Tag: gandhada gudi

  • ಪುನೀತ್ ಜನ್ಮ ದಿನದಂದು ಓಟಿಟಿಯಲ್ಲಿ ‘ಗಂಧದ ಗುಡಿ’

    ಪುನೀತ್ ಜನ್ಮ ದಿನದಂದು ಓಟಿಟಿಯಲ್ಲಿ ‘ಗಂಧದ ಗುಡಿ’

    ಪುನೀತ್ ರಾಜ್ ಕುಮಾರ್ (Puneet Rajkumar) ಕನಸಿನ ಪ್ರಾಜೆಕ್ಟ್ ‘ಗಂಧದ ಗುಡಿ’ (Gandhada Gudi) ಡಾಕ್ಯುಮೆಂಟರಿ ಇದೀಗ ಓಟಿಟಿಯಲ್ಲೂ (OTT) ಬರಲು ಸಿದ್ಧತೆ ಮಾಡಿಕೊಂಡಿದೆ. ಇದೇ ಮಾರ್ಚ್ 17ರ ಅಪ್ಪು ಹುಟ್ಟು ಹಬ್ಬದ ದಿನದಂದು ಅಮೆಜಾನ್ ಪ್ರೈಂನಲ್ಲಿ ಗಂಧದ ಗುಡಿ ಸ್ಟ್ರೀಮ್ ಆಗಲಿದೆ. ಈ ಸಿನಿಮಾವನ್ನು ಜಗತ್ತಿಗೆ ತೋರಿಸಬೇಕು ಎನ್ನುವ ಮಾತುಗಳನ್ನು ಈ ಹಿಂದೆ ಅಶ್ವಿನಿ ಪುನೀತ್ ರಾಜ್ ಕುಮಾರ್ (Ashwini Puneet Rajkumar) ಆಡಿದ್ದರು. ಇದೀಗ ಅದನ್ನು ಸಾಧ್ಯವಾಗಿಸುತ್ತಿದ್ದಾರೆ.

    ಕಳೆದ ವರ್ಷ ಗಂಧದ ಗುಡಿ ಡಾಕ್ಯುಮೆಂಟರಿ ನೂರಾರು ಚಿತ್ರಮಂದಿರಗಳಲ್ಲಿ ಬಿಡುಗಡೆ ಆಗಿತ್ತು. ಅಪ್ಪು ಅಭಿಮಾನಿಗಳು ಸರದಿ ಸಾಲಿನಲ್ಲಿ ನಿಂತು ಕಣ್ತುಂಬಿಕೊಂಡಿದ್ದರು. ಅಲ್ಲಲ್ಲಿ ಈ ಸಿನಿಮಾದ ವಿಶೇಷ ಪ್ರದರ್ಶನಗಳನ್ನೂ ಆಯೋಜನೆ ಮಾಡಲಾಗಿತ್ತು. ಕೇವಲ ಕರ್ನಾಟಕದಲ್ಲಿ ಮಾತ್ರವಲ್ಲ, ಇತರ ರಾಜ್ಯಗಳಲ್ಲೂ ಈ ಸಿನಿಮಾ ರಿಲೀಸ್ ಆಗಿ ಯಶಸ್ವಿ ಪ್ರದರ್ಶನಗಳನ್ನೂ ಕಂಡಿತ್ತು. ಇದನ್ನೂ ಓದಿ: ಪ್ರಭುತ್ವದ ಮೂಲಕ ಹೊಸ ಕಥೆ ಹೇಳಲಿದ್ದಾರೆ ಚೇತನ್ ಚಂದ್ರ

    ಕೋವಿಡ್ ಸಮಯದಲ್ಲಿ ಕಾಡು ಮೇಡು ಸುತ್ತುವ ಆಸೆಯನ್ನು ಹೊತ್ತುಕೊಂಡು ಅಪ್ಪು ಕಾಡಿಗೆ ನುಗ್ಗಿದ್ದರು. ಸಣ್ಣ ತಂಡದೊಂದಿಗೆ ನಾಡಿನ ವನ್ಯ ಸಂಪತ್ತನ್ನು ಪರಿಚಯಿಸಿದ್ದರು. ಕರ್ನಾಟಕದ ಕೆಲ ಪ್ರಸಿದ್ಧ ತಾಣಗಳಿಗೂ ಭೇಟಿ ಮಾಡಿ, ಅದರ ಅಂದವನ್ನು ಕ್ಯಾಮೆರಾದಲ್ಲಿ ಸೆರೆ ಹಿಡಿದಿದ್ದರು. ಅದಕ್ಕೆ ಗಂಧದ ಗುಡಿ ಎಂದು ಹೆಸರಿಟ್ಟು ಜನರಿಗೆ ತೋರಿಸುವ ಉತ್ಸಾಹದಲ್ಲಿ ಇರುವಾಗಲೇ ನಿಧನರಾದರು. ಅವರ ಕನಸನ್ನು ಅಪ್ಪು ಪತ್ನಿ ಅಶ್ವಿನಿ ಅವರು ನೆರವೇರಿಸಿದರು.

  • ಅಪ್ಪು ಕನಸಿನ ಗಂಧದಗುಡಿ ದರ್ಶನ- ಥಿಯೇಟರ್ ಅಂಗಳದಲ್ಲಿ ಅಭಿಮಾನಿಗಳ ಸಂಭ್ರಮ

    ಅಪ್ಪು ಕನಸಿನ ಗಂಧದಗುಡಿ ದರ್ಶನ- ಥಿಯೇಟರ್ ಅಂಗಳದಲ್ಲಿ ಅಭಿಮಾನಿಗಳ ಸಂಭ್ರಮ

    ಬೆಂಗಳೂರು: ಪುನೀತ್‌ ರಾಜ್‌ ಕುಮಾರ್ (puneeth Raj Kumar) ಕೊನೆಯ ಚಿತ್ರ ಗಂದಧಗುಡಿ (Gandhada Gudi) ಬೆಳ್ಳಿತೆರೆಯಲ್ಲಿ ರಾರಾಜಿಸಿದೆ. ಗಂಧದಗುಡಿ ಚಿತ್ರ ಇಂದು ಆಫಿಷಿಯಲ್ ತೆರೆಕಂಡಿದೆ.

    `ಪರಮಾತ್ಮ’ನ ಕನಸಿನ ಕೂಸು ಬೆಳ್ಳಿ ತೆರೆಗೆ ಬಂದಿದೆ. ರಾಜ್ಯಾದ್ಯಂತ ಗಂಧದಗುಡಿ ಸಾಕ್ಷ್ಯಚಿತ್ರ ಪ್ರದರ್ಶನವಾಗಿದೆ. ಇಂದು ಬೆಳಗ್ಗೆ 6 ಗಂಟೆಯಿಂದಲೇ ಥಿಯೇಟರ್ ಗಳಲ್ಲಿ ಗಂಧದಗುಡಿ ಪ್ರದರ್ಶನ ಕಂಡಿದೆ. ಅಭಿಮಾನಿಗಳು ದೊಡ್ಮನೆ ಹುಡುಗನನ್ನ ಕಣ್ತುಂಬಿಸಿಕೊಂಡಿದ್ದಾರೆ. ಥಿಯೇಟರ್ ಗಳೆಲ್ಲಾ ಹೌಸ್‍ಫುಲ್ ಆಗಿದ್ದು, ಎಲ್ಲೆಲ್ಲೂ ಅಪ್ಪು ಜಾತ್ರೆ ನಡೆಯುತ್ತಿದೆ.

    ಟೀಶರ್ಟ್, ಪುಲ್ ಓವರ್, ಶರ್ಟ್ ಮೇಲೆ ಅಪ್ಪು (Appu) ಭಾವಚಿತ್ರಗಳು ರಾರಾಜಿಸುತ್ತಿದೆ. ಅಪ್ಪು ಭಾವಚಿತ್ರವಿರುವ ಟೀ ಶರ್ಟ್ ಗಳನ್ನ ಹಾಕಿ ಅಭಿಮಾನಿಗಳು ಸಂಭ್ರಮಿಸುತ್ತಿದ್ದಾರೆ. ಗಂಧದಗುಡಿಯ ಅಪ್ಪು ನೋಡಿ ಜೈಕಾರ ಶಿಳ್ಳೆ ಹಾಕಿ ಸ್ವಾಗತಿಸಿದ್ದಾರೆ. ಅದಕ್ಕೂ ಮುನ್ನ ಗುರುವಾರ ಏರ್ಪಡಿಸಲಾಗಿದ್ದ ಪ್ರೀಮಿಯರ್ ಶೋ ಯಶಸ್ವಿಯಾಗಿ ಪ್ರದರ್ಶನಗೊಂಡಿದೆ. ನಗರದ ವಿವಿಧ ಮಲ್ಟಿಫ್ಲೆಕ್ಸ್ ಗಳಲ್ಲಿ ಪ್ರೀಮಿಯರ್ ಶೋ ನಡೆದಿದೆ. ಇದನ್ನೂ ಓದಿ: ಗಂಧದಗುಡಿ ಸಿನಿಮಾ ಅಲ್ಲವೇ ಅಲ್ಲ, ಅದೊಂದು ಅನುಭೂತಿ

    ಖಾಸಿ ಮಾಲ್ ಲ್ಲಿ ಸೆಲೆಬ್ರಿಟಿಗಳೂ ಚಿತ್ರ ವೀಕ್ಷಿಸಿದ್ದಾರೆ. ಗಣ್ಯರನ್ನ ಖುದ್ದು ಆಹ್ವಾನಿಸಿದ್ದ ಅಶ್ವಿನಿ ಪುನೀತ್ ರಾಜ್ ಕುಮಾರ್ ಎಲ್ಲರ ಜೊತೆ ಕುಳಿತು ಚಿತ್ರ ವೀಕ್ಷಿಸಿದ್ದಾರೆ. ಇನ್ಫೋಸಿಸ್ ನ ಸುಧಾಮೂರ್ತಿ ಸೇರಿ ನಟಿ ರಮ್ಯಾ, ರಕ್ಷಿತ್, ರಿಷಬ್, ದೇವರಾಜ್, ಪ್ರಜ್ವಲ್ ದೇವರಾಜ್, ಸಂಗೀತಾ ಶೃಂಗೇರಿ ಸೇರಿ ಹಲವರು ಚಿತ್ರ ವೀಕ್ಷಿಸಿದ್ರು. ಪ್ರಕೃತಿ ಮಡಿಲಲ್ಲಿ ಅಪ್ಪು ಕಳೆದಿರುವ ಅತ್ಯದ್ಭುತ ಕ್ಷಣಗಳನ್ನ ಕಣ್ತುಂಬಿಕೊಂಡ ಅಭಿಮಾನಿಗಳು ಹಾಗೂ ಅಪ್ಪು ಆಪ್ತ ಕಲಾವಿದರು ಭಾವುಕರಾದ್ರು. ಅಪ್ಪು ಅಪ್ಪುವಾಗಿ ಜೀವಿಸಿರುವ ಚಿತ್ರ ‘ಗಂಧದಗುಡಿ’ ವೀಕ್ಷಿಸಿದ ಅಪ್ಪು ಸ್ನೇಹಿತರು ಮಂತ್ರಮುಗ್ಧರಾಗಿದ್ದಾರೆ. ಇದನ್ನೂ ಓದಿ: ‘ಗಂಧದಗುಡಿ’ ಪೇಯ್ಡ್ ಪ್ರೀಮಿಯರ್ ಟಿಕೆಟ್ ಖಾಲಿ ಖಾಲಿ

    Live Tv
    [brid partner=56869869 player=32851 video=960834 autoplay=true]

  • ಅಪ್ಪು ಗಂಧದಗುಡಿ ರಿಲೀಸ್‍ಗೆ ಕೌಂಟ್‍ಡೌನ್- ಮೊದಲ ಬಾರಿಗೆ ಅಶ್ವಿನಿ ವಿಶೇಷ ಸಂದರ್ಶನ

    ಅಪ್ಪು ಗಂಧದಗುಡಿ ರಿಲೀಸ್‍ಗೆ ಕೌಂಟ್‍ಡೌನ್- ಮೊದಲ ಬಾರಿಗೆ ಅಶ್ವಿನಿ ವಿಶೇಷ ಸಂದರ್ಶನ

    ಬೆಂಗಳೂರು: ಇಡೀ ಕರುನಾಡೇ ಕಾಯುತ್ತಿರೋ ಅಪ್ಪು ಕನಸಿನ ಕೊನೆಯ ಚಿತ್ರ ಗಂಧದಗುಡಿ (Gandhadagudi) ನಾಳೆ ತೆರೆಗೆ ಬರುತ್ತಿದೆ. ಇದರಲ್ಲಿ ಪುನೀತ್ ಅಭಿನಯಿಸಿದ್ದಾರೆ ಅನ್ನೋದಕ್ಕಿಂತ ಅಪ್ಪು ಅಪ್ಪುವಾಗಿಯೇ ಇದ್ರು ಅನ್ನೋದು ಸತ್ಯ.

    ಗಂಧದಗುಡಿ, ಪುನೀತ ಪರ್ವ (Puneetha Parva) ಕಾರ್ಯಕ್ರಮದ ಬಗ್ಗೆ ಇದೀಗ ಅಶ್ವಿನಿ ಪುನೀತ್ ರಾಜ್‍ಕುಮಾರ್ ಮಾತನಾಡಿದ್ದಾರೆ. ನಿರ್ದೇಶಕ ಸಂತೋಷ್ ಆನಂದ್‍ರಾಮ್ (Santhosh Ananddram) ಸಂದರ್ಶನದಲ್ಲಿ ಅಶ್ವಿನಿ ಮಾತನಾಡಿದ್ದು, ಶೂಟಿಂಗ್ ಸಂದರ್ಭದ ಕೆಲ ಘಟನೆಗಳನ್ನ ಹಂಚಿಕೊಂಡಿದ್ದಾರೆ. ಇದನ್ನೂ ಓದಿʻಹೆಡ್‌ ಬುಷ್‌ʼ ವಿವಾದ – ಟ್ವಿಟ್ಟರ್‌ನಲ್ಲಿ ಟ್ರೆಂಡ್‌ ಆಯ್ತು #WeStandWithDhananjaya ಹ್ಯಾಷ್‌ ಟ್ಯಾಗ್‌

    ಪುನೀತ್ ಪರ್ವ ಮಾಡಿದ್ದೇ ಅಭಿಮಾನಿಗಳು. ಕಾರ್ಯಕ್ರಮಕ್ಕೆ 1 ಲಕ್ಷಕ್ಕೂ ಹೆಚ್ಚು ಅಭಿಮಾನಿಗಳು ಹಾಗೂ ಚಿತ್ರರಂಗದ ಗಣ್ಯರು ಬಂದಿದ್ದರು. ನನಗೆ ತುಂಬಾ ಸಂತೋಷ ಆಯ್ತು, ತೃಪ್ತಿನೂ ಕೊಟ್ಟಿತ್ತು. ಅಭಿಮಾನಿಗಳಿಗೆ ನಮ್ಮ ಕುಟುಂಬ ಚಿರಋಣಿಯಾಗಿರುತ್ತೇವೆ. ಕಳೆದ ಒಂದು ವರ್ಷದಿಂದ ಸರ್ಕಾರ ನಮ್ಮ ಜೊತೆ ಇದೆ. ಎಲ್ಲರ ಬೆಂಬಲದಿಂದ ಕಾರ್ಯಕ್ರಮ ಚೆನ್ನಾಗಿ ಆಯ್ತು ಎಂದು ಅಶ್ವಿನಿ (Ashwini Puneeth Raj kumar) ಹೇಳಿದ್ದಾರೆ.

    ಗಂಧದಗುಡಿ ಅಪ್ಪಾಜಿ, ಶಿವಣ್ಣ (Shivaraj Kumar) ಮಾಡಿದ್ದು, ಅದರಲ್ಲಿ ಕಥೆ ಇತ್ತು, ಆದರೇ ಈ ಚಿತ್ರದಲ್ಲಿ ಜರ್ನಿನೇ ಸಿನಿಮಾ. ಚಿತ್ರದಲ್ಲಿ ಅವರು ಅವರಾಗೆ ಇದ್ದರು. ನನಗೆ ತುಂಬ ಹೆಮ್ಮೆ ಅನ್ನಿಸುತ್ತೆ. ನನ್ನ ಜೊತೆ ಟ್ರಕ್ಕಿಂಗ್ ಮಾಡಬೇಕೆಂದು ಅಪ್ಪು ಕಾಲ್ ಮಾಡಿದ್ರು. ನಾನು ಅವರ ತಂಡದ ಜೊತೆ ಟ್ರಕ್ಕಿಂಗ್ ಮಾಡಿದ್ದೆ. ಬಳಿಕ ಒಂದು ಸಣ್ಣ ಹಳ್ಳಿಯಲ್ಲಿ ಊಟ ಮಾಡಿಕೊಂಡು ಬಂದೆವು ಎಂದು ಗಂಧದಗುಡಿ ಚಿತ್ರದ ಚಿತ್ರೀಕರಣ ನೆನಪು ಮೆಲುಕು ಹಾಕಿಕೊಂಡಿದ್ದಾರೆ.

