Tag: Ganesh Acharya

  • ಶುಭಾ ಪೂಂಜಾ ಶೂಟಿಂಗ್ ವೇಳೆ ಗೂಂಡಾಗಳ ಎಂಟ್ರಿ: ಚಿತ್ರೀಕರಣ ಕ್ಯಾನ್ಸಲ್

    ಶುಭಾ ಪೂಂಜಾ ಶೂಟಿಂಗ್ ವೇಳೆ ಗೂಂಡಾಗಳ ಎಂಟ್ರಿ: ಚಿತ್ರೀಕರಣ ಕ್ಯಾನ್ಸಲ್

    ಸುಧೀರ್ ಅತ್ತಾರ್ (Sudhir Attar) ನಿರ್ದೇಶನದ ‘ಕೊರಗಜ್ಜ’ (Koragajja) ಸಿನಿಮಾದ ಶೂಟಿಂಗ್ ವೇಳೆ ಲಾಂಗ್ ಹಿಡಿದುಕೊಂಡು ಗೂಂಡಾಗಳು ಎಂಟ್ರಿ ಕೊಟ್ಟಿದ್ದಾರೆ. ಶುಭಾ ಪೂಂಜಾ ಮತ್ತು ಬಾಲಿವುಡ್ ನ ಖ್ಯಾತ ಡಾನ್ಸ್ ಕೊರಿಯೋಗ್ರಾಫರ್ ಗಣೇಶ್ ಆಚಾರ್ಯ ಸೇರಿದಂತೆ ಹಲವರು ಚಿತ್ರೀಕರಣದಲ್ಲಿ ಭಾಗಿಯಾಗಿದ್ದರು. ಈ ವೇಳೆ ತಲ್ವಾರ್ ಹಿಡಿದುಕೊಂಡು ನುಗ್ಗಿದ ತಂಡವು ಚಿತ್ರೀಕರಣಕ್ಕೆ ಅಡ್ಡಿ ಪಡಿಸಿದೆ.

    ಕುದುರೆಮುಖ ಸಮೀಪದ ಕಳಸದಲ್ಲಿ ಹಾಡಿನ ಚಿತ್ರೀಕರಣ ನಡೆಯುತ್ತಿತ್ತು. ಈ ಹಾಡಿನಲ್ಲಿ ಶುಭಾ ಪೂಂಜಾ ಕಾಣಿಸಿಕೊಳ್ಳುತ್ತಿದ್ದರೆ, ಗಣೇಶ್ ಆಚಾರ್ಯ (Ganesh Acharya) ಹಾಡಿಗೆ ಕೊರಿಯೋಗ್ರಫಿ ಮಾಡುತ್ತಿದ್ದರು. ಈ ವೇಳೆ ಏಕಾಏಕಿ ತಲ್ವಾರ್ ಹಿಡಿದುಕೊಂಡು ಗುಂಪು ನುಗ್ಗಿದೆ. ಈ ಸಿನಿಮಾ ಮಾಡದಂತೆ ತಡೆಯುವ ಪ್ರಯತ್ನ ಮಾಡಿದೆ. ಹೀಗೆ ಅನೇಕ ಬಾರಿಯೂ ಅಲ್ಲಲ್ಲಿ ಇಂತಹ ತೊಂದರೆಗಳನ್ನು ಸಿನಿಮಾ ತಂಡ ಎದುರಿಸುತ್ತಿದೆ.

    ಚಿತ್ರದ ನಿರ್ಮಾಪಕ ತ್ರಿವಿಕ್ರಮ್ ಬೆಳ್ತಂಗಡಿ (Trivikram Belthangadi) ಪಬ್ಲಿಕ್ ಟಿವಿ ಡಿಜಿಟೆಲ್ ಜೊತೆ ಮಾತನಾಡಿ, ‘ಕೊರಗಜ್ಜ ಸಿನಿಮಾ ಮಾಡಬಾರದು ಎನ್ನುವುದೇ ಇಂತಹ ಘಟನೆಗಳಿಗೆ ಕಾರಣವಾಗಿದೆ. ದೈವ ನರ್ತಕರು ಎಂದು ಹೇಳಿಕೊಂಡು ಬಂದು ಇಂತಹ ಗಲಾಟೆಯನ್ನು ಮಾಡುತ್ತಿದ್ದಾರೆ. ಮೊನ್ನೆಯೂ ಅದೇ ಆಗಿದೆ. ಸಿನಿಮಾ ಟೀಮ್ ಗೆ ಯಾವುದೇ ತೊಂದರೆ ಆಗಿಲ್ಲ. ಆದರೆ, ಸೆಟ್ ಹಾಳಾಗಿದೆ. ಕೊರಗಜ್ಜನ ಹೆಸರಿನಲ್ಲಿ ಸಿನಿಮಾ ಮಾಡಬಾರದು ಎಂದರೆ ಹೇಗೆ?’ ಅಂತಾರೆ.

