Tag: Gajendragad

  • Gadaga| ಮಠದ 11 ಎಕ್ರೆಗೆ ಕನ್ನ – ಪ್ರಸಾದ ನಿಲಯ ಈಗ  ‘ವಕ್ಫ್’ ಆಸ್ತಿ

    Gadaga| ಮಠದ 11 ಎಕ್ರೆಗೆ ಕನ್ನ – ಪ್ರಸಾದ ನಿಲಯ ಈಗ ‘ವಕ್ಫ್’ ಆಸ್ತಿ

    ಗದಗ: ಜಿಲ್ಲೆಯ ಗಜೇಂದ್ರಗಡ (Gajendragad) ತಾಲೂಕಿನ ನರೇಗಲ್‌ನಲ್ಲಿರುವ ಹಾಲಕೇರಿ ಅನ್ನದಾನೇಶ್ವರ ಮಠ (Annadaneshwara Math) ಪ್ರಸಾದ ನಿಲಯ ವಕ್ಫ್ ಆಸ್ತಿ ಎಂದು ದಾಖಲಾಗಿರುವುದು ಬೆಳಕಿಗೆ ಬಂದಿದೆ. ಪ್ರಸಾದ ನಿಲಯದ 11.19 ಎಕರೆ 2019ರಲ್ಲಿ ವಕ್ಫ್ ಆಸ್ತಿ ಎಂದು ದಾಖಲಾಗಿದೆ.

    ಸ್ವಾತಂತ್ರ್ಯ ಪೂರ್ವದಲ್ಲಿ ಪ್ರಾರಂಭವಾದ ಶ್ರೀ ಅಮ್ಮದಾನೇಶ್ವರ ವಿದ್ಯಾವರ್ಧಕ ಪ್ರಸಾದ ನಿಲಯ ಸಮಿತಿಯ ಉಚಿತ ಪ್ರಸಾದ ನಿಲಯಕ್ಕೆ ಸೇರಿದ 15.06 ಎಕರೆಯಲ್ಲಿ 11.19 ಎಕರೆ ವಕ್ಫ್ ಆಸ್ತಿ ಎಂದು ನಮೂದು ಆಗಿದೆ. (ಕೆ.ವಿ.ಬಿ.ಎಂ) ಕೋಡಿಕೊಪ್ಪ ವೀರಪ್ಪಜ್ಜನವರ ಹಾಗೂ ಬಾಗಲಕೋಟೆ ವೈರಾಗ್ಯದ ಮಲ್ಲಣಾರ್ಯರ ಉಚಿತ ಪ್ರಸಾದ ನಿಲಯದ ಆಸ್ತಿ ಸರ್ವೆ ನಂಬರ್ 410/2ಬಿ ಈಗ ರಹಮಾನ ಶಾವಲಿ ದರ್ಗಾ ವಕ್ಫ್ ಆಸ್ತಿ ಎಂದು ನೋಂದಣಿಯಾಗಿದೆ. ಇದನ್ನೂ ಓದಿ: ಉಡುಪಿಯಲ್ಲಿ ಸುಲ್ತಾನಪುರ ಎಂದು ಒಂದು ಹಳ್ಳಿಯನ್ನೆ ನಿರ್ಮಾಣ ಮಾಡಿದ್ದಾರೆ: ಶೋಭಾ ಕರಂದ್ಲಾಜೆ

    ಲಿಂಗೈಕ್ಯ ಡಾ. ಅಭಿನವ ಅನ್ನದಾನ ಸ್ವಾಮೀಜಿಗಳು ಶ್ರೀಮಠದ ಪೀಠಾಧಿಪತಿಗಳಾಗಿದ್ದಾಗ ಪಹಣಿಯ ಕಾಲಂ ನಂ. 11ರಲ್ಲಿ 2019-2020 ರಲ್ಲಿ ರೆಹಮಾನ ಶಾವಲಿ ದರ್ಗಾ ವಕ್ಫ್ ಆಸ್ತಿ (Waqf Property) ಎಂದು ಸೇರ್ಪಡೆಯಾಗಿದೆ. ಉಚಿತ ಪ್ರಸಾದ ನಿಲಯಕ್ಕೆ ಸ್ಥಳೀಯ ರೈತರು, ದಾನಿಗಳ ಸಹಕಾರದಿಂದ ಸಾಕಷ್ಟು ಭೂಮಿಯನ್ನು ಶ್ರೀಮಠಕ್ಕೆ ನೀಡಲಾಗಿತ್ತು. ಆದರೆ, 2019-20 ರಲ್ಲಿ ಉಚಿತ ಪ್ರಸಾದ ನಿಲಯದ 15.06 ಎಕರೆ ಆಸ್ತಿಯಲ್ಲಿ ರೆಹಮಾನ ಶಾವಲಿ ದರ್ಗಾ ವಕ್ಫ್ ಆಸ್ತಿ ಎಂದು ನಮೂದಾಗಿದ್ದರಿಂದ ಇದು ಭಕ್ತರು ಆಕ್ರೋಶಕ್ಕೆ ಕಾರಣವಾಗಿದೆ. ಈ ಬಗ್ಗೆ ಹಿಂದಿನ ಪೀಠಾಧಿಪತಿಗಳಾಗಿದ್ದ ಡಾ. ಅಭಿನವ ಅನ್ನದಾನ ಸ್ವಾಮೀಜಿಗಳು ಕಾನೂನಾತ್ಮಕ ಹೋರಾಟಕ್ಕೆ ಮುಂದಾಗಿದ್ದರು. ಆದರೆ ಅವರು ಲಿಂಗೈಕ್ಯರಾದ ಹಿನ್ನೆಲೆಯಲ್ಲಿ ಅದು ನೆನೆಗುದಿಗೆ ಬಿದ್ದಿದೆ. ಇದನ್ನೂ ಓದಿ: ವಕ್ಫ್‌ ಮಂಡಳಿಯ ಎಲ್ಲಾ ಬಗೆಯ ಜಮೀನು ನೋಂದಣಿ ಸ್ಥಗಿತಗೊಳಿಸಲು ಸೂಚಿಸಿ: ಜೆಪಿಸಿಗೆ ಅಶೋಕ್‌ ಮನವಿ

  • ಕಾಣೆಯಾಗಿದ್ದವಳು 3 ದಿನ ಬಾವಿಯಲ್ಲಿ – ಗದಗ ಮಹಿಳೆಯ ರೋಚಕ ಕಥೆ ಓದಿ

    ಕಾಣೆಯಾಗಿದ್ದವಳು 3 ದಿನ ಬಾವಿಯಲ್ಲಿ – ಗದಗ ಮಹಿಳೆಯ ರೋಚಕ ಕಥೆ ಓದಿ

    ಗದಗ: ಕಾಣೆಯಾಗಿದ್ದ ಮಹಿಳೆ ಮೂರು ದಿನಗಳ ಕಾಲ 60 ಅಡಿ ಆಳದ ಬಾವಿಯಲ್ಲಿದ್ದು, ಬದುಕಿ ಬಂದಿರುವ ರೋಚಕ ಘಟನೆ ಜಿಲ್ಲೆಯ ಗಜೇಂದ್ರಗಡ (Gajendragad) ತಾಲೂಕಿನ ತೋಟಗಂಟಿ ಗ್ರಾಮದಲ್ಲಿ ನಡೆದಿದೆ.

    ಮಹಿಳೆಯನ್ನು ತೋಡಗಂಟಿ ಗ್ರಾಮದ ನಿವಾಸಿ ಪಾರ್ವತಿ ವೀರಯ್ಯ ಕಲ್ಮಠ ಎಂದು ಗುರುತಿಸಲಾಗಿದೆ. ಗ್ರಾಮದಿಂದ ಸುಮಾರು ಒಂದೂವರೆ ಕಿ.ಮೀ. ದೂರದ ಜಮೀನಿನಲ್ಲಿರುವ ಬಾವಿಯಲ್ಲಿ ಮಹಿಳೆ ಬಿದ್ದಿದ್ದಾಳೆ.ಇದನ್ನೂ ಓದಿ: ಹಿರಿಯ ರಾಜಕಾರಣಿ, ಮಾಜಿ ಸಚಿವ ಕೆ.ಹೆಚ್.ಶ್ರೀನಿವಾಸ್ ನಿಧನ

    ಬೆಳಿಗ್ಗೆ 5 ಗಂಟೆಗೆ ಎದ್ದು ಮನೆಯಿಂದ ಹೊರಗೆ ಬಂದಿದ್ದಾಳೆ. ಆಗ ಅಪರಿಚಿತ ಮಹಿಳೆಯೊಬ್ಬಳು ಭೇಟಿಯಾಗಿ ನೀನು ನನಗೆ ಬೇಕು. ನಿನ್ನ ಮಾಂಗಲ್ಯ ಸರ, ಕೈಬಳೆ, ಕಾಲುಂಗುರ ನನಗೆ ಬೇಕು ಕೊಡು ಎಂದು ಒತ್ತಾಯಿಸಿದ್ದಾಳೆ. ಆಗ ಪಾರ್ವತಿ ಕೊಡಲು ನಿರಾಕರಿಸಿದ್ದಾಳೆ. ಬಲವಂತವಾಗಿ ಕಣ್ಣುಮುಚ್ಚಿ, ಕುತ್ತಿಗೆಗೆ ಕೈಹಿಡಿದೆಳೆದು ಅದೇ ಜಮೀನಲ್ಲಿರುವ ಬಾವಿಗೆ ದೂಡಿದ್ದಾಳೆ.

    ಅಲ್ಲಿಂದ ಮುಂದೆ ಏನಾಯ್ತು ಎನ್ನುವುದು ಗೊತ್ತಾಗಲಿಲ್ಲ. ಬಾವಿಗೆ ಬಿದ್ದ 2ನೇ ದಿನಕ್ಕೆ ಮಳೆ ಬಂದಿದ್ದರಿಂದ ಪ್ರಜ್ಞೆ ಬಂದಿದೆ. ಎಚ್ಚರಗೊಂಡ ನಂತರ ನರಳಾಟ, ಕೂಗಾಟ ಮಾಡಿದರೂ ಯಾರಿಗೂ ಕೇಳಲಿಲ್ಲ. 3ನೇ ದಿನ ಜಮೀನಿನ ಕೆಲಸಕ್ಕೆ ಬಂದವರು ಕಿರುಚಾಟದ ಧ್ವನಿ ಕೇಳಿಸಿಕೊಂಡು ಬಾವಿ ಬಳಿ ಬಂದಿದ್ದಾರೆ.

    ಆಕೆಯ ಮಾಂಗಲ್ಯ ಸರ, ಕೈಬಳೆ, ಎಡಗಾಲಿನ ಒಂದು ಕಾಲುಂಗುರ ಇಲ್ಲದಿರುವುದು ಆಕೆಯ ಗಮನಕ್ಕೆ ಬಂದಾಗ ಅದು ಎಲ್ಲಿದೆ ಎನ್ನುವುದು ಗೊತ್ತಿಲ್ಲ ಎಂದು ಸಂತ್ರಸ್ತ ಮಹಿಳೆ ನಡೆದ ವಿಚಾರವನ್ನು ತಿಳಿಸಿದ್ದಾಳೆ. ನಂತರ ಸ್ಥಳೀಯರು ಹಾಗೂ ಪೊಲೀಸರ ಸಹಾಯದಿಂದ ಬಾವಿಗೆ ಬಿದ್ದಿದ್ದ ಮಹಿಳೆಯನ್ನು ರಕ್ಷಿಸಿದ್ದಾರೆ. ಮೂರು ದಿನ ಉಪವಾಸವಿದ್ದ ಮಹಿಳೆಗೆ ಉಪಹಾರ ನೀಡಿ ರಕ್ಷಣೆ ಮಾಡಿದ್ದಾರೆ. ರಕ್ಷಣೆ ಮಾಡಿದ ಬಳಿಕ ಸ್ಥಳೀಯ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ಕೊಡಿಸಿ, ಹೆಚ್ಚಿನ ಚಿಕಿತ್ಸೆಗಾಗಿ ಗದಗ ಜಿಮ್ಸ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.ಇದನ್ನೂ ಓದಿ: ಸೆಪ್ಟೆಂಬರ್ 3 ಬಳಿಕ ವಿಸ್ತಾರ ಫ್ಲೈಟ್ ಬುಕ್ಕಿಂಗ್ ಇಲ್ಲ

    ಮಹಿಳೆ ಕಾಣೆಯಾಗಿರುವ ಬಗ್ಗೆ ಗದಗ (Gadag) ಜಿಲ್ಲೆಯ ನರೇಗಲ್ (Naregal) ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿತ್ತು. ಸುಮಾರು 60 ಅಡಿ ಆಳದ ಬಾವಿ ಇದಾಗಿದ್ದು, ನೀರಿಲ್ಲದ್ದಕ್ಕೆ ಮಹಿಳೆ ಬದುಕಿದ್ದಾಳೆ.