    ನನಗೆ ಹೆಮ್ಮೆ ಕೊಡುವ ಪ್ರಾಜೆಕ್ಟ್ ಅಂದ್ರೆ ಅದು ಗಂಧದಗುಡಿ. ಎಲ್ಲರೂ ಥಿಯೇಟರ್‍ಗೆ ಬಂದು ಚಿತ್ರ ವೀಕ್ಷಿಸಿ, ಆಶೀರ್ವದಿಸಿ ಎಂದು ಅಭಿಮಾನಿಗಳಲ್ಲಿ ಅಶ್ವಿನಿ ಪುನೀತ್ ರಾಜ್‍ಕುಮಾರ್ ಮನವಿ ಮಾಡಿಕೊಂಡರು. ಇದನ್ನೂ ಓದಿ: ತೆಲುಗು ನಿರ್ದೇಶಕ ಕಾರ್ತಿಕ್ ಅದ್ವೈತ್ ಚಿತ್ರಕ್ಕೆ ಗ್ರೀನ್ ಸಿಗ್ನಲ್ ಕೊಟ್ಟ ಶಿವಣ್ಣ

    Live Tv
    [brid partner=56869869 player=32851 video=960834 autoplay=true]

  • ಅಪ್ಪು ನೆನೆದು ಗಳಗಳನೇ ಅಳುತ್ತಲೇ ವೇದಿಕೆಯಿಂದ ಹೊರ ನಡೆದ ಅಶ್ವಿನಿ

    ಅಪ್ಪು ನೆನೆದು ಗಳಗಳನೇ ಅಳುತ್ತಲೇ ವೇದಿಕೆಯಿಂದ ಹೊರ ನಡೆದ ಅಶ್ವಿನಿ

    ಬೆಂಗಳೂರು: ನಗರದ ಅರಮನೆ ಮೈದಾನದಲ್ಲಿ (Palace Ground) ನಡೆಯುತ್ತಿರುವ ಪುನೀತ ಪರ್ವ(Puneeth Parva) ಕಾರ್ಯಕ್ರಮದಲ್ಲಿ ಅಶ್ವಿನಿ ಪುನೀತ್ ರಾಜ್‍ಕುಮಾರ್ (Ashwini Puneeth Rajkumar) ಅವರು ಗಳಗಳನೇ ಅಳುತ್ತಾ ವೇದಿಕೆ ಮೇಲಿಂದ ಹೊರನಡೆದಿದ್ದಾರೆ.

    ಸ್ಯಾಂಡಲ್‍ವುಡ್ ನಟ ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್ ಅಭಿನಯಿಸಿರುವ ಡಾಕ್ಯೂಮೆಂಟರಿ ಫಿಲ್ಮ್ ಗಂಧದ ಗುಡಿ ( Gandhada Gudi) ಪ್ರೀ ರಿಲೀಸ್ ಇವೆಂಟ್ ಇಂದು ಅದ್ದೂರಿಯಾಗಿ ನಡೆಯುತ್ತಿದೆ. ಕಾರ್ಯಕ್ರಮದಲ್ಲಿ ಸ್ಯಾಂಡಲ್‍ವುಡ್ ಸೇರಿದಂತೆ ಬಹುಭಾಷಾ ತಾರೆಯರು ಆಗಮಿಸಿದ್ದು, ಪುನೀತ್ ಜೊತೆಗೆ ಕಳೆದ ಸವಿನೆನಪುಗಳನ್ನು ವೇದಿಕೆ ಮೇಲೆ ಮೆಲುಕು ಹಾಕಿದ್ದಾರೆ.

    ಇದೇ ವೇಳೆ ಅಪ್ಪು ಅಭಿನಯಿಸಿದ್ದ ಬ್ಲಾಕ್ ಬಾಸ್ಟರ್ ಹಿಟ್ ರಾಜಕುಮಾರ ಸಿನಿಮಾದ ನೀನೇ ರಾಜಕುಮಾರ ಹಾಡನ್ನು, ಅಶ್ವಿನಿ ಪುನೀತ್ ರಾಜ್‌ ಕುಮಾರ್, ಅವರ ಪುತ್ರಿ ದ್ವಿತೀಯ ಪುತ್ರಿ ವಂದಿತ, ಡಾ. ಶಿವರಾಜ್ ಕುಮಾರ್ (Shiva RajKumar), ರಾಘವೇಂದ್ರ ರಾಜ್‍ಕುಮಾರ್ (Raghavendra Rajkumar), ವಿನಯ್ ರಾಜ್ ಕುಮಾರ್, ಯುವ ರಾಜ್‍ಕುಮಾರ್ ಸೇರಿದಂತೆ ದೊಡ್ಮನೆ ಕುಟುಂಬಸ್ಥರು ವೇದಿಕೆ ಮೇಲೆ ಕಣ್ಣೀರಿಡುತ್ತಲೇ ಹಾಡಿದರು.

    ಈ ವೇಳೆ ಅಪ್ಪು ನೆನೆದು ಭಾವುಕರಾದ ಅಶ್ವಿನಿ ಪುನೀತ್ ರಾಜ್ ಕುಮಾರ್ ಕಣ್ಣೀರು ಹಾಕುತ್ತಾ, ಅಭಿಮಾನಿಗಳಿಗೆ ನಮಸ್ಕರಿಸಿ ವೇದಿಕೆ ಮೇಲಿಂದ ಹೊರ ನಡೆದಿದ್ದಾರೆ. ಇನ್ನೂ ಹಾಡು ಮುಕ್ತಾಯವಾಗುತ್ತಿದ್ದಂತೆ ಅಭಿಮಾನಿಗಳು ಅಪ್ಪು, ಅಪ್ಪು ಎಂದು ಜೈಕಾರ ಕೂಗಿದರು. ಒಟ್ಟಾರೆ ಒಂದು ನಿಮಿಷ ನೀರವ ಮೌನ ಆವರಿಸಿದ್ದ ಅರಮನೆ ಮೈದಾನ ಭಾವುಕ ಕ್ಷಣಕ್ಕೆ ಸಾಕ್ಷಿಯಾಗಿದೆ ಎಂದೇ ಹೇಳಬಹುದು.

    Live Tv
    [brid partner=56869869 player=32851 video=960834 autoplay=true]

  • ಅಪ್ಪು ಅಭಿಮಾನಿಗಳಿಂದ ಆವಲಬೆಟ್ಟಕ್ಕೆ `ಗಂಧದಗುಡಿ ರೈಡ್’ – ಆಲದ ಗಿಡ ನೆಟ್ಟು ಪುನೀತ್‌ ನಾಮಕರಣ

    ಅಪ್ಪು ಅಭಿಮಾನಿಗಳಿಂದ ಆವಲಬೆಟ್ಟಕ್ಕೆ `ಗಂಧದಗುಡಿ ರೈಡ್’ – ಆಲದ ಗಿಡ ನೆಟ್ಟು ಪುನೀತ್‌ ನಾಮಕರಣ

    ಚಿಕ್ಕಬಳ್ಳಾಪುರ: ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್‌ಗೆ (Puneeth Rajkumar) ಪ್ರಕೃತಿ ಅಂದ್ರೆ ಪ್ರೀತಿ. ಪ್ರಕೃತಿಯನ್ನೇ ಆರಾಧಿಸಿ ಅವರು ನಟಿಸಿರೋ ʻಗಂಧದಗುಡಿʼ (Gandhada Gudi) ಸಿನಿಮಾ ತೆರೆ ಮೇಲೆ ಬರೋಕೆ ಕೆಲವೇ ದಿನಗಳು ಬಾಕಿ ಇದ್ದು, ಎಲ್ಲೆಲ್ಲೂ ಗಂಧದಗುಡಿ ಸದ್ದು ಕೇಳಿಬರುತ್ತಿದೆ. ಇದೇ ಹೊತ್ತಲ್ಲಿ ಅಪ್ಪುವಿನ ನೆನಪಿನಾರ್ಥಕವಾಗಿ ಅಪ್ಪು ಫ್ಯಾನ್ಸ್ ಗಂಧದಗುಡಿ ರೈಡ್ ಹೊರಟಿದ್ದಾರೆ. ಅಲ್ಲದೇ ಅಪ್ಪುವಿನ ಹೆಸರಲ್ಲಿ ಆಲದ ಸಸಿಗಳನ್ನು ನೆಟ್ಟು ಸಮಾಜಮುಖಿ ಕಾಯಕ ಮಾಡಿದ್ದಾರೆ.

