Tag: gadag

  • ಪ್ರೀತಿಸಿದಾಕೆಯ ಕೊಲೆ – 6 ತಿಂಗಳ ಬಳಿಕ ಸಿಕ್ಕ ಸಾಕ್ಷಿಯಿಂದ ಲವ್ವರ್ ಅಂದರ್

    ಪ್ರೀತಿಸಿದಾಕೆಯ ಕೊಲೆ – 6 ತಿಂಗಳ ಬಳಿಕ ಸಿಕ್ಕ ಸಾಕ್ಷಿಯಿಂದ ಲವ್ವರ್ ಅಂದರ್

    ಗದಗ: ಇದೊಂದು ಮಣ್ಣಲ್ಲಿ ಮಣ್ಣಾಗಿದ್ದ ಪಾಗಲ್ ಪ್ರೇಮಿಯ ಕೊಲೆ ಪ್ರಕರಣ. ಇದೀಗ ಪೊಲೀಸರ ಚಾಣಾಕ್ಷತನದಿಂದ 6 ತಿಂಗಳ ಬಳಿಕ ಕೊಲೆ ರಹಸ್ಯ ಬಯಲಾಗಿದ್ದು, ಸಿನಿಮೀಯ ರೀತಿಯಲ್ಲಿ ಸಾಕ್ಷಿ ನಾಶ ಮಾಡಿದ್ದ ಖತರ್ನಾಕ್ ಕಿಲಾಡಿ ಪ್ರಿಯಕರ (Lover) ಪೊಲೀಸರ ಅತಿಥಿಯಾಗಿದ್ದಾನೆ.

    ಹೌದು, ಗದಗ (Gadag) ಜಿಲ್ಲೆಯಲ್ಲಿ ಪ್ರೀತಿ ಬಲೆಗೆ ಬಿದ್ದ ಯುವತಿ ಕೊಲೆ ಪ್ರಕರಣವು ಬೆಚ್ಚಿ ಬೀಳಿಸಿದೆ. 2025 ಜನವರಿ 12ರಂದು ಗದಗದ ಬೆಟಗೇರಿ ಬಡಾವಣೆ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ಯುವತಿ ನಾಪತ್ತೆ ಪ್ರಕರಣವು ಹೊಸ ತಿರುವು ಪಡೆದುಕೊಂಡಿದೆ. ಕಾಣೆಯಾಗಿದ್ದ ಯುವತಿಯು 6 ತಿಂಗಳ ಬಳಿಕ ಮೂಳೆಗಳ ರೂಪದಲ್ಲಿ ಶವವಾಗಿ ಪತ್ತೆಯಾಗಿದ್ದು, ಪ್ರಿಯಕರನೇ ಕೊಲೆ ಮಾಡಿರುವುದಾಗಿ ತನಿಖೆಯಲ್ಲಿ ಬಯಲಾಗಿದೆ. ಇದನ್ನೂ ಓದಿ: Ghaziabad| ಏರ್‌ ಇಂಡಿಯಾ ಟೇಕಾಫ್‌ ವೇಳೆ ತಾಂತ್ರಿಕ ದೋಷ – ತಪ್ಪಿದ ಅನಾಹುತ

    ನಾರಾಯಣಪುರ (Narayanapura) ಗ್ರಾಮದ ಸತೀಶ್ ಹಿರೇಮಠ ಬಂಧಿತ ಆರೋಪಿ. ಅದೇ ಗ್ರಾಮದ ಮಧುಶ್ರೀ ಅಂಗಡಿ ಎಂಬ ಕೊಲೆಯಾಗಿದ್ದ ಯುವತಿ. ಈ ಕೊಲೆ ಪ್ರಕರಣದ ಬಗ್ಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಿ.ಎಸ್.ನೇಮಗೌಡ ಅವರು ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಸತೀಶ್ ಹಾಗೂ ಮಧುಶ್ರೀ ಇಬ್ಬರು 6 ವರ್ಷಗಳಿಂದ ಪ್ರೀತಿ ಮಾಡ್ತಿದ್ದರು. ಯುವತಿ ಮನೆಯಲ್ಲಿ ಇಬ್ಬರ ವಿಷಯ ಗೊತ್ತಾಗಿ, ಆಕೆಯನ್ನು ಗದಗ ನಗರದ ಪಂಚಾಕಯನಗರದ ಸಂಬಂಧಿಕರ ಮನೆಗೆ ಕಳುಹಿಸಲಾಗಿತ್ತು ಎಂದಿದ್ದಾರೆ.

    ಇಷ್ಟಾದರೂ ಇಬ್ಬರು ಮತ್ತೆ ಒಂದಾಗಿದ್ದರು. ನನ್ನನ್ನು ಮದುವೆಯಾಗು ಎಂದು ಸತೀಶ್ ಜೊತೆ ಯುವತಿ ಜಗಳವಾಡಿದ್ದಳು. ಜಗಳ ವಿಕೋಪಕ್ಕೆ ತಿರುಗಿ ಆಕೆ ಧರಿಸಿದ್ದ ಶಾಲ್‌ನಿಂದಲೇ ಕುತ್ತಿಗೆ ಬಿಗಿದು ಆರೋಪಿ ಕೊಲೆ ಮಾಡಿದ್ದ. ನಂತರ ನಾರಾಯಣಪುರ ಗ್ರಾಮದಲ್ಲಿರುವ ಆತನ ಜಮೀನಿನ ಬಳಿ ಹಳ್ಳದ ದಂಡೆಯಲ್ಲಿ ಯುವತಿ ಶವ ಹೂತು ಹಾಕಿದ್ದ ಎಂದು ಹೇಳಿದ್ದಾರೆ. ಇದನ್ನೂ ಓದಿ: ಚಿನ್ನಸ್ವಾಮಿ ಕಾಲ್ತುಳಿತ ದುರಂತ; ತುರ್ತು ಅಧಿವೇಶನ ಕರೆಯಲು ಅಶೋಕ್ ಆಗ್ರಹ

    ತನಿಖೆಗಿಳಿದ ಪೊಲೀಸರಿಗೆ ಯುವತಿಯ ಮೃತದೇಹದ ಗುರುತು ಸಿಗದ ರೀತಿಯಲ್ಲಿ ಬರೀ ಮೂಳೆಗಳು ದೊರೆತಿದ್ದು, ಜೂ. 16ರಂದು ವಿಧಿವಿಜ್ಞಾನ ತಜ್ಞರು ಮೂಳೆಗಳನ್ನು ಸಂಗ್ರಹಿಸಿ ಪ್ರಯೋಗಾಲಯಕ್ಕೆ ಕಳುಹಿಸಲಿದ್ದರು ಎಂದು ಕೊಲೆ ಪ್ರಕರಣದ ತನಿಖೆಯನ್ನು ಎಳೆಎಳೆಯಾಗಿ ಬಿಚ್ಚಿಟ್ಟಿದ್ದಾರೆ.

    ಯುವತಿಯ ಕೊಲೆ ಮಾಡಿ ಪ್ರಕರಣದ ದಿಕ್ಕನ್ನೇ ಬದಲಿಸಿ, ತನಿಖೆಯ ಹಾದಿ ತಪ್ಪಿಸಿದ್ದ ಆರೋಪಿಗೆ ಪೊಲೀಸರು ಜೈಲಿನ ಹಾದಿ ತೋರಿಸಿದ್ದಾರೆ. ಇದನ್ನೂ ಓದಿ: ಪುಣೆಯ ಇಂದ್ರಯಾಣಿ ನದಿಗೆ ಅಡ್ಡಲಾಗಿ ನಿರ್ಮಿಸಿದ್ದ ಸೇತುವೆ ಕುಸಿದು ಕನಿಷ್ಠ 20 ಮಂದಿ ನೀರುಪಾಲು

    ಏನಿದು ಪ್ರಕರಣ?
    2025ರ ಜನವರಿ 12ರಂದು ಯುವತಿಯ ಪೋಷಕರು ತಮ್ಮ ಮಗಳು ಕಾಣೆಯಾಗಿದ್ದಾಳೆ ಎಂದು ಬೆಟಗೇರಿ ಬಡಾವಣೆ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಈ ವೇಳೆ ತಮ್ಮ ಮಗಳನ್ನು ಪ್ರೀತಿಸುತ್ತಿದ್ದ ಸತೀಶ್ ಮೇಲೆಯೂ ಅನುಮಾನ ವ್ಯಕ್ತಪಡಿಸಿದ್ದರು. ದೂರು ದಾಖಲಿಸಿಕೊಂಡ ಪೊಲೀಸರು ವಿಚಾರಣೆ ಆರಂಭಿಸಿದ್ದರು.

