Tag: gajanur

  • ಗಾಜನೂರು ತೋಟದ ಮನೆಯ ಜಮೀನಿನಲ್ಲಿ ನಾಳೆ ವರನಟ ಡಾ.ರಾಜ್ ಸಹೋದರಿ ಅಂತ್ಯಕ್ರಿಯೆ

    ಗಾಜನೂರು ತೋಟದ ಮನೆಯ ಜಮೀನಿನಲ್ಲಿ ನಾಳೆ ವರನಟ ಡಾ.ರಾಜ್ ಸಹೋದರಿ ಅಂತ್ಯಕ್ರಿಯೆ

    ಚಾಮರಾಜನಗರ: ಮೇರುನಟ ಡಾ.ರಾಜ್‌ಕುಮಾರ್ (Dr.Rajkumar) ಅವರ ಸಹೋದರಿ ನಾಗಮ್ಮ (Nagamma) ನಿಧನರಾಗಿದ್ದಾರೆ. ತಮಿಳುನಾಡಿನ ತಾಳವಾಡಿ ತಾಲೂಕು‌ ದೊಡ್ಡಗಾಜನೂರಿನಲ್ಲಿ ಅವರ ಅಂತ್ಯಕ್ರಿಯೆ ನಡೆಯಲಿದ್ದು, ನಟ ಶಿವರಾಜ್‌ಕುಮಾರ್, ರಾಘವೇಂದ್ರ ರಾಜ್‌ಕುಮಾರ್, ಅಶ್ವಿನಿ ಪುನೀತ್‌ ರಾಜ್‌ಕುಮಾರ್ ಮೊದಲಾದವರು ಪಾಲ್ಗೊಳ್ಳಲಿದ್ದಾರೆ.

    ರಾಜ್‌ಕುಮಾರ್ ಅವರ ಸಹೋದರಿ ನಾಗಮ್ಮ ಹುಟ್ಟೂರು ದೊಡ್ಡಗಾಜನೂರಿನಲ್ಲಿ ವಾಸವಿದ್ದರು. ವಯೋಸಹಜ ಅನಾರೋಗ್ಯದಿಂದ ಬಳಲುತ್ತಿದ್ದ ನಾಗಮ್ಮ ಇಂದು ನಿಧನರಾಗಿದ್ದಾರೆ. ಅವರಿಗೆ‌ 93 ವರ್ಷ ವಯಸ್ಸಾಗಿತ್ತು. ನಾಗಮ್ಮ ಅವರಿಗೆ ತಮ್ಮ ಅಣ್ಣ ಡಾ.ರಾಜ್‌ಕುಮಾರ್ ಮಕ್ಕಳೆಂದರೆ ಬಲು ಪ್ರೀತಿ. ಅದರಲ್ಲೂ ಪುನೀತ್ ‌ರಾಜ್‌ಕುಮಾರ್ ಎಂದರೆ ಪಂಚಪ್ರಾಣ. ಡಾ.ರಾಜ್‌ ಹಾಗೂ ಪಾರ್ವತಮ್ಮ ಶೂಟಿಂಗ್‌ಗೆ ಅಂತ ಹೊರಗೆ ಹೋದಾಗಲೆಲ್ಲ ಅವರ ಮಕ್ಕಳನ್ನು ಸಾಕಿ ಸಲಹಿದ್ದೇ ನಾಗಮ್ಮ ಅವರಂತೆ. ಹಾಗಾಗಿ, ರಾಜ್‌ಕುಮಾರ್ ಅವರ ಮಕ್ಕಳಿಗೆ ನಾಗಮ್ಮ ಅವರೊಡನೆ ಒಡನಾಟ ಇಂದು ನಿನ್ನೆಯದಲ್ಲ. ಆಗಾಗ್ಗೆ ದೊಡ್ಡಗಾಜನೂರಿಗೆ ಕುಟುಂಬ ಸಮೇತರಾಗಿ ಬರುತ್ತಿದ್ದ ರಾಘವೇಂದ್ರ ರಾಜ್‌ಕುಮಾರ್, ಶಿವರಾಜ್‌ಕುಮಾರ್, ನಾಗಮ್ಮ ಅವರ ಯೋಗಕ್ಷೇಮ ವಿಚಾರಿಸಿಕೊಂಡು ಹೋಗುತ್ತಿದ್ದರು. ಇದನ್ನೂ ಓದಿ: ಅಣ್ಣಾವ್ರ ಸಹೋದರಿ ನಾಗಮ್ಮ ವಿಧಿವಶ

