Tag: Gandhi Nagar

  • ಇದಾನಲ್ಲ ಅಮವಾಸ್ಯೆ ತೇಜಸ್ವಿ ಸೂರ್ಯ ಕೇಂದ್ರದಿಂದ ಹಣ ತರಲ್ಲ – ಸಿಎಂ

    ಇದಾನಲ್ಲ ಅಮವಾಸ್ಯೆ ತೇಜಸ್ವಿ ಸೂರ್ಯ ಕೇಂದ್ರದಿಂದ ಹಣ ತರಲ್ಲ – ಸಿಎಂ

    ಬೆಂಗಳೂರು: ಸಂಸದರು ಕೇಂದ್ರದ ಬಳಿ ಕರ್ನಾಟಕಕ್ಕೆ ಕೊಡಬೇಕಾದ ದುಡ್ಡು ಕೇಳಲ್ಲ, ದಕ್ಷಿಣದಲ್ಲಿ ಇದಾನಲ್ಲ ಅಮವಾಸ್ಯೆ ತೇಜಸ್ವಿ ಸೂರ್ಯ (Tejaswi Surya) ಕೂಡ ಕೇಂದ್ರದ ಬಳಿ ಹಣ ಕೇಳಲಿಲ್ಲ ಎಂದು ಸಿಎಂ ಸಿದ್ದರಾಮಯ್ಯ (Siddaramaiah) ವಾಗ್ದಾಳಿ ನಡೆಸಿದರು.

    ಗ್ರೇಟರ್ ಬೆಂಗಳೂರು ಪ್ರಾಧಿಕಾರ, ಬೆಂಗಳೂರು ಕೇಂದ್ರ ನಗರ ಪಾಲಿಕೆ ಹಾಗೂ ಬೆಂಗಳೂರು ಸ್ಮಾರ್ಟ್ ಇನ್ಫ್ರಾಸ್ಟ್ರಕ್ಚರ್ ಲಿಮಿಟೆಡ್ ವತಿಯಿಂದ ಗಾಂಧಿನಗರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿನ ವೈಟ್‌ಟಾಪಿಂಗ್ ಮತ್ತು ಸಮಗ್ರ ರಸ್ತೆ ಅಭಿವೃದ್ಧಿ ಕಾಮಗಾರಿಗಳಿಗೆ ಬಿ.ವಿ.ಕೆ ಐಯ್ಯಂಗಾರ್ ರಸ್ತೆಯ ಆರ್.ಟಿ ಸ್ಟ್ರೀಟ್ ಜಂಕ್ಷನ್‌ನಲ್ಲಿ ಭೂಮಿ ಪೂಜೆ ನೆರವೇರಿಸಿದರು.ಇದನ್ನೂ ಓದಿ: ಡಿಕೆಶಿಯನ್ನು ಭೇಟಿಯಾದ ಕಿರಣ್ ಮಜುಂದಾರ್ ಶಾ – ಉತ್ತಮ ಚರ್ಚೆಯಾಗಿದೆ ಎಂದ ಡಿಸಿಎಂ

    ಬಳಿಕ ಮಾತನಾಡಿದ ಅವರು, ಸಂಸದರು ಕರ್ನಾಟಕಕ್ಕೆ ಕೊಡಬೇಕಾದ ದುಡ್ಡು ಕೇಳಲ್ಲ, ಪಿಸಿ ಮೋಹನ್ ಕೇಳಲಿಲ್ಲ, ಅವನು ಯಾರು ಸೌತ್ ಅಲ್ಲಿ ಇದಾನಲ್ಲ ಅಮಾವಾಸ್ಯೆ ತೇಜಸ್ವಿ ಸೂರ್ಯ ಕೇಂದ್ರದ ಬಳಿ ಹಣ ಕೇಳಲಿಲ್ಲ, ಆಯಮ್ಮ ಶೋಭಾ ಕರಂದ್ಲಾಜೆ ಕೂಡ ಹಣ ತರಲ್ಲ. ಮಂತ್ರಿ ಆಗಿರುವ ಕುಮಾರಸ್ವಾಮಿ ಕೂಡ ಕೇಂದ್ರದ ಬಳಿ ಹಣ ಕೇಳಿಲ್ಲ. ಅದಕ್ಕೆ ಕುಮಾರಸ್ವಾಮಿ ಸೇರಿ ಎಲ್ಲ ಎಂಪಿಗಳನ್ನು ಸೋಲಿಸಿ ಎಂದು ಕರೆ ನೀಡಿದರು.

