Tag: games

  • ಪಬ್‌ಜಿ ನಿಷೇಧ – ಚೀನಾದ ಟೆನ್ಸೆಂಟ್‌ ಕಂಪನಿಗೆ 14 ಶತಕೋಟಿ ಡಾಲರ್‌ ನಷ್ಟ

    ಪಬ್‌ಜಿ ನಿಷೇಧ – ಚೀನಾದ ಟೆನ್ಸೆಂಟ್‌ ಕಂಪನಿಗೆ 14 ಶತಕೋಟಿ ಡಾಲರ್‌ ನಷ್ಟ

    ಬೀಜಿಂಗ್‌: ಭಾರತದ ಸರ್ಕಾರ ಜನಪ್ರಿಯ ಗೇಮಿಂಗ್‌ ಅಪ್ಲಿಕೇಶನ್‌ ಪಬ್‌ಜಿಯನ್ನು ನಿಷೇಧ ಮಾಡಿದ ಬೆನ್ನಲ್ಲೇ ಚೀನಾ ಟೆನ್ಸೆಂಟ್‌ ಕಂಪನಿಯ ಷೇರು ಭಾರೀ ಇಳಿಕೆಯಾಗಿದೆ.

    ಚೀನಾದ ದೈತ್ಯ ಇಂಟರ್‌ನೆಟ್‌ ಕಂಪನಿ ಟೆನ್ಸೆಂಟ್‌ ಷೇರು ಶೇ.2ರಷ್ಟು ಇಳಿಕೆಯಾಗಿದೆ. ಪರಿಣಾಮ ಮಾರುಕಟ್ಟೆ ಮೌಲ್ಯದಲ್ಲಿ 14 ಶತಕೋಟಿ ಡಾಲರ್‌ ಕರಗಿ ಹೋಗಿದೆ.

    ಪಬ್‌ಜಿ ಆಟಕ್ಕೆ ಭಾರತ ದೊಡ್ಡ ಮಾರುಕಟ್ಟೆಯಾಗಿದ್ದು, 17.5 ಕೋಟಿ ಜನ ಬಳಕೆ ಮಾಡುತ್ತಿದ್ದರು. ಲಡಾಖ್‌ ಗಡಿಯಲ್ಲಿ ಚೀನಾ ಕಿರಿಕ್‌ ಮಾಡಿದ ಬೆನ್ನಲ್ಲೇ ದೇಶದ ಭದ್ರತೆ ಮತ್ತು ಜನರ ಖಾಸಗಿತನವನ್ನು ರಕ್ಷಣೆ ಮಾಡುವ ಸಲುವಾಗಿ ಭಾರತ ಸರ್ಕಾರ ಬುಧವಾರ ಪಬ್‌ಜಿ ಸೇರಿದಂತೆ 117 ಚೀನಿ ಅಪ್ಲಿಕೇಶನ್‌ಗಳನ್ನು ನಿಷೇಧ ಮಾಡಿದೆ.

    ಪಬ್‌ಜಿ ಆಟವನ್ನು ದಕ್ಷಿಣ ಕೊರಿಯಾದ ಕಂಪನಿ ಅಭಿವೃದ್ಧಿ ಪಡಿಸಿದ್ದರೂ ಇದರ ಮೊಬೈಲ್‌ ಆವೃತ್ತಿಯನ್ನು ಟೆನ್ಸೆಂಟ್‌ ಹೋಲ್ಡಿಂಗ್ಸ್‌ ಖರೀದಿಸಿದೆ.

    ಮಕ್ಕಳ ಮೆದುಳಿನ ಮೇಲೆ ಭಾರೀ ಪ್ರಭಾವ ಬೀರುತ್ತದೆ. ಯುವ ಜನತೆ ಹಾಳಾಗುತ್ತಿದ್ದಾರೆ ಹೀಗಾಗಿ ನಿಷೇಧಿಸಬೇಕೆಂದು ಜನ ಆಗ್ರಹಿಸಿದ್ದರು. ಗಲ್ವಾನ್‌ ಘರ್ಷಣೆಯ ಬಳಿಕ ಟಿಕ್‌ಟಾಕ್‌ ಸೇರಿದಂತೆ 59 ಅಪ್ಲಿಕೇಶನ್‌ಗಳನ್ನು ಭಾರತ ನಿಷೇಧಿಸಿತ್ತು. ಇದಾದ ಬಳಿಕ ಮತ್ತೆ 47 ಅಪ್ಲಿಕೇಶನ್‌ಗಳನ್ನು ನಿಷೇಧಿಸಿತ್ತು.

    ರಾಷ್ಟ್ರೀಯ ಭದ್ರತೆಗೆ ಅಪಾಯಕಾರಿ ಮತ್ತು ಪ್ರಜೆಗಳ ಖಾಸಗಿತನವನ್ನು ದುರುಪಯೋಗ ಮಾಡುತ್ತಿರುವ ಹಿನ್ನೆಲೆಯಲ್ಲಿ ಭಾರತ ಒಟ್ಟು 250 ಚೀನಿ ಅಪ್ಲಿಕೇಶನ್‌ಗಳ ಮೇಲೆ ನಿಗಾ ಇಟ್ಟಿದೆ.

  • ಶಿವಮೊಗ್ಗದಲ್ಲಿ ಪ್ರಪ್ರಥಮ ಬಾರಿಗೆ ರಾಜ್ಯಮಟ್ಟದ ಒಲಿಂಪಿಕ್ ಕ್ರೀಡಾಕೂಟ ಆಯೋಜನೆ

    ಶಿವಮೊಗ್ಗದಲ್ಲಿ ಪ್ರಪ್ರಥಮ ಬಾರಿಗೆ ರಾಜ್ಯಮಟ್ಟದ ಒಲಿಂಪಿಕ್ ಕ್ರೀಡಾಕೂಟ ಆಯೋಜನೆ

    ಶಿವಮೊಗ್ಗ: ಇದೇ ಮೊದಲ ಬಾರಿಗೆ ಶಿವಮೊಗ್ಗದಲ್ಲಿ ನವೆಂಬರ್ 23 ರಿಂದ 30 ರವರೆಗೆ ರಾಜ್ಯಮಟ್ಟದ ಒಲಿಂಪಿಕ್ ಕ್ರೀಡಾಕೂಟ ನಡೆಸಲು ನಿರ್ಧರಿಸಲಾಗಿದೆ.

