Tag: Gandha- Hendthi

  • ನನ್ನ ಬಳಿ 3 ಸೈಟ್, 5 ಕಾರು ಇದೆ: ತನ್ನ ಆಸ್ತಿ ವಿವರ, ದಿನದ ಸಂಬಳ ತಿಳಿಸಿ ತಿರುಗೇಟು ಕೊಟ್ಟ ಸಂಜನಾ

    ನನ್ನ ಬಳಿ 3 ಸೈಟ್, 5 ಕಾರು ಇದೆ: ತನ್ನ ಆಸ್ತಿ ವಿವರ, ದಿನದ ಸಂಬಳ ತಿಳಿಸಿ ತಿರುಗೇಟು ಕೊಟ್ಟ ಸಂಜನಾ

    ಬೆಂಗಳೂರು: ನನ್ನನ್ನು ನೋಡಿದರೆ ರವಿ ಶ್ರೀವತ್ಸ ಅವರಿಗೆ ಹೊಟ್ಟೆ ಕಿಚ್ಚು. ಹಾಗಾಗಿ ಈ ರೀತಿಯ ಟೀಕೆ ಮಾಡುತ್ತಿದ್ದಾರೆ ಎಂದು ಸಂಜನಾ ತಿರುಗೇಟು ಕೊಟ್ಟಿದ್ದಾರೆ.

    ಜಾಗ್ವಾರ್ ಕಾರ್, ಕೋಟಿ ರೂ. ಆಸ್ತಿ ಇರುವ ಸಂಜನಾ ಐಟಿ ರಿರ್ಟನ್ಸ್ ಸಲ್ಲಿಸಿದ್ದಾರಾ ಎಂಬ ನಿರ್ದೇಶಕ ರವಿ ಶ್ರೀವತ್ಸವ ಅವರ ಪ್ರಶ್ನೆಗೆ ಪಬ್ಲಿಕ್ ಟಿವಿಯಲ್ಲಿ ಸಂಜನಾ ದೀರ್ಘ ಉತ್ತರ ನೀಡಿದರು.

    ಸಂಜನಾ ಹೇಳಿದ್ದು ಹೀಗೆ:
    ನನ್ನ ಆಸ್ತಿ ಬಗ್ಗೆ ನಾನೇ ಸಂಪೂರ್ಣವಾಗಿ ಎಲ್ಲರಿಗೂ ಹೇಳುತ್ತೇನೆ. ನನ್ನ ಹುಟ್ಟುಹಬ್ಬಕ್ಕೆ ನಾನು ಜಾಗ್ವಾರ್ ಖರೀದಿಸಿದೆ. ನನ್ನ ಹತ್ತಿರ ಬಿಎಂಡಬ್ಲ್ಯೂ, ಹೋಂಡಾ ಸಿವಿಕ್, ವೆರ್ನಾ ಇದ್ದರೆ ತಂಗಿ ಬಳಿ ಆಡಿ ಕಾರಿದೆ. 100*100 ಮನೆ ಮಾತ್ರ ಇಲ್ಲ. ರಾಜನಕುಂಟೆಯಲ್ಲಿ ಸೈಟ್ ಇದೆ ಹಾಗೂ ಹೈದರಾಬಾದ್‍ನಲ್ಲಿ ಸೈಟ್ ಇದೆ. ನಾನು 45 ಸಿನಿಮಾಗಳಲ್ಲಿ ನಟಿಸಿದ್ದೇನೆ. ಪ್ರಭಾಸ್, ಪವನ್ ಕಲ್ಯಾಣ್, ಮೋಹನ್ ಲಾಲ್, ಮುಮ್ಮಟ್ಟಿ, ದರ್ಶನ್ ಅವರ ಜೊತೆಯಲ್ಲಿ ನಾನು ನಟಿಸಿದ್ದೇನೆ. ಅಲ್ಲದೇ 12 ವರ್ಷದಲ್ಲಿ 120 ಜಾಹೀರಾತು ಮಾಡಿದ್ದೇನೆ. ತೆಲುಗು ಕಾರ್ಯಕ್ರಮದಲ್ಲಿ ನಟಿಸುತ್ತಿದ್ದೇನೆ. ಆ ಕಾರ್ಯಕ್ರಮಕ್ಕೆ ಒಂದು ದಿನಕ್ಕೆ 1.5 ಲಕ್ಷ ರೂ. ಸಂಭಾವನೆ ಸಿಗುತ್ತದೆ. ಹೀಗಾಗಿ ನಾನು ಈ ಆಸ್ತಿಯನ್ನು ಸಂಪಾದಿಸಿದ್ದೇನೆ.