    ಪ್ರಧಾನಿ ಮೋದಿಗೆ ಕರ್ನಾಟಕದ ಮೇಲೆ ದ್ವೇಷವಿದೆ. ಕೇಂದ್ರ ಸರ್ಕಾರದಿಂದ ರಾಜ್ಯಕ್ಕೆ ಹಣ ಬರಲ್ಲ. ನಾವು ಕೊಟ್ಟ ತೆರಿಗೆ ಹಣವೂ ವಾಪಸ್ ಕೊಡಲ್ಲ. ಕೇಂದ್ರಕ್ಕೆ ತೆರಿಗೆ ರೂಪದಲ್ಲಿ ಒಂದು ರೂಪಾಯಿ ಕೊಡ್ತೇವೆ. ಆದರೆ ನಮಗೆ ಕೇಂದ್ರದಿಂದ 14-15 ಪೈಸೆ ತೆರಿಗೆ ವಾಪಾಸ್ ಬರುತ್ತದೆ ಅಷ್ಟೇ. ಇನ್ನೂ ಬಿಜೆಪಿಯವರು ಕೇಂದ್ರದ ಹಣ ಅಂತಾರೆ. ಬಿಜೆಪಿಯವರು ಜಿಎಸ್‌ಟಿ ಇಳಿಕೆಯನ್ನ ದೀಪಾವಳಿ ಗಿಫ್ಟ್ ಅಂತಾ ಬ್ಯಾನರ್ ಹಾಕಿಕೊಳ್ಳುತ್ತಾರೆ. ಎಂಟು ವರ್ಷ ತೆರಿಗೆ ವಸೂಲಿ ಮಾಡಿ ಈಗ ದೀಪಾವಳಿ ಗಿಫ್ಟ್ ಅಂತೆ. ಯಾವ ದೀಪಾವಳಿ ಗಿಫ್ಟ್ ಅಪ್ಪ ಇದು ಎಂದು ಟಾಂಗ್ ಕೊಟ್ಟರು.

    ಈ ವೇಳೆ ಗಾಂಧಿನಗರ ಕ್ಷೇತ್ರದ ಶಾಸಕರು ಹಾಗೂ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವರಾದ ದಿನೇಶ್ ಗುಂಡೂರಾವ್, ಯೋಜನೆ ಇಲಾಖೆ ಸಚಿವರಾದ ಡಿ. ಸುಧಾಕರ್, ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿಯಾದ ನಸೀರ್ ಅಹ್ಮದ್, ಶಾಸಕರಾದ ವೆಂಕಟೇಶ್, ನಗರಾಭಿವೃದ್ಧಿ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿಯಾದ ತುಷಾರ್ ಗಿರಿನಾಥ್, ಜಿಬಿಎ ಮುಖ್ಯ ಆಯುಕ್ತರಾದ ಮಹೇಶ್ವರ್ ರಾವ್, ಕೇಂದ್ರ ನಗರ ಪಾಲಿಕೆ ಆಯುಕ್ತರಾದ ರಾಜೇಂದ್ರ ಚೋಳನ್ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.ಇದನ್ನೂ ಓದಿ: ದೀಪಾವಳಿ ಹಬ್ಬ | ಪಟ್ಟಕ್ಕಾಗಿ ಕೈ ಶಾಸಕರಿಂದ ಎರಡೂ ಪವರ್ ಸೆಂಟರ್ ಬ್ಯಾಲೆನ್ಸ್‌!