    ಯುವಜನ ಸೇವಾ ಮತ್ತು ಕ್ರೀಡಾ ಸಚಿವರಾಗಿ ಈಶ್ವರಪ್ಪ ಅಧಿಕಾರ ವಹಿಸಿಕೊಳ್ಳುತ್ತಿದ್ದಂತೆ ಶಿವಮೊಗ್ಗದಲ್ಲಿ ಈ ರೀತಿಯ ರಾಜ್ಯಮಟ್ಟದ ಕ್ರೀಡಾಕೂಟ ನಡೆಸಲು ನಿರ್ಧರಿಸಲಾಗಿದ್ದು ಇದು ಜಿಲ್ಲೆಯ ಅಭಿವೃದ್ಧಿ ಜೊತೆಗೆ ಕ್ರೀಡಾಪಟುಗಳ ಉತ್ತೇಜನಕ್ಕೆ ಸಹಕಾರಿಯಾಗಿದೆ. ಈ ಕ್ರೀಡಾಕೂಟವು ಶಿವಮೊಗ್ಗದ ನೆಹರೂ ಕ್ರೀಡಾಂಗಣ, ಒಳಾಂಗಣ ಕ್ರೀಡಾಂಗಣ ಸೇರಿದಂತೆ, ನಗರದ ಸ್ಪೋರ್ಟ್ಸ್ ಕಾಂಪ್ಲೆಕ್ಸ್ ನಲ್ಲಿ ನಡೆಸಲು ಭರ್ಜರಿ ತಯಾರಿ ಮಾಡಿಕೊಳ್ಳಲಾಗುತ್ತಿದೆ.

    ಕ್ರೀಡಾಕೂಟದ ಯಶಸ್ವಿ ಅಯೋಜನೆಗೆ ಸಾರ್ವಜನಿಕ ಸಂಘ-ಸಂಸ್ಥೆಗಳಿಗೆ ಕೈ ಜೋಡಿಸಲು ಮನವಿ ಕೂಡ ಮಾಡಿಕೊಳ್ಳಲಾಗಿದೆ. ಕ್ರೀಡಾಕೂಟದಲ್ಲಿ ಭಾಗವಹಿಸುವ ಕ್ರೀಡಾಪಟುಗಳ ವಸತಿ ಊಟ ಉಪಹಾರ ಮತ್ತು ಸಾರಿಗೆ ವ್ಯವಸ್ಥೆಗೆ ಕ್ರಮ ಕೈಗೊಳ್ಳಬೇಕು ಹಾಗು ಎಲ್ಲಾ ಕ್ರೀಡಾ ಸಂಸ್ಥೆಗಳು ಸಕ್ರಿಯವಾಗಿ ಜವಾಬ್ದಾರಿಯನ್ನು ವಹಿಸಿಕೊಳ್ಳುವಂತೆ ಕ್ರೀಡಾ ಸಚಿವ ಕೆ.ಎಸ್. ಈಶ್ವರಪ್ಪ ತಿಳಿಸಿದ್ದಾರೆ. ಈ ಬಗ್ಗೆ ಇಂದು ಜಿಲ್ಲಾಧಿಕಾರಿ ಕಚೇರಿಯಲ್ಲಿ ಸಭೆ ನಡೆಸಿದ ಸಚಿವರು ಕ್ರೀಡಾಕೂಟವನ್ನು ಯಶಸ್ವಿಗೊಳಿಸಲು ಕೈ ಜೋಡಿಸಿ ಎಂದು ಮನವಿ ಕೂಡ ಮಾಡಿಕೊಂಡಿದ್ದಾರೆ.

    ಇದೇ ಪ್ರಥಮ ಬಾರಿಗೆ ಶಿವಮೊಗ್ಗದಲ್ಲಿ ಈ ಒಲಿಂಪಿಕ್ ಕ್ರೀಡಾಕೂಟ ಆಯೋಜಿಸಲಾಗಿದ್ದು ಈ ಕ್ರೀಡಾಕೂಟದಲ್ಲಿ, ಒಟ್ಟು 25 ವಿವಿಧ ಕ್ರೀಡಾಸ್ಪರ್ಧೆಗಳನ್ನು ಆಯೋಜಿಸಲಾಗುತ್ತಿದೆ. ಸುಮಾರು 4 ಸಾವಿರ ಕ್ರೀಡಾಪಟುಗಳು ಕ್ರೀಡಾಕೂಟದಲ್ಲಿ ಭಾಗವಹಿಸುವ ನಿರೀಕ್ಷೆ ಇದ್ದು, ಶಿವಮೊಗ್ಗ ಸೇರಿದಂತೆ ತಾಲೂಕು ಕೇಂದ್ರಗಳಲ್ಲಿ ಕೆಲವು ಸ್ಪರ್ಧೆಗಳನ್ನು ಆಯೋಜಿಸಲು ಕೂಡ ಉದ್ದೇಶಿಸಲಾಗಿದೆ.

