Tag: Gadaga

  • ಶ್ರೀರಾಮುಲು ಜಡ್ಜ್ ಆಗಿ ಅಪಾಯಿಂಟ್ ಆಗಿರಬೇಕು: ಸಚಿವ ಡಿಕೆಶಿ ವ್ಯಂಗ್ಯ

    ಶ್ರೀರಾಮುಲು ಜಡ್ಜ್ ಆಗಿ ಅಪಾಯಿಂಟ್ ಆಗಿರಬೇಕು: ಸಚಿವ ಡಿಕೆಶಿ ವ್ಯಂಗ್ಯ

    ಗದಗ: ನನ್ನನ್ನು ಜೈಲಿಗೆ ಕಳುಹಿಸುತ್ತೀನಿ ಎನ್ನುತ್ತಿರುವ ಶಾಸಕ ಶ್ರೀರಾಮುಲು ಜಡ್ಜ್ ಆಗಿ ಅಪಾಯಿಂಟ್ ಆಗಿರಬೇಕೆಂದು ಜಲಸಂಪನ್ಮೂಲ ಹಾಗೂ ವೈದ್ಯಕೀಯ ಶಿಕ್ಷಣ ಸಚಿವ ಡಿಕೆ ಶಿವಕುಮಾರ್ ವ್ಯಂಗ್ಯವಾಡಿದ್ದಾರೆ.

    ಜಿಲ್ಲೆಯ ಲಕ್ಷ್ಮೇಶ್ವರ ಪಟ್ಟಣದಲ್ಲಿನ ದಸರಾ ಧರ್ಮ ಸಮ್ಮೇಳನದಲ್ಲಿ ಶ್ರೀರಾಮುಲು ವಿರುದ್ಧ ವಾಗ್ದಾಳಿ ನಡೆಸಿದ ಅವರು, ಅಕ್ಕ ಅವರನ್ನು ಪಾರ್ಲಿಮೆಂಟಿಗೆ ಕಳಿಸಲಿ, ನನ್ನನ್ನು ಜೈಲಿಗೆ ಕಳಿಸಲಿ ಎಂದು ಹೇಳುತ್ತಿರುವ ಶ್ರೀರಾಮಲು ಹೇಳಿಕೆ ಬಗ್ಗೆ, ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಉತ್ತರ ಕೊಡಬೇಕು. ಶ್ರೀರಾಮುಲು ಅವರು ಜಡ್ಜ್ ಆಗಿ ನೇಮಕವಾಗಿರಬೇಕು. ಜೈಲಿಗೆ ಕಳಿಸೋದು ಜಡ್ಜ್, ಅದಕ್ಕೆ ಈ ರೀತಿ ಹೇಳಿಕೆ ನೀಡಿರಬೇಕೆಂದು ಕಿಡಿಕಾರಿದರು.

    ಶ್ರೀರಾಮುಲು ಅವರ ಹೇಳಿಕೆ ಪೂರ್ವ ನಿಯೋಜಿತ. ಕೇಂದ್ರ ಸರ್ಕಾರ ಸಂಪೂರ್ಣವಾಗಿ ಅವರ ಕೈಯಲ್ಲಿದೆ. ನನ್ನನ್ನು ಜೈಲಿಗೆ ಕಳಿಸುವ ವಿಚಾರ ಮಾತನಾಡುತ್ತಾರೆ ಎಂದರೆ, ಅವರಿಗೆ ಆ ಅಧಿಕಾರ ಸಿಕ್ಕಿರಬೇಕು. ಅವರು ಸಂಸದರಾಗಿ ನಂತರ ಶಾಸಕರಾಗಿದ್ದವರು. ಅವರು ಬಹುಶಃ ವ್ಯವಸ್ಥಿತವಾಗಿ ಷಡ್ಯಂತ್ರ ಮಾಡಿಕೊಂಡೇ ಆ ರೀತಿ ಹೇಳಿಕೆ ನೀಡಿರಬಹುದು ಎಂದು ಆರೋಪಿಸಿದ್ರು.

    ಈ ಹಿಂದೆ 10 ವರ್ಷ ಅಣ್ಣ, ಅಕ್ಕ ಇಬ್ಬರೂ ಪಾರ್ಲಿಮೆಂಟಿನ ಸದಸ್ಯರಾಗಿದ್ದರು. ಆಗ ಅವರು ದೇಶದ ಒಳಿತಿಗೆ ಎಷ್ಟು ಪ್ರಶ್ನೆ ಕೇಳಿದ್ದರು. ಅದರ ಬಗ್ಗೆ ಬೇಕಾದರೆ ಒಂದು ದಾಖಲೆ ಬಿಡುಗಡೆ ಮಾಡಲಿ. ಒಂದು ವೇಳೆ ಶ್ರೀರಾಮುಲು ಅಣ್ಣಾವ್ರಿಗೆ ವಿಶ್ವಾಸ ಇದ್ದಿದ್ದರೆ, ಜನರಿಗೆ ತಾನು ಕೊಡುಗೆ ಕೊಟ್ಟಿದ್ದೀನಿ ಅಂತ ಅನ್ನಿಸಿದ್ದರೆ, ಅವರು ಬಳ್ಳಾರಿ ಗ್ರಾಮೀಣದಲ್ಲೇ ಸ್ಪರ್ಧೆ ಮಾಡಬೇಕಿತ್ತು ಎಂದು ವ್ಯಂಗ್ಯವಾಡಿದರು.

    ಶ್ರೀರಾಮುಲು ಏನು ಹೇಳಿದ್ರು?
    ಅಕ್ಟೋಬರ್ 13ರಂದು ಹೊಸಪೇಟೆಯಲ್ಲಿ ನಡೆದ ಬಿಜೆಪಿ ಕಾರ್ಯಕಾರಣಿ ಸಭೆಯಲ್ಲಿ, ಲೋಕಸಭಾ ಉಪಚುನಾವಣೆಯ ನಂತರ ಜಲಸಂಪನ್ಮೂಲ ಸಚಿವ ಡಿಕೆ ಶಿವಕುಮಾರ ಜೈಲಿಗೆ ಹೋಗೋದು ಪಕ್ಕಾ. ನವೆಂಬರ್ 6ರ ನಂತರ ಅವರಿಗೆ ಜೈಲೇ ಗತಿ. ಡಿಕೆಶಿ ಮುಂದೆ ಇಲ್ಲಿರುತ್ತಾರೋ ಅಥವಾ ಜೈಲಿನಲ್ಲಿ ಇರುತ್ತಾರೋ ಅಂತಾ ಅವರ ಭವಿಷ್ಯ ಅವರಿಗೆ ಗೊತ್ತಿಲ್ಲ. ಅಂತವರು ಬಳ್ಳಾರಿ ಭವಿಷ್ಯ ನಿರ್ಧಾರ ಮಾಡುತ್ತಾರಾ? ನೀವು ಕನಕಪುರದಿಂದ ಬಂದು ಬಳ್ಳಾರಿ ಭವಿಷ್ಯ ಹೇಳ್ತೀರಾ ಎಂದು ಶ್ರೀರಾಮುಲು ಪ್ರಶ್ನಿಸಿದ್ದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಸಿಲಿಕಾನ್ ಸಿಟಿಯಲ್ಲಿ ಮಳೆ ಅಬ್ಬರ ಜೋರು – ರಾಜ್ಯದ ವಿವಿಧೆಡೆ ಸಿಡಿಲಿಗೆ ಆರು ಬಲಿ