    ಗಂಡ- ಹೆಂಡತಿ ಸಿನಿಮಾ ಮಾಡುವಾಗ ನನಗೆ 16 ವರ್ಷ. ಅಕ್ಟೋಬರ್ 10, 1989 ರಂದು ಮಾತಾಸ್ ಆಸ್ಪತ್ರೆಯಲ್ಲಿ ಹುಟ್ಟಿದ್ದೇನೆ. ವೀಕಿಪಿಡಿಯಾದಲ್ಲಿ ಬರುವುದು ಸರಿಯಿರುವುದಿಲ್ಲ. ಅವರಿಗೆ ಅಷ್ಟು ಅನುಮಾನವಿದ್ದರೆ, ಅವರು ಮಾತಾಸ್ ಆಸ್ಪತ್ರೆಗೆ ಹೋಗಿ ಪರಿಶೀಲಿಸಲಿ ಆಸ್ಪತ್ರೆಯಲ್ಲಿ ನಿಮಗೆ ಈ ದಿನಾಂಕ ಸಿಗಲಿಲ್ಲ ಎಂದರೆ ನಾನು ಚಿತ್ರರಂಗ ಬಿಡುತ್ತೇನೆ. ನನಗೆ ಶ್ರೀವತ್ಸ ಮೇಲೆ ಯಾವುದೇ ದ್ವೇಷವಿಲ್ಲ. ನಾನು ಎಲ್ಲ ಮರೆತು ಆರಮವಾಗಿದ್ದೆ. ಈ ಮೀಟೂ ಬಂದಿದ್ದಕ್ಕೆ ನಾನು ನನ್ನ ಅನುಭವನ್ನು ಹಂಚಿಕೊಂಡೆ. ನನ್ನ ಹುಟ್ಟುಹಬ್ಬಕ್ಕೆ ನಾನು ಇವರನ್ನು ಹಾಗೂ ಚಿತ್ರರಂಗದ ಸದಸ್ಯರನ್ನು ಕರೆದಿದ್ದೆ. 45 ಸಿನಿಮಾದ ಪಯಣದಲ್ಲಿ ನಾನು ಒಂದು ಚಿತ್ರದ ಅನುಭವ ಮಾತ್ರ ಹೇಳಿಕೊಂಡಿದ್ದೇನೆ. ಏಕೆಂದರೆ ಇವರು ಒಂದು ಹೇಳಿ ಸಿನಿಮಾದಲ್ಲಿ ಬೇರೆ ಮಾಡಿಸಿದ್ದು, ಸರಿಯಿಲ್ಲ.

    ಶ್ರೀವತ್ಸ ನನ್ನ ತಂಗಿಯ ವಯಸ್ಸನ್ನು ಹಾಗೂ ನನ್ನ ತಂದೆ ಬಗ್ಗೆ ಮಾತನಾಡುತ್ತಿರುವುದು ಅವರಿಗೆ ನಾಚಿಕೆ ಆಗಬೇಕು. ಶೇಮ್ ಆನ್ ಯೂ ಶ್ರೀವತ್ಸ. ಮೀಟೂ ಅಭಿಯಾನದ ಬಗ್ಗೆ ಮಾತನಾಡುವಾಗ ನಿಮ್ಮ ಅನುಭವ ಹೇಳಿಕೊಳ್ಳಿ ಎಂದು ಕೇಳಿದ್ದಾಗ ನಾನು ನನ್ನ ಅನುಭವವನ್ನು ಹಂಚಿಕೊಂಡೆ. ಆದರೆ ಇವರು ಪ್ರೆಸ್‍ಮೀಟ್ ನಡೆಸಿ ಪಬ್ಲಿಸಿಟಿ ತೆಗೆದುಕೊಳ್ಳುತ್ತಿದ್ದಾರೆ. 12 ವರ್ಷದಿಂದ ನಾನು ಚಿತ್ರಗಳಲ್ಲಿ ದೊಡ್ಡ ನಟರ ಜೊತೆ ನಟಿಸಿದ್ದೇನೆ. ಹಾಗಾಂತ ನನಗೆ ಅವರಿಂದ ಪಬ್ಲಿಸಿಟಿ ಪಡೆಯುವ ಅವಶ್ಯಕತೆ ಇಲ್ಲ.

    ಗಂಡ-ಹೆಂಡತಿ ಸಿನಿಮಾದಲ್ಲಿ ನಟಿಸಿದ್ದು ಒಂದು ಶಾಪದಂತೆ ಆಗಿದೆ. ಇದರಿಂದಾಗಿ ನನಗೆ ರಕ್ಷಿತಾ, ರಮ್ಯಾ ಅವರಂತೆ ಸಿನಿಮಾದಲ್ಲಿ ನಟಿಸಲು ಸಾಧ್ಯವಿಲ್ಲ. ನಿರ್ದೇಶಕ ರವಿ ಶ್ರೀವತ್ಸ ಸಹ ಯೋಗರಾಜ್ ಭಟ್ ಹಾಗೂ ಸೂರಿಯಂತೆ ಬೆಳೆಯಲು ಆಗಲಿಲ್ಲ.

    ನಾನು 2 ವರ್ಷಗಳ ಹಿಂದೆ ‘ಜಿಸ್ಮ್’ ಸಿನಿಮಾ ಮಾಡೋಣ ಎಂದು ಹೇಳಿದೆ. ರವಿ ಇಂದು ಬೆಳಗ್ಗೆ ಪತ್ರಿಕಾಗೋಷ್ಠಿ ನಡೆಸುವ ಮೊದಲು ನನಗೆ ಅವರ ಮೇಲೆ ಯಾವ ಕೋಪ ಇರಲಿಲ್ಲ. ಇಂದು ಪತ್ರಿಕಾಗೋಷ್ಠಿಯಲ್ಲಿ ಅವರು ನನ್ನ ತಂಗಿ ಹಾಗೂ ಅಪ್ಪನ ಬಗ್ಗೆ ಮಾತನಾಡಿದ್ದು ನನಗೆ ಇಷ್ಟವಾಗಲಿಲ್ಲ. ಗಂಡ-ಹೆಂಡತಿ ಚಿತ್ರೀಕರಣದ ಸಮಯದಲ್ಲಿ ನಾನು ಅವರು ನನ್ನನ್ನು ಪ್ರಾಣಿಗಳ ರೀತಿ ನಡೆಸಿಕೊಂಡಿದ್ದರು. ಆ ಸಮಯದಲ್ಲಿ ಅವರು ಲೂಸ್, ಸೈಕೋ ತರಹ ಆಡುತ್ತಿದ್ದರು. ಹಾಗಾಗಿ ಅವರು ಈಗಲೂ ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದಾರೆ.

