Tag: Gandhad Gudi

  • ಗಂಧದ ಗುಡಿ ಚಿತ್ರಕ್ಕೆ ‘ಜರ್ನಿ ಟು ರಿಮೆಂಬರ್’ ಅಂತ ಹೆಸರಿಟ್ಟು, ಅದನ್ನು ಬಿಟ್ಟಿದ್ದೇಕೆ?

    ಗಂಧದ ಗುಡಿ ಚಿತ್ರಕ್ಕೆ ‘ಜರ್ನಿ ಟು ರಿಮೆಂಬರ್’ ಅಂತ ಹೆಸರಿಟ್ಟು, ಅದನ್ನು ಬಿಟ್ಟಿದ್ದೇಕೆ?

    ಪುನೀತ್ ರಾಜ್ ಕುಮಾರ್ ಕನಸಿನ ಪ್ರಾಜೆಕ್ಟ್ ಗಂಧದ ಗುಡಿಯ (Gandhad Gudi) ‘ಜರ್ನಿ ಆಫ್ ಗಂಧದಗುಡಿ’ ವಿಡಿಯೋ ಬಿಡುಗಡೆ ಆಗಿದೆ. ಈ ಪ್ರಾಜೆಕ್ಟ್ ಹಿಂದಿನ ಕಥೆಯನ್ನು ನಿರ್ದೇಶಕ  ಅಮೋಘ ವರ್ಷ ಹಾಗೂ ಪುನೀತ್ ಅವರ ಪತ್ನಿ ಅಶ್ವಿನಿ ಪುನೀತ್ ರಾಜ್ ಕುಮಾರ್ ಸವಿವರವಾಗಿ ಹಂಚಿಕೊಂಡಿದ್ದಾರೆ. ಗಂಧದ ಗುಡಿ ಶುರುವಾಗಿದ್ದು ಹೇಗೆ? ಅದನ್ನು ಮೊದಲು ಯಾವ ಹೆಸರಿನಿಂದ ಪ್ರಾರಂಭಿಸಲಾಯಿತು. ನಂತರ ಏನೆಲ್ಲ ಬದಲಾವಣೆಗಳು ಆದವು ಎನ್ನುವ ಮಾಹಿತಿಯನ್ನು ಹಂಚಿಕೊಳ್ಳಲಾಗಿದೆ.

    ನಿರ್ದೇಶಕ ಅಮೋಘ ವರ್ಷ ಪ್ರಕೃತಿಯ ಸೌಂದರ್ಯ, ಕಾಡು ಮೇಡುಗಳ ಅಚ್ಚರಿಗಳನ್ನು ಚಿತ್ರೀಕರಿಸಿ ಪುನೀತ್ (Puneeth Rajkumar) ಅವರ ಮುಂದಿಟ್ಟಾಗ ಸ್ವತಃ ಅಪ್ಪು ಅವರೇ ಅದನ್ನು ಬೆರಗಿನಿಂದ ನೋಡಿದರಂತೆ. ಅಲ್ಲದೇ, ತಮ್ಮ ಆಸೆಗಳನ್ನೂ ಅಮೋಘ ಜೊತೆ ಹಂಚಿಕೊಂಡಿದ್ದರಂತೆ. ಈ ಕನಸಿಗೆ ಅವರು ಇಟ್ಟಿದ್ದ ಹೆಸರು ‘ಜರ್ನಿ ಟು ರಿಮೆಂಬರ್’. ಇದೇ ಹೆಸರಿನಲ್ಲೇ ಮೊದಲು ಪ್ರಾಜೆಕ್ಟ್ ಶುರು ಮಾಡಿದ್ದರಂತೆ. ಆನಂತರ ಇದಕ್ಕೆ ಗಂಧದ ಗುಡಿ ಅಂತ ಹೆಸರಿಟ್ಟಿದ್ದಾರೆ. ಇದನ್ನೂ ಓದಿ:ತುಳುವಿನಲ್ಲೂ ರಿಲೀಸ್ ಆಗಲಿದೆ `ಕಾಂತಾರ’: ರಿಲೀಸ್ ಡೇಟ್ ಫಿಕ್ಸ್

    ಕಾಡಿನಲ್ಲಿ ಜೀವಂತ ಆನೆ ಮತ್ತು ಹುಲಿಯನ್ನು ಒಮ್ಮೆಯಾದರೂ ನೋಡಬೇಕು ಎನ್ನುವುದು ಪುನೀತ್ ಅವರ ಆಸೆಯಾಗಿತ್ತಂತೆ. ಆನೆ ಸಿಗಬಹುದು. ಆದರೆ, ಹುಲಿಯನ್ನು ನೋಡುವುದು ತೀರಾ ಕಷ್ಟ ಮತ್ತು ವಿರಳ. ಆದರೆ, ಪುನೀತ್ ಅವರಿಗೆ ಮೊದಲ ದಿನವೇ ಹುಲಿಯನ್ನು ನೋಡುವಂತಹ ಬಂಪರ್ ಅವಕಾಶ ಸಿಕ್ಕಿತ್ತಂತೆ. ಈ ಕುರಿತು ಅಮೋಘ ಮಾತನಾಡುತ್ತಾ, ‘ಹುಲಿಯನ್ನು ನೋಡಲು ಹತ್ತಾರು ದಿನಗಳ ಕಾದಿದ್ದಿದೆ. ಎಷ್ಟೋ ಜನರಿಗೆ ಮೂರ್ನಾಲ್ಕು ವರ್ಷ ಕಾದರೂ ಸಿಗುವುದಿಲ್ಲ. ಆದರೆ, ಅಪ್ಪು ಅವರಿಗೆ ಮೊದಲ ದಿನವೇ ಹುಲಿ ಕಂಡಿತ್ತು. ಅವರ ಸಂಭ್ರಮಿಸಿದ್ದು ಇನ್ನೂ ಕಣ್ಮುಂದಿದೆ’ ಎಂದಿದ್ದಾರೆ.

    ಪುನೀತ್ ಅವರು ತಾವು ಕಾಡಿಗೆ ಹೋಗುತ್ತೇನೆ ಎಂದು ಹೇಳಿದಾಗ ಪತ್ನಿ ಅಶ್ವಿನಿ (Ashwini) ಅವರಿಗೆ ಸಖತ್ ಭಯವಾಗಿತ್ತಂತೆ. ಇದೆಲ್ಲ ನಿಮಗೆ ಬೇಕಾ ಅಂತಾನೂ ಕೇಳಿದ್ದರಂತೆ. ಆದರೆ, ಪುನೀತ್ ಅವರ ಉತ್ಸಾಹಕ್ಕೆ ಸುಮ್ಮನಾಗಿದ್ದರಂತೆ. ಹಾಗಂತ ಸುಮ್ಮನಿರುವುದಕ್ಕೂ ಆಗುತ್ತಿರಲಿಲ್ಲ. ಪ್ರತಿ ದಿನವೂ ಕಾಲ್ ಮಾಡಿ ಮಾತನಾಡುತ್ತಿದ್ದರು. ಅಲ್ಲಿಯ ಅನುಭವಗಳನ್ನು ಕೇಳಿ ತಿಳಿದುಕೊಳ್ಳುತ್ತಿದ್ದರು ಎಂದು ಸ್ವತಃ ಅಶ್ವಿನಿ ಅವರೇ ಮಾತನಾಡಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಅಪ್ಪು ಇಲ್ಲ ಅಂತ ಹೇಳೋಕೆ ಕಷ್ಟ ಆಗತ್ತೆ : ಅಮಿತಾಭ್ ಬಚ್ಚನ್

    ಅಪ್ಪು ಇಲ್ಲ ಅಂತ ಹೇಳೋಕೆ ಕಷ್ಟ ಆಗತ್ತೆ : ಅಮಿತಾಭ್ ಬಚ್ಚನ್

    ಅಂದುಕೊಂಡಂತೆ ಆಗಿದ್ದರೆ ಗಂಧದ ಗುಡಿ ಪ್ರಿ ರಿಲೀಸ್ ಇವೆಂಟ್ ಗೆ ಅಮಿತಾಭ್ ಬಚ್ಚನ್ (Amitabh Bachchan) ಬರಬೇಕಿತ್ತು. ಅಲ್ಲದೇ, ಕರ್ನಾಟಕ ರತ್ನ ಪ್ರಶಸ್ತಿ ಪ್ರದಾನ ಸಮಾರಂಭಕ್ಕೂ ಅವರನ್ನು ಆಹ್ವಾನಿಸಲು ತೀರ್ಮಾನಿಸಲಾಗಿತ್ತು. ಅನಿವಾರ್ಯ ಕಾರಣಗಳಿಂದಾಗಿ ಅವರು ಬರಲಿಲ್ಲ. ಹಾಗಂತ ಬಚ್ಚನ್ ಅಪ್ಪು ಅವರನ್ನು ನೆನಪಿಸಿಕೊಳ್ಳುವ ದಿನಗಳೇ ಇಲ್ಲವಂತೆ. ಅದರಲ್ಲೂ ಅಪ್ಪು ಇಲ್ಲ ಎನ್ನುವುದನ್ನು ಅವರಿಗೆ ಅರಗಿಸಿಕೊಳ್ಳಲು ಕಷ್ಟವಾಗುತ್ತಿದೆಯಂತೆ. ಈ ಕುರಿತು ಅವರು ಸೋಷಿಯಲ್ ಮೀಡಿಯಾದಲ್ಲಿ ಸುದೀರ್ಘವಾಗಿ ಬರೆದುಕೊಂಡಿದ್ದಾರೆ.

