Tag: Gadaga

  • ಯುವತಿ ಜೊತೆ ಬಿಜೆಪಿ ಮಾಜಿ ಶಾಸಕ ರಾಮಣ್ಣ ಲಮಾಣಿ ಅಶ್ಲೀಲ ಮಾತು – ಆಡಿಯೋ ವೈರಲ್

    ಯುವತಿ ಜೊತೆ ಬಿಜೆಪಿ ಮಾಜಿ ಶಾಸಕ ರಾಮಣ್ಣ ಲಮಾಣಿ ಅಶ್ಲೀಲ ಮಾತು – ಆಡಿಯೋ ವೈರಲ್

    ಗದಗ: ಜಿಲ್ಲೆಯ ಮಾಜಿ ಶಾಸಕ ರಾಮಣ್ಣ ಲಮಾಣಿ ಮಹಿಳೆಯೊಬ್ಬರ ಜೊತೆ ಅಶ್ಲೀಲ ಮಾತುಕತೆ ನಡೆಸಿರುವ ಆಡಿಯೋ ವೈರಲ್ ಆಗಿದ್ದು, ಭಾರೀ ಚರ್ಚೆಗೆ ಕಾರಣವಾಗಿದೆ.

    ದೂರವಾಣಿ ಕರೆ ಮಾಡಿ ಪರಿಚಯಮಾಡಿಕೊಂಡ ಮಹಿಳೆ ಲಮಾಣಿ ಅವರ ಜೊತೆ ಅಶ್ಲೀಲ ಮಾತುಕತೆ ನಡೆಸಿದ್ದಾರೆ. ಸದ್ಯ ಬಿಡುಗಡೆಯಾಗಿರುವ ಆಡಿಯೋ ಲಮಾಣಿ ಶಾಸಕರಾಗಿದ್ದ ವೇಳೆ ನಡೆಸಿದ ಸಂಭಾಷಣೆ ಎನ್ನಲಾಗಿದೆ.

    ಲಮಾಣಿ ಅವರಿಗೆ ಕರೆ ಮಾಡಿದ್ದ ಯುವತಿ ತನ್ನನ್ನು ಧಾರವಾಡದ ಕಾಲೇಜು ವಿದ್ಯಾರ್ಥಿನಿ ಎಂದು ಪರಿಚಯ ಮಾಡಿಕೊಂಡಿದ್ದು, ಬಳಿಕ ತನ್ನ ಜೊತೆ ಆಶ್ಲೀಲವಾಗಿ ಮಾತನಾಡುವಂತೆ ಪ್ರಚೋದನೆ ನೀಡಿದ್ದಾಳೆ. ಈ ವೇಳೆ ಆಕೆಯ ಬಲೆ ಬಿದ್ದ ಲಮಾಣಿ ಮಾತಿನಲ್ಲಿ ಮುಳುಗಿ ಆಶ್ಲೀಲವಾಗಿ ಸಂಭಾಷಣೆ ನಡೆಸಿದ್ದಾರೆ. ಅಲ್ಲದೇ ತಾನು ಸಾವಿರಾರು ಮಹಿಳೆಯರ ಜೊತೆ ಮಲಗಿದ್ದೀನಿ ಎಂದು ಸಂಭಾಷಣೆ ವೇಳೆ ಹೇಳಿದ್ದು, ಆಡಿಯೋ ಸದ್ಯ ವೈರಲ್ ಆಗಿದೆ.

    2008 ರ ಚುನಾವಣೆಯಲ್ಲಿ ಶಿರಹಟ್ಟಿಯ ಎಸ್‍ಸಿ ಮೀಸಲು ಕ್ಷೇತ್ರದಿಂದ ಗೆದ್ದಿದ್ದ ರಾಮಣ್ಣ ಲಮಾಣಿ ಸದ್ಯ ಶಿರಹಟ್ಟಿ ಕ್ಷೇತ್ರದ ಸಂಭವನೀಯ ಅಭ್ಯರ್ಥಿಯಾಗಿದ್ದಾರೆ.