    ಸಿಲಿಕಾನ್ ಸಿಟಿಯಲ್ಲಿ ಮಳೆ ಅಬ್ಬರ ಜೋರು – ರಾಜ್ಯದ ವಿವಿಧೆಡೆ ಸಿಡಿಲಿಗೆ ಆರು ಬಲಿ

    ಬೆಂಗಳೂರು: ಕಳೆದ 2 ದಿನಗಳಿಂದ ಸುರಿಯುತ್ತಿರುವ ದಾಖಲೆ ಮಳೆಗೆ ರಾಜಧಾನಿ ತತ್ತರಿಸಿ ಹೋಗಿದೆ. ಇತ್ತ ರಾಜ್ಯ ವಿವಿಧ ಜಿಲ್ಲೆಗಳಲ್ಲಿ ಭಾರೀ ಮಳೆಯಾಗಿದ್ದು, ಸಿಡಿಲಿಗೆ ಒಟ್ಟು ಆರು ಮಂದಿ ಬಲಿಯಾಗಿದ್ದಾರೆ.

    ವಿಜಯಪುರ ಜಿಲ್ಲೆಯ ಬಸವನಬಾಗೇವಾಡಿ ಮತ್ತು ಮುದ್ದೇಬಿಹಾಳ ತಾಲೂಕಿನ ಸುತ್ತಮುತ್ತ ಗುಡುಗು, ಸಿಡಿಲು ಸಮೇತ ಭಾರೀ ಮಳೆಯಾಗಿದೆ. ಈ ವೇಳೆ ಸಿಡಿಲಿಗೆ ಮೂವರು ಮೃತ ಪಟಿದ್ದಾರೆ. ಬಸವಬಾಗೇವಾಡಿ ತಾಲೂಕಿನ ಕಾನಾಳ ಗ್ರಾಮದ ಹೊರ ವಲಯದಲ್ಲಿ ಸಿಡಿಲು ಬಡಿದು ವಿಠಲ್ ನಾಟಿಕಾರ್ (28), ಯಲಗೂರಪ್ಪ ಯರಝರಿ (27) ಮೃತಪಟ್ಟಿದ್ದು, 25ಕ್ಕೂ ಹೆಚ್ಚು ಕುರಿಗಳು ಸಾವನ್ನಪ್ಪಿವೆ. ಮೃತರು ಕಾನಾಳ ಗ್ರಾಮದ ವಾಸಿಗಳು ಎಂದು ತಿಳಿದು ಬಂದಿದೆ.

    ಮುದ್ದೇಬಿಹಾಳ ತಾಲೂಕಿನ ಹಿರೂರ ಗ್ರಾಮದ ಬಳಿ ಗಿಡದ ಕೆಳಗೆ ಊಟಕ್ಕೆ ಕುಳಿತಿದ್ದ ಮಹಿಳೆ ಮಲ್ಲಮ್ಮ (42) ಸಿಡಿಲಿಗೆ ಮೃತಪಟ್ಟಿದ್ದು, ಈ ವೇಳೆ ಅವರ ಜೇಬಿನಲ್ಲಿದ್ದ ಮೊಬೈಲ್ ಕೂಡ ಸಿಡಿಲಿನ ಹೊಡೆತಕ್ಕೆ ಸ್ಫೋಟಗೊಂಡಿದೆ. ಮಲ್ಲಮ್ಮ ಬಸವನ ಬಾಗೇವಾಡಿ ತಾಲೂಕಿನ ಸಾಸನೂರ ಗ್ರಾಮದ ನಿವಾಸಿ ಎಂದು ತಿಳಿದು ಬಂದಿದೆ.

    ಕೊಪ್ಪಳದ ಹಲವಾಗಿ ಗ್ರಾಮದ ಹೊಲದಲ್ಲಿ ಕೆಲಸ ಮಾಡುತ್ತಿದ್ದ ರೈತ ಸುರೇಶ್ ಹಳ್ಳಿ (35) ಸಾವನ್ನಪ್ಪಿದ್ದು, ಅವರ ಪತ್ನಿ ಕರಿ ಬಸಮ್ಮ ಗಂಭೀರವಾಗಿ ಗಾಯಗೊಂಡಿದ್ದಾರೆ. ಹುಬ್ಬಳ್ಳಿ ತಾಲೂಕಿನ ಇಂಗಳಹಳ್ಳಿ ಗ್ರಾಮದಲ್ಲಿ ಅಲ್ತಾಪ್ ನಾಯ್ಕರ್ (20) ಜಮೀನಿನ ಕೆಲಸಕ್ಕೆ ಹೋದಾಗ ಸಿಡಿಲು ಬಡಿದು ಸಾವನ್ನಪ್ಪಿದ್ದಾರೆ. ಈ ಕುರಿತು ಹುಬ್ಬಳ್ಳಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಗದಗ ಜಿಲ್ಲೆಯ ಮುಳಗುಂದ ಪಟ್ಟಣದ ಹೊರವಲಯದ ಜಮೀನಿನಲ್ಲಿ ಕೆಲಸ ಮಾಡುತ್ತಿದ್ದ ರೈತ ಮಹಿಳೆ ನೂರಜಾನ್ ಕಿಂಡ್ರಿ (40) ಸಾವನ್ನಪ್ಪಿದ್ದಾರೆ. ಭಾರೀ ಮಳೆಗೆ ಬಳ್ಳಾರಿ ಗಡಿ ಭಾಗದ ಹಿರೇಹಳ್ಳದ ಸೇತುವೆ ಮೇಲಿಂದ ಆಂಧ್ರ ಸರ್ಕಾರಿ ಬಸ್ ಪಲ್ಟಿ ಹೊಡೆದಿದೆ. ಅದೃಷ್ಟವಶಾತ್ ಪ್ರಯಾಣಿಕರು ಅಪಾಯದಿಂದ ಪಾರಾಗಿದ್ದಾರೆ.

