Tag: ganda hendthi actor

  • ಮತ್ತೆ ಬೇಬಿ ಬಂಪ್ ಫೋಟೋಶೂಟ್‌ನಲ್ಲಿ ಸಂಜನಾ ಗಲ್ರಾನಿ

    ಮತ್ತೆ ಬೇಬಿ ಬಂಪ್ ಫೋಟೋಶೂಟ್‌ನಲ್ಲಿ ಸಂಜನಾ ಗಲ್ರಾನಿ

    ಚಂದನವನದ ಕಾಂಟ್ರವರ್ಸಿ ಕ್ವೀನ್ ಸಂಜನಾ ಗಲ್ರಾನಿ ಮತ್ತೆ ಸುದ್ದಿಯಲ್ಲಿದ್ದಾರೆ. ಇತ್ತೀಚೆಗೆ ಸೀಮಂತದ ವಿಚಾರವಾಗಿ ಮತ್ತು ಬೇಬಿ ಬಂಪ್ ಫೋಟೋಶೂಟ್ ಮೂಲಕ ಗಮನ ಸೆಳೆದಿದ್ದ ಸಂಜನಾ ಇದೀಗ ಮತ್ತೆ ಹೊಸ ಫೋಟೋಶೂಟ್ ಮೂಲಕ ಸಾಮಾಜಿಕ ಜಾಲತಾಣದಲ್ಲಿ ಸಂಚಲನ ಮೂಡಿಸುತ್ತಿದ್ದಾರೆ.

    `ಗಂಡ ಹೆಂಡತಿ’ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟ ನಟಿ ಸಂಜನಾ, ಸಾಕಷ್ಟು ಚಿತ್ರಗಳಲ್ಲಿ ನಟಿಸಿ ಸೈ ಎನಿಸಿಕೊಂಡಿದ್ದರು. ಬಹುಭಾಷಾ ನಟಿಯಾಗಿ ಗುರುತಿಸಿಕೊಂಡಿದ್ದ ನಟಿ ಈಗ ಮದುವೆ, ಸಂಸಾರ ಅಂತ ಬ್ಯುಸಿಯಾಗಿದ್ದಾರೆ. ಇತ್ತೀಚೆಗೆ ತಾವು ತಾಯಿಯಾಗಿರುವ ಸಂತಸದ ಸುದ್ದಿಯನ್ನ ಅಭಿಮಾನಿಗಳಿಗೆ ತಿಳಿಸಿದ್ದರು. ನಂತರ ಸೀಮಂತ ಶಾಸ್ತçದ ಫೋಟೋ ಮತ್ತು ಬೇಬಿ ಬಂಪ್ ಫೋಟೋಸ್ ಶೇರ್ ಮಾಡಿ, ಭಾವನಾತ್ಮಕವಾಗಿ ಬರೆದುಕೊಂಡಿದ್ದರು. ಈಗ ಮತ್ತೆ ನ್ಯೂ ಬೇಬಿ ಫೋಟೋಶೂಟ್‌ನಿಂದ ಗಮನ ಸೆಳೆದಿದ್ದಾರೆ.

    ಸಂಜನಾ ಹಿಂದಿನಿಂದಲೂ ಸಿನಿಮಾಗಳ ಜತೆ ಸೋಷಿಯಲ್ ಮೀಡಿಯಾದಲ್ಲೂ ಆಕ್ಟೀವ್ ಇದ್ದಂತಹ ನಟಿ, ತಮ್ಮ ದೈನಂದಿನ ಬದುಕಿನ ಅಪ್‌ಡೇಟ್‌ಗಳನ್ನ ಅಭಿಮಾನಿಗಳ ಜತೆ ಹಂಚಿಕೊಳ್ತಾರೆ. ಇದೀಗ ಗ್ರೀನ್ ಕಲರ್ ಲಾಂಗ್ ಡ್ರೇಸ್‌ನಲ್ಲಿ ನ್ಯೂ ಬೇಬಿ ಬಂಪ್ ಶೂಟ್‌ನಲ್ಲಿ ತುಂಬಾ ಮುದ್ದಾಗಿ ಕಾಣಿಸಿಕೊಂಡಿದ್ದಾರೆ. ಇದನ್ನೂ ಓದಿ: ನಾಗಚೈತನ್ಯ -ಸಮಂತಾ ಮತ್ತೆ ಮುಖಾಮುಖಿ : ಮಾಜಿ ಪತಿ ಚಿತ್ರಕ್ಕೆ ಯಶೋದ ಫೈಟ್

    ರೀಲ್ಸ್ ಮತ್ತು ಫೋಟೋಗಳ ಮೂಲಕ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗೋ ನಟಿ ಸಂಜನಾ ಇದೀಗಿನ ಹೊಸ ಫೋಟೋಶೂಟ್‌ನ ನೋಡಿ ಸಿನಿಪ್ರೇಮಿಗಳು ಮೆಚ್ಚಿಕೊಂಡಿದ್ದಾರೆ.