    ನಾನು ಹಲವಾರು ದೊಡ್ಡ ನಿರ್ದೇಶಕರ ಜೊತೆ ಕೆಲಸ ಮಾಡಿದ್ದೇನೆ. ಯಾರೂ ಕೂಡ ನಿಮ್ಮಂತೆ ನನಗೆ ಟಾರ್ಚರ್ ನೀಡಿಲ್ಲ. ನೀವು ನನಗೆ ಸತ್ತು ಹೋಗು. ಸತ್ತು ಹೋಗು ಎಂದು ಕಿರುಚುತ್ತಾ ಟಾರ್ಚರ್ ನೀಡಿದ್ದೀರಿ. ಹಿಂದಿಯ ಮರ್ಡರ್ ಸಿನಿಮಾ 100 ರಷ್ಟು ಇದ್ದರೆ, ಇವರು 400 ರಷ್ಟು ಸಿನಿಮಾ ಮಾಡಿದ್ದಾರೆ. ಗಂಡ-ಹೆಂಡತಿ ಭಾಗ-2 ಸಿನಿಮಾ ತೆಗೆಯೋವಷ್ಟು ಶೂಟಿಂಗ್ ಮಾಡಿದ್ದಾರೆ. ವೆಬ್ ಸೀರಿಸ್ ಚಿತ್ರಗಳನ್ನು ತೆಗೆಯೋಣ ಎಂದು ಹೇಳಿದೆ. ಅವರು ಈಗ ಬದಲಾಗಿದ್ದಾರೆ ಎನ್ನಿಸಿತ್ತು. ಅಲ್ಲದೇ ನಾನು ಅವರನ್ನು ಕ್ಷಮಿಸಿದ್ದೇನೆ. ನನ್ನ ಮನಸ್ಸು ದೊಡ್ಡದು. ಹಾಗಾಗಿ ನಾನು ನಿಮ್ಮನ್ನು ನನ್ನ ಹುಟ್ಟುಹಬ್ಬಕ್ಕೆ ಕರಿದಿದ್ದೆ.

    ಗಂಡ-ಹೆಂಡತಿ ಸಿನಿಮಾ ಶೂಟಿಂಗ್ ವೇಳೆ ಅವರು ನನ್ನನ್ನು ಬೈದಿದ್ದರು. ಅದನ್ನು ನಾನು ಮೀಟೂ ಅಭಿಯಾನದಲ್ಲಿ ಹೇಳಿಕೊಂಡೆ. ನಾನು ನಿರ್ದೇಶಕರ ಸಂಘಕ್ಕೆ ಹಾಗೂ ನಿರ್ಮಾಪಕರ ಸಂಘದಲ್ಲಿ ಕ್ಷಮೆ ಕೇಳುತ್ತೇನೆ. ಆದರೆ ರವಿ ಶ್ರೀವತ್ಸ ಅವರಲ್ಲಿ ನಾನು ಕ್ಷಮೆ ಕೇಳುವುದಿಲ್ಲ. ರವಿ ಶ್ರೀವತ್ಸ ಅವರೇ ನನ್ನನ್ನು ಕ್ಷಮೆ ಕೇಳಬೇಕು. ಅವರು ನನ್ನ ತಂಗಿ ಹಾಗೂ ನನ್ನ ತಂದೆ ಬಗ್ಗೆ ಕೆಟ್ಟದಾಗಿ ಮಾತನಾಡಿದ್ದಾರೆ. ಹಾಗಾಗಿ ಅವರು ನನ್ನ ಬಳಿ ಕ್ಷಮೆ ಕೇಳಬೇಕು. ನವೆಂಬರ್ 6 ರಂದು ನಾನು ಕಲಾವಿದರ ಸಂಘಕ್ಕೆ ಬಂದು ಕ್ಷಮೆ ಕೇಳುತ್ತೇನೆ.

    ಸಾಲ ಕೇಳಿದ್ರು: ಇಡೀ ಚಿತ್ರರಂಗ ನಿಮ್ಮನ್ನು ಪ್ಲಾಪ್ ನಟಿ ಎಂದು ಕರೆಯುತ್ತದೆ. ಆದರೆ ನನ್ನನ್ನು ಯಾರೂ ಪ್ಲಾಪ್ ನಿರ್ದೇಶಕರೆಂದು ಕರೆಯುವುದಿಲ್ಲ. ಸಂಜನಾ ಎಲ್ಲಾದರೂ ವಿವಾದ ಮಾಡಿಸಿಕೊಂಡರೆ ಆ ವಿವಾದನನ್ನು ನಿಲ್ಲಿಸುವುದ್ದಕ್ಕೆ ಅವರಿಗೆ ಮೊಬೈಲ್ ಫೋನ್ ಗಿಫ್ಟ್ ನೀಡುತ್ತಾರೆ ಎಂದು ರವಿ ಆರೋಪಿಸಿದರು. ಇದಕ್ಕೆ ಸಂಜನಾ, ರವಿ 1 ಲಕ್ಷ ರೂ. ಸಾಲ ಬೇಕೆಂದು ಕೇಳಿದ್ದರು. ಆಗ ನಾನು ನೀವು ನನ್ನ ವೆಬ್ ಸೀರಿಸ್ ಸಿನಿಮಾ ಮಾಡಿದರೆ ಸಂಬಳವಾಗಿ ನಿಮಗೆ 1 ಲಕ್ಷ ನೀಡುತ್ತೇನೆ ಎಂದು ತಿಳಿಸಿದ್ದೆ ಎಂಬುದಾಗಿ ಸಂಜನಾ ಹೇಳಿದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv
    https://www.youtube.com/watch?v=Fngx4OL8iUY

    https://www.youtube.com/watch?v=2YYfQAOr3SM

    https://www.youtube.com/watch?v=EhTC1JWIn1I

    https://www.youtube.com/watch?v=mst7VaRbRP4

    https://www.youtube.com/watch?v=EYjWyRuUtGY

    https://www.youtube.com/watch?v=bI0PW29YLrU

  • ಜಾಗ್ವಾರ್ ಕಾರ್, ಕೋಟಿ ರೂ. ಆಸ್ತಿ ಇರುವ ಸಂಜನಾ ಐಟಿ ರಿರ್ಟನ್ಸ್ ಸಲ್ಲಿಸಿದ್ದಾರಾ: ರವಿ ಶ್ರೀವತ್ಸ ತಿರುಗೇಟು