    ನಾಗಮ್ಮ ಅವರಿಗೆ ಪುನೀತ್‌ ರಾಜ್‌ಕುಮಾರ್ ಅಂದರೆ ಹೆಚ್ಚು ಪ್ರೀತಿ. ಅವರು, ‘ಅಪ್ಪು ಚನ್ನಾಗಿದಿಯಾ? ನಿನಗೆ 50 ವರ್ಷ ಆಯ್ತಂತೆ, ನನ್ನನ್ನ ಒಂದ್ ಸಾರಿ ಬಂದ್ ನೋಡ್ಕೊಂಡು ಹೋಗೋ’ ಎಂದು ಪುನೀತ್‌ ಬರ್ತ್‌ಡೇ ದಿನ ಮಾತನಾಡಿದ್ದರು. ಪುನೀತ್‌ ಮೃತಪಟ್ಟಿದ್ದು ನಾಗಮ್ಮ ಅವರಿಗೆ ಗೊತ್ತಿರಲಿಲ್ಲ. ಮನೆಯವರು ಆ ವಿಚಾರವನ್ನು ನಾಗಮ್ಮರಿಗೆ ಹೇಳಿರಲಿಲ್ಲ. ತಿಳಿಸಿದರೆ ಎಲ್ಲಿ ನಾಗಮ್ಮ ಅವರಿಗೆ ಆಘಾತವಾಗುತ್ತದೋ ಎಂಬ ಭಯದಿಂದ ವಿಷಯ ಮುಚ್ಚಿಡಲಾಗಿತ್ತು. ನಾಗಮ್ಮ ಅವರಿಗೆ ಐವರು ಪುತ್ರರು, ಮೂವರು ಪುತ್ರಿಯರಿದ್ದಾರೆ. ಚನ್ನೈನಲ್ಲಿದ್ದ ಓರ್ವ ಪುತ್ರ ಕಳೆದ ತಿಂಗಳಷ್ಟೇ ನಿಧನರಾಗಿದ್ದರು. ಆ ವಿಷಯವು ಸಹ ನಾಗಮ್ಮ ಅವರಿಗೆ ಗೊತ್ತಿರಲಿಲ್ಲ.

    ದೊಡ್ಡ ಗಾಜನೂರಿನ ತೋಟದಲ್ಲಿ ನಾಗಮ್ಮ ಅವರ ಅಂತ್ಯಕ್ರಿಯೆ ಈಡಿಗ ಸಂಪ್ರದಾಯದಂತೆ ನಡೆಯಲಿದೆ. ನಟ ಶಿವರಾಜ್‌ಕುಮಾರ್, ರಾಘವೇಂದ್ರ ರಾಜ್‌ಕುಮಾರ್, ಅಶ್ವಿನಿ ಪುನೀತ್‌ ರಾಜಕುಮಾರ್ ಹಾಗೂ ಡಾ.ರಾಜ್ ಕುಟುಂಬವರ್ಗದವರು ಪಾಲ್ಗೊಳ್ಳಲಿದ್ದಾರೆ. ಇದನ್ನೂ ಓದಿ: ಡಾ.ರಾಜ್ ಅಪಹರಣ ಪ್ರಕರಣಕ್ಕೆ 25 ವರ್ಷ – 2000 ಇಸವಿಯಲ್ಲಿ ಅಪಹರಿಸಿದ್ದ ವೀರಪ್ಪನ್

  • ದೀಪಾವಳಿ ಹಿನ್ನೆಲೆ ಗಾಜನೂರಿಗೆ ಭೇಟಿ ಕೊಟ್ಟ ಹ್ಯಾಟ್ರಿಕ್ ಹೀರೋ ಶಿವಣ್ಣ

    ದೀಪಾವಳಿ ಹಿನ್ನೆಲೆ ಗಾಜನೂರಿಗೆ ಭೇಟಿ ಕೊಟ್ಟ ಹ್ಯಾಟ್ರಿಕ್ ಹೀರೋ ಶಿವಣ್ಣ

    – ರಾಜ್‌ಕುಮಾರ್‌ ಸಹೋದರಿ, ಸೋದರತ್ತೆ ಆಶೀರ್ವಾದ ಪಡೆದ ನಟ

    ಚಾಮರಾಜನಗರ: ದೀಪಾವಳಿ ಸಡಗರ ಹಿನ್ನೆಲೆ ಅಣ್ಣಾವ್ರ ಜನ್ಮಭೂನಿಯಾದ ತಮಿಳುನಾಡಿನ ತಾಳವಾಡಿ ಸಮೀಪ ಇರುವ ಗಾಜನೂರಿಗೆ ನಟ ಶಿವರಾಜ್ ಕುಮಾರ್ (Shiva Rajkumar) ತಮ್ಮ ಪತ್ನಿ ಗೀತಾ ಅವರೊಟ್ಟಿಗೆ ಭೇಟಿ ಕೊಟ್ಟರು.

    ಗಾಜನೂರಿನಲ್ಲಿರುವ ಮನೆಗೆ ಭೇಟಿ ಕೊಟ್ಟ ಶಿವಣ್ಣ ದಂಪತಿ ಡಾ.ರಾಜ್‌ ಸಹೋದರಿಯಾದ ಸೋದರತ್ತೆ ನಾಗಮ್ಮ ಅವರ ಆಶೀರ್ವಾದ ಪಡೆದರು. ಶಿವಣ್ಣನನ್ನು ಕಂಡ ನಾಗಮ್ಮ ಅಪ್ಪಿ ಆಶೀರ್ವಾದ ಮಾಡಿದರು‌. ಇದನ್ನೂ ಓದಿ: ‘ಕಾಂತಾರ’ ಚಿತ್ರಕ್ಕೆ ಹಾಲಿವುಡ್ ಸ್ಟಂಟ್ ಮಾಸ್ಟರ್ ಎಂಟ್ರಿ

    ಅಣ್ಣಾವ್ರು ಹುಟ್ಟಿದ ಹಳೇ ಮನೆ, ಮಂಟೇಸ್ವಾಮಿ ದೇಗುಲ ಸೇರಿದಂತೆ ಊರನ್ನು ಸುತ್ತಾಡಿದ ಶಿವಣ್ಣ ದಂಪತಿ ಅಭಿಮಾನಿಯೊಬ್ಬರ ಕ್ಷೀರ ಕೇಂದ್ರಕ್ಕೂ ಭೇಟಿ ಕೊಟ್ಟು ಶುಭ ಹಾರೈಸಿದರು.

