Tag: game changer film

  • ‘ಗೇಮ್ ಚೇಂಜರ್’ಗಾಗಿ ತಲೆ ಎತ್ತಿದ ರಾಮ್ ಚರಣ್ 256 ಅಡಿ ಎತ್ತರದ ಕಟೌಟ್

    ‘ಗೇಮ್ ಚೇಂಜರ್’ಗಾಗಿ ತಲೆ ಎತ್ತಿದ ರಾಮ್ ಚರಣ್ 256 ಅಡಿ ಎತ್ತರದ ಕಟೌಟ್

    ಗ್ಲೋಬಲ್ ಸ್ಟಾರ್ ರಾಮ್ ಚರಣ್ (Ram Charan) ನಟನೆಯ ಬಹುನಿರೀಕ್ಷಿತ ಸಿನಿಮಾ ‘ಗೇಮ್ ಚೇಂಜರ್’ ಬಿಡುಗಡೆಗೆ ಸಜ್ಜಾಗಿದೆ. ಅಮೆರಿಕದ ನೆಲದಲ್ಲಿ ಅದ್ಧೂರಿ ಪ್ರೀ-ರಿಲೀಸ್ ಇವೆಂಟ್ ಮಾಡುವ ಮೂಲಕ ಭಾರತೀಯ ಚಿತ್ರರಂಗದ ಇತಿಹಾಸದಲ್ಲಿ ಇದುವರೆಗೆ ಯಾವ ಚಿತ್ರತಂಡ ಮಾಡದ ದಾಖಲೆ ಮಾಡಿದೆ. ಇದೀಗ ಚೆರ್ರಿ ಅಭಿಮಾನಿಗಳು ಕೂಡ ‘ಗೇಮ್ ಚೇಂಜರ್’ (Game Changer) ಸಿನಿಮಾ ಮೂಲಕ ಹೊಸ ರೆಕಾರ್ಡ್ ಕ್ರಿಯೇಟ್ ಮಾಡಿದ್ದಾರೆ.

    ಜ.10 ‘ಗೇಮ್ ಚೇಂಜರ್’ ಚಿತ್ರ ಬಿಡುಗಡೆಯಾಗುತ್ತಿರುವ ಹಿನ್ನೆಲೆ ಆಂಧ್ರಪ್ರದೇಶದ ವಿಜಯವಾಡದಲ್ಲಿರುವ ಬೃಂದಾವನ ಕಾಲೋನಿಯ ವಜ್ರ ಗ್ರೌಂಡ್ಸ್‌ನಲ್ಲಿ ರಾಮ್‌ಚರಣ್ ಅವರ 256 ಅಡಿ ಎತ್ತರದ ಕಟೌಟ್‌ ನಿಲ್ಲಿಸಿ ಅಭಿಮಾನಿಗಳು ಸಂಭ್ರಮಿಸಿದ್ದಾರೆ. ಇದು ಭಾರತದ ಅತೀ ದೊಡ್ಡ ಕಟೌಟ್ ಎನ್ನುವ ದಾಖಲೆಯನ್ನು ಬರೆದಿದೆ. ನಾಲ್ಕು ವರ್ಷಗಳ ಹಿಂದೆ ಬೆಂಗಳೂರಿನ ನಂದಿ ಲಿಂಕ್ಸ್ ಗ್ರೌಂಡ್‌ನಲ್ಲಿ ಅಭಿಮಾನಿಗಳು ರಾಕಿಂಗ್ ಸ್ಟಾರ್ ಯಶ್ ಅವರ 236 ಅಡಿ ಎತ್ತರದ ಕಟೌಟ್ ನಿಲ್ಲಿಸಿದ್ದರು. ಇದಕ್ಕೂ ಮುನ್ನ ತಮಿಳುನಾಡಿನಲ್ಲಿ ಸೂರ್ಯ ಅವರ ಅಭಿಮಾನಿಗಳು 215 ಅಡಿ ಎತ್ತರದ ಕಟೌಟ್ ನಿಲ್ಲಿಸಿ ದಾಖಲೆ ಬರೆದಿದ್ದರು. ಇನ್ನು ಕಳೆದ ವರ್ಷ ಪ್ರಭಾಸ್ ಅಭಿಮಾನಿಗಳು 230 ಅಡಿ ಕಟೌಟ್ ನಿಲ್ಲಿಸಿದ್ದು ಕೂಡ ದಾಖಲೆಯ ಪುಟಗಳಿಗೆ ಸೇರಿಕೊಂಡಿತ್ತು. ಇದೀಗ ರಾಮ್‌ ಚರಣ್ ಅಭಿಮಾನಿಗಳು ಈ ಎಲ್ಲ ದಾಖಲೆಗಳನ್ನು ಮುರಿದಿದ್ದು, ಚೆರ್ರಿಯ 256 ಅಡಿ ಎತ್ತರದ ಕಟೌಟ್‌ ನಿಲ್ಲಿಸಿ ಕೇಕೇ ಹಾಕೋದಿಕ್ಕೆ ರೆಡಿಯಾಗಿದ್ದಾರೆ.

