ತಿರುವನಂತಪುರಂ: ಫುಟ್‍ಬಾಲ್ ಪಂದ್ಯದ ವೇಳೆ ತಾತ್ಕಾಲಿಕವಾಗಿ ನಿರ್ಮಿಸಲಾದ ಗ್ಯಾಲರಿಯೊಂದು ಕುಸಿತಗೊಂಡ ಪರಿಣಾಮ 200ಕ್ಕೂ ಹೆಚ್ಚು ಮಂದಿ ಗಾಯಗೊಂಡಿರುವ ಘಟನೆ ಕೇರಳದ ಮಲ್ಲಾಪುರಂ ಜಿಲ್ಲೆಯಲ್ಲಿ ಶನಿವಾರ ರಾತ್ರಿ ನಡೆದಿದೆ.

ಪಂದ್ಯ ಆರಂಭಕ್ಕೂ ಮುನ್ನ ಪ್ರೇಕ್ಷಕರು ಗ್ಯಾಲರಿಯಲ್ಲಿ ಕೂತಿದ್ದರು. ಈ ವೇಳೆ ಏಕಾಏಕಿ ಕುಸಿತಗೊಂಡ ಗ್ಯಾಲರಿ ಅಡಿಯಲ್ಲಿ 200ಕ್ಕೂ ಹೆಚ್ಚು ಮಂದಿ ಸಿಲುಕಿಕೊಂಡು ಗಾಯಗೊಂಡಿದ್ದಾರೆ. ಈ ಪೈಕಿ ಐವರ ಸ್ಥಿತಿ ಗಂಭೀರವಾಗಿದ್ದು, ಗಾಯಾಳುಗಳನ್ನು ಮಂಜೆರಿ ವೈದ್ಯಕೀಯ ಕಾಲೇಜ್ ಆಸ್ಪತ್ರೆ ಸೇರಿದಂತೆ ವಂದೂರಿನ ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆಗೆ ದಾಖಲಿಸಲಾಗಿದೆ. ಇದನ್ನೂ ಓದಿ: ಟಿ20 ಮಾದರಿಯಲ್ಲಿ ಏಷ್ಯಾ ಕಪ್ – ಶ್ರೀಲಂಕಾದಲ್ಲಿ ಆಗಸ್ಟ್ 27ಕ್ಕೆ ಆರಂಭ
#WATCH Temporary gallery collapsed during a football match in Poongod at Malappuram yesterday; Police say around 200 people suffered injuries including five with serious injuries#Kerala pic.twitter.com/MPlTMPFqxV
— ANI (@ANI) March 20, 2022
ಗ್ಯಾಲರಿ ಕುಸಿತಗೊಂಡ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, ಗ್ಯಾಲರಿ ಕುಸಿತಗೊಂಡಂತೆ ಪ್ರೇಕ್ಷಕರು ಭಯದಿಂದ ಓಡಲಾರಂಭಿಸಿದ್ದಾರೆ. ಇದರಿಂದಾಗಿ ಹಲವು ಮಂದಿ ಗಾಯಗೊಂಡಿರುವ ಬಗ್ಗೆ ವರದಿಯಾಗಿದೆ. ಇದನ್ನೂ ಓದಿ: ಗ್ಯಾಂಗ್ ನೋಡಿ ಸ್ಥಳದಿಂದ ಕಾಲ್ಕಿತ್ತ ಪತಿ- ಮಕ್ಕಳ ಮುಂದೆಯೇ ದಲಿತ ಮಹಿಳೆ ಮೇಲೆ ಸಾಮೂಹಿಕ ರೇಪ್






ಈವರೆಗೆ ಕ್ರೀಡಾ ಚಟುವಟಿಕೆಗಳು ನಡೆದರು ಖಾಲಿ ಕ್ರೀಡಾಂಗಣದಲ್ಲಿ ಪಂದ್ಯಾಟಗಳು ನಡೆಯುತ್ತಿತ್ತು. ವಿಶೇಷವಾಗಿ ಚೆನ್ನೈನ ಚಿದಂಬರಂ ಕ್ರೀಡಾಂಗಣ ಕೊರೊನಾ ಮುಂಚೆಯೆ 2011ರ ವಿಶ್ವಕಪ್ ಬಳಿಕ ಸ್ಥಳೀಯಾಡಳಿತ ಮತ್ತು ತಮಿಳುನಾಡು ಕ್ರಿಕೆಟ್ ಸಂಸ್ಥೆಯ ತಕರಾರಿನಿಂದಾಗಿ ಐ, ಜೆ ಮತ್ತು ಕೆ ಗ್ಯಾಲರಿಗಳು ಪ್ರೇಕ್ಷಕರಿಂದ ದೂರ ಉಳಿದಿತ್ತು. ಇದೀಗ ಈ ಸಮಸ್ಯೆಯೂ ಬಗೆಹರಿದು ಪ್ರೇಕ್ಷಕರಿಗೆ ಮುಕ್ತವಾಗುವ ಸನಿಹದಲ್ಲಿದೆ.