     

    ಕೇವಲ ಕಳಸದಲ್ಲಿ ಮಾತ್ರವಲ್ಲ, ಅನೇಕ ಕಡೆಗಳಲ್ಲೂ ಇಂತಹ ತೊಂದರೆಗಳನ್ನು ಎದುರಿಸಿದೆ ಅಂತೆ ಚಿತ್ರತಂಡ. ಎಲ್ಲವನ್ನೂ ನಿಭಾಯಿಸಿಕೊಂಡು ಚಿತ್ರೀಕರಣಕ್ಕೆ ಮುಂದುವರೆಸಿದೆ. ಹಲವು ವರ್ಷಗಳ ನಂತರ ಮತ್ತೆ ಸುಧೀರ್ ಕನ್ನಡದಲ್ಲಿ ಸಿನಿಮಾ ಮಾಡುತ್ತಿದ್ದಾರೆ. ಕಬೀರ್ ಬೇಡಿ, ಶ್ರುತಿ, ಭವ್ಯ ಸೇರಿದಂತೆ ನುರಿತ ತಾರಾ ಬಳಗವೇ ಈ ಸಿನಿಮಾದಲ್ಲಿದೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಲೈಂಗಿಕ ಕಿರುಕುಳ ಪ್ರಕರಣ:ನೃತ್ಯ ನಿರ್ದೇಶಕ ಗಣೇಶ್ ಆಚಾರ್ಯಗೆ ಜಾಮೀನು

    ಲೈಂಗಿಕ ಕಿರುಕುಳ ಪ್ರಕರಣ:ನೃತ್ಯ ನಿರ್ದೇಶಕ ಗಣೇಶ್ ಆಚಾರ್ಯಗೆ ಜಾಮೀನು

    ಬಾಲಿವುಡ್ ನೃತ್ಯ ನಿರ್ದೇಶಕ ಗಣೇಶ್ ಆಚಾರ್ಯ ಕಳೆದ ಎರಡು ವರ್ಷದಿಂದ ಲೈಂಗಿಕ ಕಿರುಕುಳ ಆರೋಪ ಏದುರಿಸುತ್ತಿದ್ದಾರೆ. ಇದೀಗ ಗಣೇಶ್ ಆಚಾರ್ಯ ಅವರಿಗೆ ಜಾಮೀನು ಸಿಕ್ಕಿದೆ ಮುಂಬೈನ ಮೆಜೆಸ್ಟ್ರೇಟ್ ನ್ಯಾಯಾಲಯ ಜಾಮೀನು ಮಂಜೂರು ಮಾಡಿದೆ. ಗಣೇಶ್ ಆಚಾರ್ಯ ವಿರುದ್ಧ 2020ರಲ್ಲಿ ಅವರ ಸಹ ನೃತ್ಯಗಾರ್ತಿಯೊಬ್ಬರು ಲೈಂಗಿಕ ದೌರ್ಜನ್ಯದ ಆರೋಪ ಹೊರಿಸಿ ಅಂಬೋಲಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.

    ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಖ್ಯಾತ ನೃತ್ಯ ನಿರ್ದೇಶಕ ಗಣೇಶ್ ಆಚಾರ್ಯ ಅವರಿಗೆ ಜಾಮೀನು ಸಿಕ್ಕಿದೆ ಮುಂಬೈನ ಮೆಜೆಸ್ಟ್ರೇಟ್ ನ್ಯಾಯಾಲಯ ಜಾಮೀನು ಮಂಜೂರು ಮಾಡಿದೆ. ಗಣೇಶ್ ಆಚಾರ್ಯ ವಿರುದ್ಧ 2020ರಲ್ಲಿ ಅವರ ಸಹ ನೃತ್ಯಗಾರ್ತಿಯೊಬ್ಬರು ಲೈಂಗಿಕ ದೌರ್ಜನ್ಯದ ಆರೋಪ ಹೊರಿಸಿ ಅಂಬೋಲಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಇದನ್ನೂ ಓದಿ: ಡಿಸೆಂಬರ್ ನಲ್ಲಿ ಮದುವೆ ಆಗಲಿದ್ದಾರೆ ತಿಥಿ ಸಿನಿಮಾ ಖ್ಯಾತಿಯ ಪೂಜಾ