    ವಿಚಾರಣೆ ವೇಳೆ ಸತೀಶ್, ಆಕೆ ನನ್ನನ್ನು ಭೇಟಿಯೇ ಆಗಿಲ್ಲ ಎಂದಿದ್ದ. ನಂತರ ಬೈಕ್‌ನಲ್ಲಿ ಕೂರಿಸಿಕೊಂಡು ಹೋಗಿದ್ದೆ. ದಾರಿ ಮಧ್ಯೆ ಆಕೆ ಬೈಕ್‌ನಿಂದ ಕೆಳಗಿಳಿದು ಹೋಗಿದ್ದಳು. ನಂತರ ಅಪಘಾತದಲ್ಲಿ ತೀರಿ ಹೋಗಿದ್ದ ಆಕೆಯನ್ನು ಮಣ್ಣು ಮಾಡಿದೆ ಎಂದು ಹೇಳುತ್ತ ತನಿಖೆಯ ದಿಕ್ಕನ್ನೇ ಬದಲಿಸಿದ್ದ. ಇದನ್ನೂ ಓದಿ: ಕಾಂತಾರ ಶೂಟಿಂಗ್‌ – ಯಾವುದೇ ಅವಘಡ ಸಂಭವಿಸಿಲ್ಲ: ಹೊಂಬಾಳೆ ಫಿಲ್ಮ್ಸ್‌ ಸ್ಪಷ್ಟನೆ

    ಯುವತಿ ನಾಪತ್ತೆಯಾಗಿದ್ದಳೋ, ಕೊಲೆಯಾಗಿದ್ದಾಳೋ ಎಂಬುದು ತನಿಖೆಯನ್ನು ಪೊಲೀಸರಿಗೆ ಚಾಲೆಂಜಿಂಗ್ ಆಗಿತ್ತು. ಆರೋಪಿಯ ಸಂಶಯಾಸ್ಪದ ನಡವಳಿಕೆಗಳು ಕಂಡು ಬಂದ ಹಿನ್ನೆಲೆಯಲ್ಲಿ ಚಲನವಲನ ಗಮನಿಸಿದ ಪೊಲೀಸರು ಪುನಃ ವಿಚಾರಣೆ ಆರಂಭಿಸಿದ್ದರು.

    ಈ ವೇಳೆ 2024ರ ಡಿಸೆಂಬರ್ 16ರ ರಾತ್ರಿ 10ರ ಸುಮಾರಿಗೆ ಆರೋಪಿ ಸತೀಶ್, ಯುವತಿಯನ್ನು ಬೈಕ್‌ನಲ್ಲಿ ಕೂರಿಸಿಕೊಂಡು ತಿರುಗಾಡಿರುವುದು ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಆ ವೀಡಿಯೋ ಕೊಲೆ ಪ್ರಕರಣಕ್ಕೆ ಮಹತ್ವದ ಸಾಕ್ಷಿಯಾಗಿ ದೊರೆತಿತ್ತು. ಈ ಕುರಿತು ವ್ಯಕ್ತಿಯೊಬ್ಬರು ಪೊಲೀಸರಿಗೆ ಮಾಹಿತಿ ನೀಡಿದ್ದರು. ಮಾಹಿತಿ ಆಧರಿಸಿ ಸಂಶಯ ಹಾಗೂ ಸಾಕ್ಷ್ಯಾಧಾರಗಳನ್ನು ಪರಿಶೀಲಿಸಿದ ಪೊಲೀಸರು, ಆರೋಪಿಯನ್ನು ವಿಚಾರಿಸಿದಾಗ ನಿಜಾಂಶ ಬಾಯಿ ಬಿಟ್ಟಿದ್ದಾನೆ. ಇದನ್ನೂ ಓದಿ: ನಮ್ಮ ತಂಟೆಗೆ ಬಂದ್ರೆ ಹಿಂದೆಂದೂ ನೋಡಿರದ ಮಿಲಿಟರಿ ಬಲವನ್ನು ಎದುರಿಸಬೇಕಾಗುತ್ತೆ – ಇರಾನ್‌ಗೆ ಟ್ರಂಪ್‌ ಬಿಗ್‌ ವಾರ್ನಿಂಗ್‌

    ಈ ಪ್ರಕರಣದ ತನಿಖೆಯಲ್ಲಿ ಹೆಚ್ಚುವರಿ ಪೊಲೀಸ್ ಅಧೀಕ್ಷಕ ಎಂ.ಬಿ. ಸಂಕದ, ಡಿವೈಎಸ್‌ಪಿ ಮುರ್ತುಜಾ ಖಾದ್ರಿ, ಪ್ರಭುಗೌಡ ಕಿರೇದಳ್ಳಿ, ಮಹಾಂತೇಶ್ ಸಜ್ಜನ ಮಾರ್ಗದರ್ಶನದಲ್ಲಿ ಸಿಪಿಐ ಧೀರಜ್ ಸಿಂಧೆ, ಪಿಎಸ್‌ಐ ಮಾರುತಿ ಜೋಗದಂಡಕರ್, ಸಿಬ್ಬಂದಿ ಎನ್.ಡಿ.ಹುಬ್ಬಳ್ಳಿ, ಸಂತೋಷ್ ದೋಣಿ, ನವೀನ್ ದೇವಪೂರ, ಪರಶುರಾಮ್ ದೊಡ್ಡಮನಿ, ಅಶೋಕ್ ಗದಗ, ನಾಗರಾಜ್ ಬರಡಿ, ಅಕ್ಷಯ್ ಬಾದಾಮಿ ಭಾಗವಹಿಸಿದ್ದರು. ಪ್ರಕರಣ ಭೇದಿಸಿದ ಪೊಲೀಸ್ ತಂಡಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಿ.ಎಸ್.ನೇಮಗೌಡ ಬಹುಮಾನ ಘೋಷಿಸಿದ್ದಾರೆ.

  • ಗದಗ | ವರುಣನ ಆರ್ಭಟಕ್ಕೆ ಕೊಚ್ಚಿಹೋದ ಸೇತುವೆ – ಹರಿಯುವ ನೀರಿನಲ್ಲಿ ಜನರ ಹುಚ್ಚಾಟ

    ಗದಗ | ವರುಣನ ಆರ್ಭಟಕ್ಕೆ ಕೊಚ್ಚಿಹೋದ ಸೇತುವೆ – ಹರಿಯುವ ನೀರಿನಲ್ಲಿ ಜನರ ಹುಚ್ಚಾಟ

    – ಮಾಡಳ್ಳಿ-ಗುಂಜಳ ರಸ್ತೆ ಸಂಚಾರ ಸ್ಥಗಿತ

    ಗದಗ: ಜಿಲ್ಲೆಯಲ್ಲಿ ವರುಣನ ಆರ್ಭಟಕ್ಕೆ ಲಕ್ಷ್ಮೇಶ್ವರ ತಾಲೂಕಿನ ಮಾಡಳ್ಳಿ ಬಳಿ ಸೇತುವೆಯೊಂದು ಕೊಚ್ಚಿ ಹೋಗಿ ಮಾಡಳ್ಳಿ – ಗುಂಜಳ ರಸ್ತೆ ಸಂಚಾರ ಸ್ಥಗಿತಗೊಂಡಿದೆ.

    ಬಿಡದೇ ಸುರಿಯುತ್ತಿರುವ ಮಳೆಗೆ ಕಲ್ಲಿನ ಹಳೆಯ ಸೇತುವೆ ಕೊಚ್ಚಿಹೋಗಿದ್ದು, ಮಾಗಡಿ, ಮಾಡಳ್ಳಿ, ಗುಂಜಳದಿಂದ ಕುಂದಗೋಳ ರಸ್ತೆ ಸಂಪರ್ಕ ಕಡಿತಗೊಂಡಿದೆ. ಇದೀಗ ರೈತರು, ಪ್ರಯಾಣಿಕರು ಪರದಾಡುವಂತಾಗಿದೆ. ಇದನ್ನೂ ಓದಿ: ಆಗುಂಬೆ ಘಾಟಿಯಲ್ಲಿ ಭಾರೀ ವಾಹನಗಳ ಸಂಚಾರ ನಿಷೇಧ

    ಜಿಲ್ಲೆಯಲ್ಲಿ ಹಳ್ಳ-ಕೊಳ್ಳಗಳು ಅಪಾಯದ ಮಟ್ಟ ಮೀರಿ ಹರಿಯುತ್ತಿದ್ದು, ರೋಣ ತಾಲೂಕಿನ ಬೆಳವಣಕಿ ಗ್ರಾಮದ ಬಳಿ ಸೇತುವೆ ಸಂಪೂರ್ಣ ಜಲಾವೃತವಾಗಿವೆ. ತುಂಬಿ ಹರಿಯುತ್ತಿರುವ ಬೆಳವಣಕಿ ಬಿಸಿ ಬೂದಿಹಳ್ಳದ ನೀರಿನ ರಭಸಕ್ಕೆ ರಸ್ತೆಗಳು ಕೊಚ್ಚಿ ಹೋಗಿವೆ. ಇದನ್ನೂ ಓದಿ: Mayday… unable to lift: ಕ್ಯಾಪ್ಟನ್‌ ಸುಮಿತ್‌ ಕೊನೆ ಕ್ಷಣದ ಆಡಿಯೋ ಲಭ್ಯ

    ಹರಿಯುವ ನೀರಲ್ಲಿ ಜನರು ಹುಚ್ಚಾಟ ಮಾಡುತ್ತಿದ್ದು, ನೀರಿನ ಸೆಳೆತದ ನಡುವೆಯೂ ಅತ್ತಿಂದಿತ್ತ ಸಂಚರಿಸುತ್ತಿದ್ದಾರೆ. ಕೊಚ್ಚಿಹೋದ ರಸ್ತೆಯಿಂದ ಬೆಳವಣಕಿ, ಬಳಗಾನೂರ ಗದಗ ಸಂಪರ್ಕ ಕಲ್ಪಿಸುವ ರಸ್ತೆ ಬಂದ್ ಆಗಿದೆ. ಮೇಲ್ಸೇತುವೆ ಮಾಡುವಂತೆ ಸಾರ್ವಜನಿಕರು ಸಾಕಷ್ಟು ಮನವಿ ಮಾಡಿದ್ರೂ ಸ್ಪಂದಿಸದೇ ಇರುವ ಜನಪ್ರತಿನಿಧಿಗಳು, ಅಧಿಕಾರಿಗಳ ವಿರುದ್ಧ ಆಕ್ರೋಶ ಹೊರಹಾಕುತ್ತಿದ್ದಾರೆ.

  • ಗೆದ್ದು ಬಾ ಆರ್‌ಸಿಬಿ – ಶುಭ ಹಾರೈಸಿದ ಸಿಎಂ ಸಿದ್ದರಾಮಯ್ಯ

    ಗೆದ್ದು ಬಾ ಆರ್‌ಸಿಬಿ – ಶುಭ ಹಾರೈಸಿದ ಸಿಎಂ ಸಿದ್ದರಾಮಯ್ಯ

    – ಪಂಜಾಬ್‌ ಗೆದ್ರೆ ಅವರಿಗೂ ಅಭಿನಂದನೆ

    ಗದಗ: ಇಂದು ನಡೆಯಲಿರುವ ಐಪಿಎಲ್ ಫೈನಲ್‌ (IPL 2025 Final) ಪಂದ್ಯದಲ್ಲಿ ಪಂಜಾಬ್‌ (PBKS) ವಿರುದ್ಧ ಆರ್‌ಸಿಬಿ (RCB) ಗೆಲ್ಲಲಿ ಎಂದು ಸಿಎಂ ಸಿದ್ದರಾಮಯ್ಯ ಶುಭ ಹಾರೈಸಿದರು.

    ಲಕ್ಕುಂಡಿಯಲ್ಲಿ ಐತಿಹಾಸಿಕ ಪ್ರಾಚ್ಯಾವಶೇಷಗಳ ಉತ್ಖನನಕ್ಕೆ ಚಾಲನೆ ನೀಡಿ ಮಾತನಾಡಿದರು. ಈ ವೇಳೆ ಐಪಿಎಲ್ ಫೈನಲ್‌ ಪಂದ್ಯದ ವಿಚಾರವಾಗಿ, ಪಂಜಾಬ್ ನವರು ನಮ್ಮ ಜೊತೆ ಮೊದಲು ಕ್ವಾಲಿಫೈಡ್‌ ಮ್ಯಾಚ್‌ನಲ್ಲಿ 101ಕ್ಕೆ ಔಟ್ ಆಗಿದ್ದರು. ಆದರೆ ನಂತರದಲ್ಲಿ ಮುಂಬೈ ವಿರುದ್ಧ ಗೆದ್ದರು. ಮುಂಬೈ ಸ್ಟ್ರಾಂಗ್ ಟೀಮ್, ಅದರಲ್ಲಿ ಒಳ್ಳೆ ಆಟಗಾರರಿದ್ದಾರೆ ಎಂದು ಹೇಳಿದರು. ಇದನ್ನೂ ಓದಿ: IPL 2025 Final – ಪಂದ್ಯಕ್ಕೂ ಮುನ್ನವೇ ಮೋದಿ ಸ್ಟೇಡಿಯಂ ಹೊರಗೆ ಸಿಲಿಂಡರ್ ಬ್ಲಾಸ್ಟ್

    ಆರ್‌ಸಿಬಿ ನಾಲ್ಕನೆ ಬಾರಿಗೆ ಫೈನಲ್‌ಗೆ ಬಂದಿದೆ. ಈ ಬಾರಿ ಗೆಲ್ಲಲಿ ಎಂದು ಹಾರೈಸುತ್ತೇನೆ. ಗೆದ್ದರೆ ಅಭಿನಂದನೆ ತಿಳಿಸುತ್ತೆನೆ. ಪಂಜಾಜ್ ಗೆದ್ದರೆ ಅವರಿಗೂ ಅಭಿನಂದನೆ ಹೇಳುತ್ತೇನೆ ಎಂದರು. ಇದನ್ನೂ ಓದಿ: ಆರ್‌ಸಿಬಿ ಅಭಿಮಾನಿಗಳಿಗೆ ಗುಡ್‌ನ್ಯೂಸ್ – ಐಪಿಎಲ್ ಫೈನಲ್‌ನಲ್ಲಿ ಆಡಲಿದ್ದಾರೆ ಫಿಲ್ ಸಾಲ್ಟ್

  • ಗದಗ | ಶಾಲೆ ಬಿಟ್ಟ ಮಕ್ಕಳನ್ನು ಮರಳಿ ಸ್ಕೂಲ್‌ಗೆ ಸೇರಿಸಿದ ಹೆಚ್.ಕೆ ಪಾಟೀಲ್

    ಗದಗ | ಶಾಲೆ ಬಿಟ್ಟ ಮಕ್ಕಳನ್ನು ಮರಳಿ ಸ್ಕೂಲ್‌ಗೆ ಸೇರಿಸಿದ ಹೆಚ್.ಕೆ ಪಾಟೀಲ್

    ಗದಗ: ಜಿಲ್ಲೆ ಸಿದ್ದರಾಮೇಶ್ವರ ನಗರದಲ್ಲಿ ಶಾಲೆ ಬಿಟ್ಟ ಮಕ್ಕಳನ್ನು ಸಚಿವ ಹೆಚ್.ಕೆ ಪಾಟೀಲ್ (H K Patil) ಅವರು ಸ್ವತಃ ತಮ್ಮ ಕಾರಿನಲ್ಲಿ ಸ್ಕೂಲ್‌ಗೆ ಸೇರಿಸಿ ಆತ್ಮಸ್ಥೈರ್ಯ ತುಂಬಿದರು.