  • ಸಿಎಂ ತ್ರೀ ಈಡಿಯಟ್ಸ್ ಗಳನ್ನು ತಯಾರು ಮಾಡಿದ್ದಾರೆ- ಅವರಿಂದ ಧರ್ಮ ಒಡೆಯಲು ಸಾಧ್ಯವಿಲ್ಲ: ಆಂದೋಲ ಶ್ರೀ

    ಸಿಎಂ ತ್ರೀ ಈಡಿಯಟ್ಸ್ ಗಳನ್ನು ತಯಾರು ಮಾಡಿದ್ದಾರೆ- ಅವರಿಂದ ಧರ್ಮ ಒಡೆಯಲು ಸಾಧ್ಯವಿಲ್ಲ: ಆಂದೋಲ ಶ್ರೀ

    ಗದಗ: ಸಿಎಂ ಸಿದ್ದರಾಮಯ್ಯ ಅವರು ರಾಜ್ಯದಲ್ಲಿ ತ್ರೀ ಈಡಿಯಟ್ಸ್ ಗಳನ್ನು ತಯಾರು ಮಾಡಿದ್ದು ಅವರಿಂದ ಧರ್ಮವನ್ನು ಒಡೆಯಲು ಸಾಧ್ಯವಿಲ್ಲ ಎಂದು ಆಂದೋಲ ಶ್ರೀಗಳು ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

    ಇಂದು ಗದಗ ನಗರದಲ್ಲಿ ಹಮ್ಮಿಕೊಳ್ಳಲಾಗಿದ್ದ ವೀರಶೈವ ಲಿಂಗಾಯತ ಜನಜಾಗೃತಿ ಬೃಹತ್ ಸಮಾವೇಶ ಉದ್ಘಾಟಿಸಿ ಮಾತನಾಡಿದ ಅವರು, ವೀರಶೈವ ಧರ್ಮ ಒಡೆಯಲು ಸಿಎಂ ತ್ರೀ ಈಡಿಯಟ್ಸ್ ನಾಯಕರನ್ನು ತಯಾರು ಮಾಡಿದ್ದಾರೆ ಎಂದು ಸಚಿವ ಎಂ.ಬಿ.ಪಾಟೀಲ್, ಬಸವರಾಜ್ ಹೊರಟ್ಟಿ, ವಿನಯ್ ಕುಲಕರ್ಣಿ ಅವರನ್ನು ತ್ರೀ ಈಡಿಯಟ್ಸ್ ಎಂದು ಜರಿದರು. ಆದರೆ ಇವರಿಂದ ಧರ್ಮ ಒಡೆಯಲು ಸಾಧ್ಯವಿಲ್ಲ. ಮತ ವಿಭಜಿಸಿ ಮತ್ತೆ ಅಧಿಕಾರ ಹಿಡಿಯುವ ಸಂಚು ಫಲಿಸಲ್ಲ. ಗುರು ಮುನಿದರೆ ಸಿಎಂ ಸಿದ್ದರಾಮಯ್ಯ ಅವರನ್ನು ಯಾರು ಕಾಯಲ್ಲ ಎಂದು ಎಚ್ಚರಿಕೆ ನೀಡಿದರು.

    ಇದೇ ವೇಳೆ ಗದಗನಲ್ಲಿ ಸಮಾವೇಶ ನಡೆಸಿದರೆ ರಾವಣರಂತಹ ರಾಕ್ಷಸರ ಕಾಟ ಬಹಳವಯ್ಯ, ಗದುಗಿನಲ್ಲಿ ಕೆಲವು ರಾವಣರಿದ್ದಾರೆ. ಮನೆಯಲ್ಲಿ ಕೊಳ್ಳಿ ಇಟ್ಟು ಧರ್ಮ ವಿಭಜನೆಯ ಪ್ರಯತ್ನ ಫಲಿಸದು ಎಂದು ಗದಗ ತೋಂಟದ ಸಿದ್ಧಲಿಂಗ ಶ್ರೀಗಳ ವಿರುದ್ಧ ವಾಗ್ದಾಳಿ ನಡೆಸಿದರು.

    ಇನ್ನು ವೀರಶೈವ-ಲಿಂಗಾಯತ ಎರಡೂ ಒಂದೇ ಎಂಬ ಸಂದೇಶ ಸಾರುವ ಸಲುವಾಗಿ ಜನಜಾಗೃತಿ ಸಮಾವೇಶ ಹಮ್ಮಿಕೊಳ್ಳಲಾಗಿದ್ದು. ಈ ಸಮಾವೇಶದಲ್ಲಿ ಪಂಚಪೀಠ ಪೀಠಾಧಿಪತಿಗಳು, ನಿರಂಜ ವಿರಕ್ತ ಸ್ವಾಮಿಜಿಗಳು ಸೇರಿದಂತೆ ಸುಮಾರು 12 ನೂರು ವೀರಶೈವ ಧರ್ಮದ ಹರಗುರು ಚರಮೂರ್ತಿ ಸ್ವಾಮಿಜಿಗಳು ಭಾಗವಹಿಸಿದ್ದರು.

    ಕಾರ್ಯಕ್ರಮದ ವಿಶೇಷ ಭಾಗವಾಗಿ ಹಿಂದೂ ಮುಸ್ಲಿಂ ಭಾವೈಕ್ಯ ಮೆರೆಯಲು ಗದಗ ನಗರದ ಹಲವು ಮುಸ್ಲಿಂ ಸಮುದಾಯದವರು ಒಟ್ಟಾಗಿ ಬೃಹತ್ ಹೂ ಮಾಲೆ ಅರ್ಪಿಸಿ ಮಾನವ ಧರ್ಮ ಒಂದೆ, ಮಾನವ ಧರ್ಮಕ್ಕೆ ಜೈವಾಗಲಿ ಎಂದು ಘೋಷಣೆ ಕೂಗಿದರು.

  • ವ್ಯಕ್ತಿಯನ್ನು 20 ಜನ ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆಗೈದ್ರು!

    ವ್ಯಕ್ತಿಯನ್ನು 20 ಜನ ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆಗೈದ್ರು!

    ಗದಗ: ಕೌಟುಂಬಿಕ ಕಲಹಕ್ಕೆ ವ್ಯಕ್ತಿಯೋರ್ವನ ಕೊಚ್ಚಿ ಕೊಲೆ ಮಾಡಿರುವ ಘಟನೆ ಗದಗ ಜಿಲ್ಲೆಯ ಶಿರಹಟ್ಟಿ ತಾಲೂಕಿನ ಬೆಳಗಟ್ಟಿ ಗ್ರಾಮದಲ್ಲಿ ನಡೆದಿದೆ.

    ಸಣ್ಣಪ್ಪ ಹೊನ್ನಣ್ಣವರ್ (32)ಕೊಲೆಯಾದ ದುರ್ದೈವಿ. ಸುಮಾರು 20 ಜನರ ತಂಡವೊಂದು ಮನೆಗೆ ನುಗ್ಗಿ ಅಟ್ಟಾಡಿಸಿ ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿರುವ ಆರೋಪ ಮಾಡಲಾಗಿದೆ. ಘಟನೆಯಿಂದ ಅಡಿವಪ್ಪ, ಚಂದ್ರಕಾಂತ್, ಹನುಮವ್ವ, ರಂಗವ್ವ, ವೆಂಕಪ್ಪ ಎಂಬವರಿಗೆ ಗಂಭೀರ ಗಾಯಗಳಾಗಿವೆ ಎನ್ನಲಾಗಿದೆ.

    ಸುಭಾಷ್ ಬಂಡಿ ಮತ್ತು ಸಹಚರರಿಂದ ಕೊಲೆ ನಡೆದಿದೆ. ಸುಭಾಷ್ ಮತ್ತು ರೇಣುಕಾ ದಂಪತಿ ನಡುವಿನ ಕಲಹಕ್ಕೆ ರೇಣುಕಾ ಸಹೋದರ ಬಲಿಯಾಗಿದ್ದಾರೆ. ಮಧ್ಯರಾತ್ರಿ ಮನೆಗೆ ನುಗ್ಗಿ ಹಲ್ಲೆ ನಡೆಸಿ ಕೊಲೆ ಮಾಡಿದ್ದಾರೆ.

    ಗದಗ ಜಿಲ್ಲೆ ಶಿರಹಟ್ಟಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು, ಗಾಯಾಳುಗಳನ್ನು ಗದಗ ಜಿಲ್ಲಾ ಆಸ್ಪತ್ರೆಯಲ್ಲಿ ದಾಖಲಿಸಿದ್ದಾರೆ.

  • ಗದಗ್ ನಲ್ಲಿ ಸಾಮೂಹಿಕ ವಿವಾಹ: ಸರಿಗಮಪ ಸಿಂಗರ್ಸ್ ನಿಂದ ಅದ್ಭುತ ಕಾರ್ಯಕ್ರಮ

    ಗದಗ್ ನಲ್ಲಿ ಸಾಮೂಹಿಕ ವಿವಾಹ: ಸರಿಗಮಪ ಸಿಂಗರ್ಸ್ ನಿಂದ ಅದ್ಭುತ ಕಾರ್ಯಕ್ರಮ

    ಗದಗ: ಬಿಜೆಪಿ ಸಂಸದ ಶ್ರೀರಾಮುಲು ಅಭಿಮಾನಿ ಬಳಗದಿಂದ ನಗರದಲ್ಲಿ ಸರ್ವಧರ್ಮ ಉಚಿತ ಸಾಮೂಹಿಕ ವಿವಾಹ ಕಾರ್ಯಕ್ರಮ ಇಂದು ನಡೆಯುತ್ತಿದ್ದು, ಇದರ ಪೂರ್ವಭಾವಿಯಾಗಿ ನಗರದ ವಿದ್ಯಾದಾನ ಮೈದಾನದಲ್ಲಿ ಸಾಂಸ್ಕೃತಿಕ ಮನರಂಜನಾ ಕಾರ್ಯಕ್ರಮಗಳು ಜರುಗಿದವು.

    ಹಾಸ್ಯ ಬ್ರಹ್ಮ ಎಂದೇ ಖ್ಯಾತಿಯಾದ ಗಂಗಾವತಿ ಪ್ರಾಣೇಶ್, ನರಸಿಂಹ ಜ್ಯೋಷಿ, ಮಹಾಮನಿ ಅವರಿಂದ ಹಾಸ್ಯದ ಹೊನಲನ್ನೇ ಹರಿಸಿದರು. ನಂತರ ಸರಿಗಮಪ ಹಾಡುಗಾರರಾದ ಸುಹಾನಾ, ಶ್ರೀರಾಮ ಕಾಸರ್, ಮೆಹಬೂಬ್, ಪರಶುರಾಮ್, ಭಾವನಾ ಬೇಂದ್ರೆ, ಪ್ರಣತಿ ಎ.ಎಸ್, ಲಹರಿ ಅವರ ಅದ್ಭುತವಾದ ಹಾಡುಗಳು ಎಲ್ಲರನ್ನ ಮೈ ಮರೆಯುವಂತೆ ಮಾಡಿತು.

    ಸರಿಗಮಪ ಹಾಡುಗಾರರ ಹಾಡಿಗೆ ಪ್ರೇಕ್ಷಕರು ಚಪ್ಪಾಳೆಯ ಸುರಿಮಳೆಯೇ ಸುರಿಸಿದರು. ಮಂಗಳೂರು ಹೆಜ್ಜೆನಾದ ತಂಡದ ಡ್ಯಾರ್ನ್ಸ್ ಗೆ ಕೆಕೆ, ಸಿಳ್ಳೆ, ಚಪ್ಪಾಳೆ ಮೂಲಕ ಎಲ್ಲರನ್ನು ಮೈನಮಿರೆಳಿಸುವಂತೆ ಮಾಡುವ ಮೂಲಕ ಅದ್ಭುತ ನೃತ್ಯ ಪ್ರದರ್ಶನ ಮಾಡಿ ತೋರಿಸಿದರು. ನಂತರ ಕಾರ್ಯಕ್ರಮದಲ್ಲಿ ಭಾಗವಹಿಸಿದ ಕಲಾವಿದರಿಗೆ ಬಿ.ಶ್ರೀರಾಮುಲು, ಜನಾರ್ದನ ರೆಡ್ಡಿ ಹಾಗೂ ಅಭಿಮಾನಿ ಬಳಗದವರು ಪಾಲ್ಗೊಂಡು ಸನ್ಮಾನಿಸಿದರು.

  • ಬಾವಿಯಲ್ಲಿ ಬಿದ್ದು 8 ಗಂಟೆಗಳ ಕಾಲ ನರಳಾಡಿದ ವ್ಯಕ್ತಿಯ ರಕ್ಷಣೆ

    ಬಾವಿಯಲ್ಲಿ ಬಿದ್ದು 8 ಗಂಟೆಗಳ ಕಾಲ ನರಳಾಡಿದ ವ್ಯಕ್ತಿಯ ರಕ್ಷಣೆ

    ಗದಗ: ತೆರೆದ ಬಾವಿ ಕಟ್ಟೆ ಮೇಲೆ ಕೂತು ಆಯತಪ್ಪಿ ಬಾವಿಯಲ್ಲಿ ಬಿದ್ದಿದ್ದ ವ್ಯಕ್ತಿಯನ್ನು ರಕ್ಷಣೆ ಮಾಡಿರುವ ಘಟನೆ ಗದಗ ನಗರದಲ್ಲಿ ನಡೆದಿದೆ.

    ನಗರದ ಚಿಂತಾಮಣಿ ಆಸ್ಪತ್ರೆ ಬಳಿ ಇರುವ ಬಾವಿಯಲ್ಲಿ ತಡರಾತ್ರಿ ವ್ಯಕ್ತಿ ಬಿದ್ದಿದ್ದರು. ಈ ವ್ಯಕ್ತಿ ಬಳ್ಳಾರಿ ಜಿಲ್ಲೆಯ ಬೈರಾಪುರ ಗ್ರಾಮದ 28 ವರ್ಷದ ಶಿವಾನಂದ ಗಿರಿಗೌಡರ್ ಎಂದು ಹೇಳಲಾಗಿದೆ. ಗದಗ ನಗರಕ್ಕೆ ಅವರ ಸಂಬಂಧಿಕರ ಮನೆಗೆಂದು ಬಂದಿದ್ದರು. ರಾತ್ರಿ ವೇಳೆ ಮನೆ ಸಿಗದ ಕಾರಣ ಬಾವಿ ಕಟ್ಟೆ ಮೇಲೆ ಕೂತಿದ್ದರು. ಆಯ ತಪ್ಪಿ ಸುಮಾರು 75 ಅಡಿ ಆಳವಿರುವ ಬಾವಿಯಲ್ಲಿ ಬಿದ್ದು ನರಳಾಡುತ್ತಿದ್ದರು.

    ಬೆಳಗಿನ ಜಾವ ಇವರ ಧ್ವನಿ ಕೇಳಿದ ಸ್ಥಳೀಯರು ಅಗ್ನಿಶಾಮಕ ದಳಕ್ಕೆ ವಿಷಯ ತಿಳಿಸಿದ್ದಾರೆ. ನಂತರ ಅಗ್ನಿಶಾಮಕ ದಳ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿ ಹಗ್ಗದ ಮೂಲಕ ಶಿವಾನಂದ ಅವರನ್ನ ಮೇಲೆತ್ತಿ ರಕ್ಷಣೆ ಮಾಡಿದ್ದಾರೆ. ಶಿವಾನಂದ ಅವರು ಸುಮಾರು ಎಂಟು ಗಂಟೆಗಳ ಕಾಲ ನೀರಿನಲ್ಲೇ ನಿಂತು ನರಳಾಡಿದ್ದರು.

    ಶಿವಾನಂದ ಅವರಿಗೆ ಸಣ್ಣ ಪುಟ್ಟಗಾಯಗಳಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಕುರಿತು ಗದಗ ಅಗ್ನಿಶಾಮಕ ದಳ ಹಾಗೂ ರಾಜೀವ್ ಗಾಂಧಿ ಬಡಾವಣೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.