Tag: gadgets

  • ಮೊಬೈಲ್‌, ಲ್ಯಾಪ್‌ಟಾಪ್‌, ಟ್ಯಾಬ್ಲೆಟ್‌ಗೆ ಇನ್ಮುಂದೆ ಒಂದೇ ಚಾರ್ಜರ್‌?

    ಮೊಬೈಲ್‌, ಲ್ಯಾಪ್‌ಟಾಪ್‌, ಟ್ಯಾಬ್ಲೆಟ್‌ಗೆ ಇನ್ಮುಂದೆ ಒಂದೇ ಚಾರ್ಜರ್‌?

    ನವದೆಹಲಿ: ಸರ್ಕಾರದ ನಿರ್ಧಾರಕ್ಕೆ ಕಂಪನಿಗಳು ಒಪ್ಪಿಗೆ ನೀಡಿದರೆ ಭಾರತದಲ್ಲೂ ಮೊಬೈಲ್‌, ಲ್ಯಾಪ್‌ಟಾಪ್‌, ಟ್ಯಾಬ್ಲೆಟ್‌ಗಳಲ್ಲಿ ಇನ್ನು ಮುಂದೆ ಒಂದೇ ರೀತಿಯ ಚಾರ್ಜರ್‌ ಅನ್ನು ಬಳಕೆ ಮಾಡಬಹುದು.

    ಹೌದು. ಲ್ಯಾಪ್‌ಟ್ಯಾಪ್‌, ಮೊಬೈಲ್‌, ಟ್ಯಾಬ್ಲೆಟ್‌ಗಳಿಗೆ ಒಂದೇ ರೀತಿಯ ಚಾರ್ಜರ್‌ ಪೋರ್ಟ್‌ ಕಡ್ಡಾಯ ಮಾಡಲು ಕೇಂದ್ರ ಸರ್ಕಾರ  ಚಿಂತನೆ ನಡೆಸಿದೆ. ಈ ಸಂಬಂಧ ಆ.17 ರಂದು ಗ್ರಾಹಕ ಸಚಿವಾಲಯ ಮೊಬೈಲ್‌ ತಯಾರಕಾ ಕಂಪನಿಗಳ ಜೊತೆ ಸಭೆ ನಡೆಸಲು ಮುಂದಾಗಿದೆ.

    ಫೀಚರ್‌ ಫೋನ್‌ಗಳಿಗೆ ಮಾತ್ರ ಪ್ರತ್ಯೇಕ ಚಾರ್ಜಿಂಗ್‌ ಹೊರತುಪಡಿಸಿ ಸ್ಮಾರ್ಟ್‌ಫೋನ್‌, ಟ್ಯಾಬ್ಲೆಟ್‌, ಲ್ಯಾಪ್‌ಟಾಪ್‌, ಇಯರ್‌ ಬಡ್‌ ನಂತಹ ಸಾಧನಗಳಿಗೆ ಒಂದೇ ರೀತಿಯ ಚಾರ್ಜಿಂಗ್‌ ಪೋರ್ಟ್‌ ನೀಡುವುದು ಸರ್ಕಾರ ಉದ್ದೇಶ. ಇದನ್ನೂ ಓದಿ: 12 ಸಾವಿರಕ್ಕಿಂತ ಕಡಿಮೆ ಬೆಲೆಯ ಚೀನಿ ಫೋನ್‌ ಬ್ಯಾನ್‌? – ಭಾರತದಲ್ಲಿ ಯಾವ ಕಂಪನಿಯ ಪಾಲು ಎಷ್ಟಿದೆ?

    ಭಾರತ ವಿಶ್ವದ ಎರಡನೇ ಅತಿ ದೊಡ್ಡ ಮೊಬೈಲ್‌ ಮಾರುಕಟ್ಟೆಯಾಗಿರುವ ಕಾರಣ ದೇಶದಲ್ಲಿ ಇ-ತ್ಯಾಜ್ಯಗಳ ಪ್ರಮಾಣ ಹೆಚ್ಚಾಗುತ್ತಿದೆ. ಇ -ತ್ಯಾಜ್ಯಗಳನ್ನು ಕಡಿಮೆ ಮಾಡುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಈಗ ಮಹತ್ವದ ಹೆಜ್ಜೆಯನ್ನು ಇರಿಸಿದೆ.

