Tag: Ganapati Procession

  • ನಾಗಮಂಗಲದಲ್ಲಿ ಕೋಟೆ ವಿದ್ಯಾಗಣಪತಿ ವಿಸರ್ಜನೆ – ಕೋಮು ಗಲಭೆ ನಡೆದ ಸ್ಥಳದಲ್ಲೇ ಇಂದು ಬೃಹತ್ ಶೋಭಾಯಾತ್ರೆ

    ನಾಗಮಂಗಲದಲ್ಲಿ ಕೋಟೆ ವಿದ್ಯಾಗಣಪತಿ ವಿಸರ್ಜನೆ – ಕೋಮು ಗಲಭೆ ನಡೆದ ಸ್ಥಳದಲ್ಲೇ ಇಂದು ಬೃಹತ್ ಶೋಭಾಯಾತ್ರೆ

    ಮಂಡ್ಯ: ಕೋಮುಗಲಭೆ ನಡೆದ ನಾಗಮಂಗಲದಲ್ಲಿ (Nagamangala) ಇಂದು ಕೋಟೆ ವಿದ್ಯಾಗಣಪತಿ ವಿಸರ್ಜನೆ ಕಾರ್ಯಕ್ರಮ ನಡೆಯಲಿದೆ. ಕೋಮುಗಲಭೆ ನಡೆದ ಬಳಿಕ ನಡೆಯುವ ದೊಡ್ಡ ಕಾರ್ಯಕ್ರಮ ಇದಾಗಿದ್ದು ಬೃಹತ್ ಶೋಭಾಯಾತ್ರೆ ನಡೆಸಿ ವಿಸರ್ಜನೆಗೆ ಸಿದ್ಧತೆ ನಡೆದಿದೆ.

    ನಾಗಮಂಗಲದ ಕೋಟೆ ಆಂಜನೇಯ ದೇವಸ್ಥಾನದ ಬಳಿ ಪ್ರತಿಷ್ಠಾಪನೆ ಮಾಡಿರುವ ಗಣೇಶ ಮೂರ್ತಿಯನ್ನು ಪ್ರತೀ ವರ್ಷ ಪ್ರತಿಷ್ಠಾಪನೆಯಾದ 48ನೇ ದಿನಕ್ಕೆ ವಿಸರ್ಜನೆ ಮಾಡಲಾಗುತ್ತದೆ. ಈ ಬಾರಿಯು ಬೃಹತ್ ಶೋಭಾಯಾತ್ರೆಯೊಂದಿಗೆ ವಿಸರ್ಜನೆ ಮಾಡುವ ಚಿಂತನೆಯನ್ನು ಸಮಿತಿಯು ಮಾಡಿದೆ. ಯಾತ್ರೆಗೆ ಸುಮಾರು 30 ಸಾವಿರಕ್ಕೂ ಅಧಿಕ ಹಿಂದೂಗಳನ್ನ ಸೇರಿಸುವ ನಿರೀಕ್ಷೆ ಇದ್ದು, ಕಳೆದ 72 ವರ್ಷಗಳಿಂದ ಸಮಿತಿಯು ಅದ್ಧೂರಿಯಾಗಿ ಗಣೇಶೋತ್ಸವವನ್ನು (Ganeshostav) ನಡೆಸಿಕೊಂಡು ಬರುತ್ತಿದೆ. ಇದನ್ನೂ ಓದಿ: ಒಡಿಶಾ ತೀರಕ್ಕೆ ಅಪ್ಪಳಿಸಿದ ಡಾನಾ ಚಂಡಮಾರುತ – ಗಂಟೆಗೆ 120 ಕಿ.ಮೀ ವೇಗದಲ್ಲಿ ಬೀಸುತ್ತಿದೆ ಗಾಳಿ