    ಜಾಗ್ವಾರ್ ಕಾರ್, ಕೋಟಿ ರೂ. ಆಸ್ತಿ ಇರುವ ಸಂಜನಾ ಐಟಿ ರಿರ್ಟನ್ಸ್ ಸಲ್ಲಿಸಿದ್ದಾರಾ: ರವಿ ಶ್ರೀವತ್ಸ ತಿರುಗೇಟು

    – ಸಂಜನಾ ಕ್ಷಮೆಗೆ ಡೆಡ್‍ಲೈನ್ ಕೊಟ್ಟ ನಿರ್ದೇಶಕ
    – ಗಂಡ ಹೆಂಡತಿ ಮೊದಲ ಸಂಜನಾ ಸಿನಿಮಾವಲ್ಲ
    – ಅ.16ರವರೆಗೂ ಮಾಡಿರುವ ಮೆಸೇಜ್ ಸಾಕ್ಷಿಯಿದೆ
    – ಪ್ರಚಾರಕ್ಕಾಗಿ ನನ್ನ ವಿರುದ್ಧ ಸುಳ್ಳು ಆರೋಪ

    ಬೆಂಗಳೂರು: ಗಂಡ ಹೆಂಡತಿ ಚಿತ್ರದ ಶೂಟಿಂಗ್ ವೇಳೆ ನಡೆದಿದೆ ಎನ್ನಲಾದ ಲೈಂಗಿಕ ದೌರ್ಜನ್ಯದ ಆರೋಪಕ್ಕೆ ನಿರ್ದೇಶಕ ರವಿ ಶ್ರೀವತ್ಸ ಸುದ್ದಿಗೋಷ್ಠಿ ನಡೆಸಿ ಸಂಜನಾಗೆ ತಿರುಗೇಟು ನೀಡಿದ್ದಾರೆ.

    ತನ್ನ ವಿರುದ್ಧ ಸುಳ್ಳು ಆರೋಪ ಮಾಡಿದ್ದಕ್ಕೆ ರವಿ ಶ್ರೀವತ್ಸ ಸಂಜನಾಗೆ ಶುಕ್ರವಾರ ಮಧ್ಯಾಹ್ನ 1 ಗಂಟೆಯ ಒಳಗಡೆ ಕ್ಷಮೆ ಕೇಳಬೇಕೆಂದು ಡೆಡ್‍ಲೈನ್ ನೀಡಿದ್ದಾರೆ.

    ಮೊದಲು ಒಂದು ಕಿಸ್‍ಯಿಂದ 10 ಕಿಸ್, 10 ಕಿಸ್‍ಯಿಂದ 30 ಕಿಸ್ ಮಾಡಿಸಿದ್ದರು ಎನ್ನುವ ಸಂಜನಾ ಆರೋಪಕ್ಕೆ, ಕಿಸ್ ದೃಶ್ಯವನ್ನಿಟ್ಟು ನಾನು ಈ ಸಿನಿಮಾ ಮಾಡಿಲ್ಲ. ಈ ಸಿನಿಮಾದಲ್ಲಿ ಸಾಕಷ್ಟು ಕಲಾವಿದರಿದ್ದರು. ಹಿರಿಯ ಪತ್ರಕರ್ತರಾದ ರವಿ ಬೆಳಗೆರೆ ಇದ್ದರು. ಇವರೆಲ್ಲಾ ಇರುವಾಗ ನಾನು ಹೇಗೆ ಕಿಸ್ ಮಾಡಿಸಲಿ. ಸಂಜನಾ ಪತ್ರಿಕೆಯೊಂದರಲ್ಲಿ ನನಗೆ ಮೊದಲು ಕಿಸ್ ಮಾಡುವಾಗ ಸ್ವಲ್ಪ ನರ್ವಸ್ ಆದೆ. ನಂತರ ಕಿಸ್ ಸೀನ್ ಮಾಡುವಾಗ ನನಗೆ ನರ್ವಸ್ ಹೋಯಿತು ಹೇಳಿದ್ದನ್ನು ಈ ವೇಳೆ ರವಿ ಶ್ರೀವತ್ಸ ತಿಳಿಸಿದರು.

    ರವಿ ಶ್ರೀವತ್ಸ ಹೇಳಿದ್ದೇನು?
    ‘ಗಂಡ- ಹೆಂಡತಿ’ ಸಿನಿಮಾಗಾಗಿ ನಾನು ಮೊದಲು ರಕ್ಷಿತಾ ಪ್ರೇಮ್ ಅವರನ್ನು ಅಪ್ರೋಚ್ ಮಾಡಿದ್ದೆ. ಈ ಸಿನಿಮಾಗಾಗಿ ಶೈಲೇಂದ್ರ ಬಾಬು ಅವರು ನಿರ್ಮಾಪಕರಾಗಿದ್ದರು. ಆಗ ಕಲಾವಿದರು ಯಾರು ಎಂದು ಅವರು ಕೇಳಿದ್ದಾಗ ನಾನು ರಕ್ಷಿತಾ ಅವರ ಹೆಸರು ಹೇಳಿದೆ. ನಂತರ ನಾನು ರಕ್ಷಿತಾ ಅವರನ್ನು ಸಂಪರ್ಕಿಸಿದಾಗ ಅವರು ನಾನು ಮದುವೆಯಾಗುತ್ತಿದ್ದೇನೆ. ಈ ರೀತಿಯ ಸಿನಿಮಾ ಮಾಡುವುದು ಸರಿಯಲ್ಲ ಎಂದು ಹೇಳಿ ಈ ಚಿತ್ರಕ್ಕೆ ನಾಯಕಿಯಾಗಲು ನಿರಾಕರಿಸಿದ್ದರು. ನಂತರ ಈ ಸಿನಿಮಾಗಾಗಿ ಹೊಸಬರನ್ನು ಕರೆಸಲು ನಿರ್ಧರಿಸಿದೆ.

    ಹಿಂದಿಯ ‘ಮರ್ಡರ್’ ಸಿನಿಮಾದಲ್ಲೂ ಕೂಡ ಹೊಸಬರು ನಟಿಸಿದ್ದರು. ಹಾಗಾಗಿ ನಾವು ಕನ್ನಡದಲ್ಲೂ ಹೊಸಬರಿಗೆ ಅವಕಾಶ ನೀಡಲು, ಮಲ್ಲಿಕಾ ಶೆರಾವತ್ ಪಾತ್ರಕ್ಕೆ ಸಂಜನಾ ಅವರನ್ನು ಆಯ್ಕೆ ಮಾಡಿದ್ದೇವು. ನಂತರ ನಾವು ಸಂಜನಾ ಅವರನ್ನು ಕತೆ ಹೇಳಿದೆ. ಅಲ್ಲದೇ ಮರ್ಡರ್ ಸಿನಿಮಾದ ಸಿಡಿಯನ್ನು ಹಾಕಿ ಅವರನ್ನು ತೋರಿಸಿ ಈ ರೀತಿಯಲ್ಲೇ ನಾನು ಸಿನಿಮಾ ಮಾಡುತ್ತಿದ್ದೇನೆ ಎಂದು ಹೇಳಿದೆ. ಅಲ್ಲದೇ ಈ ಚಿತ್ರದ ಎರಡನೇ ಭಾಗದಲ್ಲಿ ಅವರಿಗೆ ನಾನು ತಾಳಿಯ ಮಹತ್ವದ ಬಗ್ಗೆ ತಿಳಿಸಿದ್ದೆ.

    ನಾನು ಈ ಚಿತ್ರದಲ್ಲಿ ಬೆತ್ತಲೆಯ ಸೀನ್ ತೋರಿಸಿಲ್ಲ. ಆಗ ಅವರು ನನಗೆ 16 ವರ್ಷ ಎಂದು ಹೇಳಿದ್ದರು. ಗಂಡ-ಹೆಂಡತಿ ಸಂಜನಾ ಅವರ ಮೊದಲ ಸಿನಿಮಾ ಅಲ್ಲ. ಈ ಹಿಂದೆ ಅವರು ಜೂನಿಯರ್ ಆರ್ಟಿಸ್ಟ್ ಆಗಿ ನಟನೆ ಮಾಡಿದ್ದರು. ಗಂಡ-ಹೆಂಡತಿ ಸಂಜನಾ ಅವರ 5ನೇ ಸಿನಿಮಾ. ಗಂಡ- ಹೆಂಡತಿ ಸಿನಿಮಾ ಮಾಡುವಾಗ ಈ ಸಿನಿಮಾ ಮರ್ಡರ್ ರಿಮೇಕ್ ಎಂದು ಹೇಳಿದೆ. ಈ ಸಿನಿಮಾಗಾಗಿ ಮಲ್ಲಿಕಾ ಶರವಾತ್ ಪಾತ್ರಕ್ಕಾಗಿ 150ಕ್ಕೂ ಹೆಚ್ಚು ಜನರ ಆಡಿಶನ್ ನಡೆದಿತ್ತು. ಆಡಿಶನ್ ವೇಳೆ ಪಾಸಾದವರಿಗೆ ಇದು ಮರ್ಡರ್ ಸಿನಿಮಾ ರಿಮೇಕ್ ಎಂದು ಹೇಳಿದ್ದಾಗ ಅವರು ಅಭಿನಯಿಸಲ್ಲ ಎಂದು ಹೇಳಿದ್ದರು.

    ಯಾವುದೇ ಮಕ್ಕಳು ಹೊರಗೆ ಬರುತ್ತಾರೆಂದರೆ ತಮ್ಮ ಜೊತೆ ತಂದೆ- ತಾಯಿಯನ್ನು ಕರೆದುಕೊಂಡು ಬರುತ್ತಾರೆ. ಆದರೆ ಸಿನಿಮಾ ಶೂಟಿಂಗ್ ಸಮಯದಲ್ಲಿ ಸಂಜನಾ ಅವರ ತಂದೆ ಬಂದಿರಲಿಲ್ಲ. ನಂತರ ಚಿತ್ರದ ಬಿಡುಗಡೆಯಾದ ಮೊದಲ ದಿನ ಸಂಜನಾ ಅವರ ತಂದೆ ಹಾಜರಾಗಿದ್ದರು. ಆದರೆ ಸಂಜನಾ, ನನ್ನ ತಂದೆ ಸಿನಿಮಾ ನೋಡಲು ಆಗಲಿಲ್ಲ. ನಂತರ ನನ್ನ ತಂದೆ ಸಿನಿಮಾ ನೋಡಿ ತಲೆ ತಗ್ಗಿಸಿ ಚಿತ್ರಮಂದಿರದಿಂದ ಹೊರ ಬಂದರು ಎಂದು ಹೇಳುತ್ತಾರೆ. ಈ 12 ವರ್ಷದಲ್ಲಿ ಅವರ ತಂದೆ ನನಗೆ ಕರೆ ಮಾಡಿ ನನ್ನ ಮಗಳನ್ನು ಯಾಕೆ ಈ ರೀತಿ ಬಳಸಿಕೊಂಡಿದ್ದೀಯಾ ಎಂದು ಇದೂವರೆಗೆ ಕರೆ ಮಾಡಿ ಪ್ರಶ್ನೆ ಮಾಡಿಲ್ಲ.

