Tag: Gagan

  • EXCLUSIVE: ಗೋವಿಂದ ಬಾಬು ಪೂಜಾರಿ ಕಚೇರಿಯಲ್ಲಿ ವಿಷ ಕುಡಿಯೋ ನಾಟಕವಾಡಿದ್ದ ಗಗನ್!

    EXCLUSIVE: ಗೋವಿಂದ ಬಾಬು ಪೂಜಾರಿ ಕಚೇರಿಯಲ್ಲಿ ವಿಷ ಕುಡಿಯೋ ನಾಟಕವಾಡಿದ್ದ ಗಗನ್!

    ಬೆಂಗಳೂರು: ಚೈತ್ರಾ ಕುಂದಾಪುರ (Chaitra Kundapura) ಹಾಗೂ ಗ್ಯಾಂಗ್ ಉದ್ಯಮಿಗೆ ವಂಚನೆ ಮಾಡಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ಒಂದೊಂದೇ ಅಚ್ಚರಿಯ ವಿಚಾರಗಳು ಬಯಲಾಗುತ್ತಿದೆ. ಸದ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಚೈತ್ರಾ ಹಾಗೂ ಗ್ಯಾಂಗ್ ನಾಟಕದ ವೀಡಿಯೋವೊಂದು ಎಕ್ಸ್ ಕ್ಲೂಸೀವ್ ಆಗಿ ಪಬ್ಲಿಕ್ ಟಿವಿಗೆ ಲಭ್ಯವಾಗಿದೆ.

    ಚೈತ್ರಾ ಗ್ಯಾಂಗ್ ಮಾಡ್ತಿರುವ ಮೋಸ ಗೊತ್ತಾಗಿ ಗೋವಿಂದ ಬಾಬು ಕೊಟ್ಟ ಹಣವನ್ನು ವಾಪಸ್ ಮಾಡುವಂತೆ ಡಿಮ್ಯಾಂಡ್ ಮಾಡಿದ್ರು. ಹೀಗಾಗಿ ಏಪ್ರಿಲ್ 24ರಂದು ಗೋವಿಂದಬಾಬು ಕಚೇರಿಗೆ ಬಂದ ಚೈತ್ರಾ, ಗಗನ್ ಕಡೂರು ಮತ್ತು ಇತರರು ಮುಂಚಿತವಾಗಿಯೇ ಮಾಡಿದ ಪ್ಲಾನ್ ರೀತಿ ದೊಡ್ಡ ಹೈಡ್ರಾಮಾವನ್ನೇ ಮಾಡಿದ್ರು.

    ಗೋವಿಂದ ಬಾಬು ಕಚೇರಿಗೆ ಪ್ರಮುಖ ಆರೋಪಿ ಚೈತ್ರಾ, 2ನೇ ಆರೋಪಿ ಗಗನ್ ಕಡೂರು, 7ನೇ ಆರೋಪಿ ಕಿಶೋರ್, 8ನೇ ಆರೋಪಿ ಪ್ರಶಾಂತ್ ಬೈಂದೂರು ಆಗಮಿಸಿ ಸಂಧಾನಕ್ಕೆ ಯತ್ನಿಸಿದ್ರು. ಆದ್ರೆ, ಇದಕ್ಕೆ ಒಪ್ಪದೇ 5 ಕೋಟಿ ಹಣಕ್ಕೆ ಗೋವಿಂದ ಬಾಬು ಪಟ್ಟು ಹಿಡಿದ ಹಿನ್ನೆಲೆಯಲ್ಲಿ ಖಾಲಿ ವಿಷದ ಬಾಟಲಿಯಲ್ಲಿ ನೀರು ತುಂಬಿಕೊಂಡು, ಅದನ್ನೇ ಕುಡಿದು ಆತ್ಮಹತ್ಯೆಗೆ ಯತ್ನಿಸುವ ರೀತಿ ಗಗನ್ ಕಡೂರು ಡ್ರಾಮಾ ಮಾಡಿದ್ರು.