    ‘ಅಪ್ಪು (Puneet Rajkumar) ಇಲ್ಲ ಎಂಬುದನ್ನು ಅಂದುಕೊಂಡು ಮಾತನಾಡಲು ಕಷ್ಟ ಆಗುತ್ತದೆ. ಅಪ್ಪು ಮಗುವಾಗಿದ್ದಾಗಲೇ ನಾನು ಅವರನ್ನು ಮೊದಲು ನೋಡಿದ್ದು. ಅಪ್ಪುವಿನಲ್ಲಿ ಸದಾ ಸೆಳೆಯುವ ಸಂಗತಿ ಅಂದ್ರೆ ಅವರ ನಗು. ಎಲ್ಲಾ ಕಡೆ, ಎಲ್ಲಾ ಸಂದರ್ಭದಲ್ಲೂ, ಯಾವಾಗಲೂ ಅವರ ಮುಖದಲ್ಲಿ ನಗು ಇರುತ್ತದೆ. ಅಪ್ಪು ಅಸಂಖ್ಯಾತ ಅಭಿಮಾನಿಗಳನ್ನು ಹೊಂದಿದ್ದಾರೆ. ಅವರ ಕೊನೆಯ ಚಿತ್ರ ಗಂಧದಗುಡಿಯಲ್ಲಿ ಅವರು ಅಭಿನಯಿಸಿಲ್ಲ. ಅವರು ಅವರಾಗಿಯೇ ಕಾಣಿಸ್ಕೊಂಡಿದ್ದಾರೆ’ ಎಂದು ಬರೆದುಕೊಂಡಿದ್ದಾರೆ. ಇದನ್ನೂ ಓದಿ:ಸ್ಯಾಂಡಲ್ ವುಡ್ ನಲ್ಲಿ ಮತ್ತೆ ಕೇಳಿ ಬರಲಿದೆ ‘ಮೆಲ್ಲುಸಿರೆ ಸವಿಗಾನ’ ಹಾಡು

    ಗಂಧದ ಗುಡಿಯ (Gandhad Gudi) ಬಗ್ಗೆ ಮಾತನಾಡಿರುವ ಬಿಗ್ ಬಿ ‘ಗಂಧದ ಗುಡಿಯಲ್ಲಿ ಕರ್ನಾಟಕ  ವೈಭವದ ವನ್ಯ ಸಂಪತ್ತನ್ನು ತೆರೆದಿಟ್ಟಿದ್ದಾರೆ. ಅಪ್ಪು ಜೊತೆಗಿನ ಗಂಧದ ಗುಡಿ ಪಯಣ ಮಿಸ್ ಮಾಡ್ಕೋಬೇಡಿ. ಕಡ್ಡಾಯವಾಗಿ ಮಕ್ಕಳು ನೋಡಲೇಬೇಕಾದ ಸಿನಿಮಾ.  ವನ್ಯ ಸಂಪತ್ತಿನ ಕುರಿತು ಅರಿಯ ಬೇಕಾದ ಚಿತ್ರ. ಅಪ್ಪು ನಮ್ಮ ಜೊತೆ ನಮ ನೆನಪಿನಲ್ಲಿ ಸದಾ ಜೀವಂತ’ ಎಂದು ಬರೆದಿದ್ದಾರೆ.

    ಅಮಿತಾಭ್ ಬಚ್ಚನ್ ಮಾತನ್ನು ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿರುವ ಅಶ್ವಿನಿ (Ashwini Puneet) ಪುನೀತ್ ರಾಜ್ ಕುಮಾರ್, ಮೇರುನಟನಿಗೆ ಈ ಮೂಲಕ ಧನ್ಯವಾದಗಳನ್ನೂ ಅರ್ಪಿಸಿದ್ದಾರೆ. ಅಮಿತಾಭ್ ಮತ್ತು ಡಾ.ರಾಜ್ ಕುಟುಂಬ ಬಾಂಧವ್ಯ ಹಲವು ವರ್ಷಗಳದ್ದು. ಅನೇಕ ಬಾರಿ ಅಮಿತಾಭ್ ಮತ್ತು ರಾಜ್ ಕುಮಾರ್ ಭೇಟಿ ಮಾಡಿದ್ದಾರೆ. ಅಮಿತಾಭ್ ಅವರಿಗಾಗಿ ಡಾ.ರಾಜ್ ಕುಮಾರ್ ಮರೆಯದೇ ಇರುವಂತಹ ಸಹಾಯವನ್ನೂ ಮಾಡಿದ್ದಾರೆ. ಆ ಋಣವನ್ನು ಬಿಗ್ ಬಿ ಹೀಗೆ ತೀರಿಸಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ‘ಗಂಧದ ಗುಡಿ’ ರಿಲೀಸ್ ಆಗಿ ಒಂದು ವಾರ: ಬಾಕ್ಸ್ ಆಫೀಸ್ ಗಳಿಕೆ ಎಷ್ಟು?

    ‘ಗಂಧದ ಗುಡಿ’ ರಿಲೀಸ್ ಆಗಿ ಒಂದು ವಾರ: ಬಾಕ್ಸ್ ಆಫೀಸ್ ಗಳಿಕೆ ಎಷ್ಟು?

    ಪುನೀತ್ ರಾಜ್ ಕುಮಾರ್ (Puneeth Rajkumar) ಕನಸಿನ ‘ಗಂಧದ ಗುಡಿ’ ರಿಲೀಸ್ ಆಗಿ ಒಂದು ವಾರ ಕಳೆದಿದೆ. ನೂರಾರು ಚಿತ್ರಮಂದಿರಗಳಲ್ಲಿ ಬಿಡುಗಡೆ ಆಗಿದ್ದ ಈ ಡಾಕ್ಯುಡ್ರಾಮಾಗೆ ಪ್ರೇಕ್ಷಕರು ಉತ್ತಮ ರೀತಿಯಲ್ಲೇ ಪ್ರತಿಕ್ರಿಯೆ ತೋರಿಸಿದ್ದರು. ಪೇಡ್ ಪ್ರಿಮಿಯರ್ ಸೇರಿದಂತೆ ಮೊದಲ ದಿನ ಸ್ಪೆಷಲ್ ಶೋಗಳನ್ನು ಆಯೋಜನೆ ಮಾಡಲಾಗಿತ್ತು. ವೀಕೆಂಡ್ ರಜೆಗಳು ಕೂಡ ಈ ಚಿತ್ರಕ್ಕೆ ಸಾಥ್ ನೀಡಿದವು. ಹಾಗಾಗಿ ಬಾಕ್ಸ್ ಆಫೀಸ್ ಗೆ ಹಣ ಹರಿದು ಬಂದಿದೆ ಎಂದು ಅಂದಾಜಿಸಲಾಗಿದೆ.