    ಸುಮಾರು 7 ಮಕ್ಕಳು ಶಾಲೆ ತೊರೆದು ಮನೆಯಲ್ಲಿದ್ದರು. ಆ ಮಕ್ಕಳ ಮನೆಗಳಿಗೆ ಸ್ವತಃ ಜಿಲ್ಲಾ ಉಸ್ತುವಾರಿ ಸಚಿವ ಹೆಚ್.ಕೆ ಪಾಟೀಲ್ ಭೇಟಿ ನೀಡುವ ಮೂಲಕ ಜಿಲ್ಲೆಯಾದ್ಯಂತ ಶಾಲೆ ಬಿಟ್ಟ ಮಕ್ಕಳಿಗಾಗಿ `ಭವ್ಯ ಭವಿಷ್ಯದ ನಾಳೆಗೆ ಬನ್ನಿ ಬನ್ನಿ ಶಾಲೆಗೆ’ ಅಭಿಯಾನಕ್ಕೆ ವಿಭಿನ್ನವಾಗಿ ಚಾಲನೆ ನೀಡಿದರು. ಇದನ್ನೂ ಓದಿ: ಜೂ.3ರಂದು ಅಯೋಧ್ಯಾ ರಾಮಮಂದಿರದ ಸ್ವರ್ಣಗೋಪುರ ಉದ್ಘಾಟನೆ

    ಬಳಿಕ ಸಚಿವರು, ಅಧಿಕಾರಿಗಳು ಸೇರಿ ಹೆತ್ತವರ ಬಳಿ ಮಕ್ಕಳನ್ನು ಶಾಲೆಗೆ ಕಳಿಸುವಂತೆ ಮನವೊಲಿಸಿದರು. ಶಾಲೆ ತೊರೆದ ಮಕ್ಕಳಿಗೆ ಗುಲಾಬಿ ಹೂ ನೀಡಿ, ಅವರನ್ನು ತಮ್ಮ ಕಾರಿನಲ್ಲಿ ನಗರದ ಸಿಧ್ಧಲಿಂಗ ನಗರದ ಸರ್ಕಾರಿ ಪ್ರೌಢಶಾಲೆಗೆ ಸೇರಿಸಿದರು. ಶಾಲೆಯಲ್ಲಿ ಸಮವಸ್ತ್ರ, ಪಠ್ಯಪುಸ್ತಕ, ಹೂವು ನೀಡಿ ಮಕ್ಕಳನ್ನು ಮರಳಿ ಶಾಲೆಗೆ ಸ್ವಾಗತಿಸಿದರು. ನಂತರ ಪ್ರತಿಜ್ಞಾವಿಧಿ ಬೋಧಿಸಿದರು. ಇದನ್ನೂ ಓದಿ: ಪ್ರತಿ ಬಾರಿ ಕಪ್ ನಮ್ದೆ ಅಂತಿದ್ವಿ, ಈ ಸಲ ಆದ್ರೂ ಕಪ್ ನಮ್ಮದಾಗಲಿ: ಎಂ.ಸಿ ಸುಧಾಕರ್

    ಈ ಸಂದರ್ಭ ವಿಧಾನ ಪರಿಷತ್ ಸದಸ್ಯ ಎಸ್.ವಿ ಸಂಕನೂರ, ಡಿಡಿಪಿಐ ಆರ್.ಎಸ್ ಬುರಡಿ, ಜಿಲ್ಲಾ ಮಟ್ಟದ ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಬಿ.ಬಿ ಅಸೂಟಿ ಸೇರಿ ಶಿಕ್ಷಣ ಇಲಾಖೆ ಅಧಿಕಾರಿಗಳು, ಸಿಬ್ಬಂದಿ ಉಪಸ್ಥಿತರಿದ್ದರು.

  • ಬಿರುಗಾಳಿ ಮಳೆಗೆ ಧರೆಗುರುಳಿದ ಬೃಹತ್ ಮರ, ವಿದ್ಯುತ್ ಕಂಬಗಳು

    ಬಿರುಗಾಳಿ ಮಳೆಗೆ ಧರೆಗುರುಳಿದ ಬೃಹತ್ ಮರ, ವಿದ್ಯುತ್ ಕಂಬಗಳು

    ಗದಗ: ಜಿಲ್ಲೆಯ ಖಾನತೋಟ (Khanathota) ಓಣಿಯಲ್ಲಿ ಬಿರುಗಾಳಿ ಸಹಿತ ಮಳೆಗೆ ಬೃಹತ್ ಗಾತ್ರದ ಮರ ಹಾಗೂ ವಿದ್ಯುತ್ ಕಂಬಗಳು ಧರೆಗುರುಳಿದೆ.

    ಸತತ ಮಳೆಯಿಂದ ಮರದ ಬುಡ ಕೊಳೆತ ಸ್ಥಿತಿಯಲ್ಲಿತ್ತು. ಮಂಗಳವಾರ ಬೀಸಿದ ಬಿರುಗಾಳಿಯಿಂದ ಬೇರುಗಳು ಸಡಿಲಗೊಂಡು ರಸ್ತೆಗೆ ಉರುಳಿದೆ. ಹತ್ತಿರದಲ್ಲೇ ಇದ್ದ ವಿದ್ಯುತ್ ಕಂಬವು ನೆಲಕ್ಕಪಳಿಸಿದೆ. ವಿದ್ಯುತ್ ಕಂಬ ತುಂಡಾಗಿ ಬಿದ್ದ ಪರಿಣಾಮ ಕೆಲಕಾಲ ಸ್ಥಳೀಯರಲ್ಲಿ ಆತಂಕ ಸೃಷ್ಟಿಯಾಗಿತ್ತು. ಮರ ಹಾಗೂ ವಿದ್ಯುತ್ ಕಂಬ ಬಿದ್ದಾಗ ರಸ್ತೆಯಲ್ಲಿ ಜನ ಸಂಚಾರ ಇಲ್ಲದಿದ್ದುದರಿಂದ ಭಾರೀ ಅನಾಹುತ ತಪ್ಪಿದೆ. ಇದನ್ನೂ ಓದಿ: ಪಾಕ್‌, ಚೀನಾಗೆ ಟಕ್ಕರ್‌ ಕೊಡಲು ಹೊಸ ಫೈಟರ್‌ ಜೆಟ್‌ಗೆ ಭಾರತ ಅನುಮೋದನೆ

    ಬಿರುಗಾಳಿ (Storm) ಮಳೆಗೆ ಖಾನತೋಟ ಬಡಾವಣೆಯಲ್ಲಿ ವಿದ್ಯುತ್ ಸ್ಥಗಿತಗೊಳಿಸಲಾಗಿತ್ತು. ನಂತರ ನಗರಸಭೆ ಹಾಗೂ ಅರಣ್ಯ ಇಲಾಖೆಯವರು ಮರ ತೆರವುಗೊಳಿಸಿದರು. ಇನ್ನು ಹೆಸ್ಕಾಂ ಸಿಬ್ಬಂದಿ ಸಹ ವಿದ್ಯುತ್ ಕಂಬ ತೆರವುಗೊಳಿಸಿದರು. ಇದರಿಂದ ಕೆಲವು ಗಂಟೆಗಳ ಕಾಲ ರಸ್ತೆ ಸಂಚಾರ ಸ್ಥಗಿತಗೊಳಿಸಲಾಗಿತ್ತು. ಇದೀಗ ಗ್ರಾಮಸ್ಥರು, ಅಪಾಯಕಾರಿ ಹಳೆಯ ಮರ ಹಾಗೂ ವಿದ್ಯುತ್ ಕಂಬಗಳನ್ನು ತೆರವುಗೊಳಿಸಬೇಕು ಎಂದು ಅಧಿಕಾರಿಗಳಿಗೆ ಆಗ್ರಹಿಸಿದ್ದಾರೆ.

  • ಕಾಂಗ್ರೆಸ್‌ನವರೇ ಪರಮೇಶ್ವರ್ ಮೇಲೆ ಕ್ರಮ ಆಗ್ಬೇಕು ಅಂತಾ ಇಡಿಗೆ ಮಾಹಿತಿ ನೀಡಿದ್ದು: ಪ್ರಹ್ಲಾದ್ ಜೋಶಿ

    ಕಾಂಗ್ರೆಸ್‌ನವರೇ ಪರಮೇಶ್ವರ್ ಮೇಲೆ ಕ್ರಮ ಆಗ್ಬೇಕು ಅಂತಾ ಇಡಿಗೆ ಮಾಹಿತಿ ನೀಡಿದ್ದು: ಪ್ರಹ್ಲಾದ್ ಜೋಶಿ

    ಗದಗ: ಕಾಂಗ್ರೆಸ್‌ನ(Congress) ಒಂದು ಗುಂಪು ಪರಮೇಶ್ವರ್ ಮೇಲೆ ಕ್ರಮ ಆಗಬೇಕು ಅಂತ ಇಡಿಗೆ ಎಲ್ಲಾ ಮಾಹಿತಿ ನೀಡಿದೆ. ಯಾರು ಕಳುಹಿಸಿದ್ದು ಅಂತಾ ಸಿದ್ದರಾಮಯ್ಯ ಅವರಿಗೂ ಗೊತ್ತಿದೆ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ(Prahlad Joshi) ಸ್ಫೋಟಕ ಹೇಳಿಕೆ ನೀಡಿದರು.

    ಗೃಹಸಚಿವ ಪರಮೇಶ್ವರ್ ಅವರ ಶಿಕ್ಷಣ ಸಂಸ್ಥೆಯ ಮೇಲೆ ಇಡಿ ದಾಳಿ ಕುರಿತು ಗದಗದಲ್ಲಿ(Gadag) ಮಾಧ್ಯಮದವರೊಂದಿಗೆ ಮಾತನಾಡಿದ ಅವರು, 2013ರಲ್ಲಿ ಪರಮೇಶ್ವರ್(G Parameshwar) ಅವರನ್ನು ಸೋಲಿಸಿದ್ದು ಯಾರು? ಇದೇ ಸಿದ್ದರಾಮಯ್ಯ ಅವರು ಪರಮೇಶ್ವರ್ ಅವರನ್ನು ಸೋಲಿಸಿದ್ದು, ಇದು ಜಗತ್ ಜಾಹಿರ ವಿಚಾರ. ಸಿದ್ದರಾಮಯ್ಯನವರೇ, ಜನರು ಇತಿಹಾಸವನ್ನು ಅಷ್ಟು ಬೇಗ ಮರೆಯೋದಿಲ್ಲ ಟಾಂಗ್ ಕೊಟ್ಟರು. ಇದನ್ನೂ ಓದಿ: ಸಿದ್ದರಾಮಯ್ಯ ನಾವೆಲ್ಲ ಒಂದೇ ಟೀಂನಲ್ಲಿ ಇದ್ದವರು, ಈಗ ಮರೆವು ಜಾಸ್ತಿಯಾಗಿದೆ: ಸೋಮಣ್ಣ

    ಗೋಲ್ಡ್ ಸ್ಮಗ್ಲಿಂಗ್‌ನಿಂದ ಹಿಡಿದು ಎಲ್ಲಾ ಪ್ರಕರಣಕ್ಕೆ ಸಂಬಂಧಿಸಿದಂತೆ ಕ್ರಮ ಕೈಗೊಳ್ಳಬೇಕು ಎಂದು ಇಡಿಗೆ ಪತ್ರ ಬರೆಯುತ್ತಿದ್ದವರು ಯಾರು? ಕಾಂಗ್ರೆಸ್‌ನ ಒಂದು ಗುಂಪು ಪರಮೇಶ್ವರ್ ಮೇಲೆ ಕ್ರಮ ಆಗಬೇಕು ಎಂದು ಇಡಿಗೆ ಎಲ್ಲಾ ಮಾಹಿತಿ ಕಳುಹಿಸುತ್ತಾರೆ. ಇಷ್ಟೆಲ್ಲಾ ಮಾಡಿ ಈಗ ಡ್ರಾಮ ಮಾಡ್ತಿದ್ದೀರಾ ಎಂದು ಕಿಡಿಕಾರಿದರು. ಇದನ್ನೂ ಓದಿ: ಜ್ಯೋತಿ ಮಲ್ಹೊತ್ರಾಗೆ ನಾಲ್ಕು ದಿನ ಪೊಲೀಸ್ ಕಸ್ಟಡಿ ವಿಸ್ತರಣೆ

    ಪರಮೇಶ್ವರ್ ಬಗ್ಗೆ ನಮಗೆ ಗೌರವ ಇದೆ. ಅವರು ಒಬ್ಬ ಸಭ್ಯ ರಾಜಕಾರಣಿ. ಕಾಂಗ್ರೆಸ್‌ನ ಒಂದು ಗುಂಪಿನವರು ಮಾಹಿತಿಗಳನ್ನೆಲ್ಲಾ ಇಡಿಗೆ ಕಳುಹಿಸಿದ್ದು. ಯಾರು ಕಳುಹಿಸಿದ್ದು ಅಂತ ಸಿದ್ದರಾಮಯ್ಯ ಅವರಿಗೂ ಗೊತ್ತಿದೆ. ಗುಪ್ತಚರ ಇಲಾಖೆ ಅವರ ಬಳಿ ಇದೆ. ಅವರ ಬಳಿ ಕೇಳಿದ್ರೆ ಯಾರು ಅಂತ ಹೇಳ್ತಾರೆ. ಇಂತಹ ಮಾಹಿತಿ ಸಿಕ್ಕಾಗ ಇಡಿ ಕಾನೂನು ಪ್ರಕಾರ ಕ್ರಮ ಕೈಗೊಳ್ಳುತ್ತದೆ ಎಂದರು.

    ಇವರೇ ಮಾಹಿತಿಯನ್ನು ಬೇಕಂತಲೆ ಕೊಟ್ಟಿದ್ದಾರೆ. ಇಡಿ ಕರ್ತವ್ಯದಂತೆ ತನಿಖೆ ಮಾಡ್ತಿದೆ. ಪರಮೇಶ್ವರ್‌ಗೆ ತೊಂದರೆ ಕೊಡಬೇಕು ಎಂಬ ಯಾವ ಉದ್ದೇಶವೂ ಕೇಂದ್ರ ಸರ್ಕಾರಕ್ಕೆ ಇಲ್ಲ. ಕಾನೂನು ಪ್ರಕಾರ ತಪ್ಪು ಮಾಡಿದ್ರೆ. ನಾನೇ ತಪ್ಪು ಮಾಡಲಿ, ಸಿದ್ದರಾಮಯ್ಯ, ಪರಮೇಶ್ವರ್ ತಪ್ಪು ಮಾಡಲಿ. ನಮ್ಮ ಪಕ್ಷದವರು ಇನ್ಯಾರೇ ತಪ್ಪು ಮಾಡಿದ್ರೂ ಅವರ ಮೇಲೆ ಕಾನೂನು ಪ್ರಕಾರ ಕ್ರಮ ಆಗುತ್ತೆ. ಎಲ್ಲದಕ್ಕೂ ರಾಜಕಾರಣ ಬೆರಸಿದ್ರೆ, ನಿಮ್ಮ ಪಕ್ಷದವರು ಏನೇನು ಮಾಡಿದ್ದಾರೆಂಬುದು ಮುಂದೆ ನಿಮಗೇ ತೊಂದರೆ ಆಗುತ್ತದೆ ಎಂದು ಟಾಂಗ್ ಕೊಟ್ಟರು. ಇದನ್ನೂ ಓದಿ: ದೈವ ಶಕ್ತಿ ಇರೋವರೆಗೆ ಯಾರು ನನ್ನನ್ನು ಕಾಡೋಕೆ ಆಗಲ್ಲ: ಹೆಚ್.ಡಿ ರೇವಣ್ಣ