  • ಬಸ್, ಟಾಟಾ ಸುಮೋ ನಡುವೆ ಮುಖಾಮುಖಿ ಡಿಕ್ಕಿ – ಐವರು ಸ್ಥಳದಲ್ಲೇ ಸಾವು

    ಬಸ್, ಟಾಟಾ ಸುಮೋ ನಡುವೆ ಮುಖಾಮುಖಿ ಡಿಕ್ಕಿ – ಐವರು ಸ್ಥಳದಲ್ಲೇ ಸಾವು

    ಗದಗ: ಬಸ್ (Bus) ಹಾಗೂ ಟಾಟಾ ಸುಮೋ ನಡುವೆ ಮುಖಾಮುಖಿ ಡಿಕ್ಕಿಯಾಗಿ (Accident) ಐವರು ಸ್ಥಳದಲ್ಲೇ ಸಾವಿಗೀಡಾದ ಘಟನೆ ನೆರೇಗಲ್ ಪಟ್ಟಣದ ಹೊರ ವಲಯದಲ್ಲಿ ನಡೆದಿದೆ. ಘಟನೆಯಲ್ಲಿ ನಾಲ್ವರು ಮಕ್ಕಳು ಗಾಯಗೊಂಡಿದ್ದಾರೆ.

    ಟಾಟಾ ಸುಮೋದಲ್ಲಿ ಗಜೇಂದ್ರಗಡ (Gajendragad) ಕಡೆಯಿಂದ ಶಿರಹಟ್ಟಿ ಫಕಿರೇಶ್ವರ ಮಠಕ್ಕೆ ತೆರಳುತ್ತಿದ್ದರು. ಈ ವೇಳೆ ಗದಗದಿಂದ (Gadag) ಗಜೇಂದ್ರಗಡಕ್ಕೆ ಹೊರಟಿದ್ದ ಬಸ್ ನಡುವೆ ಅಪಘಾತ ಸಂಭವಿಸಿದೆ. ಅಪಘಾತದ ತೀವ್ರತೆಗೆ ಟಾಟಾ ಸುಮೋದಲ್ಲಿದ್ದ ಐವರು ಸಾವಿಗೀಡಾಗಿದ್ದಾರೆ. ಮೃತರನ್ನು ಕಲಬುರಗಿ ಜಿಲ್ಲೆಯ ಆಳಂದ ತಾಲೂಕಿನ ಮಾದನಹಿಪ್ಪರಗಿ ನಿವಾಸಿಗಳು ಎಂದು ತಿಳಿದು ಬಂದಿದೆ. ಗಾಯಗೊಂಡ ಮಕ್ಕಳನ್ನು ಮಹೇಶ್, ದಿಂಗಾಲೇಶ್ವರ, ಪ್ರಭುದೇವ್ ಹಾಗೂ ಅನುಶ್ರೀ ಎಂದು ಗುರುತಿಸಲಾಗಿದೆ. ಮೃತಪಟ್ಟವರ ಹೆಸರು ತಿಳಿದು ಬಂದಿಲ್ಲ. ಇದನ್ನೂ ಓದಿ: ಮಹಿಳೆಗೆ ಚಪಲಿ ಹಾರ ಹಾಕಿ ಮೆರವಣಿಗೆ ಪ್ರಕರಣ- 13 ಜನರ ಬಂಧನ

    ಗಾಯಗೊಂಡಿರುವ ಮಕ್ಕಳನ್ನು ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿದೆ. ಆಸ್ಪತ್ರೆಗೆ ಗದಗದ ಬಾಲೆಹೊಸೂರು ಮಠದ ದಿಂಗಾಲೇಶ್ವರ ಸ್ವಾಮಿಜಿ ಭೇಟಿ ನೀಡಿ ಮಕ್ಕಳ ಆರೋಗ್ಯ ವಿಚಾರಿಸಿದ್ದಾರೆ.

    ಟಾಟಾ ಸುಮೋ ಚಾಲಕನ ಅತಿ ವೇಗದಿಂದ ಈ ಅಪಘಾತ ಸಂಭವಿಸಿದೆ ಎಂದು ಶಂಕಿಸಲಾಗಿದೆ. ಅಪಘಾತದ ವೇಳೆ ಬಸ್ ಚಾಲಕ ಆದಷ್ಟು ಅಪಘಾತವನ್ನು ತಪ್ಪಿಸಲು ಯತ್ನಿಸಿದ್ದಾನೆ. ಆದರೆ ಟಾಟಾ ಸುಮೋ ಚಾಲಕನಿಗೆ ವಾಹನ ನಿಯಂತ್ರಿಸಲಾಗಿಲ್ಲ ಎಂದು ತಿಳಿದು ಬಂದಿದೆ. ಬಸ್‍ನಲ್ಲಿದ್ದ ಕೆಲವರಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಸ್ಥಳಕ್ಕೆ ನೆರೇಗಲ್ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಇದನ್ನೂ ಓದಿ: ಚಾಲಕನ ನಿಯಂತ್ರಣ ತಪ್ಪಿ ಮನೆಗೆ ನುಗ್ಗಿದ ಬಸ್

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಲಾಕ್‍ಡೌನ್- ಬೆಟ್ಟದ ಮೇಲೆ ಕೋಟೆ ಭಾಗದಲ್ಲಿ ಜೂಜಾಟ

    ಲಾಕ್‍ಡೌನ್- ಬೆಟ್ಟದ ಮೇಲೆ ಕೋಟೆ ಭಾಗದಲ್ಲಿ ಜೂಜಾಟ

    ಗದಗ: ಕೊರೊನಾ ವೈರಸ್ ನಿಯಂತ್ರಿಸಲು ಇಡೀ ದೇಶವನ್ನೇ ಲಾಕ್‍ಡೌನ್ ಮಾಡಲಾಗಿದ್ದು, ಮನೆಯಲ್ಲೇ ಇರುವಂತೆ ಹೇಳಿದರೂ ಕೆಲ ಯುವಕರು ಪುಂಡಾಟ ಮೆರೆಯುತ್ತಿದ್ದಾರೆ. ಬೆಟ್ಟದಂತಹ ಪ್ರದೇಶದಲ್ಲಿ ಗುಂಪು ಸೇರಿ ಜೂಜಾಟ ಆಡುತ್ತಿದ್ದಾರೆ.

    ಜಿಲ್ಲೆಯ ಗಜೇಂದ್ರಗಡ ಪಟ್ಟಣದಲ್ಲಿ ಯುವಕರು ಜೂಜಾಟ ಆಡಲು ಬೆಟ್ಟದ ಬಳಿ ತೆರಳುತ್ತಿದ್ದು, ಬೆಟ್ಟದ ಮೇಲಿರುವ ಐತಿಹಾಸಿಕ ಕೋಟೆ ಭಾಗದಲ್ಲಿ ಯುವಕರ ದಂಡು ಜೂಜಾಟ ಆಡುತ್ತಿದೆ. ಶಾಲಾ-ಕಾಲೇಜು ವಿದ್ಯಾರ್ಥಿಗಳು ಸಹ ಈ ಜೂಜಾಟದಲ್ಲಿ ತೊಡಗಿಕೊಂಡಿದ್ದಾರೆ. ಗಜೇಂಡ್ರಗಡ ನಗರದ ಸುತ್ತಮುತ್ತ ಅನೇಕ ಕಡೆಗಳಲ್ಲಿ ಅವ್ಯಾಹತವಾಗಿ ಈ ದಂಧೆ ನಡೆಯುತ್ತಿದ್ದರೂ ಪೊಲೀಸರು ಕಣ್ಮುಚ್ಚಿ ಕುಳಿತಿದ್ದಾರೆ.

    ಈ ಕುರಿತು ಸ್ಥಳಿಯರು ಆಕ್ರೋಶ ವ್ಯಕ್ತಪಡಿಸಿದ್ದು, ಬೆಟ್ಟದ ಮೇಲಿನ ಐತಿಹಾಸಿಕ ಕೋಟೆ ಭಾಗದ ಮಂಟಪ, ದ್ವಾರಬಾಗಿಲು, ಸಿಂಹಹೊಂಡ, ಮದ್ದಿನ ಕೋಣೆ, ಸರಸ್ವತಿ ಕೊಳ್ಳ ಸೇರಿದಂತೆ ಅನೇಕ ಕಡೆಗಳಲ್ಲಿ ಜೂಜಾಟವಾಡುತ್ತಿದ್ದಾರೆ. ಯಾರಾದರೂ ಬಂದರೆ ಎಸ್ಕೇಪ್ ಆಗಲು ಸರಳ ಮಾರ್ಗಕ್ಕೊಸ್ಕರ ಬೆಟ್ಟದ ಮೇಲೆ ಜೂಜಾಟವಾಡಲು ಹೊಗುತ್ತಿದ್ದಾರೆ ಎನ್ನಲಾಗುತ್ತಿದೆ. ಇದರಿಂದ ಅನೇಕ ಕುಟುಂಬಗಳು ಹಾಳಾಗುತ್ತಿದ್ದು, ಯುವಕರು ದುಷ್ಟಚಟಗಳಿಗೆ ಬಲಿಯಾಗುತ್ತಿದ್ದಾರೆ.

  • ಜಾತ್ರೆಯಲ್ಲಿ ಸೇರಿದ್ದವರಿಗೆ ಪೊಲೀಸರಿಂದ ಲಾಠಿ ಪ್ರಸಾದ!

    ಜಾತ್ರೆಯಲ್ಲಿ ಸೇರಿದ್ದವರಿಗೆ ಪೊಲೀಸರಿಂದ ಲಾಠಿ ಪ್ರಸಾದ!

    ಗದಗ: ಲಾಕ್‍ಡೌನ್ ನಡುವೆಯೂ ಜಾತ್ರೆ ಮಾಡಲು ಬಂದ ಭಕ್ತರಿಗೆ ಪೊಲೀಸರು ಲಾಠಿ ಪ್ರಸಾದ ನೀಡಿರುವ ಘಟನೆ ಗಜೇಂದ್ರಗಡ ತಾಲೂಕಿನ ಮುಶಿಗೇರಿ ಗ್ರಾಮದಲ್ಲಿ ನಡೆದಿದೆ.

    ಮುಶಿಗೇರಿಯಲ್ಲಿ ಮುಖಂಡರು ಗ್ರಾಮದೇವತೆ ಪೂಜಾ ಕೊನೆಯ ವಾರ ಉಡಿತುಂಬುವ ಕಾರ್ಯಕ್ರಮ ಹಮ್ಮಿಕೊಂಡಿದ್ದರು. ಈ ಕುರಿತು ಮಾಹಿತಿ ಸಿಗುತ್ತಿದ್ದಂತೆ ಗ್ರಾಮಕ್ಕೆ ದೌಡಾಯಿಸಿದ ಪೊಲೀಸರು ಲಘು ಲಾಠಿ ಪ್ರಹಾರ ನಡೆದಿದ್ದಾರೆ.