    ಈ ಚಿತ್ರದ ಬಜೆಟ್ ಅಂದಾಜು ಎರಡು ಕೋಟಿ ಎಂದು ಹೇಳಲಾಗುತ್ತಿದೆ. ಇದು ಪುನೀತ್ ಅವರ ಕನಸಾಗಿದ್ದರಿಂದ ಬಜೆಟ್ ಬಗ್ಗೆ ಲೆಕ್ಕ ಹಾಕುವಂತಿಲ್ಲ ಅಂತಾದರೂ, ಗಳಿಕೆಯ ಲೆಕ್ಕಾಚಾರ ಮಾಡುವಾಗ ಬಜೆಟ್ ಅನ್ನು ಅಂದಾಜಿಸಲಾಗುತ್ತಿದೆ. ಹೀಗಾಗಿ ಬಜೆಟ್ ಗಿಂತಲೂ ಹತ್ತಿಪ್ಪತ್ತು ಪಟ್ಟು ಹೆಚ್ಚೇ ಗಳಿಕೆ ಆಗಿದೆ ಎಂದು ಹೇಳಲಾಗುತ್ತಿದೆ. ಈವರೆಗೂ ಗಂಧದ ಗುಡಿಯಿಂದ ಬಂದ ಹಣ ಅಂದಾಜು 25 ಕೋಟಿ ಎಂದು ಲೆಕ್ಕ ಹಾಕಿದ್ದಾರೆ ಸಿನಿ ಪಂಡಿತರು. ಇದನ್ನೂ ಓದಿ:ಚಿಲ್ಲರೆ, ಮಾನಗೆಟ್ಟವನೇ ಎಂದು ರೂಪೇಶ್ ರಾಜಣ್ಣಗೆ ಸಂಬರ್ಗಿ ಕ್ಲಾಸ್

    ಸಿನಿಮಾ ಬಿಡುಗಡೆಯಾದ ಚಿತ್ರಮಂದಿರಗಳು, ನಡೆದಿರುವ ಶೋಗಳು ಮತ್ತು ಪೇಡ್ ಪ್ರೀಮಿಯರ್ ಸೇರಿದಂತೆ ಈವರೆಗೂ 25 ಕೋಟಿ ರೂಪಾಯಿ ಬಾಕ್ಸ್ ಆಫೀಸಿಗೆ (Box Office) ಹರಿದು ಬಂದಿದೆ ಎನ್ನಲಾಗುತ್ತಿದೆ. ಅಧಿಕೃತವಾಗಿ ಸಿನಿಮಾ ಟೀಮ್ ಆಗಲಿ, ವಿತರಕರಾಗಲಿ ಖಚಿತ ಪಡಿಸದೇ ಇದ್ದರೂ, ಸಿನಿಮಾ ಪಂಡಿತರ ಲೆಕ್ಕಾಚಾರ ಹಾಗಿದೆ. ಇದು ಡಾಕ್ಯುಡ್ರಾಮಾವಾದರೂ, ಪುನೀತ್ ಅಭಿಮಾನಿಗಳು ಮುಗಿಬಿದ್ದು ಸಿನಿಮಾ ವೀಕ್ಷಣೆ ಮಾಡಿದ್ದಾರೆ ಎನ್ನುವುದು ಗೊತ್ತಾಗುತ್ತದೆ.

    ಗಂಧದ ಗುಡಿ (Gandhad Gudi) ಬಗ್ಗೆ ಪುನೀತ್ ಅವರಿಗೆ ಅಪಾರ ಒಲವಿತ್ತು. ಈ ಸಿನಿಮಾವನ್ನು ಜಗತ್ತಿಗೆ ತೋರಿಸುವ ಹಂಬಲವೂ ಇತ್ತು. ಅದಕ್ಕಾಗಿ ಸಕಲ ಸಿದ್ಧತೆಯನ್ನೂ ಅವರು ಮಾಡಿಕೊಂಡಿದ್ದರು. ಇನ್ನೇನು ಟೀಸರ್ ರಿಲೀಸ್ ಮಾಡಬೇಕು ಎನ್ನುವ ಹೊತ್ತಲ್ಲಿ, ಕಣ್ಮರೆಯಾದರು. ಆದರೆ, ಅವರ ಕನಸನ್ನು ಪತ್ನಿ ಅಶ್ವಿನಿ ಪುನೀತ್ ರಾಜ್ ಕುಮಾರ್ (Ashwini Puneeth Rajkumar) ಈಡೇರಿಸಿದ್ದಾರೆ. ಚಿತ್ರವನ್ನು ಎಲ್ಲರಿಗೂ ತೋರಿಸಲು ಹಲವು ಕಾರ್ಯಕ್ರಮಗಳನ್ನೂ ಅವರು ಹಮ್ಮಿಕೊಂಡಿದ್ದರು.

    Live Tv
    [brid partner=56869869 player=32851 video=960834 autoplay=true]

  • ಮೂರು ದಿನದ ಗಂಧದ ಗುಡಿ ಕಲೆಕ್ಷನ್ 20 ಕೋಟಿ: ಅಪ್ಪುಗಾಗಿ ನಿಲ್ಲುತ್ತಿಲ್ಲ ಕಂಬನಿ

    ಮೂರು ದಿನದ ಗಂಧದ ಗುಡಿ ಕಲೆಕ್ಷನ್ 20 ಕೋಟಿ: ಅಪ್ಪುಗಾಗಿ ನಿಲ್ಲುತ್ತಿಲ್ಲ ಕಂಬನಿ

    ದೇ ಶುಕ್ರವಾರ ರಾಜ್ಯಾದ್ಯಂತ ಬಿಡುಗಡೆ ಆಗಿರುವ ಗಂಧದ ಗುಡಿ (Gandhad Gudi) ಡಾಕ್ಯುಮೆಂಟರಿ ಮಾದರಿ ಸಿನಿಮಾಗೆ ಪ್ರೇಕ್ಷಕರಿಂದ ಅತ್ಯುತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಹಾಗೆಯೇ ಬಾಕ್ಸ್ ಆಫೀಸಿನಿಂದಲೂ ಹಣದ ಹೊಳೆ ಹರಿದು ಬಂದಿದೆ. ಗುರುವಾರ ಪೇಯ್ಡ್ ಪ್ರಿಮಿಯರ್, ಶುಕ್ರವಾರ, ಶನಿವಾರ ಮತ್ತು ಭಾನುವಾರದ ಒಟ್ಟು ಕಲೆಕ್ಷನ್ ಅಂದಾಜು 20 ಕೋಟಿ ಎಂದು ಹೇಳಲಾಗುತ್ತಿದೆ.

    ಇದೊಂದು ಡಾಕ್ಯುಮೆಂಟರಿ ಮಾದರಿಯ ಸಿನಿಮಾವಾಗಿದ್ದರೂ, ಅಪ್ಪು (Appu) ಅವರ ಅಭಿಮಾನಿಗಳಿಗೆ ಎಂದಿನಂತೆ, ಡೈಲಾಗ್, ಫೈಟ್ಸ್ , ಹಾಡು, ಡಾನ್ಸ್ ಇಲ್ಲದೇ ಇದ್ದರೂ, ಅಪ್ಪು ನೀಡಿರುವ ಸಂದೇಶವನ್ನು ಸಖಯ್ ಆಗಿ ಎಂಜಾಯ್ ಮಾಡುತ್ತಿದ್ದಾರೆ. ಅಲ್ಲದೇ, ಪುನೀತ್ ಅವರ ಕೆಲವು ಮಾತುಗಳನ್ನು ಅಭಿಮಾನಿಗಳಿಗೆ ಕಣ್ಣೀರು ಹಾಕಿಸಿವೆ. ಸಾಕಷ್ಟು ಅಭಿಮಾನಿಗಳು ಥಿಯೇಟರ್ ನಲ್ಲಿ ಕಣ್ಣೀರು ಹಾಕಿರುವುದು ಸಾಮಾನ್ಯವಾಗಿದೆ.