    ಎಲ್ಲಾ ಸರ್ಕಾರಿ ಆಸ್ಪತ್ರೆ ಆವರಣದ ಜನೌಷಧೀಯ ಕೇಂದ್ರ ಬಂದ್ ಮಾಡಲು ರಾಜ್ಯ ಸರ್ಕಾರ ಆದೇಶದ ಕುರಿತು ಪ್ರತಿಕ್ರಿಯಿಸಿದರು. ರಾಜೀವ್ ಗಾಂಧಿ ದೇಹಾಂತ್ಯವಾದ ನಂತರ ಕಾಂಗ್ರೆಸ್ ಪಕ್ಷಕ್ಕೆ ಗಾಂಧಿ ಪರಿವಾರದ ಪ್ರಧಾನ ಮಂತ್ರಿ ಇಲ್ಲ. ಅವರದ್ದೇ ಸರ್ಕಾರ ಇದ್ದಾಗಲೂ, ಯಾವ ಪ್ರಧಾನಮಂತ್ರಿ ಹೆಸರು ಬಂದ್ರೂ ಇವರಿಗೆ ಉರಿಯುತ್ತಿತ್ತು. ಮೋದಿ ಅವರು ಅಧಿಕಾರಕ್ಕೆ ಬಂದ ಮೇಲೆ ತಡೆದುಕೊಳ್ಳಲು ಆಗ್ತಿಲ್ಲ. ಪ್ರಧಾನ ಮಂತ್ರಿ ಕುರ್ಚಿ ಅಂದ್ರೆ, ಗಾಂಧಿ ಪರಿವಾರದವರಿಗೆ ಮಾಡಿಟ್ಟ ಮೀಸಲು ಅಂತ ತಿಳಿದುಕೊಂಡಿದ್ದಾರೆ ಎಂದು ವಾಗ್ದಾಳಿ ನಡೆಸಿದರು. ಇದನ್ನೂ ಓದಿ: ಚಾ.ನಗರ| ತಾಳಿ ಕಟ್ಟಿಸಿಕೊಂಡ ಮರುಕ್ಷಣವೇ ಪರೀಕ್ಷೆಗೆ ಹಾಜರಾದ ವಧು

    ಪ್ರಧಾನ ಮಂತ್ರಿ ಜನ ಔಷಧೀಯ ಕೇಂದ್ರ ಬಂದ್ ಮಾಡಿದ್ದಾರೆ. ಔಷಧ ಫ್ರೀ ಕೊಡುತ್ತೇವೆ ಅಂತಾರೆ. ಎಲ್ಲಾ ಆಸ್ಪತ್ರೆಯಲ್ಲಿ ಎಲ್ಲಾ ಔಷಧ ಉಚಿತ ಸಿಗುತ್ತಾ? ಉತ್ತರ ಕರ್ನಾಟಕ ಪ್ರತಿಷ್ಠಿತ ಕಿಮ್ಸ್‌ನಲ್ಲಿ ಔಷಧ ಹೊರಗಡೆ ಬರೆದುಕೊಡ್ತಾರೆ. ನೀವು ಉಚಿತ ಕೊಟ್ರೆ ಜನ ಯಾಕೆ ಪ್ರಧಾನಮಂತ್ರಿ ಔಷಧ ಕೇಂದ್ರಕ್ಕೆ ಹೋಗ್ತಾರೆ. ಉಚಿತ ಔಷಧ ಕೊಟ್ರೆ ಜನೌಷಧೀಯ ಕೇಂದ್ರಕ್ಕೆ ಹೋಗಿ ತೆಗದುಕೊಳ್ಳಲು ಜನರಿಗೆ ಹುಚ್ಚು ಹಿಡಿದಿದ್ಯಾ ಎಂದು ಪ್ರಶ್ನಿಸಿದರು. ಇದನ್ನೂ ಓದಿ: ಅತ್ಯಾಚಾರ ಕೇಸ್‌ – ನಾಪತ್ತೆಯಾಗಿದ್ದ ನಟ ಮಡೆನೂರು ಮನು ಅರೆಸ್ಟ್‌

    ಕಡಿಮೆ ಬೆಲೆಗೆ ಸಿಗುವ ಔಷಧಕ್ಕೂ ಕಲ್ಲು ಹಾಕ್ತಿರಿ. ಯಾಕೆಂದರೆ ಅದರಲ್ಲಿ ಪ್ರಧಾನಮಂತ್ರಿ ಹೆಸರಿದೆ. ಪ್ರಧಾನ ಮಂತ್ರಿ ಪದವನ್ನು ದ್ವೇಷ ಮಾಡ್ತಿದ್ದಾರೆ. ನೆಹರು, ಗಾಂಧಿ ಕುಟುಂಬದವರು ಪ್ರಧಾನಮಂತ್ರಿ ಆಗುವುದಿಲ್ಲ ಅಂತ ಅವರಿಗೂ ಗೊತ್ತಾಗಿದೆ. ದೇಶದ ಅಭ್ಯುದಯವನ್ನು ವಿರೋಧ ಮಾಡ್ತಿದ್ದಾರೆ. ದೇಶವನ್ನೇ ದ್ವೇಷ ಮಾಡ್ತಾ ಹಿಂದೂಸ್ತಾನ ವಿರುದ್ಧ ಹೋರಾಟ ಮಾಡ್ತೇವೆ ಅಂತ ರಾಹುಲ್ ಗಾಂಧಿ ಹೇಳಿದ್ದಾರೆ. ಜನೌಷಧೀಯ ಕೇಂದ್ರದ ಬಗ್ಗೆ ಬಡವರ ಹಿತದೃಷ್ಟಿಯಿಂದ ಮರು ಪರಿಶೀಲನೆ ಮಾಡಬೇಕು. ಜನ ಔಷಧೀಯ ಕೇಂದ್ರ ಬಂದ್ ಮಾಡುವ ನಿರ್ಧಾರವನ್ನು ತೀವ್ರವಾಗಿ ವಿರೋಧಿಸುತ್ತೇನೆ ಎಂದು ಆಕ್ರೋಶ ಹೊರಹಾಕಿದರು.

  • ವಿವಾಹಿತ ವ್ಯಕ್ತಿಯ ಶವ ಪತ್ತೆ – ಪತ್ನಿಯೇ ಕೊಲೆಗೈದು ಬಾವಿಗೆ ಹಾಕಿದ್ಳಾ?

    ವಿವಾಹಿತ ವ್ಯಕ್ತಿಯ ಶವ ಪತ್ತೆ – ಪತ್ನಿಯೇ ಕೊಲೆಗೈದು ಬಾವಿಗೆ ಹಾಕಿದ್ಳಾ?

    ಗದಗ: ವಿವಾಹಿತ ವ್ಯಕ್ತಿಯ ಶವ ಬಾವಿಯಲ್ಲಿ ಪತ್ತೆಯಾಗಿರುವ ಘಟನೆ ಗದಗ(Gadag) ಜಿಲ್ಲೆಯ ರೋಣ ತಾಲೂಕಿನ ಮುಗಳಿ ಗ್ರಾಮದಲ್ಲಿ ನಡೆದಿದ್ದು, ಪತ್ನಿ ಹಾಗೂ ಪ್ರಿಯಕರನ ವಿರುದ್ಧ ಕೊಲೆ ಆರೋಪ ಕೇಳಿಬಂದಿದೆ.