    ಜಿಲ್ಲೆಯಲ್ಲಿ ನಾಲ್ವರಿಗೆ ಕೊರೊನಾ ವೈರಸ್ ತಗುಲಿದ್ದು, ಓರ್ವ ವೃದ್ಧೆ ಮೃತಪಟ್ಟಿದ್ದಾರೆ. ಹೀಗಿದ್ದರೂ ಜನ ಮಾತ್ರ ಇನ್ನೂ ಬುದ್ಧಿ ಕಲಿಯುತ್ತಿಲ್ಲ. ಗ್ರಾಮ ಮಟ್ಟದ ಪಂಚಾಯಿತಿ ಅಧಿಕಾರಿಯ ನಿರ್ಲಕ್ಷ್ಯತನವೂ ಇದಕ್ಕೆ ಕಾರಣ ಎಂದು ಆರೋಪಿಸಲಾಗಿದೆ.

    ಮುಶಿಗೇರಿಯಲ್ಲಿ ಮಂಗಳವಾರ ಬೆಳಗ್ಗೆ ಆಶಾ ಕಾರ್ಯಕರ್ತೆಯರನ್ನು ಗ್ರಾಮಸಭೆಗೆ ಕರೆಯದೇ ತಮ್ಮಷ್ಟಕ್ಕೆ ತಾವೇ ಸಭೆ ನಡೆಸಿದ್ದಾರೆ. ಈ ಸಭೆನಲ್ಲಿ ಗ್ರಾಮದೇವತೆ ಜಾತ್ರೆ ಬಗ್ಗೆ ಗುಪ್ತಸಭೆ ನಡೆಸಿದ್ದಾರೆ ಎನ್ನುವ ಆರೋಪ ಸಹ ಕೇಳಿಬರುತ್ತಿದೆ. ದೇವರಿಗೆ ಉಡಿತುಂಬವ ಕಾರ್ಯದ ವೇಳೆ ಜನರು ಜಮಾವಣೆಗೊಂಡಿದ್ದರು. ಗುಂಪು ಚದುರಿಸಲು ಪೊಲೀಸರು ಲಘುಲಾಠಿ ಪ್ರಸಾದ ನೀಡಿ ಕಳಿಸಿದ್ದಾರೆ. ಗ್ರಾಮದಲ್ಲಿ ಪೊಲೀಸರು ಬಿಗಿ ಭದ್ರತೆ ಕಲ್ಪಿಸಲಾಗಿದೆ.

  • ಸ್ವಿಫ್ಟ್ ಕಾರ್ ಡಿಕ್ಕಿಯ ರಭಸಕ್ಕೆ 50 ಮೀ ದೂರ ಬಿದ್ದ ಬೈಕ್ ಸಾವಾರ ಸಾವು

    ಸ್ವಿಫ್ಟ್ ಕಾರ್ ಡಿಕ್ಕಿಯ ರಭಸಕ್ಕೆ 50 ಮೀ ದೂರ ಬಿದ್ದ ಬೈಕ್ ಸಾವಾರ ಸಾವು

    ಗದಗ: ಸ್ವಿಫ್ಟ್ ಕಾರು ಹಾಗೂ ಬೈಕ್ ನಡುವೆ ಡಿಕ್ಕಿ ಸಂಭವಿಸಿ ಬೈಕ್ ಸವಾರ ಸ್ಥಳದಲ್ಲೇ ಸಾವನ್ನಪಿದ ಘಟನೆ ಜಿಲ್ಲೆಯ ಗಜೇಂದ್ರಗಡ ತಾಲೂಕಿನ ರಾಜೂರ ಗ್ರಾಮದ ಬಳಿ ನಡೆದಿದೆ.

    ಕೊಪ್ಪಳ ಜಿಲ್ಲೆ ಕುಷ್ಟಗಿ ತಾಲೂಕಿನ ಬಿಳೇಕಲ್ ಗ್ರಾಮದ ರಂಗನಗೌಡ ಭಾವಿಮನಿ(27) ಮೃತ ಬೈಕ್ ಸವಾರ. ಕಾರ್ ಚಾಲಕ ನಾಗರಾಜ್ ಅಜಾಗರುಕತೆಯಿಂದ ಘಟನೆ ನಡೆದಿದ್ದು, ಆರೋಪಿ ಪರಾರಿಯಾಗಿದ್ದಾನೆ.

    ರಂಗನಗೌಡ ಭಾವಿಮನಿ ಅವರು ಕೊಪ್ಪಳ ಜಿಲ್ಲೆ ಕುಷ್ಟಗಿ ತಾಲೂಕಿನ ನಿಲೋಗಲ್ ಕೆವಿಜಿ ಬ್ಯಾಂಕ್‍ನಲ್ಲಿ ಅಕೌಂಟೆಂಟ್ ಆಗಿ ಕಾರ್ಯನಿರ್ವಹಿಸುತ್ತಿದ್ದರು. ಕೆಲಸ ನಿಮಿತ್ತ ಇಂದು ಗಜೇಂದ್ರಗಡದಿಂದ ರೋಣಕ್ಕೆ ತೆರಳುತ್ತಿದ್ದಾಗ ವೇಗವಾಗಿ ಸ್ವಿಫ್ಟ್ ಕಾರು ಚಾಲನೆ ಮಾಡಿಕೊಂಡು ಬಂದ ಚಾಲಕ ನಾಗರಾಜ್ ನಿಯಂತ್ರಣ ತಪ್ಪಿ, ರಂಗನಗೌಡ ಅವರ ಬೈಕ್‍ಗೆ ಡಿಕ್ಕಿಹೊಡೆದಿದೆ.

    ಕಾರು ಡಿಕ್ಕಿ ಹೊಡೆದ ರಭಸಕ್ಕೆ ಬೈಕ್ ಸವಾರ ರಂಗನಗೌಡ ಸ್ಥಳದಿಂದ ಸುಮಾರು 50 ಮೀಟರ್ ಗೂ ಅಧಿಕ ದೂರ ಬಿದ್ದಿದ್ದಾರೆ. ಬೈಕ್ ಸಂಪೂರ್ಣ ನುಜ್ಜುಗುಜ್ಜಾಗಿದ್ದು, ಗಂಭೀರವಾಗಿ ಗಾಯಗೊಂಡಿದ್ದ ರಂಗನಗೌಡ ಅವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಈ ಕುರಿತು ಸ್ಥಳೀಯರು ಮಾಹಿತಿ ನೀಡುತ್ತಿದ್ದಂತೆ ಸ್ಥಳಕ್ಕೆ ದೌಡಾಯಿಸಿದ ಗಜೇಂದ್ರಗಡ ಪೊಲೀಸರು, ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಕಾರು ಚಾಲಕ ನಾಗರಾಜ್ ಸ್ಥಳದಿಂದ ಪರಾರಿಯಾಗಿದ್ದು, ಆತನ ಬಂಧನಕ್ಕಾಗಿ ಪೊಲೀಸರು ಬಲೆ ಬಿಸಿದ್ದಾರೆ.