    2019-2020ರಲ್ಲಿ ಗಣೇಶ್ ಆಚಾರ್ಯ ತನ್ನನ್ನು ಅವರ ಕಚೇರಿಯಲ್ಲಿ ಭೇಟಿಯಾಗುವಂತೆ ಹೇಳಿದ್ದರು. ಭೇಟಿಯಾಗಲು ಹೋದಾಗಲೆಲ್ಲ ಅಶ್ಲೀಲ ವಿಡಿಯೋಗಳನ್ನು ನೋಡುವಂತೆ ಒತ್ತಾಯಸುತ್ತಿದ್ದ ಎಂದು ದೂರುದಾರೆ ಗಂಭೀರ ಆರೋಪ ಮಾಡಿದ್ದರು. 2022 ಏಪ್ರಿಲ್ ನಲ್ಲಿ ಮುಂಬೈ ಪೊಲೀಸರ ಗಣೇಶ್ ವಿರುದ್ಧ ನ್ಯಾಯಾಲಯಕ್ಕೆ ಚಾರ್ಜ್ ಶೀಟ್ ಸಲ್ಲಿಸಿದ್ದರು.

    ಆದರೆ ಈ ಪ್ರಕರಣದಲ್ಲಿ ಗಣೇಶ್ ಆಚಾರ್ಯ ಅವರನ್ನು ಇದುವರೆಗೂ ಬಂಧಿಸಿಲ್ಲ. ಗುರುವಾರ (ಜೂನ್ 23) ಗಣೇಶ್ ಆಚಾರ್ಯ ಅವರನ್ನು ಮ್ಯಾಜಿಸ್ಟ್ರೇಟ್ ನ್ಯಾಯಾಲಯಕ್ಕೆ ಹಾಜರುಪಡಿಸಿದ ಬಳಿಕ ಜಾಮೀನು ಮಂಜೂರು ಮಾಡಲಾಗಿದೆ. ಮುಂದಿನ ದಿನಗಳಲ್ಲಿ ಈ ಕೇಸ್ ಯಾವ ರೀತಿ ತಿರುವು ಪಡೆಯಲಿದೆ ಅಂತಾ ಕಾದುನೋಡಬೇಕಿದೆ.

    Live Tv

  • ಪೋರ್ನ್ ವಿಡಿಯೋ ನೋಡುವಂತೆ ಒತ್ತಾಯ – ಬಾಲಿವುಡ್ ಡ್ಯಾನ್ಸ್ ಮಾಸ್ಟರ್ ವಿರುದ್ಧ ದೂರು

    ಪೋರ್ನ್ ವಿಡಿಯೋ ನೋಡುವಂತೆ ಒತ್ತಾಯ – ಬಾಲಿವುಡ್ ಡ್ಯಾನ್ಸ್ ಮಾಸ್ಟರ್ ವಿರುದ್ಧ ದೂರು

    ಮುಂಬೈ: ಬಾಲಿವುಡ್‍ನ ನೃತ್ಯ ಸಂಯೋಜಕ ಗಣೇಶ್ ಆಚಾರ್ಯ ಅವರ ವಿರುದ್ಧ 33 ವರ್ಷದ ಮಹಿಳೆ ಕಿರುಕುಳದ ಆರೋಪ ಮಾಡಿದ್ದು, ರಾಷ್ಟ್ರೀಯ ಮಹಿಳಾ ಆಯೋಗಕ್ಕೆ (ಎನ್‍ಸಿಡಬ್ಲ್ಯು)ಗೆ ಪತ್ರ ಬರೆದು ದೂರು ನೀಡಿದ್ದಾರೆ.

    ರಾಷ್ಟ್ರೀಯ ಮಹಿಳಾ ಆಯೋಗದ ಜೊತೆಗೆ ಅಂಬೋಲಿ ಪೊಲೀಸ್ ಠಾಣೆಯಲ್ಲೂ ದೂರು ನೀಡಿದ್ದಾರೆ. ಆಚಾರ್ಯ ಅವರ ಕಚೇರಿಗೆ ಹೋದಾಗಲೆಲ್ಲಾ ಪೋರ್ನ್ ವಿಡಿಯೋಗಳನ್ನು ನೋಡುವಂತೆ ಒತ್ತಾಯಿಸುತ್ತಿದ್ದರು. ಅಲ್ಲದೇ ತನಗೆ ಬರುವ ಆದಾಯದಲ್ಲಿ ಕಮಿಷನ್ ನೀಡಬೇಕು ಎಂದು ಬೇಡಿಕೆ ಇಟ್ಟಿದ್ದರು ಎಂದು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