    RRR ಬಳಿಕ ರಾಮ್‌ಚರಣ್ ನಟಿಸಿದ ಯಾವುದೇ ಸಿನಿಮಾ ರಿಲೀಸ್ ಆಗಿಲ್ಲ. ಹೀಗಾಗಿ ಮೆಗಾ ಫ್ಯಾನ್ಸ್ ‘ಗೇಮ್‌ ಚೇಂಜರ್’ ದರ್ಶನಕ್ಕೆ ಕಾಯುತ್ತಿದ್ದಾರೆ. ತಮಿಳಿನ ಖ್ಯಾತ ನಿರ್ದೇಶಕ ಶಂಕರ್ ಗೇಮ್ ಚೇಂಜರ್ ಗೆ ಆಕ್ಷನ್ ಕಟ್ ಹೇಳಿದ್ದಾರೆ. ಶ್ರೀ ವೆಂಕಟೇಶ್ವರ ಕ್ರಿಯೇಷನ್ಸ್ ಮತ್ತು ಜೀ ಸ್ಟುಡಿಯೋಸ್ ಬ್ಯಾನರ್‌ನಲ್ಲಿ ದಿಲ್ ರಾಜು ಮತ್ತು ಸಿರಿಶ್ ನಿರ್ಮಿಸುತ್ತಿರುವ ಈ ಚಿತ್ರವನ್ನು ನಿರ್ಮಿಸಿದ್ದಾರೆ. ಗೇಮ್ ಚೇಂಜರ್ ನಲ್ಲಿ ರಾಮ್ ಚರಣ್ ದ್ವಿಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಜೊತೆಗೆ ಕಿಯಾರಾ ಅಡ್ವಾಣಿ (Kiara Advani), ಅಂಜಲಿ, ಎಸ್ ಜೆ ಸೂರ್ಯ, ಶ್ರೀಕಾಂತ್, ಸುನಿಲ್, ಸಮುದ್ರಕನಿ ಮತ್ತು ಜಯರಾಮ್ ಮತ್ತಿತರರು ತಾರಾಬಳಗದಲ್ಲಿದ್ದಾರೆ.

    ಕಾರ್ತಿಕ್ ಸುಬ್ಬರಾಜ್ ಕಥೆ ಬರೆದಿದ್ದಾರೆ. ಎಸ್.ಯು.ವೆಂಕಟೇಶನ್ ಮತ್ತು ವಿವೇಕ್ ಬರಹಗಾರರಾಗಿ ಕೆಲಸ ಮಾಡಿದ್ದಾರೆ. ಹರ್ಷಿತ್ ಚಿತ್ರದ ಸಹ ನಿರ್ಮಾಪಕರಾಗಿ ಸಾಥ್ ಕೊಟ್ಟಿದ್ದಾರೆ. ಸಾಯಿ ಮಾಧವ್ ಬುರ್ರಾ ಸಂಭಾಷಣೆ ಬರೆದಿದ್ದಾರೆ. ಎಸ್ ಥಮನ್ ಸಂಗೀತ ಸಂಯೋಜಿಸಿದ್ದಾರೆ ಮತ್ತು ಎಸ್ ತಿರುನಾವುಕ್ಕರಸು ಛಾಯಾಗ್ರಹಣವನ್ನು ನಿಭಾಯಿಸಿದ್ದಾರೆ. ಅವಿನಾಶ್ ಕೊಲ್ಲಾ ಆಕ್ಷನ್ ಕೊರಿಯೋಗ್ರಾಫರ್ ಆಗಿ ಕಾರ್ಯನಿರ್ವಹಿಸಿದ್ದು, ಅನ್ಬೀರವ್ ಆಕ್ಷನ್ ದೃಶ್ಯಗಳನ್ನು ಸಂಯೋಜಿಸಿದ್ದು, ಪ್ರಭುದೇವ, ಗಣೇಶ್ ಆಚಾರ್ಯ, ಪ್ರೇಮ್ ರಕ್ಷಿತ್, ಬಾಸ್ಕೊ ಮಾರ್ಟಿನ್, ಜಾನಿ ಮತ್ತು ಸ್ಯಾಂಡಿ ನೃತ್ಯ ನಿರ್ದೇಶಕರಾಗಿ ಕೆಲಸ ಮಾಡಿದ್ದಾರೆ.

  • ಕೇವಲ ಒಂದು ಹಾಡಿಗೆ 90 ಕೋಟಿ ಖರ್ಚು ಮಾಡ್ತಾರಂತೆ ‘ಗೇಮ್‌ಚೇಂಜರ್’ ಚಿತ್ರತಂಡ

    ಕೇವಲ ಒಂದು ಹಾಡಿಗೆ 90 ಕೋಟಿ ಖರ್ಚು ಮಾಡ್ತಾರಂತೆ ‘ಗೇಮ್‌ಚೇಂಜರ್’ ಚಿತ್ರತಂಡ

    90 ಕೋಟಿಯಲ್ಲಿ ಸಿನಿಮಾ ಮಾಡೋದನ್ನ ಕೇಳಿದ್ದೀರಿ. ಆದರೆ 90 ಕೋಟಿಯನ್ನ ಕೇವಲ ಒಂದು ಹಾಡಿಗೆ ಖರ್ಚು ಮಾಡುವ ಸುದ್ದಿ ಕೇಳಿದ್ದೀರಾ? ತಮ್ಮದೇ ದಾಖಲೆಯನ್ನ ತಾವೇ ಮುರಿಯೋಕೆ ಸಜ್ಜಾಗಿದ್ದಾರೆ ರಾಮ್‌ಚರಣ್‌ತೇಜಾ. ಹಾಗಾದ್ರೆ ಆ ಸಿನಿಮಾ ಯಾವುದು? ಇಲ್ಲಿದೆ ಮಾಹಿತಿ. ಇದನ್ನೂ ಓದಿ:‘ಚಂದ್ರಮುಖಿ 2’ ಸಿನಿಮಾದ ಕಂಗನಾ ರಣಾವತ್ ಫಸ್ಟ್ ಲುಕ್ ರಿಲೀಸ್

    ‘ಆರ್‌ಆರ್‌ಆರ್’ (RRR) ಸಿನಿಮಾದ ‘ನಾಟು ನಾಟು’ (Naatu Naatu) ಹಾಡಿಗೆ ಕೊಟ್ಯಾಂತರ ರೂಪಾಯಿ ಖರ್ಚು ಮಾಡಲಾಗಿತ್ತು. ಉಕ್ರೇನ್‌ನಲ್ಲಿ ಭರ್ತಿ 15 ದಿನ ಚಿತ್ರೀಕರಿಸಿದ ಹಾಡು ಕೊನೆಗೆ ಆಸ್ಕರ್ ಪ್ರಶಸ್ತಿ ಮುಡಿಗೇರಿಸಿಕೊಳ್ತು. ಅಂದಹಾಗೆ ಈ ದಾಖಲೆ ಇದೀಗ ನೆನಪಾಗುತ್ತಿರೋದು ರಾಮ್‌ಚರಣ್ ಮುಂದಿನ ಚಿತ್ರಕ್ಕಾಗಿ. ಅದುವೇ ಶಂಕರ್ ನಿರ್ದೇಶನದ ಗೇಮ್ ಚೇಂಜರ್ ಸಲುವಾಗಿ.

    ರಾಮ್‌ಚರಣ್ (Ramcharan) ಜೊತೆ ಖ್ಯಾತ ನಿರ್ದೇಶಕ ಶಂಕರ್ ಗೇಮ್ ಚೇಂಚರ್ ಪ್ರಾಜೆಕ್ಟ್ ಮುಗಿಸಲಿದ್ದಾರೆ. ಕಿಯಾರಾ (Kiara Advani) ನಾಯಕಿ. ಅಂದಹಾಗೆ ಈ ಚಿತ್ರದ ಒಂದು ಹಾಡಿಗೆ ಭರ್ತಿ 90 ಕೋಟಿ ಎತ್ತಿಡಲಾಗಿದೆ ಎಂಬುದು ಬಡಾ ಖಬರ್. 90 ಕೋಟಿಯಲ್ಲಿ ಅದ್ದೂರಿ ಸಿನಿಮಾವೇ ಆಗಿಬಿಡುತ್ತೆ. ಅಂಥದ್ರಲ್ಲಿ ಒಂದ್ ಹಾಡಿಗೆ 90 ಕೋಟಿ ವ್ಯಯಿಸಲಾಗುತ್ತೆ ಅಂದ್ರೆ ಆ ಹಾಡು ಅದೆಷ್ಟು ಅದ್ಧೂರಿಯಾಗಿರಲಿದೆ ಅನ್ನೋ ಇಮ್ಯಾಜಿನೇಷನ್ನೇ ಅದ್ಭುತ. ಇದುವರೆಗೆ ಅತಿಹೆಚ್ಚು ಬಜೆಟ್‌ನಲ್ಲಿ ತಯಾರಾದ ಹಾಡು ಎಂಬ ಹೆಗ್ಗಳಿಕೆ ಪಡೆದಿರೋದು ನಾಟು ನಾಟು. ಇದೀಗ ತಮ್ಮದೇ ದಾಖಲೆಯನ್ನ ರಾಮ್‌ಚರಣ್ ಗೇಮ್‌ಚೇಂಜರ್ ಮೂಲಕ ಮುರಿಯಲಿದ್ದಾರೆ.

    ಎಸ್. ಶಂಕರ್ ನಿರ್ದೇಶನದಲ್ಲಿ ಮೂಡಿ ಬಂದಿರುವ ‘ಗೇಮ್ ಜೇಂಜರ್’ (Game Changer) ಚಿತ್ರದ ಬಗ್ಗೆ ಅಭಿಮಾನಿಗಳಿಗೆ ಭಾರಿ ನಿರೀಕ್ಷೆಯಿದೆ. ಈ ವರ್ಷದ ಅಂತ್ಯದಲ್ಲಿ ಸಿನಿಮಾ ಬೆಳ್ಳಿತೆರೆಯಲ್ಲಿ ಅಬ್ಬರಿಸಲಿದೆ. ಈ ಬಗ್ಗೆ ಸದ್ಯದಲ್ಲೇ ಹೆಚ್ಚಿನ ಅಪ್‌ಡೇಟ್ ಸಿಗಲಿದೆ.

    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]