    ನಾನು ಸೆಕ್ಸ್ ಸಿನಿಮಾ ಮಾಡುವುದ್ದಕ್ಕೆ ಇಲ್ಲಿ ಬಂದಿಲ್ಲ. ನಾನು ಇಲ್ಲಿ ಗಂಡ- ಹೆಂಡತಿಯ ಬಾಂಧವ್ಯವನ್ನು ತೋರಿಸಲು ಪ್ರಯತ್ನಪಟ್ಟಿದ್ದೇನೆ. ನಾನು ಹೆದರಿಸಿ ಕೆಲಸ ಮಾಡಿಲ್ಲ. ಚಿತ್ರದ ಮೊದಲ ದಿನದ ಫೋಟೋಶೂಟ್ ವೇಳೆ ಅವರು ಸಂಜನಾ ಬೋಲ್ಡ್ ಆಗಿ ನಟಿಸಿದ್ದರು. ಈ ವೇಳೆ ಚಿತ್ರದ ಸಹ ನಿರ್ದೇಶಕರು ನನಗೆ ಸಂಜನಾ ಹೇಗೆ ನಟಿಸಿದ್ದಾರೆ ನೋಡಿ ಎಂದು ಹೇಳಿದ್ದರು. ಸಂಜನಾ ಅವರಿಗೆ ಸರಿಯಾಗಿ ಕನ್ನಡ ಬರುತ್ತಿರಲಿಲ್ಲ. ಅವರಿಗೆ ಕನ್ನಡ ಹೇಳಿಕೊಟ್ಟು ಆಕೆಯನ್ನು ತಿದ್ದಿದ್ದೇವೆ.

    ಬ್ಯಾಂಕಾಕ್ ಶೂಟಿಂಗ್ ಬಳಿಕವೂ ಬೆಂಗಳೂರಿನಲ್ಲೂ ಕಿಸ್ಸಿಂಗ್ ದೃಶ್ಯದ ಶೂಟಿಂಗ್ ಮಾಡಿದ್ದಾರೆ ಎನ್ನುವ ಸಂಜನಾ ಆರೋಪಕ್ಕೆ, ಬ್ಯಾಂಕಾಕ್ ಶೂಟಿಂಗ್ ಹೋಗಿದ್ದಾಗ ಸಂಜನಾ ರಾತ್ರಿಯೆಲ್ಲಾ ಶಾಪಿಂಗ್ ಹೋಗುತ್ತಿದ್ದರು. ನಂತರ ಬೆಳಗ್ಗೆ ಬಂದಿದ್ದಾಗ ಅವರ ಕಣ್ಣು ಕೆಂಪಾಗಿತ್ತು. ಅವರು ಈ ಸ್ಥಿತಿಯಲ್ಲಿರುವಾಗ ನಾನು ಅವರಿಂದ ಹೇಗೆ ಕಿಸ್ಸಿಂಗ್ ಸೀನ್ ಮಾಡಿಸಲಿ? ಸಮಯದಲ್ಲೇ ನಾನು ಅವರಿಗೆ ಬೈದಿದ್ದೆ. ಆರಂಭದಲ್ಲಿ ಸಂಜನಾಗೆ ಗಂಡ- ಹೆಂಡತಿ ಸಿನಿಮಾದ ಮೂಲಕ ಪಬ್ಲಿಸಿಟಿ ಬೇಕಿತ್ತು. ಈಗ ಮೀಟೂ ಅಭಿಯಾನದ ಚಿತ್ರದ ವಿರುದ್ಧ ಹೇಳಿಕೆ ನೀಡಿ ಪಬ್ಲಿಸಿಟಿಗೆ ಮುಂದಾಗಿದ್ದಾರೆ.

    ಸಂಜನಾ ಅವರ ಹತ್ತಿರ ಈಗ ಕೋಟಿ ರೂ. ಆಸ್ತಿ ಇದೆ. ಅದಕ್ಕೆಲ್ಲಾ ಐಟಿ ರಿರ್ಟನ್ಸ್ ಸಲ್ಲಿಸಿದ್ದಾರಾ. ಅವರು ಈಗ ಜಾಗ್ವಾರ್ ಕಾರಿನಲ್ಲಿ ಓಡಾಡುತ್ತಾರೆ. ನಾನು ಈಗ ಮಾರುತಿ ಬೆಲೆನೋ ಕಾರಿನಲ್ಲಿ ಓಡಾಡುತ್ತಿದ್ದೇನೆ. ಅವರು ಐಶಾರಾಮಿ ಮನೆಯಲ್ಲಿ ಇರುತ್ತಾರೆ. ನಾನು 8 ಸಾವಿರ ಕೊಟ್ಟು ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದೇನೆ. ಈಗ ಅವರು ತಮಿಳು, ತೆಲುಗು, ಮಲೆಯಾಳಂ ಎಲ್ಲ ಚಿತ್ರದಲ್ಲೂ ನಟಿಸುತ್ತಿದ್ದಾರೆ. ಈಗ ಅವರನ್ನು ಗಂಡ- ಹೆಂಡತಿ ಸಂಜನಾ ಎಂದು ಗುರುತಿಸುತ್ತಾರೆ. ಸಂಜನಾ ಅವರಿಗೆ ಕನ್ನಡ ಬಿಟ್ಟರೆ ಬೇರೆ ಚಿತ್ರರಂಗವಿದೆ. ನಮಗೆ ಕನ್ನಡ ಚಿತ್ರರಂಗ ಮಾತ್ರ ಇದೆ. ಈಗ ನನ್ನ ವಿರುದ್ಧ ಆರೋಪಿಸಿದ್ದನ್ನು ನಾಳೆ ಸಂಜನಾ ಬೇರೆ ಚಿತ್ರರಂಗದ ನಿರ್ದೇಶಕರನ್ನು ಮಾಡಬಹುದು.