    ಬೆಂಗಳೂರು ನಗರದಲ್ಲಿ ಸೋಮವಾರ ಸುರಿದ ಮಳೆಯಿಂದ ಚೇತರಿಕೆ ಕಾಣುವ ಹೊತ್ತಿಗೆ ಮತ್ತೆ ಮಳೆಯಾಗಿದ್ದು, ಜನಜೀವನ ಅಸ್ತವ್ಯಸ್ತವಾಗಿದೆ. ನಗರದ ಸಿಲ್ಕ್ ಬೋರ್ಡ್, ಎಚ್‍ಎಸ್‍ಆರ್ ಲೇಔಟ್, ಶಾಂತಿನಗರ, ಹೆಬ್ಬಾಳ, ನವರಂಗ್, ರಾಜಾಜಿನಗರ, ಯಲಹಂಕ ನಾಗವಾರ, ಹೆಚ್‍ಬಿಆರ್ ಲೇಔಟ್, ವಿಜಯನಗರ, ಆರ್ ಪಿ ಸಿ ಲೇಔಟ್ ಸೇರಿದಂತೆ ಬೆಂಗಳೂರು ದಕ್ಷಿಣ ಭಾಗದಲ್ಲಿ ಹೆಚ್ಚು ಮಳೆಯಾಗಿದೆ.

    ಉಳಿದಂತೆ ಸೋಮವಾರ ರಾತ್ರಿ ಸುರಿದ ಮಳೆಗೆ ನಗರದ ಹುಳಿಮಾವು, ಗೊಟ್ಟಿಗೆರೆ, ಬಸವನಪುರ ಕೆರೆ, ಗುಬ್ಬಲಾಲ ಕೆರೆ, ದೊಡ್ಡಕಲ್ಲಸಂದ್ರ ಕೆರೆ ಸೇರಿ ಒಟ್ಟು 9 ಕೆರೆಗಳು ಉಕ್ಕಿ ಹರಿದಿವೆ. ಪರಿಣಾಮ ಕೆರೆ ಸುತ್ತಮುತ್ತಲ ಮನೆಗಳು ಮತ್ತು ಅಪಾರ್ಟ್‍ಮೆಂಟ್‍ಗಳ ಪಾರ್ಕಿಂಗ್ ಲಾಟ್‍ಗಳಿಗೆ ನೀರು ನುಗ್ಗಿ ಜನ ಪರದಾಡಿದ್ದಾರೆ. ಇತ್ತ ಬೆಳ್ಳಂದೂರು ಕೆರೆಯಲ್ಲಿ ಮತ್ತೆ ನೊರೆ ಕಾಣಿಸಿಕೊಂಡಿದೆ. ಹೆಬ್ಬಾಳ ಫ್ಲೈಓವರ್ ಮೇಲೆ ಮತ್ತು ಕೆಳಗೆ ನೀರು ತುಂಬಿತ್ತು. ನವರಂಗ್ ಬಳಿ ಪಾದಾಚಾರಿ ಮಾರ್ಗದ ನೆಲಹಾಸು ಕುಸಿದು ವ್ಯಕ್ತಿಯೊಬ್ಬ ಅದರಲ್ಲಿ ಬಿದ್ದಿದ್ದಾನೆ. ಬನ್ನೇರುಘಟ್ಟ ರಸ್ತೆ, ಬಿಳೇಕಹಳ್ಳಿ, ಡಾಲರ್ಸ್ ಲೇಔಟ್‍ನ ಹಲವು ಅಪಾರ್ಟ್‍ಮೆಂಟ್‍ಗಳಿಗೆ ನೀರು ನುಗ್ಗಿ ಬೈಕ್, ಕಾರು ಸೇರಿದಂತೆ ವಾಹನಗಳೆಲ್ಲಾ ಮುಳಗಿದ್ದವು. ನಗರದ ಹಲವೆಡೆ ಮರಗಳು, ವಿದ್ಯುತ್ ಕಂಬ ಬಿದ್ದಿವೆ. ರಾಜ್ಯದಲ್ಲಿ ಇನ್ನೂ ಎರಡು ದಿನ ಮಳೆ ಆಗುತ್ತೆ ಎಂದು ಹವಮಾನ ಇಲಾಖೆ ಮಾಹಿತಿ ನೀಡಿದೆ.

    ಎಲ್ಲೆಲ್ಲಿ ಎಷ್ಟೆಷ್ಟು ಮಳೆ?
    * ಮನೋರಾಯನಪಾಳ್ಯ – 58 ಮಿ.ಮೀ
    * ನಾಗರಬಾವಿ – 57.5 ಮಿ.ಮೀ
    * ಹೆಚ್‍ಆರ್‍ಬಿ ಲೇಔಟ್ – 55.5 ಮಿ.ಮೀ
    * ಕೋಣನಕುಂಟೆ – 53ಮಿ.ಮೀ
    * ಗಾಳಿ ಆಂಜನೇಯ ದೇವಾಲಯ ರಸ್ತೆ, ನಾಯಂಡಹಳ್ಳಿ – 50 ಮಿ.ಮೀ
    * ಮಾರುತಿ ಮಂದಿರ – 50 ಮಿ.ಮೀ
    * ಹಂಪಿನಗರ – 50 ಮಿ.ಮೀ

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಸಾಲಮನ್ನಾ ಘೋಷಣೆ ನಂತರವೂ ರೈತರ ಜೀವ ಹಿಂಡುತ್ತಿವೆ ಬ್ಯಾಂಕ್ ನೋಟಿಸ್‍ಗಳು!

    ಸಾಲಮನ್ನಾ ಘೋಷಣೆ ನಂತರವೂ ರೈತರ ಜೀವ ಹಿಂಡುತ್ತಿವೆ ಬ್ಯಾಂಕ್ ನೋಟಿಸ್‍ಗಳು!

    ಗದಗ: ಮುಖ್ಯಮಂತ್ರಿ ಸಿಎಂ ಕುಮಾರಸ್ವಾಮಿ ರೈತರ ಸಾಲಮನ್ನಾ ಘೋಷಣೆಯ ನಂತರವು ಬ್ಯಾಂಕುಗಳ ಪದೇ ಪದೇ ಸಾಲ ಮರುಪಾವತಿಸುವ ಬಗ್ಗೆ ನೋಟಿಸ್‍ಗಳನ್ನು ನೀಡುತ್ತಿರುವುದರಿಂದ ರೈತರು ಕಂಗಲಾಗಿ ಹೋಗಿದ್ದಾರೆ.

    ಹೌದು, ಒಂದಡೆ ರೈತರ ಸಾಲಮನ್ನಾ ಎಂದು ಕುಮಾರಸ್ವಾಮಿ ಸರ್ಕಾರ ಬೀಗುತ್ತಿದ್ದರೆ, ಮತ್ತೊಂದಡೆ ಬ್ಯಾಂಕ್‍ನಿಂದ ರೈತರಿಗೆ ನೋಟಿಸ್ ಬರುವುದು ನಿಲ್ಲುತ್ತಿಲ್ಲ. ಹೀಗಾಗಿ ಸಿಎಂ ಅವರು ಸಾಲಮನ್ನಾ ಮಾಡಿರುವುದು ನಿಜವೇ ಎಂಬುದು ರೈತರ ಪ್ರಶ್ನೆಯಾಗಿದೆ.

    ನಗರದ ಪಂಜಾಬ್ ನ್ಯಾಷನಲ್ ಬ್ಯಾಂಕ್‍ನಿಂದ ಸಾಕಷ್ಟು ರೈತರಿಗೆ ನೋಟಿಸ್ ಪತ್ರ ಹೋಗುತ್ತಿವೆ. ಗದಗ ತಾಲೂಕಿನ ನಾರಾಯಣಪುರ ಗ್ರಾಮದ ನಾಗಪ್ಪ ಹಂಚಿನಾಳ ಎಂಬ ರೈತನಿಗೆ ಸಾಲ ಹಾಗೂ ಬಡ್ಡಿ ಮರುಪಾವತಿಸುವಂತೆ ಗದಗ ಪಂಜಾಬ್ ನ್ಯಾಷನಲ್ ಬ್ಯಾಂಕ್ ನೋಟಿಸ್ ಜಾರಿಮಾಡಿದೆ. ಈ ನೋಟಿಸ್ ತಲುಪಿದ 7 ದಿನಗಳಲ್ಲಿ ಸಾಲದ ಮೊತ್ತ ಹಾಗೂ ಬಡ್ಡಿ ಬ್ಯಾಂಕ್‍ಗೆ ಜಮಾ ಮಾಡಬೇಕು. ಸಮಯಕ್ಕನುಸಾರವಾಗಿ ಬಡ್ಡಿ ಪಾವತಿಸದಿದ್ದರೇ, ಎನ್‍ಪಿಎ ಮಾಡುವ ಮೂಲಕ ಭವಿಷ್ಯದಲ್ಲಿ ಯಾವುದೇ ಬ್ಯಾಂಕಿನೊಂದಿಗೆ ವ್ಯವಹರಿಸಲು ಅನಾನುಕೂಲದ ಬೆದರಿಕೆಯನ್ನು ಹಾಕಿದ್ದಾರೆ.

    ಈ ಕುರಿತು ಪ್ರತಿಕ್ರಿಯಿಸಿರುವ ರೈತ ನಾಗಪ್ಪ 2013 ಆಗಸ್ಟ್ 2 ರಲ್ಲಿ 4 ಲಕ್ಷ ರೂಪಾಯಿ ಬೆಳೆಸಾಲವನ್ನು ಬ್ಯಾಂಕಿನಿಂದ ಪಡೆದಿದ್ದೆ. ಆದರೆ ಸತತ ಮೂರು-ನಾಲ್ಕು ವರ್ಷಗಳ ಬರಗಾಲ ಇದ್ದರಿಂದ ಸಾಲ ಹಾಗೂ ಬಡ್ಡಿ ಮರುಪಾವತಿಸಿರಲಿಲ್ಲ. ಸರ್ಕಾರ ಸಾಲಮನ್ನಾ ಜಾರಿ ಮಾಡಿ ತಿಂಗಳುಗಳಾದರೂ, ಬ್ಯಾಂಕಿನವರು ನೋಟಿಸ್ ನೀಡಿದ್ದಾರೆ. ಬರಗಾಲದ ವೇಳೆ ಸಾಲದ ಮೊತ್ತ ಹಾಗೂ ಬಡ್ಡಿಯನ್ನು ತುಂಬಲೇ ಬೇಕೆಂದರೆ ಸಾವೊಂದೆ ಇದಕ್ಕೆ ಪರಿಹಾರ ಎಂದು ತಮ್ಮ ನೋವನ್ನು ವ್ಯಕ್ತಪಡಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಸರ್ಕಾರಿ ಬಸ್ಸಿನಲ್ಲೇ ಹೆರಿಗೆ – ಮಾನವೀಯತೆ ಮೆರೆದ ಚಾಲಕ, ನಿರ್ವಾಹಕ

    ಸರ್ಕಾರಿ ಬಸ್ಸಿನಲ್ಲೇ ಹೆರಿಗೆ – ಮಾನವೀಯತೆ ಮೆರೆದ ಚಾಲಕ, ನಿರ್ವಾಹಕ

    ಗದಗ: ಚಲಿಸುತ್ತಿದ್ದ ವಾಯುವ್ಯ ಕರ್ನಾಟಕ ಸಾರಿಗೆ ಬಸ್ಸಿನಲ್ಲೇ ತುಂಬು ಗರ್ಭಿಣಿಯೊಬ್ಬರು ಗಂಡು ಮಗುವಿಗೆ ಜನ್ಮ ನೀಡಿರುವ ಘಟನೆ ಜಿಲ್ಲೆಯ ಲಕ್ಷ್ಮೇಶ್ವರ ತಾಲೂಕಿನ ಸೂರಣಗಿ ಗ್ರಾಮದ ಬಳಿ ನಡೆದಿದೆ.

    ಕಾವ್ಯ ಮರಳಹಳ್ಳಿ (28) ಮಗುವಿಗೆ ಜನ್ಮ ನೀಡಿದ ತಾಯಿಯಾಗಿದ್ದು, ಮೂಲತಃ ಬಾಲೆಹೋಸುರು ಗ್ರಾಮದ ನಿವಾಸಿಯಾಗಿದ್ದಾರೆ. ಸದ್ಯ ಮಗು ಹಾಗೂ ತಾಯಿ ಇಬ್ಬರು ಆರೋಗ್ಯವಾಗಿದ್ದಾರೆ ಎಂಬ ಮಾಹಿತಿ ಲಭಿಸಿದೆ. ಇಂದು ಗುತ್ತಲ ದಿಂದ ಸೂರಣಗಿ ಮಾರ್ಗವಾಗಿ ಲಕ್ಷ್ಮೇಶ್ವರಕ್ಕೆ ತೆರಳುತ್ತಿದ್ದ ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದ ಕಾವ್ಯರಿಗೆ ಹೆರಿಗೆ ನೋವು ಕಾಣಿಸಿಕೊಂಡಿದ್ದು, ಆಸ್ಪತ್ರೆಗೆ ದಾಖಲಿಸುವ ವೇಳೆಗೆ ಕಾವ್ಯ ಬಸ್ಸಿನಲ್ಲೇ ಮಗುವಿಗೆ ಜನ್ಮ ನೀಡಿದ್ದಾರೆ.

    ಇದೇ ವೇಳೆ ಬಸ್ ಚಾಲಕ ಎನ್.ಎಮ್ ಉಪ್ಪಾರ ಹಾಗು ನಿರ್ವಾಹಕ ಕಟ್ಟಣ್ಣವರ್ ಇಬ್ಬರು ಸೇರಿ ತಾಯಿ ಕಾವ್ಯ ಹಾಗೂ ಮಗುವನ್ನು ಬಸ್ಸಿನಲ್ಲೇ ಆಸ್ಪತ್ರೆ ಬಳಿ ಕರೆದುಕೊಂಡು ಹೋಗಿ ಮಾನವೀಯತೆ ಮೆರೆದಿದ್ದಾರೆ. ತಾಲೂಕಿನ ಸೂರಣಗಿ ಸರ್ಕಾರಿ ವೈದ್ಯರಿಂದ ತಾಯಿ ಮಗುವಿಗೆ ಹೆಚ್ಚಿನ ಚಿಕಿತ್ಸೆ ನೀಡಲಾಗಿದ್ದು, ಇಬ್ಬರು ಆರೋಗ್ಯವಾಗಿದ್ದಾರೆ. ಬಸ್ ಚಾಲಕ ಹಾಗೂ ನಿರ್ವಾಹಕ ಕಾರ್ಯಕ್ಕೆ ಸ್ಥಳೀಯರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಪ್ರಜಾಪ್ರಭುತ್ವ ಉಳಿಬೇಕಾದ್ರೆ ಕಾಂಗ್ರೆಸ್ ಅಧಿಕಾರಕ್ಕೆ ಬರಬೇಕು, ರಾಹುಲ್ ಪ್ರಧಾನಿಯಾಗ್ಲೇಬೇಕು: ಖರ್ಗೆ

    ಪ್ರಜಾಪ್ರಭುತ್ವ ಉಳಿಬೇಕಾದ್ರೆ ಕಾಂಗ್ರೆಸ್ ಅಧಿಕಾರಕ್ಕೆ ಬರಬೇಕು, ರಾಹುಲ್ ಪ್ರಧಾನಿಯಾಗ್ಲೇಬೇಕು: ಖರ್ಗೆ

    ಬೀದರ್: ದೇಶದಲ್ಲಿ ಪ್ರಜಾಪ್ರಭುತ್ವ ಉಳಿಯಬೇಕಾದರೆ, ಮತ್ತೊಮ್ಮೆ ಕಾಂಗ್ರೆಸ್ ಅಧಿಕಾರಕ್ಕೆ ತರಬೇಕು ಹಾಗೂ ರಾಹುಲ್ ಗಾಂಧಿ ಅವರನ್ನು ಪ್ರಧಾನಿಯಾಗಿ ಮಾಡಬೇಕೆಂದು ಲೋಕಸಭೆಯ ಕಾಂಗ್ರೆಸ್ ಸಂಸದೀಯ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಹೇಳಿಕೆ ನೀಡಿದ್ದಾರೆ.

    ನಗರದಲ್ಲಿ ಹಮ್ಮಿಕೊಂಡಿದ್ದ ಕಾಂಗ್ರೆಸ್ಸಿನ ಬೃಹತ್ ಜನಸ್ಪಂದನಾ ರ‍್ಯಾಲಿಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ಸನ್ನು ಮುಗಿಸೋದು ಹಾಗೂ ಅಳಿಸುವುದಕ್ಕೆ ಯಾರಿಂದಲೂ ಸಾಧ್ಯವಿಲ್ಲ. ಇಂದು ದೇಶದಲ್ಲಿ ಪ್ರಜಾಪ್ರಭುತ್ವ ಉಳಿಯಬೇಕಾಗಿದೆ. ಹೀಗಾಗಿ ಕಾಂಗ್ರೆಸ್ ಮತ್ತೊಮ್ಮೆ ಅಧಿಕಾರದ ಗದ್ದುಗೆ ಏರಬೇಕು. ನಮ್ಮ ಅಧ್ಯಕ್ಷರಾದ ರಾಹುಲ್ ಗಾಂಧಿಯವರನ್ನು ನಾವು ಪ್ರಧಾನಿಯಾಗಿ ಮಾಡಲೇಬೇಕೆಂದು ತಿಳಿಸಿದರು.

    ಪ್ರಧಾನಿ ನರೇಂದ್ರ ಮೋದಿ ಹಾಗೂ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಅವರು ಏನೋ ಹೇಳಿಕೊಂಡು ಹೋಗುತ್ತಿದ್ದಾರೆ. ಅವರ ಮಾತನ್ನು ಕೇಳುವ ಅವಶ್ಯಕತೆ ನಮಗಿಲ್ಲ, ನಾವೆಲ್ಲರೂ ಇಂದು ದೇಶ ಉಳಿಸುವ ಅಗತ್ಯತೆ ಎದುರಾಗಿದೆ. ಈ ಕುರಿತು ಎಲ್ಲರೂ ಹೋರಾಟ ನಡೆಸಬೇಕಾಗಿದೆ. ಕಾರ್ಯಕರ್ತರು ಎಚ್ಚೆತ್ತು ಕಾಂಗ್ರೆಸ್ ಬಲಪಡಿಸಲು ಸಿದ್ದರಾಗಬೇಕು ಎಂದು ಹೇಳಿದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictvnews

  • ಏರ್ ಶೋ ಲಕ್ನೋಗೆ ಶಿಫ್ಟ್ ಆಗಲ್ಲ: ಬಿಎಸ್‍ವೈ

    ಏರ್ ಶೋ ಲಕ್ನೋಗೆ ಶಿಫ್ಟ್ ಆಗಲ್ಲ: ಬಿಎಸ್‍ವೈ

    ಗದಗ: ಬೆಂಗಳೂರಿನ ಯಲಹಂಕದಲ್ಲಿ ನಡೆಯುತ್ತಿದ್ದ ಏರ್ ಶೋ ಲಕ್ನೋಗೆ ಸ್ಥಳಾಂತರವಾಗುವುದಿಲ್ಲವೆಂದು ಬಿಜೆಪಿ ರಾಜ್ಯಾಧ್ಯಕ್ಷ ಹಾಗೂ ವಿರೋಧ ಪಕ್ಷ ನಾಯಕ ಬಿ.ಎಸ್. ಯಡಿಯೂರಪ್ಪ ಹೇಳಿಕೆ ನೀಡಿದ್ದಾರೆ.

