Tag: gandadagudi film

  • `ಗಂಧದಗುಡಿ’ ಟೀಸರ್ ನೋಡಿದಾಗ ನೋವು, ಖುಷಿ ಎರಡೂ ಆಗುತ್ತದೆ: ಶಿವಣ್ಣ

    `ಗಂಧದಗುಡಿ’ ಟೀಸರ್ ನೋಡಿದಾಗ ನೋವು, ಖುಷಿ ಎರಡೂ ಆಗುತ್ತದೆ: ಶಿವಣ್ಣ

    ಸ್ಯಾಂಡಲ್‌ವುಡ್ ನಟ ಶಿವರಾಜ್‌ಕುಮಾರ್ (Shivarajkumar) ಸದ್ಯ ಬ್ಯಾಕ್ ಟು ಬ್ಯಾಕ್ ಸಿನಿಮಾಗಳ ಮಧ್ಯೆ ಶಕ್ತಿಧಾಮದ ಜವಾಬ್ದಾರಿ ಕೂಡ ನಿರ್ವಹಿಸುತ್ತಿದ್ದಾರೆ. ಪುನೀತ ಪರ್ವ ಕಾರ್ಯಕ್ರಮಕ್ಕೂ ನಟ ಸಾಥ್ ನೀಡುತ್ತಿದ್ದಾರೆ. ಇದೀಗ ಶಕ್ತಿಧಾಮಕ್ಕೆ ಭೇಟಿ ಕೊಟ್ಟ ವೇಳೆ `ಗಂಧದಗುಡಿ'(Gandagudi film) ಟೀಸರ್ ಬಗ್ಗೆ ಶಿವಣ್ಣ ಪ್ರತಿಕ್ರಿಯೆ ನೀಡಿದ್ದಾರೆ.

    ಹ್ಯಾಟ್ರಿಕ್ ಹೀರೋ ಶಿವಣ್ಣ ಸಾಲು ಸಾಲು ಸಿನಿಮಾಗಳಲ್ಲಿ ನಟಿಸುತ್ತ ಬ್ಯುಸಿಯಾಗಿದ್ದಾರೆ. ಇದರ ಮಧ್ಯೆ ಆಗಾಗ ಶಕ್ತಿಧಾಮಕ್ಕೂ ಭೇಟಿ ಕೊಡುತ್ತಾರೆ. ಇದೀಗ ಮೈಸೂರಿನ ಶಕ್ತಿಧಾಮಕ್ಕೆ ಶಿವಣ್ಣ ಬಂದಿದ್ದಾರೆ. ಶಕ್ತಿಧಾಮದಲ್ಲಿ ಶಾಲಾ ಕಟ್ಟಡ ಕಟ್ಟುತ್ತಿದ್ದಾರೆ. ಭರದಿಂದ ಕಾರ್ಯ ನಡೆಯುತ್ತಿದೆ. ಪತ್ನಿ ಗೀತಾ ಅವರು ಶಕ್ತಿಧಾಮದಲ್ಲಿ ನಿರಂತರವಾಗಿ ಮಕ್ಕಳಿಗೆ ಕ್ಲಾಸ್ ಮಾಡ್ತಿದ್ದಾರೆ. ಮಕ್ಕಳಿಗೆ ಒಂದು ಸ್ಪೇಷಲ್ ಪ್ರಾಡೆಕ್ಟ್ ತಯಾರಿ ಬಗ್ಗೆ ಕಲಿಸುತ್ತಿದ್ದಾರೆ. ಒಂದು ಪ್ರಾಡೆಕ್ಟ್ ಶೀಘ್ರದಲ್ಲೇ ಲಾಂಚ್ ಮಾಡುವುದಾಗಿ ತಿಳಿಸಿದ್ದಾರೆ.

    ಈ ವೇಳೆ `ಗಂಧದಗುಡಿ’ ಟೀಸರ್ ನೋಡಿದ್ದಾಗ ನನಗೆ ನೋವು, ಖುಷಿ ಎರಡೂ ಆಗುತ್ತಿದೆ. ಚಿತ್ರದ ಟೀಸರ್‌ನಲ್ಲಿ ಅಪ್ಪು ನಗು ಮುಖ ನೋಡಿದ್ದಾಗ ಎಂಥವರಿಗೂ ನೋವು ಉಂಟಾಗುತ್ತದೆ. ಅಪ್ಪು ಹೋಗಿ ಒಂದು ವರ್ಷವಾಯ್ತಾ ಅಂತಾ ಅನ್ನಿಸುತ್ತಿದೆ. ಇದನ್ನೂ ಓದಿ:ʻಕಾಂತಾರʼ ಸಿನಿಮಾ ನೋಡದ ರಶ್ಮಿಕಾ ಮಂದಣ್ಣ ಬಗ್ಗೆ ಪ್ರಮೋದ್‌ ಶೆಟ್ಟಿ ಪ್ರತಿಕ್ರಿಯೆ

    ಜನ ಅಪ್ಪು ಬಗ್ಗೆ ತೋರಿಸಿದ ಪ್ರೀತಿಗೆ ಬೆಲೆ ಕಟ್ಟಲು ಆಗಲ್ಲ. ಅಭಿಮಾನಿಗಳ ಪ್ರೀತಿಗೆ ಏನು ಕೊಟ್ಟರೂ ಸಮವಿಲ್ಲ. ಇಂಥ ಪ್ರೀತಿ ಪಡೆಯೋಕೆ ನಾವು ಏನು ಪುಣ್ಯ ಮಾಡಿದ್ದೇವೂ ಗೊತ್ತಿಲ್ಲ. ಅಪ್ಪು ಪರ್ವದಲ್ಲಿ ಅಪ್ಪು ನಟಿಸಿದ ಸಿನಿಮಾ ಹಾಡಿಗೆ ಪುನೀತ ಪರ್ವದಲ್ಲಿ (Puneetha Parva) ನಾನು ಡ್ಯಾನ್ಸ್ ಮಾಡ್ತೀನಿ ಎಂದು ಶಿವಣ್ಣ ಭಾವುಕರಾಗಿದ್ದಾರೆ.

    ಇನ್ನೂ `ಗಂಧದ ಗುಡಿ’ ಚಿತ್ರದ ಪ್ರಿ ರಿಲೀಸ್ ಕಾರ್ಯಕ್ರಮ ಇದೇ ಅ.21ಕ್ಕೆ ಅರಮನೆ ಮೈದಾನದಲ್ಲಿ ನಡೆಯಲಿದೆ. ದಕ್ಷಿಣ ಸ್ಟಾರ್ಸ್ ಕೂಡ ಅಪ್ಪು ಕಾರ್ಯಕ್ರಮಕ್ಕೆ ಸಾಥ್ ನೀಡುತ್ತಿದ್ದಾರೆ. ಅಪ್ಪು ಕನಸಿನ ಸಿನಿಮಾ `ಗಂಧದಗುಡಿ’ ಅಕ್ಟೋಬರ್ 28ಕ್ಕೆ ತೆರೆಗೆ ಅಪ್ಪಳಿಸಲಿದೆ.

    Live Tv
    [brid partner=56869869 player=32851 video=960834 autoplay=true]