  • ಟಾಯ್ಲೆಟ್ ರೂಂನಿಂದ ವಿಚಾರಣೆಗೆ ಹಾಜರು – ನ್ಯಾಯಾಲಯಕ್ಕೆ ಅವಮಾನ ಮಾಡಿದವನಿಗೆ 1 ಲಕ್ಷ ದಂಡ!

    ಟಾಯ್ಲೆಟ್ ರೂಂನಿಂದ ವಿಚಾರಣೆಗೆ ಹಾಜರು – ನ್ಯಾಯಾಲಯಕ್ಕೆ ಅವಮಾನ ಮಾಡಿದವನಿಗೆ 1 ಲಕ್ಷ ದಂಡ!

    ಗಾಂಧಿನಗರ: ಟಾಯ್ಲೆಟ್ ರೂಂನಲ್ಲಿ ಕುಳಿತು ನ್ಯಾಯಾಲಯದ ವರ್ಚುಯಲ್ ಆಗಿ ಲೈವ್ ಸ್ಟ್ರೀಮಿಂಗ್‌ನಲ್ಲಿ ಹಾಜರಾಗಿದ್ದ ವ್ಯಕ್ತಿಗೆ 1 ಲಕ್ಷ ರೂ. ದಂಡ ವಿಧಿಸಿರುವ ಘಟನೆ ಗುಜರಾತ್‌ನಲ್ಲಿ (Gujarat) ನಡೆದಿದೆ.

    ಜೂನ್ 20ರಂದು ಸಮಾದ್ ಅಬ್ದುಲ್ ರೆಹಮನ್ ಶಾ ಎಂಬ ವ್ಯಕ್ತಿ ಟಾಯ್ಲೆಟ್‌ನಲ್ಲಿ ಕುಳಿತು ಸುಮಾರು 74 ನಿಮಿಷಗಳ ಕಾಲ ನ್ಯಾಯಾಲಯದ ವರ್ಚುಯಲ್ ಹಿಯರಿಂಗ್‌ಗೆ ಹಾಜರಾಗಿದ್ದಾನೆ. ನ್ಯಾಯಾಲಯಕ್ಕೆ ದುರ್ವತನೆ ತೋರಿದ್ದಕ್ಕೆ ಗುಜರಾತ್ ಹೈಕೋರ್ಟ್ (High Court) ಅಬ್ದುಲ್ ರೆಹಮನ್‌ಗೆ 1 ಲಕ್ಷ ರೂ. ದಂಡ ವಿಧಿಸಿ ಆದೇಶ ವಿಧಿಸಿದೆ. ಇದನ್ನೂ ಓದಿ: ಮತ್ತೆ ಸ್ಮಾರ್ಟ್ ಮೀಟರ್ ಹಗರಣ ಕೆದಕಿದ ಬಿಜೆಪಿ – ಸಚಿವ ಜಾರ್ಜ್ ವಿರುದ್ಧ ಖಾಸಗಿ ದೂರು

    ನ್ಯಾಯಮೂರ್ತಿ ನಿರ್ಜರ್.ಎಸ್ ದೇಸಾಯಿ ಅವರ ಪೀಠ ಪ್ರಕರಣವೊಂದರ ವಿಚಾರಣೆ ನಡೆಸುವ ವೇಳೆ ಸಮಾದ್ ಅಬ್ದುಲ್ ರೆಹಮನ್ ಶಾ ದುರ್ವತನೆ ತೋರಿದ್ದಾರೆ. ಈ ಘಟನೆಯ ವೀಡಿಯೋ ಸೋಷಿಯಲ್ ಮೀಡಿಯಾಗಳಲ್ಲಿ ಫುಲ್ ವೈರಲ್ ಆಗಿತ್ತು. ಈ ಕುರಿತು ಕೋರ್ಟ್ ನ್ಯಾಯಾಂಗ ನಿಂದನೆಯ ಸುಮೋಟೋ ಕೇಸ್ ದಾಖಲಿಸುವಂತೆ ಸೂಚನೆ ನೀಡಿತ್ತು. ಇದನ್ನೂ ಓದಿ: ರನ್ಯಾ ರಾವ್ ಗೋಲ್ಡ್ ಸ್ಮಗ್ಲಿಂಗ್ ಕೇಸ್ – ನಟಿಗೆ ಒಂದು ವರ್ಷ ಜೈಲೇ ಗತಿ!

