Tag: Gajendra Singh Shekhawat

  • ಐತಿಹಾಸಿಕ ಕ್ಷಣ; ಯುನೆಸ್ಕೋದ ʻಮೆಮೋರಿ ಆಫ್ ದಿ ವರ್ಲ್ಡ್ ರಿಜಿಸ್ಟರ್‌ʼಗೆ ಭಗವದ್ಗೀತೆ, ನಾಟ್ಯಶಾಸ್ತ್ರ ಸೇರ್ಪಡೆ

    ಐತಿಹಾಸಿಕ ಕ್ಷಣ; ಯುನೆಸ್ಕೋದ ʻಮೆಮೋರಿ ಆಫ್ ದಿ ವರ್ಲ್ಡ್ ರಿಜಿಸ್ಟರ್‌ʼಗೆ ಭಗವದ್ಗೀತೆ, ನಾಟ್ಯಶಾಸ್ತ್ರ ಸೇರ್ಪಡೆ

    – ಪ್ರಧಾನಿ ನರೇಂದ್ರ ಮೋದಿ ಸಂತಸ

    ನವದೆಹಲಿ: ಪ್ರಪಂಚದಾದ್ಯಂತದ ಪ್ರತಿಯೊಬ್ಬ ಭಾರತೀಯನೂ ಹೆಮ್ಮೆ ಪಡುವಂತಹ ಐತಿಹಾಸಿಕ ಕ್ಷಣ ಇಂದು ಬಂದೊದಗಿದೆ. ಹೌದು. ಯುನೆಸ್ಕೋದ ವಿಶ್ವ ನೋಂದಣಿಯ ಸ್ಮರಣಿಕೆಯಲ್ಲಿ ಭಗವದ್ಗೀತೆ ಮತ್ತು ಭರತ ಮುನಿಯ ನಾಟ್ಯಶಾಸ್ತ್ರವನ್ನು ಸೇರ್ಪಡೆಗೊಳಿಸಲಾಗಿದೆ.

    ಈ ಮಾಹಿತಿಯನ್ನು ಕೇಂದ್ರದ ಸಂಸ್ಕೃತಿ ಮತ್ತು ಪ್ರವಾಸೋದ್ಯಮ ಸಚಿವ ಗಜೇಂದ್ರ ಸಿಂಗ್ ಶೇಖಾವತ್ ತಮ್ಮ ಎಕ್ಸ್‌ ಖಾತೆಯಲ್ಲಿ ಹಂಚಿಕೊಂಡಿದ್ದು, ಪ್ರಧಾನಿ ನರೇಂದ್ರ ಮೋದಿ ಸಹ ಸಂತಸ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಸುಂಕ ಸಮರದ ನಡುವೆ ಯುಎಸ್‌ ಅಧ್ಯಕ್ಷರನ್ನ ಭೇಟಿಯಾದ ಇಟಲಿ ಪ್ರಧಾನಿ – ಮೆಲೊನಿ ಶ್ರೇಷ್ಠ ಪ್ರಧಾನಿ ಎಂದ ಟ್ರಂಪ್‌

    ಭರತ ಮುನಿ ಭಾರತದ ಖ್ಯಾತ ನಾಟ್ಯಶಾಸ್ತ್ರಜ್ಞ. ಇವರನ್ನು ಭಾರತದ ರಂಗಭೂಮಿಯ ಪಿತಾಮಹ ಎನ್ನಬಹುದು. ಇವರು ಬರೆದ ನಾಟ್ಯಶಾಸ್ತ್ರ ಎಂಬ ಗ್ರಂಥವು ಭಾರತದಲ್ಲಿ ನಾಟ್ಯ ಮತ್ತು ರಂಗಭೂಮಿಗೆ ಹೊಸ ದಿಶೆಯನ್ನು ತೋರಿದ ಗ್ರಂಥವಾಗಿದೆ. ನಾಟ್ಯಶಾಸ್ತ್ರ, ಕಾವ್ಯ ತತ್ವ ವಿವೇಚನೆಗೆ ಮಾತ್ರ ಸೀಮಿತವಾದ ಕೃತಿಯಲ್ಲ, ಇಡೀ ನಾಟಕ ಕಲೆಯ ಕುರಿತು ಒಂದು ಸಂಕ್ಷಿಪ್ತ ವಿಶ್ವಕೋಶವಾಗಿದೆ.

    ಇಂತಹ ಮಹತ್ವದ ಗ್ರಂಥವನ್ನು ʻಮೆಮೋರಿ ಆಫ್ ದಿ ವರ್ಲ್ಡ್ ರಿಜಿಸ್ಟರ್‌ʼನಲ್ಲಿ ಸೇರ್ಪಡೆಗೊಳಿಸಲಾಗಿದೆ. ಇದು ಅತ್ಯುತ್ತಮ ಮೌಲ್ಯದ ಸಾಕ್ಷ್ಯಚಿತ್ರ ಪರಂಪರೆಯನ್ನು ಸಂರಕ್ಷಿಸುವ ಜಾಗತಿಕ ಉಪ್ರಕಮವೂ ಇದಾಗಿದೆ. ಇದನ್ನೂ ಓದಿ: ನಾವು ಹಿಂದೂಗಳಿಗಿಂತ ವಿಭಿನ್ನ – ಎರಡು ರಾಷ್ಟ್ರ ಥಿಯರಿ ಹೇಳಿ ಪಾಠ ಮಾಡಿದ ಪಾಕಿಸ್ತಾನ ಸೇನಾ ಮುಖ್ಯಸ್ಥ

    ಪ್ರತಿಯೊಬ್ಬ ಭಾರತೀಯನಿಗೂ ಹೆಮ್ಮೆಯ ಕ್ಷಣ:
    ಈ ಕುರಿತು ತಮ್ಮ ಎಕ್ಸ್‌ ಖಾತೆಯಲ್ಲಿ ಸಂತಸ ಹಂಚಿಕೊಂಡಿರುವ ಪ್ರಧಾನಿ ನರೇಂದ್ರ ಮೋದಿ, ಪ್ರಪಂಚದಾದ್ಯಂತದ ಪ್ರತಿಯೊಬ್ಬ ಭಾರತೀಯನಿಗೂ ಇದು ಹೆಮ್ಮೆಯ ಕ್ಷಣ. ಈ ಸೇರ್ಪಡೆ ನಮ್ಮ ಕಾಲಾತೀತ ಬುದ್ಧಿವಂತಿಕೆ ಮತ್ತು ಶ್ರೀಮಂತ ಸಂಸ್ಕೃತಿಯ ಜಾಗತಿಕ ಮನ್ನಣೆಯಾಗಿದೆ. ಗೀತೆ ಮತ್ತು ನಾಟ್ಯಶಾಸ್ತ್ರವು ಶತಮಾನಗಳಿಂದ ನಾಗರಿಕತೆ ಮತ್ತು ಪ್ರಜ್ಞೆಯನ್ನು ಪೋಷಿಸಿವೆ. ಅವರ ಒಳನೋಟಗಳು ಜಗತ್ತಿಗೆ ಸ್ಫೂರ್ತಿ ನೀಡುತ್ತಲೇ ಇವೆ ಎಂದು ಹರ್ಷ ವ್ಯಕ್ತಪಡಿಸಿದ್ದಾರೆ.

    ಈ ಕುರಿತು ಎಕ್ಸ್‌ನಲ್ಲಿ ಮಾಹಿತಿ ಹಂಚಿಕೊಂಡಿರುವ ಕೇಂದ್ರ ಸಚಿವ ಗಜೇಂದ್ರ ಸಿಂಗ್ ಶೇಖಾವತ್, ಭಗವದ್ಗೀತೆ, ನಾಟ್ಯಶಾಸ್ತ್ರ ಸೇರ್ಪಡೆಗೊಳಿಸಿರುವುದು ಭಾರತದ ನಾಗರಿಕ ಪರಂಪರೆಗೆ ಐತಿಹಾಸಿಕ ಕ್ಷಣ. ಈ ಜಾಗತಿಕ ಗೌರವವು ಭಾರತದ ಶಾಶ್ವತ ಬುದ್ಧಿವಂತಿಕೆ ಮತ್ತು ಕಲಾತ್ಮಕ ಪ್ರತಿಭೆಗೆ ಸಾಕ್ಷಿಯಾಗಿದೆ. ಇದು ಭಾರತದ ವಿಶ್ವದೃಷ್ಟಿಕೋನ, ನಾವು ಯೋಚಿಸುವ, ಅನುಭವಿಸುವ, ಬದುಕುವ ತಾತ್ವಿಕ ಮತ್ತು ಸೌಂದರ್ಯಕ್ಕೆ ಅಡಿಪಾಯಗಳಾಗಿವೆ. ನಾವೀಗ ಅಂತಾರಾಷ್ಟ್ರೀಯ ನೋಂದಣಿಯಲ್ಲಿ ನಮ್ಮ ದೇಶದಿಂದ 14 ಶಾಸನಗಳನ್ನು ಹೊಂದಿದ್ದೇವೆ ಎಂದು ಮಾಹಿತಿಯನ್ನೂ ನೀಡಿದ್ದಾರೆ.  ಇದನ್ನೂ ಓದಿ: UK | ರಾಯಲ್ ಕಾಲೇಜ್ ಆಫ್ ಫಿಸಿಶಿಯನ್ಸ್‌ನ 123ನೇ ಅಧ್ಯಕ್ಷರಾಗಿ ಭಾರತೀಯ ಮೂಲದ ಮುಮ್ತಾಜ್‌ ಆಯ್ಕೆ

  • ಶಾಸಕ ಪೂಂಜ ಜತೆಗೂಡಿ ಪ್ರವಾಸೋದ್ಯಮ ಸಚಿವ ಗಜೇಂದ್ರ ಸಿಂಗ್ ಭೇಟಿಯಾದ ಸಂಸದ ಕ್ಯಾ. ಚೌಟ

    ಶಾಸಕ ಪೂಂಜ ಜತೆಗೂಡಿ ಪ್ರವಾಸೋದ್ಯಮ ಸಚಿವ ಗಜೇಂದ್ರ ಸಿಂಗ್ ಭೇಟಿಯಾದ ಸಂಸದ ಕ್ಯಾ. ಚೌಟ

    – ‘ಪ್ರಸಾದ್’ ಯೋಜನೆಯಡಿ ದ.ಕನ್ನಡದ ಪ್ರಮುಖ ದೇವಾಲಯಗಳ ಅಭಿವೃದ್ದಿಗೆ ಮನವಿ

    ನವದೆಹಲಿ: ಪುತ್ತೂರು ಶ್ರೀ ಮಹಾಲಿಂಗೇಶ್ವರ, ಶಿಶಿಲದ ಶ್ರೀ ಶಿಶಿಲೇಶ್ವರ ದೇವಸ್ಥಾನ ಸೇರಿದಂತೆ ದಕ್ಷಿಣ ಕನ್ನಡ ಜಿಲ್ಲೆಯ ಹಲವು ಪ್ರಮುಖ ದೇವಾಲಯಗಳನ್ನು ಕೇಂದ್ರ ಸರ್ಕಾರ ‘ಪ್ರಸಾದ್’ ಯೋಜನೆಯಡಿಯಲ್ಲಿ ಅಭಿವೃದ್ದಿಪಡಿಸುವಂತೆ ಕೋರಿ ದಕ್ಷಿಣ ಕನ್ನಡ ಸಂಸದ ಕ್ಯಾ. ಬ್ರಿಜೇಶ್‌ ಚೌಟ ಅವರು ಕೇಂದ್ರ ಪ್ರವಾಸೋದ್ಯಮ ಸಚಿವ ಗಜೇಂದ್ರ ಸಿಂಗ್ ಶೇಖಾವತ್ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿದ್ದಾರೆ.