    ನೆಚ್ಚಿನ ನಟನನ್ನು ಕಾಣಲು, ಫೋಟೊ ಕ್ಲಿಕ್ಕಿಸಿಕೊಳ್ಳಲು ಅಭಿಮಾನಿಗಳ ದಂಡೇ ಸೇರಿತ್ತು. ಶಿವರಾಜ್‌ಕುಮಾರ್‌ ಜೊತೆ ಫೋಟೋಗಾಗಿ ಫ್ಯಾನ್ಸ್‌ ಮುಗಿಬಿದ್ದರು. ಇದನ್ನೂ ಓದಿ: ದರ್ಶನ್ ಎಡಗಾಲಿಗೂ ಸಮಸ್ಯೆ – ಫಿಜಿಯೋಥೆರಪಿನಾ? ಆಪರೇಷನ್‌ನಾ?

  • ಭಾರೀ ಮಳೆಗೆ ತುಂಗಾ ಜಲಾಶಯ ಭರ್ತಿ

    ಭಾರೀ ಮಳೆಗೆ ತುಂಗಾ ಜಲಾಶಯ ಭರ್ತಿ

    ಶಿವಮೊಗ್ಗ: ಮಲೆನಾಡಿನ (Malenadu) ಭಾಗದಲ್ಲಿ ಧಾರಾಕಾರ ಮಳೆಯಾಗುತ್ತಿರುವ (Rain) ಹಿನ್ನೆಲೆ ಶಿವಮೊಗ್ಗದ (Shivamogga) ಗಾಜನೂರಿನ (Gajanur) ತುಂಗಾ ಜಲಾಶಯ (Tunga Reservoir) ಭರ್ತಿಯಾಗಿದೆ.

    ಭರ್ತಿಯಾದ ಹಿನ್ನೆಲೆ ಜಲಾಶಯದ 10 ಗೇಟ್‌ಗಳಿಂದ ನೀರನ್ನು ಬಿಡುಗಡೆ ಮಾಡಲಾಗುತ್ತಿದೆ. ನೀರು ಭರ್ತಿಯಾಗಿದ್ದರಿಂದ ಜಲಾಶಯದ ಅಧಿಕಾರಿಗಳು ಗುರುವಾರ ಮುಂಜಾನೆ 2 ಗೇಟ್‌ಗಳನ್ನು ಓಪನ್ ಮಾಡಿದ್ದರು. ಆದರೆ ಜಲಾಶಯದ ಒಳಹರಿವಿನ ಪ್ರಮಾಣದಲ್ಲಿ ನೀರು ಹೆಚ್ಚಳವಾದ್ದರಿಂದ 10 ಗೇಟ್‌ಗಳಿಂದ ನದಿ ಪಾತ್ರಗಳಿಗೆ ನೀರನ್ನು ಬಿಡಲಾಗುತ್ತಿದೆ. ಇದನ್ನೂ ಓದಿ: ಹಾಸನ ಜಿಲ್ಲೆಗೆ ಮುಂಗಾರು ಆಗಮನ- ಜಿಲ್ಲೆಯ ಹಲವೆಡೆ ಹಾನಿ

    ರಾಜ್ಯಕ್ಕೆ ಮುಂಗಾರು ಲಗ್ಗೆ ಇಟ್ಟಿದ್ದು, ಕರಾವಳಿ ಹಾಗೂ ಮಲೆನಾಡು ಜಿಲ್ಲೆಗಳಲ್ಲಿ ಅಬ್ಬರದ ಮಳೆ ಸುರಿಯುತ್ತಿದೆ. ಅಂತೆಯೇ ಶಿವಮೊಗ್ಗದಲ್ಲಿ ಧಾರಕಾರ ಮಳೆ ಸುರಿದ ಪರಿಣಾಮ ಗಾಜನೂರಿನ ತುಂಗಾ ಜಲಾಶಯ ಭರ್ತಿಯಾಗಿದ್ದು, ಇಂದು ಮುಂಜಾನೆ 2 ಗೇಟ್‌ಗಳ ಮೂಲಕ 2 ಸಾವಿರ ಕ್ಯೂಸೆಕ್ ಹೆಚ್ಚುವರಿ ನೀರನ್ನು ಜಲಾಶಯದಿಂದ ಬಿಡುಗಡೆ ಮಾಡಲಾಗಿತ್ತು. ಜಲಾಶಯದ ಗರಿಷ್ಠ ಮಟ್ಟ 584.24 ಮೀಟರ್ ಇದ್ದು, ಇಂದು ಜಲಾಶಯ ಗರಿಷ್ಠ ಮಟ್ಟವನ್ನು ತಲುಪಿದೆ. ಇದನ್ನೂ ಓದಿ: ದೆಹಲಿಗೆ ಮಾನ್ಸೂನ್ ಎಂಟ್ರಿ- ರಾಷ್ಟ್ರ ರಾಜಧಾನಿ ಕೂಲ್ ಕೂಲ್

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ವರನಟ ಡಾ.ರಾಜ್ ಗಾಜನೂರಿನ ಮನೆಯಲ್ಲಿ ನೆಲೆಸುವ ಆಸೆ ಕನಸಾಗಿ ಉಳಿದು ಹೋಯ್ತು