  • ಕಾಲಗರ್ಭ ಸೇರುತ್ತಿವೆ ಗದಗ ಜಿಲ್ಲೆಯ ಐತಿಹಾಸಿಕ ದೇವಸ್ಥಾನಗಳು

    ಕಾಲಗರ್ಭ ಸೇರುತ್ತಿವೆ ಗದಗ ಜಿಲ್ಲೆಯ ಐತಿಹಾಸಿಕ ದೇವಸ್ಥಾನಗಳು

    ಗದಗ: ಕರ್ನಾಟಕ ವಾಸ್ತು ಶಿಲ್ಪ ಚರಿತ್ರೆಯಲ್ಲಿ ಕಲ್ಯಾಣ ಚಾಲುಕ್ಯರ ಕಾಲದ ಶಿಲ್ಪಕಲೆ ಬಂಗಾರದ ಸಂಪುಟ ಎನ್ನಲಾಗುತ್ತಿದೆ. ಇಂಥ ಭವ್ಯ ವಾಸ್ತು ಕಲೆಯ ಸಂಪದವನ್ನು ಪಡೆದ ಭಾಗ್ಯ ಗದಗ ಜಿಲ್ಲೆ ಗಜೇಂದ್ರಗಡ ತಾಲೂಕಿನ ನರೇಗಲ್ ಹೋಬಳಿಗಿದೆ.

    ಜಿಲ್ಲೆಯ ತೋಟಗಂಟಿ ಗ್ರಾಮದಲ್ಲಿನ 12ನೇ ಶತಮಾನದ ಚಾಲುಕ್ಯರ ಕಾಲದ ಐತಿಹಾಸಿಕ ಕಲ್ಮೇಶ್ವರ ಸ್ಮಾರಕವೂ ಸೂಜಿಗಲ್ಲಿನಂತೆ ನೋಡುಗರನ್ನು ಸೆಳೆಯುತ್ತದೆ. ಆದರೆ ಈ ವಾಸ್ತುಶಿಲ್ಪಗಳಿಗೆ ರಕ್ಷಣೆ, ಸೂಕ್ತ ನಿರ್ವಹಣೆಯಿಲ್ಲದ ಪರಿಣಾಮ ಕಾಲಗರ್ಭ ಸೇರುವ ತವಕದಲ್ಲಿದೆ ಎಂಬುವುದು ಬೇಸರದ ಸಂಗತಿ.

    ಅಧ್ಯಾತ್ಮಿಕ ಸಾಧನೆಯ ಕುರುಹುಗಳ ಸ್ಥಾನವಾಗಿರುವ ಈ ಕಲ್ಯಾಣದ ದೇವಾಲಯ ಗಾತ್ರದಲ್ಲಿ ಚಿಕ್ಕದಾಗಿದ್ದರೂ ವಾಸ್ತುಶಿಲ್ಪದ ದೃಷ್ಟಿಯಿಂದ ಮಹತ್ವ ಪಡೆದಿದೆ. ಗರ್ಭಗೃಹ, ಅಂತರಾಳ ಹಾಗೂ ನವರಂಗಗಳನ್ನು ಹೊಂದಿದೆ. ನವರಂಗದ ರಚನೆಯಾಗಿರುವ ಎತ್ತರದ ಕಟ್ಟೆಯನ್ನು ಇದುವರೆಗೂ ಕಾಣುತ್ತೇವೆ. ಸ್ವಲ್ಪಮಟ್ಟಿಗೆ ವಿಸ್ತಾರವಾಗಿರುವ ಗರ್ಭಗೃಹವು ಲಿಂಗವನ್ನು ಹೊಂದಿರುವುದು. ಮೇಲ್ಭಾಗದಲ್ಲಿ ಅಲಂಕರಣೆ ಚಿತ್ರಗಳನ್ನು ಬಿಡಿಸಲಾಗಿದೆ. ಗರ್ಭಗೃಹದ ಒಳಗೋಡೆಯಲ್ಲಿ ಸುತ್ತಲೂ ಕಟ್ಟೆಯನ್ನು ರಚಿಸಿದ್ದಾರೆ. ಬಾಗಿಲವಾಡವು ಪಟ್ಟಿಕೆಗಳನ್ನು ಹೊಂದಿರುವುದು ಅಲ್ಲದೇ, ಅದು ಸಾದಾ ರಚನೆಯಿಂದ ಕೂಡಿದೆ. ದೇವಾಲಯದ ಅಂತರಾಳವು ಬರಿದಾಗಿದೆ. ಅದರ ಬಾಗಿಲವಾಡವು ಪಂಚ ಪಟ್ಟಿಕೆಗಳಿಂದ ರಚನೆಯಾಗಿದೆ.