    ಬೆಳ್ತಂಗಡಿ ಕ್ಷೇತ್ರದ ಶಾಸಕ ಹರೀಶ್ ಪೂಂಜ ಜೊತೆ ನವದೆಹಲಿಯಲ್ಲಿ ಇಂದು ಸಚಿವರನ್ನು ಭೇಟಿಯಾಗಿ ಮಹತ್ವದ ಮಾತುಕತೆ ನಡೆಸಿದ ಸಂಸದರು, ಬೆಳ್ತಂಗಡಿ ತಾಲೂಕಿನ ಶ್ರೀ ನಂದಿಕೇಶ್ವರ ದೇವಸ್ಥಾನ (ನಂದಿಬೆಟ್ಟ ಗರ್ಡಾಡಿ), ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ (ಕೊಲ್ಲಿ), ಶ್ರೀ ಶಿಶಿಲೇಶ್ವರ ದೇವಸ್ಥಾನ(ಶಿಶಿಲ), ಶ್ರೀ ಸಹಸ್ರಲಿಂಗೇಶ್ವರ ದೇವಸ್ಥಾನ (ಉಪ್ಪಿನಂಗಡಿ) ಮತ್ತು ಸುಳ್ಯ ತಾಲೂಕಿನ ಶ್ರೀ ತೋಡಿಕಾನ ಮಲ್ಲಿಕಾರ್ಜುನ ದೇವಸ್ಥಾನಗಳನ್ನು ‘ಪ್ರಸಾದ್’ ಯೋಜನೆಯಡಿ ಅಭಿವೃದ್ಧಿಪಡಿಸಬೇಕು. ಆ ಮೂಲಕ ಈ ದೇವಸ್ಥಾನಗಳಿಗೆ ಹೆಚ್ಚಿನ ಸಂಖ್ಯೆಯಲ್ಲಿ ಯಾತ್ರಾರ್ಥಿಗಳು-ಪ್ರವಾಸಿಗರನ್ನು ಆಕರ್ಷಿಸಲು ಸೂಕ್ತ ಕ್ರಮ ಕೈಗೊಳ್ಳುವಂತೆ ಕೋರಿದ್ದಾರೆ.

    ದಕ್ಷಿಣ ಕನ್ನಡ ಜಿಲ್ಲೆಯು ಧಾರ್ಮಿಕ ಕ್ಷೇತ್ರಗಳ ನೆಲೆಬೀಡಾಗಿದ್ದು, ಇಲ್ಲಿನ ಹಲವಾರು ದೇವಸ್ಥಾನಗಳಿಗೆ ಕರ್ನಾಟಕ ಮಾತ್ರವಲ್ಲ ದೇಶ-ವಿದೇಶಗಳಿಂದಲೂ ಯಾತ್ರಾರ್ಥಿಗಳು ದರ್ಶನಕ್ಕೆಂದು ಬಂದು ಹೋಗುತ್ತಿದ್ದಾರೆ. ಈ ಹಿನ್ನಲೆಯಲ್ಲಿ ಕೇಂದ್ರ ಸರ್ಕಾರದ ಪ್ರಸಾದಂ ಯೋಜನೆ ಪಟ್ಟಿಯಲ್ಲಿ ಅಭಿವೃದ್ಧಿಪಡಿಸುವುದಕ್ಕೆ ಜಿಲ್ಲೆಯ ಅನೇಕ ದೇವಸ್ಥಾನಗಳು ಅರ್ಹತೆ ಹಾಗೂ ವಿಪುಲ ಅವಕಾಶಗಳನ್ನು ಪಡೆದುಕೊಂಡಿವೆ. ಹೀಗಿರುವಾಗ, ಆದ್ಯತೆ ಮೇರೆಗೆ, ಶ್ರೀ ಸಹಸ್ರಲಿಂಗೇಶ್ವರ ಸೇರಿದಂತೆ ಈ ಐದು ದೇವಸ್ಥಾನಗಳನ್ನು ಮತ್ತಷ್ಟು ಜನಾಕರ್ಷಣೆ ಮಾಡುವುದಕ್ಕೆ ಪ್ರವಾಸೋದ್ಯಮ ಸಚಿವಾಲಯದಿಂದ ಅಗತ್ಯ ಅನುದಾನವನ್ನು ನೀಡಬೇಕೆಂದು ಕ್ಯಾ. ಚೌಟ ಅವರು ಇದೇ ಸಂದರ್ಭದಲ್ಲಿ ಸಚಿವ ಶೆಖಾವತ್‌ ಅವರಲ್ಲಿ ವಿನಂತಿಸಿದ್ದಾರೆ.

  • ಜಾತಿ ಜನಗಣತಿ ವರದಿ ಮಂಡನೆಯಾದ ಬಳಿಕ ಏನಿದೆ ಅಂತಾ ಗೊತ್ತಾಗಲಿದೆ: ಯದುವೀರ್

    ಜಾತಿ ಜನಗಣತಿ ವರದಿ ಮಂಡನೆಯಾದ ಬಳಿಕ ಏನಿದೆ ಅಂತಾ ಗೊತ್ತಾಗಲಿದೆ: ಯದುವೀರ್

    – ಮುಡಾ ಕೇಸ್ ಸಿಬಿಐಗೆ ವಹಿಸಿ ಅನ್ನೋ ಒತ್ತಾಯ ಮೊದಲಿನಿಂದಲೂ ಇದೆ ಎಂದ ಸಂಸದ

    ನವದೆಹಲಿ: ಜಾತಿ ಜನಗಣತಿ ವರದಿ (Caste Census Report) 9 ವರ್ಷಗಳ ಹಿಂದೆಯೇ ತಯಾರಿಸಲಾಗಿದೆ. ಮಂಡನೆಯಾದ ಬಳಿಕ ಏನಿದೆ ಅಂತ ಗೊತ್ತಾಗಲಿದೆ ಎಂದು ಮೈಸೂರು-ಕೊಡಗು ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ (Yaduveer Wadiyar) ಹೇಳಿದ್ದಾರೆ.

    ನವದೆಹಲಿಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಹಲವು ವಿಚಾರಗಳ ಕುರಿತು ಪ್ರತಿಕ್ರಿಯೆ ನೀಡಿದರು. ಇದನ್ನೂ ಓದಿ: ಇಸ್ರೋ ಸಾಧನೆ – ಡಾಕಿಂಗ್‌ ಪ್ರಕ್ರಿಯೆ ಹೇಗೆ ನಡೆಯಿತು? ಪ್ರಯೋಜನ ಏನು?

    ಇನ್ನೂ ಮುಡಾ ಕೇಸ್ ಸಿಬಿಐಗೆ ವಹಿಸಬೇಕು ಅನ್ನೋ ನಮ್ಮ ಒತ್ತಾಯ ಮೊದಲಿನಿಂದಲೂ ಇದೆ. ಇಂದು ಕೇಂದ್ರ ಸಚಿವ ಗಜೇಂದ್ರ ಸಿಂಗ್ ಶೇಖಾವತ್ ಭೇಟಿ ಮಾಡಿದ್ದೇನೆ. ಮೈಸೂರಿನ ಪ್ರವಾಸೋಧ್ಯಮ ಅಭಿವೃದ್ಧಿ ಕುರಿತಂತೆ ಚರ್ಚೆ ಮಾಡಿದ್ದೇನೆ. ಮೈಸೂರಿನ ಹಳೆ ಡಿಸಿ ಕಚೇರಿಯನ್ನು ಮ್ಯೂಸಿಯಂ ಮಾಡಬೇಕು ಎಂಬ ಒತ್ತಾಯವಿದೆ. ಯೋಗ ಪರಂಪರೆಯನ್ನು ಸಾರಲು, ಸಂರಕ್ಷಣೆ ಮಾಡಲು ಮ್ಯೂಸಿಯಂ ಮಾಡಬೇಕು. ಈ ಬಗ್ಗೆ ಕೇಂದ್ರ ಸಚಿವರೊಂದಿಗೆ ಪ್ರಸ್ತಾಪ ಮಾಡಿದ್ದೇನೆ ಎಂದರು. ಇದನ್ನೂ ಓದಿ: ಹೆಚ್‌ಎಂಟಿ ಅಧೀನದಲ್ಲಿರುವ ಅರಣ್ಯ ಭೂಮಿ ಹಿಂಪಡೆಯುವ ಬಗ್ಗೆ ಕ್ಯಾಬಿನೆಟ್‌ನಲ್ಲಿ ಚರ್ಚೆ – ಹೆಚ್‌.ಕೆ ಪಾಟೀಲ್

