Tag: Gamer

  • 90ರ ಹರೆಯದಲ್ಲಿ ಗಿನ್ನಿಸ್ ದಾಖಲೆ ಬರೆದ ‘ಗೇಮರ್ ಅಜ್ಜಿ’

    90ರ ಹರೆಯದಲ್ಲಿ ಗಿನ್ನಿಸ್ ದಾಖಲೆ ಬರೆದ ‘ಗೇಮರ್ ಅಜ್ಜಿ’

    ಟೋಕಿಯೋ: ಗೇಮರ್ ಅಜ್ಜಿ ಖ್ಯಾತಿಯ ಜಪಾನ್‍ನ ಹಮಕೋ ಮರಿ 90ರ ಹರೆಯದಲ್ಲಿ ಗಿನ್ನಿಸ್ ದಾಖಲೆ ಬರೆದಿದ್ದಾರೆ.

    ಇತ್ತೀಚಿನ ದಿನಗಳಲ್ಲಿ ಕ್ರೀಡಾಂಗಣದಲ್ಲಿನ ಆಟಕ್ಕಿಂತ ಹೆಚ್ಚಾಗಿ ಆನ್‍ಲೈನ್ ಗೇಮ್, ಮೊಬೈಲ್ ಗೇಮ್‍ಗಳಲ್ಲೇ ಯುವಕರು ಹೆಚ್ಚಿನ ಸಮಯ ಕಳೆಯುತ್ತಿದ್ದಾರೆ. ಅದರಲ್ಲೂ ಪಬ್ ಜಿ, ಸಿಒಡಿ ಆನ್‍ಲೈನ್ ಗೇಮ್‍ಗಳು ಮಕ್ಕಳ ಮೇಲೆ ಕೆಟ್ಟ ಪರಿಣಾಮ ಬೀರುತ್ತಿವೆ ಎಂದು ಅನೇಕ ಪೋಷಕರು ಆರೋಪಿಸಿದ್ದಾರೆ. ಆದರೆ 90 ವರ್ಷದ ಅಜ್ಜಿ ಆನ್‍ಲೈನ್ ಗೇಮಿಂಗ್‍ನಲ್ಲಿ ಗಿನ್ನಿಸ್ ದಾಖಲೆ ಬೆರೆದು ಹುಬ್ಬೇರಿಸುವಂತೆ ಮಾಡಿದ್ದಾರೆ.

    1981ರಿಂದ ಗೇಮಿಂಗ್ ಜಗತ್ತಿನಲ್ಲಿ ಸ್ಟೆಲ್ಲರ್ ಆಗಿರುವ ಜಪಾನ್‍ನ 90 ವರ್ಷದ ಅಜ್ಜಿ ಹಮಕೋ ಮಾರಿ ಅವರು 1981 ರಿಂದ ಗೇಮಿಂಗ್ ಕೌಶಲ್ಯವನ್ನು ಮೆರುಗುಗೊಳಿಸಿದ್ದಾರೆ. ಅವರು 1981ರಿಂದ ಗೇಮಿಂಗ್ ಜಗತ್ತಿನಲ್ಲಿ ನಾಕ್ಷತ್ರಿಕರಾಗಿದ್ದಾರೆ. ವಿಡಿಯೋ ಗೇಮ್‍ಗಳ ಬಗ್ಗೆ ಉತ್ಸಾಹ ಮತ್ತು ಪ್ರೀತಿ, “ಗೇಮರ್ ಅಜ್ಜಿ”, ಅವರು ಜನಪ್ರಿಯವಾಗಿ ತಿಳಿದಿರುವಂತೆ, ವಿಶ್ವದ ಅತ್ಯಂತ ಹಿರಿಯ ಗೇಮಿಂಗ್ ಯೂಟ್ಯೂಬರ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

    1930ರ ಫೆಬ್ರವರಿ 18ರಂದು ಜನಿಸಿದ ಹಮಕೋ ಮರಿ ತಮ್ಮ 39ನೇ ವಯಸ್ಸಿನಲ್ಲಿ ಗೇಮಿಂಗ್ ಜಗತ್ತಿಗೆ ಕಾಲಿಟ್ಟರು. ಬಳಿಕ 2014ರ ಡಿಸೆಂಬರ್ 19ರಲ್ಲಿ ತಮ್ಮದೇ ಆದ ಯೂಟ್ಯೂಬ್ ಚಾನೆಲ್‍ನೊಂದಿಗೆ ಆನ್‍ಲೈನ್‍ನಲ್ಲಿ ತೊಡಗಿದರು. ಪ್ರತಿ ತಿಂಗಳು ನಾಲ್ಕು ವಿಡಿಯೋಗಳನ್ನು ಅಪ್‍ಲೋಡ್ ಮಾಡುವ ಅಜ್ಜಿ ಕಾಲ್ ಆಫ್ ಸೇರಿದಂತೆ ಅನೇಕ ಆನ್‍ಲೈನ್ ಆಟಗಳನ್ನು ಚೆನ್ನಾಗಿ ತಿಳಿದಿದ್ದಾರೆ.

    ಡ್ಯೂಟಿ, ಡಾಂಟ್‍ಲೆಸ್, ನೀರ್ ಅಂಡ್ ಆಟೊಮ್ಯಾಟಾ, ಗ್ರ್ಯಾಂಡ್ ಥೆಫ್ಟ್ ಆಟೋ ವಿ ಹಮಕೋ ಮರಿ ಅವರ ನೆಚ್ಚಿನ ಆಟವಾಗಿವೆ. ಅಷ್ಟೇ ಅಲ್ಲದೆ ಅವರು ಹಲವಾರು ಆನ್‍ಲೈನ್ ಆಟಗಳನ್ನು ಆಡಿ ಗಿನ್ನೆಸ್ ವಲ್ರ್ಡ್ ರೆಕಾಡ್ರ್ಸ್ ನಲ್ಲಿ ವಿಶ್ವದ ಅತ್ಯಂತ ಹಿರಿಯ ಗೇಮಿಂಗ್ ಯೂಟ್ಯೂಬರ್ ಪ್ರಶಸ್ತಿಯನ್ನು ಗಳಿಸಿದ್ದಾರೆ. ಜಪಾನಿನ ಅಜ್ಜಿ ಪ್ರತಿದಿನ ಏಳು ರಿಂದ ಎಂಟು ಗಂಟೆಗಳ ಕಾಲ ಗೇಮಿಂಗ್‍ನಲ್ಲೇ ಕಳೆಯುತ್ತಾರೆ. ಜೊತೆಗೆ ಹಮಕೋ ಮಾರಿ ಅವರ ಯೂಟ್ಯೂಬ್ ಚಾನೆಲ್‍ಗೆ 2.78 ಲಕ್ಷ ಚಂದಾದಾರರಿದ್ದಾರೆ.