    ವರನಟ ಡಾ.ರಾಜ್ ಗಾಜನೂರಿನ ಮನೆಯಲ್ಲಿ ನೆಲೆಸುವ ಆಸೆ ಕನಸಾಗಿ ಉಳಿದು ಹೋಯ್ತು

    ರುನಾಡ ಕಣ್ಮಣಿ, ಕನ್ನಡದ ಮುತ್ತುರಾಜ್, ದಾದಾ ಸಾಹೇಬ್ ಫಾಲ್ಕೆ ವಿಜೇತ, ಕನ್ನಡದ ಮೇರುನಟ ಬಿರುದಾಂಕಿತ ಡಾ.ರಾಜ್ ಕಟ್ಟಿಸಿದ ಮನೆಯಲ್ಲಿ ಚಿತ್ರರಂಗದಿಂದ ನಿವೃತಿಯಾದ ಬಳಿಕ ಆ ಮನೆಯಲ್ಲಿ ವಾಸಿಸಬೇಕೆಂಬ ಮಹಾದಾಸೆ ಹೊಂದಿದ್ರು. ಆದ್ರೆ ಅವರ ಆಸೆ ಈಡೇರಲಿಲ್ಲ. ಮನೆಯೇನು ನಿರ್ಮಾಣವಾಯ್ತು ಅಲ್ಲಿ ವಾಸ ಮಾಡೋ ಭಾಗ್ಯ ಮಾತ್ರ ಆ ಮೇರುನಟನಿಗೆ ಸಿಗಲೇ ಇಲ್ಲ. ಆ ಮನೆಗೆ ಭೇಟಿ ಕೊಡುವ ವೇಳೆಗೂ ಮುನ್ನ ಕಾಡುಗಳ್ಳ ವೀರಪ್ಪನ್ ರಾಜ್ ಅವರನ್ನು ಕಿಡ್ನಾಪ್ ಮಾಡಿದರು. ನಂತರ ಗಾಜನೂರಿಗೆ ಅವರು ಬಂದು ವಾಸ ಮಾಡಲೂ ಸಾಧ್ಯವಾಗಿಲ್ಲ.

    ಹೌದು, ಇಂದು ಕನ್ನಡದ ಮೇರುನಟ, ವರನಟ ಖ್ಯಾತಿಯ ಡಾ.ರಾಜ್‍ಕುಮಾರ್ ಅವರ 93 ನೇ ಹುಟ್ಟುಹಬ್ಬ. ಕನ್ನಡ ಚಿತ್ರರಂಗಕ್ಕೆ ರಾಜ್ ಅವರ ಕೊಡುಗೆ ಅನನ್ಯ. ಡಾ.ರಾಜ್‍ಕುಮಾರ್ ಹೊರತು ಪಡಿಸಿ ಸ್ಯಾಂಡಲ್‍ವುಡ್ ಕಲ್ಪನೆಯೂ ಅಸಾಧ್ಯ. ಮೇರು ನಟ ಗಡಿಜಿಲ್ಲೆ ಚಾಮರಾಜನಗರದ ಸುಪುತ್ರ ರಣಧೀರ ಕಂಠೀರವ, ಅಭಿಮಾನಿಗಳ ಆರಾಧ್ಯ ದೈವ ಡಾ.ರಾಜ್ ತಮ್ಮ ಕಡೆಯ ದಿನಗಳನ್ನು ಹುಟ್ಟೂರು ಗಾಜನೂರಿನಲ್ಲಿ ಕಳೆಯಬೇಕೆಂಬ ಮಹಾದಾಸೆ ಹೊಂದಿದ್ದರು. ಇದನ್ನೂ ಓದಿ: ಹುಟ್ಟುಹಬ್ಬದಂದು ಅಣ್ಣಾವ್ರ ನೆನೆದ RCB

    ಈ ವಿಚಾರವನ್ನು ಕುಟುಂಬಸ್ಥರ ಬಳಿ ಹಲವು ಬಾರಿ ಕೂಡ ಹೇಳಿಕೊಂಡಿದ್ದರು. ಅವರ ಆಸೆ ಈಡೇರಿಸುವ ನಿಟ್ಟಿನಲ್ಲಿ ಕೂಡ ಚಾಮರಾಜನಗರದ ಗಡಿ ತಾಳವಾಡಿಯ ಗಾಜನೂರಿನಲ್ಲಿ ಒಂದು ಮನೆ ಕೂಡ ನಿರ್ಮಾಣ ಮಾಡಲಾಯ್ತು. ಆದ್ರೆ ಅವರು ಆ ಮನೆಯಲ್ಲಿ ವಾಸ ಮಾಡುವ ಕನಸು ಅವರ ಆಗಲಿಕೆಯಿಂದ ಕಮರಿ ಹೋಯ್ತು. ಇದೀಗ ಆ ಮನೆಯಲ್ಲಿ ಡಾ.ರಾಜ್ ಸಹೋದರಿ ನಾಗಮ್ಮ ಹಾಗೂ ಕುಟುಂಬಸ್ಥರು ವಾಸಿಸುತ್ತಿದ್ದಾರೆ. ಅಲ್ಲದೇ ಕಾಡುಗಳ್ಳ ವೀರಪ್ಪನ್ ಅಭಿಮಾನಿಗಳ ಆರಾಧ್ಯ ದೈವರನ್ನು ಅಪಹರಿಸಿದ್ದು ಗಾಜನೂರಿನಲ್ಲಿ. ಆ ಹಿನ್ನೆಲೆ ಮತ್ತೆ ಗಾಜನೂರಿನಲ್ಲಿ ಬಂದು ವಾಸಿಸಲು ಸಾಧ್ಯವಾಗಲೇ ಇಲ್ಲ.