    ಈ ವೇಳೆ ಎ1 ಆರೋಪಿ ಚೈತ್ರಾ, ಗಗನ್ ಜೀವ ರಕ್ಷಣೆ ಮಾಡೋ ರೀತಿ ನಾಟಕ ಮಾಡಿದ್ರು. ಇದೀಗ ಈ ವಿಡಿಯೋ ಸಿಸಿಬಿಗೆ ಪ್ರಬಲ ಸಾಕ್ಷ್ಯವಾಗಲಿದೆ. ಅಂದ ಹಾಗೇ, ಪಬ್ಲಿಕ್ ಟಿವಿ ಜೊತೆ ನಿನ್ನೆ ಮಾತಾಡಿದ್ದ ಗೋವಿಂದ ಬಾಬು ಸಿಬ್ಬಂದಿ ಆರ್ಯ ಎನ್ನುವವರು, ಚೈತ್ರಾ ಗ್ಯಾಂಗ್ ಆತ್ಮಹತ್ಯೆ ಡ್ರಾಮಾ ಮಾಡಿತ್ತು. ಇದಕ್ಕೆ ನಾನೆ ಸಾಕ್ಷಿ ಅಂದಿದ್ರು. ಇದನ್ನೂ ಓದಿ: ನನ್ನ ಮುಖ ನೋಡಿ ಯಾರ್ ದುಡ್ಡು ಕೊಡ್ತಾರೆ ಮೇಡಂ: ಚೈತ್ರಾ ಹೇಳಿದ್ದೇನು?

    ಇಂದು ಬೆಳಗ್ಗೆಯಷ್ಟೇ ಸಿಸಿಬಿ ವಿಚಾರಣೆ ನಡೆಸುತ್ತಿದ್ದ ಸಂದರ್ಭದಲ್ಲಿ ಚೈತ್ರಾ ಕುಂದಾಪುರ ಕುಸಿದು ಬಿದ್ದಿದ್ದರು. ಕೂಡಲೇ ಆಕೆಯನ್ನು ವಿಕ್ಟೋರಿಯಾ ಆಸ್ಪತ್ರೆಗೆ (Victoria Hospital) ದಾಖಲಿಸಿ ಚಿಕಿತ್ಸೆ ಕೊಡಿಸಿದ್ದಾರೆ. ಅಚ್ಚರಿ ಅಂದ್ರೆ ಚೈತ್ರಾ ಕುಸಿದು ಬಿದ್ದಾಗ ಆಕೆಯ ಬಾಯಲ್ಲಿ ನೊರೆ ಬಂದಿತ್ತು. ಹೀಗಾಗಿ ಆಕೆಗೆ ಪಿಡ್ಸ್ ಬಂದಿರಬಹುದು ಎಂದು ಊಹಿಸಲಾಗಿತ್ತು. ಆದರೆ ಮೂರ್ಛೆ ರೋಗ ಅಲ್ಲ ಎಂದು ಬೆಂಗಳೂರು ವೈದ್ಯಕೀಯ ಕಾಲೇಜು ಮತ್ತು ಸಂಶೋಧನಾ ಸಂಸ್ಥೆಯ  ಪ್ರಾಂಶುಪಾಲೆ ಆಸೀಮಾ ಬಾನು ಹೇಳಿದ್ದರು.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಏಷ್ಯಾ ಪೆಸಿಫಿಕ್ ವಲಯದಲ್ಲೇ ಫಸ್ಟ್ – ಸ್ವದೇಶಿ ನ್ಯಾವಿಗೇಷನ್ ಬಳಸಿ ಲ್ಯಾಂಡಿಂಗ್

    ಏಷ್ಯಾ ಪೆಸಿಫಿಕ್ ವಲಯದಲ್ಲೇ ಫಸ್ಟ್ – ಸ್ವದೇಶಿ ನ್ಯಾವಿಗೇಷನ್ ಬಳಸಿ ಲ್ಯಾಂಡಿಂಗ್

    ನವದೆಹಲಿ: ಏಷ್ಯಾ ಪೆಸಿಫಿಕ್ ವಲಯದಲ್ಲಿ ಮೊದಲ ಬಾರಿಗೆ ಇಂಡಿಗೋ ಸ್ವದೇಶಿ ನ್ಯಾವಿಗೇಷನ್ ಸಿಸ್ಟಮ್ ‘ಗಗನ್’ ಅನ್ನು ಬಳಸಿಕೊಂಡು ವಿಮಾನವನ್ನು ಲ್ಯಾಂಡ್ ಮಾಡಿದೆ.