    ಹೌದು, ಬೆಂಗಳೂರಿನ ಮಲ್ಲೇಶ್ವರಂನಿಂದ ಆವಲಬೆಟ್ಟಕ್ಕೆ ಕಾರು ಹಾಗೂ ಬೈಕ್‌ಗಳ ಮೂಲಕ ಬೆಳ್ಳಂಬೆಳಗ್ಗೆ ರೈಡ್ ಫಾರ್ ಅಪ್ಪು ಅಂತ ಗಂಧದಗುಡಿ ರೈಡ್ ಹೊರಟ ಅಭಿಮಾನಿಗಳಿಗೆ ಅಶ್ವಿನಿ ಪುನೀತ್‌ ರಾಜ್‌ಕುಮಾರ್ ಹಾಗೂ ಸಚಿವ ಅಶ್ವತ್ಥ ನಾರಾಯಣ ಚಾಲನೆ ನೀಡಿದರು. ಇದನ್ನೂ ಓದಿ: ಪುನೀತ್ ರಾಜ್ ಕುಮಾರ್ ನೆನಪಿಗೆ ಅಪ್ಪು ಹೆಸರಿನಲ್ಲಿ ಫುಡ್ ಫೆಸ್ಟ್

    ಬೆಂಗಳೂರಿನಿಂದ (Bengaluru) ಚಿಕ್ಕಬಳ್ಳಾಪುರ (Chikkaballapura) ಮಾರ್ಗವಾಗಿ ಹೈವೆ 44 ರ ಮೂಲಕ ಅಫ್ಪು ಫ್ಯಾನ್ಸ್ ಆವಲಬೆಟ್ಟಕ್ಕೆ ಆಗಮಿಸಿದರು. ಅಪ್ಪು ನೆನೆಪಿಗಾಗಿ ರೈಡ್ ಅಷ್ಟೇ ಅಲ್ಲದೆ ಆವಲಬೆಟ್ಟದಲ್ಲಿ ಅಪ್ಪು ಹೆಸರಲ್ಲಿ ನೂರಾರು ಆಲದ ಸಸಿಗಳನ್ನು ನೆಟ್ಟು ಅವರ ಹೆಸರು ಅಜರಾಮರವಾಗುವಂತೆ ಮಾಡಿದರು. ಇಂಚರ ಸ್ಟುಡಿಯೋ, ದ್ವಿಚಕ್ರ ಪ್ರೆಸೆಂಟ್ಸ್ ಸಹಯೋಗದೊಂದಿಗೆ ನೂರಕ್ಕೂ ಹೆಚ್ಚು ಬೈಕ್‌ಗಳ ಮೂಲಕ ಆಗಮಿಸಿದ ಅಪ್ಪು ಅಭಿಮಾನಿಗಳು, ಅರಣ್ಯ ಇಲಾಖೆಯ ಸಹಕಾರದಿಂದ ಆವಲಬೆಟ್ಟದ ಎರಡು ಕಿಲೋಮೀಟರ್ ರಸ್ತೆಯ ಇಕ್ಕೆಲಗಳಲ್ಲಿ ನೂರಾರು ಆಲದ ಸಸಿಗಳನ್ನು ನೆಟ್ಟರು.

    ಆವಲಬೆಟ್ಟದ ಪ್ರವೇಶದ್ವಾರದ ಬಳಿ ಆಲದ ಸಸಿ ನೆಟ್ಟು ಪೂಜೆ ಪುನಸ್ಕಾರ ಮಾಡಿ ಅಪ್ಪು ಅಂತ ನಾಮಕರಣ ಸಹ ಮಾಡಿದರು. ಬೆಟ್ಟದ ರಸ್ತೆಯುದ್ದಕ್ಕೂ ಇಕ್ಕೆಲಗಳಲ್ಲಿ ಆಲದ ಸಸಿಗಳನ್ನು ನೆಟ್ಟು ಇಡೀ ದಿನ ಆವಲಬೆಟ್ಟದಲ್ಲೇ ಅಪ್ಪು ನೆನಪಿನಾರ್ಥಕವಾಗಿ ಕಾಲ ಕಳೆದು ಅಪ್ಪುವನ್ನ ನೆನೆದರು. ಇನ್ನೂ ಇದೇ ತಿಂಗಳು 29 ಕ್ಕೆ ಅಪ್ಪು ನಮ್ಮನ್ನ ಆಗಲಿ ಒಂದು ವರ್ಷ ಆಗಲಿದ್ದು, ಮುನ್ನಾ ದಿನವೇ ಅಭಿಮಾನಿಗಳಿಗೆ ಅಪ್ಪು ನಟನೆಯ ಗಂಧದಗುಡಿ ಸಿನಿಮಾ ಗಿಫ್ಟ್ ಆಗಿ ಸಿಗಲಿದೆ. ಇದನ್ನೂ ಓದಿ: ಬೆಂಗಳೂರು ಸ್ಟೀಲ್ ಬ್ರಿಡ್ಜ್ ಫ್ಲೈ ಓವರ್ ಗೆ ಪುನೀತ್ ಹೆಸರಿಡಲು ಮನವಿ

    ಗಂಧದಗುಡಿ ಸಿನಿಮಾಗೆ ಸ್ವಾಗತ ಕೋರುವುದಕ್ಕೆ ಅಪ್ಪುವನ್ನ ಕಣ್ತುಂಬಿಕೊಳ್ಳೋಕೆ ಈಗಾಗಲೇ ಫ್ಯಾನ್ಸ್ ಕಾತುರದಿಂದ ಕಾಯುತ್ತಿದ್ದಾರೆ. ಇತ್ತ ಅಪ್ಪುವಂತೆ ಫ್ಯಾನ್ಸ್ ಕೂಡ ಗಂಧದಗುಡಿ ರೈಡ್ ಹೆಸರಲ್ಲಿ ನೂರಾರು ಆಲದ ಸಸಿ ನೆಟ್ಟು ಇತರರಿಗೂ ಮಾದರಿಯಾಗಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ನಿಮ್ಮ ಅಪ್ಪು ಸಿನಿಮಾ ಗಂಧದ ಗುಡಿ ನೋಡಿ ಪ್ರೋತ್ಸಾಹಿಸಿ: ಅಶ್ವಿನಿ ಪುನೀತ್ ರಾಜ್‍ಕುಮಾರ್ ಮನವಿ

    ನಿಮ್ಮ ಅಪ್ಪು ಸಿನಿಮಾ ಗಂಧದ ಗುಡಿ ನೋಡಿ ಪ್ರೋತ್ಸಾಹಿಸಿ: ಅಶ್ವಿನಿ ಪುನೀತ್ ರಾಜ್‍ಕುಮಾರ್ ಮನವಿ

    ಸ್ಯಾಂಡಲ್‍ವುಡ್ ನಟ ದಿ. ಪುನೀತ್ ರಾಜ್ ಕುಮಾರ್ ಕನಸಿನ ಪ್ರಾಜೆಕ್ಟ್ ಗಂಧದಗುಡಿ ಟ್ರೈಲರ್ ರಿಲೀಸ್ ಆಗಿದ್ದು, ಪತ್ನಿ ಅಶ್ವಿನಿ ಪುನೀತ್ ರಾಜ್ ಕುಮಾರ್ (Ashwini Puneeth RajKumar) ಅವರು ಅಭಿಮಾನಿಗಳಲ್ಲಿ ಮನವಿ ಮಾಡಿಕೊಂಡಿದ್ದಾರೆ.

