Tag: game

  • ಆನ್‍ಲೈನ್ ಗೇಮ್ ಚಟಕ್ಕೆ ಬಿದ್ದು ಪೋಷಕರನ್ನೇ ಕೊಲೆಗೈದ ಮಗ!

    ಆನ್‍ಲೈನ್ ಗೇಮ್ ಚಟಕ್ಕೆ ಬಿದ್ದು ಪೋಷಕರನ್ನೇ ಕೊಲೆಗೈದ ಮಗ!

    ನವದೆಹಲಿ: 19 ವರ್ಷದ ಯುವಕನೊಬ್ಬ ಆನ್‍ಲೈನ್ ಗೇಮ್ ಚಟಕ್ಕೆ ಬಿದ್ದು ತನ್ನ ಪೋಷಕರು ಮತ್ತು ಸೋದರಿಯನ್ನು ಕೊಲೆ ಮಾಡಿರುವ ಘಟನೆ ಮೆಹ್ರಾಲಿಯಲ್ಲಿ ನಡೆದಿದೆ.

    ಸುರಾಜ್ ಅಲಿಯಾಸ್ ಸರ್ನಮ್ ವರ್ಮಾ ಹೆತ್ತವರನ್ನೇ ಕೊಲೆ ಮಾಡಿದ ಆರೋಪಿ. ತಂದೆ ಮಿಥಿಲೇಶ್, ತಾಯಿ ಸಿಯಾ ಮತ್ತು ಸೋದರಿಯನ್ನು ಬುಧವಾರ ಕೊಲೆ ಮಾಡಿದ್ದಾನೆ. ಆರೋಪಿ ಸುರಾಜ್‍ನನ್ನು ಪೊಲೀಸರು ಬುಧವಾರ ಸಂಜೆ ಬಂಧಿಸಿದ್ದಾರೆ.

    ಈ ಘಟನೆ ಕುರಿತು ಪೊಲೀಸರು ತನಿಖೆ ನಡೆಸಿದಾಗ ಕೃತ್ಯ ಎಸಗುವ ಮುನ್ನ ಆರೋಪಿ ಸುರಾಜ್ ಕಾಲೇಜಿಗೆ ಬಂಕ್ ಮಾಡಿ ಹಿರಿಯ ವಿದ್ಯಾರ್ಥಿಗಳ ಜೊತೆ ಹೊರಗಡೆ ಹೋಗುವ ಸಂಬಂಧ ವಾಟ್ಸಪ್ ನಲ್ಲಿ ಚರ್ಚೆ ನಡೆಸಿದ್ದರು.

    ಕಾಲೇಜಿಗೆ ಬಂಕ್ ಹಾಕಿದ್ದ ಸೂರಜ್ ಮೆಹ್ರಾಲಿಯಲ್ಲಿ ಸ್ನೇಹಿತನ ರೂಮಿನಲ್ಲಿ ಕಾಲ ಕಳೆಯುತ್ತಿದ್ದನು. ಪಬ್‍ಜೀ ಆನ್‍ಲೈನ್ ಗೇಮ್‍ನಲ್ಲಿ ಮಗ್ನನಾಗಿದ್ದ ಸೂರಜ್ ಸ್ನೇಹಿತನ ಕೋಣೆಯಲ್ಲೇ ಬೆಳಗ್ಗೆ 7 ರಿಂದ ಸಂಜೆ 6 ರವರೆಗೆ ಆಡಿದ್ದಾನೆ. ಬಳಿಕ ಮನೆಗೆ ತೆರಳಿದಾಗ ಸೂರಜ್ ನಡವಳಿಕೆ ಸಹಜವಾಗಿಯೇ ಇತ್ತು. ನಸುಕಿನ ಜಾವ 3ಕ್ಕೆ ಎದ್ದು ತಂದೆಗೆ ಹಲವು ಬಾರಿ ಚಾಕುವಿನಿಂದ ಇರಿದಿದ್ದಾನೆ. ನಂತರ ಪಕ್ಕದಲ್ಲೇ ಮಲಗಿದ್ದ ತಾಯಿಗೂ ಚಾಕುವಿನಿಂದ ಚುಚ್ಚಿದ್ದಾನೆ. ತದನಂತರ ಸಹೋದರಿಯ ಕೊಠಡಿಗೆ ತೆರಳಿ ಆಕೆಯ ಕತ್ತನ್ನು ಇರಿದಿದ್ದಾನೆ. ಮಗಳನ್ನು ರಕ್ಷಿಸಲು ಬಂದ ತಾಯಿಗೂ ಮತ್ತೊಮ್ಮೆ ಚಾಕು ಹಾಕಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

    PUBG ಗೇಮ್ ಎಂದರೇನು?
    ಇದು ಆನ್‍ಲೈನ್ ಗೇಮ್ ಆಗಿದ್ದು, ಇದು ಆಟಗಾರರು ಆಟಗಾರನ ವಿರುದ್ಧ ಆಡುವಂತಹ ಗೇಮ್ ಆಗಿದೆ. ಇದರಲ್ಲಿ 100 ಅಥವಾ ಅದಕ್ಕಿಂತ ಹೆಚ್ಚಿನ ಆಟಗಾರರು ಜೀವಂತವಾಗಿ ಉಳಿಯಲು ಹೋರಾಡುತ್ತಾರೆ. ಹೋರಾಟದ ಮಾರ್ಗವು ಪ್ರತಿ ಸುತ್ತಿನಲ್ಲೂ ಬದಲಾಗುತ್ತದೆ. ಇತರ ಆಟಗಾರರನ್ನು ಶಸ್ತ್ರಸ್ತ್ರಗಳ ಮೂಲಕ ಆಡಲಾಗುತ್ತದೆ. ನೀವು ಈ ಆಟದಲ್ಲಿ ಕೊಲ್ಲಲ್ಪಟ್ಟರೆ ಈ ಆಟದಿಂದ ಔಟ್ ಆಗುತ್ತಾನೆ. ಪ್ರತಿ ಹಂತವನ್ನು ಎಷ್ಟು ಅವಧಿಯಲ್ಲಿ ಮುಗಿಸಿದ್ದಾರೋ ಆ ಆ ಅವಧಿಯನ್ನು ಲೆಕ್ಕಹಾಕಿ ಗೇಮ್ ಕರೆನ್ಸಿ ಸಿಗುತ್ತದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಬ್ಲೂವೇಲ್‍ ಆಟಕ್ಕೆ ಬಲಿಯಾದ 12ರ ಬಾಲಕ!

    ಬ್ಲೂವೇಲ್‍ ಆಟಕ್ಕೆ ಬಲಿಯಾದ 12ರ ಬಾಲಕ!

    ಕಲಬುರಗಿ: ನೇಣು ಬಿಗಿದುಕೊಂಡು 12 ವರ್ಷದ ವಿದ್ಯಾರ್ಥಿಯೊಬ್ಬ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಕಲಬುರಗಿ ನಗರದ ಮಹಲಕ್ಷ್ಮಿ ಲೇಔಟ್ ನಲ್ಲಿ ನಡೆದಿದೆ.

    ಸಮರ್ಥ್(12) ಬ್ಲೂವೇಲ್‍ಗೆ ಬಲಿಯಾಗಿ ಆತ್ಮಹತ್ಯೆ ಮಾಡಿಕೊಂಡ ಬಾಲಕ. ಸಮರ್ಥ್ ಬ್ಲೂವೇಲ್ ಗೇಮ್‍ನ ಟಾಸ್ಕ್ ಗೆ ಬಲಿಯಾಗಿದ್ದಾನೆ ಎಂದು ಶಂಕಿಸಲಾಗಿದೆ. ಸಮರ್ಥ್ ಖಾಸಗಿ ಶಾಲೆಯಲ್ಲಿ ಏಳನೇ ತರಗತಿಯಲ್ಲಿ ಓದುತ್ತಿದ್ದನು. ಅಲ್ಲದೇ ಆತ್ಮಹತ್ಯೆ ಮಾಡಿಕೊಳ್ಳುವ ಎರಡು ದಿನದ ಮೊದಲು ಆತ ಏಕಾಂಗಿಯಾಗಿದ್ದನು ಎಂದು ತಿಳಿದು ಬಂದಿದೆ.

    ಸಮರ್ಥ್ ಎರಡು ದಿನದ ಮೊದಲು ಮನೆಯಲ್ಲೇ ಬ್ಲೂವೇಲ್ ಗೇಮ್‍ನ ಸಿಡಿಯನ್ನು ತಂದಿದ್ದಾನೆ. ಅಲ್ಲದೇ ಆತ ತನ್ನ ಎರಡು ಕೈಗಳನ್ನು ಕಟ್ಟಿಕೊಳ್ಳೋಕ್ಕೆ ಪ್ರಯತ್ನಿಸುತ್ತಿದ್ದನು. ಪೋಷಕರು ಈ ವಿಷಯದ ಬಗ್ಗೆ ಆತನನ್ನು ಕೇಳಿದ್ದಾಗ ಇದು ಶಾಲೆಯಲ್ಲಿ ಹೇಳಿಕೊಟ್ಟ ಚಟುವಟಿಕೆ ಎಂದು ಸುಳ್ಳು ಹೇಳುತ್ತಿದ್ದನಂತೆ. ಆತನ ಮಾತು ನಿಜವೆಂದು ನಂಬಿ ಪೋಷಕರು ನಿರ್ಲಕ್ಷಿಸಿದ್ದರು.

    ಸಮರ್ಥ್ ಎರಡು ದಿನದ ಹಿಂದೆ ತನ್ನ ಹಣದಲ್ಲಿ ವೇಲ್ ಖರೀದಿಸಿದ್ದನು. ಸದ್ಯ ಸಮರ್ಥ್ ಸೋಮವಾರ ಸಂಜೆ ಸುಮಾರು 7 ಗಂಟೆಗೆ ಆಟವಾಡುತ್ತಾ ಹಠ ಮಾಡಿ ತಾಯಿಗೆ ಪಾನಿಪುರಿ ತರಲು ಕಳುಹಿಸಿದ್ದಾನೆ. ಈ ಸಂದರ್ಭದಲ್ಲಿ ಬ್ಲೂವೇಲ್‍ನ ಸಾವಿನ ಟಾಸ್ಕ್ ಎದುರಾಗಿದ್ದು, ಸಮರ್ಥ್ ವೇಲ್ ನನ್ನು ಫ್ಯಾನಿಗೆ ಬಿಗಿದು ನೇಣಿಗೆ ಶರಣಾಗಿದ್ದಾನೆ ಎಂಬ ಮಾಹಿತಿಗಳು ಲಭ್ಯವಾಗಿವೆ.

    ಸದ್ಯ ಈ ಬಗ್ಗೆ ರಾಘವೇಂದ್ರ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    ಏನಿದು ಬ್ಲೂ ವೇಲ್ ಗೇಮ್?: ಇದು ರಷ್ಯಾ ಮೂಲದ ಭಯಾನಕ ಆನ್ ಲೈನ್ ಆಟವಾಗಿದ್ದು, ಇದನ್ನು ಮಾರಣಾಂತಿಕ ಬ್ಲೂ ವೇಲ್ ಗೇಮ್ ಅಥವಾ ಬ್ಲೂ ವೇಲ್ ಚಾಲೆಂಜ್ ಅಂತನೂ ಕರೆಯುತ್ತಾರೆ. ಈ ಆಟದಲ್ಲಿ ಸಂಗೀತಾ ಕೇಳುವುದು, ಬೆಳಗ್ಗೆ ಬೇಗ ಏಳುವುದು ಸೇರಿದಂತೆ 50 ಟಾಸ್ಕ್ ಗಳಿರುತ್ತವೆ. ಇದರಲ್ಲಿ ಕೊನೆಯ ಆಟ ಎತ್ತರದ ಕಟ್ಟಡದಿಂದ ಕೆಳಗೆ ಜಿಗಿಯುವುದು ಆಗಿರುತ್ತದೆ. ಈ ಚಾಲೆಂಜ್ ನಲ್ಲಿ ಪಾಲ್ಗೊಳ್ಳುವ ಮುನ್ನ ವ್ಯಕ್ತಿ ಸಾಕ್ಷಿಗೆ ಫೋಟೋಗಳನ್ನು ಕಳುಹಿಸಬೇಕು. ನಂತರ ಕಟ್ಟಡದಿಂದ ಹಾರಬೇಕು ಎಂದಾಗಿರುತ್ತದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಸಿಎಂ ಕಾರ್ಯಕ್ರಮದಲ್ಲಿ ಕ್ಯಾಂಡಿ ಕ್ರಶ್ ಆಡಿದ್ದಕ್ಕೆ 3 ಐಪಿಎಸ್ ಅಧಿಕಾರಿಗಳಿಗೆ ನೋಟಿಸ್

    ಸಿಎಂ ಕಾರ್ಯಕ್ರಮದಲ್ಲಿ ಕ್ಯಾಂಡಿ ಕ್ರಶ್ ಆಡಿದ್ದಕ್ಕೆ 3 ಐಪಿಎಸ್ ಅಧಿಕಾರಿಗಳಿಗೆ ನೋಟಿಸ್

    ಪಾಟ್ನಾ: ಬಿಹಾರದ ರಾಜಧಾನಿ ಪಾಟ್ನಾದಲ್ಲಿ ಮಾದಕದ್ರವ್ಯಗಳ ಕಳ್ಳಸಾಗಣೆ ಬಗ್ಗೆ ನಡೆಯುತ್ತಿದ್ದ ಕಾರ್ಯಕ್ರಮದ ವೇಳೆ ಇಬ್ಬರು ಐಪಿಎಸ್ ಅಧಿಕಾರಿಗಳು ಫೋನ್‍ನಲ್ಲಿ ಕ್ಯಾಂಡಿ ಕ್ರಶ್ ಗೇಮ್ ಆಡಿದ್ದು, ಮತ್ತೊಬ್ಬರು ವಾಟ್ಸಪ್ ನೋಡುತ್ತಿದ್ದ ಕಾರಣ ಅವರಿಗೀಗ ನೋಟಿಸ್ ನೀಡಲಾಗಿದೆ.

    ಜೂನ್ 26ರಂದು ಬಿಹಾರದಲ್ಲಿ ಮಾದಕದ್ರವ್ಯಗಳ ಕಳ್ಳಸಗಣೆ ಹಾಗೂ ಅಪರಾಧ ಕೃತ್ಯಗಳ ಬಗ್ಗೆ ಚರ್ಚೆ ನಡೆಸಲು ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಮುಖ್ಯಮಂತ್ರಿ ನಿತೀಶ್ ಕುಮಾರ್ ಕಾರ್ಯಕ್ರಮದ ಮುಖ್ಯ ಅತಿಥಿಯಾಗಿದ್ರು. ಬಿಹಾರದ ಪೊಲೀಸ್ ಮಹಾನಿರ್ದೇಶಕರು ಕೂಡ ಭಾಗಿಯಾಗಿದ್ರು. ಆದ್ರೆ ಈ ಕಾರ್ಯಕ್ರಮದಲ್ಲಿ ಇಬ್ಬರು ಪೊಲೀಸ್ ಅಧಿಕಾರಿಗಳು ಮೊಬೈಲ್‍ನಲ್ಲಿ ಗೇಮ್ ಆಡುತ್ತಿದ್ದು, ಮತ್ತೊಬ್ಬ ಅಧಿಕಾರಿ ವಾಟ್ಸಪ್ ನೋಡುತ್ತಿದ್ದುದು ಕಂಡುಬಂದಿತ್ತು. ಈ ದೃಶ್ಯಗಳನ್ನ ಮಾಧ್ಯಮಗಳು ಪ್ರಸಾರ ಮಾಡಿದ್ದು, ಸಾಕಷ್ಟು ಸುದ್ದಿಯಾಗಿತ್ತು.

    ಈ ಹಿನ್ನೆಲೆಯಲ್ಲಿ ಪಾಟ್ನಾ ಎಸ್‍ಎಸ್‍ಪಿ ಮನು ಮಹಾರಾಜ್, ಸಿಟಿ ಎಸ್‍ಪಿ ಚಂದನ್ ಕುಮಾರ್ ಕುಶ್ವಾಹಾ ಹಾಗೂ ಐಪಿಎಸ್ ಅಧಿಕಾರಿ ಪಂಕಜ್ ಕುಮಾರ್ ರಾಜ್ ಅವರಿಗೆ ನೋಟಿಸ್ ನೀಡಲಾಗಿದೆ. ಈ ಬಗ್ಗೆ ಕೂಡಲೇ ವಿವರಣೆ ನೀಡುವಂತೆ ಅಧಿಕಾರಿಗಳಿಗೆ ಕೇಳಲಾಗಿದೆ.

    ಘಟನೆಗೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿರುವ ಇಲ್ಲಿನ ಸಹಾಯಕ ಪೊಲೀಸ್ ಮಹಾನಿರ್ದೇಶಕರಾದ ಎಸ್‍ಕೆ ಸಿಂಗಲ್, ಹಿರಿಯ ಪೊಲೀಸ್ ಅಧಿಕಾರಿಗಳಿಂದ ಈ ರೀತಿಯ ವರ್ತನೆ ನಿರೀಕ್ಷಿಸುವುದಿಲ್ಲ. ನಾವು ಅವರನ್ನು ಕೌನ್ಸೆಲಿಂಗ್ ಮಾಡುತ್ತೇವೆ ಎಂದಿದ್ದಾರೆ.