    ಪುನೀತ್ ರಾಜ್ ಕುಮಾರ್ (Puneeth Rajkumar) ನಟನೆಯ ಗಂಧದ ಗುಡಿ ಡಾಕ್ಯುಡ್ರಾಮಾ ಚಿತ್ರ ಇಂದು ರಾಜ್ಯಾದ್ಯಂತ 200ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಬಿಡುಗಡೆ ಆಗಿದೆ. ಈ ಚಿತ್ರದ ವಿಶೇಷ ಅಂದರೆ, ಅಪ್ಪು ಅಪ್ಪು ಆಗಿಯೇ ಕಾಣಿಸಿಕೊಂಡಿದ್ದಾರೆ. ಯಾವುದೇ ಮೇಕಪ್ ಇಲ್ಲದೇ, ಡೈಲಾಗ್ ಹೊಡೆಯದೇ ಸರಳವಾಗಿ ಹಾಗೂ ಸಹಜವಾಗಿದ್ದಾರೆ. ಹಾಗಾಗಿ ಪುನೀತ್ ಮತ್ತಷ್ಟು ಹತ್ತಿರವಾಗುತ್ತಾರೆ. ಈ ಚಿತ್ರದಲ್ಲಿ ಪುನೀತ್ ಕಾಡಿನ ಮಧ್ಯೆ ಹೋದಾಗ, ವಿಷ ಸರ್ಪಗಳನ್ನು ಕಾಣುತ್ತಾರೆ. ಹುಲಿ, ಚಿರತೆಗಳನ್ನು ನೋಡುತ್ತಾರೆ. ಈ ಸಂದರ್ಭದಲ್ಲಿ ಅವರು ಮಾತೊಂದನ್ನು ಆಡುತ್ತಾರೆ. ಆ ಮಾತು ನೋಡುಗನನ್ನು ಭಾವುಕನಾಗಿಸುತ್ತದೆ.

    ಕಾಡಿನೊಳಗೆ ವಿಷದ ಹಾವು ಕಾಣುತ್ತಾ, ನಿರ್ದೇಶಕ ಅಮೋಘ ವರ್ಷ ಜೊತೆ ತಮಾಷೆಯಾಗಿ ಮಾತನಾಡಿದರೂ ಅದೀಗ ಪ್ರೇಕ್ಷಕರನ್ನು ಕಣ್ಣೀರು ಹಾಕಿಸುತ್ತದೆ. ಹಾವು ನೋಡುತ್ತಾ, ‘ಹೆಂಡ್ತಿ ಮಕ್ಕಳನ್ನು ಮನೇಲಿ ಬಿಟ್ಟು ಬಂದಿದ್ದೀನಿ. ಸೇಫ್ ಆಗಿ ಮನೆ ಸೇರ್ತೀನಿ ತಾನೆ?’ ಎಂದು ಪ್ರಶ್ನೆ ಮಾಡುತ್ತಾರೆ. ಅಂದು ಸೇಫ್ ಆಗಿಯೇ ಮನೆಗೆ ಬಂದ ಪುನೀತ್ ರಾಜ್ ಕುಮಾರ್, ಆ ನಂತರ ಆಸ್ಪತ್ರೆಗೆ ಹೋದವರು ಮತ್ತೆ ಸೇಫ್ ಆಗಿ ಬರಲಿಲ್ಲ ಎನ್ನುವುದು ನೋವಿನ ಸಂಗತಿ. ಈ ಮಾತು ಕೇಳುತ್ತಿದ್ದಂತೆಯೇ ಕಣ್ಣೀರು ಬರುವುದು ಸತ್ಯ.

    Live Tv
    [brid partner=56869869 player=32851 video=960834 autoplay=true]

  • ಬಿಡುಗಡೆಯ ದಿನವೇ 2000 ಪ್ರದರ್ಶನ ಕಂಡ ಗಂಧದ ಗುಡಿ

    ಬಿಡುಗಡೆಯ ದಿನವೇ 2000 ಪ್ರದರ್ಶನ ಕಂಡ ಗಂಧದ ಗುಡಿ

    ಪುನೀತ್ ರಾಜ್ ಕುಮಾರ್ (Puneeth Rajkumar) ನಟನೆಯ ಗಂಧದ ಗುಡಿ ಸಿನಿಮಾ ಬಿಡುಗಡೆ ಆದ ಮೊದಲ ದಿನ ಎರಡು ಸಾವಿರಕ್ಕೂ ಅಧಿಕ ಪ್ರದರ್ಶನ ಕಂಡಿದೆ ಎಂದು ಅಂದಾಜಿಸಲಾಗಿದೆ. ನೂರಾರು ಚಿತ್ರಮಂದಿರಗಳಲ್ಲಿ ರಿಲೀಸ್ ಆಗಿರುವ ಈ ಸಿನಿಮಾವನ್ನು ಅಭಿಮಾನಿಗಳು ಬೆಳಗ್ಗೆಯಿಂದಲೇ ಕಣ್ತುಂಬಿಕೊಂಡಿದ್ದಾರೆ. ಶುಕ್ರವಾರ ಬಹುತೇಕ ಕಡೆ ಸಿನಿಮಾ ಹೌಸ್ ಫೂಲ್ ಆಗಿದ್ದು, ವಾರಾಂತ್ಯದ ಟಿಕೆಟ್ ಕೂಡ ಸೋಲ್ಡ್ ಔಟ್ ಆಗಿವೆ.

    ಸಿಲೆಬ್ರಿಟಿಗಾಗಿ ಗುರುವಾರ ಗಂಧದ ಗುಡಿ (Gandhad Gudi) ಸ್ಪೆಷಲ್ ಶೋ ಆಯೋಜನೆ ಮಾಡಲಾಗಿತ್ತು. ಕನ್ನಡದ ಬಹುತೇಕ ನಟ, ನಟಿಯರು ಹಾಗೂ ತಂತ್ರಜ್ಞರ ಜೊತೆ ಲೇಖಕಿ, ಇನ್ಫೋಸಿಸ್ ನ ಸುಧಾಮೂರ್ತಿ (Sudhamurthy) ಕೂಡ ಆಗಮಿಸಿದ್ದರು. ಸಿನಿಮಾ ನೋಡಿದ ನಂತರ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ‘ಕನ್ನಡದಲ್ಲಿ ಇಂಥದ್ದೊಂದು ಸಿನಿಮಾ ಬಂದಿರುವುದು ನೋಡಿ ಗರ್ವ ಬಂತು. ಅವರ ಈ ಪ್ರಯತ್ನಕ್ಕೆ ಫುಲ್ ಮಾರ್ಕ್ಸ್ ಕೊಡುತ್ತೇನೆ’ ಎಂದು ಹೆಮ್ಮೆಯಿಂದ ಮಾತನಾಡಿದರು. ಇದನ್ನೂ ಓದಿ:ಪುನೀತ್ ಪ್ರಥಮ ಪುಣ್ಯಸ್ಮರಣೆ: ಪತ್ನಿ ಅಶ್ವಿನಿ ಪುನೀತ್ ರಾಜ್ ಕುಮಾರ್ ಭಾವುಕ ಪತ್ರ

    ಈ ಗಂಧದ ಗುಡಿಯಲ್ಲಿ ಯುವಕರು ನೋಡಿ ತಿಳಿದುಕೊಳ‍್ಳಬಹುದಾದ ಸಾಕಷ್ಟು ವಿಷಯಗಳು ಇವೆ. ಅದರಲ್ಲೂ ನನ್ನ ಉತ್ತರ ಕರ್ನಾಟಕದ ಬಗ್ಗೆ ತೋರಿಸಿದಾಗ ಮತ್ತು ಪುನೀತ್ ಅವರು ಉತ್ತರ ಕರ್ನಾಟಕದ ಬಗ್ಗೆ ಹೆಮ್ಮೆಯಿಂದ ಮಾತನಾಡಿದಾಗ ನಾನೂ ಭಾವುಕಳಾದೆ. ನಮ್ಮ ನೆಲದ ಚಿತ್ರ ಇದಾಗಿದ್ದರಿಂದ ಹೆಚ್ಚು ಆಪ್ತತೆ ಅನಿಸಿತು ಎಂದು ಸುಧಾಮೂರ್ತಿ ಮಾತನಾಡಿದರು.

     

    ಗಂಧದ ಗುಡಿ ಡಾಕ್ಯುಡ್ರಾಮಾ ಸಿನಿಮಾ ನಿನ್ನೆ ಬಿಡುಗಡೆ ಆಗಿ, ಬೆಳಗ್ಗೆಯೇ ನೂರಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಸ್ಪೆಷಲ್ ಶೋ ಆಯೋಜನೆಗೊಂಡಿದ್ದವು. ಮೊದಲ ಪ್ರದರ್ಶನದಲ್ಲೇ ನೆಚ್ಚಿನ ನಟನ ಚಿತ್ರವನ್ನು ಕಣ್ತುಂಬಿಕೊಂಡ ಅಭಿಮಾನಿಗಳು ಭಾವುಕರಾದರು. ಅಭಿಮಾನಿಗಳ ಜೊತೆಯೇ ಡಾ.ರಾಜ್ ಕುಟುಂಬ ಕೂಡ ಸಿನಿಮಾ ವೀಕ್ಷಿಸಿದೆ.