    ಕೇಸ್ ದಾಖಲು ಆದ ಬಳಿಕ ಆರೋಪಿಗೆ ತನ್ನ ತಪ್ಪಿನ ಅರಿವಾಗಿದ್ದು, ನ್ಯಾಯಾಲಯದ ಮುಂದೆ ಕ್ಷಮೆ ಕೇಳಿದ್ದಾನೆ.ನ್ಯಾಯಲಯಕ್ಕೆ ದುರ್ವರ್ತನೆ ತೋರಿದ್ದ ಅಬ್ದುಲ್ ರೆಹಮನ್ ಹಲ್ಲೆ ಪ್ರಕರಣವೊಂದರಲ್ಲಿ ಆರೋಪಿಯಾಗಿದ್ದ.

  • PUBLiC TV Impact | ಕಾರ್ಮಿಕರಿಗೆ ಥಳಿತ ಪ್ರಕರಣ – ಮಾಲೀಕ ಸೇರಿ ಮೂವರು ಅರೆಸ್ಟ್

    PUBLiC TV Impact | ಕಾರ್ಮಿಕರಿಗೆ ಥಳಿತ ಪ್ರಕರಣ – ಮಾಲೀಕ ಸೇರಿ ಮೂವರು ಅರೆಸ್ಟ್

    ವಿಜಯಪುರ: ಜಿಲ್ಲೆಯಲ್ಲಿ ಕಾರ್ಮಿಕರ ಮೇಲೆ ನಡೆದಿದ್ದ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಆರೋಪಿಗಳನ್ನು ಜಿಲ್ಲೆಯ ಎಪಿಎಂಸಿ (APMC) ಪೊಲೀಸರು ಬಂಧಿಸಿದ್ದಾರೆ.

    ವಿಜಯಪುರದ (Vijayapura) ಗಾಂಧಿನಗರ ಏರಿಯಾದಲ್ಲಿರುವ ಇಟ್ಟಂಗಿ ಭಟ್ಟಿಯಲ್ಲಿ ಕಾರ್ಮಿಕರ ಮೇಲೆ ಅಮಾನುಷವಾಗಿ ಹಲ್ಲೆ ನಡೆಸಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ `ಪಬ್ಲಿಕ್ ಟಿವಿ’ ಸುದ್ದಿ ಪ್ರಸಾರ ಮಾಡಿತ್ತು. ವರದಿ ಬೆನ್ನಲ್ಲೆ ಆರೋಪಿ ಖೇಮು ರಾಠೋಡ ಹಾಗೂ ಆತನ ಇಬ್ಬರು ಸಹಚರರನ್ನು ಬಂಧಿಸಲಾಗಿದೆ.ಇದನ್ನೂ ಓದಿ: ಮೊದಲು ಕಾಂಗ್ರೆಸ್ ಶಾಸಕರನ್ನ ಉಳಿಸಿಕೊಳ್ಳಲಿ: ಎಂ.ಬಿ ಪಾಟೀಲ್‌ಗೆ ವಿಜಯೇಂದ್ರ ಟಕ್ಕರ್