    ಈಗಾಗಲೇ ಯುರೋಪಿಯನ್‌ ಯೂನಿಯನ್‌ ಸಣ್ಣ ಎಲೆಕ್ಟ್ರಾನಿಕ್‌ ಸಾಧನಗಳಿಗೆ ಯುಎಸ್‌ಬಿ-ಸಿ ಪೋರ್ಟ್‌ ಕಡ್ಡಾಯ ಮಾಡಿದ್ದು 2024ರಲ್ಲಿ ಜಾರಿಗೆ ಬರಲಿದೆ. ಅದೇ ರೀತಿಯ ಬೇಡಿಕೆ ಈಗ ಅಮೆರಿಕದಲ್ಲೂ ವ್ಯಕ್ತವಾಗುತ್ತಿದೆ.

     

    ಅಮೆರಿಕ ಮತ್ತು ಯುರೋಪ್‌ನಲ್ಲಿ ಕಂಪನಿಗಳು ಒಂದೇ ರೀತಿಯ ಚಾರ್ಜಿಂಂಗ್‌ ಪೋರ್ಟ್‌ ನೀಡಲು ಸಾಧ್ಯವಾದರೆ ಭಾರತದಲ್ಲಿ ಯಾಕೆ ಸಾಧ್ಯವಿಲ್ಲ?. ಭಾರತ ಈಗಲೇ ಈ ಬದಲಾವಣೆ ಮಾಡದೇ ಇದ್ದಲ್ಲಿ ಆ ಉತ್ಪನ್ನಗಳು ನಮ್ಮ ದೇಶಕ್ಕೆ ಬರುವ ಸಾಧ್ಯತೆಯಿದೆ ಎಂದು ಗ್ರಾಹಕ ಸಚಿವಾಲಯದ ಅಧಿಕಾರಿಯೊಬ್ಬರು ಪ್ರತಿಕ್ರಿಯಿಸಿದ್ದಾರೆ.

    2009ರಲ್ಲಿ 30ಕ್ಕೂ ಹೆಚ್ಚು ಮಾದರಿಯ ಚಾರ್ಜರ್‌ಗಳು ಬಳಕೆಯಲ್ಲಿದ್ದವು. ಆದರೆ ಈಗ ಕಂಪನಿಗಳು ಯುಎಸ್‍ಬಿ ಸಿ, ಲೈಟ್ನಿಂಗ್ ಮತ್ತು ಯುಎಸ್‍ಬಿ ಮೈಕ್ರೋ-ಬಿ ಚಾರ್ಜರ್ ಗಳನ್ನು ನೀಡುತ್ತಿವೆ. ವೈರ್‌ಲೆಸ್‌ ಚಾರ್ಜರ್‌ಗಳಿಗೆ ಯಾವುದೇ ಸಮಸ್ಯೆ ಇಲ್ಲ.



    ಆಂಡ್ರಾಯ್ಡ್ ಫೋನುಗಳ ಪೈಕಿ ಕೆಲವು ಈಗ ಯುಎಸ್‍ಬಿ ಮೈಕ್ರೋ ಬಿ ಪೋರ್ಟ್ ನಲ್ಲಿ ಬಿಡುಗಡೆಯಾಗಿದ್ದರೆ, ಕೆಲವು ಕಂಪನಿಗಳು ಯುಎಸ್‍ಬಿ ಟೈಪ್ ಸಿ ಪೋರ್ಟ್‌ನಲ್ಲಿ ಫೋನುಗಳನ್ನು ಬಿಡುಗಡೆ ಮಾಡುತ್ತಿವೆ. ಯುರೋಪಿಯನ್‌ ಒಕ್ಕೂಟದ ತೀರ್ಮಾನಕ್ಕೆ ಆಪಲ್‌ ಕಂಪನಿ ಆರಂಭದಲ್ಲಿ ವಿರೋಧ ವ್ಯಕ್ತಪಡಿಸಿತ್ತು. ಇದು ಆವಿಷ್ಕಾರಕ್ಕೆ ಹಿನ್ನಡೆಯಾಗುತ್ತದೆ ಎಂದು ಹೇಳಿತ್ತು.