    ಅಂಬಾರಿ ಹೊತ್ತಿದ್ದ ಆನೆ ಅರ್ಜುನ ಕಾರ್ಯಾಚರಣೆಯಲ್ಲಿ ತೀರಿಹೋಗಿತ್ತು. ಅರ್ಜುನ ಆನೆಯ ಸ್ಮಾರಕ ನಿರ್ಮಾಣ ಮಾಡಬೇಕು ಎಂದು ಒತ್ತಾಯ ಕೇಳಿಬರುತ್ತಿದೆ. ಅರ್ಜುನನ ಪುತ್ಥಳಿ ಸ್ಥಾಪನೆ ಮಾಡಬೇಕು ಎಂಬ ಪ್ರಸ್ತಾಪ ಕೊಟ್ಟಿದ್ದೇವೆ. ಅಂಬಾರಿ ಸಾಗುವ ಮೈಸೂರಿನ ಸರ್ಕಲ್‌ನಲ್ಲಿ ಪುತ್ಥಳಿ ಮಾಡಬೇಕಿದೆ ಎಂದು ತಿಳಿಸಿದರು. ಇದನ್ನೂ ಓದಿ: 2ಕ್ಕಿಂತ ಹೆಚ್ಚು ಮಕ್ಕಳಿದ್ರೆ ಮಾತ್ರ ಸ್ಥಳೀಯ ಚುನಾವಣೆಯಲ್ಲಿ ಸ್ಫರ್ಧಿಸಲು ಅವಕಾಶ: ಚಂದ್ರಬಾಬು ನಾಯ್ಡು

    ಮುಂದುವರಿದು.. ಮೈಸೂರಿನ ಏರ್‌ಪೋರ್ಟ್ ವಿಚಾರವಾಗಿಯೂ ಸಚಿವರೊಂದಿಗೆ ಚರ್ಚಿಸುತ್ತೇನೆ. ಏರ್‌ಪೋರ್ಟ್ ವಿಸ್ತರಣೆಗೆ ಪ್ರಸ್ತಾವನೆ ಇದೆ. ಕೆಲವು ಅಡಚಣೆ ತೆರವುಗೊಳಿಸುವಂತೆ ಮನವಿ ಮಾಡುತ್ತೇವೆ ಎಂದು ಹೇಳಿದರು. ಇದನ್ನೂ ಓದಿ: ಕರ್ನಾಟಕ ಜಂಗಲ್ ರಾಜ್ಯ ಆಗಿದೆ – ಬೀದರ್ ಗುಂಡಿನ ದಾಳಿಗೆ ಬೊಮ್ಮಾಯಿ ದಿಗ್ಭ್ರಮೆ

  • ಇದು ಮೋದಿ ಭಾರತ, ಬಾಂಗ್ಲಾದೇಶದಂತಹ ಪರಿಸ್ಥಿತಿ ಉಂಟಾಗಲ್ಲ; ಕಾಂಗ್ರೆಸ್‌ಗೆ ಶೇಖಾವತ್ ತಿರುಗೇಟು

    ಇದು ಮೋದಿ ಭಾರತ, ಬಾಂಗ್ಲಾದೇಶದಂತಹ ಪರಿಸ್ಥಿತಿ ಉಂಟಾಗಲ್ಲ; ಕಾಂಗ್ರೆಸ್‌ಗೆ ಶೇಖಾವತ್ ತಿರುಗೇಟು

    ನವದೆಹಲಿ: ಇದು ಮೋದಿಯವರ ಭಾರತ, ಬಾಂಗ್ಲಾದೇಶದಂತಹ ಪರಿಸ್ಥಿತಿ ಬರೋದಕ್ಕೆ ಸಾಧ್ಯವಿಲ್ಲ ಎಂದು ಕೇಂದ್ರ ಪ್ರವಾಸೋದ್ಯಮ ಸಚಿವ ಗಜೇಂದ್ರ ಸಿಂಗ್ ಶೇಖಾವತ್ (Gajendra Singh Shekhawat) ಪ್ರಧಾನಿಗಳ ಪರ ಬ್ಯಾಟ್‌ ಬೀಸಿದ್ದಾರೆ.

    ಜೋಧ್‌ಪುರ ವಿಮಾನ ನಿಲ್ದಾಣದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಬಾಂಗ್ಲಾದೇಶದಲ್ಲಿ (Bangladesh) ನಡೆದಂತೆ ಭಾರತದಲ್ಲೂ (India) ಮುಂದೊಂದು ದಿನ ಪ್ರಧಾನಿ ನರೇಂದ್ರ ಮೋದಿ (Narendra Modi) ನಿವಾಸಕ್ಕೆ ಜನರು ನುಗ್ಗುತ್ತಾರೆ ಎಂಬ ಮಧ್ಯಪ್ರದೇಶ ಕಾಂಗ್ರೆಸ್‌ನ ಹಿರಿಯ ನಾಯಕ ಸಜ್ಜನ್ ಸಿಂಗ್ ವರ್ಮಾ (Madhya Pradesh Congress leader Sajjan Verma) ಅವರ ಹೇಳಿಕೆಗೆ ಪ್ರತಿಕ್ರಿಯೆ ನೀಡಿದರು. ಇದನ್ನೂ ಓದಿ: Tungabhadra Dam | 3 ಲಕ್ಷ ಕ್ಯುಸೆಕ್‌ ನೀರು ಹೊರಕ್ಕೆ ಹರಿಸಿದ್ರೆ 4 ಜಿಲ್ಲೆಗಳಿಗೆ ಅಪಾಯ!

    ಭಾರತದಲ್ಲಿ ಬಾಂಗ್ಲಾದೇಶದಂತಹ ಪರಿಸ್ಥಿತಿ ಉದ್ಭವಿಸುತ್ತದೆ ಎಂದು ಕೆಲವರು ಕಾಮೆಂಟ್ ಮಾಡಿರುವುದು ದುರದೃಷ್ಟಕರ. ಅಂತಹ ಪರಿಸ್ಥಿತಿ ಇಲ್ಲಿ ಬರಲು ಸಾಧ್ಯವಿಲ್ಲ, ಏಕೆಂದರೆ ಇದು ಮೋದಿ ಅವರ ಭಾರತ. ಬಾಂಗ್ಲಾದೇಶದಲ್ಲಿ ನಡೆದಿರುವುದು ಅನಿರೀಕ್ಷಿತವಲ್ಲ. ಅಲ್ಲಿನ ಪರಿಸ್ಥಿಯ ಬಗ್ಗೆ ಭಾರತ ಕಣ್ಣಿಟ್ಟಿದೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ಪ್ಯಾರಿಸ್‌ ಒಲಿಂಪಿಕ್ಸ್‌ ಹಬ್ಬಕ್ಕಿಂದು ಅದ್ಧೂರಿ ತೆರೆ – ಭಾರತದ ಧ್ವಜಧಾರಿಯಾಗಲಿದ್ದಾರೆ ಮನು ಭಾಕರ್‌

    ಪ್ರವಾಸೋದ್ಯಮಕ್ಕೆ ಉತ್ತೇಜನ:
    ಇದೇ ವೇಳೆ ಸ್ವದೇಶ್ ದರ್ಶನ್ ಯೋಜನೆಯಡಿ ರಾಜಸ್ಥಾನಕ್ಕೆ 4 ಸರ್ಕ್ಯೂಟ್‌ ನೀಡುತ್ತಿರುವ ಕುರಿತು ಮಾತನಾಡಿದ ಅವರು, ಪ್ರವಾಸೋದ್ಯಮವು ಆಯಾ ರಾಜ್ಯ ಸರ್ಕಾರಗಳಿಗೆ ಸಂಬಂಧಿಸಿದ ವಿಷಯವಾಗಿದೆ. ಮುಂದಿನ ದಿನಗಳಲ್ಲಿ ರಾಜ್ಯಗಳ ಸಹಯೋಗದೊಂದಿಗೆ ಇಡೀ ದೇಶದಲ್ಲಿ ಪ್ರವಾಸೋದ್ಯಮ ಹೆಚ್ಚಿಸಲು ಕೆಲಸ ಮಾಡುತ್ತೇವೆ. ರಾಜ್ಯ ಸರ್ಕಾರದಿಂದ ಪ್ರವಾಸೋದ್ಯಮಕ್ಕೆ ಸಂಬಂಧಿಸಿದಂತೆ ಪ್ರಸ್ತಾವನೆಗಳು ಬಂದರೆ ಅವುಗಳನ್ನು ಗಂಭೀರವಾಗಿ ಪರಿಗಣಿಸಿ ಮುಂದೆ ಕೊಂಡೊಯ್ಯುತ್ತೇವೆ ಎಂದು ಭರವಸೆ ನೀಡಿದ್ದಾರೆ.

    ಮುಂದುವರಿದು ಮಾತನಾಡಿ, ವರ್ಷಾಂತ್ಯದ ವೇಳೆಗೆ ಜೋಧ್‌ಪುರ ವಿಮಾನ ನಿಲ್ದಾಣದಲ್ಲಿ ಹೊಸ ಟರ್ಮಿನಲ್ ಕಟ್ಟಡ ಉದ್ಘಾಟಿಸಲಾಗುವುದು. ಅದರ ಶೇ.45ಕ್ಕೂ ಹೆಚ್ಚು ಕಾಮಗಾರಿ ಪೂರ್ಣಗೊಂಡಿದೆ ಎಂದು ಕೇಂದ್ರ ಸಚಿವರು ಹೇಳಿದರು. ಇದನ್ನೂ ಓದಿ: TB ಡ್ಯಾಮ್‌ ಪರಿಶೀಲನೆಗೆ ಬೆಂಗಳೂರು, ಹೈದರಾಬಾದ್‌, ಚೆನ್ನೈನಿಂದ ತಜ್ಞರ ತಂಡ ಆಗಮನ: ತಂಗಡಗಿ 

  • ಅಭಿವೃದ್ಧಿ Vs ಅನುದಾನ: ಸತ್ಯದ ಘೋರಿ ಕಟ್ಟಿ ಸುಳ್ಳಿನ ವಿಜೃಂಭಣೆ ಮಾಡ್ಬೇಡಿ- ಸಿದ್ದರಾಮಯ್ಯ ಸೇಡಿನ ಆರೋಪಕ್ಕೆ ಕೇಂದ್ರ ತಿರುಗೇಟು

    ಅಭಿವೃದ್ಧಿ Vs ಅನುದಾನ: ಸತ್ಯದ ಘೋರಿ ಕಟ್ಟಿ ಸುಳ್ಳಿನ ವಿಜೃಂಭಣೆ ಮಾಡ್ಬೇಡಿ- ಸಿದ್ದರಾಮಯ್ಯ ಸೇಡಿನ ಆರೋಪಕ್ಕೆ ಕೇಂದ್ರ ತಿರುಗೇಟು

    ಬೆಂಗಳೂರು: ಅಭಿವೃದ್ಧಿ ಮತ್ತು ಅನುದಾನದ ವಿಚಾರದಲ್ಲಿ ರಾಜ್ಯ ಸರ್ಕಾರ ಮತ್ತು ಕೇಂದ್ರ ಸರ್ಕಾರಗಳ ನಡುವೆ ಕದನ ಶುರುವಾಗಿದೆ. ಕೇಂದ್ರ ಸರ್ಕಾರ (Union Government) ಕರ್ನಾಟಕದ ವಿಚಾರದಲ್ಲಿ ಮಲತಾಯಿ ಧೋರಣೆ ತಳೆದಿದೆ ಎಂದು ಆರೋಪಿಸಿ ಕಳೆದ ಮೂರು ದಿನಗಳಿಂದ ಸಿಎಂ ಸಿದ್ದರಾಮಯ್ಯ (CM Siddaramaiah) ಇಲಾಖಾವಾರು ಅಂಕಿ ಅಂಶ ಪ್ರಕಟಿಸುತ್ತಾ ಸಂಘರ್ಷಕ್ಕೆ ಮುನ್ನುಡಿ ಬರೆದಿದ್ದಾರೆ.