    ಏರ್ ಶೋ ಸ್ಥಳಾಂತರ ಕುರಿತು ಪ್ರತಿಕ್ರಿಯಿಸಿದ ಅವರು, ಏರ್ ಶೋ ಬೆಂಗಳೂರು ಬಿಟ್ಟು ಹೋಗದಂತೆ ಬಿಜೆಪಿಯ ಎಲ್ಲಾ ಕೇಂದ್ರ ಸಚಿವರು ಹಾಗೂ ಸಂಸದರು ಪ್ರಯತ್ನ ಮಾಡುತ್ತೇವೆ. ಸುಮ್ಮನೇ ಡಿಸಿಎಂ ಪರಮೇಶ್ವರ್ ಹಾಗೂ ವೈದ್ಯಕೀಯ ಸಚಿವ ಡಿ.ಕೆ ಶಿವಕುಮಾರ್ ವಿನಾಕಾರಣ ಗೊಂದಲ ಸೃಷ್ಟಿಸಿದ್ದಾರೆ. ಈಗಾಗಲೇ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮ್ ಈ ಬಗ್ಗೆ ಸ್ಪಷ್ಟ ಪಡಿಸಿದ್ದಾರೆ. ಹೀಗಾಗಿ ಸ್ಥಳಾಂತರ ಬಗ್ಗೆ ಚರ್ಚೆ ಮಾಡುವುದು ಸರಿಯಲ್ಲವೆಂದು ಕಾಂಗ್ರೆಸ್ ವಿರುದ್ಧ ಬಿಎಸ್‍ವೈ ಕಿಡಿಕಾರಿದ್ದಾರೆ.

    ಈ ವೇಳೆ ಸಿಎಂ ಭತ್ತ ನಾಟಿ ವಿಚಾರ ಬಗ್ಗೆ ಮಾತನಾಡಿದ ಅವರು, ಕೇವಲ ನಾಟಿ ಮಾಡಿದರೆ ರೈತರ ಸಮಸ್ಯೆಗಳು ಬಗೆಹರಿಯುವುದಿಲ್ಲ. ಉತ್ತರ ಕರ್ನಾಟಕದ 13 ಜಿಲ್ಲೆಯಲ್ಲಿ ತೀವ್ರ ಬರಗಾಲವಿದೆ. ರಾಜಕೀಯ ದೊಂಬರಾಟ ಬಿಟ್ಟು ರೈತರ ಜ್ವಲಂತ ಸಮಸ್ಯೆಗಳನ್ನು ಇತ್ಯರ್ಥ ಮಾಡಲಿ, ಸಿಎಂ ಕುಮಾರಸ್ವಾಮಿ ಪ್ರವಾಸ ಮಾಡಿ ರೈತರ ಸಮಸ್ಯೆ ಅರಿಯಲಿ ಎಂದು ಬಿಎಸ್‍ವೈ ಸಲಹೆ ನೀಡಿದ್ದಾರೆ. ಇದನ್ನೂ ಓದಿ: ಬೆಂಗಳೂರಿನ ಏರ್ ಶೋ ಲಕ್ನೋಗೆ ಶಿಫ್ಟ್ ಆಗುತ್ತಾ? ಯಾರು ಏನು ಹೇಳಿದ್ರು?

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictvnews

  • ಆಸ್ಪತ್ರೆಯ ವಿಲೀನ ಖಂಡಿಸಿ ಗದಗ ವೈದ್ಯರು ಹಾಗೂ ಸಿಬ್ಬಂದಿ ಪ್ರತಿಭಟನೆ

    ಆಸ್ಪತ್ರೆಯ ವಿಲೀನ ಖಂಡಿಸಿ ಗದಗ ವೈದ್ಯರು ಹಾಗೂ ಸಿಬ್ಬಂದಿ ಪ್ರತಿಭಟನೆ

    ಗದಗ: ನಗರದಲ್ಲಿ ನೂತನವಾಗಿ ನಿರ್ಮಿಸಿರುವ ಮಹಿಳಾ ಮತ್ತು ಮಕ್ಕಳ ಆಸ್ಪತ್ರೆಯನ್ನು ಗದಗ ಜಿಮ್ಸ್ ಸಂಸ್ಥೆಗೆ ವಿಲೀನಗೊಳಿಸಿರುವುದನ್ನು ವಿರೋಧಿಸಿ ವೈದ್ಯರು ಹಾಗೂ ಸಿಬ್ಬಂದಿ ನಗರದ ಹೆರಿಗೆ ಆಸ್ಪತ್ರೆಯ ಬಳಿ ಪ್ರತಿಭಟನೆ ನಡೆಸಿದ್ದಾರೆ.

    ಗದಗ ಮಹಿಳಾ ಮತ್ತು ಮಕ್ಕಳ ಆಸ್ಪತ್ರೆಯನ್ನು ಗದಗ ವೈದ್ಯಕೀಯ ಶಿಕ್ಷಣ ಮಹಾವಿದ್ಯಾಲಯಕ್ಕೆ ವಿಲೀನಮಾಡುವುದಾಗಿ ಸರ್ಕಾರ ಆದೇಶ ಹೊರಡಿಸಿದ್ದು, ಈ ಆದೇಶವನ್ನು ಕೂಡಲೇ ಹಿಂಪಡೆದುಕೊಳ್ಳಬೇಕೆಂದು ಕರ್ನಾಟಕ ರಾಜ್ಯ ಸರ್ಕಾರಿ ವೈದ್ಯಾಧಿಕಾರಿಗಳ ಸಂಘ, ಸ್ಟಾಫ್ ನರ್ಸ್ ಅಸೋಸಿಯೇಷನ್, ಫಾರ್ಮಸಿ ಅಸೋಸಿಯೇಷನ್, ಲ್ಯಾಬ್ ಟೆಕ್ನಿಷಿಯನ್, ಆರೋಗ್ಯ ಇಲಾಖೆಯ ವಿವಿಧ ವರ್ಗ ಹಾಗೂ ನೌಕರರ ಸಂಘದಿಂದ ಹೆರಿಗೆ ಆಸ್ಪತ್ರೆ ಮುಂಭಾಗದಲ್ಲಿ ಪ್ರತಿಭಟನೆ ನಡೆಸಿದ್ದಾರೆ.

    ಹೆರಿಗೆ ಆಸ್ಪತ್ರೆಯನ್ನು ಗದಗ ಜಿಮ್ಸ್ ನೊಂದಿಗೆ ವಿಲೀನ ಮಾಡಿದರೆ ರೋಗಿಗಳು ಹಾಗೂ ಸಿಬ್ಬಂದಿಗೆ ಸಾಕಷ್ಟು ತೊಂದರೆಯಾಗುತ್ತದೆ. ತಾಲೂಕು ಮಟ್ಟದ ಆಸ್ಪತ್ರೆ, ಸಾರ್ವಜನಿಕ ಹಾಗೂ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ವೈದ್ಯಾಧಿಕಾರಿಗಳು ಹಾಗೂ ಇತರೆ ಸಿಬ್ಬಂದಿಗಳು ಪದೋನ್ನತಿ ಅಥವಾ ವರ್ಗಾವಣೆಗೊಂಡು ಜಿಲ್ಲಾ ಕೇಂದ್ರದಲ್ಲಿ ಕಾರ್ಯನಿರ್ವಹಿಸುವ ಅವಕಾಶದಿಂದ ವಂಚಿತರಾಗುತ್ತಾರೆ. ಆದ್ದರಿಂದ ಮಹಿಳಾ ಮತ್ತು ಮಕ್ಕಳ ಆಸ್ಪತ್ರೆಯನ್ನು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಲ್ಲಿಯೇ ಮುಂದುವರಿಸಬೇಕು ಎಂದು ಜಿಲ್ಲಾಧಿಕಾರಿ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದ್ದಾರೆ.