    ಈ ಕುರಿತು ವಿಜಯಪುರ ಎಸ್‌ಪಿ ಲಕ್ಷ್ಮಣ ನಿಂಬರಗಿ ಮಾತನಾಡಿ, ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಲೀಕ ಸೇರಿದಂತೆ ಮೂವರನ್ನು ಬಂಧಿಸಲಾಗಿದ್ದು, ಉಳಿದವರಿಗಾಗಿ ಹುಡುಕಾಟ ನಡೆಸಿದ್ದೇವೆ. ಆದಷ್ಟು ಬೇಗ ಅವರನ್ನ ಬಂಧಿಸುತ್ತೇವೆ ಎಂದು ಸ್ಪಷ್ಟನೆ ನೀಡಿದ್ದಾರೆ. ಸದ್ಯ ಬಿಎನ್‌ಎಸ್ ಸೆಕ್ಷನ್ 109ರ ಅಡಿಯಲ್ಲಿ (ಕೊಲೆಗೆ ಯತ್ನ) ವಿಜಯಪುರ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    ಘಟನೆ ಏನು?
    ಕೆಲಸಕ್ಕೆ ಬರುವುದಿಲ್ಲ ಎಂದ ಕಾರ್ಮಿಕರಿಗೆ ಹಿಗ್ಗಾಮುಗ್ಗಾ ಥಳಿಸಿದ ಘಟನೆ ವಿಜಯಪುರದ ಗಾಂಧಿನಗರ ಏರಿಯಾದಲ್ಲಿರುವ ಇಟ್ಟಂಗಿ ಭಟ್ಟಿಯಲ್ಲಿ ನಡೆದಿತ್ತು.

    ಬಾಗಲಕೋಟೆ ಜಿಲ್ಲೆಯ ಚಿಕ್ಕಲಗಿ ಗ್ರಾಮದ ನಿವಾಸಿಗಳಾದ ಸದಾಶಿವ ಮಾದರ, ಸದಾಶಿವ ಬಬಲಾದಿ, ಉಮೇಶ ಮಾದರ ಎಂಬ ಕಾರ್ಮಿಕರ ಮೇಲೆ ಖೇಮು ರಾಠೋಡ ಹಾಗೂ ಸಂಬಂಧಿಕರು ಮನಬಂದಂತೆ ಹಲ್ಲೆ ನಡೆಸಿದ್ದರು. ಸದ್ಯ ಕಾರ್ಮಿಕರು ವಿಜಯಪುರ ಜಿಲ್ಲಾಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಮಾಲೀಕ ಪ್ರತಿದಿನ ಕಾರ್ಮಿಕರಿಗೆ 600 ರೂ. ಕೂಲಿ ನೀಡಲಾಗುತ್ತಿತ್ತು. ಕಳೆದ ಸಂಕ್ರಮಣದಂದು ಮನೆಗೆ ತೆರಳಿದ್ದ ಕಾರ್ಮಿಕರು ಮರಳಿ 16 ರಂದು ಇಟ್ಟಿಗೆ ಭಟ್ಟಿಗೆ ಬಂದಿದ್ದರು. ಬಂದ ಕಾರ್ಮಿಕರು ತಮ್ಮ ಸಾಮಾನುಗಳನ್ನು ಕೊಂಡೊಯ್ಯಲು ಮುಂದಾಗುತ್ತಿದ್ದರು.

    ಈ ವಿಚಾರ ತಿಳಿದ ಮಾಲೀಕ ಬೇರೆ ಕಡೆ ಕೆಲಸಕ್ಕೆ ಹೋಗುತ್ತಿರುವುದು ಯಾಕೆ ಎಂದು ಹೇಳಿ ತನ್ನ ಜನರನ್ನು ಕರೆಸಿ ಹಲ್ಲೆ ಮಾಡಿಸಿದ್ದ. ಮೂರು ದಿನ ಕೂಡಿ ಹಾಕಿ ಪೈಪ್‌ನಿಂದ ಬೆನ್ನು, ಕಾಲು, ಸೊಂಟದ ಮೇಲೆ ಮನಬಂದಂತೆ ಥಳಿಸಿದ್ದರು.ಇದನ್ನೂ ಓದಿ: ನನ್ನನ್ನು ಟಾರ್ಗೆಟ್ ಮಾಡೋರ ಬಗ್ಗೆ ತಲೆ ಕೆಡಿಸಿಕೊಳ್ಳಲ್ಲ: ಯತ್ನಾಳ್‌ಗೆ ವಿಜಯೇಂದ್ರ ತಿರುಗೇಟು

