Tag: Gami

  • ಒಟಿಟಿಗೆ ಬಂದ ‘ಗಾಮಿ’: ವಿಶ್ವಕ್ ಸೇನ್ ಚಿತ್ರಕ್ಕೆ ಮೆಚ್ಚುಗೆ

    ಒಟಿಟಿಗೆ ಬಂದ ‘ಗಾಮಿ’: ವಿಶ್ವಕ್ ಸೇನ್ ಚಿತ್ರಕ್ಕೆ ಮೆಚ್ಚುಗೆ

    ಮಾರ್ಚ್‌ 8ರಂದು ತೆರೆಕಂಡಿರುವ ವಿಶ್ವಕ್‌ ಸೇನ್‌ ನಟನೆಯ ತೆಲುಗು ಚಿತ್ರ ‘ಗಾಮಿ’ (Gaaami) ಓಟಿಟಿಯತ್ತ ಹೆಜ್ಜೆ ಹಾಕಿದ್ದು, ಏ.12ರಂದು ಜೀ5ನಲ್ಲಿ  ಸ್ಟ್ರೀಮಿಂಗ್ ಆಗುತ್ತಿದೆ. ಗಾಮಿ ಸಿನಿಮಾಗೆ ವಿದ್ಯಾರ್ಧ ಕಾಗಿತಾ ನಿರ್ದೇಶನವಿದೆ.

    ವಿದ್ಯಾರ್ಧ ಕಾಗಿತಾ (Vidyardha Kagita) ಇವರ ಚೊಚ್ಚಲ ಪ್ರಯತ್ನ. ವಿಶ್ವಕ್‌ ಸೇನ್‌ಗೆ ನಾಯಕಿಯಾಗಿ ಚಾಂದಿನಿ ಚೌದರಿ ನಟಿಸಿದ್ದಾರೆ. ಎಂಜಿ ಅಭಿನಯ, ಮೊಹಮ್ಮದ್‌ ಸಮದ್‌, ಹರಿಕಾ ಪೇಡಾಡ, ಶಾಂತಿ ರಾವ್‌, ಮಯಾಂಕ್‌ ಪರಾಕ್‌ ಸೇರಿದಂತೆ ಹಲವರು ತಾರಾಬಳಗದಲ್ಲಿದ್ದಾರೆ.

    ಸಿನಿಮಾಗೆ ವಿಶ್ವನಾಥ ರೆಡ್ಡಿ ಚೆಲುಮಲ್ಲ ಛಾಯಾಗ್ರಹಣ, ರಾಘವೇಂದ್ರ ತಿರುನ್‌ ಸಂಕಲನ, ನರೇಶ್‌ ಕುಮಾರನ್‌ ಸಂಗೀತ ಒದಗಿಸಿದ್ದಾರೆ. ಕಾರ್ತಿಕ್‌ ಶಬರೀಶ್‌ ಚಿತ್ರಕ್ಕೆ ಹಣ ಹಾಕಿದ್ದಾರೆ.

  • ಒಟಿಟಿಗೆ ಬರಲು ರೆಡಿ ಆಯಿತು ವಿಶ್ವಕ್ ಸೇನ್ ನಟನೆಯ ‘ಗಾಮಿ’ ಸಿನಿಮಾ

    ಒಟಿಟಿಗೆ ಬರಲು ರೆಡಿ ಆಯಿತು ವಿಶ್ವಕ್ ಸೇನ್ ನಟನೆಯ ‘ಗಾಮಿ’ ಸಿನಿಮಾ

    ತೆಲುಗು ಚಿತ್ರರಂಗದ ಭವಿಷ್ಯದ ನಾಯಕ ಮಾಸ್ ಕಾ ದಾಸ್ ವಿಶ್ವಕ್ ಸೇನ್ (Vishwak Sen) ನಟನೆಯ ಗಾಮಿ ಸಿನಿಮಾ ಒಟಿಟಿ (OTT) ಎಂಟ್ರಿಗೆ ಸಿದ್ಧವಾಗಿದೆ. ಕಳೆದ ಮಾರ್ಚ್ 8ರಂದು ತೆರೆಗೆ ಬಂದಿದ್ದ ಚಿತ್ರವೀಗ ಇದೇ ತಿಂಗಳ 12ರಂದು ZEE 5 ಒಟಿಟಿಯಲ್ಲಿ ಸ್ಟ್ರೀಮಿಂಗ್ ಆಗಲಿದೆ.

    ಗಾಮಿ (Gami) ಸಿನಿಮಾಗೆ ವಿದ್ಯಾಧರ್ ಕಾಗಿತಾ ಆಕ್ಷನ್ ಕಟ್ ಹೇಳಿದ್ದಾರೆ.  ಇದು ಇವರ ಚೊಚ್ಚಲ ಪ್ರಯತ್ನ. ವಿಶ್ವಕ್ ಸೇನ್ ಗೆ ನಾಯಕಿಯಾಗಿ ಚಾಂದಿನಿ ಚೌದರಿ ನಟಿಸಿದ್ದಾರೆ. ಎಂಜಿ ಅಭಿನಯ, ಮೊಹಮ್ಮದ್ ಸಮದ್, ಹರಿಕಾ ಪೇಡಾಡ, ಶಾಂತಿ ರಾವ್, ಮಯಾಂಕ್ ಪರಾಕ್ ಸೇರಿದಂತೆ ಹಲವರು ತಾರಾಬಳಗದಲ್ಲಿದ್ದಾರೆ.

    ಅಡ್ವೆಂಚರ್ಸ್ ಎಪಿಕ್ ಡ್ರಾಮಾ ಕಥೆಯಾಧಾರಿತ ಸಿನಿಮಾಗೆ ವಿಶ್ವನಾಥ ರೆಡ್ಡಿ ಚೆಲುಮಲ್ಲ ಛಾಯಾಗ್ರಹಣ, ರಾಘವೇಂದ್ರ ತಿರುನ್ ಸಂಕಲನ,  ನರೇಶ್ ಕುಮಾರನ್ ಸಂಗೀತ ಒದಗಿಸಿದ್ದಾರೆ. ಕಾರ್ತಿಕ್ ಶಬರೀಶ್ ಚಿತ್ರಕ್ಕೆ ಹಣ ಹಾಕಿದ್ದಾರೆ.

  • ನನ್ನನ್ನು ಟಾರ್ಗೆಟ್ ಮಾಡಲಾಗಿದೆ: ತೊಡೆ ತಟ್ಟಿದ ನಟ ವಿಶ್ವಕ್ ಸೇನ್

    ನನ್ನನ್ನು ಟಾರ್ಗೆಟ್ ಮಾಡಲಾಗಿದೆ: ತೊಡೆ ತಟ್ಟಿದ ನಟ ವಿಶ್ವಕ್ ಸೇನ್

    ತೆಲುಗಿನ ಹೆಸರಾಂತ ನಟ ವಿಶ್ವಕ್ ಸೇನ್ (Vishwak Sen) ತಮಗಾದ ಅನ್ಯಾಯ ಮತ್ತು ನೋವುಗಳ ಬಗ್ಗೆ ಮಾತನಾಡಿದ್ದಾರೆ. ಅದರಲ್ಲೂ ತಮ್ಮ ಗಾಮಿ (Gami) ಚಿತ್ರಕ್ಕೆ ಅಡೆತಡೆ ಒಡ್ಡಿದವರ ಬಗ್ಗೆ ಆಕ್ರೋಶವನ್ನೂ  ಅವರು ಹೊರ ಹಾಕಿದ್ದಾರೆ. ಈ ರೀತಿ ಮಾಡುವುದರ ಉದ್ದೇಶ ಏನು ಎನ್ನುವುದನ್ನು ಅವರು ಹೇಳಿದ್ದಾರೆ.

    ಇತ್ತೀಚೆಗಷ್ಟೇ ವಿಶ್ವಕ್ ಸೇನ್ ನಟನೆಯ ಗಾಮಿ ಸಿನಿಮಾ ರಿಲೀಸ್ ಆಗಿತ್ತು. ಮೊದ ಮೊದಲ ಅತ್ಯುತ್ತಮ ರೆಸ್ಪಾನ್ಸ್ ಪಡೆದುಕೊಂಡಿತ್ತು. ಬುಕ್ ಮೈ ಶೋನಲ್ಲಿ ದಿ ಬೆಸ್ಟ್ ರೇಟಿಂಗ್ ಕೂಡ ಗಳಿಸಿಕೊಂಡಿತ್ತು. ಈ ಸಿನಿಮಾ ಭರ್ಜರಿ ಓಪನಿಂಗ್ ಪಡೆದುಕೊಂಡಿದ್ದನ್ನು ಸಹಿಸೋಕೆ ಆಗದೇ ನಿರಂತರ ಚಿತ್ರಕ್ಕೆ ತೊಂದರೆ ಕೊಟ್ಟರು ಎಂದು ಹೇಳಿಕೊಂಡಿದ್ದಾರೆ ವಿಶ್ವ‍ಕ್.

     

    ಗಾಮಿ ಚಿತ್ರಕ್ಕೆ ಸಾಕಷ್ಟು ತೊಂದರೆ ಮಾಡಲಾಯಿತು. ಇದರ ಹಿಂದೆ ಯಾರಿದ್ದಾರೆ ಎಂದು ಗೊತ್ತಿಲ್ಲ. ಆದರೆ, ನಾನು ಚಿತ್ರೋದ್ಯಮದಲ್ಲಿ ಬೆಳೆಯಬಾರದು ಎನ್ನುವ ಉದ್ದೇಶವಂತೂ ಇದರ ಹಿಂದಿದೆ. ಹಾಗಾಗಿ ಚಿತ್ರವನ್ನು ಸೋಲಿಸಲು ಅವರು ಏನೆಲ್ಲ ಕುತಂತ್ರಗಳನ್ನು ಮಾಡಿದ್ದಾರೆ ಎಂದು ಅವರು ಅಳಲು ಹಂಚಿಕೊಂಡಿದ್ದಾರೆ.