    ಟ್ರೈಲರ್ ನೋಡಿದ ಬಳಿಕ ವೇದಿಕೆಯಲ್ಲಿ ಮಾತನಾಡಿದ ಅವರು, ನಿಮ್ಮ ಅಪ್ಪು (Appu) ಸಿನಿಮಾ ಗಂಧದ ಗುಡಿ ನೋಡಿ ಪ್ರೋತ್ಸಾಹಿಸಿ ಎಂದು ಮನವಿ ಮಾಡಿಕೊಂಡರು. ಇದನ್ನೂ ಓದಿ: ಗಂಧದ ಗುಡಿಯಲ್ಲಿ ಚಂದದ ನೋಟ: ನೀವು ಇರಬೇಕಿತ್ತು ಎಂದು ಕಣ್ಣೀರಾಕಿದ ಫ್ಯಾನ್ಸ್

    ಪುನೀತ್ ರಾಜ್ ಕುಮಾರ್ (Dr. Puneeth RajKumar) ಕೊನೆ ಸಾಕ್ಷ್ಯಚಿತ್ರ ಇದಾಗಿದ್ದು, `ಅಪ್ಪು ಅನ್ವೇಷಣೆ’ಯ ಅದ್ಭುತ ಪಯಣ ಸೆರೆಹಿಡಿಯಲಾಗಿದೆ. ಗಂಧದ ಗುಡಿ ಟ್ರೈಲರ್ ನ ಮತ್ತೊಂದು ಸೊಗಸು ಅಂದರೆ, ಅಪ್ಪು ಹಾಗೂ ಅವರ ಅಪ್ಪಾಜಿ ಬಾಳಿ ಬದುಕಿದ ಮನೆಯನ್ನು ತೋರಿಸಿದ್ದಾರೆ. ಸ್ವತಃ ಆ ಮನೆಯ ಬಗ್ಗೆ ಪುನೀತ್ ರಾಜ್‍ಕುಮಾರ್ ಅವರೇ ವಿವರಿಸುತ್ತಾರೆ. ಮನೆಯನ್ನು ಕಣ್ತುಂಬಿಕೊಳ್ಳುವ ಹೊತ್ತಲ್ಲಿ ಡಾ.ರಾಜ್ ಕುಮಾರ್ ಪ್ರವೇಶ. ಥ್ರಿಲ್ ಅನಿಸುವಷ್ಟು ಮಜಾ ಕೊಡುತ್ತದೆ ಟ್ರೈಲರ್.

    ಇಂದು ಬೆಂಗಳೂರಿನ ನರ್ತಕಿ ಚಿತ್ರಮಂದಿರ (Narthaki Theatre) ದಲ್ಲಿ ಪುನೀತ್ ರಾಜ್‍ಕುಮಾರ್ ಅಭಿಮಾನಿಗಳಿಗಾಗಿ ಟ್ರೇಲರ್ ಪ್ರದರ್ಶನ ಏರ್ಪಡಿಸಲಾಗಿತ್ತು. ಗಂಧದ ಗುಡಿಯ ಅಂದವನ್ನು ಕಣ್ತುಂಬಿಕೊಂಡ ಕಂಗಳಲ್ಲಿ ಅಪ್ಪು ಇಲ್ಲ ಅನ್ನುವ ಕಂಬನಿ ಸುರಿಯುತ್ತಿತ್ತು. ರಾಘವೇಂದ್ರ ರಾಜ್‍ಕುಮಾರ್‌ (Raghavendra RajKumar) ಸೇರಿದಂತೆ ಅಲ್ಲಿದ್ದವರ ಅಷ್ಟೂ ಕಣ್ಣುಗಳು ಒದ್ದೆ ಆಗಿದ್ದವು. ಟ್ರೈಲರ್ ಇಷ್ಟೊಂದು ಭಾವುಕತೆ ಸೃಷ್ಟಿ ಮಾಡಿದೆ. ಇದೇ ತಿಂಗಳು ಕೊನೆಯಲ್ಲಿ ಪೂರ್ತಿ ಚಿತ್ರವೇ ಬಿಡುಗಡೆ ಆಗುತ್ತಿದೆ.

    Live Tv
    [brid partner=56869869 player=32851 video=960834 autoplay=true]

  • ಅಪ್ಪು ಮಗನೇ  ಟ್ರೈಲರ್ ರಿಲೀಸ್‍ಗೆ ನೀನೇ ನನ್ನ ಕರೆದೊಯ್ಯುತ್ತಿರುವೆ- ರಾಘಣ್ಣ ಭಾವುಕ

    ಅಪ್ಪು ಮಗನೇ ಟ್ರೈಲರ್ ರಿಲೀಸ್‍ಗೆ ನೀನೇ ನನ್ನ ಕರೆದೊಯ್ಯುತ್ತಿರುವೆ- ರಾಘಣ್ಣ ಭಾವುಕ

    ಪುನೀತ್ ರಾಜ್‍ಕುಮಾರ್ (Puneeth RajKumar) ನಟನೆಯ ಗಂಧದ ಗುಡಿ (Gandhada Gudi)  ಡಾಕ್ಯುಮೆಂಟರಿ  ಮಾದರಿಯ ಸಿನಿಮಾದ ಟ್ರೈಲರ್ ಇಂದು ಬಿಡುಗಡೆ ಆಗುತ್ತಿದೆ. ಅಭಿಮಾನಿಗಳಿಗಾಗಿ ಟ್ರೈಲರ್ ನೋಡಲು ಬೆಂಗಳೂರಿನ ನರ್ತಕಿ ಚಿತ್ರಮಂದಿರದಲ್ಲಿ ವಿಶೇಷ ವ್ಯವಸ್ಥೆಯನ್ನು ಮಾಡಲಾಗಿದ್ದು, ಈ ಚಿತ್ರಮಂದಿರಕ್ಕೆ ಪುನೀತ್ ಕುಟುಂಬ ಕೂಡ ಭಾಗಿಯಾಗಲಿದೆ.

    ಪುನೀತ್ ಪತ್ನಿ ಅಶ್ವಿನಿ ಪುನೀತ್ ರಾಜ್‍ಕುಮಾರ್, ಸಹೋದರರಾದ ರಾಘವೇಂದ್ರ ರಾಜ್‍ಕುಮಾರ್ (Raghevendra RajKumar), ಶಿವರಾಜ್ ಕುಮಾರ್ (Shivaraj Kumar), ಪುನೀತ್ ಸಹೋದರಿಯರು ಹಾಗೂ ಸಹೋದರರ ಮಕ್ಕಳು ಕೂಡ ಭಾಗಿಯಾಗಲಿದ್ದಾರೆ. ಥಿಯೇಟರ್ ಗೆ ಹೋಗುವ ಮುನ್ನ ಬೆಳಗ್ಗೆ ರಾಘವೇಂದ್ರ ರಾಜ್ ಕುಮಾರ್ ಸೋಷಿಯಲ್ ಮೀಡಿಯಾದಲ್ಲಿ ಭಾವುಕ ಪೋಸ್ಟ್ ಮಾಡಿದ್ದಾರೆ. ಜೊತೆಗೆ ಪುನೀತ್ ಜೊತೆಗಿರುವ ಫೋಟೋ (Photo) ಹಂಚಿಕೊಂಡಿದ್ದಾರೆ. ಇದನ್ನೂ ಓದಿ: ಅಪ್ಪು ಕನಸು ನನಸು- ಗಂಧದ ಗುಡಿ ಸಾಕ್ಷ್ಯಚಿತ್ರದ ಟೈಟಲ್ ಟೀಸರ್ ಔಟ್

    ಸೋಷಿಯಲ್ ಮೀಡಿಯಾದಲ್ಲಿ ಭಾವುಕತೆಯಿಂದ ಕೆಲವು ಸಾಲುಗಳನ್ನು ಬರೆದಿರುವ ರಾಘಣ್ಣ, ಅಪ್ಪು ಮಗನೇ ಟ್ರೈಲರ್ ಬಿಡುಗಡೆ ಸಮಾರಂಭಕ್ಕೆ ನೀನೇ ನನ್ನ ಕೈ ಹಿಡಿದು ಕರೆದುಕೊಂಡು ಹೋಗುವಂತೆ ಭಾಸವಾಗುತ್ತಿದೆ ಎಂದು ಬರೆದಿದ್ದಾರೆ. ತಮ್ಮ ಕೈ ಹಿಡಿದುಕೊಂಡು ನರ್ತಕಿ ಚಿತ್ರಮಂದಿರದ ಒಳಗೆ ಅಪ್ಪು ಕರೆದುಕೊಂಡು ಹೋಗುತ್ತಿರುವ ಚಿತ್ರವನ್ನೂ ಅವರು ಪೋಸ್ಟ್ ಮಾಡಿದ್ದಾರೆ.