  • ರಸ್ತೆಯೇ ಹಾಸಿಗೆ, ಆಕಾಶವೇ ಹೊದಿಕೆ – ನಡುರಸ್ತೆಯಲ್ಲಿ ಜೀವನ ದೂಡ್ತಿರುವ ಮಹಿಳೆ

    ರಸ್ತೆಯೇ ಹಾಸಿಗೆ, ಆಕಾಶವೇ ಹೊದಿಕೆ – ನಡುರಸ್ತೆಯಲ್ಲಿ ಜೀವನ ದೂಡ್ತಿರುವ ಮಹಿಳೆ

    ಬೆಂಗಳೂರು: ಗಾಂಧಿನಗರದ ರಸ್ತೆಯಲ್ಲಿ ನೀವು ಓಡಾಡಿದ್ರೆ ಈ ಮಹಿಳೆಯ ಪುಟ್ಟ ಬದುಕು ನೀವು ನೋಡಿರಬಹುದು. ಇರಲು ಮನೆ ಇಲ್ಲದೇ ಮಗು ಮತ್ತು ವಯಸ್ಸಾದ ತಾಯಿ ಜೊತೆ ಫುಟ್‍ಪಾತ್ ನಲ್ಲಿಯೇ ಜೀವನ ದೂಡುತ್ತಿದ್ದಾರೆ. ಮನೆಗಾಗಿ ಸಾಕಷ್ಟು ಬಾರಿ ಅರ್ಜಿ ಸಲ್ಲಿಸಿದ್ರೂ ಇವರಿಗೊಂದು ಸೂರು ಇದುವರೆಗೂ ದೊರಕಿಲ್ಲ.

    ಬಿಎ ಪದವಿಧರೆಯಾಗಿರುವ ಪೂರ್ಣಿಮಾ ದೋಬಿ ಕೆಲಸ ಮಾಡಿಕೊಂಡು ಬಾಡಿಗೆ ಮನೆಗೆ ದುಡ್ಡುಕಟ್ಟೋಕೆ ಆಗದೇ ಗಾಂಧಿನಗರದ ಫುಟ್‍ಪಾತ್ ನಲ್ಲಿ ಜೀವನ ನಡೆಸುತ್ತಿದ್ದಾರೆ. ವಯಸ್ಸಾದ ತಾಯಿ ಹಾಗೂ ಮಗುವನ್ನು ಕಟ್ಟಿಕೊಂಡು ವಾಸ ಮಾಡುತ್ತಿದ್ದಾರೆ. ಕೊರೊನಾ ಬಂದು ದುಡಿಮೆ ನೆಲಕಚ್ಚಿದೆ. ಹೀಗಾಗಿ ಮನೆ ಬಾಡಿಗೆ ಕಟ್ಟೋಕೆ ಸಾಧ್ಯವಾಗದೇ ಗಾಂಧಿನಗರದ ರಸ್ತೆಯಲ್ಲಿಯೇ ರಾತ್ರಿಯನ್ನು ಕಳೆಯುತ್ತಿದ್ದಾರೆ. ಕೈಯಲ್ಲಿ ಚಾಕು, ಕೋಲು, ಮೆಣಸಿನ ಪೌಡರ್ ಇಟ್ಕೊಂಡು ರಾತ್ರಿ ಕಳೆಯುತ್ತಿದ್ದಾರೆ. ಅದೆಷ್ಟೇ ಬಾರಿ ಜನಪ್ರತಿನಿಧಿಗಳಿಗೆ ಸೂರಿಗಾಗಿ ಮನವಿ ಮಾಡಿದರೂ ಈಡೇರಲಿಲ್ಲ.