    ಪ್ರೀತಿಯ ತಂಗಿ ನಾಗಮ್ಮ ಅಂದ್ರೆ ರಾಜ್‍ಕುಮಾರ್ ಅವರಿಗೆ ಎಲ್ಲಿಲ್ಲದ ಪ್ರೀತಿ. ಸದಾ ಶೂಟಿಂಗ್‍ನಲ್ಲಿ ಬ್ಯುಸಿಯಿರುತ್ತಿದ್ದ ರಾಜ್‍ಕುಮಾರ್ ಹಾಗೂ ಅವರ ಮಡದಿ ಪಾರ್ವತಮ್ಮ ರಾಜ್‍ಕುಮಾರ್. ಈ ವೇಳೆ ರಾಜ್ ಅವರ ಕುಟುಂಬದ ಮುದ್ದು ಮಕ್ಕಳಾದ ಶಿವಣ್ಣ, ರಾಘಣ್ಣ, ಪುನೀತ್ ಅವರನ್ನು ಲಾಲನೆ, ಪೋಷಣೆ ಮಾಡಿದ್ದೆ ನಾಗಮ್ಮ. ಇದೀಗ ನಾಗಮ್ಮ ಕೂಡ ಅಣ್ಣನಿಗೆ ಬರ್ತ್ ಡೇ ವಿಶ್ ಮಾಡಿದ್ದು, ಪ್ರೀತಿಯ ಅಣ್ಣನನ್ನು ನೆನೆದು ಕಣ್ಣೀರಾಕಿದ್ದಾರೆ. ಅಲ್ಲದೆ ಅಣ್ಣನ ಆಸೆಯ ಮನೆಯಲ್ಲಿ ತಾವು ವಾಸಿಸುತ್ತಿರುವ ಬಗ್ಗೆ ಕುಟುಂಬದವರು ನೆನೆದುಕೊಳ್ತಿದ್ದಾರೆ.

    ಹೊಸ ಮನೆಯಷ್ಟೇ ಹಳೆಯ ಮನೆಯಲ್ಲೂ ಕೂಡ ಅಣ್ಣಾವ್ರ ಬಾಲ್ಯದ ನೆನಪು ಬಹಳಷ್ಟಿದೆ. ಅವರು ಹುಟ್ಟಿ ಬೆಳೆದಿದ್ದು ಹಳೆಯ ಮನೆಯಲ್ಲಿ. ನಾಟಕಗಳಿಗೆ ಹೋದ ನಂತರ ಇಲ್ಲಿಗೆ ಬರೋದು ಕಡಿಮೆಯಾಯ್ತು. ಸಿನಿಮಾ ನಟನೆಗೆ ಹೋದ ಮೇಲೆ ರಾಜ್ ಅವರು ಚೆನೈನಲ್ಲಿ ವಾಸ ಮಾಡ್ತಿದ್ರು. ಹಳೆಯ ಮನೆಯನ್ನು ದೇವರ ಮನೆ ಅನ್ನೋ ರೀತಿ ನೋಡುತ್ತಿದ್ದರು. ಈ ಹಿನ್ನೆಲೆ ಹಳೆಯ ಮನೆಯನ್ನು ಕೂಡ ರಾಜ್ ಕುಟುಂಬ ಉಳಿಸಿಕೊಂಡಿದೆ. ಇದನ್ನೂ ಓದಿ: ಯಾಕಣ್ಣ ನನ್ನೊಬ್ಬಳನ್ನೇ ಬಿಟ್ಟು ಹೋದೆ: ರಾಜ್‌ ನೆನೆದು ತಂಗಿ ಕಣ್ಣೀರು

    ರಾಜ್ ಭೌತಿಕವಾಗಿ ಇಹಾ ಲೋಕ ತ್ಯಜಿಸಿದರೂ ಕೂಡ ಅಭಿಮಾನಿಗಳ ನೆಚ್ಚಿನ ಅಣ್ಣಾವ್ರು ಅಭಿಮಾನಿಗಳ ಹೃದಯ ಸಿಂಹಾಸನದಲ್ಲಿ ಚಿರಸ್ಥಾಯಿಯಾಗಿ ಉಳಿದಿದ್ದಾರೆ. ಸಾಕಷ್ಟು ಆಸೆ,ನಿರೀಕ್ಷೆ ಇಟ್ಟು ಕಟ್ಟಿಸಿದ ಮನೆಯಲ್ಲಿ ರಾಜ್ ವಾಸ ಮಾಡಲಿಲ್ಲ ಅನ್ನೋ ಕೊರಗು ಮಾತ್ರ ಅಭಿಮಾನಿಗಳು ಹಾಗೂ ಕುಟುಂಬಸ್ಥರಲ್ಲಿ ಮನೆ ಮಾಡಿದೆ.