    ಗಂಧದ ಗುಡಿ ಪುನೀತ್ ರಾಜ್‍ಕುಮಾರ್ ನಟನೆಯ ಕನಸಿನ ಪ್ರಾಜೆಕ್ಟ್. ಇದು ಅವರ ಕೊನೆಯ ಸಿನಿಮಾ ಕೂಡ. ಲಾಕ್ ಡೌನ್ ವೇಳೆಯಲ್ಲಿ ಕಾಡಿನೊಳಗಿದ್ದು, ಕರುನಾಡ ವನ ಸಂಪತ್ತನ್ನು ಸೆರೆ ಹಿಡಿದಿದ್ದಾರೆ. ಪ್ರಾಣಿ, ಕಾಡು, ಪರಿಸರ, ಜಲಚರ ಹೀಗೆ ಅನೇಕ ಸಂಗತಿಗಳನ್ನು ಇದರಲ್ಲಿ ತಂದಿದ್ದಾರೆ. ಡಾಕ್ಯುಮೆಂಟರಿ ಮಾದರಿಯಲ್ಲಿರುವ ಈ ಚಿತ್ರದಲ್ಲಿ ಪುನೀತ್ ಪ್ರತಿ ದೃಶ್ಯದಲ್ಲೂ ಆವರಿಸಿಕೊಂಡಿದ್ದಾರೆ. ಇದರ ಟ್ರೈಲರ್ ಇಂದು ಬೆಳಗ್ಗೆ 9.45ಕ್ಕೆ ನರ್ತಕಿ ಚಿತ್ರ ಮಂದಿರದಲ್ಲಿ ಬಿಡುಗಡೆ ಆಗುತ್ತಿದೆ.

    Live Tv
    [brid partner=56869869 player=32851 video=960834 autoplay=true]

  • Exclusive-ಪುನೀತ್ ನಟನೆಯ ‘ಗಂಧದ ಗುಡಿ’ ಡಾಕ್ಯುಮೆಂಟರಿ ಅಲ್ಲ,  ಸಿನಿಮಾ : ನಿರ್ದೇಶಕ ಅಮೋಘ ವರ್ಷ

    Exclusive-ಪುನೀತ್ ನಟನೆಯ ‘ಗಂಧದ ಗುಡಿ’ ಡಾಕ್ಯುಮೆಂಟರಿ ಅಲ್ಲ, ಸಿನಿಮಾ : ನಿರ್ದೇಶಕ ಅಮೋಘ ವರ್ಷ

    ವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ನಟನೆಯ ಗಂಧದ ಗುಡಿ ಸಿನಿಮಾದ ಬಿಡುಗಡೆ ದಿನಾಂಕವನ್ನು ಪುನೀತ್ ಪತ್ನಿ ಅಶ್ವಿನಿ ಪುನೀತ್ ರಾಜ್ ಕುಮಾರ್ ನಿನ್ನೆಯಷ್ಟೇ ಘೋಷಣೆ ಮಾಡಿದ್ದಾರೆ. ಈ ಹಿನ್ನೆಲೆಯಲ್ಲಿ ಈ ಸಿನಿಮಾದ ನಿರ್ದೇಶಕ ಅಮೋಘ ವರ್ಷ ಪಬ್ಲಿಕ್ ಟಿವಿ ಜೊತೆ ಮಾತನಾಡಿದ್ದಾರೆ. ಈ ಸಿನಿಮಾದ ಹತ್ತು ಹಲವು ರಹಸ್ಯಗಳನ್ನು ಬಿಚ್ಚಿಟ್ಟಿದ್ದಾರೆ.

    ಗಂಧದ ಗುಡಿ ಚಿತ್ರವನ್ನು ರಾಜ್ಯೋತ್ಸವದ ವಾರವೇ ರಿಲೀಸ್ ಮಾಡಬೇಕು ಎಂದೇ ಅಕ್ಟೋಬರ್ 28 ದಿನಾಂಕವನ್ನು ಆಯ್ಕೆ ಮಾಡಿಕೊಂಡಿರುವ ಅವರು ಅಂದು ಪುನೀತ್ ಅವರ ಮೊದಲ ವರ್ಷದ ಪುಣ್ಯಾರಾಧನೆ ಎನ್ನುವುದನ್ನೂ ನೆನಪಿಸಿದರು. ಮತ್ತೆ ಗಂಧದ ಗುಡಿಯನ್ನು ನೆನಪಿಸಿಕೊಳ್ಳುತ್ತಾ, “ಇದು ಡಾಕ್ಯುಮೆಂಟರಿ ಅಂತ ಜನ ಈಗಲೂ ಅನ್ಕೊಂಡಿದಾರೆ. ಇದು ಯಾವುದೇ ಕಾರಣಕ್ಕೂ ಡಾಕ್ಯುಮೆಂಟರಿ ಅಲ್ಲ. ಗಂಧದ ಗುಡಿ ಇದು ಫೀಚರ್ ಫಿಲ್ಮ್. ಒಂದು ಸಿನಿಮಾ.  ಒಂದು ಸಿನಿಮಾಕ್ಕೆ ಬೇಕಾಗುವ ಡ್ಯುರೇಷನ್ ಎಷ್ಟಿರಬೇಕೋ ಅಷ್ಟೇ ಡ್ಯುರೇಷನ್ ನಲ್ಲಿ ಈ ಸಿನಿಮಾ ರಿಲೀಸ್ ಆಗುತ್ತೆ” ಎನ್ನುತ್ತಾರೆ. ಇದನ್ನೂ ಓದಿ : ‘ಮದುವೆನೂ ಇಲ್ಲ, ರಿಂಗೂ ಇಲ್ಲ’ ಲಲಿತ್ ಮೋದಿಗೆ ತಿವಿದ ಸುಶ್ಮಿತಾ ಸೇನ್

    ಈ ಸಿನಿಮಾವನ್ನು ಪ್ಯಾನ್ ವರ್ಲ್ಡ್ ರಿಲೀಸ್ ಮಾಡುವ ತಯಾರಿ ನಡೆಯುತ್ತಿದೆಯಂತೆ.  ಎಷ್ಟು ಭಾಷೆ , ಅಥವಾ ಸಬ್ ಟೈಟಲ್ ಇಡಬೇಕಾ ಅದೆಲ್ಲ ಇನ್ನೂ ಚರ್ಚೆ ಹಂತದಲ್ಲಿದ್ದು,  ಅಪ್ಪು ಅಭಿಮಾನಿಗಳಿಗೆ ಇದು ಕೊನೆಯ ಚಿತ್ರವಾಗಲಿದೆ. “ನಾಡು, ನುಡಿ, ವನ್ಯಜೀವಿಗಳ ಬಗ್ಗೆ ಅಪ್ಪು ಅವ್ರಿಗಿದ್ದ ಅಪಾರ ಪ್ರೀತಿ ಕಾಳಜಿ ಈ  ಚಿತ್ರದಲ್ಲಿ ಕಾಣುತ್ತದೆ. ವಿಶೇಷ ಅಂದ್ರೆ ಚಿತ್ರದಲ್ಲಿ ಹಾಡುಗಳೂ ಇರ್ತವೆ. ಎಷ್ಟಿರುತ್ತೆ ಹೇಗಿರುತ್ತೆ ಅನ್ನೋದು ಮುಂದಿನ ದಿನಗಳಲ್ಲಿ ಗೊತ್ತಾಗುತ್ತೆ” ಎನ್ನುತ್ತಾರೆ ಅಮೋಘ.

