Tag: Gambia

  • ಇರಾಕ್‌ನಲ್ಲಿ ಮಾರಾಟವಾದ ಭಾರತದ ಕೆಮ್ಮಿನ ಸಿರಪ್ ಅಸುರಕ್ಷಿತ – WHO ಎಚ್ಚರಿಕೆ

    ಇರಾಕ್‌ನಲ್ಲಿ ಮಾರಾಟವಾದ ಭಾರತದ ಕೆಮ್ಮಿನ ಸಿರಪ್ ಅಸುರಕ್ಷಿತ – WHO ಎಚ್ಚರಿಕೆ

    ಬಗ್ದಾದ್: ಇರಾಕ್‌ನಲ್ಲಿ (Iraq) ಮಾರಾಟವಾಗಿರುವ ಭಾರತದಲ್ಲಿ (India) ತಯಾರಿಸಲಾದ ಕಾಮನ್ ಕೋಲ್ಡ್ ಕೆಮ್ಮಿನ ಸಿರಪ್‌ನಲ್ಲಿ (Cough Syrup) ವಿಷಕಾರಿ ಅಂಶ ಪತ್ತೆಯಾಗಿದ್ದು, ಬಳಕೆಗೆ ಯೋಗ್ಯವಲ್ಲದ್ದಾಗಿರುವುದು ಕಂಡುಬಂದ ಬಳಿಕ ವಿಶ್ವ ಆರೋಗ್ಯ ಸಂಸ್ಥೆ (WHO) ಎಚ್ಚರಿಕೆ ನೀಡಿದೆ.

    ಕೋಲ್ಡ್ ಔಟ್ ಎಂಬ ಹೆಸರಿನ ಸಿರಪ್ ಅನ್ನು ಭಾರತದ ಫೋರ್ಟ್ಸ್ ಲ್ಯಾಬೋರೇಟರೀಸ್ ತಯಾರಿಸಿದೆ. ಗ್ಲೋಬಲ್ ಹೆಲ್ತ್ ಏಜೆನ್ಸಿಯು ಈ ಸಿರಪ್‌ನಲ್ಲಿ ವಿಷಕಾರಿ ಅಂಶವನ್ನು ಪತ್ತೆಹಚ್ಚಿದೆ. ಇದರಲ್ಲಿ ಡೈಥಿಲೀನ್ ಮತ್ತು ಎಥಿಲೀನ್ ಗ್ಲೈಕೋಲ್‌ಗಿಂತ ಹೆಚ್ಚಿನ ಪ್ರಮಾಣದಲ್ಲಿದೆ ಎಂಬುದನ್ನು ಕಂಡುಹಿಡಿದಿರುವುದಾಗಿ ವರದಿಯಾಗಿದೆ.

    ಕೆಮ್ಮಿನ ಸಿರಪ್ ತಯಾರಕರು ಹಾಗೂ ಮಾರಾಟಗಾರರು ಉತ್ಪನ್ನದ ಗುಣಮಟ್ಟ ಹಾಗೂ ಸುರಕ್ಷತೆಯ ಬಗ್ಗೆ ಏಜೆನ್ಸಿಗೆ ಯಾವುದೇ ಖಾತರಿಗಳನ್ನು ನೀಡಿಲ್ಲ. ಕಂಪನಿಗಳು ಈ ಆರೋಪಗಳಿಗೆ ಹಾಗೂ ಎಚ್ಚರಿಕೆಗಳಿಗೆ ಇನ್ನೂ ಪ್ರತಿಕ್ರಿಯೆ ನೀಡಿಲ್ಲ ಎಂದು ವಿಶ್ವ ಆರೋಗ್ಯ ಸಂಸ್ಥೆ ತಿಳಿಸಿದೆ. ಇದನ್ನೂ ಓದಿ: ಮಹಾರಾಷ್ಟ್ರದ ಮಂತ್ರಾಲಯಕ್ಕೆ ಬೆದರಿಕೆ ಕರೆ, ವ್ಯಕ್ತಿ ಅರೆಸ್ಟ್‌