    ಎಟಿಆರ್-72 ವಿಮಾನ ಜಿಯೋ ಆಗ್ಮೆಂಟೆಡ್ ನ್ಯಾವಿಗೇಷನ್(ಗಗನ್) ಜಿಪಿಎಸ್ ಬಳಸಿಕೊಂಡು ಬುಧವಾರ ರಾಜಸ್ಥಾನದ ಕಿಶನ್‌ಗಢ ವಿಮಾನ ನಿಲ್ದಾಣದಲ್ಲಿ ಭೂಸ್ಪರ್ಶ ಮಾಡಿತು.

    ಗಗನ್ ಅನ್ನು ಸೆಂಟರ್-ರನ್ ಏರ್‌ಪೋರ್ಟ್ಸ್ ಅಥಾರಿಟಿ ಆಫ್ ಇಂಡಿಯಾ(ಎಎಐ) ಹಾಗೂ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ(ಇಸ್ರೋ) ಜಂಟಿಯಾಗಿ ಅಭಿವೃದ್ಧಿಪಡಿಸಿದೆ. ಇದನ್ನೂ ಓದಿ: ವಿದ್ಯುತ್‌ ಸಮಸ್ಯೆ – ಕಲ್ಲಿದ್ದಲು ಸಾಗಾಟಕ್ಕೆ 650ಕ್ಕೂ ಹೆಚ್ಚು ಪ್ರಯಾಣಿಕ ರೈಲುಗಳ ಸಂಚಾರ ರದ್ದು

    ವಿಮಾನ ಲ್ಯಾಂಡಿಂಗ್ ಮಾಡಲು ರನ್‌ವೇ ಸಮೀಪಿಸುವ ಸಂದರ್ಭದಲ್ಲಿ ಪಾರ್ಶ್ವ ಹಾಗೂ ಲಂಬ ಮಾರ್ಗದರ್ಶನವನ್ನು ಇದು ನೀಡುತ್ತದೆ. ಕೆಲವು ಸಣ್ಣ ವಿಮಾನ ನಿಲ್ದಾಣಗಳಲ್ಲಿ ಇನ್‌ಸ್ಟ್ರುಮೆಂಟಲ್ ಲ್ಯಾಂಡಿಂಗ್ ಸಿಸ್ಟಮ್(ಐಎಲ್‌ಎಸ್) ಇಲ್ಲದೇ ಇರುವ ಸಂದರ್ಭದಲ್ಲಿ ಇದು ಬಹಳ ಉಪಯುಕ್ತವಾಗಿದೆ.

    ಭಾರತದ ನಾಗರಿಕ ವಿಮಾನಯಾನ ವಲಯದಲ್ಲಿ ಗಗನ್ ವಾಯುಪ್ರದೇಶವನ್ನು ಆಧುನೀಕರಿಸುತ್ತದೆ. ವಿಮಾನ ಸಂಚಾರದಲ್ಲಿ ವಿಳಂಬವಾಗುವುದನ್ನು ಕಡಿಮೆ ಮಾಡುತ್ತದೆ ಹಾಗೂ ಇಂಧನ ಉಳಿತಾಯ, ಸುರಕ್ಷತೆಯನ್ನು ಹೆಚ್ಚಿಸುತ್ತದೆ ಎಂದು ತಿಳಿಸಿದೆ. ಇದನ್ನೂ ಓದಿ: ಚೇತನ್ ಸಕಾರಿಯಾ ‘ಡ್ರ್ಯಾಗನ್ ಬಾಲ್ Z’ ಸಂಭ್ರಮಾಚರಣೆ ಹಿಂದಿದೆ ಭಾವನಾತ್ಮಕ ಸಂಬಂಧ