    ಮುಂಬೈನ ಅಂಧೇರಿಯಲ್ಲಿ ಭಾನುವಾರ ಭಾರತೀಯ ಚಲನಚಿತ್ರ ಮತ್ತು ದೂರದರ್ಶನ ನೃತ್ಯ ಸಂಯೋಜಕರ ಸಂಘ (ಐಎಫ್‍ಟಿಸಿಎ)ದ ಸಮಾರಂಭ ನಡೆದಿತ್ತು. ಅಲ್ಲಿ ಗಣೇಶ್ ಆಚಾರ್ಯ ಮತ್ತು ಇಬ್ಬರು ಮಹಿಳೆಯರು ನನ್ನ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಮಹಿಳೆ ದೂರು ನೀಡಿದ್ದಾರೆ. ಅಷ್ಟೇ ಅಲ್ಲದೇ ಗಣೇಶ್ ಆಚಾರ್ಯ ಜೊತೆಗೆ ಜಯಶ್ರೀ ಕೆಲ್ಕರ್ ಮತ್ತು ಪ್ರೀತಿ ಲಾಡ್ ಎಂಬವರು ಹಲ್ಲೆ ಮಾಡಿರುವುದಾಗಿ ಮಹಿಳೆ ದೂರಿನಲ್ಲಿ ತಿಳಿಸಿದ್ದಾರೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

    ನೃತ್ಯ ಸಂಯೋಜಕ ಸಂಘದ ಸದಸ್ಯೆಯಾಗಿದ್ದು, ಪ್ರಧಾನ ಕಾರ್ಯದರ್ಶಿಯಾಗಿ ಆಯ್ಕೆಯಾದ ಗಣೇಶ್ ಆಚಾರ್ಯ ಆಗಾಗ ಕಚೇರಿಗೆ ಕರೆಯುತ್ತಿದ್ದರು. ಜನವರಿ 26 ರಂದು ಕಚೇರಿಗೆ ಹೋದಾಗ ನೃತ್ಯ ಸಂಯೋಜಕ ಸಂಘದಲ್ಲಿ ಸದಸ್ಯತ್ವ ರದ್ದು ಮಾಡಿಸಿದ್ದಾರೆ. ಅಲ್ಲದೇ ತಮ್ಮ ತಂಡದ ಸದಸ್ಯ ಜಯಶ್ರೀ ಕೇಲ್ಕರ್ ಅವರನ್ನು ಕರೆದು ನನಗೆ ಹೊಡೆಯುವಂತೆ ಹೇಳಿದ್ದರು ಎಂದು ಮಹಿಳೆ ದೂರಿನಲ್ಲಿ ಉಲ್ಲೇಖಿಸಿರುವುದಾಗಿ ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.

    ಸದ್ಯಕ್ಕೆ ಪೊಲೀಸರು ಗಂಭೀರವಲ್ಲದ ಅಪರಾಧ (ಎನ್‍ಸಿ) ದಾಖಲಿಸಿದ್ದು, ತನಿಖೆ ನಡೆಸುತ್ತಿದ್ದಾರೆ. ಈ ಹಿಂದೆ ಹಿರಿಯ ನೃತ್ಯ ಸಂಯೋಜಕಿ ಸರೋಜ್ ಖಾನ್ ಅವರು ಗಣೇಶ್ ಆಚಾರ್ಯ ವಿರುದ್ಧ ಕಿಡಿ ಕಾರಿದ್ದರು. ನೃತ್ಯಗಾರರನ್ನು ದುರಪಯೋಗ ಪಡಿಸಿಕೊಳ್ಳುತ್ತಿದ್ದಾರೆ ಎಂದು ಬಹಿರಂಗವಾಗಿ ಆರೋಪಿಸಿದ್ದರು.

    ಗಣೇಶ್ ಆಚಾರ್ಯ ಅವರು ಯಶ್ ಅಭಿನಯದ ‘ಕೆಜಿಎಫ್’ ಸಿನಿಮಾದ ಹಿಂದಿ ‘ಗಲಿ ಗಲಿ ಮೇ’ ಹಾಡು, ಅಲ್ಲದೇ ಸುದೀಪ್ ಅಭಿನಯದ ‘ಪೈಲ್ವಾನ್’ ಚಿತ್ರದ ಇಂಟ್ರೋ ಹಾಡಿಗೆ ಗಣೇಶ್ ನೃತ್ಯ ಸಂಯೋಜನ ಮಾಡಿದ್ದಾರೆ. ಈ ಮೂಲಕ ಸ್ಯಾಂಡಲ್‍ವುಡ್‍ಗೂ ಗಣೇಶ್ ಪರಿಚಯರಾಗಿದ್ದಾರೆ.