  • ಡಾ.ರಾಜ್ ಹುಟ್ಟಿದ ಊರಲ್ಲಿ ಫಸ್ಟ್ ಟೈಮ್ ಸಿನಿಮಾ ಮುಹೂರ್ತ

    ಡಾ.ರಾಜ್ ಹುಟ್ಟಿದ ಊರಲ್ಲಿ ಫಸ್ಟ್ ಟೈಮ್ ಸಿನಿಮಾ ಮುಹೂರ್ತ

    ರನಟ ಡಾ.ರಾಜ್ ಕುಮಾರ್ ಹುಟ್ಟಿದ ಊರಿನಲ್ಲಿ ಕೆಲ ಸಿನಿಮಾಗಳ ಚಿತ್ರೀಕರಣ ನಡೆದಿವೆ. ಆದರೆ, ಇದೇ ಮೊದಲ ಬಾರಿಗೆ ಸಿನಿಮಾದ ಮುಹೂರ್ತವೊಂದು ನಡೆಯುತ್ತಿದೆ. ಈ ಸಿನಿಮಾದಲ್ಲಿ ಡಾ.ರಾಜ್ ಕುಮಾರ್ ಅವರ ಪುತ್ರ ರಾಘವೇಂದ್ರ ರಾಜ್ ಕುಮಾರ್ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಇದನ್ನೂ ಓದಿ : ಸಿನಿಮಾ ರಂಗಕ್ಕೆ ಬಾ ಅನ್ನಲಿಲ್ಲ ಬಂದ, ರಾಜಕಾರಣಕ್ಕೆ ಅವನನ್ನೇ ಕೇಳಬೇಕು : ಪುತ್ರನ ಬಗ್ಗೆ ಸುಮಲತಾ ಮಾತು

    ಈ ಕುರಿತು ಮಾತನಾಡಿದ ರಾಘವೇಂದ್ರ ರಾಜ್ ಕುಮಾರ್, “ಗಾಜನೂರಿನಲ್ಲಿ ಖಡಕ್ ಹಳ್ಳಿ ಹುಡುಗರು ಚಿತ್ರಕ್ಕೆ ಮೂಹೂರ್ತ ನಡೆಯುತ್ತಿದೆ. ಹಾಗಾಗಿ ಇಲ್ಲಿವೆ ಬಂದಿದ್ದೇವೆ. ಗಾಜನೂರಿನಲ್ಲಿ ಸಂಪತ್ತಿಗೆ ಸವಾಲ್, ಶ್ರೀನಿವಾಸ ಕಲ್ಯಾಣ ಚಿತ್ರಗಳ ಚಿತ್ರೀಕರಣ ಮಾತ್ರ ಆಗಿದೆ. ಆದ್ರೆ ಯಾವುದೇ ಚಿತ್ರದ ಮೂಹೂರ್ತ ಆಗಿಲ್ಲ ಹೀಗಾಗಿ ಪ್ರಥಮಬಾರಿಗೆ ಗಾಜನೂರಿನಲ್ಲೇ ಮೂಹೂರ್ತ ನಮ್ಮ ಸೋದರತ್ತೆ ನಾಗಮ್ಮ ಕೈಲಿ ಪೂಜೆ ಮಾಡಿಸುತ್ತೇವೆ” ಎಂದರು. ಇದನ್ನೂ ಓದಿ : ರಶ್ಮಿಕಾ ಮಂದಣ್ಣ ಅವರ ‘ಮಿಷನ್ ಮಜ್ನು’ ಬರ್ತಿದ್ದಾನೆ, ದಾರಿ ಬಿಡಿ

    ಈ ಸಿನಿಮಾದ ಮತ್ತೊಂದು ವಿಶೇಷ ಅಂದರೆ, ಡಾ.ರಾಜ್ ಹುಟ್ಟಿದ ಮನೆ, ಓದಿದ ಶಾಲೆ, ಮಂಟೇಸ್ವಾಮಿ ದೇವಾಲಯದಲ್ಲಿ ಚಿತ್ರೀಕರಣ ನಡೆಯಲಿದೆ. ಅಲ್ಲದೇ, ಕನ್ನಡಕ್ಕೆ ಮೊದಲ ಗೌರವ ಎಂಬ ಹಾಡಿನ ಚಿತ್ರೀಕರಣ ಕೂಡ ಇಲ್ಲೇ ನಡೆಯಲಿದೆಯಂತೆ. ಇದನ್ನೂ ಓದಿ : ಆಟಿಸಂ ಸಮಸ್ಯೆ ಕುರಿತಾದ ಕನ್ನಡದ ಮೊದಲ ಸಿನಿಮಾ ‘ವರ್ಣಪಟಲ’

    “ನಾಗತ್ತೆ ಅವರು ನಮಗೆ ಹಾಲು ಕುಡಿಸಿ ಬೆಳೆಸಿದ್ದಾರೆ. ನಮ್ಮ ತಂದೆ ಚಿತ್ರೀಕರಣಕ್ಕೆ ಹೋದಾಗ ತಾಯಿಯೂ ಸಹ ಹೋಗುತ್ತಿದ್ರು. ಆಗ ನಾಗತ್ತೆ ನಮ್ಮನ್ನು ಸಾಕಿ ಸಲುಹಿದ್ರು. ಅವರಿಗೆ ಹುಷಾರಿಲ್ಲ ಅವರ ಆರೋಗ್ಯ ವಿಚಾರಿಸಲು ಹಾಗೂ ಚಿತ್ರೀಕರಣಕ್ಕೆ ಪೂಜೆ ಮಾಡಿಸಲು ನಾವೇ ಇಲ್ಲಿಗೆ ಬಂದಿದ್ದೇವೆ” ಎಂದು ನಾಗತ್ತೆಯ ಕುರಿತಾಗಿಯೂ ರಾಘವೇಂದ್ರ ರಾಜ್ ಕುಮಾರ್ ಮಾತನಾಡಿದರು. ಇದನ್ನೂ ಓದಿ : ಸ್ಸಾರಿ.. ಈ ಬಾರಿ ಹುಟ್ಟು ಹಬ್ಬ ಆಚರಿಸಲ್ಲ : ಜಗ್ಗೇಶ್