    Live Tv
    [brid partner=56869869 player=32851 video=960834 autoplay=true]

  • ಥಿಯೇಟರ್ ಒಳಗಡೆ ಪಟಾಕಿ ಸಿಡಿಸಿದ ಅಪ್ಪು ಅಭಿಮಾನಿಗಳು – ಗಂಧದಗುಡಿ ಸಿನಿಮಾ ಕೆಲಕಾಲ ಸ್ಥಗಿತ

    ಥಿಯೇಟರ್ ಒಳಗಡೆ ಪಟಾಕಿ ಸಿಡಿಸಿದ ಅಪ್ಪು ಅಭಿಮಾನಿಗಳು – ಗಂಧದಗುಡಿ ಸಿನಿಮಾ ಕೆಲಕಾಲ ಸ್ಥಗಿತ

    ಚಿಕ್ಕಮಗಳೂರು: ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ (Puneeth Rajkumar) ಅಭಿನಯದ ಗಂಧದಗುಡಿ (Gandhad Gudi) ಚಿತ್ರ ಪ್ರದರ್ಶನದ ವೇಳೆ ಅಭಿಮಾನಿಗಳು ಥಿಯೇಟರ್ (Theater) ಒಳಗಡೆ ಪಟಾಕಿ (Fireworks) ಸಿಡಿಸಿದ ಪರಿಣಾಮ ಚಿತ್ರ ಪ್ರದರ್ಶನ ಕೆಲ ಕಾಲ ಸ್ಥಗಿತಗೊಂಡಿದ್ದ ಘಟನೆ ಇಂದು ಚಿಕ್ಕಮಗಳೂರಿನ (ನಾಗಲಕ್ಷ್ಮೀ ಥಿಯೇಟರ್‌ನಲ್ಲಿ ನಡೆದಿದೆ.

    ರಾಜ್ಯಾದ್ಯಂತ ಬೆಳ್ಳಂಬೆಳಗ್ಗೆಯೇ ಚಿತ್ರ ತೆರೆಕಂಡರೂ ಜಿಲ್ಲೆಯಲ್ಲಿ ಪ್ರದರ್ಶನವಾಗಿದ್ದು ಮಾತ್ರ ಮಧ್ಯಾಹ್ನ 12 ಗಂಟೆ ವೇಳೆಗೆ. ಬೆಳಗ್ಗೆಯಿಂದಲೂ ಥಿಯೇಟರ್ ಮುಂದೆ ಅಪ್ಪುನನ್ನು ತೆರೆಮೇಲೆ ನೋಡಲು ಅಭಿಮಾನಿಗಳು ಕಾದು ಕುಳಿತಿದ್ದರು. ಸಿನಿಮಾ ಆರಂಭವಾಗುತ್ತಿದ್ದಂತೆಯೇ ತೆರೆ ಮೇಲೆ ಅಜಾತಶತ್ರು ಅಪ್ಪುನನ್ನು ನೋಡಿ, ಕೂಗಾಡಿ, ಶಿಳ್ಳೆ ಹೊಡೆದು, ಥಿಯೇಟರ್ ಒಳಗಡೆಯೇ ಪಟಾಕಿಯನ್ನೂ ಸಿಡಿಸಿದ್ದಾರೆ.

    ಈ ವೇಳೆ ಕೆಲ ಅಭಿಮಾನಿಗಳು ಹೂವಿನ ಕುಂಡ, ಪಟಾಕಿಯನ್ನು ಹಚ್ಚಿದ್ದಾರೆ. ಇದರಿಂದ ಥಿಯೇಟರ್ ಒಳಗಡೆ ದಟ್ಟ ಹೊಗೆ ತುಂಬಿಕೊಂಡಿತ್ತು. ಪರಿಣಾಮ ಥಿಯೇಟರ್ ಮಾಲೀಕರು ಕೆಲ ಕಾಲ ಸಿನಿಮಾ ಪ್ರದರ್ಶನವನ್ನು ಸ್ಥಗಿತಗೊಳಿಸಿದ್ದರು. ಪಟಾಕಿಯ ಹೊಗೆ ಕಡಿಮೆಯಾದ ಬಳಿಕ ಪುನಃ ಚಿತ್ರವನ್ನು ಆರಂಭಿಸಿದ್ದಾರೆ. ಸಿನಿಮಾ ನಿಲ್ಲಿಸಿ ಬಂದ ಥಿಯೇಟರ್ ಮಾಲೀಕರು ಯಾರು ಕೂಡಾ ಪಟಾಕಿ ಸಿಡಿಸದಂತೆ ಮನವಿ ಮಾಡಿದ್ದಾರೆ. ಇದನ್ನೂ ಓದಿ: ಬಿಜೆಪಿಯಲ್ಲಿರುವ ನಟಿಯರು ಐಟಂಗಳು ಹೇಳಿಕೆಗೆ ಕ್ಷಮೆಯಾಚಿಸಿದ ಕನಿಮೋಳಿ

    ಇದಕ್ಕೂ ಮುನ್ನ ಪುನೀತ್‌ನನ್ನು ಕಣ್ತುಂಬಿಕೊಳ್ಳಲು ಬೆಳಗ್ಗೆಯೇ ಥಿಯೇಟರ್ ಬಳಿ ಬಂದಿದ್ದ ಅಭಿಮಾನಿಗಳು ಥಿಯೇಟರ್‌ಗೆ ಹೂವಿನ ಹಾರ ಹಾಕಿದ್ದರು. ಅಪ್ಪು ಕಟೌಟ್‌ಗೂ ವಿವಿಧ ರೀತಿಯ ಬಣ್ಣ-ಬಣ್ಣದ ಹೂವುಗಳನ್ನು ಹಾಕಿ ಅಲಂಕರಿಸಿ, ಹಾಲಿನ ಅಭಿಷೇಕವನ್ನೂ ಮಾಡಿದ್ದರು. ಫಸ್ಟ್ ಶೋ ನೋಡಿದ ಅಭಿಮಾನಿಗಳಲ್ಲಿ ಹೆಚ್ಚಿನವರು ಕಾಲೇಜು ಹುಡುಗರೇ ಇದ್ದರು. ಇದನ್ನೂ ಓದಿ: ‘ಹುಟ್ಟಿದರೆ ಕನ್ನಡ ನಾಡಲ್ಲಿ ಹುಟ್ಟಬೇಕು’ ಹಾಡಿಗೆ ಸಿ.ಟಿ ರವಿ ಮಸ್ತ್ ಸ್ಟೆಪ್

    Live Tv
    [brid partner=56869869 player=32851 video=960834 autoplay=true]

  • ಗಂಧದ ಗುಡಿ ಅಬ್ಬರದ ನಡುವೆಯೂ ‘ಕಾಂತಾರ’ ಹೌಸ್ ಫುಲ್

    ಗಂಧದ ಗುಡಿ ಅಬ್ಬರದ ನಡುವೆಯೂ ‘ಕಾಂತಾರ’ ಹೌಸ್ ಫುಲ್

    ಪುನೀತ್ ರಾಜ್ ಕುಮಾರ್ (Puneeth Rajkumar) ಕನಸಿನ ಗಂಧದ ಗುಡಿ (Gandhad Gudi)  ಚಿತ್ರ ಇಂದು ರಾಜ್ಯಾದ್ಯಂತ ರಿಲೀಸ್ ಆಗಿದೆ. ಬೆಳಗ್ಗೆ 6 ಗಂಟೆಯಿಂದಲೇ ಅಪ್ಪು ಅಭಿಮಾನಿಗಳು ನೆಚ್ಚಿನ ನಟ ಚಿತ್ರವನ್ನು ಕಣ್ತುಂಬಿಕೊಳ್ಳುತ್ತಿದ್ದಾರೆ. ಈ ಕಡೆ ರಿಷಬ್ ಶೆಟ್ಟಿ (Rishabh Shetty) ನಟಿಸಿ, ನಿರ್ದೇಶನ ಮಾಡಿರುವ ಕಾಂತಾರ ಚಿತ್ರ ಕೂಡ ಹಲವು ಕಡೆ ಹೌಸ್ ಫುಲ್ (House Full) ಪ್ರದರ್ಶನ ಕಾಣುತ್ತಿದೆ. ಅಲ್ಲದೇ, ಧನಂಜಯ್ ನಟನೆಯ ಹೆಡ್ ಬುಷ್ ಸಿನಿಮಾ ಕೂಡ ಉತ್ತಮ ಪ್ರದರ್ಶನ ಕಾಣುತ್ತಿದೆ.

