Tag: Ganangooru

  • ಜುಲೈ 1 ರಿಂದ ಎಕ್ಸ್‌ಪ್ರೆಸ್‌ ವೇ 2ನೇ ಟೋಲ್ ಆರಂಭ, ಯಾವ ವಾಹನಗಳಿಗೆ ಎಷ್ಟು ಶುಲ್ಕ ?

    ಜುಲೈ 1 ರಿಂದ ಎಕ್ಸ್‌ಪ್ರೆಸ್‌ ವೇ 2ನೇ ಟೋಲ್ ಆರಂಭ, ಯಾವ ವಾಹನಗಳಿಗೆ ಎಷ್ಟು ಶುಲ್ಕ ?

    ಮಂಡ್ಯ: ಬೆಂಗಳೂರು ಮೈಸೂರು ದಶಪಥ ಹೆದ್ದಾರಿಯಲ್ಲಿ ಸಂಚಾರ ಮಾಡುವ ವಾಹನ ಸವಾರರಿಗೆ ಮತ್ತೊಂದು ಶಾಕ್ ಎದುರಾಗಿದೆ. ಇಷ್ಟು ದಿನ ಒಂದು ಟೋಲ್‌ನ (Toll) ದರಕ್ಕೆ ಆಕ್ರೋಶ ವ್ಯಕ್ತಪಡಿಸುತ್ತಿದ್ದ ಜನರಿಗೆ ಮತ್ತೊಂದು ಟೋಲ್ ದರ ಗಾಯದ ಮೇಲೆ ಬರೆ ಎಳೆದಂತೆ ಆಗುವ ಸಾಧ್ಯತೆಗಳು ದಟ್ಟವಾಗಿ ಕಾಣುತ್ತಿದೆ.

    ಬೆಂಗಳೂರಿನಂತೆ ಮೈಸೂರು ನಗರವನ್ನು ಉದ್ಯಮದಲ್ಲಿ ಅಭಿವೃದ್ಧಿ ಮಾಡಬೇಕೆಂದು ಮತ್ತು ಜನರಿಗೆ ಅನುಕೂಲವಾಗಲೆಂದು ಕೇಂದ್ರ ಸರ್ಕಾರ 9,000 ಕೋಟಿ ರೂ. ವೆಚ್ಚದಲ್ಲಿ ಬೆಂಗಳೂರು ಮೈಸೂರು ದಶಪಥ ರಾಷ್ಟ್ರೀಯ ಹೆದ್ದಾರಿಯನ್ನು ನಿರ್ಮಾಣ ಮಾಡಲಾಗಿದೆ. ಈಗಾಗಲೇ ರಾಮನಗರ (Ramanagara) ಜಿಲ್ಲೆಯ ಕಣಮಿಣಕಿ (Kanaminaki) ಟೋಲ್ ಸಂಗ್ರಹ ಆರಂಭವಾಗಿದ್ದು, ಒಂದು ಕಾರಿಗೆ ಏಕಮುಖ ಸಂಚಾರಕ್ಕೆ 165 ರೂ. ಅನ್ನು ವಸೂಲಿ ಮಾಡಲಾಗುತ್ತಿದೆ. ಈ ಹೊತ್ತಿನಲ್ಲಿಯೇ ಹೆದ್ದಾರಿ ಪ್ರಾಧಿಕಾರ ಬೆಂಗಳೂರು-ಮೈಸೂರು ದಶಪಥ ರಾಷ್ಟ್ರೀಯ ಹೆದ್ದಾರಿಯ ಎರಡನೇ ಹಂತದ ಟೋಲ್ ಅನ್ನು ಜುಲೈ 1ರಿಂದ ಆರಂಭಿಸಲಿದ್ದು, ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ತಾಲೂಕಿನ ಗಣಂಗೂರು (Ganangooru) ಟೋಲ್ ಪ್ಲಾಜಾದಲ್ಲಿ ವಾಹನ ಸವಾರರು ಟೋಲ್ ಹಣ ನೀಡಬೇಕಿದೆ. ಇದನ್ನೂ ಓದಿ: 5 ಕೆ.ಜಿ ಅಕ್ಕಿ, ಉಳಿದ 5 ಕೆ.ಜಿ ಅಕ್ಕಿಯ ಹಣ ಕೊಡಲು ಸರ್ಕಾರ ನಿರ್ಧಾರ

    ಜನರು ಇಷ್ಟು ದಿನ ಯಾವುದಾದರೂ ಒಂದು ಟೋಲ್‌ನಲ್ಲಿ ಹಣ ಕಟ್ಟಿದರೆ ಆಯಿತು ಎಂದುಕೊಂಡಿದ್ದರು. ಆದರೆ ಹೆದ್ದಾರಿ ಪ್ರಾಧಿಕಾರ ಎರಡು ಟೋಲ್‌ಗಳಿಗೂ ಪ್ರತ್ಯೇಕ ಟೋಲ್ ದರವನ್ನು ನಿಗದಿ ಮಾಡಿದೆ. ಉದಾಹಾರಣೆಗೆ ಮೈಸೂರಿನಿಂದ ಬೆಂಗಳೂರಿಗೆ ಕಾರಿನಲ್ಲಿ ಪ್ರಯಾಣ ಮಾಡುವವರು ಮೊದಲಿಗೆ ಗಣಂಗೂರು ಟೋಲ್‌ನಲ್ಲಿ 155 ರೂ. ಕಟ್ಟಬೇಕು. ಇದಾದ ಬಳಿಕ ಕಣಮಿಣಕಿ ಟೋಲ್‌ನಲ್ಲಿ 165 ರೂ. ಅನ್ನು ಪಾವತಿ ಮಾಡಬೇಕಾಗಿದೆ. ಏಕಮುಖ ಸಂಚಾರಕ್ಕೆ 320 ರೂ. ಟೋಲ್ ದರ ಇರುತ್ತದೆ. ಒಂದು ವೇಳೆ ಫಾಸ್ಟ್ ಟ್ಯಾಗ್ ಇಲ್ಲವೆಂದರೆ ಈ ಹಣ ದುಪ್ಪಟ್ಟು ಆಗಲಿದೆ. ಮಂಡ್ಯದಿಂದ ಬೆಂಗಳೂರಿಗೆ ಕಾರಿನಲ್ಲಿ ಹೋಗುವವರಿಗೆ ಏಕಮುಖ ಸಂಚಾರಕ್ಕೆ 165 ರೂ. ವೆಚ್ಚ ತಗುಲಲಿದ್ದು, ಮಂಡ್ಯದಿಂದ ಮೈಸೂರಿಗೆ ಹೋದರೆ 155 ರೂ. ಟೋಲ್ ಹಣ ಕಟ್ಟಬೇಕಾಗುತ್ತದೆ. ಇದನ್ನೂ ಓದಿ: ಭಾರತ ದೇಶದ ಸಂಪತ್ತು ಎಷ್ಟು ಲೂಟಿ ಮಾಡಿದರೂ ಕರಗಲ್ಲ: ಹೆಚ್‌ಡಿಕೆ

    ಯಾವ ವಾಹನಗಳಿಗೆ ಎಷ್ಟು ಟೋಲ್ ?

    ಏಕಮುಖ ಸಂಚಾರ:
    *ಕಾರು, ಜೀಪು, ವ್ಯಾನು – 155 ರೂ.
    *ಲಘು ವಾಣಿಜ್ಯ ವಾಹನ, ಲಘು ಸರಕು ವಾಹನ/ಮಿನಿ ಬಸ್ – 250 ರೂ.
    *ಟ್ರಕ್/ಬಸ್ (ಎರಡು ಆಕ್ಸೆಲ್‌ಗಳದ್ದು) – 525 ರೂ.
    *ಮೂರು ಆಕ್ಸೆಲ್ ವಾಣಿಜ್ಯ ವಾಹನ – 575 ರೂ.
    *ಭಾರೀ ನಿರ್ಮಾಣ ಯಂತ್ರಗಳು / ಭೂ ಅಗೆತದ ಸಾಧನಗಳು / ಬಹು ಆಕ್ಸೆಲ್ ವಾಹನ (4ರಿಂದ 6 ಆಕ್ಸೆಲ್‌ಗಳದ್ದು) – 825 ರೂ.
    *ದೊಡ್ಡ ಗಾತ್ರದ ವಾಹನ (7 ಅಥವಾ ಹೆಚ್ಚು ಆಕ್ಸೆಲ್‌ಗಳದ್ದು) – 1005 ರೂ.

    ಅದೇ ದಿನ ವಾಪಸ್:
    *ಕಾರು, ಜೀಪು, ವ್ಯಾನು – 235 ರೂ.
    *ಲಘು ವಾಣಿಜ್ಯ ವಾಹನ, ಲಘು ಸರಕು ವಾಹನ/ಮಿನಿ ಬಸ್ – 375 ರೂ.
    *ಟ್ರಕ್/ಬಸ್ (ಎರಡು ಆಕ್ಸೆಲ್‌ಗಳದ್ದು) – 790 ರೂ.
    *ಮೂರು ಆಕ್ಸೆಲ್ ವಾಣಿಜ್ಯ ವಾಹನ – 860 ರೂ.
    *ಭಾರೀ ನಿರ್ಮಾಣ ಯಂತ್ರಗಳು / ಭೂ ಅಗೆತದ ಸಾಧನಗಳು / ಬಹು ಆಕ್ಸೆಲ್ ವಾಹನ (4ರಿಂದ 6 ಆಲೆಕ್ಸ್ಗಳದ್ದು) – 1240 ರೂ.
    *ದೊಡ್ಡ ಗಾತ್ರದ ವಾಹನ (7 ಅಥವಾ ಹೆಚ್ಚು ಆಕ್ಸೆಲ್‌ಗಳದ್ದು) – 1510 ರೂ.

    ಮಂಡ್ಯ ಜಿಲ್ಲೆಯ ಒಳಗೆ:
    *ಕಾರು, ಜೀಪು, ವ್ಯಾನು – 80 ರೂ.
    *ಲಘು ವಾಣಿಜ್ಯ ವಾಹನ, ಲಘು ಸರಕು ವಾಹನ/ಮಿನಿ ಬಸ್ – 125 ರೂ.
    *ಟ್ರಕ್/ಬಸ್ (ಎರಡು ಆಕ್ಸೆಲ್‌ಗಳದ್ದು) – 265 ರೂ.
    *ಮೂರು ಆಕ್ಸೆಲ್ ವಾಣಿಜ್ಯ ವಾಹನ – 285 ರೂ.
    *ಭಾರೀ ನಿರ್ಮಾಣ ಯಂತ್ರಗಳು / ಭೂ ಅಗೆತದ ಸಾಧನಗಳು / ಬಹು ಆಕ್ಸೆಲ್ ವಾಹನ (4ರಿಂದ 6 ಆಕ್ಸೆಲ್‌ಗಳದ್ದು) – 415 ರೂ.
    *ದೊಡ್ಡ ಗಾತ್ರದ ವಾಹನ (7 ಅಥವಾ ಹೆಚ್ಚು ಆಕ್ಸೆಲ್‌ಗಳದ್ದು) – 505 ರೂ. ಇದನ್ನೂ ಓದಿ: Gruha Lakshmi Scheme: ಪ್ರತ್ಯೇಕ ಆಪ್‍ಗೆ ಕ್ಯಾಬಿನೆಟ್‌ನಲ್ಲಿ ಗ್ರೀನ್ ಸಿಗ್ನಲ್

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]