    ಯುಎಸ್‍ಬಿ-ಸಿ ಮಾದರಿಯ ಚಾರ್ಜಿಂಗ್ ಪೋರ್ಟ್ ಹೊರತು ಪಡಿಸಿ ಬೇರೆ ಯಾವುದೇ ಪೋರ್ಟ್ ಇರುವ ಫೋನುಗಳನ್ನು 2024ರ ನಂತರ ಯುರೋಪಿಯನ್‌ ಒಕ್ಕೂಟ ದೇಶಗಳಲ್ಲಿ ಮಾರಾಟ ಮಾಡಿದರೆ ಅದನ್ನು ಅಕ್ರಮ ಮಾರಾಟ ಎಂದು ಪರಿಗಣಿಸಲಾಗುತ್ತದೆ.

    Live Tv
    [brid partner=56869869 player=32851 video=960834 autoplay=true]

  • ವಾಟ್ಸಪ್ ಯೂ ಟರ್ನ್ – ಇನ್ನು ಮುಂದೆ ಬರುತ್ತೆ ಜಾಹೀರಾತು!

    ವಾಟ್ಸಪ್ ಯೂ ಟರ್ನ್ – ಇನ್ನು ಮುಂದೆ ಬರುತ್ತೆ ಜಾಹೀರಾತು!

    ಕ್ಯಾಲಿಫೋರ್ನಿಯಾ: ಯಾವುದೇ ಕಾರಣಕ್ಕೂ ಜಾಹೀರಾತು ಪ್ರಕಟಿಸುವುದಿಲ್ಲ ಎಂದು ಹೇಳಿದ್ದ ವಾಟ್ಸಪ್ ಈಗ ತನ್ನ ಈ ನಿರ್ಧಾರದಲ್ಲಿ ಯೂ ಟರ್ನ್ ಹೊಡೆಯುವ ಸಾಧ್ಯತೆಯಿದೆ.

    ಹೌದು, ಫೇಸ್ ಬುಕ್ ಮಾಲೀಕತ್ವದ ವಾಟ್ಸಪ್ ನಲ್ಲಿ ಇನ್ನು ಮುಂದೆ ಜಾಹೀರಾತು ಪ್ರಕಟಗೊಳ್ಳಲಿದೆ. ಪ್ರಸ್ತುತ ವಾಟ್ಸಪ್ ಬಳಕೆದಾರರ ಪೈಕಿ ಶೇ.50 ರಷ್ಟು ಬಳಕೆದಾರರು ಸ್ಟೇಟಸ್ ಅಪ್‍ಡೇಟ್ ಮಾಡುತ್ತಿದ್ದಾರೆ. ಈ ಸ್ಟೇಟಸ್ ಅಪ್‍ಡೇಟ್ ಮಾಡುವ ಜಾಗದಲ್ಲೇ ಜಾಹೀರಾತನ್ನು ಪ್ರಕಟಿಸಲು ವಾಟ್ಸಪ್ ಸಿದ್ಧತೆ ನಡೆಸಿದೆ ಎಂದು ಮಾಧ್ಯಮವೊಂದು ವರದಿ ಪ್ರಕಟಿಸಿದೆ.

    ಇಲ್ಲಿಯವರೆಗೆ ವಾಟ್ಸಪ್ ನಲ್ಲಿ ಖಾತೆ ತೆರೆಯಲು ಫೋನ್ ನಂಬರ್ ಇದ್ದರೆ ಸಾಕಿತ್ತು. ವರ್ಷ, ಇಮೇಲ್, ಆಸಕ್ತಿ ವಿಚಾರಗಳನ್ನು ಕೇಳುತ್ತಿರಲಿಲ್ಲ. ಆದರೆ ಈಗ ಜಾಹೀರಾತು ಪ್ರಕಟಿಸಲು ಮುಂದಾಗಿದ್ದು, ಯಾವ ರೀತಿ ಬಳಕೆದಾರರ ಡೇಟಾ ಪಡೆದು ಜಾಹೀರಾತು ಪ್ರಕಟಿಸುತ್ತದೆ ಎನ್ನುವ ಪ್ರಶ್ನೆ ಎದ್ದಿದೆ.