    ಗಂಧದ ಗುಡಿ ಸಿನಿಮಾದಿಂದಾಗಿ ಕಾಂತಾರ (Kantara) ಮತ್ತು ಹೆಡ್ ಬುಷ್ ಸಿನಿಮಾಗೆ ಎಫೆಕ್ಟ್ ಆಗಲಿದೆ ಎಂದು ಹೇಳಲಾಗುತ್ತಿತ್ತು. ಆದರೆ, ಗಂಧದ ಗುಡಿಯಿಂದಾಗಿ ಈ ಎರಡೂ ಚಿತ್ರಗಳಿಗೆ ಯಾವುದೇ ರೀತಿಯಲ್ಲಿ ತೊಂದರೆ ಆಗಿಲ್ಲ. ಕೆಲವು ಕಡೆ ಶೋಗಳನ್ನು ರದ್ದು ಮಾಡಿ ಗಂಧದ ಗುಡಿ ಚಿತ್ರಕ್ಕೆ ನೀಡಲಾಗಿದೆ ಎನ್ನುವ ಮಾಹಿತಿ ಇದೆ. ಇನ್ನೂ ಹಲವು ಕಡೆ ಅಭಿಮಾನಿಗಳೇ ಒತ್ತಾಯ ಮಾಡಿ, ಪ್ರತಿಭಟಿಸಿ ಗಂಧದ ಗುಡಿ ಚಿತ್ರವನ್ನು ರಿಲೀಸ್ ಮಾಡಿಸಿಕೊಂಡಿದ್ದಾರೆ. ಇದನ್ನೂ ಓದಿ: ಹಿಂದುತ್ವದಲ್ಲೇ ಬ್ರಾಹ್ಮಣತ್ವವಿದೆ; ಪಬ್ಲಿಸಿಟಿಗೋಸ್ಕರ ನಟ ಚೇತನ್ ವಿವಾದಿತ ಹೇಳಿಕೆ – ಪೇಜಾವರ ಶ್ರೀ

    ಗಂಧದ ಗುಡಿ ಡಾಕ್ಯುಡ್ರಾಮಾ ಸಿನಿಮಾ ಇಂದು ಬಿಡುಗಡೆ ಆಗಿ, ಬೆಳಗ್ಗೆಯೇ ನೂರಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಸ್ಪೆಷಲ್ ಶೋ ಆಯೋಜನೆಗೊಂಡಿದ್ದವು. ಮೊದಲ ಪ್ರದರ್ಶನದಲ್ಲೇ ನೆಚ್ಚಿನ ನಟನ ಚಿತ್ರವನ್ನು ಕಣ್ತುಂಬಿಕೊಂಡ ಅಭಿಮಾನಿಗಳು ಭಾವುಕರಾದರು. ಅಭಿಮಾನಿಗಳ ಜೊತೆಯೇ ಡಾ.ರಾಜ್ ಕುಟುಂಬ ಕೂಡ ಸಿನಿಮಾ ವೀಕ್ಷಿಸಿದೆ.

    ಇಂದು ಬೆಳಗ್ಗೆ ಹತ್ತು ಗಂಟೆಯೊಳಗೆ ಬೆಂಗಳೂರಿನಲ್ಲೇ 50ಕ್ಕೂ ಹೆಚ್ಚು ಪ್ರದರ್ಶನಗಳನ್ನು ಆಯೋಜನೆ ಮಾಡಿದ್ದು, ಬೆಳಗಿನ ಜಾವವೇ 50 ಬಾರಿ ಈ ಸಿನಿಮಾ ಬೆಂಗಳೂರಿನ ಮಲ್ಟಿಪ್ಲೆಕ್ಸ್ ಚಿತ್ರ ಮಂದಿರಗಳಲ್ಲಿ ಪ್ರದರ್ಶನ ಕಾಣುತ್ತಿದೆ ಎಂದು ವಿತರಕ ಕಾರ್ತಿಕ್ ಗೌಡ ಮಾಹಿತಿ ಹಂಚಿಕೊಂಡಿದ್ದಾರೆ. ಇದೊಂದು ನೂತನ ದಾಖಲೆ ಎಂದೂ ಅವರು ತಿಳಿಸಿದ್ದಾರೆ. ಬೆಳಗಿನ ಜಾವ 6 ಗಂಟೆಯಿಂದಲೇ ಸಿನಿಮಾ ಪ್ರದರ್ಶನ ಶುರುವಾಗಿದೆ.

    Live Tv
    [brid partner=56869869 player=32851 video=960834 autoplay=true]

  • ವರ್ಷದ ಬಳಿಕ ಪುನೀತ್ ಟ್ವಿಟ್ಟರ್ ಖಾತೆ ಆಕ್ವೀವ್ : ಗಂಧದಗುಡಿಗೆ ಬನ್ನಿ ಸಂದೇಶ

    ವರ್ಷದ ಬಳಿಕ ಪುನೀತ್ ಟ್ವಿಟ್ಟರ್ ಖಾತೆ ಆಕ್ವೀವ್ : ಗಂಧದಗುಡಿಗೆ ಬನ್ನಿ ಸಂದೇಶ

    ಪುನೀತ್ ರಾಜ್ ಕುಮಾರ್ (Puneeth Rajkumar) ಕನಸಿನ ಗಂಧದ ಗುಡಿ (Gandhad Gudi) ಚಿತ್ರ ಬಿಡುಗಡೆಯ ಹೊತ್ತಲ್ಲಿ ಅಪ್ಪು ಬಳಸುತ್ತಿದ್ದ ಅವರ ಅಧಿಕೃತ ಟ್ವಿಟ್ಟರ್ (Twitter) ಖಾತೆ ಮತ್ತೆ ಆಕ್ಟೀವ್ ಆಗಿದೆ. ವರ್ಷದಿಂದ ಈ ಖಾತೆಯನ್ನೂ ಯಾರೂ, ಯಾವುದೇ ಕಾರಣಕ್ಕೂ ಬಳಸುತ್ತಿರಲಿಲ್ಲ. ವರ್ಷದ ನಂತರ, ಅದರಲ್ಲೂ ಅವರ ಡ್ರೀಮ್ ‍ಪ್ರಾಜೆಕ್ಟ್ ಗಂಧದ ಗುಡಿ ಬಿಡುಗಡೆ ಆಗುತ್ತಿರುವ ಸಂದರ್ಭದಲ್ಲಿ ಅದು ಮತ್ತೆ ಆಕ್ಟೀವ್ ಆಗಿದೆ.

    ಇದೇ ತಿಂಗಳು ಅಪ್ಪು (Appu) ಇದೇ ಖಾತೆಯಲ್ಲಿ ಗಂಧದ ಗುಡಿ ಬಗ್ಗೆ ಟ್ವಿಟ್ ಮಾಡಿದ್ದರು. ಕೆಲ ಸಂಗತಿಗಳನ್ನು ಹಂಚಿಕೊಂಡಿದ್ದರು. ಆನಂತರ ಅಪ್ಪು ನಿಧನರಾದರು. ವರ್ಷದ ನಂತರ ಆ ಖಾತೆಯಲ್ಲಿ ಗಂಧದ ಗುಡಿ ಬಗ್ಗೆಯೇ ಅಪ್ ಡೇಟ್ ಬಂದಿದ್ದು, ‘ನಿಮ್ಮನ್ನೆಲ್ಲ ನೋಡುವ ಕಾತರದಲ್ಲಿ’ ಎಂದು ಬರೆಯಲಾಗಿದೆ. ಅಪ್ಪು ಮತ್ತೆ ಹುಟ್ಟಿ ಬಂದರು ಎನ್ನುವಷ್ಟರ ಮಟ್ಟಿಗೆ ಅಭಿಮಾನಿಗಳು ಟ್ವಿಟ್ ನೋಡಿ ಭಾವುಕರಾಗಿದ್ದಾರೆ.

