Tag: Ganapati dissolution

  • ವಿಘ್ನ ನಿವಾರಕನ ವಿಸರ್ಜನೆ ಯಾಕೆ? 

    ವಿಘ್ನ ನಿವಾರಕನ ವಿಸರ್ಜನೆ ಯಾಕೆ? 

    ಯಾವುದೇ ಸಂಕಷ್ಟದ ಸಂದರ್ಭದಲ್ಲಿ ಎಲ್ಲರಿಗೂ ಮೊದಲು ನೆನಪಾಗುವುದೇ ವಿಘ್ನ ನಿವಾರಕ ವಿನಾಯಕ. ಹಿಂದೂ ಧರ್ಮದ ಪ್ರಮುಖ ದೇವತೆಗಳಲ್ಲಿ ಗಣಪತಿಗೆ  ಅಗ್ರ ಸ್ಥಾನವಿದೆ. ಆದ ಕಾರಣ ವಿಘ್ನ ವಿನಾಯಕನಿಗೆ ಯಾವುದೇ ಸಂದರ್ಭದಲ್ಲೂ ಮೊದಲ ಪೂಜೆ ಸಲ್ಲುತ್ತದೆ. ಭಾದ್ರಪದ ಮಾಸದಲ್ಲಿ ಬರುವ ಗಣೇಶ ಚೌತಿಯ ದಿನದಂದು ಗಣೇಶನ ಹಬ್ಬವನ್ನು ಆಚರಿಸಲಾಗುತ್ತದೆ.

    ಗಣೇಶ ಹಬ್ಬ ಬಂದರೆ ಎಲ್ಲರಲ್ಲಿಯೂ ಸಂಭ್ರಮದ ವಾತಾವರಣ ಮನೆ ಮಾಡುತ್ತದೆ. ಗಣೇಶನನ್ನು ಕೂರಿಸುವಾಗ ಮನೆಗೆ ಅತಿಥಿಯ ಆಗಮನ ಹೇಗಿರುತ್ತದೆಯೋ ಹಾಗೆಯೆ ಭಾಸವಾಗುತ್ತದೆ. ಗಣೇಶನ ವಿರ್ಸಜನೆಯು ಅತಿಥಿಗಳ ನಿರ್ಗಮನದ ಹಾಗೇ ನೋವನ್ನು ಕೂಡ ನೀಡುತ್ತದೆ.

    ಪ್ರತಿ ವರ್ಷದ ಹಿಂದೂ ಪಂಚಾಂಗದ ಪ್ರಕಾರ ಭಾದ್ರಪದ ಮಾಸದ ಶುಕ್ಲಪಕ್ಷದ ಚೌತಿಯಂದು ಗಣೇಶ ಚತುರ್ಥಿಯನ್ನು ಆಚರಿಸಲಾಗುತ್ತದೆ. ಇಂಗ್ಲಿಷ್ ಕ್ಯಾಲೆಂಡರ್ ಪ್ರಕಾರ ಸಾಧಾರಣವಾಗಿ ಆಗಸ್ಟ್ ಅಥವಾ ಸೆಪ್ಟೆಂಬರ್ ತಿಂಗಳಿನಲ್ಲಿ ಗಣೇಶನ ಹಬ್ಬ ಬರುತ್ತಿರುತ್ತದೆ.

    ಕೆಲವರು 3, 5, 7, 11 ದಿನಗಳ ಕಾಲ ಗಣಪತಿ ಪೂಜಿಸುತ್ತಾರೆ. ಗಣೇಶನ ಜನನ ಕುರಿತು ಪುರಾಣ, ಮಹಾಕಾವ್ಯಗಳು ವಿವಿಧ ರೀತಿಯ ಕಥೆಯನ್ನು ತಿಳಿಸುತ್ತದೆ. ಪಾರ್ವತಿಯ ಮೈಯಿಂದ ಹುಟ್ಟಿದವನು. ಸ್ವರ್ಣಗೌರಿಯ ಮಾನಸ ಪುತ್ರ ಎಂಬ ಕಥೆಯಿದೆ.

    ಗಣೇಶನನ್ನು ವಿಸರ್ಜನೆ ಮಾಡುವಾಗ ಅವನ ನಿರ್ಗಮನವು ದುಃಖವನ್ನು ತರುತ್ತದೆ. ಆದರೆ ವರ್ಷಕ್ಕೊಮ್ಮೆ ಭೇಟಿ ನೀಡುವ ಕುಟುಂಬದ ಸದಸ್ಯ ಎಂದು ಪರಿಗಣಿಸಿ ಕಳುಹಿಸಿಕೊಡಲಾಗುತ್ತದೆ

    ಗಣೇಶನ ವಿಸರ್ಜನೆ ಎನ್ನುವುದು ಗಣೇಶನ ವಿಗ್ರಹವನ್ನು ನದಿ, ಸಮುದ್ರ ಅಥವಾ ಯಾವುದೇ ಜಲಧಾರೆಯಲ್ಲಿ ಮುಳುಗಿಸುವ ಆಚರಣೆಯಾಗಿದೆ. ಈ ಮೂಲಕ ಕೈಲಾಸ ಪರ್ವತದಲ್ಲಿರುವ ತನ್ನ ಮನೆಗೆ ಗಣೇಶ ಮರಳಿ  ಶಿವ ಮತ್ತು ಪಾರ್ವತಿಯನ್ನು ಮತ್ತೆ  ಸೇರುತ್ತಾನೆ ಎಂಬ ನಂಬಿಕೆಯಿದೆ. ಈ ಕಾರಣಕ್ಕೆ ಗೌರಿ ವಿಸರ್ಜನೆಯನ್ನು, ಗಣೇಶ ವಿಸರ್ಜನೆಯೊಂದಿಗೆ ಮಾಡಲಾಗುತ್ತದೆ.

    ಗಣೇಶ ವಿಸರ್ಜನೆಯು ಜನನ ಮತ್ತು ಮರಣದ ಚಕ್ರದ ಸಂಕೇತವಾಗಿದೆ. ಜೀವನದಲ್ಲಿ ಯಾವುದು ಶಾಶ್ವತವಲ್ಲ ಮತ್ತು ಬದಲಾವಣೆಯಲ್ಲಿಯೂ ನಾವೆಲ್ಲರೂ ಬದುಕಬೇಕು. ಈ ಭೂಮಿಯ ಮೇಲೆ ಜನಿಸಿದವರಿಗೆ ಸಾವು ನಿಶ್ಚಿತ ಎಂದು ಹಲವು ವಿದ್ವಾಂಸರು  ವ್ಯಾಖ್ಯಾನಗಳನ್ನು ನೀಡಿದ್ದಾರೆ.

  • ಗಣೇಶನ ವಿಸರ್ಜನೆ ಮಾಹಿತಿಗೆ ಬಿಬಿಎಂಪಿಯಿಂದ ಕ್ಯೂಆರ್‌ ಕೋಡ್ ಪ್ಲ್ಯಾನ್‌

    ಗಣೇಶನ ವಿಸರ್ಜನೆ ಮಾಹಿತಿಗೆ ಬಿಬಿಎಂಪಿಯಿಂದ ಕ್ಯೂಆರ್‌ ಕೋಡ್ ಪ್ಲ್ಯಾನ್‌

    – 462 ಸ್ಥಳದಲ್ಲಿ ಮೊಬೈಲ್ ಟ್ಯಾಂಕರ್, 41 ಕೆರೆಗಳ ಗುರುತಿಸಿದ ಪಾಲಿಕೆ

    ಬೆಂಗಳೂರು: ಗಣೇಶನ ವಿಸರ್ಜನೆ ಮಾಹಿತಿಗೆ ಬಿಬಿಎಂಪಿಯು (BBMP) ವಿನೂತನ ಪ್ಲ್ಯಾನ್‌ ಒಂದು ಮಾಡಿದ್ದು, ಸಾರ್ವಜನಿಕರು ಕ್ಯೂಆರ್‌ ಕೋಡ್ (QR Code) ಬಳಸುವ ಮೂಲಕ ಗಣೇಶನ ವಿಸರ್ಜನೆ ಸ್ಥಳದ ವಿವರ ಪಡೆಯಬಹುದಾಗಿದೆ.

    ಗಣಪತಿ ವಿಸರ್ಜನೆ (Ganapati Dissolution) ಯಾವ ಸ್ಥಳದಲ್ಲಿ ಮಾಡಬೇಕು ಎನ್ನುವ ಸಂಪೂರ್ಣ ಮಾಹಿತಿ ಕ್ಯೂಆರ್‌ ಕೋಡ್ ಸ್ಕ್ಯಾನ್‌ ಮಾಡುವ ಮೂಲಕ ಪಡೆಯಬಹುದಾಗಿದೆ. ಗಣೇಶ ವಿಸರ್ಜನೆಗಾಗಿಯೇ 41 ಕೆರೆಗಳ ಶಾಶ್ವತ ಕಲ್ಯಾಣಿ ಸೇರಿದಂತೆ ಒಟ್ಟು 462 ಸ್ಥಳದಲ್ಲಿ ಮೊಬೈಲ್ ಟ್ಯಾಂಕರ್ ವ್ಯವಸ್ಥೆ ಮಾಡಲಾಗಿದೆ. ಶಾಶ್ವತ ಕಲ್ಯಾಣಿಯಿಲ್ಲದ ಕೆರೆಯ ಅಂಗಳದಲ್ಲಿ ತಾತ್ಕಾಲಿಕ ಕಲ್ಯಾಣಿಗಳನ್ನು ನಿರ್ಮಿಸಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.ಇದನ್ನೂ ಓದಿ: ‘ಮಿಸ್ಟರ್ ಬಚ್ಚನ್’ ಸೋತಿದ್ದಕ್ಕೆ 4 ಕೋಟಿ ಸಂಭಾವನೆ ಹಿಂದಿರುಗಿಸಿದ ರವಿತೇಜ

    ಗಣೇಶ ವಿಸರ್ಜನೆಗೆ ಸಂಬಂಧಿಸಿದಂತೆ ಹೆಚ್ಚಿನ ಮಾಹಿತಿಗಾಗಿ ಬಿಬಿಎಂಪಿಯು ಪ್ರತಿ ವಾರ್ಡಿಗೆ ಒಬ್ಬರು ನೋಡಲ್ ಅಧಿಕಾರಿಗಳನ್ನು ನಿಯೋಜನೆ ಮಾಡಿದೆ. ಸಾರ್ವಜನಿಕರು ಕ್ಯೂಆರ್ ಕೋಡ್ ಬಳಸುವ ಮೂಲಕ ಆಯಾ ವಾರ್ಡ್‌ ನೋಡಲ್ ಅಧಿಕಾರಿಗಳ ವಿವರಗಳನ್ನೂ ಸಹ ಪಡೆಯಬಹುದಾಗಿದೆ.

    ಪಾಲಿಕೆ ವ್ಯಾಪ್ತಿಯಲ್ಲಿ ಗಣೇಶ ಚತುರ್ಥಿ ಹಿನ್ನೆಲೆ ಎಲ್ಲಾ ರೀತಿಯ ಸಿದ್ಧತೆ ಮಾಡಿಕೊಂಡಿದ್ದು, ಕಂದಾಯ ಉಪಕಚೇರಿಯಲ್ಲಿ 63 ಏಕಗವಾಕ್ಷಿ ಕೇಂದ್ರಗಳು ತೆರೆಯಲಾಗಿದೆ. ಎಲ್ಲಾ ವಾರ್ಡ್‌ಗಳಲ್ಲಿ ಒಟ್ಟು 462 ತಾತ್ಕಾಲಿಕ ಮೊಬೈಲ್ ಟ್ಯಾಂಕರ್‌ಗಳ ವ್ಯವಸ್ಥೆ ಮಾಡಲಾಗಿದೆ.

    ಗಣೇಶ ವಿಸರ್ಜನೆ ವೇಳೆ ಸಾರ್ವಜನಿಕರಿಗೆ ಯಾವುದೇ ರೀತಿಯ ತೊಂದರೆಯಾಗದಂತೆ ನೋಡಿಕೊಳ್ಳಲು ಬಿಬಿಎಂಪಿ ಅಧಿಕಾರಿಗಳು ಸುರಕ್ಷತಾ ಕ್ರಮ ಕೈಗೊಂಡಿದ್ದಾರೆ. ಕೆರೆ ಹಾಗೂ ಕಲ್ಯಾಣಿ ಬಳಿ ಪೊಲೀಸ್, ಬ್ಯಾರಿಕೇಡ್, ಅಗ್ನಿಶಾಮಕ, ಬೆಸ್ಕಾಂ, ವಿದ್ಯುತ್ ದೀಪದ ವ್ಯವಸ್ಥೆ, ಈಜುಗಾರರು, ಧ್ವನಿವರ್ಧಕ ಜೊತೆಗೆ ಎನ್‌ಡಿಆರ್‌ಎಫ್ (NDRF) ತಂಡ ನಿಯೋಜನೆ ಮಾಡಲಾಗಿದೆ.

    ದುರ್ಘಟನೆಯ ಮುನ್ನೆಚ್ಚರಿಕಾ ಕ್ರಮವಾಗಿ ಅಂಬುಲೆನ್ಸ್, ವ್ಯೆದ್ಯರು ಮತ್ತು ಪ್ರಾಥಮಿಕ ಚಿಕಿತ್ಸೆ ನೀಡಲು ಶುಶ್ರೂಕಿಯರನ್ನು ನೇಮಕ ಮಾಡಲಾಗಿದೆ. ಪ್ರಾಥಮಿಕ ಆರೋಗ್ಯ ಕೇಂದ್ರದ ಬಳಿ ಹೆಚ್ಚುವರಿಯಾಗಿ ಅಂಬುಲೆನ್ಸ್ ಮತ್ತು ವೈದ್ಯರ ವ್ಯವಸ್ಥೆ ಮಾಡಿದೆ.ಇದನ್ನೂ ಓದಿ: Duleep Trophy | ಮುಶೀರ್ ಕೈತಪ್ಪಿದ ದ್ವಿಶತಕ – ಕೊನೇ 3 ವಿಕೆಟ್‌ಗೆ 227 ರನ್‌ ಪೇರಿಸಿದ ಭಾರತ-ಬಿ ತಂಡ!

    ಸಂಪೂರ್ಣ ವಿವರಗಳಿಗಾಗಿ ಕ್ಯೂಆರ್ ಕೋಡ್ ಸ್ಕ್ಯಾನ್ ಮಾಡಿ. https://apps.bbmpgov.in/ganesh2024/ ಪಾಲಿಕೆ ವೆಬ್‌ಸೈಟ್ ಲಿಂಕ್ ಮೂಲಕ ಮಾಹಿತಿ ಪಡೆಯಲು ಅವಕಾಶ ಇದೆ.

    ವಲಯವಾರು ಗಣೇಶ ಮೂರ್ತಿ ವಿಸರ್ಜನಾ ಸ್ಥಳಗಳ ವಿವರ

    ವಲಯ                      ಮೊಬೈಲ ಟ್ಯಾಂಕರ್                   ಕಲ್ಯಾಣಿ

    ಪೂರ್ವ                            138                                         01
    ಪಶ್ಚಿಮ                            84                                          01
    ದಕ್ಷಿಣ                              43                                           02
    ಬೊಮ್ಮನಹಳ್ಳಿ                  60                                           05
    ಆರ್‌ಆರ್ ನಗರ                 74                                          07
    ಮಹದೇವಪುರ                  40                                           14
    ದಾಸರಹಳ್ಳಿ                      19                                          01
    ಯಲಹಂಕ                         4                                          10

    ಒಟ್ಟು                             462                                       41

  • ಶಿರಾದಲ್ಲಿ ಅದ್ಧೂರಿ ಮೆರವಣಿಗೆ ಮಾಡಿ ಗಣೇಶ ವಿಸರ್ಜನೆ

    ಶಿರಾದಲ್ಲಿ ಅದ್ಧೂರಿ ಮೆರವಣಿಗೆ ಮಾಡಿ ಗಣೇಶ ವಿಸರ್ಜನೆ

    ತುಮಕೂರು: ಶಿರಾ ನಗರದ ಗವಿ ಆಂಜನೇಯ ಸ್ವಾಮಿ ದೇವಸ್ಥಾನದಲ್ಲಿ ಪ್ರತಿಷ್ಠಾಪನೆ ಮಾಡಿದ್ದ ಹಿಂದೂ ಮಹಾ ಗಣಪತಿಯನ್ನು ಅದ್ಧೂರಿ ಮೆರವಣಿಗೆ ನಡೆಸಿ ಜಾಜಮ್ಮನ ಕಟ್ಟೆಯಲ್ಲಿ ವಿಸರ್ಜಿಸಲಾಯಿತು.

    ಹಿಂದೂ ಮಹಾ ಗಣಪತಿಯನ್ನು ಪ್ರತಿಷ್ಠಾಪನೆ ಮಾಡಿದ ಮೂರನೇ ದಿನವೇ ವಿಸರ್ಜನೆ ಮಾಡಲು ಸಿದ್ಧತೆ ನಡೆಸಲಾಗಿತ್ತು. ಆದರೆ ಕೊರೊನಾ ನಿಯಮಾವಳಿಯಂತೆ ಮೆರವಣಿಗೆಗೆ ಅವಕಾಶವಿಲ್ಲ. ವಿಸರ್ಜನೆ ಸಮಯದಲ್ಲಿ ಕೇವಲ 20 ಮಂದಿಗೆ ಮಾತ್ರ ಅವಕಾಶ ನೀಡುವುದಾಗಿ ಪೊಲೀಸರು ಷರತ್ತು ವಿಧಿಸಿದಾಗ ಹಿಂದೂ ಸಭಾದ ಕಾರ್ಯಕರ್ತರು ಇದನ್ನು ವಿರೋಧಿಸಿ ಗಣೇಶ ವಿಸರ್ಜನೆಯನ್ನು ಅನಿರ್ದಿಷ್ಟ ಕಾಲಕ್ಕೆ ಮುಂದೂಡಿದ್ದರು. ಇದನ್ನೂ ಓದಿ: 2022ರ ಪ್ರೇಮಿಗಳ ದಿನ ಬರಲಿದೆ ‘ಲಾಲ್ ಸಿಂಗ್ ಚಡ್ಡಾ’

    ಗಣೇಶ ವಿಸರ್ಜನೆಯ ಮೆರವಣಿಗೆ ಸಮಯದಲ್ಲಿ ಡಿ.ಜೆಗೆ ಪೊಲೀಸರು ಅವಕಾಶ ನೀಡದಿದ್ದರೂ ಸಹ ಡ್ರಂ ಸೆಟ್ ಜೊತೆಯಲ್ಲಿ ಮೆರವಣಿಗೆ ಪ್ರಾರಂಭಿಸಿದರು. ಆದರೆ ಮೆರವಣಿಗೆಯ ಮಧ್ಯೆ ಡಿ.ಜೆಯನ್ನು ಸೇರಿಸಿಕೊಂಡು ಭಕ್ತರು ಸಂಭ್ರಮಿಸಲು ಪ್ರಾರಂಭಿಸಿದರು. ಸಂಜೆಯ ವೇಳೆಗೆ ಮೆರಣಿಗೆಯ ಸ್ಥಳಕ್ಕೆ ಬಂದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಾಹುಲ್ ಕುಮಾರ್ ಶಹಪೂರವಾಡ್ ಅವರು ಡಿಜೆಗೆ ಅನುಮತಿ ನೀಡಲಿಲ್ಲ. ಅದನ್ನು ಬಂದ್ ಮಾಡಿ ಮೆರವಣಿಗೆ ಮುಂದುವರೆಸುವಂತೆ ಹೇಳಿದರು.

    ಈ ಸಮಯದಲ್ಲಿ ಗೊಂದಲದ ವಾತಾವರಣ ಉಂಟಾಯಿತು. ಮೆರವಣಿಗೆ ಸ್ಥಗಿತಗೊಳಿಸಲು ಮುಂದಾದ ಸಮಯದಲ್ಲಿ ಡಿ.ಜೆಗೆ ಮತ್ತೆ ಅವಕಾಶ ಮಾಡಿಕೊಡಲಾಯಿತು. ನಗರದ ವಿವಿಧ ರಸ್ತೆಗಳಲ್ಲಿ ದಿನಪೂರ್ತಿ ಮೆರವಣಿಗೆ ನಡೆಸಿ ಜಾಜಮ್ಮನ ಕಟ್ಟೆಯಲ್ಲಿ ವಿಸರ್ಜಿಸಲಾಯಿತು. ಇದನ್ನೂ ಓದಿ: ಲಂಡನ್ ವರ್ಲ್ಡ್ ಬುಕ್ ಆಫ್ ರೆಕಾರ್ಡ್ ಉಪಾಧ್ಯಕ್ಷರಾದ ಕನ್ನಡತಿ

    ಶಾಸಕ ಡಾ.ಸಿ.ಎಂ.ರಾಜೇಶ್ ಗೌಡ, ನಾರು ಅಭಿವೃದ್ಧಿ ಮಂಡಳಿ ಅಧ್ಯಕ್ಷ ಬಿ.ಕೆ.ಮಂಜುನಾಥ್, ರೇಷ್ಮೆ ಉದ್ಯಮ ಅಭಿವೃದ್ಧಿ ನಿಗಮದ ಅಧ್ಯಕ್ಷ ಎಸ್.ಆರ್.ಗೌಡ, ಕಾಂಗ್ರೆಸ್ ಮುಖಂಡ ಟಿ.ಬಿ.ಜಯಚಂದ್ರ, ಜೆಡಿಎಸ್ ತಾಲೂಕು ಘಟಕದ ಅಧ್ಯಕ್ಷ ಆರ್.ಉಗ್ರೇಶ್, ಮುಖಂಡರಾದ ಆರ್.ರಾಮು, ಆರ್.ರಾಘವೇಂದ್ರ, ಅಂಜಿನಪ್ಪ, ರೂಪೇಶ್ ಕೃಷ್ಣಯ್ಯ, ಭಾನುಪ್ರಕಾಶ್, ಬಿಜೆಪಿ ಅಧ್ಯಕ್ಷ ವಿಜಯರಾಜು ಅವರು ಮೆರವಣಿಗೆಯ ಪ್ರಾರಂಭದಲ್ಲಿ ಭಾಗವಹಿಸಿದ್ದರು.