    ಪ್ರಾಚೀನ ದೇವಾಲಯದ ಅಧಿಷ್ಠಾನ ಹಾಗೂ ಹೊರ ಗೋಡೆಯ ಭಾಗಗಳು ಹೆಚ್ಚಿನ ಅಲಂಕರಣೆಯಿಂದ ಕೂಡಿವೆ. ಅಧಿಷ್ಠಾನ ಭಾಗವು ಉಪಾನ, ಜಗತಿಗಳ, ಕಪೋತ ಹಾಗೂ ತ್ರಿಪಟ್ಟಕುಮುದ ರಚನೆಯನ್ನು ಸ್ಪಷ್ಟವಾಗಿ ಹೊಂದಿದೆ. ಅಧಿಷ್ಠಾನದಲ್ಲಿರುವ ಜಗತಿ ಭಾಗವು ಸ್ವಲ್ಪಮಟ್ಟಿಗೆ ಎತ್ತರದವಾಗಿದೆ. ಹೊರಗೋಡೆಯು ಅನೇಕ ರೀತಿಯ ಅಲಂಕರಣೆಯಿಂದ ಕೂಡಿದೆ. ಅರ್ಧ ಕಂಬಗಳನ್ನು ಪಂಚಶಾಖೆಯನ್ನು ಹೊಂದಿರುವ ಕಂಬಗಳ ಅಲಂಕರಣೆ ಹಾಗೂ ಹೊರಗೋಡೆಯಲ್ಲಿ ಕೆತ್ತಿರುವ ಅರ್ಧಕಂಬಗಳ ಮೇಲೆ ಚಿಕ್ಕ ಶಿಖರಗಳನ್ನು ನಿರ್ಮಿಸಿದ್ದಾರೆ. ಅಲ್ಲದೇ ಕೀರ್ತಿಮುಖ, ಯಾಳಿ ಹಾಗೂ ಗಜ ಸವಾರಿ ಅಲಂಕಾರವನ್ನು ಗೋಡೆಯ ಭಾಗದಲ್ಲಿ ವಿಶೇಷವಾಗಿ ಕೆತ್ತಲಾಗಿದೆ.

    ಗರ್ಭಗೃಹದ ಹೊರಗೋಡೆಯಲ್ಲಿ ಮೂರು ಕಡೆಗಳಲ್ಲಿ ಕೋಷ್ಟಗಳಿವೆ. ಇಲ್ಲಿರುವ ಎಲ್ಲ ಕೋಷ್ಠಗಳು ಬರಿದಾಗಿವೆ. ಅವುಗಳ ಮೇಲಿನ ಶಿಖರ ರಚನೆ ಆಕರ್ಷಕವಾಗಿದೆ. ಈ ಶಿಖರ ಕೆತ್ತನೆಯಲ್ಲಿ ಏಳು ತಲಗಳನ್ನು ನಿರ್ಮಿಸಿದ್ದು ಪ್ರತಿ ತಲದಲ್ಲಿ ಕೀರ್ತಿಮುಖ ಹಾಗೂ ಕಪೋತಗಳನ್ನು ರಚಿಸಿದ್ದಾರೆ. ಚಿಕ್ಕ ಶಿಖರದಲ್ಲಿ ಎರಡು ತಲಗಳ ನಂತರ ಅರ್ಧಕಂಬಗಳ ಮಂಟಪವನ್ನು ಕಂಡರಿಸಲಾಗಿದೆ. ಶಿಖರವು ಗ್ರೀವ, ಕಳಸ, ಮತ್ತು ಸ್ಥೂಪಿ ಭಾಗಗಳನ್ನು ಸಹ ಹೊಂದಿದೆ.

    ದೇವಾಲಯದ ಮೇಲ್ಛಾವಣಿ ಹಾಗೂ ಶಿಖರವು ಸಂಪೂರ್ಣವಾಗಿ ಬಿದ್ದುಹೋಗಿದೆ. ಗೋಪುರ ಇಲ್ಲ, ಮುಂಭಾಗಕ್ಕೆ ಹಾಗೂ ಒಳಮೈಗೆ ಸುಣ್ಣವನ್ನು ಬಳೆಯಲಾಗಿದೆ. ದೇವಸ್ಥಾನದ ಎದುರಿಗೆ ನಂದಿ ಇದೆ. ಆದರೆ ಅದರ ಮುಖವೇ ಇಲ್ಲ. ಸ್ಥಳೀಯವಾಗಿ ಸಿಗುವ ಕಲ್ಲು-ಗಾರೆಗಳಿಂದ ಮೇಲ್ಛಾವಣೆಯನ್ನು ಮಾತ್ರ ದುರಸ್ತಿಗೊಳಿಸಲಾಗಿದೆ. ಸುಂದರವಾದ ಕೆತ್ತನೆಗಳಿಂದ ಕೂಡಿರುವ ಈ ಪ್ರಾಚೀನ ದೇವಾಲಯದ ಬಗೆಗೆ ಯಾವುದೇ ಲಿಖಿತ ಮಾಹಿತಿಗಳು ಲಭ್ಯವಿಲ್ಲ. ಪ್ರಾಚೀನ ಕಾಲದಲ್ಲಿ ನಿರ್ಮಿಸಲ್ಪಟ್ಟ ಈ ಭವ್ಯ ಸ್ಮಾರಕವನ್ನು ಸಂರಕ್ಷಿಸಿ ಅಭಿವೃದ್ಧಿಗೆ ಸಂಬಂಧಪಟ್ಟ ಇಲಾಖೆ ಮುಂದಾಗಬೇಕು ಎಂಬುದು ಸ್ಥಳೀಯರ ಒತ್ತಾಯವಾಗಿದೆ.

  • ಧರೆಗೆ ಉರುಳಿದ ಬೃಹದಾಕಾರದ ಬಂಡೆಗಳು- ಅದೃಷ್ಟವಶಾತ್ ತಪ್ಪಿತು ಭಾರೀ ಅನಾಹುತ

    ಧರೆಗೆ ಉರುಳಿದ ಬೃಹದಾಕಾರದ ಬಂಡೆಗಳು- ಅದೃಷ್ಟವಶಾತ್ ತಪ್ಪಿತು ಭಾರೀ ಅನಾಹುತ

    ಗದಗ: ಗುಡ್ಡ ಕುಸಿದು ಬೃಹತ್ ಗಾತ್ರದ ಕಲ್ಲುಬಂಡೆಗಳು ಉರುಳಿಬಂದು ದೇವಸ್ಥಾನದ ಉಗ್ರಾಣ ಕೊಠಡಿ ಧ್ವಂಸಗೊಂಡಿರುವ ಘಟನೆ ಗಜೇಂದ್ರಗಡ ತಾಲೂಕಿನ ಬೊಮ್ಮಸಾಗರದಲ್ಲಿ ನಡೆದಿದೆ.

    ಬೊಮ್ಮಸಾಗರಕ್ಕೆ ಹೊಂದಿಕೊಂಡು ಬೃಹತ್ ಗುಡ್ಡವಿದೆ. ಕಳೆದ ಮೂರು ದಿನಗಳಿಂದ ಸುರಿಯುತ್ತಿರುವ ಮಳೆಯಿಂದಾಗಿ ಗುಡ್ಡ ಕುಸಿಯಲು ಆರಂಭಿಸಿದ್ದು, ಗುರುವಾರ ಭಾರೀ ಅನಾಹುತ ಸೃಷ್ಟಿಸಿದೆ. ಅದೃಷ್ಟವಶಾತ್ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ.

    ಗುಡ್ಡ ಕುಸಿತದಿಂದಾಗಿ ಬೃಹದಾಕಾರದ ಬಂಡೆಗಳು ಗ್ರಾಮದ ಕಡೆಗೆ ಉರುಳಿ ಬರುತ್ತಿವೆ. ಪರಿಣಾಮ ಬೊಮ್ಮಸಾಗರ ಗ್ರಾಮ ದೇವತೆ ದುರ್ಗಾದೇವಿ ದೇವಸ್ಥಾನದ ಉಗ್ರಾಣ ಕೊಠಡಿ ಧ್ವಂಸಗೊಂಡಿದೆ. ಅದೃಷ್ಟವಶಾತ್ ಈ ವೇಳೆ ಉಗ್ರಾಣದಲ್ಲಿ ಯಾರೂ ಇರಲಿಲ್ಲ. ಇದರಿಂದಾಗಿ ಭಾರೀ ಅನಾಹುತ ತಪ್ಪಿದೆ. ಆದರೆ ಗ್ರಾಮವು ಗುಡ್ಡದ ಅಡಿಯಲ್ಲೇ ಇರುವುದರಿಂದ ಗ್ರಾಮಸ್ಥರಲ್ಲಿ ಆತಂಕ ಶುರುವಾಗಿದೆ.

    ಗ್ರಾಮಕ್ಕೆ ಗಜೇಂದ್ರಗಡದ ತಹಶೀಲ್ದಾರ್ ಗುರುಸಿದ್ದಯ್ಯ ಹಿರೇಮಠ, ಗಣಿ ಮತ್ತು ಭೂವಿಜ್ಞಾನ ಇಲಾಖೆ ಅಧಿಕಾರಿಗಳು ಹಾಗೂ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಜಿಲ್ಲಾಧಿಕಾರಿಗಳು ಗ್ರಾಮಕ್ಕೆ ಭೇಟಿ ನೀಡಿದಾಗ ಯಾವುದೇ ಪ್ರಾಣ ಹಾನಿ ಸಂಭವಿಸದಂತೆ ಮುನ್ನೆಚ್ಚರಿಕಾ ಕ್ರಮ ಕೈಗೊಳ್ಳಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.

  • ಮದ್ವೆ ಮುಗಿಸಿಕೊಂಡು ಮರಳುತ್ತಿದ್ದಾಗ ಅಪಘಾತ – ಮಗು, ಮಹಿಳೆ ಸಾವು

    ಮದ್ವೆ ಮುಗಿಸಿಕೊಂಡು ಮರಳುತ್ತಿದ್ದಾಗ ಅಪಘಾತ – ಮಗು, ಮಹಿಳೆ ಸಾವು

    ಗದಗ: ಮದುವೆಗೆ ಮುಗಿಸಿಕೊಂಡು ಗ್ರಾಮಕ್ಕೆ ಮರಳಬೇಕಿದ್ದ ಮಗು ಹಾಗೂ ಓರ್ವ ಮಹಿಳೆ ರಸ್ತೆ ಅಪಘಾತದಲ್ಲಿ ಮೃತಪಟ್ಟ ಘಟನೆ ಗಜೇಂದ್ರಗಡ ತಾಲೂಕಿನ ಸೂಡಿ ಗ್ರಾಮದ ಬಳಿ ನಡೆದಿದೆ.

    ಧಾರವಾಡ ಜಿಲ್ಲೆಯ ನವಲಗುಂದ ತಾಲೂಕಿನ ಕೊಂಗವಾಡ ಗ್ರಾಮದ ಪಂಚಾಕ್ಷರಯ್ಯ (3) ಹಾಗೂ ಅಕ್ಕಮ್ಮ (44) ಮೃತ ದುರ್ದೈವಿಗಳು. ಈ ಘಟನೆಯಲ್ಲಿ 10ಕ್ಕೂ ಹೆಚ್ಚು ಜನರಿಗೆ ಗಾಯಗಳಾಗಿದ್ದು, ನಾಲ್ವರ ಸ್ಥಿತಿ ಗಂಭೀರವಾಗಿದೆ.

    ಕೊಂಗವಾಡದಿಂದ ಕ್ರೂಸರ್ ನಲ್ಲಿ ಗಜೇಂದ್ರಗಡದ ಕಾಲಕಾಲೇಶ್ವರ ದೇವಸ್ಥಾನದಲ್ಲಿದ್ದ ಮದುವೆಗೆ ಹೋಗಿ, ಅಲ್ಲಿಂದ ಮರಳುತ್ತಿದ್ದರು. ಸೂಡಿ ಗ್ರಾಮದ ಬಳಿ ಚಾಲಕನ ನಿಯಂತ್ರಣ ತಪ್ಪಿ ಕ್ರೂಸರ್ ಪಲ್ಟಿಯಾಗಿದೆ. ಪರಿಣಾಮ ಇಬ್ಬರು ಮೃತಪಟ್ಟಿದ್ದು, ನಾಲ್ವರ ಸ್ಥಿತಿ ಚಿಂತಾಜನಕವಾಗಿದೆ.

    ಗಾಯಾಳುಗಳನ್ನು ಸಮೀಪ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಅತಿಯಾದ ವೇಗವೇ ಕಾರಣ ಎನ್ನಲಾಗುತ್ತಿದೆ. ಸ್ಥಳಕ್ಕೆ ಗದಗ ಜಿಲ್ಲೆ ಗಜೇಂದ್ರಗಡ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.