    ಗಂಧದ ಗುಡಿ ಡಾಕ್ಯುಡ್ರಾಮಾ ಸಿನಿಮಾ ಇಂದು ಬಿಡುಗಡೆ ಆಗಿ, ಬೆಳಗ್ಗೆಯೇ ನೂರಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಸ್ಪೆಷಲ್ ಶೋ ಆಯೋಜನೆಗೊಂಡಿದ್ದವು. ಮೊದಲ ಪ್ರದರ್ಶನದಲ್ಲೇ ನೆಚ್ಚಿನ ನಟನ ಚಿತ್ರವನ್ನು ಕಣ್ತುಂಬಿಕೊಂಡ ಅಭಿಮಾನಿಗಳು ಭಾವುಕರಾದರು. ಅಭಿಮಾನಿಗಳ ಜೊತೆಯೇ ಡಾ.ರಾಜ್ ಕುಟುಂಬ ಕೂಡ ಸಿನಿಮಾ ವೀಕ್ಷಿಸಿದೆ.

    ಇಂದು ಬೆಳಗ್ಗೆ ಹತ್ತು ಗಂಟೆಯೊಳಗೆ ಬೆಂಗಳೂರಿನಲ್ಲೇ 50ಕ್ಕೂ ಹೆಚ್ಚು ಪ್ರದರ್ಶನಗಳನ್ನು ಆಯೋಜನೆ ಮಾಡಿದ್ದು, ಬೆಳಗಿನ ಜಾವವೇ 50 ಬಾರಿ ಈ ಸಿನಿಮಾ ಬೆಂಗಳೂರಿನ ಮಲ್ಟಿಪ್ಲೆಕ್ಸ್ ಚಿತ್ರ ಮಂದಿರಗಳಲ್ಲಿ ಪ್ರದರ್ಶನ ಕಾಣುತ್ತಿದೆ ಎಂದು ವಿತರಕ ಕಾರ್ತಿಕ್ ಗೌಡ ಮಾಹಿತಿ ಹಂಚಿಕೊಂಡಿದ್ದಾರೆ. ಇದೊಂದು ನೂತನ ದಾಖಲೆ ಎಂದೂ ಅವರು ತಿಳಿಸಿದ್ದಾರೆ. ಬೆಳಗಿನ ಜಾವ 6 ಗಂಟೆಯಿಂದಲೇ ಸಿನಿಮಾ ಪ್ರದರ್ಶನ ಶುರುವಾಗಿದೆ.

    Live Tv
    [brid partner=56869869 player=32851 video=960834 autoplay=true]

  • ‘ಗಂಧದ ಗುಡಿ’ ನೋಡಿ ಗರ್ವ ಬಂತು: ಸುಧಾಮೂರ್ತಿ ಫಸ್ಟ್ ರಿಯಾಕ್ಷನ್

    ‘ಗಂಧದ ಗುಡಿ’ ನೋಡಿ ಗರ್ವ ಬಂತು: ಸುಧಾಮೂರ್ತಿ ಫಸ್ಟ್ ರಿಯಾಕ್ಷನ್

    ಸಿಲೆಬ್ರಿಟಿಗಾಗಿ ನಿನ್ನೆ ಗಂಧದ ಗುಡಿ (Gandhad Gudi) ಸ್ಪೆಷಲ್ ಶೋ ಆಯೋಜನೆ ಮಾಡಲಾಗಿತ್ತು. ಕನ್ನಡದ ಬಹುತೇಕ ನಟ, ನಟಿಯರು ಹಾಗೂ ತಂತ್ರಜ್ಞರ ಜೊತೆ ಲೇಖಕಿ, ಇನ್ಫೋಸಿಸ್ (Infosys) ನ ಸುಧಾಮೂರ್ತಿ ಕೂಡ ಆಗಮಿಸಿದ್ದರು. ಸಿನಿಮಾ ನೋಡಿದ ನಂತರ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ‘ಕನ್ನಡದಲ್ಲಿ ಇಂಥದ್ದೊಂದು ಸಿನಿಮಾ ಬಂದಿರುವುದು ನೋಡಿ ಗರ್ವ ಬಂತು. ಅವರ ಈ ಪ್ರಯತ್ನಕ್ಕೆ ಫುಲ್ ಮಾರ್ಕ್ಸ್ ಕೊಡುತ್ತೇನೆ’ ಎಂದು ಹೆಮ್ಮೆಯಿಂದ ಮಾತನಾಡಿದರು.

    ಈ ಗಂಧದ ಗುಡಿಯಲ್ಲಿ ಯುವಕರು ನೋಡಿ ತಿಳಿದುಕೊಳ‍್ಳಬಹುದಾದ ಸಾಕಷ್ಟು ವಿಷಯಗಳು ಇವೆ. ಅದರಲ್ಲೂ ನನ್ನ ಉತ್ತರ ಕರ್ನಾಟಕದ ಬಗ್ಗೆ ತೋರಿಸಿದಾಗ ಮತ್ತು ಪುನೀತ್ (Puneeth Rajkumar) ಅವರು ಉತ್ತರ ಕರ್ನಾಟಕದ ಬಗ್ಗೆ ಹೆಮ್ಮೆಯಿಂದ ಮಾತನಾಡಿದಾಗ ನಾನೂ ಭಾವುಕಳಾದೆ. ನಮ್ಮ ನೆಲದ ಚಿತ್ರ ಇದಾಗಿದ್ದರಿಂದ ಹೆಚ್ಚು ಆಪ್ತತೆ ಅನಿಸಿತು ಎಂದು ಸುಧಾಮೂರ್ತಿ (Sudhamurthy) ಮಾತನಾಡಿದರು. ಇದನ್ನೂ ಓದಿ: ಗಂಧದಗುಡಿ ಸಿನಿಮಾ ಅಲ್ಲವೇ ಅಲ್ಲ, ಅದೊಂದು ಅನುಭೂತಿ

    ಗಂಧದ ಗುಡಿ ಡಾಕ್ಯುಡ್ರಾಮಾ ಸಿನಿಮಾ ಇಂದು ಬಿಡುಗಡೆ ಆಗಿ, ಬೆಳಗ್ಗೆಯೇ ನೂರಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಸ್ಪೆಷಲ್ ಶೋ ಆಯೋಜನೆಗೊಂಡಿದ್ದವು. ಮೊದಲ ಪ್ರದರ್ಶನದಲ್ಲೇ ನೆಚ್ಚಿನ ನಟನ ಚಿತ್ರವನ್ನು ಕಣ್ತುಂಬಿಕೊಂಡ ಅಭಿಮಾನಿಗಳು ಭಾವುಕರಾದರು. ಅಭಿಮಾನಿಗಳ ಜೊತೆಯೇ ಡಾ.ರಾಜ್ ಕುಟುಂಬ ಕೂಡ ಸಿನಿಮಾ ವೀಕ್ಷಿಸಿದೆ.

    ಇಂದು ಬೆಳಗ್ಗೆ ಹತ್ತು ಗಂಟೆಯೊಳಗೆ ಬೆಂಗಳೂರಿನಲ್ಲೇ 50ಕ್ಕೂ ಹೆಚ್ಚು ಪ್ರದರ್ಶನಗಳನ್ನು ಆಯೋಜನೆ ಮಾಡಿದ್ದು, ಬೆಳಗಿನ ಜಾವವೇ 50 ಬಾರಿ ಈ ಸಿನಿಮಾ ಬೆಂಗಳೂರಿನ ಮಲ್ಟಿಪ್ಲೆಕ್ಸ್ ಚಿತ್ರ ಮಂದಿರಗಳಲ್ಲಿ ಪ್ರದರ್ಶನ ಕಾಣುತ್ತಿದೆ ಎಂದು ವಿತರಕ ಕಾರ್ತಿಕ್ ಗೌಡ ಮಾಹಿತಿ ಹಂಚಿಕೊಂಡಿದ್ದಾರೆ. ಇದೊಂದು ನೂತನ ದಾಖಲೆ ಎಂದೂ ಅವರು ತಿಳಿಸಿದ್ದಾರೆ. ಬೆಳಗಿನ ಜಾವ 6 ಗಂಟೆಯಿಂದಲೇ ಸಿನಿಮಾ ಪ್ರದರ್ಶನ ಶುರುವಾಗಿದೆ.