    ಈ ಒಲಿಂಪಿಕ್ ಕ್ರೀಡಾಕೂಟದಲ್ಲಿ ಅಥ್ಲೆಟಿಕ್ಸ್, ಸ್ವಿಮ್ಮಿಂಗ್, ರೆಸ್ಲಿಂಗ್, ಆರ್ಚರಿ, ಫೆನ್ಸಿಂಗ್, ಸೈಕ್ಲಿಂಗ್, ಜೂಡೋ, ಹಾಕಿ, ಬಾಲ್ ಬ್ಯಾಡ್ಮಿಂಟನ್, ನೆಟ್ಬಾಲ್ ಬ್ಯಾಡ್ಮಿಂಟನ್ ಸೇರಿದಂತೆ 25 ವಿಭಾಗಗಳಲ್ಲಿ ಸ್ಪರ್ಧೆ ನಡೆಯಲಿದೆ. ನಗರದ ನೆಹರು ಕ್ರೀಡಾಂಗಣ, ಒಳಾಂಗಣ ಕ್ರೀಡಾಂಗಣ, ಕ್ರೀಡಾ ಸಂಕೀರ್ಣ, ಸೇರಿದಂತೆ ವಿವಿಧ ಕಾಲೇಜುಗಳ ಕ್ರೀಡಾಂಗಣಗಳಲ್ಲಿ ಹಲವು ಸ್ಪರ್ಧೆಗಳನ್ನ ಆಯೋಜಿಸಲು ತೀರ್ಮಾನಿಸಲಾಗಿದೆ.

  • 2018 ರೌಂಡಪ್ – ಸದ್ದು ಮಾಡಿದ ಚಾಲೆಂಜ್ ಗಳು

    2018 ರೌಂಡಪ್ – ಸದ್ದು ಮಾಡಿದ ಚಾಲೆಂಜ್ ಗಳು

    ಕೆಲವು ದಿನಗಳಲ್ಲಿ 2018 ಮುಗಿಯುತ್ತದೆ. ಈ ವರ್ಷದಲ್ಲಿ ಆದ ಕೆಲವು ಘಟನೆಗಳನ್ನು ಜನರು ಎಂದಿಗೂ ಮರೆಯಲು ಸಾಧ್ಯವಿಲ್ಲ. 2018ರಂದು ಭಾರತಕ್ಕೆ ಸಾಕಷ್ಟು ಡೆಡ್ಲಿ ಗೇಮ್ ಚಾಲೆಂಜ್ ಕಾಲಿಟ್ಟಿತ್ತು. ಕೆಲವು ಚಾಲೆಂಜ್‍ನಿಂದಾಗಿ ಸಾಕಷ್ಟು ಜನರು ತಮ್ಮ ಪ್ರಾಣಗಳನ್ನು ಕಳೆದುಕೊಂಡರೆ, ಕೆಲವರು ತಮ್ಮ ಪ್ರಾಣವನ್ನೇ ರಿಸ್ಕ್ ತೆಗೆದುಕೊಂಡು ಈ ಚಾಲೆಂಜ್ ಸ್ವೀಕರಿಸಿದ್ದಾರೆ. ಡೆಡ್ಲಿ ಚಾಲೆಂಜ್‍ಗಳ ಜೊತೆ ಫಿಟ್‍ನೆಸ್ ಚಾಲೆಂಜ್ ಮತ್ತು ಬಿಂದಿ ಚಾಲೆಂಜ್ ಗಳು ಸಹ ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡಿತ್ತು.

    ಬ್ಲೂ ವೇಲ್ ಚಾಲೆಂಜ್: ರಷ್ಯಾ ಮೂಲದ ಭಯಾನಕ ಆನ್‍ಲೈನ್ ಆಟದಲ್ಲಿ ಸಂಗೀತಾ ಕೇಳುವುದು, ಬೆಳಗ್ಗೆ ಬೇಗ ಏಳುವುದು ಸೇರಿದಂತೆ 50 ಟಾಸ್ಕ್ ಗಳಿರುತ್ತಿತ್ತು. ಇದರಲ್ಲಿ ಕೊನೆಯ ಆಟ ಎತ್ತರದ ಕಟ್ಟಡದಿಂದ ಕೆಳಗೆ ಜಿಗಿಯಬೇಕಿತ್ತು. ಈ ಚಾಲೆಂಜ್ ನಲ್ಲಿ ಪಾಲ್ಗೊಳ್ಳುವ ಮುನ್ನ ವ್ಯಕ್ತಿ ಸಾಕ್ಷಿಗೆ ಫೋಟೋಗಳನ್ನು ಕಳುಹಿಸಬೇಕಾಗಿತ್ತು. ನಂತರ ಕಟ್ಟಡದಿಂದ ಹಾರಬೇಕಿತ್ತು. ಇಂತಹ ಟಾಸ್ಕ್ ಗಳು ಹೆಚ್ಚಾಗಿ ಹಾರರ್ ಸಿನಿಮಾಗಳಲ್ಲಿ ಇರುತ್ತವೆ. ಸದ್ಯ ಈ ಆಟಕ್ಕೆ ವಿದೇಶಗಳಲ್ಲಿ 100ಕ್ಕೂ ಹೆಚ್ಚು ಮಕ್ಕಳು ಬಲಿಯಾಗಿದ್ದರು.

    ಫಿಟ್ನೆಸ್ ಚಾಲೆಂಜ್: ಕೇಂದ್ರ ಯುವಜನ ಮತ್ತು ಕ್ರೀಡಾ ಸಚಿವ ರಾಜವರ್ಧನ್ ಸಿಂಗ್ ರಾಥೋಡ್ ಅವರು ಮೇ 22ರಂದು, “ನಾನು ಫಿಟ್ ಆದ್ರೆ ದೇಶ ಫಿಟ್ (#HumFitTohIndiaFit) ನೀವು ನಿಮ್ಮ ಫಿಟ್ನೆಸ್ ಗೆ ಸಂಬಂಧಿಸಿದ ಫೋಟೋ ಮತ್ತು ವಿಡಿಯೋವನ್ನು ಶೇರ್ ಮಾಡಿ” ಎಂದು ಕೊಹ್ಲಿ, ಬ್ಯಾಡ್ಮಿಂಟನ್ ತಾರೆ ಸೈನಾ ನೆಹ್ವಾಲ್, ನಟ ಹೃತಿಕ್ ರೋಷನ್ ಅವರಿಗೆ ಫಿಟ್ನೆಸ್ ಚಾಲೆಂಜ್ ಹಾಕಿ ಟ್ವೀಟ್ ಮಾಡಿ ಈ ಚಾಲೆಂಜ್ ಶುರು ಮಾಡಿದ್ದರು.