    ಫೇಸ್ ಬುಕ್ ನಲ್ಲಿ ಬಳಕೆದಾರರ ಆಸಕ್ತಿಯನ್ನು ನೋಡಿಕೊಂಡು ಜಾಹೀರಾತುಗಳು ಅವರ ವಾಲಿನಲ್ಲಿ ಕಾಣಿಸಿಕೊಳ್ಳುತ್ತದೆ. ಆದರೆ ವಾಟ್ಸಪ್ ಬಳಕೆದಾರ ಈ ವಿಚಾರದ ಬಗ್ಗೆಯೇ ಆಸಕ್ತಿ ಹೊಂದಿದ್ದಾನೆ ಎನ್ನುವುದನ್ನು ತಿಳಿಯಲು ಸಾಧ್ಯವಿಲ್ಲ. ಹೀಗಾಗಿ ಜಿಪಿಎಸ್ ಮಾಹಿತಿಯನ್ನು ಆಧಾರಿಸಿ ಅಥವಾ ಫೋನ್ ನಂಬರ್ ಯಾವ ರಾಜ್ಯದ ವ್ಯಾಪ್ತಿಗೆ ಬರುತ್ತದೋ ಆ ಮಾಹಿತಿಯನ್ನು ಆಧಾರಿಸಿ ಜಾಹೀರಾತು ಪ್ರಕಟಿಸುತ್ತಾ ಎನ್ನುವ ಪ್ರಶ್ನೆ ಈಗ ಹುಟ್ಟಿಕೊಂಡಿದೆ.

    ಫೇಸ್‍ಬುಕ್ ಈಗಾಗಲೇ ಒಂದೊಂದೆ ಆದಾಯದ ಮೂಲಗಳನ್ನು ಹುಡುಕುತ್ತಿದೆ. ಇನ್ ಸ್ಟಾಗ್ರಾಮ್ ನಲ್ಲಿ ಜಾಹೀರಾತು ಪ್ರಕಟಿಸುತ್ತಿದೆ. ಇದರ ಜೊತೆಯಲ್ಲಿ ಮೆಸೇಂಜಿಂಗ್ ಅಪ್ಲಿಕೇಶನ್ ಗಳಲ್ಲಿ ನಂಬರ್ ಒನ್ ಸ್ಥಾನದಲ್ಲಿರುವ ವಾಟ್ಸಪ್ ನಲ್ಲೂ ಆದಾಯ ಮಾಡಲು ಸಿದ್ಧತೆ ನಡೆಸುತ್ತಿದ್ದು, ಮುಂದಿನ ವಾಟ್ಸಪ್ ಅಪ್‍ಡೇಟ್ ನಲ್ಲಿ ಈ ವಿಶೇಷತೆ ಸೇರ್ಪಡೆಯಾಗುವ ಸಾಧ್ಯತೆಯಿದೆ.

    ಈ ಹಿಂದೆ ವಾಟ್ಸಪ್ ತನ್ನ ಬ್ಲಾಗಿನಲ್ಲಿ ನಾವು ಯಾವುದೇ ಕಾರಣಕ್ಕೂ ಜಾಹೀರಾತನ್ನು ಪ್ರಕಟಿಸುವುದಿಲ್ಲ ಎಂದು ಹೇಳಿತ್ತು.