    Live Tv
    [brid partner=56869869 player=32851 video=960834 autoplay=true]

  • ‘ಗಂಧದ ಗುಡಿ’ ಚಿತ್ರದಲ್ಲಿ ಅಪ್ಪು ಪತ್ನಿ ಅಶ್ವಿನಿ ಪುನೀತ್ ರಾಜ್ ಕುಮಾರ್ ಕೂಡ ಇದ್ದಾರೆ

    ‘ಗಂಧದ ಗುಡಿ’ ಚಿತ್ರದಲ್ಲಿ ಅಪ್ಪು ಪತ್ನಿ ಅಶ್ವಿನಿ ಪುನೀತ್ ರಾಜ್ ಕುಮಾರ್ ಕೂಡ ಇದ್ದಾರೆ

    ಇಂದು ರಾಜ್ಯಾದ್ಯಂತ ಬಿಡುಗಡೆ ಆಗಿರುವ ಪುನೀತ್ ರಾಜ್ ಕುಮಾರ್ ಕನಸಿನ ಗಂಧದ ಗುಡಿ (Gandhad Gudi) ಚಿತ್ರದಲ್ಲಿ ಪುನೀತ್ ಪತ್ನಿ ಅಶ್ವಿನಿ ಪುನೀತ್ ರಾಜ್ ಕುಮಾರ್ (Ashwini Puneeth) ಕೂಡ ಇದ್ದಾರೆ. ಚಿತ್ರ ಶುರುವಾಗುವುದು ಅಶ್ವಿನಿ ಅವರ ಮಾತಿನ ಮೂಲಕ. ಅವರು ಅಪ್ಪುವನ್ನು ಬಣ್ಣಿಸುವ ರೀತಿಯೇ ಸೊಗಸು. ಒಂದಷ್ಟು ಅಚ್ಚರಿ, ಒಂದಷ್ಟು ಭಾವುಕತೆ ಮತ್ತಷ್ಟು ಚಿತ್ರ ನೋಡುವ ಕುತೂಹಲವನ್ನು ಅಶ್ವಿನಿ ಹುಟ್ಟು ಹಾಕುತ್ತಾರೆ. ಆನಂತರ ಪುನೀತ್ ಹೊಸ ಲೋಕಕ್ಕೆ ನೋಡುಗರನ್ನು ಕರೆದುಕೊಂಡು ಹೋಗುತ್ತಾರೆ.

    ಪುನೀತ್ ರಾಜ್ ಕುಮಾರ್ (Puneeth Rajkumar) ನಟನೆಯ ಗಂಧದ ಗುಡಿ ಡಾಕ್ಯುಡ್ರಾಮಾ ಚಿತ್ರ ಇಂದು ರಾಜ್ಯಾದ್ಯಂತ 200ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಬಿಡುಗಡೆ ಆಗಿದೆ. ಈ ಚಿತ್ರದ ವಿಶೇಷ ಅಂದರೆ, ಅಪ್ಪು ಅಪ್ಪು ಆಗಿಯೇ ಕಾಣಿಸಿಕೊಂಡಿದ್ದಾರೆ. ಯಾವುದೇ ಮೇಕಪ್ ಇಲ್ಲದೇ, ಡೈಲಾಗ್ ಹೊಡೆಯದೇ ಸರಳವಾಗಿ ಹಾಗೂ ಸಹಜವಾಗಿದ್ದಾರೆ. ಹಾಗಾಗಿ ಪುನೀತ್ ಮತ್ತಷ್ಟು ಹತ್ತಿರವಾಗುತ್ತಾರೆ. ಈ ಚಿತ್ರದಲ್ಲಿ ಪುನೀತ್ ಕಾಡಿನ ಮಧ್ಯೆ ಹೋದಾಗ, ವಿಷ ಸರ್ಪಗಳನ್ನು ಕಾಣುತ್ತಾರೆ. ಹುಲಿ, ಚಿರತೆಗಳನ್ನು ನೋಡುತ್ತಾರೆ. ಈ ಸಂದರ್ಭದಲ್ಲಿ ಅವರು ಮಾತೊಂದನ್ನು ಆಡುತ್ತಾರೆ. ಆ ಮಾತು ನೋಡುಗನನ್ನು ಭಾವುಕನಾಗಿಸುತ್ತದೆ. ಇದನ್ನೂ ಓದಿ: ಗಂಧದಗುಡಿ ಸಿನಿಮಾ ಅಲ್ಲವೇ ಅಲ್ಲ, ಅದೊಂದು ಅನುಭೂತಿ

    ಕಾಡಿನೊಳಗೆ ವಿಷದ ಹಾವು ಕಾಣುತ್ತಾ, ನಿರ್ದೇಶಕ ಅಮೋಘ ವರ್ಷ (Amogha Varsha) ಜೊತೆ ತಮಾಷೆಯಾಗಿ ಮಾತನಾಡಿದರೂ ಅದೀಗ ಪ್ರೇಕ್ಷಕರನ್ನು ಕಣ್ಣೀರು ಹಾಕಿಸುತ್ತದೆ. ಹಾವು ನೋಡುತ್ತಾ, ‘ಹೆಂಡ್ತಿ ಮಕ್ಕಳನ್ನು ಮನೇಲಿ ಬಿಟ್ಟು ಬಂದಿದ್ದೀನಿ. ಸೇಫ್ ಆಗಿ ಮನೆ ಸೇರ್ತೀನಿ ತಾನೆ?’ ಎಂದು ಪ್ರಶ್ನೆ ಮಾಡುತ್ತಾರೆ. ಅಂದು ಸೇಫ್ ಆಗಿಯೇ ಮನೆಗೆ ಬಂದ ಪುನೀತ್ ರಾಜ್ ಕುಮಾರ್, ಆ ನಂತರ ಆಸ್ಪತ್ರೆಗೆ ಹೋದವರು ಮತ್ತೆ ಸೇಫ್ ಆಗಿ ಬರಲಿಲ್ಲ ಎನ್ನುವುದು ನೋವಿನ ಸಂಗತಿ. ಈ ಮಾತು ಕೇಳುತ್ತಿದ್ದಂತೆಯೇ ಕಣ್ಣೀರು ಬರುವುದು ಸತ್ಯ.

    ಗಂಧದ ಗುಡಿ ಡಾಕ್ಯುಡ್ರಾಮಾ ಸಿನಿಮಾ ಇಂದು ಬಿಡುಗಡೆ ಆಗಿ, ಬೆಳಗ್ಗೆಯೇ ನೂರಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಸ್ಪೆಷಲ್ ಶೋ ಆಯೋಜನೆಗೊಂಡಿದ್ದವು. ಮೊದಲ ಪ್ರದರ್ಶನದಲ್ಲೇ ನೆಚ್ಚಿನ ನಟನ ಚಿತ್ರವನ್ನು ಕಣ್ತುಂಬಿಕೊಂಡ ಅಭಿಮಾನಿಗಳು ಭಾವುಕರಾದರು. ಅಭಿಮಾನಿಗಳ ಜೊತೆಯೇ ಡಾ.ರಾಜ್ ಕುಟುಂಬ ಕೂಡ ಸಿನಿಮಾ ವೀಕ್ಷಿಸಿದೆ.

    ಇಂದು ಬೆಳಗ್ಗೆ ಹತ್ತು ಗಂಟೆಯೊಳಗೆ ಬೆಂಗಳೂರಿನಲ್ಲೇ 50ಕ್ಕೂ ಹೆಚ್ಚು ಪ್ರದರ್ಶನಗಳನ್ನು ಆಯೋಜನೆ ಮಾಡಿದ್ದು, ಬೆಳಗಿನ ಜಾವವೇ 50 ಬಾರಿ ಈ ಸಿನಿಮಾ ಬೆಂಗಳೂರಿನ ಮಲ್ಟಿಪ್ಲೆಕ್ಸ್ ಚಿತ್ರ ಮಂದಿರಗಳಲ್ಲಿ ಪ್ರದರ್ಶನ ಕಾಣುತ್ತಿದೆ ಎಂದು ವಿತರಕ ಕಾರ್ತಿಕ್ ಗೌಡ ಮಾಹಿತಿ ಹಂಚಿಕೊಂಡಿದ್ದಾರೆ. ಇದೊಂದು ನೂತನ ದಾಖಲೆ ಎಂದೂ ಅವರು ತಿಳಿಸಿದ್ದಾರೆ. ಬೆಳಗಿನ ಜಾವ 6 ಗಂಟೆಯಿಂದಲೇ ಸಿನಿಮಾ ಪ್ರದರ್ಶನ ಶುರುವಾಗಿದೆ.

    Live Tv
    [brid partner=56869869 player=32851 video=960834 autoplay=true]