    ವಿರಾಟ್ ಕೊಹ್ಲಿ ಸವಾಲು ಸ್ವೀಕರಿಸಿದ ನಂತರ ಅದನ್ನು ಪ್ರಧಾನಿ ಮೋದಿಯವರಿಗೆ ಸವಾಲು ಹಾಕಿದ್ದರು. ನಂತರ ಕೊಹ್ಲಿಯವರ ಸವಾಲನ್ನು ನಾನು ಸ್ವೀಕರಿಸುತ್ತೇನೆ ಎಂದು ಹೇಳಿದ ಪ್ರಧಾನಿ ನರೇಂದ್ರ ಮೋದಿ ತಮ್ಮ ಫಿಟ್ನೆಸ್ ವಿಡಿಯೋವನ್ನು ಅಪ್ಲೋಡ್ ಮಾಡಿದ್ದರು. ಹೀಗೆ ದೇಶ್ಯಾದ್ಯಂತ ಹಲವು ಸೆಲೆಬ್ರಿಟಿಗಳು ಈ ಚಾಲೆಂಜ್ ಸ್ವೀಕರಿಸಿದ್ದರು.

    ಮೋಮೋ ಚಾಲೆಂಜ್: ಸಾಮಾಜಿಕ ಜಾಲತಾಣಗಳಲ್ಲಿ ಮೋಮೋ ಚಾಲೆಂಜ್ ವೈರಲ್ ಆಗಿತ್ತು. ಈ ಮೋಮೋ ಚಾಲೆಂಜ್ ಆಟವನ್ನು ಫೇಸ್‍ಬುಕ್ ಮತ್ತು ವಾಟ್ಸಪ್ ಮೂಲಕ ಆಡಲಾಗುತ್ತದೆ. ಇದು ಜನರನ್ನು ದೈಹಿಕವಾಗಿ ಹಾನಿ ಮಾಡುವುದು ಮತ್ತು ತಮ್ಮನ್ನು ತಾವೇ ಕೊಲೆ ಮಾಡಿಕೊಳ್ಳುವಂತೆ ಪ್ರಚೋದನೆಯನ್ನು ನೀಡುತ್ತಿತ್ತು. ಮೋಮೋ ಚಾಲೆಂಜ್ ನಲ್ಲಿ ಸಿಲುಕಿ ಮಾನಸಿಕವಾಗಿ ಖಿನ್ನತೆಗೆ ಒಳಗಾಗಿ ಕೆಲವರು ತಮ್ಮ ಪ್ರಾಣವನ್ನು ಕಳೆದುಕೊಂಡಿದ್ದಾರೆ.

    ಕಿಕಿ ಚಾಲೆಂಜ್: ಟ್ರಾಫಿಕ್ ಮಧ್ಯೆ ಚಲಿಸುವ ಕಾರಿನಿಂದ ಜಿಗಿದು ನೃತ್ಯ ಮಾಡುವ ಚಾಲೆಂಜ್ ಸಾಕಷ್ಟು ವೈರಲ್ ಆಗಿತ್ತು. ವಿಶ್ವದ ಹಲವು ಸೆಲೆಬ್ರಿಟಿಗಳು ಈ ಚಾಲೆಂಜ್ ಸ್ವೀಕರಿಸಿ ತಮ್ಮ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್ ಮಾಡುತ್ತಿದ್ದರು. ಕನ್ನಡದಲ್ಲಿ ಬಿಗ್ ಬಾಸ್ ನಿವೇದಿತಾ ಗೌಡ ಮೊದಲ ಬಾರಿಗೆ ಕಿಕಿ ಚಾಲೆಂಜ್ ಸ್ವೀಕರಿಸಿದ್ದರು. ಕಾರ್, ಬೈಕ್, ಎತ್ತಿನಗಾಡಿ ನಂತರ ವಿಮಾನದಿಂದ ಇಳಿದು ಪೈಲೆಟ್ ಕಿಕಿ ಚಾಲೆಂಜ್‍ಗೆ ಡ್ಯಾನ್ಸ್ ಮಾಡಿರುವ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು.

    ಫಾಲಿಂಗ್ ಸ್ಟಾರ್ ಚಾಲೆಂಜ್: ಫಾಲಿಂಗ್ ಸ್ಟಾರ್ ಎಂಬ ಚಾಲೆಂಜ್ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ಟ್ರೆಂಡ್ ಆಗಿತ್ತು. ಈ ಚಾಲೆಂಜ್ ಸ್ವೀಕರಿಸಿದವರು ನಡೆಯುತ್ತಲೇ ಕೆಳಗೆ ಬಿದ್ದು, ತಮ್ಮ ಅಕ್ಕಪಕ್ಕದಲ್ಲಿ ಬೆಲೆಬಾಳುವ ವಸ್ತುಗಳೊಂದಿಗೆ ಫೋಟೋವನ್ನು ಕ್ಲಿಕ್ಕಿಸಿಕೊಂಡು ಅದನ್ನು ಇನ್ ಸ್ಟಾಗ್ರಾಮ್‍ನಲ್ಲಿ ಅಪ್ಲೋಡ್ ಮಾಡಬೇಕಿತ್ತು.

    ಬಿಗ್ ಬಿಂದಿ ಚಾಲೆಂಜ್: ದಸರಾ ನವದುರ್ಗೆಯರ ಆರಾಧನೆ ಜೊತೆಗೆ ನಮ್ಮ ಸಂಪ್ರದಾಯದ ಬಗ್ಗೆ ತಿಳಿ ಹೇಳಲು ಬಿಗ್ ಬಿಂದಿ ಚಾಲೆಂಜ್ ಶುರುವಾಗಿತ್ತು. ಇದು ಸಿಂಪಲ್ ಚಾಲೆಂಜ್ ಆಗಿದ್ದು, ಹಣೆಗೆ ದೊಡ್ಡ ಬಿಂದಿ ಅಥವಾ ಕುಂಕುಮವನ್ನು ಇಟ್ಟು ಸೆಲ್ಫಿ ತೆಗೆದು ಸಾಮಾಜಿಕ ಜಾಲತಾಣದಲ್ಲಿ ಹಾಕಬೇಕಿತ್ತು. ಈ ಚಾಲೆಂಜ್ ಶುರು ಆದ ಎರಡೇ ದಿನದಲ್ಲಿ ಸಾವಿರಾರು ಜನ ಚಾಲೆಂಜ್ ಸ್ವೀಕರಿಸಿ ತಮ್ಮ ಫೇಸ್‍ಬುಕ್ ಅಕೌಂಟ್ ನಲ್ಲಿ ಸೆಲ್ಫಿ ಹಾಕಿಕೊಂಡಿದ್ದರು. ಬಿಗ್ ಬಿಂದಿ ಚಾಲೆಂಜ್ ಸ್ವೀಕರಿಸಿ ಸಾಕಷ್ಟು ಹೆಣ್ಮಕ್ಕಳು ಈಗಲೂ ನಾವು ನಮ್ಮ ಸಂಪ್ರದಾಯವನ್ನು ಬಿಟ್ಟಿಲ್ಲ ಅಂತ ತೋರಿಸಿದ್ದರು.

    PUBG ಗೇಮ್: ಪಬ್ ಜಿ ಎನ್ನುವುದು ಒಂದು ಬ್ಯಾಟಲ್ ಫೀಲ್ಡ್ ಗೇಮ್ (ಯುದ್ಧ ಭೂಮಿ ಆಟ). ಈ ಆಟದ ಸಂಪೂರ್ಣ ಭೂಪಟವನ್ನು ಆಟಗಾರಿಗೆ ಮೊದಲು ತೋರಿಸಲಾಗುತ್ತದೆ. ಬಳಿಕ ಆಟಗಾರರು ತಮಗೆ ಬೇಕಾದ ಪ್ರದೇಶವನ್ನು ಆಯ್ದುಕೊಂದು ಆ ಪ್ರದೇಶಕ್ಕೆ ವಿಮಾನದಿಂದ ಕೆಳಗೆ ಹಾರಿ ಮನೆಗಳತ್ತ ಓಡ್ತಾರೆ. ಆಟಗಾರರಿದ್ದ ಪ್ರದೇಶದಲ್ಲಿ ಸಿಕ್ಕ ಶಸ್ತ್ರಾಸ್ತ್ರಗಳನ್ನು, ಮೆಡಿಕಲ್ ಕಿಟ್‍ಗಳನ್ನು, ಯುದ್ಧಕ್ಕೆ ಬೇಕಾದ ಅಗತ್ಯ ವಸ್ತುಗಳನ್ನು ಆಯ್ದುಕೊಂಡು ಮುಂದೆ ಸಾಗುತ್ತಾರೆ. ಆಟಗಾರರು ಇಳಿದ ಪ್ರದೇಶದ ಸುತ್ತ ವೃತ್ತವೊಂದು ಸಣ್ಣದಾಗುತ್ತೆ. ಆಗ ಅಲ್ಲಿದ್ದ ನೂರಾರು ಜನರ ಜೊತೆ ಹೋರಾಡಿ ಉಳಿದರೇ ಗೆದ್ದಂತೆ, ಮೃತಪಟ್ಟರೆ ಸೋತಂತೆ. ಈ ಆಟದ ವಿಶೇಷ ಏನೆಂದರೆ ಸ್ನೇಹಿತರ ಜೊತೆ ಸೇರಿ ಆಡಬಹುದು. ದೆಹಲಿಯಲ್ಲಿ 19 ವರ್ಷದ ಯುವಕನೊಬ್ಬ ಈ ಗೇಮ್ ಚಟಕ್ಕೆ ಬಿದ್ದು ತನ್ನ ಪೋಷಕರು ಮತ್ತು ಸೋದರಿಯನ್ನು ಕೊಲೆ ಮಾಡಿದ್ದನು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಕಾಮನ್‌ವೆಲ್ತ್ ಗೇಮ್ಸ್‌ಗೆ ಮಹಿಳಾ ಕ್ರಿಕೆಟ್ ಸೇರ್ಪಡೆ!

    ಕಾಮನ್‌ವೆಲ್ತ್ ಗೇಮ್ಸ್‌ಗೆ ಮಹಿಳಾ ಕ್ರಿಕೆಟ್ ಸೇರ್ಪಡೆ!

    ನವದೆಹಲಿ: ಕಾಮನ್‍ವೆಲ್ತ್ ಕ್ರಿಕೆಟ್ ಗೇಮ್ಸ್ ನಲ್ಲಿ ಮಹಿಳಾ ಕ್ರಿಕೆಟ್ ಸೇರ್ಪಡೆ ಮಾಡಲು ಕಾರ್ಯ ಆರಂಭಿಸಿದ್ದಾಗಿ ಅಂತರಾಷ್ಟ್ರೀಯ ಕ್ರಿಕೆಟ್ ಸಮಿತಿ (ಐಸಿಸಿ) ಮಾಹಿತಿ ನೀಡಿದೆ.