    ಡಾ.ರಾಜ್ ಹುಟ್ಟಿದ ಗಾಜನೂರಿಗೆ ಒಂದು ಮಹತ್ವ ಇದೆ. ಇಲ್ಲಿ ಚಿತ್ರದ ಮೂಹೂರ್ತ ನಡೆಸಿದ್ರೆ ನಮ್ಮ ಪೂರ್ವಿಕರೆಲ್ಲಾ ಬಂದು ಆಶಿರ್ವಾದ ಮಾಡುತ್ತಾರೆ ಎಂಬ ನಂಬಿಕೆ ಇದೆ ಎನ್ನುವುದು ಅವರ ಮಾತು.

  • ಅಪ್ಪು ಮರಕೋತಿ ಆಟವಾಡಿದ್ದನ್ನು ನೆನಪಿಸಿಕೊಂಡ ಬಾಲ್ಯದ ಗೆಳೆಯ

    ಅಪ್ಪು ಮರಕೋತಿ ಆಟವಾಡಿದ್ದನ್ನು ನೆನಪಿಸಿಕೊಂಡ ಬಾಲ್ಯದ ಗೆಳೆಯ

    ಚಾಮರಾಜನಗರ: ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್ ಬಾಲ್ಯದಲ್ಲಿ ಮರಕೋತಿ ಆಟವಾಡುತ್ತಿದ್ದನ್ನು ಸದಾ ನೆನಪಿಸಿಕೊಳ್ಳುತ್ತೇನೆ ಎಂದು ಬಾಲ್ಯದ ಗೆಳೆಯ ಕುಳ್ಳ ನಾಗರಾಜ್ ನೆನಪಿನ ಬುತ್ತಿ ಬಿಚ್ಚಿಟ್ಟರು.

    ಅಪ್ಪು ಅಗಲಿ ವಾರಗಳು ಕಳೆಯುತ್ತಿದ್ದರೂ, ಯಾರಿಗೂ ಅವರು ಇಲ್ಲ ಎಂಬುದನ್ನು ಒಪ್ಪಿಕೊಳ್ಳಲು ಆಗುತ್ತಿಲ್ಲ. ಅವರ ಒಡನಾಡಿಗಳಿಗೆ ಅವರನ್ನು ಮರೆಯುವುದು ಸಾಧ್ಯವಿಲ್ಲ. ಪುನೀತ್‍ಗೆ ಬಾಲ್ಯದಲ್ಲಿ ಈಜು, ಬೈಸಿಕಲ್ ಹೊಡೆಯುವುದನ್ನ ಕಲಿಸಿದ್ದ ನಾಗರಾಜ್ ಮಾಧ್ಯಮಗಳೊಂದಿಗೆ ಮಾತನಾಡಿದ್ದು, ಕೆರೆಯಲ್ಲಿ ಈಜು ಹೊಡೆಯುತ್ತಿದ್ದನು, ಮೀನು ಹಿಡಿಯುತ್ತಿದ್ದನು. ಬೀರಪ್ಪದೇವರ ಗುಡಿ ಬಳಿ ಮರಕೋತಿ ಆಟವಾಡುತ್ತಿದ್ದನು. ಇದನ್ನು ನಾನು ಸದಾ ನೆನಪಿಸಿಕೊಳ್ಳುತ್ತಿರುತ್ತೇನೆ ಎಂದು ಅಪ್ಪು ಜೊತೆ ಕಳೆದ ಕೆಲವು ಮಧುರ ಕ್ಷಣಗಳನ್ನು ಹೇಳಿದರು.

    ಗಾಜನೂರಿಗೆ ಬಂದಾಗಲೆಲ್ಲಾ ತಮ್ಮ ಮನೆಗೆ ಕರೆಸಿಕೊಂಡು ನನ್ನ ಜೊತೆ ಕಾಲ ಕಳೆಯುತ್ತಿದ್ದರು. ಅಕ್ಟೋಬರ್ 30ರಂದು ಗಾಜನೂರಿಗೆ ಬರುತ್ತೇನೆ ನನಗೆ ನಾಟಿಕೋಳಿ ಸಾಂಬಾರ್, ರಾಗಿಮುದ್ದೆ ಮಾಡಿಸಬೇಕೆಂದು ಹೇಳಿದ್ದರು. ಆದರೆ ಈಗ ಅವರು ಗಾಜನೂರು ಬದಲು ಬಾರದ ಲೋಕಕ್ಕೆ ಪಯಣಿಸಿದ್ದಾರೆ ಎಂದು ಭಾವುಕರಾದರು. ಇದನ್ನೂ ಓದಿ: ಹೆಣ್ಣು ಮಗು ಮಾರಾಟ ಮಾಡಿದ್ರಾ ಭಿಕ್ಷುಕ ದಂಪತಿ?