    ರೋಣದ(Rona) ಹಕಾರಿ ಕಾಲೋನಿ ನಿವಾಸಿ ಶಂಕ್ರಪ್ಪ ಅಲಿಯಾಸ್ ಮುತ್ತು ಕೊಳ್ಳಿ(30) ಮೃತ ದುರ್ದೈವಿ. ಇದನ್ನೂ ಓದಿ: ವಿಚಾರಣೆ ಮುಗಿಸಿ ದರ್ಶನ್‌ ಕೈ ಹಿಡಿದುಕೊಂಡು ಹೊರ ಬಂದ ಪವಿತ್ರಾ ಗೌಡ

    ಶಂಕ್ರಪ್ಪ ಪ್ರೀತಿಸಿ ಮದುವೆಯಾಗಿದ್ದರೂ, ಪತ್ನಿ ಬೇರೊಬ್ಬನ ಜೊತೆ ಅನೈತಿಕ ಸಂಬಂಧ ಹೊಂದಿದ್ದಳು. ಅಲ್ಲದೇ ಪತ್ನಿ, ಪ್ರಿಯಕರ ಶಿವಕುಮಾರ್‌ನೊಂದಿಗೆ ಸೇರಿ ಪತಿ ಶಂಕ್ರಪ್ಪನನ್ನು ಕೊಲೆ ಮಾಡಿರುವ ಆರೋಪ ಕೇಳಿಬಂದಿದೆ. ಇದನ್ನೂ ಓದಿ: ಆಪರೇಷನ್ ಸಿಂಧೂರದ ಬಗ್ಗೆ ಟೀಕೆ ಮಾಡುವವರಿಗೆ ಗುಂಡು ಹೊಡಿಬೇಕು: ಕೆ.ಎಸ್ ಈಶ್ವರಪ್ಪ

    ಹಂತಕರು ಕೊಲೆ ಮಾಡಿ ಬಟ್ಟೆಯಿಂದ ಕೈಕಾಲು ಕಟ್ಟಿ, ಮೃತದೇಹಕ್ಕೆ ಹಾಸಿಗೆ ಸುತ್ತಿ ಬಾವಿಗೆ ಬಿಸಾಕಿದ್ದಾರೆ. ಮಂಗಳವಾರ ಮುಂಜಾನೆ ಮುಗಳಿ ಗ್ರಾಮದ ಜಮೀನೊಂದರ ಬಾವಿಯಲ್ಲಿ ಶಂಕ್ರಪ್ಪನ ಶವ ಪತ್ತೆಯಾಗಿದೆ. ಇದನ್ನೂ ಓದಿ: ಭಾರತ ವಿರೋಧಿ ಚಟುವಟಿಕೆ – ಬ್ರಿಟಿಷ್‌ ಕಾಶ್ಮೀರಿ ಪ್ರೊಫೆಸರ್‌ ಸಾಗರೋತ್ತರ ಪೌರತ್ವ ರದ್ದು

    ಸ್ಥಳಕ್ಕೆ ರೋಣ ಪೊಲೀಸರು ಭೇಟಿ ನೀಡಿ, ಪರಿಶೀಲನೆ ನಡೆಸಿದರು. ರೋಣ ಪೊಲೀಸ್ ಠಾಣೆಯಲ್ಲಿ(Rona Police Station) ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.

  • Gadag | ಯುವಕನ ಮೇಲೆ ಹಲ್ಲೆ ಮಾಡಿದ್ದ ಉಪತಹಶೀಲ್ದಾರ್ ಅಮಾನತು

    Gadag | ಯುವಕನ ಮೇಲೆ ಹಲ್ಲೆ ಮಾಡಿದ್ದ ಉಪತಹಶೀಲ್ದಾರ್ ಅಮಾನತು

    ಗದಗ: ತಹಶೀಲ್ದಾರ್ ಕಚೇರಿಯಲ್ಲಿ ನ್ಯಾಯ ಕೇಳಲು ಹೋದ ಯುವಕನ ಮೇಲೆ ಹಲ್ಲೆ ಮಾಡಿದ ಉಪತಹಶೀಲ್ದಾರ್‌ರನ್ನ(Deputy Tahsildar) ಅಮಾನತು ಮಾಡಲಾಗಿದೆ.

    ಮೇ 17ರಂದು ರಾತ್ರಿ ಉಪತಹಶೀಲ್ದಾರ್ ಡಿ.ಟಿ ವಾಲ್ಮೀಕಿ(D T Valmiki), ಕಾಂಗ್ರೆಸ್ ಮುಖಂಡ ವಿದ್ಯಾಧರ್ ದೊಡ್ಡಮನಿ ಹಾಗೂ ಸಹಚರರು ಒಟ್ಟಾಗಿ ಅಕ್ಷಯ್ ಎಂಬ ಯುವಕನ ಮೇಲೆ ಹಲ್ಲೆ ಮಾಡಿದ್ದರು. ಅಕ್ಷಯ್ ಎಂಬ ಯುವಕ ಬೈಕ್‌ನಲ್ಲಿ ತೆರಳುತ್ತಿದ್ದಾಗ ಎದುರಿನಿಂದ ಕಾರಿನಲ್ಲಿ ಬಂದ ಉಪತಹಶೀಲ್ದಾರ್ ಹಾಗೂ ಅವರ ಸಹಚರರು ಬೈಕ್‌ಗೆ ಡಿಕ್ಕಿ ಹೊಡೆದಿದ್ದರು. ಈ ಬಗ್ಗೆ ಪ್ರಶ್ನೆ ಮಾಡಿ ನ್ಯಾಯ ಕೇಳಲು ಹೋದ ಯುವಕನನ್ನು ಕೊಠಡಿಯಲ್ಲಿ ಕೂಡಿ ಹಾಕಿ ಹಲ್ಲೆ ಮಾಡಿದ್ದರು ಎನ್ನಲಾಗಿದೆ. ಇದನ್ನೂ ಓದಿ: ಗೃಹಲಕ್ಷ್ಮಿ ಹಣ ಪ್ರತಿ ತಿಂಗಳು ಕೊಡ್ತೀವಿ ಅಂತ ಹೇಳಿಲ್ಲ: ಉಲ್ಟಾ ಹೊಡೆದ ಡಿಕೆಶಿ

    ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಗದಗದ ಬೆಟಗೇರಿ ನಾಡಕಚೇರಿಯ ಉಪತಹಶೀಲ್ದಾರ್ ಡಿ.ಟಿ ವಾಲ್ಮೀಕಿ ಅವರನ್ನು ಅಮಾನತುಗೊಳಿಸಿ ಜಿಲ್ಲಾಧಿಕಾರಿ ಸಿ.ಎನ್ ಶ್ರೀಧರ್ ಆದೇಶಿಸಿದ್ದಾರೆ. ಇದನ್ನೂ ಓದಿ: ಮ್ಯಾನೇಜರ್‌ ಕಿರುಕುಳ – ಕೆರೆಗೆ ಹಾರಿ ಬೆಂಗಳೂರಿನ ಟೆಕ್ಕಿ ಆತ್ಮಹತ್ಯೆ

    ಕರ್ನಾಟಕ ನಾಗರಿಕ ಸೇವಾ 1957ರ ನಿಯಮದಡಿ ಕಲ್ಪಿಸಿರುವ ಅವಕಾಶಗಳ ಮೇರೆಗೆ ಅಧಿಕಾರಿ ಮೇಲೆ ಶಿಸ್ತು ಕ್ರಮ ಜರುಗಿಸಿದ್ದು, ಸರ್ಕಾರಿ ಸೇವೆಯಿಂದ ಅಮಾನತುಗೊಳಿಸಿ ಜಿಲ್ಲಾಧಿಕಾರಿ ಆದೇಶ ಹೊರಡಿಸಿದ್ದಾರೆ.

  • Gadag | ಹೊಳೆಯಲ್ಲಿ ಬೈಕ್ ಸಮೇತ ಕೊಚ್ಚಿ ಹೋದ ವ್ಯಕ್ತಿ ಶವವಾಗಿ ಪತ್ತೆ

    Gadag | ಹೊಳೆಯಲ್ಲಿ ಬೈಕ್ ಸಮೇತ ಕೊಚ್ಚಿ ಹೋದ ವ್ಯಕ್ತಿ ಶವವಾಗಿ ಪತ್ತೆ

    ಗದಗ: ಹೊಳೆಯಲ್ಲಿ ಬೈಕ್ ಸಮೇತ ಕೊಚ್ಚಿ ಹೋದ ವ್ಯಕ್ತಿ ಇಂದು ಶವವಾಗಿ ಪತ್ತೆಯಾಗಿರುವ ಘಟನೆ ಗದಗ(Gadag) ತಾಲೂಕಿನ ಬೆನಕೊಪ್ಪ(Benakoppa) ಗ್ರಾಮದಲ್ಲಿ ನಡೆದಿದೆ.