    ಫೇಸ್‍ಬುಕ್ ಮಾಲೀಕತ್ವದ ವಾಟ್ಸಪ್ ಕಂಪೆನಿ ಗ್ರಾಹಕರ ಅನುಮತಿ ಪಡೆಯದೇ ಅವರ ಡೇಟಾವನ್ನು ಫೇಸ್‍ಬುಕ್ ನಲ್ಲಿ ಬಳಕೆ ಮಾಡುತ್ತಿದೆ ಎಂದು ಈ ಹಿಂದೆ ಯುರೋಪಿಯನ್ ಜನರಲ್ ಡೇಟಾ ಪ್ರೊಟೆಕ್ಷನ್ ರೆಗ್ಯುಲೇಶನ್ ಆರೋಪಿಸಿತ್ತು. ಈ ಆರೋಪಕ್ಕೆ ತನ್ನ ಬ್ಲಾಗ್ ನಲ್ಲಿ ಪ್ರತಿಕ್ರಿಯಿಸಿರುವ ವಾಟ್ಸಪ್ ಗ್ರಾಹಕರ ಯಾವುದೇ ಮಾಹಿತಿಯನ್ನು ನಾವು ಫೇಸ್‍ಬುಕ್ ನಲ್ಲಿ ಬಳಕೆ ಮಾಡುತ್ತಿಲ್ಲ. ಅಷ್ಟೇ ಅಲ್ಲದೇ ಸ್ಪಾಮ್ ಮೆಸೇಜ್ ಕಳುಹಿಸುವುದಿಲ್ಲ ಎಂದು ತಿಳಿಸಿತ್ತು.

  • ಸ್ಯಾಮ್‍ಸಂಗ್  2 ಫೋನ್ ಗಳ ಬೆಲೆ ದಿಢೀರ್ ಭಾರೀ ಇಳಿಕೆ

    ಸ್ಯಾಮ್‍ಸಂಗ್ 2 ಫೋನ್ ಗಳ ಬೆಲೆ ದಿಢೀರ್ ಭಾರೀ ಇಳಿಕೆ

    ನವದೆಹಲಿ: ಈ ವರ್ಷದ ಮಾರ್ಚ್ ನಲ್ಲಿ ಭಾರತದ ಮಾರುಕಟ್ಟೆಗೆ ಬಿಡುಗಡೆಯಾಗಿದ್ದ ಸ್ಯಾಮ್‍ಸಂಗ್ ಗೆಲಾಕ್ಸಿ ಎ5 ಮತ್ತು ಎ7 ಫೋನ್ ಗಳ ಬೆಲೆ ಭಾರೀ ಇಳಿಕೆಯಾಗಿದೆ.

    ಗೆಲಾಕ್ಸಿ ಎ5 28,900 ರೂ. ಬೆಲೆಯಲ್ಲಿ ಬಿಡುಗಡೆಯಾಗಿತ್ತು. ಈಗ ಈ ಫೋನ್ 22,900 ರೂ. ಬೆಲೆಗೆ ಲಭ್ಯವಿದೆ. ಗೆಲಾಕ್ಸಿ ಎ7 33,490 ರೂ. ಬೆಲೆಗೆ ಬಿಡುಗಡೆಯಾಗಿದ್ದರೆ, ಈಗ ಈ ಫೋನ್ 25,900 ರೂ. ಬೆಲೆಗೆ ಲಭ್ಯವಿದೆ.

    ಗೆಲಾಕ್ಸಿ ಎ7 ಗುಣವೈಶಿಷ್ಟ್ಯಗಳು:


    ಬಾಡಿ, ಡಿಸ್ಲ್ಪೇ:
    ಡ್ಯುಯಲ್ ಸಿಮ್, 186 ಗ್ರಾಂ ತೂಕ, 5.7 ಇಂಚಿನ ಸೂಪರ್ ಅಮೊಲೆಡ್ ಸ್ಕ್ರೀನ್(1080* 1920 ಪಿಕ್ಸೆಲ್, 386 ಪಿಪಿಐ) ಕಾರ್ನಿಂಗ್ ಗೊರಿಲ್ಲ ಗ್ಲಾಸ್ 4 ಹೊಂದಿದೆ.

    ಓಎಸ್ ಮತ್ತು ಮೆಮೊರಿ:
    ಆಂಡ್ರಾಯ್ಡ್ 6.0.1 ಮಾರ್ಶ್ ಮೆಲೋ ಓಎಸ್, ಅಕ್ಟಾಕೋರ್ 1.9 GHz ಕಾರ್ಟೆಕ್ಸ್ ಎ53 ಪ್ರೊಸೆಸರ್, ಮಲಿ ಗ್ರಾಫಿಕ್ಸ್ ಪ್ರೊಸೆಸರ್,256 ಜಿಬಿವರೆಗೆ ವಿಸ್ತರಿಸಬಹುದಾದ ಶೇಖರಣಾ ಸಾಮರ್ಥ್ಯ, 32ಜಿಬಿ ಆಂತರಿಕ ಮೆಮೊರಿ, 3 ಜಿಬಿ ರಾಮ್

    ಕ್ಯಾಮೆರಾ, ಬ್ಯಾಟರಿ:
    16 ಎಂಪಿ ಹಿಂದುಗಡೆ ಕ್ಯಾಮೆರಾ, 16 ಎಂಪಿ ಮುಂದುಗಡೆ ಕ್ಯಾಮೆರಾ, ಫಿಂಗರ್ ಪ್ರಿಂಟ್ ಸ್ಕ್ಯಾನರ್, ತೆಗೆಯಲು ಅಸಾಧ್ಯವಾದ ಲಿಯಾನ್ 3600 ಎಂಎಎಚ್ ಬ್ಯಾಟರಿ.

    ಗೆಲಾಕ್ಸಿ ಎ5 ಗುಣವೈಶಿಷ್ಟ್ಯಗಳು:

     

    ಬಾಡಿ, ಡಿಸ್ಲ್ಪೇ:
    ಡ್ಯುಯಲ್ ಸಿಮ್, 5.2 ಇಂಚಿನ ಸೂಪರ್ ಅಮೊಲೆಡ್ ಸ್ಕ್ರೀನ್(1080*1920 ಪಿಕ್ಸೆಲ್, 424 ಪಿಪಿಐ), ಕಾರ್ನಿಂಗ್ ಗೊರಿಲ್ಲ ಗ್ಲಾಸ್ 4

    ಪ್ಲಾಟ್‍ಫಾರಂ, ಮೆಮೊರಿ:
    ಆಂಡ್ರಾಯ್ಡ್ ಮಾರ್ಶ್ ಮೆಲೋ ಓಎಸ್, ಅಕ್ಟಾಕೋರ್ 1.9 GHz ಕಾರ್ಟೆಕ್ಸ್ ಎ53 ಪ್ರೊಸೆಸರ್, ಮಲಿ ಗ್ರಾಫಿಕ್ಸ್ ಪ್ರೊಸೆಸರ್, 256 ಜಿಬಿ ವರೆಗೆ ವಿಸ್ತರಿಸಬಹುದಾದ ಶೇಖರಣಾ ಸಾಮರ್ಥ್ಯ 32 ಜಿಬಿ ಆಂತರಿಕ ಮೆಮೊರಿ, 3 ಜಿಬಿ ರಾಮ್

    ಕ್ಯಾಮೆರಾ, ಬ್ಯಾಟರಿ:
    16 ಎಂಪಿ ಹಿಂದುಗಡೆ ಕ್ಯಾಮೆರಾ, 16 ಎಂಪಿ ಮುಂದುಗಡೆ ಕ್ಯಾಮೆರಾ, ಫಿಂಗರ್ ಪ್ರಿಂಟ್ ಸ್ಕ್ಯಾನರ್, ಲಿಯಾನ್ 3000 ಎಂಎಎಚ್ ಬ್ಯಾಟರಿ

     

    https://youtu.be/UCq6iyvJcBw

  • ಹೊಸ ಇತಿಹಾಸ ಸೃಷ್ಟಿಸಿದ ರೆಡ್‍ಮೀ 4ಎ: ಜಸ್ಟ್ 4 ನಿಮಿಷದಲ್ಲಿ ಎಷ್ಟು ಫೋನ್ ಮಾರಾಟವಾಗಿದೆ ಗೊತ್ತಾ?

    ಹೊಸ ಇತಿಹಾಸ ಸೃಷ್ಟಿಸಿದ ರೆಡ್‍ಮೀ 4ಎ: ಜಸ್ಟ್ 4 ನಿಮಿಷದಲ್ಲಿ ಎಷ್ಟು ಫೋನ್ ಮಾರಾಟವಾಗಿದೆ ಗೊತ್ತಾ?

    ನವದೆಹಲಿ: ಚೀನಾದ ಕ್ಸಿಯೋಮಿ ಕೇವಲ ನಾಲ್ಕು ನಿಮಿಷದಲ್ಲಿ 2.50 ಲಕ್ಷ ರೆಡ್‍ಮೀ 4ಎ ಫೋನ್‍ಗಳನ್ನು ಮಾರಾಟ ಮಾಡುವ ಮೂಲಕ ಭಾರತದಲ್ಲಿ ಹೊಸ ಇತಿಹಾಸ ಸೃಷ್ಟಿಸಿದೆ.

    ರೆಡ್‍ಮೀ 4ಎ ಫೋನಿನ ಫ್ಲಾಶ್ ಸೇಲ್ ಅಮೇಜಾನ್ ಇಂಡಿಯಾ ಮತ್ತು ಎಂಐ.ಕಾಂನಲ್ಲಿ ಗುರುವಾರ ಮಧ್ಯಾಹ್ನ 12 ಗಂಟೆಗೆ ನಡೆದಿತ್ತು. ಅಮೆಜಾನ್ ಇಂಡಿಯಾದ ಪೋರ್ಟಲ್‍ನಲ್ಲಿ ಪ್ರತಿ ಸೆಕೆಂಡ್‍ಗೆ 1500 ಫೋನ್‍ಗಳು ಬುಕ್ ಆಗುತ್ತಿದ್ದರೆ, ಒಂದು ನಿಮಿಷಕ್ಕೆ 50 ಲಕ್ಷ ಹಿಟ್ಸ್ ಸಂಪಾದಿಸಿತ್ತು. ಬಿಡುಗಡೆಯಾದ ದಿನವೇ ದಾಖಲೆ ಪ್ರಮಾಣದಲ್ಲಿ ಇಷ್ಟೊಂದು ಫೋನ್ ಭಾರತದಲ್ಲಿ ಮಾರಾಟವಾಗಿರುವುದು ಇದೆ ಮೊದಲು ಎಂದು ಟೆಕ್ ಮಾಧ್ಯಮಗಳು ವರದಿ ಮಾಡಿವೆ.

    ಅಮೇಜಾನ್ ಇಂಡಿಯಾದ ಕೆಟಗರಿ ವಿಭಾಗದ ನಿರ್ದೇಶಕ ನೂರ್ ಪಟೇಲ್ ಪ್ರತಿಕ್ರಿಯಿಸಿ, ಗ್ರಾಗಕರ ಪ್ರತಿಕ್ರಿಯೆಯನ್ನು ನೋಡಿ ನಾವು ಥ್ರಿಲ್ ಆಗಿದ್ದೇವೆ. 10 ಲಕ್ಷಕ್ಕೂ ಹೆಚ್ಚು ಜನ ಈ ಫೋನಿಗೆ ನೋಟಿಫೈ ಮಾಡಿದ್ದರು ಎಂದು ತಿಳಿಸಿದ್ದಾರೆ.

    ಈ ಸೆಗ್ಮೆಂಟ್‍ನಲ್ಲಿ ಉತ್ತಮ ಗುಣ ವೈಶಿಷ್ಟ್ಯಗಳು ಇರುವ ಕಾರಣ ರೆಡ್‍ಮೀ 4ಎ ಗ್ರಾಹಕರನ್ನು ಸೆಳೆಯುತ್ತಿದೆ ಎಂದು ಕ್ಸಿಯೋಮಿ ಇಂಡಿಯಾದ ಆನ್‍ಲೈನ್ ಸೇಲ್ಸ್ ಮುಖ್ಯಸ್ಥ ರಘು ರೆಡ್ಡಿ ಹೇಳಿದ್ದಾರೆ.

    ಚೀನಾದಲ್ಲಿ ಕಳೆದ ವರ್ಷ 599 ಯುವಾನ್(ಅಂದಾಜು 5600 ರೂ.) ಬಿಡುಗಡೆಯಾಗಿದ್ದ ಈ ಫೋನ್ ಮಾರ್ಚ್ 20ರಂದು ಭಾರತದಲ್ಲಿ ಬಿಡುಗಡೆಯಾಗಿತ್ತು. ಈ ಫೋನಿಗೆ 5,999 ರೂ. ಬೆಲೆಯನ್ನು ಕ್ಸಿಯೋಮಿ ನಿಗದಿ ಮಾಡಿದೆ. ಮುಂದಿನ ಫ್ಲಾಶ್ ಸೇಲ್ ಮಾರ್ಚ್ 30ರ ಮಧ್ಯಾಹ್ನ 12 ಗಂಟೆಗೆ ನಡೆಯಲಿದೆ.

    ಹೈ ಬ್ರಿಡ್ ಸಿಮ್‍ಸ್ಲಾಟ್ ನೀಡಿರುವ ಕಾರಣ ಎರಡು ಸಿಮ್ ಸ್ಲಾಟ್ ಅಥವಾ ಒಂದು ನ್ಯಾನೋ ಸಿಮ್ ಕಾರ್ಡ್ ಮತ್ತು ಒಂದು ಮೆಮೊರಿ ಕಾರ್ಡ್ ಹಾಕಬಹುದು.

    ಎಲ್‍ಟಿಇ ತಂತ್ರಜ್ಞಾನಕ್ಕೆ ಈ ಫೋನ್ ಸಪೋರ್ಟ್ ಮಾಡುವ ಕಾರಣ ಇದರಲ್ಲಿ ಜಿಯೋ ಸಿಮ್ ಹಾಕಬಹುದು. ಬೆಲೆ ಕಡಿಮೆ ಇರುವುದರಿಂದ ಇದಕ್ಕೆ ಫಿಂಗರ್‍ಪ್ರಿಂಟ್ ಸೆನ್ಸರ್ ಅನ್ನು ಕ್ಸಿಯೋಮಿ ನೀಡಿಲ್ಲ. ಪ್ರಸ್ತತ ದೇಶದ ಆನ್‍ಲೈನ್ ಸ್ಮಾರ್ಟ್ ಫೋನ್ ವ್ಯಾಪಾರದಲ್ಲಿ ಶೇ.30ರಷ್ಟು ಪಾಲನ್ನು ಕ್ಸಿಯೋಮಿ ಪಡೆದುಕೊಂಡಿದೆ.

    ಗುಣವೈಶಿಷ್ಟ್ಯಗಳು:

    ಬಾಡಿ ಮತ್ತು ಡಿಸ್ಪ್ಲೇ:
    139.5*70.4*8.5. ಮಿ.ಮೀ ಗಾತ್ರ, 131.5 ಗ್ರಾಂ ತೂಕ, ಡ್ಯುಯಲ್ ಸಿಮ್, 5 ಇಂಚಿನ ಐಪಿಎಸ್ ಎಲ್‍ಸಿಡಿ ಸ್ಕ್ರೀನ್(720*1280 ಪಿಕ್ಸೆಲ್,294 ಪಿಪಿಐ ಹೊಂದಿದೆ.

    ಪ್ಲಾಟ್‍ಫಾರಂ ಮತ್ತು ಮೆಮೊರಿ:
    ಆಂಡ್ರಾಯ್ಡ್ 6.0.1 ಮಾರ್ಶ್‍ಮೆಲೋ ಓಎಸ್, 1.4 GHz ಕ್ವಾಲಕಂ ಸ್ನಾಪ್‍ಡ್ರಾಗನ್ ಕ್ವಾಡ್‍ಕೋರ್ ಪ್ರೊಸೆಸರ್, 16 ಜಿಬಿ ಆಂತರಿಕ ಮೆಮೊರಿ, 2 ಜಿಬಿ ರಾಮ್,2ನೇ ಸಿಮ್ ಸ್ಲಾಟ್‍ನಲ್ಲಿ ಕಾರ್ಡ್ ಹಾಕಿದ್ರೆ 256 ಜಿಬಿವರೆಗೆ ಮೆಮೆರಿ ಹಾಕಬಹುದು.

    ಇತರೇ:
    ಹಿಂದುಗಡೆ 13 ಎಂಪಿ, ಮುಂದುಗಡೆ 5 ಎಂಪಿ ಕ್ಯಾಮೆರಾ, ತೆಗೆಯಲು ಅಸಾಧ್ಯವಾದ ಲಿಯಾನ್ 3120 ಎಂಎಎಚ್ ಬ್ಯಾಟರಿ