    ಕಳೆದ ವರ್ಷ ಗ್ಯಾಂಬಿಯಾದಲ್ಲಿ 66 ಹಾಗೂ ಉಜ್ಬೇಕಿಸ್ತಾನದಲ್ಲಿ 18 ಮಕ್ಕಳ ಸಾವಿಗೆ ಭಾರತದಿಂದ ರಫ್ತಾಗಿದ್ದ ಕೆಮ್ಮಿನ ಸಿರಪ್‌ಗಳು ಕಾರಣವಾಗಿದೆ ಎಂದು ಆರೋಪಿಸಲಾಗಿತ್ತು. ಇದಾದ ಬಳಿಕ ಭಾರತದ 5 ಕಂಪನಿಗಳ ಸಿರಪ್‌ಗಳನ್ನು ಪರೀಕ್ಷೆಗೆ ಒಳಪಡಿಸಿ ಅದರಲ್ಲಿ ವಿಷಕಾರಿ ಅಂಶಗಳನ್ನು ಪತ್ತೆಹಚ್ಚಲಾಯಿತು. ಇದನ್ನೂ ಓದಿ: ಒಡಿಶಾ ರೈಲು ದುರಂತ- ಸಂತ್ರಸ್ತರಿಗಾಗಿ ಅಮೆರಿಕಾದಲ್ಲಿ 8 ಲಕ್ಷ ರೂ. ಸಂಗ್ರಹಿಸಿದ 16ರ ಹುಡುಗಿ

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಕೆಮ್ಮಿನ ಸಿರಪ್ ರಫ್ತಿಗೂ ಮುನ್ನ ಪರೀಕ್ಷೆ ಕಡ್ಡಾಯಗೊಳಿಸಿದ ಕೇಂದ್ರ

    ಕೆಮ್ಮಿನ ಸಿರಪ್ ರಫ್ತಿಗೂ ಮುನ್ನ ಪರೀಕ್ಷೆ ಕಡ್ಡಾಯಗೊಳಿಸಿದ ಕೇಂದ್ರ

    ನವದೆಹಲಿ: ಕಳೆದ ವರ್ಷ ಭಾರತದ (India) ಕೆಮ್ಮಿನ ಸಿರಪ್ (Cough Syrup) ಸೇವಿಸಿದ ಬಳಿಕ ಗ್ಯಾಂಬಿಯಾ (Gambia) ಹಾಗೂ ಉಜ್ಬೇಕಿಸ್ತಾನದಲ್ಲಿ (Uzbekistan) ಹಲವು ಮಕ್ಕಳ ಸಾವಾಗಿತ್ತು. ಈ ಘಟನೆಯ ಬಳಿಕ ಇದೀಗ ಭಾರತ ಸರ್ಕಾರ ಕೆಮ್ಮಿನ ಸಿರಪ್‌ಗಳನ್ನು ವಿದೇಶಕ್ಕೆ ರಫ್ತು ಮಾಡುವ ಮೊದಲು ಅದನ್ನು ಪರೀಕ್ಷೆಗೆ (Lab Test) ಒಳಪಡಿಸುವುದು ಕಡ್ಡಾಯಗೊಳಿಸಿದೆ.

    ಯಾವುದೇ ಕೆಮ್ಮಿನ ಸಿರಪ್ ಅನ್ನು ರಫ್ತು ಮಾಡುವುದಕ್ಕೂ ಮೊದಲು ಸರ್ಕಾರಿ ಪ್ರಯೋಗಾಲಯ ನೀಡಿದ ವಿಶ್ಲೇಷಣೆಯ ಪ್ರಮಾಣಪತ್ರವನ್ನು ಹೊಂದಿರುವುದು ಕಡ್ಡಾಯವಾಗಿದೆ. ಈ ನಿಯಮ ಜೂನ್ 1 ರಿಂದ ಜಾರಿಗೆ ಬರಲಿದೆ ಎಂದು ಮಂಗಳವಾರ ಆರೋಗ್ಯ ಸಚಿವಾಲಯ ತಿಳಿಸಿದೆ.

    ಭಾರತ ಇಡೀ ವಿಶ್ವದಲ್ಲೇ ಅತಿ ದೊಡ್ಡ ಔಷಧೀಯ ಉದ್ಯಮವನ್ನು ಹೊಂದಿದೆ. ಆದರೆ ಕಳೆದ ವರ್ಷ ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಹೆಚ್‌ಒ) ಭಾರತದ 3 ಕಂಪನಿಗಳು ತಯಾರಿಸಿದ ಕೆಮ್ಮಿನ ಸಿರಪ್‌ಗಳಲ್ಲಿ ವಿಷಕಾರಿ ಅಂಶವನ್ನು ಕಂಡು ಹಿಡಿದ ಬಳಿಕ ಅದರ ಖ್ಯಾತಿ ಅಲುಗಾಡುವಂತಾಯಿತು. ಇದನ್ನೂ ಓದಿ: ಭಾರೀ ಏರಿಕೆ ಕಂಡ Adani Enterprises ಷೇರು – ಮತ್ತಷ್ಟು ಹೂಡಿಕೆ ಮಾಡಿದ GQG