    ಲೋಕಸಭೆ ಚುನಾವಣೆ ಸನಿಹದಲ್ಲಿರುವ ಈ ಸಂದರ್ಭದಲ್ಲಿ, ಕೇಂದ್ರ ಬಿಜೆಪಿ ಸರ್ಕಾರ ಕರ್ನಾಟಕದ (Karnataka) ಮೇಲೆ ಸೇಡು ತೀರಿಸಿಕೊಳ್ಳುತ್ತಿದೆಯೇ? ಉತ್ತರ ಕೊಡಿ ಮೋದಿ ಎಂದು ಪ್ರಶ್ನಿಸುತ್ತಾ ಪೋಸ್ಟರ್ ಅಭಿಯಾನ ಮಾಡತೊಡಗಿದ್ದಾರೆ. ಇದು ಸಹಜವಾಗಿಯೇ ಬಿಜೆಪಿಗರಿಗೆ (BJP) ಮುಜುಗರ ತಂದಿಟ್ಟಿತ್ತು. ಮೂರು ದಿನಗಳ ನಂತರ ಎಚ್ಚೆತ್ತ ಬಿಜೆಪಿ ಹೈಕಮಾಂಡ್ ಈಗ ಆಯಾ ಇಲಾಖೆಗಳ ಸಚಿವರ ಮೂಲಕವೇ ಉತ್ತರ ಕೊಡಿಸಲು ಹೊರಟಂತಿದೆ.

    ಇದರ ಮೊದಲ ಭಾಗವಾಗಿ ಕೇಂದ್ರ ಜಲಶಕ್ತಿ ಮಂತ್ರಿ ಗಜೇಂದ್ರ ಸಿಂಗ್ ಶೇಖಾವತ್ (Gajendra Singh Shekhawat) ಟ್ವೀಟ್ ಮೂಲಕ ಸಿಎಂಗೆ ತಿರುಗೇಟು ನೀಡಿದ್ದಾರೆ. ಸುಳ್ಳು ಮತ್ತು ತಪ್ಪು ಮಾಹಿತಿಗಳನ್ನು ಹರಡುವುದು ಕಾಂಗ್ರೆಸಿಗರಿಗೆ ಅಂಟಿದ ಚಟ ಎಂದು ನಮಗೆಲ್ಲರಿಗೂ ತಿಳಿದಿದೆ. ಆದರೆ ಒಬ್ಬ ಮುಖ್ಯಮಂತ್ರಿಯೇ ಖುದ್ದಾಗಿ ತಪ್ಪು ಮಾಹಿತಿಗಳನ್ನು ಬಿತ್ತಿ ಜನಮಾನಸವನ್ನು ಹಾಳುಗೆಡವಲು ಮುಂದಾಗುತ್ತಾರೆಂದು ನಾವು ಭಾವಿಸಿರಲಿಲ್ಲ. ಮೇಕೆದಾಟು ಯೋಜನೆಯ ಸ್ಥಿತಿ-ಗತಿ ಹಾಗೂ ವಾಸ್ತವಾಂಶ ಏನೆಂಬುದು ನಿಮಗೆ ಚೆನ್ನಾಗಿ ತಿಳಿದಿದೆ. ನಿಮಗೆ ಬ್ರೀಫೀಂಗ್ ತಂಡ ನೀಡಿದ ಅರ್ಧಂಬರ್ಧ ಮಾಹಿತಿ ಆಧರಿಸಿ ನೀವು ತಪ್ಪು ಮಾಹಿತಿಗಳ ಸರಣಿಯನ್ನೇ ಹರಿಬಿಟ್ಟಂತೆ ತೋರುತ್ತದೆ ಎಂದು ಉತ್ತರ ನೀಡಿದ್ದಾರೆ.  ಇದನ್ನೂ ಓದಿ: ನೀವು ಕರ್ನಾಟಕದ ಚೀಫ್‌ ಲೈಯರ್‌ ಆಗಿದ್ದೀರಿ: ಸಿದ್ದರಾಮಯ್ಯ ವಿರುದ್ಧ ತೇಜಸ್ವಿ ಸೂರ್ಯ ಕಿಡಿ

    ಸಿದ್ದರಾಮಯ್ಯ Vs ಗಜೇಂದ್ರ ಸಿಂಗ್ ಶೇಖಾವತ್
    ಸಿದ್ದು ಆರೋಪ – ಕೇಂದ್ರ ಅನುಮತಿ ನೀಡದ ಕಾರಣ ಮೇಕೆದಾಟು ಯೋಜನೆ ನೆನೆಗುದಿಗೆ
    ಜಲಮಂತ್ರಿ ಪ್ರತ್ಯುತ್ತರ – ಈ ಕಾರ್ಯಸೂಚಿ ಬಗ್ಗೆ ನೆರೆಯ ರಾಜ್ಯಗಳಲ್ಲಿ ಒಮ್ಮತ ಮೂಡಿಲ್ಲ. ಹೀಗಾಗಿ ಚರ್ಚೆ ಸಾಧ್ಯವಾಗಿಲ್ಲ. ಇದು ಕೇಂದ್ರ ಸರ್ಕಾರದ ತಪ್ಪಲ್ಲ

    ಸಿದ್ದು ಆರೋಪ – ಕೇಂದ್ರದ ನಿರ್ಲ್ಯಕ್ಷದ ಕಾರಣ ಮಹದಾಯಿ ಯೋಜನೆ ನೆನೆಗುದಿಗೆ ಬಿದ್ದಿದೆ. ಕುಡಿಯುವ ನೀರಿನ ವಿಚಾರದಲ್ಲೂ ಕೀಳು ರಾಜಕೀಯ ಮಾಡುತ್ತಿದೆ
    ಜಲಮಂತ್ರಿ ಪ್ರತ್ಯುತ್ತರ – ಕಳಸಾ ಬಂಡೂರಿ ಯೋಜನೆ ಡಿಪಿಆರ್‌ಗೆ ಕೆಲ ಷರತ್ತುಗಳೊಂದಿಗೆ ಕೇಂದ್ರ ಜಲ ಆಯೋಗ ಅನುಮೋದಿಸಿದೆ. ನೀವು ಈ ಮಾಹಿತಿ ಮುಚ್ಚಿಟ್ಟಿದ್ದೀರಿ?

    ಗಜೇಂದ್ರ ಸಿಂಗ್ ಶೇಖಾವತ್ ಹೇಳಿದ್ದೇನು?
    ಸುಳ್ಳು ಮತ್ತು ತಪ್ಪು ಮಾಹಿತಿಗಳನ್ನು ಹರಡುವುದು ಕಾಂಗ್ರೆಸಿಗರಿಗೆ ಅಂಟಿದ ಚಟ ಎಂದು ನಮಗೆಲ್ಲರಿಗೂ ತಿಳಿದಿದೆ. ಆದರೆ ಒಬ್ಬ ಮುಖ್ಯಮಂತ್ರಿಯೇ ಖುದ್ದಾಗಿ ತಪ್ಪು ಮಾಹಿತಿಗಳನ್ನು ಬಿತ್ತಿ ಜನಮಾನಸವನ್ನು ಹಾಳುಗೆಡವಲು ಮುಂದಾಗುತ್ತಾರೆಂದು ನಾವು ಭಾವಿಸಿರಲಿಲ್ಲ.

    ಮೇಕೆದಾಟು ಯೋಜನೆಯ ಸ್ಥಿತಿ-ಗತಿ ಹಾಗೂ ವಾಸ್ತವಾಂಶ ಏನೆಂಬುದು ನಿಮಗೆ ಚೆನ್ನಾಗಿ ತಿಳಿದಿದೆ. ನಿಮಗೆ ಬ್ರೀಫೀಂಗ್ ತಂಡ ನೀಡಿದ ಅರ್ಧಂಬರ್ಧ ಮಾಹಿತಿ ಆಧರಿಸಿ ನೀವು ತಪ್ಪು ಮಾಹಿತಿಗಳ ಸರಣಿಯನ್ನೇ ಹರಿಬಿಟ್ಟಂತೆ ತೋರುತ್ತದೆ. ಹೀಗಾಗಿ ವಾಸ್ತವ ಏನೆಂಬುದನ್ನು ನಾವೇ ಹೇಳಬೇಕಾಗಿದೆ.

    ಮೊದಲನೆಯದಾಗಿ CWMA ಯ ಹಲವು ಸಭೆಗಳಲ್ಲಿ ಮೇಕೆದಾಟು ಯೋಜನೆಯ ಡಿಪಿಆರ್ ಕುರಿತು ಚರ್ಚೆಯನ್ನು ಅಜೆಂಡಾ ವಿಷಯವಾಗಿ ಸೇರಿಸಲಾಗಿತ್ತು. ಆದರೆ ಈ ಕಾರ್ಯಸೂಚಿಯ ಬಗ್ಗೆ ನೆರೆಯ ರಾಜ್ಯಗಳ ನಡುವೆ ಒಮ್ಮತ ಮೂಡದೇ ಇರುವುದರಿಂದ ಈ ಬಗ್ಗೆ ಚರ್ಚೆ ನಡೆಸಲು ಸಾಧ್ಯವಾಗಿಲ್ಲ. ಇದು ಕೇಂದ್ರದ ತಪ್ಪಲ್ಲ.

    ಕಳಸಾ ಮತ್ತು ಬಂಡೂರ ನಾಲೆ ಯೋಜನೆ ಸಮಗ್ರ ಯೋಜನಾ ವರದಿ(DPR) ಈಗಾಗಲೇ ಕೇಂದ್ರ ಜಲ ಆಯೋಗ (ಸಿಡಬ್ಲ್ಯೂಸಿ) ಕೆಲವು ಷರತ್ತುಗಳೊಂದಿಗೆ ಅನುಮೋದಿಸಿದೆ ಮತ್ತು ಅದನ್ನು ಕರ್ನಾಟಕ ಸರ್ಕಾರಕ್ಕೆ ಈಗಾಗಲೇ ತಿಳಿಸಲಾಗಿದೆ. ಈ ಮಾಹಿತಿಯನ್ನು ನೀವು ಉದ್ದೇಶಪೂರ್ವಕವಾಗಿ ಮುಚ್ಚಿಟ್ಟಿದ್ದೀರಲ್ಲವೇ ?

    2017-17ರಲ್ಲಿ ಪ್ರಧಾನ ಮಂತ್ರಿ ಕೃಷಿ ಸಿಂಚಾಯಿ ಯೋಜನೆ (PMKSY) ತ್ವರಿತ ನೀರಾವರಿ ಕಾರ್ಯಕ್ರಮದ ಅಡಿಯಲ್ಲಿ ಆದ್ಯತೆ ನೀಡಲಾದ ಕರ್ನಾಟಕದ 5 ಯೋಜನೆಗಳಲ್ಲಿ, ಮೂರು ಪೂರ್ಣಗೊಂಡಿದೆ. ಎರಡು ಕಾಮಗಾರಿ ಚಾಲನೆಯಲ್ಲಿದೆ. ಈ ಯೋಜನೆಗಾಗಿ ಕೇಂದ್ರದ ಪಾಲಿನ 1238.30 ಕೋಟಿ ರೂ.ಗಳ ಪೈಕಿ 1190.05 ಕೋಟಿ ರೂ. ಈಗಾಗಲೇ ಬಿಡುಗಡೆಯಾಗಿದೆ. ಇದು ರಾಜ್ಯದ ಹಣಕಾಸು ಸಚಿವಾಲಯವನ್ನೂ ನಿಭಾಯಿಸುತ್ತಿರುವ ನಿಮ್ಮ ಗಮನಕ್ಕೆ ಬಾರದಿರುವುದು ಚೋದ್ಯವಲ್ಲವೇ ?

    ಅಟಲ್ ಭೂ ಜಲ ಯೋಜನೆ ಅಡಿಯಲ್ಲಿ, ಕರ್ನಾಟಕಕ್ಕೆ ಕೇಂದ್ರದಿಂದ ಈಗಾಗಲೇ 629.54 ಕೋಟಿ ರೂ. ಬಿಡುಗಡೆ ಮಾಡಲಾಗಿದೆ. ಆದರೆ 2023ರ ಅಕ್ಟೋಬರ್‌ 10ರವರೆಗೆ  ಕೇವಲ 274.05 ಕೋಟಿ ರೂ. ಮಾತ್ರ ಬಳಕೆ ಮಾಡಿಕೊಂಡಿದ್ದೀರಿ.

    ಸತ್ಯದ ಘೋರಿ ಕಟ್ಟಿ ಸುಳ್ಳಿನ ವಿಜೃಂಭಣೆ ಮಾಡುವಾಗ ಕನಿಷ್ಠ ಆತ್ಮಸಾಕ್ಷಿಯನ್ನಾದರೂ ಪ್ರಶ್ನಿಸಿಕೊಳ್ಳಿ. ಇಲ್ಲವಾದರೆ ಸುಳ್ಳಿನ ಉಪಾಸನೆಯೇ ನಿಮ್ಮ ನಿತ್ಯಕರ್ಮವೆಂದು‌‌ ಕರ್ನಾಟಕದ ಜನ ನಿಮ್ಮ ಬಗ್ಗೆ ಕನಿಕರ ಹಾಗೂ ತಿರಸ್ಕಾರವನ್ನು ತೋರಬಹುದು.

     

     

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ತ.ನಾಡಿಗೆ ಕಾವೇರಿ ನೀರು ಹರಿಸದಂತೆ ಮನವಿ – ಗಜೇಂದ್ರ ಸಿಂಗ್ ಭೇಟಿಯಾದ ರಾಜ್ಯ ರೈತರ ನಿಯೋಗ

    ತ.ನಾಡಿಗೆ ಕಾವೇರಿ ನೀರು ಹರಿಸದಂತೆ ಮನವಿ – ಗಜೇಂದ್ರ ಸಿಂಗ್ ಭೇಟಿಯಾದ ರಾಜ್ಯ ರೈತರ ನಿಯೋಗ

    ನವದೆಹಲಿ: ಬರಗಾಲದ ಸಂಕಷ್ಟದಲ್ಲಿರುವ ರೈತರಿಗೆ, ಜನಸಾಮಾನ್ಯರಿಗೆ ನೀರು ಉಳಿಸದೆ, ಕಾವೇರಿ ನೀರು ತಮಿಳುನಾಡಿಗೆ ಹರಿಸಿ ರಾಜ್ಯದ ರೈತರಿಗೆ ಕುಡಿಯುವ ನೀರಿಗೆ ಸಂಕಷ್ಟ ತಂದಿರುವ ನೀತಿಯನ್ನು ಸರಿಪಡಿಸುವಂತೆ ಹಾಗೂ ಕಾವೇರಿ ನೀರು ನಿರ್ವಹಣಾ ಮಂಡಳಿ (Cauvery Water Management Board) ಅವೈಜ್ಞಾನಿಕ ಆದೇಶಕ್ಕೆ ತಡೆ ನೀಡುವಂತೆ ಕರ್ನಾಟಕ ಜಲ ಸಂರಕ್ಷಣಾ ಸಮಿತಿ ಪರವಾಗಿ ರೈತ ನಾಯಕ ಕುರುಬೂರು ಶಾಂತಕುಮಾರ್ (Kuruburu Shanthakumar) ಕೇಂದ್ರ ಜಲ ಸಂಪನ್ಮೂಲ ಸಚಿವ ಗಜೇಂದ್ರ ಸಿಂಗ್ ಶೇಖಾವತ್ (Gajendra Singh Shekhawat) ಅವರಿಗೆ ಮನವಿ ಮಾಡಿದ್ದಾರೆ.

    ದೆಹಲಿಯಲ್ಲಿ (New Delhi) ಶೇಖಾವತ್ ನಿವಾಸದಲ್ಲಿ ಭೇಟಿಯಾದ ಕರ್ನಾಟಕ ಜಲ ಸಂರಕ್ಷಣಾ ಸಮಿತಿ ನಿಯೋಗ, ಕಾವೇರಿ ನೀರು ಹರಿಸಲು ಪ್ರಾಧಿಕಾರ ನೀಡಿರುವ ಆದೇಶಕ್ಕೆ ತಡೆ ನೀಡುವಂತೆ ಮನವಿ ಮಾಡಿತು. ಸುಮಾರು 20 ನಿಮಿಷಗಳ ಚರ್ಚೆಯಲ್ಲಿ ರಾಜ್ಯದ ಬರ ಪರಿಸ್ಥಿತಿ ಬಗ್ಗೆ ಸಮಾಲೋಚನೆ ನಡೆಸಿದರು. ಇದನ್ನೂ ಓದಿ: ಪಂಚ ರಾಜ್ಯಗಳ ಚುನಾವಣಾ ದಿನಾಂಕ ಪ್ರಕಟ – ನ.7 ಕ್ಕೆ ಮೊದಲ, ನ.30 ರಂದು ಕೊನೆ ಚುನಾವಣೆ

    ಕರ್ನಾಟಕ ರಾಜ್ಯದಲ್ಲಿ ಮಳೆ ಕಡಿಮೆಯಾಗಿದೆ. ಬರಗಾಲಕ್ಕೆ 195 ತಾಲೂಕುಗಳು ತುತ್ತಾಗಿ 250ಕ್ಕೂ ಹೆಚ್ಚು ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಕಾವೇರಿ ಜಲನಯನ ಭಾಗದ 38 ತಾಲೂಕುಗಳು ಬರಗಾಲಕ್ಕೆ ತುತ್ತಾಗಿ ರೈತರು ಯಾವುದೇ ಬೆಳೆ ಬೆಳೆದಿಲ್ಲ. ಕಾವೇರಿ ವ್ಯಾಪ್ತಿಗೆ ಬರುವ ಬೆಂಗಳೂರಿನಲ್ಲಿ 1.30 ಕೋಟಿ ಜನರಿಗೆ ಕುಡಿಯುವ ನೀರಿನ ಸಂಕಷ್ಟ ಬಂದಿದೆ. ಇಂಥ ಸಂದಿಗ್ಧ ಸಮಯದಲ್ಲಿ ಕಾವೇರಿ ನೀರು ನಿರ್ವಹಣಾ ಮಂಡಳಿ ಪ್ರತಿನಿತ್ಯ 5,000 ಕ್ಯೂಸೆಕ್ ನೀರು ತಮಿಳುನಾಡಿಗೆ ಹರಿಸಬೇಕೆಂಬ ಅವೈಜ್ಞಾನಿಕ ಆದೇಶವನ್ನು ಹೊರಡಿಸಿತ್ತು. ಇದನ್ನೂ ಓದಿ: ಇಸ್ರೇಲ್-ಹಮಾಸ್ ಯುದ್ಧ; ಚಿನ್ನ, ಬೆಳ್ಳಿ ದರದ ಮೇಲೆ ಎಫೆಕ್ಟ್

    ಆದೇಶ ಪಾಲನೆಗಾಗಿ ತಮಿಳನಾಡಿಗೆ ಕಾವೇರಿ ನೀರನ್ನು ಹರಿಸಲಾಗುತ್ತಿದ್ದು, ಇದರಿಂದ ಕಾವೇರಿ ಅಚ್ಚುಕಟ್ಟು ಪ್ರದೇಶದ ಜಲಾಶಯದಲ್ಲಿ ನೀರು ಕಡಿಮೆಯಾಗುತ್ತಿದೆ. ಇದರಿಂದ ಜನರಿಗೆ ಆತಂಕವಾಗಿದೆ. ಪ್ರಾಧಿಕಾರದ ನಿರ್ಧಾರದ ವಿರುದ್ಧ ಬೆಂಗಳೂರು ನಗರದಲ್ಲಿ ಎರಡು ಬಾರಿ ಜನಸಾಮಾನ್ಯರೇ ಶಾಂತಿಯುತ ಬಂದ್ ಆಚರಣೆ ಮಾಡಿ ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ. ಇದನ್ನೂ ಓದಿ: ತ.ನಾಡಿಗೆ ಕಾವೇರಿ ನೀರು ಬಿಡುವಂತೆ ಕರ್ನಾಟಕಕ್ಕೆ ಕೇಂದ್ರ ನಿರ್ದೇಶನ ನೀಡಬೇಕು: ವಿಧಾನಸಭೆಯಲ್ಲಿ ಸ್ಟಾಲಿನ್‌ ನಿರ್ಣಯ ಮಂಡನೆ

    ರಾಜ್ಯದಲ್ಲಿ ಹೋರಾಟದ ನಂತರವೂ ಮಂಡಳಿ 3,000 ಕ್ಯೂಸೆಕ್ ನೀರು ಬಿಡಬೇಕೆಂಬ ಆದೇಶ ನೀಡಿರುವುದನ್ನು ಒಪ್ಪಿ, ರಾಜ್ಯ ಸರ್ಕಾರ ಮತ್ತೆ ನೀರು ಹರಿಸುತ್ತಿರುವುದನ್ನು ತಕ್ಷಣ ನಿಲ್ಲಿಸುವಂತೆ, ಕುಡಿಯುವ ನೀರು ಉಳಿಸುವಂತೆ ಶೇಖಾವತ್ ಅವರಿಗೆ ಮನವಿ ಮಾಡಲಾಯಿತು. ಇದೇ ವೇಳೆ ಮೇಕೆದಾಟು ಯೋಜನೆ ಬಗ್ಗೆ ಚರ್ಚಿಸಿ ಅಣೆಕಟ್ಟು ನಿರ್ಮಾಣಕ್ಕೆ ಕೇಂದ್ರ ಸರ್ಕಾರ ಅನುಮತಿ ನೀಡಬೇಕು. ಇದರಿಂದ ನೀರಿನ ಬವಣೆ ಕಡಿಮೆಯಾಗಲಿದೆ ಎಂದು ಮನವಿ ಪತ್ರದ ಮೂಲಕ ಮನವಿ ಮಾಡಿದ್ದಾರೆ. ಇದನ್ನೂ ಓದಿ: ಇಸ್ರೇಲ್‍ನಲ್ಲಿ ಸಿಲುಕಿದ್ದ 18,000 ಭಾರತೀಯರು ಸೇಫ್

    ಸಭೆಯ ಬಳಿಕ ಮಾತನಾಡಿದ ಕಬ್ಬು ಬೆಳೆಗಾರರ ಅಧ್ಯಕ್ಷ ಕುರುಬೂರು ಶಾಂತಕುಮಾರ್, ಕಾವೇರಿ ಸಮಸ್ಯೆಗಳ ಬಗ್ಗೆ ಸುದೀರ್ಘವಾಗಿ ಮಾತುಕತೆ ನಡೆಸಿದೆ. ಮುಂದಿನ ಸಭೆಯಲ್ಲಿ ನೀರು ಹರಿಸದಂತೆ ಮನವಿ ಮಾಡಿದೆ. ಮೇಕೆದಾಟು ಬಗ್ಗೆ ಗಂಭೀರವಾಗಿ ಪರಿಶೀಲಿಸಲು ಕೋರಿದ್ದೇವೆ. ಜಲಶಕ್ತಿ ಸಚಿವರು ಸಕರಾತ್ಮಕವಾಗಿ ಸ್ಪಂದಿಸಿದ್ದಾರೆ ಎಂದರು. ಇದನ್ನೂ ಓದಿ: 5 ರಾಜ್ಯಗಳ ವಿಧಾನಸಭಾ ಚುನಾವಣೆ ದಿನಾಂಕ ಇಂದು ಪ್ರಕಟ

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಕಾವೇರಿ ನೀರು ಹಂಚಿಕೆ – ಕೇಂದ್ರ ಜಲ ಶಕ್ತಿ ಸಚಿವರ ಪ್ರತಿಕ್ರಿಯೆ ಸಕಾರಾತ್ಮಕ: ಸಿದ್ದರಾಮಯ್ಯ

    ಕಾವೇರಿ ನೀರು ಹಂಚಿಕೆ – ಕೇಂದ್ರ ಜಲ ಶಕ್ತಿ ಸಚಿವರ ಪ್ರತಿಕ್ರಿಯೆ ಸಕಾರಾತ್ಮಕ: ಸಿದ್ದರಾಮಯ್ಯ

    ನವದೆಹಲಿ: ಕಾವೇರಿ ನೀರು (Cauvery Water) ಹಂಚಿಕೆ ಸಂಬಂಧ ಕೇಂದ್ರ ಜಲ ಶಕ್ತಿ ಸಚಿವ ಗಜೇಂದ್ರ ಸಿಂಗ್ ಶೆಖಾವತ್ (Gajendra Singh Shekhawat) ಅವರೊಂದಿಗೆ ಸಭೆ ನಡೆಸಿದ್ದೇವೆ. ಸದ್ಯಕ್ಕೆ ಕೇಂದ್ರ ಸಚಿವರು ಸಕಾರಾತ್ಮಕವಾಗಿ ಪ್ರತಿಕ್ರಿಯಿಸಿದ್ದಾರೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಮತ್ತು ಜಲ ಸಂಪನ್ಮೂಲ ಖಾತೆ ಸಚಿವ ಡಿಕೆ ಶಿವಕುಮಾರ್ (DK Shivakumar) ಅವರು ಜಂಟಿ ಸುದ್ದಿಗೋಷ್ಠಿಯಲ್ಲಿ ವಿವರಿಸಿದರು.

    ಕೇಂದ್ರ ಜಲ ಶಕ್ತಿ ಸಚಿವ ಗಜೇಂದ್ರ ಸಿಂಗ್ ಶೆಖಾವತ್ ಅವರ ಜೊತೆಗಿನ ಸಭೆಯ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಿಎಂ, ನಮ್ಮ ಸಂಕಷ್ಟದ ಪರಿಸ್ಥಿತಿಯನ್ನು ಕೇಂದ್ರ ಸಚಿವರಿಗೆ ಸಮರ್ಥವಾಗಿ ತಿಳಿಸಿದ್ದೇವೆ. ಅವರ ಸ್ಪಂದನೆ ಸಕಾರಾತ್ಮಕವಾಗಿತ್ತು. ನಾವು ಪ್ರಧಾನಿ ಅವರ ಸಮಯವನ್ನೂ ಕೇಳಿದ್ದೇವೆ. ಸಮಯ ಸಿಕ್ಕರೆ ಭೇಟಿ ಆಗುತ್ತೇವೆ. ನಾಲ್ಕೂ ರಾಜ್ಯದವರನ್ನು ಕರೆಸಿ ಮಾತನಾಡಲು ಮಧ್ಯ ಪ್ರವೇಶಿಸಿ ಎಂದು ಪ್ರಧಾನಿಗೆ ಮನವಿ ಮಾಡುತ್ತೇವೆ ಎಂದರು. ಇದನ್ನೂ ಓದಿ: ಸುಪ್ರೀಂ ತೀರ್ಪಿನಲ್ಲಿ ಕರ್ನಾಟಕಕ್ಕೆ ಹಿನ್ನಡೆ- KRS ಡ್ಯಾಂ ಬಳಿ ಬಿಗಿ ಭದ್ರತೆ

    ನಮಗೆ ಬೆಳೆ ರಕ್ಷಣೆ, ಕುಡಿಯುವ ನೀರು ಮತ್ತು ಕೈಗಾರಿಕೆಗಳಿಗೆ 106 ಟಿಎಂಸಿ ನೀರು ಅಗತ್ಯವಿದೆ. ಆದರೆ ನಮ್ಮ ನಾಲ್ಕೂ ಜಲಾಶಯಗಳಿಂದ ಕೇವಲ 51 ಟಿಎಂಸಿ ನೀರು ಇದೆ ಎನ್ನುವುದನ್ನು ಕೇಂದ್ರ ಸಚಿವರಿಗೆ ಮನವರಿಕೆ ಮಾಡಿಸಿದ್ದೇವೆ. 123 ವರ್ಷಗಳಲ್ಲೇ ಅತ್ಯಂತ ಕಡಿಮೆ ಮಳೆ ಆಗಸ್ಟ್ ಮತ್ತು ಸೆಪ್ಟೆಂಬರ್ ತಿಂಗಳಿನಲ್ಲಿ ಬಿದ್ದು ಜಲಾಶಯಗಳ ಒಳ ಹರಿವು ಇಲ್ಲವಾಗಿದೆ ಎಂದು ಸಚಿವರ ಗಮನ ಸೆಳೆದಿದ್ದೇವೆ. ನಮ್ಮ ರೈತರು ಮತ್ತು ನಾನಾ ಸಂಘಟನೆಗಳು ಪ್ರತಿಭಟನೆ ನಡೆಸುತ್ತಿವೆ. ಬಿಡುವುದಕ್ಕೆ ನಮ್ಮ ಬಳಿ ನೀರೇ ಇಲ್ಲ ಎಂದೂ ಹೇಳಿದ್ದೇವೆ ಎಂದು ತಿಳಿಸಿದರು. ಇದನ್ನೂ ಓದಿ: ಕರ್ನಾಟಕಕ್ಕೆ ಸುಪ್ರೀಂ ಕೋರ್ಟ್‌ ಶಾಕ್‌ – ತ.ನಾಡಿಗೆ ನಿತ್ಯ 5,000 ಕ್ಯೂಸೆಕ್‌ ನೀರು ಹರಿಸುವಂತೆ ಸೂಚನೆ

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಸಚಿವ ಶಾಂತಿ ಧರಿವಾಲ್‌ರನ್ನು ಅರಬ್ಬೀ ಸಮುದ್ರಕ್ಕೆ ಎಸೆಯಬೇಕು: ಗಜೇಂದ್ರ ಸಿಂಗ್ ಶೆಖಾವತ್

    ಸಚಿವ ಶಾಂತಿ ಧರಿವಾಲ್‌ರನ್ನು ಅರಬ್ಬೀ ಸಮುದ್ರಕ್ಕೆ ಎಸೆಯಬೇಕು: ಗಜೇಂದ್ರ ಸಿಂಗ್ ಶೆಖಾವತ್

    ಜೈಪುರ: ರಾಜಸ್ಥಾನ ಸಚಿವ ಶಾಂತಿ ಧರಿವಾಲ್ (Shanti Dhariwal) ವಿರುದ್ಧ ಕೆಂದ್ರ ಸಚಿವ ಗಜೇಂದ್ರ ಸಿಂಗ್ ಶೇಖಾವತ್ (Gajendra Singh Shekhawat) ವಾಗ್ದಾಳಿ ನಡೆಸಿದ್ದಾರೆ.

    ಬಿಕಾನೆರ್‌ನಲ್ಲಿ ಸಾರ್ವಜನಿಕ ರ‍್ಯಾಲಿ ಉದ್ದೇಶಿಸಿ ಮಾತನಾಡಿದ ಅವರು, ಧರಿವಾಲ್ ಅವರು ಕಳೆದ ವರ್ಷ ನೀಡಿದ್ದ ‘ಅತ್ಯಾಚಾರಿಗಳೊಂದಿಗೆ ಪುರುಷತ್ವ ಥಳಕು ಹಾಕಿಕೊಂಡಿದೆ’ ಎಂಬ ಹೇಳಿಕೆಯನ್ನು ಉಲ್ಲೇಖಿಸಿ ಗರಂ ಆದರು. ಧರಿವಾಲ್ ಅವರನ್ನು ಅರಬ್ಬೀ ಸಮುದ್ರಕ್ಕೆ ಎಸೆಯಬೇಕು ಎಂದು ಕಿಡಿಕಾರಿದರು.

    ರಾಜಸ್ಥಾನವು ನಿಜವಾಗಿಯೂ ಪುರುಷರ ರಾಜ್ಯವಾಗಿದೆ. ಇಲ್ಲಿರುವ ಪುರುಷತ್ವದ ಕಾರಣಕ್ಕಾಗಿಯೇ ಹಿಂದುತ್ವ, ಸನಾತನ ಧರ್ಮವು ಇಂದು ಭಾರತದಲ್ಲಿ ಜೀವಂತವಾಗಿದೆ ಎಂದು ತಿಳಿಸಿದ್ದಾರೆ.

    ಪೃಥ್ವಿರಾಜ್ ಚೌಹಾಣ್, ಬಪ್ಪಾ ರಾವಲ್, ರಾಣಾ ಸಂಗ, ವೀರ್ ದುರ್ಗಾದಾಸ್ ರಾವ್ ಚಂದ್ರಸೇನ್, ಮಹಾರಾಣಾ ಪ್ರತಾಪ್ ಅವರು ರಾಜಸ್ಥಾನದಲ್ಲಿ ಹುಟ್ಟಿದಿದ್ದರೆ ಇಂದು ನಮ್ಮ ಹೆಸರು ಬೇರೆಯದೇ ಆಗಿರುತ್ತಿತ್ತು ಎಂದು ಶೇಖಾವತ್ ಹೇಳಿದ್ದಾರೆ. ಇದನ್ನೂ ಓದಿ: ಚುನಾವಣೆಯಲ್ಲಿ ಹೊರಗಿನವರು ನಮ್ಮವರೂ ಮೋಸ ಮಾಡ್ತಾರೆ, ಅನುಭವವಿದೆ: ಪರಮೇಶ್ವರ್

    ರಾಜಸ್ಥಾನದ ಪುರುಷತ್ವಕ್ಕೆ ಕಪ್ಪು ಮಸಿ ಬಳಿಯುವ ಕೆಲಸವನ್ನು ಮಾಡಿದವರು ಯಾರು? ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ನೇತೃತ್ವದ ಸರ್ಕಾರ ಈ ಕೆಲಸ ಮಾಡಿದೆ. ಇಂದಿಗೂ ಧರಿವಾಲ್ ಅವರು ಸಂಪುಟದ ಭಾಗವಾಗಿರುವುದು ದುರದೃಷ್ಟಕರ. ಅವರು ಇನ್ನೂ ಸಚಿವರಾಗಿದ್ದಾರೆ. ಅವರನ್ನು ಹೊರಹಾಕಬೇಕು ಇಲ್ಲವೇ ಅರಬ್ಬಿ ಸಮುದ್ರಕ್ಕೆ ಎಸೆಯಬೇಕು ಎಂದು ಶೇಖಾವತ್ ವಾಗ್ದಾಳಿ ನಡೆಸಿದರು.

    ಧರಿವಾಲ್ ಹೇಳಿದ್ದೇನು..?: 2022ರ ಮಾರ್ಚ್ ನಲ್ಲಿ ರಾಜ್ಯ ವಿಧಾನಸಭೆಯಲ್ಲಿ ಅತ್ಯಾಚಾರ ಪ್ರಕರಣವನ್ನು ಸಮರ್ಥಿಸಿಕೊಳ್ಳಲು ರಾಜಸ್ಥಾನ ಪುರುಷರ ಪ್ರದೇಶ ಎಂದು ಹೇಳಿಕೆ ನೀಡಿದ್ದರು.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಪೆನ್ನಾರ್ ಟ್ರಿಬ್ಯುನಲ್ ರಚನೆ ವಿಚಾರ – ಕೇಂದ್ರ ಜಲಶಕ್ತಿ ಸಚಿವರನ್ನು ಭೇಟಿಯಾಗಿ ಡಿ.ಕೆ ಶಿವಕುಮಾರ್ ವಿರೋಧ

    ಪೆನ್ನಾರ್ ಟ್ರಿಬ್ಯುನಲ್ ರಚನೆ ವಿಚಾರ – ಕೇಂದ್ರ ಜಲಶಕ್ತಿ ಸಚಿವರನ್ನು ಭೇಟಿಯಾಗಿ ಡಿ.ಕೆ ಶಿವಕುಮಾರ್ ವಿರೋಧ

    ನವದೆಹಲಿ: ಕೇಂದ್ರ ಜಲ ಸಂಪನ್ಮೂಲ ಸಚಿವ ಗಜೇಂದ್ರ ಸಿಂಗ್‌ ಶೇಖಾವತ್‌ (Gajendra Singh Shekhawat) ಅವರನ್ನು ಭೇಟಿ ಮಾಡಿ ರಾಜ್ಯದ ಹಲವು ಜಲ ಯೋಜನೆಗಳ ಬಗ್ಗೆ ಚರ್ಚಿಸಿದೆ ಎಂದು ಉಪ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ (D.K.Shivakumar) ಹೇಳಿದ್ದಾರೆ. ಕರ್ನಾಟಕ ಭವನದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು ಈ ಬಗ್ಗೆ ಮಾಹಿತಿ ನೀಡಿದರು‌.

    ಪೆನ್ನಾರ್ ನದಿ ನ್ಯಾಯಾಧಿಕರಣ ಮಾಡುವುದಕ್ಕೆ ತಮಿಳುನಾಡು (Tamil Nadu) ತಕರಾರು ತೆಗೆದಿದೆ. ಸುಪ್ರೀಂ ಕೋರ್ಟ್ (Supreme Court) ಜುಲೈ 5 ರೊಳಗೆ ಟ್ರಿಬುನಲ್‌ ಮಾಡಲು ಹೇಳಿದೆ. ಕರ್ನಾಟಕದ ಮಾರ್ಕಂಡೇಯ ಆಣೆಕಟ್ಟು ಕುಡಿಯುವ ನೀರಿನ ಡ್ಯಾಂ ಪ್ರಾಜೆಕ್ಟ್, ಟ್ರಿಬುನಲ್ ರಚನೆಯಿಂದ ಸಮಸ್ಯೆ ಬಗೆಹರಿಯುವುದಿಲ್ಲ. ಹೀಗಾಗಿ ಟ್ರಿಬ್ಯುನಲ್ ರಚನೆ ಬೇಡ ಎಂದು ಮನವಿ ಮಾಡಿದೆ. ಇದನ್ನೂ ಓದಿ: 4 ತಿಂಗಳಲ್ಲಿ ಮೂರನೇ ಬಾರಿಗೆ ಸಂಪುಟಕ್ಕೆ ಸರ್ಜರಿ- ಕೇಜ್ರಿವಾಲ್ ಬಳಿಕ ಅತಿಶಿ ಪ್ರಭಾವಿ ಸಚಿವೆ

    ಬೆಂಗಳೂರು ವೇಸ್ಟ್ ವಾಟರ್ ಟ್ರೀಟ್ ಮಾಡಿ ಕೋಲಾರಕ್ಕೆ‌ ಕಳುಹಿಸುತ್ತಿದ್ದೇವೆ. ಕೇಂದ್ರ ಸರ್ಕಾರವೇ ಈ ಯೋಜನೆಗೆ ಪ್ರಶಂಸೆ ವ್ಯಕ್ತಪಡಿಸಿತ್ತು. ಆದರೆ ತಮಿಳುನಾಡು ಸರ್ಕಾರ ತಕರಾರು ಎತ್ತಿದೆ. ಇದರಿಂದ ನಮ್ಮ ಹಲವು ಯೋಜನೆಗಳಿಗೆ ತೊಂದರೆಯಾಗುತ್ತಿದೆ. ವಾಸ್ತವಾಂಶ ಅರ್ಥ ಮಾಡಿಕೊಂಡು ಮಾತುಕತೆ ಮೂಲಕ ಬಗೆಹರಿಸಬೇಕು ಎಂದು ಮನವಿ ಮಾಡಿದೆ ಎಂದರು.

    ಕೃಷ್ಣ ನದಿ ನೀರು ಹಂಚಿಕೆ ಅಧಿಸೂಚನೆ ಹೊರಡಿಸುವ ಬಗ್ಗೆ ಸಚಿವರ ಗಮನಕ್ಕೆ ತಂದಿದೆ. ಮಹದಾಯಿ ಯೋಜನೆಗೆ ಪರಿಸರ ಅನುಮತಿ ಸಿಕ್ಕಿಲ್ಲ. ಮುಂದಿನ ದಿನಗಳಲ್ಲಿ ಅರಣ್ಯ ಸಚಿವರನ್ನು ಭೇಟಿ ಮಾಡುತ್ತೇನೆ. ಮೇಕೆದಾಟು ವಿಚಾರವಾಗಿ ಕಾನೂನು ತಜ್ಞರ ಜೊತೆ ಮಾತನಾಡಬೇಕು. ಯೋಜನೆ ತಡವಾದಂತೆ ವೆಚ್ಚ ಹೆಚ್ಚಾಗುತ್ತಿದೆ ರಾಜಕಾರಣದ ಪ್ರತಿಷ್ಠೆ ಹೆಚ್ಚಾಗುತ್ತಿದೆ. ಬೆಂಗಳೂರಿಗರಿಗೆ ಕುಡಿಯುವುದಕ್ಕೆ ನೀರಿಲ್ಲ. ಸದ್ಯ ಯಾವು ಸಮಸ್ಯೆ ಇಲ್ಲ. ಮಳೆಯ ಪ್ರಮಾಣ ಆಧರಿಸಿ ಮುಂದಿನ ದಿನಗಳಲ್ಲಿ ಲೆಕ್ಕಚಾರ ಮಾಡಲಾಗುವುದು. ಮುಂದಿನ ತಿಂಗಳು ಎಲ್ಲ ರಾಜ್ಯಗಳಿಂದ ವಿಶೇಷ ತಂಡಗಳು ಬರ್ತಿವೆ. ಇದೇ ವೇಳೆ ಕೇಂದ್ರ, ತಮಿಳುನಾಡು ಟೀಂಗಳು ಆಗಮಿಸಲಿದ್ದು ಕೆಆರ್‌ಎಸ್ ವಾಸ್ತವ ಪರಿಸ್ಥಿತಿ ತೋರಿಸಲಾಗುವುದು ಎಂದು ಹೇಳಿದರು. ಇದನ್ನೂ ಓದಿ: ಪ್ರತಿ ಆರ್ಡರ್‌ನಲ್ಲೂ ಚಾಕ್ಲೇಟ್ ಇಟ್ಟು ಹುಟ್ಟುಹಬ್ಬ ಆಚರಿಸಿದ ಝೋಮ್ಯಾಟೋ ಸಿಬ್ಬಂದಿ!

    ಕೃಷ್ಣ ಮೇಲ್ದಂಡೆ ಯೋಜನೆಗೆ ಐದು ಸಾವಿರ ಕೋಟಿ ಕೇಂದ್ರ ಸರ್ಕಾರ ಅನುದಾನ ಬಿಡುಗಡೆ, ಎಐಬಿಪಿಯಿಂದ ಅನುದಾನ ಪಡೆಯಲು ಕೇಂದ್ರ ಸರ್ಕಾರ ಹೇಳಿದೆ. ಆದರೆ ಇದು ರಾಷ್ಟ್ರೀಯ ಯೋಜನೆ ಎಐಬಿಪಿಯಲ್ಲಿ 60:40 ಹಣ ನೀಡಲಾಗುತ್ತೆ. ಹೀಗಾಗಿ ಹಣಕಾಸು ಇಲಾಖೆ ಜೊತೆಗೆ ಚರ್ಚಿಸಲು ನಿರ್ಧರಿಸಿದೆ. ಇನ್ನು ಕೆಲವು ಬೇರೆ ಬೇರೆ ಯೋಜನೆಗಳಿಗೆ ಹೆಚ್ಚಿನ ಅನುದಾನಕ್ಕೆ ಮನವಿ ಮಾಡಿದೆ ಎಂದು ತಿಳಿಸಿದರು‌.

    ಕುಮಾರಸ್ವಾಮಿ ವರ್ಗಾವಣೆ ದಂಧೆ ಆರೋಪಕ್ಕೆ ಪ್ರತಿಕ್ರಿಯಿಸಿದ ಡಿ.ಕೆ ಶಿವಕುಮಾರ್, ಕೆಲವು ಕೆಲಸದ ಒತ್ತಡದಲ್ಲಿ ಸಿಎಂ ಕಚೇರಿಯಿಂದ ಆದೇಶಗಳಾಗಿರುತ್ತವೆ. ಹಲವಾರು ಜನರು ಮನವಿ ಮಾಡಿರುತ್ತಾರೆ. ಮನವಿ ಮೇರೆಗೆ ಪತ್ರ ನೀಡಿರುತ್ತಾರೆ. ಅವು ಡಬಲ್ ಆಗಿರುವ ಸಾಧ್ಯತೆ ಇರುತ್ತೆ. ಕೆಲವೊಮ್ಮೆ ನನ್ನ ಕಚೇರಿಯಲ್ಲಿ ಆಗಿರುತ್ತೆ, ನಾನು ಈವರೆಗೂ ಒಂದು ವರ್ಗಾವಣೆ ಮಾಡಿಲ್ಲ. ಯಾರ‍್ಯಾರಿಗೆ ಪತ್ರ ಹೋಗಿದೆ ಪರಿಶೀಲನೆ ಮಾಡಲು ಹೇಳಿದ್ದೇನೆ. ಪತ್ರದ ಸಂಖ್ಯೆ ಪರಿಶೀಲಿಸಲು ಹೇಳಿದೆ ಎಂದರು.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಮೇಕೆದಾಟು ಯೋಜನೆಗೆ ಅನುಮತಿ ನೀಡಬೇಡಿ – ಕೇಂದ್ರಕ್ಕೆ ತ.ನಾಡು ಸರ್ವಪಕ್ಷ ನಿಯೋಗದಿಂದ ಒತ್ತಡ

    ಮೇಕೆದಾಟು ಯೋಜನೆಗೆ ಅನುಮತಿ ನೀಡಬೇಡಿ – ಕೇಂದ್ರಕ್ಕೆ ತ.ನಾಡು ಸರ್ವಪಕ್ಷ ನಿಯೋಗದಿಂದ ಒತ್ತಡ

    ನವದೆಹಲಿ: ಮೇಕೆದಾಟು ಯೋಜನೆಗೆ ತಡೆ ನೀಡುವಂತೆ ಕೇಂದ್ರ ಸರ್ಕಾರಕ್ಕೆ ತಮಿಳುನಾಡು ಸರ್ವ ಪಕ್ಷಗಳ ನಿಯೋಗ ಒತ್ತಾಯಿಸಿದೆ. ಇಂದು ಕೇಂದ್ರ ಜಲಶಕ್ತಿ ಸಚಿವ ಗಜೇಂದ್ರ ಸಿಂಗ್ ಶೇಖಾವತ್ ಭೇಟಿ ಮಾಡಿದ ಸದಸ್ಯರು ಆಣೆಕಟ್ಟು ನಿರ್ಮಾಣ ಮಾಡುವ ಕರ್ನಾಟಕದ ನಡೆ ವಿರುದ್ಧ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

    ತಮಿಳುನಾಡು ಜಲ ಸಂಪನ್ಮೂಲ ಖಾತೆ ಸಚಿವ ದೊರೆ ಮುರುಗನ್ ನೇತೃತ್ವದಲ್ಲಿ ದೆಹಲಿಗೆ ತೆರಳಿದ್ದ 13 ಪಕ್ಷಗಳ ಸದಸ್ಯರು ಶ್ರಮಶಕ್ತಿ ಭವನದಲ್ಲಿ ಕೇಂದ್ರ ಸಚಿವರನ್ನು ಭೇಟಿಯಾಗಿ ಒಂದು ಗಂಟೆಗೂ ಅಧಿಕ ಸಮಯದ ಚರ್ಚೆ ಬಳಿಕ ಮನವಿ ಸಲ್ಲಿಸಿದರು. ಕರ್ನಾಟಕದಲ್ಲಿ ಮೇಕೆದಾಟು ಆಣೆಕಟ್ಟು ನಿರ್ಮಾಣದಿಂದ ತಮಿಳುನಾಡಿಗೆ ತೊಂದರೆಯಾಗಲಿದೆ. ಸುಪ್ರೀಂಕೋರ್ಟ್ ಆದೇಶದಂತೆ ಕರ್ನಾಟಕ ನೀರು ನೀಡಲು ಸಾಧ್ಯವಾಗುವುದಿಲ್ಲ, ಇದರಿಂದ ತಮಿಳುನಾಡಿಗೆ ಕುಡಿಯುವ ನೀರಿನ ತೊಂದರೆಯಾಗಲಿದೆ ಮತ್ತು ಕೃಷಿ ಮೇಲೆ ಪರಿಣಾಮ ಬೀರಲಿದ್ದು ರೈತರಿಗೆ ಕಷ್ಟವಾಗಲಿದೆ ಎಂದು ತಿಳಿಸಿದೆ. ಇದನ್ನೂ ಓದಿ: ಮೇಕೆದಾಟು ಯೋಜನೆ – ಮೂರು ಮಹತ್ವದ ನಿರ್ಣಯಗಳಿಗೆ ತಮಿಳುನಾಡು ಅಂಗೀಕಾರ

    ಈ ನಡುವೆ ಕರ್ನಾಟಕ ಸಿಎಂ ಬಿ.ಎಸ್ ಯಡಿಯೂರಪ್ಪ ಆಣೆಕಟ್ಟು ನಿರ್ಮಾಣ ಮಾಡುವುದಾಗಿ ಘೋಷಣೆ ಮಾಡಿದ್ದಾರೆ. ಯೋಜನೆಗೆ ಕೇಂದ್ರ ಸರ್ಕಾರದ ಅನುಮತಿಯನ್ನು ಕೋರಿದ್ದಾರೆ. ತಮಿಳುನಾಡಿನ ಹಿತಾಸಕ್ತಿ ದೃಷ್ಟಿಯಿಂದ ಮೇಕೆದಾಟು ಆಣೆಕಟ್ಟು ನಿರ್ಮಾಣಕ್ಕೆ ಅವಕಾಶ ನೀಡಬಾರದು ಎಂದು ಸರ್ವಪಕ್ಷ ಸದಸ್ಯರ ಕೋರಿದ್ದಾರೆ. ಮನವಿ ಪಡೆದುಕೊಂಡಿರುವ ಗಜೇಂದ್ರ ಸಿಂಗ್ ಶೇಖಾವತ್ ಪರಿಶೀಲನೆ ನಡೆಸಿ ಕ್ರಮ ತೆಗೆದುಕೊಳ್ಳುವುದಾಗಿ ಭರವಸೆ ನೀಡಿದ್ದಾರೆ.