    ಅಕ್ಟೋಬರ್ 16 ವರೆಗೂ ಸಂಜನಾ ನನಗೆ ಮೆಸೇಜ್ ಮಾಡಿದ್ದಕ್ಕೆ ಸಾಕ್ಷಿಗಳಿದೆ. ನನ್ನ ಹುಟ್ಟುಹಬ್ಬಕ್ಕೆ ನೀವು ಬನ್ನಿ. ಈ ಕಾಸ್ಟ್ಲಿ ಹೋಟೆಲ್‍ಗೆ ನೀವು ಒಬ್ಬರೇ ಬರುತ್ತೀರಾ ಅಥವಾ ನಿಮ್ಮ ಸ್ನೇಹಿತರ ಜೊತೆ ಬರುತ್ತೀರಾ. ನಾನು ಸೀಟ್ ಬುಕ್ ಮಾಡಬೇಕೆಂದು ಹೇಳಿದ್ದರು. ನಂತರ ಸಂಜನಾ ಹಿಂದಿಯ ‘ಜಿಸ್ಮ್’ ಸಿನಿಮಾ ಮಾಡೋಣ ಎಂದು ಹೇಳಿದ್ದರು. ಆಗ ನಾನು ಗಂಡ- ಹೆಂಡತಿ ಸಿನಿಮಾ ಮಾಡಿದೆ ಸಾಕು ಎಂದು ಹೇಳಿದೆ.

    https://www.youtube.com/watch?v=Fngx4OL8iUY

    https://www.youtube.com/watch?v=2YYfQAOr3SM

    https://www.youtube.com/watch?v=EhTC1JWIn1I

    https://www.youtube.com/watch?v=Pr1WxEPsJPc

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಮೀಟೂ ದುರುಪಯೋಗ ಮಾಡಿಕೊಂಡವರಲ್ಲಿ ಸಂಜನಾ ಮೊಟ್ಟ ಮೊದಲಿಗರು: ವಿ. ನಾಗೇಂದ್ರ ಪ್ರಸಾದ್

    ಮೀಟೂ ದುರುಪಯೋಗ ಮಾಡಿಕೊಂಡವರಲ್ಲಿ ಸಂಜನಾ ಮೊಟ್ಟ ಮೊದಲಿಗರು: ವಿ. ನಾಗೇಂದ್ರ ಪ್ರಸಾದ್

    ಬೆಂಗಳೂರು: ಸ್ಯಾಂಡಲ್‍ವುಡ್ ನಟಿ ಸಂಜನಾ ತಮ್ಮ ಮೊದಲ ಚಿತ್ರದ ಶೂಟಿಂಗ್ ವೇಳೆ ತಮ್ಮ ಮೇಲೆ ಉಂಟಾದ ಲೈಂಗಿಕ ದೌರ್ಜನ್ಯದ ಬಗ್ಗೆ ಮಾತನಾಡಿದ್ದರು. ಈ ಆರೋಪದ ಬಗ್ಗೆ ನಿರ್ದೇಶಕ ವಿ. ನಾಗೇಂದ್ರ ಪ್ರಸಾದ್ ಅವರು ಸುದ್ದಿಗೋಷ್ಠಿ ನಡೆಸಿ ಮೀಟೂ ದುರುಪಯೋಗ ಮಾಡಿಕೊಂಡವರಲ್ಲಿ ಸಂಜನಾ ಮೊಟ್ಟ ಮೊದಲಿಗರು ಎಂದು ಹೇಳಿ ಕಿಡಿಕಾರಿದ್ದಾರೆ.

    ಮೀಟೂ ಅಭಿಯಾನದ ಮೂಲಕ ಹೊರಬರುತ್ತಿರುವವರ ನಾಯಕಿಯರ ಬಾಯಿಯನ್ನು ಕೆಲವು ಸಂಘ ಬಾಯಿ ಮುಚ್ಚಿಸುತ್ತಿದ್ದಾರೆ ಎಂದು ಹೇಳಲಾಗುತ್ತಿದೆ. ಇದರಲ್ಲಿ ನಿರ್ದೇಶಕರ ಸಂಘವನ್ನು ಕೂಡ ಉಲ್ಲೇಖ ಮಾಡಲಾಗುತ್ತಿದೆ. ಆದರೆ ನಿರ್ದೇಶಕರ ಸಂಘ ಮೀಟೂ ಅಭಿಯಾನವನ್ನು ಸ್ವಾಗತಿಸುತ್ತದೆ. ಶೋಷಣೆಗೆ ಒಳಗಾಗಿರುವ ಮಹಿಳೆಯ ಧ್ವನಿಯನ್ನು ಅಡಗಿಸಲು ನಾವು ಪ್ರಯತ್ನಿಸುತ್ತಿಲ್ಲ ಎಂದು ಅವರು ಹೇಳಿದರು.