    ಹಿರೇಕೊಪ್ಪ ಗ್ರಾಮದ ಶರಣಪ್ಪ ಹಡಗಲಿ(39) ಮೃತ ದುರ್ದೈವಿ. ಮಂಗಳವಾರ ಜಿಲ್ಲೆಯ ಹಲವೆಡೆ ಭಾರೀ ಮಳೆಯಾಗಿದ್ದು, ಹಳ್ಳಕೊಳ್ಳಗಳೆಲ್ಲಾ ತುಂಬಿ ಉಕ್ಕಿ ಹರಿದಿದೆ. ಇದನ್ನೂ ಓದಿ: 108 ಅಂಬುಲೆನ್ಸ್ ಸೇವೆ ಸರ್ಕಾರದಿಂದಲೇ ನಿರ್ವಹಣೆ: ದಿನೇಶ್ ಗುಂಡೂರಾವ್

    ಬೆನಕೊಪ್ಪ ಗ್ರಾಮದಲ್ಲಿ ಹೊಳೆಯೊಂದು ಉಕ್ಕಿ ರಸ್ತೆ ಮೇಲೆ ಹರಿದಿದೆ. ಶರಣಪ್ಪ ನಿನ್ನೆ ಸಂಜೆ ಪತ್ನಿಯ ತವರೂರು ಬೆನಕೊಪ್ಪ ಗ್ರಾಮಕ್ಕೆ ಹೊರಟ್ಟಿದ್ದರು. ಶರಣಪ್ಪ ಹೊಳೆಯ ನೀರನ್ನು ಲೆಕ್ಕಿಸದೇ ಬೈಕ್ ಸಮೇತ ಹೊಳೆ ದಾಟಲು ಮುಂದಾಗಿದ್ದು, ಈ ವೇಳೆ ನೀರಿನ ರಭಸಕ್ಕೆ ಸಿಕ್ಕಿ ಕೊಚ್ಚಿ ಹೋಗಿದ್ದರು. ಇದನ್ನೂ ಓದಿ: KSRTC ಬಸ್, ಕಾರು ಮುಖಾಮುಖಿ ಡಿಕ್ಕಿ – ಚಾಲಕ ಸಾವು, ಓರ್ವ ಗಂಭೀರ


    ಘಟನಾ ಸ್ಥಳಕ್ಕೆ ಧಾವಿಸಿದ ಅಗ್ನಿಶಾಮಕ ಸಿಬ್ಬಂದಿ ಹಾಗೂ ಪೊಲೀಸರು ಶೋಧ ಕಾರ್ಯ ನಡೆಸಿದರು. ಇಂದು ಸುಮಾರು ನಾಲ್ಕು ಕಿ.ಮೀ ದೂರದಲ್ಲಿ ನಿರಲಗಿ ಚೆಕ್ ಡ್ಯಾಂ ಬಳಿಯ ಶರಣಪ್ಪ ಶವ ಪತ್ತೆಯಾಗಿದೆ. ಈ ಕುರಿತು ಗದಗ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ(Gadag Rural Police Station) ಪ್ರಕರಣ ದಾಖಲಾಗಿದೆ.

  • ಭಾರತೀಯರಿಗೆ ಇಂದು ಸಮಾಧಾನ ತಂದ ದಿನ: ಹೆಚ್.ಕೆ ಪಾಟೀಲ್

    ಭಾರತೀಯರಿಗೆ ಇಂದು ಸಮಾಧಾನ ತಂದ ದಿನ: ಹೆಚ್.ಕೆ ಪಾಟೀಲ್

    ಗದಗ: ಇವತ್ತು ಭಾರತೀಯರಿಗೆ ಸಮಾಧಾನದ ದಿನವಾಗಿದೆ. ಉಗ್ರರು ಕುತಂತ್ರದಿಂದ ದೇಶದ ಪ್ರಜೆಗಳ ಹತ್ಯೆಗೈದಿದ್ದರು. ಅವರಿಗೆ ತಕ್ಕ ಶಾಸ್ತಿ ಮಾಡಲು ಸೇನೆಯು ಉಗ್ರರ ನೆಲೆಗಳನ್ನು ಧ್ವಂಸ ಮಾಡಿದ್ದು ಸಮಾಧಾನ ತಂದಿದೆ ಎಂದು ಕಾನೂನು ಸಚಿವ ಹೆಚ್.ಕೆ ಪಾಟೀಲ್(H K Patil) ಹೇಳಿದರು.

    ಗದಗನಲ್ಲಿ(Gadag) ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಭಾರತೀಯ ಸೈನ್ಯ 9 ಸ್ಥಳಗಳಲ್ಲಿ ಆಪರೇಷನ್ ಸಿಂಧೂರ(Operation Sindoor) ಹೆಸರಲ್ಲಿ ಕಾರ್ಯಚರಣೆ ಮಾಡಿದೆ. ದೇಶದ ಜನ ನಿರ್ಣಯಿಸಿ, ಒಗ್ಗಟ್ಟಿನ ಬಲವನ್ನು ಸೈನ್ಯಕ್ಕೆ ನೀಡಿದ್ದೇವೆ. ಭಾರತವನ್ನು(India) ಕೆಣಕಿದರೇ ತಕ್ಕ ಶಾಸ್ತಿ ಆಗುತ್ತದೆ. ದಾಳಿ ಮೂಲಕ ಮೊದಲ ಹೆಜ್ಜೆಯನ್ನು ಇಂದು ಇಟ್ಟಿದ್ದೇವೆ ಎಂದು ಹರ್ಷ ವ್ಯಕ್ತಪಡಿಸಿದರು. ಇದನ್ನೂ ಓದಿ: ʻಆಪರೇಷನ್‌ ಸಿಂಧೂರʼ ಪಾಕ್‌ಗೆ ಎಚ್ಚರಿಕೆ ಗಂಟೆ, ಭದ್ರತೆ ವಿಚಾರದಲ್ಲಿ ರಾಜಿ ಇಲ್ಲ: ಗುಡುಗಿದ ಸಿದ್ದರಾಮಯ್ಯ

    ಭಾರತ ಕೇವಲ ಶಾಂತಿ ಪ್ರಿಯರು ಎಂದು ಪಾಕಿಸ್ತಾನದವರು ತಿಳಿದುಕೊಂಡಿದ್ದರು. ಅವರಿಗೆ ಸರಿಯಾದ ಉತ್ತರ ನೀಡುವ ಮೂಲಕ ಜ್ಞಾನೋದಯ ಮಾಡಲಾಗಿದೆ. ಭಾರತವನ್ನು ಕೆಣಕಿದರೆ ಬಿಡುವ ಮಾತೇ ಇಲ್ಲ ಎನ್ನುವಂತಹ ಕಾರ್ಯಚರಣೆ ಮಾಡಲಾಗಿದೆ. ಇದು ಯುದ್ಧ ಕಾಲವಾಗಿದ್ದು, ಎಲ್ಲರೂ ಸನ್ನದ್ಧರಾಗಿರಬೇಕು. ಎಲ್ಲರೂ ತಯಾರಿ ಮಾಡಿಕೊಳ್ಳಬೇಕಿದೆ ಎಂದರು. ಇದನ್ನೂ ಓದಿ: I TOLD MODI – ಆಪರೇಷನ್‌ ಸಿಂಧೂರ ಬೆನ್ನಲ್ಲೇ ಕಾರ್ಟೂನ್‌ ವೈರಲ್‌ !

    ಜಿಲ್ಲೆಯಲ್ಲಿ ಡಿಸಿ, ಎಸ್ಪಿ ಹಾಗೂ ಮಾಜಿ ಸೈನ್ಯದ ಅಧ್ಯಕ್ಷರು ಹಾಗೂ ಪದಾಧಿಕಾರಿಗಳ ಜೊತೆ ಮಾತನಾಡಿದ್ದೇನೆ. ನಾಳೆ ಮಾಜಿ ಸೈನಿಕರು, ಎನ್‌ಸಿಸಿ, ಸ್ಕೌಟ್ಸ್, ಗೈಡ್ಸ್, ಪೊಲೀಸ್ ಅಂಗ ಸಂಸ್ಥೆಗಳ ಜೊತೆ ಡಿಸಿ ಕಚೇರಿಯಲ್ಲಿ ಸಭೆ ಕರೆಯಲಾಗಿದೆ. ಜನರನ್ನು ಜಾಗೃತಿಗೊಳಿಸುವ ನಿಟ್ಟಿನಲ್ಲಿ ಸಮಾಲೋಚನೆ ನಡೆಸಲಾಗುವುದು ಎಂದು ಹೇಳಿದರು.