    ಅಕ್ಟೋಬರ್ 29 ಕ್ಕೆ ಅಪ್ಪು ಅಗಲಿ ಒಂದು ವರ್ಷ ಆಗುತ್ತೆ. ಅಕ್ಟೋಬರ್ 28 ಕ್ಕೆ ಗಂಧದ ಗುಡಿ ಚಿತ್ರ ಬರ್ತಿರೋದು ಅಭಿಮಾನಿಗಳಿಗೆ ಭಾವುಕ ಸುದ್ದಿ ಹೌದು. ಆದರೆ ಅಪ್ಪು ಎಲ್ಲೂ ಹೋಗಿಲ್ಲ. ನಮ್ಮ ಜೊತೆ ಒಂದಲ್ಲ ಒಂದು ವಿಧದಲ್ಲಿ ಇದ್ದಾರೆ. ಸಿನಿಮಾಕ್ಕಾಗಿ ಬೇಕು ಅಂತ ಡಬ್ ಮಾಡ್ಸಿಲ್ಲ ಇದಕ್ಕೆ ನಾವು, ಅಪ್ಪು ಧ್ವನಿಯಲ್ಲೇ ಪೂರ್ತಿ ಸಿನಿಮಾ ಇರುತ್ತದೆ. ಅಪ್ಪು ಧ್ವನಿ ಶೂಟಿಂಗ್ ವೇಳೆಯೇ ರೆಕಾರ್ಡ್ ಆಗಿದೆ ಎನ್ನುವುದು ಅಮೋಘ ವರ್ಷ ಮಾತು.

    Live Tv
    [brid partner=56869869 player=32851 video=960834 autoplay=true]

  • ಸಿಎಂ ನಿಮಗೆ ನಾವು ಸದಾ ಆಭಾರಿ: ಅಶ್ವಿನಿ ಪುನೀತ್ ರಾಜ್‍ಕುಮಾರ್

    ಸಿಎಂ ನಿಮಗೆ ನಾವು ಸದಾ ಆಭಾರಿ: ಅಶ್ವಿನಿ ಪುನೀತ್ ರಾಜ್‍ಕುಮಾರ್

    ಬೆಂಗಳೂರು: ಅಪ್ಪು ಕನಸಿನ ಗಂಧದ ಗುಡಿ ಸಾಕ್ಷ್ಯಚಿತ್ರದ ಟೈಟಲ್ ಟೀಸರ್ ನಿನ್ನೆ ಬಿಡುಗಡೆಗೊಂಡಿದ್ದು, ಈ ಹಿನ್ನೆಲೆಯಲ್ಲಿ ಅಶ್ವಿನಿ ಪುನೀತ್ ರಾಜ್ ಕುಮಾರ್ ಅವರು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಧನ್ಯವಾದಗಳನ್ನು ಅರ್ಪಿಸಿದ್ದಾರೆ.

    ಟೀಸರ್ ಬಿಡುಗಡೆ ಕುರಿತು ಸಿಎಂ ನಿನ್ನೆ ಟ್ವೀಟ್ ಮಾಡಿದ್ದರು, ಈ ಟ್ವೀಟ್ ಗೆ ಅಶ್ವಿನಿ ಅವರು ರಿಟ್ವೀಟ್ ಮಾಡಿ, ಈ ‘ಗಂಧದ ಗುಡಿ’ಯನ್ನು ನಾಡಿನ ಪ್ರತಿಯೊಬ್ಬರಿಗೂ ತಲುಪಿಸಬೇಕಾದ ಜವಾಬ್ದಾರಿ ನಮ್ಮೆಲ್ಲರದ್ದು. ಈ ನಿಟ್ಟಿನಲ್ಲಿ ನೀವು ನೀಡುತ್ತಿರುವ ಸಹಕಾರ ಮತ್ತು ಪ್ರೋತ್ಸಾಹಕ್ಕೆ ನಾವು ಸದಾ ಆಭಾರಿ ಎಂದು ಹೇಳಿದ್ದಾರೆ.

    ಪ್ರಾಕೃತಿಕ ಸಂಪತ್ತು ರಕ್ಷಿಸುವ ನಿಟ್ಟಿನಲ್ಲಿ ಜನರಿಗೆ ಈ ಚಿತ್ರ ಪ್ರೇರಣೆಯಾಗಲಿ ಎಂದು ಬರೆದುಕೊಳ್ಳುವ ಮೂಲಕ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ನಿನ್ನೆ ಚಿತ್ರಕ್ಕೆ ಶುಭಹಾರೈಸಿದ್ದರು. ಇದನ್ನೂ ಓದಿ: ಟೀಸರ್ ಕೊನೆಯಲ್ಲಿ ಅಪ್ಪು ಸ್ಮೈಲ್ ನೋಡಿ ಕರುಳು ಕಿತ್ತು ಬಂದಂತಾಯ್ತು: ಶಿವಣ್ಣ

    ಟ್ವೀಟ್ ನಲ್ಲೇನಿತ್ತು..?
    ನಮ್ಮೆಲ್ಲರ ಪ್ರೀತಿಯ ಅಪ್ಪು ದಿ. ಪುನೀತ್ ರಾಜಕುಮಾರ್ ಅಭಿನಯದ ಪಿ.ಆರ್.ಕೆ ಪ್ರೊಡಕ್ಷನ್ ನಿರ್ಮಿಸಿರುವ ‘ಗಂಧದ ಗುಡಿ’ ಒಂದು ಅದ್ಭುತ ಕಲಾಕೃತಿ. ನಾಡಿನ ಪ್ರಾಕೃತಿಕ ಶ್ರೀಮಂತಿಕೆ, ಜೀವಸಂಕುಲ, ಬುಡಕಟ್ಟು ಜನರ ಸಂಸ್ಕೃತಿಗಳನ್ನು ಪರಿಚಯಿಸುವ ಮೂಲಕ, ವಿಶಿಷ್ಟ ರೀತಿಯಲ್ಲಿ ಕಥೆಯೊಂದನ್ನು ಹೇಳುತ್ತಿದೆ. ಇದನ್ನೂ ಓದಿ: ಅಪ್ಪುಗೆ ವಿಶೇಷವಾಗಿ ಗೌರವ ಸಲ್ಲಿಸಿದ ಕ್ರಿಕೆಟಿಗ ಡೇವಿಡ್ ವಾರ್ನರ್

    ಈ ಅದ್ಭುತ ದೃಶ್ಯಕಾವ್ಯದ ಸಂದೇಶ ಎಲ್ಲರಿಗೂ ತಲುಪಬೇಕು. ಪ್ರತಿ ಭಾರತೀಯ, ಅದರಲ್ಲೂ ವಿಶೇಷವಾಗಿ ಪ್ರತಿಯೊಬ್ಬ ಕನ್ನಡಿಗ ಕರುನಾಡಿನ ಈ ಕಥಾನಕವನ್ನು ನೋಡುವಂತಾಗಲಿ. ನಮ್ಮ ಅರಣ್ಯ, ನಮ್ಮ ಪರಿಸರ, ವೈವಿಧ್ಯಮಯ ಪ್ರಾಕೃತಿಕ ಸಂಪತ್ತನ್ನು ರಕ್ಷಿಸುವ ನಿಟ್ಟಿನಲ್ಲಿ ಈ ಚಿತ್ರ ಪ್ರೇರಣೆ ನೀಡಲಿ ಎಂದು ಹಾರೈಸುವುದಾಗಿ ತಿಳಿಸಿದ್ದರು.

    ಸೋಮವಾರ(ಡಿ.6) ಅಪ್ಪು ತಾಯಿ ಪಾರ್ವತಮ್ಮ ರಾಜ್ ಕುಮಾರ್ ಅವರ ಹುಟ್ಟುಹಬ್ಬ. ಈ ಹಿನ್ನೆಲೆಯಲ್ಲಿ ಇಂದೇ ಪಿಆರ್‍ಕೆ ಆಡಿಯೋ ಯೂಟ್ಯೂಬ್ ಚಾನೆಲ್‍ನಲ್ಲಿ ಗಂಧದ ಗುಡಿ ಟೈಟಲ್ ಟೀಸರ್ ಬಿಡುಗಡೆ ಮಾಡಲಾಗಿದೆ. ಟೀಸರ್ ನಲ್ಲಿ ದಟ್ಟಕಾಡಿನ ನಡುವೆ ಪುನೀತ್ ಪ್ರಯಾಣಿಸುವುದನ್ನು ಕಾಣಬಹುದಾಗಿದೆ. ಆನೆ, ಹುಲಿ, ಹಾವು ಸೇರಿದಂತೆ ಸುಂದರವಾದ ಪ್ರಕೃತಿ ಸೌಂದರ್ಯದ ದೃಶ್ಯಗಳನ್ನು ಅದ್ಭುತವಾಗಿ ಸೆರೆ ಹಿಡಿಯಲಾಗಿದೆ. ವಿಶೇಷವೆಂದರೆ ಕೊನೆಯಲ್ಲಿ ಡಾ. ರಾಜ್‍ಕುಮಾರ್ ಧ್ವನಿಯಲ್ಲಿ ಅರಣ್ಯವನ್ನು ಉಳಿಸು, ಪ್ರಾಣಿಗಳನ್ನು ಉಳಿಸು ಎಂಬ ಸಂದೇಶ ಸಾರಲಾಗಿದೆ. ಅಮೋಘವರ್ಷ ನಿರ್ದೇಶನದ ಈ ಡಾಕ್ಯುಮೆಂಟರಿ ಸಿನಿಮಾ ಮುಂದಿನ ವರ್ಷ 2022ರಲ್ಲಿ ತೆರೆಕಾಣಲಿದೆ.