  • ನನಗೂ ಮಂತ್ರಿಯಾಗುವ ಆಸೆ ಇತ್ತು, ಆದ್ರೆ ಹಿರಿಯರಾದ ನಮ್ಮಂಥವರ ತ್ಯಾಗದ ಅವಶ್ಯಕತೆ ಇದೆ: ಬಸವರಾಜ ಹೊರಟ್ಟಿ

    ನನಗೂ ಮಂತ್ರಿಯಾಗುವ ಆಸೆ ಇತ್ತು, ಆದ್ರೆ ಹಿರಿಯರಾದ ನಮ್ಮಂಥವರ ತ್ಯಾಗದ ಅವಶ್ಯಕತೆ ಇದೆ: ಬಸವರಾಜ ಹೊರಟ್ಟಿ

    ಗದಗ: ಸಮ್ಮಿಶ್ರ ಸರ್ಕಾರದ ಹೊಂದಾಣಿಕೆಯಲ್ಲಿ ಸಿಎಂ ಅವರ ಮೇಲೆ ಹೆಚ್ಚಿನ ಜವಾಬ್ದಾರಿ ಇದೆ. ಹೊಂದಾಣಿಕೆ ವೇಳೆ ತೊಂದರೆ ಸಹಜ. ಆದರೂ ಎಲ್ಲವನ್ನು ಸರಿದೂಗಿಸಿಕೊಂಡು ಹೋಗುವ ವಿಶ್ವಾಸವಿದೆ ಎಂದು ವಿಧಾನ ಪರಿಷತ್ ಸಭಾಧ್ಯಕ್ಷ ಬಸವರಾಜ ಹೊರಟ್ಟಿ ಹೇಳಿದ್ದಾರೆ.

    ಸಿಎಂ ಕುಮಾರಸ್ವಾಮಿ ಅವರು ಕಾರ್ಯಕ್ರಮವೊಂದರಲ್ಲಿ ಕಣ್ಣೀರಿಟ್ಟ ವಿಚಾರವಾಗಿ ಗದಗ ನಗರದಲ್ಲಿ ಪ್ರತಿಕ್ರಿಯೆ ನೀಡಿದ ಅವರು, ನನಗೂ ಕೂಡ ಮಂತ್ರಿಯಾಗುವ ಆಸೆ ಇತ್ತು. ಆದರೆ ಎಲ್ಲರಿಗೂ ಅವಕಾಶ ನೀಡುವ ದೃಷ್ಠಿಯಿಂದ ಹಿರಿಯರಾದ ನಮ್ಮಂಥವರ ತ್ಯಾಗದ ಅವಶ್ಯಕತೆ ಇದೆ. ಪಕ್ಷದ ಹಿತದೃಷ್ಠಿಯಿಂದ ಅಲ್ಲದಿದ್ದರು ರಾಜ್ಯದ ಹಿತಕ್ಕಾಗಿ ಸಭಾಪತಿಯಾಗಿದ್ದೇನೆ. ಸಭಾಪತಿಯಾಗಲು ನನಗೂ ಮನಸ್ಸಿರಲಿಲ್ಲ. ಪರಿಸ್ಥಿತಿಗೆ ಅನುಗುಣವಾಗಿ ನಾನು ಸಭಾಪತಿಯಾದೆ. ನಾನೂ ಶಿಕ್ಷಣ ಮಂತ್ರಿಯಾಗಬೇಕೆಂದು ಇಷ್ಟ ಪಟ್ಟಿದ್ದೆ. ಆದರೆ ಸಭಾಪತಿಯ ಅವಕಾಶವನ್ನು ಸದ್ಬಳಕೆ ಮಾಡಿಕೊಂಡು ನನ್ನ ಕಾರ್ಯ ನಿರ್ವಹಿಸುತ್ತೆನೆ ಎಂದು ಹೇಳಿದರು.

    ಇದೇ ವೇಳೆ ಮಹದಾಯಿ ಅಥವಾ ಉತ್ತರ ಕರ್ನಾಟಕ ನಿರ್ಲಕ್ಷ್ಯದ ಕುರಿತು ಮಾತನಾಡಿ, ನನ್ನ ಪರಿಮಿತಿಯಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡುತ್ತಿದ್ದೇನೆ. ಉತ್ತರ ಕರ್ನಾಟಕದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಸರ್ಕಾರಿ ಶಾಲೆಗಳು ಶಿಥಿಲಾವಸ್ಥೆಯಲ್ಲಿವೆ. ಈ ಕುರಿತು ಸಚಿವರೊಂದಿಗೆ ಸಭೆ ಕರೆದು ಚರ್ಚಿಸಿದ್ದೇನೆ. ಆದಷ್ಟು ಬೇಗ ಸರ್ಕಾರಿ ಶಾಲೆಗಳ ದುರಸ್ಥಿ ಕಾರ್ಯ ಕೈಗೊಳ್ಳಲಾಗುವುದು. ಅಲ್ಲದೇ ಬೆಳಗಾವಿ ಸುವರ್ಣಸೌಧ ಸದ್ಬಳಕೆಗೆ ಸಿಎಂ ಹಾಗೂ ಸಚಿವರ ಸಭೆ ಕರೆದು ಚರ್ಚಿಸುತ್ತೇನೆ. ವರ್ಷಕ್ಕೆ 60 ದಿನಗಳಾದರು ಸುವರ್ಣಸೌಧದಲ್ಲಿ ಸಭೆ ನಡೆಯುವಂತೆ ಕ್ರಮ ಜರುಗಿಸಲಾಗುವುದು ಎಂದರು.

  • ಕಾಲುವೆಗೆ ಬಿದ್ದು 2 ಗಂಟೆ ಪರದಾಡಿದ್ದ ಕುದುರೆಯ ರಕ್ಷಣೆ -ವಿಡಿಯೋ ನೋಡಿ

    ಕಾಲುವೆಗೆ ಬಿದ್ದು 2 ಗಂಟೆ ಪರದಾಡಿದ್ದ ಕುದುರೆಯ ರಕ್ಷಣೆ -ವಿಡಿಯೋ ನೋಡಿ

    ಗದಗ: ಮಲಪ್ರಭಾ ಬಲದಂಡೆ ಕಾಲುವೆಗೆ ಬಿದ್ದು ಪರದಾಟ ನಡೆಸಿದ್ದ ಕುದುರೆಯೊಂದನ್ನು ರಕ್ಷಿಸಿರುವ ಘಟನೆ ಜಿಲ್ಲೆಯ ರೋಣ ಪಟ್ಟಣದ ಹೊರವಲಯದಲ್ಲಿ ನಡೆದಿದೆ.

    ಕುದುರೆ ಕಾಲುವೆ ಪಕ್ಕ ನಡೆದು ಹೋಗುವ ವೇಳೆ ಕಾಲುಜಾರಿ ಕಾಲುವೆಯಲ್ಲಿ ಸಿಲುಕಿ ಪರದಾಟ ನಡೆಸಿದ್ದನ್ನು ಕಂಡ ಸ್ಥಳೀಯರು ರಕ್ಷಣೆ ಮಾಡಲು ಮುಂದಾಗಿದ್ದರು. ಆದರೆ ಸೂಕ್ತ ಸಲಕರಣೆ ಹಾಗೂ ಕಾಲುವೆ ಜೇಡಿ ಮಣ್ಣಿನಿಂದ ಕೂಡಿದ್ದ ಕಾರಣ ರಕ್ಷಣೆ ಮಾಡಲು ವಿಫಲರಾಗಿದ್ದರು.

    ಈ ವೇಳೆ ಅಗ್ನಿಶಾಮಕ ರಕ್ಷಣಾ ತಂಡಕ್ಕೆ ಕರೆ ಮಾಡಿ ಮಾಹಿತಿ ನೀಡಿದ್ದಾರೆ. ಈ ವೇಳೆ ಸ್ಥಳೀಯರ ಮಾಹಿತಿ ಪಡೆದು ಆಗಮಿಸಿದ ಅಗ್ನಿಶಾಮಕ ಸಿಬ್ಬಂದಿ ಸತತ 2 ಗಂಟೆಗಳಿಗೂ ಕಾಲ ಸಿಲುಕಿ ನರಳಾಡುತ್ತಿದ್ದ ಕುದುರೆಯನ್ನು ಅಗ್ನಿಶಾಮಕ ಸಿಬ್ಬಂದಿ ಮತ್ತು ಸ್ಥಳೀಯರು ಸೇರಿ ರಕ್ಷಣೆ ಮಾಡಿದ್ದಾರೆ.

    ಹೆಚ್ಚಿನ ಅವಧಿ ಕೆಸರಿನಲ್ಲಿ ಸಿಲುಕಿ ನರಳಾಡಿದ್ದ ಕುದುರೆ ರಕ್ಷಣೆ ಮಾಡಿದ ಬಳಿಕವೂ ನಿತ್ರಾಣಗೊಂಡಿತ್ತು. ಅಲ್ಲದೇ ಎದ್ದು ನಿಲ್ಲಲಾಗದ ಕುದುರೆಯ ಪರದಾಟ ಕಣ್ಣೀರು ತರುವಂತಿತ್ತು. ಈ ವೇಳೆ ಕುದುರೆಗೆ ನೀರು, ಆಹಾರ ನೀಡಿ ಪೋಷಣೆ ಮಾಡಿ ರಕ್ಷಣೆ ಮಾಡಿದ್ದಾರೆ.

    https://www.youtube.com/watch?v=6BUSLJn0G_g

  • ಬಿಜೆಪಿ ಗೆಲ್ಲಬೇಕು, ಯಡಿಯೂರಪ್ಪ ಸಿಎಂ ಆಗಬೇಕು- ಮಹಿಳೆಯರು ಸೇರಿದಂತೆ ಗದಗ ಬಿಜೆಪಿ ಕಾರ್ಯಕರ್ತರಿಂದ ಉರುಳು ಸೇವೆ

    ಬಿಜೆಪಿ ಗೆಲ್ಲಬೇಕು, ಯಡಿಯೂರಪ್ಪ ಸಿಎಂ ಆಗಬೇಕು- ಮಹಿಳೆಯರು ಸೇರಿದಂತೆ ಗದಗ ಬಿಜೆಪಿ ಕಾರ್ಯಕರ್ತರಿಂದ ಉರುಳು ಸೇವೆ

    ಗದಗ: ನಗರಕ್ಕೆ ಪ್ರಧಾನಿ ನರೇಂದ್ರ ಮೋದಿ ಆಗಮಿಸಿದ ಹಿನ್ನೆಲೆ, ಈ ಬಾರಿ ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬರಬೇಕು ಎಂದು ಗದಗ ಬಿಜೆಪಿ ಕಾರ್ಯಕರ್ತರು ಉರುಳು ಸೇವೆ ಮಾಡಿದರು.

    ನಗರದ ಪಂಡಿತ ಪುಟ್ಟರಾಜ ಕವಿಗವಾಯಿಗಳ ಸರ್ಕಲ್ ನಲ್ಲಿ ಎಂಟು ಜನ ಬಿಜೆಪಿ ಕಾರ್ಯಕರ್ತರು ಒದ್ದೆ ಬಟ್ಟೆಯಲ್ಲಿ ಉರುಳು ಸೇವೆ ಮಾಡಿದರು. ಗದಗ ಬಿಜೆಪಿ ಅಭ್ಯರ್ಥಿ ಅನಿಲ್ ಮೆಣಸಿನಕಾಯಿ ಗೆಲ್ಲಬೇಕು. ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬರಬೇಕು. ಜೊತೆಗೆ ಬಿ.ಎಸ್ ಯಡಿಯೂರಪ್ಪ ನವರು ಮತ್ತೊಮ್ಮೆ ಸಿಎಂ ಆಗಬೇಕೆಂಬ ಹರಕೆಯಿಂದ ಬಿಜೆಪಿ ಭಕ್ತರು ಉರುಳು ಸೇವೆ ಮಾಡಿದರು.

    ಬಿಜೆಪಿ ಕಾರ್ಯಕರ್ತರು ಗದುಗಿನ ಪಂಡಿತ ಪುಟ್ಟರಾಜ ಕವಿಗವಾಯಿಗಳ ದೇವರ ಮೊರೆಹೋಗಿದ್ದಾರೆ. ಬಿಜೆಪಿ ಕಾರ್ಯಕರ್ತ ಬಸವಣ್ಣಯ್ಯ ನೇತೃತ್ವದಲ್ಲಿ ಮಹಿಳೆಯರು ಸೇರಿದಂತೆ ಎಂಟು ಜನರು ನಗರದ ಪ್ರಮುಖ ಬೀದಿಯಲ್ಲಿ ಉರುಳು ಸೇವೆ ಮಾಡುವ ಮೂಲಕ ದೇವರಲ್ಲಿ ಹರಕೆ ಹೊತ್ತಿದ್ದಾರೆ.