    ಕಳೆದ ವರ್ಷ ಗ್ಯಾಂಬಿಯಾದ 70 ಹಾಗೂ ಉಜ್ಬೇಕಿಸ್ತಾನದ 19 ಮಕ್ಕಳ ಸಾವಾಗಿತ್ತು. ಬಳಿಕ ಮಕ್ಕಳ ಸಾವಿಗೆ ಭಾರತದ ಕಂಪನಿಗಳು ತಯಾರಿಸಿದ್ದ ಕೆಮ್ಮಿನ ಸಿರಪ್‌ಗಳ ಸಂಬಂಧವಿದೆ ಎಂಬುದು ತಿಳಿದುಬಂದಿತ್ತು.

    ಸದ್ಯ ವಿದೇಶಗಳಿಗೆ ರಫ್ತು ಮಾಡುವ ಕೆಮ್ಮಿನ ಸಿರಪ್‌ಗಳ ಪರೀಕ್ಷೆಯನ್ನಷ್ಟೇ ಕೇಂದ್ರ ಕಡ್ಡಾಯಗೊಳಿಸಿದೆ. ಆದರೆ ದೇಶೀಯ ಮಾರುಕಟ್ಟೆಯಲ್ಲಿ ಈ ಸಿರಪ್‌ಗಳನ್ನು ಮಾರಾಟ ಮಾಡುವುದಕ್ಕೂ ಮುನ್ನ ಪರೀಕ್ಷೆಯ ಅಗತ್ಯವಿದೆಯೇ ಎಂಬುದಕ್ಕೆ ಆರೋಗ್ಯ ಸಚಿವಾಲಯ ಸ್ಪಷ್ಟನೆ ನೀಡಿಲ್ಲ. ಇದನ್ನೂ ಓದಿ: ಪಾಕಿಸ್ತಾನದಲ್ಲೂ ಜನ ಮೋದಿಯನ್ನು ಇಷ್ಟಪಡುತ್ತಾರೆ: ಅನೂಪ್ ಜಲೋಟಾ

  • ನಿಯಮ ಉಲ್ಲಂಘನೆ ಮಾಡುವ ಕೆಮ್ಮಿನ ಸಿರಪ್ ಕಂಪನಿಗಳ ಮೇಲೆ `ಮಹಾ’ಅಸ್ತ್ರ

    ನಿಯಮ ಉಲ್ಲಂಘನೆ ಮಾಡುವ ಕೆಮ್ಮಿನ ಸಿರಪ್ ಕಂಪನಿಗಳ ಮೇಲೆ `ಮಹಾ’ಅಸ್ತ್ರ

    ಮುಂಬೈ: ನಿಯಮ ಉಲ್ಲಂಘನೆ ಮಾಡಿರುವ ಆರು ಕೆಮ್ಮಿನ ಸಿರಪ್ (Cough Syrup) ತಯಾರಕ ಕಂಪನಿಗಳ ಪರವಾನಗಿ ಅಮಾನತುಗೊಳಿಸಲಾಗಿದೆ ಎಂದು ಮಹಾರಾಷ್ಟ್ರ (Maharashtra) ಸರ್ಕಾರ ವಿಧಾನಸಭೆಯಲ್ಲಿ ಘೋಷಿಸಿದೆ.

    ಬಿಜೆಪಿ ಶಾಸಕ ಆಶಿಕ್ ಶೇಲಾರ್ ಹಾಗೂ ಇತರರ ನೊಟೀಸ್‍ಗೆ ಉತ್ತರಿಸಿದ ಆಹಾರ ಮತ್ತು ಔಷಧ ಆಡಳಿತ (Food and Drugs Administration Minister) ಸಚಿವ ಸಂಜಯ್ ರಾಥೋಡ್ (Sanjay Rathod) ಅವರು ಈ ಮಾಹಿತಿ ಹಂಚಿಕೊಂಡಿದ್ದಾರೆ. ಉತ್ತರ ಪ್ರದೇಶದ ನೋಯ್ಡಾ ಮೂಲದ ಸಂಸ್ಥೆ ತಯಾರಿಸಿದ್ದ ಕೆಮ್ಮಿನ ಸಿರಪ್‍ನಿಂದ ಕಳೆದ ವರ್ಷ ಉಜ್ಬೇಕಿಸ್ತಾನದ (Uzbekistan) 18 ಮಕ್ಕಳು ಸಾವಿಗೀಡಾಗಿದ್ದರು. ಈ ಪ್ರಕರಣದಲ್ಲಿ ಮೂರು ಸಿಬ್ಬಂದಿಯನ್ನು ಬಂಧಿಸಲಾಗಿತ್ತು ಎಂದು ಅವರು ಹೇಳಿದ್ದಾರೆ. ಇದನ್ನೂ ಓದಿ: ಮಾಡಾಳ್ ಕುಟುಂಬದಿಂದ ಖತರ್ನಾಕ್ ಪ್ಲಾನ್- ಲೋಕಾಯುಕ್ತ ಬರುತ್ತೆ ಅಂತ ಸಿಸಿಟಿವಿ ಆಫ್!

    ಸರ್ಕಾರವು 1ಂ8 ಕೆಮ್ಮಿನ ಸಿರಪ್ ತಯಾರಿಕಾ ಕಂಪನಿಗಳಲ್ಲಿ 84 ಕಂಪನಿಗಳ ತನಿಖೆ ಆರಂಭಿಸಿದೆ. ನಿಯಮ ಉಲ್ಲಂಘಿಸಿರುವ 17 ಸಂಸ್ಥೆಗಳಿಗೆ ಶೋಕಾಸ್ ನೋಟೀಸ್ ನೀಡಲಾಗಿದೆ ಎಂದಿದ್ದಾರೆ.

    ಭಾರತದಿಂದ ರಫ್ತಾಗಿದ್ದ ಕೆಮ್ಮಿನ ಸಿರಪ್‍ನಿಂದಾಗಿ ಗ್ಯಾಂಬಿಯಾದ (Gambia) 66 ಮಕ್ಕಳು ಮೃತಪಟ್ಟಿದ್ದರು ಎಂದು ಅವರು ನೆನಪಿಸಿಕೊಂಡಿದ್ದಾರೆ. ಈ ಪ್ರಕರಣದಲ್ಲಿ ನಿಯಮ ಉಲ್ಲಂಘನೆ ಆರೋಪ ಎದುರಿಸುತ್ತಿರುವ ಕಂಪನಿ ಹರಿಯಾಣ ಮೂಲದ್ದಾಗಿದ್ದು ರಾಜ್ಯದಲ್ಲಿ ಯಾವುದೇ ಉತ್ಪಾದನಾ ಘಟಕ ಹೊಂದಿಲ್ಲ ಎಂದಿದ್ದಾರೆ.

    ನಿಯಮ ಉಲ್ಲಂಘಿಸುವವರ ವಿರುದ್ಧ ಕಠಿಣ ಕ್ರಮ ಕೈಗೊಂಡಿದ್ದೇವೆ. ಬೇರೆ ರಾಜ್ಯಗಳಿಗೆ ಔಷಧಗಳನ್ನು ರಫ್ತು ಮಾಡುವಾಗ ವಿಶ್ವ ಆರೋಗ್ಯ ಸಂಸ್ಥೆಯ ಜಿಎಂಪಿ ನಿಯಮವನ್ನು ಅನುಸರಿಸುತ್ತಿದ್ದೇವೆ. ರಾಜ್ಯದ 996 ಅಲೋಪತಿ ಔಷಧ ತಯಾರಿಕ ಘಟಕದಿಂದ 514 ಉತ್ಪನ್ನಗಳು ರಫ್ತಾಗುತ್ತಿವೆ ಎಂದು ಹೇಳಿದ್ದಾರೆ.

    20% ಕಂಪನಿಗಳು ಸಿರಪ್ ತಯಾರಿಕಾ ನಿಯಮ ಉಲ್ಲಂಘಿಸಿ ದಾಳಿಗಳನ್ನು ಎದುರಿಸುತ್ತಿವೆ. ಜನರ ಜೀವದ ಜೊತೆ ಚೆಲ್ಲಾಟ ಆಡುವವರನ್ನು ಗಂಭೀರವಾಗಿ ಪರಿಗಣಿಸುವ ಅಗತ್ಯವಿದೆ ಎಂದು ಎಂದು ಶಾಸಕ ಸಂಜಯ್ ಶಿರ್ಸತ್ (Sanjay Shirsat) ಹೇಳಿದ್ದಾರೆ. ಇದನ್ನೂ ಓದಿ: ಆಸ್ಟ್ರೇಲಿಯಾದ ಹಿಂದೂ ದೇವಾಲಯದಲ್ಲಿ ಮತ್ತೆ ಮೋದಿ ವಿರೋಧಿ ಬರಹ – 2 ತಿಂಗಳಲ್ಲಿ 4ನೇ ಘಟನೆ

  • ಗ್ಯಾಂಬಿಯಾ ಮಕ್ಕಳ ಸಾವು ಪ್ರಕರಣ – ಕೆಮ್ಮಿನ ಸಿರಪ್‌ಗಳ ತನಿಖೆಗೆ ಜೈಶಂಕರ್ ಭರವಸೆ

    ಗ್ಯಾಂಬಿಯಾ ಮಕ್ಕಳ ಸಾವು ಪ್ರಕರಣ – ಕೆಮ್ಮಿನ ಸಿರಪ್‌ಗಳ ತನಿಖೆಗೆ ಜೈಶಂಕರ್ ಭರವಸೆ

    ನವದೆಹಲಿ: ಭಾರತದ (India) ವಿದೇಶಾಂಗ ವ್ಯವಹಾರಗಳ ಸಚಿವ ಡಾ.ಎಸ್ ಜೈಶಂಕರ್ (Jaishankar) ಅವರು ಗ್ಯಾಂಬಿಯಾದ (Gambia) ವಿದೇಶಾಂಗ ವ್ಯವಹಾರಗಳ ಸಚಿವ ಡಾ. ಮಮಾಡೌ ತಂಗರಾ (Dr. Mamadou Tangara) ಅವರೊಂದಿಗೆ ಮಾತುಕತೆ ನಡೆಸಿದ್ದಾರೆ. ಈ ವೇಳೆ ಭಾರತದಲ್ಲಿ ತಯಾರಿಸಲಾದ 4 ಕೆಮ್ಮಿನ ಸಿರಪ್‌ಗಳಿಂದಾಗಿ (Cough Syrup) ಗ್ಯಾಂಬಿಯಾದ 66 ಮಕ್ಕಳು ಸಾವನ್ನಪ್ಪಿರುವ ಬಗ್ಗೆ ಜೈಶಂಕರ್ ಸಂತಾಪ ವ್ಯಕ್ತಪಡಿಸಿದ್ದಾರೆ.

    ಭಾರತದಲ್ಲಿ ತಯಾರಿಸಲಾದ ಕೆಮ್ಮು ಮತ್ತು ಶೀತದ ಸಿರಪ್‌ಗಳ ಬಗ್ಗೆ ವಿಶ್ವ ಆರೋಗ್ಯ ಸಂಸ್ಥೆಯ ಎಚ್ಚರಿಕೆಯನ್ನು ನೀಡಿ, ಇದನ್ನು ಸೇವಿಸಿದವರಲ್ಲಿ ಮೂತ್ರಪಿಂಡಗಳಲ್ಲಿ ಗಾಯಗಳು ಕಂಡುಬಂದಿದೆ. ಮಾತ್ರವಲ್ಲದೇ ಗ್ಯಾಂಬಿಯಾದ 66 ಮಕ್ಕಳ ಸಾವಿಗೆ ಕಾರಣವಾಗಿದೆ ಎಂದು ತಿಳಿಸಿತ್ತು. ಈ ಬಗ್ಗೆ ಸತ್ಯವನ್ನು ಕಂಡುಹಿಡಿಯಲು ಸಂಬಂಧಿತ ಭಾರತೀಯ ಅಧಿಕಾರಿಗಳಿಂದ ಸಂಪೂರ್ಣ ತನಿಖೆ ನಡೆಸಲಾಗುತ್ತಿದೆ ಎಂದು ಜೈಶಂಕರ್ ಅವರು ತಂಗರಾ ಅವರಿಗೆ ಭರವಸೆ ನೀಡಿದ್ದಾರೆ. ಇದನ್ನೂ ಓದಿ: ಸ್ವಂತ ಉದ್ಯಮದ ಕನಸು ನನಸು – B ಟೆಕ್ ವಿದ್ಯಾರ್ಥಿನಿ ಈಗ `ಚಾಯ್‌ವಾಲಿ’

    ಈ ಬಗ್ಗೆ ಟ್ವೀಟ್‌ನಲ್ಲಿ ತಿಳಿಸಿರುವ ಜೈಶಂಕರ್, ನಾವು ಗ್ಯಾಂಬಿಯಾದ ಎಫ್‌ಎಂ ಡಾ. ಮಮಡೌ ತಂಗರಾ ಅವರೊಂದಿಗೆ ಮಾತನಾಡಿದ್ದೇವೆ. ಈ ವೇಳೆ ಇತ್ತೀಚೆಗೆ ಚಿಕ್ಕ ಮಕ್ಕಳ ಸಾವಿನ ಬಗ್ಗೆ ನಮ್ಮ ಆಳವಾದ ಸಂತಾಪವನ್ನು ತಿಳಿಸಿದ್ದೇವೆ. ಸೂಕ್ತ ಅಧಿಕಾರಿಗಳಿಂದ ವಿಷಯವನ್ನು ಗಂಭೀರವಾಗಿ ತನಿಖೆ ನಡೆಸಲಾಗುತ್ತಿದೆ ಎಂದು ಒತ್ತಿ ಹೇಳಿದ್ದೇವೆ. ನಾವು ಸಂಪರ್ಕದಲ್ಲಿರಲು ಒಪ್ಪಿಕೊಂಡಿದ್ದೇವೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಓಲಾ, ಊಬರ್‌ಗೆ ಬಿಗ್‌ ರಿಲೀಫ್‌ – ಸಾರಿಗೆ ಇಲಾಖೆ ಆದೇಶಕ್ಕೆ ಕೋರ್ಟ್‌ ಮಧ್ಯಂತರ ತಡೆ

    Live Tv
    [brid partner=56869869 player=32851 video=960834 autoplay=true]

  • ಗ್ಯಾಂಬಿಯಾದ 66 ಮಕ್ಕಳ ಸಾವು – 4 ಕೆಮ್ಮಿನ ಸಿರಪ್ ವಿರುದ್ಧ ತನಿಖೆ ತೀವ್ರಗೊಳಿಸಿದ ಭಾರತ

    ಗ್ಯಾಂಬಿಯಾದ 66 ಮಕ್ಕಳ ಸಾವು – 4 ಕೆಮ್ಮಿನ ಸಿರಪ್ ವಿರುದ್ಧ ತನಿಖೆ ತೀವ್ರಗೊಳಿಸಿದ ಭಾರತ

    ನವದೆಹಲಿ: ಆಫ್ರಿಕಾ ಖಂಡದ ಗ್ಯಾಂಬಿಯಾದಲ್ಲಿ (Gambia) 66 ಮಕ್ಕಳ ಸಾವಿಗೆ ಭಾರತದ 4 ಕೆಮ್ಮಿನ ಸಿರಪ್ (Cough Syrup) ಉತ್ಪನ್ನಗಳು ಸಂಬಂಧಪಟ್ಟಿವೆ ಎಂದು ವಿಶ್ವ ಆರೋಗ್ಯ ಸಂಸ್ಥೆ(WHO) ಎಚ್ಚರಿಸಿದ ಬಳಿಕ ಭಾರತ ಸರ್ಕಾರ ಹರಿಯಾಣ ಮೂಲದ ಫಾರ್ಮಾಸ್ಯುಟಿಕಲ್ ಸಂಸ್ಥೆಯ ವಿರುದ್ಧ ತನಿಖೆಯನ್ನು ತೀವ್ರಗೊಳಿಸಿದೆ.

    ಮೂಲಗಳ ಪ್ರಕಾರ WHO ಸೆಪ್ಟೆಂಬರ್ 29ರಂದು ಕೆಮ್ಮಿನ ಸಿರಪ್‌ಗಳ ಬಗ್ಗೆ ಡ್ರಗ್ಸ್ ಕಂಟ್ರೋಲರ್ ಆಫ್ ಇಂಡಿಯಾಗೆ (DCGI) ಎಚ್ಚರಿಕೆ ನೀಡಿದೆ. ಸೆಂಟ್ರಲ್ ಡ್ರಗ್ಸ್ ಸ್ಟ್ಯಾಂಡರ್ಡ್ ಕಂಟ್ರೋಲ್ ಆರ್ಗನೈಸೇಶನ್ ತಕ್ಷಣವೇ ಈ ವಿಷಯವನ್ನು ಹರಿಯಾಣ ನಿಯಂತ್ರಣ ಪ್ರಾಧಿಕಾರದೊಂದಿಗೆ ಕೈಗೆತ್ತಿಕೊಂಡಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ತಿಳಿಸಿದೆ.

    ಈ ಕೆಮ್ಮಿನ ಸಿರಪ್‌ಗಳನ್ನು ಹರಿಯಾಣದ ಸೋನಿಪತ್‌ನಲ್ಲಿರುವ ಮೇಡನ್ ಫಾರ್ಮಾಸ್ಯುಟಿಕಲ್ ಲಿಮಿಟೆಡ್ ತಯಾರಿಸಿದೆ. ಸಂಸ್ಥೆ ಈ ಉತ್ಪನ್ನಗಳನ್ನು ಗ್ಯಾಂಬಿಯಾಗೆ ಮಾತ್ರವೇ ರಫ್ತು ಮಾಡಿದೆ ಎನ್ನಲಾಗುತ್ತಿದೆ. ಆದರೆ ಈ ಆರೋಪಗಳಿಗೆ ಕಂಪನಿ ಇಲ್ಲಿಯವರೆಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ದೆಹಲಿಯ ಪಿತಾಂಪುರದಲ್ಲಿರುವ ಸಂಸ್ಥೆಯ ಆಡಳಿತ ಕಚೇರಿ ಇಂದು ಬೆಳಗ್ಗೆ ಮುಚ್ಚಿರುವುದು ಕಂಡುಬಂದಿರುವುದಾಗಿ ವರದಿಯಾಗಿದೆ. ಇದನ್ನೂ ಓದಿ: ತಾಪಮಾನ ಹೆಚ್ಚಳದಿಂದ ಆಪಲ್ ವಾಚ್ ಸ್ಫೋಟ

    ಬುಧವಾರ WHO ಮುಖ್ಯಸ್ಥ ಟೆಡ್ರೊಸ್ ಅಧಾನೊಮ್ ಘೆಬ್ರೆಯೆಸಸ್ ಅವರು ಮಾಧ್ಯಮಗಳೊಂದಿಗೆ ಮಾತನಾಡಿ, ಭಾರತದ 4 ಶೀತ ಹಾಗೂ ಕೆಮ್ಮಿನ ಸಿರಪ್‌ಗಳು ಗ್ಯಾಂಬಿಯಾದ 66 ಮಕ್ಕಳ ಸಾವಿಗೆ ಕಾರಣವಾಗಿವೆ ಹಾಗೂ ಉತ್ಪನ್ನಗಳನ್ನು ಬಳಸಿದವರಲ್ಲಿ ಮೂತ್ರಪಿಂಡದ ಗಾಯಗಳು ಕಂಡುಬಂದಿರುವುದಾಗಿ ತಿಳಿಸಿದ್ದಾರೆ. ಆದರೆ ಈ ಸಾವುಗಳು ಯಾವಾಗ ಸಂಭವಿಸಿವೆ ಎಂಬ ಸ್ಪಷ್ಟ ವಿವರಗಳನ್ನು ನೀಡಿಲ್ಲ.

    who

    ಇದೀಗ 4 ಕೆಮ್ಮಿನ ಸಿರಪ್‌ಗಳ ಮಾದರಿಗಳನ್ನು ಕೇಂದ್ರ ಮತ್ತು ಪ್ರಾದೇಶಿಕ ಪ್ರಯೋಗಾಲಯಗಳಲ್ಲಿ ಪರೀಕ್ಷಿಸಲಾಗುತ್ತಿದೆ. ಇದರ ಫಲಿತಾಂಶ 3 ದಿನಗಳಲ್ಲಿ ಬರಲಿವೆ ಎಂದು ಮೂಲಗಳು ತಿಳಿಸಿವೆ.

    ಪ್ರೋಟೋಕಾಲ್ ಪ್ರಕಾರ, ಭಾರತದಿಂದ ರಫ್ತು ಮಾಡುವ ಯಾವುದೇ ಔಷಧವನ್ನು ಸ್ವೀಕರಿಸುವ ದೇಶಗಳು ಪರೀಕ್ಷೆಗಳನ್ನು ನಡೆಸಬೇಕು. ಆದರೆ ಗ್ಯಾಂಬಿಯಾದಲ್ಲಿ ಸರಿಯಾಗಿ ಪರೀಕ್ಷೆ ನಡೆಸಿರಲಿಲ್ಲವೇ ಅಥವಾ ಔಷಧದ ಹಾನಿಕಾರಕ ಅಂಶಗಳು ಪತ್ತೆಯಾಗದೇ ಹೋಗಿವೆಯೇ ಎಂಬ ಪ್ರಶ್ನೆಗೆ ಉತ್ತರ ಸಿಗಬೇಕಿದೆ. ಇದನ್ನೂ ಓದಿ: 22 ಸಿಕ್ಸ್‌, 17 ಬೌಂಡರಿ – ಟಿ20ಯಲ್ಲಿ ಬರೋಬ್ಬರಿ 205 ರನ್‌ ಬ್ಲ್ಯಾಸ್ಟ್‌

    Live Tv
    [brid partner=56869869 player=32851 video=960834 autoplay=true]

  • ಭಾರತದ ಕೆಮ್ಮಿನ ಸಿರಪ್‌ನಿಂದ ಗ್ಯಾಂಬಿಯಾದ 66 ಮಕ್ಕಳ ಸಾವು: WHO ಎಚ್ಚರಿಕೆ

    ಭಾರತದ ಕೆಮ್ಮಿನ ಸಿರಪ್‌ನಿಂದ ಗ್ಯಾಂಬಿಯಾದ 66 ಮಕ್ಕಳ ಸಾವು: WHO ಎಚ್ಚರಿಕೆ

    ನವದೆಹಲಿ: ಭಾರತದಲ್ಲಿ ಮೇಡನ್ ಫಾರ್ಮಾಸ್ಯುಟಿಕಲ್ಸ್ ತಯಾರಿಸಿದ 4 ಕೆಮ್ಮು ಹಾಗೂ ಶೀತದ ಸಿರಪ್‌ಗಳ (Cough Syrup) ಕುರಿತು ವಿಶ್ವ ಆರೋಗ್ಯ ಸಂಸ್ಥೆ (WHO) ಬುಧವಾರ ಎಚ್ಚರಿಕೆ ನೀಡಿದೆ. ಈ ಸಿರಪ್‌ಗಳು ಆಫ್ರಿಕಾ ಖಂಡದ ಗ್ಯಾಂಬಿಯಾದಲ್ಲಿ (Gambia) 66 ಮಕ್ಕಳ ಸಾವಿಗೆ ಸಂಬಂಧಪಟ್ಟಿವೆ ಎಂದು ತಿಳಿಸಿದೆ.

    ಈ ಸಿರಪ್‌ಗಳ ಮಾದರಿಗಳನ್ನು ಸಂಗ್ರಹಿಸಿ ಈಗಾಗಲೇ ಪ್ರಯೋಗಾಲಯಗಳಲ್ಲಿ ಪರೀಕ್ಷೆಯನ್ನು ನಡೆಸಲಾಗಿದೆ. ಅವುಗಳ ವಿಶ್ಲೇಷಣೆಯಲ್ಲಿ ಹಾನಿಕಾರಕ ಅಂಶಗಳು ಒಳಗೊಂಡಿರುವುದು ಕಂಡುಬಂದಿರುವುದಾಗಿ ತಿಳಿಸಿದೆ. ಇದನ್ನೂ ಓದಿ: ದಸರಾ ರಜೆ ಮುಗಿಸಿ ಬೆಂಗಳೂರಿನತ್ತ ಜನ – ಬಸ್ ತುಂಬಿ ಟಾಪ್ ಮೇಲೂ ಪ್ರಯಾಣ

    4 ಉತ್ಪನ್ನಗಳ ಮಾದರಿಗಳನ್ನು ಪ್ರಯೋಗಾಲಯದಲ್ಲಿ ಪರೀಕ್ಷೆ ನಡೆಸಿದಾಗ ಅವು ಸ್ವೀಕಾರಾರ್ಹವಲ್ಲದ ಪ್ರಮಾಣದಲ್ಲಿ ಡೈಥಿಲೀನ್ ಗ್ಲೈಕೋಲ್ ಹಾಗೂ ಎಥಿಲೀನ್ ಗ್ಲೈಕೋಲ್ ಅನ್ನು ಮಾಲಿನ್ಯಕಾರಕಗಳಾಗಿ ಬಳಸಲಾಗಿದೆ ಎಂಬುದು ಖಚಿತವಾಗಿದೆ ಎಂದು ಡಬ್ಲ್ಯುಹೆಚ್‌ಒ ಎಚ್ಚರಿಕೆಯಲ್ಲಿ ತಿಳಿಸಿದೆ. ಇದನ್ನೂ ಓದಿ: ಪುಟಿನ್ ಜೊತೆ ಯಾವುದೇ ಮಾತುಕತೆ ನಡೆಸಲ್ಲ – ಮೋದಿಗೆ ಕರೆ ಮಾಡಿದ ಝೆಲೆನ್ಸ್ಕಿ

    ಸದ್ಯ ಈ ಉತ್ಪನ್ನಗಳನ್ನು ಬಳಸಿರುವುದರ ಅಡ್ಡ ಪರಿಣಾಮ ಗ್ಯಾಂಬಿಯಾದಲ್ಲಿ ಮಾತ್ರವೇ ಇಲ್ಲಿಯವರೆಗೆ ಕಂಡುಬಂದಿದೆ. ಈ ಉತ್ಪನ್ನಗಳನ್ನು ಇತರ ದೇಶಗಳಿಗೂ ವಿತರಿಸಲಾಗಿದೆ ಎಂಬುದು ತಿಳಿದುಬಂದಿದೆ.

    Live Tv
    [brid partner=56869869 player=32851 video=960834 autoplay=true]