Tag: Gadaga

  • ಉಪಚುನಾವಣೆ ಮೂಲಕ ಬಿಜೆಪಿಯವರಿಗೆ ಜನ ಮಂಗಳಾರತಿ ಮಾಡಿದ್ದಾರೆ- ಹೆಚ್.ಕೆ ಪಾಟೀಲ್

    ಉಪಚುನಾವಣೆ ಮೂಲಕ ಬಿಜೆಪಿಯವರಿಗೆ ಜನ ಮಂಗಳಾರತಿ ಮಾಡಿದ್ದಾರೆ- ಹೆಚ್.ಕೆ ಪಾಟೀಲ್

    -ಜಾಗೃತ ಮತದಾರ ಬಿಜೆಪಿಗೆ ತಕ್ಕ ಕಪಾಳಮೋಕ್ಷ ಮಾಡಿದ್ದಾರೆ

    ಗದಗ: ಕರ್ನಾಟಕ ಉಪಚುನಾವಣೆಯಲ್ಲಿ ಕಾಂಗ್ರೆಸ್ (Congress) ಗೆಲುವು ಸಾಧಿಸಿದೆ. ಬಿಜೆಪಿಯವರಿಗೆ ಜನ ಮಂಗಳಾರತಿ ಮಾಡಿದ್ದಾರೆ. ಜಾಗೃತ ಮತದಾರ ಬಿಜೆಪಿಗೆ ತಕ್ಕ ಕಪಾಳಮೋಕ್ಷವನ್ನು ಈ ಉಪಚುನಾವಣೆ ಮೂಲಕ ಮಾಡಿದ್ದಾರೆ ಎಂದು ಸಂಸದೀಯ ವ್ಯವಹಾರಗಳ ಸಚಿವ ಹೆಚ್.ಕೆ ಪಾಟೀಲ್ (H K Patil) ಹೇಳಿದ್ದಾರೆ.

    ಇಂದು (ಶನಿವಾರ) ನಗರದ ಕಾಟನ್ ಸೇಲ್ ಸೊಸೈಟಿ ಆವರಣದ ಕಾಂಗ್ರೆಸ್ ಕಚೇರಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಈ ಚುನಾವಣೆ ಫಲಿತಾಂಶ ಬಹಳ ಮಹತ್ವದ್ದಾಗಿತ್ತು. ಕಳೆದ ಮೂರು ತಿಂಗಳಿಂದ ನಡೆದ ಹಲವಾರು ರಾಜಕೀಯ ಬೆಳವಣಿಗೆಗೆ ಉತ್ತರ ಕೊಡಬೇಕಾಗಿತ್ತು. ಆ ಉತ್ತರವನ್ನು ಜನ ಸಮರ್ಪಕವಾಗಿ ಕೊಟ್ಟಿದ್ದಾರೆ. ಬಿಜೆಪಿಯವರ ಮುಖಕ್ಕೆ ಮಂಗಳಾರತಿ ಮಾಡಿದ್ದಾರೆ. ಚುನಾವಣೆ ಘೋಷಣೆ ಆಗುತ್ತಿದ್ದಂತೆ, ರಾಜ್ಯದಲ್ಲಿ ಸುಳ್ಳು ಪ್ರಚಾರ ನಡೆದವು. ನಮ್ಮ ಸಮಾಜವನ್ನು ಒಡೆಯುವ ದೊಡ್ಡ ಹುನ್ನಾರ, ಕುಕೃತ್ಯ ಮಾಡುವ ಎಲ್ಲಾ ರೀತಿಯ ರಾಜಕೀಯ ನಿಲುವು ಹಾಗೂ ದಾಳ ಬಳಸುವ ಕೆಲಸ ಬಿಜೆಪಿ ಮಾಡಿತು ಎಂದು ಹರಿಹಾಯ್ದರು. ಇದನ್ನೂ ಓದಿ: ಅಭಿವೃದ್ಧಿ, ಉತ್ತಮ ಆಡಳಿತ ಗೆದ್ದಿದೆ: ಮಹಾರಾಷ್ಟ್ರದಲ್ಲಿ ಮಹಾಯುತಿ ಗೆಲುವಿಗೆ ಮೋದಿ ಕೃತಜ್ಞತೆ

    ವಕ್ಫ್ (Waqf) ಹೆಸರಲ್ಲಿ ಸಮಾಜ ಒಡೆಯುವ ಪ್ರಯತ್ನ ಮಾಡಿದರು. ಗ್ಯಾರಂಟಿ ನಿಲ್ಲುಸುತ್ತೇವೆ ಎಂದು ಪ್ರಧಾನಿಯಿಂದ ಸುಳ್ಳು ಹೇಳಿಸಿದರು. ಜನರ ಮನಸ್ಸಿನಲ್ಲಿ ಗೊಂದಲ ಹುಟ್ಟಿಸುವ ಪ್ರಯತ್ನ ಮಾಡಿದರು. ಸಿಎಂ ಅವರನ್ನು ತೇಜೋವಧೆ ಮಾಡುವ ಮೂಲಕ ಸರ್ಕಾರ ಉಳಿಯುವುದಿಲ್ಲ. ಸರ್ಕಾರ ಅಭದ್ರವಾಯಿತು, ಸರ್ಕಾರ ಬದಲಾಗುತ್ತೆ, ಸರ್ಕಾರದ ಭದ್ರತೆ ಬಗ್ಗೆ ಶಂಕೆ ಮೂಡಿಸಿ ಲಾಭ ಪಡೆಯುವ ಪ್ರಯತ್ನ ಬಿಜೆಪಿಗರು ಮಾಡಿದ್ರು. ಸುಳ್ಳುಗಳ ಮೇಲೆ ಸುಳ್ಳುಗಳನ್ನು ಹೇಳಿದರು. ಜಾಗೃತ ಮತದಾರ ಬಿಜೆಪಿಗೆ ತಕ್ಕ ಕಪಾಳಮೋಕ್ಷವನ್ನು ಚುನಾವಣೆ ಮೂಲಕ ಮಾಡಿದ್ದಾರೆ. ಜಾಗೃತ ಮತದಾರರಿಗೆ ಪಕ್ಷದ ಪರವಾಗಿ, ವೈಯಕ್ತಿಕವಾಗಿ ಕೃತಜ್ಞತೆ ಸಲ್ಲಿಸುತ್ತೇನೆ ಎಂದು ರಾಜ್ಯದ ಮೂರು ಕ್ಷೇತ್ರದ ಮತದಾರರಿಗೆ ಸಚಿವರು ಕೃತಜ್ಞತೆ ಸಲ್ಲಿಸಿದರು. ಇದನ್ನೂ ಓದಿ: ರಾಹುಲ್ ದಾಖಲೆ ಬ್ರೇಕ್ – ಪ್ರಿಯಾಂಕಾಗೆ 4 ಲಕ್ಷಕ್ಕೂ ಅಧಿಕ ಮತಗಳ ಅಂತರದ ಗೆಲುವು

    ಇನ್ನಾದರೂ ಬಿಜೆಪಿ (BJP) ಅರ್ಥೈಸಿಕೊಳ್ಳಬೇಕು, ಸುಳ್ಳುಗಳು ಬಹಳ ದಿನ ನಡೆಯುವುದಿಲ್ಲ. ಈ ಚುನಾವಣೆ ಸುಳ್ಳುಗಳನ್ನು ಸೋಲಿಸಿ, ಸಮಾಜ ಒಡೆಯುವ ಆ ಕೆಟ್ಟ ಶಕ್ತಿಗಳಿಗೆ ತಕ್ಕ ಶಾಸ್ತಿ ಮಾಡಿದೆ. ತೇಜೋವಧೆ ಮೂಲಕ ರಾಜಕಾರಣ ಮಾಡುತ್ತೇವೆ ಎನ್ನುವ ಪ್ರಯತ್ನಕ್ಕೆ ಸಮಾಜ ತಿರಸ್ಕಾರ ಭಾವನೆ ತೋರಿಸಿದೆ. ಈ ಚುನಾವಣೆಯಲ್ಲಿ ಕೆಟ್ಟ ಭಾಷೆ, ಕೆಟ್ಟ ಸಂಸ್ಕೃತಿ, ಕೆಟ್ಟ ರಾಜಕೀಯ ನಿಲುವುಗಳು, ಸತ್ಯಕ್ಕೆ ದೂರವಾದ ನಿಲುವುಗಳನ್ನು ಇಟ್ಟುಕೊಂಡು ಏನಾದ್ರೂ ಮಾಡಿ ಗೆಲುವು ಪಡೆಯುವ ಪ್ರಯತ್ನ ಮಾಡುತ್ತಿದ್ದರು. ಅವರಿಗೆ ಅಪಜಯ, ಸೋಲು ಆಗಿದೆ. ಇನ್ನಾದರೂ ಮನಗಂಡು ಉತ್ತಮ ರೀತಿಯ ರಾಜಕಾರಣ, ಸುಸಂಸ್ಕೃತ ರಾಜಕಾರಣ ಮಾಡಬೇಕು ಎಂದು ಅಪೇಕ್ಷೆ ಮಾಡುತ್ತೇವೆ. ಈ ಗೆಲುವು ಕೇವಲ ಬಿಜೆಪಿಯನ್ನು ಸೋಲಿಸಿಲ್ಲ. ಸುಳ್ಳು ಹೇಳುವ ಪ್ರವೃತ್ತಿಯ ಮೋದಿ, ಅಮಿತ್ ಶಾ ಅವರನ್ನು ಸೋಲಿಸಿದೆ. ಚುನಾವಣೆ ಪರಿಣಾಮ ಮತ್ತೆ ಸಿದ್ದರಾಮಯ್ಯ ನಾಯಕತ್ವ ಗಟ್ಟಿಗೊಳಿಸಿದೆ ಎಂದರು. ಇದನ್ನೂ ಓದಿ: ಮಂಗಳೂರು | ಎದುರಾಳಿ ವಿರುದ್ಧ ಸಂಚು ಮಾಡ್ತಿದ್ದಾಗ್ಲೇ ನಟೋರಿಯಸ್ ರೌಡಿಶೀಟರ್ ಅರೆಸ್ಟ್!