    ಯಾವುದೇ ನಿರ್ದೇಶಕನಿಗೆ ಸಮಸ್ಯೆಯಾದರೆ ಅವರು ನಿರ್ದೇಶಕರ ಸಂಘಕ್ಕೆ ಬಂದು ದೂರು ನೀಡುತ್ತಾರೆ. ಮೀಟೂ ಅಭಿಯಾನ ಮಾಧ್ಯಮಗಳ ಮೂಲಕ ಹಾಗೂ ಸಾಮಾಜಿಕ ಜಾಲತಾಣದಲ್ಲಿ ಹೇಳುವುದರ ಮೂಲಕ ನಿಮ್ಮ ಸಮಸ್ಯೆಗೆ ಬಗೆಹರಿಯುವುದಿಲ್ಲ. ಆಯಾ ಸಂಘಗಳಿಗೆ ಹೋಗಿ ನಿಮಗೆ ಆದ ಲೈಂಗಿಕ ಕಿರುಕುಳದ ಬಗ್ಗೆ ದೂರು ನೀಡಿ ಅದು ನಿಮಗೆ ಆಗದಿದ್ದರೆ ಕಾನೂನಿನ ಮೊರೆ ಹೋಗಿ. ಆದರೆ ಮಾಧ್ಯಮ ಹಾಗೂ ಸಾಮಾಜಿಕ ಜಾಲತಾಣದಲ್ಲಿ ಹೇಳುವುದು ಸರಿಯಲ್ಲ ಎಂದು ನಿರ್ದೇಶಕ ವಿ. ನಾಗೇಂದ್ರ ಪ್ರಸಾದ್ ಹೇಳಿದರು.

    ಮೀಟೂ ಅಭಿಯಾನವನ್ನು ದುರುಪಯೋಗ ಮಾಡುವವರಲ್ಲಿ ಮೊಟ್ಟ ಮೊದಲಿಗರು ನಟಿ ಸಂಜನಾ. ಏಕೆಂದರೆ ಅವರು ಮಾಧ್ಯಮಗಳನ್ನು ಕರೆದು ಪತ್ರಿಕಾಗೋಷ್ಠಿ ಕರೆದು 12 ವರ್ಷಗಳ ಹಿಂದೆ ಅವರಿಗೆ ಗುರುತು ನೀಡಿದ ನಿರ್ದೇಶಕರ ಬಗ್ಗೆ ಸಾಕಷ್ಟು ಮಾತನಾಡಿದ್ದಾರೆ. ಸಂಜನಾ ಮಾತನಾಡಿದ್ದು ತಪ್ಪು ಎಂದು ನಾವು ಹೇಳುತ್ತಿಲ್ಲ. ಆದರೆ ಸಂಜನಾ ನಿರ್ದೇಶಕರ ಮೇಲೆ ಮಾಡಿದ ಆರೋಪಗಳಲ್ಲಿ ಸಾಕಷ್ಟು ಸುಳ್ಳು ಹೇಳಿದ್ದಾರೆ. ಆ ಸುಳ್ಳು ಏನು ಎಂಬುದು ನಾನು ಹೇಳುತ್ತೇನೆ ಎಂದರು.

    ಸಂಜನಾ ಅವರ ವಿಷಯಕ್ಕೂ ಹಾಗೂ ಈ ಪತ್ರಿಕಾಗೋಷ್ಠಿಗೂ ಯಾವುದೇ ಸಂಬಂಧವಿಲ್ಲ. ಸಂಜನಾ ಅವರಿಗೆ ಯಾವುದೇ ಲೈಂಗಿಕ ಕಿರುಕುಳ ನೀಡಿಲ್ಲ. ಇದು ಸಿನಿಮಾ ನಿರ್ದೇಶಕನ ಹಾಗೂ ಕಲಾವಿದನ ನಡುವಿನ ಆರೋಪ. ಒಬ್ಬ ನಿರ್ದೇಶಕ ತನ್ನ ಸಿನಿಮಾ ಚೆನ್ನಾಗಿ ಬರಬೇಕು ಎಂದು ತುಂಬಾ ಶ್ರಮಪಡುತ್ತಾರೆ. ನಿರ್ದೇಶಕರು ಈ ರೀತಿ ಶ್ರಮ ಪಡುವಾಗ ಕಲಾವಿದರಿಗೆ ಹಾಗೂ ತಂತ್ರಜ್ಞನರಿಗೆ ಕಷ್ಟವಾಗುವುದು ಸಹಜ. ಈ ರೀತಿ ಕಷ್ಟಪಟ್ಟಿದ್ದ ಮೇಲೆ ಸಿನಿಮಾ ಯಶಸ್ವಿಯಾದಾಗ ಅಲ್ಲಿ ನಿಜವಾದ ತೃಪ್ತಿ ಸಿಗುತ್ತದೆ. ಆ ಸಿನಿಮಾ ಬಿಡುಗಡೆಯಾದಾಗ ಆ ಚಿತ್ರತಂಡ ಯಶಸ್ಸಿನ ರುಚಿ ಉಂಡಿದೆ. ಅಂದು ಯಶಸ್ಸು ರುಚಿಸಿದ ತಟ್ಟೆಯಲ್ಲಿ ಈಗ ಉಗಳಬಾರದು ಎಂಬುದನ್ನು ಹೇಳುವುದಕ್ಕೆ ಈ ಪತ್ರಿಕಾಗೋಷ್ಠಿ ನಡೆಸಿದ್ದೇವೆ ಎಂದು ನಾಗೇಂದ್ರ ಪ್ರಸಾದ್ ತಿಳಿಸಿದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv