Tag: Ganagavathi

  • ದರ್ಗಾ ಅಭಿವೃದ್ಧಿಗೆ 6 ಕೋಟಿ ದೇಣಿಗೆ ನೀಡಿದ ಜನಾರ್ದನ ರೆಡ್ಡಿ

    ದರ್ಗಾ ಅಭಿವೃದ್ಧಿಗೆ 6 ಕೋಟಿ ದೇಣಿಗೆ ನೀಡಿದ ಜನಾರ್ದನ ರೆಡ್ಡಿ

    ಕೊಪ್ಪಳ: ಮೊದಲ ದಿನವೇ ಗಂಗಾವತಿ ಹಾಲಿ- ಮಾಜಿ ಶಾಸಕರಿಗೆ ಜನಾರ್ದನ ರೆಡ್ಡಿ(Janardhan Reddy ) ಶಾಕ್ ನೀಡಿದ್ದು ದರ್ಗಾ ಅಭಿವೃದ್ಧಿಗೆ 6 ಕೋಟಿ ರೂ.‌ ದೇಣಿಗೆ ನೀಡಿದ್ದಾರೆ.

    ಗಂಗಾವತಿಯ(Ganagavathi) ಖಲಿಲುಲ್ಲಾ ಖಾದ್ರಿ ದರ್ಗಾ ಅಭಿವೃದ್ಧಿಗೆ ಜನಾರ್ದನ ರೆಡ್ಡಿ ದೇಣಿಗೆ ನೀಡಿದ್ದಾರೆ. ದರ್ಗಾದ ಶಾದಿ ಮಹಲ್(Shadi Mahal) ನಿರ್ಮಾಣಕ್ಕೆ ಧನ ಸಹಾಯ ಮಾಡುವುದಾಗಿ ರೆಡ್ಡಿ ವಾಗ್ದಾನ ನೀಡಿದ್ದಾರೆ. ಇದನ್ನೂ ಓದಿ: IPL Auction 2023: ಸ್ಯಾಮ್, ಗ್ರೀನ್, ಬೆನ್ ಮೇಲೆ ಫ್ರಾಂಚೈಸ್ ಕಣ್ಣು – ಕನ್ನಡಿಗರಿಗೂ ಹೆಚ್ಚಿದ ಡಿಮ್ಯಾಂಡ್

     

    ದರ್ಗಾದಲ್ಲೇ ಕುಳಿತುಕೊಂಡೇ 6 ಕೋಟಿ ರೂ. ವೆಚ್ಚದ ಕಾಂಟ್ರಾಕ್ಟ್‌ಗೆ ಜನಾರ್ದನ ರೆಡ್ಡಿ ಸಹಿ ಮಾಡಿದ್ದಾರೆ. ಬೆಳಗಾವಿ ಮೂಲದ ಸ್ಟುಡಿಯೋ ಅಮೀರ್ ಕಂಪನಿಗೆ ನೇರವಾಗಿ ಹಣ ನೀಡುವುದಾಗಿ ರೆಡ್ಡಿ ಹೇಳಿದ್ದಾರೆ.

    ದರ್ಗಾಗೆ ಧನ ಸಹಾಯ ನೀಡುವ ಮೂಲಕ ಮಾಜಿ ಶಾಸಕ ಇಕ್ಬಾಲ್ ಅನ್ಸಾರಿ ಅವರ ವೋಟ್ ಬ್ಯಾಂಕ್‌ಗೆ ಜನಾರ್ದನ ರೆಡ್ಡಿ ಕೈ ಹಾಕಿದ್ದಾರೆ.

    Live Tv
    [brid partner=56869869 player=32851 video=960834 autoplay=true]