  • ಒಬ್ಬ ಡ್ಯಾನ್ಸರ್ ಬರಬಹುದು, ಫೈಟರ್ ಬರಬಹುದು, ಆದ್ರೆ ಅಪ್ಪು ಬರಲ್ಲ: ರಮೇಶ್ ಅರವಿಂದ್

    ಒಬ್ಬ ಡ್ಯಾನ್ಸರ್ ಬರಬಹುದು, ಫೈಟರ್ ಬರಬಹುದು, ಆದ್ರೆ ಅಪ್ಪು ಬರಲ್ಲ: ರಮೇಶ್ ಅರವಿಂದ್

    ಬೆಂಗಳೂರು: ನಾಳೆ ಒಬ್ಬ ಡ್ಯಾನ್ಸರ್ ಬರಬಹುದು, ಫೈಟರ್ ಬರಬಹುದು ಆದರೆ ಪುನೀತ್ ರಾಜ್‍ಕುಮಾರ್ ಮತ್ತೆ ಬರಲ್ಲ ಎಂದು ನಟ ರಮೇಶ್ ಅರವಿಂದ್ ಬೇಸರ ವ್ಯಕ್ತಪಡಿಸಿದ್ದಾರೆ.

    ರಮೇಶ್ ಅರವಿಂದ್ ನಟಿಸಿರುವ 100 ಎಂಬ ಸಿನಿಮಾದ ಕಾರ್ಯಕ್ರಮದಲ್ಲಿ ಪುನೀತ್ ರಾಜ್ ಕುಮಾರ್ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಗುರುಕಿರಣ್ ಮನೆಯಲ್ಲಿ ನಡೆದ ಹುಟ್ಟುಹಬ್ಬದ ಕಾರ್ಯಕ್ರಮದಲ್ಲಿ ಸುಮಾರು 2 ಗಂಟೆಗಳ ಕಾಲ ಕಣ್ಣಲ್ಲಿ ಕಣ್ಣಿಟ್ಟು ಬುದ್ಧನ ಬಗ್ಗೆ ಮಾತನಾಡಿದ್ವಿ. ನಾಳೆ ಒಬ್ಬ ಡ್ಯಾನ್ಸರ್ ಬರಬಹುದು, ಫೈಟರ್ ಬರಬಹುದು. ಆದ್ರೆ ಅಪ್ಪು ಬರಲು ಸಾಧ್ಯವಿಲ್ಲ ಎಂದು ಭಾವುಕರಾಗಿ ನುಡಿದರು. ಇದನ್ನೂ ಓದಿ: ಅಪ್ಪು ಜೊತೆಗಿನ ಸಿಹಿ ನೆನಪುಗಳನ್ನು ಮೆಲುಕು ಹಾಕುತ್ತಿರುವ ಶಿವಣ್ಣ, ರಾಘಣ್ಣ

    ಅಪ್ಪು ಗಂಧದಗುಡಿ ಕನಸು ನನಸಾಗುವ ಮೊದಲು ಅವರು ಈ ಲೋಕ ಬಿಟ್ಟು ಹೊರಟು ಬಿಟ್ಟರು. ಪುನೀತ್ ಮತ್ತೊಂದು ‘ಗಂಧದ ಗುಡಿ’ ರಿಲೀಸ್ ಮಾಡಲು ಪ್ಲಾನ್ ಮಾಡಿದ್ದರು. ಲಾಕ್ ಡೌನ್ ಟೈಮ್ ನಲ್ಲಿ ಕ್ಯಾಮೆರಾಮ್ಯಾನ್ ಅಮೋಘ ವರ್ಷ ಜೊತೆ ಸೇರಿ ಕರ್ನಾಟಕದ ಕಾಡುಗಳ ಬಗ್ಗೆ ಚಿತ್ರೀಕರಣ ಮಾಡಿದ್ದರು. ಸುಮಾರು 90 ನಿಮಿಷಗಳ ಫೀಚರ್ ಫಿಲಂ ಶೂಟ್ ಮಾಡಿ ಗಂಧದ ಗುಡಿ ಹೆಸರಿನಲ್ಲಿ ತೆರೆಗೆ ತರಲು ಸಜ್ಜಾಗಿದ್ದರು. ನಮ್ಮ ರಾಜ್ಯದ ಕಾಡುಗಳು ವನ್ಯಜೀವಿಗಳ ಬಗ್ಗೆ ಈ ಫಿಲಂ ಬೆಳಕು ಚೆಲ್ಲುತ್ತದೆ. ವಿಶೇಷವೆಂದರೆ ಈ ಚಿತ್ರದಲ್ಲಿ ಅಪ್ಪು ಕೂಡ ಕಾಣಿಸಿಕೊಂಡಿದ್ದಾರೆ.

    ಪುನೀತ್ ನವೆಂಬರ್ 1ಕ್ಕೆ ಟೀಸರ್ ಲಾಂಚ್ ಮಾಡಲು ಪ್ಲಾನ್ ಮಾಡಿದ್ದರು. ಈ ಬಾರಿ ರಾಜ್ಯೋತ್ಸವಕ್ಕೆ ಇದು ನನ್ನ ಗಿಫ್ಟ್ ಅಂತ ಆತ್ಮೀಯರ ಬಳಿ ಹೇಳಿಕೊಂಡಿದ್ದರು. ಆದರೆ ಟೀಸರ್ ರಿಲೀಸ್ ಮಾಡುವ ಹೊತ್ತಿನಲ್ಲಿ ಅಭಿಮಾನಿಗಳನ್ನು ಪುನೀತ್ ಅಗಲಿದರು. ಈಗ ಪುನೀತ್ ಅವರ 11 ದಿನದ ಕಾರ್ಯದ ನಂತರ ಗಂಧದಗುಡಿ ರಿಲೀಸ್ ಬಗ್ಗೆ ಮಾಹಿತಿ ಸಿಗಬಹುದು ಎಂದು ಅಪ್ಪು ಜೊತೆಗಿನ ಒಡನಾಟವನ್ನು ರಮೇಶ್ ಅರವಿಂದ್ ಹಂಚಿಕೊಂಡರು. ಇದನ್ನೂ ಓದಿ: ಪುನೀತ್ ಸಾವಿನ ನಂತರ ಜಯದೇವ ಆಸ್ಪತ್ರೆಗೆ ರೋಗಿಗಳು ಶೇ.30 ಹೆಚ್ಚಳ

    ಇದೇ ವೇಳೆ ನಿರ್ಮಾಪಕ ರಮೇಶ್ ರೆಡ್ಡಿ ಮಾತನಾಡಿ, ಪುನೀತ್ ಅವರಿಗೆ ಸಿನಿಮಾ ಮಾಡಬೇಕು ಅಂದ್ಕೊಂಡಿದ್ದೆ ಅದನ್ನು ಅವರ ಹತ್ತಿರ ಹೇಳಿಕೊಂಡಿದ್ದೆ. ಮನೆಗೆ ಬನ್ನಿ ಮಾತಾಡೋಣ ಅಂತ ಹೇಳಿದ್ದರು. ಸಲಗ ಪ್ರೋಗ್ರಾಂನಲ್ಲಿ ಸ್ಟೇಜ್‌ನಲ್ಲಿ ಮಾತಾಡುವಂತೆ ಧೈರ್ಯ ತುಂಬಿದ್ದರು. ಅವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಹೇಳಿದರು.