Tag: Galathe

  • ಹುಬ್ಬಳ್ಳಿಯ ಪ್ರತಿಷ್ಠಿತ ಕಾಲೇಜಿನಲ್ಲಿ ಪುಂಡರ ಪುಂಡಾಟಿಕೆ!

    ಹುಬ್ಬಳ್ಳಿಯ ಪ್ರತಿಷ್ಠಿತ ಕಾಲೇಜಿನಲ್ಲಿ ಪುಂಡರ ಪುಂಡಾಟಿಕೆ!

    ಹುಬ್ಬಳ್ಳಿ: ಶುಕ್ರವಾರ ನಡೆದ ಫ್ಯಾಷನ್ ಶೋ ವಿಚಾರವಾಗಿ ಹುಬ್ಬಳ್ಳಿಯಲ್ಲಿ ಪ್ರತಿಷ್ಠಿತ ಕಾಲೇಜಿನಲ್ಲಿ ಪುಂಡರು ತಮ್ಮ ಪುಂಡಾಟಿಕೆಯನ್ನು ಮೆರೆದಿದ್ದಾರೆ.

    ಶುಕ್ರವಾರ ಕಾಲೇಜಿನಲ್ಲಿ ಫ್ಯಾಷನ್ ಶೋ ಕಾರ್ಯಕ್ರಮ ನಡೆದಿದೆ. ಈ ವಿಚಾರವಾಗಿ ರೋಹಿತ ಹಾಗೂ ಕಾರ್ತಿಕ ವಡ್ಡರ್ ಸಹಚರರಿಂದ ನಾಸೀರ ಹಾಗೂ ಸುಂದರ್‍ಪಾಲ್ ನಡುವೆ ಗಲಾಟೆ ಉಂಟಾಗಿದೆ. ಈ ವೇಳೆ ಸುಂದರ್ ಪಾಲ್ ಹಾಗೂ ನಾಸೀರ್‌ಗೆ ಥಳಿಸಿದ್ದಾರೆ. ಈ ಗಲಾಟೆ ದೃಶ್ಯಗಳು ಕಾಲೇಜಿನಲ್ಲಿ ಅಳವಡಿಸಿದ್ದ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.

    ಹುಬ್ಬಳ್ಳಿಯ ಆರ್‍ಟಿಐ ಕಾರ್ಯಕರ್ತ ಫಿಲೋಮಿನ್ ಪುತ್ರನಿಗೆ ಥಳಿಸಿದ್ದು, ಎರಡು ಕಡೆಯಿಂದ ವಿದ್ಯಾನಗರ ಪೊಲೀಸ್ ಠಾಣೆಯಲ್ಲಿ ತಪ್ಪೊಪ್ಪಿಗೆ ಪತ್ರವನ್ನು ಬರೆದುಕೊಟ್ಟಿದ್ದಾರೆ. ಈ ಘಟನೆಗೆ ಸಂಬಂಧಪಟ್ಟಂತೆ ವಿದ್ಯಾನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಮೆರವಣಿಗೆ ವೇಳೆ ಗಣಪತಿ ಕಿವಿ, ಕಾಲಿಗೆ ದುಷ್ಕರ್ಮಿಗಳಿಂದ ಕಲ್ಲೆಸೆತ!

    ಮೆರವಣಿಗೆ ವೇಳೆ ಗಣಪತಿ ಕಿವಿ, ಕಾಲಿಗೆ ದುಷ್ಕರ್ಮಿಗಳಿಂದ ಕಲ್ಲೆಸೆತ!

    – ಪರಿಸ್ಥಿತಿ ನಿಯಂತ್ರಿಸಲು 300ಕ್ಕೂ ಹೆಚ್ಚು ಪೊಲೀಸರ ನಿಯೋಜನೆ

    ಬೆಳಗಾವಿ: ಗಣಪತಿಯ ಮೇಲೆ ಕಿಡಿಗೇಡಿಗಳು ಕಲ್ಲು ತೂರಾಟ ನಡೆಸಿರುವ ಘಟನೆ ನಗರದ ಬೆಂಡಿ ಬಜಾರ್ ನ ತೆಂಗಿನಕರಗಲ್ಲಿಯಲ್ಲಿ ನಡೆದಿದೆ.

    ಕಳೆದ ರಾತ್ರಿ ಗಣಪತಿಯ ಮೆರವಣಿಗೆಯ ಸಂದರ್ಭದಲ್ಲಿ ಈ ಘಟನೆ ನಡೆದಿದೆ. ಗಣಪತಿಯ ಕಿವಿ ಭಾಗ ಮತ್ತು ಕಾಲಿಗೆ ದುಷ್ಕರ್ಮಿಗಳು ಕಲ್ಲು ಎಸೆದಿದ್ದಾರೆ. ಪರಿಣಾಮ ಎರಡು ರಿಕ್ಷಾ ಮತ್ತು ಒಂದು ಟಾಟಾ ಏಸ್ ವಾಹನಗಳು ಜಖಂ ಆಗಿದೆ. ಹೀಗಾಗಿ ಸ್ಥಳದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದ್ದು, ಪರಿಸ್ಥಿತಿಯನ್ನು ನಿಯಂತ್ರಿಸಲು 300 ಕ್ಕೂ ಹೆಚ್ಚು ಪೊಲೀಸರ ನಿಯೋಜನೆ ಮಾಡಲಾಗಿತ್ತು.

    ಸದ್ಯಕ್ಕೆ ಬೆಳಗಾವಿ ನಗರದಲ್ಲಿ ಎಲ್ಲೆಡೆ ಬಿಗುವಿನ ವಾತಾವರಣ ಉಂಟಾಗಿದ್ದು, ಸ್ಥಳಕ್ಕೆ ಬೆಳಗಾವಿ ಕಮಿಷನರ್ ಡಿಸಿ ರಾಜಪ್ಪ ಡಿಸಿಪಿ ಸೀಮಾ ಲಾಟ್ಕರ್ ಭೇಟಿ ನೀಡಿ ಪರಿಸ್ಥಿತಿಯನ್ನು ತಿಳಿಗೊಳಿಸಿದ್ದಾರೆ.

    ಈ ಘಟನೆ ಮಾರ್ಕೆಟ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv