Tag: Gajapayana

  • ಮೈಸೂರಿನಲ್ಲಿ ದಸರಾ ಸಂಭ್ರಮ – ನಾಳೆ ಕ್ಯಾಪ್ಟನ್ ಅರ್ಜುನ ಸಾರಥ್ಯದಲ್ಲಿ ಗಜಪಯಣ ಆರಂಭ

    ಮೈಸೂರಿನಲ್ಲಿ ದಸರಾ ಸಂಭ್ರಮ – ನಾಳೆ ಕ್ಯಾಪ್ಟನ್ ಅರ್ಜುನ ಸಾರಥ್ಯದಲ್ಲಿ ಗಜಪಯಣ ಆರಂಭ

    ಮೈಸೂರು: ನಾಡಹಬ್ಬ ದಸರಾ ಚಟುವಟಿಕೆಗಳು ಮೈಸೂರಿನಲ್ಲಿ ಗರಿಗೆದರುತ್ತಿವೆ. ಇದರ ಮೊದಲ ಭಾಗವಾಗಿ ನಾಳೆ ದಸರಾ ಮೆರವಣಿಗೆಯಲ್ಲಿ ಪಾಲ್ಗೊಳ್ಳುವ ಗಜಪಡೆಯ ಮೊದಲ ತಂಡ ಮೈಸೂರಿಗೆ ಬರಲಿದೆ.

    ಮೈಸೂರು ಜಿಲ್ಲೆಯ ಹುಣಸೂರು ತಾಲೂಕಿನ ವೀರಹೊಸಹಳ್ಳಿಯಿಂದ ಗಜಪಯಣ ಆರಂಭವಾಗಲಿದೆ. ಜನಪ್ರತಿನಿಧಿಗಳು ಗಜಪಯಣಕ್ಕೆ ಸ್ವಾಗತ ಕೋರಲಿದ್ದಾರೆ. ಗಜಪಡೆಯ ಕ್ಯಾಪ್ಟನ್ ಅರ್ಜುನ ಸೇರಿದಂತೆ 9 ಆನೆಗಳು ಮೊದಲ ತಂಡದಲ್ಲಿ ಬರಲಿದ್ದು 2ನೇ ತಂಡದಲ್ಲಿ 5 ಆನೆಗಳು ಬರಲಿವೆ. ಜಂಬೂ ಸವಾರಿಯಲ್ಲಿ ಒಟ್ಟು 14 ಆನೆಗಳು ಭಾಗಿಯಾಗಲಿದ್ದು ಸ್ಟ್ಯಾಂಡ್‌ ಬೈ ರೂಪದಲ್ಲಿ ಇರಿಸಿ ಕೊಳ್ಳಲು 3 ಆನೆಗಳನ್ನು ಹೆಚ್ಚುವರಿಯಾಗಿ ನಾಡಿಗೆ ಕರೆಸಿ ಕೊಳ್ಳಲಾಗುತ್ತಿದೆ. ಇದನ್ನೂ ಓದಿ: ವರಮಹಾಲಕ್ಷ್ಮೀ ಹಬ್ಬಕ್ಕೆ ರಾಧಿಕಾ ಪಂಡಿತ್ ಗೆ ಸಹಾಯ ಮಾಡಿದ ಪುತ್ರಿ ಐರಾ

    ಹೀಗೆ ಬಂದ ಆನೆಗಳನ್ನು ಎರಡು ದಿನ ಅರಣ್ಯ ಇಲಾಖೆಯ ಆವರಣದಲ್ಲಿ ವಿಶ್ರಾಂತಿಗೆ ಬಿಡಲಾಗುತ್ತದೆ. ಆಗಸ್ಟ್ 10 ರಂದು ಮೈಸೂರು ಅರಮನೆಗೆ ಈ ಆನೆಗಳನ್ನು ಸ್ವಾಗತಿಸಲಾಗುತ್ತದೆ.

    Live Tv
    [brid partner=56869869 player=32851 video=960834 autoplay=true]

  • ಗಜಪಯಣ ಮುಗಿಸಿ ಅರಮನೆ ನಗರಿಗೆ ಎಂಟ್ರಿ ಕೊಟ್ಟ ಗಜಪಡೆ

    ಗಜಪಯಣ ಮುಗಿಸಿ ಅರಮನೆ ನಗರಿಗೆ ಎಂಟ್ರಿ ಕೊಟ್ಟ ಗಜಪಡೆ

    ಮೈಸೂರು: ದಸರಾ ಮಹೋತ್ಸವ 2019ರ ಗಜಪಯಣಕ್ಕೆ ಗುರುವಾರ ಹುಣಸೂರು ತಾಲೂಕಿನ ವೀರನಹೊಸಹಳ್ಳಿಯಲ್ಲಿ ಚಾಲನೆ ನೀಡಲಾಗಿದ್ದು, ಈಗ ಗಜಪಯಣ ಮುಗಿಸಿ ಗಜಪಡೆ ಅರಮನೆ ನಗರಿಗೆ ಎಂಟ್ರಿ ಕೊಟ್ಟಿದೆ.

    ವಿಶ್ವವಿಖ್ಯಾತ ದಸರಾ ಮಹೋತ್ಸವದಲ್ಲಿ ಭಾಗವಹಿಸಲು ಆಗಮಿಸಿದ ಅರ್ಜುನ ಪಡೆ, ಜಿಲ್ಲೆಯ ಅರಣ್ಯ ಭವನದಲ್ಲಿ ಬೀಡು ಬಿಟ್ಟಿದೆ. ಮೈಸೂರಿಗೆ ಲಾರಿಗಳಲ್ಲಿ ಅರ್ಜುನ, ಅಭಿಮನ್ಯು, ಧನಂಜಯ, ಈಶ್ವರ, ವಿಜಯ ಹಾಗೂ ವರಲಕ್ಷ್ಮಿ ಆನೆಗಳನ್ನು ಕರೆತರೆಲಾಯಿತು. ಒಟ್ಟು 6 ಆನೆಗಳು ಗಜಪಯಣ ಮುಗಿಸಿ ಅರಣ್ಯ ಭವನದಲ್ಲಿ ವಿಶ್ರಾಂತಿ ಪಡೆಯುತ್ತಿವೆ.

    ಆಗಸ್ಟ್ 26ರಂದು ಅರಮನೆ ಗಜಪಡೆ ಪ್ರವೇಶಿಸಲಿದೆ. ಅಲ್ಲದೆ ಇದೇ ಮೊದಲ ಬಾರಿಗೆ ದಸರಾ ಮಹೋತ್ಸವದಲ್ಲಿ ಈಶ್ವರ ಆನೆ ಭಾಗವಹಿಸುತ್ತಿದೆ. ದುಬಾರೆ ಕ್ಯಾಂಪ್‍ನಿಂದ ಈಶ್ವರ ಆನೆಯನ್ನು ಕರೆತರಲಾಗಿದೆ. ವಿಶೇಷವೆಂದರೆ ಈ ಬಾರಿ ಕೂಡ ಗಜಪಡೆ ನಾಯಕ ಅರ್ಜುನ ಅಂಬಾರಿ ಹೊತ್ತು ಎಲ್ಲರ ಗಮನ ಸೆಳೆಯಲಿದ್ದು, ಸತತ 8ನೇ ಬಾರಿಗೆ ಅಂಬಾರಿಯನ್ನ ಹೊತ್ತ ಕೀರ್ತಿಗೆ ಅರ್ಜುನ ಪಾತ್ರವಾಗಲಿದ್ದಾನೆ.

    ಸಾಂಪ್ರದಾಯಿಕವಾಗಿ ಪ್ರತಿ ವರ್ಷ ಜಿಲ್ಲಾ ಉಸ್ತುವಾರಿ ಸಚಿವರು ಪೂಜೆ ಸಲ್ಲಿಸಿ, ಗಜಪಯಣಕ್ಕೆ ಚಾಲನೆ ನೀಡುತ್ತಿದ್ದರು. ಆದರೆ ಈ ಬಾರಿ ದಸರಾ ಗಜಪಯಣಕ್ಕೆ ಚಾಲನೆ ನೀಡುವ ವಿಚಾರಕ್ಕೆ ಗೊಂದಲ ಶುರುವಾಗಿತ್ತು. ಯಾಕೆಂದರೆ ಈ ಬಾರಿ ಜಿಲ್ಲೆಯಿಂದ ಯಾವ ನಾಯಕರು ಸಚಿವರಾಗಿಲ್ಲ. ಅಲ್ಲದೆ ಸ್ಥಳೀಯ ಶಾಸಕರ ಬಳಿ ಚಾಲನೆ ಕೊಡಿಸೋಣ ಎಂದರೆ ಶಾಸಕರು ಕೂಡ ಅನರ್ಹರಾಗಿದ್ದಾರೆ. ಹೀಗಾಗಿ ಗಜಪಯಣಕ್ಕೆ ಚಾಲನೆ ನೀಡುವವರು ಯಾರು ಎಂಬ ಗೊಂದಲ ಎದುರಾಗಿತ್ತು. ಆದರೆ ಶಾಸಕ ರಾಮದಾಸ್ ಅವರು ಪುಷ್ಪಾರ್ಚನೆ ಮಾಡುವ ಮೂಲಕ ಚಾಲನೆ ನೀಡಿದ್ದರು.