    2022 ರಲ್ಲಿ ಇಂಗ್ಲೆಂಡ್‍ನ ಬರ್ಮಿಂಗ್‍ಹ್ಯಾಂನಲ್ಲಿ ನಡೆಯಲಿರುವ ಕಾಮನ್‍ವೆಲ್ತ್ ಗೇಮ್ಸ್ ನಲ್ಲಿ ಮಹಿಳಾ ಕ್ರಿಕೆಟ್ ಸೇರ್ಪಡೆ ಮಾಡಲು ಐಸಿಸಿ ಕಾಮನ್ ವೆಲ್ತ್ ಗೇಮ್ಸ್ ಆಯೋಜಕರಿಗೆ ಮನವಿ ಸಲ್ಲಿಸಿಕೆ ಕುರಿತು ಮಾಹಿತಿ ನೀಡಿದೆ. ಮಹಿಳಾ ಕ್ರಿಕೆಟ್‍ಗೆ ಜಾಗತಿಕ ಮನ್ನಣೆ ಕಲ್ಪಿಸಲು ಐಸಿಸಿ ಮತ್ತು ಇಂಗ್ಲೆಂಡ್ ವೇಲ್ಸ್ ಕ್ರಿಕೆಟ್ ಮಂಡಳಿ (ಇಸಿಬಿ) ಈ ಕ್ರಮಕ್ಕೆ ಮುಂದಾಗಿದೆ.

    ಈ ಕುರಿತು ಐಸಿಸಿ ಪ್ರಕಟಣೆಯಲ್ಲಿ ವಿವರಗಳನ್ನ ನೀಡಿದ್ದು, ಈ ಕುರಿತು ಬಿಡ್ ಸಲ್ಲಿಸಲಾಗಿದೆ. ಇದರಲ್ಲಿ 8 ತಂಡಗಳ ಟಿ20 ಪಂದ್ಯಗಳನ್ನು ಆಯೋಜಿಸಲು ಮನವಿ ಸಲ್ಲಿಸಲಾಗಿದ್ದು, ಕ್ರಿಕೆಟ್ ಮತ್ತು ಕಾಮನ್ ವೆಲ್ತ್ ಗೇಮ್ಸ್ ಉತ್ತಮ ಸಂಬಂಧವನ್ನು ಹೊಂದಿದೆ. ಎರಡು ಒಂದಾಗುವುದರಿಂದ ಕಾಮನ್ ವೆಲ್ತ್ ಸದಸ್ಯ ರಾಷ್ಟ್ರಗಳಲ್ಲಿ ಇರುವ ಸುಮಾರು 91 ಕೋಟಿ ಕ್ರಿಕೆಟ್ ಅಭಿಮಾನಿಗಳನ್ನು ಟೂರ್ನಿಯತ್ತ ಆಕರ್ಷಿಸಲು ನೆರವಾಗಲಿದೆ ಎಂದು ತಿಳಿಸಿದೆ.

    ಕಾಮನ್‌ವೆಲ್ತ್ ಗೇಮ್ಸ್‌ಗೆ ಕ್ರಿಕೆಟ್ ಸೇರ್ಪಡೆ ಆಗುವುದರಿಂದ ಮಹಿಳೆಯರಿಗೆ ಸಮಾನತೆ, ಸ್ಫೂರ್ತಿ ಮತ್ತು ಅವಕಾಶವನ್ನು ನೀಡಲು ಸಾಧ್ಯವಾಗುತ್ತದೆ ಎಂದು ಐಸಿಸಿ ಮುಖ್ಯ ಕಾರ್ಯನಿರ್ವಾಹಕ ಡೇವಿಡ್ ರಿಚರ್ಡ್ ಸನ್ ಹೇಳಿದ್ದಾರೆ. ಈ ಹಿಂದೆ 1998 ರಲ್ಲಿ ಕ್ರಿಕೆಟನ್ನು ಕಾಮನ್ ವೆಲ್ತ್ ಗೇಮ್ಸ್ ನಲ್ಲಿ ಕ್ರಿಕೆಟ್ ಸೇರ್ಪಡೆಯಾಗಿತ್ತು. ಆದರೆ ಆ ವೇಳೆ ಕೇವಲ ಪುರುಷ ತಂಡಗಳು ಮಾತ್ರ ಟೂರ್ನಿಯಲ್ಲಿ ಭಾಗವಹಿಸಿದ್ದರು. ಈ ಸರಣಿಯಲ್ಲಿ ದಕ್ಷಿಣ ಆಫ್ರಿಕಾ ಪ್ರಶಸ್ತಿ ಪಡೆದುಕೊಂಡಿತ್ತು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

     

  • ಒಲಿಂಪಿಕ್ಸ್ ಪಂದ್ಯಾವಳಿಗೆ ಪೂರೈಕೆ ಆಯ್ತು 1 ಲಕ್ಷಕ್ಕೂ ಅಧಿಕ ಕಾಂಡೋಮ್

    ಒಲಿಂಪಿಕ್ಸ್ ಪಂದ್ಯಾವಳಿಗೆ ಪೂರೈಕೆ ಆಯ್ತು 1 ಲಕ್ಷಕ್ಕೂ ಅಧಿಕ ಕಾಂಡೋಮ್

    ಪೈಯೋಂಗ್ ಚಾಂಗ್: ದಕ್ಷಿಣ ಕೊರಿಯಾದ ಪಿಯಾಂಗ್ ಚಾಂಗ್‍ನಲ್ಲಿ ನಡೆಯಲಿರುವ 2018 ರ ಚಳಿಗಾಲದ ಒಲಿಂಪಿಕ್ಸ್ ಪಂದ್ಯಾವಳಿಯಲ್ಲಿ ಭಾಗವಹಿಸುವ ಆಟಗಾರರಿಗೆ ಓಲಿಂಪಿಕ್ ಸಮಿತಿ ಸುಮಾರು 1 ಲಕ್ಷಕ್ಕೂ ಅಧಿಕ ಕಾಂಡೋಮ್‍ಗಳನ್ನು ಪೂರೈಕೆ ಮಾಡಿದೆ.

    ಒಲಿಂಪಿಕ್ಸ್ ಪಂದ್ಯಾವಳಿಗಳು ಮುಂದಿನ ವಾರದಿಂದ ಆರಂಭವಾಗುತ್ತಿದೆ. ಕಳೆದ ಬಾರಿ ರಷ್ಯಾದ ಸೋಚಿ ಯಲ್ಲಿ ಆಯೋಜಿಸಲಾಗಿದ್ದ ಒಲಿಂಪಿಕ್ಸ್ ಪಂದ್ಯಾವಳಿ ಗಳಿಗೆ ಪೂರೈಕೆ ಮಾಡಲಾಗಿದ್ದ 1 ಲಕ್ಷ ಕಾಂಡೋಮ್ ಗಳ ಸಂಖ್ಯೆಯನ್ನು ಹೆಚ್ಚಿಸಿ ಆಧಿಕ ಹತ್ತು ಸಾವಿರ ಕಾಂಡೋಮ್‍ಗಳನ್ನು ಪೂರೈಕೆ ಮಾಡಲಾಗಿದೆ. ಹಾಗೂ ಈ ಬಾರಿಯ ಒಲಿಂಪಿಕ್ಸ್ ನಲ್ಲಿ ಕೇವಲ 100 ಹೆಚ್ಚಿನ ಆಟಗಾರರು ಭಾಗವಹಿಸುತ್ತಿದ್ದಾರೆ.

     

    ಒಲಿಂಪಿಕ್ಸ್ ನಲ್ಲಿ ಭಾಗವಹಿಸುವ ಆಟಗಾರರಿಗಾಗಿಯೇ ಪ್ರತ್ಯೇಕ ಒಲಿಂಪಿಕ್ ವಿಲೇಜ್ ನಿರ್ಮಾಣ ಮಾಡಲಾಗಿದೆ. ಇಲ್ಲಿ ಆಟಗಾರರಿಗೆ ಬೇಕಾದ ಎಲ್ಲಾ ಮೂಲಭೂತ ಸೌಲಭ್ಯಗಳನ್ನು ಒದಗಿಸಲಾಗುತ್ತದೆ. ಅಲ್ಲದೇ ಅಂತರಾಷ್ಟ್ರೀಯ ಅಂಚೆ ಸೇವೆ, ಹೂವಿನ ಮಾರುಕಟ್ಟೆ ಸೇರಿದಂತೆ ವಿವಿಧ ಅಂಗಡಿಗಳು, ಫಿಟ್‍ನೆಸ್ ಸೆಂಟರ್, 24 ಗಂಟೆ ಊಟದ ವ್ಯವಸ್ಥೆ, ಪ್ರಾರ್ಥನಾ ಸ್ಥಳ, ಜೊತೆಗೆ ಮನೆಯಲ್ಲಿ ಸಿಗುವ ಎಲ್ಲಾ ವ್ಯವಸ್ಥೆಗಳನ್ನ ಕಲ್ಪಿಸಲಾಗುತ್ತದೆ.

    ದಕ್ಷಿಣ ಕೊರಿಯಾದ ಕಾಂಡೋಮ್ ಉತ್ಪಾದಕರ ವಕ್ತಾರರು ಸ್ಥಳೀಯ ಮಾಧ್ಯಮಗಳಿಗೆ ನೀಡಿರುವ ಹೇಳಿಕೆಯಲ್ಲಿ, ಸದಾಶಯದಿಂದ ಕಾಂಡೋಮ್ ಪೂರೈಕೆ ಮಾಡಲಾಗ್ತಿದೆ ಎಂದು ತಿಳಿಸಿದ್ದಾರೆ.

    ಈ ಬಾರಿ ಒಲಿಂಪಿಕ್ ವಿಲೇಜ್ ಗೆ 90 ವಿವಿಧ ದೇಶಗಳ 2,925 ಕ್ಕೂ ಹೆಚ್ಚಿನ ಕ್ರೀಡಾಪಟುಗಳು ಆಗಮಿಸುವ ನಿರೀಕ್ಷೆ ಇದೆ. ಎರಡು ವಾರಗಳ ಕಾಲ ಕ್ರೀಡಾಕೂಟ ನಡೆಯಲಿದೆ.

    ಒಲಿಂಪಿಕ್ಸ್ ಕ್ರೀಡಾಕೂಟಗಳಲ್ಲಿ ಮೊದಲ ಬಾರಿಗೆ 1988 ರಲ್ಲಿ ದಕ್ಷಿಣ ಕೊರಿಯಾದಲ್ಲಿ ನಡೆದ ಬೇಸಿಗೆ ಕ್ರೀಡಾಕೂಟದಲ್ಲಿ ಕಾಂಡೋಮ್‍ಗಳನ್ನು ಸಾರ್ವಜನಿಕವಾಗಿ ಪೂರೈಕೆ ಮಾಡಲಾಗಿತ್ತು. ಆಟಗಾರರು ಎಚ್‍ಐವಿ ವೈರಸ್ ನಿಂದ ರಕ್ಷಣೆ ಪಡೆಯಲು ಈ ಕ್ರಮವನ್ನು ಕೈಗೊಳ್ಳಲಾಗಿತ್ತು. ಅನಂತರದಲ್ಲಿ ಈ ಕ್ರಮವನ್ನು ಮುಂದುವರೆಸಲಾಗಿತ್ತು. 2016 ರ ಬ್ರೆಜಿಲ್ ನ ರಿಯೋ ಡಿ ಜನೈರೊ ದಲ್ಲಿ ನಡೆದ ಕ್ರೀಡಾಕೂಟದಲ್ಲಿ 4.5 ಲಕ್ಷ ಕಾಂಡೋಮ್ ಗಳನ್ನು ಪೂರೈಕೆ ಮಾಡಲಾಗಿತ್ತು.

     

  • ಮೊಬೈಲ್‍ನಲ್ಲಿ ಗೇಮ್ ಆಡಲು ಬಿಡ್ಲಿಲ್ಲವೆಂದು ಆತ್ಮಹತ್ಯೆಗೆ ಯತ್ನಿಸಿದ ಬಾಲಕ

    ಮೊಬೈಲ್‍ನಲ್ಲಿ ಗೇಮ್ ಆಡಲು ಬಿಡ್ಲಿಲ್ಲವೆಂದು ಆತ್ಮಹತ್ಯೆಗೆ ಯತ್ನಿಸಿದ ಬಾಲಕ

    ಮುಂಬೈ: ತನ್ನ ತಂದೆ ಮೊಬೈಲ್‍ನಲ್ಲಿ ಗೇಮ್ ಆಡಲು ಬಿಡಲಿಲ್ಲವೆಂದು 14 ವರ್ಷದ ಬಾಲಕನೊಬ್ಬ ಆತ್ಮಹತ್ಯೆಗೆ ಯತ್ನಿಸಿದ ಘಟನೆ ಮುಂಬೈನಲ್ಲಿ ನೆಡೆದಿದೆ.

    ಜುಲೈ 27ರಂದು ಸಂಜೆ ಸುಮಾರು 6.30ರ ವೇಳೆ ಪರೇಲ್ ರೈಲ್ವೆ ನಿಲ್ದಾಣದಲ್ಲಿ ಬಾಲಕನೊಬ್ಬ ರೈಲಿನ ಮುಂದೆ ನಡೆದುಕೊಂಡು ಹೋಗುತ್ತಿದ್ದುದನ್ನು ಕರ್ತವ್ಯದಲ್ಲಿದ್ದ ಸಿಬ್ಬಂದಿಯೊಬ್ಬರು ಗಮನಿಸಿದ್ದರು. ಈ ವೇಳೆ ರೈಲಿನ ಚಾಲಕ ಕೂಡ ಬಾಲಕನನ್ನು ನೋಡಿ ರೈಲನ್ನ ನಿಲ್ಲಿಸಿದ್ರು. ನಂತರ ಸಿಬ್ಬಂದಿ ಬಾಲಕನ ಬಳಿ ಹೋಗಿ ಆತನನ್ನ ದಾದರ್‍ನ ಆರ್‍ಪಿಎಫ್ ಕಚೇರಿಗೆ ಕರೆದುಕೊಂಡು ಬಂದ್ರು ಎಂದು ದಾದರ್ ಆರ್‍ಪಿಎಫ್‍ನ ಇನ್ಸ್ ಪೆಕ್ಟರ್ ಸತೀಶ್ ಮೆನನ್ ಹೇಳಿದ್ದಾರೆ.

    ಭಯದಲ್ಲಿದ್ದ ಬಾಲಕ ತನ್ನ ಬಗ್ಗೆ ಮಾಹಿತಿ ನೀಡಲು ಹಂಜರಿದಿದ್ದ. ತಾನು ಗುಜರಾತ್‍ನ ಒಬ್ಬ ಅನಾಥ ಎಂದಷ್ಟೇ ಹೇಳುತ್ತಿದ್ದ. ನಂತರ ಆತ ಸೆಲ್‍ಫೋನ್ ನೋಡಿ ವಿಚಲಿತನಾಗಿದ್ದನ್ನು ನೀತಾ ಮಾಂಜಿ ಎಂಬ ಅಧಿಕಾರಿ ಗಮನಿಸಿದ್ರು. ಇದನ್ನೇ ಬಳಸಿ ಅವರು ಆತನೊಂದಿಗೆ ದೀರ್ಘ ಸಮಯದವರೆಗೆ ಮಾತನಾಡುತ್ತಾ ಎಲ್ಲಾ ವಿವರಗಳನ್ನ ಪಡೆದುಕೊಂಡ್ರು. ಆತ ತನ್ನ ತಂದೆ ತಾಯಿ ಬಗ್ಗೆ ಮಾಹಿತಿ ನೀಡುತ್ತಿದ್ದಂತೆ ಅವರನ್ನ ಕರೆಸಲಾಯ್ತು. ಆಟೋ ಡ್ರೈವರ್ ಆದ ಬಾಲಕನ ತಂದೆ ಕಚೇರಿಗೆ ಬಂದ್ರು ಎಂದು ಅವರು ಹೇಳಿದ್ದಾರೆ.

    ನನ್ನ ಮಗನಿಗೆ ಮೊಬೈಲ್‍ನಲ್ಲಿ ಆಡವಾಡುವುದೆಂದರೆ ಇಷ್ಟ. ಆದ್ರೆ ಮೊಬೈಲ್ ಬಿಟ್ಟು ಓದು ಅಂದ್ರೆ ಕೋಪ ಮಾಡಿಕೊಳ್ತಾನೆ. ಇದೇ ವಿಚಾರದ ಬಗ್ಗೆ ಕೋಪ ಮಾಡಿಕೊಂಡು ಮನೆ ಬಿಟ್ಟು ಹೋಗಿದ್ದ ಎಂದು ಬಾಲಕನ ತಂದೆ ಹೇಳಿದ್ದಾರೆ.

    ಸದ್ಯ ಆರ್‍ಪಿಎಫ್ ಅಧಿಕಾರಿಗಳು ಬಾಲಕನನ್ನು ಪೋಷಕರಿಗೆ ಒಪ್ಪಿಸಿದ್ದಾರೆ.