    ಸಿದ್ದರಾಮಯ್ಯನವರನ್ನು (Siddaramaiah) ಏನಾದರೂ ಮಾಡಿ, ಅಶಕ್ತರನ್ನಾಗಿ ಮಾಡುವ ನಿಮ್ಮ ಕುತಂತ್ರ ನಡೆಯದಂತಾಯಿತು. ಜನತಾ ನ್ಯಾಯಾಲಯದಲ್ಲಿ ಸಿದ್ದರಾಮಯ್ಯ ಅವರು ಮತ್ತೆ ಹೀರೊ ಆಗಿ, ನಾಯಕನಾಗಿ ಹೊರಹೊಮ್ಮಿದ್ದಾರೆ. ನಮ್ಮ ಗ್ಯಾರಂಟಿಗಳ ಕ್ರಾಂತಿಕಾರಕ ದೊಡ್ಡ ಜಯ ಇದಾಗಿದೆ. ಇನ್ನು ಮಹಾರಾಷ್ಟ್ರದ ಚುನಾವಣೆ ಬಗ್ಗೆ ಮಾತನಾಡಿ, ಮಹಾರಾಷ್ಟ್ರದಲ್ಲಿ ಆದ ಪರಿಣಾಮ ಎಲ್ಲರಿಗೂ ಆಶ್ಚರ್ಯ ಮೂಡಿಸಿದೆ. ಆ ಪರಿಣಾಮಗಳ ಬಗ್ಗೆನೇ ಅನುಮಾನಾಸ್ಪದದಲ್ಲಿದ್ದೇವೆ. ಚುನಾವಣೆ ಪ್ರಕ್ರಿಯೆ, ಎಣಿಕೆಯಲ್ಲಿ ಏನಾಗಿದೆ ಎಂಬುದರ ಬಗ್ಗೆ ಅನುಮಾನ ಬಂದಿದೆ. ರಾಜಕೀಯ ಮಹತ್ವದ ನಾಯಕರು ಅನುಮಾನದ ಬಗ್ಗೆ ಅಭಿಪ್ರಾಯ ಪಡಲು ಪ್ರಾರಂಭ ಮಾಡಿದ್ದಾರೆ. ಸ್ವಲ್ಪ ಕಾದು ನೋಡಬೇಕು, ಅವಲೋಕನ ಮಾಡುತ್ತೇವೆ. ಇದು ಅವಲೋಕನ ಮಾಡಲೇಬೇಕಾದ ಪ್ರಸಂಗ ಎಂದು ಹೇಳಿದರು. ಈ ವೇಳೆ ಕಾಂಗ್ರೆಸ್ ಜಿಲ್ಲಾ ಮುಖಂಡರಾದ ಬಿ.ಬಿ ಅಸೂಟಿ, ಅಶೋಕ ಮಂದಾಲಿ, ಬಸವರಾಜ್ ಸೇರಿದಂತೆ ಅನೇಕರು ಉಪಸ್ಥಿತರಿದ್ದರು. ಇದನ್ನೂ ಓದಿ: ಮಹಾರಾಷ್ಟ್ರದಲ್ಲಿ ಬಿಜೆಪಿ ಗೆದ್ದಿದ್ದು ಹೇಗೆ? ಆರ್‌ಎಸ್‌ಎಸ್‌ ಏನೇನು ಕಾರ್ಯತಂತ್ರ ಮಾಡಿತ್ತು?

  • ಪ್ರವಾಸೋದ್ಯಮ ಸಚಿವರಿಂದ 200 ಟ್ಯಾಕ್ಸಿ ಕೊಡುಗೆ- ಸ್ವಯಂ ಉದ್ಯೋಗ ಸೃಷ್ಟಿಸುವಲ್ಲಿ ಐತಿಹಾಸಿಕ ದಾಖಲೆ

    ಪ್ರವಾಸೋದ್ಯಮ ಸಚಿವರಿಂದ 200 ಟ್ಯಾಕ್ಸಿ ಕೊಡುಗೆ- ಸ್ವಯಂ ಉದ್ಯೋಗ ಸೃಷ್ಟಿಸುವಲ್ಲಿ ಐತಿಹಾಸಿಕ ದಾಖಲೆ

    ಗದಗ: ಟ್ಯಾಕ್ಸಿ ಪಡೆದ ಯುವಕರು ಪ್ರಾಮಾಣಿಕವಾಗಿ ಶ್ರಮವಹಿಸಿ ದುಡಿದು, ಉತ್ತಮ ಜೀವನ ನಡೆಸಿ ರಾಷ್ಟ್ರಕಟ್ಟುವಲ್ಲಿ ಭಾಗವಹಿಸಿ ಸಮಾಜಕ್ಕೆ ಮಾದರಿ ಆಗಬೇಕು ಎಂದು ರಾಜ್ಯದ ಪ್ರವಾಸೋದ್ಯಮ ಇಲಾಖೆ ಹಾಗೂ ಗದಗ (Gadaga) ಜಿಲ್ಲಾ ಉಸ್ತುವಾರಿ ಸಚಿವ ಹೆಚ್.ಕೆ.ಪಾಟೀಲ್ (H K Patil) ಹೇಳಿದರು.

    ನಗರದಲ್ಲಿ ಜಿಲ್ಲಾ ಕ್ರೀಡಾಂಗಣದಲ್ಲಿ ಸಚಿವರು ಶನಿವಾರ ಜಿಲ್ಲಾಡಳಿತ ಹಾಗೂ ಪ್ರವಾಸೋದ್ಯಮ ಇಲಾಖೆ ಕರ್ನಾಟಕ ಸಂಭ್ರಮ 50 ರ ಅಂಗವಾಗಿ ಪ್ರವಾಸಿ ಟ್ಯಾಕ್ಸಿ ವಿತರಣೆ ಮಾಡಿದರು. ಈ ವೇಳೆ ಮಾತನಾಡಿದ ಅವರು, ಗದಗ ಜಿಲ್ಲೆಯೂ ಪ್ರವಾಸೋದ್ಯಮ ತಾಣ ಆಗಬೇಕು. ರಾಜಧಾನಿ ಬೆಂಗಳೂರಿನಿಂದ ದೂರ ಇರುವ ಕಾರಣಕ್ಕೆ ಪಾರಂಪರಿಕ ಸಂಪತ್ತಾದ ಐತಿಹಾಸಿಕ ದೇವಸ್ಥಾನ ಹೊಂದಿದ ಜಿಲ್ಲೆಯನ್ನು, ಪ್ರವಾಸೋದ್ಯಮ ತಾಣವಾಗಿಸಲು ಪ್ರವಾಸೋದ್ಯಮ ಇಲಾಖೆಯಿಂದ ಸಾಕಷ್ಟು ಕೆಲಸ ಪ್ರಾರಂಭವಾಗಿದೆ. ಯುವಕರು ಸ್ವಯಂ ಉದ್ಯೋಗ ಮಾಡಿ ಪ್ರವಾಸೋದ್ಯಮಕ್ಕೆ ಒತ್ತು ನೀಡಬೇಕು. ಅದಕ್ಕಾಗಿ 200 ಯುವ ಜನಕ್ಕೆ ಪ್ರವಾಸಿ ಟ್ಯಾಕ್ಸಿ ನೀಡಿ ಐತಿಹಾಸಿಕ ದಾಖಲೆಗೆ ಸಾಕ್ಷಿಯಾಗಿದೆ. ಟ್ಯಾಕ್ಸಿಯನ್ನು ತೆಗೆದುಕೊಂಡ ಯುವಕರು ಶ್ರದ್ಧೆಯಿಂದ ಟ್ಯಾಕ್ಸಿಯನ್ನು ಸದುಪಯೋಗ ಪಡೆಸಿಕೊಂಡು 1 ವರ್ಷದ ನಂತರ ಉತ್ತಮ ಜೀವನ ನಡೆಸಿ ಸಾಧನೆ ಮಾಡಿ ಸಮಾಜಕ್ಕೆ ಮಾದರಿ ಆಗಬೇಕು ಎಂದು ಪ್ರೇರೆಪಿಸಿದರು. ಇದನ್ನೂ ಓದಿ: ಒತ್ತೆಯಾಳುಗಳ ಹತ್ಯೆ – ಮಣಿಪುರದ ಸಚಿವರು, ಶಾಸಕರ ಮನೆಗಳ ಮೇಲೆ ಪ್ರತಿಭಟನಾಕಾರರ ದಾಳಿ

    ಗದಗ ಜಿಲ್ಲೆಯ ಯುವಕರು ಉತ್ಸಾಹದಿಂದ ಕ್ರಿಯಾಶೀಲರಾಗಿ ಕಾರ್ಯನಿರ್ವಹಿಸುತ್ತಾರೆ. ಹಾಗಾಗಿ ಬೆಂಗಳೂರಿನ (Bengaluru) ವಿಮಾನ ನಿಲ್ದಾಣದಲ್ಲಿ ಸಂಚಾರಕ್ಕಾಗಿ ಬಳಸುವ ಟ್ಯಾಕ್ಸಿಗಳಲ್ಲಿ ಇಂದು ಟ್ಯಾಕ್ಸಿ ಪಡೆದ ಜಿಲ್ಲೆಯ ಯುವಕರನ್ನು ಪರಿಗಣಿಸಿ ಬಳಸಿಕೊಳ್ಳಬೇಕು ಎಂದು ವ್ಯವಸ್ಥಾಪಕ ನಿರ್ದೇಶಕ ರಾಜೇಂದ್ರ ಅವರಿಗೆ ತಿಳಿಸಿದರು. ಟ್ಯಾಕ್ಸಿಗಳನ್ನು ಪಡೆದ ಯುವಕರು ಗದಗ ಜಿಲ್ಲೆಯನ್ನು ಪ್ರವಾಸೋದ್ಯಮ ತಾಣವನ್ನಾಗಿಸಿ ಅಭಿವೃದ್ಧಿ ಪಡಿಸುವ ಗುರಿ ಹೊಂದಬೇಕು. ಗದಗ ಜಿಲ್ಲೆಗೆ ಸೀಮಿತವಾಗದೆ, ರಾಜ್ಯದಲ್ಲಿರುವ ವಿವಿಧ ದೇವಾಲಯ, ಸ್ಮಾರಕ, ನಿಸರ್ಗ ಧಾಮ ಅಲ್ಲಿನ ವಸತಿ, ಊಟ ವ್ಯವಸ್ಥೆ, ಐತಿಹಾಸಿಕ ಹಿನ್ನೆಲೆ ಬಗ್ಗೆ ಮಾಹಿತಿ ಹೊಂದಿರಬೇಕು. ಓಡಾಟದ ನಡುವೆ ಯಾವುದೇ ಚಟಕ್ಕೆ ಬಲಿಯಾಗದೇ ಉತ್ತಮ ಆಹಾರ ಸೇವಿಸಿ ಆರೋಗ್ಯದ ಬಗ್ಗೆ ಕಾಳಜಿವಹಿಸಬೇಕು ಎಂದು ಹೇಳಿದರು. ಇದನ್ನೂ ಓದಿ: ದೆಹಲಿಯಲ್ಲಿ ಮಾಲಿನ್ಯ ನಿಯಂತ್ರಣಕ್ಕೆ GRAP-III ಜಾರಿ – ನಿಯಮ ಉಲ್ಲಂಘಿಸಿದವರಿಂದ 5 ಕೋಟಿಗೂ ಅಧಿಕ ದಂಡ ವಸೂಲಿ

    ಈ ವೇಳೆ ಶಾಸಕ ಜಿ.ಎಸ್. ಪಾಟೀಲ (G S Patil), ಪರಿಷತ್ ಸದಸ್ಯ ಎಸ್.ವಿ ಸಂಕನೂರ, ಗದಗ-ಬೆಟಗೇರಿ (Betageri) ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಬಬರ್ಚಿ, ಮಾಜಿ ಶಾಸಕ ರಾಮಣ್ಣ ಲಮಾಣಿ, ಕೆಡಿಪಿ ಸದಸ್ಯ ಡಿಆರ್ ಪಾಟೀಲ, ಬಿ.ಬಿ. ಅಸೂಟಿ, ಅಶೋಕ ಮಂದಾಲಿ, ಐಯ್ಯಸ್ವಾಮಿ, ಸಿದ್ದು ಪಾಟೀಲ, ಪ್ರಭು ಬುರಬುರಿ, ನಗರಸಭೆ ಸದಸ್ಯರು, ಪ್ರವಾಸೋದ್ಯಮ ಇಲಾಖೆ ನಿರ್ದೇಶಕ ರಾಜೇಂದ್ರ, ಕೆನರಾ ಬ್ಯಾಂಕ್ ಮ್ಯಾನೇಜರ್ ವಿಜಯಕುಮಾರ, ಜಿಲ್ಲಾಧಿಕಾರಿ ಗೋವಿಂದ ರೆಡ್ಡಿ, ಜಿ.ಪಂ.ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿ ಭರತ್, ಪೊಲೀಸ್ ವರಿಷ್ಟಾಧಿಕಾರಿ ಬಿ.ಎಸ್. ನೇಮಗೌಡ, ಪ್ರವಾಸೋದ್ಯಮ ಇಲಾಖೆ ಸಹಾಯಕ ನಿರ್ದೇಶಕ ಕೊಟ್ರೇಶ ವಿಭೂತಿ, ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕ ಶರಣು ಗೊಗೇರಿ ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳು ಹಾಜರಿದ್ದರು. ಇದನ್ನೂ ಓದಿ: ಅಪ್ಪ, ಮಕ್ಕಳು ಒಬ್ಬೊರನ್ನ ಕೈ ಬಿಡ್ತಾರೆ, ಇದೇ ದಂಧೆ ಮಾಡ್ತಾರೆ – ಮತ್ತೆ ಸಿಡಿದ ಯತ್ನಾಳ್‌

  • ಆಸ್ತಿ ವಿವಾದ- ಸಲಾಕೆಯಿಂದ ಹೊಡೆದು ಅತ್ತಿಗೆಯನ್ನು ಹತ್ಯೆಗೈದ ಮೈದುನ

    ಆಸ್ತಿ ವಿವಾದ- ಸಲಾಕೆಯಿಂದ ಹೊಡೆದು ಅತ್ತಿಗೆಯನ್ನು ಹತ್ಯೆಗೈದ ಮೈದುನ

    ಗದಗ: ಆಸ್ತಿ ವಿವಾದ ಹಿನ್ನೆಲೆ,  ಅತ್ತಿಗೆಯನ್ನು ಮೈದುನ ಸಲಾಕೆಯಿಂದ ಹೊಡೆದು ಕೊಲೆಗೈದ ಘಟನೆ ಗದಗ (Gadaga) ತಾಲೂಕಿನ ಕಣವಿ ಗ್ರಾಮದಲ್ಲಿ ನಡೆದಿದೆ.

    ಜೈಬುನಿಸಾ ಮಾಚೇನಹಳ್ಳಿ(56) ಮೃತ ಮಹಿಳೆ. ಮಲ್ಲಿಕಸಾಬ್ ಕಿಲ್ಲೆದಾರ್ ಮಹಿಳೆಯನ್ನು ಕೊಲೆಗೈದ ಮೈದುನ.

    ಸಹೋದರರ ಆಸ್ತಿ ಸಂಬಂಧ ನಡೆದ ಗಲಾಟೆ ನಡೆದಿದೆ. ಜಗಳ ವಿಕೋಪಕ್ಕೆ ತಿರುಗಿ ಮೈದುನ ಸಲಾಕೆಯಿಂದ ಮಹಿಳೆ ತಲೆಗೆ ಹೊಡೆದಿದ್ದಾನೆ. ಕೂಡಲೆ ಆಕೆಯನ್ನು ಗದಗ ಜಿಮ್ಸ್ ಆಸ್ಪತ್ರೆಗೆ ದಾಖಲಿಸಲಾಯಿತು. ಚಿಕಿತ್ಸೆ ಫಲಿಸದೆ ಜೈಬುನಿಸಾ ಸಾವನ್ನಪ್ಪಿದ್ದಾಳೆ. ಹಲ್ಲೆ ನಡೆಸಿದ ಬಳಿಕ ಮಲ್ಲಿಕಸಾಬ್ ತಾನೇ ಪೊಲೀಸರಿಗೆ ಶರಣಾಗಿದ್ದಾನೆ.ಇದನ್ನೂ ಓದಿ: ವಿದ್ಯಾರ್ಥಿನಿಯ ಮೇಲೆ ದೌರ್ಜನ್ಯ ನಡೆಸಿದ ಖ್ಯಾತ ಗಾಯಕ ಸಂಜಯ್ ಚಕ್ರವರ್ತಿ ಅರೆಸ್ಟ್

    ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ಪರಿಶೀಲನೆ ನಡೆಸಿದ್ದಾರೆ. ಈ ಸಂಬಂಧ ಗದಗ ತಾಲೂಕಿನ ಮುಳಗುಂದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ: ದೆಹಲಿಯಲ್ಲಿ 900 ಕೋಟಿ ಮೌಲ್ಯದ ಕೊಕೇನ್‌ ವಶ – ಇಬ್ಬರು ಅರೆಸ್ಟ್‌

  • ಮೈಕೆಲ್ ಕುನ್ಹಾ 7,223 ಕೋಟಿ ಅವ್ಯವಹಾರದ ಸತ್ಯಶೋಧನೆ ನಡೆಸಿದ್ದಾರೆ: ಹೆಚ್‌.ಕೆ ಪಾಟೀಲ್

    ಮೈಕೆಲ್ ಕುನ್ಹಾ 7,223 ಕೋಟಿ ಅವ್ಯವಹಾರದ ಸತ್ಯಶೋಧನೆ ನಡೆಸಿದ್ದಾರೆ: ಹೆಚ್‌.ಕೆ ಪಾಟೀಲ್

    ನ್ಯಾ.ಕುನ್ಹಾ ಏಜೆಂಟ್‌ ಎಂಬ ಜೋಶಿ ಹೇಳಿಕೆಗೆ ಸಚಿವರ ತಿರುಗೇಟು

    ಗದಗ: ಜಸ್ಟಿಸ್ ಮೈಕೆಲ್ ಕುನ್ಹಾ (Michael D’Cunha) ಅವರು ಕಡತಗಳನ್ನು ಪರಿಶೀಲಿಸಿ 7,223 ಕೋಟಿ ರೂ. ಅವ್ಯವಹಾರದ ಸತ್ಯಶೋಧನೆ ನಡೆಸಿದ್ದಾರೆ. ನೂರಾರು ಕೋಟಿ ರೂ. ವೆಚ್ಚಗಳ ಕುರಿತು ಲೆಕ್ಕಪತ್ರಗಳಿಲ್ಲ, ಕಾಗದಗಳೂ ಇಲ್ಲ. ಯಡಿಯೂರಪ್ಪ ಸಿಎಂ ಹಾಗೂ ಶ್ರೀರಾಮುಲು ಆರೋಗ್ಯ ಸಚಿವರಾಗಿದ್ದ ಸಂದರ್ಭದಲ್ಲಿ ಬ್ರಹ್ಮಾಂಡ ಭ್ರಷ್ಟಾಚಾರವನ್ನು ಎಳೆ ಎಳೆಯಾಗಿ ಬಿಚ್ಚಿಟ್ಟಿದಾರೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಹೆಚ್.ಕೆ ಪಾಟೀಲ್ ಹೇಳಿದ್ದಾರೆ.

    ಈ ಬಗ್ಗೆ ನಗರದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮೈಕೆಲ್ ಕುನ್ಹಾ ಅವರ ಆಯೋಗವು ಸಲ್ಲಿಸಿದ ಮಧ್ಯಂತರ ವರದಿಯಲ್ಲಿ ಯಡಿಯೂರಪ್ಪ (B. S.Yediyurappa) ಅವರು ಸಿಎಂ ಹಾಗೂ ಶ್ರೀರಾಮುಲು ಅವರು ಆರೋಗ್ಯ ಸಚಿವರಾಗಿದ್ದ ಸಂದರ್ಭದಲ್ಲಿ 3 ಲಕ್ಷ ಪಿಪಿಇ ಕಿಟ್‌ಗಳನ್ನು 2,117 ರೂ. ನಂತೆ ಖರೀದಿಸಿ ಮಾರಾಟ ಮಾಡಿದ್ದಾರೆ. ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಅವರು ಜಸ್ಟಿಸ್ ಮೈಕೆಲ್ ಕುನ್ಹಾ ಅವರ ಬಗ್ಗೆ ಏಜೆಂಟ್ ಎಂದು ಹೇಳಿರುವುದು, ಆಯೋಗದ ಬಗ್ಗೆ ಲಘುವಾಗಿ ಟೀಕೆ ಮಾಡಿರುವುದು ಅತ್ಯಂತ ದುರ್ದೈವದ ಸಂಗತಿ. ಸಂವಿಧಾನ ಎತ್ತಿ ಹಿಡಿಯುವ, ನ್ಯಾಯಾಂಗದ ಬಗ್ಗೆ ಪ್ರಶ್ನಿಸಬಾರದು. ಜೋಶಿ ಅವರು ಕೂಡಲೇ ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿದರು. ಇದನ್ನೂ ಓದಿ: 3 ಕ್ಷೇತ್ರದಲ್ಲಿ ಶಾಂತಿಯುತ ಮತದಾನ – ಚನ್ನಪಟ್ಟಣದಲ್ಲಿ 89% ದಾಖಲೆಯ ವೋಟಿಂಗ್

    ಕಳೆದ ಕೆಲ ದಿನಗಳಿಂದ ಉನ್ನತ ಹಾಗೂ ಎತ್ತರದ ಹುದ್ದೆಗಳಲ್ಲಿರುವ ಜವಾಬ್ದಾರಿ ವ್ಯಕ್ತಿಗಳು ಮನಬಂದಂತೆ ಮಾತನಾಡುತ್ತಿದ್ದಾರೆ. ನ್ಯಾಯಾಂಗದ ಭಾಗವಾಗಿರುವ ನ್ಯಾಯಮೂರ್ತಿಗಳು ಹಾಗೂ ತನಿಖಾ ಸಂಸ್ಥೆಯ ನೇತೃತ್ವ ಹೊಂದಿರುವ ಆಯೋಗಗಳಿಗೂ ಮನಬಂದಂತೆ ಮಾತನಾಡಿರುವುದು ಅಕ್ಷಮ್ಯ ಅಪರಾಧವಾಗಿದೆ. ಜೋಶಿ (Pralhad Joshi) ನಮ್ಮ ರಾಜ್ಯದ ತನಿಖಾ ಆಯೋಗದಕ್ಕೆ ಅಗೌರವ ಹಾಗೂ ಅಸಂಬದ್ಧ ರೀತಿ ನಡೆದುಕೊಂಡಿರುವುದು ಸರಿಯಲ್ಲ. ರಾಷ್ಟ್ರಪತಿಗಳು ಅವರನ್ನು ತಕ್ಷಣ ಮಂತ್ರಿ ಸ್ಥಾನದಿಂದ ತೆಗೆದುಹಾಕಬೇಕು. ಅಲ್ಲದೇ ರಾಜಕೀಯ ಭಯ, ಸತ್ಯಾನ್ವೇಶನೆ ನಡೆಯಬಾರದು. ಭ್ರಷ್ಟಾಚಾರಿಗಳಿಗೆ ಶಿಕ್ಷೆ ಆಗಬಾರದು ಎಂಬ ಹಾದಿಯಲ್ಲಿ ಹೊರಟಿರುವ ಜೋಶಿ ಅವರ ಮೇಲೆ ರಾಷ್ಟ್ರಪತಿಗಳು ಕಾನೂನು ಕ್ರಮಕೈಗೊಳ್ಳುವ ಮೊದಲೇ ತಕ್ಷಣ ರಾಜೀನಾಮೆ ನೀಡಬೇಕು ಎಂದು ಒತ್ತಾಯಿಸಿದರು. ಇದನ್ನೂ ಓದಿ: ಆರೋಗ್ಯವಾಗಿದ್ದೇನೆ, ಕಠಿಣ ವ್ಯಾಯಾಮದಲ್ಲಿ ತೊಡಗಿರೋದ್ರಿಂದ ದೈಹಿಕ ಬದಲಾವಣೆ: ಸುನಿತಾ ವಿಲಿಯಮ್ಸ್ ಸ್ಪಷ್ಟನೆ

    ಕೇಂದ್ರ ಸರ್ಕಾರದ ನಿಯಮಗಳನ್ನು ಉಲ್ಲಂಘಿಸಿ ಮಾನ್ಯತೆ ಇಲ್ಲದ 14 ಖಾಸಗಿ ಪ್ರಯೋಗಾಲಯ ಕೋಟ್ಯಂತರ ಹಣ ಸಂದಾಯ ಮಾಡಿದ್ದಾರೆ. ಮತ್ತು ಇನ್ನೂ 8 ಪ್ರಯೋಗಾಲಯ 4 ಕೋಟಿ ಗೂ ಅಧಿಕ ಹಣ ಸಂದಾಯ ಮಾಡಿರುವುದನ್ನು ಆಯೋಗ ತರಾಟೆ ತೆಗೆದುಕೊಂಡಿದೆ. ಕರೋನಾದಂತಹ ಸನ್ನಿವೇಶದಲ್ಲಿ ಭ್ರಷ್ಟಾಚಾರ ಮಾಡಿರುವುದನ್ನು ಆಯೋಗ ಹೇಳಿದೆ. ಅದನ್ನು ಸಹಿಸಿಕೊಳ್ಳಲಾಗದೇ ಜೋಶಿ ಅವರು ಪ್ರತಿಕ್ರಿಯಿಸಿದ್ದಾರೆ. ಸತ್ಯವನ್ನು ಎದುರಿಸುವ ಧೈರ್ಯ ಇಲ್ಲದ ಜೋಶಿ ಅವರು ಕುನ್ಹಾ ಅವರ ಆಯೋಗದ ಬಗ್ಗೆ ಏಜೆಂಟ್ ಎಂದು ಕರೆದಿರುವುದು, ಮದ್ಯಂತರ ವರದಿಗಳ ಬಗ್ಗೆ ಟೀಕೆ ಮಾಡಿರುವುದು ಸಂವಿಧಾನಕ್ಕೆ ಮಾಡಿದ ಅಪಚಾರ ಎಂದರು. ಇದನ್ನೂ ಓದಿ: ಪರಿಹಾರದ ಹಣ ನೀಡಲಿಲ್ಲ ಅಂತ ಎಸಿ ಕೂತಿದ್ದ ಚೇರನ್ನೇ ಹೊತ್ತೊಯ್ದ ಸಂತ್ರಸ್ತರು!

    ಇನ್ನು ಜಿಲ್ಲೆಯಲ್ಲಿ ಕೋಟುಮಚಗಿ ಗ್ರಾಮದಲ್ಲಿ 562 ಸರ್ವೇ ನಂಬರ್‌ನ ಸೋಮೇಶ್ವರ ದೇವಸ್ಥಾನ ಟ್ರಸ್ಟ್ ಕಮೀಟಿ ಹೆಸರು ಇದ್ದಾಗ್ಯೂ ಇದು ವಕ್ಫ್ ಹೆಸರಿನಲ್ಲಿದೆ ಎಂದು ಅಪಪ್ರಚಾರ ಮಾಡಿದ್ದಾರೆ. ಇದು ಬದಲಾವಣೆ ಆಗಿಲ್ಲ. ಆ ರೀತಿ ಬದಲಾವಣೆ ಮಾಡಕೂಡದು ಎಂದು ಸರಕಾರ ಆದೇಶ ನೀಡಿದೆ. ಈ ಕುರಿತು ತಪ್ಪು ಮಾಹಿತಿ ಹರಡುವವರ ಮಾತಿಗೆ ಯಾರೂ ಕಿವಿಕೊಡಬಾರದು ಎಂದು ಮನವಿ ಮಾಡಿದರು. ಇದನ್ನೂ ಓದಿ: ಅಮೆರಿಕದಲ್ಲಿ 10 ಶತಕೋಟಿ ಡಾಲರ್‌ ಹೂಡಿಕೆಗೆ ಬದ್ಧ, 15,000 ಉದ್ಯೋಗ ಸೃಷ್ಟಿ ಗುರಿ: ಅದಾನಿ

    ಈ ವೇಳೆ ಮುಖಂಡರಾದ ಬಿ.ಬಿ. ಅಸೂಟಿ, ಅಶೋಕ್ ಮಂದಾಲಿ, ಬಸವರಾಜ ಕಡೇಮನಿ ಸೇರಿ ಅನೇಕರು ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದ್ದರು. ಇದನ್ನೂ ಓದಿ: ಉದ್ಧವ್ ಠಾಕ್ರೆ ಬ್ಯಾಗ್ ಗದ್ದಲದ ನಡುವೆ ಮಹಾರಾಷ್ಟ್ರದಲ್ಲಿ ಏಕನಾಥ್ ಶಿಂಧೆ ಹೆಲಿಕಾಪ್ಟರ್ ತಪಾಸಣೆ

  • ತಲೆ ಮೇಲೆ ಹರಿದ ಸರ್ಕಾರಿ ಬಸ್- ವಿದ್ಯಾರ್ಥಿ ಸ್ಥಳದಲ್ಲೇ ಸಾವು

    ತಲೆ ಮೇಲೆ ಹರಿದ ಸರ್ಕಾರಿ ಬಸ್- ವಿದ್ಯಾರ್ಥಿ ಸ್ಥಳದಲ್ಲೇ ಸಾವು

    ಗದಗ: ಸರ್ಕಾರಿ ಬಸ್ ತಲೆ ಮೇಲೆ ಹರಿದು ವಿದ್ಯಾರ್ಥಿ ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ಜಿಲ್ಲೆಯ ನರಗುಂದ (Naragunda) ತಾಲೂಕಿನ ಕೊಣ್ಣೂರ ಗ್ರಾಮದಲ್ಲಿ ನಡೆದಿದೆ.

    ರಾಘವೇಂದ್ರ ಮನಿಕಟ್ಟಿ (20) ಮೃತ ವಿದ್ಯಾರ್ಥಿ. ಶಕ್ತಿಯೋಜನೆ ಪ್ರಭಾವದಿಂದ ಬಸ್ ಪೂರ್ತಿ ಪ್ರಯಾಣಿಕರು ತುಂಬಿದ್ದರು. ರಾಘವೇಂದ್ರ ಬಸ್ಸಿನ ಮುಂದಿನ ಬಾಗಿಲಲ್ಲಿ ನಿಂತಿದ್ದ. ಬಸ್ ಕೊಣ್ಣೂರ (Konnur) ನಿಲ್ದಾಣದಿಂದ ಹೊರಡುವ ವೇಳೆ ತಿರುವಿನಲ್ಲಿ ಆಯಾತಪ್ಪಿ ವಿದ್ಯಾರ್ಥಿ ಕೆಳಗೆ ಬಿದ್ದಿದ್ದಾನೆ. ಬಸ್ಸಿನ ಹಿಂದಿನ ಚಕ್ರಗಳಿಗೆ ವಿದ್ಯಾರ್ಥಿ ಸಿಲುಕಿದ್ದು, ತೀವ್ರ ರಕ್ತ ಸ್ರಾವದಿಂದ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ. ಮೃತ ವಿದ್ಯಾರ್ಥಿಯ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಇದನ್ನೂ ಓದಿ: ಲಾಬಿ ಎಟಿಎಂ ಮಷಿನ್‌ನಲ್ಲಿ ಹಣ ಹಾಕಲು ಬಂದು 39,500 ರೂ. ಕಳೆದುಕೊಂಡ ವ್ಯಕ್ತಿ

    ಕೊಣ್ಣೂರ ನರಗುಂದ ಪಟ್ಟಣದ ಸರ್ಕಾರಿ ಸಿದ್ಧೇಶ್ವರ ಪದವಿ ಕಾಲೇಜಿನಲ್ಲಿ ರಾಘವೇಂದ್ರ ಅಂತಿಮ ವರ್ಷದ ಬಿಎ ವ್ಯಾಸಂಗ ಮಾಡುತ್ತಿದ್ದ. ಬೆಳಗಾವಿ (Belagavi) ಜಿಲ್ಲೆಯ ರಾಮದುರ್ಗದಿಂದ ಕೊಣ್ಣೂರ, ನರಗುಂದ, ಗದಗ ಮಾರ್ಗವಾಗಿ ಹೊಸಪೇಟೆಗೆ ಹೊರಟಿದ್ದ ಬಸ್‌ನಲ್ಲಿ ಪ್ರಯಾಣ ಮಾಡುತ್ತಿದ್ದ ವೇಳೆ ಈ ಘಟನೆ ನಡೆದಿದೆ. ಇದನ್ನೂ ಓದಿ: ಅಭಿವೃದ್ಧಿಗೆ ಬ್ರೇಕ್ ಹಾಕುವಲ್ಲಿ ಕಾಂಗ್ರೆಸ್, ಮಿತ್ರಪಕ್ಷಗಳಿಂದ ಪಿಹೆಚ್‌ಡಿ: ಮೋದಿ ವಾಗ್ದಾಳಿ

    ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ಪರಿಶೀಲನೆ ನಡೆಸಿದ್ದಾರೆ. ಈ ಕುರಿತು ಗದಗ (Gadaga) ಜಿಲ್ಲೆಯ ನರಗುಂದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ: Kalaburagi| ಮಾರಕಾಸ್ತ್ರಗಳಿಂದ ಕೊಚ್ಚಿ ರೌಡಿಶೀಟರ್ ಬರ್ಬರ ಹತ್ಯೆ

  • ಐತಿಹಾಸಿಕ ಸೋಮೇಶ್ವರ ದೇವಸ್ಥಾನ ವಕ್ಫ್‌ಗೆ ಪರಭಾರೆ ಆರೋಪ; ವಕ್ಫ್ ಬೋರ್ಡ್, ಸರ್ಕಾರದ ವಿರುದ್ಧ ಪ್ರತಿಭಟನೆ

    ಐತಿಹಾಸಿಕ ಸೋಮೇಶ್ವರ ದೇವಸ್ಥಾನ ವಕ್ಫ್‌ಗೆ ಪರಭಾರೆ ಆರೋಪ; ವಕ್ಫ್ ಬೋರ್ಡ್, ಸರ್ಕಾರದ ವಿರುದ್ಧ ಪ್ರತಿಭಟನೆ

    ಗದಗ: ಜಿಲ್ಲೆಯಲ್ಲಿ ವಕ್ಫ್ ಬೋರ್ಡ್ (Waqf Board) ಭೂ ವಿವಾದ ಮತ್ತೆ ಮುನ್ನೆಲೆಗೆ ಬಂದಿದೆ. ವಕ್ಫ್ ಬೋರ್ಡ್ ವಿರುದ್ಧ ತಾಲೂಕಿನ ಕೋಟುಮಚಗಿ ಗ್ರಾಮದಲ್ಲಿ ಬೃಹತ್ ಪ್ರತಿಭಟನೆ ನಡೆಯಿತು. ವಿಶ್ವ ಹಿಂದೂ ಪರಿಷತ್, ಭಜರಂಗದಳ ಹಾಗೂ ರೈತರು ಸೇರಿಕೊಂಡು ಗದಗ-ಬಾಗಲಕೋಟೆ ರಾಜ್ಯ ಹೆದ್ದಾರಿ ತಡೆದು, ಟಯರ್‌ಗೆ ಬೆಂಕಿ ಹಚ್ಚಿ ಪ್ರತಿಭಟಿಸಿದರು.

    6ನೇ ವಿಕ್ರಮಾದಿತ್ಯನ ಕಾಲದ ಐತಿಹಾಸಿಕ ಸೋಮೇಶ್ವರ ದೇವಸ್ಥಾನದ (Someshwara Temple) ಜಮೀನು ವಕ್ಫ್‌ಗೆ ಸೇರಿಸುವ ಹುನ್ನಾರ ನಡೆಸಿದ್ದಾರೆ. ಇದು ಸಂಸ್ಕೃತ ವಿಶ್ವವಿದ್ಯಾಲಯ ಕೇಂದ್ರವಾಗಿತ್ತು. ಕವಿ ಚಾಮರಸಾ ಬರೆದ ಪ್ರಭುಲಿಂಗಲೀಲೆ ಪುರಾಣ ಇದೇ ದೇವಸ್ಥಾನದಲ್ಲಿ ಬರೆದಿರುವ ಇತಿಹಾಸವಿದೆ. ಅಂತಹ ಐತಿಹಾಸಿಕ ದೇವಸ್ಥಾನದ ಭೂಮಿಯನ್ನು ವಕ್ಫ್‌ಗೆ ಪರಭಾರೆ ಮಾಡಲು ಹೊರಟಿರುವುದು ಖಂಡನೀಯ. ಇದನ್ನೂ ಓದಿ: ಮಹಿಳೆಯರಿಗೆ ಫ್ರೀ ಬಸ್‌ ಕೊಟ್ಟರು, ಪಾಪ ಪುರುಷರಿಗೆ ಏನ್‌ ಮಾಡಿದ್ರು? – ಸರ್ಕಾರಕ್ಕೆ ನಟಿ ತಾರಾ ಪ್ರಶ್ನೆ

    ಗೆಜೆಟ್‌ನಲ್ಲಿ ಸೋಮೇಶ್ವರ ದೇವಸ್ಥಾನಕ್ಕೆ ಸೇರಿದ ಸರ್ವೆ ನಂ.562 ರ 12 ಎಕರೆ 22 ಗುಂಟೆ ಜಮೀನು ವಕ್ಫ್ ಆಸ್ತಿ ಎಂದು ನಮೂದಾಗಿದೆ. ಈ ಎಲ್ಲದರಿಂದ ಆಕ್ರೋಶಕ್ಕೆ ಒಳಗಾದ ಜನರು ರಾಜ್ಯ ಹೆದ್ದಾರಿ ತಡೆದು ವಕ್ಫ್ ಬೋರ್ಡ್, ಸಚಿವ ಜಮೀರ್ ಅಹ್ಮದ್ ಖಾನ್ (Zameer Ahmed Khan) ಹಾಗೂ ರಾಜ್ಯ ಸರ್ಕಾರದ ವಿರುಧ್ಧ ಧಿಕ್ಕಾರ ಕೂಗಿದರು. ನಡು ರಸ್ತೆಯಲ್ಲೇ ಟಯರ್‌ಗೆ ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಿದರು. ಇದನ್ನೂ ಓದಿ: ಓವರ್‌ಟೇಕ್ ಮಾಡುವ ಭರದಲ್ಲಿ ಬೈಕ್‌ಗೆ ಖಾಸಗಿ ಬಸ್ ಡಿಕ್ಕಿ – ತಾಯಿ, ಮಗಳಿಗೆ ಗಂಭೀರ ಗಾಯ

    ಗಂಟೆ ಗಟ್ಟಲೆ ರಸ್ತೆ ತಡೆ ನಡೆಸಿದ್ದರಿಂದ ವಾಹನಗಳು ಸಾಲುಗಟ್ಟಿ ನಿಂತವು. ಕೆಲಕಾಲ ವಾಹನ ಸವಾರರು ಪರದಾಡಿದರು. ಸ್ಥಳದಲ್ಲಿ ಬಿಗಿ ಪೊಲೀಸ್ ಭದ್ರತೆ ಕಲ್ಪಿಸಲಾಗಿತ್ತು. ಈ ವೇಳೆ ಜಿಲ್ಲಾಧಿಕಾರಿಗಳು ಸ್ಥಳಕ್ಕೆ ಬರುವಂತೆ ಪಟ್ಟು ಹಿಡಿದರು. ನಂತರ ಸ್ಥಳಕ್ಕೆ ಬಂದ ಗದಗ ತಹಶೀಲ್ದಾರ್‌ಗೆ ಸ್ಥಳಿಯರು ತರಾಟೆಗೆ ತೆಗೆದುಕೊಂಡರು. ಸೋಮೇಶ್ವರ ದೇವಸ್ಥಾನದ ಜಾಗ ವಕ್ಫ್ ಹೇಗೆ ಆಯಿತು? ಶೀಘ್ರದಲ್ಲೇ ಇದನ್ನು ರದ್ದು ಮಾಡದಿದ್ದರೆ ಉಗ್ರವಾದ ಹೋರಾಟ ಮಾಡುವುದಾಗಿ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು. ಇದನ್ನೂ ಓದಿ: ಬೀದಿ ನಾಯಿ ಜೊತೆ ಅಸಭ್ಯ ವರ್ತನೆ – ಆರೋಪಿಯನ್ನು ವಶಕ್ಕೆ ಪಡೆದ ಪೊಲೀಸರು

    ಈ ವೇಳೆ ವಿಶ್ವ ಹಿಂದು ಪರಿಷತ್ ಜಿಲ್ಲಾಧ್ಯಕ್ಷ ಶ್ರೀಧರ್ ಕುಲಕರ್ಣಿ ಸೇರಿದಂತೆ ಅನೇಕ ಸಂಘಟಿಕರು, ಸೋಮೇಶ್ವರ ದೇವಸ್ಥಾನ ಆಡಳಿತ ಮಂಡಳಿಯವರು, ರೈತರು ಉಪಸ್ಥಿತರಿದ್ದರು. ಇದನ್ನೂ ಓದಿ: ಸೆಟ್ಟೇರಿತು ರಾಘು ಶಿವಮೊಗ್ಗ ನಿರ್ದೇಶನದ ಹೊಸ ಸಿನಿಮಾ-‘ದಿ ಟಾಸ್ಕ್’ನಲ್ಲಿ ನವಪ್ರತಿಭೆಗಳ ಸಂಗಮ

  • ಮೆಕ್ಕೆಜೋಳ ರಾಶಿ ಮಾಡುತ್ತಿದ್ದ ವೇಳೆ ಕಾರು ಡಿಕ್ಕಿ – ಕಾರ್ಮಿಕ ಸ್ಥಳದಲ್ಲೇ ಸಾವು

    ಮೆಕ್ಕೆಜೋಳ ರಾಶಿ ಮಾಡುತ್ತಿದ್ದ ವೇಳೆ ಕಾರು ಡಿಕ್ಕಿ – ಕಾರ್ಮಿಕ ಸ್ಥಳದಲ್ಲೇ ಸಾವು

    ಗದಗ: ಮೆಕ್ಕೆಜೋಳ (Maize) ರಾಶಿ ಮಾಡುತ್ತಿದ್ದ ವೇಳೆ ಕಾರು ಡಿಕ್ಕಿ ಹೊಡೆದು ಕಾರ್ಮಿಕ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಗದಗ (Gadaga) ತಾಲೂಕಿನ ಲಕ್ಕುಂಡಿ (Lakkundi) ಬಳಿಯ ರಾಷ್ಟ್ರೀಯ ಹೆದ್ದಾರಿ 67ನಲ್ಲಿ ನಡೆದಿದೆ.

    ಕೂಲಿ ಕಾರ್ಮಿಕ ಕಲ್ಲಪ್ಪ ಕಲ್ಲೂರ್ (25) ಮೃತ ದುರ್ದೈವಿ. ಈತ ಮೆಕ್ಕೆಜೋಳ ರಾಶಿ ಮಾಡಲು ಬಂದಿದ್ದ. ಹೈವೆ ಪಕ್ಕ ಮೆಕ್ಕೆಜೋಳ ರಾಶಿ ಮಾಡುತ್ತಿದ್ದ ವೇಳೆ ಗದಗದಿಂದ ಕೊಪ್ಪಳ (Koppala) ಕಡೆಗೆ ಹೋಗುವ ಕಾರೊಂದು ಡಿಕ್ಕಿ ಹೊಡೆದಿದ್ದು ಕಾರ್ಮಿಕ ಸ್ಥಳದಲ್ಲೆ ಸಾವನ್ನಪ್ಪಿದ್ದಾನೆ. ಇದನ್ನೂ ಓದಿ: ಮಹಿಳೆಯರಿಗೆ 3,000 ರೂ., ನಿರುದ್ಯೋಗ ಯುವಕ, ಯುವತಿಯರಿಗೆ 4,000 ರೂ. ಭತ್ಯೆ; ಕಾಂಗ್ರೆಸ್‌ ʻಮಹಾʼ ಗ್ಯಾರಂಟಿ!

    ಘಟನಾ ಸ್ಥಳಕ್ಕೆ ಗ್ರಾಮೀಣ ಪೊಲೀಸರು ಭೇಟಿ ಪರಿಶೀಲನೆ ನಡೆಸಿದ್ದಾರೆ. ಗದಗ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ: ನಮ್ಮಪ್ಪನ ಆಣೆ ಸಿದ್ದರಾಮಯ್ಯ ಡಿಸೆಂಬರ್‌ವರೆಗೆ ಮಾತ್ರ ಸಿಎಂ ಆಗಿರ್ತಾರೆ: ಸೋಮಣ್ಣ ಭವಿಷ್ಯ

  • ಲಾರಿ, ಕಾರು ನಡುವೆ ಅಪಘಾತ- ದಂಪತಿ ಸ್ಥಳದಲ್ಲೇ ಸಾವು

    ಲಾರಿ, ಕಾರು ನಡುವೆ ಅಪಘಾತ- ದಂಪತಿ ಸ್ಥಳದಲ್ಲೇ ಸಾವು

    ಗದಗ: ಲಾರಿ ಮತ್ತು ಕಾರ್ ನಡುವೆ ಅಪಘಾತ ಸಂಭವಿಸಿದೆ. ಕಾರಿನಲ್ಲಿದ್ದ ದಂಪತಿ ಸ್ಥಳದಲ್ಲೇ ಸಾವನ್ನಪ್ಪಿದ್ದು, ಇಬ್ಬರು ಮಕ್ಕಳು ಗಾಯಗೊಂಡಿರುವ ದಾರುಣ ಘಟನೆ ಗದಗ (Gadaga) ಜಿಲ್ಲೆ ನರಗುಂದ (Naragunda) ತಾಲೂಕಿನ ಭೈರನಹಟ್ಟಿ ಗ್ರಾಮದ ಬಳಿ ನಡೆದಿದೆ.

    ಬಾಗಲಕೋಟೆ ಮೂಲದ ಸಿದ್ದರಾಮ ಹಾಗೂ ಹೇಮಾ ಮೃತ ದಂಪತಿ. ಮಕ್ಕಳಾದ ಮಲ್ಲಿಕಾರ್ಜುನ ಹಾಗೂ ಸಹನಾ ಗಾಯಾಳುಗಳು ನರಗುಂದ ತಾಲೂಕು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇದನ್ನೂ ಓದಿ: MUDA Case: ಇಂದು ಮೈಸೂರು ‘ಲೋಕಾ’ ಕಚೇರಿಯಲ್ಲಿ ಸಿಎಂ ವಿಚಾರಣೆ

    ಮೃತ ಕುಟುಂಬಸ್ಥರು ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದಿಂದ ಪೂಜೆ ಮುಗಿಸಿಕೊಂಡು ಮರಳಿ ಊರಿಗೆ ಬರುತ್ತಿದ್ದಾಗ ದಾರಿ ಮಧ್ಯೆ ಈ ದುರ್ಘಟನೆ ನಡೆದಿದೆ. ಲಾರಿ ಹುಬ್ಬಳ್ಳಿ ಕಡೆಗೆ ಹೊರಟಿತ್ತು, ಕಾರು ಬಾಗಲಕೋಟೆಗೆ ಹೊರಟಿತ್ತು. ಕಾರು ಸಂಪೂರ್ಣ ನಜ್ಜುಗುಜ್ಜಾಗಿದೆ. ಸ್ಥಳಕ್ಕೆ ನರಗುಂದ ಪೊಲೀಸರು ಭೇಟಿ ಪರಿಶೀಲನೆ ನಡೆಸಿದ್ದಾರೆ. ಈ ಕುರಿತು ಗದಗ ಜಿಲ್ಲೆಯ ನರಗುಂದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ದೇವಸ್ಥಾನಕ್ಕೆಂದು ಹೋದವರು ಶಾಶ್ವತವಾಗಿ ದೇವರ ಪಾದ ಸೇರಿದ್ದಾರೆ. ಮಕ್ಕಳು ಅನಾಥರಾಗಿದ್ದು ನಿಜಕ್ಕೂ ದುರಂತವೆ ಸರಿ. ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಇದನ್ನೂ ಓದಿ: ಡ್ರೈ ಪೋರ್ಟ್ ಎಂದರೇನು?  ಬಿಹಾರದಲ್ಲಿ ಅದರ ಅವಶ್ಯಕತೆ ಏನಿತ್ತು? 

  • Gadaga| ಮಠದ 11 ಎಕ್ರೆಗೆ ಕನ್ನ – ಪ್ರಸಾದ ನಿಲಯ ಈಗ  ‘ವಕ್ಫ್’ ಆಸ್ತಿ

    Gadaga| ಮಠದ 11 ಎಕ್ರೆಗೆ ಕನ್ನ – ಪ್ರಸಾದ ನಿಲಯ ಈಗ ‘ವಕ್ಫ್’ ಆಸ್ತಿ

    ಗದಗ: ಜಿಲ್ಲೆಯ ಗಜೇಂದ್ರಗಡ (Gajendragad) ತಾಲೂಕಿನ ನರೇಗಲ್‌ನಲ್ಲಿರುವ ಹಾಲಕೇರಿ ಅನ್ನದಾನೇಶ್ವರ ಮಠ (Annadaneshwara Math) ಪ್ರಸಾದ ನಿಲಯ ವಕ್ಫ್ ಆಸ್ತಿ ಎಂದು ದಾಖಲಾಗಿರುವುದು ಬೆಳಕಿಗೆ ಬಂದಿದೆ. ಪ್ರಸಾದ ನಿಲಯದ 11.19 ಎಕರೆ 2019ರಲ್ಲಿ ವಕ್ಫ್ ಆಸ್ತಿ ಎಂದು ದಾಖಲಾಗಿದೆ.

    ಸ್ವಾತಂತ್ರ್ಯ ಪೂರ್ವದಲ್ಲಿ ಪ್ರಾರಂಭವಾದ ಶ್ರೀ ಅಮ್ಮದಾನೇಶ್ವರ ವಿದ್ಯಾವರ್ಧಕ ಪ್ರಸಾದ ನಿಲಯ ಸಮಿತಿಯ ಉಚಿತ ಪ್ರಸಾದ ನಿಲಯಕ್ಕೆ ಸೇರಿದ 15.06 ಎಕರೆಯಲ್ಲಿ 11.19 ಎಕರೆ ವಕ್ಫ್ ಆಸ್ತಿ ಎಂದು ನಮೂದು ಆಗಿದೆ. (ಕೆ.ವಿ.ಬಿ.ಎಂ) ಕೋಡಿಕೊಪ್ಪ ವೀರಪ್ಪಜ್ಜನವರ ಹಾಗೂ ಬಾಗಲಕೋಟೆ ವೈರಾಗ್ಯದ ಮಲ್ಲಣಾರ್ಯರ ಉಚಿತ ಪ್ರಸಾದ ನಿಲಯದ ಆಸ್ತಿ ಸರ್ವೆ ನಂಬರ್ 410/2ಬಿ ಈಗ ರಹಮಾನ ಶಾವಲಿ ದರ್ಗಾ ವಕ್ಫ್ ಆಸ್ತಿ ಎಂದು ನೋಂದಣಿಯಾಗಿದೆ. ಇದನ್ನೂ ಓದಿ: ಉಡುಪಿಯಲ್ಲಿ ಸುಲ್ತಾನಪುರ ಎಂದು ಒಂದು ಹಳ್ಳಿಯನ್ನೆ ನಿರ್ಮಾಣ ಮಾಡಿದ್ದಾರೆ: ಶೋಭಾ ಕರಂದ್ಲಾಜೆ

    ಲಿಂಗೈಕ್ಯ ಡಾ. ಅಭಿನವ ಅನ್ನದಾನ ಸ್ವಾಮೀಜಿಗಳು ಶ್ರೀಮಠದ ಪೀಠಾಧಿಪತಿಗಳಾಗಿದ್ದಾಗ ಪಹಣಿಯ ಕಾಲಂ ನಂ. 11ರಲ್ಲಿ 2019-2020 ರಲ್ಲಿ ರೆಹಮಾನ ಶಾವಲಿ ದರ್ಗಾ ವಕ್ಫ್ ಆಸ್ತಿ (Waqf Property) ಎಂದು ಸೇರ್ಪಡೆಯಾಗಿದೆ. ಉಚಿತ ಪ್ರಸಾದ ನಿಲಯಕ್ಕೆ ಸ್ಥಳೀಯ ರೈತರು, ದಾನಿಗಳ ಸಹಕಾರದಿಂದ ಸಾಕಷ್ಟು ಭೂಮಿಯನ್ನು ಶ್ರೀಮಠಕ್ಕೆ ನೀಡಲಾಗಿತ್ತು. ಆದರೆ, 2019-20 ರಲ್ಲಿ ಉಚಿತ ಪ್ರಸಾದ ನಿಲಯದ 15.06 ಎಕರೆ ಆಸ್ತಿಯಲ್ಲಿ ರೆಹಮಾನ ಶಾವಲಿ ದರ್ಗಾ ವಕ್ಫ್ ಆಸ್ತಿ ಎಂದು ನಮೂದಾಗಿದ್ದರಿಂದ ಇದು ಭಕ್ತರು ಆಕ್ರೋಶಕ್ಕೆ ಕಾರಣವಾಗಿದೆ. ಈ ಬಗ್ಗೆ ಹಿಂದಿನ ಪೀಠಾಧಿಪತಿಗಳಾಗಿದ್ದ ಡಾ. ಅಭಿನವ ಅನ್ನದಾನ ಸ್ವಾಮೀಜಿಗಳು ಕಾನೂನಾತ್ಮಕ ಹೋರಾಟಕ್ಕೆ ಮುಂದಾಗಿದ್ದರು. ಆದರೆ ಅವರು ಲಿಂಗೈಕ್ಯರಾದ ಹಿನ್ನೆಲೆಯಲ್ಲಿ ಅದು ನೆನೆಗುದಿಗೆ ಬಿದ್ದಿದೆ. ಇದನ್ನೂ ಓದಿ: ವಕ್ಫ್‌ ಮಂಡಳಿಯ ಎಲ್ಲಾ ಬಗೆಯ ಜಮೀನು ನೋಂದಣಿ ಸ್ಥಗಿತಗೊಳಿಸಲು ಸೂಚಿಸಿ: ಜೆಪಿಸಿಗೆ ಅಶೋಕ್‌ ಮನವಿ

  • ಕಾಂಗ್ರೆಸ್ ಸರ್ಕಾರದ ಹಗರಣಗಳ ಬಗ್ಗೆ ಸಿನಿಮಾ ಮಾಡಿದ್ರೆ ಬಾಕ್ಸ್ಆಫೀಸ್ ಹಿಟ್ ಆಗುತ್ತೆ: ಸಿ.ಸಿ ಪಾಟೀಲ್

    ಕಾಂಗ್ರೆಸ್ ಸರ್ಕಾರದ ಹಗರಣಗಳ ಬಗ್ಗೆ ಸಿನಿಮಾ ಮಾಡಿದ್ರೆ ಬಾಕ್ಸ್ಆಫೀಸ್ ಹಿಟ್ ಆಗುತ್ತೆ: ಸಿ.ಸಿ ಪಾಟೀಲ್

    ಗದಗ: ಕಾಂಗ್ರೆಸ್ (Congress) ಸರ್ಕಾರದ ಹಗರಣಗಳ ಬಗ್ಗೆ ಸಿನೆಮಾ ಮಾಡಿದ್ರೆ ಬಾಕ್ಸ್ಆಫೀಸ್ ಹಿಟ್ ಆಗುತ್ತದೆ ಎಂದು ಮಾಜಿ ಸಚಿವ ಹಾಗೂ ಬಿಜೆಪಿ (BJP) ನರಗುಂದ ಶಾಸಕ ಸಿ.ಸಿ ಪಾಟೀಲ್ (C C Patil) ಕಾಂಗ್ರೆಸ್ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.

    ನಗರದ ಕಚೇರಿಯಲ್ಲಿ ಮಾತನಾಡಿದ ಅವರು, ಹಗರಣಗಳ ಸುಳಿಯಲ್ಲಿ ಸರ್ಕಾರ ಸಿಲುಕಿದೆ. ತನ್ನ ಹಗರಣಗಳು ಬೆಳಕಿಗೆ ಬರಬಾರದೆಂದು ಒಂದಲ್ಲ ಒಂದು ಕಥೆ ಬಿಡುತ್ತಿದೆ. ಮೊದಲು ಹುಲಿ ಉಗುರಿನದು ಬಿಟ್ಟರು. ವಾಲ್ಮೀಕಿ ಹಗರಣ ಬಂದಾಗ ದರ್ಶನ್ ವಿಚಾರ ಬಂತು. ಈಗ ಮುಡಾ ಹಗರಣ ಬಂದಾಗ ವಕ್ಫ್ ಬೋರ್ಡ್ ಬಂದಿದೆ. ಹಗರಣಗಳನ್ನ ಮುಚ್ಚಿಹಾಕಲು ಒಂದಿಲ್ಲೊಂದು ದಂತಕಥೆಗಳನ್ನು ತೇಲಿಬಿಡುತ್ತಾರೆ. ಆಡಳಿತದ ವೈಫಲ್ಯತೆ ಕಡೆಗೆ ರಾಜ್ಯದ ಜನರ ಗಮನ ಹೋಗದ ಹಾಗೆ ನೋಡುತ್ತಿದ್ದಾರೆ. ಸಿಎಂ ಅವರು ಗಾಳಿ ಸುದ್ದಿ ಬಿಡುವುದರಲ್ಲಿ ನಿರತರಾಗಿದ್ದಾರೆ ಎಂದು ಆರೋಪಿಸಿದರು. ಇದನ್ನೂ ಓದಿ: ಸಿದ್ದಗಂಗಾ ಶ್ರೀಗಳ ಗದ್ದುಗೆಗೆ ಪೂಜೆ ಸಲ್ಲಿಸಿದ ಹೆಚ್‍ಡಿಕೆ

    ನಿಮ್ಮ ಆಡಳಿತ ನಿಮಗೆ ತೃಪ್ತಿ ತರುತ್ತಿದೆಯಾ ಎಂದು ಆತ್ಮಸಾಕ್ಷಿಯಾಗಿ ಸಿಎಂ ಹೇಳಿ. 2 ವರ್ಷದಲ್ಲಿ ರಾಜ್ಯ ಏನು ಅಭಿವೃದ್ಧಿ ಆಗಿದೆ. ಗ್ಯಾರಂಟಿ ಕೊಟ್ಟಿದ್ದೇನೆ ಅಂತೀರಾ ಅದಕ್ಕೆ ವಿರೋಧ ಇಲ್ಲ. ಅಭಿವೃದ್ಧಿ ಏನು ಮಾಡಿದ್ದೀರಿ? ಕಾಂಗ್ರೆಸ್ ಪಕ್ಷದ ಶಾಸಕಾಂಗ ಸಭೆ ಕರೆದು ಶಾಸಕರ ಅಭಿಪ್ರಾಯ ಕೇಳಿ. ಆಗ ನಿಮ್ಮ ನೈಜ ಬಣ್ಣ ಗೊತ್ತಾಗುತ್ತೆ. ಸಿಎಂ ಡಿಸಿಎಂಗೆ ಹೇಳೋಕೆ ಇಚ್ಚೆ ಪಡುತ್ತೇನೆ. ಕನ್ನಡ ರಾಜ್ಯೋತ್ಸವದ ಬಗ್ಗೆ ಕೇವಲ ಡಿಸಿಎಂ ಜಾಹೀರಾತು ಬರುತ್ತದೆ. ಸಿಎಂದು ಹೆಚ್ಚು ಜಾಹಿರಾತು ಇಲ್ಲವೇ ಇಲ್ಲ. ಏನು ವಿಚಿತ್ರ ಸರ್ಕಾರ. ನಾನು 4ನೇ ಬಾರಿ ಶಾಸಕ, ನಾನಂತೂ ಇಂತಹ ಸರ್ಕಾರ ನೋಡಿದ್ದೇ ಇಲ್ಲ ಎಂದರು. ಇದನ್ನೂ ಓದಿ: ಬಿಜಿಎಸ್ ಆಸ್ಪತ್ರೆ ತಲುಪಿದ ದರ್ಶನ್‌ – ಸರ್ಜರಿ ಕೊನೇ ಆಯ್ಕೆಯಾಗಿ ಪರಿಗಣಿಸುವಂತೆ ಕುಟುಂಬಸ್ಥರ ಮನವಿ

    ಇನ್ನು ವಕ್ಫ್ ಆಸ್ತಿ ವಿಚಾರವಾಗಿ ಕಾಂಗ್ರೆಸ್ ವಿರುದ್ಧ ಮಾತನಾಡಿ, ಪಂಚಮಸಾಲಿ ಕೂಡಲಸಂಗಮ ಪೀಠ, ಹರಿಹರ ಪಂಚಮಸಾಲಿ ಪೀಠ ವಕ್ಫ್ ಬೋರ್ಡ್ ಅನ್ನುತ್ತಾರೋ ಏನೋ. ವಕ್ಫ್ ಬೋರ್ಡ್ ವಿಚಾರಕ್ಕೆ ಕಾಂಗ್ರೆಸ್‌ಗೆ ಮತ ಹಾಕಿದ ಹಿಂದೂಗಳು ವಿಚಾರ ಮಾಡಬೇಕು. ಇಂದು ಯಾರದೋ ಹೊಲಕ್ಕೆ ಬಂದಿದೆ, ನಾಳೆ ನನ್ನ ಮನೆಗೆ ಬರಲ್ಲ ಅನ್ನುವ ಗ್ಯಾರಂಟಿ ಏನು? ನಮ್ಮ ಮಠಕ್ಕೆ ಬರಲ್ಲ ಅನ್ನೋ ಗ್ಯಾರಂಟಿ ಏನಿದೆ? ಕೂಡಲಸಂಗಮ ಪಂಚಮಸಾಲಿ ಪೀಠಾನೂ ವಕ್ಫ್ ಬೋರ್ಡ್ ಅಂತಾರೋ ಏನೋ? ಕಾಂಗ್ರೆಸ್ ತುಷ್ಟೀಕರಣ ಓಲೈಕೆ ರಾಜಕಾರಣ ಮಾಡುತ್ತಿದ್ದಾರೆ. ವಿಜಯಪುರ ಜಿಲ್ಲೆಯಲ್ಲಿ ಸಾವಿರಾರು ಎಕರೆ ಜಮೀನು ಹಿಂದಿನ ದಿನ ರೈತರ ಹೆಸರಲ್ಲಿತ್ತು. ಮರುದಿನ ವಕ್ಫ್ ಬೋರ್ಡ್ ಹೆಸರಿನಲ್ಲಿ ಪಹಣಿ ಆಗಿದೆ. ಸಚಿವ ಜಮೀರ್ ಅಹ್ಮದ್ ವಿಜಯಪುರಕ್ಕೆ ಭೇಟಿ ಕೊಟ್ಟು ಬಂದ 24 ಗಂಟೆಯೊಳಗೆ ಸಾವಿರಾರು ಎಕರೆ ಜಮೀನನ್ನು ವಕ್ಫ್ ಬೋರ್ಡ್‌ಗೆ ವರ್ಗಾವಣೆ ಮಾಡಿದರು. ಇದಕ್ಕೆಲ್ಲಾ ಕಾರಣರಾದ ಅಲ್ಲಿನ ಜಿಲ್ಲಾಧಿಕಾರಿ ಬೂಬಾಲನ್ ಮೇಲೆ ಕ್ರಮ ಜರುಗಿಸಬೇಕು ಎಂದು ಆಗ್ರಹಿಸಿದರು. ಇದನ್ನೂ ಓದಿ: ರಾಜ್ಯ ಸರ್ಕಾರದ ತೊಳಲಾಟವನ್ನು ಬಹಿರಂಗವಾಗಿ ಹೇಳಿದ ಡಿಕೆಶಿಗೆ ಅಭಿನಂದನೆ: ವಿ.ಸೋಮಣ್ಣ ವ್ಯಂಗ್ಯ

    ರಾಜ್ಯಾದ್ಯಂತ ತೀವ್ರ ಪ್ರತಿಭಟನೆ ಹಿನ್ನೆಲೆ ಪುನಃ ರೈತರ ಖಾತೆಗೆ ವರ್ಗಾವಣೆ ಮಾಡಿದ್ದಾರೆ. ಈ ರಾಜ್ಯದಲ್ಲಿ ಏನು ನಡೆಯುತ್ತಿದೆ. ಹಲವಾರು ಮಂತ್ರಿಗಳು ಬಿಜೆಪಿಯವರ ಹುನ್ನಾರ ಅನ್ನುತ್ತಾರೆ. ಬಿಜೆಪಿಯವರು ಪಹಣಿ ತಿದ್ದಿಸಿದ್ರಾ? ಡಿಸಿ ಬಿಜೆಪಿಯವರ ಮಾತು ಕೇಳುತ್ತಾನಾ? ಕಾಂಗ್ರೆಸ್‌ನವರ ಮಾತು ಕೇಳುತ್ತಾನಾ?ಜಿಲ್ಲಾಧಿಕಾರಿಗೆ ತನ್ನ ಕರ್ತವ್ಯದ ಅರಿವಿರಬೇಕಿತ್ತು. ಸರ್ಕಾರ ಹೇಳಿದ್ದನ್ನು ಕೇಳಲು ಜಿಲ್ಲಾಧಿಕಾರಿ ಇರಲ್ಲ, ಅವರು ಐಎಎಸ್ ಕೇಡರ್ ಅಧಿಕಾರಿ. ಈ ದೇಶದ ಕಾನೂನಿನಲ್ಲಿ ಕೆಲಸ ಮಾಡಬೇಕಾಗುತ್ತದೆ. ಆ ಜಿಲ್ಲಾಧಿಕಾರಿ ಮೇಲೂ ಕ್ರಮ ಆಗಬೇಕೆಂದು ಹೇಳಿದರು. ಇದನ್ನೂ ಓದಿ: ಬೆನ್ನುನೋವಿನ ಚಿಕಿತ್ಸೆಗಾಗಿ ಬಿಜಿಎಸ್ ಆಸ್ಪತ್ರೆಯತ್ತ ದರ್ಶನ್ – ಆಸ್ಪತ್ರೆ ಸುತ್ತಲೂ ಬಿಗಿ ಭದ್ರತೆ

    ವಕ್ಫ್ ಬೋರ್ಡ್ (Waqf Board) ಆಸ್ತಿ ಸಲುವಾಗಿ ಬಸವಣ್ಣನ ಕಾಲದ ಸಿಂಧಗಿಯ ವಿರಕ್ತಮಠ, ಬೀರಲಿಂಗೇಶ್ವರ ಮಠ ಅದೂ ವಕ್ಫ್ ಎಂದು ಮಾಡಿದ್ದಾರೆ. ಬೀರಲಿಂಗೇಶ್ವರ ಮಠ ವಕ್ಫ್ ಎಂದು ಗೊತ್ತಾದ ಮೇಲೆ ಮುಖ್ಯಮಂತ್ರಿ ಕಣ್ಣು ತೆರೆದರು ಅನಿಸುತ್ತದೆ. ಇದೊಂದು ತುಘಲಕ್ ಸರ್ಕಾರ ಅಂದ್ರೆ ತಪ್ಪಲ್ಲ. ಮತಗಳಿಕೆಗಾಗಿ ಯೋಜನೆ ಕೊಡಲಿ, ಮಾಡಲಿ. ಆದರೆ ಒಂದು ಸಮಾಜ, ವರ್ಗವನ್ನ ತುಳಿದು ಇನ್ನೊಂದು ಸಮಾಜವನ್ನು ಓಲೈಕೆ ಮಾಡೋದು ಎಷ್ಟು ಸಮಂಜಸ? ಸಿಎಂ ಆಗೋವಾಗ ಈ ನಾಡಿನ ಕಾನೂನಿಗನುಗುಣವಾಗಿ ಕೆಲಸ ಮಾಡುತ್ತೇನೆ ಎಂದು ಪ್ರಮಾಣ ವಚನ ತೆಗೆದುಕೊಳ್ಳುತ್ತೀರಿ. ಇದೇನಾ ನಿಮ್ಮ ಕಾನೂನು? ಇಂತಹ ಬೇಜವಾಬ್ದಾರಿ ಆಡಳಿತ ಕರ್ನಾಟಕದ ಜನತೆ ನೋಡಲಿಲ್ಲ. ಗೊಂದಲದಲ್ಲಿ ಇರೋದಕ್ಕಿಂತ ವಿಧಾನಸಭೆ ವಿಸರ್ಜನೆ ಮಾಡಿ ಚುನಾವಣೆಗೆ ಹೋಗೋದು ಸೂಕ್ತ. ಮರು ಜನಾದೇಶ ಪಡೆಯೋದು ಸೂಕ್ತ ಎಂದು ಹರಿಹಾಯ್ದರು.  ಇದನ್ನೂ ಓದಿ: ಮಹಿಳೆಯನ್ನ ಕೊಲೆ ಮಾಡಿ ಪೆಟ್ರೋಲ್ ಸುರಿದು ಸುಟ್ಟು ಹಾಕಿದ ದುಷ್ಕರ್ಮಿಗಳು