    ಕೆಲವರು ಬಂದು ನಿಮ್ಮನ್ನ ಇಲ್ಲಿಂದ ಜಾಗ ಖಾಲಿ ಮಾಡಿಸ್ತೀವಿ ಅಂತ ಧಮ್ಕಿ ಹಾಕ್ತಾರೆ. ಹಾಗಾದ್ರೆ ನಮಗೆ ರೇಷನ್ ಕಾರ್ಡ್, ವೋಟರ್ ಐಡಿ ಕೊಟ್ಟಿರೋದು ಯಾಕೆ? ಬಾಡಿಗೆ ಹಣ ನೀಡಲು ಸಾಧ್ಯವಾಗದ ಹಿನ್ನೆಲೆ ರಸ್ತೆಯ ಬದಿಯಲ್ಲಿ ತಾಯಿ ಮತ್ತು ಮಗು ಜತೆ ವಾಸವಾಗಿದ್ದೇನೆ. ರಾತ್ರಿ ಮಲಗುವಾಗ ಸೇಫ್ಟಿಗಾಗಿ ಮೆಣಸಿನ ಪುಡಿ, ಕೋಲು, ಚಾಕುಗಳನ್ನ ಇಟ್ಟಿಕೊಂಡಿರುತ್ತೇವೆ. ಹಾಗೆ ನಾಯಿ ಸಹ ಸಾಕಿಗೊಂಡಿದ್ದೇನೆ ಎಂದು ಪೂರ್ಣಿಮಾ ಹೇಳುತ್ತಾರೆ.

    ಇನ್ನು ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಪೂರ್ಣಿಮಾ ತಾಯಿ ತುಳಸಿ, ಯಾರು ಬಂದು ನಮ್ಮ ಕಷ್ಟ ಕೇಳುತ್ತಿಲ್ಲ. ಇಲ್ಲೇ ಹುಟ್ಟಿ ಬೆಳೆದವರು ನಾನು. ಲಾಕ್‍ಡೌನ್ ವೇಳೆ ಎಷ್ಟೋ ದಿನ ಹಸಿವಿನಿಂದ ಮಲಗಿದ್ದೇವೆ. ಕೊರೊನಾ ಸಮಯದಲ್ಲಿ ರೇಷನ್ ಸಹ ನಮಗೆ ಸಿಗಲಿಲ್ಲ. ಕೆಲ ಪುಡಾರಿಗಳು ರಾತ್ರಿ ಬಂದು ಸಮಸ್ಯೆ ಮಾಡ್ತಾರೆ ಎಂದು ಕಣ್ಣೀರು ಹಾಕುತ್ತಾರೆ.

    ಪೂರ್ಣಿಮಾ ಅವರಿಗೆ ಮದ್ವೆಯಾಗಿ ಮಗುವಾದ ಮೇಲೆ ಗಂಡ ಕೈಕೊಟ್ಟು ಹೋಗಿದ್ದಾನೆ. ಅತ್ತ ಕಾಯಿಲೆ ಬಿದ್ದ ತಾಯಿಯನ್ನು ಈ ಪುಟ್ಟ ಸೂರಿನಲ್ಲಿ ನೋಡಿಕೊಳ್ಳಲು ಆಗದೇ ಒದ್ದಾಡುತ್ತಿದ್ದಾರೆ. ಮಳೆ ಬಂದಾಗ ಇವರ ಕಷ್ಟ ನೋಡಲು ಆಗಲ್ಲ. ಸ್ಥಳೀಯ ಶಾಸಕರಾಗಿರುವ ದಿನೇಶ್ ಗುಂಡೂರಾವ್ ನಮ್ಮ ಸಹಾಯಕ್ಕೆ ಬರಲಿ ಎಂದು ಬಡ ಕುಟುಂಬ ಮನವಿ ಮಾಡಿಕೊಂಡಿದೆ.