    ಇಂದು ಬೆಳಿಗ್ಗೆ 10 ಗಂಟೆಯಿಂದ ರಾತ್ರಿವರೆಗೂ ಯಾತ್ರೆ ನಡೆಯಲಿದೆ. ವಿವಾದಿತ ಮಸೀದಿ ರಸ್ತೆ ಸೇರಿದಂತೆ ಪ್ರಮುಖ ರಸ್ತೆಗಳಲ್ಲಿ ಮೆರವಣಿಗೆ ಸಾಗುತ್ತದೆ. ಕಳೆದ ಸೆಪ್ಟೆಂಬರ್ 11ರಂದು ಗಣೇಶ ವಿಸರ್ಜನಾ ಮೆರವಣಿಗೆ ವೇಳೆ ಕೋಮುಗಲಭೆ ನಡೆದಿತ್ತು. ಮಸೀದಿ ಮುಂಭಾಗ ಮೆರವಣಿಗೆ ವಿರೋಧಿಸಿ ಆರಂಭವಾದ ಗಲಾಟೆಯಿಂದ ಕೋಮುಗಲಭೆ ಸೃಷ್ಟಿಯಾಗಿತ್ತು. ಇಂದು ಅದೇ ಮಸೀದಿ ಮುಂದೆ ಹಿಂದೂ ಸಂಘಟನೆಗಳು ಶೋಭಾಯಾತ್ರೆ ನಡೆಸಲಿದೆ. ವಿವಿಧ ಕಲಾತಂಡಗಳು ಈ ಶೋಭಾಯಾತ್ರೆಗೆ ಮೆರುಗು ನೀಡಲಿದೆ. ಇದನ್ನೂ ಓದಿ: ಬಿಬಿಎಂಪಿಗೆ ಡಿಸಿಎಂ ಖಡಕ್ ವಾರ್ನಿಂಗ್ – ಸೋಮವಾರದಿಂದ ಅನಧಿಕೃತ ಕಟ್ಟಡಗಳ ಸರ್ವೆ ಆರಂಭ

  • ಭಾರತ ಸಂಪೂರ್ಣ ಹಿಂದೂ ರಾಷ್ಟ್ರವಾಗಬೇಕು: ಗಣಪತಿಗೆ ಭಕ್ತನ ಮನವಿ

    ಭಾರತ ಸಂಪೂರ್ಣ ಹಿಂದೂ ರಾಷ್ಟ್ರವಾಗಬೇಕು: ಗಣಪತಿಗೆ ಭಕ್ತನ ಮನವಿ

    ಚಿಕ್ಕಮಗಳೂರು: ಭಾರತ (India) ಸಂಪೂರ್ಣ ಹಿಂದೂ (Hindu) ರಾಷ್ಟ್ರವಾಗಬೇಕು. 140 ಕೋಟಿ ಭಾರತೀಯರು ಹಿಂದೂಗಳಾಗಬೇಕು. ಗಣಪತಿ ಇದಕ್ಕೆ ಕೃಪೆ ತೋರು ತಂದೆ ಎಂದು ಭಕ್ತನೋರ್ವ ಗಣಪತಿ ಕಾಣಿಕೆ ಹುಂಡಿಗೆ ಕಾಣಿಕೆ ಬದಲು ಚೀಟಿ ಬರೆದು ಹಾಕಿ ಬೇಡಿಕೊಂಡಿರುವ ಘಟನೆ ಚಿಕ್ಕಮಗಳೂರಿನಲ್ಲಿ (Chikkamagaluru) ನಡೆದಿದೆ.

    ಇಷ್ಟು ದಿನಗಳ ಕಾಲ ನಾವೆಲ್ಲಾ ದೇವರೇ ಮದುವೆ ಮಾಡು. ಬೇಗ ಹುಡುಗಿ ಸಿಗಲಿ. ಪರೀಕ್ಷೆಯಲ್ಲಿ ಪಾಸ್ ಮಾಡು. ನನ್ನ ಪ್ರೀತಿ ಗೆಲ್ಲುವಂತೆ ಮಾಡು. ಸರ್ಕಾರಿ ಕೆಲಸ ಸಿಗಲಿ ಹೀಗೆ ನಾನಾ ರೀತಿಯ ಬೇಡಿಕೆಯನ್ನು ಬರೆದು ಚೀಟಿಯನ್ನ ಕಾಣಿಕೆ ಹುಂಡಿಯಲ್ಲಿ ಹಾಕಿರುವುದನ್ನು ನೋಡಿರುತ್ತೇವೆ. ಆದರೆ, ಇದೇ ಮೊದಲ ಬಾರಿಗೆ ಭಕ್ತರು ನಾನಾ ಬೇಡಿಕೆಗಳನ್ನ ಗಣಪತಿ ಮುಂದೆ ಇಟ್ಟಿದ್ದಾರೆ. ಇದನ್ನೂ ಓದಿ: ಜಾರ್ಖಂಡ್‍ನಿಂದ ನೀರು ಜಾಸ್ತಿ ಬಿಟ್ಟಿದ್ದಕ್ಕೆ ಬಂಗಾಳದಲ್ಲಿ ಪ್ರವಾಹ: ಮಮತಾ ಆಕ್ರೋಶ

    ನಗರದ ಬಸವನಹಳ್ಳಿ ಮುಖ್ಯ ರಸ್ತೆಯ ಓಂಕಾರೇಶ್ವರ ದೇಗುಲದ ಪಕ್ಕದಲ್ಲಿ ಇಟ್ಟಿದ್ದ ಹಿಂದೂ ಮಹಾ ಸಭಾ ಗಣಪತಿಯನ್ನು ಸೆ.18ರಂದು ವಿಸರ್ಜನೆ ಮಾಡಲಾಯಿತು. ವಿಸರ್ಜನೆ ಮೆರವಣಿಗೆಯಲ್ಲಿ 20 ಸಾವಿರಕ್ಕೂ ಅಧಿಕ ಭಕ್ತರು ಪಾಲ್ಗೊಂಡಿದ್ದರು. ಆ ಕಾರ್ಯಕ್ರಮದ ಕಾಣಿಕೆ ಹುಂಡಿ ಹಣ ಎಣಿಕೆಯನ್ನು ಇಂದು (ಶುಕ್ರವಾರ) ಹಮ್ಮಿಕೊಂಡಿದ್ದರು. ಹುಂಡಿಯಲ್ಲಿ ಹಣದ ಜೊತೆ ನಾನಾ ಬೇಡಿಕೆಯ ಚೀಟಿಗಳು ಪತ್ತೆಯಾಗಿವೆ. ಇದನ್ನೂ ಓದಿ: Tirupati Laddu Row| ತಮಿಳುನಾಡು ಮೂಲದ ಕಂಪನಿಯಿಂದ ಕಲಬೆರೆಕೆ ತುಪ್ಪ: ಟಿಡಿಡಿ ಇಓ

    ಚೀಟಿಗಳಯಲ್ಲಿ ಏನೆಲ್ಲಾ ಬೇಡಿಕೆ ಇತ್ತು?
    ಭಾರತ ಸಂಪೂರ್ಣ ಹಿಂದೂ ರಾಷ್ಟ್ರವಾಗಬೇಕು. ದೇಶದ 140 ಕೋಟಿ ಜನರೂ ಹಿಂದೂಗಳಾಗಬೇಕು. ಸಿ.ಟಿ ರವಿ ( C T Ravi) ಮುಂದಿನ ಸಿಎಂ ಆಗಬೇಕು. ಹಿಂದೂಗಳೆಲ್ಲಾ ಒಗ್ಗಟ್ಟಾಗಿ ಇರಬೇಕು. ದತ್ತಪೀಠ ಆದಷ್ಟು ಬೇಗ ಹಿಂದೂಗಳ ಪೀಠವಾಗಬೇಕು ಹೀಗೆ ಭಕ್ತರು ನಾನಾ ರೀತಿ ಬೇಡಿಕೊಂಡಿದ್ದಾರೆ. ಅದರಲ್ಲಿ ಓರ್ವ ಭಕ್ತ ಮಾತ್ರ ನನ್ನ ಮಗನಿಗೆ ಮದುವೆ ಮಾಡು, ಮುಂದಿನ ವರ್ಷ ನಿನ್ನ ಸೇವೆ ಮಾಡುತ್ತೇನೆ ಎಂದು ಬರೆದು ಹಾಕಿದ್ದನು. ಇದನ್ನೂ ಓದಿ: 206 ಸೀಟು ರದ್ದು ಮಾಡಿಕೊಂಡ ಅಭ್ಯರ್ಥಿಗಳು: ಕೆಇಎ