ್ಲೆಗಳಲ್ಲಿ, ತಾಲ್ಲೂಕುಗಳಲ್ಲಿ ಪಾಸಿಟಿವಿಟಿ ದರ 2% ಕ್ಕಿಂತ ಕಮ್ಮಿ ಇದ್ರೆ ಮಾತ್ರ ಹಬ್ಬಕ್ಕೆ ಅವಕಾಶ
ಬೆಂಗಳೂರು: ಸಾರ್ವಜನಿಕ ಗಣೇಶೋತ್ಸವಕ್ಕೆ ಸರ್ಕಾರ 5 ದಿನಗಳ ಷರತ್ತುಬದ್ಧ ಅನುಮತಿ ನೀಡಿದೆ. ಇಂದು ಸಂಜೆ ಸರ್ಕಾರದಿಂದ ಅಧಿಕೃತ ಮಾರ್ಗಸೂಚಿ ಘೋಷಣೆ ಆಗುವುವ ಸಾಧ್ಯತೆ ಇದೆ.
ಷರತ್ತಿನ ಅನುಮತಿ ರಾಜ್ಯದಲ್ಲಿ 5 ದಿನಗಳ ಕಾಲ ಗಣೇಶ ಪ್ರತಿಷ್ಠಾಪನೆಗೆ ಸಿಎಂ ಬಸವರಾಜ ಬೊಮ್ಮಾಯಿ ನೇತೃತ್ವದ ಸಭೆಯಲ್ಲಿ ತೀರ್ಮಾನಿಸಲಾಗಿದೆ. ಗಣೇಶೋತ್ಸವ ಮೆರವಣಿಗೆ ಅವಕಾಶವಿಲ್ಲ. 30 ಜನರ ಮಿತಿ ನಿಗಧಿಪಡಿಸಿದ್ದು, ಅನುಮತಿ ಪಡೆದ ಸ್ಥಳಗಳಲ್ಲಿ ಮಾತ್ರ ಗಣೇಶ ಪ್ರತಿಷ್ಠಾಪನೆಗೆ ಅವಕಾಶ. ವಾರ್ಡ್‍ಗೆ ಒಂದು ಅಥವಾ ಗ್ರಾಮಕ್ಕೊಂದು ಗಣಪತಿ ಕೂರಿಸಲು ಅವಕಾಶ ನೀಡಿದೆ. ಇದನ್ನೂ ಓದಿ: ಗಣೇಶೋತ್ಸವಕ್ಕೆ ಅವಕಾಶ ಕೊಡಿ, ನಮ್ಮ ಬದುಕು ಬೀದಿಗೆ ಬಂದಿದೆ: ವ್ಯಾಪಾರಿಗಳ ಅಳಲು
ಸರ್ಕಾರ ನಿಗದಿತ ಸ್ಥಳದಲ್ಲಿ ಭಕ್ತರು ಸೇರಲು ಅವಕಾಶ ನೀಡಿದೆ. ಗಣೇಶೋತ್ಸವದಲ್ಲಿ ಮನರಂಜನಾ ಕಾರ್ಯಕ್ರಮಗಳಾದ ಆರ್ಕೆಸ್ಟ್ರಾ, ಡಿಜೆ ಅದ್ಧೂರಿ ಮೆರವಣಿಗೆ ಅವಕಾಶ ನಿರಾಕರಿಸಲಾಗಿದ್ದು, ನಿಗದಿತ ಸಂಖ್ಯೆಯಲ್ಲಿ ಭಕ್ತರು ಸೇರಲು ಅವಕಾಶ ಕಲ್ಪಿಸಿದೆ. ಕೆರೆಗಳಲ್ಲಿ ಗಣೇಶ ವಿರ್ಸಜನೆಗೆ ನಿರ್ಬಂಧ ಹೆರಲಾಗಿದ್ದು, ಬಿಬಿಎಂಪಿ ಸೂಚಿಸಿದ ಸ್ಥಳದಲ್ಲೇ ವಿರ್ಸಜನೆ ಅವಕಾಶ ನೀಡಲಾಗಿದೆ.
ಗಣೇಶ ಪ್ರತಿಷ್ಠಾಪಿಸಿದ ಸ್ಥಳದಲ್ಲೆ ವಿಸರ್ಜನೆಗೆ ಅವಕಾಶ ಮಾಡಲಾಗಿದ್ದು, ಮೊಬೈಲ್ ಟ್ಯಾಂಕರ್ ನಲ್ಲಿ ವಿಸರ್ಜನೆಗೆ ಪ್ಲ್ಯಾನ್ ಮಾಡಲಾಗಿದೆ. ಇದರೊಂದಿಗೆ ಗಣೇಶೋತ್ಸವ ಮುಗಿಯುವವರೆಗೆ ರಾಜ್ಯದಲ್ಲಿ ನೈಟ್ ಕರ್ಫ್ಯೂ ಮುಂದುವರಿಸಲು ತೀರ್ಮಾನಿಸಲಾಗಿದೆ. ಇದನ್ನೂ ಓದಿ: ಅಪಘಾತದಲ್ಲಿ ಜೆಡಿಎಸ್ ಕಾರ್ಯಕರ್ತ, ಇಬ್ಬರು ಮಕ್ಕಳು ಸಾವು- ಹೆಚ್‍ಡಿಕೆ ಬೇಸರ