    ನಾನು ಅವರನ್ನು ನೋಡಲು ಆಗಾಗ್ಗೆ ಬೆಂಗಳೂರಿಗೆ ಹೋಗುತ್ತಿದ್ದೆ. ನಾನು ಹೋದರೆ ಎಲ್ಲ ಕೆಲಸ ಬದಿಗೊತ್ತಿ ನನ್ನ ಜೊತೆ ಅಪ್ಪು ಕಾಲ ಕಳೆಯುತ್ತಿದ್ದರು. ನನ್ನನ್ನು ಅವರು ಬೈಸಿಕಲ್ ಖರೀದಿಸಲು ಕರೆದೊಯ್ದಿದ್ದರು. ಮನಸ್ಸಿಗೆ ಹಿಡಿಸದೆ ಮೂರು ಬೈಸಿಕಲ್‍ಅನ್ನು ಅವರು ಬದಲಾಯಿಸಿದ್ದರು. ಪುನೀತ್ ನಿಧನ ಈಗಲು ನನಗೆ ನಂಬಲಾಗುತ್ತಿಲ್ಲ. ಅವರು ಬೆಂಗಳೂರಿನಲ್ಲೇ ಇದ್ದಾರೆ ಎನಿಸುತ್ತದೆ ಎಂದು ನೆನಪಿನ ಬುತ್ತಿ ಬಿಚ್ಚಿಟ್ಟರು.

    ಸದ್ಯ ಗುಂಡ್ಲುಪೇಟೆಯಲ್ಲಿ ಟೆಂಪೋ ಚಾಲಕರಾಗಿರುವ ನಾಗರಾಜ್, ನನಗೆ ಹೊಸ ಟೆಂಪೋ ಕೊಡಿಸುವುದಾಗಿ, ಕೊಟೇಷನ್ ನ್ನು ಅಪ್ಪು ಹಾಕಿಸಲು ಹೇಳಿದ್ದರು. ಈ ಹಿನ್ನೆಲೆ ಟೆಂಪೋ ಖರೀದಿಗೆ 18 ಲಕ್ಷ ರೂ. ಕೊಟೇಷನ್ ಹಾಕಲಾಗಿತ್ತು ಎಂದರು. ಇದನ್ನೂ ಓದಿ: ಸಣ್ಣ ವಯಸ್ಸಿನ ದೊಡ್ಡ ಕಲಾವಿದನನ್ನು ಕಳೆದುಕೊಂಡಿದ್ದೇವೆ: ರಮೇಶ್ ಜಾರಕಿಹೊಳಿ

  • ಮಲೆನಾಡಲ್ಲಿ ಮಳೆರಾಯನ ಅಬ್ಬರ – ಗಾಜನೂರಲ್ಲಿರುವ ತುಂಗಾ ಡ್ಯಾಂ ಭರ್ತಿ

    ಮಲೆನಾಡಲ್ಲಿ ಮಳೆರಾಯನ ಅಬ್ಬರ – ಗಾಜನೂರಲ್ಲಿರುವ ತುಂಗಾ ಡ್ಯಾಂ ಭರ್ತಿ

    ಶಿವಮೊಗ್ಗ: ಪಶ್ಚಿಮಘಟ್ಟ ಪ್ರದೇಶಗಳಲ್ಲಿ ವ್ಯಾಪಕವಾಗಿ ಮಳೆಯಾಗುತ್ತಿದೆ. ಮುಖ್ಯವಾಗಿ ಕೊಪ್ಪ, ಶೃಂಗೇರಿ ಹಾಗೂ ನದಿ ಸಾಗಿ ಬರುವ ತೀರ್ಥಹಳ್ಳಿ ತಾಲೂಕುಗಳಲ್ಲಿ ಕಳೆದ ಎರಡು ದಿನಗಳಿಂದ ಸತತವಾಗಿ ಮಳೆಯಾಗುತ್ತಿರುವುದರಿಂದ ಗಾಜನೂರು ತುಂಗಾ ಡ್ಯಾಂ ಭರ್ತಿಯಾಗಿದೆ.

    ಡ್ಯಾಂನ 20 ಗೇಟುಗಳನ್ನೂ ತೆರೆದು ನೀರನ್ನು ಹೊರ ಬಿಡಲಾಗುತ್ತಿದೆ. 3.24 ಟಿಎಂಸಿ ಸಾಮರ್ಥ್ಯದ ಈ ಅಣೆಕಟ್ಟೆಯಿಂದ ಈಗ ಸರಾಸರಿ 15 ಕ್ಯೂಸೆಕ್ ನೀರನ್ನು ನದಿಗೆ ಬಿಡಲಾಗುತ್ತಿದೆ.

    ಈ ಅಣೆಕಟ್ಟೆ ತುಂಬಿದಾಗ ವಿದ್ಯುತ್ ಉತ್ಪಾದನೆಯನ್ನೂ ಮಾಡಲಾಗುತ್ತಿದೆ. ಇದಕ್ಕಾಗಿ ಐದು ಸಾವಿರ ಕ್ಯೂಸೆಕ್ ನೀರು ಬಳಕೆ ಮಾಡಿಕೊಳ್ಳಲಾಗುತ್ತಿದೆ. ಇದೂವರೆಗೂ ತಳದಲ್ಲೇ ಇದ್ದ ತುಂಗಾ ನದಿ ಈಗ ಮೈದುಂಬಿ ಹರಿಯುತ್ತಿದೆ. ತುಂಬಿದ ಅಣೆಕಟ್ಟೆ ನೋಡಲು ಶಿವಮೊಗ್ಗ ಸೇರಿ ಹೊರ ಭಾಗಗಳಿಂದಲೂ ಪ್ರವಾಸಿಗರು ಆಗಮಿಸುತ್ತಿದ್ದಾರೆ.