    ಭಿನ್ನ ಹೇಗೆ?
    ಗಗನ್ ಸ್ಯಾಟಲೈಟ್ ಬೇಸ್ಡ್ ಲ್ಯಾಂಡಿಂಗ್ ಸಿಸ್ಟಮ್‌ನಂತೆಯೇ ಪೈಲಟ್‌ಗಳಿಗೆ ಲ್ಯಾಂಡಿಂಗ್ ವೇಳೆ ಸಹಾಯ ಮಾಡುತ್ತದೆ. ಭೂಮಿಯಿಂದ 550 ಮೀ. ಗಿಂತಲೂ ಹೆಚ್ಚಿನ ದೂರದಲ್ಲಿಯೂ ಇದು ಪೈಲಟ್‌ಗಳಿಗೆ ರನ್‌ವೇ ಗೋಚರಿಸುವಂತೆ ಮಾಡಿ, ವಿಮಾನವನ್ನು ಲ್ಯಾಂಡ್ ಮಾಡಬೇಕೇ ಬೇಡವೇ ಎಂಬುದನ್ನು ನಿರ್ಧರಿಸಲು ಸಹಾಯ ಮಾಡುತ್ತದೆ. ಒಂದು ವ್ಯತ್ಯಾಸವೆಂದರೆ ಸೈಡ್ ಗ್ರೌಂಡ್ ಬೇಸ್ಡ್ ಸಿಸ್ಟಮ್‌ನಲ್ಲಿ ಕೇವಲ 200 ಅಡಿ ಎತ್ತರದಿಂದ ಪೈಲೆಟ್ ಲ್ಯಾಂಡಿಂಗ್ ನಿರ್ಧಾರವನ್ನು ತೆಗೆದುಕೊಳ್ಳಬಹುದು.

    ಇಂದು ಪ್ರಯೋಗಿಕವಾಗಿ ಬಳಕೆಯಾದ ವಿಮಾನದಲ್ಲಿ 250 ಅಡಿ ಎತ್ತರದಿಂದಲೇ ಪೈಲಟ್ ನಿರ್ಧಾರವನ್ನು ತೆಗೆದುಕೊಂಡು ಲ್ಯಾಂಡ್ ಮಾಡಿದ್ದಾರೆ. ಇಂಡಿಗೋ ಪೈಲಟ್ ಗಗನ್ ಸ್ಯಾಟಲೈಟ್ ಮೂಲಕ ಲಂಬ ಮತ್ತು ಪಾರ್ಶ್ವದ ನ್ಯಾವಿಗೇಶನ್ ನೋಡಿಕೊಂಡು ಲ್ಯಾಂಡಿಂಗ್ ಮಾಡಿದ್ದಾರೆ.

    ಭಾರತದ ಗಗನ್ ಹೊರತುಪಡಿಸಿ ವಿಶ್ವದಲ್ಲಿ ಕೇವಲ 3 ಕಡೆಗಳಲ್ಲಿ ಇಂತಹ ವ್ಯವಸ್ಥೆಗಳಿವೆ. ಅವುಗಳೆಂದರೆ ಅಮೆರಿಕ(ಡಬ್ಲ್ಯುಎಎಸ್), ಯುರೋಪ್(ಇಜಿಎನ್‌ಒಎಸ್) ಹಾಗೂ ಜಪಾನ್‌ನ (ಎಮ್‌ಎಸ್‌ಎಎಸ್).

    ಜುಲೈ ತಿಂಗಳಿನಲ್ಲಿ ಭಾರತದಲ್ಲಿ ನೋಂದಾಯಿಸಲಾದ ಎಲ್ಲಾ ವಿಮಾನಗಳಿಗೂ ಗಗನ್ ಉಪಕರಣವನ್ನು ಅಳವಡಿಸಲು ನಾಗರಿಕ ವಿಮಾನಯಾನ ನಿರ್ದೇಶನಾಲಯ ಆದೇಶ ನೀಡಿದೆ.